ಬೆನ್ನಿ ಹಿನ್ ಕಂಡರೆ ಪ್ರಗತಿಪರರಿಗೇಕೆ ಅಷ್ಟೊಂದು ಭಯ!?
– ನರೇಂದ್ರ ಕುಮಾರ್ ಎಸ್.ಎಸ್
ಬೆನ್ನಿ ಹಿನ್ ಮತ್ತೆ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. 2005ರಲ್ಲಿ ಬೆನ್ನಿ ಹಿನ್ ಬೆಂಗಳೂರಿಗೆ ಆಗಮಿಸಿದ್ದಾಗ ಬಹಳ ವಿರೋಧ ವ್ಯಕ್ತವಾಗಿತ್ತು. ಆದರೆ, ರಾಜ್ಯ ಸರಕಾರದ ಸಹಕಾರದಿಂದಾಗಿ, ಆತನ “ಕಣ್ ಕಟ್ ಪ್ರದರ್ಶನ ಮತ್ತು ಮತಾಂತರ” ನಿರಾತಂಕವಾಗಿ ನಡೆಯಿತು. ಆ ನಂತರ ಆನೇಕ ವರ್ಷಗಳ ಕಾಲ ಕಾಂಗ್ರೆಸ್ ಅಧಿಕಾರದಿಂದ ಹೊರಗುಳಿಯಬೇಕಾಯಿತು (ಆತನ ಕಣ್ ಕಟ್ನ ಪ್ರಭಾವವೂ ಇರಬಹುದೇ?). ಇದೀಗ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಮತ್ತು ಕೂಡಲೇ “ಬೆನ್ನಿ ಹಿನ್ ಅವರ ಕಣ್ ಕಟ್ ಕಾರ್ಯಕ್ರಮ” ಆಯೋಜಿತವಾಗಿದೆ! ಇದು ಕೇವಲ ಕಾಕತಾಳೀಯವಿರಲಾರದು ಅಲ್ಲವೇ!?
ಬೆನ್ನಿ ಹಿನ್ ಇಸ್ರೇಲಿನ ಜೆರೂಸೆಲಂನಲ್ಲಿ ಜನಿಸಿ, ಮುಂದೆ ಅಮೆರಿಕದ ಪ್ರಜೆಯಾದರು. ಅವರೊಬ್ಬ ಕ್ರೈಸ್ತ ಮತ ಪ್ರಚಾರಕ. ಅವರು ಹೋದಲ್ಲೆಲ್ಲಾ ಪ್ರಾರ್ಥನಾ ಸಭೆಗಳನ್ನು ನಡೆಸುತ್ತಾರೆ. ತನ್ನ ಸಭೆಗಳಲ್ಲಿ ಹಾಜರಿದ್ದು, ತನ್ನೊಡನೆ ಪ್ರಾರ್ಥನೆ ಮಾಡಿದವರಿಗೆ ಮತ್ತು ತನ್ನನ್ನು ಸ್ಪರ್ಶಿಸಿದವರಿಗೆ ಯಾವುದೇ ರೋಗವಿದ್ದರೂ ಗುಣವಾಗುತ್ತದೆ, ಎಂದು ಅವರು ಹೇಳಿಕೊಳ್ಳುತ್ತಾರೆ. “ಕ್ಯಾನ್ಸರ್/ ಏಡ್ಸ್ ನಂತಹ ಕಾಯಿಲೆಗಳನ್ನೂ ಕೇವಲ ಸ್ಪರ್ಶದ ಮೂಲಕವೇ ವಾಸಿ ಮಾಡುತ್ತೇನೆ” ಎಂದು ಹೇಳಿ ಜನರನ್ನು ಯಾಮಾರಿಸಲು ಪ್ರಯತ್ನಿಸುತ್ತಾರೆ! 3 ರಿಂದ 5 ದಿನಗಳ ಕಾಲ ನಡೆಯುವ ಇವರ ಕಾರ್ಯಕ್ರಮಗಳಲ್ಲಿ, ಕೊನೆಯ ದಿನಗಳು ಹತ್ತಿರ ಬಂದಂತೆ, ವೇದಿಕೆಯ ಮೇಲೆ ನಡೆಯುವ ನಾಟಕವೂ ಹೆಚ್ಚುತ್ತದೆ. ಇದ್ದಕ್ಕಿದ್ದಂತೆ ಮೈಮೇಲೆ ಏನೋ ಬಂದಂತೆ, ಕಣ್ಣೀರು ಸುರಿಸುತ್ತಾ ಕೆಲವರು ನುಗ್ಗುತ್ತಾರೆ. ತಮಗೆ ಯಾವುದೇ ಔಷಧದಿಂದಲೂ ಗುಣವಾಗದ ಖಾಯಿಲೆಯಿತ್ತು ಮತ್ತು ಇಲ್ಲಿ ಪ್ರಾರ್ಥಿಸಿದ ನಂತರ ಖಾಯಿಲೆ ವಾಸಿಯಾಗಿಬಿಟ್ಟಿತು; ಬೆನ್ನಿ ಹಿನ್ ಅವರೇ ಪ್ರತ್ಯಕ್ಷ ದೇವರು; ಎಂದೆಲ್ಲಾ ಕುಣಿದಾಡುತ್ತಾರೆ. ಇದೆಲ್ಲಾ ಪೂರ್ವನಿಯೋಜಿತ ನಾಟಕ ಎಂಬುದು ಹಲವು ಬಾರಿ ನಿರೂಪಿತವಾಗಿದ್ದರೂ, ಮುಂದಿನ ಬಾರಿಯೂ ಇದೇ ರೀತಿಯ ನಾಟಕ ಇದ್ದೇ ಇರುತ್ತದೆ. ಈ ರೀತಿಯ ನಾಟಕ ನಡೆಯದಿದ್ದರೆ, ಇವರ ಸಭೆಗೆ ಜನರೇ ಬರುವುದಿಲ್ಲವಲ್ಲ; ಹೀಗಾಗಿ ನಾಟಕ ನಿಲ್ಲಿಸುವಂತಿಲ್ಲ!
ಮೋಕ್ಷದ ಹುಡುಕಾಟದಲ್ಲಿ ಕಳೆದುಹೋದ “ಸಿದ್ಧಾರ್ಥ”
– ಡಾ ಅಶೋಕ್ ಕೆ ಆರ್
ಜರ್ಮನ್ ಲೇಖಕ ಹರ್ಮನ್ ಹೆಸ್ಸೆ (Hermann Hesse) 1922ರಲ್ಲಿ ಬರೆದ ಕಾದಂಬರಿ ‘ಸಿದ್ಧಾರ್ಥ’. ಹಲವು ವರುಷಗಳು ಕಳೆದ ನಂತರ ಪುಸ್ತಕವೊಂದರ ಕಾಪಿರೈಟ್ ಮುಗಿದುಹೋಗುತ್ತದೆ. ಅಂಥಹ ಪುಸ್ತಕಗಳನ್ನು ‘ಗುಟೆನ್ ಬರ್ಗ್’ ಎಂಬ ಅಂತರ್ಜಾಲ ತಾಣ ಮೊಬೈಲ್, ಟ್ಯಾಬ್ಲೆಟ್, ಕಂಪ್ಯೂಟರುಗಳಲ್ಲಿ ಓದಲನುಕೂಲವಾಗುವಂತೆ ಮಾಡುತ್ತಿದೆ. ‘ಗುಟೆನ್ ಬರ್ಗಿನ’ ಗೃಂಥಾಲಯದಲ್ಲಿ ಸಾವಿರಾರು ಪುಸ್ತಕಗಳು ಲಭ್ಯವಿದೆ. ‘ಸಿದ್ಧಾರ್ಥ’ ಎಂಬ ಶೀರ್ಷಿಕೆ ನೋಡಿ ‘ಬುದ್ಧ’ನ ಬಗೆಗೆ ಪಾಶ್ಚಿಮಾತ್ಯ ಚಿಂತನೆಯ ಪುಸ್ತಕವಿರಬೇಕು, ಪಶ್ಚಿಮದವರಿಗೆ ಕಂಡ ಬುದ್ಧನ ರೂಪ ಯಾವುದಿರಬೇಕೆಂಬ ಕುತೂಹಲದಿಂದ ಪುಸ್ತಕವನ್ನು ಓದಲಾರಂಭಿಸಿದೆ.
ಇಲ್ಲಿ ಬುದ್ಧನಿದ್ದಾನೆ; ಆದರವನು ‘ಸಿದ್ಧಾರ್ಥ’ನಲ್ಲ ‘ಗೌತಮ’. ಬುದ್ಧನನ್ನೇ ಧಿಕ್ಕರಿಸಿ ನಡೆಯುವ ಸಿದ್ಧಾರ್ಥನಿದ್ದಾನೆ. ಕಾದಂಬರಿಯ ನಾಯಕ ‘ಸಿದ್ಧಾರ್ಥ’ ಬ್ರಾಹ್ಮಣನೊಬ್ಬನ ಮಗ. ‘ಅರಿವು’ ಪಡೆದು ಮುಕ್ತಿ ಪಡೆಯಲೋಸಗ ಮನೆ ತೊರೆದು ಜ್ಞಾನಿಗಳೆಂದು ಹೆಸರಾದ ಸಮಾನರೊಡನೆ ಹೋಗುವ ಸಂಕಲ್ಪ ಮಾಡುತ್ತಾನೆ. ಸಿದ್ಧಾರ್ಥನ ತಂದೆ ಒಪ್ಪುವುದಿಲ್ಲ. ಸಿದ್ಧಾರ್ಥ ಹಟ ಬಿಡುವುದಿಲ್ಲ, ಅನುಮತಿ ಕೊಡುವವರೆಗೂ ನಿಂತ ಸ್ಥಳದಿಂದ ಅಲುಗಾಡುವುದಿಲ್ಲ. ಮಗನ ಕಾಠಿಣ್ಯವನ್ನು ನೋಡಿ ಬೆಚ್ಚಿ ಬೇಸರದಿಂದಲೇ ಮಗನನ್ನು ಆಶೀರ್ವದಿಸಿ ಕಳುಹಿಸುತ್ತಾರೆ. ತನ್ನ ಗೆಳೆಯ ಗೋವಿಂದನ ಜತೆಗೆ ಅರಿವಿನ ಪಯಣ ಪ್ರಾರಂಭಿಸುತ್ತಾನೆ. ಕೆಲವು ದಿನಗಳಲ್ಲೇ ಪಡೆದ ಜ್ಞಾನ ತನ್ನನ್ನು ತಾನೇ ಅರಿಯುವುದಕ್ಕೆ ಸಾಲುತ್ತಿಲ್ಲವೆನ್ನಿಸಿ ಮನೋಕ್ಷೋಬೆಗೊಳಗಾಗುತ್ತಾನೆ. ರಾಜತ್ವವನ್ನು ತೊರೆದು ಜ್ಞಾನೋದಯ ಪಡೆದ ಗೌತಮ ಬುದ್ಧನ ಹೆಸರು ಪ್ರಖ್ಯಾತವಾಗುತ್ತಿದ್ದ ಕಾಲವದು. ಗೆಳೆಯ ಗೋವಿಂದನ ಜೊತೆಗೆ ಬುದ್ಧನ ತತ್ವಗಳನ್ನರಿಯಲು ಹೊರಡುತ್ತಾನೆ ಸಿದ್ಧಾರ್ಥ. ಬುದ್ಧನ ಉಪದೇಶಗಳಿಂದ ಈರ್ವರೂ ಪ್ರಭಾವಿತರಾಗುತ್ತಾರೆ. ‘ಸಮಾನ’ರು ತಿಳಿಸಿಕೊಟ್ಟದ್ದಕ್ಕಿಂತ ಹೆಚ್ಚಿನ ಅರಿವು ಬೌದ್ಧ ಧರ್ಮದಲ್ಲಿದೆ ಎಂದು ಮನವರಿಕೆಯಾದರೂ ಸಿದ್ಧಾರ್ಥ ಬುದ್ಧನ ಶಿಷ್ಯನಾಗಲು ಆಶಿಸುವುದಿಲ್ಲ.
ಕಡಲು ನಿನ್ನದೇ ಹಡಗು ನಿನ್ನದೇ ಮುಳುಗದಿರಲಿ ಬದುಕು -೨
– ಮು ಅ ಶ್ರೀರಂಗ ಬೆಂಗಳೂರು
(ನಿಲುಮೆಯಲ್ಲಿ ೫-೧೨-೨೦೧೩ರಂದು ಪ್ರಕಟವಾದ ‘ದೀಪವೂ ನಿನ್ನದೇ ಗಾಳಿಯೂ ನಿನ್ನದೇ ಆರದಿರಲಿ ಬೆಳಕೂ’.……… . ನೆನಪುಗಳ ಮುಂದುವರೆದ ಭಾಗ)
ಪಿ ಯು ಸಿ ಯಲ್ಲಿ ನನಗೆ ಕೆಮಿಸ್ಟ್ರಿ ಮತ್ತು ಬಯಾಲಜಿ ವಿಷಯಗಳು ಕಷ್ಟವಾಗಿತ್ತು. ಅದರಿಂದ ಬಿಎಸ್ಸಿಯಲ್ಲಿ ಅದನ್ನು ಬಿಟ್ಟು ಫಿಸಿಕ್ಸ್ ಮ್ಯಾಥಮೆಟಿಕ್ಸ್ ಮತ್ತು ಸ್ಟ್ಯಾಟಿಸ್ಟಿಕ್ಸ್ ವಿಷಯಗಳನ್ನು ತೆಗೆದುಕೊಂಡಿದ್ದೆ. ಮೂರು ವರ್ಷಗಳು ಬಿಎಸ್ಸಿಯಲ್ಲಿ ಸ್ಟ್ಯಾಟಿಸ್ಟಿಕ್ಸ್ ಅನ್ನು ಓದಿದ್ದರಿಂದ ಆ ವಿಷಯದಲ್ಲೇ ಎಂಎಸ್ಸಿ ಮಾಡಲು ನಿರ್ಧರಿಸಿದೆ. ಕೋರ್ಸಿಗೆ ಸೇರಿದ್ದಾಯ್ತು. ಆದರೆ ತರಗತಿಯ ಪಾಠಗಳು ಅರ್ಥವಾಗುತ್ತಿರಲಿಲ್ಲ. ಹೀಗಾಗಿ ಮೂರ್ನಾಲಕ್ಕು ತಿಂಗಳ ನಂತರ ಓದನ್ನು ಬಿಟ್ಟು ಊರಿಗೆ ವಾಪಸ್ಸು ಬಂದುಬಿಟ್ಟೆ. ನಮ್ಮ ತಂದೆ ಸ್ಕೂಲಿನ ವೇಳೆ ಮುಗಿದ ನಂತರ ಹತ್ತು ಹದಿನೈದು ಹುಡುಗರಿಗೆ ಮನೆ ಪಾಠ ಮಾಡುತ್ತಿದ್ದರು. ಆಗ ತಿಂಗಳಿಗೆ ಒಬ್ಬ ಹುಡುಗನಿಗೆ ಹತ್ತು ರೂಪಾಯಿ ಫೀಸು. ಅದನ್ನು ಆ ಹುಡುಗರು ಕೊಡಲು ನಿಗದಿತ ದಿನಾಂಕ ಎಂಬುದೇನಿಲ್ಲ. ತಿಂಗಳ ಮೊದಲನೇ ತಾರೀಖಿನಿಂದ ಕೊನೆಯ ದಿನದ ತನಕ ಯಾವಾಗ ಅವರಿಗೆ ಅನುಕೂಲವೋ ಆಗ ಕೊಡುತ್ತಿದ್ದರು. ಜತೆಗೆ ಆ ಸಲ ಹಾಸ್ಟೆಲ್ ನಲ್ಲಿ ಬದಲಾದ ನಿಯಮಗಳಿಂದ ನನಗೆ ಶುಲ್ಕದಲ್ಲಿ ಅರ್ಧ ಮಾಫಿ ಸಿಗಲಿಲ್ಲ. ಎಷ್ಟೇ ಕಷ್ಟವಾದರೂ ನನ್ನ ಮೇಲೆ ಭರವಸೆಯಿಟ್ಟಿದ್ದ ನನ್ನ ಅಪ್ಪನ ಹಣವನ್ನು ಸುಖಾಸುಮ್ಮನೆ ಖರ್ಚು ಮಾಡಿಕೊಂಡು ಬೆಂಗಳೂರಿನಲ್ಲಿರುವುದು ನನಗೆ ಇಷ್ಟವಾಗಲಿಲ್ಲ. ಬಹುಶಃ ನನ್ನ ಬುದ್ಧಿ ಶಕ್ತಿ ಪದವಿ ಮಟ್ಟದ್ದಷ್ಟೇ ಆಗಿರಬೇಕು. ಇದನ್ನೆಲ್ಲಾ ಯೋಚಿಸಿ ನನ್ನ ಅಪ್ಪನಿಗೆ ಒಂದು ಕಾಗದ ಬರೆದೆ. ಅದರಲ್ಲಿ ನನ್ನ ತಳಮಳ, ದುಃಖವನ್ನೆಲ್ಲಾ ವಿವರವಾಗಿ ತಿಳಿಸಿದೆ . ಅದು ತಲುಪಿದ ಮಾರನೇ ದಿನ ಮಧ್ಯಾನ್ಹದ ವೇಳೆಗೆ ನನ್ನ ಅಪ್ಪ ಬಂದರು. ನಮ್ಮ ಹಾಸ್ಟೆಲ್ ಹತ್ತಿರದಲ್ಲಿ ಒಂದು ಪಾರ್ಕಿತ್ತು. ಅಲ್ಲಿಗೆ ಹೋಗಿ ಕಲ್ಲು ಬೆಂಚೊಂದರ ಮೇಲೆ ಇಬ್ಬರೂ ಕುಳಿತೆವು. ತಮ್ಮ ಷರ್ಟಿನ ಜೇಬಿನಿಂದ ನಾನು ಬರೆದ ಪತ್ರವನ್ನು ತೆಗೆದುಕೊಂಡು ಮತ್ತೊಮ್ಮೆ ಓದಿಕೊಂಡು “ನಿನ್ನ ಇಷ್ಟ”ಎಂದು ಹೇಳಿ ಎದ್ದರು. ಹಾಸ್ಟೆಲ್ಲಿಗೆ ವಾಪಸ್ಸು ಬಂದು ಲೆಕ್ಕ ಚುಕ್ತಾ ಮಾಡಿ ನನ್ನ ಗಂಟು ಮೂಟೆಯೊಂದಿಗೆ ಊರಿಗೆ ವಾಪಸ್ಸು ಬಂದೆವು.
ಸಾಸಿವೆ ತಂದ ಜೀವನ್ಮುಖಿ
-ಜಿ.ವಿ.ಜಯಶ್ರೀ,ಪರ್ತಕರ್ತೆ
“Where there’s a will, there’s a way” ಭಾರತಿ ಬಿ.ವಿ. ಅವರ ‘ಸಾಸಿವೆ ತಂದವಳು’ ಕೃತಿಯನ್ನು ಓದಿದಾಗ ಮೇಲಿನ ಸೂಕ್ತಿಗಳಿಗೊಂದು ಅರ್ಥ ಸಿಗುತ್ತದೆ. ಕ್ಯಾನ್ಸರ್ ಲೋಕದಲ್ಲಿ ಬಂಧಿ ಆದಾಗ ಎದುರಿಸಿದ ಕಷ್ಟ ಕೋಟಲೆಗಳನ್ನು ಸರಳವಾಗಿ ಬರೆದು, ಹದವಾದ ಹಾಸ್ಯದ ಸವಿ ನೀಡಿರುವ ಭಾರತಿಯ ವ್ಯಕ್ತಿತ್ವ ಅನಾವರಣಗೊಳ್ಳುತ್ತಾ ಸಾಗುತ್ತದೆ. ಒಂದು ಸರಳ ಕಾಯಿಲೆಯನ್ನು ದೊಡ್ಡ ಕಾಯಿಲೆಯೆಂದು ಭ್ರಮಿಸುವ ಪೈಕಿಗಳಲ್ಲಿ ಭಾರತಿ ಸಹ ಸೇರಿದ್ದಾರೆ ಎಂದು ತಮ್ಮ ಬಗ್ಗೆ ಹಾಸ್ಯ ಬೆರಸಿ ಹೇಳುತ್ತಾರೆ. ಪೂರಕ ಉದಾಹರಣೆ ಗಳನ್ನು ನೀಡುತ್ತಾ ತಮಗೆ ಬಂದ ಗಂಟಲು ನೋವು ಕ್ಯಾನ್ಸರ್ ಆಗಿ ಮಾರ್ಪಟ್ಟಿರಬಹುದು ಎನ್ನುವ ಆತಂಕ, ತಲೆಸುತ್ತು ಟ್ಯೂಮರ್ ನಿಂದ ಬರುತ್ತಿದೆ ಎನ್ನುವ ಭ್ರಮೆಯಲ್ಲಿ ಮುಳುಗೇಳುವ ಲೇಖಕಿ ಓದಿಕೊಂಡ ಆಧುನಿಕ ಮನದ ಹೆಣ್ಣು ಮಕ್ಕಳ ಪ್ರತೀಕವಾಗಿದ್ದಾರೆ. ತುಂಬಾ ಅತಿ ಅನ್ನಿಸುವ ಭಯಾತಂಕಗಳು ಯಾವುದೇ ಬಗೆಯಲ್ಲೂ ತೊಂದರೆ ಎಸೆಗದ ಸಮಸ್ಯೆಗಳ ಬಗ್ಗೆ ಹೆದರಿಕೆ ಹೊಂದಿದ್ದವಳಿಗೆ ಸ್ತನ ಕ್ಯಾನ್ಸರ್ ತನ್ನ ದೇಹದ ಭಾಗವಾಗಿದೆ ಎಂದು ತಿಳಿದಾಗ ಎಂತಹ ಮನಸ್ಥಿತಿ ಉಂಟಾಗಿರ ಬಹುದು?
ಹುಟ್ಟಿದವನು ಸಾಯಲೇ ಬೇಕು ಎನ್ನುವುದು ಓದುವುದಕ್ಕೆ ಚಂದ. ಲೇಖಕಿ ಸ್ಥಿತಿಯೂ ಅಂತಹುದ್ದೇ ಆದಾಗ ತನ್ನನ್ನು ತಾನು ಕೌನ್ಸಿಲಿಂಗ್ ಮಾಡಿ ಕೊಂಡ ಬಗೆ ಮತ್ತು ಸಮಸ್ಯೆಯನ್ನು ಸರಳವಾಗಿ ತೆಗೆದು ಕೊಳ್ಳುವ ಮನಸ್ತತ್ವ ಬೆಳೆಸಿಕೊಂಡ ಪರಿ ನಿಜಕ್ಕೂ ಮಾದರಿ. ಈ ಪುಸ್ತಕ ಫ್ಯಾಂಟಸಿಗಳನ್ನು ಹೊಂದಿದೆ ಎಂಬ ಭಾವನೆ ಓದುಗನಲ್ಲಿ ಇದ್ದರೆ, ಅದನ್ನು ಆರಂಭಿಕ ಪುಟಗಳೇ ದೂರ ಮಾಡಿ ಬಿಡುತ್ತದೆ.ತನಗೆ ಸ್ತನ ಕ್ಯಾನ್ಸರ್ ಇರಬಹುದಾದ ಸಾಧ್ಯತೆಗಳ ಬಗ್ಗೆ ಹೆದರಿರುವಾಗ ಆಕೆಯನ್ನು ಪ್ರಾರಂಭದಲ್ಲೇ ಪರೀಕ್ಷಿಸಿದ ದಾದಿ ಮತ್ತು ವೈದ್ಯರ ವರ್ತನೆ ಈಗ ಸಾಮಾನ್ಯ . ನಂತರ ಅರ್ಬುದ ರೋಗ ಇದೆ ಎನ್ನುವುದು ತಿಳಿದ ಬಳಿಕ ಮುಂದಿನ ಪಯಣದ ಬಗ್ಗೆ ಬರೆಯುತ್ತಾ ಕೀಮೋ ಥೆರಪಿಯ ವರ್ಣನೆ ಮಾಡುತ್ತಾರೆ. ಅದರಲ್ಲಿ ನೀಡುವ ಔಷಧಿಯು ಆಕೆಯನ್ನು ಅಕ್ಷರಶಃ ಬಕಾಸುರಿಯನ್ನಾಗಿ ಮಾಡುವ ಬಗೆ, ಈ ಸಮಸ್ಯೆಯು ಆಕೆ ಸ್ವಾತಂತ್ರ ಮತ್ತು ದೇಹದ ಚೈತನ್ಯ ಕಸಿದ ರೀತಿ ಹೇಳುತ್ತಾ, ವೈದ್ಯರು ತನಗೆ ತಿಳಿಸಿದ ಆಹಾರ ಹಾಗೂ ಜೀವನ ಶೈಲಿಯ ಬಗ್ಗೆ ಹೇಳುವ ರೀತಿ ಕಿರಿಕಿರಿ ಉಂಟು ಮಾಡುವುದಿಲ್ಲ.
ಕನ್ನಡದ ನಾಡಿಮಿಡಿತ ಅರಿತ ಕಥೆಗಾರ: ‘ನಾಡಿ’
– ರಾಘವೇಂದ್ರ ಅಡಿಗ ಎಚ್ಚೆನ್
*ಮಡಿಕೇರಿಯಲ್ಲಿ ಬರುವ ಜನವರಿ 7 ರಿಂದ 9 2014ರ ವರೆಗೆ ನಡೆಯಲಿರುವ ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಾಡಿನ ಖ್ಯಾತ ಸಾಹಿತಿ ನಾ. ಡಿಸೋಜರವರು ಆಯ್ಕೆಗೊಂಡಿದ್ದಾರೆ. ಸಾಮಾಜಿಕ ಸಮಸ್ಯೆಗಳನ್ನು ಆಧಾರವಾಗಿಟ್ಟುಕೊಂಡು ಇವರು ಸೃಷ್ಟಿಸಿರುವ ಅನೇಕ ಕಥೆ-ಕಾದಂಬರಿಗಳು ಜನಮಾನಸವನ್ನು ಸೂರೆಗೂಂಡಿವೆ. ಅದರಲ್ಲಿ ಕೆಲವಷ್ಟು ಚಲನಚಿತ್ರಗಳಾಗಿಯೂ ಹೆಸರು ಮಾಡಿವೆ. ಇಂತಹಾ ಅಪೂರ್ವ ಸಾಹಿತಿಯೊಬ್ಬರಿಗೆ ಕನ್ನಡ ಸಮ್ಮೇಳನದ
ಅಧ್ಯಕ್ಷಗಿರಿ ಪ್ರಾಪ್ತವಾದ ಹಿನ್ನೆಲೆಯಲ್ಲಿ ಅವರ ಬದುಕು-ಬರಹದ ಕುರಿತ ಕಿರುನೋಟವೊಂದು ಇಲ್ಲಿದೆ.*
ಈ ಬಾರಿ ಕರ್ನಾಟಕದ ಕಾಶ್ಮೀರ ಕೊಡಗಿನಲ್ಲಿ ನಡೆಯಲಿರುವ ಎಂಭತ್ತನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನಮ್ಮ ನಿಮ್ಮೆಲ್ಲರ ಮೆಚ್ಚಿನ ಸಾಹಿತಿ ನಾ ಡಿಸೋಜಾರವರಿಗೆ ಈ ಮೂಲಕ ನನ್ನ ಅಭಿನಂದನೆಗಳನ್ನು ತಿಳಿಸಬಯಸುತ್ತೇನೆ.
ಕನ್ನಡ ಭಾಷೆ, ಸಾಹಿತ್ಯ ಉಳಿಯಬೇಕು. ಸರ್ಕಾರ ಕನ್ನಡ ಮಾದ್ಯಮವನ್ನು ಕಡ್ಡಾಯಗೊಳಿಸಬೇಕು,ಇದೇ ಮುಂತಾದ ಹೇಳಿಕೆಗಳನ್ನು ನೀಡುತ್ತಾ ತಾವು ಹಿಂದಿನಿಂದ ಆಂಗ್ಲ ಸಾಹಿತ್ಯ, ಭಾಷೆಗೆ ಕುಮ್ಮಕ್ಕು ನೀಡುತ್ತಿರುವ, ಜತೆಗೆ ಆಡಳಿತಾರೂಢ ಸರ್ಕಾರಗಳಿಂದ ತಮಗೆ ಬೇಕಾದ ಅನುಕೂಲಗಳನ್ನು ಪಡೆದುಕೊಳ್ಳುವ ಸಲುವಾಗಿ ತಮ್ಮನ್ನು ತಾವು ಸಾಹಿತಿಗಳೆಂದು ಬಿಂಬಿಸಿಕೊಳ್ಳುವ ಒಂದು ವರ್ಗವೇ ನಮ್ಮ ನಡುವಿರುವ ಈ ದಿನಗಳಲ್ಲಿ ತಾವು ಬದುಕಿ ಬಾಳಿದ ಮಲೆನಾಡಿನ ಐಸಿರಿಯ ನಡುವಿನ ಪುಟ್ಟ ಊರು ಸಾಗರದ ಸುತ್ತ ಮುತ್ತ ನಡೆವ ಬೆಳವಣಿಗೆಗಳಿಂದ ಸ್ಪೂರ್ತಿಗೊಂಡು ಅತಿ ಸಾಮಾನ್ಯ ವಸ್ತುವನ್ನಿಟ್ಟುಕೊಂಡು ಓದುಗರಮನಸ್ಸಿಗೆ ತಟ್ಟುವಂತೆ ಕಥೆ ಹೆಣೆಯಬಲ್ಲ ಜಾಣ ಕಥೆಗಾರರಾದ ನಾ.ಡಿಸೋಜಾರಂಥವರು ಯಾವುದೇ ಪ್ರಚಾರವನ್ನು ಬಯಸದೆ ತಮ್ಮ ಪಾಡಿಗೆ ತಾವು ಕನ್ನಡದ ಕೆಲಸದಲ್ಲಿ ತೊಡಗಿರುವಂತಹವರೂ ನಮ್ಮೊಡನಿರುವುದು ನಮಗೆಲ್ಲರಿಗೂ ನಿಜಕ್ಕೂ ಖುಷಿಯ ಸಂಗತಿ. ಇಂತಹಾ ಅಪ್ಪಟ ಕನ್ನಡ ಪ್ರೇಮಿಯೊಬ್ಬರಿಗೆ ಈ ಬಾರಿ ಕನ್ನಡಮ್ಮನ ತೇರನ್ನೆಳೆಯುವ ಅವಕಾಶ ದೊರೆತಿರುವುದು ನಿಜಕ್ಕೂ ಸ್ವಾಗತಾರ್ಹ. ಈ ಹಿನ್ನೆಲೆಯಲ್ಲಿ ನಾ. ಡಿಸೋಜಾರವರ ಬದುಕು-ಬರಹಗಳ ಕುರಿತ ಸಂಕ್ಷಿಪ್ತ ನೋಟ ಇಲ್ಲಿದೆ.
ಕೇಜ್ರಿವಾಲ್ ಮತ್ತು ಮೋದಿ – ಹೀಗೊಂದು ಮುನ್ನೋಟ
– ಗಣೇಶ್ ಕೆ. ದಾವಣಗೆರೆ
ರಾಹುಲ ಗಾಂಧೀ ಮತ್ತು ಅರವಿಂದ ಕೇಜ್ರಿವಾಲ್ ಒಂದೇ ವಯಸ್ಸಿನವರು. ಇಬ್ಬರಿಗೂ ಎಷ್ಟು ವ್ಯತ್ಯಾಸಗಳಿವೆ. ಒಬ್ಬವ ತೀರಾ ಎಳಸು. ಇನ್ನೊಬ್ಬವ ಜನರ ಗಮನವನ್ನ ತನ್ನ ಮಾತುಗಳತ್ತ ಸೆಳೆದ ಯುವಕ. ಹೊಸ ಹೊಸ ಚಿಂತನೆಗಳನ್ನ ಹರಿಯಬಿಟ್ಟವ. ಆಡಳಿತದಲ್ಲಿ ಪಳಗಿದ ಮೋದಿಗೆ ರಾಹುಲ ಯಾವ ರೀತಿಯಲ್ಲೂ ಸರಿಸಮನಲ್ಲ. ಜೊತೆಗೆ, ಪ್ರತಿಸ್ಪರ್ಧಿಯೂ ಅಲ್ಲ. ರಾಹುಲಗಾಂಧೀ ವಯಸ್ಸಿನವನೇ ಆದ ಕೇಜ್ರಿವಾಲ್ ಯಾವ ರಾಜಕೀಯ ಅನುಭವವೂ ಇಲ್ಲದೇ ಪಕ್ಷವೊಂದನ್ನ ಕಟ್ಟಿ ಆರು ತಿಂಗಳಲ್ಲಿ ಆಧಿಕಾರದ ಹೊಸ್ತಿಲತ್ತ ತಂದು ನಿಲ್ಲಿಸುವುದು ಸಾಮಾನ್ಯ ಸಂಗತಿಯಲ್ಲ.
ನಮ್ಮೆಲ್ಲ ಪೂರ್ವಾಗ್ರಹಗಳನ್ನ ಬದಿಗಿಟ್ಟು ಈ ಯಶಸ್ಸನ್ನ ಗಮನಿಸಬೇಕಾದ ಅಗತ್ಯವಿದೆ. ಕೆಲವರಿಗೆ ಕೇಜ್ರಿವಾಲನನ್ನ ಹೊಗಳಿದರೆ, ಮೆಚ್ಚಿಕೊಂಡರೆ, ಮೋದಿ ಗತಿಯೇನು ಅನ್ನುವ ಚಿಂತೆ. ದೆಹಲಿಯಲ್ಲಿ ಕಾಂಗ್ರೇಸ್ ವಿರೋಧಿ ಅಲೆ ಇತ್ತು ಅನ್ನೋದು ಸರ್ವವಿದಿತವಾದ ಸಂಗತಿ. ಆದರೆ, ಆ ಅಧಿಕಾರ ವಿರೋಧಿ ಅಲೆಯ ಸಂಪೂರ್ಣ ಲಾಭ ಪಡೆಯಲಿಕ್ಕೆ ಬಿಜೆಪಿಗೆ ಏಕೆ ಸಾಧ್ಯವಾಗಲಿಲ್ಲ? ಮೋದಿಯೂ ಕೂಡಾ ಬಂದು ಹೋಗಿದ್ದರಲ್ಲ? ಕಾಂಗ್ರೇಸ್ ಆಡಳಿತ ವಿರೋಧಿ ಅಲೆಯಿರುವಾಗ ಮೋದಿಯವರ ಭಾಷಣಕ್ಕೆ ಸರಳ ಬಹುಮತ ಕೊಡಿಸುವಷ್ಟೂ ಶಕ್ತಿ ಸಾಮರ್ಥ್ಯಗಳಿಲ್ಲವೇ? ಹಾಗಾದರೆ, ಬಿಜೆಪಿ ಎಡವಿದ್ದೆಲ್ಲಿ?
ಮತ್ತಷ್ಟು ಓದು 
ಸರ್ವಾಧಿಕಾರಿ ಧೋರಣೆಯ ಪ್ರಗತಿಪರರು ಮತ್ತು ಮೋದಿ
– ಪ್ರಸನ್ನ,ಬೆಂಗಳೂರು
ಅಹಮದಾಬಾದಿನ ಮೆಟ್ರೊಪಾಲಿಟನ್ ನ್ಯಾಯಾಲಯ ಪ್ರಗತಿಪರರಿಗೆ ಒಂದು ತಡೆಯಲಾರದ ಆಘಾತ ನೀಡಿದೆ. ಈ ಆಘಾತವನ್ನು ಸಹಿಸಿಕೊಂಡು ಈಗಲಾದರೂ ಈ ಬುದ್ದಿಗೇಡಿಗಳು ತಮ್ಮ ಮಾರ್ಗ ಸರಿ ಪಡಿಸಿಕೊಳ್ಳುತ್ತರೇನೋ ಎಂಬ ನಮ್ಮ ನಿರೀಕ್ಷೆ ಹುಸಿಯಾಗುವಂತಿದೆ, ಯಥಾ ಪ್ರಕಾರ ಅವರು ತಮ್ಮ ಪ್ರಜಾಪ್ರಭುತ್ವ ವಿರೋಧಿ ಧೋರಣೆಯಲ್ಲೇ ಇನ್ನೂ ಬಿದ್ದು ಒದ್ದಾಡುತ್ತಿದ್ದಾರೆ. ನಾನಂತೂ ಇವರನ್ನು ಪ್ರಜಾಪ್ರಭುತ್ವ ನ್ಯಾಯಾಂಗ ವ್ಯವಸ್ಥೆ ಮತ್ತು ಭಾರತದ ಕಾನೂನಗಳನ್ನು ಗೌರವಿಸದ ದೇಶದ್ರೋಹಿಗಳೆಂದೆ ಪರಿಗಣಿಸುತ್ತೇನೆ. ಹೇಗೆಂದಿರಾ?
ನೀವೆ ಗಮನಿಸಿ ೨೦೦೨ದಿಂದೀಚೆಗೆ ಇವರು ಹಾಡುತ್ತಿದ್ದುದು ಒಂದೇ ರಾಗ ಅದು ಮೋದಿ ನರಹಂತಕ ಎಂಬುದು, ಇವರ ಅಧಿನಾಯಕಿಯಂತೂ ಆತನನ್ನು ಸಾವಿನ ವ್ಯಾಪಾರಿಯೆಂದು ಜರೆದು ನಾಲಿಗೆ ಕುಲ ಹೇಳುತ್ತದೆಂಬುವುದನ್ನು ತೋರಿಸಿಕೊಟ್ಟುಬಿಟ್ಟಿದ್ದಲ್ಲದೇ ತನ್ನ ನಾಲಿಗೆಯನ್ನು ತಾನೆ ಕಚ್ಚಿ ಕೊಳ್ಳುವಂತಾಯ್ತು. ಗುಜರಾತಿನ ಜನರು ಸತತ ೩ ಬಾರಿ ಇವರ ತಲೆಯ ಮೇಲೆ ಕಲ್ಲು ಹಾಕಿದ್ದೂ ಆಯ್ತು. ಆದರೂ ನಮ್ಮ ಕರ್ನಾಟಕದ ಪ್ರಗತಿಪ್ರರು ಮಾತ್ರ ಇನ್ನೂ ಆ ರೋಗದಿಂದ ಹೊರಬರಲೇ ಇಲ್ಲ.
ಗೊಂಬೆಯಾಟವಯ್ಯಾ…
ಮೂಲ ಲೇಖಕರು : ತನ್ಯರಾಜ್ ಪುರೋಹಿತ್
ಕನ್ನಡಕ್ಕೆ : ಪ್ರಶಾಂತ್ ಭಟ್
ಅಧಿಕಾರದ ಮೇಲಿನ ಹಂತಗಳಲ್ಲಿ ನಡೆಯುವ ಒಳಸಂಚುಗಳ ಮತ್ತು ತಂತ್ರಗಳ ಕತೆ ಯಾವತ್ತಿಗೂ ಕುತೂಹಲ ಹುಟ್ಟಿಸುತ್ತದೆ. ನಮಗೆಲ್ಲ ಅಂತಹ ವಿಷಯಗಳನ್ನು ಕೇಳಲು ಮತ್ತು ಇನ್ನೊಬ್ಬರಿಗೆ ಹೇಳಲು ತುಂಬಾ ಆಸಕ್ತಿ; ಅವು ನಮ್ಮ ಅರಿವನ್ನೂ ಮೀರಿ ನಮ್ಮನ್ನ ದಂಗು ಬಡಿಸುತ್ತದೆ! ಯಾಕೆಂದರೆ ಅಧಿಕಾರ ಪಡೆಯಲು ವ್ಯಕ್ತಿ/ಸಂಘಟನೆಗಳು ಮಾಡುವ, ಹೂಡುವ ಆಟಗಳು ನಾವೆಲ್ಲ ಕಲ್ಪನೆ ಮಾಡಲೂ ಅಸಾಧ್ಯವಾದದ್ದು!
ಈಗ ನೋಡಿ, ರಾಜಕೀಯದಲ್ಲಿ ಮೋದಿಯವರ ಮುಂದಿನ ದೊಡ್ಡ ನಡೆ ಏನು? ಅಥವಾ ಬಿ.ಜೆ.ಪಿ. ಗೆಗಂಡಾಂತರ ತಂದೊಡ್ಡಲು ರಾಹುಲ್ ಹೆಣೆಯುತ್ತಿರುವ ತಂತ್ರವೇನು? ಇಂತಹ ಪ್ರಶ್ನೆಗಳಿಗೆ ನಮಗೆ ಉತ್ತರ ಸಿಗುವುದು ಇವೆಲ್ಲಾ ಸಂಪೂರ್ಣವಾಗಿ ಕಾರ್ಯಗತವಾದ ಮೇಲೇ. ನಾವು ಅಂದುಕೊಳ್ಳುತ್ತೇವೆ ಏನೆಂದರೆ ಈ ರಾಜಕಾರಣಿಗಳಿಗೆ, ಮಂತ್ರಿಗಳಿಗೆ ಎಲ್ಲವೂ ತಿಳಿದಿದೆ ಯಾಕೆಂದರೆ ಅವರು ಈ ಆಟವನ್ನೆಲ್ಲಾ ಹತ್ತಿರದಿಂದ ನೋಡಿರುತ್ತಾರೆ ಅಂತ; ಈ ಮಾತು ಸಂಪೂರ್ಣ ನಿಜವಲ್ಲ. ಮೇಲಿನ ಹಂತಗಳಲ್ಲಿ ನಡೆಯುವ ದೊಡ್ಡ ದೊಡ್ಡ ಆಟಗಳ ಬಗ್ಗೆ ಅವರಿಗೆಅರಿವೇ ಇರುವುದಿಲ್ಲ ಮತ್ತು ತಾವು ಪಾನ್ ಗಳಾಗಿ ನಡೆಸಲ್ಪಡುವುದೂ ಗೊತ್ತಿರುವುದಿಲ್ಲ.ಈ ಆಟಗಳು ಕೇವಲ ದೊಡ್ಡವರ ಮೇಲೆ ಕೇಂದ್ರೀಕೃತವಾಗಿರುತ್ತದೆ. ಕೆಲವು ನಂಬಿಕಸ್ಥ ದಳಪತಿಗಳ ಹೊರತು ಮತ್ತಾರಿಗೂ ಇದರ ಸಳುಹೂ ಸಿಕ್ಕಿರುವುದಿಲ್ಲ ನಮ್ಮ ನಿಮ್ಮೆಲ್ಲರಂತೆ!
ರಾಜಕಾರಣಿಗಳು ನಾವಂದುಕೊಂಡಿರುವುದಕ್ಕಿಂತ ಬುದ್ಧಿವಂತರಾಗಿರುತ್ತಾರೆ. ಅವರಿಗೆ ಒಂದು ಸಾಮಾನ್ಯ ಗಣಿತದ ಲೆಕ್ಕಾಚಾರ ತಿಳಿಯದಿರಬಹುದು ಆದರೆ ಎದುಗಿರುವ ವ್ಯಕ್ತಿಯ ಆಳ, ಅಗಲವ ಕ್ಷಣಾರ್ಧದಲ್ಲಿ ಅಳೆಯಬಲ್ಲರು; ಒಂದು ವಿಷಯವನ್ನ ಹತ್ತಾರು ವರ್ಷಗಳಿಗೆ ಧಕ್ಕೆ ಬಾರದಂತೆ ತಂತ್ರ ಹೆಣೆಯುವ ಚಾತುರ್ಯ ಅವರದ್ದು, ಆ ತಂತ್ರವನ್ನು ಜಾರಿಗೊಳಿಸುವುದರಲ್ಲಂತೂ ಅವರ ಮೀರಿಸಿದವರಿಲ್ಲ! ರಾಹುಲ್ ಗಾಂಧಿ ಎಂಬ ಹೆಸರು ನಗುವ ಸರಕಾಗಿ ತುಂಬ ಕಾಲವಾಯ್ತು. ‘ಪಪ್ಪು’, ‘ಬುದ್ಧು’ ನಂತಹ ಹೆಸರುಗಳು ಆ ಹೆಸರೊಂದಿಗೇ ಸೇರಿ ಹೋಗಿದೆ. ಮೋದಿ ಮಾತ್ರವಲ್ಲ ಯಾವ ಪ್ರೊಫ಼ೆಷನಲ್ ರಾಜಕಾರಣಿಗೂ ಸರಿದೂಗದ, ಜನರಲ್ಲಿ ಉತ್ಸಾಹ ತುಂಬಲಾರದ ನಾಯಕ(?) ರಾಹುಲ್ ಎಂದು ನಮಗೆಲ್ಲಾ ಅಗತ್ಯಕ್ಕಿಂತ ಸ್ಪಷ್ಟವಾಗೇ ಗೊತ್ತಾಗಿ ಹೋಗಿದೆ. ಹಾಗಾದರೆ ಇದು ಕಾಂಗ್ರೆಸ್ಸಿಗರಿಗೆ ಗೊತ್ತಿಲ್ಲವೇ? ಅಥವಾ ಇದನ್ನೂ ಕಾಣಲಾರದಷ್ಟು ಅವರು ಮೂರ್ಖರಾಗಿದ್ದಾರೆಯೆ? ಅಥವಾ ಕಾಂಗ್ರೆಸ್ ಅದಾಗಲೇ ತನ್ನ ‘ಪ್ಲಾನ್ ಬಿ’ ಯನ್ನ ಜಾರಿಗೊಳಿಸಿದೆಯೇ?
ಮತ್ತಷ್ಟು ಓದು 
ಆಪ್ ಎಂಬ ನೀರಮೇಲಣ ಗುಳ್ಳೆ …
– ಅವಿನಾಶ್ ಹೆಗ್ಡೆ
ಒಂದು ರಾಜಕೀಯ ಪಕ್ಷಕ್ಕೆ ಸೈದ್ದಾಂತಿಕ ಹಿನ್ನೆಲೆ ಇಲ್ಲದೆ ಇದ್ದರೆ, ಮತ್ತು ಸ್ಪಷ್ಟ ಗುರಿಯಿಲ್ಲದೆ ಇದ್ದರೆ ಏನಾಗಬಹುದು ಅನ್ನುವುದಕ್ಕೆ ಒಂದು ಸ್ಪಷ್ಟ ಉದಾಹರಣೆ ಆಮ್ ಆದ್ಮಿ ಪಾರ್ಟಿ …. ಆಪ್ ರಾಜಕೀಯಕ್ಕೆ ಪ್ರವೇಶ ಕೊಡುತ್ತೇವೆ ಅಂದಾಗ ಅವರನ್ನ ಗಂಭೀರವಾಗಿ ಪರಿಗಣಿಸಿದವರ ಸಂಖ್ಯೆ ತುಂಬಾ ಕಡಿಮೆ.ಆದರೆ ದೆಹಲಿ ಚುನಾವಣಾ ಆಪ್ ಕಡೆ ದೇಶ ನೋಡುವಂತೆ ಮಾಡಿದ್ದು ಸುಳ್ಳಲ್ಲ ..
ಆದರೆ ಬಂಗಾಳದಲ್ಲಿ ೩೪ ವರ್ಷದ ಸರಕಾರವನ್ನ ಬೇರು ಸಮೇತ ಕಿತ್ತು ಹಾಕಿದ್ದ ಮಮತಾ ಬ್ಯಾನರ್ಜಿಗೆ ಕೂಡ ಕೊಡದ ಪ್ರಚಾರವನ್ನ ಮಾಧ್ಯಮಗಳು ಆಪ್ ಗೆ ಕೊಟ್ಟಿದ್ದವು ಮತ್ತು ಅದರ ಹಿಂದೆ ಮಾದ್ಯಮಗಳ ಸ್ಪಷ್ಟ ಕಮ್ಯುನಿಸ್ಟ್ ಹಿತಾಸಕ್ತಿ ಇತ್ತು,ಬಿಜೆಪಿಯ ಗೆಲುವನ್ನ ಮರೆಮಾಚುವ ಉದ್ದೇಶ ಸ್ಪಷ್ಟವಾಗಿತ್ತು. ಲೋಕಪಾಲ್ ಚಳುವಳಿಯ ಹೋರಾಟವನ್ನ ಮತ್ತು ಅಣ್ಣ ಹಜಾರೆಯವರನ್ನ ಬಳಸಿಕೊಂಡಿದರ ಬಗ್ಗೆ ಮಾಧ್ಯಮಗಳು ಈ ಸಂದರ್ಭದಲ್ಲಿ ಯಾಕೆ ಕಣ್ಣು ಮುಚ್ಚಿಕೊಂಡವು ಅನ್ನುವುದು ಎಲ್ಲರಿಗು ಗೊತ್ತಿರುವಂತದೆ.ಇರಲಿ …..
ಕೇವಲ ಬ್ರಾಹ್ಮಣರ ಟೀಕೆಗೆ ಮಾತ್ರ ಮೀಸಲೇ ಈ ಪತ್ರಿಕೆ?
– ವಿದ್ಯಾ ಕುಲಕರ್ಣಿ
ನವೆಂಬರ್ 18 ನೇ ತಾರೀಖಿನಿಂದ ಇವತ್ತಿನ ವರೆಗೆ ವಾತಾ೯ಭಾರತಿ ಪತ್ರಿಕೆಯಲ್ಲಿನ ಅಂಕಣಗಳನ್ನು ನಾನು ಓದುತ್ತಿದ್ದೇನೆ. ಸುಮಾರು ನಾಲ್ಕೈದು ಅಂಕಣಗಳು ಕಾರಣವಿಲ್ಲದೇ ಬ್ರಾಹ್ಮಣರ ಟೀಕೆಯನ್ನು ಮಾಡಿವೆ. ಯಾಕೆ ಹೀಗೆ ಇವರೆಲ್ಲ ಕಾರಣವಿಲ್ಲದೇ ಬ್ರಾಹ್ಮಣರನ್ನು ಹುರಿದು ಮುಕ್ಕುತ್ತಿದ್ದಾರೆ ? ಮನನೊಂದು ಈ ಲೇಖನ ಬರೆಯುತ್ತಿದ್ದೇನೆ.
ಯಾವ ಲೇಖನಗಳಲ್ಲಿ ಬ್ರಾಹ್ಮಣರನ್ನು ಎಳೆದು ತರುವ ಅವಶ್ಯಕತೆಯೇ ಇಲ್ಲವೋ ಅಲ್ಲೆಲ್ಲ ವಿನಾಕಾರಣ ಬ್ರಾಹ್ಮಣರನ್ನು ಎಳೆದು ತಂದು ಗೂಬೆ ಕೂರಿಸಿದ್ದಾರೆ . ಕೆಳಗಿನ ಉಧಾಹರಣೆಗಳಿಂದ ನೀವಿದನ್ನು ತಿಳಿಯಬಹುದು.
1) ವಿಜಯಾ ಮಹೇಶ್ ಎಂಬುವವರು ‘ ರಾಜ ಕನಕನಾಯಕ ಕನಕದಾಸನಾದ ಕಥೆ’ ಎಂಬ ಅಂಕಣದಲ್ಲಿ ಕನಕದಾಸರ ಕೃತಿಗಳ ಬಗ್ಗೆ ವಿಮಶಾ೯ತ್ಮಕವಾಗಿ ಬರೆಯಬಹುದಿತ್ತು. ಆ ಮೂಲಕ ಕನಕರ ಕೆಲವು ಕೃತಿಗಳ ಬಗ್ಗೆ ಸಾಮಾನ್ಯ ಜನತೆಗೆ ವಿಷಯ ತಿಳಿಯುತ್ತಿತ್ತು. ಹೆಚ್ಚಿನ ಜನ ಕನಕರ ಕೃತಿಯಾದ ‘ರಾಮಧಾನ್ಯ ಚರಿತೆ’ಯನ್ನು ‘ರಾಮಧ್ಯಾನ ಚರಿತೆ’ ಎಂದು ತಪ್ಪಾಗಿ ಓದುತ್ತಾರೆ. ಇನ್ನು ಈ ಕೃತಿಗೆ ಅಷ್ಟಾಗಿ ವಿಮಶೆ೯ ಬಂದಿಲ್ಲವೆಂದು ಓದುಗ ವಲಯದಲ್ಲಿ ಅಪಸ್ವರವಿದೆ. ಈ ಎಲ್ಲವನ್ನು ಲೇಖಕಿ ಈ ಅಂಕಣದಲ್ಲಿ ವಿಮಶಿ೯ಸಬಹುದಿತ್ತು. ಆದರೆ ಇವರು ತಮ್ಮ ಲೇಖನವನ್ನು ಕನಕರ ಕೃತಿ ವಿಮಶೆ೯ಗೆ ಅಥವಾ ಅವರ ಜೀವನ ವಿಮಶೆ೯ಗೆ ಮೀಸಲಿಡದೇ ಕೇವಲ ಬ್ರಾಹ್ಮಣರ ಟೀಕೆಗೆ ಮೀಸಲಾಗಿರಿಸಿದ್ದಾರೆ. ಅವರು ಹೇಳುತ್ತಾರೆ ; ಕೃಷ್ಣದೇವರಾಯನ ಒಂದು ಯುದ್ಧದಲ್ಲಿ ಕನಕರ ಅಪಾರ ಶ್ರಮದಿಂದ ಸೋಲುವ ಹಂತದಲ್ಲಿದ್ದ ರಾಯ ಗೆಲುವು ಸಾಧಿಸಿದನಂತೆ.ಗೆಲುವಿನ ಸುದ್ದಿ ಕೇಳಿದ ವ್ಯಾಸರಾಯರು ಕನಕನನ್ನು ಯಾವುದೇ ರೀತಿಯಿಂದ ಗೌರವಿಸದೇ ಇತ್ತ ಕೃಷ್ಣದೇವರಾಯನೂ ಗೌರವಿಸದೆ ಕನಕರು ಬುದ್ಧಿಭ್ರಮಣರಾದರಂತೆ.




