ವಿಷಯದ ವಿವರಗಳಿಗೆ ದಾಟಿರಿ

Archive for

31
ಆಕ್ಟೋ

ಹಾಲೋವಿನ್

– ಅಮಿತಾ ರವಿಕಿರಣ

ಪ್ರತಿ ಸೋಮವಾರ..ಮಗನ ಶಾಲೆಯಲ್ಲಿ..ವಾರಪೂರ್ತಿ ಶಾಲೆಯಲ್ಲಿ ನಡೆಯುವ ಕಾರ್ಯಕ್ರಮ,ನಾವು ಕಲಿಸಬೇಕದ್ದು..ಅವರಿಂದ ಹೇಳಿಸುವುದು…ಮತ್ತಿತರ ವಿಷಯಗಳ ಬಗ್ಗೆ ಒಂದು ನ್ಯೂಸ್ ಲೆಟರ್ ಕೊಡಲಾಗುತ್ತೆ ..ಈ ಬಾರಿಯ ಲೆಟರ್ ನಲ್ಲಿದ್ದಿದ್ದು. ಹೆಲ್ಲೋವಿನ (holloween)ಎಂಬ ಆಚರಣೆ..ಮತ್ತು ಅದರ ಕುರಿತಾದ ಚಟುವಟಿಕೆಗಳ ಬಗ್ಗೆ..,,ಹೋದ ವರ್ಷ ನಾನೂ ಹಲ್ಲೋವಿನ್ ದಿನವೇ ಬಂದಿದ್ದೆ..ಆದ್ದರಿಂದ ಅದರ ಆಚರಣೆ..ಅದರ ಕುರಿತಾದ ಯಾವುದೇ ವಿಷಯ ನನಗೆ ಗೊತ್ತಿರಲಿಲ್ಲ..ಎಂ ಎ ಮೊದಲ ವರ್ಷದಲ್ಲಿ ಜಾಗತಿಕ ಜಾನಪದ ಇತಿಹಾಸ ಓದುವಾಗ ಅಲ್ಲಿ ಈ ಶಬ್ದ ಕೇಳಿದ ನೆನಪು ಬಿಟ್ಟರೆ ..ಇದರ ಬಗ್ಗೆ..ಬೇರೆನು ಗೊತ್ತಿರದ ನಾನು..ಬರುವ ಶುಕ್ರವಾರ..ಹಲೋವಿನ್ ಫ್ಯಾನ್ಸಿ ಡ್ರೆಸ್ ಪಾರ್ಟಿ ಇದೆ ಮಗುವನ್ನು ಸಿದ್ದ ಮಾಡಿ ಕಳಿಸಿ ಎಂದಾಗ..ಏನು ಮಾಡೋದು ಎಂಬ ಗೊಂದಲದಲ್ಲಿದ್ದೆ..ಮಗನ ಟೀಚರ್ ಗೆ ಕೇಳಿದಾಗ..ಯಾವುದೇ ಆದೀತು..ರಾಕ್ಷಸ ,ಮಾಟಗಾರ,ಸ್ಕೆಲಿಟನ್,..ಆಕೆಯ ಲಿಸ್ಟ್ ಮುಂದುವರೆದಿತ್ತು..ನನಗೆ ತಲೆ ಚಕ್ರ ಬರುತಿತ್ತು..ಮಕ್ಕಳಿಗೆ ಸಿಂಗಾರ ಮದೊದೆಂದರೆ ನನಗೆ ಮೊದಲಿಂದಲೂ..ಅದೇನೋ ವೀಪರೀತ  ಆಸಕ್ತಿ..ಓಣಿಯ ಮಕ್ಕಳು ಬಂಧುಗಳ  ಮಕ್ಕಳು..ಮನೇ  ಪಕ್ಕದ ಖಾಲಿ ಜಾಗೆಯಲ್ಲಿ..ಟೆಂಟ ಕಟ್ಟಿಕೊಂಡ ಅಲೆಮಾರಿ ಮಕ್ಕಳು ಯಾರಾದರೂ ಆದೀತು..ಅವರನ್ನು ಕರೆದು ತರ ತರದ ವೇಷ ಮಾಡಿ ಫೋಟೋ ತೆಗೆಡಿದುತ್ತಿದ್ದೆ,,,ನನ್ನ ಮಗನಿಗೂ..ಇವನ್ನೆಲ್ಲ ಪ್ರಯೋಗಿಸಿದ್ದೆನಾದರು..ಕೃಷ್ಣಾ,,ಬುದ್ಹ..ರಾಮ..ಶಕುಂತಲೆ..ಹುಡುಗಿವೇಶ.ಶಂಕರಾಚಾರ್ಯ ಬಿಟ್ಟರೆ..ಬೇರ್ಯಾವ ದೆವ್ವದ ವೇಷ ಹಾಕುವ ಧೈರ್ಯ ಮಾಡಿರಲಿಲ್ಲ.  ..ಈಗ ಶಾಲೆಯಲ್ಲೇ ಹೇಳಿದ್ದಾರೆ..ಅಂದ ಮೇಲೆ..ಮಾಡಲೇಬೇಕಲ್ಲ..ಸರಿ …ಆದರೆ ಇವರು ಬೇರೆಲ್ಲ ಬಿಟ್ಟು ಭಯಾನಕ ವೇಷಗಳನ್ನು ಈ ಹಬ್ಬದಲ್ಲಿ ಹಾಕೊದ್ಯಾಕೆ ಅನ್ನೋದು..ನನ್ನ ಪ್ರಶ್ನೆ ಆಗಿತ್ತು..ಮತ್ತೆ ಕೇಳಬೇಕೆ..???ಶುರು ಆಯ್ತು..ತನಿಖೆ…ಹಲೋವಿನ್..ಬಗ್ಗೆ..

30
ಆಕ್ಟೋ

’ಗೌಡಾನಂದ’ದ ಕಾರಣಗಳು ಮತ್ತು………

-ಅರೆಹೊಳೆ ಸದಾಶಿವರಾವ್

ಗಗನಕ್ಕೇರಿದ ಬೆಲೆ, ರಾಜಕಾರಣಿಗಳ ಜೈಲು ಯಾತ್ರೆ, ಕರೆಂಟಿಲ್ಲದೆ ಕತ್ತಲಾಗಿರುವ ಮನೆ, ಅಕಾಲದಲ್ಲಿ ಉಪದ್ರವಕಾರಿಯಾಗಿರುವ ಮಳೆ……..ಈ ಎಲ್ಲದರ ನಡುವೆ ಮತ್ತೆ ಬಂದಿರುವುದು ಹಬ್ಬಗಳ ಸಾಲು ಸಾಲು. ದಸರೆಯನ್ನು ಉಸಿರು ಬಿಗಿ ಹಿಡಿದು ಮಾಡಿಯಾಯ್ತು, ದೀಪಾವಳಿಯನ್ನು ಈ ಸಂದಿಗ್ಧದಲ್ಲಿಯೇ ಆಚರಿಸಿಕೊಳ್ಳುತ್ತಿದ್ದೇವೆ. ಇನ್ನೇನು ನಮ್ಮ ನಾಡಿನ ಮಟ್ಟಿಗೆ ಹೆಮ್ಮೆಯ ಕನ್ನಡ ರಾಜ್ಯೋತ್ಸವವೂ ಇದೆ. ಈ ಎಲ್ಲದರ ನಡುವೆ ನಮ್ಮ ಪರಿಸ್ಥಿತಿ ಏನಾಗಿದೆಯೋ ನೋಡಿ.
ಬಂದಿದೆ ಹಬ್ಬಗಳ ಸಾಲು ಸಾಲು
ಜೈಲಿಗೆ ಹೊರಟಿದೆ ನಮ್ಮ ನಾಯಕರ ಸಾಲುಹೀಗೆಂದು ಇಂದಿನ ನಮ್ಮ ರಾಜ್ಯದ ರಾಜಕಾರಣವನ್ನು ವಿವರಿಸಬಹುದೇನೋ. ಬಹುಶ: ಇಂದಿನ ಪರಿಸ್ಥಿತಿ ನೋಡಿದರೆ, ಅತೀ ಶೀಘ್ರದಲ್ಲಿಯೇ ನಮ್ಮ ರಾಜ್ಯ ಸರಕಾರದ ಆಡಳಿತ ಪರಪ್ಪನ ಅಗ್ರಹಾರ ಜೈಲಿನಿಂದಲೇ ಆದರೂ ಆಶ್ಚರ್ಯವಿಲ್ಲ. ಆರೋಪಿ ಎಂದು ಹೆಸರು ಕೇಳಿದಾಕ್ಷಣ ಎಲ್ಲರೂ ಅಪರಾಧಿಗಳೇ ಅಲ್ಲವಾದರೂ, ಈ ಪರಿ ಆರೋಪಿಗಳಾಗುತ್ತಿರುವುದು ನಮ್ಮ ಮಟ್ಟಿಗೆ ಆಶ್ಚರ್ಯ ಮತ್ತು ಅನಪೇಕ್ಷಿತ ಎಂಬುದು ಸುಳ್ಳಲ್ಲ.ಈ ದೀಪಾವಳಿಯನ್ನು ಹಿಂಬಾಲಿಸಿ ಕರ್ನಾಟಕ ರಾಜ್ಯೋತ್ಸವವೂ ಬರುತ್ತಿದೆ. ಕನ್ನಡಿಗರ ಪಾಲಿಗೆ ಇದು ಮತ್ತೊಂದು ದೀಪಾವಳಿ ಆಗುತ್ತಿದ್ದ ದಿನಗಳಿಂದ ಈಗದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯ ಬಿಕರಿಗೆ ಸೀಮಿತವಾಗಿದೆ. ಈ ಸಲ ಕೇವಲ ಐವತ್ತು ಜನರಿಗೆ ಮಾತ್ರ ಪ್ರಶಸ್ತಿ ಕೊಡುವ ತೀರ್ಮಾನ ತನ್ನದು ಎಂದು ಮಾನ್ಯ ಮುಖ್ಯ ಮಂತ್ರಿಗಳು ಹೇಳುತ್ತಿರುವುದು ಸ್ವಲ್ಪ ಮಟ್ಟಿಗೆ ಕಳೆದು ಹೋಗಿರುವ ಪ್ರಶಸ್ತಿಯ ಬೆಲೆ ಹೆಚ್ಚಿಸಿದೆ. ಕಳೆದ ವರ್ಷ ಈ ಪ್ರಶಸ್ತಿಗೂ ವಿಪರೀತ ’ಬೆಲೆ’ ಹೆಚ್ಚದ್ದು, ಅದಕ್ಕಾಗಿ ದಲ್ಲಾಳಿಗಳು ಹುಟ್ಟಿಕೊಂಡಿದ್ದು ಎಲ್ಲವೂ ಸುದ್ದಿಯಾಗಿತ್ತು. ಪ್ರಶಸ್ತಿಯ ಹಣದಲ್ಲಿ ದಲ್ಲಾಳಿಗೆ ಪಾಲು ಹೋಗಿ, ಪ್ರಶಸ್ತಿ ವಿಜೇತರಿಗೆ ಚಿನ್ನದ ನಾಣ್ಯವೇ ಗಟ್ಟಿಯಾಗುತ್ತಿತ್ತು ಎಂಬುದು ಈಗ ಹಳೆ ಸುದ್ದಿ. ಈಗಿನ ಸುದ್ದಿ ಎಂದರೆ, ಈ ಸಲದ ಐವತ್ತು ಪ್ರಶಸ್ತಿಗೆ ಬಂದಿರುವ ಒಟ್ಟೂ ಅರ್ಜಿಗಳು ನಾಲ್ಕು ಸಾವಿರಕ್ಕೂ ಹೆಚ್ಚು!!. ಓಹ್ ಕನ್ನಡಿಗ..! ನೀನೆಷ್ಟು ಪುಣ್ಯವಂತ ಅನಿಸದಿರದೆ?
Read more »
29
ಆಕ್ಟೋ

ಇದು ”ನಮ್ಮ” ಮೆಟ್ರೋನಾ ????

– ಮಹೇಶ.ಎಮ್.ಆರ್

ಬಹುದಿನಗಳಿಂದ ನಿರೀಕ್ಷೆಯಲ್ಲಿದ್ದ ಬೆಂಗಳೂರು ಮೆಟ್ರೊ ಸೇವೆ ಶುರು ಆಗಿದೆ. ಮೆಟ್ರೊದಲ್ಲಿನ ಮೊದಲ ಓಡಾಟ ಹೊಸ ಅನುಭವ ನೀಡಿತು. ನಮ್ಮ ಮೆಟ್ರೊ ಸೇವೆಯನ್ನು ಅನುಭವಿಸಿದ ಮೇಲೆ ಇದೇ ಸಮಯದಲ್ಲಿ ಗಮನ ಸೆಳೆದಿದ್ದು ಎಂದರೆ ಅಲ್ಲಿ ಪಾಲಿಸಲಾದ ಬಾಷಾ ನೀತಿ. ಸಂವಿಧಾನದ ಮೂಲಕ ನಾವು ತಿಳಿದುಕೊಂಡಿದ್ದು ಏನು ಅಂದ್ರೆ, ಭಾರತದಲ್ಲಿ ಎಲ್ಲರೂ ಸಮಾನರು ಎಲ್ಲ ಬಾಷೇಗಳೂ ಸಮಾನ ಎಂದು. ಆದರೆ ಕರ್ನಾಟಕದಲ್ಲಿ ಅನುಷ್ಟಾನವಾಗುವ ಯೋಜನೆಗಳಲ್ಲಿ ಈ ನಮ್ಮ ತಿಳುವಳಿಕೆಯನ್ನು ಹುಸಿ ಮಾಡುವ ಎಲ್ಲ ಪ್ರಯತ್ನಗಳು ನಡೆಯುತ್ತಿವೆ. ನಮ್ಮ ಮೆಟ್ರೊದಲ್ಲೂ ಇದನ್ನು ಕಂಡಿದ್ದು ಸುಳ್ಳಲ್ಲ. ಎಂದಿನಂತೆ ಕೇಂದ್ರ ಸರಕಾರ ಕರ್ನಾಟಕದ ಯೋಜನೆಗಳಿಗೆ ನಮ್ಮದೇ ತೆರಿಗೆ ಹಣವನ್ನು ಆರ್ಥಿಕ ಸಹಕಾರದ ಮೂಲಕ ನೀಡುವುದರ ಜೊತೆಗೆ ತನ್ನ ಹುಳುಕು ಬಾಷಾ ನೀತಿಯನ್ನು ನಮ್ಮ ಮೆಟ್ರೊ ಮೂಲಕ ಪ್ರದರ್ಶಿಸಿದೆ.

ಬೆಂಗಳೂರಿಗರಿಗೆ ಮೀಸಲಾಗಿರುವ ಈ ಸೇವೆಯಲ್ಲಿ ವಿನಾಕಾರಣ ಎಲ್ಲೆಡೆ ಹಿಂದಿಯನ್ನು ಬಳಸಲಾಗಿದೆ. ಬೆಂಗಳೂರಿನಲ್ಲಿ ೧% ಕ್ಕಿಂತಲೂ ಕಡಿಮೆಯಿರುವ ಹಿಂದಿ ಬಲ್ಲವರಿಗೆ ತೊಂದರೆ ಆಗಬಾರದು ಎಂಬ ನಿಯಮ ಇಲ್ಲಿ ಪಾಲಿಸಲಾಗಿದೆ. ಬೆಂಗಳೂರಿನಲ್ಲಿರುವ ಹಿಂದಿ ಬಾಷಿಕರ ಸಂಖ್ಯೆಯಷ್ಟೆ ಹೆಚ್ಚು ಕಡಿಮೆ ದಿಲ್ಲಿಯಲ್ಲೂ ಕನ್ನಡ ಬಾಷಿಕರ ಸಂಖ್ಯೆಯಿದೆ. ಈ ಸಂಖ್ಯಾ ಆಧಾರದ ಮೇಲೆ ನೋಡುವುದಾದರೆ, ಬೆಂಗಳೂರಿನ ನಮ್ಮ ಮೆಟ್ರೊದಲ್ಲಿ ಹಿಂದಿಯಲ್ಲಿ ಸೇವೆ ಕೊಡುವುದಾದರೆ ದಿಲ್ಲಿಯಲ್ಲಿನ ಮೆಟ್ರೊದಲ್ಲೂ ಕನ್ನಡದಲ್ಲಿ ಸೇವೆ ಕೊಡಬೇಕು. ಆದರೆ ಭಾರತದ ಬಾಷಾ ನೀತಿ ಪ್ರಕಾರ ಇದು ಸಾದ್ಯವಿಲ್ಲ. ದಿಲ್ಲಿ ಮೆಟ್ರೊದಲ್ಲಿ ಸ್ಥಳೀಯ ಬಾಷೆ ಮತ್ತು ಆಂಗ್ಲ ಬಾಷೆಗೆ ಮಾತ್ರ ಸ್ಥಾನ ಕಲ್ಪಿಸಿದರೆ ಬೆಂಗಳೂರಿನಲ್ಲಿ ಸ್ಥಳೀಯ ಮತ್ತು ಆಂಗ್ಲ ಬಾಷೆ ಜೊತೆಗೆ ಇನ್ನೊಂದು ಬಾಷೆಯನ್ನು ಸ್ಥಳೀಯರ ಮೇಲೆ ಹೇರಲಾಗುತ್ತಿದೆ. ದಿಲ್ಲಿಗೊಂದು ನಿಯಮ ಬೆಂಗಳೂರಿಗೊಂದು ನಿಯಮ ಯಾಕೆ.? ಇಂಥ ಹುಳುಕಿನ ಬಾಷಾ ನೀತಿಯಿಂದ ಒಕ್ಕೂಟ ವ್ಯವಸ್ಥೆಗೆ ಬೆಲೆಯಿಲ್ಲದಂತಾಗಿದೆ. ಎಲ್ಲ ಬಾಶೆಗಳೂ ಸಮಾನ ಎಂಬ ಸಂದೇಶ ಸಾರಬೇಕಾದ ಸರಕಾರಗಳೇ ಇಂದು ತಮ್ಮ ಯೋಜನೆಗಳ ಮೂಲಕ ಸ್ಥಳೀಯ ಬಾಷೆಗಳಿಗಿಂತ ಹಿಂದಿಗೆ ಕೊಂಬು ಜಾಸ್ತಿ ಎಂಬ ಸಂದೇಶ ರವಾನಿಸುತ್ತಿವೆ.

Read more »

29
ಆಕ್ಟೋ

ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ : ಬಣ್ಣದ ಬದುಕು 8 – ಅಸೂಯೆ ತಂದ ಆಡಳಿತ

ಯಕ್ಷಗಾನ ರಂಗದಲ್ಲಿ ಎಲ್ಲೂ ಸಲ್ಲುವ ಯಾವ ವೇಷಕ್ಕೂ ಸೈ ಎನಿಸಿಕೊಳ್ಳುತ್ತಿದ್ದ  ಒಬ್ಬ ಪ್ರಬುದ್ಧ ಹಾಗೂ ಮೇರು ಕಲಾವಿದರಾಗಿದ್ದ  ದಿವಂಗತ ಕುರಿಯ ವಿಠಲ ಶಾಸ್ತ್ರಿಯವರು  ಜನಿಸಿದ್ದು ಕಳೆದ ಶತಮಾನದ 1912ರ ಸೆಪ್ಟೆಂಬರ್ 08ರಂದು. ತಮ್ಮ ವಯಸ್ಸಿನ ನೂರನೇ ಸಂವತ್ಸರದ ಈ ಸಂದರ್ಭದಲ್ಲಿ ಖ್ಯಾತ ಪತ್ರಕರ್ತ ಪದ್ಯಾಣ ಗೋಪಾಲಕೃಷ್ಣ (ಪ. ಗೋ.)ರವರರು ನಿರೂಪಣೆ ಗೈದಿರುವ ಕುರಿಯ  ವಿಠಲ ಶಾಸ್ತ್ರಿಯವರ ಆತ್ಮ ಕಥನ “ಬಣ್ಣದ ಬದುಕು”  ಯಕ್ಷಗಾನ ಅಭಿಮಾನಿಗಳಿಗಾಗಿ ನಿಲುಮೆದಲ್ಲಿ ಪ್ರಕಟವಾಗುತ್ತಿದೆ.
 
ಮಾಡುತ್ತಲಿದ್ದ ಸುಧಾರಣಾ ಪ್ರಯೋಗಗಳನ್ನು ಮೇಳದ ಯಜಮಾನರಾದ ಶ್ರೀ ಕೊರಗಪ್ಪ ಶೆಟ್ಟಿಯವರು ಸ್ವಾಗತಿಸುತ್ತಿದ್ದರು. ಅಂತೆಯೇ, ಪ್ರೇಕ್ಷಕ ವರ್ಗದವರಿಂದಲೂ ಮೆಚ್ಚುಗೆ ಗಳಿಸುತ್ತಿದ್ದೆವು. ಇತರ ಕೆಲವು ತಾಪತ್ರಯಗಳನ್ನು ಸಹಿಸಿಕೊಂಡಾದರೂ, ಕಲಾ ವ್ಯವಸಾಯವನ್ನು ಹುಲುಸಾಗಿ ಮಾಡುತ್ತೇನೆ, ಆಸೆಯ ಕೆಲವು ಬಳ್ಳಿಗಳಿಗಾದರೂ ನೀರೆರೆಯುತ್ತೇನೆ ಎನ್ನುತ್ತಲೇ ವರ್ಷದ ಮುಕ್ಕಾಲು ಭಾಗವನ್ನು ನೂಕಿದೆ.ಮಾತ್ಸರ್ಯದ ಮೊಳಕೆ 
ನಾನು ತಿಳಿದಿದ್ದಂತೆಯೇ, ಕೆಲವೊಂದು ಮಂದಿ ಇತರ ಕಲಾವಿದರ ಮಾತ್ಸರ್ಯ ಬೀಜದ ಮೊಳಕೆಯಾಗಿತ್ತು. ಆದರೆ, ನಾನು ಹೋಗುತ್ತಲಿರುವುದು ಸರಿಯಾದ ದಾರಿ ಎಂಬ ಆತ್ಮವಿಶ್ವಾಸ ನನಗಿತ್ತು. ಹೇಗಾದರೂ ನನ್ನ ಮೇಲೆ ಮತ್ಸರವಿದ್ದರೆ ಅದು ನನ್ನ ಮೇಲಷ್ಟೆ ಪ್ರಯೋಗವಾಗಬೇಕು-ಬೇರಾರನ್ನೂ ಮುಟ್ಟಲಾರದು ಎಂದುಕೊಂಡಿದ್ದೆ.

Read more »

28
ಆಕ್ಟೋ

ಸಾರಥಿ – The lion king

– ಫಿಲ್ಮಿ ಪವನ್

ಸಾರಥಿ ಬಿಡುಗಡೆಯಾಗಿ ಬಹಳ ದಿನಗಳಾಯ್ತು. ಆದರೆ ನಮ್ಮೂರಿನ ಕಿತ್ತೋದ ಥಿಯೇಟರ್ ನಲ್ಲಿ ಕೂತು ಯಾರಾದ್ರು ಬೀಡಿ ಅಂಟಿಸಿದಾಗ, ಅಣ್ಣ ಒಂದು ಬೀಡಿ ಕೊಡಣ್ಣ ಅಂತ ತೊಗೊಂಡು mAss ಹೀರೋ ಚಿತ್ರವನ್ನು mAss ಆಗಿ ನೋಡೋದ್ರಲ್ ಇರೋ ಮಜನೆ ಬೇರೆ. ಅದಕ್ಕೆ ನೆನ್ನೆ ಕಾಲ ಬಂದಿತ್ತು , ಯಾಕೋ ಏನೋ ಇ ಚಿತ್ರ ಎಲ್ಲಿ ರಿಲೀಸ್ ಅದ್ರು ಟೈಮ್ ಗೆ ಸರ್ಯಾಗಿ ಸ್ಟಾರ್ಟ್ ಆಗ್ತಾ ಇಲ್ಲ ಅನ್ನೋ ವಿಷಯ ಮತ್ತೊಮ್ಮೆ ನಮ್ಮೂರಲ್ಲೂ ಪ್ರೋವ್ ಆಗೋಯ್ತು. ೭-೩೦ ರ ಶೋ ಗೆ ೭-೦೦ ಘಂಟೆಗೆ ಹೋಗಿದ್ರು ಥಿಯೇಟರ್ ಒಳಗೆ ಬಿಟ್ಟಿದ್ದೆ ೭-೪೦ಕ್ಕೆ. ಅಷ್ಟರಲ್ಲೇ ನಮ್ಮ ಮಾಮಂದಿರು ತಮ್ಮ ಟಾಟಾ ಸುಮೋದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಅಲ್ಲಲ್ಲಿ ನಿಂತಿದ್ದವರಿಗೆ ಬೊ… ಮಗನೆ, ಬೊ… ಡಿಕೆ, ಇನ್ನು ಮುಂತಾದ ಅಷ್ಟೋತ್ತರಗಳನ್ನು ಒದರಿ ಹೋಗಿದ್ದರು. ಟಿಕೆಟ್ ಕೌಂಟರ್ ಅಲ್ಲಿ ಹತ್ತಿ ಇಳಿದು ಸಾಹಸ ಮಾಡೋ ಗೋಜು ಸಾಧ್ಯ ಇರ್ಲಿಲ್ಲ. ಸಾಲಿನಲ್ಲಿ ಯಾರದ್ರು ನಮ್ಮೋರು ಕಾಣಿಸ್ತರ ಅಂತ ನೋಡ್ತಿರ್ಬೇಕಾದ್ರೆನೆ ನಮ್ ಬಾಡಿಗೆ ಮನೆ ಹುಡುಗ ಗುಂಡ ಕಾಣಿಸಕೊಂಡ, ಲೇ ಚುಡೆಲ್ , ನನಗೊಂದು ಟಿಕೆಟ್ ತೊಗೊಳ್ಳ ಅಂತ ೫೦ ರು ನೋಟು ಕೊಟ್ಟು entrance ಬಳಿ ಕಾಯ್ತಾ ನಿಂತಿದ್ದೆ. ಹಂಗು ಹಿಂಗು ನುಕಾಡಿ, ತಲ್ಲಾಡಿ, ಗುದ್ದಾಡಿ, ಗುಂಡ ಟಿಕೆಟ್ ತಂದೆ ಬಿಟ್ಟಿದ್ದ, ತೊಗೋ ಗುರು ಅಂತ ಟಿಕೆಟ್ ಕೊಟ್ಟ ಅದ್ರ ಮೇಲೆ ೪೦ ರು ಅಂತ ಇತ್ತು. ಲೋ ಅಪ್ಪಿ ಇನ್ ಹತ್ತು ರುಪಾಯಿ ವಾಪಾಸ್ ಕೊಡೊ ಅಂದ್ರೆ, ಅನ್ನೋ ನಿನ್ ಹೆಸರಲ್ಲಿ ಇಂಟರ್ವಲ್ ಅಲ್ ಒಂದು ಚಿಪ್ಸ್ ಪ್ಯಾಕೆಟ್ ತಿನ್ಕೊತಿನಿ ಬಿಡಣ್ಣ ಅಂದ. ನನ್ ಮಗ ನಂಗೆ ಬ್ಲಾಕ್ ಟಿಕೆಟ್ ಮಾರಿಬಿಟ್ನಲ್ಲ ಅನ್ನೋ ಬೇಜಾರಲ್ಲೇ ಒಳಗೋಗಿ ಮುರಿದೋಗಿರೋ ಪ್ಲಾಸ್ಟಿಕ್ ಚೀರ್ ಗಳ ಮಧ್ಯೆ ಚೆನ್ನಾಗಿರೋದನ್ನ ಹುಡುಕಿ ಮೊಬೈಲ್ ನ ಸೈಲೆಂಟ್ ಮೋಡಲ್ಲಿ ಹಾಕಿ ಕೂತೆ.

title ಕಾರ್ಡ್ ಅಲ್ಲೇ ಸ್ವಲ್ಪ ವಿಭಿನ್ನವಾಗಿ ಶುರುವಾದ ಚಿತ್ರ, ಮೊದಲರ್ಧ ಪೂರ್ತಿ ಕಾಮಿಡಿ ಯಾ ಝಾಲಕ್ ಜೊತೆಗೆ ಅಕ್ಷ್ಯನ್ ಪ್ಯಾಕ್, ಇವೆರಡರ ಜೊತೆಗೆ ಒಂದು ಸ್ವೀಟ್ ಲವ್ ಸ್ಟೋರಿ. ಲವ್ ಸ್ಟೋರಿ ಸ್ವೀಟ್ ಅನ್ನುವುದಕ್ಕಿಂತಲೂ cute ಅನ್ನಬೋಹುದು, ನಿಜವಾಗಿಯೂ ಬಹಳ ಮುದ್ದಾಗಿದೆ. ಹೀರೋ ಇನ್ ಗೆ expose ಮಾಡಿಸಿಲ್ಲ, ಕುಟುಂಬದೊಂದಿಗೆ ಬಂದವರಿಗೆ ಅದು ನಿರಾಳವಾದರೆ ಪಡ್ಡೆಗಳಿಗೆ ಸ್ವಲ್ಪ ಬೇಜಾರು. ಶಂಕರ್ ನಾಗ್ ಅವರನ್ನು ಹಾಡಿನಲ್ಲಿ ಬಳಸಿಕೊಂಡಿರುವ ರೀತಿಗೆ ದಿನಕರ್ ಗೆ ನಿಜಕ್ಕೂ ಒಂದು ಸಲಾಂ. ಅವರು ಇಹಲೋಕ ತ್ಯಜಿಸಿ ೧೬ ವರ್ಷಗಳದ್ರು ಅವರು ತೆರೆಯ ಮೇಲೆ ಬಂದಾಗ ಪ್ರೇಕ್ಷಕರ ಅರುಚಾಟ, ಕಿರುಚಾಟ, ಶಿಲ್ಲೆಗಳನ್ನು ಕೇಳಿದಾಗ ಶಂಕರಣ್ಣ ಇದ್ದಿದ್ರೆ ಇನ್ ಹೆಗಿರ್ತಿದ್ರೋ ಅನ್ನೋ ಯೋಚನೆ ಮನದಲ್ಲಿ ಮೂಡಿತ್ತು. ಮತ್ತೆ ಆಗಾಗ ಡಿಶುಂ ಡಿಶುಂ, ಪೋಲಿಸ್ ಗೆ ಬುದ್ದಿ ಹೇಳಿ ಕೊಡೊ ದೃಶ್ಯ. ಮತ್ತು ರೈತರನ್ನು ಹೊಗಳೋ ದೃಶ್ಯ ಮುಂತಾದವೆಲ್ಲ ಬಂದಾಗ ಸುಪರ್ರೋ ಸೂಪರ್ರು. Read more »

28
ಆಕ್ಟೋ

ಹಾವು ಪುರಾಣ!

-ವಾಣಿಶೆಟ್ಟಿ ಕುಂದಾಪುರ
“ನಾಗಾ…

ನೀ ಹೀಂಗೆಲ್ಲ ಬಪ್ಪಕಾಗ..
ಮಕ್ಕಳ್ ಮರಿ ತಿರ್ಗು ಜಾಗ
ಜಾಗ ಖಾಲಿ ಮಾಡ ಬೇಗ …”

ಮನೆ ಕಡೆ ನಾಗರಹಾವು ಬಂದಾಗಲೆಲ್ಲಾ ಅದನ್ನು ಓಡಿಸೋವಾಗ “ಅದಕ್ಕೆ ನೋವು ಮಾಡಬೇಡಿ” ಅನ್ನೋ ದೊಡ್ಡವರ ರಾಗದ ಹಿನ್ನಲೆಯಲ್ಲಿ ನಮ್ಮ ಕುಂದಗನ್ನಡದ ಪ್ರಾಸ ಹೀಗಿತ್ತು :) ನಮ್ಮ ಹಳ್ಳಿಗಳಲ್ಲಿ ಹಾವಿನ ಬಗ್ಗೆ ಭಯ ಮತ್ತು ಆಸಕ್ತಿ ಸ್ವಲ್ಪ ಕಮ್ಮಿನೇ ಜನರಲ್ಲಿ.ಆದರೆ ನಂಗೆ ಮಾತ್ರ ಇವತ್ತಿಗೂ ಅಷ್ಟೇ ಉತ್ಸಾಹ ಅವುಗಳ ಬಗ್ಗೆ.ಅದರಲ್ಲೂ ನಾಗರಹಾವು ಅಂದ್ರೆ ಸಕತ್ ಖುಷಿ..ಅದು ಮಾಡುವಷ್ಟು ಗೊಂದಲ ,ಖರ್ಚು,ಭಯ ಮತ್ಯಾವ ಹಾವುಗಳು ಮಾಡೋದಿಲ್ಲ.ಅಪರೂಪಕ್ಕೆ ಅವುಗಳು ಕೋಳಿ ಗೂಡಲ್ಲಿರೋ ಮೊಟ್ಟೆ ತಿನ್ನೋಕೆ ಬಂದರೆ ಈ ಅಕ್ಕ ಪಕ್ಕದ ಮನೇಲಿ ಎಲ್ಲ ಹೋ ದೇವ್ರ್ ಹಾವ್ ಬಂತ್ ..ಎಂದು ಪಡುವ ಸಂಭ್ರಮವೋ ಸಂಭ್ರಮ!ನಂತರ  ಅದಕ್ಕಿಷ್ಟು ಹಾಲು ಇಟ್ಟು ,ಅಕ್ಕಿ ಚೆಲ್ಲಿ ಕೈ ಮುಗಿಯೋರು !ಆದರೆ ಅದು ಕುಡಿದದ್ದು ನಾ ನೋಡೇ ಇಲ್ಲ.ಪಾಪ !ಅದರ ಹೆದರಿಕೆ ಅದಕ್ಕೆ ಎಲ್ಲಿ ಹೊಡಿತಾರೋ ಅಂತ!ಯಾವ ಹಾವಿಗೂ ಇರದ ಮುಂಡು ಬಾಲ ಇದಕ್ಕೆ ಇರೋದರಿಂದ  ಅದರ ನಿಕ್ ನೇಮ್ ಮುಂಡಪ್ಪ.

ಒಮ್ಮೆ ನಮ್ಮ ಪಕ್ಕದ ಕಾಡಿಗೆ ನವಿಲು ಹಿಡಿಯುವ ಗುಂಪೊಂದು ಬಂದಿತ್ತು.ಅವರ ಜೊತೆ ನಾವು ಕೂಡ ನೋಡಲು ಹೋಗಿದ್ದೆವು .ಚಂದದ ನವಿಲು ಗರಿ ಸಿಗುತ್ತಲ್ಲಾ ಅಂತ!ಸರಿ ಹೋಗ್ತಾನೆ ಒಂದು ದೊಡ್ಡ ನವಿಲು ಸಿಕ್ಕಿಬಿಟ್ಟಿತು.ಅವರು ಅದನ್ನು ಕೊಲ್ತಾರೆ ಅಂತ ಮಾತ್ರ ನಮಗೆ ಗೊತ್ತಿರಲಿಲ್ಲ.ಅವರು ಅದನ್ನ ಕೊಂದು ಹೊಟ್ಟೆ ಸೀಳಿದಾಗ ಅಲ್ಲೊಂದು ಪುಟ್ಟ ನಾಗರ ಮರಿ!ಆಮೇಲೆ ನಾಗರ ಹಾವಿನ ಹೆಣ ಕಂಡ ತಪ್ಪಿಗೆ (ಅಷ್ಟು ಚಂದದ ನವಿಲು ಕೊಂದಿದ್ದು ಮಾತ್ರ ಸರಿಯಂತೆ ಅವರ ಪ್ರಕಾರ ) ಸರ್ಪ ಸಂಸ್ಕಾರ ,ಅದೂ ಇದೂ ಪೂಜೆ ಮಾಡಬೇಕಾಯ್ತು ,ಆಮೇಲೆ ನವಿಲು ಹಿಡಿಯೋದು ಬಿಟ್ಟಿರಬೇಕು ಬಹುಶಃ :) Read more »

27
ಆಕ್ಟೋ

ಹಸಿವಿನ ಹಾದರಕ್ಕೆ ಹುಟ್ಟಿದ ಭ್ರಷ್ಟಾಚಾರ…

-ಸಾತ್ವಿಕ್ ಎನ್ ವಿ

ಮೊನ್ನೆ ಮೂರು ದಿವಸ ಬೆಂಗಳೂರಿನಲ್ಲಿ ಇದ್ದೆ. ನಗರ ಸಾರಿಗೆ ಬಸ್ಸುಗಳೇ ನನ್ನ ಓಡಾಟದ ಒಡನಾಡಿಗಳು. ಮಂಗಳೂರಿನ ಬಸ್ಸುಗಳಲ್ಲಿ ಓಡಾಡಿದವರಿಗೆ ಇಲ್ಲಿನ ವ್ಯವಸ್ಥೆ ತುಸು ನಿಧಾನ ಆನ್ನಿಸೀತು. ಇದ್ದ ಮೂರು ದಿನವು ಓಡಾಟದ ಸಲುವಾಗಿ ಹತ್ತಾರು ಬಸ್ಸುಗಳಲ್ಲಿ ಪ್ರಯಾಣಿಸುವಾಗಲು ಒಂದು ಸಾಮಾನ್ಯ ಕ್ರಿಯೆಯೊಂದು ನನ್ನ ಗಮನಕ್ಕೆ ಬಂತು. ನೀವು ಬಸ್ಸು ಹತ್ತಿ ಒಂದೆರಡು ನಿಲ್ದಾಣಗಳ ನಂತರ ಇಳಿಯುವವರಾಗಿದ್ದರೆ ನೀವು ಸರಿಯಾದ ಹಣಕೊಟ್ಟರೂ ಕಂಡಕ್ಟರ್ ನಿಮಗೆ ಟಿಕೇಟ್ ಕೊಡುವುದಿಲ್ಲ!! ಒಮ್ಮೆ ನಾನು ಬಾಯಿ ಬಿಟ್ಟು ಕಂಡಕ್ಟರನ್ನು ಟಿಕೇಟ್ ಕೊಡುವಂತೆ ಕೇಳಿದೆ. ಅವನು ಕೈಯಲ್ಲಿಯೇ ಸನ್ನೆ ಮಾಡಿ ಸುಮ್ಮನಿರುವಂತೆ ಹೇಳಿದ. ನಿಧಾನಕ್ಕೆ ೫ ರೂಪಾಯಿಯನ್ನು ನನ್ನ ಕೈಗೆ ಕೊಟ್ಟ. ನನಗೆ ಏನು ಹೇಳಬೇಕೋ ತಿಳಿಯಲಿಲ್ಲ. ನಾನು ಇಳಿಯಬೇಕಿದ್ದ ಸ್ಟಾಪ್ ಗೆ ಮೆಜೆಸ್ಟಿಕ್ ನಿಂದ ೮ ರೂಪಾಯಿ ಟಿಕೇಟ್ ಕೊಳ್ಳಬೇಕು. ಆದರೆ ಕೊಟ್ಟ ಹತ್ತು ರೂಪಾಯಿಯಲ್ಲಿ  ಐದು ರೂಪಾಯಿ ತೆಗೆದುಕೊಂಡು ಉಳಿದ ಐದು ರೂಪಾಯಿ ವಾಪಸ್ಸು ಕೊಟ್ಟ. ಟಿಕೇಟ್ ಮಾತ್ರ ಇಲ್ಲ. ಅವನ ಮುಖದಲ್ಲಿ ವಿನ್ ವಿನ್ ಸಿದ್ದಾಂತದ ಮಂದ ನಗೆಯಿತ್ತು. ನನ್ನ ಮನದಲ್ಲಿ ಇಡೀ ದಿನ ತಪ್ಪು ಮಾಡಿದ ಅಪರಾಧಿ ಪ್ರಜ್ಞೆ.

ಇಂಥ ಪ್ರಸಂಗಗಳು ಬೆಂಗಳೂರಿಗರಿಗೆ ಸಾಮಾನ್ಯವಿರಬಹುದು. ಆದರೆ ಒಮ್ಮೆಮ್ಮೆ ಭೇಟಿಕೊಡುವ ನನ್ನಂಥವರಿಗೆ ತೀರಾ ಮಜುಗರವನ್ನು ತಂದು ಬಿಡುತ್ತವೆ. ನನಗಂತೂ ಈ ಪ್ರಸಂಗವಾದ ನಂತರ ಬೆಂಗಳೂರಿನ ಕಂಡಕ್ಟರಗಳ ಬಗ್ಗೆ ವಿಪರೀತ ಕೋಪ ಬಂದದ್ದೂ ನಿಜ. ಅಗಲೇ ನಿಶ್ಚಯ ಮಾಡಿದೆ, ಮತ್ತೊಮ್ಮೆ ಹೀಗೇನಾದರೂ ಕಡಿಮೆ ಹಣ ತೆಗೆದುಕೊಂಡು ಟಿಕೇಟ್ ಕೊಡದಿದ್ದರೆ ಸರಿಯಾಗಿ ಬೈಯ್ಯಬೇಕು ಅಂತ. ಮರುದಿನವೂ ಕಂಡಕ್ಟರ್ ಅದೇ ಕೆಲಸ ಮಾಡಿಬಿಡಬೇಕೇ? ನನಗೆ ಎಲ್ಲಿತ್ತೋ ಸಿಟ್ಟು … ಬಾಯಿಗೆ ಬಂದಂತೆ ಮಾತಾಡಲು ಆರಂಭಿಸಿದೆ. ಆದರೆ ಮಹಾನುಭಾವನಿಗೆ ಅದು ತಾಗಿದಂತೆ ಕಾಣಲೇ ಇಲ್ಲ!!!  ಏನೂ ಆಗಿಯೇ ಇಲ್ಲ ಎಂಬಂತೆ ನನ್ನ ಪಕ್ಕದಲ್ಲಿ ಖಾಲಿ ಇದ್ದ ಸೀಟಿನಲ್ಲಿ ಕುಳಿತು ನಸುನಗುತ್ತ ಕೇಳಿದ ’ಸಾರ್, ನೀವು ಈ ಊರಿಗೆ ಹೊಸಬರಾ? ಅಂತ.  ನಾನು ’ಅದೆಲ್ಲ ಇರಲಿ ಟಿಕೇಟ್ ಕೊಡಿ’ ಅಂದೆ. ಅವನು ಮತ್ತೂ ಕೂಲ್ ಆಗಿ ಮಾತಾಡೋಕೆ ಸ್ಟಾರ್ಟ್ ಮಾಡಿದ. ’ಸಾರ್, ನಿಮಗೆ ನಾವು ಟಿಕೇಟ್ ಕೊಡದೇ ಉಳಿಸಿದ ೫೦ – ೧೦೦ ರೂಪಾಯಿ ಬಗ್ಗೆ ಮಾತ್ರ ಗೊತ್ತು. ಅದರ ಬಗ್ಗೆ ನಿಮಗೆ ಸಿಟ್ಟು ಬರುತ್ತೆ. ಆದರೆ ನಮಗೆ ನಮ್ಮ ಜೀವನದ ಬಗ್ಗೆಯೇ ಸಿಟ್ಟು ಬರುತ್ತೆ ಸರ್. ಒಂದು ಕಡೆ ಮೇಲಾಧಿಕಾರಿಗಳ ಒತ್ತಡ, ಇನ್ನೊಂದು ಕಡೆ ಪ್ರಯಾಣೀಕರ ಕಿರಿಕಿರಿ, ಒಂದು ಸರಿಯಾದ ಊಟ ನಿದ್ದೆಯನ್ನು ಮಾಡೋಕೆ ಆಗದ ಪರಿಸ್ಥಿತಿಯಲ್ಲಿ ನಾವಿದ್ದೇವೆ ಸರ್. Read more »

27
ಆಕ್ಟೋ

ದೀಪಾವಳಿ – ಬಚ್ಚಿಟ್ಟ ಬುತ್ತಿಯಿಂದ…. ೧

ಅರವಿಂದ್

ದೀಪದಿಂದ ದೀಪವ ಹಚ್ಚಬೇಕು ಮಾನವ………….
ಪ್ರೀತಿಯಿಂದ ಪ್ರೀತಿ ಹಂಚಲು…..
ಮನಸಿನಿಂದ ಮನಸನು ಬೆಳಗಬೇಕು ಮಾನವ…..

ಇದ್ಯಾವ ಸಿನಿಮಾದ ಹಾಡಿನ ಸಾಲೋ ನೆನಪಿಲ್ಲ… ಆದರೆ ಪ್ರತಿ ದೀಪಾವಳಿಗೂ ಈ ಹಾಡು, ಉಕ್ಕುಕ್ಕಿ ಬರುವ ಕಡಲಿನಂತೆ……. ಸಾಗುತ್ತಲೇ ಇರುತ್ತದೆ ಮನದ ಮೂಲೆಯಲ್ಲಿ,ಬಹುಶಃ ದೀಪಾವಳಿಯ ದೀಪದ ಸಾಲು ಪ್ರತಿ ಮನೆಯಲ್ಲಿ ಬೆಳಗುತಿರುವಾಗಲೇ, ಹೌದು ಆ ದಿನ, ಅಷ್ಟು ಗಾಢ ಮೌನ ಮನದಲ್ಲಿ, ಮನೆಯಲ್ಲೂ ಸಹ, ಬದುಕಿ ಬಾಳನ್ನೇ ಬಂಗಾರವಾಗಿಸಿಕೊಳ್ಳಬೇಕಾದ ತಂಗಿ…. ಮರ ಹತ್ತಿ ಉರಿದಂತೆ ಕಣ್ಣೆದುರೇ ಉರಿದು ಹೋದಾಗಲಂತು ನನ್ನಿಡಿ ಜಂಘಾಬಲವೇ  ಹುದುಗಿ ಹೋಗಿತ್ತು.

ಸಹನಾ…….. ಅವತ್ತೊಂದಿಷ್ಟು ಸಹನೆಯೊಂದಿಗಿದ್ದಿದ್ದರೆ, ಅವಳಿಡೀ ಜೀವನವೂ ಸೌಗಂಧಿಕದಂತೆ ಸುಂದರವಾಗುತ್ತಿತ್ತೇನೋ, ಹುಚ್ಚು ಕೊಡಿ ಮನಸು ಅದು, ಹಠಕ್ಕೆ ಮತ್ತೊಂದು ಹೆಸರಷ್ಟೇ ಸಹನಾ,
Read more »

27
ಆಕ್ಟೋ

ಸಂಸ್ಕೃತಿ ಸಂಕಥನ – ೮

– ರಮಾನಂದ ಐನಕೈ

ಮೂರ್ತಿ ಪೂಜೆಗೆ ಕಾರಣಗಳು ಬೇಕಾಗಿಲ್ಲ 

ಯಾವ ಸಂಸ್ಕೃತಿಯಲ್ಲಿ ರಿಲಿಜನ್ ಇದೆಯೋ ಆ ಸಂಸ್ಕೃತಿ ವಿಗ್ರಹ ಆರಾಧನೆ ಅಥವಾ ಮೂರ್ತಿ ಪೂಜೆಯನ್ನು ವಿರೋಧಿಸುತ್ತದೆ. ಏಕೆಂದರೆ ರಿಲಿಜನ್ನಿನಲ್ಲಿ ಗಾಡ್ ಹಾಗೆ ಆಜ್ಞಾಪಿಸಿದ್ದಾನೆ. ಗಾಡ್ ಮಾತ್ರ ನಿಜವಾದ ದೇವರು. ಉಳಿದ ದೇವರುಗಳೆಲ್ಲ ಗಾಡ್ನ ವೈರಿ ಸೈತಾನನ ಪ್ರತಿರೂಪಗಳು. ಹಾಗಾಗಿ ಸೈತಾನನ ಪ್ರತಿರೂಪವಾದ ನೂರಾರು ಮೂರ್ತಿಗಳನ್ನು ಪೂಜಿಸುವುದು ಅನೈತಿಕ. ಪಾಶ್ಚಾತ್ಯರು ಅದೇ ದೃಷ್ಟಿಯಲ್ಲಿ ನಮ್ಮ ಮೂರ್ತಿಪೂಜೆಗಳನ್ನು ನೋಡಿ ಟೀಕೆ ಮಾಡಿದರು. ಆದರೆ ಅದು ನಮಗ ಅರ್ಥವೇ ಆಗಲಾರದು. ಏಕೆಂದರೆ ನಮ್ಮದು ರಿಲಿಜನ್ನೇ ಇಲ್ಲದ ಬಹುಸಂಸ್ಕೃತಿಗಳ ನಾಡು.

 

ಪಾಶ್ಚಾತ್ಯರು ಭಾರತೀಯರ ಮೂರ್ತಿ ಪೂಜೆ ಯನ್ನು ಅನೈತಿಕ ಎಂದು ವ್ಯಾಖ್ಯಾನಿಸಿದರು. ಏಕಿರ ಬಹುದು? ಅದರ ಹಿಂದಿನ ನಿಜ ಏನಿರಬಹುದು?

Read more »

26
ಆಕ್ಟೋ

ಪಾಂಚಾಲಿ ಪ್ರಲಾಪ

-ರೂಪ ರಾವ್ 
ಈ ವಿಜಯಕ್ಕೆ ನಗಬೇಕೆ? ಇಲ್ಲ ಅಳಬೇಕೆ? ನನ್ನೈವರು ಪತಿ ಉಳಿದರು ಎಂದು ಸಂತಸ ಪಡಲೇ ಇವರಬಿಟ್ಟು ಇನ್ನೆಲ್ಲರನ್ನೂ ಕಳೆದುಕೊಂಡ ದುರದೃಷ್ಟತನಕ್ಕೆ ದು:ಖಿಸಲೇ.
ಭಗವಂತ ಎಂಬುವನು ನಿಜಕ್ಕೂ ಇದ್ದಾನೆಯೇ, ಕಣ್ಣಿಗೇ ಕಾಣೋ ದೇವರಂತೆ  ಈ ಕೃಷ್ಣ   ಅಣ್ಣ  ಕೂಡ, ಇವನೊಬ್ಬನೇ  ಈ ಬಾಳಿಗುಳಿದ ಸೌಭಾಗ್ಯವೇ?ಯುದ್ದ ಮುಗಿದ ನಂತರ ಆ ರಕ್ತದ ಹೊಳೆ ನೋಡಿ ಮತ್ತೆ ರಾಣಿಯಂತೆ ಬದುಕಬೇಕೆಂಬ ಆಸೆಯಿರಲಿ ಬದುಕುವಾಸೆಯೇ ಮುರುಟಿ ಹೋಗಿದೆ…..
ಆವತ್ತು ಹಾಳು ಅಶ್ವಥ್ತಾಮ ಒಬ್ಬರಲ್ಲಿ ಒಬ್ಬರನ್ನೂ ಉಳಿಸಬಾರದಿತ್ತೆ , ನನ್ನ ಕರುಳ ಕುಡಿ ಎಂದು. ಹೆಣ್ಣಿನ ಸೌಭಾಗ್ಯ ಪತಿ, ಅವರೆಲ್ಲಾ ಬದುಕಿದ್ದಾರೆ ಎಂದು ಸಂತೈಸುತ್ತಿರುವ ಅತ್ತೆಯ ನೋಡಿ ನಿನ್ನ ಮಕ್ಕಳಲ್ಲಿ ಯಾರದರೂಬ್ಬರನ್ನು ಕಳೆದುಕೊಂಡಿದ್ದರೂ ನಿರ್ಲಿಪ್ತಳಾಗುತ್ತಿದ್ದೆಯಾ ಎಂದು ಕೇಳಿದ್ದಕ್ಕೆ ಕೋಪಿಸಿಕೊಂಡು ದುರು ದುರುಗುಟ್ಟಿ ನೋಡಿ ಎದ್ದು ಹೋಗಿದ್ದಳು. ಸತ್ತ ಅಷ್ಟೂ ಮಕ್ಕಳ ನೋಡಿ ನಾನು ಅಳುತ್ತಿದ್ದರೇ ಆ ಸ್ವಾರ್ಥಿ ಗಂಡಂದಿರು , ಇವರಲ್ಲಿ ಯಾರು ಯಾರ ಮಕ್ಕಳಿದ್ದಿರಬಹುದು? ಅಳಬೇಕೆ ಬೇಡವೇ ಎಂದು ಯೋಚಿಸುತ್ತಿದ್ದಾಗ, ಕಣ್ಣೀರು ಕುದಿ ಕುದಿದು ಮರಗಟ್ಟಿ ಹೋಗಿತ್ತು.
ಪಾಪಿಗಳು ಇವರು ಹೆಜ್ಜೆ ಇಟ್ಟಲ್ಲೆಲ್ಲಾ ಹೆಜ್ಜೆ ಇಟ್ಟೆ, ಒಬ್ಬ ಒಳ್ಳೆಯ ಗಂಡ ಸಿಗುವುದು ದುಸ್ತರವಾಗುತ್ತಿರುವ ಈಕಾಲದಲ್ಲಿ ಐವರು ಅತಿರಥ ಮಹಾರಥರೆಂದು ಹೆಸರು ಪಡೆದ ಈ  ಐವರೂ ನನ್ನನ್ನ ಮಡದಿ ಎಂದು ಪಾಣಿಗ್ರಹಿಸಿದಾಗ , ನಗಬೇಕೆ, ಅಳಬೇಕೇ ತಿಳಿಯದೇ ಕಕ್ಕಾಬಿಕ್ಕಿಯಾಗಿ ನಿಂತಿದ್ದೆ, , ಇದೇ  ಕುಂತಿ –ಯಾಕಾದರೂ ಐದು ಜನರನ್ನು ಹೆತ್ತಳೋ . (ಐದು ಅದು ನೆನ್ನೆಯವರೆಗೆ, ಇಂದು ಆ ಸತ್ಯ ಕೂಡ ಗೊತ್ತಾಯಿತಲ್ಲ ಆ ಕರ್ಣನೂ ಇವಳ ಮಗನೇ ಅಂತೆ.)  ಆ ಐದೂ ಜನರನ್ನ ಮದುವೆಯಾಗು ನಿನ್ನನ್ನು ಸುಖವಾಗಿ ನೋಡಿಕೊಳ್ಳುತ್ತಾರೆ ಎಂದಾಗ ಹಿರಿ ಹಿರಿ ಹಿಗ್ಗಿದ್ದೆ, ಅಪ್ಪ ಕಣ್ಣನು ತುಂಬಿಕೊಂಡು ನಿನಗೆ ಒಪ್ಪಿಗೆಯೇ ಎಂದಾಗ ಸಮ್ಮತಿಸಿದ್ದು ಕೂಡ ಆ ಕುಂತಿ ಹೇಳಿದ ಮಾತಿಗಾಗಿ  ಮದುವೆಯಾದ ಕೆಲವು ವರ್ಷದಲ್ಲೇ ಇವರೆಲ್ಲರ ಗೋಳುಗಳು ತಿಳಿದದ್ದು, ಇವರ ದಾಯಾದಿಗಳು ಇವರ ಮೇಲೆ ದ್ವೇಷ ತುಂಬಿಕೊಂಡು ಇವರ ಅವನತಿಗೆ ಹೊಂಚು ಹಾಕುತ್ತಿದ್ದಾರೆಂದು. ಆಗಲೇ ಮತ್ತೊಂದು ಸತ್ಯ ಎದುರಾಗಿತ್ತು . ಅಪ್ಪ ದ್ರೋಣನ ಮೇಲಿನ ಕೋಪಕ್ಕಾಗಿ ತನ್ನನ್ನು ಅರ್ಜುನನಿಗೆ ಕೊಟ್ಟು ಮದುವೆ ಮಾಡುವುದಾಗಿ ಶಪಥ ತೊಟ್ಟಿದ್ದನಂತೆ. ಒಟ್ಟಿನಲ್ಲಿ ಇವರೆಲ್ಲರ ಆಸೆಗೆ, ಶಪಥಕ್ಕೆ ನಾನು ಬಲಿಯಾಗಿದ್ದೆ. Read more »