ಸಾರಥಿ – The lion king
– ಫಿಲ್ಮಿ ಪವನ್
ಸಾರಥಿ ಬಿಡುಗಡೆಯಾಗಿ ಬಹಳ ದಿನಗಳಾಯ್ತು. ಆದರೆ ನಮ್ಮೂರಿನ ಕಿತ್ತೋದ ಥಿಯೇಟರ್ ನಲ್ಲಿ ಕೂತು ಯಾರಾದ್ರು ಬೀಡಿ ಅಂಟಿಸಿದಾಗ, ಅಣ್ಣ ಒಂದು ಬೀಡಿ ಕೊಡಣ್ಣ ಅಂತ ತೊಗೊಂಡು mAss ಹೀರೋ ಚಿತ್ರವನ್ನು mAss ಆಗಿ ನೋಡೋದ್ರಲ್ ಇರೋ ಮಜನೆ ಬೇರೆ. ಅದಕ್ಕೆ ನೆನ್ನೆ ಕಾಲ ಬಂದಿತ್ತು , ಯಾಕೋ ಏನೋ ಇ ಚಿತ್ರ ಎಲ್ಲಿ ರಿಲೀಸ್ ಅದ್ರು ಟೈಮ್ ಗೆ ಸರ್ಯಾಗಿ ಸ್ಟಾರ್ಟ್ ಆಗ್ತಾ ಇಲ್ಲ ಅನ್ನೋ ವಿಷಯ ಮತ್ತೊಮ್ಮೆ ನಮ್ಮೂರಲ್ಲೂ ಪ್ರೋವ್ ಆಗೋಯ್ತು. ೭-೩೦ ರ ಶೋ ಗೆ ೭-೦೦ ಘಂಟೆಗೆ ಹೋಗಿದ್ರು ಥಿಯೇಟರ್ ಒಳಗೆ ಬಿಟ್ಟಿದ್ದೆ ೭-೪೦ಕ್ಕೆ. ಅಷ್ಟರಲ್ಲೇ ನಮ್ಮ ಮಾಮಂದಿರು ತಮ್ಮ ಟಾಟಾ ಸುಮೋದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಅಲ್ಲಲ್ಲಿ ನಿಂತಿದ್ದವರಿಗೆ ಬೊ… ಮಗನೆ, ಬೊ… ಡಿಕೆ, ಇನ್ನು ಮುಂತಾದ ಅಷ್ಟೋತ್ತರಗಳನ್ನು ಒದರಿ ಹೋಗಿದ್ದರು. ಟಿಕೆಟ್ ಕೌಂಟರ್ ಅಲ್ಲಿ ಹತ್ತಿ ಇಳಿದು ಸಾಹಸ ಮಾಡೋ ಗೋಜು ಸಾಧ್ಯ ಇರ್ಲಿಲ್ಲ. ಸಾಲಿನಲ್ಲಿ ಯಾರದ್ರು ನಮ್ಮೋರು ಕಾಣಿಸ್ತರ ಅಂತ ನೋಡ್ತಿರ್ಬೇಕಾದ್ರೆನೆ ನಮ್ ಬಾಡಿಗೆ ಮನೆ ಹುಡುಗ ಗುಂಡ ಕಾಣಿಸಕೊಂಡ, ಲೇ ಚುಡೆಲ್ , ನನಗೊಂದು ಟಿಕೆಟ್ ತೊಗೊಳ್ಳ ಅಂತ ೫೦ ರು ನೋಟು ಕೊಟ್ಟು entrance ಬಳಿ ಕಾಯ್ತಾ ನಿಂತಿದ್ದೆ. ಹಂಗು ಹಿಂಗು ನುಕಾಡಿ, ತಲ್ಲಾಡಿ, ಗುದ್ದಾಡಿ, ಗುಂಡ ಟಿಕೆಟ್ ತಂದೆ ಬಿಟ್ಟಿದ್ದ, ತೊಗೋ ಗುರು ಅಂತ ಟಿಕೆಟ್ ಕೊಟ್ಟ ಅದ್ರ ಮೇಲೆ ೪೦ ರು ಅಂತ ಇತ್ತು. ಲೋ ಅಪ್ಪಿ ಇನ್ ಹತ್ತು ರುಪಾಯಿ ವಾಪಾಸ್ ಕೊಡೊ ಅಂದ್ರೆ, ಅನ್ನೋ ನಿನ್ ಹೆಸರಲ್ಲಿ ಇಂಟರ್ವಲ್ ಅಲ್ ಒಂದು ಚಿಪ್ಸ್ ಪ್ಯಾಕೆಟ್ ತಿನ್ಕೊತಿನಿ ಬಿಡಣ್ಣ ಅಂದ. ನನ್ ಮಗ ನಂಗೆ ಬ್ಲಾಕ್ ಟಿಕೆಟ್ ಮಾರಿಬಿಟ್ನಲ್ಲ ಅನ್ನೋ ಬೇಜಾರಲ್ಲೇ ಒಳಗೋಗಿ ಮುರಿದೋಗಿರೋ ಪ್ಲಾಸ್ಟಿಕ್ ಚೀರ್ ಗಳ ಮಧ್ಯೆ ಚೆನ್ನಾಗಿರೋದನ್ನ ಹುಡುಕಿ ಮೊಬೈಲ್ ನ ಸೈಲೆಂಟ್ ಮೋಡಲ್ಲಿ ಹಾಕಿ ಕೂತೆ.
title ಕಾರ್ಡ್ ಅಲ್ಲೇ ಸ್ವಲ್ಪ ವಿಭಿನ್ನವಾಗಿ ಶುರುವಾದ ಚಿತ್ರ, ಮೊದಲರ್ಧ ಪೂರ್ತಿ ಕಾಮಿಡಿ ಯಾ ಝಾಲಕ್ ಜೊತೆಗೆ ಅಕ್ಷ್ಯನ್ ಪ್ಯಾಕ್, ಇವೆರಡರ ಜೊತೆಗೆ ಒಂದು ಸ್ವೀಟ್ ಲವ್ ಸ್ಟೋರಿ. ಲವ್ ಸ್ಟೋರಿ ಸ್ವೀಟ್ ಅನ್ನುವುದಕ್ಕಿಂತಲೂ cute ಅನ್ನಬೋಹುದು, ನಿಜವಾಗಿಯೂ ಬಹಳ ಮುದ್ದಾಗಿದೆ. ಹೀರೋ ಇನ್ ಗೆ expose ಮಾಡಿಸಿಲ್ಲ, ಕುಟುಂಬದೊಂದಿಗೆ ಬಂದವರಿಗೆ ಅದು ನಿರಾಳವಾದರೆ ಪಡ್ಡೆಗಳಿಗೆ ಸ್ವಲ್ಪ ಬೇಜಾರು. ಶಂಕರ್ ನಾಗ್ ಅವರನ್ನು ಹಾಡಿನಲ್ಲಿ ಬಳಸಿಕೊಂಡಿರುವ ರೀತಿಗೆ ದಿನಕರ್ ಗೆ ನಿಜಕ್ಕೂ ಒಂದು ಸಲಾಂ. ಅವರು ಇಹಲೋಕ ತ್ಯಜಿಸಿ ೧೬ ವರ್ಷಗಳದ್ರು ಅವರು ತೆರೆಯ ಮೇಲೆ ಬಂದಾಗ ಪ್ರೇಕ್ಷಕರ ಅರುಚಾಟ, ಕಿರುಚಾಟ, ಶಿಲ್ಲೆಗಳನ್ನು ಕೇಳಿದಾಗ ಶಂಕರಣ್ಣ ಇದ್ದಿದ್ರೆ ಇನ್ ಹೆಗಿರ್ತಿದ್ರೋ ಅನ್ನೋ ಯೋಚನೆ ಮನದಲ್ಲಿ ಮೂಡಿತ್ತು. ಮತ್ತೆ ಆಗಾಗ ಡಿಶುಂ ಡಿಶುಂ, ಪೋಲಿಸ್ ಗೆ ಬುದ್ದಿ ಹೇಳಿ ಕೊಡೊ ದೃಶ್ಯ. ಮತ್ತು ರೈತರನ್ನು ಹೊಗಳೋ ದೃಶ್ಯ ಮುಂತಾದವೆಲ್ಲ ಬಂದಾಗ ಸುಪರ್ರೋ ಸೂಪರ್ರು.
ಆಟೋಗಳ ಹಿಂದೆ ಬರೆದಿರುವ ಬರವಣಿಗೆಗಳಿಂದ ಡ್ರೈವರ್ ಗಳ ಮನಸ್ತಿತಿ ತಿಳಿಯಬಹುದು ಎಂಬುದರ ಬಗ್ಗೆ ಹೆರೋಇನ್ ಮಾಡುವ ರಿಸರ್ಚ್ ನಿಜಕ್ಕೂ ಅದ್ಭುತ. ಆ ಬರವಣಿಗೆಗಳನ್ನು ಬಳಸಿಕೊಂಡಿರುವ ರೀತಿ ದಿನಕರ್ ಜಾಣ್ಮೆಗೆ ಹಿಡಿದ ಕನ್ನಡಿ ಎನ್ನಬಹುದು. ಇನ್ನು ಮೊದಲರ್ಧದಲ್ಲಿ ೩ ಹಾಡುಗಳು ಆದ್ರೆ ಮೂರರಲ್ಲಿ ಯಾವುದನ್ನೂ ತುರುಕಿಲ್ಲ ಎಂಬುದಂತೂ ಸತ್ಯ. ನಾಗೇಂದ್ರ ಪ್ರಸಾದ್ ರಚಿಸಿರುವ ಸಾಹಿತ್ಯದಲ್ಲಿ ಅರ್ಥ ಇದೆ. ” ಬಾರೋ ನಾಗ ಹೋಗಣ ಊಟ ಮಾಡ್ಕೊಂಡ್ ಬರೋಣ ” ಅನ್ನೋ ಸಾಲುಗಳನ್ನು ಹಾಡಾಗಿಸುತ್ತಿರುವ ಈ ಕಾಲದಲ್ಲಿ ಬಹಳ ಅರ್ಥ ಘರ್ಬಿತ ಹಾಡುಗಳನ್ನು ಬರೆದಿದ್ದಾರೆ. ಇನ್ನೇನು ಹೀರೋ ಮತ್ತು ಹೆರೋಇನ್ ಒಂದಾಗುತ್ತಾರೆ ಎಂಬುವಷ್ಟರಲ್ಲೇ ಕಥೆಗೆ ಇನ್ನೊಂದು ತಿರುವು ಕೊಟ್ಟು ಮಧ್ಯಂತರ ನೀಡುತ್ತಾರೆ.
ಇಂಟರ್ವಲ್ ನಲ್ಲಿ ಒಂದು ಕೂಲ್ ಡ್ರಿಂಕು ಮತ್ತೆ ೨ ಚಿಪ್ಸ್ ಪ್ಯಾಕೆಟ್ ತಗೊಂಡು ಮತ್ತೆ ನನ್ನ ಕುರ್ಚಿನೆ ಹುದುಕ್ಕೊಂದೊಗಿ ಕೂತೆ. ಅಂಗಡಿ ಹತ್ರ ಸಿಕ್ಕಿದ ಕೆಲವರು ಏನಪಾ ಪವನ್ ಫಿಲಂ ನೋಡಕ್ ಬಂದ ಅಂದ್ರು, ಮನಸಲ್ಲೇ ಇಲ್ಲ ಅಣ್ಣ ಇಂಟರ್ವಲ್ ಅಲ್ ಚಕ್ಲಿ ನಿಪ್ಪಟ್ಟು ಮಾರಕ್ ಬಂದಿದ್ದೀನಿ ಅಂದ್ಕೊಂಡು ಬಂದಿದ್ದಾಯ್ತು.
ದ್ವಿತಿಯಾರ್ಧ ಕಥೆ ಬಹಳ ಸೀರಿಯಸ್ ಆಗ್ತಾ ಹೋಯ್ತು, ಶರತ್ ಕುಮಾರ್ ಎಂಟ್ರಿ ಅಂತು ಚಿಂದಿ. ಇ ನಡುವೆ ಶರತ್ ಇಂತಹ ಪಾತ್ರಗಳಿಗೆ ಫಿಕ್ಸ್ ಆದಂತಿದೆ, ಸುಮಾರು ೫೭ ವರ್ಷ ದಾಟಿದರು ಕಟ್ಟು ಮಸ್ತಾದ ಅಳು. ಅ ಬಾಡಿ maintain ಮಾಡಕ್ಕೆ ಎಷ್ಟು ಕಷ್ಟ ಪತ್ತಿದ್ದರೋ ಏನೋ. ಅಂದಹಾಗೆ ಶರತ್ ಕುಮಾರ್ ಸಹ ರಾಧಿಕನ್ ಗಂಡನೇ ಅಂತ ಕೆಲವರು ಅರ್ಥ ಮಾಡ್ಕೊಬೇಕು. ಬರ್ತಾ ಬರ್ತಾ ತಿರುವಿನ ಮೇಲೆ ತಿರುವು ಕೊಟ್ಟು ಚಿತ್ರ ಮತ್ತಷ್ಟು ಮತ್ತಷ್ಟು ಸೀರಿಯಸ್ ಆಗ್ತಾ ಹೋದಂಗೆ, ಇದೆ ಥರ ಕಥೆ ಎಲ್ಲೋ ನೋಡಿದ್ದಿನಲ್ಲ ಅನ್ನಿಸ್ತು. ಸ್ವಲ್ಪ ಹೊತ್ತು ತಲೆ ಕೆಡ್ಸ್ಕೊಂಡ್ ಮೇಲೆ ಶರತ್ ಕುಮಾರ್ ನಾನು ರಾಜ ಸಿಂಹ ಅಂದಾಗ ಫ್ಲಾಶ್ ಆಯಿತು. ಸ್ವಾಮಿ ಇದು lion ಕಿಂಗ್ ಭಾಗ ೧, ಕಾರ್ಟೂನ್ ಚಿತ್ರದ ಅಪರಾವತಾರ ಎಂದು. ಅಲ್ಲಿ ಹಿರಿ ಸಿಂಹ ಮತ್ತು ಮರಿ ಸಿಂಹದ ನಡುವೆ ನಡೆಯುವ ಕಥೆಯನ್ನು, ದರ್ಶನ್ ಮತ್ತು ಶರತ್ ಕುಮಾರ್ ನಡುವೆ ಬೇಸೆದಿದ್ದರೆ ದಿನಕರ್. ೪ ವರ್ಷದ ಪುಟ್ಟ ಪೋರನ ನಟನೆ ನಿಜಕ್ಕೂ ಮನ ಮುಟ್ಟುವಂತಿದೆ. dubbing ಅ ಹುಡುಗನೇ ಮಾಡಿದ್ದಾನೋ ಇಲ್ಲವೋ ಗೊತ್ತಿಲ್ಲ. ಅವನೇ ಮಾಡಿದ್ದರೆ ಅ ಪಾಪುಗೆ ಡಬಲ್ ಕ್ಲಾಪ್ಸ್. ಪ್ರಾಣಿ ಪಕ್ಷಿಗಳನ್ನು ಚಿತ್ರಗಳಲ್ಲಿ ಬಳಸಿದರೆ ಒಂದು ಸಾಫ್ಟ್ ಕಾರ್ನೆರ್ ಸೃಷ್ಟಿ ಮಾಡಬಹುದು ವಿಕ್ಷಕನ ಮೇಲೆ ಅನ್ನೋದನ್ನ, ಎಂ. ಪಿ. ಶಂಕರ್ ಯಾವತ್ತೋ ಮಾಡಿದ್ರು. ಸಲ್ಮಾನ್ ಸಿನಿಮಾದಲ್ಲಿ ಪಾರಿವಾಳ use ಮಾಡಿದ್ರು. ನಮ್ಮ ಪ್ರೇಂ ಅದನ್ನ ಕಾಪಿ ಮಾಡ್ಕೊಂಡಿದ್ರು.. ನಂತರ ನಮ್ ಭಟ್ರು ಮೊಲ USE ಮಾಡಿದ್ರು. ಇನ್ನು ಅಳಿಲು ಹಾವು ಹಸು ಎಲ್ಲ USE ಆಗ್ತಾನೆ ಇವೆ. LATEST ಎಂಟ್ರಿ ಬಿಳಿಯ ಕುದುರೆ, ಸಾರಥಿಯಲ್ಲಿ ಬಹಳ ಚೆನ್ನಾಗಿ ಬಳಸಿಕೊಂಡಿದ್ದಾರೆ. ಆದರೆ ದರ್ಶನ್ ಅ ಕುದುರೆ ಓಡಿಸುವಾಗ ಲಗಾಮೆ ಇರಲಿಲ್ಲ, ಅದ್ಹೇಗೆ ಸವರಿ ಮಾಡಿದರೋ ಶಿವನೆ ಬಲ್ಲ.
ಕೊನೆಗೆ ಒಂದು ಉತ್ತಮ climax ನೊಂದಿಗೆ ಚಿತ್ರ ಮುಗಿತು. ನಮ್ಮ ಕನ್ನಡದಲ್ಲಂತೂ dubbing ವಿರೋಧ, ಇಂಗ್ಲಿಷ್ ನ ಇಂತಹ ಉತ್ತಮ ಚಿತ್ರಗಳೆಲ್ಲವನ್ನು ತಮಿಳು ತೆಲುಗಿನಲ್ಲಿ ಅಲ್ಲಿಯ ಮಕ್ಕಳು ಅವರದೇ ಭಾಷೆಯಲ್ಲಿ ನೋಡಿರುತ್ತಾರೆ. ಆದ್ರೆ ನಮ್ಮ ಜನ ಖಂಡಿತ ನೂರಕ್ಕೆ ೬೦ ಭಾಗ ಇಂಗ್ಲಿಷ್ ಚಿತ್ರ ನೋಡಿರಲ್ಲ. ಹೋಗ್ಲಿ ಬಿಡಿ ನಮ್ ಭಾಷೇಲಿ ನಮ್ ಜನದ ನಟನೆಯಲ್ಲಿ ಒಂದು ಉತ್ತಮ ಚಿತ್ರ ನೋಡಿದಂತಾಯ್ತು. ಮೊಬೈಲ್ ನ ತೆಗೆದು ನೋಡಿದ್ರೆ ೧೬ ಮಿಸ್ ಕಾಲ್ ಇತ್ತು ಮನೆ no ಇಂದ ೧೦ ಅಪ್ಪನ no ಇಂದ ೪ ತಂಗಿ no ಇಂದ ೨, ಸೈಲೆಂಟ್ ಮೊಡಲ್ಲಿದ್ದ ಮೊಬೈಲ್ ನ ಜನರಲ್ ಗೆ ಹಾಕಿ ಸಾರಥಿ ಸೂಪರ್ ಮಗ ಅಂದ್ಕೊಂಡು ಮನೆ ಸೇರ್ಕೊಂಡೆ ಆಗಲೇ ಟೈಮ್ ೧೧ ಆಗಿತ್ತು ಬೆಕ್ಕಿನ ರೀತಿ ಮೆಲ್ಲನೆ ಬಾಗಿಲು ತೆಗೆದು ಮತ್ತೆ ಲೋಕಕ್ ಮಾಡಿ ನನ್ನ ಕೊನೆ ಬಳಿ ಹೋಗ್ತಿದ್ದೆ. ಹಾಲ್ ಅಲ್ ಮಲಗಿದ್ದ ಅಮ್ಮ ಸಾಕೇನೋ ಟೈಮು ಮನೆ ಮಠ ಜ್ಞಾನ ಇಲ್ವಾ ಅಂದ್ರು. ಸಾರೀ ಮ ನಿಂಗ್ ಹೇಳೋದು ಮರೆತಿದ್ದೆ ಸಾರಥಿ ಫಿಲಂ ಗ ಹೋಗಿದ್ದೆ ಅಂದೇ. ನನ್ನ ನೋಡ್ಕೊಂಡ್ ಬೈತಿದ್ದ ನಮಮ್ಮ ಅ ಕಡೆ ತಿರುಗಿ ನಮ್ಮನ್ನು ಕರ್ಕೊಂದೊಗಿದ್ರೆ ಎನಗ್ತಿತ್ತೋ ಅಂದ್ರು…… 🙂
ಮಲಗಣ ಅಂತ ಕಣ್ಣು ಮುಚ್ಚಿದಾಗ ಒಂದು ಪ್ರಶ್ನೆ ಕಾಡಕ್ ಶುರುವಾಯ್ತು ಸಾರಥಿ remake ಅ? ಇಲ್ಲ ಸ್ವಮೇಕ ???
***********************************************************************




