ವಿಷಯದ ವಿವರಗಳಿಗೆ ದಾಟಿರಿ

Posts from the ‘ಲೇಖನಗಳು’ Category

16
ಸೆಪ್ಟೆಂ

ಪ್ರೇತದ ಆತ್ಮ ಚರಿತೆ! (ಭಾಗ ೨)

– ಶ್ರೀಕಾಂತ್ ಶೆಟ್ಟಿ
ಪ್ರೇತದ ಆತ್ಮ ಚರಿತೆ! (ಭಾಗ ೧)
14141908_1078958802199728_8622841239691589630_nಅದು ಮನುಕುಲ ಕಂಡ ಪರಮ ಪಾಪಿಗಳಲ್ಲೊಬ್ಬ ಔರಂಗಜೇಬ ದಿಲ್ಲಿಯ ಗದ್ದುಗೆಯಲ್ಲಿದ್ದ ಸಮಯ. ಪ್ರಜೆಗಳನ್ನು ಪರಿಪಾಲನೆ ಮಾಡಬೇಕಾದ ದೊರೆಯೇ ಜಿಸಿಯಾ ತಲೆಗಂದಾಯ ಹೇರಿ ಒಂದು ನಿರ್ದಿಷ್ಟ ಸಮಾಜದ ಸರ್ವನಾಶಕ್ಕೆ ಪಣತೊಟ್ಟು ಸಾವಿರಾರು ದೇವಾಲಯಗಳನ್ನು ದ್ವಂಸ ಮಾಡುತ್ತಿದ್ದ ಕಂಟಕಕಾಲ.. ಆ ಹೊತ್ತಿನಲ್ಲಿ ಸ್ವಾಭಿಮಾನಿ ಹಿಂದೂಗಳ ಪಾಲಿಗೆ ಆಪತ್ಭಾಂದವರಾಗಿ ಶಿವಾಜಿ ಮಹಾರಾಜರು ಉದಿಸಿದರು. ಸಹ್ಯಾದ್ರಿಯ ಸಿಂಹದ ಗುಡುಗಿಗೆ ದಿಲ್ಲಿಯ ಮೊಘಲರ ಮಯೂರ ಸಿಂಹಾಸನ ತಣ್ಣಗೆ ಕಂಪಿಸಿದ್ದಂತೂ ಸತ್ಯ. ಪ್ರವಾಹಕ್ಕೆ ವಿರುದ್ಧವಾಗಿ ಈಜಿ ತನ್ನ ಸದ್ಗುಣಗಳಿಂದ ಪ್ರಜೆಗಳ ಹೃದಯವನ್ನೂ… ಖಡ್ಗಪರಾಕ್ರಮದಿಂದ ಯವನರ ಸೈನ್ಯವನ್ನೂ ಗೆದ್ದ ಶಿವಾಜಿ, ಹಿಂದವೀ ಸ್ವಾರಾಜ್ಯವನ್ನು ಕಟ್ಟಿದರು. ಅಖಂಡ ಹಿಂದೂ ಸಾಮ್ರಾಜ್ಯಕ್ಕೆ ಬೀಜಾರೋಹಣ ಮಾಡಿದವರು ಶಿವಾಜಿ ಮಹಾರಾಜರಾದರೂ, ಅವರ ಕನಸನ್ನು ನನಸು ಮಾಡಿದವರು ಮಾತ್ರ ಪುಣೆಯ ಪೇಶ್ವಾಗಳು. ಮತ್ತಷ್ಟು ಓದು »

15
ಸೆಪ್ಟೆಂ

ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ

ದಿನ – 29:
ವಾಂಚಿನಾಥನ್ ಅಯ್ಯರ್
– ರಾಮಚಂದ್ರ ಹೆಗಡೆ

download-1ತಮಿಳುನಾಡಿನ ರಾಷ್ಟ್ರಭಕ್ತ ಕ್ರಾಂತಿಕಾರಿ, ಬ್ರಿಟಿಷ್ ಸಾಮ್ರಾಜ್ಯಕ್ಕೆ ಸೆಡ್ಡು ಹೊಡೆದು ಪ್ರಾಣಾರ್ಪಣೆ ಮಾಡಿದ ಹುತಾತ್ಮ ವಾಂಚಿನಾಥನ್ ಅಯ್ಯರ್. ಜನರಿಂದ ‘ವಂಚಿ’ ಎಂದು ಪ್ರೀತಿಯಿಂದ ಕರೆಯಲ್ಪಡುತ್ತಿದ್ದ ಈ ೨೫ ರ ದೇಶಭಕ್ತ ತರುಣ ತಿರುನಲ್ವೇಲಿಯ ಕಲೆಕ್ಟರ್ ರಾಬರ್ಟ್ ಆಶ್ ನನ್ನು ಹಾಡಹಗಲೇ ಗುಂಡಿಕ್ಕಿ ತಾನೂ ಆತ್ಮಾರ್ಪಣೆ ಮಾಡಿದ. ತಿರುನಲ್ವೇಲಿ ಜಿಲ್ಲೆಯ ಸೆಂಗೊತ್ತೈ ಎಂಬ ಊರಿನಲ್ಲಿ ಜನಿಸಿದ ವಾಂಚಿನಾಥನ್ ಪ್ರಾಥಮಿಕ ಶಿಕ್ಷಣವನ್ನು ತನ್ನೂರಿನಲ್ಲೇ ಮುಗಿಸಿ, ಎಂ.ಎ ಪದವಿಯನ್ನು ತಿರುವನಂತಪುರದ ಕಾಲೇಜಿನಲ್ಲಿ ಪಡೆದಿದ್ದ. ಕಾಲೇಜಿನಲ್ಲಿ ಓದುವಾಗಲೇ ಮದುವೆಯೂ ಆಗಿತ್ತು. ಸರ್ಕಾರಿ ಹುದ್ದೆಯಲ್ಲಿ ನೌಕರಿ ಮಾಡುತ್ತಿದ್ದ. ಅದೇ ಹೊತ್ತಿಗೆ ತಮಿಳುನಾಡಿನಲ್ಲಿ ಸ್ವಾತಂತ್ರ್ಯ ಹೋರಾಟದ ಕಾವು ಜೋರಾಗಿತ್ತು. ಸ್ವದೇಶೀ ನೇವಿಗೇಷನ್ ಕಂಪನಿ ಹುಟ್ಟುಹಾಕಿ ಬ್ರಿಟಿಷರಿಗೆ ಸೆಡ್ಡು ಹೊಡೆದ ರಾಷ್ಟ್ರಭಕ್ತ ಚಿದಂಬರಂ ಪಿಳ್ಳೈ ಹಾಗೂ ‘ಭಾರತಮಾತಾ ಅಸೋಸಿಯೇಷನ್’ ಕಟ್ಟಿ ಕ್ರಾಂತಿಕಾರಿಗಳನ್ನು ತಯಾರು ಮಾಡುತ್ತಿದ್ದ ನೀಲಕಂಠ ಬ್ರಹ್ಮಚಾರಿ ಅವರ ಹೋರಾಟಗಳಿಂದ ವಾಂಚಿ ಸ್ವಾತಂತ್ರ್ಯ ಸಮರದೆಡೆಗೆ ಆಕರ್ಷಿತನಾದ. ದಕ್ಷಿಣ ಭಾರತದ ಕೆಲವೇ ಕೆಲವು ಕ್ರಾಂತಿಕಾರಿ ಸಂಘಟನೆಗಳಲ್ಲಿ ಒಂದಾದ, ನೀಲಕಂಠನಿಂದ ಬ್ರಹ್ಮಚಾರಿಯವರ ‘ಭಾರತಮಾತಾ ಅಸೋಸಿಯೇಷನ್’ ಸಶಸ್ತ್ರ ಕ್ರಾಂತಿಗಾಗಿ ಯುವಕರನ್ನು ತರಬೇತಿಗೊಳಿಸುತ್ತಿತ್ತು. ಮತ್ತಷ್ಟು ಓದು »

14
ಸೆಪ್ಟೆಂ

ಪ್ರತಿಭಟನೆಯನ್ನೂ ಅಪರಾಧವನ್ನೂ ಏಕೆ ಸಮೀಕರಿಸುತ್ತೀರಿ ಮಾಧ್ಯಮಗಳೇ?

– ವಿನಾಯಕ ಹಂಪಿಹೊಳಿ

 imagesರಾಜ್ಯಾದ್ಯಂತ ಪ್ರತಿಭಟನೆಗಳನ್ನು ವರದಿ ಮಾಡುವ ಸಂದರ್ಭದಲ್ಲಿ ನಮ್ಮ ಮಾಧ್ಯಮಗಳುವಾಹನಗಳಿಗೆ ಬೆಂಕಿ ಹಚ್ಚುವದರ ಮೂಲಕ ಕಲ್ಲು ತೂರುವ್ರದರ ಮೂಲಕ ಪ್ರತಿಭಟನಾಕಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದರುಎಂಬ ಮಾತನ್ನು ಬಳಸಿದ್ದೇ ತಪ್ಪು ಎಂಬುದು ನನ್ನ ಅನಿಸಿಕೆ. ಏಕೆಂದರೆ ಇಂತಹ ಅನೈತಿಕ ಕಾರ್ಯಗಳನ್ನು, `ಆಕ್ರೋಶದ ಸಹಜ ಅಭಿವ್ಯಕ್ತಿ’ ಎಂಬಂತೆ ಬಿಂಬಿಸಿರುವದೇ ಕ್ರಿಯೆಯನ್ನು ಸಮರ್ಥಿಸಿದಂತೆ. ಉದಾಹರಣೆಗೆಚಾರ್ಲಿ ಹೆಬ್ಡೋ ಕಚೇರಿಯ ಮೇಲೆ ಬಾಂಬು ಹಾಕುವದರ ಮೂಲಕ ಭಯೋತ್ಪಾದಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದರುಎಂದು ಸುದ್ದಿ ಬಿತ್ತರಿಸಿದರೆ ಹೇಗಿರುತ್ತದೆ? ಭಯೋತ್ಪಾದಕರಂತೆ ಜೀವ ತೆಗೆದಿಲ್ಲ ಎನ್ನುವದನ್ನು ಒಪ್ಪಬಹುದು. ಆದರೆ ಸಾಲಸೋಲ ಮಾಡಿ ಪಡೆದ ಲಾರಿಗಳೇ, ಜೀವನಾಧಾರವನ್ನಾಗಿ ಮಾಡಿಕೊಂಡಿರುವ ಲಾರಿ ಡ್ರೈವರು ಕ್ಲೀನರುಗಳಿಗೆ, ಅವರ ಸಂಸಾರಕ್ಕೆ ಇದ್ದ ಒಂದೇ ಜೀವನೋಪಾಯವನ್ನೇ, ಕಸಿದುಕೊಳ್ಳುವದು ಸರಿಯೇ? ಜೀವ ತೆಗೆಯುವದಕ್ಕಿಂತ ಜೀವನ ತೆಗೆಯುವದು ಕಡಿಮೆ ಅಪರಾಧವಾಯಿತೇ?

ಮತ್ತಷ್ಟು ಓದು »

14
ಸೆಪ್ಟೆಂ

ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ

ದಿನ – 28:
ಮೆಣಸಿನಹಾಳ ತಿಮ್ಮನಗೌಡ
– ರಾಮಚಂದ್ರ ಹೆಗಡೆ

11slide2ಶ್ರೀಮಂತ ಕುಟುಂಬದಲ್ಲಿ ಜನಿಸಿದರೂ ಬ್ರಿಟಿಷರ ವಿರುದ್ಧ ಕ್ರಾಂತಿ ಕಹಳೆ ಮೊಳಗಿಸಿ ಹುತಾತ್ಮನಾದ ವೀರ ಕನ್ನಡಿಗ ಮೆಣಸಿನಹಾಳ ತಿಮ್ಮನಗೌಡರು. ಇಂದಿನ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಮೆಣಸಿನಹಾಳದಲ್ಲಿ ಶ್ರೀಮಂತ ಪಾಟೀಲ ಕುಟುಂಬದಲ್ಲಿ ಜನಿಸಿದ ತಿಮ್ಮನಗೌಡ ಬ್ಯಾಡಗಿಗೆ ಸುಭಾಷಚಂದ್ರ ಬೋಸರು ಬಂದಾಗ ಸ್ವಾತಂತ್ರ್ಯ ಹೋರಾಟದ ಕುರಿತ ಅವರ ಭಾಷಣ ಕೇಳಿ ರೋಮಾಂಚಿತರಾಗಿ ತ್ಯಾಗ ಮತ್ತು ಬಲಿದಾನದ ದೀಕ್ಷೆ ತೊಟ್ಟು ತನ್ನ 21ರ ವಯಸ್ಸಿನಲ್ಲೇ ಕಾನೂನು ಭಂಗ ಚಳುವಳಿಗೆ ಧುಮುಕಿದರು. ಆ ಹೊತ್ತಿಗೆ ಬ್ರಿಟಿಷರ ದರ್ಪ ದೌರ್ಜನ್ಯಗಳು ಮಿತಿಮೀರಿದ್ದವು. ಸಾಮಾನ್ಯ ಬಡ ರೈತರನ್ನು ದುಪ್ಪಟ್ಟು ಕಂದಾಯ ಹಾಕಿ ಶೋಷಿಸಲಾಗುತ್ತಿತ್ತು. ಅದನ್ನು ಪ್ರತಿಭಟಿಸಿ ಶೋಷಣೆಯ ವಿರುದ್ಧ ದನಿಯೆತ್ತಿದ ತಿಮ್ಮನಗೌಡರನ್ನು ಬ್ರಿಟಿಷರು ಇನ್ನೂ ಅನೇಕ ಹೋರಾಟಗಾರರೊಂದಿಗೆ ಬಂಧಿಸಿ ಎರಡು ವರ್ಷಕಾಲ ಯರವಾಡ ಜೈಲಿನಲ್ಲಿ ಸೆರೆಯಲ್ಲಿಟ್ಟರು. ಅಲ್ಲಿ ತಿಮ್ಮನಗೌಡರು ಚರಖಾದಿಂದ ನೂಲು ತೆಗೆಯುವುದನ್ನು ಕಲಿತರು. ಜೈಲಿನಿಂದ ಬಿಡುಗಡೆಗೊಂಡ ತಿಮ್ಮನಗೌಡರಿಗೆ ಅವರ ಊರಿನಲ್ಲಿ ಭವ್ಯ ಸ್ವಾಗತ ದೊರೆಯಿತು. ಜೈಲಿನಿಂದ ಬಂದ ಮೇಲೆ ಮತ್ತೆ ತಿಮ್ಮನಗೌಡರು ತಮ್ಮ ಕ್ರಾಂತಿ ಚಟುವಟಿಕೆಗಳನ್ನು ಮುಂದುವರೆಸಿದರು. ಬ್ರಿಟಿಷ್ ದೌರ್ಜನ್ಯದ ವಿರುದ್ಧ ತರುಣರ ಗುಂಪು ಕಟ್ಟಿಕೊಂಡು ಊರೂರು ತಿರುಗಿ ಭಾಷಣ ಮಾಡುತ್ತಾ ಜನರಲ್ಲಿ ಜಾಗೃತಿ ಮೂಡಿಸುತ್ತಾ ಜನರನ್ನು ಬಡಿದೆಬ್ಬಿಸತೊಡಗಿದರು. ಮತ್ತಷ್ಟು ಓದು »

14
ಸೆಪ್ಟೆಂ

ಸಾಧಕರ ಹೆಸರಲ್ಲಿ ಅಸ್ಮಿತೆಯ ಹುಡುಕಾಟ

– ಡಾ.ಬಿ.ವಿ.ವಸಂತ ಕುಮಾರ್

basavannaಭಾರತ ದೇಶ ಪ್ರಪಂಚದ ಒಂದು ವಿಶಿಷ್ಟ ದೇಶ. ಭಾರತದ ಬದುಕಿನ ದಾರಿಗಳನ್ನು ಇಲ್ಲಿನ ಮಹಾತ್ಮರು ನಿರ್ಮಿಸಿದ್ದಾರೆ. ಕಾಡಿನಿಂದ ಒಡಮೂಡಿದ ಈ ದಾರಿಗಳೆಡೆಗೆ ನಗರ ಮಹಾನಗರಗಳ ಜನರು ಮುಖಮಾಡಿದ್ದನ್ನೂ, ಮಾಡುತ್ತಾ ಇರುವುದನ್ನೂ, ಮುಂದೆ ಮಾಡುವುದನ್ನೂ ನೋಡಬಹುದು. ಇವರೇ ನಿಜವಾದ ರಾಷ್ಟ್ರ ನಿರ್ಮಾಪಕರು, ಸಂಸ್ಕೃತಿ ಸೃಷ್ಟಿಕರ್ತರು, ಕಲ್ಯಾಣದ ಮಹಾಕನಸುಗಾರರು. ಇಂಥವರನ್ನು ಸಂತರು, ಮಹಂತರು, ಶರಣರು, ಋಷಿಮುನಿಗಳು, ದಾರ್ಶನಿಕರು ಎಂದೆಲ್ಲ ಕರೆಯುತ್ತಾರೆ. ಅವರನ್ನು ಸಮಾಜದ ಜನ ಸದಾ ತಮ್ಮ ಬಾಳಿಗೆ ಆದರ್ಶದ ನಂದಾದೀವಿಗೆಯನ್ನಾಗಿಸಿಕೊಂಡಿದ್ದಾರೆ. ಅವರನ್ನು ಗುರುವೆಂದು ಸ್ವೀಕರಿಸಿ ತಾವು ಭಕ್ತರಾಗಿ ಗುರು-ಶಿಷ್ಯ ಪರಂಪರೆಯ ಆಧ್ಯಾತ್ಮಕ್ಕೂ ಅನುಭವಕ್ಕೂ ಕಾರಣರಾಗಿದ್ದಾರೆ. ಮತ್ತಷ್ಟು ಓದು »

13
ಸೆಪ್ಟೆಂ

ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ

ದಿನ – 27:
‘ಮಾಸ್ಟರ್ ದಾ’ ಸೂರ್ಯ ಸೇನ್
– ರಾಮಚಂದ್ರ ಹೆಗಡೆ

surya_sen_before_1934ಬಂಗಾಳದ ಮತ್ತೊಬ್ಬ ಕ್ರಾಂತಿಕಿಡಿ, ಬ್ರಿಟಿಷರ ಎದೆ ನಡುಗಿಸಿದ ‘ಚಿತ್ತಗಾಂಗ್ ಶಸ್ತ್ರಾಗಾರ ದಾಳಿ’ ಯ ರೂವಾರಿ ಸೂರ್ಯ ಸೇನ್. ಜನರು, ಕ್ರಾಂತಿಕಾರಿ ಸಹವರ್ತಿಗಳು ಪ್ರೀತಿಯಿಂದ ಕರೆಯುತ್ತಿದ್ದ ಹೆಸರು ಮಾಸ್ಟರ್ ದಾ. ಪ್ರಸ್ತುತ ಬಾಂಗ್ಲಾದೇಶದಲ್ಲಿರುವ ಚಿತ್ತಗಾಂಗ್ ನ ಸುತ್ತಮುತ್ತಲಿನ ಪ್ರದೇಶದಲ್ಲಿ ಬ್ರಿಟಿಷರ ವಿರುದ್ಧ ದೊಡ್ಡಮಟ್ಟದ ಹೋರಾಟವನ್ನು ರೂಪಿಸುವಲ್ಲಿ ಸೂರ್ಯ ಸೇನ್ ರ ಪಾತ್ರ ಪ್ರಮುಖವಾದದ್ದು. ಬಿಎ ವಿದ್ಯಾರ್ಥಿಯಾಗಿದ್ದಾಗ ಭಾರತ ಸ್ವಾತಂತ್ರ್ಯ ಸಮರದ ಕುರಿತು ಅರಿತ ಸೇನ್, ಕ್ರಾಂತಿಕಾರಿ ಸಂಘಟನೆ ಅನುಶೀಲನ ಸಮಿತಿಯೆಡೆಗೆ ಆಕರ್ಷಿತರಾದರು. ೧೯೧೮ ರಲ್ಲಿ ಚಿತ್ತಗಾಂಗ್ ನಲ್ಲಿ ಶಿಕ್ಷಕನಾಗಿ ವೃತ್ತಿ ಆರಂಭಿಸಿದ ಸೇನ್ ಆರಂಭದಲ್ಲಿ ಗಾಂಧೀಜಿಯವರ ಅಸಹಕಾರ ಚಳುವಳಿಯ ಭಾಗವಾಗಿದ್ದರು. ಆದರೆ ಅದು ಮಧ್ಯದಲ್ಲೇ ಸ್ಥಗಿತವಾದಾಗ ಬೇಸರಗೊಂಡ ಸೇನ್ ಭಾರತದ ಸ್ವಾತಂತ್ರ್ಯಕ್ಕೆ ಕ್ರಾಂತಿಮಾರ್ಗವೇ ಸರಿ ಎಂದು ನಿಶ್ಚಯಿಸಿದರು. ಕ್ರಾಂತಿಕಾರಿ ಸಂಘಟನೆ ಯುಗಾಂತರದ ಕಾರ್ಯಕರ್ತನಾಗಿ ಕ್ರಾಂತಿಕಾರ್ಯದಲ್ಲಿ ತೊಡಗಿಸಿಕೊಂಡ ಅವರು ಚಿತ್ತಗಾಂಗ್ ಜಿಲ್ಲೆಯಾದ್ಯಂತ ಕ್ರಾಂತಿ ಚಟುವಟಿಕೆ ಪಸರಿಸುವಲ್ಲಿ ಹಾಗೂ ಕ್ರಾಂತಿಕಾರಿಗಳ ಬಹುದೊಡ್ಡ ಯುವಪಡೆಯನ್ನು ಕಟ್ಟುವಲ್ಲಿ ಅವಿರತವಾಗಿ ದುಡಿದರು. ಮತ್ತಷ್ಟು ಓದು »

13
ಸೆಪ್ಟೆಂ

ಗುರು – ಶಿಷ್ಯ

– ಗೀತಾ ಹೆಗ್ಡೆ

images-1ಅರಿವು ಅಂದರೆ ತಿಳುವಳಿಕೆ. ಇದು ನಮಗೆ ಹುಟ್ಟಿನಿಂದ ಬರಲು ಸಾಧ್ಯವಿಲ್ಲ. ಇದಕ್ಕೆ ಒಬ್ಬ ಗುರುವಿನ ಅಗತ್ಯ ಇದೆ. ಒಂಬತ್ತು ತಿಂಗಳು ಹೊತ್ತು ಹೆತ್ತು ಸಾಕಿದ ತಾಯಿ ಮೊದಲ ಗುರು. ಎಳೆ ಕಂದಮ್ಮನಿಗೆ ಹಾಲುಣಿಸುವ ತರಬೇತಿಯಿಂದ ಹಿಡಿದು ತನ್ನ ಜೀವಿತಾವಧಿಯ ಕೊನೆಯವರೆಗೂ ಒಂದಲ್ಲಾ ಒಂದು ಗಳಿಗೆಗಳ ಸಂದರ್ಭದಲ್ಲಿ ಜೊತೆಯಾಗಿ ನಿಂತು ಸಲಹುವ ಗುರು ರಕ್ಷೆ ಅವಳು. ಹಾಗಾದರೆ ತಂದೆ? ಮುದ್ದು ಮಾಡಿ ಎತ್ತಿ ಹಾರಿಸಿ ಕಂದನ ಲಾಲನೆ ಪಾಲನೆ ಕಡೆ ಕಣ್ಣಿಟ್ಟು ಬೇಕಾದ್ದೆಲ್ಲ ತನ್ನ ಶಕ್ತ್ಯಾನುಸಾರ ತಂದು ಕೊಡುವ; ತರಲಾರದ್ದಕ್ಕೆ ಸಂಕಟ ಪಡುತ್ತ ಹಪಹಪಿಸಿ ಮರೆಯಲ್ಲಿ ಕಣ್ಣೊರೆಸಿಕೊಂಡು ಜವಾಬ್ದಾರಿ ಹೊತ್ತು ಮಕ್ಕಳಿಗೆ ಶ್ರೀ ರಕ್ಷೆ ನೀಡಿ, ಬೆಳೆಯುವ ಮಕ್ಕಳ ಏಳಿಗೆಯ ನೋಡಿ ಬೀಗುವ ಕಣ್ಣಿಗೆ ಕಾಣದ ಗುರು ಎಂದರೂ ತಪ್ಪಾಗಲಾರದು. ಏಕೆಂದರೆ ಸಂಸಾರದಲ್ಲಿ ಮಕ್ಕಳಿಂದ ಏನೆ ತಪ್ಪು ಒಪ್ಪಿದ್ದರೂ ಸಾಮಾನ್ಯವಾಗಿ ತಾಯಿ ಕಲಿಸಿದ ಬುದ್ಧಿ ಹೇಳೋದೆ ಜಾಸ್ತಿ. ತಂದೆ, ತಾಯಿ ಕಲಿಸಿದ ಬುದ್ಧಿ ಹೇಳೋದು ಅಪರೂಪ. ತಂದೆ ತಾಯಿಯಾದವರೂ ಹೇಳುವುದೂ ಹಾಗೆ, ಒಳ್ಳೆದಾದರೆ ನಾ ಕಲಿಸಿದ್ದು ಅದೆ ತಪ್ಪಾದರೆ ಅವರಮ್ಮ ಕಲಿಸಿದ ಬುದ್ಧಿ. ಎಷ್ಟು ವಿಪರ್ಯಾಸ! ಮತ್ತಷ್ಟು ಓದು »

12
ಸೆಪ್ಟೆಂ

ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ

ದಿನ – 26:
ಸರ್ದಾರ್ ಅಜಿತ್ ಸಿಂಗ್
– ರಾಮಚಂದ್ರ ಹೆಗಡೆ

ajitsinghಪಂಜಾಬ್ ಪ್ರಾಂತ್ಯದಲ್ಲಿ ಬ್ರಿಟಿಷ್ ಸರ್ಕಾರದ ದೌರ್ಜನ್ಯದ ವಿರುದ್ಧ ದನಿಯೆತ್ತಿದ, ಜನರನ್ನು ಸಂಘಟಿಸಿದ ಅಗ್ರಶ್ರೇಣಿಯ ಕ್ರಾಂತಿಕಾರಿ ಸರ್ದಾರ್ ಅಜಿತ್ ಸಿಂಗ್. ಇವರು ಕ್ರಾಂತಿಸಿಂಹ ಸರ್ದಾರ್ ಭಗತ್ ಸಿಂಗ್ ರ ಚಿಕ್ಕಪ್ಪ. 1947 ರ ಆಗಸ್ಟ್ 15 ರಂದು ಭಾರತ ಸ್ವತಂತ್ರವಾದಾಗ ‘ಥ್ಯಾಂಕ್ ಗಾಡ್, ನಮ್ಮ ಕೆಲಸ, ಹೋರಾಟ ಯಶಸ್ವಿಯಾಯಿತು’ ಎಂದು ಖುಷಿಯಿಂದ, ಸಂಭ್ರಮದಿಂದ ಆ ಕ್ಷಣಗಳನ್ನು ಕಂಡು ಅಂದೇ ‘ಧನ್ಯತೆಯ ಸಾವು’ ಕಂಡವರು ಅಜಿತ್ ಸಿಂಗರು. ಸ್ವತಂತ್ರ ಭಾರತದ ಕನಸು ಕಂಡು ಅದಕ್ಕಾಗಿ ತಮ್ಮ ಬದುಕನ್ನೇ ಸಮರ್ಪಿಸಿ ಆ ಕನಸು ನನಸಾಗುವ ಮುನ್ನವೇ ಮರೆಯಾದವರು ಕೋಟ್ಯಾಂತರ ಮಂದಿ. ಹಾಗೆ ಕನಸು ನನಸಾದ ಕ್ಷಣವನ್ನು ಕಣ್ತುಂಬಿಕೊಳ್ಳುವ ಭಾಗ್ಯ ಅನೇಕರಿಗೆ ಸಿಗಲೇ ಇಲ್ಲ. ಸರ್ದಾರ್ ಅಜಿತ್ ಸಿಂಗರು ಆ ವಿಷಯದಲ್ಲಿ ಅದೃಷ್ಟವಂತರು. ಹಾಗಾಗಿ ಅವರದು ಧನ್ಯತೆಯ ಸಾವು. ಮತ್ತಷ್ಟು ಓದು »

12
ಸೆಪ್ಟೆಂ

ಭವಿಷ್ಯದ ಅರಮನೆಯ ಕನಸೇನೋ ಚಂದ, ಆದರೆ….

– ಗುರುರಾಜ ಕೋಡ್ಕಣಿ. ಯಲ್ಲಾಪುರ

images‘ಕಂಗ್ರಾಟ್ಸ್ ಅನಿತಾ.. ನೀನು ಸಾಧಿಸಿಬಿಟ್ಟೆ ಮಗಳೇ, ನೀನು ಸಾಧಿಸಿ ಬಿಟ್ಟೆ. ನಿನಗೀಗ ಕ್ಯಾಂಪಸ್ ಸಂದರ್ಶನದಲ್ಲಿ ಕೆಲಸ ಸಿಕ್ಕಿರುವ ಕಂಪನಿ ಎಂಥಹ ಅದ್ಭುತ ಸಂಸ್ಥೆ ಗೊತ್ತೆ..?? ಈ ಒಂದು ವರ್ಷದ ಅವಧಿಯಲ್ಲೇ ಅದು ಸಾವಿರಾರು ಕೋಟಿಗಳಷ್ಟು ಲಾಭ ಪಡೆದುಕೊಂಡಿದೆ. ನಿನ್ನ ಶ್ರಮ ಸಾರ್ಥಕವಾಯಿತು ಮಗು. ದೀಪಾ, ಎಲ್ಲರಿಗೂ ಐಸ್ ಕ್ರೀಮ್ ತರಿಸು, ನಮ್ಮ ಮಗಳ ಈ ಯಶಸ್ಸನ್ನು ಖುಷಿಯಾಗಿ ಆಚರಿಸೋಣ’ ಎಂದು ಕೈಯಲ್ಲಿದ್ದ ಪತ್ರವನ್ನು ಅಪ್ಪ ಸಂತಸದಿಂದ ಓದುತ್ತಿದ್ದಾಗ ಅನಿತಾಳದ್ದು ನಿರ್ವಿಕಾರ ಮುಖಭಾವ. ಪದವಿ ಮುಗಿಯುವ ಮುನ್ನವೇ ಆಕೆಯ ಪ್ರತಿಭೆಯನ್ನು ಗಮನಿಸಿದ್ದ ಪ್ರತಿಷ್ಟಿತ ಕಂಪನಿಯೊಂದು ಆಕೆಗೆ ಉದ್ಯೋಗವನ್ನು ನೀಡಿತ್ತು. ಉದ್ಯೋಗ ಖಾತ್ರಿಯ ಪತ್ರವನ್ನೋದುತ್ತಿದ್ದ ಅಪ್ಪನಿಗೆ ಹೆಮ್ಮೆಯಿಂದ ಕೊರಳುಬ್ಬಿದ ಅನುಭವ. ಸಂತಸದ ಹಿಂದೆಯೇ ಅಮ್ಮನದ್ದೊಂದು ಸಣ್ಣ ಎಚ್ಚರಿಕೆ,’ಈಗ ಕೇವಲ ಐಸ್ ಕ್ರೀಮ್ ತಿಂದು ಸಂಭ್ರಮಿಸೋಣ ಮಗಳೇ, ನೀನು ಇನ್ನಷ್ಟು ಶ್ರಮಪಡು. ಹೆಚ್ಚು ಹೆಚ್ಚು ಏಕಾಗ್ರತೆಯಿಂದ ಓದು. ಕಡಿಮೆಯೆಂದರೂ ತೊಂಬತ್ತೈದು ಪ್ರತಿಶತ ಅಂಕಗಳನ್ನು ನೀನು ಗಳಿಸಬೇಕು. ನಿನ್ನ ಅಂಕಗಳನ್ನು, ಪ್ರತಿಭೆಯನ್ನು ನೋಡಿ ಕಂಪನಿ ನಿನಗೆ ಒಂದೇ ವರ್ಷದಲ್ಲಿ ಡಬ್ಬಲ್ ಪ್ರಮೋಷನ್ ಕೊಟ್ಟು ಬಿಡಬೇಕು. ಹಾಗೆ ಅಭ್ಯಾಸದಲ್ಲಿ ನಿನ್ನನ್ನು ನೀನು ತೊಡಗಿಸಿಕೊ ಮಗಳೇ, ಓದುವುದೊಂದೇ ನಿನ್ನ ಗುರಿಯಾಗಬೇಕು ಈಗ. ಇದು ಕಷ್ಟಪಡುವ ಕಾಲ. ಮುಂದೆ ಭವಿಷ್ಯದಲ್ಲಿ ನೀನು ಸಾಧನೆಯ ಶಿಖರದೆತ್ತರಕ್ಕೆ ನಿಂತಾಗ ಈಗ ಪಟ್ಟ ಶ್ರಮವೂ ನಿನಗೆ ಸಿಹಿಯಾದ ಅನುಭವವಾಗಿ ಭಾಸವಾಗುತ್ತದೆ ಮಗು. ಈಗ ಕೇವಲ ಓದುವುದೊಂದೇ ನಿನ್ನ ಗಮ್ಯ, ಶ್ರಮಪಡು ಅಷ್ಟೇ’ ಎನ್ನುವ ಅಮ್ಮನ ಮಾತುಗಳನ್ನು ಕೇಳಿದ ಅನಿತಾಳ ಮುಖದಲ್ಲಿ ಭಾವಹೀನ ಶುಷ್ಕನಗೆಯೊಂದು ಮೂಡಿದ್ದನ್ನು ಆಕೆಯ ಸಾಧನೆಯನ್ನು ಆಸ್ವಾಧಿಸುವ ಸಂಭ್ರಮದಲ್ಲಿದ್ದ ಪೋಷಕರು ಗಮನಿಸಲೇ ಇಲ್ಲ. ಮತ್ತಷ್ಟು ಓದು »

11
ಸೆಪ್ಟೆಂ

ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ

ದಿನ – 25:
ಪ್ರೀತಿಲತಾ ವಡ್ಡೆದಾರ್
– ರಾಮಚಂದ್ರ ಹೆಗಡೆ

downloadಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಸಿಡಿದೆದ್ದು ಕ್ರಾಂತಿ ಚಟುವಟಿಕೆ ನಡೆಸಿ ಆತ್ಮಾರ್ಪಣೆಗೈದ ಬಂಗಾಳದ ಮೊದಲ ಮಹಿಳಾ ಬಲಿದಾನಿ ಪ್ರೀತಿಲತಾ ವಡ್ಡೆದಾರ್. ಚಿತ್ತಗಾಂಗ್ ನ ಪಹರ್ತಳಿಯ ಯೂರೋಪಿಯನ್ ಕ್ಲಬ್ ನಲ್ಲಿ ಹಾಕಲಾಗಿದ್ದ ‘ನಾಯಿಗಳಿಗೆ ಮತ್ತು ಭಾರತೀಯರಿಗೆ ಇಲ್ಲಿ ಪ್ರವೇಶವಿಲ್ಲ’ ಎಂಬ ಅವಮಾನಕರ ಬೋರ್ಡ್ ಕಂಡು ಸಿಡಿದುಬಿದ್ದ ಈ ಬೆಂಕಿಚೆಂಡಿನಂತ ಹೆಣ್ಣುಮಗಳು ಕ್ರಾಂತಿಕಾರಿಗಳ ದಂಡಿನೊಂದಿಗೆ ಕ್ಲಬ್ ಗೆ ನುಗ್ಗಿ ಬ್ರಿಟಿಷರ ಎದೆನಡುಗಿಸಿ ಪ್ರತ್ಯುತ್ತರ ನೀಡಿದವಳು. ಪ್ರಸ್ತುತ ಬಾಂಗ್ಲಾದೇಶ ದಲ್ಲಿರುವ ಚಿತ್ತಗಾಂಗ್ ನಲ್ಲಿ ಹುಟ್ಟಿದ ಪ್ರೀತಿಲತಾ ಎಳವೆಯಿಂದಲೇ ದೇಶಭಕ್ತರ ಕುರಿತು ಕೇಳುತ್ತಾ ಬೆಳೆದವಳು. ಝಾನ್ಸಿ ರಾಣಿ ಲಕ್ಷ್ಮಿಬಾಯಿಯ ಕುರಿತು ಓದುತ್ತಾ ಅವಳ ಜೀವನ ಮತ್ತು ಹೋರಾಟದಿಂದ ಪ್ರಭಾವಿತಳಾದ ಪ್ರೀತಿಲತಾ ತಾನೂ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡು ಬ್ರಿಟಿಷರನ್ನು ಭಾರತದಿಂದ ಓಡಿಸುವ ಕನಸು ಕಂಡಿದ್ದಳು. ಪ್ರೀತಿಲತಾ ತತ್ತ್ವಶಾಸ್ತ್ರ ದಲ್ಲಿ ಸ್ನಾತಕೋತ್ತರ ಪದವಿ ಪಡೆದರೂ ಕಲ್ಕತ್ತಾ ವಿಶ್ವವಿದ್ಯಾಲಯದ ಬ್ರಿಟಿಷ್ ಆಡಳಿತ ಅವಳ ಪದವಿಯನ್ನು ತಡೆಹಿಡಿಯಿತು. ಮತ್ತಷ್ಟು ಓದು »