ರಾಷ್ಟ್ರೀಯತೆ ಮತ್ತು ಚುನಾವಣೆ
– ವರುಣ್ ಕುಮಾರ್
ಭಾರತದಲ್ಲಿ ಚುನಾವಣೆಗಳಿಗೇನೂ ಕಮ್ಮಿಯಿಲ್ಲ. ತಳಮಟ್ಟದ ಪಂಚಾಯತ್ ಗಳಿಂದ ಹಿಡಿದು ಲೋಕಸಭೆವರೆಗೂ ನಮ್ಮ ಚುನಾವಣೆಗಳ ಪಟ್ಟಿ ಇಡುತ್ತಾ ಹೋಗಬಹುದು.ಆಡಳಿತವು ಎಲ್ಲರಿಗೂ ಸಿಗಬೇಕೆನ್ನುವ ದೃಷ್ಟಿಯಲ್ಲಿ ಈ ರೀತಿಯ ವ್ಯವಸ್ಥೆಯು ಸೃಷ್ಟಿ ಮಾಡಿರುವುದು ಪ್ರಜಾಪ್ರಭುತ್ವದ ವೈಶಿಷ್ಟತೆಯೇ ಸರಿ. ಚುನಾವಣೆಯಲ್ಲಿ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಹಲವು ರೀತಿಯ ವಿಷಯಗಳು ಅವರ ಬಳಿ ಇಟ್ಟು ಪಕ್ಷಗಳು ಮತಗಳನ್ನು ಯಾಚಿಸುತ್ತವೆ. ಮತದಾರ ಯಾರಿಗೆ ಒಲಿಯುತ್ತಾನೋ ಆ ಪಕ್ಷವು ಆಡಳಿತವನ್ನು ಪಡೆಯುವಲ್ಲಿ ಸಫಲವಾಗುತ್ತದೆ.ಇದರಲ್ಲಿ ಕೆಲ ವಿಷಯಗಳು ಚುನಾವಣೆಗಳ ದಿಕ್ಕನ್ನೇ ಬದಲಿಸುವ ಸಾಧ್ಯತೆಗಳು ಇರುವುದು ವಿಶೇಷ. ೮ ತಿಂಗಳಗಳ ಹಿಂದೆಯಷ್ಟೇ ಅಭೂತಪೂರ್ವವಾಗಿ ಗೆಲುವು ಸಾಧಿಸಿದ ಬಿಜೆಪಿಯು ಇತ್ತೀಚಿಗೆ ನಡೆದ ವಿವಿಧ ಅಸೆಂಬ್ಲಿ ಚುನಾವಣೆಗಳಲ್ಲಿ ತನ್ನ ಬಲವನ್ನು ಕಳೆದುಕೊಳ್ಳುತ್ತಿರುವ ಬಗ್ಗೆ ಒಂದಿಷ್ಟು ಮೆಲುಕು ಹಾಕೋಣ. ಮತ್ತಷ್ಟು ಓದು 
ಅಳಿದ ಮೇಲೆ
ದೇವು ಹನೆಹಳ್ಳಿ,
ಬಂಡೀಮಠ, ಹನೆಹಳ್ಳಿ ಗ್ರಾಮ ಮತ್ತು ಅಂಚೆ,
ವಯಾ ಬಾರಕೂರು, ಉಡುಪಿ ಜಿಲ್ಲೆ – 576 210.
ಕೋವಿಡ್-19 ಸಂಕಷ್ಟದ ಹೊತ್ತಲ್ಲಿ ಬಹುಚರ್ಚಿತ ವಿಷಯಗಳಲ್ಲಿ ಒಂದು ಶವಸಂಸ್ಕಾರ. ಶವಕ್ಕೆ ಇರುವುದು ಒಂದೇ ಮುಖವಾದರೆ ಪಾರ್ಥಿವ ಶರೀರದ ನಿವೃತ್ತಿಗೆ ಮತ್ತು ಸಮಸ್ಯೆಗೆ ಹಲವು ಮುಖಗಳು. ಒಮ್ಮೆಲೇ ಹೆಚ್ಚಾದ ಶವಗಳ ಸಂಖ್ಯೆ ಒಂದು ಸಮಸ್ಯೆಯಾದರೆ ಕೋವಿಡ್-19 ರೋಗಿಗಳ ಶವವು `ಭಯಾನಕ ರೋಗಗಳ ಕೂಪ’ ಎಂದು ತಿಳಿದದ್ದು ಇನ್ನೊಂದು ಸಮಸ್ಯೆ. ಈ ವಿದ್ಯಮಾನ ನಾವು ತಿಳಿದ ಮತ್ತು ಇದುವರೆಗೆ ಪಾಲಿಸಿಕೊಂಡ ಬಂದ ಶವಗಳ ಅಂತಿಮ ವಿಲೇವಾರಿ ಮತ್ತು ಸಂಸ್ಕಾರಗಳ ರೀತಿ-ನೀತಿ-ನಿಯಮಗಳನ್ನು ಮಣ್ಣುಪಾಲು ಮಾಡಿತು. ಈ ಹೊತ್ತಿನಲ್ಲಿ ಜಗತ್ತಿನಾದ್ಯಂತ ಕೋವಿಡ್-19 ಶವ ವಿಲೇವಾರಿಯ ನೂತನ ವಿಲೇವಾರಿ ರೀತಿ, ಕ್ರಮ, ಸಿದ್ಧತೆ, ಕಾಮಗಾರಿಗಳ ಕುರಿತಂತೆ ಬರಹ, ಚಿತ್ರ, ಚರ್ಚೆ, ವೀಡಿಯೋಗಳು ನಡೆದವು, ಹರಿದಾಡಿದವು. ಸ್ಪೈನ್ ದೇಶದಲ್ಲಿ ಹೊಸ ವಿನ್ಯಾಸ, ಕಚ್ಚಾವಸ್ತುಗಳ ಶವಪೆಟ್ಟಿಗೆ ತಯಾರಿಯ ಅರ್ಧ ಗಂಟೆಯ ಟಿ.ವಿ ರೂಪಕ, ಬ್ರೆಜಿಲ್‍ನಲ್ಲಿ ಹತ್ತಾರು ಎಕರೆ ಕಾಡನ್ನು ಸವರಿ ಮಾಡಿದ ನೂರಾರು-ಸಾವಿರಾರು ಶವಗುಂಡಿಗಳ ಡ್ರೋನ್ ನೋಟದ ವೀಡಿಯೋಗಳಿಂದ ತೊಡಗಿ ಇಲ್ಲಿಯೇ ಸಮೀಪದ ಬಳ್ಳಾರಿಯಲ್ಲಿ ಶವವನ್ನು ಎಳೆದು ದೂಡಿ ಗುಂಡಿಗೆ ನೂಕಿ `ಎದ್ದೆವೋ ಬಿದ್ದೆವೋ ಕೆಟ್ಟೆವೋ’ ಎಂದು ಭಯದಿಂದ ಓಡಿದ (ಹೆಗಲ ಮೇಲೆ ಚಟ್ಟವಿರದ) ನಾಲ್ವರು ಚಟ್ಟೋಪಾಧ್ಯಾಯರ ವೀಡಿಯೋದ ತನಕ ನೂರಾರು ಸಾವಿರಾರು ಬಂದವು.
ಈ ಹೊತ್ತಲ್ಲಿ ಶವಸಂಸ್ಕಾರ ಹೇಗೆ ನಡೆದರೆ ಉತ್ತಮ ಎಂಬ ಚರ್ಚೆಗಳೂ ವ್ಯಾಪಕವಾಗಿ ನಡೆದವು. ಶವದ ಘನತೆಯಿಂದ ತೊಡಗಿ ಶವಹೊರುವವರ ಆರೋಗ್ಯದ ತನಕ ಎಲ್ಲ ವಿಷಯಗಳು ಕೂಲಂಕಷವಾಗಿ ಚರ್ಚಿತವಾದವು. (ದೇಹವನ್ನು ಕಡೆದು ವಿದೇಹ ಹುಟ್ಟಿಕೊಳ್ಳಲಿಲ್ಲ!) ಅಂತಹ ಹೊತ್ತಲ್ಲಿ ನನ್ನೋರ್ವ ಕಿರಿಯ ಮಿತ್ರ ಕಳುಹಿಸಿದ ಬರಹ ಹೀಗಿತ್ತು: ಮತ್ತಷ್ಟು ಓದು 
ಆನ್‌ಲೈನ್ ಗೇಮುಗಳೆಂಬ ಜೂಜಾಟಕ್ಕೆ ನಿಷೇಧ ಯಾವಾಗ ?
ಗೊಡಾ ಹೈ ಮೈದಾನ್ ಹೈ ಅನ್ನುವುದು ಹಿಂದಿಯ ಒಂದು ಅತ್ಯಂತ ಪ್ರಚಲಿತ ನಾಣ್ಣುಡಿ. ಭಾರತದ ಡಿಜಿಟಲ್ ಜಗತ್ತಿಗೆ ಇದು ಇವತ್ತು ಅಕ್ಷರಶಃ ಹೇಳಿ ಮಾಡಿಸಿದ ಹಾಗಿದೆ. ಭಾರತ ೨೦೧೪ರ ನಂತರ ಕ್ಷಿಪ್ರಗತಿಯ ಡಿಜಿಟಲ್ ಕ್ರಾಂತಿಯೊಂದನ್ನು ಕಂಡಿತು. ಕೇಂದ್ರ ಸರ್ಕಾರ ಎಲ್ಲಾ ಕ್ಷೇತ್ರದಲ್ಲಿ ಡಿಜಿಟಲ್ ಕ್ರಾಂತಿಗೆ ಇಂಬು ಕೊಟ್ಟಿತು. ಅದೇ ಕಾರಣಕ್ಕೆ ಇವತ್ತು ವಿತ್ತೀಯ ಕ್ಷೇತ್ರದಲ್ಲಿ ಜನಸಾಮಾನ್ಯರ ಕೈಯಲ್ಲಿ ಸುಮಾರು ೫ ವರ್ಷಗಳ ಹಿಂದೆ ಯಾರೂ ಕೂಡ ಊಹಿಸಲೂ ಸಾಧ್ಯವಾಗದ ಅತ್ಯಂತ ಪ್ರಭಾವಿ ತಂತ್ರಜ್ಞಾನವೊಂದು ಸಿಕ್ಕಿದೆ. ಜನಸಾಮನ್ಯರು UPI ಮೂಲಕ ಮೆಸೇಜ್ ಕಳಿಸಿದಷ್ಟೆ ಸುಲಭವಾಗಿ ಮೊಬೈಲುಗಳಿಂದ ಹಣ ಕಳುಹಿಸಬಹುದು. ಇದು ಡಿಜಿಟಲ್ ಕ್ರಾಂತಿಯ ಒಂದು ಮುಖವಾದರೆ ಇದರ ಇನ್ನೊಂದು ಮುಖ ಕರಾಳವಾಗಿದೆ. ಅದಕ್ಕೆ ಕಡಿವಾಣ ಹಾಕುವವರು ಯಾರು? ಗೋಡಾ, ಮೈದಾನ್, ಮತ್ತದರ ನಾಗಾಲೋಟ!ಸ್ವ ರಕ್ಷಣೆಯಿಂದ ರಾಷ್ಟ್ರರಕ್ಷಣೆ: ರಕ್ಷಾಬಂಧನ ಸಂದೇಶ
ಶ್ರಾವಣ ಹುಣ್ಣಿಮೆ ಮತ್ತೆ ಬಂದಿದೆ. ಶ್ರಾವಣ ಹುಣ್ಣಿಮೆಯಂದು ಆಚರಿಸುವ ರಕ್ಷಾಬಂಧನ ಹಬ್ಬಕ್ಕೆ ಅದರದೇ ಆದ ಪೌರಾಣಿಕ, ಐತಿಹಾಸಿಕ ಹಿನ್ನೆಲೆಯಿದೆ. ಓರ್ವ ಜವಾಬ್ದಾರಿಯುತ ಸಹೋದರ ತನ್ನ ಸಹೋದರಿಯನ್ನು ರಕ್ಷಣೆ ಮಾಡಬೇಕು ಎನ್ನುವ ಆಶಯದಿಂದ ಹಿಡಿದು ಸ್ವಯಂಸೇವಕರು ಪರಸ್ಪರ ರಕ್ಷೆಯನ್ನು ಕಟ್ಟಿಕೊಂಡು ರಾಷ್ಟ್ರ ರಕ್ಷಣೆಗೈಯುವ ಸಂಕಲ್ಪದ ಉದಾತ್ತ ಧ್ಯೇಯ ಆಶಯದವರೆಗೆ ರಕ್ಷಾಬಂಧನವನ್ನು ವಿವಿಧ ರೀತಿಯಲ್ಲಿ ವಿಶ್ವದಾದ್ಯಂತ ಆಚರಿಸುತ್ತೇವೆ. ಇಂತಿಪ್ಪ ರಕ್ಷಾಬಂಧನ ಮತ್ತೆ ಬಂದಿದೆ. ಕಟ್ಟಲು ಬಗೆಬಗೆಯ ರಕ್ಷೆಗಳು ಮಾರುಕಟ್ಟೆಗೆ ಮಿತವಾಗಿ ಬಂದಿದೆ.ಯುಎಇ ನಿಜಕ್ಕೂ ಅಷ್ಟೊಂದು ಅಸಹಿಷ್ಣು ದೇಶವೇ?
– ರಾಘವೇಂದ್ರ ಎಮ್ ಸುಬ್ರಹ್ಮಣ್ಯ
ಕಳೆದೆರಡು ವಾರದಿಂದ ಗಲ್ಫ್ ದೇಶಗಳಲ್ಲಿರುವ ಹಿಂದೂಗಳ ಕೆಲಸಕ್ಕೆ ಕುತ್ತು ತರುವ ವ್ಯವಸ್ಥಿತ ಸಂಚುಗಳು ನಡೆದಿವೆ. ದೆಹಲಿಯ ತಬ್ಲೀಗೀ ಜಮಾತ್’ನವರ ವರ್ತನೆಯನ್ನು ಖಂಡಿಸಿ ಏನನ್ನಾದರೂ ಬರೆದರೆ ಅದೇ ದೊಡ್ಡ ತಪ್ಪು ಎಂಬಂತೆ ಬಿಂಬಿಸಿ, ಪೋಲಿಸರಿಗೆ ದೂರು ನೀಡುವ ಕೆಲಸ ನಡೆದಿದೆ. ಹಾಗಾದರೆ ಯುಎಇಯಲ್ಲಿ ಅಷ್ಟೆಲ್ಲಾ ಸುಲಭಕ್ಕೆ ಯಾರನ್ನಾದರೂ ಅರೆಸ್ಟ್ ಮಾಡಿಸಬಹುದೇ? ಇಸ್ಲಾಂ ಬಗ್ಗೆ ಏನೂ ಕೆಟ್ಟದಾಗಿ ಬರೆಯದೇ, ಭಾರತದ ಕೆಲ ಮುಸ್ಲಿಮರ ತಪ್ಪುಗಳ ಬಗ್ಗೆ ಬರೆದರೆ ಅದು ಶಿಕ್ಷಾರ್ಹ ಅಪರಾಧವೇ?
ಹೆಚ್ಚಿನವರಿಗೆ ಅರಬ್ ರಾಷ್ಟ್ರಗಳೆಂದರೆ ಬಹಳಷ್ಟು ತಪ್ಪು ಅಭಿಪ್ರಾಯಗಳಿವೆ. ತಪ್ಪು ಮಾಡಿದರೆ ಸಾರ್ವಜನಿಕವಾಗಿ ಛಡಿಯೇಟು ಬೀಳುತ್ತದೆ, ಕೈ ಕಾಲು ತಲೆ ಕಡಿಯುತ್ತಾರೆ ಎಂಬೆಲ್ಲಾ ಅನಿಸಿಕೆಗಳಿವೆ. ಆದರೆ ಈ ಎಲ್ಲಾ ಹೆಚ್ಚಿನ ಅಭಿಪ್ರಾಯಗಳು ಬಂದಿರುವುದು ಸೌದಿ ಅರೇಬಿಯಾದಿಂದ. ಯಾಕೆಂದರೆ ಇವೆಲ್ಲಾ ಹೆಚ್ಚಾಗಿ ನಡೆಯುವುದು ಅಲ್ಲಿ ಮಾತ್ರ. ಆದರೆ ಎಲ್ಲಾ ಅರಬ್ ದೇಶಗಳೂ ಹೀಗಿಲ್ಲ. ಇಲ್ಲಿ ಇಸ್ಲಾಂ ನಿಂದನೆಯನ್ನು ಯಾರೂ ಸಹಿಸುವುದಿಲ್ಲವಾದರೂ, ಒಮಾನ್, ಬಹರೈನ್ ಮತ್ತು ಯುಎಇ ದೇಶಗಳು ಸಹಿಷ್ಣುತೆಯಲ್ಲಿ ಹೊಸ ಅಧ್ಯಾಯಗಳನ್ನೇ ಬರೆದಿವೆ. ಮತ್ತಷ್ಟು ಓದು 
“ರೋಟಿ ಕಪಡಾ ಔರ್ ಮಕಾನ್ ನಿಂದ ಹೊಸ ಆಶೋತ್ತರದತ್ತ ಯುವ ಸಮೂಹ”
– ಪ್ರೊ. ಪುನೀತ್‌ರಾಜ್ ಕೆ. ಎನ್
ಜೈನ್ ಯೂನಿವರ್ಸಿಟಿ
ವಿಶ್ವದ ಐದನೇ ಒಂದರಷ್ಟು ಯುವಜನರು ಭಾರತದಲ್ಲಿದ್ದಾರೆ. ದೇಶದ ಅರ್ಧದಷ್ಟು ಜನರ ವಯೋಮಾನ 25 ವರ್ಷಕ್ಕಿಂತ ಕಡಿಮೆ ಇದೆ. ದೇಶ ಮುನ್ನಡೆ ಸಾಧಿಸಬೇಕು ಎಂದರೆ ಈ ಯುವಜನರ ಆಶೋತ್ತರಗಳನ್ನು ಈಡೇರಿಸುವುದು ಬಹಳ ಮುಖ್ಯವಾದ ಸಂಗತಿ. ಕೈಬೆರಳ ತುದಿಯಲ್ಲಿ ಸಿಗುತ್ತಿರುವ ತಂತ್ರಜ್ಞಾನದ ಪರಿಣಾಮವಾಗಿ ಯುವಜನರ ಆಶೋತ್ತರಗಳಲ್ಲಿ ಗಣನೀಯ ಬದಲಾವಣೆ ಆಗಿರುವುದು ಗೋಚರಿಸುತ್ತದೆ. ವಿಶ್ವಾದಾದ್ಯಂತ ಏನಾಗುತ್ತಿದೆ ಎಂಬುದನ್ನು ಅರಿಯುವುದರ ಮೂಲಕ ಜೀವನದ ಬಗ್ಗೆ ತಮ್ಮದೇ ಆದ ವಿಶ್ವನೋಟವನ್ನು ಬೆಳೆಸಿಕೊಳ್ಳಲು ತಂತ್ರಜ್ಞಾನ ಸಹಕರಿಸುತ್ತ್ತಿದೆ. ಇತ್ತೀಚಿನ ವರ್ಷಗಳಲ್ಲಿ “ಸಫಲತೆ” ಎಂಬ ಅಂಶವೇ ಸಾಕಷ್ಟು ಬದಲಾವಣೆ ಕಂಡಿರುವುದನ್ನು ನಾವು ನೋಡಬಹುದು. ಇಂದಿನ ಯುವಕರು ಧೈರ್ಯಶಾಲಿಗಳು, ನಿರ್ಧಾರ ಕೈಗೊಳ್ಳಲು ಹಿಂಜರಿಯದ, ಖಂಡಿಸುವ, ಮುಕ್ತವಾಗಿ ಟೀಕಿಸುವ, ತಮಗೆ ಯಾವುದು ಉತ್ತಮ ಎಂಬುದನ್ನು ಅರಿಯುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ 20 ವರ್ಷಗಳ ಮುನ್ನ ಪರಿಸ್ಥಿತಿ ಹೀಗೆ ಇರಲಿಲ್ಲ. ಅದು ಐಐಟಿ/ಐಐಎಂಗಳಿಂದ ಪದವಿ ಪಡೆಯುವುದು, ಅಧಿಕಾರಿಯಾಗಿ ನೇಮಕವಾಗುವುದು, ಉತ್ತಮ ಸಂಬಳ ಹೊಂದಿರುವ ಸುರಕ್ಷಿತ ಕೆಲಸ ಅರಸುವುದು, ವಿದೇಶಗಳಲ್ಲಿರಬಹುದಾದ ಕೆಲಸದ ಅವಕಾಶಗಳತ್ತ ಆಕರ್ಷಣೆಗಳೇ ಸಫಲತೆಗೆ ಮಾನದಂಡವಾಗಿದ್ದವು. ಇದಕ್ಕೆ ತದ್ವಿರುದ್ಧವಾಗಿ, ಕುಟುಂಬ ಆಡಳಿತಕ್ಕೆ ಸಮಾನವಾಗಿದ್ದ ಹಾಗೂ ಸಫಲತೆಯ ಪ್ರಮಾಣ ಕಡಿಮೆಯಿದ್ದ ಕ್ರೀಡೆ, ಸಿನಿಮಾ ಹಾಗೂ ರಾಜಕೀಯ ಕ್ಷೇತ್ರಗಳು ಬಹುತೇಕಯುವಕ/ಯುವತಿಯರ ಆಯ್ಕೆಯೇ ಆಗುತ್ತಿರಲಿಲ್ಲ. ಕ್ರೀಡಾತಾರೆಯ ಪುತ್ರನೊಬ್ಬ ತನ್ನ ಕ್ರೀಡಾ ಸಾಮರ್ಥ್ಯಕ್ಕಿಂತಲೂ ತನ್ನ ತಂದೆಯ ಪ್ರಭಾವದ ಕಾರಣಕ್ಕೆ ಕ್ರೀಡಾಪಟುವಾಗುವ ಅವಕಾಶ ಹೊಂದಿರುತ್ತಿದ್ದ. ಸಿನಿಮಾತಾರೆಯ ಪುತ್ರನನ್ನು ತನ್ನ ಪ್ರಭಾವದ ಕಾರಣದಿಂದಲೇ ಬೆಳ್ಳಿತೆರೆಗೆ ಕರೆತರುವ ಹಾಗೂ ರಾಜಕಾರಣಿಯ ಪ್ರಭಾವದಿಂದಲೇ ತನ್ನ ಪುತ್ರನನ್ನು ರಾಜಕೀಯಕ್ಕೆ ಕರೆತರುತ್ತಿದ್ದರು. ವಿಫಲವಾಗುವ ಹಾಗೂ ತಿರಸ್ಕಾರಕ್ಕೆ ಒಳಗಾಗುವ ಅಪಾಯಕ್ಕೆ ಹೆದರುತ್ತಿದ್ದ ಬಹುಪಾಲು ಯುವಕರು ಈ ಕ್ಷೇತ್ರಗಳಿಂದ ದೂರವೇ ಉಳಿಯುತ್ತಿದ್ದರು. ನಂತರದ ದಿನಗಳಲ್ಲಿ, ಅಷ್ಟೇನೂ ಉತ್ಸಾಹದಿಂದ ಸ್ವಾಗತಿಸದ ಪರಿಸ್ಥಿತಿ ಬಂದಿತು. ಘಟಾನುಘಟಿಗಳನ್ನು ದಾಟಿ ಈ ಬಾಗಿಲುಗಳನ್ನು ದಾಟಿ ಒಳಹೋಗುವುದು ಅಸಾಧ್ಯ ಎಂಬಷ್ಟೇ ಕಠಿಣ ಕೆಲಸವಾಗಿತ್ತು. ಈ ಪ್ರವಾಹದ ವಿರುದ್ಧ ಈಜಿ ದಡ ಸೇರಿದವರು ಬೆರಳೆಣಿಕೆ ಮಂದಿ ಮಾತ್ರ. ಶಾರೂಖ್‍ಖಾನ್, ಅಕ್ಷಯಕುಮಾರ್‌ನಂತಹ ಕೆಲ ಸಿನಿಮಾ ಸ್ಟಾರ್‍ಗಳು ಹಾಗೂ ಕೆಲವೇ ಕ್ರೀಡಾಪಟುಗಳು ಮಾತ್ರವೇ ಎಲ್ಲ ಅಡೆತಡೆಗಳನ್ನು ದಾಟಿ ಸಫಲರಾಗಲು ಸಾಧ್ಯವಾಯಿತೇ ಹೊರತು ಬಹುತೇಕ ಯುವಕರು ಇದು ತಮ್ಮ ಕೈಲಾಗುವ ಕೆಲಸವಲ್ಲ ಎಂದುಕೊಂಡು ಈ ಕ್ಷೇತ್ರಗಳಿಂದ ದೂರವುಳಿಯುತ್ತಿದ್ದರು. ಮತ್ತಷ್ಟು ಓದು 
ಕುಮಾರರಾಮ
– ವರುಣ್ ಕುಮಾರ್
(ವಾರಕ್ಕೊಂದು ವೀರರು)
ಭಾರತದ ಹಿಂದೂ ಸಾಮ್ರಾಟ ಎಂದ ಕೂಡಲೇ ನಮ್ಮ ಸ್ಮೃತಿಪಟಲದಲ್ಲಿ ಶಿವಾಜಿ ಮಹಾರಾಜರ ಹೆಸರು ಬರುತ್ತದೆ. ಶಿವಾಜಿ ಮಹಾರಾಜರ ಆಡಳಿತ ವೈಖರಿ, ಮೊಘಲರ ದಾಳಿಯನ್ನು ಹಿಮ್ಮೆಟ್ಟಿಸಿದ ರೀತಿ, ಅವರ ರಾಜಕೀಯ ತಂತ್ರಗಾರಿಕೆಗಳು, ಎಂಥವರಿಗೂ ರೋಮಾಂಚನವನ್ನು ಉಂಟು ಮಾಡುತ್ತದೆ. ತನ್ನ ಅಲ್ಪಾವಧಿಯಲ್ಲಿ ಮೊಘಲರ ಸಾಮ್ರಾಜ್ಯವನ್ನು ಕೇವಲ ಉತ್ತರ ಭಾರತಕ್ಕೆ ಸೀಮಿತಗೊಳಿಸುವಲ್ಲಿ ಶಿವಾಜಿಯ ಪಾತ್ರ ಅಪಾರವಾದುದು. ಆದರೆ ಶಿವಾಜಿಯ ಪೂರ್ವ ಕಾಲದಲ್ಲಿ ದಕ್ಷಿಣ ಪ್ರಾಂತ್ಯಕ್ಕೆ ಮೊಘಲರ ದಾಳಿಯನ್ನು ಹಿಮ್ಮಟ್ಟಿಸುವಲ್ಲಿ ಯುವ ಅರಸ ಕುಮಾರರಾಮನ ಪಾತ್ರ ಮಹತ್ವದ್ದು. ಹಿಂದೂ ಸಾಮ್ರಾಜ್ಯಕ್ಕೆ ಭದ್ರವಾದ ಬುನಾದಿಯನ್ನು ಕೊಟ್ಟು ಮುಂದಿನ ೨೦೦ ವರ್ಷಗಳ ಕಾಲ ಅವರ ವಂಶಜರು ದಕ್ಷಿಣ ಪ್ರಾಂತ್ಯದಲ್ಲಿ ಹಿಂದೂ ಸಾಮ್ರಾಜ್ಯವನ್ನು ಪುನರುತ್ಥಾನಗೊಳಿಸಿದರು. ಮತ್ತಷ್ಟು ಓದು 
ಕೇರಳ ವರ್ಮ ಪಳಸಿ ರಾಜ.
– ವರುಣ್ ಕುಮಾರ್
(ವಾರಕ್ಕೊಂದು ವೀರರು)
೧೭೯೭, ಕೇರಳದ ವಯನಾಡಿನ ಪೆರಿಯಪಾಸ್ ಎಂಬ ಪ್ರದೇಶವನ್ನು ಬ್ರಿಟೀಷ್ ಕರ್ನಲ್ ಡೋ ಮತ್ತು ತುಕಡಿಯು ಹತೋಟಿಗೆ ತೆಗೆದುಕೊಳ್ಳುವ ಉದ್ದೇಶದಿಂದ ಕಾಡಿನ ಮಧ್ಯೆ ಪಯಣವನ್ನು ಮುಂದುವರೆಸಿದರು. ಆದರೆ ಅಂತಹ ದಟ್ಟ ಅರಣ್ಯವಾದಲ್ಲಿ ಒಂದು ಸಣ್ಣ ಶಬ್ದ ಕೇಳಿ ಬಂದರೂ ಎಂತಹವರ ಎದೆಯನ್ನು ಒಂದು ಕ್ಷಣ ನಡುಗಿಸದೇ ಬಿಡದು. ಅಂತಹ ಭಯ ಕರ್ನಲ್ ಡೋ ಅವನಲ್ಲಿಯೂ ಇತ್ತು. ಆದರೆ ಅದಕ್ಕಿಂತ ಹೆಚ್ಚಾಗಿ ಕೇರಳದ ಸಿಂಹದ ಬಗ್ಗೆ ಭಯವಿತ್ತು. ಇಂತಹ ಭಯದಲ್ಲಿ ಮುಂದುವರೆಯುತ್ತಿರುವಾಗ ಅನಿರೀಕ್ಷಿತವಾದ ದಾಳಿ ತನ್ನ ತಂಡದ ಮೇಲೆ ಶುರುವಾಯಿತು. ನೋಡನೋಡುತ್ತಿದ್ದಂತೆಯೇ ನೂರಕ್ಕೂ ಅಧಿಕ ತನ್ನ ಸೈನಿಕರನ್ನು ಕರ್ನಲ್ ಕಳೆದುಕೊಂಡನು. ಈ ಭಯಂಕರ ಕಾದಾಟದಲ್ಲಿ ೩೦೦ಕ್ಕೂ ಮಿಕ್ಕಿ ಸೈನಿಕರು ಗಾಯಾಳಾದರು. ದಾಳಿ ನಡೆಸಿದ ತಂಡ ಬ್ರಿಟೀಷರಿಗೆ ದಾಳಿ ಎಲ್ಲಿಂದ ನಡೆಯುತ್ತಿದೆ ಎಂಬ ಸಣ್ಣ ಊಹೆಯೂ ಸಿಗದ ರೀತಿಯಲ್ಲಿ ವ್ಯವಸ್ಥಿತವಾಗಿ ಯೋಜನೆಯನ್ನು ರೂಪಿಸಿದ್ದರು. ದೇಶಾದ್ಯಂತ ಆನೆ ನಡೆದಿದ್ದೇ ಹಾದಿ ಎಂಬಂತೆ ಮೆರೆಯುತ್ತಿದ್ದ ಬ್ರಿಟೀಷ್ ಸಾಮ್ರಾಜ್ಯಕ್ಕೆ ದೊರೆತ ದೊಡ್ಡ ಮರ್ಮಾಘಾತವಾಗಿತ್ತು. ಈ ರೀತಿ ಗೆರಿಲ್ಲಾ ಮಾದರಿ ದಾಳಿಯನ್ನು ರೂಪಿಸಿ ಬ್ರಿಟೀಷರ ಬೆನ್ನೆಲುಬಲ್ಲಿ ಚಳುಕು ಹುಟ್ಟಿಸಿದ ವೀರ ಕೇರಳದ ಸಿಂಹ ಕೇರಳ ವರ್ಮ ಪಳಸಿ ರಾಜ. ಮತ್ತಷ್ಟು ಓದು 
ನೋಡಿ ಸ್ವಾಮಿ .. ನಾವಿರೋದು ಹೀಗೆ.. !!
- ಸುಜಿತ್ ಕುಮಾರ್
ಮೊನ್ನೆ ಆ ದೃಶ್ಯಗಳನ್ನು ನೋಡಿ ಯಾಕೋ ನಮ್ಮ ಶಂಕರ್ ನಾಗ್ ನೆನಪಾದ್ರು. ಅದು ಶಂಕರ್ ನಾಗ್ ಅನ್ನೋದಕ್ಕಿಂತ ಶಂಕರ್ ನಾಗ್ ಅಭಿನಯದ ‘ನೋಡಿ ಸ್ವಾಮಿ ನಾವಿರೋದೇ ಹೀಗೆ’ ಚಿತ್ರದ ಟೈಟಲ್ ಹಾಡು ನೆನಪಾಯಿತು ಎನ್ನಬಹುದು. ನಗರದ ಗಲ್ಲಿಮೂಲೆಗಲ್ಲಿ ತನ್ನ MAT ಬೈಕಿನ ಮೇಲೆ ಕೂತು ಹಾಡುತ್ತಾ ಸಾಗುವ ಚಿತ್ರದ ದೃಶ್ಯದ ತುಣುಕು, ದಿನ ಬೆಳಗಾದರೆ ಬೆಳ್ಳನೆಯ ಬಟ್ಟೆಗಳನ್ನು ತೊಟ್ಟು ‘ನಾನೇ ಸಾಚಾ ಆತ ಮಾತ್ರ ನೀಚ’ ಎಂಬಂತೆ ಎಲ್ಲೆಂದರಲ್ಲಿ ಬೈಯುವ ಭಾಷಣಗಳನ್ನು ಮಾಡುತ್ತಾ ಓಟಿಗಾಗಿ ಊರೂರು ಸುತ್ತುತ್ತಾ ಕೊನೆಗೆ ಅಪ್ಪಿ ತಪ್ಪಿ ಆತನೇ ಎದುರಿಗೆ ಪ್ರತ್ಯಕ್ಷವಾದರೆ ‘ಹಿಂದಿ ಚೀನೀ ಬಾಯಿ ಬಾಯಿ’ ಎಂಬುವಂತೆ ತಬ್ಬಿಕೊಂಡು ಮುತ್ತಿಡುವುದೊಂದೇ ಬಾಕಿ ಏನೋ ಎಂಬ ಧಾಟಿಯಲ್ಲಿ ನಟಿಸುತ್ತಾ ನಿಲ್ಲುವ ರಾಜಕಾರಣಿಗಳನ್ನು ನೆನೆಪಿಸುತ್ತಿತ್ತು. ಅವರುಗಳ ಹಿಂದೆಯೇ ನಮ್ಮ ಶಂಕರ್ ಗುರು ‘ನೋಡಿ ಸ್ವಾಮಿ ಇವ್ರ್ ಇರೋದೇ ಹೀಗೆ’ ಎಂದು ಹಾಡಿದಂತೆ ಭಾಸವವಾಗುತ್ತಲಿತ್ತು. ನಿಂತ ನೆರಳಿಗೆ ಆಗದ ಮಾಜಿ ಸಿಎಮ್ ಗಳಿಬ್ಬರು ವೇದಿಕೆಯೊಂದರ ಮೇಲೆ ಕೈ ಕೈ ಕುಲುಕುತ್ತಾ ‘ಪಾಲಿಟಿಕ್ಸ್ ಅಪಾರ್ಟ್, ನಾವಿಬ್ಬರು ಅತ್ಯುತ್ತಮ ಸ್ನೇಹಿತರು’ ಎಂದಾಗ ನೆರೆದಿದ್ದ ನೂರಾರು ಅಭಿಮಾನಿಗಳು ತಲೆಯನ್ನು ಕೆರೆದುಕೊಳ್ಳುತ್ತಾ ಒಬ್ಬರನ್ನೊಬ್ಬರು ಮಿಕ ಮಿಕ ನೋಡತೊಡಗಿದಂತೂ ಸುಳ್ಳಲ್ಲ. ರಾಜ್ಯದ ಹಿರಿಯ ರಾಜಕಾರಣಿಗಳಾಗಿ ಅಂತವರ ಬಾಯಿಂದ ಇಂಥ ಹಿರಿಯ ಮಾತುಗಳು ಬರುವುದು ತಪ್ಪೇನಿಲ್ಲ. We Should Appreciate that. ಆದರೆ ಇಂದು ಹೀಗಂದು ನಾಳೆ ಮತ್ತದೇ ಮೈ ಮೈ.. ತು ತು .. ಎಂದು ಬೆಂಕಿಕಾರುವ ಮಾತುಗಳಾದರು ಏತಕ್ಕೆ ಸ್ವಾಮಿ? ಮಿಗಿಲಾಗಿ ಇಂತಹ ಪೊಳ್ಳು ಮಾತುಗಳ ಸರದಾರರಾಗಿ ಅವರುಗಳಿಗೇ ಇರದ ವೈರತ್ವವನ್ನು ಒಬ್ಬ ಕಾಮನ್ ಸಿಟಿಸನ್ ಆಗಿ ನಾವ್ಯಕ್ಕೆ ಕಟ್ಟಿಕೊಳ್ಳಬೇಕು ಹೇಳಿ? ಮತ್ತಷ್ಟು ಓದು 
ಕಾಲು ಶತಮಾನ ಜನಮಾನಸವನ್ನು ಆಳಿದ ಕತೆಯೊಂದರ ಕತೆ!
– ಸುಜಿತ್ ಕುಮಾರ್
ಭಾರತೀಯರ ಸಿನಿಮಾ ಕ್ರೆಝೇ ಅಂತಹದ್ದು. ಜನಜೀವನದ ವಿವಿಧ ಸ್ತರಗಳಲ್ಲಿ ಸಿಕ್ಕಾಪಟ್ಟೆ ಹಾಸುಹೊಕ್ಕಿರುವ ಈ ಸಿನಿಮಾ ಎಂಬ ಮಾಯೆ ಒಂಥರ ಊಟಕ್ಕೆ ಬೇಕಾದ ಉಪ್ಪಿನಕ್ಕಾಯಿಯಂತೆ. ಉಪ್ಪಿನಕ್ಕಾಯಿ ಇಲ್ಲದೆಯೇ ಊಟ ಮಾಡಬಹುದಾದರೂ ನಮ್ಮಲ್ಲಿ ಕೆಲವೆಡೆ ಅದೇ ಊಟವಾಗಿಬಿಡುತ್ತದೆ! ಜೀವನದ ಅಷ್ಟೂ ಸಂಕಷ್ಟಗಳಿಗೆ ಆಧ್ಯಾತ್ಮದ ಮೊರೆ ಹೋಗುವ ಗುಂಪು ಒಂದೆಡೆಯಾದರೆ ಅದಕ್ಕಿಂತಲೂ ನೂರು ಪಟ್ಟು ದೊಡ್ಡ ಗುಂಪು ತಮ್ಮ ತಮ್ಮ ಕಷ್ಟ ದುಃಖಗಳಿಗೆ ಆ ಸಿನಿಮಾಗಳ ಹಿಂದೆ ಬೀಳುವುದನ್ನು ಇಲ್ಲಿ ಅಲ್ಲಗೆಳೆಯಲಾಗುವುದಿಲ್ಲ. ಅದ್ಯಾವುದೋ ಕ್ರಿಸ್ತ ಪೂರ್ವ ಜಮಾನದಲ್ಲಿ ಕೈಕೊಟ್ಟ ಹುಡುಗಿಯ ನೆನಪಲ್ಲಿ ಮೀಯಲು ಅಥವಾ ಗುಡುಗು ಸಿಡಿಲುಗಳ ಆರ್ಭಟದ ನಡುವೆಯೂ ಕಿಲೋಮೀಟರ್ಗಟ್ಟಲೆ ದೂರ ನಿಂತು ಪ್ರೀತಿ ನಿವೇದನೆ ಮಾಡುವ ಮ್ಯಾಜಿಕನ್ನು ಕಂಡು ಬೆರಗಾಗಲು ಅಥವ ಪಠ್ಯ ಪುಸ್ತಕಗಳ ಬದನೇಕಾಯಿ ಎನುತ ಮೂರು ನಿಮಿಷದಲ್ಲಿ ಕೋಟ್ಯಾದಿಪತಿಯಾಗುವ ‘ಇಸ್ಟೈಲ’ನ್ನು ನೋಡಿ inspire ಆಗಲು ಅಥವಾ ಆಫೀಸಿನಲ್ಲಿ ತನ್ನ ಬಾಸಿನ ಮೇಲಿನ ಸಿಟ್ಟನ್ನು ಇಲ್ಲಿ ಹೀರೊ ವಿಲನ್ಸ್ ಗಳಿಗೆ ತದುಕುವ ಪೆಟ್ಟುಗಳಲ್ಲಿ ದಮನಮಾಡಿಕೊಳ್ಳಲು ಅಥವಾ ವಯಸ್ಸಿನ ಹುಡುಗ ಹುಡುಗಿಯರಿಗೆ ಆ ಹೊರಗಿನ ಕೆಟ್ಟ ಜಗತ್ತಿನಲ್ಲಿ ಕಪ್ಪುಕೋಣೆಯ ನಾಲ್ಕಡಿ ಜಾಗ ಸ್ವರ್ಗಲೋಕವಾಗಲು.. ಒಂದೇ ಎರಡೇ ಇಂತಹ ಹಲವಾರು ಕಾರಣಗಳಿಂದ ಸಿನಿಮಾ ಹಾಗು ಥಿಯೇಟರ್ ಗಳು ನಮ್ಮವರಿಗೆ ವಿಪರೀತ ಹತ್ತಿರವಾಗಿವೆ. ಇನ್ನು ನಟ ನಟಿಯರ ವಿಚಾರಕ್ಕೆ ಬಂದರಂತೂ ಕತೆಬರೆದು, ಸೆಟ್ ಹಾಕಿ, ಸಂಗೀತ ಕರೆದು, ಹಾಡಿ, ಹಣ ಸುರಿದು, ಬೆಳಕಿಡಿದು ದುಡಿಯುವ ನೂರಾರು ಜನರನ್ನೂ ಮರೆತು ಕ್ಯಾಮರಾದ ಮುಂದೆ ಕಾಣುವ ಆ ಒಂದು ಚಹರೆಗೆ ಕಠೋರ ತಪಸ್ಸಿಗೆ ದೊರಕುವ ಭಗವಂತನ ದರ್ಶನದಂತೆ ಆಡುವ ಜನರ ಗುಂಪು ಒಂದೆಡೆಯಾದರೆ ಕೆಲವೆಡೆ ಅಂತಹ ಚಹರೆಗಳು ಅಂತಹ ದೇವರೆಂಬ ಪವರ್ಫುಲ್ ಶಕ್ತಿಗೇ ಒಂದು ಗೇಣು ಕೀಳು! ಇಂತಹ ಹತ್ತಾರು ನೂರಾರು ಕಾರಣಗಳಿಂದಲೇ ಇಂದು ಭಾರತೀಯ ಸಿನಿಮಾ ಇಂಡಸ್ಟ್ರಿ ಇಡೀ ವಿಶ್ವದಲ್ಲಿಯೇ ಅತಿ ಶ್ರೀಮಂತ ಇಂಡಸ್ಟ್ರಿ ಎನಿಸಿಕೊಂಡಿದೆ. ಇದು ವಿಪರ್ಯಾಸವೋ, ಹಾಸ್ಯವೋ ಅಥವಾ ಆಯಾಸವವೋ ಹೇಳುವುದು ಕಷ್ಟ. ಆದರೆ ಒಂದು ಮಾತ್ರ ಸತ್ಯ. ಒಂದು ಕಾಲು ಬಿಲಿಯನ್ ಜನರ ನಮ್ಮ ದೇಶದಲ್ಲಿ ಒಬ್ಬೊಬ್ಬರಿಗೆ ಇರುವ ಹತ್ತಾರು ಕನಸುಗಳು ನನಸಾಗದ ನೋವುಗಳಿಗೆ, ಹತಾಶೆಗಳಿಗೆ ತೆರೆಯ ಮೇಲೆ ಕಾಣುವ ಆ ಕಾಲ್ಪನಿಕ ಚಿತ್ರ ಒಂದು ಬಗೆಯ ಸಾಂತ್ವಾನವನ್ನು ನೀಡಬಲ್ಲದು. ಅದಕ್ಕೆ ಆ ಶಕ್ತಿ ಇದೆ! ಕೆಲಚಿತ್ರಗಳನಂತೂ ನಮ್ಮವರು ಅದ್ಯಾವ ಪರಿ ಹಚ್ಚಿಕೊಳ್ಳುತ್ತಾರೆ ಎಂದರೆ ದಶಕಗಳವರೆಗೂ ಅದನ್ನು ಥಿಯೇಟರ್ ಗಳಿಂದ ತೆಗೆಯಲು ಬಿಡುವುದಿಲ್ಲ. ಯಸ್ ದಶಕ I mean ಡೇಕೇಡ್ಸ್! ಮತ್ತಷ್ಟು ಓದು 




