ಮರೆಯಲಾಗದ ಲಾಟರಿ ಟಿಕೆಟ್
– ಪವನ್ ಪಾರುಪತ್ತೇದಾರ
ಕಾಲೇಜ್ ನ ಗೋಡೆಯ ಮೇಲೆ ಹೋಗೆ ಬಿಡುತ್ತಾ ನಾನು ಮತ್ತು ಬಾಸ್ ಬಂಡಾರಿ ಕುಳಿತಿದ್ದೆವು. ಸಿಗರೇಟನ್ನು ಘಾಡವಾಗಿ ಎಳೆದ ಭಂಡಾರಿ ಎಲ್ಲೋ ಶಿಷ್ಯ ಇನ್ನು ಸಿಂಹ ಬಂದೆ ಇಲ್ಲಾ ಅಂದ. ನಾನು ಒಮ್ಮೆ ಗಡಿಯಾರವನ್ನು ನೋಡಿ ಬಾಸ್ ಈಗ fly ಓವರ್ ಕಾಮಗಾರಿ ನಡೆಯುತ್ತಿದೆ ಅಲ್ವಾ ಟ್ರಾಫಿಕ್ ತುಂಬಾ ಇರತ್ತೆ ಅದಕ್ಕೆ ಲೇಟ್ ಆಗಿರಬೇಕು ಎಂದೆ. ಆಗ ಸಮಯ ಸುಮಾರು ೧೧ ಘಂಟೆ. ನಾನು ದ್ವಿತೀಯ PUC ಡುಮ್ಕಿ ಹೊಡೆದು ನಮ್ಮ ಸರ್ಕಾರೀ ಕಾಲೇಜ್ ನ ಗೋಡೆಯ ಮೇಲೆ ಕೂತು ಗೆಳೆಯರ ಜೊತೆ ಹರಟೆ ಹೊಡೆಯುವುದನ್ನೇ ಕಾಯಕವಾಗಿ ಮಾಡಿಕೊಂಡಿದ್ದೆ. ಬಾಸ್ ನಮಗಿಂತ ಒಂದೆರಡು ವರುಷ ಹಿರಿಯರು. ಅವರು ಸಹ ಡಿಪ್ಲೋಮಾ ಇಯರ್ ಬ್ಯಾಕ್ ಆಗಿ ನಮ್ಮ ಜೊತೆಯಲ್ಲೇ ಅಡ್ಡ ಹೊಡೆಯುತಿದ್ದರು. ಬೆಳಿಗ್ಗೆ ತಿಂಡಿ ತಿಂದು ಮನೆಯಿಂದ ಹೊರಟರೆ ಊಟದ ಸಮಯಕ್ಕೆ ಮತ್ತೆ ಮನೆ ಸೇರುತಿದ್ದಿದ್ದು, ಮತ್ತೆ ಸಂಜೆ ೪ ಕ್ಕೆ ಕ್ರಿಕೆಟ್ ಆಡಲು ಹೊರಟರೆ ಮನೆ ಸೇರುತಿದ್ದಿದ್ದು ರಾತ್ರಿ ೧೦ ಘಂಟೆಗೆ.
ಇಂತಹ ನಮ್ಮ ದಿನಚರಿಯಲ್ಲಿ ಸಿಂಹ ಪ್ರತಿ ದಿನ ಸಿಂಹ ಒಂದು ಒಳ್ಳೆಯ ಕೆಲಸ ಮಾಡುತಿದ್ದ. ದ್ವಿತೀಯ PUC ಫೈಲ್ ಆದರು, ಮನೆಗೆ ಒಂದಷ್ಟು ಸಹಾಯವಗುತಿದ್ದ. ಅವನು ಮಾಡುತಿದ್ದ ಕೆಲಸ ನಮ್ಮೂರಿಂದ ಬೆಂಗಳೂರಿಗೆ ಹೋಗಿ ಲಾಟರಿ ಟಿಕೆಟ್ ಕೊಂಡು ತರುವುದು. ಇಷ್ಟಕ್ಕೂ ಸಿಂಹ ಎಂದರೆ ಇವನ ಧೈರ್ಯಕ್ಕೆ ಪ್ರತಾಪಕ್ಕೆ ಕೊಟ್ಟಿರುವ ಬಿರುದೇನಲ್ಲ ಬಿಡಿ. ಅ ವಯಸಿಗೆ ಅವನ ಕಿವಿಯ ಮೇಲೆ ಒಂದೆರಡು ರೋಮ ಹುಟ್ಟಿತ್ತು, ಅದನ್ನೇ ಆಗಾಗ ನಿವುತ್ತ ಸಿಂಹ ಸಿಂಹ ಹಹಹಹ ಎಂದು ವಿಚಿತ್ರವಾಗಿ ಘರ್ಜಿಸುತಿದ್ದ. ಅದಕ್ಕೆ ನಾವು ಆಯಿತು ಬಿಡಪ್ಪ ನೀನು ಸಿಂಹನೆ ಅಂತ ಹಾಗೆ ಕರೆಯುತಿದ್ದೆವು. ಅವನ ನಿಜವಾದ ಹೆಸರು ಮಹೇಶ್, ಮಹೇಶ್ ಕುಮಾರ್ ಯಾದವ್





