ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 20, 2011

2

ಒಲುಮೆ

‍Jagannath Shirlal ಮೂಲಕ

ಪದ್ಮಾವತಿ ಎನ್

ಅವಳ ಕಣ್ಣೋಟದಾ ಸೆಳೆತಕೆ

ವಯ್ಯಾರದಾ ಛಾಪಿಲ್ಲ . . . ಗೊಂದಲದ ಮುಸುಕಿಲ್ಲ

ರೆಪ್ಪೆಯಂಚಲಿ ಮೂಡಿದಾ ಕಳೆ

ಆವರಿಸಿತ್ತು ನನ್ನ ಮನ ಪಟಲವ  . . . . .

ಸಂಕೋಚದಲೆ ಬಾಚಿದೆ ಆ ಕಿರಣವ

ಪುಳಕಗೊಂಡಿತಾಗ ಮೈಮನಸು

ನನ್ನಿರವ ಮರೆತಿದ್ದೆ

ನೋಟವನೇ ಗೆದ್ದಿದ್ದೆ

ಕನಸಿನರಮನೆಯ ಅರಸುತ್ತಾ ಸಾಗಿದ್ದೆ. . . . .

ನನ್ನೊಡಲ ದಣಿಸಿದವನು ನನ್ನುಸಿರ ತಣಿಸಿದವನು

ನಂಬಿದ್ದೆ ನಾನಾಗ ಆ ಕಣ್ಣಂಚ ಕಿರಣವನು

ಆದರತೆಯು ಚಿಗುರಿ ನಿಂತಾಗ

ಕ್ಷಣ ಕಳೆದು ಕಾಲ ಮಗುಚಿದರೂ

ನಿಂತಿದೆ ನನ್ನುಸಿರು ಅವನಾಳದಲಿ

ತಂಪೆರೆದಿಹಾ ಪ್ರೀತಿಯಾಮೃತಕೆ  . . . . . .

ಇನ್ನು ಹಸಿರಿದೆ ನಮ್ಮ ಹೃದಯಗಳಲಿ

ತುಟಿಯಂಚಲೀಗ ನಗುವಿನಾ ಹೊಳಪು

ಹುಚ್ಚೆದ್ದು ಕುಣಿದಿದೆ ನಮ್ಮ ಒಲುಮೆ

ಕೈ ಹಿಡಿವ ಮನ ಮಿಡಿವ ನನ್ನರಸನಿಗೆ

ಪಕ್ವಗೊಂಡಿದೆ  ಮೈಮನಸು . . . . .

ಚಿತ್ರಕೃಪೆ: chictalks.com

Read more from ಕವನಗಳು
2 ಟಿಪ್ಪಣಿಗಳು Post a comment
  1. Cheluvaraju's avatar
    ಮಾರ್ಚ್ 14 2011

    ಅವಳ ಕಣ್ಣೋಟದಾ ಸೆಳೆತಕೆ

    ವಯ್ಯಾರದಾ ಛಾಪಿಲ್ಲ . . . ಗೊಂದಲದ ಮುಸುಕಿಲ್ಲ

    ರೆಪ್ಪೆಯಂಚಲಿ ಮೂಡಿದಾ ಕಳೆ

    ಆವರಿಸಿತ್ತು ನನ್ನ ಮನ ಪಟಲವ . . . . .

    ಸಂಕೋಚದಲೆ ಬಾಚಿದೆ ಆ ಕಿರಣವ

    ಪುಳಕಗೊಂಡಿತಾಗ ಮೈಮನಸು

    ನನ್ನಿರವ ಮರೆತಿದ್ದೆ

    ನೋಟವನೇ ಗೆದ್ದಿದ್ದೆ

    ಕನಸಿನರಮನೆಯ ಅರಸುತ್ತಾ ಸಾಗಿದ್ದೆ. . . . .

    ನನ್ನೊಡಲ ದಣಿಸಿದವನು ನನ್ನುಸಿರ ತಣಿಸಿದವನು

    ನಂಬಿದ್ದೆ ನಾನಾಗ ಆ ಕಣ್ಣಂಚ ಕಿರಣವನು

    ಆದರತೆಯು ಚಿಗುರಿ ನಿಂತಾಗ

    ಕ್ಷಣ ಕಳೆದು ಕಾಲ ಮಗುಚಿದರೂ

    ನಿಂತಿದೆ ನನ್ನುಸಿರು ಅವನಾಳದಲಿ

    ತಂಪೆರೆದಿಹಾ ಪ್ರೀತಿಯಾಮೃತಕೆ . . . . . .

    ಇನ್ನು ಹಸಿರಿದೆ ನಮ್ಮ ಹೃದಯಗಳಲಿ

    ತುಟಿಯಂಚಲೀಗ ನಗುವಿನಾ ಹೊಳಪು

    ಹುಚ್ಚೆದ್ದು ಕುಣಿದಿದೆ ನಮ್ಮ ಒಲುಮೆ

    ಕೈ ಹಿಡಿವ ಮನ ಮಿಡಿವ ನನ್ನರಸನಿಗೆ

    ಪಕ್ವಗೊಂಡಿದೆ ಮೈಮನಸು . . . . .

    ಉತ್ತರ
  2. Rukmini's avatar
    Rukmini
    ನವೆಂ 8 2011

    kavana tumba chanagide

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments