’ಗೌಡಾನಂದ’ದ ಕಾರಣಗಳು ಮತ್ತು………
-ಅರೆಹೊಳೆ ಸದಾಶಿವರಾವ್
ಗಗನಕ್ಕೇರಿದ ಬೆಲೆ, ರಾಜಕಾರಣಿಗಳ ಜೈಲು ಯಾತ್ರೆ, ಕರೆಂಟಿಲ್ಲದೆ ಕತ್ತಲಾಗಿರುವ ಮನೆ, ಅಕಾಲದಲ್ಲಿ ಉಪದ್ರವಕಾರಿಯಾಗಿರುವ ಮಳೆ……..ಈ ಎಲ್ಲದರ ನಡುವೆ ಮತ್ತೆ ಬಂದಿರುವುದು ಹಬ್ಬಗಳ ಸಾಲು ಸಾಲು. ದಸರೆಯನ್ನು ಉಸಿರು ಬಿಗಿ ಹಿಡಿದು ಮಾಡಿಯಾಯ್ತು, ದೀಪಾವಳಿಯನ್ನು ಈ ಸಂದಿಗ್ಧದಲ್ಲಿಯೇ ಆಚರಿಸಿಕೊಳ್ಳುತ್ತಿದ್ದೇವೆ. ಇನ್ನೇನು ನಮ್ಮ ನಾಡಿನ ಮಟ್ಟಿಗೆ ಹೆಮ್ಮೆಯ ಕನ್ನಡ ರಾಜ್ಯೋತ್ಸವವೂ ಇದೆ. ಈ ಎಲ್ಲದರ ನಡುವೆ ನಮ್ಮ ಪರಿಸ್ಥಿತಿ ಏನಾಗಿದೆಯೋ ನೋಡಿ.ಬಂದಿದೆ ಹಬ್ಬಗಳ ಸಾಲು ಸಾಲು
ಜೈಲಿಗೆ ಹೊರಟಿದೆ ನಮ್ಮ ನಾಯಕರ ಸಾಲುಹೀಗೆಂದು ಇಂದಿನ ನಮ್ಮ ರಾಜ್ಯದ ರಾಜಕಾರಣವನ್ನು ವಿವರಿಸಬಹುದೇನೋ. ಬಹುಶ: ಇಂದಿನ ಪರಿಸ್ಥಿತಿ ನೋಡಿದರೆ, ಅತೀ ಶೀಘ್ರದಲ್ಲಿಯೇ ನಮ್ಮ ರಾಜ್ಯ ಸರಕಾರದ ಆಡಳಿತ ಪರಪ್ಪನ ಅಗ್ರಹಾರ ಜೈಲಿನಿಂದಲೇ ಆದರೂ ಆಶ್ಚರ್ಯವಿಲ್ಲ. ಆರೋಪಿ ಎಂದು ಹೆಸರು ಕೇಳಿದಾಕ್ಷಣ ಎಲ್ಲರೂ ಅಪರಾಧಿಗಳೇ ಅಲ್ಲವಾದರೂ, ಈ ಪರಿ ಆರೋಪಿಗಳಾಗುತ್ತಿರುವುದು ನಮ್ಮ ಮಟ್ಟಿಗೆ ಆಶ್ಚರ್ಯ ಮತ್ತು ಅನಪೇಕ್ಷಿತ ಎಂಬುದು ಸುಳ್ಳಲ್ಲ.ಈ ದೀಪಾವಳಿಯನ್ನು ಹಿಂಬಾಲಿಸಿ ಕರ್ನಾಟಕ ರಾಜ್ಯೋತ್ಸವವೂ ಬರುತ್ತಿದೆ. ಕನ್ನಡಿಗರ ಪಾಲಿಗೆ ಇದು ಮತ್ತೊಂದು ದೀಪಾವಳಿ ಆಗುತ್ತಿದ್ದ ದಿನಗಳಿಂದ ಈಗದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯ ಬಿಕರಿಗೆ ಸೀಮಿತವಾಗಿದೆ. ಈ ಸಲ ಕೇವಲ ಐವತ್ತು ಜನರಿಗೆ ಮಾತ್ರ ಪ್ರಶಸ್ತಿ ಕೊಡುವ ತೀರ್ಮಾನ ತನ್ನದು ಎಂದು ಮಾನ್ಯ ಮುಖ್ಯ ಮಂತ್ರಿಗಳು ಹೇಳುತ್ತಿರುವುದು ಸ್ವಲ್ಪ ಮಟ್ಟಿಗೆ ಕಳೆದು ಹೋಗಿರುವ ಪ್ರಶಸ್ತಿಯ ಬೆಲೆ ಹೆಚ್ಚಿಸಿದೆ. ಕಳೆದ ವರ್ಷ ಈ ಪ್ರಶಸ್ತಿಗೂ ವಿಪರೀತ ’ಬೆಲೆ’ ಹೆಚ್ಚದ್ದು, ಅದಕ್ಕಾಗಿ ದಲ್ಲಾಳಿಗಳು ಹುಟ್ಟಿಕೊಂಡಿದ್ದು ಎಲ್ಲವೂ ಸುದ್ದಿಯಾಗಿತ್ತು. ಪ್ರಶಸ್ತಿಯ ಹಣದಲ್ಲಿ ದಲ್ಲಾಳಿಗೆ ಪಾಲು ಹೋಗಿ, ಪ್ರಶಸ್ತಿ ವಿಜೇತರಿಗೆ ಚಿನ್ನದ ನಾಣ್ಯವೇ ಗಟ್ಟಿಯಾಗುತ್ತಿತ್ತು ಎಂಬುದು ಈಗ ಹಳೆ ಸುದ್ದಿ. ಈಗಿನ ಸುದ್ದಿ ಎಂದರೆ, ಈ ಸಲದ ಐವತ್ತು ಪ್ರಶಸ್ತಿಗೆ ಬಂದಿರುವ ಒಟ್ಟೂ ಅರ್ಜಿಗಳು ನಾಲ್ಕು ಸಾವಿರಕ್ಕೂ ಹೆಚ್ಚು!!. ಓಹ್ ಕನ್ನಡಿಗ..! ನೀನೆಷ್ಟು ಪುಣ್ಯವಂತ ಅನಿಸದಿರದೆ?
ಮತ್ತಷ್ಟು ಓದು





