ವಿಷಯದ ವಿವರಗಳಿಗೆ ದಾಟಿರಿ

Archive for

29
ಜನ

ಫೆ.9ರೊಳಗೆ ಗ್ಯಾಸ್ ಏಜೆನ್ಸಿಗೆ ರೇಷನ್ ಕಾರ್ಡ್ ಸಲ್ಲಿಸಿ

ಅರವಿಂದ್

ರೇಷನ್ ಕಾರ್ಡ್ ಸಲ್ಲಿಸಿದರೆ ಮಾತ್ರ ಎಲ್ ಪಿ ಜಿ ಲಭ್ಯ – ನಿಮ್ಮ ಗ್ಯಾಸ್ ಏಜಂಟರಿಗೆ ನೀಡಲು ಫೆಬ್ರವರಿ ೯ ರವರೆಗೂ ವಿಸ್ತರಣೆ.

ಸಲ್ಲಿಸಬೇಕಾದ ವಿವರಗಳು :
೧. ನಿಮ್ಮ ಮನೆಯ ವಿದ್ಯುತ್ ಬಿಲ್ಲಿನ ನೆರಳು ಪ್ರತಿ.
೨. ಇತ್ತೀಚಿನ ಗ್ಯಾಸ್ ಡೆಲಿವರಿಯ ರಸೀತಿ.
೩. ರೇಷನ್ ಕಾರ್ಡ್ ನೆರಳು ಪ್ರತಿ (ರೇಷನ್ ಕಾರ್ಡ್ ಇಲ್ಲದವರು “ತಮ್ಮ ಬಳಿ ರೇಷನ್ ಕಾರ್ಡ್ ಇಲ್ಲವೆಂದು” ಪತ್ರ ಬರೆದುಕೊಡಬೇಕು)

ಈ ಮೇಲಿನ ವಿವರಗಳನ್ನು ಸಲ್ಲಿಸದಿದ್ದರೆ, ಗ್ಯಾಸ್ ಏಜೆಂಟರು ಮುಂದೆ ನಿಮ್ಮ ಗ್ಯಾಸ್ ಬುಕಿಂಗ್ ಮಾಡಿಕೊಳ್ಳುವುದಿಲ್ಲ. ಪ್ರಾಯಶಃ ಈ ದಿನಾಂಕವನ್ನು ವಿಸ್ತರಿಸಲೂಬಹುದು, ಆದರೂ ಮುಂದಿನ ದಿನಂಪ್ರತಿ ಕೆಲಸದಲ್ಲಿ ಮರೆತು ಹೋಗಬಹುದಾದ್ದರಿಂದ ಇಂದೇ ಅವಶ್ಯಕ ವಿವರಗಳನ್ನು ಸಲ್ಲಿಸಿ.

29
ಜನ

ಔಟ್ ಆಫ್ ಸ್ಕೂಲ್! ಶಾಲೆ ಮೆಟ್ಟಿಲು ಹತ್ತದ ೧೧-೧೪ ವರ್ಷದ ಶೇ.೬ರಷ್ಟು ಬಾಲಕಿಯರು

– ಶಂಶೀರ್, ಬುಡೋಳಿ

ಕನ್ನಡಿಗರಲ್ಲಿ ಹೆಚ್ಚುತ್ತಿರುವ ಖಾಸಗಿ  ಶಾಲಾ ವ್ಯಾಮೋಹ

ದೇಶದ ಶೈಕ್ಷಣಿಕ ರಂಗ ಬದಲಾವಣೆಯ ಹಂತದಲ್ಲಿದೆ ನಿಜ.  ಬಾಲಕಿಯರು  ಶೈಕ್ಷಣಿಕವಾಗಿ ಮುಂದೆ ಬರಲು ರಾಜ್ಯ ಸರಕಾರ ಹಾಗೂ ಕೇಂದ್ರ  ಸರಕಾರ ವಿವಿಧ ರೀತಿಯ ಶೈಕ್ಷಣಿಕ ಯೋಜನೆಗಳನ್ನು ಜಾರಿಗೆ ತಂದಿದೆ ನಿಜ. ಆದರೆ ಇವತ್ತು ಭಾರತದ ಗ್ರಾಮೀಣ ಪ್ರದೇಶದ ೧೧ರಿಂದ ೧೪ ವರ್ಷದವರೆಗಿನ  ಶೇ. ೬ ರಷ್ಟು ಬಾಲಕಿಯರು ಶಾಲೆಯ ಮೆಟ್ಟಿಲು ಹತ್ತಿಲ್ಲವಂತೆ. ಇದು  ಅಸೆರ್-೨೦೧೦ ಇತ್ತೀಚಿಗೆ ಬಿಡುಗಡೆ ಮಾಡಿದ ಅಂಕಿ ಅಂಶ.

ಸರಕಾರಿ ರಹಿತ ಸಂಸ್ಥೆಯಾದ ಪ್ರಥಮ್ ದೇಶಾದ್ಯಂತ ಗ್ರಾಮೀಣ ಪ್ರದೇಶದಲ್ಲಿ ನಡೆಸಿದ ಶೈಕ್ಷಣಿಕ ಮಟ್ಟದ ಅಂಕಿ ಅಂಶಗಳ ಕುರಿತಾದ ‘ಅಸೆರ್-೨೦೧೦’ ವರದಿಯು ದೇಶದ ಗ್ರಾಮೀಣ ಪ್ರದೇಶದ ಕೌಟುಂಬಿಕ ಪರಿಸ್ಥಿತಿ, ಶೈಕ್ಷಣಿಕ ಅರ್ಹತೆ, ಶಾಲಾ ಶಿಕ್ಷಣ ಮಟ್ಟ ಹೀಗೆ ಮುಂತಾದ ವಿಷಯಗಳನ್ನು ತೆರೆದಿಡುತ್ತದೆ. ಇದೊಂದು ದೇಶದ ಗ್ರಾಮೀಣ ಪ್ರದೇಶವನ್ನು ಗುರಿಯಾಗಿಟ್ಟುಕೊಂಡು ಮಾಡಿದಂತಹ ಅತಿ ದೊಡ್ಡ ಶೈಕ್ಷಣಿಕ  ಸಮೀಕ್ಷೆಯಾಗಿದೆ.

ಶಿಕ್ಷಣ ಎಂಬುದು ಉಳ್ಳವರ ಸೊತ್ತಾಗುತ್ತಿದೆ ಎಂದು ಅನಿಸುತ್ತದೆ. ಯಾಕೆಂದರೆ ದೇಶದ ಕೆಲವೊಂದು ರಾಜ್ಯಗಳಲ್ಲಿ  ಸಮಾನ ರೀತಿಯಾದಂತಹ ಶಿಕ್ಷಣ ವ್ಯವಸ್ಥೆಯಿದ್ದರೆ , ಈಗಲೂ ಕೆಲವೊಂದು ರಾಜ್ಯಗಳಲ್ಲಿ ಶಿಕ್ಷಣ ಕಲಿಸುವ ಸಮಯದಲ್ಲಿ ಬಾಲಕಿಯರಿಗೆ ಕೇವಲ ಪ್ರಾಥಮಿಕ ಅಥವಾ ಹೈಸ್ಕೂಲ್ ಶಿಕ್ಷಣ ಕಲಿಸಿ ಕಲಿಕೆಯನ್ನು ಕಲಿಸಿ ನಂತರ ಮೊಟಕುಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ.  ಹಾಗೆಯೇ ಬಾಲಕರಿಗೆ ಉನ್ನತ  ಶಿಕ್ಷಣ ಕಲಿಯುವವರೆಗೆ ಅವಕಾಶ ಕೊಡಲಾಗುತ್ತದೆ. ಹೀಗಾಗಿ ಶೈಕ್ಷಣಿಕ ಮಟ್ಟದಲ್ಲಿ ಲಿಂಗ ತಾರತಮ್ಯವಾಗುತ್ತಿದೆ.

ಪ್ರಾಥಮಿಕ ಹಂತದಲ್ಲಿ  ವಿಶೇಷವಾಗಿ ಬಾಲಕಿಯರಿಗಾಗಿ ಯೋಜನೆಗಳನ್ನು ಆಳವಡಿಸಿಕೊಂಡಿರಬಹುದು. ಆದರೆ ಇದು ಸಮರ್ಪಕ ಮಟ್ಟದಲ್ಲಿ ತಲುಪುವವರಿಗೆ ತಲುಪುತ್ತಿಲ್ಲ. ಸರಕಾರಿ ಶಿಕ್ಷಣ ಕೇವಲ ನೆಪ ಮಾತ್ರ ಎಂಬ ಭಾವನೆ ಕೆಲವರಲ್ಲಿ ಇರುವುದರಿಂದ್ದ ಇವತ್ತು  ಮಧ್ಯಮ ವರ್ಗದ ಕುಟುಂಬದ ಜೊತೆಗೆ  ಕೆಲವು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು ಸಹ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ  ಕಳುಹಿಸಲು ಹಿಂದೇಟು ಹಾಕಲಾಗುತ್ತಿದೆ ಎಂಬ ಅಂಶ ಅಚ್ಚರಿ ಮೂಡಿಸುತ್ತದೆ. ಕಾರಣ ಸರಕಾರಿ ಶಾಲೆಯ   ಶಿಕ್ಷಣ ಕಲಿಕೆ ಚೆನ್ನಾಗಿಲ್ಲ ಎಂಬುದು. ಮತ್ತಷ್ಟು ಓದು »