ವಿಷಯದ ವಿವರಗಳಿಗೆ ದಾಟಿರಿ

Posts from the ‘ಇತಿಹಾಸ’ Category

3
ಫೆಬ್ರ

ಪ್ರಪಾತ……ವಿಮಾನಯಾನ ಬಲುಪ್ರಾಚಿನ….!!!

 – ಫಿಲ್ಮಿ ಪವನ್

ವಿಮಾನ ಎಂದರೆ ಏನೋ ಅಚ್ಚರಿ, ರಾಮಾಯಣದಲ್ಲಿ ಪುಷ್ಪಕ ವಿಮಾನ ಇತ್ತಂತೆ. ಕಾಡಿಂದ ಸೀತೆಯನ್ನು ಅದರಲ್ಲೇ ರಾವಣ ಎತ್ಕೊಂದೋಗಿದ್ದಂತೆ. ಇವೆಲ್ಲ ಕೇಳ್ದಾಗ ನಮ್ಮೋರು ವಿದೆಶಿಯರಿಗಿಂತ ಮುಂಚೆಯೇ ವಿಮಾನ ಕಂಡುಹಿಡಿದಿದ್ರ ಅಂತ ಡೌಟ್ ಬರೋದು ಸಾಮಾನ್ಯ. ಇಂತಹ ಡೌಟ್ clear ಮಾಡೋ ಸಿನಿಮ ನೋಡೋ ಅವಕಾಶ ಈ ನಡುವೆ ಒದಗಿ ಬಂದಿತ್ತು.

ಹೋದವಾರ ಗಣರಾಜ್ಯೋತ್ಸವದ ಪ್ರಯುಕ್ತ ನಮ್ ಕಂಪನಿ ರಜೆ ಇತ್ತು. ಏನು ಮಾಡೋದು ಅಂತ ಯೋಚಿಸುತ್ತಿರುವಾಗಲೇ ನಮ್ಮ ನೆಂಟರೋಬ್ರು ಫೋನ್ ಮಾಡಿ, ಅವರು ಅಬಿನಯಿಸಿರೋ ಚಿತ್ರದ ಉಚಿತ ಪ್ರದರ್ಶನ ಇದೆ ಬಾ ಅಂತ ಕರೆದರು. ಬಿಟ್ಟಿಯಾಗಿ ಆಗೋಹಾಗಿದ್ರೆ 100 ರು ಕೆಲಸಕ್ಕೆ ಇನ್ನೂರು ರು ಖರ್ಚು ಮಾಡಕ್ಕು ತಯಾರು ಅಲ್ವೇ ನಾವು, ಸರಿ ಸರ್ ಬರ್ತೀನಿ ಅಡ್ರೆಸ್ ಕೊಡಿ ಅಂದೆ. ಸೀತ ಸರ್ಕಲ್ ಹತ್ರ ಯೋಗಶ್ರಿ ಆಶ್ರಮ ಸಿನಿಮ ಹೆಸರು ಪ್ರಪಾತ ಅಂದ್ರು. ನನಗೆ ಆ ಸಿನಿಮ ಬಗ್ಗೆ ಮೊದಲೇ ಸ್ವಲ್ಪ ಗೊತ್ತಿತ್ತು. ಥಿಯೇಟರ್ ಅಲ್ಲಿ ರಿಲೀಸ್ ಆಗಲಿ ಅಂತ ಕಾಯ್ತಿದ್ದೆ, ಆದ್ರೆ ಅಲ್ಲಿ ಹೋಗಿ ನೋಡಿದಾಗಲೇ ತಿಳಿದಿದ್ದು ಇದು ಪ್ರಪಾತದ ನೂರ ಎರಡನೇ ಶೋ ಅಂತ. ಅಷ್ಟು ಕಡೆ ಅದು ಸ್ಕ್ರೀನಿಂಗ್ ಆಗಿದೆ ಆದರೆ ಥಿಯೇಟರ್ ಅಲ್ಲಿ ರಿಲೀಸ್ ಆಗೋ ಯೋಗ ಮಾತ್ರ ಬಂದಿಲ್ಲ ಯಾಕೆ ಅಂತ ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕರೇ ಹೇಳ್ಬೇಕು. ಚಿತ್ರದ ನಿರ್ದೇಶಕ ಕನ್ನಡದ ಕಿರುತೆರೆ ಹಿರಿತೆರೆ ಮತ್ತು ಆಕಾಶವಾಣಿಗೆ ಬಹಳಷ್ಟು ಕೊಡುಗೆ ನಿದಿರುವಂತಹ ವಜ್ರ ಖಂಟದ ಶ್ರೀ ಸುಚೇಂದ್ರ ಪ್ರಸಾದರು. ಆ ದಿನ ಅಲ್ಲಿ ಪ್ರದರ್ಶನ ಹಮ್ಮಿಕೊಂದಿದ್ದವರು ಪ್ರೇರಣ ಟ್ರಸ್ಟ್ ಎಂಬ NGO ಅವರು ಬಡವರಿಗೆ ಉಚಿತ ಡಯಾಲಿಸಿಸ್ ಮಾಡಿಸುವ ಉತ್ತಮ ಕಾರ್ಯಕ್ಕೆ ಕೈ ಹಾಕಿದ್ದಾರೆ. ಮತ್ತಷ್ಟು ಓದು »

2
ಫೆಬ್ರ

ಏನ್ ಗುರು ರಾಜಕೀಯನಾ?

-ಅಶ್ವಿನ್ ಎಸ್ ಅಮೀನ್

ಇತ್ತೀಚೆಗೆ ಬನವಾಸಿ ಬಳಗದವರು ನಡೆಸುತ್ತಿರುವ  ‘ಏನ್ ಗುರು’ ಎಂಬ ಬ್ಲಾಗ್ ನಲ್ಲಿ ಪ್ರಕಟವಾದ ‘RSS ಕಣ್ಣಲ್ಲಿ ಭಾಷಾ ನೀತಿ, ಒಕ್ಕೂಟ ಮತ್ತು ಸಮಾಜ’ ಎಂಬ ಲೇಖನವನ್ನು ಓದಿದೆ. ಲೇಖಕರ ಮಾತುಗಳು ಏಕಮುಖಿಯಾಗಿವೆಯೇನೋ ಎನಿಸಿ ಈ ಪ್ರತಿಕ್ರಿಯೆಯನ್ನು ದಾಖಲಿಸುತ್ತಿದ್ದೇನೆ.

ಲೇಖನ ಆರಂಭದಲ್ಲಿ ಅರೆಸ್ಸಿಸಿನ ಧನಾತ್ಮಕ ಅಂಶಗಳ ಕುರಿತು ಲೇಖಕರು ಗಮನ ಸೆಳೆಯುತ್ತಾರೆ. ಆದರೆ ಒಂದು ಕಡೆ ನೆರೆ ಬರ ಹಾಗು ಇತರ ವಿಕೋಪಗಳ ಸಂದರ್ಭದಲ್ಲಿ ಜಾತಿ ಮತ ಲೆಕ್ಕಿಸದೆ ಜನತೆಯ ಸಹಾಯಕ್ಕೆ ಧಾವಿಸುವ ಆರೆಸ್ಸೆಸ್ ನ ಬಗ್ಗೆ ಹೊಗಳುವ ಲೇಖಕರು ಮತ್ತೊಂದು ಕಡೆ ಪ್ರಾಂತೀಯ ವಿರೋಧದ ಬಗ್ಗೆ ಮಾತನಾಡುತ್ತಾರೆ.! ಪ್ರಾಂತೀಯ ಹಾಗು ವೈವಿಧ್ಯತಾ ವಿರೋಧವಿದ್ದರೆ ಆರೆಸ್ಸೆಸ್ ದೇಶದ ಯಾವದೇ ಭಾಗದಲ್ಲಿ ಉಂಟಾಗುವ ವಿಕೋಪಗಳ ಸಂದರ್ಭದಲ್ಲಿ ನೆರವಿಗೆ ಧಾವಿಸುತ್ತಿತ್ತೆ..?!

ಆರೆಸ್ಸೆಸಿನ ಪೂಜನೀಯ ಗುರುಗಳಾದ ಮಾಧವ ಸದಾಶಿವ ಗೋಳವಾಲ್ಕರ್ ಗುರೂಜಿಯವರ ‘ಚಿಂತನ ಗಂಗಾ’ ಪುಸ್ತಕವನ್ನಾಧರಿಸಿ ಆ ಲೇಖನವನ್ನು ಬರೆಯಲಾಗಿದೆ. ಆ ಸಮಗ್ರ ಗ್ರಂಥವನ್ನು ಲೇಖಕರು ಓದಿರುವುದು ಸಂತೋಷದಾಯಕ. ಆದರೆ ಅದನ್ನು ಸರಿಯಾಗಿ ಅರ್ಥೈಸುವಲ್ಲಿ ಎಡವಿದ್ದಾರೆ ಎಂಬುದೇ ವಿಪರ್ಯಾಸ.! ಮತ್ತಷ್ಟು ಓದು »

30
ಜನ

ಸಂಸ್ಕೃತಿ ಸಂಕಥನ – 20 – ಬುದ್ಧನನ್ನು ಹೈಜಾಕ್ ಮಾಡಿದ ಪ್ರೊಟೆಸ್ಟಾಂಟರು

-ರಮಾನಂದ ಐನಕೈ

ಎಲ್ಲರಿಗೂ ಅಚ್ಚರಿಯಾಗಬಹುದು. ಪ್ರೊಟೆಸ್ಟಾಂಟರು ಹೇಗೆ ಮತ್ತು ಏಕೆ ಬುದ್ಧಿಸಂನ್ನು ಹೈಜಾಕ್ ಮಾಡಿದರು ಎಂಬುದು. ಇಲ್ಲಿ ಹೈಜಾಕ್ ಅಂದರೆ ಅಪಹರಣ ಎಂಬ ಅರ್ಥವಲ್ಲ. ಪ್ರೊಟೆ ಸ್ಟಾಂಟರು ಬುದ್ಧಿಸಂನ್ನು ಹೇಗೆ ತಮ್ಮ ಸಮರ್ಥನೆ ಗಾಗಿ ಬಳಸಿಕೊಂಡರು ಎಂಬುದು. ಇದರ ಹಿಂದೆ ಸ್ವತಃ ಭಾರತೀಯರಿಗೆ ಅರ್ಥವಾಗದ ಹಲವು ರಹಸ್ಯಗಳಿವೆ. ಈ ರಹಸ್ಯಗಳನ್ನು ಬಾಲಗಂಗಾಧರರು ಸ್ವಾರಸ್ಯವಾಗಿ ಭೇದಿಸುತ್ತಾರೆ.

ಸಮಕಾಲೀನ ಭಾರತೀಯ ಚಿಂತಕರಿಗೆ ಬುದ್ಧಿಸಂ ಕುರಿತಾಗಿ ಒಂದು ಪೂರ್ವಗ್ರಹಿತ ಅಭಿ ಪ್ರಾಯಗಳಿವೆ. ಬುದ್ಧಿಸಂ ಮಾನವೀಯತೆಗಾಗಿ ಹೋರಾಡುತ್ತಿದೆ. ಇದು ಸಮಾಜದಲ್ಲಿನ ಅನಿಷ್ಟ ವನ್ನು ವಿರೋಧಿಸಿದೆ. ಯಜ್ಞಯಾಗಾದಿಗಳನ್ನು ಧಿಕ್ಕರಿಸಿದೆ. ಪ್ರಾಣಿ ಬಲಿ ವಿರೋಧಿಸಿ ಅಹಿಂಸಾ ತತ್ವ ಮೆರೆದಿದೆ. ಈ ಮೂಲಕ ಹಿಂದೂ ಯಿಸಂನ್ನು ವಿರೋಧಿಸಿದೆ. ಭಾರತದ ಜಾತಿ ವ್ಯವಸ್ಥೆಯನ್ನು ವಿಮರ್ಶಿಸಿದೆ. ಇಲ್ಲಿನ ವರ್ಣಾ ಶ್ರಮವನ್ನು ವಿರೋಧಿಸಿದೆ. ಇಲ್ಲಿನ ಪುರೋಹಿತ ಶಾಹಿಯನ್ನು ಹಾಗೂ ಬ್ರಾಹ್ಮಣರನ್ನು ವಿರೋಧಿಸಿದೆ. ಹಾಗಾಗಿ ಇದೊಂದು ವಿಶ್ವಮಾನ್ಯವಾದ ರಿಲಿಜನ್. ಬುದ್ಧಿಸಂ ಸಮಾಜದಲ್ಲಿನ ತರತಮ ವನ್ನು ಸಹಿಸುವುದಿಲ್ಲ. ಮನುಷ್ಯರ ಏಳ್ಗೆಗಾಗಿ ಹಂಬಲಿಸುತ್ತದೆ ಇತ್ಯಾದಿ. ಈ ಕಾರಣಕ್ಕಾಗೆ ನಮ್ಮ ದೇಶದ ದಲಿತ ಚಿಂತಕರೆಲ್ಲ ಬುದ್ಧಿಸಂ ಕಡೆಗೆ ಆಕರ್ಷಿತರಾದರು. ಅಂಬೇಡ್ಕರರು ಕೂಡ ಬುದ್ಧಿಸಂಗೆ ಮತಾಂತರ ಹೊಂದಿದ್ದು ಈ ಆಕರ್ಷಣೆಯಿಂದ. ನಿಜವಾಗಿಯೂ ಇದು ನಿಜವೆ? ಭಾರತೀಯ ಸಂಸ್ಕೃತಿಯೊಂದಿಗೆ ಬುದ್ಧಿಸಂ ವಿರೋಧವಾಗಿಯೇ ನಡೆದುಕೊಂಡು ಬಂದಿ ದೆಯೇ? ನಿಜವಾಗಿಯೂ ಬುದ್ಧ ವರ್ಣಾಶ್ರಮ ದಿಂದ ಹೊರಗುಳಿದು ವರ್ಣಾಶ್ರಮ ಪದ್ಧತಿಯನ್ನು ವಿರೋಧಿಸಿದನೇ? ಈಗ ನಾವು ವಿಸ್ಮೃತಿಯಿಂದ ಸ್ಮೃತಿಗೆ ಬರಬೇಕಾಗಿದೆ.

ಮತ್ತಷ್ಟು ಓದು »

20
ಜನ

ಮಿಡ್ನಾಪುರದಲ್ಲಿ ಕ್ರಾಂತಿಯ ಕಲರವ…

– ಭೀಮಸೇನ್ ಪುರೋಹಿತ್

ಬಂಗಾಳದ ತೋಟದಿಂದ, ತಾಯಿ ಭಾರತಿಗೆ ಪೂಜಿತಗೊಂಡ ಕ್ರಾಂತಿಯ ಹೂವುಗಳು ಅಸಂಖ್ಯ,ಅಂಥಾ ಒಬ್ಬ ಯುವಕನ ಸ್ಮರಣೆ ಇದು.

ಮಿಡ್ನಾಪುರ ಅನ್ನೋದು ಬಂಗಾಳದ ಒಂದು ಜಿಲ್ಲೆ. “ಅನುಶೀಲನ ಸಮಿತಿ”ಯ ಪ್ರಭಾವದಿಂದ ಅನೇಕ ಯುವಕ ಕ್ರಾಂತಿಕಾರಿಗಳು ಅಲ್ಲಿ ಬೆಳೆದಿದ್ರು..ಮಿಡ್ನಾಪುರದಲ್ಲಿ ಇದ್ದ ಆಂಗ್ಲ ಅಧಿಕಾರಿಗಳು ಅತಿಕ್ರೂರತನದಿಂದ ಆಳ್ವಿಕೆ ನಡೆಸ್ತಿದ್ರು.

ಅಲ್ಲಿನ ಮ್ಯಾಜಿಸ್ಟ್ರೇಟ್ ಗಳಂತೂ, ಕ್ರಾಂತಿಕಾರಿಗಳ ಮೇಲೆ ಕೇಸುಗಳನ್ನ ಹಾಕಿ, ವಿವಿಧ ಶಿಕ್ಷೆಗಳನ್ನ ವಿಧಿಸ್ತಿದ್ರು.ಹೀಗಾಗಿಯೇ, ಮಿಡ್ನಾಪುರದ ಯುವಕರು ಆಲ್ಲಿನ ಬ್ರಿಟಿಷರಿಗೆ ಒಂದು ಬಿಸಿ ಮುಟ್ಟಿಸಿದರು. ತಮ್ಮ ಜಿಲ್ಲೆಗೆ ಒಬ್ಬ ಭಾರತೀಯನನ್ನು ಮ್ಯಾಜಿಸ್ಟ್ರೇಟ್ ಮಾಡೋ ವರೆಗೂ, ಉಳಿದ ಆಂಗ್ಲ ಮ್ಯಾಜಿಸ್ಟ್ರೇಟ್ ಗಳನ್ನ ಕೊಲ್ತಿವಿ ಅಂತ..ಬ್ರಿಟಿಷರು ಇದನ್ನು ಅಷ್ಟೊಂದು ಪರಿಗಣಿಸಲಿಲ್ಲ.

ಆಗ ಅಲ್ಲಿಗೆ ‘ಜೇಮ್ಸ್ ಪ್ಯಾಡಿ’ ಅನ್ನೋನು ಮ್ಯಾಜಿಸ್ಟ್ರೇಟ್ ಆಗಿ ಬಂದ. ಪ್ರತಿಜ್ಞೆ ಮಾಡಿದ್ದ ಕ್ರಾಂತಿಕಾರಿಗಳು, ಅದೊಂದು ಸಮಾರಂಭದಲ್ಲಿ, ಅತಿಥಿಯಾಗಿ ಬಂದಿದ್ದ ಅವನನ್ನು ಗುಂಡು ಹಾರಿಸಿ ಕೊಂದೇ ಬಿಟ್ಟರು. ಬ್ರಿಟಿಷರು ಕಲ್ಕತ್ತೆಯಿಂದ ವೈದ್ಯರನ್ನು ಕರೆಸಿದರು. ವೈದ್ಯರು ಪ್ಯಾಡಿ ಯಾ ದೇಹದಿಂದ ಗುಂಡುಗಳನ್ನು ಹೊರತೆಗೆದರೂ, ಅವನನ್ನು ಬದುಕಿಸಲಾಗಲಿಲ್ಲ.. ಯುವಕರ ನಿಲುವು ಸ್ಪಷ್ಟವಾಗಿತ್ತು. ಆಂಗ್ಲರು ಈಗ ಸ್ವಲ್ಪ ಚಿನ್ತಿಸಲಾರಮ್ಭಿಸಿದರು..

ಆನಂತರ ‘ಡಾಗ್ಲಾಸ್’ ಎಂಬ ಆಂಗ್ಲನನ್ನು ಮತ್ತೆ ಮ್ಯಾಜಿಸ್ಟ್ರೇಟ್ ಆಗಿ ನಿಯೋಜಿಸಿದರು.. ಆತ ಮೊದಲಿಂದಲೂ ಹೆದರಿದ್ದ.ಅದೊಮ್ಮೆ “ಡಿಸ್ಟ್ರಿಕ್ಟ್ ಬೋರ್ಡ್” ನ ಸಭೆ ಇತ್ತು. ಸಂಜೆಯವರೆಗೂ ಶಾಂತಿಯುತವಾಗಿಯೇ ಇತ್ತು. ಆದರೆ ಗಂಟೆ ೫ ಆಗುತ್ತಿದ್ದಂತೆ ಇಬ್ರು ಯುವಕರು, ‘ಡಾಗ್ಲಾಸ್’ ನ ಹತ್ರ ಬಂದ್ರು. ನೋಡುನೋಡುತ್ತಲೇ ಆ ಆಂಗ್ಲನ ಮೇಲೆ ಗುಂಡು ಹಾರಿಸಲಾಯಿತು..ಆ ಅಧಿಕಾರಿ ಧರೆಗುರುಳಿದ.

ಮತ್ತಷ್ಟು ಓದು »

19
ಜನ

ಸ್ವಾಮಿ ವಿವೇಕಾನಂದರೊಳಗಿನ ’ಮನುಷ್ಯ’ ಮತ್ತು ಮನುಷ್ಯನೊಳಗಿನ ’ಅವಿವೇಕ’

– ರಾಕೇಶ್ ಶೆಟ್ಟಿ

ಓದು,ಅನುಭವ ಮತ್ತು ವಯಸ್ಸು,ಮನುಷ್ಯನನ್ನ ಮಾಗಿಸುತ್ತದೆ ಅನ್ನುತ್ತಾರೆ,ಆದರೆ ಕೆಲವರ ಪಾಲಿಗೆ ಓದು,ಅನುಭವದ ಜೊತೆಗೆ ವಯಸ್ಸು ಬಾಗಿಸುತ್ತದೆ ದೇಹ ಮತ್ತೆ ತಲೆ ಎರಡನ್ನೂ…! ಅಂತವರ ವಿಷಯ ಪಕ್ಕಕ್ಕಿರಲಿ….ವಿವೇಕಾನಂದರ ವಿಷಯಕ್ಕೆ ಬರೋಣ…

ಸರ್ವಧರ್ಮ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಹೊರಟಿದ್ದ ಸ್ವಾಮಿ ವಿವೇಕಾನಂದರು ಜಪಾನ್ ಮೂಲಕ ಸಾಗುವಾಗ ಅಲ್ಲಿನ ನಗರ ವೀಕ್ಷಣೆಯ ನಂತರ ತಮ್ಮ ಮದರಾಸಿ ಶಿಷ್ಯರಿಗೆ ಬರೆದ ಪತ್ರದ ಸಾಲುಗಳಿವು.ಈ ಪತ್ರದ ಕೆಲವು ಸಾಲುಗಳು ಇಂದಿಗೂ ನಮ್ಮ ನಡುವಿನ ತಲೆ ಕೆಟ್ಟ ಸಮಸ್ಯೆಗಳ ಅರಿವಿದ್ದೆ ಅವರು ಅಂದೇ ಹೇಳಿದ್ದರೇನೋ ಅನ್ನುವಂತಿವೆ.

“ಜಪಾನೀಯರ ಪಾಲಿಗಂತೂ ಭಾರತವೆಂದರೆ ಇನ್ನೂ ಎಲ್ಲ ಶ್ರೇಷ್ಠ-ಉನ್ನತ ವಿಚಾರಗಳ ಸ್ವಪ್ನ ಲೋಕವೇ ಆಗಿದೆ.ಆದರೆ ನೀವು?ನೀವೆಂಥವರು?… ಜೀವನವಿಡೀ ಕಾಡು ಹರಟೆಯಲ್ಲೇ ಮುಳುಗಿರುವವರು.ಕೇವಲ ಹರಟೆ ಮಲ್ಲರು.ಇನ್ನೆಂಥವರು ನೀವು? ಬನ್ನಿ ಇಲ್ಲಿಗೆ.ಈ ಜನರನ್ನು ನೋಡಿ ಬಳಿಕ ನಾಚಿಕೆಯಿಂದ ಮುಖ ಮುಚ್ಚಿ ಕುಳಿತುಕೊಳ್ಳಿ.

ಸಮುದ್ರ ದಾಟಿದರೆ ನಿಮ್ಮ ಜಾತಿ ಕೆಟ್ಟು ಹೋಗುತ್ತದಲ್ಲವೇ…!? ಬುದ್ದಿ ಕೆಟ್ಟ ಅರಳು ಮರಳು ಜನಾಂಗ…! ಶತಶತಮಾನಗಳಿಂದಲೂ ಮೂಢನಂಬಿಕೆ-ಕಂದಾಚಾರಗಳ ಕಂತೆಗಳನ್ನೇ ತಲೆಯ ಮೇಲೆ ಹೊತ್ತು ಕುಳಿತಿರುವವರು…!

ಈ ಆಹಾರವನ್ನು ಮುಟ್ಟಬಹುದೇ? ಆ ಆಹಾರವನ್ನು ಮುಟ್ಟಬಹುದೇ? ಎಂಬ ಬಹಳ ದೊಡ್ಡ ವಿಮರ್ಶೆಯಲ್ಲಿ ನೂರಾರು ವರ್ಷಗಳಿಂದ ಮುಳುಗಿದ್ದೀರಲ್ಲಾ-ಎಂಥ ಮನುಷರು ನೀವೆಲ್ಲ!

ಮತ್ತಷ್ಟು ಓದು »

13
ಜನ

‘ಚಿತ್ತಗಾಂಗ್’ನಲ್ಲಿ ಸ್ವಾತಂತ್ರ್ಯ’ಸೂರ್ಯ’ನ ಉದಯ…!

– ಭೀಮಸೇನ್ ಪುರೋಹಿತ್

‘ಚಿತ್ತಗಾಂಗ್’ ಅನ್ನೋ ಹೆಸರು ಕೇಳಿದರೆ ಸಾಕು, ಸ್ವಾತಂತ್ರ್ಯ ಇತಿಹಾಸವನ್ನು ಓದಿದ ಪ್ರತಿಯೊಬ್ಬರಿಗೂ ಮೈನವಿರೇಳುತ್ತದೆ. ಅಂಥಾ ಚಮತ್ಕಾರ ನಡೆದ ಸ್ಥಳ ಅದು. ಕ್ರಾಂತಿಕಾರಿಗಳ, ದೇಶಪ್ರೇಮಿಗಳ ಪುಣ್ಯಕ್ಷೇತ್ರವದು.ಆದರೆ, ದೇಶ ವಿಭಜನೆಯಾದ ಮೇಲೆ, ಈಗ ಈ ಜಾಗ ‘ಬಾಂಗ್ಲಾದೇಶ’ದಲ್ಲಿದೆ..

ಅವನ ಹೆಸರು ‘ಸೂರ್ಯಸೇನ್’. ವೃತ್ತಿಯಿಂದ ಶಿಕ್ಷಕ.. ಎಲ್ಲ ವಿದ್ಯಾರ್ಥಿಗಳ ಪ್ರೀತಿಯ ‘ಮಾಸ್ಟರ್ ದಾ’.ಹುಟ್ಟಿದ್ದು ನೌಪರ ಎಂಬ ಗ್ರಾಮದಲ್ಲಿ, 1894 ರಲ್ಲಿ…ಅದಾಗಲೇ, ಬಂಗಾಳದ ಪ್ರಸಿದ್ಧ ಸಂಘಟನೆಗಳಾದ ‘ಅನುಶೀಲನ ಸಮಿತಿ’ ಮತ್ತು ‘ಜುಗಾಂತರ’ ದಿಂದ ಪ್ರಭಾವಿತನಾಗಿದ್ದ..

ಭಾರತದ ಸ್ವಾತಂತ್ರ್ಯ, ಚಿತ್ತಗಾಂಗ್ ಗ್ರಾಮದಿಂದಲೇ ಪ್ರಾರಂಭವಾಗಬೇಕೆಂಬ ಮಹತ್ವಾಕಾಂಕ್ಷೆ ಹೊದಿದ್ದ.. ಅದಕ್ಕಾಗಿ ಮಾಸ್ಟರ್ ದಾ, ಸಂಘಟನೆಯನ್ನೂ ಶುರು ಮಾಡಿದ್ರು.. ಶಿಕ್ಷಕರಾಗಿದ್ದರಿಂದ ಸಂಘಟನೆ ಮಾಡೋದು ಅಷ್ಟೇನೂ ಕಷ್ಟ ಆಗ್ಲಿಲ್ಲ. ಶಾಲೆಯಲ್ಲಿನ, ಕೇವಲ 14-15 ವರ್ಷದೊಳಗಿನ ಪುಟ್ಟ ವಿದ್ಯಾರ್ಥಿಗಳೂ ಸೂರ್ಯಸೇನನ ಜೊತೆ ಸಹಕರಿಸಲು ಮುಂದೆ ಬಂದ್ರು..

ಮತ್ತಷ್ಟು ಓದು »

9
ಜನ

ಸಂಸ್ಕೃತಿ ಸಂಕಥನ – 17 ಜಾತಿ, ರಿಲಿಜನ್ ಹಾಗೂ ಸೆಕ್ಯುಲರಿಸಂ ಭಗವದ್ಗೀತೆ ವಿವಾದ

-ರಮಾನಂದ ಐನಕೈ

ಕೇವಲ ಭಗವದ್ಗೀತೆ ಮಾತ್ರವಲ್ಲ, ಇತ್ತೀಚಿನ ದಿನಗಳಲ್ಲಿ ಭಾರತೀಯ ಸಂಸ್ಕೃತಿ ಹಾಗೂ ಸಂಪ್ರ ದಾಯಗಳಿಗೆ ಸಂಬಂಧಪಟ್ಟಂತೆ ಅನೇಕ ಸಂಗತಿ ಗಳು ವಿವಾದಕ್ಕೆ ಕಾರಣವಾಗುತ್ತಿವೆ. ಹಾಗೂ ಇವೆಲ್ಲ ರಾಜಕೀಯ ಸ್ವರೂಪ ಪಡೆದು ಸೆಕ್ಯುಲರ್ ಪ್ರಭುತ್ವ ಸಂದಿಗ್ಧದಲ್ಲಿ ಸಿಲುಕುವಂತಾಗುತ್ತಿದೆ. ಹಾಗಾದರೆ ಈ ದೇಶದಲ್ಲಿ ಏನು ನಡೆಯುತ್ತಿದೆ?

ಭಗವದ್ಗೀತೆ ವಿವಾದಕ್ಕೆ ಸಂಬಂಧಪಟ್ಟಂತೆ ಪತ್ರಿಕೆಗಳಲ್ಲಿ ದಿನನಿತ್ಯ ಹೇಳಿಕೆಗಳು ಬರುತ್ತಲಿವೆ. ಈ ಕುರಿತು ಒಂದು ಅಭಿಪ್ರಾಯ ರೂಪಿಸುವ ಪ್ರಯತ್ನ ನಡೆಯುತ್ತಿದೆ. ಅಂದರೆ ಭಾರತೀಯ ಸಂಸ್ಕೃತಿಯ ಕುರಿತಾದ ಪರಸ್ಪರ ತಪ್ಪು ತಿಳುವಳಿಕೆ ಗಾಗಿ ಭಗವದ್ಗೀತೆಯನ್ನು ಬಹಿರಂಗವಾಗಿ ಹರಾಜಿಗೆ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಗೀತೆಯಿಂದ ಶೂದ್ರರಿಗೆ ಹಾಗೂ ದಲಿತರಿಗೆ ಭಾರೀ ಅಪಾಯವಿದೆ ಎಂದು ಭಯ ಹುಟ್ಟಿಸಲು ಪ್ರಯತ್ನಿ ಸುತ್ತಿದ್ದಾರೆ. ಇಲ್ಲಿ ಒಂದನ್ನು ಗಮನಿಸಬೇಕು. ಇವೆಲ್ಲ ಸಾಮಾನ್ಯ ಜನರ ಅಥವಾ ಸಮೂಹದ ಅಭಿಪ್ರಾಯಗಳಲ್ಲ. ಆಯಾ ಸಮುದಾಯದ ವಕ್ತಾರರು ಅಥವಾ ಚಿಂತಕರೆನಿಸಿಕೊಂಡವರು ಮಾಧ್ಯಮಗಳ ಮೂಲಕ ಈ ರೀತಿ ಧರ್ಮಯುದ್ಧ ಮಾಡುತ್ತಿದ್ದಾರೆ. ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಎಂಬಂತಾಗಿದೆ ಪರಿಸ್ಥಿತಿ. ಈ ಪರಿ ಅರೆಬರೆ ಚಿಂತಕರನ್ನು ನೋಡಿದರೆ ಒಂದು ದಿನ ದೇವರ ವಿಗ್ರಹಗಳನ್ನು ಕಿತ್ತು ಕೈಯಲ್ಲಿ ಆಯುಧ ವಾಗಿ ಹಿಡಿದು ಹೊಡೆದುಕೊಂಡರೆ ಅಚ್ಚರಿಯೇ ನಿಲ್ಲ.

ಈ ಪರಿಸ್ಥಿತಿಗೆ ಮುಖ್ಯ ಕಾರಣವೆಂದರೆ ಭಾರತೀಯ ಸಂಸ್ಕೃತಿಯನ್ನು ರಿಲಿಜನ್ ಎಂದು ವ್ಯಾಖ್ಯಾನಿಸಿಕೊಳ್ಳುತ್ತಿರುವುದು. ಯುರೋಪಿ ಯನ್ನರು ಇಡೀ ಭಾರತೀಯ ಸಂಸ್ಕೃತಿಯನ್ನು ಸೇರಿಸಿ ಹಿಂದೂಯಿಸಂ ಎಂದು ಕರೆದು ಅದಕ್ಕೆ ರಿಲಿ ಜನ್ನಿನ ಲಕ್ಷಣ ಸೇರಿಸಲು ಪ್ರಯತ್ನಿಸಿದರು. ಆದ್ದರಿಂದಲೇ ನಾವಿಂದು ಹಿಂದೂಯಿಸಂ ಅಂದರೆ ಇಸ್ಲಾಂ ಹಾಗೂ ಕ್ರಿಶ್ಚಿಯಾನಿಟಿ ಇದ್ದಹಾಗೆ ಒಂದು ಅಖಂಡವಾದ ರಿಲಿಜನ್ ಎಂದು ತಿಳಿದುಕೊಂಡಿ ದ್ದೇವೆ. ಹಾಗಾಗಿ ಹಿಂದೂ ಸಂಪ್ರದಾಯಗಳನ್ನೆಲ್ಲ ರಿಲೀಜಿಯಸ್ ಚಟುವಟಿಕೆಯೆಂಬಂತೆ ಅತ್ಯಂತ ಗುಮಾನಿಯಿಂದ ನೋಡಲಾಗುತ್ತದೆ. ರಿಲಿಜೀ ಯಸ್ ಚಟುವಟಿಕೆಗಳ ಸಾರ್ವಜನೀಕರಣವನ್ನು ಸೆಕ್ಯುಲರ್ ನೀತಿ ಒಪ್ಪುವುದಿಲ್ಲ. ಅದಕ್ಕಾಗಿ ಎಡ ಪಂಥೀಯ ಚಿಂತಕರಿಗೆ ಇಂಥ ಸಾಂಪ್ರದಾಯಿಕ ಆಚರಣೆಗಳೆಲ್ಲ ನಿಷಿದ್ಧ ಹಾಗೂ ಮೌಢ್ಯ.

ಮತ್ತಷ್ಟು ಓದು »

28
ಡಿಸೆ

“ಯೂನಿವರ್ಸಲ್ ಬ್ರದರ್‌ಹುಡ್” ಬರೀ ಬೂಟಾಟಿಕೆಯೇ ?

-ಸಾಗರ್ ಮೈಸೂರು

ಸ್ವಾಮೀ,
ಯಾಕೆ ಮುಗ್ಧ ಜನರ ತಲೆಯಲ್ಲಿ ವಿಷದ ಬೀಜ ಬಿತ್ತುತ್ತಿದ್ದೀರಿ? ನೀಮಗೂ ಭಯೋತ್ಪಾದಕರನ್ನು ಹುಟ್ಟು ಹಾಕುವ ಮುಲ್ಲಾ ಗಳಿಗೂ ಅಥವಾ ಭಾಷಾ ದುರಭಿಮಾನಿಗಳಿಗೂ ಏನು ವ್ಯತ್ಯಾಸ? ಸಾಮರಸ್ಯದಿಂದ ಬದುಕುವ ಬಗೆ ಹೇಗೆಂದು ತಿಳಿದಿದ್ದರೆ ಬರೆಯಿರಿ. ಇಲ್ಲಾಂದ್ರೆ ಸುಮ್ಮನಿರಿ. ನಿಮ್ಮನ್ತವರನ್ತು ಬರೆದು , ಬೆಂಕಿ ಹಚ್ಚಿ ತಣ್ಣಗೆ ಕುಳಿತು ಚಂದ ನೋಡುತ್ತಿರಿ. ಅಮಾಯಕರು ನಿಮ್ಮಿಂದ ಪ್ರೇರಿತರಾಗಿ ಯಾರದೋ ಮೈಮೇಲೆ ಬಿದ್ದು ಸಮಾಜದ ಶಾಂತಿ ಕದದುತ್ತಾರೆ ಅಥವಾ ಜೀವ ಬಿಡುತ್ತಾರೆ. ದುರಭಿಮಾನ, ಭಯೋತ್ಪಾದನೆ ಹುಟ್ಟುವುದು ಮೊದಲು ಮನಸ್ಸಿನಲ್ಲಿ. ಪ್ರೇರಿತರದವರು ಕೆಲವರು ಚಾಕು ಬಳಸುತ್ತಾರೆ, ಕೆಲವರು ಬಾಂಬು ಹಾಕುತ್ತಾರೆ, ಅವರವರ ಯೋಗ್ಯತೆಗೆ ತಕ್ಕಂತೆ. ನಿಮ್ಮಂಥವರು ಚಂದ ನೋಡುತ್ತೀರಿ.
“ಬೆಂಗಳೂರಿನ ಜುಟ್ಟು ಈಗಾಗಲೇ ರೆಡ್ಡಿಗಳ ಕೈಯ್ಯಿಗೆ ಕೊಟ್ಟಾಗಿದೆ” ಎಂದು ಮಹಾನ್ ಮೇಧಾವಿಯೊಬ್ಬರು (ಹಾಗೆಂದು ತಿಳಿದ) ಹೇಳಿದಾಗ ಅದ್ಯಾವನೋ ‘ವಿಷ್ಣು’ ಎಂಬುವವ ನೀಡಿದ್ದ ‘ಪ್ರತಿಕ್ರಿಯೆ’ ಅದು! ಹೌದಾ?! ಅದು ನಿಜಾನಾ? ನಮ್ಮ ಬೆಂಗಳೂರನ್ನ ನಿಜವಾಗಿಯೂ ‘ಅನ್ಯರು’, ‘ಕನ್ನಡೇತರರು’ ಆಳುತ್ತಿದ್ದಾರಾ ಎಂಬ ಪ್ರಶ್ನೆಯನ್ನ ನಮಗೆ ನಾವೇ ಹಾಕಿಕೊಂಡು serious ಆಗಿ ‘ಪರೀಕ್ಷಿಸಲು’ ಹೊರಟರೆ ಆ ‘ವಿಷ್ಣು’ ಎಂಬುವವನ ‘ಅಡ್ರಸ್ಸ್ ಹುಡುಕು’ವ ಮನಸ್ಸಾಗುತ್ತದೆ! ಅವನಿಗೊಂದು ವಿಶೇಷವಾದ ‘ದೊಣ್ಣೆ’ ರೆಡಿಮಾಡಿಸುವ ಕನಸು ಮೂಡುತ್ತದೆ!! ಆ ಮೇಧಾವಿ ಎಂಬ ಪತ್ರಕರ್ತ ಯಾವಾಗ ನೋಡಿದರೂ ‘ಭಾರತ’, ‘ಭಾರತೀಯತೆ’ ಎಂದು ಕಿರುಚಾಡುವವ. ಅಂಥವನೇ “ಪರಭಾಷಿಕರನ್ನ ಮಟ್ಟ ಹಾಕದಿದ್ದರೆ ಅಪಾಯ ತಪ್ಪಿದ್ದಲ್ಲ” ಎಂಬ ಸತ್ಯವನ್ನ ಕಂಡುಕೊಂಡಿದ್ದಾನೆ ಎಂದರೆ, ಅದರ ಮಹತ್ವವನ್ನ ನೀವೇ ಅರ್ಥಮಾಡಿಕೊಳ್ಳಿ.

ಮತ್ತಷ್ಟು ಓದು »

26
ಡಿಸೆ

ನನ್ನ ಬದುಕು ಪರಿವರ್ತಿಸಿದ ಬಂಗಾರಪ್ಪ

-ಬನವಾಸಿ ಸೋಮಶೇಖರ್, ಮಂಗಳೂರು
“1992 ನೇ ಇಸ್ವಿ.ನಾನು ಆಗಷ್ಟೇ ಎಸ್.ಎಸ್.ಎಲ್.ಸಿ.ಪರೀಕ್ಷೆ ಬರೆದು ಮುಗಿಸಿದ್ದೆ.ಫಲಿತಾಂಶ ಇನ್ನೂ ಬಂದಿರಲಿಲ್ಲ.ಅತ್ಯಂತ ಕಡು ಬಡತನದ ಕುಟುಂಬ ನಮ್ಮದು.ಒಂದು ಹೊತ್ತಿನ ತುತ್ತಿಗೂ ತತ್ವಾರ ಪಡುವಂತ ದಯನೀಯ ಮತ್ತು ಶೋಚನೀಯ ಸ್ಥಿತಿ.ತಂದೆ ನಾ ಮಗುವಾಗಿರುವಾಗಲೇ ಗತಿಸಿದ್ದರು.ಮೂರು ಜನ ಅಣ್ಣಂದಿರು, ಒಬ್ಬಳು ಸಹೋದರಿ.ದೊಡ್ಡಣ್ಣ 10-11ರ ಪ್ರಾಯದಲ್ಲಿಯೇ ಮನೆ ಬಿಟ್ಟು ಹೋದವನು ನಾಪತ್ತೆಯಾಗಿದ್ದ.ಅಮ್ಮ ಅವನಿಗಾಗಿ ಹುಡುಕಾಡಿ ಹುಡುಕಾಡಿ ಹೈರಾಣಾಗಿದ್ದರು.ಉಳಿದ ಇಬ್ಬರು ಅಣ್ಣಂದಿರಲ್ಲಿ ಒಬ್ಬ ಮಾತ್ರ ಅತ್ಯಂತ ಶ್ರಮಜೀವಿ.ಇಬ್ಬರೂ ಕೂಲಿ ಕೆಲಸ ಮಾಡಿ ತುತ್ತಿನ ಚೀಲ ತುಂಬಿಸುತ್ತಿದ್ದರು. ಅನ್ನಕ್ಕಾಗಿ ಹಾತೊರೆಯುವ ಪರಿಸ್ಥಿತಿ ಅದಾಗಿತ್ತು. ಅದಕ್ಕಾಗಿ ಒಮ್ಮೊಮ್ಮೆ ಅಕ್ಕ,ಅಣ್ಣಂದಿರೊಂದಿಗೆ ಜಗಳವಾಡಿದ್ದು ಇಂದಿಗೂ ನೆನಪಿದೆ. ಕೊನೆಯ ಮಗನಾದ ನನ್ನನ್ನು ಓದಿಸಬೇಕೆಂಬುದು ಅಮ್ಮನ ಮಹದಾಸೆ ಅಣ್ಣಂದಿರ ಹಿರಿಯಾಸೆಯಾಗಿತ್ತು.
ನಾನಾದರೋ ಮನೆಯ ದೈನ್ಯೇಸಿ ಸ್ಥಿತಿಯನ್ನು ನೋಡಿ ಮನೆ ಬಿಟ್ಟು ಹೋಗಿ ಏನಾದರೂ ಕೆಲಸ ಮಾಡಿ ಮನೆಗೆ ಆಸರೆಯೊದಗಿಸಬೇಕೆಂದು ಹಾತೊರೆದು ಮನೆ ತೊರೆದು ಬೆಂಗಳೂರಿನತ್ತ ಮುಖ ಮಾಡಿಯೇ ಬಿಟ್ಟಿದ್ದೆ. ಕೈಯಲ್ಲಿ  ಸಂಗ್ರಹಿಸಿಟ್ಟಿದ್ದ ಇಪ್ಪತ್ತು ರೂಪಾಯಿ ಇತ್ತಷ್ಟೇ.ಯಾವ್ಯಾವುದೋ ಬಸ್ ಹತ್ತಿ ನಿರ್ವಾಹಕನ ಕಣ್ ತಪ್ಪಿಸಿ ಟಿಕೇಟು ತೆಗೆಸದೇ ಬೆಂಗಳೂರಿಗೆ ಬಂದಿಳಿದಿದ್ದೆ.ಆಗ ನಾಡಿನ ದೊರೆಯಾಗಿದ್ದವರೇ ನಮ್ಮ ಸಾರೆಕೊಪ್ಪ ಬಂಗಾರಪ್ಪನವರು.ಅವರು ನಮ್ಮ ಪಕ್ಕದ ತಾಲೂಕಿನವರಾಗಿದ್ದರಿಂದಲೂ ನಮ್ಮೂರಲ್ಲಿ ಅವರ ಬಗ್ಗೆ ಅಪಾರ ಜನಪ್ರೀಯತೆ ಇದ್ದುದರಿಂದಲೂ ಅವರಲ್ಲಿಗೆ ಹೋಗಿ ಏನಾದರೂ ಸಹಾಯ ಪಡೆದು ಬೆಂಗಳೂರಲ್ಲಿ ಕೆಲಸ ಮಾಡಬಹುದೆಂದು ಯೋಚಿಸಿ ಸೊರಬದವನೆಂದು ಸುಳ್ಳು ಹೇಳಿ ಮುಖ್ಯಮಂತ್ರಿಗಳ ಗೃಹ ಕಛೇರಿಯನ್ನು ಹರಸಾಹಸ ಮಾಡಿ ಪ್ರವೇಶಿಸಿದ್ದೆ.ಸಾವಿರಾರು ಸಾರ್ವಜನಿಕರು ಅಹವಾಲು ಸಲ್ಲಿಸಲು ಸರತಿಯಲ್ಲಿ ನಿಂತು ಕಾಯುತ್ತಿದ್ದರು.ನಾನೂ ಹಾಗೆಯೇ ಮಾಡಿದೆ. ಮತ್ತಷ್ಟು ಓದು »
22
ಡಿಸೆ

ಪುನರ್ಜನ್ಮ ಪರಿಕಲ್ಪನೆಯ ಕುರಿತು ಆಸಕ್ತಿ ಇರುವವರು ಓದಲೇ ಬೇಕಾದ ಪುಸ್ತಕ

– ಗೋವಿಂದ ರಾವ್ ವಿ ಅಡಮನೆ

ನಾನೀಗ ಶಿಫಾರಸ್ಸು ಮಾಡುತ್ತಿರುವುದು ಒಂದು ಇಂಗ್ಲಿಷ್ ಪುಸ್ತಕ. ಈ ಪುಸ್ತಕ ೧೯೫೦ ರಲ್ಲಿ ಪ್ರಕಟವಾದ ಪುಸ್ತಕವಾದರೂ ಜನಪ್ರಿಯತೆ ಇನ್ನೂ ಕುಗ್ಗಿಲ್ಲ. ಅದರ ವಿಷಯವೇ ಅಂಥದ್ದು. ಪುನರ್ಜನ್ಮ ಕ್ಕೆ ಸಂಬಂಧಿಸಿದಂತೆ ನಿಮ್ಮದೇ ಆದ ಅಭಿಪ್ರಾಯ ರೂಪಿಸಿಕೊಳ್ಳಲು ನೆರವು ನೀಡಬಲ್ಲ ಪುಸ್ತಕ ಇದು. ನಾನು ಇದನ್ನು ಖರೀದಿಸಿದ್ದು ೧೯೮೨ ರಲ್ಲಿ. ನನ್ನ ಬ್ಲಾಗ್ : ‘ಮಾಡಿದ್ದುಣ್ಣೋ ಮಹಾರಾಯ’- ಒಂದು ವಿಶ್ಲೇಷಣೆ ಬರೆಯಲು ನೆರವು ನೀಡಿದ ಪುಸ್ತಕ ಇದು. ಯಾವುದೇ ವಿಷಯವನ್ನು ಮನೋಗತ ಮಾಡಿಕೊಳ್ಳ ಬೇಕಾದರೆ ಆ ವಿಷಯದ ಮೂಲ ಆಕರವನ್ನೇ ನೋಡು ಎಂಬುದು ನನ್ನ ಅಧ್ಯಾಪಕರು ನನಗೆ ಕಲಿಸಿದ ಅಮೂಲ್ಯ ಪಾಠಗಳಲ್ಲಿ ಒಂದು. ಪುನರ್ಜನ್ಮ ಕುರಿತಾದ ಕುತೂಹಲಜನಕ ಉದಾಹರಣೆಗಳು ಈ ಪುಸ್ತಕದಲ್ಲಿವೆ.  ಎಂದೇ, ಈ ವಿಷಯದಲ್ಲಿ ಆಸಕ್ತಿ ಇರುವವರು ನೀವಾಗಿದ್ದರೆ ಈ ಪುಸ್ತಕ ಓದುವುದು ಒಳಿತು ಎಂಬುದು ನನ್ನ ಸಲಹೆ.

ಪುಸ್ತಕದ ಹೆಸರು: Many Manisions – “The Edgar Cayce Story On Reincarnation”. ಬರೆದವರು: Gina Cerminaria [ಗಿನಾ ಸರ್ಮಿನಾರಾ (ಏಪ್ರಿಲ್ ೧೯೧೪ – ಏಪ್ರಿಲ್ ೧೯೮೪). ಮನೋವಿಜ್ಙಾನದಲ್ಲಿ Ph.D ಪದವೀಧರೆ. ವಿಷಯದ ಕುರಿತು ಸುದೀರ್ಘ ಕಾಲ ಸಂಶೋಧನೆ ಮಾಡಿದ ಬಳಿಕ ಪ್ರಕಟಿಸಿದ ಪುಸ್ತಕ ಇದು.] ಪ್ರಕಾಶನ: A Signet Bool from New American Library.

ಮತ್ತಷ್ಟು ಓದು »