ವಿಷಯದ ವಿವರಗಳಿಗೆ ದಾಟಿರಿ

Archive for

11
ಫೆಬ್ರ

ಕನ್ನಡ ಎಲ್ಲಿಂದ ಉಳಿಯಬೇಕು? ನಾವೇಕೆ ಕಲಿಯಬೇಕು?

– ಮಹೇಂದ್ರ ಸಿ.ಕೆ

ಮೊನ್ನೆ ಮೊನ್ನೆ ಸೂರ್ಯ ತನ್ನೆಲ್ಲಾ ಹೊಳಪನ್ನು ಕಳೆದುಕೊಳ್ಳುವ ಹೊತ್ತಿಗೆ ಕನ್ನಡ ಉಳಿಯಬೇಕು,ಇದಕ್ಕಾಗಿ ಶಾಲೆಗಳಲ್ಲಿ ಕನ್ನಡ ಕಡ್ಡಾಯವಾಗಬೇಕು ಎಂಬ ನಿರ್ಣಯದೊದಿಗೆ 77 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅದ್ದೂರಿಯಾಗಿ ಮುಕ್ತಾಯಕಂಡಿದೆ.ಕನ್ನಡದ ಈ ಚೆಂದದ ಹಬ್ಬದಲ್ಲಿ ಬೆಂಗಳೂರು ಮಿಂದಿದೆ. ರಾಜಧಾನಿಯಲ್ಲಿ ಕನ್ನಡಗಿರಷ್ಟೇ ಇರುವ ಪರಭಾಷಿಕರು ಕೂಡ ಹಬ್ಬ ಕಂಡು ಹುಬ್ಬೇರಿದ್ದಾರೆ;ಸಂತಸ ಪಟ್ಟಿರಬಹುದು.

ಒಂದಿಷ್ಟು ಐಟಿ ಮಂದಿ ಕನ್ನಡ  ಹಬ್ಬದಲ್ಲಿ ಪಾಲ್ಗೊಂಡಿದ್ದು ಕೂಡ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿದೆ.ಕನ್ನಡವನ್ನು ಕಂಪ್ಯೂಟರ್ ಯುಗದಲ್ಲಿ  ಉಳಿಸುವ,ಬೆಳೆಸುವ ಕೆಲಸದಲ್ಲಿ ಐಟಿ ಮಂದಿ ಒಂದಿಷ್ಟು ಕೆಲಸ ಮಾಡುತ್ತಿದ್ದಾರೆ.ಆದರೆ ಅದಕ್ಕಿಂತಲೂ ಹೆಚ್ಚು ಕನ್ನಡ ಉಳಿಸುವ ಕೆಲಸದಲ್ಲಿ ತೊಡಗಿರುವವರು ನಮ್ಮ ನಾಡಿನ ಗ್ರಾಮಾಂತರ ಪ್ರದೇಶದ ಕೂಲಿ ಕಾರ್ಮಿಕರು,ರೈತರು.ಆದರೆ ಸಾಹಿತ್ಯ ಸಮ್ಮೇಳನದಲ್ಲಿ ಈ ವರ್ಗದ ಜನರ ಹಿತಾಸಕ್ತಿಗಳ ಕುರಿತು ಯಾವೊತ್ತು ಸೊಲ್ಲೆತ್ತಿಲ್ಲ. ಅತ್ತ ಗುಲ್ಬರ್ಗದಲ್ಲಿ ತೊಗರಿಗೆ ಬೆಲೆ ಸಿಕ್ಕಿಲ್ಲ ಎಂದು ರೈತರು ಸೀಮೆ ಎಣ್ಣೆ ಸುರಿದು ಆತ್ಮಹತ್ಯೆಯ ಯತ್ನ ನಡೆಸಿದ್ದರು.ಸಮ್ಮೇಳನದ ಅದ್ದೂರಿಯಲ್ಲಿ ಕನ್ನಡ ಉಳಿಸುವ ಗಣ್ಯರು ರೈತರನ್ನು ಮರೆತರು.

ತುಮಕೂರು ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿ ಯು.ಆರ್. ಅನಂತಮೂರ್ತಿ ಅವರು ಕನ್ನಡ-ಇಂಗ್ಲೀಷ್  ಅನಸಂಧಾನದ ಮಾತುಗಳನ್ನಾಡಿದರು. ಅಲ್ಲದೇ ಈಚೆಗೆ ಅವರು ಏಕರೂಪಿ ಶಿಕ್ಷಣ ಕುರಿತು ಜೋರು ದನಿಯಲ್ಲಿ ಮಾತನಾಡುತ್ತಿದ್ದಾರೆ. ಈ ದಿನ ಕನ್ನಡ ಮಾತ್ರವಲ್ಲ,ಎಲ್ಲಾ ಪ್ರಾದೇಶಿಕ ಭಾಷೆಗಳಿಗೂ ಬಿಸಿ ತಟ್ಟಿಸಿರುವ ಜಾಗತೀಕರಣದ ಭಾಷೆ ಇಂಗ್ಲೀಷ್ಗೆ  ಸವಾಲು ಹೊಡ್ಡಬೇಕಾದರೆ ಅನಂತಮೂರ್ತಿ ಸಲಹೆ ಜಾರಿಗೆ ಬರಬೇಕಾಗಿದೆ.
ಕನ್ನಡ ಉಳಿಸಿ ಎಂದು ಬೆಂಗಳೂರಿನಲ್ಲಿ ಘೋಷಣೆ ಕೂಗಿದರೆ ಕನ್ನಡ ಉಳಿಯದು.ಕೇವಲ ಕನ್ನಡ ಉಳಿಸಿ..ಉಳಿಸಿ ಎಂದು ಹೇಳುತ್ತಾ ಹಳ್ಳಿ ಮಕ್ಕಳನ್ನು,ರೈತಾಪಿ ವರ್ಗದ ಮಕ್ಕಳನ್ನು ಅತ್ಯುತ್ತಮ ಅವಕಾಶಗಳಿಂದ ವಂಚಿತರಾಗಿಸುವ ಕೆಲಸ ಮಾಡಲಾಗುತ್ತಿದೆ. ಕನ್ನಡ ಕಲಿಯುವುದರಿಂದ ಊಟ,ಉದ್ಯೋಗ ಸಿಗುವುದಿಲ್ಲ ಎಂದಾದರೆ ಅದನ್ನು ಕಲಿತು ಏನು ಉಪಯೋಗ ಎಂಬುದನ್ನು ಕನ್ನಡ ಉಳಿಸುವ ಮಹಾತ್ಮರು ಹೇಳಬೇಕಾಗಿದೆ. ಮತ್ತಷ್ಟು ಓದು »

11
ಫೆಬ್ರ

ಬದುಕು ಬದಲಿಸಬಹುದು!

ಸವಿತ ಎಸ್.ಆರ್

ನಾ ಹತ್ತನೇ ತರಗತಿ ಮುಗಿಸಿದ ನಂತರ ನನ್ನಣ್ಣ ಕೊಟ್ಟ ಪುಟಾಣಿ ಪುಸ್ತಕ “ಬೆಳಕಿನೊಂದು ಕಿರಣ ಮೇಡಂ ಕ್ಯೂರಿ“. ವಿಜ್ಞಾನದ ಬಗ್ಗೆ ಬೆರಗು ಮೂಡಿಸಿ ಹೆಚ್ಚು ಕಲಿಯಲು ಪ್ರೇರೇಪಿಸಿದ ಬರವಣಿಗೆಯದು. ಬರೆದವರು ನೇಮಿ ಚಂದ್ರ. ಆ ಪುಸ್ತಕದ ಮೊದಲ ಪುಟದಲ್ಲಿ ಓದಿದ ಅರ್ಪಣೆಯ ಸಾಲುಗಳು ಈ ದಿನಕ್ಕೂ ನೆನಪಿವೆ…

ಚೆನ್ನಾಗಿ ಓದಮ್ಮ, ರ‍್ಯಾಂಕ್ ಬರಬೇಕು. ಈ ಕಸ ಮುಸುರೆಯಲ್ಲೇನಿದೆ? ಎಂದು ಸದಾ ಹುರಿದುಂಬಿಸಿದ, ಬಯಲು ಸೀಮೆಯ ಹಳ್ಳಿಗಾಡಿನ ಅಪ್ಪಟ ಅನಕ್ಷರಸ್ಥೆ ನನ್ನಮ್ಮನಿಗೆ

ಪುಸ್ತಕ ಮುಗಿಯೊದರೊಳಗೆ ನನ್ನ ಮುಂದಿನ ಓದಿನ ದಾರಿ ಕಾಣಿಸತೊಡಗಿತ್ತು. ಕೊನೆಯ ಪುಟದಲ್ಲಿ ಇದ್ದ ಲೇಖಕರ ಬಗ್ಗೆ ಓದುತ್ತಾ ಹೋದಂತೆ..ಅನ್ನಿಸತೊಡಗಿತ್ತು… ನೇಮಿ ಚಂದ್ರ…ಅಬ್ಬಾ!! ಹೆಣ್ಮಗಳೊಬ್ಬಳು ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಬಹುದೇ….ನಾನೂ ಓದಬಾರದೇಕೆ ಅಂತ ಅವತ್ತೇ ಅನ್ನಿಸಿತ್ತು. ನಂತರ ನನ್ನ ಆಯ್ಕೆ ಕೂಡಾ ಅದೇ ಆಯ್ತು 🙂

ಅಂದಿನಿಂದ ಇಂದಿನವರೆಗೆ ಯಾವಾಗ ಲೈಫು ಡಲ್ ಅನಿಸಿದಾಗಲೆಲ್ಲಾ “ಬೆಳಕಿನೊಂದು ಕಿರಣ” ಪುಸ್ತಕ ಧೈರ್ಯ ತುಂಬಿ ಹೊಸ ಕನಸುಗಳನ್ನ ಕಾಣಲು ಸ್ಫೂರ್ತಿ ನೀಡುತ್ತಿದೆ.

ಮೊನ್ನೆ ಸಪ್ನ ಬುಕ್ ಸ್ಟಾಲಿಗೆ ಹೋದಾಗ ಹಾಗೇ ಕಣ್ಣಾಡಿಸುತ್ತಿರುವಾಗ ಕಂಡದ್ದು “ಬದುಕು ಬದಲಿಸಬಹುದು” – ನೇಮಿಚಂದ್ರ.. ಅರೆ ವಾವ್ ನನ್ನ ನೆಚ್ಚಿನ ಪುಸ್ತಕದ ಲೇಖಕರು…ಕೊನೆಯ ಪುಟದಲ್ಲಿ..ಮೊದಲ ಬಾರಿಗೆ..ಅವರ ಪೋಟೋ ನೋಡಿ ಸಕತ್ ಖುಷಿಯಾಯ್ತು. ಮನೆಗೆ ತಂದ ಪುಸ್ತಕ ಒಂದೆರಡು ದಿನ ಮನಃ ಪೂರ್ತಿಯಾಗಿ ಓದಿದೆ. : )

ಪ್ರತಿ ಪುಟಗಳಲ್ಲಿ ಅದೆಷ್ಟೊಂದು ಕಾನ್ಫಿಡೆನ್ಸ್ ತುಂಬಿದ ಬರಹಗಳು, ಕೆಲವು ಲೇಖನಗಳ ಶೀರ್ಷಿಕೆಗಳು ಹೀಗಿವೆ…

ಸಮಯವಿಲ್ಲವೆ ಹೇಳಿ
ಕನಸು ಕಾಣುವ ಬನ್ನಿ
ಸ್ನೇಹಕ್ಕೆ ಯಾವ ಸರಹದ್ದು
ಸೋಲಿಲ್ಲದ ಮನೆಯ ಸಾಸಿವೆ
ಜಗತ್ತು ಬದಲಾಗಬಹುದು
ಆಯ್ಕೆಯಿದೆ ನಮ್ಮ ಕೈಯಲ್ಲಿದೆ
ಬರೆದಿಡಿ….ಬರೆದಿಡಿ
ಆತ ಕೊಟ್ಟ ವಸ್ತು ಒಡವೆ, ನನಗೆ ಅವಗೆ ಗೊತ್ತು
ಮುಗಿಲು ಕೂಡ ಮಿತಿಯಿಲ್ಲ
ಬದುಕು…ನಿನ್ನಲ್ಲೆಂಥಾ ಮುನಿಸು
ಆದದ್ದೆಲ್ಲಾ ಒಳಿತು ಆಯಿತು
ಕತ್ತಲ ಹಾದಿಯಲ್ಲಿ ದೊಂದಿ ಹಿಡಿದು
ಕಾಸಿಲ್ಲದೆ ಕಲಿಸಿದ್ದು
ದುಡಿಯಬಲ್ಲೆವು ನಾವು
ಚಿಗುರಿಸಿ ಕನಸುಗಳನ್ನು
ಬದುಕು ಬರಿದಾಗದಿರಲಿ
.
.
.
.
.
ಇಷ್ಟು ಚೆಂದದ ಶೀರ್ಷಿಕೆಯ ಲೇಖನಗಳೊಂದಿಗೆ ಲೇಖಕಿಯವರು ನಮ್ಮ ದಿನ ನಿತ್ಯದ ಜೀವನವನ್ನ ಬೇರೆ ಪರಿಮಾಣದಲ್ಲೂ ನೋಡಬಹುದೆಂಬುದನ್ನ…ಕಲಿಸುವಿಕೆ ಪರಿ ಮಾತ್ರ… ತುಂಬಾ ತುಂಬಾ ಇಷ್ಟವಾಯ್ತು.
ನೀವೂ ಕೂಡ ಓದಿ, ಮೆಚ್ಚಿನ ಪುಸ್ತಕಗಳ ಸಾಲಿಗೆ ಈ ಪುಸ್ತಕದ ಹೆಸರು ಸೇರುವುದು ಖಂಡಿತ 🙂