ಸಾರಥಿ – The lion king
– ಫಿಲ್ಮಿ ಪವನ್
ಸಾರಥಿ ಬಿಡುಗಡೆಯಾಗಿ ಬಹಳ ದಿನಗಳಾಯ್ತು. ಆದರೆ ನಮ್ಮೂರಿನ ಕಿತ್ತೋದ ಥಿಯೇಟರ್ ನಲ್ಲಿ ಕೂತು ಯಾರಾದ್ರು ಬೀಡಿ ಅಂಟಿಸಿದಾಗ, ಅಣ್ಣ ಒಂದು ಬೀಡಿ ಕೊಡಣ್ಣ ಅಂತ ತೊಗೊಂಡು mAss ಹೀರೋ ಚಿತ್ರವನ್ನು mAss ಆಗಿ ನೋಡೋದ್ರಲ್ ಇರೋ ಮಜನೆ ಬೇರೆ. ಅದಕ್ಕೆ ನೆನ್ನೆ ಕಾಲ ಬಂದಿತ್ತು , ಯಾಕೋ ಏನೋ ಇ ಚಿತ್ರ ಎಲ್ಲಿ ರಿಲೀಸ್ ಅದ್ರು ಟೈಮ್ ಗೆ ಸರ್ಯಾಗಿ ಸ್ಟಾರ್ಟ್ ಆಗ್ತಾ ಇಲ್ಲ ಅನ್ನೋ ವಿಷಯ ಮತ್ತೊಮ್ಮೆ ನಮ್ಮೂರಲ್ಲೂ ಪ್ರೋವ್ ಆಗೋಯ್ತು. ೭-೩೦ ರ ಶೋ ಗೆ ೭-೦೦ ಘಂಟೆಗೆ ಹೋಗಿದ್ರು ಥಿಯೇಟರ್ ಒಳಗೆ ಬಿಟ್ಟಿದ್ದೆ ೭-೪೦ಕ್ಕೆ. ಅಷ್ಟರಲ್ಲೇ ನಮ್ಮ ಮಾಮಂದಿರು ತಮ್ಮ ಟಾಟಾ ಸುಮೋದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಅಲ್ಲಲ್ಲಿ ನಿಂತಿದ್ದವರಿಗೆ ಬೊ… ಮಗನೆ, ಬೊ… ಡಿಕೆ, ಇನ್ನು ಮುಂತಾದ ಅಷ್ಟೋತ್ತರಗಳನ್ನು ಒದರಿ ಹೋಗಿದ್ದರು. ಟಿಕೆಟ್ ಕೌಂಟರ್ ಅಲ್ಲಿ ಹತ್ತಿ ಇಳಿದು ಸಾಹಸ ಮಾಡೋ ಗೋಜು ಸಾಧ್ಯ ಇರ್ಲಿಲ್ಲ. ಸಾಲಿನಲ್ಲಿ ಯಾರದ್ರು ನಮ್ಮೋರು ಕಾಣಿಸ್ತರ ಅಂತ ನೋಡ್ತಿರ್ಬೇಕಾದ್ರೆನೆ ನಮ್ ಬಾಡಿಗೆ ಮನೆ ಹುಡುಗ ಗುಂಡ ಕಾಣಿಸಕೊಂಡ, ಲೇ ಚುಡೆಲ್ , ನನಗೊಂದು ಟಿಕೆಟ್ ತೊಗೊಳ್ಳ ಅಂತ ೫೦ ರು ನೋಟು ಕೊಟ್ಟು entrance ಬಳಿ ಕಾಯ್ತಾ ನಿಂತಿದ್ದೆ. ಹಂಗು ಹಿಂಗು ನುಕಾಡಿ, ತಲ್ಲಾಡಿ, ಗುದ್ದಾಡಿ, ಗುಂಡ ಟಿಕೆಟ್ ತಂದೆ ಬಿಟ್ಟಿದ್ದ, ತೊಗೋ ಗುರು ಅಂತ ಟಿಕೆಟ್ ಕೊಟ್ಟ ಅದ್ರ ಮೇಲೆ ೪೦ ರು ಅಂತ ಇತ್ತು. ಲೋ ಅಪ್ಪಿ ಇನ್ ಹತ್ತು ರುಪಾಯಿ ವಾಪಾಸ್ ಕೊಡೊ ಅಂದ್ರೆ, ಅನ್ನೋ ನಿನ್ ಹೆಸರಲ್ಲಿ ಇಂಟರ್ವಲ್ ಅಲ್ ಒಂದು ಚಿಪ್ಸ್ ಪ್ಯಾಕೆಟ್ ತಿನ್ಕೊತಿನಿ ಬಿಡಣ್ಣ ಅಂದ. ನನ್ ಮಗ ನಂಗೆ ಬ್ಲಾಕ್ ಟಿಕೆಟ್ ಮಾರಿಬಿಟ್ನಲ್ಲ ಅನ್ನೋ ಬೇಜಾರಲ್ಲೇ ಒಳಗೋಗಿ ಮುರಿದೋಗಿರೋ ಪ್ಲಾಸ್ಟಿಕ್ ಚೀರ್ ಗಳ ಮಧ್ಯೆ ಚೆನ್ನಾಗಿರೋದನ್ನ ಹುಡುಕಿ ಮೊಬೈಲ್ ನ ಸೈಲೆಂಟ್ ಮೋಡಲ್ಲಿ ಹಾಕಿ ಕೂತೆ.
title ಕಾರ್ಡ್ ಅಲ್ಲೇ ಸ್ವಲ್ಪ ವಿಭಿನ್ನವಾಗಿ ಶುರುವಾದ ಚಿತ್ರ, ಮೊದಲರ್ಧ ಪೂರ್ತಿ ಕಾಮಿಡಿ ಯಾ ಝಾಲಕ್ ಜೊತೆಗೆ ಅಕ್ಷ್ಯನ್ ಪ್ಯಾಕ್, ಇವೆರಡರ ಜೊತೆಗೆ ಒಂದು ಸ್ವೀಟ್ ಲವ್ ಸ್ಟೋರಿ. ಲವ್ ಸ್ಟೋರಿ ಸ್ವೀಟ್ ಅನ್ನುವುದಕ್ಕಿಂತಲೂ cute ಅನ್ನಬೋಹುದು, ನಿಜವಾಗಿಯೂ ಬಹಳ ಮುದ್ದಾಗಿದೆ. ಹೀರೋ ಇನ್ ಗೆ expose ಮಾಡಿಸಿಲ್ಲ, ಕುಟುಂಬದೊಂದಿಗೆ ಬಂದವರಿಗೆ ಅದು ನಿರಾಳವಾದರೆ ಪಡ್ಡೆಗಳಿಗೆ ಸ್ವಲ್ಪ ಬೇಜಾರು. ಶಂಕರ್ ನಾಗ್ ಅವರನ್ನು ಹಾಡಿನಲ್ಲಿ ಬಳಸಿಕೊಂಡಿರುವ ರೀತಿಗೆ ದಿನಕರ್ ಗೆ ನಿಜಕ್ಕೂ ಒಂದು ಸಲಾಂ. ಅವರು ಇಹಲೋಕ ತ್ಯಜಿಸಿ ೧೬ ವರ್ಷಗಳದ್ರು ಅವರು ತೆರೆಯ ಮೇಲೆ ಬಂದಾಗ ಪ್ರೇಕ್ಷಕರ ಅರುಚಾಟ, ಕಿರುಚಾಟ, ಶಿಲ್ಲೆಗಳನ್ನು ಕೇಳಿದಾಗ ಶಂಕರಣ್ಣ ಇದ್ದಿದ್ರೆ ಇನ್ ಹೆಗಿರ್ತಿದ್ರೋ ಅನ್ನೋ ಯೋಚನೆ ಮನದಲ್ಲಿ ಮೂಡಿತ್ತು. ಮತ್ತೆ ಆಗಾಗ ಡಿಶುಂ ಡಿಶುಂ, ಪೋಲಿಸ್ ಗೆ ಬುದ್ದಿ ಹೇಳಿ ಕೊಡೊ ದೃಶ್ಯ. ಮತ್ತು ರೈತರನ್ನು ಹೊಗಳೋ ದೃಶ್ಯ ಮುಂತಾದವೆಲ್ಲ ಬಂದಾಗ ಸುಪರ್ರೋ ಸೂಪರ್ರು. ಮತ್ತಷ್ಟು ಓದು 
ಹಾವು ಪುರಾಣ!
ನೀ ಹೀಂಗೆಲ್ಲ ಬಪ್ಪಕಾಗ..
ಮಕ್ಕಳ್ ಮರಿ ತಿರ್ಗು ಜಾಗ
ಜಾಗ ಖಾಲಿ ಮಾಡ ಬೇಗ …”
ಮನೆ ಕಡೆ ನಾಗರಹಾವು ಬಂದಾಗಲೆಲ್ಲಾ ಅದನ್ನು ಓಡಿಸೋವಾಗ “ಅದಕ್ಕೆ ನೋವು ಮಾಡಬೇಡಿ” ಅನ್ನೋ ದೊಡ್ಡವರ ರಾಗದ ಹಿನ್ನಲೆಯಲ್ಲಿ ನಮ್ಮ ಕುಂದಗನ್ನಡದ ಪ್ರಾಸ ಹೀಗಿತ್ತು
ನಮ್ಮ ಹಳ್ಳಿಗಳಲ್ಲಿ ಹಾವಿನ ಬಗ್ಗೆ ಭಯ ಮತ್ತು ಆಸಕ್ತಿ ಸ್ವಲ್ಪ ಕಮ್ಮಿನೇ ಜನರಲ್ಲಿ.ಆದರೆ ನಂಗೆ ಮಾತ್ರ ಇವತ್ತಿಗೂ ಅಷ್ಟೇ ಉತ್ಸಾಹ ಅವುಗಳ ಬಗ್ಗೆ.ಅದರಲ್ಲೂ ನಾಗರಹಾವು ಅಂದ್ರೆ ಸಕತ್ ಖುಷಿ..ಅದು ಮಾಡುವಷ್ಟು ಗೊಂದಲ ,ಖರ್ಚು,ಭಯ ಮತ್ಯಾವ ಹಾವುಗಳು ಮಾಡೋದಿಲ್ಲ.ಅಪರೂಪಕ್ಕೆ ಅವುಗಳು ಕೋಳಿ ಗೂಡಲ್ಲಿರೋ ಮೊಟ್ಟೆ ತಿನ್ನೋಕೆ ಬಂದರೆ ಈ ಅಕ್ಕ ಪಕ್ಕದ ಮನೇಲಿ ಎಲ್ಲ ಹೋ ದೇವ್ರ್ ಹಾವ್ ಬಂತ್ ..ಎಂದು ಪಡುವ ಸಂಭ್ರಮವೋ ಸಂಭ್ರಮ!ನಂತರ ಅದಕ್ಕಿಷ್ಟು ಹಾಲು ಇಟ್ಟು ,ಅಕ್ಕಿ ಚೆಲ್ಲಿ ಕೈ ಮುಗಿಯೋರು !ಆದರೆ ಅದು ಕುಡಿದದ್ದು ನಾ ನೋಡೇ ಇಲ್ಲ.ಪಾಪ !ಅದರ ಹೆದರಿಕೆ ಅದಕ್ಕೆ ಎಲ್ಲಿ ಹೊಡಿತಾರೋ ಅಂತ!ಯಾವ ಹಾವಿಗೂ ಇರದ ಮುಂಡು ಬಾಲ ಇದಕ್ಕೆ ಇರೋದರಿಂದ ಅದರ ನಿಕ್ ನೇಮ್ ಮುಂಡಪ್ಪ.
ಒಮ್ಮೆ ನಮ್ಮ ಪಕ್ಕದ ಕಾಡಿಗೆ ನವಿಲು ಹಿಡಿಯುವ ಗುಂಪೊಂದು ಬಂದಿತ್ತು.ಅವರ ಜೊತೆ ನಾವು ಕೂಡ ನೋಡಲು ಹೋಗಿದ್ದೆವು .ಚಂದದ ನವಿಲು ಗರಿ ಸಿಗುತ್ತಲ್ಲಾ ಅಂತ!ಸರಿ ಹೋಗ್ತಾನೆ ಒಂದು ದೊಡ್ಡ ನವಿಲು ಸಿಕ್ಕಿಬಿಟ್ಟಿತು.ಅವರು ಅದನ್ನು ಕೊಲ್ತಾರೆ ಅಂತ ಮಾತ್ರ ನಮಗೆ ಗೊತ್ತಿರಲಿಲ್ಲ.ಅವರು ಅದನ್ನ ಕೊಂದು ಹೊಟ್ಟೆ ಸೀಳಿದಾಗ ಅಲ್ಲೊಂದು ಪುಟ್ಟ ನಾಗರ ಮರಿ!ಆಮೇಲೆ ನಾಗರ ಹಾವಿನ ಹೆಣ ಕಂಡ ತಪ್ಪಿಗೆ (ಅಷ್ಟು ಚಂದದ ನವಿಲು ಕೊಂದಿದ್ದು ಮಾತ್ರ ಸರಿಯಂತೆ ಅವರ ಪ್ರಕಾರ ) ಸರ್ಪ ಸಂಸ್ಕಾರ ,ಅದೂ ಇದೂ ಪೂಜೆ ಮಾಡಬೇಕಾಯ್ತು ,ಆಮೇಲೆ ನವಿಲು ಹಿಡಿಯೋದು ಬಿಟ್ಟಿರಬೇಕು ಬಹುಶಃ
ಮತ್ತಷ್ಟು ಓದು 





