ಹೇಗೆ ಹೇಳಲಿ? ಏನು ಹೇಳಲಿ?
– ಪ್ರೊ.ರಾಜಾರಾಮ ಹೆಗಡೆ
ದೇವನೂರು ಮಹಾದೇವರವರ ಲೇಖನಕ್ಕೆ ಪ್ರತಿಕ್ರಿಯೆ {ಪ್ರಜಾವಾಣಿಯಲ್ಲಿ ಅಪ್ರಕಟಿತ ಲೇಖನ}
ದೇವನೂರು ಮಹಾದೇವರ ಪ್ರತಿಕ್ರಿಯೆಯನ್ನು ಓದಿದ ನಂತರ, ಅವರು ಏನನ್ನು ಹೇಗೆ ಹೇಳಿದ್ದಾರೆ ಎಂಬುದನ್ನು ಕಂಡ ನಂತರ ಅವರನ್ನು ಕಾಡಿದ ಆ “ಹೇಗೆ ಹೇಳಲಿ? ಏನು ಹೇಳಲಿ?” ಎಂಬ ಪ್ರಶ್ನೆ ಈಗ ಅವರದಕ್ಕಿಂತ ನನ್ನದೇ ಆಗಿದೆ. ಅವರು ನಮ್ಮ ಕುರಿತು ಏಕೆ ಇಂಥ ಭಾಷೆಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ ಎಂಬುದು ಸ್ಪಷ್ಟ. ಅವರಿಗೆ ಸಿಟ್ಟಿದೆ. ದೇವನೂರರು ಒಂದು ಸಮೂಹದ ಹಿತದೃಷ್ಟಿಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದಾರೆ. ಅವರ ಜೀವನ ಈ ಕುರಿತಾಗಿಯೇ ಒಂದು ಹೋರಾಟ ಎಂದರೂ ತಪ್ಪಿಲ್ಲ. ಇಷ್ಟನ್ನು ಖಚಿತವಾಗಿ ಹೇಳಬಲ್ಲಷ್ಟು ನಾನು ಅವರನ್ನು ಬಲ್ಲೆ. ಹಾಗೂ ಅದನ್ನು ಗಮನಿಸುವುದು ಮುಂದಿನ ಸಂವಾದಕ್ಕೆ ನಿರ್ಣಾಯಕ ಎಂಬುದಾಗಿ ನನಗನಿಸುತ್ತದೆ. ಏಕೆಂದರೆ ಯಾರದೇ ಪ್ರಾಮಾಣಿಕತೆಯ ಮೇಲೆ ಅಪನಂಬಿಕೆಯನ್ನಿಟ್ಟು ಬೌದ್ಧಿಕ ಚರ್ಚೆಯನ್ನು ಪ್ರಾರಂಭಿಸುವುದರಿಂದ ಚರ್ಚಿಸತಕ್ಕ ವಿಷಯಕ್ಕೆ ನ್ಯಾಯ ಸಲ್ಲುವುದಿಲ್ಲ.
ನಮ್ಮ ದುರುದ್ದೇಶದ ಕುರಿತು ಅವರು ಕಟ್ಟಿಕೊಂಡಿರುವ ಚಿತ್ರಗಳನ್ನು ಅವರ ಲೇಖನದ ಮೂಲಕ ಗ್ರಹಿಸುತ್ತ ಹೋದಾಗ ನಮ್ಮ ಕುರಿತು ಯಾವ ರೀತಿಯ ಚಿತ್ರಣವು ಅವರ ವಲಯದಲ್ಲಿ ಗಟ್ಟಿಯಾಗುತ್ತಿದೆ ಎಂಬುದಕ್ಕೆ ಮತ್ತೊಂದು ದೃಷ್ಟಾಂತ ಸಿಕ್ಕಂತಾಯಿತು. ಹಾಗಂತ ಇದೇನೂ ನನಗೆ ಆಘಾತ ನೀಡಲಿಲ್ಲ. ಈ ಥೆರಪಿಯನ್ನು ನನಗೆ ಹಾಗೂ ನನ್ನ ಗುಂಪಿಗೆ ನಾವು ಬಾಲು ಜೊತೆ ಸೇರಿ ಸಂಶೋಧನೆ ಪ್ರಾರಂಭಿಸಿದಾಗಿನಿಂದಲೂ ನೀಡಲಾಗುತ್ತಿದೆ. ಸಂಶೋಧನೆ ಮಾಡುವುದು ಕೇವಲ ಬೌದ್ಧಿಕ ಪ್ರಶ್ನೆಯೊಂದೇ ಅಲ್ಲ, ಅದು ಪ್ರವಾಹದ ವಿರುದ್ಧ ಈಜುವ ಕೆಲಸ ಕೂಡ ಆಗಿದೆ ಎಂಬುದು ನಮಗೆ ಈಗಾಗಲೇ ಅನುಭವ ವೇದ್ಯವಾಗಿದೆ. ನಮ್ಮ ದುರುದ್ದೇಶದ ಕುರಿತು ಹುಟ್ಟುತ್ತಿರುವ ಕಥೆ ಸಾಕಷ್ಟು ಬೇರುಬಿಡುತ್ತಿದೆ ಎಂಬುದನ್ನು ಪ್ರಜಾವಾಣಿ ಪ್ರತಿಕ್ರಿಯೆಗಳಿಂದ ಮನಗಾಣುತ್ತಿದ್ದೇನೆ. ದೇವನೂರರೇ ಕೊಟ್ಟ ಆಡಿನ ಕಥೆಯಂತೆ ಹತ್ತಾರು ಮಂದಿ ಒಂದು ಸುಳ್ಳನ್ನು ಹೇಳುತ್ತಿದ್ದರೆ, ಹಾಗೂ ನಾವು ಸುಮ್ಮನೇ ಇದ್ದರೆ ಜನ ಅದನ್ನೇ ಸತ್ಯವೆಂದು ನಂಬಿಬಿಡುವ ಸಾಧ್ಯತೆಯಿದೆ. ಒಂದೊಮ್ಮೆ ನಮ್ಮ ಸಂಶೋಧನೆಯು ದೇವನೂರರು ಅಂದುಕೊಂಡಂತೇ ಯಾವುದೇ ಮಾನವ ಸಮುದಾಯದ ಅಹಿತವನ್ನು ಬಯಸುವ ದುರುದ್ದೇಶವನ್ನು ಹೊಂದಿಲ್ಲ ಅಂತಾದರೆ, ಈ ನಿಟ್ಟಿನಲ್ಲಿ ಈಗಿರುವ ಜ್ಞಾನದ ಮಿತಿಗಳನ್ನು ಕಳೆದು ಇನ್ನೂ ಹೆಚ್ಚು ಸ್ಪಷ್ಟತೆಯನ್ನು, ನ್ಯಾಯವನ್ನು ಸಾಧಿಸುವುದು ಅಂತಾದರೆ, ದೇವನೂರರ ನೋವಿಗೆ ಇರಬಹುದಾದ ಕಾರಣಗಳೇ ಮಾಯವಾಗುತ್ತವೆ. ಮುಂದೆ ಅವರ ಜೊತೆ ಅರ್ಥಪೂರ್ಣ ಸಂವಾದ ಸಾಧ್ಯವಾಗಬಹುದು ಎಂಬ ಆಶಯದಿಂದ ಈ ಲೇಖನ.
ಸಾಮಾನ್ಯ ಭಾರತೀಯನೊಬ್ಬನ ಪ್ರಶ್ನೆಗಳು
– ಶಿವಶಂಕರ್ ಪುತ್ರನ್, ಕೊಡಿಯಾಲ್ ಬೈಲ್
ಅಲ್ಲಾ ಸ್ವಾಮಿ, ಮಹಾತ್ಮರ ಸಿದ್ದಾ೦ತಗಳನ್ನು ಪಾಲಿಸುವವರೆ, ಯಾರೋ ಒಬ್ಬ ಸ೦ಸತ್ ಸದಸ್ಯ ಶಫಿಯಕುರ್ ರೆಹಮಾನ್ ವಂದೇಮಾತರ೦ನ್ನ ಗೌರವಿಸದೆ,ಆಮೇಲೆ ತಾನು ಯಾಕೆ ಗೌರವಿಸಿಲ್ಲ
ಅನ್ನೋದಕ್ಕೆ ಸ್ಪಷ್ಟನೆ ನೀಡ್ತಾನೆ.ಆತನ ಆ ಕ್ರಿಯೆ ದೇಶದಲೆಲ್ಲ ದೊಡ್ಡ ಅಲ್ಲೋಲಕಲ್ಲೋಲವನ್ನ ಉ೦ಟು ಮಾಡುತ್ತೆ.ಸಾಮಾಜಿಕ ತಾಣಗಳಾದ ಫೇಸ್ಬುಕ್,ಟ್ವಿಟ್ಟರ್ಗಳಲ್ಲಿ ಅವನ ವಿರುದ್ದ ಜನ ತಮ್ಮ ಕ್ರೋಧ ವ್ಯಕ್ತಪಡಿಸುತ್ತಾರೆ.ಕನ್ನಡದ ಬ್ಲಾಗೊ೦ದರಲ್ಲಿ ಸತ್ಯವಿಶ್ವಾಸಿಗಳಿಗೆ ದೇಶಪ್ರೇಮವನ್ನ ಬೋಧಿಸಲು ಹೋದವನ ಲೇಖನಕ್ಕೆ ಉತ್ತರಿಸುವ ನೆಪದಲ್ಲಿ ಹಲವಾರು ವ್ಯಕ್ತಿಗಳು ತಾವು ಹಾಗು ತಮ್ಮವರು ಯಾಕೆ ವಂದೇಮಾತರ೦ ಹಾಡಬಾರದು,ಯಾಕೆ ಗೌರವಿಸಬಾರದೆ೦ದು ತಮ್ಮ ಸ೦ಸದನ ವರ್ತನೆಯನ್ನ ಸಮರ್ಥಿಸಿಕೊಳ್ಳುವಾಗ ಒಬ್ಬ ಹುಲು ಭಾರತಿಯನಾಗಿ,ಒಬ್ಬ ಸಾಮಾನ್ಯ ಹಿ೦ದುವಾಗಿ, ಅದರೆ ಒಬ್ಬ ಅಪ್ಪಟ್ಟ ಭಾರತೀಯನಾಗಿ ಮನದಲ್ಲಿ ಹುಟ್ಟುವ ಹಲವಾರು ಗೊ೦ದಲಗಳಿಗೆ ಉತ್ತರವೆ ಸಿಗುತ್ತಿಲ್ಲ.ಹಾಗೆ ಮು೦ದುವರಿದು ಕೆಲವು ಮಿತ್ರರಲ್ಲಿ ಕೇಳಿದೆ, ಅವರಿಗೂ ಅದೇ ಗೊಂದಲ.ಅವರಲ್ಲಿ ಕೆಲವರು ಸದ್ಯಕಷ್ಟೆ ರಾಜ್ಯದ ಚುನಾವಣೆಯಲ್ಲಿ ಬಾಗಿಯಾಗಿ ಕೆಲವರು ಭ್ರಮನಿರಸಗೊ೦ಡರೆ,ಕೆಲವರು ಪಕ್ಷ ನಿಷ್ಟೆ ಬದಲಿಸಿ ಹೊಟ್ಟೆತು೦ಬಿಸಿಕೊ೦ಡವರು.ಹಾಗಾಗಿ,ಅವರಲ್ಲಿ ಕೇಳುವುದು ವ್ಯರ್ಥವೆಂದೆನಿಸಿ ಯಾಕೆ ನಮ್ಮ ಮುಸಲ್ಮಾನ ಬ೦ಧುಗಳಲ್ಲೆ ಕೇಳಬಾರದು ಅನಿಸಿತು.ಸ೦ಸಾರದ ಗೊಂದಲಗಳ ನಡುವೆ ಪ್ರತಿಯೊಬ್ಬ ನನ್ನ ಭೇಟಿಮಾಡುವಸ್ಟು ಸಮಯವಿಲ್ಲದಿರುವುದರಿ೦ದ ಇಲ್ಲೇ ಕೇಳುತ್ತಿದ್ದೇನೆ.ಅಷ್ಟೆ ಅಲ್ಲದೆ, ಇನ್ನು ಕೆಲವು ದಿನಗಳಿ೦ದ ಮನಸಿನಲ್ಲಿ ನನ್ನ ಮುಂದಿನ ಜನಾ೦ಗದ ಬಗ್ಗೆ ಯೋಚಿಸಿ ಇನ್ನು ಕೆಲವು ಪ್ರಶ್ನೆಗಳನ್ನ ಇಡುತ್ತಿದೇನೆ.ಇದನ್ನ ನೇರವಾಗಿ ಕೇಳಿದರೆ ನನ್ನ ಜೀವಕ್ಕೆ ಅಪಾಯ ಯಾಕೆ೦ದರೆ ನಾನೊಬ್ಬ ಹಿ೦ದು ಹಾಗು ನನ್ನ ಜಾತಿಯ ಆಧಾರದಲ್ಲಿ ಚುನಾವಣೆಯ ಸಮಯದಲ್ಲಿ ನನ್ನ ಮತಕ್ಕೆ ಮಾತ್ರ ಮರ್ಯಾದೆ ಅಲ್ಲದೆ ನನ್ನ ರಕ್ಷಣೆಗಲ್ಲ ಎ೦ದು ಸಣ್ಣ೦ದಿನಲ್ಲೆ ನನಗೆ ಅರ್ಥವಾಗಾಗಿದೆ.ಆದುದರಿ೦ದ ನನ್ನ ಪ್ರಶ್ನೆ ಪ್ರತಿಯೊಬ್ಬ ಸಾಮಾನ್ಯ ಭಾರತೀಯನ(ನಿಮ್ಮ ಪ್ರಕಾರ ಸತ್ಯವಿಶ್ವಾಸಿಯಲ್ಲದ ಅಬ್ರಾಹಂನ ಸಿದ್ದಾ೦ತಗಳಿಗೆ ಒಳಪಡದ ಅಪ್ಪ-ಅಮ್ಮನಿಲ್ಲದ ಜನಾ೦ಗ)ಪ್ರಶ್ನೆಯೆಂದು ತಿಳಿಯಬಹುದು.
ವಂದೇ ಮಾತರಂ ಹಾಡಲಾಗದಿದ್ದರೆ…
-ಅಶ್ವಿನ್ ಅಮೀನ್
ಅದನ್ನು ಬರಿ ಗೀತೆ ಅನ್ನಬಹುದೇ?ಊಹೂಂ ಅದು ಗೀತೆಯಲ್ಲ, ಅದು ಭಾರತದ ಸ್ವಾತಂತ್ರ್ಯ ಹೋರಾಟದ ಬೀಜಮಂತ್ರ.ಬ್ರಿಟಿಷರ ನಿದ್ದೆ ಕೆಡಿಸುತ್ತಿದ್ದ ಮಂತ್ರವದು.ಎದೆಯುಬ್ಬಿಸಿ ಗರ್ವದಿಂದ ಗರ್ಜಿಸುವಾಗ ಮೈ ಮನಸ್ಸುಗಳು ರೋಮಾಂಚನಗೊಳ್ಳುತ್ತವೆ.. ಅದೆಂತಾ ಶಕ್ತಿಯಿದೆ ಈ ‘ವಂದೇ ಮಾತರಂ’ ನಲ್ಲಿ. ಅದೆಷ್ಟೋ ಹೋರಾಟಗಳ ಸ್ಪೂರ್ತಿ ಇದು, ದೇಶ ಪ್ರೇಮವ ಬಡಿದೆಬ್ಬಿಸುವ ಬೀಜಮಂತ್ರವಿದು. ಪ್ರತಿಯೊಬ್ಬ ಭಾರತೀಯನ ನಾಡಿ ಮಿಡಿತವಿದು… ವಂದೇ ಮಾತರಂ ಅನ್ನು ವಿಶ್ಲೇಷಿಸ ಹೊರಟರೆ ಆ ವಿಶ್ಲೇಷಣೆಯೇ ಒಂದು ವೀರ ಗೀತೆಯಾದೀತು…!!!!
ಆದರೆ…ವಂದೇ ಮಾತರಂ ಅನ್ನು ಗೌರವಿಸುವ ಮನಸ್ಸುಗಳ ನಡುವೆ ಧರ್ಮದ ನೆಪವೊಡ್ಡಿ ಅದನ್ನು ವಿರೋಧಿಸುವ ಕೆಲ ವಿಷ ಮನಸ್ಸುಗಳೂ ತುಂಬಿರುವುದು ಖೇದಕರ..
ಮೊನ್ನೆ ಮೊನ್ನೆ ತಾನೆ ತಾನು ಮುಸ್ಲಿಂ ಎಂಬ ಕಾರಣಕ್ಕೆ ವಂದೇ ಮಾತರಂ ಹಾಡುವುದಿಲ್ಲ ಎಂದು ವಂದೇ ಮಾತರಂ ಹಾಡಿನ ಮಧ್ಯೆಯೇ ಸಂಸತ್ತಿನಿಂದ ಹೊರನಡೆದು ಉದ್ದಟತನ ತೋರಿದ ಬಿಎಸ್ಪಿ ಸಂಸದ ಶಫಿಕುರ್ ರೆಹಮಾನ್ ಬಗ್ಗೆ ಕೇಳಿರುತ್ತೀರಿ. ಇಂತಹ ಮತಾಂಧವಾದದ ನಡೆ ಇದೇ ಮೊದಲಲ್ಲ. ವಂದೇ ಮಾತರಂ ಅನ್ನು ವಿರೋಧಿಸಿ ಭಾರತೀಯರಲ್ಲಿ ವಿಷ ಬೀಜ ಬಿತ್ತಿದವರಲ್ಲಿ ಆಲಿ ಸಹೋದರರು ಮೊದಲಿಗರಾಗಿ ಕಂಡು ಬರುತ್ತಾರೆ.
ಆ ಘಟನೆ ಹೀಗಿದೆ;
1923. ಆಂಧ್ರ ಪ್ರದೇಶದಲ್ಲಿ ಕಾಂಗ್ರೆಸ್ಸ್ ನ ರಾಷ್ಟ್ರೀಯ ಅಧಿವೇಶನ ನಡೆಯುತ್ತಿತ್ತು. ಆಗ ಪ್ರತಿ ಅಧಿವೇಶನದಲ್ಲಿ ವಂದೇ ಮಾತರಂ ಹಾಡುವ ಸಂಪ್ರದಾಯ ಬೆಳೆದು ಬಂದಿತ್ತು. ಪಂಡಿತ್ ವಿಷ್ಣು ದಿಗಂಬರ ಫಲುಸ್ಕರ್ ಪ್ರತಿ ವರ್ಷದಂತೆ ವಂದೇ ಮಾತರಂ ಹಾಡ ಹೊರಟಾಗ ಆಗಿನ ಕಾಂಗ್ರೆಸ್ಸ್ ಅಧ್ಯಕ್ಷ (ಮುಸ್ಲಿಂ ಲೀಗ್ ನ ಸ್ಥಾಪಕರಲ್ಲೊಬ್ಬರಾದ) ಮೌಲಾನ ಅಹಮದ್ ಆಲಿ ಆತನ ಸಹೋದರ ಶೌಕತ್ ಆಲಿ ತಡೆದರು. ಇಸ್ಲಾಂನ ಕಾನೂನಿನಂತೆ ಸಂಗೀತ ನಿಷಿದ್ಧ ಎಂಬುದು ಅವರು ಕೊಟ್ಟ ಕಾರಣವಾಗಿತ್ತು. ಹಠಾತ್ ಬೆಳವಣಿಗೆಯಿಂದ ಕೆಂಡಾ ಮಂಡಲರಾದ ಫಲುಸ್ಕರ್ ಇದು ಕಾಂಗ್ರೆಸ್ಸ್ ನ ಅಧಿವೇಶನ, ಒಂದು ಧರ್ಮದ ಸಭೆಯಲ್ಲ.. ಮುಸ್ಲಿಮರ ದರ್ಗಾ, ಮಸೀದಿಯೂ ಅಲ್ಲ.. ಈ ರಾಷ್ಟ್ರೀಯ ವೇದಿಕೆ ಮೇಲೆ ವಂದೇ ಮಾತರಂಗೆ ಅಡ್ಡಿಪಡಿಸಲು ನಿಮಗೇನು ಅಧಿಕಾರವಿದೆ? ಅಧಿವೇಶನ ಪ್ರಾರಂಭವಾಗುವ ಮೊದಲು ಅಧ್ಯಕ್ಷೀಯ ಮೆರವಣಿಗೆ ಯಲ್ಲಿ ವಿಜೃಂಭಣೆಯ ಸಂಗೀತ ವಾದ್ಯಗಳೊಂದಿಗೆ ಬರುವಾಗ ನಿಮಗೆ ಹಿಡಿಸಿತೇ ?! ವಂದೇ ಮಾತರಂಗೆ ವಿರೋಧ ಇರುವವರು ಧಾರಾಳವಾಗಿ ಹೊರ ನಡೆಯಬಹುದು ಎಂದು ಆಲಿ ಸಹೋದರರನ್ನು ಜಾಡಿಸಿದರು. ನಂತರ ವಂದೇ ಮಾತರಂ ಅನ್ನು ಪೂರ್ತಿಯಾಗಿ ಹಾಡಿ ವಂದಿಸಿ ಕೆಳಗಿಳಿದರು.
ಮತ್ತಷ್ಟು ಓದು 
ನಮ್ಮ ವಿಶ್ವವಿದ್ಯಾಲಯಗಳಲ್ಲಿ ಸಾಮಾಜಿಕ ಸಂಶೋಧನೆಗೆ ಭವಿಷ್ಯವಿದೆಯೆ?
ಪ್ರೊ. ರಾಜಾರಾಮ ಹೆಗಡೆ ಮತ್ತು ಡಾ. ಷಣ್ಮುಖ. ಎ
[ಪ್ರೊ.ರಾಜೇಂದ್ರ ಚೆನ್ನಿಯವರು ಬರೆದಿದ್ದು ಎನ್ನಲಾದ “ಭಾರತದಲ್ಲಿ ಜಾತಿವ್ಯವಸ್ಥೆ ಇದೆಯೆ?” ಎಂಬ ಪುಸ್ತಕದ ವಿಮರ್ಶೆಯು ಅವರ ಆಪ್ತ ವಲಯದಲ್ಲಿ ಸರ್ಕುಲೇಟ್ ಆಗುತ್ತಿದೆ. ಆ ವಿಮರ್ಶೆಯ ಮಿತಿಗಳು ಮತ್ತು ಪೂರ್ವಾಗ್ರಹಗಳನ್ನು ಸ್ಪಷ್ಟಪಡಿಬೇಕೆಂದು ಈ ಲೇಖನವನ್ನು ಬರೆಯಲಾಗಿದೆ]
ಇತ್ತೀಚೆಗೆ ಜಾಲತಾಣದಲ್ಲಿ ಸುತ್ತಾಡುತ್ತಿದ್ದ ಒಂದು ಪುಸ್ತಕ ವಿಮರ್ಶೆಯ ಪ್ರಾರಂಭಿಕ ಸಾಲುಗಳು ನಮ್ಮನ್ನು ಬೆಚ್ಚಿಬೀಳಿಸಿದವು. ಅವು ಹೀಗಿವೆ:
“ಈ ಕೃತಿಯು ನನ್ನಲ್ಲಿ ಹುಟ್ಟಿಸಿದ ವೈಚಾರಿಕ ಕುತೂಹಲವನ್ನು ಹೀಗೆ ವಿವರಿಸಬಹುದು. ಮನುಷ್ಯರು ಓದು, ಬುದ್ಧಿಶಕ್ತಿ, ತರ್ಕ ಹಾಗೂ ಭಾಷೆಯನ್ನು ಮಾನವ ದ್ವೇಷಿಯಾದ ಬೌದ್ಧಿಕ ಕೆಲಸಗಳಿಗೆ ಏಕೆ ಬಳಸುತ್ತಾರೆ? ಪಾಂಡಿತ್ಯವೆಂದು ಕರೆಯಲಾಗುವ ಸಂಗತಿಯು ಒಂದು ವಲಯದಲ್ಲಿ ಅಂತಃಕರಣ, ಪ್ರೀತಿ, ಇತರರ ಬಗ್ಗೆ ಸದ್ಭಾವನೆ ಮುಂತಾದ ಭಾವನೆಗಳಿಂದ ಸಂಪೂರ್ಣ ಪರಕೀಯವಾಗಿ, ಕ್ರೂರವಾದ ಅಭಿಪ್ರಾಯಗಳನ್ನು ಸಮರ್ಥಿಸುವ `ತರ್ಕದ ಟಗರ ಹೋರಟೆ’ ಯಾಕೆ ಆಗುತ್ತದೆ? ಬಹು ಸಂಖ್ಯಾತ ಜನರಿಗೆ ಮನುಷ್ಯರಾಗಿ ಬದುಕುವ ಅವಕಾಶಗಳೇ ಇಲ್ಲವಾಗುತ್ತಿರುವ ಬಡದೇಶದಲ್ಲಿ ಅತಿಶಯವಾದ ಸವಲತ್ತುಗಳನ್ನು ಪಡೆದಿರುವ ವಿಶ್ವವಿದ್ಯಾಲಯಗಳ ಬುದ್ಧಿಜೀವಿ ಹಾಗು ಸಂಶೋಧಕವರ್ಗವು ಈ ಜನರು ಆಳವಾಗಿ ನಂಬಿಕೊಂಡು ಬಂದಿರುವ ಸಮಾನತೆ, ನ್ಯಾಯ ಮುಂತಾದ ಮೌಲ್ಯಗಳನ್ನು ಉಡಾಫೆಯಿಂದ ತಿರಸ್ಕರಿಸುವ ದುಷ್ಟತನದ ಮೂಲವು ಎಲ್ಲಿದೆ? ನಿರ್ದಿಷ್ಟವಾಗಿ ಹೇಳುವುದಾದರೆ ಪಾಂಡಿತ್ಯ ಮತ್ತು ಬುದ್ಧಿಶಕ್ತಿಗಳು Evil ನ ಅತ್ಯಂತ ಆಳವಾದ ಕೆಡುಕಿನ ರೂಪಗಳೇಕೆ ಆಗುತ್ತವೆ?”
‘ಕುಮಾರ’ ಮುಖ್ಯಮಂತ್ರಿ ಗಾದಿಗೆ! ‘ಮೋದಿ’ ಪ್ರಧಾನಿ ಹುದ್ದೆಗೆ!
– ಗೋಪಾಲಕೃಷ್ಣ
ಅಭಿವೃದ್ಧಿಯೇ ಮಾತನಾಡುವುದಾದರೆ; ‘ಕುಮಾರಣ್ಣ’ ಮುಖ್ಯಮಂತ್ರಿ ಗಾದಿಗೆ! ‘ಮೋದಿಜಿ’ ಪ್ರಧಾನಿ ಹುದ್ದೆಗೆ!
ಅರವತ್ತಾರು ವಸಂತಗಳ ಬಂಧಮುಕ್ತ ಬದುಕು.ಈ ನಡುವೆ ದೇಶ ಕಂಡದ್ದು 13 ಮಂದಿ ಪ್ರಧಾನಮಂತ್ರಿಗಳನ್ನು. ರಾಜ್ಯವನ್ನಾಳಿದ್ದು 21 ಮುಖ್ಯಮಂತ್ರಿಗಳು. ಇವರೆಲ್ಲರಲ್ಲಿಯೂ; ದೇಶದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾಗಾಂಧಿ, ಪಿ.ವಿ.ನರಸಿಂಹರಾವ್, ಅಟಲ್ ಬಿಹಾರಿ ವಾಜಪೇಯಿಯವರನ್ನು ಮತ್ತೆ ಮತ್ತೆ ನೆನದರೆ, ರಾಜ್ಯದಲ್ಲಿ ದೇವರಾಜ ಅರಸು ಅವರ ಸಾಮಾಜಿಕ ಪರಿಕಲ್ಪನೆ, ರಾಮಕೃಷ್ಣ ಹೆಗಡೆ ಅವಧಿಯ ಜನಪರ ಕಾರ್ಯಕ್ರಮಗಳು, ಎಸ್.ಎಂ.ಕೃಷ್ಣ ಅವರ ಲಯ ತಪ್ಪದ ಆಡಳಿತ, ಹೆಚ್.ಡಿ.ಕುಮಾರಸ್ವಾಮಿಯವರ ಇಪ್ಪತ್ತೇ ತಿಂಗಳ ಆಡಳಿತವನ್ನು ಮಾತ್ರ ಇಂದಿಗೂ ಮೆಲುಕು ಹಾಕುವಂತಾಗಿದೆ.
ಭಾರತದ ಜನಸಂಖ್ಯೆ 121 ಕೋಟಿಯನ್ನು ದಾಟಿರಬಹುದು. ನಾವು ಆಯ್ಕೆ ಮಾಡುವ ಜನಪ್ರತಿನಿಧಿಗಳು ಸುಮಾರು 5400 ಮಂದಿಯಷ್ಟೇ. ಆದರೆ, ಇಷ್ಟು ಜನ ಪ್ರತಿನಿಧಿಗಳು ತಮ್ಮ ಕ್ಷೇತ್ರದ ಜನರ ಆಶಯಗಳಿಗೆ ತಕ್ಕಂತೆ ನಡೆಯುವುದು ಅಪರೂಪ. ಅವರುಗಳ ನಿಷ್ಠೆಯೇನಿದ್ದರೂ ದೇಶವಾದರೆ ಪ್ರಧಾನಿಗೆ! ರಾಜ್ಯವಾದರೆ ಮುಖ್ಯಮಂತ್ರಿಗೆ ಮೀಸಲು ಎಂಬಂತಿರುತ್ತದೆ. ಸಂವಿಧಾನದ ಪ್ರಕಾರ ಮುಖ್ಯಮಂತ್ರಿ ಅಥವಾ ಪ್ರಧಾನಮಂತ್ರಿಯನ್ನು ಶಾಸಕರು, ಲೋಕಸಭಾ ಸದಸ್ಯರು ಆಯ್ಕೆ ಮಾಡಬೇಕು. ಆ ಪರಿಪಾಠ ಮುರಿದು ಬಿದ್ದು ಎಷ್ಟೋ ವರ್ಷಗಳು ಆಗಿವೆ. ಈಗೇನಿದ್ದರೂ ಚುನಾವಣಾ ಪೂರ್ವದಲ್ಲಿಯೇ ನಾಯಕನ ಆಯ್ಕೆ ಇಲ್ಲವೇ ಹೈಕಮಾಂಡ್ ಹೇಳಿದವರು ಅತ್ಯುನ್ನತ ಹುದ್ದೆಯಲ್ಲಿ ಕೂರುತ್ತಾರೆ.
ಸಂಶೋಧನೆ ಅಂದರೇನು? – ಒಂದು ಚರ್ಚೆ
“ವಚನ ಸಾಹಿತ್ಯ ಮತ್ತು ಜಾತಿ ವ್ಯವಸ್ಥೆ”ಯ ಚರ್ಚೆ ಶುರುವಾದಾಗ ಒಂದು ’ಅಕಾಡೆಮಿಕ್ ಚರ್ಚೆ’ಯ ನಿರೀಕ್ಷೆ ನಾಡಿನ ಸಂಶೋಧನಾ ವಿದ್ಯಾರ್ಥಿವಲಯದಲ್ಲಿತ್ತು.ಆದರೆ ಈ ಚರ್ಚೆ ಅಕಾಡೆಮಿಕ್ ಆಗುವುದಕ್ಕಿಂತಲೂ ಹೆಚ್ಚಾಗಿ ಪೊಲಿಟಿಕಲ್ ಚರ್ಚೆಯಾಗಿ ಮಾರ್ಪಟ್ಟಿದೆ.೨೧ ಸಾವಿರಕ್ಕೂ ಹೆಚ್ಚು ವಚನಗಳನ್ನು ಅಧ್ಯಯನ ಮಾಡಿದವರ ಜೊತೆ ೨೧ ವಚನಗಳನ್ನೂ ಸರಿಯಾಗಿ ಓದಿಕೊಳ್ಳದವರು ವಾದಕ್ಕಿಳಿಯುತಿದ್ದಾರೆ. ಗೂಗಲ್ ನಲ್ಲಿ ಸರ್ಚ್ ಮಾಡುವುದನ್ನೆ ’ರಿಸರ್ಚ್’ ಅಂದುಕೊಂಡಿರುವಂತಿದೆ ಕೆಲವರು. “ಸಂಶೋಧನೆ” ಅಂದರೇನು ಅನ್ನುವ ಕುತೂಅಲವನ್ನಿಟ್ಟುಕೊಂಡು ನಾನು ಸಿ.ಎಸ್.ಎಲ್.ಸಿ ತಂಡದವರ ಜೊತೆ ನಡೆಸಿದ ಮಾತುಕತೆಯಿದೆ ಇಲ್ಲಿದೆ ನೋಡಿ
ಸಾತ್ವಿಕ್ : ಸಂತೋಷ್ ಶೆಟ್ಟಿ, ಸಂಶೋಧನೆಗೆ ಹೈಪೋಥಿಸಿಸ್ ರಚಿಸಿಕೊಳ್ಳುವಾಗ ಜನರಿಗೆ ಬೇಕಾದ (ಜನಪ್ರಿಯ) ವಾದಗಳನ್ನು ಆರಿಸಿಕೊಳ್ಳಬೇಕೋ ಇಲ್ಲವೇ ಕಠಿಣವಾದರೂ ಸತ್ಯದ ಕಡೆ ಹೆಜ್ಜೆ ಹಾಕಬೇಕೋ? ಅಥವಾ ಇಂದಿನ ಸಂಶೋಧನೆಗಳು ಯಾವ ದಿಕ್ಕಿನಲ್ಲಿವೇ?
ಸಂತೋಷ್ ಶೆಟ್ಟಿ : ಸಾತ್ವಿಕ್ , ಜನರಿಗೆ ಬೇಕಾದ ಜನಪ್ರಿಯ ವಾದಗಳನ್ನು ಆಯ್ಕೆ ಮಾಡಿಕೊಂಡು ಸಂಶೋಧನೆ ಮಾಡಲು ಏನಿದೆ? ಈಗಾಗಲೆ ಪ್ರಚಲಿತದಲ್ಲಿರುವ ವಾದವನ್ನು ಪುಷ್ಠೀಗೊಳಿಸಬೇಕೆಂಬ ಐಡಿಯಾಲಜಿಯ ಬೆನ್ನು ಹತ್ತಿದರೆ ಅಂತಹ ವಿಷಯಗಳನ್ನು ಆಯ್ಕೆ ಮಾಡಬಹುದು, ಹಾಗೆ ಮಾಡುವ ಮೂಲಕ ಚಲಾವಣೆಯಲ್ಲಿರುವ ವಾದವೇ ಸತ್ಯವೆಂದು ಕೆಲವಾರು ಫ್ಯಾಕ್ಡ್ ನ್ನು ಸೇರಿಸಬಹುದು. ಹೀಗೆ ಮಾಡುವುದರಿಂದ ಯಾವ ಸಂಶೋಧನೆಯೂ ಆಗುವುದಿಲ್ಲ, ಏಕೆಂದರೆ ಮೊದಲೇ ಹೇಳಿದಂತೆ ಸಂಶೋಧನೆ ಮಾಡಿ ಕಂಡುಕೊಳ್ಳುವಂತದ್ದು ಅಲ್ಲಿ ಏನೂ ಇರುವುದಿಲ್ಲ.ಇನ್ನೊಂದು ಮಾರ್ಗವೆಂದರೆ ಅಧ್ಯಯನ ಮಾಡಲು ಮೊದಲು ಅಧ್ಯಯನದ ವಿಷಯಕ್ಕೆ ಸಂಬಂಧಿಸಿದ ಸಾಹಿತ್ಯವನ್ನು ಪರಿಶೀಲಿಸಿ ಅಲ್ಲಿಂದ ಸಮಸ್ಯೆಯನ್ನು ಎತ್ತಿಕೊಳ್ಳಬೇಕಾಗುತ್ತದೆ. ಜನರು ಏನನ್ನು ಒಪ್ಪುತ್ತಾರೆ ಏನನ್ನು ತಿರಸ್ಕರಿಸುತ್ತಾರೆ ಎಂಬುದಕ್ಕಿಂತ ಆ ವಿಷಯದ ಕುರಿತು ಏನೇನು ಅಧ್ಯಯನಗಾಳಗಿವೆ ಎಂಬುದನ್ನು ಗಮನಿಸಿ ಅದಕ್ಕಿಂತ ಮುಂದೆ ಹೋಗುವ ಕಾರ್ಯವನ್ನು ಸಂಶೋಧನೆ ಮಾಡಬೇಕಾಗುತ್ತದೆ. ಇನ್ನು ಈಗಿರುವ ಸಂಶೋಧನೆಯ ಕುರಿತು ನಾನು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ, ಆದರೆ ಸಂಶೋಧನೆ ಮಾಡದೆ ಮತ್ತು ಸಂಶೋಧನೆಯನ್ನು ಅರ್ಥವೂ ಮಾಡಿಕೊಳ್ಳದೆ ಹಾಗೂ ಚರ್ಚೆಯನ್ನೂ ಮಾಡದೆ ಪ್ರತಿಕ್ರಿಯಿಸುವವರು ಮಾತ್ರ ಹೆಚ್ಚಾಗಿದ್ದಾರೆ. ಅವರ ಬಹುತೇಕ ಪ್ರಶ್ನೆಗಳು ನಿಜವಾಗಿಯೂ ತಿಳಿದುಕೊಳ್ಳಲು ಇರುವ ಹಂಬಲವನ್ನು ಸೂಚಿಸದೆ ಅವರ ಅಸಮಾಧಾನವನ್ನು ಹೊರಹಾಕುವುದನ್ನು ಸೂಚಿಸುತ್ತದೆ…
ವಚನಗಳ ಧ್ವನಿಯನ್ನು ಎಲ್ಲಿ ಹುಡುಕಬೇಕು?
– ರಾಜಾರಾಮ ಹೆಗಡೆ
ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರ, ಕುವೆಂಪು ವಿಶ್ವವಿದ್ಯಾನಿಲಯ
{ಡಾ. ಆಶಾದೇವಿಯವರು ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನಕ್ಕೆ ಪ್ರತಿಕ್ರಿಯೆಯಾಗಿ ಬರೆದು ಪ್ರಜಾವಾಣಿಗೆ ಕಳುಹಿಸಿದ್ದ ಅಪ್ರಕಟಿತ ಲೇಖನ}
ಡಾ. ಆಶಾದೇವಿಯವರ ಪ್ರತಿಕ್ರಿಯೆಯಲ್ಲಿ ನನ್ನ ವಿಚಾರಗಳ ಕುರಿತು ವ್ಯಕ್ತವಾದ ಎರಡು ಮುಖ್ಯ ಅಭಿಪ್ರಾಯಗಳ ಕುರಿತು ನನ್ನ ಆಕ್ಷೇಪಣೆಯಿದೆ: 1. ನಾವು ಉಲ್ಲೇಖಿಸುತ್ತಿರುವ ಸಂಶೋಧನಾ ವಿಧಾನವೇ ಒಂದು ಕಣ್ಕಟ್ಟು ಅಥವಾ ಮಾಯೆ. ಅದು ಸ್ವಘೋಷಿತ. ಆ ಮೂಲಕ ನಾವು ಕನ್ನಡಿಗರಿಗೆ ಮೋಸಮಾಡುತ್ತಿದ್ದೇವೆ. 2. ಈ ಸಂಶೋಧನೆಯ ಹಿಂದೆ ಒಂದು ಜಾಗತಿಕ ಹುನ್ನಾರವಿದೆ. ಇಂಥ ಹೇಳಿಕೆಗಳನ್ನು ಇದುವರೆಗೆ ನಾವು ನಿರ್ಲಕ್ಷಿಸಿಕೊಂಡು ಬಂದಿದ್ದೆವು. ಆದರೆ ಇಂಥ ಹೇಳಿಕೆಗಳನ್ನು ಸತ್ಯವೆಂಬಂತೆ ಪುನಃ ಪುನಃ ಮಾಡಲಾಗುತ್ತಿರುವುದರಿಂದ ನಾವು ಇದನ್ನು ಗಂಭೀರವಾಗಿ ಎಣಿಸಲೇಬೇಕಿದೆ.
ಆಶಾದೇವಿಯವರೊಂದೇ ಅಲ್ಲ, ನಾವು ಮಂಡಿಸಿದ ವಿಷಯದ ಕುರಿತು ಆಕ್ಷೇಪಣೆಯೆತ್ತುತ್ತಿರುವ ಬಹುತೇಕರು ಇಂಥ ಆರೋಪಗಳನ್ನು ಯಾವುದೇ ಎಗ್ಗಿಲ್ಲದೇ ತಾವು ಕಂಡುಕೊಂಡ ಸತ್ಯವೆಂಬಂತೆ ಹೇಳುತ್ತಿದ್ದಾರೆ. ಅಂದರೆ ನಾವು ಮೋಸಗಾರರು, ವಿದೇಶೀ ಹಣವನ್ನು ಕಬಳಿಸಲಿಕ್ಕೆ ಇಂಥ ಮಾತುಗಳನ್ನು ಹೇಳುತ್ತಿದ್ದೇವೆ, ಪೂರ್ವಾಗ್ರಹ ಪೀಡಿತರು, ನಮಗೊಂದು ಹುನ್ನಾರವಿದೆ, ನಾವು ದಲಿತರ, ಶೋಷಿತರ ವಿರೋಧಿಗಳು, ವಚನಕಾರರು ಯಾವ ಶಕ್ತಿಗಳ ವಿರುದ್ಧ ಹೋರಾಡಿದ್ದರೊ ನಾವು ಅವೇ ಶಕ್ತಿಗಳು, ಇತ್ಯಾದಿ. ಇವು ಸಣ್ಣಪುಟ್ಟ ಆರೋಪಗಳಲ್ಲ ಎಂಬುದನ್ನು ಪ್ರತ್ಯೇಕ ತಿಳಿಸಬೇಕಿಲ್ಲ. ಇದು ಯಾರ ವಿರುದ್ಧ ಯಾರನ್ನು ಎತ್ತಿಕಟ್ಟುವ ಹುನ್ನಾರ ಎಂಬುದು ನನಗೆ ತಿಳಿಯುತ್ತಿಲ್ಲ. ಇದು ಚಾರಿತ್ರ್ಯಹರಣದ ಪ್ರಯತ್ನ. ನಮ್ಮ ಕುರಿತು ಪ್ರಮಾಣಿತ ಸತ್ಯವೋ ಎಂಬಂತೆ ಈ ಆರೋಪಗಳನ್ನು ಅವರು ಸಾರ್ವಜನಿಕವಾಗಿ ಇಡುತ್ತಿದ್ದಾರೆ. ಮಾಧ್ಯಮವೊಂದರಲ್ಲಿ ಇಂಥ ಗುರುತರ ಆಪಾದನೆಗಳನ್ನು ಮಾಡುವಾಗ ಸಾಕ್ಷ್ಯಾಧಾರಗಳು ಬೇಕಾಗುತ್ತವೆ. ಅದಿಲ್ಲದ ಹೇಳಿಕೆಗಳು ಮಾನನಷ್ಟಕ್ಕೆ ಸಮನಾಗುತ್ತವೆ. ಹಾಗಾಗಿ ಮೊದಲು ಅದಕ್ಕೆ ಇವರೆಲ್ಲ ಸಾಕ್ಷ್ಯಾಧಾರಗಳನ್ನು ಒದಗಿಸಬೇಕು, ಇಲ್ಲದಿದ್ದಲ್ಲಿ ಇದು ಕಪೋಲ ಕಲ್ಪಿತ ಹೇಳಿಕೆ ಎಂಬುದಾಗಿ ಸ್ಪಷ್ಟೀಕರಿಸಬೇಕು ಎಂಬುದು ನನ್ನ ಆಗ್ರಹ.
ನಾಯಕರಿಗೊಂದು ದಿಕ್ಸೂಚಿ…
– ಮಧುಚಂದ್ರ ಭದ್ರಾವತಿ
ಸ್ವತಂತ್ರ ಪೂರ್ವದ ಹಿಂದೆ ನಡೆದ ಘಟನೆ,
ಮುಂಬೈ ನಗರದ ರೈಲ್ವೆ ನಿಲ್ದಾಣ, ಬೆಂಗಳೂರಿನಿಂದ ರೈಲು ಬಂದು ನಿಂತಿತ್ತು. ಮೈಸೂರಿನ ದಿವಾನರಾದ ಮಾಧವರಾಯರು ಕಾರ್ಯನಿಮಿತ್ತವಾಗಿ ದೆಹಲಿಗೆ ಹೊರಟಿದ್ದರು. ಮುಂಬೈ ರೈಲ್ವೆ ನಿಲ್ದಾಣದಲ್ಲಿ ದೆಹಲಿಗೆ ಹೋಗಲು ರೈಲನ್ನು ಬದಲಿಸಬೇಕಿತ್ತು. ದೆಹಲಿಗೆ ಹೊರಡುವ ರೈಲು ಇನ್ನು ಬಂದಿರಲಿಲ್ಲ ಸುಮಾರು ೫ ಘಂಟೆ ರೈಲ್ವೆ ನಿಲ್ದಾಣದಲ್ಲಿ ಕಾಯಬೇಕಿತ್ತು. ಆಗ ಮೈಸೂರಿನ ದಿವಾನರು ಬದಲಿ ರೈಲು ಬರುವ ಒಳಗೆ ಪೇಟೆ ಸುತ್ತಿ ಬರುವ ಯೋಚನೆ ಮಾಡಿ ಹೊರಟು ಹೋದರು.
ಮೈಸೂರಿನ ದಿವಾನರ ಪ್ರಯಾಣವನ್ನು ಪತ್ರಿಕೆಯ ಮೂಲಕ ಅರಿತಿದ್ದ, ಸುಮಾರು ೮೨ ವರ್ಷದ ವ್ಯಕ್ತಿಯೊಬ್ಬರು ದಿವಾನರನ್ನು ಕಾಣಲು ಬಂದರು. ಅವರಿಗೆ ದಿವಾನರು ಇಲ್ಲದಿರುವುದು ಅವರ ಆಪ್ತಕಾರ್ಯದರ್ಶಿಯಿಂದ ತಿಳಿಯಿತು. ಅ ೮೨ ವರ್ಷದ ವ್ಯಕ್ತಿಯನ್ನು ಗುರುತಿಸಿದ ದಿವಾನರ ಆಪ್ತಕಾರ್ಯದರ್ಶಿ ಅವರನ್ನು ದಿವಾನರ ಬೋಗಿಯೊಳಗೆ ಕುಳಿತು ಕೊಳ್ಳಲು ಮನವಿ ಮಾಡಿದರು.
” ದಿವಾನರು ಇಲ್ಲದಾಗ ಅವರ ಕೋಣೆಯನ್ನು ಪ್ರವೇಶಿಸುವುದು ಉಚಿತವಲ್ಲ ” ಎಂದು ಹೇಳಿ ನಯವಾಗಿ ತಿರಸ್ಕರಿಸಿದರು ಅ ಹಿರಿಯರು.
ದಿವಾನರು ದೆಹಲಿಗೆ ಹೊರಡುವ ಮುನ್ನ ಆಂಗ್ಲರ ನೀತಿಯನ್ನು ದಿಕ್ಕರಿಸಿದ ಮೈಸೂರಿನ ಜನತೆ , ಅಂಗ್ಲರ ವಿರುದ್ದ ಪ್ರತಿಭಟನೆಗೆ ಇಳಿದಿದ್ದರು. ಟೆಲಿಫೋನ್ ತಂತಿಗಳನ್ನು ಕತ್ತರಿಸಿದರು, ಅಂಚೆ ಕಛೇರಿಗೆ ಬೆಂಕಿ ಹಚ್ಚಿದ್ದರು , ರೈಲ್ವೆ ಕಂಬಿ ಕಿತ್ತರು , ಪ್ರತಿಭಟನೆ ಇನ್ನಷ್ಟು ಉಗ್ರವಾಯಿತು. ಅಗ ಸರ್ಕಾರ ಪ್ರತಿಭಟನೆಯನ್ನು ಹತ್ತಿಕ್ಕಲು ಗುಂಡು ಹಾರಿಸಿದರು, ಹಲವಾರು ನಾಗರೀಕರು ಪ್ರಾಣ ತೆತ್ತರು.
ನೂರರ ನೋಟು ಮತ್ತು ನೈತಿಕತೆ
– ಪ್ರಸನ್ನ
ನನ್ನದು ಕುಗ್ರಾಮದ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ. ಸಹಪಾಠಿ ದಯಾನಂದ ನಮ್ಮೂರ ಪಟೇಲರ ಮೊಮ್ಮಗ. ಆಗ ಕಾಂಗ್ರೆಸ್ ಮತ್ತು ಜನತಾ ಪಕ್ಷ ಎರಡೇ ಪಕ್ಷಗಳಿದ್ದಂತೆ ತೋರುತ್ತದೆ. ಯಾವ ಚುನಾವಣೆ ಎಂಬುದು ನೆನಪಿಲ್ಲ. ಕಾಂಗ್ರೆಸ್ಸಿನ ಚಿಹ್ನೆ ಹಸು ಮತ್ತು ಕರುವಿನದ್ದು. ತಗಡಿನ ಬಿಲ್ಲೆಯ ಮೇಲೆ ಮುದ್ರಿತಗೊಂಡಿದ್ದ ಆ ಬಿಲ್ಲೆ ನಮಗೆ ಅಚ್ಚುಮೆಚ್ಚು, ಕಾರಣ ಎರಡು ತೂತ ಹಾಕಿ ದಾರ ಕಟ್ಟಿ ಜುಯ್ ಎಂದೆಳೆಯುವ ಮೋಜಿನ ಬಿಲ್ಲೆಗೆ ಅದು ಅತ್ಯಂತ ಸೂಕ್ತವಾಗಿತ್ತು. ಆಗ ಜನತಾ ಪಕ್ಷದವರು ಸಂಘರ್ಷ ಚಿತ್ರದ “ಯೌವನದ ಹೊಳೆಯಲ್ಲಿ ಈಜಾಟವಾಡಿದರೆ ಓ ಹೆಣ್ಣೆ ಸೋಲು ನಿನಗೆ” ಹಾಡಿನ ರೀಮಿಕ್ಸ್ ಮಾಡಿ, ಓ ಇಂದಿರಾ ಸೋಲು ನಿನಗೆ ಎಂಬ ಹಾಡನ್ನು ಎಲ್ಲೆಡೆ ಬಿತ್ತರಿಸುತ್ತಿದ್ದ ನೆನಪು ಇದೇ ಚುನಾವಣೆಯ ಅಥವ ನಂತರದ್ದ ನೆನಪಿಲ್ಲ.
ಒಂದು ದಿನ ದಯಾನಂದ ಮಧ್ಯಾಹ್ನ ಊಟದ ನಂತರ ಬಂದು ನೂರು ರೂಪಾಯಿ ನೋಡಿದ್ಯ? ಅಂತ ಕೇಳ್ದ, ಇಲ್ಲಾ ಅಂತ ತಲೆ ಆಡಿಸಿದೆ. ನೋಡ್ತಿಯ? ಅಂದವನಿಗೆ ಗೋಣು ಹಾಕಿ ಇಚ್ಚೆ ವ್ಯಕ್ತ ಪಡಿಸಿದೆ. ಸರಿ ಬಾ ತೋರಿಸ್ತಿನಿ. ಭಯದಿಂದ ಕೇಳಿದೆ ನಿನ್ ಹತ್ರ ಹೇಗ್ ಬಂತು. ನನ್ ಹತ್ರ ಇಲ್ಲ. ನಮ್ಮನೆಲಿದೆ ತೋರಿಸ್ತಿನಿ ಬಾ.
ಪಟೇಲರು ವಂಶಪಾರಂಪರ್ಯವಾಗಿ ಕಾಂಗ್ರೆಸ್ಸಿನ ಸದಸ್ಯರು. ಅವರ ವಂಶದ ಯಾರೋ ಒಬ್ಬರು ನೆಹರುರೊಡನೆ ಇದ್ದ ಫೋಟೊವೊಂದು ಅವರ ಮನೆಯ ನಡುಮನೆಯ ಮುಂಬಾಗಿಲಿನ ಎದುರು ನೇತಾಡುತ್ತಿತ್ತು.
ಅವ್ವ ಒಳ್ಗೆ ಕೆಲ್ಸ ಮಾಡ್ತವ್ಳೆ ಎಂದ, ಮೆಲ್ಲಗೆ ನಡುಮನೆ ದಾಟಿ ಹಿಂದೆ ಕೋಣೆಯೊಂದಕ್ಕೆ ನನ್ನನ್ನು ಎಳೆದುಕೊಂಡು ಹೋದ. ಕೊಟೆಯೊಳಗೆ ನುಸುಳಿದಂತ ಅನುಭವ ದೊಡ್ಡಮನೆ, ದವಸ ಧಾನ್ಯಗಳ ತುಂಬಿತುಳುಕುತ್ತಿದ್ದ ಕೋಣೆಯ ಮೂಲೆಯೊಂದರಲ್ಲಿ ನಾಲ್ಕಾರು ತೆಳ್ಳನೆ ಗೋಣಿ ಚೀಲದ ಮೂಟೆಯ ಬಳಿಗೆ ಕರೆದೊಯ್ದು ಬೆರಳಿನಿಂದ ಚೀಲದ ದಾರಗಳನ್ನು ಬಿಡಿಸಿ ತೂತಿನಿಂದ ನೋಡು ಎಂದ ಉಹುಂ ಕತ್ತಲೆಯಲ್ಲಿ ಕಾಣುತ್ತಿರಲಿಲ್ಲ. ಮೆಲ್ಲಗೆ ಸ್ವಿಚ್ ಹಾಕಿದಾಗ ಮಂದ ಬೆಳಕು ಹರಿಯಿತು. ಯಾರ್ಲಾ ಅದು ಕೋಣ್ಯಾಗೆ? ಎಂಬ ವಯಸ್ಸಾದ ಹೆಣ್ಣಿನ ಧ್ವನಿ ತೂರಿ ಬಂತು. ನಾನು ನಡುಗಿ ಹೋಗಿದ್ದೆ. ಏ ನಾನೆ ಕಣಜ್ಜಿ ದಯಾ ಎಂದು ರೇಗಿದ. ಅಲ್ಲೇನ್ಲಾ ಕ್ಯಾಮೆ ನಿಂಗೆ ಇಸ್ಕೂಲ್ಗೆ ಓಗಿಲ್ವೆನ್ಲಾ? ಏಯ್ ಓಗಿದಿನಿ, ಪುಸ್ಕ ಮರ್ತೋಗಿದ್ದೆ ತಗೊಂಡೋಯ್ತಿನಿ.
“ಮಾರಲ್ ಪೋಲೀಸಗಿರಿಯ ಹೊಸ ಮಾದರಿ”
-ಡಾ.ಜೆ.ಎಸ್.ಸದಾನಂದ
( ಬ್ಲಾಗ್ ವೊಂದರಲ್ಲಿ ಕೆಲವು ದಿನಗಳ ಹಿಂದೆ ಪ್ರಕಟವಾದ ಪ್ರೊ. ರಾಜೇಂದ್ರ ಚೆನ್ನಿಯವರ ಲೇಖನಕ್ಕೆ ಪ್ರತಿಕ್ರಿಯೆ )
ಪ್ರಾರಂಭದಲ್ಲಿಯೇ ವೈಜ್ಞಾನಿಕ ಸಂಶೋಧನೆಯ ಬಗ್ಗೆ ನಮ್ಮ ನಿಲುವನ್ನು ಸ್ಪಷ್ಟಪಡಿಸಲು ಬಯಸುತ್ತೇನೆ.
ಪ್ರಚಲಿತ ವಿದ್ಯಮಾನವನ್ನು ಕುರಿತಾದ ಯಾವುದೇ ಸಂಶೋಧನೆಯೂ ಕೂಡ ಅಂತಹ ವಿದ್ಯಮಾನದ ಕುರಿತು ಈಗಾಗಲೆ ಇರುವ ವಿವರಣೆಗಳು ಎಷ್ಟು ಸಮರ್ಪಕ/ಅಸಮರ್ಪಕವಾಗಿವೆ ಎನ್ನುವುದರಿಂದ ಪ್ರಾರಂಭವಾಗುತ್ತದೆ. ವಿವರಣೆ ಅಥವಾ ವಿವರಣೆಗಳಲ್ಲಿ ಸಾಕಷ್ಟು ಅಂತರ್ವ್ಯೆರುಧ್ಯಗಳಿದ್ದರೆ ಮತ್ತು ವಿದ್ಯಮಾನದ ಎಲ್ಲ ಆಯಾಮಗಳನ್ನು ಹಿಡಿದಿಡಲು ಅದು ಅಸಮರ್ಥವಾಗಿದ್ದರೆ ಅದಕ್ಕಿರಬಹುದಾದ ಕಾರಣಗಳನ್ನು ಹುಡುಕಿ ಕ್ಯೆಗೆತ್ತಿಕೊಳ್ಳಬೇಕಾದ ಸಮಸ್ಯೆಯ ಸ್ವರೂಪವನ್ನು ರಚಿಸಬೇಕಾಗುತ್ತದೆ. ಸಂಶೋಧಕನು ಈಗಾಗಲೇ ಇರುವ ವಿವರಣೆಗಳಿಲ್ಲರಬಹುದಾದ ದೋಷಗಳನ್ನು ಮತ್ತು ಅದಕ್ಕಿರಬಹುದಾದ ಕಾರಣಗಳನ್ನು ತರ್ಕಬದ್ಧವಾಗಿ ಊಹಿಸಿ ಅದರ ಆಧಾರದ ಮೇಲೆ ಒಂದು ಪ್ರಾಕ್ ಕಲ್ಪನೆಯನ್ನು ರಚಿಸಿ ವಿದ್ಯಮಾನಕ್ಕೆ ಸಂಬಂಧಪಟ್ಟ ಮಾಹಿತಿಗಳನ್ನು ಸಂಗ್ರಹಿಸಿ ತರ್ಕಬದ್ಧ ವಾದವನ್ನು ಮಂಡಿಸುವ ಮೂಲಕ ತನ್ನದೇ ಆದ ಪರ್ಯಾಯ ವಿವರಣೆಯನ್ನು ಕೊಡಬೇಕಾಗುತ್ತದೆ. ಅಂತಹ ವಿವರಣೆಯು ಹಳೆಯ ವಿವರಣೆಗಳಲ್ಲಿರುವ ದೋಷಗಳನ್ನು/ಮಿತಿಗಳನ್ನು ಮೀರಿದ್ದಲ್ಲಿ ಮಾತ್ರ ವಿದ್ಯಮಾನಕ್ಕೆ ಸಂಬಂಧಿಸಿದ ಜ್ಞಾನದ ಮುಂದುವರಿಕೆಗೆ ಕೊಡುಗೆ ಸಲ್ಲಿಸಿದಂತಾಗುತ್ತದೆ. ನಾವು ತಿಳಿದುಕೊಂಡಂತೆ ಸಂಶೋಧನೆಯು ಮಾಡಬೇಕಾದ ಎರಡು ಪ್ರಮುಖ ಕೆಲಸಗಳೆಂದೆರೆ: 1) ವಿದ್ಯಮಾನದ ಬಗ್ಗೆ ಈಗಾಗಲೇ ಇರುವ ವಿವರಣೆಯ ಮಿತಿಯನ್ನು ತೋರಿಸುವುದು; 2) ಸಂಶೋಧನೆಯ ಫಲಿತವಾದ ಹೊಸ ವಿವರಣೆಯು ಅಂತಹ ಮಿತಿಗಳನ್ನು ಮೀರಿ ವಿದ್ಯಮಾನದ ಬಗ್ಗೆ ಹೆಚ್ಚು ಬೆಳಕು ಚೆಲ್ಲುತ್ತದೆ ಎಂದು ಸಾಬೀತುಪಡಿಸುವುದು.
ಈ ಅರ್ಥದಲ್ಲಿ ಸಂಶೋಧಕನ ಒಳ ಉದ್ದೇಶ/ರಾಜಕೀಯ/ಹುನ್ನಾರಗಳೇನೇ ಇರಲಿ ಅವುಗಳನ್ನು ಹೊರತುಪಡಿಸಿ ಸಂಶೋಧನೆಯನ್ನು ಮೌಲ್ಯಮಾಪನ ಮಾಡುವ ಸಾಧ್ಯತೆಯಿದೆ. ಮತ್ತು ಅಂತಹ ಒಳ ಉದ್ದೇಶಗಳು, ಹುನ್ನಾರಗಳು ಹೇಗೆ ಸಂಶೋಧನೆಯ ಮುಖ್ಯ ದೋಷವಾಗುತ್ತವೆ ಎನ್ನುವುದನ್ನು ಸಂಶೋಧನೆಯು ಮಂಡಿಸಿದ ವಾದದ ಚೌಕಟ್ಟಿನಲ್ಲಿಯೇ ತೋರಿಸಲು ಸಾಧ್ಯವಾದಾಗ ಮಾತ್ರ ಉಪಯುಕ್ತವಾಗುತ್ತದೆ. ಇಲ್ಲದಿದ್ದಲ್ಲಿ ಅಂತಹ ಆರೋಪಗಳು ಸಂಶೋಧನೆಗೆ ಹೊರತಾದ ಆರೋಪಗಳಾಗುತ್ತವೆ ಮತ್ತು ಅವುಗಳನ್ನು ಸಾಬೀತುಪಡಿಸುವುದು ಆರೋಪ ಮಾಡಿದವರಿಗಾಗಲಿ ಮತ್ತು ಅಂತಹ ಆರೋಪ ತಪ್ಪು ಎಂದು ತೋರಿಸುವುದು ಸಂಶೋಧಕರಿಗಾಗಲಿ ಸಾಧ್ಯವಿಲ್ಲ. ಈ ಅರ್ಥದಲ್ಲಿ ನಾನು ಅದು ಆಂತರ್ಯಕ್ಕೆ ಸಂಬಂದಿಸಿದ್ದು ಎಂದು ಹೇಳಿದ್ದು. ಆಂತರ್ಯವನ್ನು ಪರೀಕ್ಷಿಸಬಾರದು ಎಂದು ನಾನು ಹೇಳುತ್ತೇನೆ ಎಂದು ಚೆನ್ನಿಯವರು ತಪ್ಪಾಗಿ ಗ್ರಹಿಸುತ್ತಾರೆ. ಮತ್ತಷ್ಟು ಓದು 




