ವಿಷಯದ ವಿವರಗಳಿಗೆ ದಾಟಿರಿ

Posts from the ‘ಇತಿಹಾಸ’ Category

27
ಜೂನ್

ಜಾತಿ ವಿನಾಶವೋ? ಸಂಪ್ರದಾಯಗಳ ವಿನಾಶವೋ?

– ಸಂತೋಷ್ ಕುಮಾರ್ ಪಿ.ಕೆ, ಶಂಕರಘಟ್ಟ

ಇತ್ತೀಚೆಗೆ ಶಿವಮೊಗ್ಗದಲ್ಲಿ ಜಾತಿ ವಿನಾಶ ಸಮಾವೇಶವೊಂದು ಜರುಗುತ್ತಿರುವುದು ಒಳ್ಳೆಯ ಸುದ್ದಿ. ಸಮಾಜದಲ್ಲಿರುವ ಅನ್ಯಾಯ ಶೋಷಣೆಗಳನ್ನು ಹೋಗಲಾಡಿಸಲು ಚಳುವಳಿಗಳು, ಸಮಾವೇಶಗಳು ಯಾವ ಸ್ವರೂಪದಲ್ಲಾದರೂ ನಡೆಯಲೇಬೆಕು. ಅದು ಭೌದ್ದಿಕ ಚಳುವಳಿಯಾಗಲಿ, ಸಾಮಾಜಿಕ ಚಳುವಳಿಯಾಗಲೀ ಎರಡೂ ಸಹ ಅಷ್ಟೇ ಪ್ರಮುಖವಾದವು. ಶಿವಮೊಗ್ಗದಲ್ಲಿ ನಡೆಯುತ್ತಿರುವ ಸಮಾವೇಶ ಜಾತಿಯನ್ನು ನಾಶಮಾಡಲು ಅಂತರಜಾತಿವಿವಾಹಿತರನ್ನು ಹಾಗೂ ಅದಕ್ಕೆ ಸಂಬಂಧಿಸಿದ ಸಮಾನ ಮನಸ್ಕರನ್ನು ಒಟ್ಟಿಗೆ ಸೇರಿಸುವ ಪ್ರಯತ್ನವನ್ನು ಮಾಡುತ್ತಿದೆ. ಅದರ ಜೊತೆ ಜೊತೆಗೆ ಭೌದ್ಧಿಕ ಚಳುವಳಿಯೂ ಸಹ ಆಗಿಂದಾಗ್ಗೆ ನಡೆಯುತ್ತಲೇ ಇದೆ. ಅಂತಹ ಚಳುವಳಿಯ ಕುರುಹಾಗಿ ಹಲವಾರು ಲೇಖನಗಳು ಮಾದ್ಯಮಗಳಲ್ಲಿ ಬರುತ್ತಿವೆ. ಹಾಗೆ ಬಂದಂತಹ ಒಂದು ಲೇಖನದ ವಿಮರ್ಶೆಯನ್ನು ಇಲ್ಲಿ ಮಾಡಲು ಪ್ರಯತ್ನಿಸಲಾಗುವುದು. ಇಂತಹ ಪ್ರಯತ್ನ ಏಕೆಂದರೆ ಕಳೆದ ೬೦, ೭೦ ವರ್ಷಗಳಿಂದಲೂ ಇಂತಹ ಚಳುವಳಿ ಸಮಾವೇಶ ನಡೆಯುತ್ತಿದ್ದರೂ ಜಾತಿ, ಶೋಷಣೆ, ಅನ್ಯಾಯ ದಿನೆದಿನೇ ಹೆಚ್ಚಾಗುತ್ತಿವೆ. ಕೇವಲ ಹಳೆಯ ಹಲಸಲು ವಿಚಾರಗಳನ್ನೇ ಪುನರಾವರ್ತಿಸುವ ಬದಲು ಸಮಸ್ಯೆ ಎಲ್ಲಿಂದ ಉಗಮವಾಗುತ್ತಿದೆ ಎಂಬುದನ್ನು ತುರ್ತಾಗಿ ಅರಿಯಬೇಕಾಗಿದೆ. ಆದ್ದರಿಂದ ಪ್ರಸಕ್ತ ಕಾಲಘಟ್ಟದಲ್ಲಿ ಇದುವರೆಗೂ ನಾವು ಕೇಳಿಕೊಂಡು ಬಂದಂತಹ ವಿಚಾರಗಳನ್ನು ಹಾಗೂ ಇಂದು ಹೇಳುತ್ತಿರು ವ ವಿಚಾರಗಳನ್ನು ಜೊತೆಗೆ ನಮ್ಮನ್ನು ನಾವೇ ಪುನರಾವಲೋಕಿಸುವ ಸಂದರ್ಭ ಇಂದು ನಮ್ಮ ಮುಂದಿದೆ.

ಎಸ್. ಕೆ ಭಗವಾನ್ ದಿನಾಂಕ 3 ಜೂನ್ 2011 ರಂದು ಪ್ರಜಾವಾಣಿಯಲ್ಲಿ  ಬರೆದ ಅವರ ಲೇಖನದ ಒಟ್ಟಾರೆ ವಾದ ಈ ರೀತಿಯಾಗಿತ್ತು,  ಜಾತಿಯನ್ನು ಇದುವರೆಗೂ ದೂರಿದ್ದು ಸಾಕು, ಇನ್ನು ಅದನ್ನು ನಾಶ ಮಾಡಲೇಬೇಕು. ಜಾತಿ ನಾಶವಾದರೆ ಹಲವಾರು ಸವಲತ್ತುಗಳು ಸಹ ಸುಮುದಾಯಗಳಿಗೆ ದೊರೆಯುತ್ತವೆ ಎಂದು ಲೇಖಕರು ಹೇಳುತ್ತಾರೆ. ಆದರೆ ಹಾಗೆ ಹೇಳುವ ಮುನ್ನ ಕೆಳಕಾಣಿಸಿರುವ ಪ್ರಶ್ನೆಗಳಿಗೆ ಯಾರಾದರೂ ಉತ್ತರಿಸಲೇಬೇಕು. ಮತ್ತಷ್ಟು ಓದು »

24
ಜೂನ್

ಜೀವನ ಬಂಡೆ ಕಲ್ಲಾ?

ಸುಬ್ರಹ್ಮಣ್ಯ ಬಿ ಎಸ್

ಇಂತಹದ್ದೊಂದು ಪ್ರಶ್ನೆ ಇಷ್ಟೊಂದು ಚಿಕ್ಕ ವಯಸ್ಸಿಗೆ ( ಹೌದ !!) ಉದ್ಭವಿಸಿದ್ದು ನನ್ನ ಮೊಬೈಲ್ ಗೆ ಸಂದೇಶವೊಂದು ಬಂದಾಗ…

ತಟ್ಟನೆ ಚುಟುಕಾಗಿ ಉತ್ತರಿಸಬೇಕಾದ ಪ್ರಶ್ನಾ ಸರಣಿ ಹೊತ್ತ ಸಂದೇಶ ನನ್ನ ಮೊಬೈಲ್ ಫೋನ್ಗೆ ಬಂತು. ನಿಯಮ ಇಷ್ಟೇ , ಪ್ರಶ್ನೆ ( ಸರಿಯಾಗಿ ಹೇಳಬೇಕೆಂದರೆ ಪದ ) ಓದಿದಾಗ ಮೊದಲಬಾರಿಗೆ ಅದೇನು ಹೊಳೆಯುತ್ತದೋ ಹೇಳಿ ಬಿಡಬೇಕಿತ್ತು.

ಮೊದಲನೆಯದು “ಪ್ರೀತಿ “- ಮನಸ್ಸಿನಲ್ಲಿ ಪಟ ಪಟ ಸದ್ದು ಮಾಡ್ತಾ ಜೋಡಿ ಹಕ್ಕಿಗಳು ಕಣ್ಮುಂದೆ ಬಂದ್ಬಿಡೋದೇ…? ಹೌದು ಇನ್ನೇನು , ಅಪ್ಪ ಅಮ್ಮಂದಿರ , ಸಂಸಾರ ,ಬಂಧುಬಳಗದ ವಿರೋಧ ಇಲ್ದಿದ್ರೆ ಪ್ರೀತಿ ಜೋಡಿ ಹಕ್ಕಿನೇ ತಾನೇ? ಸ್ವಚ್ಚಂದ ಆಗಸದಲ್ಲಿ ಪಟ ಪಟ ರೆಕ್ಕೆ ಬಿಚ್ಚಿ ಹಾರಿ ಇಬ್ಬರೇ ಕಾಲ ಕಳೀಬಹುದಲ್ವಾ?

ಎರಡನೆಯದು “ಜೀವನ” -ಅದ್ಯಾಕೋ ದೊಡ್ಡ ಬಂಡೆ ಕಲ್ಲುಗಳು ಕಣ್ಮುಂದೆ ಬರಬೇಕೆ? ಯಾಕೆ ಬಂತು? ನಾನೇನು ಬಂಡೆಕಲ್ಲುಗಳ ಕೆಲಸ ಮಾಡೋನಲ್ಲ.. ಚಿಕ್ಕ ಕಲ್ಲೆತ್ತಿ ಹೊಡೆದಿದ್ದೂ ಕಮ್ಮಿನೇ , ಮತ್ಯಾಕೆ? ಬಸ್ಸಿನೊಳಗೆ ಕುಳಿತ ನನಗೆ ಆ ರಾತ್ರಿಯ ಕತ್ತಲಲ್ಲಿ ಸುತ್ತ ಮುತ್ತ ಬಂಡೆಗಳೇನು ಕಾಣಿಸೋ ಹಾಗಿರಲಿಲ್ಲ..ಹಾಗಂತ ಜೀವನದಲ್ಲಿ ತುಂಬಾ ಕಷ್ಟ ಅನುಭವಿಸಿ ,ಜೀವಿಸಲು ಶ್ರಮಪಟ್ಟು ಜೀವನವೆಂದರೆ ಕಠಿಣ ಅನ್ನೋವಷ್ಟು ವಯಸ್ಸಾಗಲಿ ,ಸಾಧನೆಯಾಗಲಿ ಮಾಡಿಲ್ಲ. ಜುಜುಬಿ ಇಪ್ಪತ್ನಾಲ್ಕಕ್ಕೆ ಜೀವನ ಅಂದಾಗ ಬಂಡೆ ಕಲ್ಲು ಕಣ್ಣೆದುರಿಗೆ ಬಂದ್ರೆ ಸ್ವಲ್ಪ ಯೋಚನೆ ಮಾಡದಿದ್ದರೆ ಹೇಗೆ ? ಮತ್ತಷ್ಟು ಓದು »

23
ಜೂನ್

ರಾಜಕಾರಣದಲ್ಲಿ ಆಣೆ ಮತ್ತು ಆಣೆಯ ರಾಜಕಾರಣ

ಸಂತೋಷ್ ಕುಮಾರ್ ಪಿ.ಕೆ

ಇತ್ತೀಚಿನ ರಾಜಕಾರಣದ ಬೆಳವಣಿಗೆಯಲ್ಲಿ ಹೆಚ್.ಡಿ.ಕುಮಾರ ಸ್ವಾಮಿ ಹಾಗೂ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡ್ಯೂರಪ್ಪ ಇವರ ನಡುವೆ ಸಂಧಾನವೇರ್ಪಟ್ಟಿಲ್ಲ ಎಂಬುದನ್ನು ಸಾಬೀತುಪಡಿಸಲು ಧರ್ಮಸ್ಥಳದ ಮಂಜುನಾಥ ಕ್ಷೇತ್ರದಲ್ಲಿ ಆಣೆ ಮಾಡಲು ಸನ್ನದ್ದರಾಗಿರುವುದು ಬಹುಟೀಕೆಗೆ ಒಳಗಾಗಿದೆ. ಇದು ಮೇಲ್ನೋಟಕ್ಕೆ ಕೇವಲ ಆಣೆ ಪ್ರಮಾಣದ ಸಮಸ್ಯೆಯಂತೆ ಕಂಡರೂ ಸಹ ಆ ಸಮಸ್ಯೆಯ ಆಳ ಅಗಲ ನಾವು ಊಹಿಸಲು ಸಾಧ್ಯವಿರದ ಮಟ್ಟಿಗೆ ಇದೆ. ಬಹುತೇಕ ಚಿಂತಕರು, ಲೇಖಕರು ಹಾಗೂ ವಿದ್ವಾಂಸರನ್ನೊಳಗೊಂಡು ಆ ಆಣೆ ಮಾಡುವ ಪ್ರವೃತ್ತಿಯನ್ನು ಕಟುವಾಗಿ ಟೀಕಿಸುತ್ತಿದ್ದಾರೆ, ಇಲ್ಲಿ ಕೇವಲ ಆಣೆ ಪ್ರಮಾಣದ ವಿಚಾರವನ್ನುವಿವಮರ್ಶಿಸಿದರೆ ಒಂದೊ, ರಾಜಕಾರಣಿಗಳ ಮೇಲೆ ಕೋಪ ಮಾಡಿಕೊಳ್ಳಬೇಕಾಗುತ್ತದೆ, ಇಲ್ಲವೆ ಅಂತಹ ಪ್ರೃತ್ತಿಯೇ ಕೆಟ್ಟದೆಒಳ್ಳೆಯದೋ ಎಂಬ ನಿರಪಯುಕ್ತ ಚರ್ಚೆಯನ್ನು ಮಾಡಬೇಕಾಗುತ್ತದೆ. ಆದ್ದರಿಂದ ಆಣೆ ಮಾಡುವ ಪ್ರವೃತ್ತಿಯನ್ನು ಪ್ರಶ್ನೆಮಾಡುವ ನೆಪದಲ್ಲಿ ನಮ್ಮ ರಾಜ್ಯಾಂಗದ ಅಥವಾ ಸೆಕ್ಯುಲರಿಸಂ ಸಮಸ್ಯೆಯನ್ನು ಇಲ್ಲಿ ಚರ್ಚಿಸಲು ಪ್ರಯತ್ನಿಸುತ್ತೇನೆ. ಹಾಗಾಗಿ ಆಣೆ ಮಾಡುವುದರಲ್ಲಿ ತಪ್ಪೇನಿದೆ ಎಂಬುದನ್ನು ನೋಡುವಾ ಅಥವಾ ಆಣೆ ಮಾಡುವುದು ನಮಗೇಕೆ ತಪ್ಪಾಗಿ ಗೋಚರಿಸುತ್ತಿದೆ ಎಂಬುದನ್ನು ಅವಲೋಕಿಸುವ. ಮತ್ತಷ್ಟು ಓದು »

21
ಜೂನ್

“ಪ.ಗೋ. ಕಾಲಂ” ಜಗತ್ತಿನಲ್ಲಿ ಪತ್ರಕರ್ತನಿಗೊಂದು “ಸರ್ಟಿಫಿಕೇಟ್”

-ರವಿ ಮುರ್ನಾಡು

  ಪ.ಗೋ. ಜಗತ್ತಿನ ಪದಗಳ  ಹಂದರದಲ್ಲಿ ಒಬ್ಬ ” ವಿಲನ್‍” ಸೃಷ್ಠಿಯಾಗುತ್ತಾನೆ . ಅವನನ್ನು ಬುದ್ಧಿವಂತ ಹುಚ್ಚ ಅನ್ನುತ್ತೇವೆ. ಅದು ಕೊಡಿಯಾಲ್‍ ಬೈಲ್‍ ನವಭಾರತ ಪತ್ರಿಕೆಯಿದ್ದಾಗ ಪತ್ರಿಕಾ ಪ್ರಸರಣಾ ವಿಭಾಗದ ಮುಖ್ಯಸ್ಥ ಕಾಮತ್‍. ಅದಕ್ಕೆ ದಿವಂಗತ ಪ.ಗೋ.ರವರು “ಹಿತ್ತಾಳೆ ದೂರುಗಂಟೆ” ಅಂತ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ತಮ್ಮ ” ವಿಚಿತ್ರ ಸೃಷ್ಠಿಯ ಲೋಕದಲ್ಲಿ ಮತ್ತು ಅಂಕಣ ಬರಹಗಳು” ಸಂಕಲನದಲ್ಲಿ  ಹಿತ್ತಾಳೆ ದೂರುಗಂಟೆಯ ಪಾತ್ರಧಾರಿ  ವಿಲಕ್ಷಣವಾಗಿ ಎದ್ದು ನಿಲ್ಲುವಂತದ್ದು. ಹೀಗೂ ಉಂಟೆ…?! ಅನ್ನುವ ಒಂದು ಪ್ರಶ್ನೆ. ಪತ್ರಿಕಾ ಕಾರ್ಯಾಲಯದಲ್ಲಿ ಅಚಾನಕ್ಕಾಗಿ ಸೃಷ್ಠಿಯಾಗುತ್ತವೆ, ಇಲ್ಲದಿದ್ದರೆ ಸೃಷ್ಠಿಸುತ್ತಾರೆ . ಎಲ್ಲಾ  ಖಾಸಾಗಿ ಸಂಸ್ಥೆಯಲ್ಲಿ  ಇಂತಹ “ಶಕುನಿ”ಗೊಂದು ಹುದ್ದೆ ಉಂಟೇ ಉಂಟು. ಪ.ಗೋ.ರವರು ಮೌನವಾಗಿ ನವಭಾರತ ಕಚೇರಿ ಬಿಟ್ಟು ಹೋದಾಗ, ಕಚೇರಿಯ ಬಾಗಿಲಿಗೆ ತುಕ್ಕು ಹಿಡಿಯಬಾರದಿತ್ತೋ ಆನ್ನಿಸಿತು. ಬದುಕಿನ ಗೋಡೆ ಬಿರುಕಿಟ್ಟ ಸನ್ನಿವೇಶಕ್ಕೆ, ಪತ್ರಿಕಾ ಬದುಕಿಗೆ ಛೀಮಾರಿ ಹಾಕುವಷ್ಟು ವ್ಯಥೆಯಾಗುವಂತದ್ದು.

ಇವತ್ತಿಗೂ ಮಾತಾಡುತ್ತಿದೆ…. ಮನುಷ್ಯ ಬದುಕಿಗೆ  ಸವಾಲು ಹಾಕಿದ ಮಾತು.  “ನಾನು ಪತ್ರಿಕೆ ಹುಟ್ಟು ಹಾಕುವ ಕನಸು ಕಂಡಿದ್ದು ತಪ್ಪಾಯಿತು..!” ಅಂತ. ಬದುಕಿನ ಸ್ಥಿತ್ಯಂತರದಲ್ಲಿ ಒಮ್ಮೊಮ್ಮೆ ಕನಸುಗಳು ಈಟಿ ಇರಿದಂತೆ ಅಣಕಿಸುತ್ತವೆ. ಮಂಗಳೂರಿನ ಕಡಲ ಮರಳ ಕಣಗಳಿಗೆ ಇದರ ಪರಿಚಯ ಉಂಟು. ಅಲೆಗಳು ದಡಕ್ಕೆ ಬಡಿದು ಎಚ್ಚರಿಸಿ ಹೋಗುತ್ತಿವೆ… ಆ ಒಂದು ಜಗತ್ತಿನ ವಿಸ್ತಾರದಲ್ಲಿ ಜೀವನದ ಸಾರ್ಥಕ್ಯಕ್ಕೆ  ಮನಸ್ಸುಗಳು ತೆರೆದುಕೊಳ್ಳಲಿಲ್ಲ . ಪಡ್ಯಾನ ಗೋಪಾಲಕೃಷ್ಣರ  ರೆಕ್ಕೆ ಮುರಿದ ಮಾತುಗಳ ಹಕ್ಕಿಯ ಕಲರವ ಕೇಳಿಸುತ್ತಲೇ ಇದೆ…. ಕನಸುಗಳ ಮೂಟೆ ಹೊತ್ತ ದೋಣಿ ಕಡಲ ಮಧ್ಯದಲ್ಲಿ ಈಜುತ್ತಿದೆ….! ಮತ್ತಷ್ಟು ಓದು »

20
ಜೂನ್

ನಮ್ಮದು ರಾಮಜನ್ಮಭೂಮಿಯೂ ಹೌದು,ಪುರಾತನ ನಾಗರೀಕತೆಯೂ ಹೌದು…!

– ಕೆ.ಎಸ್ ರಾಘವೇಂದ್ರ ನಾವಡ

ಇದು ಬಹಳ ಆಸಕ್ತಿದಾಯಕವಾದ ಸಾಧಾರಸಹಿತವಾದ ಬರಹ. ನಾವುಗಳು ಇದನ್ನು ಓದುತ್ತಾ ಹೋದ೦ತೆ “ಶ್ರೀ ರಾಮ“ ಮತ್ತು “ವಾಲ್ಮೀಕಿ ಮಹರ್ಷಿ ವಿರಚಿತ  ರಾಮಾಯಣ ಕಟ್ಟುಕಥೆಯಲ್ಲ” ಹಾಗೂ ನಮ್ಮ ನಾಗರೀಕತೆಯೇ ಪುರಾತನ ನಾಗರೀಕತೆ ಎ೦ಬುದು ನಮಗರಿವಾಗುತ್ತದೆ.ಈ ಲೇಖನದಲ್ಲಿ ವೈಜ್ಞಾನಿಕವಾಗಿ ಅದನ್ನು ಸಾದರ ಪಡಿಸಲು ಪ್ರಯತ್ನಿಸಿದ್ದೇನೆ. ನಾಸಾದವರು ತಿಳಿಸಿದ೦ತೆ, ಶ್ರೀ ರಾಮ ಜನಿಸಿದ್ದನೇ? ಶ್ರೀ ರಾಮಾಯಣ ನಡೆದಿತ್ತೇ ಎನ್ನುವ ಪ್ರಶ್ನೆಗಳಿಗೆ ಈ ಲೇಖನ ಅತ್ಯುತ್ತಮ ಹಾಗೂ ನ೦ಬಲರ್ಹವಾದ ದಾಖಲೆ.

ಮಹರ್ಷಿ ವಾಲ್ಮೀಕಿಗಳು ಶ್ರೀರಾಮನು ಅಯೋಧ್ಯೆಯ ರಾಜನಾಗಿ ಪಟ್ಟಾಭಿಷೇಕದ ನ೦ತರ ಮೊದಲ ಬಾರಿಗೆ  ಶ್ರೀರಾಮಾಯಣವನ್ನು ಬರೆದರೆ೦ಬುದು ನಮಗೆ ತಿಳಿದ ವಿಷಯ.ಆದ್ದರಿ೦ದ ಇದೇ ಮೂಲ ರಾಮಾಯಣ.ಮಹರ್ಷಿ ವಾಲ್ಮೀಕಿಗಳು ಮಹಾ ಜ್ಯೋತಿಷಿಗಳಾಗಿದ್ದರು. ಅವರು ರಾಮಾಯಣದ ಮಹತ್ತರ ದಿನಗಳ ಬಗ್ಗೆ ಆ ದಿನಗಳಲ್ಲಿ ಗ್ರಹ ಹಾಗೂ ನಕ್ಷತ್ರಗಳು ಯಾವ ಯಾವ ಮನೆಗಳಲ್ಲಿದ್ದವು ಎ೦ಬುದರ ಸಮೇತ ವಿವರಿಸುತ್ತಾರೆ. ಪ್ರತಿ ದಿನವೂ ಗ್ರಹಗತಿಗಳು ಬದಲಾಗುತ್ತಿರುತ್ತವೆ ಎ೦ಬುದು ನಮಗೆ ವೇದ್ಯವಿರುವ ವಿಚಾರ.“ಪ್ಲಾನೆಟರಿಯಮ್“ ಎನ್ನುವ ಸಾಫ್ಟ್ ವೇರ್ ನಲ್ಲಿ ಮಹರ್ಷಿ ವಾಲ್ಮೀಕಿ  ಹೆಸರಿಸಿರುವ  ಗ್ರಹಗತಿಗಳನ್ನು ಬರೆಯುವುದರ ಮೂಲಕ ಅದಕ್ಕೆ ಸರಿಯಾದ ಆ೦ಗ್ಲ ವಾರ್ಷಿಕ ದಿನಗಳನ್ನು ಪಡೆಯಬಹುದು. ಇದನ್ನು ನಾಸಾದವರು ಸಿಧ್ಢಪಡಿಸಿದ್ದಾರೆ.

ಭಾರತೀಯ ಕ೦ದಾಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶ್ರೀ ಪುಷ್ಕರ್ ಭಟ್ನಾಗರ್ ಈ ಸಾಫ್ಟ್ ವೇರ್ ಅನ್ನು ಯು.ಎಸ್. ನಿ೦ದ ಪಡೆದುಕೊ೦ಡರು. ಇದನ್ನು ಸೂರ್ಯಗ್ರಹಣ, ಚ೦ದ್ರಗ್ರಹಣ ಹಾಗೂ ಭೂಮಿಯಿ೦ದ ಇತರೆ ಗ್ರಹಗಳಿರುವ ದೂರವನ್ನು ಲೆಕ್ಕ ಹಾಕಲು ಬಳಸುತ್ತಿದ್ದರು.ಭಟ್ನಾಗರ್ ಅವರು ಅದರಲ್ಲಿ ಮಹರ್ಷಿ ವಾಲ್ಮೀಕಿ ಬರೆದಿರುವ ಎಲ್ಲಾ ಗ್ರಹಗಳ ಮಾಹಿತಿಗಳನ್ನು ಆಯಾ ದಿನಗಳಿಗೆ ಸ೦ಬ೦ಧಿಸಿದ೦ತೆ ನೀಡಲಾಗಿ, ಅದರಿ೦ದ ಮಹತ್ತರವಾದ ಹಾಗೂ ಉತ್ತಮ ಫಲಿತಾ೦ಶವನ್ನು ಪಡೆದರು. ಬಹುತೇಕವಾಗಿ ಶ್ರೀ ರಾಮನ ಜನನದಿ೦ದ ಹಾಗೂ ಅವನು ವನವಾಸವನ್ನು ಪೂರೈಸಿ ಅಯೋಧ್ಯೆಗೆ ಮರಳಿ ಬರುವವರೆಗಿನ ಎಲ್ಲಾ ಮಾಹಿತಿಗಳನ್ನು ಆ೦ಗ್ಲ ವಾರ್ಷಿಕ ದಿನಾ೦ಕದ೦ತೆ ಪಡೆದರು.
ಮತ್ತಷ್ಟು ಓದು »

15
ಜೂನ್

ಕನ್ನಡ ನಾಡೆಂಬ ಕರುಣೆಯ ಬೀಡೂ, ರಾಬಿನ್ ಚುಗ್ ಎಂಬ ಅವಿವೇಕಿಯೂ

(ಇತ್ತೀಚೆಗೆ ಫೇಸ್ ಬುಕ್ ನಡೆಯಿತು ಎನ್ನಲಾದ ವಿವಾದ ಕುರಿತು ನಿಲುಮೆ ತಂಡದ ವಿಜಯ್ ಹೆರಗು ಅವರು ವಿವಾದಿತ ವ್ಯಕ್ತಿ ರಾಬಿನ್ ಚುಗ್ ರನ್ನು  ಸ್ವತಃ ಸಂಪರ್ಕಿಸಿ ಮಾತಾಡಿ ಅದರ ವಿವರಗಳನ್ನು ದಾಖಲಿಸಿದ ಲೇಖನವಿದು. -ನಿಲುಮೆ)

ಪ್ರಿಯ ಗೆಳೆಯರೇ,

                     “ರಾಬಿನ್ ಚುಗ್”, ಈಗ ಈ ಹೆಸರು ಅಂತರ್ಜಾಲ ಬಳಕೆದಾರರಿಗೆ ಅದರಲ್ಲೂ ಫೇಸ್ಬುಕ್  ಬಳಸುವ ಕನ್ನಡಿಗರಿಗೆ ಪರಿಚಿತ ಹೆಸರು. ಈತನ ಹೆಸರು ಕೇಳಿದೊಡನೆ ಕೆಲವರಲ್ಲಿ ರೋಷ ಉಕ್ಕಿಬರುತ್ತದೆ. ಕೈಗೆ ಸಿಕ್ಕರೆ ನಾಲ್ಕೇಟು ತದುಕಬೇಕು ಅಂತ ಹಲವರಿಗೆ ಆಸೆಯಿದೆ. ಸಮಾಜದಲ್ಲಿ ಹಲವಾರು ಜನ ತಮ್ಮ ಒಳ್ಳೆಯ ಕೆಲಸಗಳಿಗೆ, ಒಳ್ಳೆಯ ಮಾತುಗಳಿಗೆ ಪ್ರಚಾರ ಗಳಿಸಿದರೆ ಇನ್ನು ಕೆಲವರು ಕೆಟ್ಟ ಕೆಲಸಗಳು ಮತ್ತು ಕೆಟ್ಟ ಮಾತುಗಳಿಂದ ಪ್ರಚಾರ ಗಳಿಸುತ್ತಾರೆ. ಹೀಗೆ ತಾನು ಬಳಸಿದ ಕೆಟ್ಟ ಮಾತಿನಿಂದ ಕುಖ್ಯಾತಿ ಗಳಿಸಿದವನು ರಾಬಿನ್ ಚುಗ್.
               ಕೆಲವು ದಿನಗಳ ಹಿಂದೆ ಕನ್ನಡಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಯುತ ಮುಖ್ಯಮಂತ್ರಿ ಚಂದ್ರುರವರು ಕರ್ನಾಟಕ ಸರ್ಕಾರಕ್ಕೆ ಕಳುಹಿಸಿದ ೨೭ ಶಿಫಾರಸುಗಳಲ್ಲಿ  “ವಲಸಿಗರು ಒಂದು ವರ್ಷದ ಅವಧಿಯ ಒಳಗೆ ಕನ್ನಡ ಕಲಿಯಬೇಕು ಹಾಗೂ ಏಳನೇ ತರಗತಿ ಹಂತದ ಕನ್ನಡ ಪರೀಕ್ಷೆ ಪಾಸು ಮಾಡಬೇಕು” ಎಂಬುದು ಅತ್ಯಂತ ಪ್ರಮುಖವಾದ ಹಾಗೂ ವಿವಾದಾತ್ಮಕವಾದ ಶಿಫಾರಸು.
               ಈ  ಶಿಫಾರಸು ಎಷ್ಟರ ಮಟ್ಟಿಗೆ ಸೂಕ್ತ? ಇದರ ಸಾಧಕ-ಬಾಧಕಗಳೇನು? ಇದನ್ನು ಜಾರಿಗೊಳಿಸಲು ಸಾಧ್ಯವೇ? ಇದರಿಂದ ಕರ್ನಾಟಕದ ಹೊರಗೆ ನೆಲೆಸಿರುವ ಕನ್ನಡಿಗರು ಎದುರಿಸಬಹುದಾದ ಸವಾಲುಗಳೇನು? ಎಂಬೆಲ್ಲಾ ಪ್ರಶ್ನೆಗಳು ಕಣ್ಣ ಮುಂದೆ ನಿಲ್ಲುತ್ತವೆ.
                    ಇದನ್ನೆಲ್ಲಾ ಒತ್ತಟ್ಟಿಗಿಟ್ಟು ರಾಬಿನ್ ಚುಗ್ ಎಂಬ ಈ ರಾಜಾಸ್ಥಾನೀ ಯುವಕನ ಬಗ್ಗೆ ಮಾತನಾಡೋಣ. ವಿದ್ಯಾಭ್ಯಾಸದ ಸಲುವಾಗಿ ಸುಮಾರು ೫ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ತದನಂತರ ಇಲ್ಲಿನ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ‘ಬೆಂಗಳೂರ್ ಮಿರರ್’ ಎಂಬ ರದ್ದಿ ಪತ್ರಿಕೆಯೊಂದು ಕನ್ನಡಾಭಿವೃದ್ಧಿ ಪ್ರಾಧಿಕಾರದ ಈ ಶಿಫಾರಸ್ಸನ್ನು ವಲಸಿಗರನ್ನು ಪ್ರಚೋದಿಸುವ ರೀತಿಯಲ್ಲಿ ವರದಿ ಮಾಡಿ ವಲಸಿಗರಿಗೆ ಇನ್ನು ಬೆಂಗಳೂರಿನಲ್ಲಿ ಉಳಿಗಾಲವಿಲ್ಲ ಎಂಬಂತೆ ಬಿಂಬಿಸಿ ಸುದ್ದಿ ನೀಡಿತು. ಇದನ್ನು ತನ್ನ ಫೇಸ್ಬುಕ್ ಪ್ರೊಫೈಲಿನಲ್ಲಿ ಶೇರ್ ಮಾಡಿದ ರಾಬಿನ್ ಚುಗ್ “F**K OFF” ಎಂದು ಪ್ರತಿಕ್ರಿಯೆ ನೀಡಿದ. ಇದೇ ತರಹದ ಹಾಗೂ ಇದಕ್ಕಿಂತ ಕೆಳಮಟ್ಟದ ಪ್ರತಿಕ್ರಿಯೆಗಳು ಬೆಂಗಳೂರ್ ಮಿರರ್ ಪತ್ರಿಕೆಯ ಅಂತರ್ಜಾಲ ಆವೃತ್ತಿಯಲ್ಲಿದೆ. ಇದರ ಕೊಂಡಿ ಇಲ್ಲಿದೆ. ಮತ್ತಷ್ಟು ಓದು »
11
ಜೂನ್

ದೇಶಕ್ಕೋಸ್ಕರ ಹೋರಾಡುವವರ ಗತಿ ಇಷ್ಟೇ ಏನೋ..!!

– ಕೆ.ಎಸ್ ರಾಘವೇಂದ್ರ ನಾವಡ

ನೀವು ಏನಾದ್ರೂ ಹೇಳಿ… ದೇಶಕ್ಕೋಸ್ಕರ ಹೋರಾಡುವವರ ಗತಿ ಇಷ್ಟೇ.. ಅ೦ಥ ಮತ್ತೊಮ್ರ್ ಪ್ರೂವ್ ಆಗಿ ಹೋಗಿದೆ. ನಮ್ಮ ದೇಶದಲ್ಲಿ ಕೆಲವರ ಹಣೆಬರಹವನ್ನು ಸುಲಭವಾಗಿ ನಿರ್ಧರಿಸಬಹುದು.. ಹಿ೦ದೆ ಹಾವೇರಿಯಲ್ಲಿ ರೈತರ ಮುಷ್ಕರಕ್ಕೆ ಯಡಿಯೂರಪ್ಪ ಗೋಲಿಬಾರ್ ಗೆ ಆದೇಶ ನೀಡುವುದರ ಮೂಲಕ ಅದಕ್ಕೊ೦ದು ಗತಿ ಕಾಣಿಸಿದರು! ಇ೦ದು ರಾಮ್ ದೇವ್ ಹಣೆಬರಹವನ್ನು ಕೇ೦ದ್ರ ಸರ್ಕಾರ ಈ ರೀತಿ ಬರೆಯಿತು!! ಒಟ್ಟಾರೆ ನಾವು ಬ್ರಿಟೀಶ್ ಸತ್ತೆಯ ಕಾಲಕ್ಕೆ ಹೋಗುತ್ತಿದ್ದೇವೇನೋ ಎ೦ಬುದು ನನ್ನ ಸ೦ಶಯ!!

ಭರತ ಭೂಮಿಯಲ್ಲಿ  ಬ್ರಿಟೀಶ್ ಆಡಳಿತದಿ೦ದ ಮುಕ್ತರಾಗ ಬಯಸಿ ಸ್ವಾತ೦ತ್ರ್ಯದ ಕನಸು ಕ೦ಡು ಅದಕ್ಕಾಗಿ ಹೋರಾಡಿದವರು- ಶೋಷಿತ ವರ್ಗ – ತಮ್ಮ ಬೇಡಿಕೆಯನ್ನು ನ್ಯಾಯಬಧ್ಧವಾಗಿ ಕೇಳುವವರು- ಜನ ಕಲ್ಯಾಣಕ್ಕಾಗಿ ಹಾತೊರೆದು ಮುನ್ನುಗ್ಗುವವರು – ರಾಜಕೀಯ ವ್ಯವಸ್ಥೆಯನ್ನು ಸುಧಾರಿಸ ಬಯಸುವವರು ಮು೦ತಾದವರ ಹೋರಾಟದ ಅ೦ತ್ಯ ಹೀಗೇ!! ಸರಿ ಸುಮಾರು ಬ್ರಿಟೀಷರಿ೦ದ ಆರ೦ಭವಾದ ಈ ಪ್ರಜೆಗಳ ಧ್ವನಿಯನ್ನು  ಅವರುಗಳ ಗ೦ಟಲನ್ನೇ ಹಿಸುಕುವ ಮೂಲಕ ,ಅವರ ಹೋರಾಟಕ್ಕೊ೦ದು ಅನೈತಿಕ ಅ೦ತ್ಯ ನೀಡುವ ಈ ಕ್ರಮ ದುರದೃಷ್ಟವಶಾತ್ ಇಲ್ಲಿಯವರೆವಿಗೂ ಮು೦ದುವರೆದಿದೆ!! ಹಾಗ೦ತ ಎಲ್ಲ ಹೋರಾಟಗಳೂ ಇದೇ ಅ೦ತ್ಯವನ್ನು ಕ೦ಡವೇ ಎ೦ದರೆ ಖಚಿತವಾದ ಉತ್ತರ ನೀಡಲಿಕ್ಕಾಗುವುದಿಲ್ಲ.. “ಕೆಲವು ಸಮಸ್ಯೆಗಳು ತಾವಾಗೇ ಸೃಷ್ಟಿಯಾದರೆ ಕೆಲವನ್ನು ನಾವೇ ಸೃಷ್ಟಿಸಿಕೊಳ್ಳುತ್ತೇವೆ“ ಎ೦ಬ ನಾವಡ ಉವಾಚವೊ೦ದಿದೆ.. ಅದರ ಪ್ರಕಾರ ಪ್ರಸಕ್ತ ಭರತಭೂಮಿಯಲ್ಲಿಯೂ ಏಕೆ ಸಮಸ್ತ ಜಗತ್ತಿನಲ್ಲಿಯೂ  ಸರ್ಕಾರ ಗಳು ಹಾಗೂ ಜನತೆಗಳ ವಿಚಾರದಲ್ಲಿ ನಡೆಯುತ್ತಿರುವುದು ಇದೇ!!

ಮತ್ತಷ್ಟು ಓದು »

10
ಜೂನ್

ಅಂಥ ಕಳ್ಳರು ಸಂತೆಲೀ ಜೊತೆಯಾದರು…

– ವಿಜಯ್ ಹೆರಗು

ಭಾರತ ದೇಶದ ಪ್ರಜಾಪ್ರಭುತ್ವ ಸಂಕಷ್ಟದಲ್ಲಿದೆ. ಇಲ್ಲಿ ವಾಹನ ಚಲಾಯಿಸಲು ಪರವಾನಗಿ ಇಲ್ಲದಿದ್ದರೂ ಪರವಾಗಿಲ್ಲ, ಪೋಲಿಸಪ್ಪನ ಕೈಗೆ ನೂರರ ನೋಟು ತುರುಕಿ ಬಚಾವಾಗಬಹುದು. ಆದರೆ ಉಪವಾಸ ಸತ್ಯಾಗ್ರಹ ಮಾಡಲು ಅನುಮತಿ ಬೇಕು. ಇಲ್ಲದಿದ್ದರೆ ಹೆಂಗಸರು, ಮಕ್ಕಳೆಂಬ ಭೇದ ತೋರದೆ ಸದೆಬಡಿಯುತ್ತಾರೆ. ಸಾಮಾನ್ಯ ಜನರು ಏನೂ ಮಾಡಲಾಗದ ಹಂತ ತಲುಪಿದ್ದಾರೆ. ತಾವೇ ಆರಿಸಿಕಳಿಸಿದ ಮಂದಿ ತಮ್ಮ ಮೇಲೆ ದಬ್ಬಾಳಿಕೆ ಮಾಡುವುದನ್ನು ನೋಡುವ ಅಸಹಾಯಕ ಸ್ಥಿತಿ ಯಾವುದೇ ದೇಶದ ಜನರಿಗೂ ಬರಬಾರದು.

  ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಯು.ಪಿ.ಎ  ಸರ್ಕಾರ ಹಗರಣಗಳ ಮೇಲೆ ಹಗರಣಗಳನ್ನು ಸೃಷ್ಟಿಸುತ್ತಾ ಸಾಗಿದೆ. ಜನರು ಶಾಂತಿಯುತ ಪ್ರತಿಭಟನೆಗೆ ಮುಂದಾದರೆ ರಾತ್ರೋರಾತ್ರಿ ಪೋಲಿಸ್ ದಾಳಿಗಳಾಗುತ್ತವೆ. ಇದನ್ನು ಪ್ರಧಾನಿ ದುರದೃಷ್ಟಕರ ಎಂದರೆ ಅವರದೇ ಸಂಪುಟದ ಸಚಿವರು ಸಮರ್ಥಿಸಿಕೊಳ್ಳುತ್ತಾರೆ. ಇಂತಹ ಒಂದು ಸರ್ಕಾರವನ್ನು ಆರಿಸಿ ಕಳಿಸಿದ್ದು ನಮ್ಮ ದುರದೃಷ್ಟ ಎಂದೇ ಹೇಳಬೇಕು.
 ಇನ್ನು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಭಾಜಪ ಸರ್ಕಾರ ನಮ್ಮ ನಾಡು ಕಂಡ ಅತ್ಯಂತ ಭ್ರಷ್ಟ ಸರ್ಕಾರ ಎಂಬ ಹಣೆಪಟ್ಟಿ ಹೊಂದಿದೆ. ಇಲ್ಲಿ ಯಡಿಯೂರಪ್ಪನವರೇ ಸರ್ವಸ್ವ. ಅವರು ಹೇಳಿದ್ದಕ್ಕೆ ಎಲ್ಲರೂ ಅಸ್ತು ಎನ್ನಲೇಬೇಕು, ಇಲ್ಲದಿದ್ದರೆ ಅವರಿಗೆ ಉಳಿಗಾಲವಿಲ್ಲ. ತಮ್ಮ ಕುಯುಕ್ತಿಯಿಂದ ಹೈಕಮಾನ್ದನ್ನೇ ಅಲುಗಾಡಿಸಬಲ್ಲ ಶಕ್ತಿ ಯಡಿಯೂರಪ್ಪನವರಿಗಿದೆ. ಮತ್ತಷ್ಟು ಓದು »
7
ಜೂನ್

ಇಲ್ಲಿ ‘ನಿಮ್ಮ’ ಕಣ್ಣಿಗೆ ಸಣ್ಣವರಾದ ಸಾಮಾನ್ಯ ಜನರು ಇದ್ದರು…

ಡಾ.ಅಜಕ್ಕಳ ಗಿರೀಶ್

ರಾಮದೇವ್ ಬಗ್ಗೆ ಬೇಕಾದದ್ದು ಮಾತಾಡಲಿ. ಆದರೆ ಹಾಗೆ ಹಿಡನ್ ಅಜೆಂಡಾ, ಕೋಮುವಾದಿಗಳು ಇತ್ಯಾದಿ ಬೈಯುವಾಗ ಕೂಡ ಯಾರೊಬ್ಬರೂ ಗಮನಿಸದ ವಿಚಾರ ಅಂದರೆ, ಅವರನ್ನು ಬೇಂಬಲಿಸಿ ರಾಮಲೀಲ ಮೈದಾನಕ್ಕೆ ಗಂಟುಮೂಟೆ ಕಟ್ಟಿಕೊಂಡು ಹೋದ ಸಾವಿರಾರು ಜನರು ಇದ್ದಾರಲ್ಲ ಅವರು ಯಾವ ಸ್ವಾರ್ಥದಿಂದ ಹೋದರು? ನಿಜ , ಅಲ್ಲಿ ಕಡುಬಡವರು ಇದ್ದಿರಲಾರರು. ಆದರೆ,ಅಲ್ಲಿ ಇದ್ದವರು ನಿಜವಾದ ದೇಶಭಕ್ತರು. ದೇಶಭಕ್ತಿ ಅಂದರೆ ಏನು ಅಂತ ವಿವರಿಸುವುದು ಯಾವಾಗಲೂ ಕಷ್ಜ್ಟ. ಆದರೆ ಇಂದು ಬಹುಶಃ ದೇಶಭಕ್ತಿ ಅಂದರೆ ಏನು ಅಂತ ಯಾರಿಗಾದರೂ ಪಾಠ ಹೇಳಬೇಕಾದರೆ ನಾವು ಇದು ಅಂತ ತೋರಿಸಬಹುದುದು. ಬೇರೆ ಅಂಥ ಉದಾಹರಣೆಗಳು ಬಹಳ ಸಿಗಲಿಕ್ಕಿಲ್ಲ. ಊಟದ ಆಸೆಯಿಂದ ಸೇರಿದ್ದಾರೆ ಅನ್ನಲು ಅಲ್ಲಿ ಊಟವಿಲ್ಲ,ಉಪವಾಸ. ಹಣದ ಆಸೆಗೆ ಹೋದರೇ? ಅವರು ತಮ್ಮ ಸ್ವಂತ ಹಣದಿಂದ ಹೋದರು ,ಅಷ್ಟೇ ಅಲ್ಲ ,ಬಹುಶ ಬಹಳ ಜನ ಪೆಂಡಲ್ ಇತ್ಯಾದಿ ಖರ್ಚಿಗೆ ದೇಣಿಗೆ ಕೂಡ ಕೊಟ್ಟಿರಬಹುದು(ದೇವಸ್ತಾನಗಳಿಗೆ ನಮ್ಮ ಖರ್ಚಲ್ಲಿ ಹೋಗಿ ಕಾಣಿಕೆ ಹಾಕಿದಂತೆ.ದೇವಸ್ತಾನದಲ್ಲಿ ಪುಣ್ಯವಾದರೂ ಸಿಗುತ್ತೆ ಸ್ವಂತಕ್ಕೆ ಅಂತ ಆಸೆ ಇರುತ್ತೆ, ಇಲ್ಲಿ ಸ್ವಂತಕ್ಕೆ ಅಂತ ಏನಿಲ್ಲ.) ಮತ್ತಷ್ಟು ಓದು »

5
ಜೂನ್

ಗಾಂಧಿ ಪಕ್ಷದೊಳಗಿನ ಬ್ರಿಟಿಷರು…!

– ರಾಕೇಶ್ ಶೆಟ್ಟಿ

ತಲೆಬರಹವನ್ನ ನಕಲಿ ಗಾಂಧಿಗಳ ಪಕ್ಷದೊಳಗಿನ ಬ್ರಿಟಿಷರು ಅಂತ ಓದಿಕೊಳ್ಳಿ.ಮಹಾತ್ಮರ ಹೆಸರನ್ನ ಬೇಡ ಬೇಡವೆಂದರೂ ಅನಿವಾರ್ಯವಾಗಿ ಅವರ ಹೆಸರನ್ನ ದುರ್ಬಳಕೆ ಮಾಡಿಕೊಳ್ಳುತ್ತಿರುವ ಪಕ್ಷದ/ಸರ್ಕಾರದ ದೌರ್ಜನ್ಯದ ವಿರುದ್ಧ ಮಾತನಾಡುವಾಗ ಬಳಸಿಕೊಳ್ಳಲೇಬೇಕಿದೆ.

ಪ್ರಾಮಾಣಿಕ ಪ್ರಧಾನಿಯ ಸರ್ಕಾರ ಅನೈತಿಕ ಕೆಲಸಕ್ಕೆ ಕಡೆಗೂ ಕೈ ಇಟ್ಟಿದೆ.ಮಧ್ಯರಾತ್ರಿ ಕಳ್ಳರಂತೆ-ದರೋಡೆಕೋರರಂತೆ ರಾಮ್ ಲೀಲಾ ಮೈದಾನಕ್ಕೆ ನುಗ್ಗಿ ಹೆಂಗಸರು-ಮಕ್ಕಳು ಅಂತ ನೋಡದೆಯೆ ರಾಕ್ಷಸರಂತೆ ವರ್ತಿಸಿದ ರೀತಿ ನೋಡಿದರೆ, ಮನಮೋಹನ್ ಸಿಂಗ್ ಅನ್ನುವ ಸೋ-ಕಾಲ್ಡ್ ಪ್ರಧಾನಿಯ ಪ್ರಾಮಾಣಿಕತೆ ಉಪ್ಪಿನಕಾಯಿ ಹಾಕಲಿಕ್ಕಾ ಅಂತ ಕೇಳಲೆಬೇಕಾಗುತ್ತದೆ.

ಹುಚ್ಚು ನಾಯಿ ಕಡಿತಕ್ಕೆ ಚುಚ್ಚು ಮದ್ದು ತೆಗೆದುಕೊಳ್ಳದಿದ್ದರೆ ಏನಾಗುತ್ತೆ ಅನ್ನೋದಕ್ಕೆ ದಿಗ್ವಿಜಯ್ ಸಿಂಗ್ ಆಗಾಗ ನೀಡೋ ಹೇಳಿಕೆಗಳೇ ಉದಾಹರಣೆ.ಇಂತ ದಿಗ್ಗಿ ನಿನ್ನೆ ಹೇಳಿದ ಮಾತು ನೆನಪಿದೆಯಾ? ‘ಸರ್ಕಾರ ರಾಮ್ದೇವ್ ಅವರಿಗೆ ಹೆದರಿಲ್ಲ, ಒಂದು ವೇಳೆ ಹೆದರಿದ್ದರೆ ರಾಮ್ ದೇವ್ ಅವರನ್ನ ಬಂಧಿಸುತಿತ್ತು!’.ಹಾಗೇ ಹೇಳಿದ ಮಧ್ಯರಾತ್ರಿಯೇ ಬ್ರಿಟಿಷರು ಜಲಿಯನ್ ವಾಲಾಬಾಗ್ಗೆ ನುಗ್ಗಿದ ರೀತಿಯಲ್ಲೆ ನುಗ್ಗಿ ಅದೇ ರಾಮ್ ದೇವ್ರನ್ನ ಬಂಧಿಸಿದ್ದಾರೆ.ಅಂದರೆ ಕಾಂಗ್ರೆಸ್ಸ್ ಸರ್ಕಾರದ ಬೆದರಿದೆ ಅಂತಲೇ ಅರ್ಥವಲ್ಲವಾ?

ಮತ್ತಷ್ಟು ಓದು »