ಚಿಮೂ ಗೌರವ ಡಾಕ್ಟರೇಟ್ : ನಿಲುಮೆಯ ನಿಲುವು ಮತ್ತು ಕನ್ನಡ ಸಾಹಿತ್ಯ ಲೋಕದ ನಿಲುವು
ನಿಲುಮೆ
ಕನ್ನಡದ ಹಿರಿಯ ಸಂಶೋಧಕ,ವಿದ್ವಾಂಸ,ಇತಿಹಾಸಜ್ಞ ಹಾಗೂ ಲೇಖಕ ಚಿಮೂ ಅವರಿಗೆ ರಾಜ್ಯಪಾಲ ಹಂಸ ಭಾರಧ್ವಾಜ್ ರಾಜಕೀಯ ಉದ್ದೇಶದಿಂದ ಗೌರವ ಡಾಕ್ಟರೇಟ್ ನಿರಾಕರಿಸಿದನ್ನ ಪ್ರಶ್ನಿಸಿ ನಿನ್ನೆ ನಿಲುಮೆ ತನ್ನ ನಿಲುವನ್ನ ಪ್ರಕಟಿಸಿತ್ತು.ಇಂದಿನ ಪ್ರಜಾವಾಣಿ ಪತ್ರಿಕೆಯಲ್ಲಿ ಕನ್ನಡ ಸಾಹಿತ್ಯವಲಯದಿಂದ ರಾಜ್ಯಪಾಲರ ನಿಲುವಿಗೆ ತಪರಾಕಿಗಳು ಬಿದ್ದಿವೆ.
ಇವರ ತಪರಾಕಿಗಳನ್ನ ನೋಡಿ ನಮಗಂತೂ ಬಹಳ ಸಮಧಾನವಾಗಿದೆ.ಇದೋ ನಿಮಗಾಗಿ
ಹಂಪಿ ಕನ್ನಡ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಡಾ.ಎಂ.ಎಂ.ಕಲಬುರ್ಗಿ :
‘ರಾಜ್ಯಪಾಲರು ಮಾಡಿದ್ದು ಬಹಳ ತಪ್ಪು. ಅವರು ಈ ರೀತಿ ನಡೆದುಕೊಂಡಿರುವುದು ವಿಪರ್ಯಾಸ. ಚಿದಾನಂದಮೂರ್ತಿ ಅವರು ವಯಸ್ಸಿನಲ್ಲೂ, ವಿದ್ವತ್ತಿನಲ್ಲೂ ನಮಗಿಂತ ಹಿರಿಯರು. ಈ ಬೆಳವಣಿಗೆಯನ್ನು ನೋಡಿದರೆ ಸ್ವಾಭಿಮಾನ ಇರುವ ಯಾವ ಸಾಹಿತಿಯೂ ಗೌರವ ಡಾಕ್ಟರೇಟ್ ಸ್ವೀಕರಿಸಬಾರದು ಎಂದೆನಿಸುತ್ತದೆ. ಅವರಿಗೆ ಡಾಕ್ಟರೇಟ್ ಕೊಡುವ, ಕೊಡದಿರುವ ಬಗ್ಗೆ ಗುಪ್ತವಾಗಿ ಚರ್ಚೆ ನಡೆಯಬೇಕಿತ್ತು. ಆದರೆ ಈ ವಿಷಯ ರಾಜ್ಯಪಾಲರ ತನಕ ಹೋಗಿ, ದಿನಪತ್ರಿಕೆಗಳಲ್ಲಿ ಅವರಿಗೆ ‘ಡಾಕ್ಟರೇಟ್ ತಿರಸ್ಕರಿಸಲಾಗಿದೆ’ ಎಂದು ಪ್ರಕಟವಾಗುವ ಹಂತ ತಲುಪಿದ್ದು ನೋವಿನ ಸಂಗತಿ. ಯಾವ ಸಾಹಿತಿಗಳೂ ಈ ರೀತಿ ನೀಡಲಾಗುವ ಡಾಕ್ಟರೇಟ್ ಸ್ವೀಕರಿಸಬಾರದು’
ಮತ್ತಷ್ಟು ಓದು 




