ವಿಷಯದ ವಿವರಗಳಿಗೆ ದಾಟಿರಿ

Archive for

13
ಫೆಬ್ರ

ನಾನೆಂಬ ಪರಕೀಯ…

ಸಾತ್ವಿಕ್ ಎನ್ ವಿ

ಕಾಲೇಜಿಗೆ ಬರುವವರೆಗೆ ನಾನು ಕಾಸರಗೋಡು ಕರ್ನಾಟಕದಲ್ಲಿದೆ ಎಂದೇ ಭಾವಿಸಿದ್ದೆ. ನಂತರ ಅದು ಕೇರಳದಲ್ಲಿದೆ ಎಂದು ತಿಳಿದ ಬಳಿಕ ಅಲ್ಲಿನ ಕನ್ನಡ-ಕನ್ನಡಿಗರ ಕುರಿತ ಕುತೂಹಲ ಇನ್ನು ಹೆಚ್ಚಿತು. ಕವಿವರ್ಯರ ಕವನಗಳಲ್ಲಿ ಯಾಕೆ ಯಾತನೆಯ ಬಿಂಬಗಳಿವೆ ಎಂಬುದೂ ತಿಳಿಯಿತು. ಕರ್ನಾಟಕವೆಂಬ ಹಸುವಿನಿಂದ ಕಾಸರಗೋಡು ಎಂಬ ಕರುವನ್ನು ಬೇರ್ಪಡಿಸಿ ಕೇರಳ ರಾಜ್ಯಕ್ಕೆ ಸೇರಿಸಲಾಗಿತ್ತು. ಅದೂ ಕನ್ನಡಿಗರ ಉಗ್ರ ಪ್ರತಿಭಟನೆಯ ನಡುವೆ.
ನಾನು ಮಂಗಳೂರು ವಿವಿಗೆ ಎಂ.ಎ ಮಾಡಲು ಸೇರಿದಾಗ ಕಾಸರಗೋಡಿಗೊಮ್ಮೆ ಭೇಟಿ ಕೊಡಬೇಕೆಂಬ ಒತ್ತಾಸೆಗೆ ಪೂರಕವಾಗಿ ಮಂಜೇಶ್ವರದ ಗೋವಿಂದ ಪೈಗಳ ಮನೆಯನ್ನು ನೋಡುವ ಅವಕಾಶ ಸಿಕ್ಕಿತು. ಅಂದು ಭೇಟಿಯಾದ ಹಲವು ಹಿರಿಯರು ಇಲ್ಲಿನ ವಾಸ್ತವ ಪರಿಸ್ಥಿತಿಯನ್ನು ಇಂಚಿಂಚು ಮನಮುಟ್ಟುವಂತೆ ವಿವರಿಸಿದ್ದರು.  ಕಾಸರಗೋಡನ್ನು ಕೇರಳಕ್ಕೆ ಸೇರಿಸಿಕೊಳ್ಳಲು  ನಡೆಸಿದ ಕುತಂತ್ರ, ಕರ್ನಾಟಕ ಸರ್ಕಾರ ವಾಪಾಸು  ಪಡೆಯಲು ತೋರಿಸುತ್ತಿರುವ ಅನಾದಾರ, ಇವುಗಳು ಕನ್ನಡ ಹೋರಾಟಗಾರರಿಗೆ  ಹುಟ್ಟಿಸಿದ ನಿರಾಶೆಯನ್ನು ಸಾದೋಹರಣವಾಗಿ ವಿವರಿಸಿದ್ದರು. ಇಂಥ ಕಾಸರಗೋಡು ಜಿಲ್ಲೆಯ ಗಡಿಯಾದ ಕರ್ನಾಟಕದ ತಲಪಾಡಿ ಗ್ರಾಮವು  ಮಂಗಳೂರು ವಿಶ್ವವಿದ್ಯಾನಿಲಯದಿಂದ ಸುಮಾರು ಹತ್ತು ಕಿಲೋಮೀಟರ್ ದೂರದಲ್ಲಿದೆ. ನಾವು ಆಗಾಗ ವಿವಿ ಗ್ರಂಥಾಲಯದ ಮೊದಲ ಮಹಡಿಯಲ್ಲಿ ನಿಂತು ಮೊಬೈಲ್ ನೆಟ್ವರ್ಕ್ ನೋಡುವುದಿತ್ತು. ಅಲ್ಲಿ ಕೇರಳದ ಹಲವು ನೆಟ್ವರ್ಕ್ ಗಳು ಸಿಗುತ್ತವೆ. ಅಷ್ಟು ಹತ್ತಿರ ಕಾಸರಗೋಡು. ಕನ್ನಡಿಗರ ಮನಸ್ಸಿಗೂ ಕೂಡ. ಮತ್ತಷ್ಟು ಓದು »