ಮಂಗಳಮುಖಿಯರಿಗೂ ದಕ್ಕಿದ ಹಕ್ಕುಗಳು
ಭಾರತದಲ್ಲಿ ಫೆಬ್ರವರಿ 9ರಿಂದ ಪ್ರಾರಂಭವಾಗಿರುವ ಜನಗಣತಿಯಲ್ಲಿ ಸ್ತ್ರೀ ಪುರುಷರ ಜೊತೆಗೆ ಪ್ರಥಮ ಬಾರಿಗೆ ಲೈಂಗಿಕ ಅಲ್ಪಸಂಖ್ಯಾತರನ್ನೂ ಸೇರಿಸಲು ನಿರ್ಧರಿಸಿರುವುದನ್ನು ಸ್ವಾಗತಿಸಿರುವುದಾಗಿ ಕರ್ನಾಟಕ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆ ಹೇಳಿದೆ.
ಗುರುವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಜನಗಣತಿ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆ ಕಾರ್ಯಕರ್ತರು ಸರಕಾರಕ್ಕೆ ತಾವು ಸಲ್ಲಿಸುತ್ತಿರುವ ಬೇಡಿಕೆಗಳ ಬಗ್ಗೆ ವಿವರ ನೀಡಿದರು.
ಭಾರತದಲ್ಲಿ 1872ರಿಂದ ಜನಗಣತಿ ಪ್ರಾರಂಭವಾಗಿ ಪ್ರತಿ 10 ವರ್ಷಗಳಿಗೊಮ್ಮೆ ನಡೆಯುತ್ತಿದೆ. ಸರಣಿಯಲ್ಲಿ 15ನೆಯ ಹಾಗೂ ಸ್ವಾತಂತ್ರ್ಯ ಬಳಿಕದ 7ನೇ ಜನಗಣತಿ ಇದಾಗಿದೆ. ಈಗಾಗಲೇ ಜನಗಣತಿಗೆ ಸಕಲ ಸಿದ್ದತೆಗಳಾಗಿದ್ದು ಸ್ತ್ರೀ ಪುರುಷರ ಜೊತೆಗೆ ಭಾರತ ಇತಿಹಾಸದಲ್ಲೇ ಪ್ರಥಮ ಬಾರಿಗೆ ಲೈಂಗಿಕ ಅಲ್ಪಸಂಖ್ಯಾತರನ್ನು ದಾಖಲಿಸಲು ಮುಂದಾಗಿದೆ. ಇದನ್ನು ಕರ್ನಾಟಕ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆ ಸ್ವಾಗತಿಸುತ್ತದೆ ಎಂದು ವೇದಿಕೆ ಹರ್ಷ ವ್ಯಕ್ತಪಡಿಸಿತು.
ಕರ್ನಾಟಕ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆ : ಈ ವೇದಿಕೆಯು ಕರ್ನಾಟದ ಲೈಂಗಿಕ ಅಲ್ಪಸಂಖ್ಯಾತರ ಸಮುದಾಯದವರ ರಾಜ್ಯಮಟ್ಟದ ಪ್ರಜಾಸತ್ತಾತ್ಮಕ ಸಂಸ್ಥೆಯಾಗಿದ್ದು, 22ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಕಾರ್ಯನಿರತವಾಗಿದೆ. ಕರ್ನಾಟಕ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆ ಲೈಂಗಿಕ ಅಲ್ಪಸಂಖ್ಯಾತರ ಮಾನವ ಹಕ್ಕುಗಳನ್ನು ಸಂರಕ್ಷಿಸುವುದು ಮತ್ತು ಅವರ ಪರವಾಗಿ ಸರ್ಕಾರ, ಮಾದ್ಯಮ, ಸರ್ಕಾರೇತರ ಸಂಸ್ಥೆಗಳು ಮತ್ತು ಸಮುದಾಯ ಆಧಾರಿತ ಸಂಸ್ಥೆಗಳೊಂದಿಗೆ ವಕಾಲತ್ತು ನಡೆಸುತ್ತಿದೆ. ವೇದಿಕೆಯು ಲೈಂಗಿಕ ಅಲ್ಪಸಂಖ್ಯಾತರ ವಿಷಯದಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸುವುದು, ಸಾಮಾಜಿಕ ಚಳವಳಿಗಳೊಂದಿಗೆ ಕೈ ಜೋಡಿಸಿ ಸಾರ್ವಜನಿಕ ಕಾರ್ಯಕ್ರಮಗಳ ಮುಖಾಂತರ ಲೈಂಗಿಕ ಅಲ್ಪಸಂಖ್ಯಾತರ ಪರವಾಗಿ ಸಮಾಜ ಬದಲಾವಣೆ ಕೆಲಸ ಮಾಡುತ್ತಿದೆ. ಮತ್ತಷ್ಟು ಓದು 
ರಾಜ್ಯಸಭೆಗೆ ಕನ್ನಡೇತರರು – ಎಷ್ಟು ಸರಿ ?
ಸುದ್ದಿ ನಿನ್ನೆ ಪತ್ರಿಕೆಗಳಲ್ಲಿ, ಟಿವಿಯಲ್ಲಿ ನೋಡಿದೆ. ಹೀಗೆ ಕನ್ನಡ, ಕರ್ನಾಟಕಕ್ಕೆ ಯಾವ ಕೊಡುಗೆಯನ್ನು ನೀಡದ, ಯಾವ ಸೇವೆಯನ್ನು ಮಾಡದ, ಕನ್ನಡಿಗರ ಬದುಕಿನ ಯಾವ ಸಮಸ್ಯೆಗಳ ಬಗ್ಗೆಯೂ ಒಂದಿನಿತು ಅರಿವಿಲ್ಲದ ಒಬ್ಬ ಮಾಜಿ ಚಿತ್ರ ನಟಿ, ಈ ರೀತಿ ರಾಜ್ಯ ಸಭೆ ಅನ್ನುವ ಒಕ್ಕೂಟ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿಸಲೆಂದೇ ಹುಟ್ಟಿದ ವ್ಯವಸ್ಥೆಗೆ, ಆಯ್ಕೆಯಾಗುವುದನ್ನು ನೋಡಿದಾಗ ಈ ರಾಜ್ಯಸಭೆ ಅನ್ನುವ ವ್ಯವಸ್ಥೆಯ ಅರ್ಥವಾದರೂ ಏನು? ಅದು ಯಾಕಾಗಿ ಬೇಕಾಗಿದೆ ಅನ್ನುವ ಪ್ರಶ್ನೆ ಮನದಲ್ಲಿ ಹುಟ್ಟಿತು.ರಾಜ್ಯ ಸಭೆ ಹುಟ್ಟಿದ್ದು ಯಾಕೆಂದು ಗೊತ್ತೇ?
ರಾಜ್ಯಸಭೆ ಅನ್ನುವುದು ಮಾಂಟೆಗೊ-ಚೆಮ್ಸಫರ್ಡ್ ಅನ್ನುವ ಬ್ರಿಟಿಷ್ ಸರ್ಕಾರದ ಅಧಿಕಾರಿಗಳ ವರದಿಯನ್ನಾಧರಿಸಿ 1918ರಲ್ಲಿ ಹುಟ್ಟಿದ ವ್ಯವಸ್ಥೆ. ಸ್ವಾತಂತ್ರ್ಯ ಬಂದ ನಂತರ ಲೋಕಸಭೆ ಅಸ್ತಿತ್ವಕ್ಕೆ ಬಂದ ನಂತರ ರಾಜ್ಯಸಭೆ ಅನ್ನುವ Council of States ಮುಂದುವರೆಯಬೇಕೇ, ಅದರ ಅಗತ್ಯ ಇದೆಯೇ ಅನ್ನುವ ಬಗ್ಗೆ ಸುದೀರ್ಘವಾದ ಚರ್ಚೆ ನಡೆದಿತ್ತು. ಭಾರತದಂತ ಹೆಜ್ಜೆ ಹೆಜ್ಜೆಗೂ ವೈವಿಧ್ಯತೆಯುಳ್ಳ ದೇಶಕ್ಕೆ ಒಕ್ಕೂಟ ವ್ಯವಸ್ಥೆಯೇ ಸರಿಯಾದ ವ್ಯವಸ್ಥೆ ಅಂಬುದನ್ನು ಅಂದಿನ ರಾಜಕೀಯ ನಾಯಕರು ಒಪ್ಪಿ ಭಾರತವನ್ನು ಒಂದು ಒಕ್ಕೂಟ ವ್ಯವಸ್ಥೆಯೆಂದೇ ಘೋಷಿಸಿದ್ದರು. ಜನರಿಂದಲೇ ನೇರವಾಗಿ ಆಯ್ಕೆಯಾಗುವ ಲೋಕಸಭೆಯೊಂದಕ್ಕೆ ಜನರ ಆಶೋತ್ತರಗಳನ್ನು ಈಡೇರಿಸಲು ಸಾಧ್ಯವಾಗದು, ಆದ್ದರಿಂದ ರಾಜ್ಯಸಭೆ ಅನ್ನುವ ಪ್ರತಿ ರಾಜ್ಯದ ಜನ ಪ್ರತಿನಿಧಿಗಳಿಂದಲೇ ಆಯ್ಕೆಯಾಗಿ ಬರುವ ವಿಶೇಷ ಪ್ರತಿನಿಧಿಗಳ ಸಂಸ್ಥೆಯನ್ನು ಲೋಕಸಭೆಗೆ complimentory ಎಂಬಂತೆ ಇಟ್ಟುಕೊಳ್ಳಲಾಯಿತು. ಅದರ ಸ್ಥಾಪಿತ ಉದ್ದೇಶವನ್ನು ರಾಜ್ಯಸಭೆಯ ವೆಬ್ ಸೈಟ್ ಹೀಗೆ ಬಣ್ಣಿಸುತ್ತೆ (ಕೆಳಗೆ ಕೆಲ ಅಂಶಗಳನ್ನು ನಾನೇ ಹೈಲೈಟ್ ಮಾಡಿದ್ದೇನೆ)





