ವಿಷಯದ ವಿವರಗಳಿಗೆ ದಾಟಿರಿ

Archive for

27
ಆಕ್ಟೋ

ಹಸಿವಿನ ಹಾದರಕ್ಕೆ ಹುಟ್ಟಿದ ಭ್ರಷ್ಟಾಚಾರ…

-ಸಾತ್ವಿಕ್ ಎನ್ ವಿ

ಮೊನ್ನೆ ಮೂರು ದಿವಸ ಬೆಂಗಳೂರಿನಲ್ಲಿ ಇದ್ದೆ. ನಗರ ಸಾರಿಗೆ ಬಸ್ಸುಗಳೇ ನನ್ನ ಓಡಾಟದ ಒಡನಾಡಿಗಳು. ಮಂಗಳೂರಿನ ಬಸ್ಸುಗಳಲ್ಲಿ ಓಡಾಡಿದವರಿಗೆ ಇಲ್ಲಿನ ವ್ಯವಸ್ಥೆ ತುಸು ನಿಧಾನ ಆನ್ನಿಸೀತು. ಇದ್ದ ಮೂರು ದಿನವು ಓಡಾಟದ ಸಲುವಾಗಿ ಹತ್ತಾರು ಬಸ್ಸುಗಳಲ್ಲಿ ಪ್ರಯಾಣಿಸುವಾಗಲು ಒಂದು ಸಾಮಾನ್ಯ ಕ್ರಿಯೆಯೊಂದು ನನ್ನ ಗಮನಕ್ಕೆ ಬಂತು. ನೀವು ಬಸ್ಸು ಹತ್ತಿ ಒಂದೆರಡು ನಿಲ್ದಾಣಗಳ ನಂತರ ಇಳಿಯುವವರಾಗಿದ್ದರೆ ನೀವು ಸರಿಯಾದ ಹಣಕೊಟ್ಟರೂ ಕಂಡಕ್ಟರ್ ನಿಮಗೆ ಟಿಕೇಟ್ ಕೊಡುವುದಿಲ್ಲ!! ಒಮ್ಮೆ ನಾನು ಬಾಯಿ ಬಿಟ್ಟು ಕಂಡಕ್ಟರನ್ನು ಟಿಕೇಟ್ ಕೊಡುವಂತೆ ಕೇಳಿದೆ. ಅವನು ಕೈಯಲ್ಲಿಯೇ ಸನ್ನೆ ಮಾಡಿ ಸುಮ್ಮನಿರುವಂತೆ ಹೇಳಿದ. ನಿಧಾನಕ್ಕೆ ೫ ರೂಪಾಯಿಯನ್ನು ನನ್ನ ಕೈಗೆ ಕೊಟ್ಟ. ನನಗೆ ಏನು ಹೇಳಬೇಕೋ ತಿಳಿಯಲಿಲ್ಲ. ನಾನು ಇಳಿಯಬೇಕಿದ್ದ ಸ್ಟಾಪ್ ಗೆ ಮೆಜೆಸ್ಟಿಕ್ ನಿಂದ ೮ ರೂಪಾಯಿ ಟಿಕೇಟ್ ಕೊಳ್ಳಬೇಕು. ಆದರೆ ಕೊಟ್ಟ ಹತ್ತು ರೂಪಾಯಿಯಲ್ಲಿ  ಐದು ರೂಪಾಯಿ ತೆಗೆದುಕೊಂಡು ಉಳಿದ ಐದು ರೂಪಾಯಿ ವಾಪಸ್ಸು ಕೊಟ್ಟ. ಟಿಕೇಟ್ ಮಾತ್ರ ಇಲ್ಲ. ಅವನ ಮುಖದಲ್ಲಿ ವಿನ್ ವಿನ್ ಸಿದ್ದಾಂತದ ಮಂದ ನಗೆಯಿತ್ತು. ನನ್ನ ಮನದಲ್ಲಿ ಇಡೀ ದಿನ ತಪ್ಪು ಮಾಡಿದ ಅಪರಾಧಿ ಪ್ರಜ್ಞೆ.

ಇಂಥ ಪ್ರಸಂಗಗಳು ಬೆಂಗಳೂರಿಗರಿಗೆ ಸಾಮಾನ್ಯವಿರಬಹುದು. ಆದರೆ ಒಮ್ಮೆಮ್ಮೆ ಭೇಟಿಕೊಡುವ ನನ್ನಂಥವರಿಗೆ ತೀರಾ ಮಜುಗರವನ್ನು ತಂದು ಬಿಡುತ್ತವೆ. ನನಗಂತೂ ಈ ಪ್ರಸಂಗವಾದ ನಂತರ ಬೆಂಗಳೂರಿನ ಕಂಡಕ್ಟರಗಳ ಬಗ್ಗೆ ವಿಪರೀತ ಕೋಪ ಬಂದದ್ದೂ ನಿಜ. ಅಗಲೇ ನಿಶ್ಚಯ ಮಾಡಿದೆ, ಮತ್ತೊಮ್ಮೆ ಹೀಗೇನಾದರೂ ಕಡಿಮೆ ಹಣ ತೆಗೆದುಕೊಂಡು ಟಿಕೇಟ್ ಕೊಡದಿದ್ದರೆ ಸರಿಯಾಗಿ ಬೈಯ್ಯಬೇಕು ಅಂತ. ಮರುದಿನವೂ ಕಂಡಕ್ಟರ್ ಅದೇ ಕೆಲಸ ಮಾಡಿಬಿಡಬೇಕೇ? ನನಗೆ ಎಲ್ಲಿತ್ತೋ ಸಿಟ್ಟು … ಬಾಯಿಗೆ ಬಂದಂತೆ ಮಾತಾಡಲು ಆರಂಭಿಸಿದೆ. ಆದರೆ ಮಹಾನುಭಾವನಿಗೆ ಅದು ತಾಗಿದಂತೆ ಕಾಣಲೇ ಇಲ್ಲ!!!  ಏನೂ ಆಗಿಯೇ ಇಲ್ಲ ಎಂಬಂತೆ ನನ್ನ ಪಕ್ಕದಲ್ಲಿ ಖಾಲಿ ಇದ್ದ ಸೀಟಿನಲ್ಲಿ ಕುಳಿತು ನಸುನಗುತ್ತ ಕೇಳಿದ ’ಸಾರ್, ನೀವು ಈ ಊರಿಗೆ ಹೊಸಬರಾ? ಅಂತ.  ನಾನು ’ಅದೆಲ್ಲ ಇರಲಿ ಟಿಕೇಟ್ ಕೊಡಿ’ ಅಂದೆ. ಅವನು ಮತ್ತೂ ಕೂಲ್ ಆಗಿ ಮಾತಾಡೋಕೆ ಸ್ಟಾರ್ಟ್ ಮಾಡಿದ. ’ಸಾರ್, ನಿಮಗೆ ನಾವು ಟಿಕೇಟ್ ಕೊಡದೇ ಉಳಿಸಿದ ೫೦ – ೧೦೦ ರೂಪಾಯಿ ಬಗ್ಗೆ ಮಾತ್ರ ಗೊತ್ತು. ಅದರ ಬಗ್ಗೆ ನಿಮಗೆ ಸಿಟ್ಟು ಬರುತ್ತೆ. ಆದರೆ ನಮಗೆ ನಮ್ಮ ಜೀವನದ ಬಗ್ಗೆಯೇ ಸಿಟ್ಟು ಬರುತ್ತೆ ಸರ್. ಒಂದು ಕಡೆ ಮೇಲಾಧಿಕಾರಿಗಳ ಒತ್ತಡ, ಇನ್ನೊಂದು ಕಡೆ ಪ್ರಯಾಣೀಕರ ಕಿರಿಕಿರಿ, ಒಂದು ಸರಿಯಾದ ಊಟ ನಿದ್ದೆಯನ್ನು ಮಾಡೋಕೆ ಆಗದ ಪರಿಸ್ಥಿತಿಯಲ್ಲಿ ನಾವಿದ್ದೇವೆ ಸರ್. ಮತ್ತಷ್ಟು ಓದು »

27
ಆಕ್ಟೋ

ದೀಪಾವಳಿ – ಬಚ್ಚಿಟ್ಟ ಬುತ್ತಿಯಿಂದ…. ೧

ಅರವಿಂದ್

ದೀಪದಿಂದ ದೀಪವ ಹಚ್ಚಬೇಕು ಮಾನವ………….
ಪ್ರೀತಿಯಿಂದ ಪ್ರೀತಿ ಹಂಚಲು…..
ಮನಸಿನಿಂದ ಮನಸನು ಬೆಳಗಬೇಕು ಮಾನವ…..

ಇದ್ಯಾವ ಸಿನಿಮಾದ ಹಾಡಿನ ಸಾಲೋ ನೆನಪಿಲ್ಲ… ಆದರೆ ಪ್ರತಿ ದೀಪಾವಳಿಗೂ ಈ ಹಾಡು, ಉಕ್ಕುಕ್ಕಿ ಬರುವ ಕಡಲಿನಂತೆ……. ಸಾಗುತ್ತಲೇ ಇರುತ್ತದೆ ಮನದ ಮೂಲೆಯಲ್ಲಿ,ಬಹುಶಃ ದೀಪಾವಳಿಯ ದೀಪದ ಸಾಲು ಪ್ರತಿ ಮನೆಯಲ್ಲಿ ಬೆಳಗುತಿರುವಾಗಲೇ, ಹೌದು ಆ ದಿನ, ಅಷ್ಟು ಗಾಢ ಮೌನ ಮನದಲ್ಲಿ, ಮನೆಯಲ್ಲೂ ಸಹ, ಬದುಕಿ ಬಾಳನ್ನೇ ಬಂಗಾರವಾಗಿಸಿಕೊಳ್ಳಬೇಕಾದ ತಂಗಿ…. ಮರ ಹತ್ತಿ ಉರಿದಂತೆ ಕಣ್ಣೆದುರೇ ಉರಿದು ಹೋದಾಗಲಂತು ನನ್ನಿಡಿ ಜಂಘಾಬಲವೇ  ಹುದುಗಿ ಹೋಗಿತ್ತು.

ಸಹನಾ…….. ಅವತ್ತೊಂದಿಷ್ಟು ಸಹನೆಯೊಂದಿಗಿದ್ದಿದ್ದರೆ, ಅವಳಿಡೀ ಜೀವನವೂ ಸೌಗಂಧಿಕದಂತೆ ಸುಂದರವಾಗುತ್ತಿತ್ತೇನೋ, ಹುಚ್ಚು ಕೊಡಿ ಮನಸು ಅದು, ಹಠಕ್ಕೆ ಮತ್ತೊಂದು ಹೆಸರಷ್ಟೇ ಸಹನಾ,
ಮತ್ತಷ್ಟು ಓದು »

27
ಆಕ್ಟೋ

ಸಂಸ್ಕೃತಿ ಸಂಕಥನ – ೮

– ರಮಾನಂದ ಐನಕೈ

ಮೂರ್ತಿ ಪೂಜೆಗೆ ಕಾರಣಗಳು ಬೇಕಾಗಿಲ್ಲ 

ಯಾವ ಸಂಸ್ಕೃತಿಯಲ್ಲಿ ರಿಲಿಜನ್ ಇದೆಯೋ ಆ ಸಂಸ್ಕೃತಿ ವಿಗ್ರಹ ಆರಾಧನೆ ಅಥವಾ ಮೂರ್ತಿ ಪೂಜೆಯನ್ನು ವಿರೋಧಿಸುತ್ತದೆ. ಏಕೆಂದರೆ ರಿಲಿಜನ್ನಿನಲ್ಲಿ ಗಾಡ್ ಹಾಗೆ ಆಜ್ಞಾಪಿಸಿದ್ದಾನೆ. ಗಾಡ್ ಮಾತ್ರ ನಿಜವಾದ ದೇವರು. ಉಳಿದ ದೇವರುಗಳೆಲ್ಲ ಗಾಡ್ನ ವೈರಿ ಸೈತಾನನ ಪ್ರತಿರೂಪಗಳು. ಹಾಗಾಗಿ ಸೈತಾನನ ಪ್ರತಿರೂಪವಾದ ನೂರಾರು ಮೂರ್ತಿಗಳನ್ನು ಪೂಜಿಸುವುದು ಅನೈತಿಕ. ಪಾಶ್ಚಾತ್ಯರು ಅದೇ ದೃಷ್ಟಿಯಲ್ಲಿ ನಮ್ಮ ಮೂರ್ತಿಪೂಜೆಗಳನ್ನು ನೋಡಿ ಟೀಕೆ ಮಾಡಿದರು. ಆದರೆ ಅದು ನಮಗ ಅರ್ಥವೇ ಆಗಲಾರದು. ಏಕೆಂದರೆ ನಮ್ಮದು ರಿಲಿಜನ್ನೇ ಇಲ್ಲದ ಬಹುಸಂಸ್ಕೃತಿಗಳ ನಾಡು.

 

ಪಾಶ್ಚಾತ್ಯರು ಭಾರತೀಯರ ಮೂರ್ತಿ ಪೂಜೆ ಯನ್ನು ಅನೈತಿಕ ಎಂದು ವ್ಯಾಖ್ಯಾನಿಸಿದರು. ಏಕಿರ ಬಹುದು? ಅದರ ಹಿಂದಿನ ನಿಜ ಏನಿರಬಹುದು?

ಮತ್ತಷ್ಟು ಓದು »