ವಿಷಯದ ವಿವರಗಳಿಗೆ ದಾಟಿರಿ

Archive for

22
ಆಕ್ಟೋ

ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ : ಬಣ್ಣದ ಬದುಕು 7 – ಗುರುವಿಗಾಗಿ ನಾಟ್ಯಶಾಲೆ

 ಯಕ್ಷಗಾನ ರಂಗದಲ್ಲಿ ಎಲ್ಲೂ ಸಲ್ಲುವ ಯಾವ ವೇಷಕ್ಕೂ ಸೈ ಎನಿಸಿಕೊಳ್ಳುತ್ತಿದ್ದ  ಒಬ್ಬ ಪ್ರಬುದ್ಧ ಹಾಗೂ ಮೇರು ಕಲಾವಿದರಾಗಿದ್ದ  ದಿವಂಗತ ಕುರಿಯ ವಿಠಲ ಶಾಸ್ತ್ರಿಯವರು  ಜನಿಸಿದ್ದು ಕಳೆದ ಶತಮಾನದ 1912ರ ಸೆಪ್ಟೆಂಬರ್ 08ರಂದು. ತಮ್ಮ ವಯಸ್ಸಿನ ನೂರನೇ ಸಂವತ್ಸರದ ಈ ಸಂದರ್ಭದಲ್ಲಿ ಖ್ಯಾತ ಪತ್ರಕರ್ತ ಪದ್ಯಾಣ ಗೋಪಾಲಕೃಷ್ಣ (ಪ. ಗೋ.)ರವರರು ನಿರೂಪಣೆ ಗೈದಿರುವ ಕುರಿಯ  ವಿಠಲ ಶಾಸ್ತ್ರಿಯವರ ಆತ್ಮ ಕಥನ “ಬಣ್ಣದ ಬದುಕು”  ಯಕ್ಷಗಾನ ಅಭಿಮಾನಿಗಳಿಗಾಗಿ ನಿಲುಮೆ ದಲ್ಲಿ ಪ್ರಕಟವಾಗುತ್ತಿದೆ.
 
***
ರಂಗ ಪ್ರವೇಶದ ಪ್ರಥಮ ವರ್ಷದ ಸಂಪೂರ್ಣ ಕಥೆಯನ್ನು ದಿನ ದಿನಗಳ ಅನುಭವದ ವಿವರಗಳೊಂದಿಗೆ ಹೇಳುತ್ತಾ ಹೋಗಬೇಕೆನ್ನುವುದು ನನ್ನ ಉದ್ದೇಶವಲ್ಲ. ಆದರೆ ಮೊದಲಿನ ಎರಡು ದಿನಗಳ ಅನುಭವವನ್ನು ಅನಿವಾರ್ಯವಾಗಿ ಹೇಳಬೇಕಾಗುತ್ತದೆ. ಎರಡನೇ ಆಟ ಕಟೀಲಿನ ಬಳಿಯ ಶಿಬರೂರಿನಲ್ಲಿ ಆಗಿತ್ತು.ಅಂದಿನದು ‘ಪಟ್ಟಾಭಿಷೇಕ’ (ಪಾದುಕಾ ಪಟ್ಟಾಭಿಷೇಕದ ಕಥೆ.) ಅನುಭವದಲ್ಲಿ ನನಗೆ ಅಣ್ಣನಾದ ಅಳಿಕೆ ರಾಮಯ ರೈಗಳು ತಾನು ಭರತನ ಪಾತ್ರವಹಿಸಿ, ನನಗೆ ರಾಮನ ಪಾತ್ರವನ್ನೇ ತೆಗೆಸಿಕೊಟ್ಟಿದ್ದರು.ರಾಮಯ ರೈಗಳು ನಾಟ್ಯಪ್ರವೀಣ. ಮಾತುಗಾರಿಕೆಯಲ್ಲೂ ಮುಂದು. ವ್ಯಾಸಂಗ ಮಾಡುತ್ತಲೇ ಇರುವುದು ಅವರ ಅಭ್ಯಾಸ.ನಾಟ್ಯ ಬಲ್ಲ ಅವರೆಡೆಯಲ್ಲಿ ನಾನೆಲ್ಲಿ? ಎಂಬುದೇ ನನ್ನ ಕೊರಗು. ಆದರೆ, ಅವರೇ ನನಗೆದುರಾಗಿ ರಂಗದಲ್ಲಿ ಬಂದಾಗ ಆ ಕೊರಗು ಅದಾವ ಮಾಯದಿಂದಲೋ ಕಾಣದಾಯಿತು. ಚಿತ್ರಕೂಟದ ರಾಮ ಭರತರ ಸಮಾಗಮ ಅತ್ಯುದ್ಭುತವೆನಿಸಿತು. ನನಗೆ ಬಂದ ಆ ಸನ್ನಿವೇಶದ ಸಹಜ ಸ್ಫೂರ್ತಿ ಅದಕ್ಕೆ ಎಷ್ಟರ ಮಟ್ಟಿಗೆ ಕಾರಣವೋ, ಅಷ್ಟೇ ಪರಿಮಾಣದಲ್ಲಿ ರಾಮಯ ರೈಗಳ ಪಾತ್ರ ಸ್ಫೂರ್ತಿಯೂ ಕಾರಣ.

ಮರುದಿನ ಶ್ರೀ ಶೆಟ್ಟರು ವೇತನದ ವಿಷಯ ಪ್ರಸ್ತಾಪ ಮಾಡಿದರು.

ಮತ್ತಷ್ಟು ಓದು »

22
ಆಕ್ಟೋ

ಉಸಿರಾಟದಿಂದ ವಿದ್ಯುತ್

-ಪ್ರಶಸ್ತಿ.ಪಿ

ಉಫ್, ಉಫ್ ಅಂತ ಗುಂಡ ಊದುತಾ ಇದ್ದ.. ಏನೋ ಬರ್ತಡೇ ಬತ್ತಿ ಊದಕ್ಕೆ ಅಂತ ಈ ಮಕ್ಳಾಟದ ಕೊಳವೇಲಿ ಪ್ರಾಕ್ಟೀಸ್ ಮಾಡ್ತಿದೀಯ ಅಂತ ಅಲ್ಲಿಗೆ ಬಂದ ಟಾಂಗ್ ತಿಪ್ಪ ಅಲಿಯಾಸ್ ತಿಪ್ಪೇಶಿ. ಹೇ, ಊರಲ್ಲಿ ಅಮ್ಮ ಒಲೆಗೆ ಕೊಳವೇಲೆ ಊದೋದು ನೆನಪಾಯ್ತಾ ಮಾರ್ರೆ.. ಎಷ್ಟು ಪ್ರೀತಿ ಅಮ್ಮನ ಮೇಲೆ ಅಂತ ಬಂದ ಮಂಗಳೂರು ಮಂಜ ಅಲಿಯಾಸ್ ಮಂಜುನಾಥ. ಇಳಾ ಬಂದು ನೋಡ್ತಾಳೆ, ಗುಂಡನ ಬಾಯಲ್ಲಿ ಒಂದು ಪ್ಲಾಸ್ಟಿಕ್ ಕೊಳವೆ, ಸ್ಟ್ರಾ ಅರ್ಧಕ್ಕೆ ಕತ್ತರಿಸಿದಂಗೆ, ಅದರ ತುದಿಗೆ ಸಣ್ಣ ಪ್ಲಾಸ್ಟಿಕ್ ಬುಟ್ಟಿ. ಅದರ ಮೇಲೆ ಅಲ್ಲಲ್ಲ ಗಾಳೀಲಿ ಪ್ಲಾಸ್ಟಿಕ್ ಚೆಂಡು..ವಾ! ಬರ್ನೋಲಿ ನಿಯಮ ಅಂತ ಕೂಗಿದ್ಲು.. ಹಾಂ.. ಎಲ್ಲಿ ಗರ್ನಲ್?..ಅಂತ ತಿಪ್ಪ ಒಂದ್ರೌಂಡು ಕೂತಲ್ಲಿಂದ ಹಾರಿದ.. ಎಲ್ಲ ನಕ್ರು..ಓಯ್ ಗರ್ನಲ್ಲಲ್ಲ ಮಾರ್ರೆ.. ಅವ್ಳು ಹೇಳಿದ್ದು ಗಾಳೀಲಿ ತೇಲಾಡೋ ಬಗೆಗಿನ ಬರ್ನೋಲಿ ನಿಯಮದ ಬಗ್ಗೆ ಅಂದ ಮಂಜ..

ಹೌದು.. ಉಸಿರಾಟದಿಂದ ವಿದ್ಯುತ್ತು ತಯಾರು ಮಾಡ್ಬೋದಂತೆ. ಅದ್ನ ಓದಿದ ಮ್ಯಾಲಿಂದ ನಂಗೆ ಇದ್ರ ಮ್ಯಾಲೆ ಸ್ಯಾನೆ ಪಿರುತಿ ಹುಟ್ಟೈತೆ ಅಂದ ಗುಂಡ.. ತನ್ನ ಪ್ಲಾಷ್ ಬ್ಯಾಕ್ ಆಟಿಕೆ ತೋರಿಸುತ್ತಾ..ಹೌದೆನ್ಲಾ? ಕೆಲವರ ಬಾಯಿಂದ ವಿಚಿತ್ರ ವಾಸ್ನೆ ಬರ್ತಾ ಇರ್ತೈತೆ. ಹತ್ರಕ್ಕೆ ಹೋದವ್ರು ದೂರ ಓಡೋಗಂಗೆ.. ನಾನೂ ಕಂಡಿವ್ನಿ ಅಂದ ತಿಪ್ಪ.. ಮಂಜಂಗೆ ಮೀನು ಸಂತೆ ದಿನ ಬೆಳಿಗ್ಗೆ ಬಸ್ಸಿಗೆ ಹೋಗಿದ್ದು ನೆನ್ಪಾತು. ಇಳಾಗೆ ಪಕ್ಕದ್ಮನೆ ಆಂಟಿಯ ಬೆಳ್ಳುಳ್ಳಿ ಎಫೆಕ್ಟು ನೆನ್ಪಾತು. ಆದ್ರೆ ಅದ್ರಿಂದ ಕರೆಂಟು ತಯಾರು ಮಾಡದು ಹೆಂಗೆ ಅಂತ ಮಾತ್ರ ಅವ್ರಿಗೆ ಹೊಳಿಲೇ ಇಲ್ಲ. ಕೊನೆಗೆ ಗುಂಡಂಗೇ ಕೇಳಿದ್ರು ಅದು ಹೆಂಗೆ ಅಂತ. ಇದು ನೋಡ್ರಾ ಅಮೇರಿಕದ ವಿನಕಂನ್ಸಿನ್ ವಿಶ್ವವಿದ್ಯಾಲಯದವ್ರು ಕಂಡು ಹಿಡ್ದಿದ್ದು ಅಂತ ತನ್ನತ್ರ ಇದ್ದ ಚಿತ್ರ ತೆಗ್ದು ತೋರ್ಸಿದ. ಮತ್ತಷ್ಟು ಓದು »

22
ಆಕ್ಟೋ

(ಪರಮ್)ಆತ್ಮ ವಿಮರ್ಶೆ

– ಅಭಿನಂದನ್ ಎಸ್ ಡಿ

ಆ non-stop ಡೈಲಾಗ್ಸು, ಆ ಹಣೆ ಕೆರ್ಕೊಂಡು ನಗ್ತಾ ಮಾತೋಡೋ ಸ್ಟೈಲು(ಹೀರೋದು), ಸ್ಮೈಲು(ಹೀರೋದು), ಆ ಅನಂತ್ ನಾಗು, ಆ ಒಂದೇ ಟ್ಯೂನಿನ ಎರಡು ಹಾಡು(infact ಹಾಡಿನ ಬಿಟ್ಸು), ಹಳ್ಳೀನಲ್ಲೂ ಚಡ್ಡಿಯಲ್ಲಿ ಓಡಾಡೋ ಹೆಣ್ಮಕ್ಳು..ಎಲ್ಲಾ mix ಆಗಿ…………………………

ಕರೆಕ್ಟು!!ಮುಂಗಾರು ಮಳೆ ಹ್ಯಾಂಗೋವರ್ರು. ಅದ್ರಿಂದ ಹೊರಗೆ ನಾವೂ ಬಂದಿಲ್ಲ. ಒಂದೊಂದು ವಿಷಯದಲ್ಲಿ ಭಟ್ರೂ ಅದ್ರಿಂದ ಹೊರಗೆ ಬಂದಂಗಿಲ್ಲ.
ಹ್ಯಾಂಗೋವರ್ರಿಂದ ಹೊರಗೆ ಬಂದಿರುವ ವಿಷಯಗಳು ಯಾವ್ದಪ್ಪ ಅಂದ್ರೆ..ಹೀರೋ ಗಡ್ಡ ಶೇವ್ ಮಾಡ್ಕೊಂಡು ನೀಟಾಗಿ ಇರೋದು ( ಇಡೀ ಚಿತ್ರದಲ್ಲಿರದ ಭಟ್ಟ್ರ ಗಡ್ಡ-ಪ್ರೀತಿ ಒಂದೇ ಸೀನಲ್ಲಿ full scaleನಲ್ಲಿ ವ್ಯಕ್ತವಾಗಿದೆ), ಧಾರಳವಾಗಿ ಹೀರೋ ಕಣ್ಣಿಂದ ಸುರೀತಿದ್ದ ನೀರಿಗೆ ಇಲ್ಲಿ ಕಟ್ಟೆ ಕಟ್ಟಿರೋದು, ಹೀರೋನ imageಗೋಸ್ಕರ ಭಟ್ಟರು ಅವರ ಸ್ಟೈಲನ್ನ ಸ್ವಲ್ಪ compromise ಮಾಡ್ಕೊಂಡಿರೋದು, “ರೀ”ಕಾರಕ್ಕೆ ಬ್ರೇಕ್ ಕೊಟ್ಟಿರೋದು.

ಟೈಟಲ್ ಕಾರ್ಡಿಂದಾನೇ ಮಾತಿನ ಮಳೆ. ಪುನೀತ್ ಕಣ್ಣಾಡಿಸೋ ರೀತಿ, dialogue ಡೆಲಿವರಿ, ಮಾತಿನ ವೇಗ, ಧಾಟಿ ಎಲ್ಲದರಲ್ಲೂ ಭಟ್ಟ-ತನವಿದೆ. ಹಾಗಾಗಿ ಅವರು ಭಟ್ಟರ ಬೇರೆ ಚಿತ್ರದ ನಾಯಕರಂತೆ ನಟಿಸಿದ್ದಂತೆ ಕಂಡರೆ ಅದನ್ನ ಅನ್ಯಥಾ ಭಾವಿಸಬಾರ್ದು. ಮತ್ತಷ್ಟು ಓದು »