ಮನದಾಳದ ಮೌನ ಮಾತಾದಾಗ : ಬಾಲ್ಯದ ಮುಗ್ಧ ಭಾವಗಳು -೧
– ರಂಜಿತಾ
ಮುಗ್ಧ ಮನಸ್ಸುಗಳ ಆ ನಮ್ಮ ಮುಗ್ಧತೆಯ ದಿನಗಳನ್ನು ನೆನಪಿಸಿಕೊಂಡರೆ ಎದೆಯಾಳದ ಕಡಲಲ್ಲಿ ಅವಿತಿರುವ ಆ ಸುಂದರ ಮುಗುಳ್ನಗೆಯು ನಮಗೆ ಅರಿವಿಲ್ಲದೆ ತುಟಿಯಂಚಿನಲ್ಲಿ , ಅಮಾವಾಸೆಯ ಕತ್ತಲಲ್ಲೂ ಚಂದ್ರನನ್ನು ಕಂಡಂತೆ ಮೂಡಿಬರುವುದು.ಆಗಿದ್ದ ಆ ನಿಷ್ಕಲ್ಮಶ ಹೃದಯಕ್ಕೆ ಈಗಿನ ಕೋಟ್ಯಂತರ ಬೆಲೆಬಾಳುವ ಸಾವಿರಾರು ಕೋಹಿನುರು ವಜ್ರಗಳ ಬೆಲೆಯೂ ಸಹ ಸರಿಸಾಟಿ ಆಗದು….
ನಕ್ಷತ್ರಗಳಂತೆ ಮಿಂಚುವ ಆ ಕಣ್ಣುಗಳ ಕಾಂತಿಯು ಪ್ರತಿಯೊಂದು ವಸ್ತುವಿನಲ್ಲು ವಿಶೇಷತೆ ಕಂಡು ಅದರ ಸೌಂಧರ್ಯವ ಆಸ್ವಾದಿಸುತಿತ್ತು.. ಅದರ ವಿಷಶತೆಯನ್ನು ಅರಿಯಲು ಮನಸ್ಸು ಚಡಪಡಿಸುತಿತ್ತು… ಆದರೆ ಇಂದಿನ ಈ ದಿನಗಳಲ್ಲಿ ವಿಶೇಷತೆಯ ವಸ್ತುವನ್ನು ಕಂಡರೂ ಕೇವಲ ಅಥವಾ ಸಹಜ ವೆಂಬ ಪ್ರತಿಕ್ರಿಯೆ ನೀಡುತ್ತೇವೆ..
ಅಂದು ಮಾತಡುತಿದ್ದ ಆ ಮಾತುಗಳಲ್ಲಿ ಸ್ಪಷ್ಟತೆ ಕಾಣದಿದ್ದರೂ , ತೊದಲು ನುಡಿಯ ಮಾತಲ್ಲೇ ಎಲ್ಲರ ಮನ ಗೆಲ್ಲುತಿದ್ದೆವು..ಎಲ್ಲರ ಮುಗುಳ್ನಗೆಗೂ ಕಾರಣವಾಗಿರುತ್ತಿದ್ದೆವು …ತತ್ ಕ್ಷಣಕ್ಕೆ ಅವರ ಎಲ್ಲ ನೋವುಗಳನ್ನು ಮರೆತು ನಮ್ಮ ತುಂಟಾಟಗಳ ಜೊತೆ ಬೆರೆತು ನಗುವಿನ ರಥದಲ್ಲಿ ಸಂಚರಿಸುತ್ತಿದ್ದರು.. ಆದರೆ ಇಂದಿನ ನಮ್ಮ ಈ ಸ್ಪಷ್ಟವಾದ ಮಾತುಗಳು ಒಬ್ಬರಿಗೆ ಹಿತವೆನಿಸಿದರೆ ಮತ್ತೊಬ್ಬರಿಗೆ ಕಹಿ ಬೇವಿನ ರುಚಿಯನ್ನು ಪರಿಚಯಿಸುತ್ತದೆ .. ಒಬ್ಬರಿಗೆ ಸರಿ ಎನ್ಸಿದರೆ ಮತ್ತೊಬ್ಬರಿಗೆ ಆ ಸ್ಪಷ್ಟವಾದ ಮಾತಲ್ಲೂ ತಪ್ಪನ್ನು ಹುಡುಕುವ ತವಕ..
ಅಂದು ನಮ್ಮದು , ನನ್ನವರು ಎಂಬ ನಮ್ಮೊಳಗಿನ ” ಅಹಂ ವೆಂಬ ಪುಟ್ಟ ಮಾನವ ” ತನಗೆ ಹಾಗು ತನ್ನನ್ನು ಇರಿಸಿಕೊಂದವರಿಗೆ ಎಷ್ಟು ಬೇಕೋ ಅಷ್ಟಕ್ಕೇ ಮಾತ್ರ ಸೀಮಿತವಾಗಿದ್ದ ಅವನು ” ಆರೋಗ್ಯಕರ ಅಹಂ ” ಎಂಬ ಬಿರುದಿಗೆ ಮಾತ್ರ ಪಾತ್ರನಾಗಿದ್ದ , ತನ್ನ ಬೇಲಿಯೊಳಗೆ ಮಾತ್ರ ಸಂಚಾರಿಸುತಿದ್ದ.. ಆದರೆ ಇಂದು ಅದೇ ಅಹಂ ಎಂಬ ಮಾನವ ಬೆಳೆದು ದೊಡ್ಡವನಾಗಿ ನಾನು , ನನ್ನದು , ನನಗೆ ಮಾತ್ರ , ನನ್ನ ಸಂತೋಷ , ನನ್ನ ಇಷ್ಟ ಎಂಬ ಇತ್ಯಾದಿ ಗುಣಗಳನ್ನು ಬೆಳೆಸಿಕೊಂಡು ” ಆರೋಗ್ಯ ಹಾನಿಕಾರ ಅಹಂ ” ಎಂಬ ಛೀಮಾರಿ ಹಾಕಿಸಿಕೊಂಡು , ತನ್ನ ತಪ್ಪನ್ನು ತಿಳಿದಿದ್ದರೂ ತಿದ್ದಿಕೊಳ್ಳದೆ , ತನ್ನನ್ನು ಇರಿಸಿಕೊಂದವರಿಗೆ ಹಾಗು ಸುತ್ತಮುತ್ತಲಿನವರಿಗೂ ಸದಾಕಾಲ ಕೇಡು ಬಯುಸುವವನಾಗಿದ್ದಾನೆ.. ತನ್ನ ಬೇಲಿಯನ್ನು ದಾಟಿ , ಇತರರ ಬೇಲಿಯೋಲಗು ಪ್ರವೇಶಿಸಿ ತನ್ನ ಅಟ್ಟಹಾಸವ ಮೆರೆದು , ಕೊಪಾಗ್ನಿಯಲ್ಲಿ ಮಿಂದು ಇತರರ ಸಂತಸಕ್ಕೆ ಯಮನಾಗಿದ್ದಾನೆ….
ವ್ಯಾಲೆಂಟೈನ್ಸ್ ಡೇ ಮತ್ತು ಅದರ ಒಳ ಸುಳಿಗಳು
ಮಹೇಶ್ ಪ್ರಸಾದ್ ನೀರ್ಕಜೆ
ಹೌದ್ರೀ, ನಾನು ಕನ್ನಡ ಪ್ರೇಮಿಯೇ. ಇಂಗ್ಲಿಷ್ ವ್ಯಾಮೋಹದಿಂದ ಶೀರ್ಷಿಕೆಯಲ್ಲಿ ‘ಪ್ರೇಮಿಗಳ ದಿನ’ ಅನ್ನದೇ ವ್ಯಾಲೆಂಟೈನ್ಸ್ ಡೇ ಅಂದಿದ್ದಲ್ಲ. ಪ್ರೇಮಿಗಳ ದಿನ ಅಂತ ಹೇಳದೇ ಇದ್ದಿದ್ದಕ್ಕೆ ಕಾರಣ ತುಂಬಾ ಇದೆ. ಯಾಕೆಂದರೆ ವ್ಯಾಲೆಂಟೈನ್ಸ್ ಡೇ ಎನ್ನುವುದರ ಅರ್ಥ ನಾವೆಲ್ಲರು ತಿಳಿದಿರುವಂತೆ ಪ್ರೇಮಿಗಳ ದಿನ ಅಲ್ಲ! ಅದು ಹೇಗೆ ಅಂತ ಹೇಳುವ ಮೊದಲು ಇನ್ನೊಂದು ವಿಷಯ ಸ್ಪಷ್ಟಪಡಿಸುತ್ತೇನೆ. ಸಾಮಾನ್ಯವಾಗಿ ವ್ಯಾಲ್ಲೆಂಟೈನ್ಸ್ ಡೇ ವಿರೋಧಿಸುವ ಬಲ ಪಂಥೀಯರಿಗೂ, ಅಥವಾ ಏನೇ ಇದ್ದರೂ ವ್ಯಾಲೆಂಟೈನ್ಸ್ ಡೇ ಎನ್ನುವುದನ್ನು ಮಾನವತೆಯ ಮಟ್ಟಕ್ಕೆ ಎತ್ತರಿಸಿ ಸಮರ್ಥಿಸುವ ಎಡ ಪಂಥೀಯರಿಗೂ (ಕೆಲ ಎಡಪಂಥೀಯರು ಕೂಡ ಬೇರೆ ಕಾರಣಕ್ಕೆ ವ್ಯಾಲೆಂಟೈನ್ಸ್ ಡೇ ವಿರೋಧಿಸುತ್ತಾರೆ) ಈ ಬರಹ ಅಪಥ್ಯವಾಗಬಹುದು. ನನ್ನ ಪ್ರಯತ್ನವೇನಿದ್ದರೂ ಇವೆರಡನ್ನು ಬಿಟ್ಟು ಅವುಗಳಿಗಿಂತಲೂ ಮೇಲಿನ ಮಟ್ಟದಲ್ಲಿ ಮೂರನೇ ದೃಷ್ಟಿಕೋನವೊಂದನ್ನು ಅನ್ವೇಷಿಸುವುದು.
ಮೊದಲನೆಯದಾಗಿ ವ್ಯಾಲೆಂಟೈನ್ಸ್ ಡೇ ಮೂಲ ಕೆದಕಿದರೆ ನಮಗೆ ಇತಿಹಾಸದಲ್ಲಿ ಸಿಗುವುದು ಒಬ್ಬ ಪ್ರೇಮಿಯೋ ರಸಿಕನೋ ಅಥವಾ ಒಂದು ಪೌರಾಣಿಕ ಕಥೆಯ ಜನಪ್ರಿಯ ಪಾತ್ರವೋ ಅಲ್ಲ. ವ್ಯಾಲೆಂಟೈನ್ಸ್ ಎಂಬುದು ಮೂಲತಹ ಒಬ್ಬ ಸಂತನ ಹೆಸರು. ಇನ್ನೂ ಸರಿಯಾಗಿ ಹೇಳಬೇಕೆಂದರೆ ಕ್ರಿಶ್ಚಿಯಾನಿಟಿ ಇನ್ನೂ ಪಸರಿಸುತ್ತಿದ್ದ ಕಾಲದಲ್ಲಿ ಪೆಗನರ (ಶಬ್ದಾರ್ಥ : ಅನಾಗರಿಕ) ಕೈಯಲ್ಲಿ ಸಾಯುತ್ತಿದ್ದ ಕ್ರೈಸ್ತ ಸಂತರನ್ನು ವ್ಯಾಲೆಂಟೈನ್ ಎಂದು ಕರೆಯಲಾಗುತ್ತಿತ್ತಂತೆ. ಮತ್ತಷ್ಟು ಓದು 
ಹಿಮ್ಮೇಳ – ಪಳಿಯುಳಿಕೆ ಒಂದರ ಉಳಿವಿಗೆ ಒಂದು ಪ್ರಯತ್ನ
– ರಾಗು ಕಟ್ಟಿನಕೆರೆ,ಯಕ್ಷಮಿತ್ರ
“ಹೋರಾಟ ಅಂದ್ರೆ ಹೊಡೆದಾಟ ಅಲ್ಲ ಕಾಣ್ರೋ” ಅಂತ ನಮ್ಮ ಮಾಸ್ತರು ಒಬ್ರು ಹೇಳ್ತಾ ಇದ್ರು. ನಮ್ಮ ಕನ್ನಡ ಸಂಸ್ಕೃತಿ ಉಳಿಬೇಕು ಅಂತ ನಾವು ಕಲ್ಲು ತೂರಾಡ್ಲೂ ಬಹುದು ಅಥವಾ ನಮ್ಮ ಸಂಸ್ಕೃತಿ ಯಾವುದು, ನಾವು ದಿನನಿತ್ಯ ಅದನ್ನ ಪಾಲಿಸ್ತಾ ಇದೀವಾ ಅಂತ ಗಂಭೀರವಾಗಿ ಆತ್ಮಾವಲೋಕನ ಮಾಡಿಕೊಳ್ಳಲೂ ಬಹುದು. ಕನ್ನಡದಲ್ಲಿ ಬೋರ್ಡೇ ಹಾಕಲ್ಲ ಅನ್ನೋ ನಾವು, ಹಾಕಿರೋ ಬೋರ್ಡಗಳಲ್ಲಿ ಎಷ್ಟು ಕೆಟ್ಟದಾಗಿ ಕನ್ನಡ ಬರಿತೀವಿ, ಎಷ್ಟು ತಪ್ಪು ತಪ್ಪಾಗಿ ಬರಿತೀವಿ ಅಂತ ನೋಡ್ತೀವಾ, ಪ್ರತಿಭಟಿಸ್ತೀವಾ? ಬೆಂಗಳೂರು ಬಸ್ ನಿಲ್ದಾಣಗಳಲ್ಲೇ ನೋಡಿ: ಅಲ್ಸಸೂರು, ಹೊಯ್ಸಸಳ, ವಟರ್ ಟ್ಯಾಂಕ್ ಇತ್ಯಾದಿ. ನಮ್ಮ ಕನ್ನಡದ ಕಲೆಗಳು ನಮ್ಮ ಸಂಸ್ಕೃತಿಯ ಮೂರ್ತರೂಪಗಳು. ಈ ಕಲೆ ರೂಪದಲ್ಲಾದ್ರು ನಮ್ಮ ಸಂಸ್ಕೃತಿ ಉಳಿಬಹುದು ಅಂದ್ಕೋಬಹುದು. ಆದ್ರೆ ನಮ್ಮದೇ ಆದ ಕಲೆಗಳು ನಾಶ ಆಗ್ತಾ ಇದ್ರೂ ನಾವು ಫಿಲ್ಮ್ ನೋಡ್ಕೊಂಡು ಅರಾಮಿದ್ರೆ ನಮ್ಮ ಸಂಸ್ಕೃತಿ ಉಳಿಯತ್ತಾ? ಉಳಿಯತ್ತೋ ಇಲ್ವೋ ಆದ್ರೆ ಎನ್ ಕಳ್ಕೊಳ್ತಾ ಇದೀವಿ ಎನಾದ್ರು ಮಾಡ್ಲಿಕ್ಕೆ ಸಾದ್ಯನಾ ಅಂತಾದ್ರೂ ನೋಡ್ಬೇಕಲ್ವಾ?
ಕಲೆಗಳು ಅಂದ ತಕ್ಷಣ ನಮ್ಮ ಕನ್ನಡದ ಕಲೆಗಳಲ್ಲಿ ಎದ್ದು ಕಾಣೋದು ಯಕ್ಷಗಾನ ಬಯಲಾಟ. ಯಕ್ಷಗಾನ ಬಯಲಾಟ ಕೇವಲ ಕಲೆಯಷ್ಟೇ ಅಲ್ಲ ಇದು ನಮ್ಮ ಸಂಸ್ಕೃತಿಯ ಪಳಿಯುಳಿಕೆನೂ ಹೌದು. ಯಕ್ಷಗಾನದಲ್ಲಿ ಮಾತಾಡೋ ತರಾನೇ ಬೇರೆ – ಒಂದು ರೀತಿ ಚಂದ, ಶೃತಿ ಬದ್ಧ. ಇವತ್ತಿಗೂ ಹಳ್ಳಿಕಡೆ ಹೋದ್ರೆ ನಮ್ಮ ಈಡಿಗ ಸಮುದಾಯದವರು, ಹವ್ಯಕರು ಎಲ್ಲರೂ ಒಂತರಾ ಹಾಡಿದಾಗೆ ಶೃತಿಗೆ ಸರಿಯಾಗಿ ಮಾತಾಡ್ತಾರೆ. ಅದು ನಮ್ಮ ಮೂಲ ಕನ್ನಡ ಮಾತಾಡೊ ರೀತಿ ಇದ್ದಿರಬಹುದು. ಅದು ಯಕ್ಷಗಾನದಲ್ಲಿ ಉಳ್ಕೊಂಡಿದೆ ಅಂತ ಅನ್ನಿಸುತ್ತೆ. ಈಗ ತಮಿಳುನಾಡಿನಲ್ಲೇ ಹೆಚ್ಚು ಪ್ರಸಿದ್ಧವಾಗಿ ಇರೋ ನಮ್ಮ ಕರ್ನಾಟಕ ಸಂಗೀತದಲ್ಲಿನ ತಾಳಗಳ ಮೂಲರೂಪ ನಮ್ಮ ಯಕ್ಷಗಾನದಲ್ಲಿ ಇದೆ ಅಂತ ಡಾ.ರಾಘವ ನಂಬಿಯಾರ್ ಅಂತ ಒಬ್ಬ ಯಕ್ಷಗಾನ ಸಂಶೋಧಕರು ಪ್ರತಿಪಾದಿಸಿದಾರೆ. ಎಷ್ಟೋ ತಾಳಗಳು, ಕುಣಿತದ ಶೈಲಿ, ಹಾಡಿನ ಧಾಟಿ ಎಲ್ಲಾ ಕಳದು ಹೋಗಿದೆ ಅಂತೆ. ನಮ್ಮ ಬಾಡಿ ಲಾಂಗ್ವೇಜೇ ಬದಲಾಗಿಲ್ವಾ? ಇವನ್ನೇಲ್ಲಾ ನಂಬಿಯಾರರು ತಮ್ಮ ಪುಸ್ತಕ “ಹಿಮ್ಮೇಳ” ಅನ್ನೋದ್ರಲ್ಲಿ ಬರೆದಿಟ್ಟು ನಮ್ಮ ಯಕ್ಷಾಗನ ಮೂಲರೂಪ ಹಾಳಾಗದಹಾಗೆ ಉಳಿಬೇಕು ಅಂತ ಪ್ರಯತ್ನ ಮಾಡ್ತಾ ಇದಾರೆ.
ಮಂಗಳನ ಜೀವಿಗಳು ಭೂಮಿಗೆ ಬರುತ್ತಿವೆ
-ವಿಷ್ಣು ಪ್ರಿಯ
ಮಂಗಳನಲ್ಲಿ ಇರುವಂಥ ಜೀವಿಗಳನ್ನು ನಾವು ಭೂಮಿಗೆ ತೆಗೆದುಕೊಂಡು ಬರುತ್ತಿದ್ದೇವೆ. ನೀಲಿ ಬಣ್ಣದ ಈ ಜೀವಿಗಳ ಬಗ್ಗೆ ಭೂಮಿಯಲ್ಲಿಯೇ ಅಧ್ಯಯನ ನಡೆಸುತ್ತೇವೆ. ಅವು ಭೂಮಿಯಲ್ಲಿ ಬದುಕುವ ಶಕ್ತಿ ಹೊಂದಿವೆಯೇ ಎಂಬುದನ್ನು ಪರೀಕ್ಷಿಸುತ್ತೇವೆ….
ಹೀಗಂತ ನಾಸಾದ ವಿಜ್ಞಾನಿಗಳು ಘೋಷಿಸಿದ್ದಾರೆ. ಮಂಗಳನ ಜೀವಿಗಳು ಎಂದಾಕ್ಷಣ ಹಾಲಿವುಡ್ ಚಲನಚಿತ್ರಗಳು ನೆನಪಾದರೆ ಅದರಲ್ಲಿ ಅಚ್ಚರಿಯಿಲ್ಲ. ಸ್ಫೀಶೀಸ್-2, ಮೆನ್ ಇನ್ ಬ್ಲಾಕ್ 3, ಪ್ರಾಮೆಥೌಸ್ ಮೊದಲಾದ ಚಿತ್ರಗಳೆಲ್ಲ ಅನ್ಯಗ್ರಹಗಳ ಜಿವಿಗಳ ಕಲ್ಪನೆಯನ್ನಿಟ್ಟುಕೊಂಡೇ ನಿರ್ಮಿಸಿರುವಂಥದ್ದು. ಬೇರೆ ಗ್ರಹದ ಜೀವಿಗಳು ಭೂಮಿಗೆ ಬಂದರೆ ಹೇಗಿರುತ್ತದೆ ಎಂಬುದನ್ನು ಹಲವು ಶತಮಾನಗಳ ಹಿಂದಿನಿಂದಲೇ ನಾವು ಕಲ್ಪಿಸಿಕೊಳ್ಳುವುದಕ್ಕೆ ಶುರು ಮಾಡಿದ್ದೆವು. ಆದರೆ ಆ ಕಲ್ಪನೆಗಳು ವಾಸ್ತವ ರೂಪಕ್ಕೆ ಬರುತ್ತಿರುವುದು ಮಾತ್ರ ಈಗ!ಮಂಗಳನಲ್ಲಿರುವ ಜೀವಿಗಳು ಇಲ್ಲಿಗೆ ಬರುತ್ತಿವೆ ಎಂದರೆ ಅವು ಹೇಗಿರಬಹುದು ಎಂಬ ಯೋಚನೆ ಹುಟ್ಟಿಕೊಳ್ಳುವುದು ಸಹಜ. ಸಿನೆಮಾಗಳಲ್ಲಿ ನೋಡಿದಂತೆ ಚಿತ್ರ-ವಿಚಿತ್ರ ಆಕಾರದ ಮಾನವರಂಥ ಜೀವಿಗಳು, ತಲೆ ಮೇಲೆ ಕೋಡು ಇರುವಂಥ ಮನುಷ್ಯರು, ಹಾರು ತಟ್ಟೆಗಳಲ್ಲಿ ಹಾರಾಡಿಕೊಂಡು ಬಂದು ಮನುಷ್ಯರ ಮೇಲೆ ಯುದ್ಧ ಮಾಡುವಂಥ ಜೀವಿಗಳು… ಅಲ್ಲ, ಈ ಸಿನೆಮಾಗಳು, ಫಿಕ್ಷನ್ನುಗಳಲ್ಲಿ ಅನ್ಯಗ್ರಹ ಜೀವಿಗಳ ಬಗೆಗಿನ ಕಲ್ಪನೆಯೇ ಅದ್ಭುತ. ಆದರೆ ಮಂಗಳಗ್ರಹದಿಂದ ತರಲಾಗುತ್ತಿರುವ ಜೀವಿಗಳು ಇಂಥವಲ್ಲ.
ವಸಾಹತು ಪ್ರಜ್ಞೆಯ ವಿಶ್ವರೂಪ ೧ : ನಮ್ಮೊಳಗಿನ ಎರಡು ಜಗತ್ತುಗಳು
ಭಾರತೀಯ ವಿದ್ಯಾವಂತರಲ್ಲಿ ಇರಬಹುದಾದ ಎರಡು ಜಗತ್ತುಗಳ ಕುರಿತು ಗಮನ ಹರಿಸೋಣ: ಒಂದು ಜಗತ್ತು ಸಾಂಪ್ರದಾಯಿಕವಾಗಿ ನಾವು ಬೆಳೆದು ಬಂದ ಜಗತ್ತಾಗಿದೆ. ಅಲ್ಲಿ ನಮ್ಮ ಅಪ್ಪ ಅಮ್ಮ, ಬಂಧು-ಬಳಗ, ನೆರೆ-ಹೊರೆಯವರು ನಮಗೆ ಈ ಪ್ರಪಂಚದಲ್ಲಿ ಹೇಗೆ ವ್ಯವಹರಿಸಬೇಕೆಂಬುದನ್ನು ಕಲಿಸಿರುತ್ತಾರೆ. ಅನೇಕ ಆಚರಣೆಗಳನ್ನು, ಆಲೋಚನಾ ಕ್ರಮವನ್ನು ಒಳಗೊಂಡ ಜೀವನ ಶೈಲಿಯನ್ನು ಕಲಿಸಿರುತ್ತಾರೆ.
ನಂತರ ನಾವು ವಿದ್ಯಾವಂತರಾದಂತೆಲ್ಲ ಮತ್ತೊಂದು ಜಗತ್ತಿಗೆ ತೆರೆದುಕೊಳ್ಳುತ್ತೇವೆ. ಇದು ವಿಚಾರಗಳ ಜಗತ್ತು. ಅದು ನಮ್ಮ ಆಧುನಿಕ ಶಿಕ್ಷಣವು ನಮಗೆ ಪರಿಚಯಿಸುವ ಜಗತ್ತು. ನಮ್ಮ ಕುಟುಂಬ, ಜಾತಿ ಮುಂತಾದ ಸಾಂಪ್ರದಾಯಿಕ ಸಮಾಜದಾಚೆಗೆ ಇರಬಹುದಾದ ಸಾರ್ವಜನಿಕ ಜಗತ್ತು ಇಂಥ ವಿಚಾರಗಳ ತಳಹದಿಯ ಮೇಲೆ ನಿರ್ಮಾಣವಾಗಿದೆ. ಹಾಗಾಗಿ ಅದು ನಮಗೆಲ್ಲ ಒಂದು ಆದರ್ಶ ಮಾದರಿ ಎಂದುಕೊಂಡಿರುತ್ತೇವೆ.
“ವಿಶ್ವರೂಪ” ದರ್ಶನವಂತೂ ಆಗುತ್ತಿದೆ….!
– ಚಕ್ರವರ್ತಿ ಸೂಲಿಬೆಲೆ
ಸೆಕ್ಯುಲರ್ ಭಾರತ!
ಇನ್ನಾದರೂ ಹಾಗೆ ಕರೆಯೋಕೆ ನಾಚ್ಕೋಬೇಕು. ಇಸ್ಲಾಮ್ ಭಾರತ ಅಂತಾನೋ ಹಿಂದೂ ವಿರೋಧಿ ಭಾರತ ಅಂತಾನೋ ಕರೆದರೆ ಒಂದಷ್ಟು ಅತೃಪ್ತ ಆತ್ಮಗಳು ತೃಪ್ತಿಗೊಂಡಾವು. ಕಳೆದ ಎಂಟ್ಹತ್ತು ದಿನಗಳ ನಾಟಕ ನೋಡಿದರೆ ಹಾಗನ್ನಿಸುವುದು ಸಹಜವೇ.
‘ವಿಶ್ವರೂಪಮ್’ ಬಿಡುಗಡೆಗೆ ಕಿರಿಕ್ ಅಯ್ತು. ಹತ್ಯೆ ಮಾಡುವ ಮುನ್ನ ಭಯೋತ್ಪಾದಕ ಅಲ್ಲಾಹನಿಗೆ ವಂದಿಸಿ ಹೊರಡುವುದನ್ನು ತೋರಿಸಿರುವುದೇ ಗಲಾಟೆಗೆ ಕಾರಣವಂತೆ. ತಮಿಳುನಾಡು ಸರ್ಕಾರ ಸಿನೆಮಾ ತಡೆಹಿಡಿಯಿತು. ಬೇರೆಬೇರೆ ರಾಜ್ಯಗಳಲ್ಲಿ ಬಿಡುಗಡೆಗೆ ಮುನ್ನ ಮುಸಲ್ಮಾನ ಸಂಘಟನೆಗಳು ಪ್ರತಿಭಟನೆ ಮಾಡಿದವು. ದಾವಣಗೆರೆಯಲ್ಲಿ ಕೋಮು ಗಲಭೆಯೇ ನಡೆಯಿತು. ತಮಿಳುನಾಡಿನ ಸಿನೆಮಾ ಮಂದಿರದಲ್ಲಿ ಪೆಟ್ರೋಲ್ ಬಾಂಬ್ ಎಸೆಯಲಾಯ್ತು. ಅಚ್ಚರಿಯೇನು ಗೊತ್ತೆ? ಜನಾರ್ಧನ ಪೂಜಾರಿಯವರು ಬಾಯಿ ತೆರೆಯಲೇ ಇಲ್ಲ. ಬುದ್ಧಿ ಮಾರಿಕೊಂಡು ಬದುಕುವ ಕೆಲವರು ಬೆಂಗಳೂರಿನಲ್ಲಿ ತಣ್ಣಗೆ ಕುಳಿತುಬಿಟ್ಟಿದ್ದಾರೆ.
ಯಾಕೆ ಸ್ವಾಮಿ? ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬೆಲೆಯೇ ಇಲ್ವೆ? ಈಗ ನಿಮಗೆ ಧರ್ಮದ ಹೆಸರಲ್ಲಿ ಕ್ರೌರ್ಯ ಕಾಣುವುದೆ ಇಲ್ಲವೆ?
ಕುಚ್ಚಿನ ಟೋಪಿಯ ಬೆಚ್ಚನೆ ಬೇಂದ್ರೆ, ನೆನಪುಗಳ ಗುಂಗಿನಲ್ಲಿ…
– ಅಶೋಕ ಶೆಟ್ಟರ್
(ಇಂದು, ಅಂದರೆ ಜನವರಿ ಮೂವತ್ತೊಂದು., ದ.ರಾ ಬೇಂದ್ರೆ ಜನಿಸಿದ ದಿನ. ಬೇಂದ್ರೆ ಕಾವ್ಯ ಒಂದು ಕಣಜ. ಮೊಗೆದಷ್ಟೂ ಒಸರುವ ಒರತೆ. ಜಗತ್ತಿನ ಶ್ರೇಷ್ಠ ಕವಿಗಳ ಸಾಲಿನಲ್ಲಿ ನಿಲ್ಲಬಲ್ಲ ಪ್ರತಿಭೆ.ಅವರು ಕನ್ನಡ ಕಾವ್ಯದ ಬಹುಮುಖ್ಯ ಧ್ವನಿ.ಅವರ ಕುರಿತಾಗಿ ಅಶೋಕ್ ಶೆಟ್ಟರ್ ಅವರು ೨ ವರ್ಷದ ಹಿಂದೆ ಬರೆದ ಈ ಲೇಖನ ಈಗ ಇಲ್ಲಿ, “ನಿಲುಮೆ”ಯ ಓದುಗರಿಗಾಗಿ – ನಿಲುಮೆ)
“ಅಲ್ಲಿ ಸಂಪಿಗೆಯಿತ್ತು ಪಾರಿಜಾತಕವಿತ್ತು
ಮಾವು ಮಲ್ಲಿಗೆಯಿತ್ತು ಮನೆಯಿದುರು
ಮುಗಿಲ ಮಲ್ಲಿಗೆಯಿತ್ತು ತೆಂಗಿತ್ತು ಹಲಸಿತ್ತು
ನಿಂಬಿಯ ಇಂಬಿತ್ತು ಎಡೆಎಡೆಗೆ
ಹೊಂಗೆಯ ಸಾಲಿತ್ತು ಕಣ್ಮುಂದೆ ಕೆರೆಯಿತ್ತು
ಗುಡ್ಡದ ನೆರೆಯಿತ್ತು ಅದರಾಚೆಗೆ… …..”
“ಸಖಿಗೀತ”ದಲ್ಲಿ ಬರುವ ಈ ಸಾಲುಗಳು ಬೇಂದ್ರೆ ಕಂಡ ಸಾಧನಕೇರಿಯ ಶಬ್ದಚಿತ್ರಗಳು.ನಿನ್ನೆ ಅಂದರೆ ೨೯ ಜನವರಿ ೨೦೧೧ ರಂದು ಮಧ್ಯಾಹ್ನ ಒಂದೆರಡು ತಾಸು ಧಾರವಾಡದ ಬೇಂದ್ರೆ ಭವನದಲ್ಲಿ ಇದ್ದೆ. ಬೇಂದ್ರೆ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಶಾಮಸುಂದರ ಬಿದರಕುಂದಿಯವರೊಂದಿಗೆ ಮಾತಾಡಿ ಆಮೇಲೆ ಬೇಂದ್ರೆಯವರ ಮೂಲನಿವಾಸ “ಶ್ರೀಮಾತಾ”ದಲ್ಲೇ ಇರುವ ಅವರ ಪುತ್ರ ವಾಮನ ಬೇಂದ್ರೆಯವರ ಜೊತೆ ಸ್ವಲ್ಪ ಹೊತ್ತು ಕಳೆದೆ. ಬೇಂದ್ರೆ ಭವನದ ಮೇಲಂತಸ್ತಿನ ಬಾಲ್ಕನಿಯಿಂದ ಇತ್ತೀಚೆಗಷ್ಟೇ ಉದ್ಘಾಟನೆಗೊಂಡ ನವೀಕೃತ ಸಾಧನಕೆರೆಗೆ ಹೋಗುವ ದಾರಿ,ಉದ್ದಕ್ಕೂ ಕಟಾಂಜನ ಇವನ್ನೆಲ್ಲ ನೋಡುತ್ತಿದ್ದಾಗ ನನ್ನ ಮನಸಿನಲ್ಲಿ ಅಚ್ಚೊತ್ತಿದಂತಿರುವ ಆ ಪರಿಸರದ ಬೇರೆಯದೇ ಚಿತ್ರದ ಮೇಲೆ ನಾನು ಇವುಗಳನ್ನು ಸುಪರಿಂಪೋಸ್ ಮಾಡಬೇಕಾಗಿ ಬಂತು.ನನ್ನ ಮನಸಿನಲ್ಲಿ ಸುಳಿಯುತ್ತಿದ್ದುದು ೩೦-೩೫ ವರ್ಷಗಳ ಹಿಂದೆ ಬೇಂದ್ರೆ ಮನೆ ಇರುವ ಸಾಲಿಗೆ ಎದುರಾಗಿ,ಗೋವಾಕ್ಕೆ ಹೋಗುವ ಮುಖ್ಯರಸ್ತೆಯಾಚೆ, ಸಾಧನಕೆರೆಯ ಒಂದು ಮೇರೆಯಾಗಿರುವ, ನಾನು ಪೋಲಿಸ್ ವಸತಿಗೃಹಗಳಿಗೆ ಸಾಗಿ ಹೋಗುತ್ತಿದ್ದ, ಕಿರಿದಾದ ಮಣ್ಣ ರಸ್ತೆ, ಸಾಧನಕೆರೆಯ ಇನ್ನೊಂದು ಮೇರೆಯಾಗಿ ಆ ಕೆರೆಯ ಏರಿ, ಅದರಾಚೆ ಭತ್ತದ ಗದ್ದೆ, ತೋಟ ಪಟ್ಟಿಗಳು,ಆಗೊಂದು ಈಗೊಂದರಂತೆ ಗೋವಾಕ್ಕೆ ಹೋಗುತ್ತಿದ್ದ ಖಾಸಗಿ ಅಥವಾ ಸರಕಾರಿ ವಾಹನಗಳು,ಕೆಲಗೇರಿ ಹಾಗು ಮುಗದ ಗ್ರಾಮಗಳ ನಡುವಿನ ಕುರುಚಲು ಕಾಡುಗಳಲ್ಲಿ ಸಂಗ್ರಹಿಸಿದ ಕಟ್ಟಿಗೆಗಳ ಹೊರೆ ಹೊತ್ತು ಓಟದ ನಡಿಗೆಯಲ್ಲಿ ಧಾರವಾಡದತ್ತ ಹೋಗುತ್ತಿದ್ದ ಬಡಪಾಯಿ ಹೆಂಗಳೆಯರು, ಮುಕ್ತಾಯಗೊಳ್ಳಬೇಕು ಎಂಬ ಯಾವ ಧಾವಂತವೂ ಇಲ್ಲದೇ ನಿಷ್ಕಾರಣವೆಂಬಂತೆ ನಿಷ್ಕರುಣೆಯಿಂದ ಸುರಿಯುತ್ತಿದ್ದ ಜಿಡ್ಡುಮಳೆ,ಅಂಚಿನಲ್ಲೆಲ್ಲ ಜೊಂಡು ಬೆಳೆದಿದ್ದ ಚಿಕ್ಕದೂ ಅಲ್ಲದ ಬಹಳ ವಿಸ್ತಾರವೂ ಅಲ್ಲದ ಸಾದನಕೆರೆ..ಹಳೆ ಕಾಲದ ಕೆಂಪು ಹಂಚಿನ ಮನೆಗಳು,ಸುಶಿಕ್ಷಿತ ಜನ..ಆ ಪರಿಸರದಲ್ಲಿದ್ದಷ್ಟೂ ಹೊತ್ತು ಮನಸಿನಲ್ಲಿ ನೆನಪುಗಳ ಸಂತೆ ನೆರೆದಿತ್ತು. “ಸಾಧನಕೇರಿಯ ಸಂಜೆ ಮಳೆ ಸೆಳಕುಗಳು” ಎಂಬ ನನ್ನದೊಂದು ಕವಿತೆಯಲ್ಲಿ ಸಾದನಕೇರಿಯ ಇತರೆ ಚಿತ್ರಗಳೊಂದಿಗೆ ಬೇಂದ್ರೆ ನನ್ನ ಮನಸಿನಲ್ಲಿ ಮೂಡಿದ್ದು ಹೀಗೆ:
ಮತ್ತಷ್ಟು ಓದು 
‘ದಾಮಿನಿ’ಗೆ ಮಿಡಿದ ಹೃದಯಗಳು ’ಸೌಜನ್ಯ’ಳಿಗೂ ಮಿಡಿಯಲಾರವೇ?
– ಭುವಿತ್ ಶೆಟ್ಟಿ
ಪ್ರಿಯ ಮಂಗಳೂರಿನ ನಾಗರೀಕರೇ,
ನಾವೇಕೆ ಈ ರೀತಿ? ನಮ್ಮ ಮನೆಯಲ್ಲಿ ಸೂತಕವಿದ್ದರೂ ಪರಮನೆಯ ಸಾವಿಗೆ ಕಣ್ಣೀರು ಸುರಿಸುವ ಹೃದಯ ವೈಶಾಲ್ಯತೆ ನಮಗೇಕೆ? ಊರ ಉಸಾಬರಿ ನಮಗ್ಯಾಕೆ ಅಂತ ಸುಮ್ಮನೆ ಕೂರುವಂಥ ಕಾಲ ಇದಲ್ಲ. ಅದನ್ನು ಒಪ್ಪಲೇ ಬೇಕು. ಆದರೆ, ಇತ್ತೀಚೆಗೆ ನಾವು ತೀರ ಸ್ವಂತಿಕೆಯ ಎಲ್ಲೆ ಮೀರಿ ಹೋಗುತ್ತಿದ್ದೇವೆ. ನೆರೆಮನೆ ಸುಡುತ್ತಿದ್ದರೂ ಮಾತಾಡದೆ, TV ಯಲ್ಲಿ ಕ್ರೈಂ ಸ್ಟೋರಿ ನೋಡಿ ಅಯ್ಯೋ ಪಾಪ ಎನ್ನುತ್ತೇವೆ. ಅಂಥ ಮನೋಸ್ಥಿಥಿ ನಮ್ಮದು. ಮಾನವೀಯತೆ ಎಂಬುದು ಮಾದ್ಯಮಗಳು ಬಿತ್ತರಿಸುವ ಸುದ್ದಿಯನ್ನು ನೋಡಿ ಉಕ್ಕಿ ಹರಿಯುತ್ತದೆ ಹೊರತು ವಾಸ್ತವತೆಯನ್ನರಿತಲ್ಲ. ಮಂಗಳೂರು ಖಂಡಿತವಾಗಿಯೂ ಬದಲಾಗಿದೆ ಎನ್ನಲು ಇತ್ತೀಚೆಗೆ ನಡೆದ Home Stay ಗಲಾಟೆ ಹಾಗೂ ಸೌಜನ್ಯ ಸಾವಿನ ಪ್ರಕರಣದ ಬಗ್ಗೆ ಮಂಗಳೂರಿನ ಜನತೆ ವ್ಯಕ್ತಪಡಿಸಿದ ಪ್ರತಿಕ್ರಿಯೆಯೇ ಸಾಕು.
ರಾಜಕೀಯ ಪ್ರೇರಿತ ‘ಮಂಗಳೂರು ರೆಸಾರ್ಟ್ ಗಲಾಟೆ’ಯಲ್ಲಿ ಸಿರಿವಂತ ಮನೆಯ ಹೆಣ್ಣುಮಕ್ಕಳಿಗಾದ ಅನ್ಯಾಯಕ್ಕೋಸ್ಕರ ಅದೆಷ್ಟು ಮಂದಿ ಬೀದಿಗಿಳಿಯಲಿಲ್ಲಾ? Facebook ತುಂಬಾ ಅದೇನೂ ಸ್ಟೇಟಸ್ Update ಗಳು, ಅದೇನೂ ಅಕ್ರೋಶ? ದಾಳಿ ಮಾಡಿದವರನ್ನು ಕೈಗೆ ಕೊಟ್ಟಿದ್ದರೆ ಕೊಂದು ಬಿಡುತ್ತಿದ್ದರೋ ಏನೋ… ಆ ರೀತಿ ಇತ್ತು ಪ್ರತಿಭಟನೆಯ ಜೋರು.
ಜನ ಮನ್ನಣೆ
– ಮಧುಚಂದ್ರ ಭದ್ರಾವತಿ
ಇಂದು ಅತ್ಯಂತ ಪ್ರಸ್ತುತದಲ್ಲಿರುವ ಪದ ಎಂದರೆ ” ಜನ ಮನ್ನಣೆ “. ಅದಕ್ಕಾಗಿ ನಾವು ಏನೆಲ್ಲಾ ಮಾಡುತ್ತೇವೆ. ದಾನ ಮಾಡಿದಾಗ ನಮ್ಮ ಹೆಸರು, ಶಂಕು ಸ್ಥಾಪನೆ ಮಾಡಿದಾಗ ನಮ್ಮ ಹೆಸರು( ಕಾಮಗಾರಿ ಆಗುತ್ತೋ ಇಲ್ಲವೋ), ಕಂಡ ಕಂಡಲೆಲ್ಲ ಹೆಸರು ರಾರಜಿಸುವುದಕ್ಕೆ ಏನೆಲ್ಲಾ ಮಾಡಬಹುದು ಎಲ್ಲಾ ಮಾಡುತ್ತೇವೆ. ಆದರೆ ಅದನ್ನು ಇಂದಿನ ಮಾನವ ಕೇವಲ ಕ್ಷಣಕ್ಕೆ ಮಾತ್ರ ಪರಿಗಣಿಸಿ ನಂತರ ಕಡೆಗಣಿಸುತ್ತಾನೆ. ಅವರಾರು ತಮ್ಮ ಹೆಸರನ್ನು ಕಡೆಯವರೆಗೂ ಉಳಿಸಿಕೊಂಡು ಮನ್ನಣೆ ಪಡೆಯಲು ಸಾಧ್ಯವಾಗದೆ ಅಳಿದು ಹೋಗುತ್ತಾರೆ .ಇಂದು ಸೇವಾ ಮನೋಭಾವವಿಲ್ಲದ ದಾನ ಕೇವಲ ಪ್ರಚಾರಕ್ಕೆ ಮಾತ್ರ ನಿಮಿತ್ತ. ಅಂದರೆ ದಾನಿಗಳು ಇರುವವರೆಗೂ ಮಾತ್ರ, ಅವರಳಿದ ಮೇಲೆ ಅವು ಸಹ ಅಳಿಯುತ್ತದೆ. ಅವು ಎಂದೂ ಜನರ ಮನದಲ್ಲಿ ಉಳಿಯುವುದೇ ಇಲ್ಲ. ಸ್ವಾರ್ಥದ ಸೇವೆ ಎಲ್ಲಿಯೂ ಸಲ್ಲುವುದಿಲ್ಲ. ನಿಸ್ವಾರ್ಥ ಸೇವೆ ಇಂದು ಕಣ್ಮರೆಯಾಗುತ್ತಿದೆ. ನಿಸ್ವಾರ್ಥ ಸೇವೆ ಎನ್ನುವುದು ಎಂದೆಂದಿಗೂ ಶಾಶ್ವತ ಎನ್ನುವುದಕ್ಕೆ ಒಂದು ಚಿಕ್ಕ ಉದಾಹರಣೆ ನಿಮ್ಮ ಮುಂದೆ ನೀಡುತ್ತಿದ್ದೇನೆ. ಆಮೇಲೆ ಸೇವೆ ಎನ್ನುವ ಪದಕ್ಕೆ ಸಮಾನಾರ್ಥಕ ಪದ ನೀವೇ ನಿರ್ಧರಿಸಿ.
ಕನ್ನಂಬಾಡಿ ಆಣೆಕಟ್ಟು ನಿರ್ಮಾಣವಾದ ನಂತರ ಪ್ರತಿದಿನವೂ ದೇಶ ವಿದೇಶಗಳಿಂದ ಜನರು ಭೇಟಿ ನೀಡುತ್ತಿದ್ದರು. ಅ ಸಮಯದಲ್ಲಿ ಕನ್ನಂಬಾಡಿ ಕಟ್ಟೆಯ ನಿರ್ಮಾತರ ಹೆಸರಿನ ಫಲಕಗಳು, ಗುರುತುಗಳು ಸಹ ಇರಲಿಲ್ಲ. ಓಮ್ಮೆ ಆಂಧ್ರದ ಹಳ್ಳಿಯ ರೈತನೊಬ್ಬ ಕನ್ನಂಬಾಡಿ ಆಣೆಕಟ್ಟನ್ನು ಸಂದರ್ಶಿಸಿದನು. ಅಲ್ಲಿದ್ದ ಕಾವೇರಿಯ ಮೂರ್ತಿಗೆ ನಮಸ್ಕರಿಸಿ ಅಣೆಕಟ್ಟಿನ ಸೊಬಗನ್ನು ಸವಿಯುತ್ತಿದ್ದನು. ಹೀಗಿರುವಾಗ ಅಲ್ಲಿಗೆ ಬಂದ ಹಿರಿಯರೊಬ್ಬರು ಅಲ್ಲೇ ಇದ್ದ ಮಕ್ಕಳ ಹತ್ತಿರ ರೈತನಿಗೆ ” ಕನ್ನಂಬಾಡಿ ಆಣೆಕಟ್ಟು ನಿರ್ಮಿಸಿದವರು ಯಾರು ಗೊತ್ತೇ? ” ಎಂದು ಕೇಳಲು ಹೇಳಿದರು.
ಅಗ ರೈತನು ” ಏಮಂಡಿ, ಆ ಮಹಾನುಭಾವಲು ವಿಶ್ವೇಶ್ವರಯ್ಯಗಾರು ಚೆಸಿಂದಿಕಾದ ” (‘ ಏನು ಸ್ವಾಮಿ , ಆ ಮಹಾನುಭಾವ ವಿಶ್ವೇಶ್ವರಯ್ಯನವರು ಕಟ್ಟಿಸಿದ್ದಲ್ಲವೇ ? ‘) ಎಂದು ಉತ್ತರಿಸಿದನು.
ನಿಜವಾದ ಸೇವೆಗೆ ಶಿಲೆಯ ಮೇಲಿನ ಶಾಸನವಾಗಲಿ, ಫ್ಲೆಕ್ಸ್ ಬ್ಯಾನರ್ ಅಗಲಿ ಬೇಕಿಲ್ಲ. ಸೇವೆಯು ನಿರಂತರವಾಗಿ ತಲುಪುವ ಹಾಗಿರಬೇಕು. ಅಗ ಮಾತ್ರ ಜನಮನ್ನಣೆ ಪಡೆದು ಚಿರಸ್ಥಾಯಿಯಾಗಿರುತ್ತದೆ. ನಮ್ಮವರು ಇದರಿಂದ ಕಲಿಯುವುದು ಯಾವಾಗ ಎಂದು ನೀವೇ ಹೇಳಬೇಕು.
ಚಿತ್ರ ಕೃಪೆ – ಅಂತರ್ಜಾಲ
ರಾಜರಿಲ್ಲದ ರಾಜ್ಯದಲ್ಲಿ ವಂಶಾಡಳಿತದ ಪೋಷಣೆ
-ಗೋಪಾಲ ಕೃಷ್ಣ
ರಾಜಪ್ರಭುತ್ವದ ನೆರಳು ಮಾಸುವ ಮುನ್ನವೇ, ಕುಟುಂಬ ರಾಜಕಾರಣ ತಲೆ ಎತ್ತುತ್ತಿದೆ. ಪ್ರಜಾಪ್ರಭುತ್ವದ ಹರೆಯದಲ್ಲೇ ಆಶಯಗಳು ಸತ್ತು ಬೀಳುತ್ತಿವೆ. ಜನಸೇವೆಯೆಂಬ ಟೊಳ್ಳು ಕುದುರೆಗೆ ಹಣ, ಹೆಣ್ಣು, ಅಧಿಕಾರದ ಲೇಪನ ಹಚ್ಚಿ ಹಾದಿ ತಪ್ಪಿಸಲಾಗುತ್ತಿದೆ. ದೇಶ ವಿಭಜನೆಯ ನಂತರ, ಧರ್ಮದ ಮೂಲಕ ವಿಭಜನೆ, ಇದೀಗ ಜಾತಿ ಜಾತಿಗಳ ನಡುವೆ ವಿಭಜಿಸಿ, ಸಾಮರಸ್ಯದ ಬದಲಿಗೆ ಸಂಘರ್ಷದ ಬೋಧನೆ ನಡೆಯುತ್ತಿದೆ.ಕಾಲು ಮುರಿದ ಕಾರ್ಯಾಂಗ,ಸವೆದು ಹೋದ ಶಾಸಕಾಂಗಗಳ ಮಧ್ಯೆ ಆಮ್ ಆದ್ಮಿ ಕಂಗಾಲಾಗಿದ್ದಾನೆ.
ಇಲ್ಲಿ ದೂರುವುದಾದರೂ ಯಾರನ್ನು? ಸಂತತಿ ರಾಜಕಾರಣದ ಉನ್ನತೀಕರಣಕ್ಕೆ ನೀರು-ಗೊಬ್ಬರ ಹಾಕಿ ಬೆಳೆಸುತ್ತಿರುವಾಗ ವಂಶಾಡಳಿತದ ಫಲ ದೊರೆಯದೆ ಮತ್ತಿನ್ನೇನು ಸಿಕ್ಕೀತು…..? ನಾಗರೀಕ, ಜ್ಞಾನಸಂಪನ್ನ ಸಮಾಜದಲ್ಲಿಯೇ ಜನತಂತ್ರ ವ್ಯವಸ್ಥೆಗೆ ಧಕ್ಕೆಯಾದರೆ, ಪ್ರಜಾಪ್ರಭುತ್ವಕ್ಕೆ ಉಳಿಗಾಲವುಂಟೇ?ಉದಾತ್ತ ಭಾರತ ಸಂಸ್ಕೃತಿಯನ್ನು ಬಿಟ್ಟು, ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋದ ಯುವ ಜನತೆಯಿಂದ ಸಮೃದ್ಧ ರಾಷ್ಟ್ರ ನಿರ್ಮಾಣವನ್ನು ಬಯಸಲಾದೀತೆ? ತಪ್ಪು-ಒಪ್ಪುಗಳಿಗೆ ನಮ್ಮ ಮನಸ್ಸುಗಳು ಒಗ್ಗೂಡದಿರುವಾಗ, ಚಾರಿತ್ರ್ಯವಂತ ಸಮಾಜದ ನಿರೀಕ್ಷೆ ನಮ್ಮ ಭ್ರಮೆಯಲ್ಲವೇ?
ಮತ್ತಷ್ಟು ಓದು 






