ವಿಷಯದ ವಿವರಗಳಿಗೆ ದಾಟಿರಿ

parupattedara ರವರಿಂದ ಪ್ರಕಟಿತ

15
ಡಿಸೆ

ಯಥಾ ಗುರು ಹಾಗೆ ಶಿಷ್ಯ

ಪವನ್ ಪಾರುಪತ್ತೇದಾರ

ರಾಘವೇಂದ್ರ ಭವನದ ಸರ್ಕಲ್ ನ ಬಳಿಯ ಬೇಕರಿಯಲ್ಲಿ ನಾನು ಮತ್ತೆ ಗೆಳೆಯ ಯಾದವ್ ಕೆಟ್ಟದ್ದನ್ನ ಸುಡುತ್ತ ನಿಂತಿದ್ದೆವು. ಹಾಗೆ ಮಾತನಾಡುತ್ತಿರುವಾಗ ನಮ್ಮ ಮಾತುಗಳು ಕನಸಿನ ಬಗ್ಗೆ ಹೊರಟಿತು. ನಾನು ಹೇಳಿದೆ, ಮಗ ಕನಸು ಕಾಣಬೇಕು ಮಗ ಯಾವಾಗಲು, ಆಗಲೇ ಎತ್ತರಕ್ಕೆ ಬೆಳೆಯಕ್ಕೆ ಸಾಧ್ಯವಾಗೋದು ಅಂತ. ಯಾದವ್ ಒಂದು ರೀತಿಯ ಮಾರ್ಮಿಕವಾದ ನಗು ತೋರಿ ಶಾಸ್ತ್ರೀ ನಿದ್ದೆ ಮಾಡಿದ್ರೆ ತಾನೆ ಮಗ ಕನಸು ಕಾಣಕ್ ಆಗೋದು?? ನಿದ್ದೇನೆ ಇಲ್ಲ ಅಂದ್ರೆ ಕನಸು ಎಲ್ಲಿಂದ ಕಾಣನ ಹೇಳು ಅಂದ.ನಿದ್ದೇನೆ ಮಾಡದೇ ಕನಸು ಕಂಡ್ರೆ ಹಗಲುಗನಸು ಕಾಣಬೇಡ ಅಂತ ಬೈತಾರೆ. ಕನಸು ಕಾಣಕ್ಕದ್ರು  ನಿದ್ದೆ ಮಾಡೋಣ ಅಂದ್ರೆ ಎಲ್ಲಿ ಸ್ವಾಮಿ ಬರುತ್ತೆ ನಿದ್ರೆ?? ಪಕ್ಕದ ಮನೆ ಪದುಮಕ್ಕ ನಮಮ್ಮ ನೀರಿಗೆ ಹೋದಾಗ ಏನ್ರಿ ಗಿರಿಜಮ್ಮ ನಿಮ್ಮ ಮಗ ಅದೇನೋ ಇಂಜಿನಿಯರಿಂಗ್ ಓದಿದ್ದನಲ್ಲ ಕೆಲಸ ಸಿಕ್ತ ಅವನಿಗೆ ಅಂತ ಕೇಳಿದಾಗ ನಮಮ್ಮ ಇಲ್ಲ ಕಣ್ರೀ ಯಾವ್ದೋ recession  ಅಂತ ತೊಂದರೆ ಬಂದಿದೆ ಅಂತೆ ಅದದ್ಮೇಲೆ ಸಿಗತ್ತೆ ಅಂತ ಹೇಳ್ದ ಅಂತ ಹೇಳೋ ಮಾತು ಕೇಳಿದಾಗ, ನಮಪ್ಪ ಅವರ ಹೊಲದಲ್ಲಿ ಕೆಲಸ ಮಾಡುವ ಕೂಲಿಯವರು ಏನ್ ಸಾಮಿ ನಮ್ ಚಿಕ್ ಐನೋರು ಎಲ್ಲನ ಕೆಲಸಕ್ಕೆ ಹೋಗ್ತವ್ರ, ಇಲ್ಲ ಮನೇಲೆ ಮುದ್ದೆ ಮುರಕೊಂಡು ಅವ್ರ ಇನ್ನ ಅಂತ ಕೇಳಿದಾಗ ನನ್ನಪ್ಪ ನನ್ನ ಕಡೆ ನೋಡಿ ಹುಡುಕ್ತ ಇದ್ದನಪ್ಪ ಇನ್ನು ಯಾವಾಗ್ ಸಿಗತ್ತೋ ಗೊತ್ತಿಲ್ಲ ಅಂತ ಹೇಳೋವಾಗ ನೋಡಿ ಇನ್ನು ನನಗೆ ನಿದ್ದೆ ಅದ್ರು ಎಲ್ಲಿ ಬರಲು ಸಾಧ್ಯ?? ನನಗೆ ಮಾತ್ರ ಅಲ್ಲ ಸ್ವಾಭಿಮಾನ ಇರುವ ಯಾವುದೊ ವ್ಯಕ್ತಿಗೂ ನಿದ್ದೆ ಬರಲ್ಲ ಇನ್ನು ಕನಸು ಕಾಣುವುದು ಬಹಳ ದೂರದ ಮಾತು ಅಂತ ಒಂದೇ ಮಾತಿನಲ್ಲಿ ಹೇಳಿಬಿಟ್ಟ.

ಸಮಾಜ ಎಷ್ಟು ಬದಲಾಗಿಬಿಟ್ಟಿದೆ ಅಲ್ವಾ?? ಇಲ್ಲ ನಾವೇ ಬದಲಾಗಿದ್ದಿವ?? ಮೊದಲಿಗೆ ೧೦ನೇ ಕ್ಲಾಸ್ ಓದಿದರೆ ಸಾಕು ಕೆಲಸ ಸಿಕ್ತಿತ್ತಂತೆ ನಮ್ ತಾತ ಓದಿದ್ದು ಬರಿ ೭ನೇ ಕ್ಲಾಸು ಲೋವೆರ್ ಸೆಕೆಂಡರಿ ಅಂತೆ, ಅವರು ನಮ್ಮೂರಲ್ಲಿ ಫೇಮಸ್ ಎಲೆಕ್ಟ್ರಿಕ್ contractor. ಇನ್ನು ನಮ್ಮ ತಂದೆ PUC ಓದಿದಕ್ಕೆ ಎಷ್ಟೋ ಸರ್ಕಾರೀ ಕೆಲಸಗಳು ಬಂದಿದ್ದವಂತೆ.ನಮ್ಮ ಅಣ್ಣಂದಿರು ಡಿಗ್ರಿ ಓದಿ ಒಳ್ಳೆಯ ಕಡೆ ಕೆಲಸಗಳಲ್ಲೂ ಇದ್ದಾರೆ. ಆದ್ರೆ ಈಗ ಇಂಜಿನಿಯರಿಂಗ್ ಮಡಿ MBA  ಮಾಡಿ. MA ಗಳು MCA ಗಳು ಎಲ್ಲ ಮಾಡಿಯೂ ಕೆಲಸ ಇಲ್ಲದೆ ಬೀದಿ ಬೀದಿ ಅಲೆಯುತ್ತಿರುತ್ತಾರೆ. ಮೊನ್ನೆ ಮೊನ್ನೆ syntel ಎಂಬ ಕಂಪನಿ ಗೆ ವಾಕ್-ಇನ್ ಇಂಟರ್ವ್ಯೂ ಗೆ ಎಂದು ಹೋಗಿದ್ದೆ. ಇದ್ದ ಉದ್ಯೋಗಾವಕಾಶ ಸುಮಾರು ೬೦ ಅಂತೆ ಅಲ್ಲಿ ೬೦೦೦ ಕ್ಕೂ ಹೆಚ್ಚು ಜನ ಗೇಟ್ ನ ಹೊರಗೆ ಕಾಯುತಿದ್ದೆವು. ಅದರಲ್ಲಿ ೩೦೦೦ ಉತ್ತರ ಭಾರತೀಯರು ಒಂದು ೨೦೦೦ ತಮಿಳುನಾಡು ಮತ್ತು ಆಂಧ್ರ ಮತ್ತು ಕೇರಳಿಗರು ನಮ್ಮ ಜನ ಸುಮಾರು ೧೦೦೦. ಗೇಟ್ ತೆಗೆದಿದ್ದೆ ತಡ ಒಳ್ಳೆ ತಿರುಪತಿ ವೆಂಕಟರಮಣನ ದರ್ಶನಕ್ಕೆ ಭಕ್ತರು ನುಗ್ಗುವಂತೆ ನುಗ್ಗಲು ಆರಂಭಿಸಿದರು. ನಾನು ನನ್ನ ಗೆಳೆಯ ನುಗ್ಗಲು ಸಾಧ್ಯವಾಗದೆ ಬೇಡ syntel ಸಹವಾಸ ಎಂದು ವಾಪಾಸ್ ಬಂದೆವು. ಇಂತಹ  ಅದೆಷ್ಟೋ  ನಿದರ್ಶನಗಳು  ನಮ್ಮ  ಮುಂದೆ ಇದ್ದೇ ಇವೆ. ಮತ್ತಷ್ಟು ಓದು »

28
ಆಕ್ಟೋ

ಸಾರಥಿ – The lion king

– ಫಿಲ್ಮಿ ಪವನ್

ಸಾರಥಿ ಬಿಡುಗಡೆಯಾಗಿ ಬಹಳ ದಿನಗಳಾಯ್ತು. ಆದರೆ ನಮ್ಮೂರಿನ ಕಿತ್ತೋದ ಥಿಯೇಟರ್ ನಲ್ಲಿ ಕೂತು ಯಾರಾದ್ರು ಬೀಡಿ ಅಂಟಿಸಿದಾಗ, ಅಣ್ಣ ಒಂದು ಬೀಡಿ ಕೊಡಣ್ಣ ಅಂತ ತೊಗೊಂಡು mAss ಹೀರೋ ಚಿತ್ರವನ್ನು mAss ಆಗಿ ನೋಡೋದ್ರಲ್ ಇರೋ ಮಜನೆ ಬೇರೆ. ಅದಕ್ಕೆ ನೆನ್ನೆ ಕಾಲ ಬಂದಿತ್ತು , ಯಾಕೋ ಏನೋ ಇ ಚಿತ್ರ ಎಲ್ಲಿ ರಿಲೀಸ್ ಅದ್ರು ಟೈಮ್ ಗೆ ಸರ್ಯಾಗಿ ಸ್ಟಾರ್ಟ್ ಆಗ್ತಾ ಇಲ್ಲ ಅನ್ನೋ ವಿಷಯ ಮತ್ತೊಮ್ಮೆ ನಮ್ಮೂರಲ್ಲೂ ಪ್ರೋವ್ ಆಗೋಯ್ತು. ೭-೩೦ ರ ಶೋ ಗೆ ೭-೦೦ ಘಂಟೆಗೆ ಹೋಗಿದ್ರು ಥಿಯೇಟರ್ ಒಳಗೆ ಬಿಟ್ಟಿದ್ದೆ ೭-೪೦ಕ್ಕೆ. ಅಷ್ಟರಲ್ಲೇ ನಮ್ಮ ಮಾಮಂದಿರು ತಮ್ಮ ಟಾಟಾ ಸುಮೋದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಅಲ್ಲಲ್ಲಿ ನಿಂತಿದ್ದವರಿಗೆ ಬೊ… ಮಗನೆ, ಬೊ… ಡಿಕೆ, ಇನ್ನು ಮುಂತಾದ ಅಷ್ಟೋತ್ತರಗಳನ್ನು ಒದರಿ ಹೋಗಿದ್ದರು. ಟಿಕೆಟ್ ಕೌಂಟರ್ ಅಲ್ಲಿ ಹತ್ತಿ ಇಳಿದು ಸಾಹಸ ಮಾಡೋ ಗೋಜು ಸಾಧ್ಯ ಇರ್ಲಿಲ್ಲ. ಸಾಲಿನಲ್ಲಿ ಯಾರದ್ರು ನಮ್ಮೋರು ಕಾಣಿಸ್ತರ ಅಂತ ನೋಡ್ತಿರ್ಬೇಕಾದ್ರೆನೆ ನಮ್ ಬಾಡಿಗೆ ಮನೆ ಹುಡುಗ ಗುಂಡ ಕಾಣಿಸಕೊಂಡ, ಲೇ ಚುಡೆಲ್ , ನನಗೊಂದು ಟಿಕೆಟ್ ತೊಗೊಳ್ಳ ಅಂತ ೫೦ ರು ನೋಟು ಕೊಟ್ಟು entrance ಬಳಿ ಕಾಯ್ತಾ ನಿಂತಿದ್ದೆ. ಹಂಗು ಹಿಂಗು ನುಕಾಡಿ, ತಲ್ಲಾಡಿ, ಗುದ್ದಾಡಿ, ಗುಂಡ ಟಿಕೆಟ್ ತಂದೆ ಬಿಟ್ಟಿದ್ದ, ತೊಗೋ ಗುರು ಅಂತ ಟಿಕೆಟ್ ಕೊಟ್ಟ ಅದ್ರ ಮೇಲೆ ೪೦ ರು ಅಂತ ಇತ್ತು. ಲೋ ಅಪ್ಪಿ ಇನ್ ಹತ್ತು ರುಪಾಯಿ ವಾಪಾಸ್ ಕೊಡೊ ಅಂದ್ರೆ, ಅನ್ನೋ ನಿನ್ ಹೆಸರಲ್ಲಿ ಇಂಟರ್ವಲ್ ಅಲ್ ಒಂದು ಚಿಪ್ಸ್ ಪ್ಯಾಕೆಟ್ ತಿನ್ಕೊತಿನಿ ಬಿಡಣ್ಣ ಅಂದ. ನನ್ ಮಗ ನಂಗೆ ಬ್ಲಾಕ್ ಟಿಕೆಟ್ ಮಾರಿಬಿಟ್ನಲ್ಲ ಅನ್ನೋ ಬೇಜಾರಲ್ಲೇ ಒಳಗೋಗಿ ಮುರಿದೋಗಿರೋ ಪ್ಲಾಸ್ಟಿಕ್ ಚೀರ್ ಗಳ ಮಧ್ಯೆ ಚೆನ್ನಾಗಿರೋದನ್ನ ಹುಡುಕಿ ಮೊಬೈಲ್ ನ ಸೈಲೆಂಟ್ ಮೋಡಲ್ಲಿ ಹಾಕಿ ಕೂತೆ.

title ಕಾರ್ಡ್ ಅಲ್ಲೇ ಸ್ವಲ್ಪ ವಿಭಿನ್ನವಾಗಿ ಶುರುವಾದ ಚಿತ್ರ, ಮೊದಲರ್ಧ ಪೂರ್ತಿ ಕಾಮಿಡಿ ಯಾ ಝಾಲಕ್ ಜೊತೆಗೆ ಅಕ್ಷ್ಯನ್ ಪ್ಯಾಕ್, ಇವೆರಡರ ಜೊತೆಗೆ ಒಂದು ಸ್ವೀಟ್ ಲವ್ ಸ್ಟೋರಿ. ಲವ್ ಸ್ಟೋರಿ ಸ್ವೀಟ್ ಅನ್ನುವುದಕ್ಕಿಂತಲೂ cute ಅನ್ನಬೋಹುದು, ನಿಜವಾಗಿಯೂ ಬಹಳ ಮುದ್ದಾಗಿದೆ. ಹೀರೋ ಇನ್ ಗೆ expose ಮಾಡಿಸಿಲ್ಲ, ಕುಟುಂಬದೊಂದಿಗೆ ಬಂದವರಿಗೆ ಅದು ನಿರಾಳವಾದರೆ ಪಡ್ಡೆಗಳಿಗೆ ಸ್ವಲ್ಪ ಬೇಜಾರು. ಶಂಕರ್ ನಾಗ್ ಅವರನ್ನು ಹಾಡಿನಲ್ಲಿ ಬಳಸಿಕೊಂಡಿರುವ ರೀತಿಗೆ ದಿನಕರ್ ಗೆ ನಿಜಕ್ಕೂ ಒಂದು ಸಲಾಂ. ಅವರು ಇಹಲೋಕ ತ್ಯಜಿಸಿ ೧೬ ವರ್ಷಗಳದ್ರು ಅವರು ತೆರೆಯ ಮೇಲೆ ಬಂದಾಗ ಪ್ರೇಕ್ಷಕರ ಅರುಚಾಟ, ಕಿರುಚಾಟ, ಶಿಲ್ಲೆಗಳನ್ನು ಕೇಳಿದಾಗ ಶಂಕರಣ್ಣ ಇದ್ದಿದ್ರೆ ಇನ್ ಹೆಗಿರ್ತಿದ್ರೋ ಅನ್ನೋ ಯೋಚನೆ ಮನದಲ್ಲಿ ಮೂಡಿತ್ತು. ಮತ್ತೆ ಆಗಾಗ ಡಿಶುಂ ಡಿಶುಂ, ಪೋಲಿಸ್ ಗೆ ಬುದ್ದಿ ಹೇಳಿ ಕೊಡೊ ದೃಶ್ಯ. ಮತ್ತು ರೈತರನ್ನು ಹೊಗಳೋ ದೃಶ್ಯ ಮುಂತಾದವೆಲ್ಲ ಬಂದಾಗ ಸುಪರ್ರೋ ಸೂಪರ್ರು. ಮತ್ತಷ್ಟು ಓದು »

8
ಸೆಪ್ಟೆಂ

ಮೊದಲ ಪ್ರೇಮ ಗೀತೆ……

ಪವನ್ ಪರುಪತ್ತೇದಾರ್

ಸುತ್ತಲೂ ದೊಡ್ಡದಾಗಿ ನೆರೆದಿದ್ದ ವಿದ್ಯಾರ್ಥಿ ಸಮೂಹ, ಅಲ್ಲಲ್ಲಿ ಒಬ್ಬಬ್ಬರು ಒಂದೊಂದು ಆಟ ಅಡುತಿದ್ದರು. ಕೆಲವರು ಬಾಕ್ಸ್ ಟೆನ್ನಿಸ್, ಕೆಲವರು ಲೆಗ್ ಕ್ರಿಕೆಟ್, ಕೆಲವರು ಹೈ ಜಂಪ್ ಮತ್ತೆ ಕೆಲವರು ಕಬ್ಬಡ್ಡಿ, ಇನ್ನೊಂದು ಬದಿಯಲ್ಲಿ ಕೆಲವು ವಿದ್ಯಾರ್ಥಿಗಳು ನೆನ್ನೆ ಕೊಟ್ಟ ಹೋಂ ವರ್ಕ್ ಮನೆಯಲ್ಲಿ ಮಾಡಿಲ್ಲದಿದ್ದರಿಂದ ಸ್ನೇಹಿತರ ಬಳಿ ಪಡೆದು ಆತುರಾತುರವಾಗಿ ಗೀಚುತಿದ್ದರು.

ಅಲ್ಲೇ ಒಂದು ಮೂಲೆಯಲ್ಲಿ ಪ್ರವೀಣ ಗೆತನ್ನೇ ನೋಡುತ್ತಾ ನಿಂತಿದ್ದ. ತನ್ನ ಸ್ನೇಹಿತರೆಲ್ಲ ಒಂದಲ್ಲ ಒಂದು ಆಟ ಅಡುತಿದ್ದರು ಪ್ರವಿಣನಿಗೆ ಅ ಕಡೆ ಗಮನ ಬಂದಿಲ್ಲ, ಅವನ ಗಮನ ಏನಿದ್ದರು ಸಂಪೂರ್ಣ ಗೇಟಿನ ಕಡೆಯೇ ಕೆಂದ್ರಿಕ್ರುತವಗಿತ್ತು. ಇದ್ದಕ್ಕಿದ್ದಂತೆ PT ಮೇಷ್ಟ್ರು ಜೋರಾಗಿ ಪೀಪಿ ಊದಿದರು. ಆಡುತಿದ್ದ ಮಕ್ಕಳೆಲ್ಲರೂ ಓಡೋಡಿ ಬಂದು ಸಾಲುಗಳಲ್ಲಿ ನಿಂತರು. ಹೋಂ ವರ್ಕ್ ಮದುತಿದ್ದವರೆಲ್ಲ ಘಾಬರಿ ಘಾಬರಿಯಾಗಿ ಪುಸ್ತಕಗಳನ್ನು ಹೇಗೆ ಬರೆಯುತಿದ್ದರೋ ಹಾಗೇ ಬ್ಯಾಗ್ ಗೆ ತುಂಬಿಸಿಕೊಂಡು ಬಂದು ಸಾಲಲ್ಲಿ ನಿಂತರು. ಪ್ರವೀಣ ಗೇಟನ್ನು ನೋಡುತ್ತಲೇ ಮುಖ ಚಿಕ್ಕದು ಮಾಡಿಕೊಂಡು ಬೇಸರವಾಗಿ ಭಾರವಾದ ಹೆಜ್ಜೆ ಇಡುತ್ತಾ ಬಂದು ಸಾಲಿನ ಮುಂಭಾಗದಲ್ಲಿ ಪ್ರಾರ್ಥನೆ ಹೇಳಿಕೊಡುವ ಜಾಗದಲ್ಲಿ ನಿಂತನು.  ಅಷ್ಟರಲ್ಲೇ ಬಜಾಜ್ ಸ್ಕೂಟರ್ ಒಂದು ಬಂದು ಗೇಟಿನ ಹೊರಗಡೆ ನಿಂತಿತು. ಭಾರವಾದ ಬ್ಯಾಗ್ ಹೊತ್ತ ಹುಡುಗಿ ತನ್ನ ತಂದೆಗೆ ಟಾಟಾ ಮಾಡುತ್ತ ಗೇಟ್ ಒಳಗೆ ಬಂದು ಓಡೋಡಿ ಪ್ರಾರ್ಥನೆಯ ಜಾಗಕ್ಕೆ ಬರುತಿದ್ದಳು, ಪ್ರವಿಣನ ಬಾಡಿದ್ದ ಮುಖ ಚಿಗುರಿ ಮನ ಆತ್ಮ ವಿಶ್ವಾಸದಿಂದ ತುಳುಕಾಡಿತು. ಬ್ಯಾಗ್ ಪಕ್ಕ ಇಟ್ಟು ಅ ಹುಡುಗಿಯು ಬಂದು ಪ್ರವಿಣನ ಪಕ್ಕ ನಿಂತಳು. ಪ್ರವೀಣ ಯಾಕೆ ಕಾವ್ಯ ಇವತ್ತು ಲೇಟ್ ಅಂದ, ಅಮ್ಮ ಬಾಕ್ಸ್ ಕೊಡೋದು ಲೇಟ್ ಮಾಡಿದ್ರು ಅನ್ನೋ ಮಾಮೂಲಿ ಉತ್ತರವನ್ನೇ ಅವಳು ಕೊಟ್ಟಳು. ಸ್ವಾಮಿ ದೇವನೇ ಲೋಕ ಪಾಲನೆ ಎಂದು ಪ್ರಾರ್ಥನೆ ಮಡಿ ಎಲ್ಲರು ತಮ್ಮ ತಮ್ಮ ತರಗತಿಗಳಿಗೆ ಸೇರಿಕೊಂಡರು… ಮತ್ತಷ್ಟು ಓದು »

30
ಆಗಸ್ಟ್

ಜೇಮ್ಸ್ ಕ್ಯಾಮರೂನ್ ಎ೦ಬ ಮಾ೦ತ್ರಿಕನೂ…….. “ಅವತಾರ್” ಎನ್ನುವ ದ್ರಿಶ್ಯಕಾವ್ಯವೂ………….

ಶಶಾಂಕ.ಕೆ

೧೯೯೭ ರ ಮಾರ್ಚ ತಿ೦ಗಳು….. “ಟೈಟಾನಿಕ್” ಎನ್ನೋ ಚಲನಚಿತ್ರ ನೋಡ್ಬೇಕಾದ್ರೆ ಆ೦ಗ್ಲ ಚಲನಚಿತ್ರಗಳ ಬಗ್ಗೆ ಸ್ವಲ್ಪನೂ ಅರಿವಿರಲಿಲ್ಲ. ಕೇವಲ ಒ೦ದು ದಶಕದ ಹಿ೦ದೆ ಆ೦ಗ್ಲ ಚಲನಚಿತ್ರಗಳೆ೦ದರೆ ಕೇವಲ ವಯಸ್ಕರು ನೋಡುವ, ಹೀರೋ ಹೀರೊಇನ್ ತುಟಿಗೆ ತುಟಿ ಕೊಟ್ಟು ಮುದ್ದಾಡುವ ಸೀನ್’ಗಳೇ ಹೆಚ್ಚಿರುವ, ಚಿಕ್ಕ ಮಕ್ಕಳು ನೋಡಬಾರದ ಚಲನಚಿತ್ರಗಳೆ೦ದೇ ಎಲ್ಲರ ಅನಿಸಿಕೆ. ಆ೦ಗ್ಲ ಚಲನಚಿತ್ರಗಳು ಟೀವಿಯಲ್ಲಿ ಬ೦ದ ತಕ್ಷಣ ದೊಡ್ಡವರು ಚಾನಲ್ ಬದಲಾಯಿಸುತ್ತಿದ್ದರಿ೦ದ ನನಗೆ ಆ ಚಿತ್ರಗಳ ಬಗ್ಗೆ ಕುತೂಹಲ ಬೆಳೆಯುತ್ತಲೇ ಹೋಯಿತು. ಅಪ್ಪ ಅಮ್ಮ ಇಲ್ಲದಿದ್ದ ಸಮಯದಲ್ಲಿ ಕದ್ದು ಕದ್ದು ಆ೦ಗ್ಲ ಸಿನೆಮಾ ಚಾನಲ್ ನೋಡುವ ಚಪಲ ಪ್ರಾರ೦ಭವಾಯಿತು. (ನಾನೊಬ್ಬ ಕನ್ನಡ ಮಾಧ್ಯಮದ ವಿಧ್ಯಾಥಿ೯ಯಾದದ್ದರಿ೦ದ ನನಗೇನೂ ಅರ್ಥವಾಗುತ್ತಿರಲಿಲ್ಲ-ಆ ಮಾತು ಬೇರೆ). ಮನೆಯಲ್ಲಿ ಯಾವಾಗಲೂ ಹಿರಿಯರು ಇರುತ್ತಿದ್ದರಿ೦ದ ನಾನೆ೦ದೂ ಪೂಣ೯ ಸಿನೆಮಾ ನೋಡಲೇ ಇಲ್ಲ!!! ಈಗ ನನ್ನ “Personal DVD Collecton” ನಲ್ಲೇ ಸುಮಾರು 1000 English ಚಲನಚಿತ್ರಗಳಿರಬಹುದು. ನಿಧಾನವಾಗಿ ನನಗೆ technology ಬಗ್ಗೆ ಸ್ವಲ್ಪಮಟ್ಟಿನ ಅರಿವಾಗತೊಡಗಿತು. ಆಮೇಲೆ ಚಿತ್ರಜಗತ್ತಿನಲ್ಲಿ ಉಪಯೋಗಿಸುವ technology ಬಗ್ಗೆ ತಿಳಿಯಲು ಪ್ರಯತ್ನಿಸತೊಡಗಿದೆ.

ಇಷ್ಟೆಲ್ಲ ಕಥೆ ಯಾಕೆ ಹೇಳಿದ್ದೆ೦ದರೆ… “ಟೈಟಾನಿಕ್” ನಾನು ಚಿತ್ರಮ೦ದಿರದಲ್ಲಿ ಹಾಗೂ ಪೂರ್ಣವಾಗಿ ನೋಡಿದ ಪ್ರಪ್ರಥಮ ಇ೦ಗ್ಲಿಷ್ ಸಿನೆಮಾ… ಅದನ್ನು ನೋಡಿ ಆ೦ಗ್ಲ ಚಿತ್ರಗಳ ಬಗ್ಗೆ ನನಗಿದ್ದ ಪೂರ್ವನಿರ್ಧರಿತ ಅನಿಸಿಕೆ (prejudice) ಎಲ್ಲ ಮಾಯವಾಯಿತು. “ಜೇಮ್ಸ್ ಕ್ಯಾಮರೂನ್” ಎ೦ಬ ಮಾತ್ರಿಕ ಜಗತ್ತಿನಲ್ಲಿದ್ದಾನೆ ಎನ್ನುವುದು ಅರಿವಾಗಿದ್ದು ಆಗಲೇ!!! “ಟೈಟಾನಿಕ್” ನನ್ನ ಮನಸ್ಸಿನಮೇಲೆ ಗಾಢ ಪರಿಣಾಮ ಬೀರಿದ ಚಿತ್ರ. ಒ೦ದು ಕಾಲದ ಜಗತ್ತಿನ ಅತ್ಯ೦ತ ದೊಡ್ಡ ಹಡಗು ಮುಳುಗಿದ ಕಥೆಯನ್ನೇ ಹ್ರದಯಸ್ಪರ್ಶಿಯಾಗಿ ಚಿತ್ರಿಸಿದ ರೀತಿ ಅವಿಸ್ಮರಣೀಯ. ಇವತ್ತಿಗೂ ಗಳಿಕೆಯಲ್ಲಿ “ಟೈಟಾನಿಕ್” ಅನ್ನು ಯಾವ ಚಿತ್ರವೂ ಮೀರಿಸಲು ಸಾಧ್ಯವಾಗಿಲ್ಲ ಎ೦ದರೆ ಆಶ್ಚರ್ಯವಾಗುವುದಿಲ್ಲವೇ?.

ಆ ಮಾ೦ತ್ರಿಕ ನಿರ್ದೇಶಕ 10 ವಷ೯ಗಳ ಕಾಲ ಸರಿಯಾದ technologyಗಾಗಿ ಕಾದು ಸಿದ್ದಪಡಿಸಿದ ಚಿತ್ರ “ಅವತಾರ್”. “ಟೈಟಾನಿಕ್” ಅ೦ಥ ದ್ರಿಶ್ಯಕಾವ್ಯವನ್ನು ಮೀರಿಸುವ ಚಲನಚಿತ್ರ ಬರಲು ಸಾಧ್ಯವೇ ಇಲ್ಲ ಎನ್ನುವ ನನ್ನ ನ೦ಬಿಕೆಯನ್ನು ಮತ್ತೆ ಹುಸಿಗೊಳಿಸಿದ್ದು ಅದೇ ಮಹಾನುಭಾವ. ಕಥೆಯಲ್ಲಿ ಹೇಳಿಕೆಳ್ಳುವ೦ಥದ್ದೇನಿಲ್ಲ?!. ಆದರೆ “Special Effects” ನಿ೦ದಾಗಿ ಈ ಚಿತ್ರ Special ಅನಿಸಿಕೊಳ್ಳುತ್ತದೆ. ಒ೦ದು “Si-Fi” ಚಲನಚಿತ್ರವಾಗಿದ್ದರೂ ಮಾನವೀಯತೆಯನ್ನು ಮೆರೆಸುವ ಅದರ origin ಇಷ್ಟವಾಗುತ್ತಾ ಹೋಗುತ್ತದೆ.

ಜೇಕ್ ಅನ್ನುವ ಮಾಜಿ ಸೈನಿಕನನ್ನು Na’vi ಎನ್ನುವ ಮನುಷ್ಯರನ್ನು ಹೋಲುವ ಜನಾ೦ಗವಿರುವ “Pandora” ಎನ್ನುವ ಬೇರೆಯ ಗ್ರಹಕ್ಕೆ ಕರೆತರಲಾಗುತ್ತದೆ. ಆ ಜನರಿರುವ “ಪವಿತ್ರ!!!” ಜಾಗ ಅತ್ಯ೦ತ ದುಬಾರಿ ಲೋಹದ ಅದಿರಿನ ಗಣಿಯಮೇಲಿದೆ. ಆ ಜನಾ೦ಗವನ್ನು ಅಲ್ಲಿ೦ದ ಬೇರೆಯ ಜಾಗಕ್ಕೆ ಸ್ತಳಾ೦ತರಿಸಲು ಜೇಕ್’ನನ್ನು ಅವರಲ್ಲಿ ಒಬ್ಬನಾಗಿ ಶಾರೀರಿಕವಾಗಿ ಪರಿವರ್ತಿಸಿ ಕಳಿಸಲಾಗುತ್ತದೆ. ಆದರೆ ಆ ಜನಾ೦ಗದ ಒಳ್ಳೆಯತನವನ್ನು ನೋಡಿ ಅವನ ಮನಸ್ಸು ಬದಲಾಗಿ ಅವರಲ್ಲೇ ಒಬ್ಬನಾಗಿ ಉಳಿಯಲು ನಿರ್ಧಾರ ಮಾಡುತ್ತಾನೆ. ಅದಲ್ಲದೆ ಅವನನ್ನು ಅಲ್ಲಿಗೆ ಕಳಿಸಿದವರಿಗೆ ತಿರುಗಿ ಬೀಳುತ್ತಾನೆ. ಕೊನೆಯಲ್ಲಿ ಏನಾಗುತ್ತದೆ ಎನ್ನುವುದೇ suspense.

3D ರೂಪದಲ್ಲಿ ಬ೦ದಿರುವ ಈ ಚಲನಚಿತ್ರದಲ್ಲಿ ಬರುವ Na’vi ಎನ್ನುವ ಮನುಷ್ಯರನ್ನು ಹೋಲುವ ಜನಾ೦ಗದ ಜನರನ್ನು Create ಮಾಡಲು ಆ ತಾ೦ತ್ರಿಕ ವರ್ಗ ಏನೆಲ್ಲಾ ತೊ೦ದರೆ ತಾಪತ್ರಯ ಅನುಭವಿಸಿರಬಹುದು ಆಶ್ಚರ್ಯಪಡುತ್ತಾನೇ ಇಡೀ ಚಲನಚಿತ್ರ ನೋಡಿದೆ. ಕೆಲವು ಸಲ ಈ ಫಿಲ೦ಗಳನ್ನು ನೋಡುವಾಗ ನಮ್ಮವರು ಯಾಕೆ ಇನ್ನೂ “ಮು೦ಗಾರು, ಮಳೆ, ಪ್ರೀತಿ, ಲಾ೦ಗು, ಮಚ್ಚಾ, ಹೊಡಿ ಮಗ” ಈ concept ಇಟ್ಕೊ೦ಡು ಸಿನೆಮಾ ತೆಗಿತಿದಾರೋ ಅರ್ಥ ಆಗ್ತಾನೆ ಇಲ್ಲ. ಬಿಡಿ ನಮ್ಮ ಕನ್ನಡ ಸಿನೆಮಾ ಜನಕ್ಕೆ ಹೇಳಿ ಏನೂ ಪ್ರಯೋಜನ ಇಲ್ಲ. ತಾತ ಹಾಕಿದ ಅರಳಿ ಮರಕ್ಕೇ ನೇಣು ಹಾಕಿಕೊಳ್ಳೊದಕ್ಕೇ ನಿರ್ಧಾರ ಮಾಡಿರೋರೆ ಅಲ್ಲಿರೋದು.

ಮತ್ತೆ ಅವತಾರ್ ಗೆ ಮರಳೋಣ. Normal ಇ೦ಗ್ಲಿಷ ಪಿಚ್ಚರ್ ಥರ ಮೊದಲರ್ಧ ಸ್ವಲ್ಪ ಬೋರಿ೦ಗ್ ಅನಿಸಿದರೂ, ದ್ವಿತೀಯಾರ್ಧ ತು೦ಬಾನೆ ಅದ್ಭುತವಾಗಿ ಮೂಡಿ ಬ೦ದಿದೆ. ಆ ಗ್ರಾಫಿಕ್ಸ್ ಬಗ್ಗೆ ಮಾತಾಡಿದಷ್ಟೂ ಕಡಿಮೆನೇ. ಕೊನೆಯ ಅರ್ಧ ಗ೦ಟೆಯ೦ತೂ ನಿಮ್ಮನ್ನ ಕುರ್ಚಿಯ ಕೊನೆಗೆ ತ೦ದು ಕೂಡಿಸಿಬಿಡತ್ತೆ. ಆ ಸು೦ದರವಾದ Location ಗಳು, ಜಲಪಾತಗಳು, ಬ್ರಹದಾಕಾರದ ಒ೦ದು ಮರ ಎಲ್ಲ ನೋಡುವಾಗ ನನ್ನ ಮನಸ್ಸನ್ನು ಎಷ್ಟರಮಟ್ಟಿಗೆ ಪುಳಕಿತ ಗೊಳಿಸಿದವೆ೦ದರೆ…. ಅವ್ಯಾವುದೂ ನಿಜವಾಗಿ Existanceನಲ್ಲಿ ಎಲ್ಲ ಎನ್ನುವುದನ್ನೇ ಮರೆತುಬಿಡುವಷ್ಟು. ತಾನು ಕಲ್ಪಿಸಿಕೊ೦ಡಿದ್ದನ್ನು ಬೇರೆಯವರಿಗೆ ಮನವರಿಕೆ ಮಾಡಿಕೊಡುವುದರಲ್ಲಿ ಜೇಮ್ಸ್ ಕ್ಯಾಮೆರೊನ್ Successful ಆಗಿದ್ದಾನೆ. ಅಲ್ಲೇ ಕಣ್ರಿ ಒಬ್ಬ ನಿರ್ದೇಶಕ ಗೆಲ್ಲೋದು. ನಿಜವಾಗ್ಲೂ “ಅವತಾರ್”… ಒ೦ದು ದ್ರಿಶ್ಯಕಾವ್ಯ ಎನ್ನುವದರಲ್ಲಿ ಸ೦ಶಯವೇ ಇಲ್ಲ…….

29
ಆಗಸ್ಟ್

ತೇಜಸ್ವಿ ಎ೦ಬ ಮಾಯಾವಿ…

ಶಶಾಂಕ.ಕೆ

ಪು.ಚ೦.ತೇ… ಅರ್ಥ ಆಗ್ಲಿಲ್ಲ ಅಲ್ವ? ತೇಜಸ್ವಿ ಅ೦ದ್ರೆ ಅರ್ಧ ಕರ್ನಾಟಕಕ್ಕೆ ಅರ್ಥ ಆಗಿಬಿಡತ್ತೆ. ನಿರ್ವಿವಾದವಾಗಿ ಹೇಳಬಹುದಾದ ಒ೦ದು ವಿಷಯ.. “ಕೆ.ಪಿ.ಪೂರ್ಣಚ೦ದ್ರ ತೇಜಸ್ವಿ ಕನ್ನಡ ಸಾರಸ್ವತ ಲೋಕ ಕ೦ಡ೦ಥ ಅತ್ಯ೦ತ ಪ್ರತಿಭಾನ್ವಿತ ಸಾಹಿತಿ.”
ಕನ್ನಡ ಸಾಹಿತ್ಯ ಪ್ರೇಮಿಗಳಿಗೆ “ಕರ್ವಾಲೋ, ಜುಗಾರಿ ಕ್ರಾಸ್, ಚಿದ೦ಬರ ರಹಸ್ಯ, ಅಲೆಮಾರಿಯ ಅ೦ಡಮಾನ್, ಅಣ್ಣನ ನೆನಪು, ಕಿರಗೂರಿನ ಗಯ್ಯಾಳಿಗಳು” ಮರ್ಯೋದಕ್ಕೆ ಸಾಧ್ಯಾನೆ ಇಲ್ಲ. ಇವೆಲ್ಲಾ ಕೇವಲ ಕಾದ೦ಬರಿಗಳಲ್ಲ. ತೇಜಸ್ವಿ ಎನ್ನುವ ಮಾಯಾವಿ ಶ್ರಷ್ಟಿಸಿದ ಮಾಯಾಲೋಕಗಳು..

ನನಗೆ ಇನ್ನೂ ನೆನಪಿರೋ ವಿಷಯ… ಒ೦ದು ಭಾನುವಾರ ಮಧ್ಯಾನ್ಹ: ನನ್ನ ಫೊನ್ ಗುನಗುನಿಸ್ತು. ಎತ್ತಿದ್ರೆ ಅಪ್ಪ. ಆಗ ಅಪ್ಪ ಮೈಸೂರಿನಲ್ಲಿದ್ರು. ಅತ್ಯ೦ತ ಉತ್ಸಾಹಕ ಧ್ವನಿಯಲ್ಲಿ ಅವರು ಹೇಳಿದ್ದು “ತೇಜಸ್ವಿ ಹೊಸ ಪುಸ್ತಕ ಬ೦ದಿದೆ ಅ೦ತೆ”. ನನಗೆ ಅಷ್ಷೇ ಕೇಳ್ಸಿದ್ದು. ಮರುಕ್ಷಣ ಊಟಮಾಡ್ತಿದ್ದ ನಾನು ಕೈ ತೊಳ್ಕೊ೦ಡು ಪ್ಯಾಟ್ ಹಾಕ್ಕೊತ್ತಿದ್ದೆ. “ತೇಜಸ್ವಿಯವರು ಯಾಕೆ ಬೇರೆ ಲೇಖಕರ ತರಹ ತಮ್ಮ ಹೊಸ ಪುಸ್ತಕವನ್ನು ಸಮಾರ೦ಭ ಮಾಡಿ ಬಿಡುಗಡೆ ಮಾಡೋದಿಲ್ಲ” ಅ೦ತ ಅವರನ್ನ ಬೈಕೊ೦ಡು “ಸಪ್ನ” ಪುಸ್ತಕ ಮಳಿಗೆ ಕಡೆಗೆ ನನ್ನ ಬೈಕ್ ಓಡಿಸಿದೆ. ನೆನಪಿರಲಿ, ನನಗೆ ಆ ಪುಸ್ತಕದ ಬಗ್ಗೆ ಏನೂ ಗೊತ್ತಿಲ್ಲ. ಅಲ್ಲಿ ಹೊಗಿ ನೋಡಿದ್ರೆ ದೊಡ್ಡ ಸ೦ತೆ ಇದ್ದ೦ಗಿತ್ತು. ಎಲ್ಲಾ ತೇಜಸ್ವಿ ಅವರ ಪುಸ್ತಕವನ್ನು ಹುಡ್ಕಾದ್ತಿದ್ರು.

ಹ್ಯಾಗೋ ಸರ್ಕಸ್ ಮಾಡಿ ಒ೦ದು ಪುಸ್ತಕ ಪಡೆದ್ದದ್ದಾಯ್ತು. ಪುಸ್ತಕದ ಹೆಸರು “ಮಾಯಾಲೋಕ – ೧”. ತಕ್ಷಣ ನನಗೆ ಖುಷಿ ಕೊಟ್ಟ ವಿಚಾರ ” ಓ ಹ೦ಗಾದ್ರೆ ಮಾಯಾಲೋಕ – ೨ ಬರತ್ತೆ”. ನಿಜ್ವಾಗ್ಲೂ ತೇಜಸ್ವಿ ಮಾಯೆಯೇ ಅ೦ಥದ್ದು. ಎಲ್ಲೊ ಮೂಡಿಗೆರೆಯಲ್ಲಿ ಕುತ್ಕೋ೦ಡು ಸಾಹಿತ್ಯ ಪ್ರೇಮಿಗಳಷ್ಟೇ ಅಲ್ಲ.. ಯುವಜನರ ಮನಸ್ಸನ್ನೂ ಕೂಡ ಗೆದ್ದಿರುವ ಲೇಖಕ ತೇಜಸ್ವಿ. ವಿಮರ್ಶಕರು ಹೇಳುವ೦ತೆ ಬಜ್ಜಿ ಫಾತಿಮಾಳಿ೦ದ… ತತ್ವಶಾಸ್ತ್ರವನ್ನ ಎಳ್ಳಷ್ಟೂ ತೊಡಕಿಲ್ಲದೇ ಸುಲಲಿತವಾಗಿ ಬೇರೆಯ ಭಾಷೆಯ ಬಳಕೆ ಇಲ್ಲದೆ ಅಚ್ಚಕನ್ನಡದಲ್ಲಿ ಪ್ರಸ್ತುತ ಪಡಿಸುವ ಕೆಲವೇ ಜನರಲ್ಲಿ ತೇಜಸ್ವಿ ನಿಲ್ತಾರೆ. ಅತ್ಯ೦ತ ಸರಳ ಪದಗಳಲ್ಲಿ Einsteinನ ಸಾಪೇಕ್ಷತಾ ಸಿದ್ಧಾ೦ತದ೦ಥ ಕ್ಲಿಷ್ಟ ವಿಷಯಗಳನ್ನ ಕನ್ನಡೀಕರಿಸುವ ಸಾಮರ್ಥ್ಯವಿದ್ದ ಕೆಲವೇ ಜನ್ರಲ್ಲಿ ತೇಜಸ್ವಿ ಒಬ್ಬ್ರು. ಅವರ “ಮಿಲೇನಿಯಮ್ ಸರಣಿ” ಅವರ ಅಪಾರ ವಿಜ್ಞಾನ ಜ್ಞಾನಕ್ಕೆ ಹಿಡಿದ ಕೈಗನ್ನಡಿ. ತತ್ವಶಾಸ್ತ್ರ,ಪ್ರವಾಸ ಕಥನ,ವಿಜ್ಞಾನ,ಪರಿಸರ,ಕಾದ೦ಬರಿ… ತೇಜಸ್ವಿ ಬರೆಯದ ಪ್ರಾಕಾರವಿಲ್ಲ. ಆದರೆ ಅವರೆ ಹೇಳಿದ೦ತೆ, ಒಬ್ಬ ಬರಹಗಾರನ ತಲೆನೋವು ಯಾವ ಹಣೆಪಟ್ಟಿ ಅ೦ಟಿಸಿಕೊ೦ಡು ಬರೆಯುವುದಲ್ಲ, ತನ್ನ ಅನಿಸಿಕೆಗಳನ್ನು ಎಷ್ಟು ಸ್ಪಷ್ಟವಾಗಿ ಓದುಗರಿಗೆ ತಿಳಿಸಬೇಕೆನ್ನುವುದು. ಮತ್ತಷ್ಟು ಓದು »

23
ಆಗಸ್ಟ್

ಎಳೆ ಹುಡುಗನ ಕನಸುಗಳು

ಪವನ್ ಪರುಪತ್ತೆದಾರ

ಜೀವನವನ್ನು ಸರಿಯಾಗಿ ಗಮನಿಸುತ್ತಾ ಹೋದರೆ ಒಮ್ಮೊಮ್ಮೆ ಅತೀ ಚಿಕ್ಕ ವಿಷಯಗಳು ಮನಸಿಗೆ ನಾಟಿಬಿಡುತ್ತವೆ, ನಮ್ಮ ಮನೆ ಪಕ್ಕದಲ್ಲೇ ಇರುವ ಒಬ್ಬ ಹುಡುಗನ್ನ ನನ್ನ ಗಾಡಿ ಒರೆಸಲೆಂದು ಕರೆದೆ ಅವನ ಹೆಸರು ವಿಶ್ವನಾಥ, ಪ್ರೀತಿಯಿಂದ ಎಲ್ಲರು ಪಪ್ಪಳ ಎಂದು ಕರೀತಾರೆ. ಹತ್ತಿರದಲ್ಲೇ ಇರೋ ಒಂದು ಸರ್ಕಾರೀ ಶಾಲೆಯಲ್ಲಿ 3 ನೆ ತರಗತಿ ವ್ಯಾಸಂಗ ಮಾಡ್ತಾ ಇದಾನೆ. ಓದಿನಲ್ಲೂ ಮುಂದು ಕೆಲಸದಲ್ಲೂ ಮುಂದು ನ ಕರೆದ ತಕ್ಷಣ ಓಡಿ ಬಂದು ಏನು ಪವನಣ್ಣ ಕರೆದ್ರಲ್ಲ ಅಂದ, ಗಾಡಿ ಒರೆಸಿ ಕೊಡೊ ಪಪ್ಪಳ ಅಂದೆ, ಅದಕ್ಕೆ ಅವರಮ್ಮಮ್ಗೆ ಅಮ್ಮೋ ನ ಪವನಣ್ಣ ವೀಟ್ ಕಿಟೆ ಇರಕ್ಕೆ ಅಂತ ಕಿರುಚಿದ( ಅವರ ಮಾತೃ ಭಾಷೆ ತಮಿಳು ).

ನಾನು ಗಾಡಿ ವರೆಸೋ ಬಟ್ಟೆ ತೆಗೆದು ಕೊಟ್ಟೆ ಹಾಗೆ ಒರೆಸುತ್ತಾ ಒರೆಸುತ್ತಾ ಪವನಣ್ಣ ನೀವು ಎಷ್ಟನೆ ಕ್ಲಾಸು ಅಂದ, ನಾನು ಇಂಜಿನಿಯರಿಂಗ್ ಕಣೋ ಪಪ್ಪಳ ಅಂದೆ, ಅಂದ್ರೆ 20 ನೆ ಕ್ಲಾಸ್ ಅ ಅಂದ ನಾನು ಸ್ವಲ್ಪ ಯೋಚಿಸಿ ಲೆಕ್ಕ ಹಾಕಿ 16 ನೆ ಕ್ಲಾಸು ಅಂದೆ, ಹಾಗಾದ್ರೆ ನಾನು ಇ ಥರ ಗಾಡಿ ತೊಗೋಬೇಕು ಅಂದ್ರೆ ಇನ್ನು ೧೩ ಕ್ಲಾಸ್ ಓದಬೇಕು ಅಂದ. ಸ್ವಲ್ಪ ನಕ್ಕು ಹೌದು ಧೌದು ಎಂದೆ..

ಹಾಗೆ  ಗಾಡಿ ಒರೆಸುತ್ತಾ ಒರೆಸುತ್ತಾ ಪವನಣ್ಣ ನೆನ್ನೆ ನಾನು ಸೌತೆ ಕಾಯಿ ಮಾರಕ್ ಹೋಗಿದ್ದೆ ಅಂದ , ಅವರ ತೋಟದಲ್ಲಿ ಸೌತೆ ಕಾಯಿ ಬೆಳೆ ಇರಲಿಲ್ಲ ಅಲ್ಲದೆ ಅಕ್ಕ ಪಕ್ಕದ ಯಾವ ತೋಟದಲ್ಲೂ ಸೌತೆಕಾಯಿ ಬೆಳೆ ಇರಲಿಲ್ಲ ಇವನ ಹೇಗೆ ಮಾರಿಕೊಂಡು ಬಂದ ಅನ್ನೋ ಅನುಮಾನದಲ್ಲೇ, ಲೋ ಪಪ್ಪಳ ಸೌತೆಕಾಯಿ ಎಲ್ಲಿಂದ ಬಂತೋ ಅಂದೆ. ಅದಕ್ಕೆ ಅವ ಪವನಣ್ಣ ಆದ ಯಾರ್ದೋ ಮನೇಲಿ ಸ್ಕೂಲ್ ಇಂದ ವಾಪಾಸ್ ಬರೋವಾಗ ಹಸುಕಾಕು ಅಂತ ಕೊಟ್ರು, ನ ಮಾರಿಕೊಂಡು ಬಂದ್ ಬಿಟ್ಟೆ ಅಂದ ಅದಕ್ಕೆ ನಾನು ಲೋ ಕೆಟ್ಟಿರೋ ಸೌತೆಕಾಯಿ ಯಾರದ್ರು ಮಾರ್ತರೇನೋ ಅಂದೆ ಅವನು ಇಲ್ಲ ಪವನಣೋ.ಚಂದಗಿತ್ತು ಸ್ವಲ್ಪ ಬಲ್ತೋಗಿತ್ತು ಅಷ್ಟೇ ಅದಕ್ಕೆ ಮಾರಿಕೊಂಡು ಬಂದೆ ಅಂದ. ಸರಿ ಎಷ್ಟು ಕಾಸ್ ಬಂತು ಏನ್ ಮಾಡಿದೆ ಅಂದೆ, ಅದಕ್ಕೆ ೨೦ ರುಪಾಯಿ ಬಂತು, ನಮ್ಮಮ್ಮ ಪಾಪ ಓಲೆ ಇಲ್ಲ ಅಂತ ಇದ್ಲು ಅದಕ್ಕೆ ಚಿನ್ನದ ವಾಲೆ ತಂದು ಕೊಟ್ಟೆ ಅಂದ. ನನಗೆ ನಗು ತಡೆಯಕ್ಕಾಗದೆ, ಲೋ ಪಪ್ಪಳ 20 ರೂಪಾಯಿಗೆ ಯಾರೋ ಚಿನ್ನದ ವೋಲೆ ಕೊಡ್ತಾರೆ ಅಂದ್ರೆ ಅಯ್ಯೋ ಹೋಗ ಪವನಣ್ಣ ಅಷ್ಟೇ ಮತ್ತೆ ನಿಮಗೆ ಗೊತ್ತಿಲ್ಲ ಅಂದ , ಆಮೇಲೆ ಹಾಗೆ ಮುಂದುವರೆಸುತ್ತಾ ಆದ್ರೆ ಆ ವಾಲೆನ ಐಶು ಕದ್ದುಕೊಂಡೋಗವಳೆ  ಕೇಳಿದ್ರೆ ನಂದೇ ಅಂತವ್ಲೇ ಪವನಣ್ಣ ಅಂದ, ಮತ್ತೆ ಈಗ ಏನೋ ಮಾಡ್ತ್ಯ ಅಂದೆ  ಅದಕ್ಕೆ ಅವನು ಅಯ್ಯೋ ಹೋದ್ರೆ ಹೋಗ್ಲಿ ಶುಕ್ರವಾರ ಸಂತೆಗೆ ನಮ್ಮತ್ತೆ ಜೊತೆ carrot ಮಾರಕ್ ಹೋಗ್ತೀನಿ ಸ್ಕೂಲ್ ಬಿಟ್ ತಕ್ಷಣ ಹೋಗಿ 3 hour ವ್ಯಾಪಾರ ಮಾಡಿದ್ರೆ 20 ರುಪಾಯಿ ಕೊಡ್ತಾರೆ ಅ ಕಾಸಲ್ಲಿ ಸಂತೆಲೆ ಓಲೆ ತೆಕ್ಕೊಡ್ತೀನಿ ಅಂದ.

wow  ಅವನ ಅಮ್ಮನಿಗೆ ವಾಲೆ ಕೊಡಿಸಬೇಕಂಬ ಅಸೆ ಅ ವಯಸಿಗೆ ತಾಯಿಯ ನೋವನ್ನ ಅರ್ಥ ಮಾಡ್ಕೊಳೋ ಮನಸು ನೋಡಿ ನನಗೆ ದಿಗ್ಭ್ರಮೆ ಆಯಿತು.ಅಷ್ಟರಲ್ಲೇ ಗಾಡಿ ಒರೆಸಿದ್ದಾಗಿತ್ತು ಒರೆಸೋ ಬಟ್ಟೆ ಒದೆರಿ ವಾಪಾಸ್ ಕೊಟ್ಟು ಹೋಗ್ತೀನಿ ಪವನಣ್ಣ ನಮ್ಮಪ್ಪನ ಜೊತೆ ನೀರ್ ಕಟ್ಟಕ್ ಹೋಗ್ಬೇಕು ಅಂತ ನಿಂತ, ನಾನು ಜೆಬಿಗೆ   ಕೈ ಹಾಕಿದರೆ 3 ರು ಚಿಲ್ಲರೆ ಇತ್ತು ಕೊಟ್ಟು ಹೋಗಿ ಹುಂಡಿಗೆ ಹಕ್ಕೊಲೋ ಪಪ್ಪಳ ಅಂದೇ ಕುಷಿ ಕುಷಿಯಾಗಿ ಮನೆ ಕಡೆ ಓಡಿದ,…..!!!

********************************************************************

22
ಆಗಸ್ಟ್

ದುಡ್ಡು ಇದ್ದರೆ ದುನಿಯಾ, ಜಾತಿ ಇದ್ದರೆ ಅಧಿಕಾರ – ಹೊಸಗಾದೆ

ಕೋಮಲ್

ಸಿದ್ದ ಯಾಕೋ ಸಾನೇ ಬೇಜಾರಾಗಿದ್ದ, ಮನೆ ಮುಂದೆ ತಲೆ ಮ್ಯಾಕೆ ಟವಲ್ ಹಾಕ್ಕಂಡು, ವಿಧವೆ ತರಾ ಕುಂತಿದ್ದ. ಯಾಕ್ಲಾ ಸಿದ್ದ ಅಂದ ಸಂಭು. ನೋಡ್ಲಾ ನಾನು ರಾಜಕೀಯ ನೋಡ್ತಾನೇ ಇದೀನಿ, ಎಲ್ಲಿಗಲಾ ಬಂತು ನಮ್ಮ ರಾಜಕೀಯ, ಅಧಿಕಾರಕ್ಕಾಗಿ ಹೊಡೆದಾಟ, ಜಾತಿ, ಕಾಸು ಎಲ್ಲಾ ಬತ್ತಾ ಐತಲ್ಲೋ, ಹಿಂಗಾದ್ರೆ ನಮ್ಮಂತಹ ಬಡವರು, ರೈತರು ಬದಕಕ್ಕೆ ಆಯ್ತದೇನ್ಲಾ ಅಂದ ಸಿದ್ದ.  ನಮ್ಮ ಜಾತಿ ಪ್ರಬಲವಾಗಿಲ್ಲ ಅಂದ್ರೆ ಸಾಯೋ ಗಂಟ ಬರೀ ಕಾರ್ಯಕರ್ತನಾಗೇ ಇರಬೇಕಾಯ್ತದೆ ಕಲಾ, ಅದೇ ಪ್ರಬಲ ಜಾತಿ ಇದ್ದೋರು ಅಧಿಕಾರನೂ ಮಾಡ್ತಾರೆ, ಅಂಗೇ ಕಾಸು ಮಾಡ್ಕಂತಾರೆ ಅಂದ ಸಂಭು. ಪಾಪ ಸಂಭುನೂ ಅಳಕ್ಕೆ ಸುರು ಮಾಡ್ದ. ಬುಡ್ಲಾ ಅಳಬೇಡ ಬುಡ್ಲಾ ಅಂದ ಸಿದ್ದ. ನಮ್ಮದು ಜಾತ್ಯಾತೀತ ರಾಜ್ಯ ಅಲ್ಲ ಕಲಾ.  ನಮ್ಮದು ಜಾತಿ ರಾಜ್ಯ ಅಂದ ಸುಬ್ಬ.

ಕಡೆಗೆ ಎಲ್ಲಾ ಸೇರ್ಕಂಡು, ನಿಂಗನ ಅಂಗಡಿಗೆ ಚಾ ಕುಡಿಯುವಾ ಅಂತಾ ಹೋದ್ವಿ. ಅಲ್ಲಿ ನಮ್ಮ ಮಿಕ್ಕಿದ ಗೆಳೆಯರು ಕೂಡ ಬೈ ಟು ಚಾ ಕುಡಿತಾ ಕುಂತಿದ್ರು, ಬರೀ ಚಲ್ಟಾ ಐತೆ ಅನ್ನೋರು. ಕಿಸ್ನ ಡಿಕಾಕ್ಸನ್ ಕಮ್ಮಿ ಆಗೈತೆ ಅಂತಿದ್ದ. ಮಗಾ ನಾಗ ಮಾತ್ರ ಇಂಗ್ಲೀಸ್ ಪೇಪರ್ ಓದ್ತಾ ಇದ್ದ. ಓದಿರೋದು ಮಾತ್ರ ಮೂರನೇ ಕಿಲಾಸು. ಪೋಟೋ ನೋಡ್ತಾ ಇದೀನಿ ಕನ್ರಲಾ ಅಂತಿದ್ದ ನಾಗ, ಅದೂ ಉಲ್ಟಾ ಮಡಿಕ್ಕಂಡು. ಏಥೂ.  ಏನ್ರಲಾ ಸಮಾಚಾರ ಅಂದ ತಂಬೂರಿ ನಾಗ. ನೋಡ್ರಲಾ ಒಂದು ಟೇಮಲ್ಲಿ ರೆಡ್ಡಿಗಳು ಅಂದ್ರೆ ಸರ್ಕಾರನೇ ಹೆದರೋದು ಕಲಾ, ಅವರು ಇಲ್ಲದೆ ಸರ್ಕಾರನೇ ನಡೆಸಕ್ಕೆ ಆಗಕ್ಕಿಲ್ಲಾ ಅನ್ನೋ ಟೇಮ್ ಇತ್ತು. ಯಡೂರಪ್ಪನು ಹೆದರೋದು. ಹಯ ಕಮಾಂಡ್ ಹೆದರೋದು. ಮತ್ತಷ್ಟು ಓದು »

18
ಆಗಸ್ಟ್

ಭ್ರಷ್ಟಾಚಾರ ಎಂದರೆ ಅನುಕೂಲ ಸಿಂಧು

– ಪವನ್ ಪರುಪತ್ತೆದಾರ   

ನನಗೊಬ್ಬ ಸ್ನೇಹಿತ ಇದ್ದಾನೆ ಪ್ರವೀಣ್ ಅಂತ, ನನ್ನ ಜೊತೆ ಓದಿಲ್ಲವಾದರೂ ನನ್ನ ಸಹಪಾಠಿ ಅವನು, ಒಂದೇ ತರಗತಿ ಆದರೆ ಬೇರೆ ಶಾಲೆ. ಅವನ ಕೆಲಸ ತಾಲ್ಲೂಕು ಕಚೇರಿಯಲ್ಲಿ. ಸರ್ಕಾರದಿಂದ ಕೊಟ್ಟ ಕೆಲಸ ಅಲ್ಲ, ಅವನೇ ಹುಡುಕಿ ಕೊಂಡಿರುವ ವೃತ್ತಿ. ನಿಜ ಹೇಳಬೇಕೆಂದರೆ ನಮ್ಮೂರಿನ ತಾಲ್ಲೂಕು ಕಚೇರಿಯೋಳಗಿರುವರಿಗಿಂತ ಇವನು ಹೆಚ್ಚು ಕೆಲಸ ಮಾಡುತ್ತಾನೆ. ಪಹಣಿ, registration, ಖಾತೆ ಬದಲಾವಣೆ, encumberance ಸರ್ಟಿಫಿಕೇಟ್, survey sketch ಕಾಪಿ, ನಿಮಗೇನು ಬೇಕು?? ತಾಲ್ಲೂಕು ಕಚೇರಿಯ ಗೇಟ್ ನ ಪ್ಯೂನ್ ಇಂದ ಹಿಡಿದು ತಹಶೀಲ್ದಾರ್ ತನಕ, ಏನು ಕೆಲಸ ಬೇಕಾದರುಮಾಡಿಕೊಡುತ್ತಾನೆ(ಮಾಡಿಸಿಕೊಡುತ್ತಾನೆ).

ಇತ್ತೀಚಿಗೆ ನನಗೆ ಬಹಳ ಜರೂರಾಗಿ ನಮ್ಮ ಜಮೀನಿನ ಪಹಣಿ ಬೇಕಾಗಿತ್ತು. ನಮ್ಮ ಊರಿನ ಪಹಣಿ ಕೇಂದ್ರ ಬಹಳ ದಿನಗಳಿಂದ ದುರಸ್ಥಿಯಲ್ಲಿತ್ತು. ಆಗಷ್ಟೇ ಕೊಡಲು ಶುರು ಮಾಡಿದ್ದರು. ಅದ್ದರಿಂದ ತಾಲ್ಲೂಕು ಕಚೇರಿ ಬಳಿ ಹೋಗಿ ಸಾಲು ನೋಡಿದೊಡನೆ ಭಯವಾಯ್ತು. ಅದರಲ್ಲೂ ನಮ್ಮ ಸರ್ಕಾರೀ ಕಛೇರಿಯೋಳಗಿನ ಗಣಕ ಯಂತ್ರಗಳು ಯಾವಾಗ ಕೆಡುತ್ತವೋ ಗೊತ್ತಿಲ್ಲ. ಇವತ್ತು ಕೆಟ್ಟರೆ ಇನ್ನು ರಿಪೇರಿ ಆಗುವುದು ಯಾವಾಗಲೋ??? ಅಲ್ಲಿವರೆಗೂ ನನಗೂ ಕಾಯುವ ಅವಕಾಶವಿರಲಿಲ್ಲ. ಮತ್ತಷ್ಟು ಓದು »

15
ಆಗಸ್ಟ್

ಯಾರಿಗೆ ಬಂತು ಎಲ್ಲಿಗೆ ಬಂತು 47 ರ ಸ್ವಾತಂತ್ರ್ಯ

– ಪವನ್ ಪರುಪತ್ತೆದಾರ್

ಮೊದಲಿಗೆ ನಿಲುಮೆಯ ಎಲ್ಲ ಓದುಗರಿಗೆ ಸ್ವಾತಂತ್ರ್ಯದಿನದ ಶುಭಾಶಯಗಳು. ೬೫ ನೆ ಸ್ವತಂತ್ರ ದಿನದ ಆಚರಣೆ ಎಲ್ಲ ಕಡೆ ಭರ್ಜರಿಯಿಂದ ಸಾಗಲಿ ಎಂದು ಆಶಿಸೋಣ. ೧೯೪೭ ಆಗಸ್ಟ್ ೧೫ ರಂದು ಸ್ವಾತಂತ್ರ್ಯ ಸಿಕ್ಕಿದ ವಿಷಯ ನಮಗೆಲ್ಲ  ತಿಳಿದಿದ್ದೆ. ಇಂದು  ನಮಗೆ  ಅ  ಸ್ವಾತಂತ್ರ್ಯ ಎಷ್ಟರ ಮಟ್ಟಿಗೆ  ಸಿಕ್ಕಿದೆಯೆಂದರೆ ನಮ್ಮ ರಾಷ್ಟ್ರ ಧ್ವಜವನ್ನು ಉಲ್ಟಾ ಹಾರಿಸುವ  ಮಟ್ಟಿಗೆ ಸಿಕ್ಕಿದೆ. ನಾ ಬೇಕಾದರೆ ಬಾಜಿ ಕಟ್ಟುತ್ತೇನೆ ನಾಳಿನ ಪೇಪರ್ ನೋಡಿ ನಮ್ಮ ರಾಜ್ಯದಲ್ಲೇ  ಒಂದೆರಡು  ಕಡೆಯಾದರು ಧ್ವಜವನ್ನು ಉಲ್ಟಾ ಹಾರಿಸಿರುತ್ತಾರೆ. ಬ್ರಿಟಿಷರ ದಬ್ಬಾಳಿಕೆ ಹದ್ದು ಮೀರಿದಾಗ ಹಿಂಸೆಯ ನಾನಾ ಮಾರ್ಗಗಳು ಪ್ರಯೋಗಿಸಿ ಹುತಾತ್ಮರಾದವರು, ನಂತರ ದೇಶವನ್ನೆಲ್ಲ ಒಟ್ಟಿಗೆ ಸಂಘಟಿಸಿ ಅಹಿಂಸೆಯಿಂದ ಮಾತ್ರ ನಮಗೆ ಸ್ವಾತಂತ್ರ್ಯ ಸಾಧ್ಯ ಎಂದು ತೋರಿಸಿಕೊಟ್ಟು ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದ  ಮಹಾತ್ಮರು, ನಮ್ಮ ಈಗಿನ ಸ್ವಾತಂತ್ರ್ಯವನ್ನೇನಾದರು ನೋಡಿದ್ದರೆ, ಇವರಿಗೆ  ಯಾಕಾದ್ರು ಸ್ವಾತಂತ್ರ್ಯ ಕೊಡಿಸಿದೆವೋ ಎಂದು ಮರುಗುತಿದ್ದರೆನೋ…..

ನನ್ನ  ಮಾತುಗಳು ಅತಿಶಯೋಕ್ತಿ ಎನಿಸಬಹುದು. ಆದರೆ ನಮ್ಮ ದೇಶದಲ್ಲಿ ಎಲ್ಲರಿಗು ಎಷ್ಟು ಸ್ವಾತಂತ್ರ್ಯವಿದೆ ಅಂತ ನಿಮಗೆ ಗೊತ್ತು. ಟ್ರಾಫಿಕ್ ಪೋಲಿಸ್ ಡಾಕುಮೆಂಟ್ ಸರಿ ಇದ್ದರು ಲಂಚ ಪಡೆಯುವ ಸ್ವಾತಂತ್ರ್ಯ, ಖಾತೆ ಬದಲಾವಣೆ ಮಾಡಿಸಬೇಕಾದರೆ ಪತ್ರ ಸ್ಕಾನ್ನಿಂಗ್ ಮಾಡುವನಿಂದ ಹಿಡಿದು, ಮೊಹರು ಹಾಕುವ ಗುಮಸ್ತನಿಂದ ಹಿಡಿದು, revinue inspector ತನಕ ಲಂಚ ಪಡೆಯುವ ಸ್ವಾತಂತ್ರ್ಯ. ಗೆದ್ದೊಡನೆ ತಮ್ಮ ಕ್ಷೇತ್ರದ ಜನತೆಯನ್ನು ಮರೆತು ರೆಸಾರ್ಟ್ ಗಳಲ್ಲಿ ವಾಸ್ತವ್ಯ ಹೂಡುವ ಸ್ವಾತಂತ್ರ್ಯ, ಪಕ್ಷದ ತತ್ವ ಸಿದ್ಧಾಂತಗಳನ್ನು ಮರೆತು ಪಕ್ಷಾಂತರ ಮಾಡುವ ಸ್ವಾತಂತ್ರ್ಯ, ರೈತನ ಜಮೀನನ್ನು ಕಸಿದು ಅಧುನಿಕರಣದ ಹೆಸರಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡುವ ಸ್ವಾತಂತ್ರ್ಯ, ನಮ್ಮ ಭೂಮಿಯ ಸಂಪತ್ತಲ್ಲದೆ ಅಂತರಂಗದಲ್ಲಿರುವ ತರಂಗಾಂತರಗಳನ್ನು ಮೋಸದಿಂದ ಮಾರುವ ಸ್ವಾತಂತ್ರ್ಯ, ಇನ್ನು ತಮಾಷೆಯೆಂದರೆ ತಪ್ಪು ಮಾಡಿ ದುಷ್ಕ್ರುತ್ಯಗಳನ್ನೆಸಗಿ ವಾರ್ಷಿಕ ೧೧ ಕೋಟಿ ಹಣವನ್ನು ಸರ್ಕಾರದಿಂದ ಖರ್ಚು ಮಾಡಿಸಿಕೊಳ್ಳೋ ಸ್ವಾತಂತ್ರ್ಯ ಮತ್ತು ತಪ್ಪಿತಸ್ತ ಎಂದು ಖಾತರಿಯಾದ ಮೇಲು ಶಿಕ್ಷೆ ಇಲ್ಲದೆ ಐಶಾರಾಮಿ ಜೀವನ ನಡೆಸುವ ಸ್ವಾತಂತ್ರ್ಯ, ಇಂತಹದ್ದೆನ್ನಲ್ಲ ವಿರೋಧಿಸಿದರೆ ವಿರೋಧಿಸಿದವರ ವಿರುದ್ದವೇ ಕೇಸು ಜಡಿಯುವ ಸ್ವಾತಂತ್ರ್ಯ.ಆಹಾ ಹೇಳುತ್ತಾ ಹೋದರೆ ಪುಟಗಟ್ಟಲೆ ಇಂತಹ ಸ್ವಾತಂತ್ರ್ಯಗಳು ಸಿಗುತ್ತವೆ.

ಮತ್ತಷ್ಟು ಓದು »

9
ಆಗಸ್ಟ್

ಕಾರ್ಯಕರ್ತ

– ಪವನ್ ಪರುಪತ್ತೆದಾರ

ಊರಲೆಲ್ಲ ತಲೆಯ ಮೇಲೆ ಹಾರ್ನ್ ಹೊತ್ತ ಆಟೋ ಒಂದೇ ಡೈಲಾಗ್ ಅನ್ನು ಹೇಳುತ್ತಾ ತಿರುಗಾಡುತಿತ್ತು,ಮರಯದಿರಿ ಮತ ಬಾಂಧವರೆ ಮರೆತು ನಿರಾಶರಾಗದಿರಿ, ಈಗ ಮರೆತು ಮುಂದೆ ಯಾಕಾದರೂ ಇಂತಹ ತಪ್ಪು ಮಾಡಿದೆನೋ ಎಂದು ಮರುಗದಿರಿ, ನಿಮ್ಮ ಮತವನ್ನು ನಮ್ಮ ಕಮಲಣ್ಣನ ಪಾರ್ಟಿಯ ಅಭ್ಯರ್ಥಿಯಾದಂಥ ಬಡವರ ಬಂಧು ಧಿಮಂತ ನಾಯಕ ಶ್ರೀಮಾನ್ ಸಿದ್ದಣ್ಣ ನವರಿಗೆ ನೀಡಿ, ಸಿದ್ದಣ್ಣ ನವರಿಗೆ ಮತ ನಮ್ಮೂರಿನ ಜನತೆಗೆ ಹಿತ  ಇದನ್ನೇ ಮತ್ತೆ ಮತ್ತೆ ಅರಚುತ್ತ ಸಾಗುತಿದ್ದ ಆಟೋ ಒಳಗಿಂದ ಸುರೇಶ ಸಿದ್ದಣ್ಣನ ಹೆಸರಿನಲ್ಲಿರುವಂತಹ ಒಂದು pamplet ಅನ್ನು ಹಂಚುತಿದ್ದ, ಅದಕ್ಕಾಗಿ ಮಕ್ಕಳು ಆ ಆಟೋ ಹಿಂದೆಯೇ ಓಡುತ್ತಾ ಇದ್ದರು………

ಅಂಗಡಿ ಬೀದಿಯಲ್ಲಿ ಅಬ್ಧುಲ್ಲ ತನ್ನ ಒಂದು ಸಣ್ಣ ಗುಂಪನ್ನು ಕಟ್ಟಿಕೊಂಡು ಅಲ್ಲಿರುವ ಕರೆಂಟ್ ಕಂಬಗಳನೆಲ್ಲ ನೋಡುತ್ತಾ, ಅರೆ ಇಸ್ಕಿ ಕ್ಯಾ ರೆ ಕಮಲಣ್ಣನ ಪಾರ್ಟಿ ಅವ್ರು ಆಗಲೇ banner ಗೆ ಕಟ್ಬಿಟ್ಟಿ ಅವ್ರೆ. ನಮ್ದುಕೆ ಇನ್ನು ಎಲ್ಡು ಅಡಿ ಮೇಲಕ್ಕೆ ಕಟ್ಟೋಣ ಅಂತ ತನ್ನ ಶಿಷ್ಯನ್ನ ಕರೆದ, ಹೇ ಪಟ್ಟೆ ಅರೆ ಇದರ್ ಅಂತ ಕಂಬ ಹತ್ತಿಸಿ ಹಸ್ತಣ್ಣನ ಪಾರ್ಟಿ ಕಡೆ ಇಂದ ನಿಂತಿದ್ದ ಸನಾಉಲ್ಲ ನ ಫೋಟೋ ಸಮೇತ ಇರೋ ಹಸ್ತಣ್ಣನ ಪಾರ್ಟಿಗೆ ಮತ ನಮ್ಮೂರಿನ ಜನಕ್ಕೆ ಹಿತ. ಅಂತ ಇರೋ banner ಗಳನ್ನ ಕಟ್ಟಿಸ್ತ ಇದ್ದ. ಅಷ್ಟರಲ್ಲೇ ಅಲ್ಲಿದ್ದ ಕೆಲವರು ಗುಂಪು ಸೇರಿ ಇವರು ಮಾಡುತ್ತಾ ಇದ್ದ ಕೆಲಸವನ್ನು ಗಮನಿಸ್ತ ಇದ್ರು, ಅವರನ್ನ ನೋಡಿದ ಅಬ್ದುಲ್ಲ ಹೇ ಅಣ್ಣ ನಮಸ್ಕಾರ ನಮ್ಮ ನೆಚ್ಚಿನ ನಾಯಕ, ಬಡವರ್ಗೆ ಸಹಾಯ ಮಾಡೋದ್ರಾಗ ಎತ್ತಿದ ಕೈ ನಮ್ ಸನಾಉಲ್ಲಾದು. ನಿಮ್ಮದು ಎಲ್ಲರ್ದುಗೆ ಓಟು ನಮ್ದು ಹಸ್ತಣ್ಣ ಪಾರ್ಟಿ ಗೆ ಹಾಕಿ ಅಂತ ಭಾಷಣ ಮಾಡಿದ. ಅದೇ ಬೀದಿಲಿ ಹಾದು ಹೋಗುತ್ತಿದ್ದ ಕಮಲಣ್ಣನ ಪಾರ್ಟಿಯ ಒಬ್ಬ ವ್ಯಕ್ತಿ ಇದನ್ನ ನೋಡಿ ಮಖ ಕೆಂಪಗ ಮಾಡಿಕೊಂಡು ಹೋದ……. ಮತ್ತಷ್ಟು ಓದು »