ವಿಷಯದ ವಿವರಗಳಿಗೆ ದಾಟಿರಿ

Archive for

29
ಆಕ್ಟೋ

ಇದು ”ನಮ್ಮ” ಮೆಟ್ರೋನಾ ????

– ಮಹೇಶ.ಎಮ್.ಆರ್

ಬಹುದಿನಗಳಿಂದ ನಿರೀಕ್ಷೆಯಲ್ಲಿದ್ದ ಬೆಂಗಳೂರು ಮೆಟ್ರೊ ಸೇವೆ ಶುರು ಆಗಿದೆ. ಮೆಟ್ರೊದಲ್ಲಿನ ಮೊದಲ ಓಡಾಟ ಹೊಸ ಅನುಭವ ನೀಡಿತು. ನಮ್ಮ ಮೆಟ್ರೊ ಸೇವೆಯನ್ನು ಅನುಭವಿಸಿದ ಮೇಲೆ ಇದೇ ಸಮಯದಲ್ಲಿ ಗಮನ ಸೆಳೆದಿದ್ದು ಎಂದರೆ ಅಲ್ಲಿ ಪಾಲಿಸಲಾದ ಬಾಷಾ ನೀತಿ. ಸಂವಿಧಾನದ ಮೂಲಕ ನಾವು ತಿಳಿದುಕೊಂಡಿದ್ದು ಏನು ಅಂದ್ರೆ, ಭಾರತದಲ್ಲಿ ಎಲ್ಲರೂ ಸಮಾನರು ಎಲ್ಲ ಬಾಷೇಗಳೂ ಸಮಾನ ಎಂದು. ಆದರೆ ಕರ್ನಾಟಕದಲ್ಲಿ ಅನುಷ್ಟಾನವಾಗುವ ಯೋಜನೆಗಳಲ್ಲಿ ಈ ನಮ್ಮ ತಿಳುವಳಿಕೆಯನ್ನು ಹುಸಿ ಮಾಡುವ ಎಲ್ಲ ಪ್ರಯತ್ನಗಳು ನಡೆಯುತ್ತಿವೆ. ನಮ್ಮ ಮೆಟ್ರೊದಲ್ಲೂ ಇದನ್ನು ಕಂಡಿದ್ದು ಸುಳ್ಳಲ್ಲ. ಎಂದಿನಂತೆ ಕೇಂದ್ರ ಸರಕಾರ ಕರ್ನಾಟಕದ ಯೋಜನೆಗಳಿಗೆ ನಮ್ಮದೇ ತೆರಿಗೆ ಹಣವನ್ನು ಆರ್ಥಿಕ ಸಹಕಾರದ ಮೂಲಕ ನೀಡುವುದರ ಜೊತೆಗೆ ತನ್ನ ಹುಳುಕು ಬಾಷಾ ನೀತಿಯನ್ನು ನಮ್ಮ ಮೆಟ್ರೊ ಮೂಲಕ ಪ್ರದರ್ಶಿಸಿದೆ.

ಬೆಂಗಳೂರಿಗರಿಗೆ ಮೀಸಲಾಗಿರುವ ಈ ಸೇವೆಯಲ್ಲಿ ವಿನಾಕಾರಣ ಎಲ್ಲೆಡೆ ಹಿಂದಿಯನ್ನು ಬಳಸಲಾಗಿದೆ. ಬೆಂಗಳೂರಿನಲ್ಲಿ ೧% ಕ್ಕಿಂತಲೂ ಕಡಿಮೆಯಿರುವ ಹಿಂದಿ ಬಲ್ಲವರಿಗೆ ತೊಂದರೆ ಆಗಬಾರದು ಎಂಬ ನಿಯಮ ಇಲ್ಲಿ ಪಾಲಿಸಲಾಗಿದೆ. ಬೆಂಗಳೂರಿನಲ್ಲಿರುವ ಹಿಂದಿ ಬಾಷಿಕರ ಸಂಖ್ಯೆಯಷ್ಟೆ ಹೆಚ್ಚು ಕಡಿಮೆ ದಿಲ್ಲಿಯಲ್ಲೂ ಕನ್ನಡ ಬಾಷಿಕರ ಸಂಖ್ಯೆಯಿದೆ. ಈ ಸಂಖ್ಯಾ ಆಧಾರದ ಮೇಲೆ ನೋಡುವುದಾದರೆ, ಬೆಂಗಳೂರಿನ ನಮ್ಮ ಮೆಟ್ರೊದಲ್ಲಿ ಹಿಂದಿಯಲ್ಲಿ ಸೇವೆ ಕೊಡುವುದಾದರೆ ದಿಲ್ಲಿಯಲ್ಲಿನ ಮೆಟ್ರೊದಲ್ಲೂ ಕನ್ನಡದಲ್ಲಿ ಸೇವೆ ಕೊಡಬೇಕು. ಆದರೆ ಭಾರತದ ಬಾಷಾ ನೀತಿ ಪ್ರಕಾರ ಇದು ಸಾದ್ಯವಿಲ್ಲ. ದಿಲ್ಲಿ ಮೆಟ್ರೊದಲ್ಲಿ ಸ್ಥಳೀಯ ಬಾಷೆ ಮತ್ತು ಆಂಗ್ಲ ಬಾಷೆಗೆ ಮಾತ್ರ ಸ್ಥಾನ ಕಲ್ಪಿಸಿದರೆ ಬೆಂಗಳೂರಿನಲ್ಲಿ ಸ್ಥಳೀಯ ಮತ್ತು ಆಂಗ್ಲ ಬಾಷೆ ಜೊತೆಗೆ ಇನ್ನೊಂದು ಬಾಷೆಯನ್ನು ಸ್ಥಳೀಯರ ಮೇಲೆ ಹೇರಲಾಗುತ್ತಿದೆ. ದಿಲ್ಲಿಗೊಂದು ನಿಯಮ ಬೆಂಗಳೂರಿಗೊಂದು ನಿಯಮ ಯಾಕೆ.? ಇಂಥ ಹುಳುಕಿನ ಬಾಷಾ ನೀತಿಯಿಂದ ಒಕ್ಕೂಟ ವ್ಯವಸ್ಥೆಗೆ ಬೆಲೆಯಿಲ್ಲದಂತಾಗಿದೆ. ಎಲ್ಲ ಬಾಶೆಗಳೂ ಸಮಾನ ಎಂಬ ಸಂದೇಶ ಸಾರಬೇಕಾದ ಸರಕಾರಗಳೇ ಇಂದು ತಮ್ಮ ಯೋಜನೆಗಳ ಮೂಲಕ ಸ್ಥಳೀಯ ಬಾಷೆಗಳಿಗಿಂತ ಹಿಂದಿಗೆ ಕೊಂಬು ಜಾಸ್ತಿ ಎಂಬ ಸಂದೇಶ ರವಾನಿಸುತ್ತಿವೆ.

ಮತ್ತಷ್ಟು ಓದು »

29
ಆಕ್ಟೋ

ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ : ಬಣ್ಣದ ಬದುಕು 8 – ಅಸೂಯೆ ತಂದ ಆಡಳಿತ

ಯಕ್ಷಗಾನ ರಂಗದಲ್ಲಿ ಎಲ್ಲೂ ಸಲ್ಲುವ ಯಾವ ವೇಷಕ್ಕೂ ಸೈ ಎನಿಸಿಕೊಳ್ಳುತ್ತಿದ್ದ  ಒಬ್ಬ ಪ್ರಬುದ್ಧ ಹಾಗೂ ಮೇರು ಕಲಾವಿದರಾಗಿದ್ದ  ದಿವಂಗತ ಕುರಿಯ ವಿಠಲ ಶಾಸ್ತ್ರಿಯವರು  ಜನಿಸಿದ್ದು ಕಳೆದ ಶತಮಾನದ 1912ರ ಸೆಪ್ಟೆಂಬರ್ 08ರಂದು. ತಮ್ಮ ವಯಸ್ಸಿನ ನೂರನೇ ಸಂವತ್ಸರದ ಈ ಸಂದರ್ಭದಲ್ಲಿ ಖ್ಯಾತ ಪತ್ರಕರ್ತ ಪದ್ಯಾಣ ಗೋಪಾಲಕೃಷ್ಣ (ಪ. ಗೋ.)ರವರರು ನಿರೂಪಣೆ ಗೈದಿರುವ ಕುರಿಯ  ವಿಠಲ ಶಾಸ್ತ್ರಿಯವರ ಆತ್ಮ ಕಥನ “ಬಣ್ಣದ ಬದುಕು”  ಯಕ್ಷಗಾನ ಅಭಿಮಾನಿಗಳಿಗಾಗಿ ನಿಲುಮೆದಲ್ಲಿ ಪ್ರಕಟವಾಗುತ್ತಿದೆ.
 
ಮಾಡುತ್ತಲಿದ್ದ ಸುಧಾರಣಾ ಪ್ರಯೋಗಗಳನ್ನು ಮೇಳದ ಯಜಮಾನರಾದ ಶ್ರೀ ಕೊರಗಪ್ಪ ಶೆಟ್ಟಿಯವರು ಸ್ವಾಗತಿಸುತ್ತಿದ್ದರು. ಅಂತೆಯೇ, ಪ್ರೇಕ್ಷಕ ವರ್ಗದವರಿಂದಲೂ ಮೆಚ್ಚುಗೆ ಗಳಿಸುತ್ತಿದ್ದೆವು. ಇತರ ಕೆಲವು ತಾಪತ್ರಯಗಳನ್ನು ಸಹಿಸಿಕೊಂಡಾದರೂ, ಕಲಾ ವ್ಯವಸಾಯವನ್ನು ಹುಲುಸಾಗಿ ಮಾಡುತ್ತೇನೆ, ಆಸೆಯ ಕೆಲವು ಬಳ್ಳಿಗಳಿಗಾದರೂ ನೀರೆರೆಯುತ್ತೇನೆ ಎನ್ನುತ್ತಲೇ ವರ್ಷದ ಮುಕ್ಕಾಲು ಭಾಗವನ್ನು ನೂಕಿದೆ.ಮಾತ್ಸರ್ಯದ ಮೊಳಕೆ 
ನಾನು ತಿಳಿದಿದ್ದಂತೆಯೇ, ಕೆಲವೊಂದು ಮಂದಿ ಇತರ ಕಲಾವಿದರ ಮಾತ್ಸರ್ಯ ಬೀಜದ ಮೊಳಕೆಯಾಗಿತ್ತು. ಆದರೆ, ನಾನು ಹೋಗುತ್ತಲಿರುವುದು ಸರಿಯಾದ ದಾರಿ ಎಂಬ ಆತ್ಮವಿಶ್ವಾಸ ನನಗಿತ್ತು. ಹೇಗಾದರೂ ನನ್ನ ಮೇಲೆ ಮತ್ಸರವಿದ್ದರೆ ಅದು ನನ್ನ ಮೇಲಷ್ಟೆ ಪ್ರಯೋಗವಾಗಬೇಕು-ಬೇರಾರನ್ನೂ ಮುಟ್ಟಲಾರದು ಎಂದುಕೊಂಡಿದ್ದೆ.

ಮತ್ತಷ್ಟು ಓದು »