ವಿಷಯದ ವಿವರಗಳಿಗೆ ದಾಟಿರಿ

Posts from the ‘ಲೇಖನಗಳು’ Category

10
ನವೆಂ

ಸ್ಟೂಡೆಂಟ್ ರಿಪೋರ್ಟರ್ … ಇದು ರಿಯಲ್ ಶೋ…

ಇರ್ಷಾದ್ ಎಂ.ವೇಣೂರು

ಅವತ್ತು ನಾನು ಪತ್ರಿಕೋದ್ಯಮ ತರಗತಿಯಲ್ಲಿದ್ದೆ. ನಮ್ಮ ತರಗತಿ ಪ್ರಾರಂಭವಾಗುವುದು ದಿನಂಪ್ರತೀ ಯಾರಾದರೊಬ್ಬ ವಿದ್ಯಾರ್ಥಿ ಐದು ನಿಮಿಷ ಮಾತನಾಡಿದ ನಂತರವೇ. ನನ್ನ ಸಹಪಾಠಿ ಮಾತನಾಡಲು ಮುಂದೆ ಹೋದಾಗ ಭಾಸ್ಕರ್ ಸರ್ ನನ್ನನ್ನು ಕರೆದು “ಒಂದ್ನಿಮಿಷ…” ಅಂದ್ರು. ಹೋದೆ. “ಸುವರ್ಣ ನ್ಯೂಸ್ನವ್ರು ಒಂದು ರಿಯಾಲಿಟೀ ಶೋ ಮಾಡ್ತಿದ್ದಾರಂತೆ, ಸ್ಟೂಡೆಂಟ್ ರಿಪೋರ್ಟರ್ ಅಂತ. ನಮ್ಮ ಕಾಲೇಜಿನಿಂದ ಎರಡು ಮಂದಿಯನ್ನು ಕಳುಹಿಸುತ್ತಿದ್ದೇನೆ. ಒಂದು ನಿಮ್ಮ ಹೆಸರನ್ನೇ ನಾನು ಸೂಚಿಸಿದ್ದೇನೆ” ಎಂದು ಬ್ರೇಕಿಂಗ್ ನ್ಯೂಸ್ ಹೇಳಿದಾಗ ಖುಷಿಯಾಯಿತು. ಅಷ್ಟು ಹೊತ್ತಿಗೆ ನನ್ನ ಸಹಪಾಠಿಯ ಮಾತು ಮುಗಿದಿತ್ತು. ಸರ್ ವಿಷಯ ತರಗತಿಯ ಮುಂದಿಟ್ಟರು. ವರದಿಗಾರಿಕೆ, ಛಾಯಾಗ್ರಹಣ, ಪತ್ರಿಕೋದ್ಯಮದಲ್ಲಿ ನಿಮ್ಮ ಆಸಕ್ತಿ ಎಲ್ಲಾ ಗಮನಿಸಿ ಈ ಕಾರ್ಯಕ್ರಮಕ್ಕೆ ಕಳುಹಿಸುತ್ತಿದ್ದೇನೆ. ಒಬ್ಬರನ್ನು ಈಗಾಗಲೇ ಆರಿಸಿದ್ದೇನೆ. ಇನ್ನೊಬ್ಬರು ಬೇಕು. ಆಸಕ್ತಿ ಇದ್ದವರು ಮತ್ತೆ ಭೇಟಿಯಾಗಿ ಎಂದರು. ನನ್ನತ್ತ ತಿರುಗಿ ನಿಮ್ಮ ಬಯೋಡೆಟಾ ಆದಷ್ಟು ಬೇಗ ಕೊಡಿ. ನಾಳೇನೇ ಬೇಕು. ಅದನ್ನು ಸುವರ್ಣ ನ್ಯೂಸ್ ಗೆ ಕಳುಹಿಸಬೇಕು ಎಂದರು.

ಆ ದಿನ ನನಗಂತೂ ಖುಷಿಯೋ ಖುಷಿ. ಬಯಸದೇ ಒಂದು ಅವಕಾಶ ಯಾರನ್ನಾದರೂ ಅರಸಿ ಬಂದರೆ ಏನಾಗುತ್ತೋ ಆ ರೀತಿ ನಾನು ಸಂತಸಪಟ್ಟಿದ್ದೆ. ಮರುದಿನ ನನ್ನ ಪ್ರಕಟವಾದ ಲೇಖನಗಳ ಸಂಖ್ಯೆ, ಇಂಟರ್ನ್ ಶಿಪ್ ಮಾಡಿದ್ದು, ಪ್ರಾಯೋಗಿಕ ಪತ್ರಿಕೆ ಮಾಡಿದ್ದ ಅನುಭವ ಎಲ್ಲಾ ಸೇರಿಸಿ ‘ಡೇಟಾ’ ಹಾರ್ಡ್ ಕಾಪಿ ಸರ್ ಕೈಗಿತ್ತೆ. ನನ್ನ ಸಹಪಾಠಿ ಒಬ್ಬರು ಕಾರ್ಯಕ್ರಮದಲ್ಲಿ ಭಾಗವಹಿಸಲು ಉತ್ಸುಕರಾಗಿದ್ದರು. ಕೊನೇ ಕ್ಷಣದಲ್ಲಿ ಅವರು ಬರವುದಿಲ್ಲ ಎಂದಿದ್ದರಿಂದ ಸ್ನಾತಕೋತ್ತರ ವಿಭಾಗದ ಸ್ನೇಹಿತರೋರ್ವರು ಭಾಗವಹಿಸುವ ಉತ್ಸುಕತೆ ತೋರಿಸಿದ್ದರು. ಮತ್ತಷ್ಟು ಓದು »
9
ನವೆಂ

ಮಿಂಚುಳ್ಳಿ

ಹರ್ಷವರ್ಧನ್ ಶೀಲವಂತ್

ನಿಮ್ಮ ಊರಿನ ಕೆರೆ, ಕಟ್ಟ, ಹೊಂಡಗಳು, ತಲಪೂರಿಕೆ ಹಾಗೂ ಮೀನುಗಳನ್ನು ಸಾಕಿಕೊಂಡಿರುವ ಮಾನವ ನಿರ್ಮಿತ ಕೃಷಿ ಹೊಂಡಗಳ ಬದುವುಗಳಲ್ಲಿ, ನೀರಿನಿಂದ ತುಸು ಮೇಲೆ ನೆಲದಿಂದ ಅತಿ ಕಡಿಮೆ ಎತ್ತರದಲ್ಲಿ ಮಣ್ಣನ್ನು ಕೊರೆದು ಪಕ್ಷಿಯೊಂದು ಮನೆ ಕಟ್ಟಿಕೊಂಡಿದ್ದು ಗಮನಿಸಿದ್ದೀರಾ?

ನಮ್ಮ ಊರು ಧಾರವಾಡದ ಹೊರವಲಯದಲ್ಲಿ ಕೆಲ ದಶಕಗಳ ಹಿಂದೆ ಗಣಿಗಾರಿಕೆ ನಡೆಸಲಾಗುತ್ತಿತ್ತು. ಹಾಗೆ ಗಣಿಗಾರಿಕೆ ನಡೆಸಿ, ನಿರ್ಮಿತವಾದ ಹೊಂಡಗಳಲ್ಲಿ ಇತ್ತೀಚಿನ ಮಳೆಯಿಂದಾಗಿ ಚಿಕ್ಕ ಕೆರೆಗಳು ನಿರ್ಮಾಣಗೊಂಡಿವೆ. ಇಲ್ಲಿ ದನಗಾಹಿಗಳು ನಿತ್ಯ ತಮ್ಮ ಜಾನುವಾರುಗಳ ಮೈ ತೊಳೆಯಲು ಆಗಮಿಸುವುದರಿಂದ ಈ ಪಕ್ಷಿ ಗಣಿಯ ಇಕ್ಕೆಲಗಳ ಗೋಡೆಯಂತಹ ಮಣ್ಣಿನಲ್ಲಿ ಅತ್ಯಂತ ಎತ್ತರದಲ್ಲಿ ತನ್ನ ಗೂಡು ಮಾಡಿಕೊಂಡಿದ್ದನ್ನು ನಾನು ಗಮನಿಸಿದ್ದೇನೆ. ಕೆಲವೊಮ್ಮೆ ವಿದ್ಯುತ್ ತಂತಿಯ ಮೇಲೂ ಬೇಟೆಗಾಗಿ ಕಾಯ್ದು ಕುಳಿತು ಈ ಹಕ್ಕಿ ಗಮನ ಸೆಳೆಯುತ್ತದೆ.

ಅತ್ಯಂತ ಚುರುಕಾದ, ಮಿರಿ ಮಿರಿ ಮಿಂಚುವ ನೀಲಿ ಮೈಬಣ್ಣ ಹೊಂದಿದ ಗುಬ್ಬಚ್ಚಿ ಗಾತ್ರದ ಈ ಹಕ್ಕಿಗೆ ‘ಕಿರು ಮಿಂಚುಳ್ಳಿ’- ‘Small Blue Kingfisher’ ಎಂದು ಕರೆಯುತ್ತಾರೆ. ಮೊನ್ನೆ ಛಾಯಾಪತ್ರಕರ್ತ-ಮಿತ್ರ ಜೆ.ಜಿ.ರಾಜ್ ಅವರೊಂದಿಗೆ ಧಾರವಾಡದಿಂದ ಮುಕುಟಖಾನ್ ಹುಬ್ಬಳ್ಳಿ (ಎಂ.ಕೆ. ಹುಬ್ಬಳ್ಳಿ ಸಕ್ಕರೆ ನಾಡು ಕೂಡ ಹೌದು.) ವರೆಗೆ ನೈಸರ್ಗಿಕವಾಗಿ ನಿರ್ಮಾಣಗೊಂಡಿರುವ ಕೆರೆಗಳ ಸ್ಥಿತಿ-ಗತಿ, ಬದುಕು-ಬವಣೆ ಗುರುತಿಸಲು ತೆರಳಿದ್ದೆವು. ಆಗ ಈ ಅಪರೂಪದ ಮಿತ್ರ ಮೀನು ಬೇಟೆಗಾರನಾಗಿ ನಮ್ಮ ಕಣ್ಣಿಗೆ ಕಂಡ. ಐತಿಹಾಸಿಕ ಮಹತ್ವದ ಕಿತ್ತೂರು ಸಮೀಪದ ‘ಕೆಂಪಗೇರಿ ಕಟ್ಟೆ’ ಕೆರೆಯಲ್ಲಿ ಈ ‘ಕಿರು ಮಿಂಚುಳ್ಳಿ’ ಕಿತ್ತೂರಿನ ಮೀನುಗಾರ ಶಿವಪ್ಪ ಅವರೊಂದಿಗೆ ಮೀನು ಬೇಟೆಯಲ್ಲಿ ತೊಡಗಿದ್ದ.

ಕಿರು ಮಿಂಚುಳ್ಳಿ 1

ಬಿಳಿ ಮಿಂಚುಳ್ಳಿ (ಪೈಡ್ ಕಿಂಗಫಿಷರ್), ಗದ್ದೆ ಮಿಂಚುಳ್ಳಿ (ವೈಟ್ ಬ್ರೆಸ್ಟೆಡ್ ಕಿಂಗಫಿಷರ್), ಹೆಮ್ಮಿಂಚುಳ್ಳಿ (ಸ್ಟ್ರೋಕ್ ಬಿಲ್ಡ್ ಕಿಂಗಫಿಷರ್) ಇವುಗಳಲ್ಲಿ ನಾವು ಕೆಂಪಗೇರಿ ಕಟ್ಟೆಯಲ್ಲಿ ಕಂಡ ಕಿರು ಮಿಂಚುಳ್ಳಿ (ಸ್ಮಾಲ್ ಬ್ಲೂ ಕಿಂಗಫಿಷರ್) ಅತ್ಯಂತ ಉಜ್ವಲ ವರ್ಣದ ಆಕರ್ಷಕ ಹಕ್ಕಿ. ಕುತ್ತಿಗೆ ಮತ್ತು ಹೊಟ್ಟೆಗೆ ಹೊಂಬಣ್ಣದ ಚೆಲುವು. ಬಲವಾದ ನೀಲಿ ಮಿಶ್ರಿತ ಕಪ್ಪು ಬಣ್ಣದ ಉದ್ದ ಕೊಕ್ಕು, ಚೋಟುದ್ದ ಕಾಲುಗಳು ಮಿಂಚುಳ್ಳಿಯ ದುಂಡನೆಯ ಆಕೃತಿಗೆ ಮೆರಗು ತೊಡಿಸಿವೆ.

ಭಾರತ, ಪಾಕಿಸ್ತಾನ, ಶ್ರೀಲಂಕಾ ಹಾಗೂ ಭರ್ಮಾಗಳಲ್ಲಿ ಕಾಣಸಿಗುವ ಕಿರು ಮಿಂಚುಳ್ಳಿಯಲ್ಲಿ ಗಂಡು ಮತ್ತು ಹೆಣ್ಣು ಪಕ್ಷಿಗಳಲ್ಲಿ ಹೇಳಿಕೊಳ್ಳುವಂತಹ ವ್ಯತ್ಯಾಸಗಳಿಲ್ಲ. ಮಾರ್ಚ್ ನಿಂದ ಜೂನ್ ತಿಂಗಳುಗಳಲ್ಲಿ ಹೊಳೆ-ಹಳ್ಳಗಳ ಕಡಿದಾದ ದಂಡೆಗಳಲ್ಲಿ ನೆಲಕ್ಕೆ ಸಮಾನಾಂತರವಾಗಿ ಪೊಟರೆ ಕೊರೆದು ಗೂಡು ಕಟ್ಟುತ್ತವೆ. ಸುಮಾರು ೫೦ ಸೆಂ.ಮೀ. ಉದ್ದದ ಈ ಮಣ್ಣಿನ ಪೊಟರೆಯಲ್ಲಿ ೫ ರಿಂದ ೭ ಮೊಟ್ಟೆಗಳನ್ನು ಹೆಣ್ಣು ಮಿಂಚುಳ್ಳಿ ಹಾಕುತ್ತದೆ. ಮೊಟ್ಟೆಗಳು ಶುಭ್ರ ಬಣ್ಣದ, ಮಿರಿ ಮಿರಿ ಮಿಂಚುವ ಗೋಲಿಯಂತೆ ದುಂಡಗಿರುತ್ತವೆ. ಮೊಟ್ಟೆ ಇರುವ ಗೂಡಿನ ಜಾಗ ಮಾತ್ರ ಅಗಲವಾಗಿದ್ದು, ತಾಯಿ-ತಂದೆ ಹಕ್ಕಿ ಜೋಡಿಯಾಗಿ ಮೊಟ್ಟೆಗಳ ಮೇಲೆ ಕುಳಿತು ಕಾವು ಕೊಡಲು ಅನುವಾಗುವಂತೆ ಇರುತ್ತದೆ. ಸಂತಾನೋತ್ಪತ್ತಿ ಕಾಲದಲ್ಲಿ ಮಾತ್ರ ಜೋಡಿಯಾಗಿ ಕಾಣುವ ಕಿರು ಮಿಂಚುಳ್ಳಿ, ಬಹುತೇಕ ಒಂಟಿಯಾಗಿಯೇ ಇರಲು, ಬೇಟೆಯಾಡಲು ಬಯಸುತ್ತದೆ. ಮತ್ತಷ್ಟು ಓದು »

8
ನವೆಂ

ಭಾರತಕ್ಕೆ ಒಬಾಮ ಹಾಕಿದ ಟೋಪಿ!

ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಭಾರತಕ್ಕೆ ಬಂದಿದ್ದಾರೆ. ತನ್ನ ದೇಶದಲ್ಲಿ ಐವತ್ತು ಸಾವಿರ ಉದ್ಯೋಗಗಳನ್ನು ಸಷ್ಟಿಸಲು 44 ಸಾವಿರ ಕೋಟಿ ರೂಪಾಯಿ ಒಪ್ಪಂದವನ್ನು ಮಾಡಿಕೊಂಡಿದ್ದಾರೆ. ಅಮೆರಿಕದ ರಫ್ತು ದ್ವಿಗುಣ ಮಾಡುವುದೇ ತನ್ನ ಗುರಿ ಎಂದು ಇಂಡಿಯಾಕ್ಕೆ ಭರ್ಜರಿ ಟೋಪಿ ಹಾಕಿದ್ದಾರೆ. ಭಾರತದ ಶಸ್ತ್ರಾಸ್ತ್ರ ಮಾರುಕಟ್ಟೆಯ ಮೇಲೂ ಕಣ್ಣು ಹಾಕಿದ್ದಾರೆ. ನಮ್ಮ ದೇಶವನ್ನು ಇಕ್ಕಟ್ಟಿಗೆ ಸಿಲುಕಿಸಲೆಂದೇ ಪರಮಾಣು ಪೂರೈಕೆದಾರರ ಕೂಟದಲ್ಲಿ (ಎನ್‌ಎಸ್‌ಜಿ) ಭಾರತಕ್ಕೆ ಪೂರ್ಣ ಪ್ರಮಾಣದ ಸದಸ್ಯತ್ವ ದೊರಕಿಸಿಕೊಡುವ ಆಶ್ವಾಸನೆಯನ್ನು ನೀಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಈ ದೇಶದ ಸಂಪನ್ಮೂಲಗಳನ್ನು ಲೂಟಿ ಮಾಡಲು ಏನೇನು ಮಾಡಬೇಕೋ ಅದನ್ನೆಲ್ಲ ಮಾಡಿದ್ದಾರೆ.

ಬರಾಕ್ ಒಬಾಮ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡಾಗ ಅಮೆರಿಕಕ್ಕೊಬ್ಬ ಕಪ್ಪು ವರ್ಣಿಯ ವ್ಯಕ್ತಿ ನಾಯಕತ್ವ ವಹಿಸಿದನೆಂದು ಸಂಭ್ರಮ ಪಟ್ಟವರಿದ್ದರು. ನಮ್ಮ ದೇಶದಲ್ಲೂ ಇಂಥ ವಿಜಯೋತ್ಸಾಹ ಕಂಡು ಬಂದಿತ್ತು. ಆದರೆ, ಎಡ ಪಂಥಿಯರಲ್ಲಿ ಯಾವುದೇ ಭ್ರಮೆ ಇರಲಿಲ್ಲ. ಯಾವುದೇ ಬಣ್ಣದ ವ್ಯಕ್ತಿ ಅಧಿಕಾರಕ್ಕೆ ಬಂದನೆಂದ ಮಾತ್ರಕ್ಕೆ ಒಂದು ಸಾಮ್ರಾಜ್ಯಶಾಹಿ ದೇಶದ ನೀತಿ ಧೋರಣೆಗಳು ಒಮ್ಮಿಂದೊಮ್ಮೆಲೆ ಬದಲಾಗಿ ಬಿಡುವುದಿಲ್ಲ. ಬರಾಕ್ ಒಬಾಮ ಒಳ್ಳೆಯವರೇ ಇರಬಹುದು. ವರ್ಣಭೇದದ ಬೆಂಕಿಯಲ್ಲಿ ನಲುಗಿದವರಿರಬಹುದು. ಮತ್ತಷ್ಟು ಓದು »

31
ಆಕ್ಟೋ

ರಾಜ್ಯ ರಾಜಕೀಯ ಗದ್ದಲಕ್ಕೆ ಗುದ್ದು ನೀಡಿದ ಐಟಿ ದಾಳಿ

ಶಂಶೀರ್ ಬುಡೋಳಿ
 

ರಾಜಕಾರಣ ಕುರಿತಂತೆ ಹರಿಣಿಯವರ ವ್ಯಂಗ್ಯಚಿತ್ರ

ಒಂದೆಡೆ ರಾಜ್ಯ ರಾಜಕೀಯದಲ್ಲಿ ಅಭದ್ರತೆ.  ಇನ್ನೊಂದೆಡೆ  ಸರಕಾರದ ಉಳಿವಿಗಾಗಿ ಅಪರೇಷನ್ ಕಮಲದ ಮೂಲಕ ಇತರ ಪಕ್ಷಗಳ ಶಾಸಕರನ್ನು ದತ್ತು ತೆಗೆದುಕೊಳ್ಳುವ ಹಾವಳಿ. ಇದಕ್ಕಾಗಿ ಕೋಟಿ ಕೋಟಿ ರೂಪಾಯಿಗಳ ವ್ಯಯ. ಇದನ್ನೆಲ್ಲಾ ನೋಡಿ ರೋಸಿ ಹೋಗಿರುವ ಜನತೆಗೆ ರಾಜಕೀಯವೆಂದರೆ ಇದೇನಾ ಎಂಬ ಭಾವನೆ ಹುಟ್ಟಿಕೊಂಡಿದೆ.  ಸರಕಾರದ ಉಳಿವಿಗಾಗಿ  ಮುಖ್ಯಮಂತ್ರಿಯಾದಿಗಳು ಹಣದ ಮೂಲಕ ಶಾಸಕರನ್ನು ಖರೀದಿಸುವ ಬೆನ್ನಲ್ಲೇ  ಆದಾಯ ತೆರಿಗೆ ಇಲಾಖಾಧಿಕಾರಿಗಳು (೩೦೦ ಕ್ಕೂ ಹೆಚ್ಚಿನ ಅಧಿಕಾರಿಗಳಿದ್ದರು)  ರಾಜ್ಯದ ಆರುವತ್ತು ಸ್ಥಳಗಳಲ್ಲಿ ಶಾಸಕರ ನಿವಾಸ, ಕಚೇರಿಗೆ ದಾಳಿ ಮಾಡಿದ್ದಾರೆ.  ಇದನ್ನು ಬಿಜೆಪಿ ಕಾಂಗ್ರೆಸ್ಸಿಗರ ಪಿತೂರಿ ಎಂದು ದೂರುತ್ತಿದ್ದಾರೆ. ಇಂತಹ ದಾಳಿ ಆದ ಸಂದರ್ಭದಲ್ಲಿ  ಇಂತಹ ಆರೋಪಗಳನ್ನು  ರಾಜಕೀಯ ಪಕ್ಷಗಳು ಮಾಡುವುದು ಸಾಮಾನ್ಯವಾಗಿಬಿಟ್ಟಿದೆ.

ಇದೇ  ರೀತಿ ಈ ಹಿಂದೆ ತಾಜ್ ಕಾರಿಡಾರ್ ಪ್ರಕರಣದಲ್ಲಿ ಮಾಯಾವತಿ ವಿರುದ್ಧ  ಅಕ್ರಮ ಸಂಪತ್ತು    ಕ್ರೋಡಿಕರಣದ ಆರೋಪಕ್ಕೆ ಸಂಬಂಧಿಸಿ ಮುಲಾಯಂ ಸಿಂಗ್ ಯಾದವ್ ವಿರುದ್ಧ ರಾಜಕೀಯ ಸೇಡು ತೀರಿಸಿಕೊಳ್ಳಲು  ಕೇಂದ್ರ ಸರಕಾರ ಸಿಬಿ‌ಐಯನ್ನು ದುರುಪಯೋಗಪಡಿಸಿಕೊಂಡಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಐಟಿ ದಾಳಿ ನಡೆದ ಬೆನ್ನಲ್ಲೇ ರಾಜ್ಯ ಸಚಿವ ಸಂಪುಟದ ಶಾಸಕರು ಇದೊಂದು ಪಿತೂರಿ, ಷಡ್ಯಂತ್ರ ಎಂದು ಆರೋಪಿಸುವುದು ಎಷ್ಟು ಸರಿ?  ಪ್ರಾಮಾಣಿಕತೆಯಿಂದ ಸಂಪತ್ತು ಗಳಿಸಿದ ಶಾಸಕರು ಈ ರೀತಿಯ ಆರೋಪ  ಮಾಡಲು ಸಾಧ್ಯವೇ? ನಮ್ಮದು ಪ್ರಾಮಾಣಿಕ ಮಾರ್ಗದಲ್ಲಿ ಸಂಗ್ರಹಿಸಿದ ಹಣ, ಸಂಪತ್ತು ಎಂದು ಹೇಳಿಕೊಳ್ಳುವ ಶಾಸಕರು, ಸಚಿವರು  ತಮ್ಮ ತೆರಿಗೆಯ ಪೂರ್ಣ ಪ್ರಮಾಣದ ದಾಖಲೆಗಳನ್ನು ತೆರಿಗೆ ಇಲಾಖಾಧಿಕಾರಿಗಳು ಸಲ್ಲಿಸಲು ಹಿಂದೆಡೆ ಹಾಕುವುದೇಕೆ? ಇದು ನಮ್ಮ ಮುಂದಿರುವ ಪ್ರಶ್ನೆಯಾಗಿದೆ. ಕೇವಲ ಅಧಿಕಾರ ಲಾಲಸೆ, ರಾಜಕೀಯದಲ್ಲಿ  ಸರ್ವಾಧಿಕಾರಿ ಮೆರೆಯಲು ಕೋಟಿ ಕೋಟಿ ಹಣ ನೀಡಿ, ರಾಜಕೀಯ ಸಿದ್ಧಾಂತಗಳನ್ನು ಅಪಮೌಲ್ಯ ಮಾಡಿ ಇತರ ಪಕ್ಷದ ಶಾಸಕರನ್ನು ಖರೀದಿಸುವುದು ನೈತಿಕತೆಯೇ? ಅಥವಾ ಸಂವಿಧಾನದ ಪರಿಮಿತಿಯಲ್ಲಿ  ಬರುವ  ಚಟುವಟಿಕೆಯೇ? ಅಲ್ಲ. ಇದೊಂದು ಮಿತಿಮೀರಿದ ಚಟುವಟಿಕೆಯಾಗಿದೆ. ಮತ್ತಷ್ಟು ಓದು »

31
ಆಕ್ಟೋ

ಎಂ.ಜಿ.ಎಂ. ಯಕ್ಷಗಾನ ಕೇಂದ್ರದವರು ನಡೆಸಿಕೊಟ್ಟ ಹಿಡಿಂಬಾ ವಿವಾಹ

ಕರುಣಾಕರ ಬಳ್ಕೂರು

ಯಕ್ಷಗಾನದ ಆರಂಭದಲ್ಲಿ ತೆರೆ ಹಿಡಿದಿರುವುದುಕೌಟುಂಬಿಕ ಕಲಹ, ಹೆಣ್ಣು, ಮಣ್ಣು, ಹೊನ್ನುಗಾಗಿ ಹೋರಾಟ, ಸರಕಾರದಲ್ಲಿ ಕುರ್ಚಿಗಾಗಿ ಗುದ್ದಾಟ ಎಲ್ಲವು ಒಳಜಗಳ ಮೂಲಕ ತಾನು ಬದುಕಲು ಇನ್ನೊಂದನ್ನು ಆಹುತಿ ಮಾಡುವ ಪ್ರವೃತ್ತಿ ಇಂದು ಜೀವಂತವಾಗಿರುವ ಮೌಲ್ಯಗಳು.
ಒಡಹುಟ್ಟುತಾ ಅಣ್ಣತಮುಂದಿರು, ಬೆಳೆ ಬೆಳೆಯುತ್ತಾ ದಾಯಾದಿಗಳು ಪೂರ್ವಜರು ಮಾಡಿರುವ ಗಾದೆ ನೂರಕ್ಕೆ ನೂರು ಸತ್ಯ ಎನ್ನುವುದುನು ಸಾಕಾರಮಾಡಿದೆ ಕುರು-ಪಾಂಡವರ ನಡುವಿನ ಕುಟುಂಬ ದ್ವೇಷವೇ ಸಾಕ್ಷಿ. ಕೌರವ ಮತ್ತು ಪಾಂಡವರು ಸಮಸ್ತರಾಗಿದ್ದರು ಹಸ್ತಿನಾವತಿಯ ಆಳ್ವಿಕೆಯನ್ನು ನಾವು ಮಾಡಬೇಕು ಎನ್ನುವ ಕೌರವರ ಹೆಬ್ಬಯಕೆ. ಲೋಕ ಅಪವಾದ ಬರಬಾರದು ಎನ್ನುವುದಕ್ಕಾಗಿ ಪಾಂಡವರಿಗೆ ವಾರಾಣವತಿ೦iiನ್ನು ವಹಿಸಿಕೊಡುವುದು. ಮನೆತನದ ಪಟ್ಟಕ್ಕಾಗಿ ಕೌರವರು ಮಾಡುವ ಕುತಂತ್ರದ ರಾಜಕೀಯ. ಮನೆತನದ ಅನ್ನವನ್ನು ಕೌರವರೆ ಉಣ್ಣಬೇಕು ಎನ್ನುವ ಭೀಷ್ಮರ ಅಭಿಮತ.
ರಾಜಕೀಯದ ರಂಗದಲ್ಲಿ ಮನಸ್ಸಿಗೆ ಬಂದಂತೆ ಪಾಂಡವರನ್ನು ಕುಣಿಸುವುದು, ಅರಗಿನ ಮನೆಯನ್ನು ನಿರ್ಮಿಸಿ ಕೊಡುವುದು. ಮತ್ತೆ ಪುರೊಚನನ್ನು ಕಳುಹಿಸಿ ಬೆಂಕೆ ಹಚ್ಚುವುದು, ಭೀಮನಿಗೆ ವಿಧುರನ ಮೂಲಕ ಕೌರವರು ಹೆಣದಿರುವ ರಾಜಕೀ ತಂತ್ರವನ್ನು ಬೇದಿಸುವುದು. ತಾಯಿ, ಅಣ್ಣ ತಮ್ಮಂದಿರನ್ನು ರಕ್ಷಿಸಲು ಸುರಂಗ ಮಾರ್ಗವನ್ನು ನಿರ್ಮಿಸಿವುದು, ಪಾಂಡವರ ಬದಲಿಗೆ ಅಮಾಯಕ ಬ್ರಾಹ್ಮಣ ಕುಟುಂಬ ಅರಗಿಮನೆಯ ಬೆಂಕಿಗೆ ಆಹುತ್ತಿಯಾಗುವುದು. ಸುರಂಗ ಮಾರ್ಗದಲ್ಲಿ ಅರಗಿನ ಮನೆಯಿಂದ ತಪ್ಪಿಸಿಕೊಂಡು ಕಾಡು ಮಾರ್ಗದಲ್ಲಿ ನಡೆದು ಬಸವಳಿದು ಅಲೆದಾಟದಲ್ಲಿ ಕಲ್ಲು-ಮುಳ್ಳಗಳ ಮೇಲೆ ನಡೆದು ಕುಸಿದು ಬೀಳುವುದು. ಕಗ್ಗತ್ತಲ ರಾತ್ರಿಯಲ್ಲಿ ಕಾಡು ಪ್ರಾಣಿ, ರಕ್ಕಸರು ಇರುವ ಸ್ಥಳ, ಆದ್ರೆ ಭೀಮನಿಗೆ ತನ್ನವರನ್ನು ಹೇಗಾದ್ರು ಮಾಡಿ ರಕ್ಷಿಸುವ ಹೊಣೆ ಆ ಕಾರಣಕ್ಕೆ ಮರಗಿಡಗಳ ಸೊಪ್ಪು, ಕಲ್ಲುಬಂಡೆಗಳಿಂದ ಕೋಟೆಯನ್ನು ನಿರ್ಮಿಸಿ ಕಾವಲು ಕಾಯುತ್ತಾನೆ.

ಮತ್ತಷ್ಟು ಓದು »

30
ಆಕ್ಟೋ

ಆಳ್ವಾಸ್ ನುಡಿಸಿರಿಯ ಕೆಲವು ಚಿತ್ರಗಳು

ಚಿತ್ರಗಳು: ಕರುಣಾಕರ ಬಳ್ಕೂರು

ಚೆಂಡೆವಾದನ

ಪ್ರಾರ್ಥನೆ

ಗೊಂಬೆ ಕುಣಿತ

ಮತ್ತಷ್ಟು ಓದು »

30
ಆಕ್ಟೋ

‘ರಾವಣನ ಹೊಸ ಮುಖ ಅನಾವರಣಗೊಳಿಸಿದ ವಿಶಿಷ್ಟ ರಂಗ ಪ್ರಯೋಗ :- ಏಕಾದಶಾನನ ’

ಕರುಣಾಕರ ಬಳ್ಕೂರು

ವೇದವ್ಯಾಸ ರಾಮಾಯಣದ ಸಣ್ಣ ಎಳೆಯೊಂದನ್ನು ತೆಗೆದು ನಾಟಕರಂಗಕ್ಕೆ ಅಳವಡಿಸಿದ ರೀತಿ ಸೃಜನಶೀಲವಾದದ್ದು. ‘ಜಯ ರಾಮ ಜಯ ಜಯ ರಾಮ’ ಎನ್ನುವ ರಾಮ ನಾಮ ಸ್ಮರಣೆಯನ್ನು ಹೊಗಳುತ್ತ ಭಕ್ತರ ಗುಂಪಿನ ಆಗಮನ, ಇಂದು ರಾಮನ ಪಟ್ಟಾಭಿಷೇಕವಂತೆ.., ಭರ್ಜರಿ ಊಟ, ಮನೋರಂಜನೆ ಹಾ.. ಹಾ.. ಎಲ್ಲರ ಮೊಗದಲ್ಲಿಯೂ ಸಂತೋಷದ ಹೂಮಳೆ. ಅಯೋಧ್ಯೆಯ ನಗರಕ್ಕೆ ರಾಜ ಮಹಾರಾಜರು, ಪುರಜನರು, ಬಂಧುಗಳು, ರಾಮನ ಭಕ್ತರು, ಹಿತೈಷಿಗಳು ಹೀಗೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ದ್ವಾರಪಾಲಕನಂತೂ ಬಂದವರನ್ನು ಸುಧಾರಿಕೆ ಮಾಡುವ ದೊಡ್ಡ ಕೆಲಸವನ್ನು ಲವವಿಕೆಯಿಂದ ನಿಭಾಯಿಸುವುದು ನಾಟಕದ ಆರಂಭಕ್ಕೆ ಮುನ್ನುಡಿಯಾಗಿದೆ.

ಬಂದಿರುವವರ ಕುದುರೆಗಳನ್ನು ಇಲ್ಲಿ ಕಟ್ಟಿ, ಅಲ್ಲಿ ಕಟ್ಟಿ, ದೂರದ ರಾಜರುಗಳಿಗೆ ಉಳಿಯಲು ಅತಿಥಿ ಗೃಹ ಅಲ್ಲಿದೆ, ರಾಮನ ಪಟ್ಟಾಭೀಷೇಕಕ್ಕೆ ಚಿನ್ನ, ಬೆಳ್ಳಿ, ಹಣವನ್ನು ಕಾಣಿಕೆಯಾಗಿ ತಂದವರು ಭಂಡಾರದಲ್ಲಿ ಕೊಟ್ಟು ರಶೀದಿಯನ್ನು ತಪ್ಪದೇ ಪಡೆಯಿರಿ, ಮತ್ತೆ ಊಟ ಮಾಡುವಲ್ಲಿ ನೂಕು ನೂಗ್ಗಲು ಮಾಡದಿರಿ ಎಂದು ಆಗಮಿಸಿರುವ ಸರ್ವರಲ್ಲಿ ಬಿನ್ನೈಸಿಕೊಳ್ಳುತ್ತ ದ್ವಾರಪಾಲಕನು ರಾಮನ ಪಟ್ಟಾಭಿಷೇಕಕ್ಕೆ ತನ್ನ ಕರ್ತವ್ಯವನ್ನು ನಿರ್ವಹಿಸುತ್ತಾನೆ.

ಎರಡನೆ ದೃಶ್ಯದಲ್ಲಿ ಕೌಸಲ್ಯೆ ಮತ್ತು ರಾಮನು ಕಷ್ಟ-ಸುಖಗಳ ಬಗ್ಗೆ ಕುಳಿತು ಹರಟೆ ಹೊಡೆಯುತ್ತಾರೆ. ಆಗ ರಾಮ, ರಾಮಣನ ಪರವಹಿಸಿ ಮಾತನಾಡಿದಾಗ ಕೌಸಲ್ಯೆ ಕೆಂಡಮಂಡಲವಾಗಿ ರಾವಣನನ್ನು ದೂಷಿಸುತ್ತಾ ಆಕ್ರೋಶವನ್ನು ವ್ಯಕ್ತಪಡಿಸುತ್ತಾಳೆ. ಆದರೆ ರಾಮ, ರಾವಣನ ಅಂತಃಕರಣವನ್ನು ಮನಸಾರೆ ಮೆಚ್ಚಿ ತನ್ನ ಅನುಭವದ ನುಡಿಗಳನ್ನು ಕೌಸಲ್ಯೆಯಲ್ಲಿ ಬಿಚ್ಚಿಡುತ್ತಾನೆ. ನಾಟಕದ ನಡುವೆಯೇ ಹಿಂದೆ ನಡೆದ ಎಲ್ಲಾ ಘಟನೆಗಳು ರಂಗಮಂಟಪದ ಮೇಲೆ ಒಂದರ ಮೇಲೆ ಒಂದರಂತೆ ಚಿತ್ರ ಪಟಲಗಳ ಮೂಲಕ ಬಂದು ಹೋಗುವಾಗ ರಾಮಾಯಣದ ಕಥೆಯು ಅನಾವರಣಗೊಳ್ಳುತ್ತದೆ. ಇದು ನಿರ್ದೇಶಕರ ಕೈಚಳಕದಿಂದ ವಿನೂತನವಾಗಿ ಮೂಡಿಬಂದಿದೆ. ಮತ್ತಷ್ಟು ಓದು »

29
ಆಕ್ಟೋ

ಬದಲಾವಣೆಗೆ ತೆರೆದುಕೊಂಡ ಮನಸ್ಸು:ಆಳ್ವಾಸ್ ನುಡಿಸಿರಿಯ ಉದ್ಘಾಟನಾ ಭಾಷಣದಲ್ಲಿ ಕವಿ ವೆಂಕಟೇಶಮೂರ್ತಿ

ಕನ್ನಡ ಮನಸ್ಸು-ಜೀವನ ಮೌಲ್ಯಗಳು

ಉದ್ಘಾಟನಾ ಭಾಷಣ

೧.ಸಾವಿರಾರು ವರ್ಷಗಳಿಂದ ತನ್ನ ಪಾತ್ರವನ್ನು ತಿದ್ದಿಕೊಳ್ಳುತ್ತಾ ಬಂದ ಕನ್ನಡ ಮನಸ್ಸಿನ ಅಭಿವ್ಯಕ್ತಿಯನ್ನು ಅದು ಹಿಂದೆ ಹಿಂದೆ ಉಳಿಸುತ್ತಾ ಹೋದ ನೆನಪುಗಳಲ್ಲಿ ಹುಡುಕಬೇಕಾಗುತ್ತೆ.

೨.ಕಲೆ, ಸಾಹಿತ್ಯ, ವಾಸ್ತು ಮುಂತಾಗಿ ಎಲ್ಲೆಲ್ಲಿ ಕನ್ನಡಿಗನ ಮನಸ್ಸು ನಿರ್ಭಿಡೆಯಿಂದ ಮುಕ್ತ ಅಭಿವ್ಯಕ್ತಿ ಸಾಧಿಸಿದೆಯೋ ಅಲ್ಲಲ್ಲೆಲ್ಲಾ ನಾವು ಕನ್ನಡ ಮನಸ್ಸಿನ ಪಾತ್ರ ನಿರ್ಮಿತಿಯನ್ನು ಗ್ರಹಿಸುತ್ತಾ ಹೋಗಬೇಕಾಗುತ್ತದೆ.

೩. ಮಹತ್ವಾಕಾಂಕ್ಷೆ
ವಿನಯ
ಕೂಡುಬಾಳು
ಬದಲಾವಣೆಗೆ ತೆರೆದುಕೊಂಡ ಮನಸ್ಸು-ಇವು ಕನ್ನಡ ಮನಸ್ಸಿನ ಮುಖ್ಯ ಲಕ್ಷಣಗಳಾಗಿವೆ.

ಅ.ಮಹತ್ವಾಕಾಂಕ್ಷೆ: ಕನ್ನಡ ಸಾಹಿತ್ಯ ಚರಿತ್ರೆ ಗಮನಿಸಿದಾಗ ನಿರಂತರವಾಗಿ ಬೃಹತ್ ಕಾವ್ಯಗಳ ನಿರ್ಮಾಣ ನಡೆಯುತ್ತಾ ಬಂದಿರುವುದನ್ನು ಗಮನಿಸಬಹುದು. ಆದಿಪುರಾಣ, ವಿಕ್ರಮಾರ್ಜುನ ವಿಜಯ, ಕುಮಾರವ್ಯಾಸ ಭಾರತ, ಭರತೇಶವೈಭವ, ಶ್ರೀ ರಾಮಾಯಣ ದರ್ಶನಂ…ಹೀಗೆ. ಇಪ್ಪತ್ತನೇ ಶತಮಾನವನ್ನಷ್ಟೇ ಗಮನಿಸಿದರೂ ಮಹತ್ವಾಕಾಂಕ್ಷೆಯ ಕಾದಂಬರಿಗಳು ನಮ್ಮಲ್ಲಿ ನಿರ್ಮಿತವಾಗಿರುವುದನ್ನು ನೋಡಬಹುದು. ಬೃಹತ್ ಮತ್ತು ಮಹತ್ ಒಮ್ಮೈಗೂಡಬೇಕೆಂಬುದು ಕನ್ನಡ ಮನಸ್ಸಿನ ಯಾವತ್ತಿನ ಅಭಿಲಾಷೆ. ಆಧುನಿಕ ಸಾಹಿತ್ಯದಿಂದಲೂ ಇದಕ್ಕೆ ಅನೇಕ ಉದಾಹರಣೆಗಳನ್ನು ಕೊಡಬಹುದು. ಮತ್ತಷ್ಟು ಓದು »

29
ಆಕ್ಟೋ

ಹೊಯಿ ನಮ್ಮ ಕುಂದಾಪ್ರದ ಅಪ್ಪಟ ಹೆಣ್ಣು ಮಗಳಿಗೆ ‘ಆಳ್ವಾಸ್ ನುಡಿಸಿರಿ’ಯ ಅಧ್ಯಕ್ಷಗಿರಿ

ಕರುಣಾಕರ ಬಳ್ಕೂರು

ಹೋಯಿ ನಮ್ಮ ಕುಂದಾಪ್ರದ ಅಪ್ಪಟ ಹೆಣ್ಣು ಮಗಳಿಗೆ ಆಳ್ವಾಸ್ ನುಡಿಸಿರಿಯ ಅಧ್ಯಕ್ಷಗಿರಿ. ಇದ್ ನಮ್ ಊರಿಗೆ ಬಾರಿ ಖುಷಿ ವಿಷಯ ಕಾಣಿ. ಕುಂದಾಪ್ರ ಹೆನ್ಮಗಳ ಸಾಧನೆಗೆ ಕುಂದಾಪ್ರದಲ್ಲಿ ಸಂಭ್ರಮ, ಸಡಗರ ತುಂಬಿ ತುಳುಕುತ್ತಿದೆ. ಕನ್ನಡ ಸಾಹಿತ್ಯ ಲೋಕದಲ್ಲಿ ವೈದೇಹಿಯವರ ಹೆಸರು ಇಂದು ಅಗ್ರ ಪಂಥಿಯಲ್ಲಿ ಕಾಣಿಸಿಕೊಳ್ಳುತ್ತಿದೆ. ತನ್ನದೇ ಆದ ಭಾವನೆಗಳನ್ನು ಬರವಣಿಗೆಯ ಮೂಲಕ ಬರೆಯುತ್ತಾ ಬಂದವರು. ಈಗಲು ಬರೆಯುತ್ತಿರುವವರು. ಮಾತನಾಡುವ ಶೈಲಿಯಲ್ಲಿ ಅಚ್ಚ ಕುಂದಾಪ್ರಗನ್ನಡದ ಸೊಗಡು, ಸಾಹಿತ್ಯದ ಮೆರಗು ಹೀಗೆ ವೈದೇಹಿ ಅಂದ್ರೆ ಎಲ್ಲರಿಗೂ ಮಸ್ತ್ ಖುಷಿ. ಅವರ ಬರವಣಿಗೆಯಲ್ಲಿ ಮಗುವಿನ ಮುಗ್ಧತೆ, ಎಲ್ಲವನ್ನು ಕುತೂಹಲದಿಂದ ನೊಡುವ ಮನಸ್ಸು, ಭಾವ ಪ್ರಧಾನವಾದ ಅವರ ಆಲೋಚನೆಗಳು ಹೀಗೆ ಎಲ್ಲಾವು ವ್ಯಕ್ತಿತ್ವದಲ್ಲಿ ತುಂಬಿಕೊಂಡಿವೆ. ಮಾತಿಗೆ ಸಿಕ್ಕರಂತು ‘ಇಲ್ಕಾಣಿ’ ಎನ್ನುವ ಕುಂದಾಪ್ರ ಭಾಷೆಯ ಸೊಗಡಿನ ನುಡಿಗಳನ್ನು ಅವರ ಬಾಯಿಂದಲೇ ಕೇಳಲು ಎಷ್ಟೊಂದು ಸೊಗಸು.

ನಗುಮೊಗದಿ, ಸರಳ ಸಜ್ಜಿನಿಕೆಯೊಂದಿಗೆ ಅಚ್ಚ ಕುಂದಾಪ್ರ ಕನ್ನಡದಲ್ಲಿ ಮಾತ್ನಾಡಿಲ್ಲಿಕೆ ಕುಳಿತರೆ ಕಷ್ಟ-ಸುಖದ ಸರಮಾಲೆಗಳ ಮಾತಿನ ಮಂಟಪವನ್ನೆ ಕಟ್ಟುವ ಗುಣವರಲ್ಲಿದೆ. ತನ್ನ ಮನಸಿನ ಭಾವನೆಗಳನ್ನು ಯಾರ ಹಂಗಿ ಇಲ್ಲದೆ, ಸಾಹಿತ್ಯದ ಮೂಲಕ ತೆರೆದಿಡುತ್ತಾ ಬಂದಿದ್ದಾರೆ. ಅವರ ಕೃತಿಗಳಲ್ಲಿ ಮಹಿಳಾ ಸಂವೇಧನೆ ಹಾಸುಹೊಕ್ಕಾಗಿರುವುದರಿಂದ ಅವರನ್ನು ಮಹಿಳಾ ಸಾಹಿತ್ಯ ಕೈ ಬೀಸಿಕರೆದಿದೆ. ಮಹಿಳೆಯರಿಗೆ ಕೂಡ ತನ್ನದೇ ಆದ ಖಾಸಗಿ ಬದುಕಿದೆ ಎನ್ನುವುದನ್ನು ಗುರುತಿಸಿದವರು. ಕನಸನ್ನು ಕಾಣುವ ಸ್ವಾತಂತ್ರ್ಯ ಇದೆ ಎನ್ನುವ ಮೂಲಕ ಸ್ತ್ರೀಲೋಕಕ್ಕೆ ತನ್ನನ್ನು ತೆರೆದುಕೊಳ್ಳುವ ಮೂಲಕ ವಿಮರ್ಶಕರ ಪಾಲಿಗೆ ಹಲವು ದಾರಿಗಳನ್ನು ಮಾಡಿಕೊಟ್ಟಿದ್ದಾರೆ.

ವೈದೇಹಿ ಅವರ ಬರವಣಿಯು ಎಲ್ಲರ ಮನಸ್ಸನ್ನು ಗೆಲುವಲ್ಲಿ ಯಶಸ್ವಿಯಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಕನ್ನಡ ಸಾರಸ್ವತ ಲೋಕದೊಳಗೆ ಹೊಸ ಲೋಕವನ್ನು ಸೃಷ್ಟಿ ಮಾಡಿದ್ದಾರೆ. ‘ಕುಂದಾಪ್ರ’ ಪುಟ್ಟ ಜಗತ್ತನ ಆಚಾರ-ವಿಚಾರ, ಕಲೆ ಸಂಸ್ಕೃತಿ, ಭಾಷೆಗಳೆಲ್ಲವನ್ನೂ ಒಳಗೊಂಡ ಸೂಕ್ಷ್ಮ ಕಸೂತಿ ಎಳೆಗಳ ಹಾಗೆ ಬಿಡಿಸುವ ವೈದೇಹಿಯವರ  ಶೈಲಿ ಅನನ್ಯವಾದದ್ದು. ಹಾಗಾಗೀ ಓದುಗರಿಗೆ ಹೊಸಪ್ರಪಂಚವೇ ಸರಿ. ಮತ್ತಷ್ಟು ಓದು »

28
ಆಕ್ಟೋ

ಪ್ರಾಮಾಣಿಕ ಐಎಎಸ್ ಅಧಿಕಾರಿ ವಿ.ಪೊನ್ನುರಾಜ್ ಅವರಿಗೊಂದು ಶುಭವಿದಾಯ

ಕರುಣಾಕರ ಬಳ್ಕೂರು

ಸರ್,

ದಕ್ಷಿಣಕನ್ನಡದ 120ನೇ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡು, ಜಿಲ್ಲೆಯ ಬಗ್ಗೆ ಸಂಪೂರ್ಣವಾಗಿ ಅಧ್ಯಯನ ಮಾಡಿ ಅಂದಿನಿಂದಲೇ ಮಾದರಿ ಜಿಲ್ಲೆಯನ್ನಾಗಿಸುವ ಕನಸುನ್ನು ಕಂಡವರು ನೀವು, ಅಷ್ಟೇ ಅಲ್ಲ ಆ ಕನಸುನ್ನು ನನಸಾಗಿರುವ ಕೀರ್ತಿಯೂ ನಿಮ್ಮದು.

ಅಧಿಕಾರ ಸ್ವೀಕರಿಸುವಾಗ ದಿನದಿಂದ ನುಡಿದಂತೆ ನಡೆದವರು, ಆ ಮುಖೇನ ದಕ್ಷ, ಪ್ರಾಮಾಣಿಕ ಎನ್ನುವ ಹೆಸರುಗಳು ನಿಮ್ಮಪಾಲಿಗಾಯಿತು. ಕಾರ್ಯ ವೈಖರಿಯಲ್ಲಿ ಸೋಲದೆ ಇಡೀ ಜಿಲ್ಲಾಡಳಿತದ ವ್ಯವಸ್ಥೆಯನ್ನು ಸಮರ್ಪಕವಾಗಿ ನಿಭಾಯಿಸಿದ್ದೀರಿ. ಕಾರ್ಯ ನಿವರ್ಹಹಿಸುವಾಗ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ನೇರ, ದಿಟ್ಟವಾಗಿ ಎದುರಿಸಿದವರು. ಅಕ್ರಮ ಮರಳುಗಾರಿಕೆ ವಿರುದ್ಧ ನಿಯಂತ್ರಣಕ್ಕೆ ಲಾರಿಗಳಿಗೆ ಜಿಪಿಎಸ್ ಯಂತ್ರ ಅಳವಡಿಕೆ, ನಗರದ ಪ್ರಮುಖ ರಸ್ತೆಗಳು ಸೇರಿದಂತೆ, ವಿಟ್ಲ, ಬಿ.ಸಿ ರೋಡ್ ವಿಸ್ತರಣೆ, ಸಂಸದರ/ಶಾಸಕರ ಪ್ರದೇಶಾಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿದ್ದ ಕೋಟ್ಯಂತರ ರೂಪಾಯಿ ಅವ್ಯವಹಾರಕ್ಕೆ ಕಡಿವಾಣ, ಕಳಪೆ ಕಾಮಗಾರಿಯ ಹಣ ಬಾಕಿ ಹೀಗೆ ಅಭಿವೃದ್ಧಿಗೆ ಹಿನ್ನಡೆ ಉಂಟಾದಲ್ಲಿ ಸರ್ಜರಿ ಮಾಡಿ ಕೆಲವರ ನಿದ್ದೆಯನ್ನು ಕೆಡಿಸಿದ್ದೀರಿ. ಇದು ನಿಮ್ಮ ಕಾರ್ಯದಕ್ಷತೆಯ ಹೆಚ್ಚುಗಾರಿಕೆಯೆಂದು ಕರೆಯಬೇಕು. ಶಾಸಕರ ಅನುದಾನದಲ್ಲಿ ಕೈಗೊಂಡ ಕಾಮಗಾರಿಗಳ ಗುಣಮಟ್ಟ ಪೂರ್ಣ ಖಾರಿ ಪಡಿಸಿಕೊಳ್ಳದೆ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡದೇ ಇರುವುದು, ವಿವಿಧ ಇಲಾಖೆಗಳ ಸಂಪೂರ್ಣ ಗಣಕೀರಣ ಸೇರಿದಂತೆ ಜಿಲ್ಲಾಡಳಿತಕ್ಕೆ ವಿನೂತನವಾಗಿ ತನ್ನ ಕಾರ್ಯ ವೈಖರಿಯ ಮೂಲಕ ಸಾಧಿಸಿ ತೋರಿಸಿದ್ದರ ಫಲವೆಂಬಂತೆ ಸರಕಾರದಿಂದ ಬಹುಮಾನವಾಗಿ ಅವರನ್ನು ವರ್ಗಾವಣೆ ಮಾಡಿರುವುದು ದುರಂತವೇ ಸರಿ. ಎಷ್ಟರ ಮಟ್ಟಿಗೆ ಸರಿ ಎನ್ನುವ ಬಗ್ಗೆ ಜನಪ್ರತಿನಿಧಿಗಳು ಜನತೆಗೆ ಉತ್ತರ ಕೊಡಬೇಕಾಗಿದೆ?. ಮತ್ತಷ್ಟು ಓದು »