ಸಂಪಾದಕೀಯ ಅನ್ನೋ ಮೊಟ್ಟೆಯ ಮೇಲೆ ಒಂದು ಪ್ರೀತಿಯ ಕುಟುಕು…
– ಮಹೇಶ್ ಪ್ರಸಾದ್ ನೀರ್ಕಜೆ
ಸಂಪಾದಕೀಯದಲ್ಲಿ ಪ್ರಕಟವಾದ ಬ್ಲಾಗ್ ಬರಹಕ್ಕೆ ಪ್ರತಿಯಾಗಿ ನನ್ನ ಅನಿಸಿಕೆ ಇದು.
ಸಾಯಿ ಬಾಬಾರ ಸುತ್ತ ಇರುವ ಪವಾಡಗಳ ಬಗೆಗಿನ ವಿವಾದಗಳ ಬಗ್ಗೆ ಸಂಪಾದಕೀಯ ಈ ಹಿಂದೆ ಒಂದೆರಡು ಲೇಖನಗಳಲ್ಲಿ ಬರೆದಿತ್ತು (ಅದರಲ್ಲಿ ಒಂದು ಸನ್ಮಾರ್ಗ ಎನ್ನುವ ಪತ್ರಿಕೆಯಲ್ಲಿ ಪ್ರಕಟವಾದ ಸಂಪಾದಕೀಯ ಬರಹ). ಅವುಗಳಲ್ಲೊಂದು ಲೇಖನಕ್ಕೆ ಬಂದ ಪ್ರತಿಕ್ರಿಯೆಯೊಂದಕ್ಕೆ ಪ್ರತಿಯಾಗಿ ಸಂಪಾದಕೀಯ ಬರೆದ ಸ್ಪಷ್ಟೀಕರಣ ರೂಪದ ಬರಹವೇ ನಾನು ಮೇಲೆ ನೀಡಿದ ಬ್ಲಾಗ್ ಬರಹ. ಈ ಬ್ಲಾಗ್ ಬರಹದ ಸಾರಾಂಶ ಏನೆಂದರೆ ಸಾಯಿ ಬಾಬಾ ಮಾಡಿದ ಸಮಾಜ ಮುಖೀ ಕೆಲಸಗಳ ಬಗ್ಗೆ ಮೆಚ್ಚುಗೆಯಿದ್ದರೂ ಮೂಲತಹ ಬಾಬಾ ನಡೆದ ದಾರಿ ಪವಾಡಗಳನ್ನೊಳಗೊಂಡ ದಾರಿಯಾಗಿದ್ದು ಅದು ಜನರನ್ನು ದಿಕ್ಕುತಪ್ಪಿಸುವ, ಮೌಢ್ಯತೆಗೆ ನೂಕುವ ಮೋಸದ, ಸುಳ್ಳಿನ ದಾರಿಯಾಗಿದೆ, ಆದ್ದರಿಂದ ನಮಗೆ ಅಂತಹ ಸುಳ್ಳಿನ ದಾರಿ ಬೇಕೋ ಅಥವಾ ಬುಧ್ಧ ಹಾಕಿಕೊಟ್ಟ ಸತ್ಯದ ದಾರಿ ಬೇಕೋ ಎಂಬ ಜಿಜ್ಞಾಸೆ. ಕೊನೆಯಲ್ಲಿ ಸಂಪಾದಕೀಯ ಹೀಗೆ ಹೇಳುತ್ತದೆ – “ಬುದ್ಧನ ಸತ್ಯ ಮಾರ್ಗವೇ ನಿಜವಾದ ಬದುಕಿನ ತಳಪಾಯ. ಅದರ ಮೇಲೇ ನಮ್ಮ ಬದುಕು ಕಟ್ಟಿಕೊಳ್ಳುವಂತಾಗಬೇಕು” ಮತ್ತು “ನಾವು ಸತ್ಯದ ಮಾರ್ಗದಲ್ಲಿ ಊರ್ಧ್ವಮುಖಿಗಳಾಗಬೇಕೇ ಹೊರತು ಸುಳ್ಳಿನ ಮಾರ್ಗದಲ್ಲಿ ಅಧೋಮುಖಿಗಳಾಗಬಾರದು ಅಲ್ಲವೇ?”. ಇದರ ಬಗ್ಗೆ ಒಂದು ಚಿಂತನೆ ನಡೆಸುವ ಉದ್ದೇಶ ಈ ಲೇಖನದ್ದು.
‘ಸತ್ಯ ಸಾಯಿ’ ಮತ್ತು ‘ಸತ್ಯ ಸಾಯಿಸುವ’ ಮಾಧ್ಯಮಗಳು
ಅರೆಹೊಳೆ ಸದಾಶಿವರಾಯರು
ಫೇಸ್ ಬುಕ್‌ನಲ್ಲಿ ಒಂದು ಸಾಲು ಓದಿದೆ. ‘ಮ್ಯಾಜಿಷಿಯನ್’ ಸತ್ಯ ಸಾಯಿಬಾಬಾ ಇನ್ನಿಲ್ಲ ಎಂದು ಒಬ್ಬರು ವ್ಯಂಗ್ಯವಾಗಿ ಬರೆದುಕೊಂಡಿದ್ದರು. ಮುಂದುವರಿಯುತ್ತಾ, ಈ ಸತ್ಯಸಾಯಿಬಾಬಾ ಎಂಬ ಜಾದೂಗಾರನನ್ನು ಕೇವಲ ಮಾಧ್ಯಮಗಳು ಈ ಮಟ್ಟಿಗೆ ದೇವಮಾನವನನ್ನಾಗಿ ಮಾಡಿವೆ ಎಂದೂ ಸೇರಿಸಿಕೊಂಡಿದ್ದರು.
ಮೊದಲಾಗಿ ಮಾನವ ಎಂದರೆ ಏನು ಎಂಬತ್ತ ಗಮನ ಹರಿಸಬೇಕು. ಅದಕ್ಕೂ ಮೊದಲಾಗಿ ಒಂದು ವಿಷಯ ಸ್ಪಷ್ಟೀಕರಣದೊಂದಿಗೇ ಲೇಖನ ಆರಂಭಿಸಬೇಕು. ಅದೆಂದರೆ ನಾನು ಸಾಯಿ ಬಾಬಾ ಅವರ ಭಕ್ತನೂ ಅಲ್ಲ ಮತ್ತು ಅವರ ಪವಾಡಗಳ ಕುರಿತು ಪರ-ವಿರೋಧ ಎಂದು ಹೇಳಿಕೊಳ್ಳುವಷ್ಟು, ಜ್ಞಾನಿಯೂ ಅಲ್ಲ. ಆ ಮಟ್ಟಿಗೆ ಈ ವಿಷಯದಲ್ಲಿ ನಾನು ತಟಸ್ಥ. ಇನ್ನು ಮಾನವ ಎಂದರೆ…..!. ಜೀವಂತ ಇರುವ ಎಲ್ಲವೂ ಮಾನವನಾಗುವುದಿಲ್ಲ ಅಥವಾ ಮನುಷ್ಯಗರ್ಭದಲ್ಲಿ ಜನಿಸಿದ ಎಲ್ಲರೂ ಮಾನವನಂತೆ ಬದುಕುವುದಿಲ್ಲ. ಪರಸ್ಪರರನ್ನು ಪ್ರೀತಿಸುತ್ತಾ ಸಾಧ್ಯವಾದಷ್ಟೂ ಜನರ ಬಳಿ, ಜನರನ್ನು ಗೌರವಿಸುತ್ತಾ ಬದುಕುವುದು ಮಾನವೀಯ ಧರ್ಮ ಎನಿಸುತ್ತದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಜನಸೇವೆಯೇ ಜನಾರ್ದನ ಸೇವೆ ಎಂದುಕೊಂಡು, ಅಕ್ಷರಶ: ಅದನ್ನೇ ಪಾಲಿಸಿದರೆ ಆತ ಜನರ ಪಾಲಿಗೆ ಜನಾರ್ದನನಾಗುತ್ತಾನೆ;ದೇವತ್ವವನ್ನು ಪಡೆಯುತ್ತಾನೆ-ಸಾಯಿಬಾಬಾ ವಿಷಯದಲ್ಲಿಯೂ ಅದೇ ಆಗಿದೆ. ಮತ್ತಷ್ಟು ಓದು 
‘ವಾಸಾ’ ಎಂಬ ಯುದ್ಧ ನೌಕೆ ಮತ್ತು ವಿಧಿಯ ಆಯ್ಕೆ!
– ಪ್ರಶಾಂತ್ ಯಳವಾರಮಠ
೧೬ನೇ ಶತಮಾನದ ಸ್ವೀಡನ್ ದೇಶದ ರಾಜ ಕಿಂಗ್ ಗುಸ್ತಾವ್ II ಅಡಾಲ್ಫ್ ಗೆ ತನ್ನ ನೌಕಾದಳದ ಶಕ್ತಿಯನ್ನು ಹೆಚ್ಚಿಸಬೇಕು ಅನ್ನೋ ಇಚ್ಛೆ ಇಂದ ಹಡಗು ನಿರ್ಮಿಸುವುದರಲ್ಲಿ ಪ್ರಖ್ಯಾತಿ ಹೊಂದಿದ್ದ ಡಚ್ ದೇಶದ ಹೆನ್ರಿಕ್ ಹೈಬರ್ಟ್ ಸನ್ ಜೊತೆ ನಾಲ್ಕು ಯುದ್ದನೌಕೆಗಳನ್ನು ನಿರ್ಮಿಸುವ ಒಪ್ಪಂದ ಮಾಡಿಕೊಂಡ. ೧೬೨೬ ರಲ್ಲಿ ನಾಲ್ಕರಲ್ಲಿ ಮೊದಲನೆಯದಾಗಿ ವಾಸಾ ಎಂಬ ನೌಕೆಯನ್ನು ನಿರ್ಮಿಸಲು ಪ್ರಾರಂಭಿಸಿದ ತಂಡ ಅದನ್ನು ಆಗಿನ ಕಾಲದ ಅತೀ ದೊಡ್ಡ ನೌಕೆಯೇನ್ನಾಗಿ ನಿರ್ಮಿಸಬೇಕೆಂದು ಪನತೋಟ್ಟಿತು! ಅದಕ್ಕಾಗಿ ಸುಮಾರು ೩೦೦ ಜನರ ತಂಡ ತನ್ನ ಕೆಲಸವನ್ನ ಆರಂಬಿಸಿತ್ತು.ಪೂರ್ವಾವಲೋಕನ : ಒಂದು ಸಂವಾದ
– CSLC
ಕನ್ನಡದ ವಿದ್ವಾಂಸ ಜಗತ್ತಿಲ್ಲಿ ನಮ್ಮ ಸಮಾಜದ ಮತ್ತು ಸಮಾಜವಿಜ್ಞಾನದ ಕುರಿತು ವೈಜ್ಞಾನಿಕವಾಗಿ ಹೆಚ್ಚು ಚರ್ಚೆಯಾಗಬೇಕೆಂಬ ಉದ್ದೇಶದಿಂದ ಬಾಲಗಂಗಾಧರರ ಹಲವಾರು ಆಂಗ್ಲ ಭಾಷೆಯ ಲೇಖನಗಳನ್ನು ಕನ್ನಡಕ್ಕೆ ಅನುವಾದಿಸಿಲಾದ ’ಪೂರ್ವಾವಲೋಕನ’ ಕೃತಿಯನ್ನು (ಅಭಿನವ ಪ್ರಕಾಶನ) ಇತ್ತೀಚೆಗೆ ಪ್ರಕಟಿಸಲಾಗಿದೆ. ಈ ಪುಸ್ತಕದಲ್ಲಿರುವ ಕೆಲವಾರು ಲೇಖನಗಳ ಆಧಾರದ ಮೇಲೆ “ಪೂರ್ವಾವಲೋಕನ : ಒಂದು ಸಂವಾದ” ಒಂದು ದಿನ ಕಾರ್ಯಾಗಾರವನ್ನು ಇದೇ ತಿಂಗಳ ೨೪ ರಂದು ಸರ್ಕಾರಿ ಕಲಾ ಕಾಲೇಜು, ಕೆ.ಆರ‍್. ಸರ್ಕಲ್ ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ.
ಕನ್ನಡ ಆಡಳಿತ ಭಾಷೆ ಯಾಕಾಗಿಲ್ಲ ಗೊತ್ತೆ!?
– ವಸಂತ್ ಶೆಟ್ಟಿ
ಕನ್ನಡ ನಾಡು ಏಕೀಕರಣಗೊಂಡು ದಶಕಗಳೇ ಕಳೆದರೂ ಕನ್ನಡ ಎಲ್ಲ ಹಂತದಲ್ಲಿ ಆಡಳಿತ ಭಾಷೆಯಾಗಿ ಅನುಷ್ಠಾನಗೊಂಡಿಲ್ಲ ಅನ್ನುವ ಕೂಗು ನಾವೆಲ್ಲರೂ ಕೇಳಿಯೇ ಇರುತ್ತೇವೆ. ಇದಕ್ಕೆ ಸರ್ಕಾರದ ಇಚ್ಛಾಶಕ್ತಿಯ ಕೊರತೆಯೇ ಕಾರಣ ಎಂದೂ ಕೇಳಿರುತ್ತೇವೆ. ಭಾಷಾ ವಿಜ್ಞಾನಿ ಕೆ.ವಿ.ನಾರಾಯಣ ಅವರ ಕನ್ನಡ ಜಗತ್ತು: ಅರ್ಧ ಶತಮಾನ ಅನ್ನುವ ಹೊತ್ತಗೆ ಓದುತ್ತಾ ಇದ್ದೆ. ಅಲ್ಲಿ ಈ ಬಗ್ಗೆ ಅವರು ಕೊಡುವ ವಿವರಣೆ ಒಂದು ರೀತಿಯಲ್ಲಿ ಬೇರೆಯಾಗಿದೆ ಅನ್ನಬಹುದು. ಸರ್ಕಾರದ ಹೆಚ್ಚಿನ ಪ್ರಯತ್ನ (ಬಾಯಿ ಮಾತಲ್ಲಿ ಅಂತ ಬೇಕಾದ್ರೂ ಅಂದುಕೊಳ್ಳೊಣ 🙂 )ದ ನಂತರವೂ ಆಡಳಿತದಲ್ಲಿ ಕನ್ನಡ ಬಳಕೆ ಒಂದು ರೀತಿಯಲ್ಲಿ ಪಿರಮಿಡ್ ನಂತೆ ನಮಗೆ ಗೋಚರಿಸುತ್ತೆ. ಕೆಳ ಹಂತದಲ್ಲಿ ಕನ್ನಡ ವ್ಯಾಪಕವಾಗಿ ಬಳಕೆಯಾದರೆ, ಮೇಲೆ ಮೇಲೆ ಹೋದಂತೆ ಅದರ ಪ್ರಮಾಣ ಕಡಿಮೆಯಾಗುತ್ತ ಹೋಗುತ್ತದೆ. ಹಾಗಿದ್ದರೆ ಆಡಳಿತದಲ್ಲಿ ಕನ್ನಡದ ಬಳಕೆ ಅಂದುಕೊಂಡ ಮಟ್ಟದಲ್ಲಿ ಗೆಲುವು ಪಡೆಯದಿರಲು ಕಾರಣವೇನು ಎಂದು ಅವರು ಕೊಟ್ಟ ವಿವರಣೆಯನ್ನು ಈ ಕೆಳಗೆ ಕೊಟ್ಟಿರುವೆ.
ಈ ಅಪಯಶಸ್ಸನ್ನು ಎರಡು ದಿಕ್ಕಿನಿಂದ ವಿಶ್ಲೇಷಿಸಬೇಕಾದ ಅಗತ್ಯವಿದೆ. ಕಾರ್ಯಕ್ರಮ ಯಶಸ್ಸು ಪಡೆಯದಿರಲು ಅದರ ಹಿಂದಿನ ಯೋಜನಾ ತಂತ್ರಗಳಲ್ಲಿ ಕೊರತೆ ಇರುತ್ತದೆ. ಅಥವಾ ಅನುಷ್ಠಾನದ ಹಂತದಲ್ಲಿ ಹಲವು ಎಡರು ತೊಡರುಗಳಿರಬೇಕು. ಈ ದಿಕ್ಕಿನಿಂದ ನೋಡಿದಾಗ ಕನ್ನಡ ಅನುಷ್ಠಾನಕ್ಕೆ ಬೇಕಾದ ಭಾಷಾನೀತಿ ಮತ್ತು ಯೋಜನೆಗಳು ರಾಜ್ಯ ಸರ್ಕಾರಕ್ಕೆ ಇಲ್ಲವೆಂಬ ನಿರ್ಣಯಕ್ಕೆ ಬರುವುದು ಸಾಧ್ಯ. ಆದರೆ ಇದನ್ನು ಇನ್ನೊಂದು ದಿಕ್ಕಿನಲ್ಲಿ ನೋಡಿದಾಗ ಬೇರೆಯ ಸಾಧ್ಯತೆ ಗೋಚರಿಸುತ್ತದೆ.
ಹಸಿರುಕಾನನದ ಮಗಳೀಕೆ ಗೌರಾದೇವಿ…..
– ಚಿತ್ರ ಸಂತೋಷ್
ಉತ್ತರ ಖಾಂಡದ ರೇನಿ ಗ್ರಾಮದಲ್ಲಿ ಮರಗಳನ್ನು ಕಡಿಯಲು ಬಂದ ಅಧಿಕಾರಿಗಳ ವಿರುದ್ಧ ಬಂಡೆದ್ದವಳು ಗೌರಾದೇವಿ. ಬುಡಕಟ್ಟು ಜನರಿಗೆ ದಟ್ಟಾರಣ್ಯಗಳೇ ತವರು. ಕಾಡಿಗೂ-ನಮಗೂ ಇರುವುದು ಅಮ್ಮ-ಮಕ್ಕಳ ಸಂಬಂಧ.ಬದುಕಿದರೆ ನಮಗೆ ಆಸರೆ ನೀಡಿದ ಈ ಹಸಿರು ಕಾಡುಗಳಿಗಾಗಿ ಬದುಕಿ …ಎಂದು ಹಳ್ಳಿ ಮನೆಗಳ ಜಗುಲಿಯಲ್ಲಿ ಕುಳಿತು ಜಾಗೃತಿಯ ಕಹಳೆ ವೊಳಗಿಸಿದವಳು ಇವಳೇ ಗೌರಾದೇವಿ. ದೇಶದ್ಯಾಂತ ಪರಿಸರ ಕ್ರಾಂತಿ ಮಾಡಿದ ಚಿಪ್ಕೋ ಚಳವಳಿನ್ನು ಹುಟ್ಟು ಹಾಕಿದ್ದೇ ಇವಳು. ಇಂಥ ಗೌರಾದೇವಿಯನ್ನು ಗೌರವದಿಂದ ನೆನೆಯುವ ಕೆಲಸವನ್ನು ನಾವು ಮಾಡಬೇಕಿದೆ.
“ಸಹೋದರರೇ ಈ ಅರಣ್ಯ ಪ್ರದೇಶ ನಮ್ಮ ಜೀವಮೂಲ. ನಮ್ಮ ಹುಟ್ಟಿನಿಂದ ಸಾವಿನ ತನಕದ ಜೀವನ ಬಂಡಿಗೆ ಸಾಥ್ ನೀಡುವುದು ಇದೇ ಹಸಿರು ಕಾನನ. ಈ ‘ರಮೆಯೇ ನಮ್ಮಮ್ಮ. ನೀವು ನಿಮ್ಮ ಹರಿತವಾದ ಗರಗಸವನ್ನು ನಮ್ಮಮ್ಮನ ಕರುಳಿಗೆ ಇಡುವ ವೊದಲು ನನ್ನ ಎದೆಗೆ ಹಿಡಿ”
ಬಹುಶಃ ಚಿಪ್ಕೋ ಚಳವಳಿ ಹುಟ್ಟುವ ವೊದಲು ಓರ್ವ ಬುಡಕಟ್ಟು ಮಹಿಳೆ ಉತ್ತರ ಖಾಂಡದ ಆ ಬೃಹತ್ ಅರಣ್ಯದಲ್ಲಿ ಈ ರೀತಿ ಮರಗಳನ್ನು ತಬ್ಬಿಕೊಂಡು ಸರ್ಕಾರದ ಅಕಾರಿಗಳ ಎದುರು ಈ ರೀತಿ ಅಳಲು ತೋಡಿಕೊಂಡಿದ್ದು ಬಹಳಷ್ಟು ಜನರಿಗೆ ನೆನಪು ಇರಲಿಕ್ಕಿಲ್ಲ. ಚಿಪ್ಕೋ ಚಳವಳಿ ಕುರಿತು ಮಾತೆತ್ತಿದ್ದರೆ ತಕ್ಷಣಕ್ಕೆ ನೆನಪಿಗೆ ಬರುವುದು ಸುಂದರ್ ಲಾಲ್ ಬಹುಗುಣ ಎಂಬ ಮಹಾನ್ ವ್ಯಕ್ತಿ. ಆದರೆ, ಇವರಿಗಿಂತಲೂ ವೊದಲು ಅಲ್ಲಿ ಮಹಿಳೆಯೊಬ್ಬಳ ದನಿಯಿತ್ತು, ದೇಶದಾದ್ಯಂತ ಬೃಹತ್ ಪರಿಸರ ಕ್ರಾಂತಿಗೆ ಮುನ್ನುಡಿಯಾದ ಆ ಚಳವಳಿಯ ಹಿಂದೆ ಅನಕ್ಷರಸ್ಥೆ ಮಹಿಳೆಯ ಶ್ರಮ ಇತ್ತು, ಕಣ್ಣೀರಿತ್ತು, ಜಾಗೃತಿಯ ಕಹಳೆಯಿತ್ತು.
ಅವಳ ಹೆಸರು ಗೌರಾದೇವಿ.
ಜಲಿಯನ್ ವಾಲಾಬಾಗ್ ಒಂದು ಘೋರ ನೆನೆಪು
– ಜಯಂತ್ ರಾಮಾಚಾರ್
ಏಪ್ರಿಲ್ ೧೩, ಇಂದಿಗೆ ಸರಿಯಾಗಿ ೯೨ ವರ್ಷಗಳು ಸಂದಿವೆ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದು. ೧೯೧೯, ಏಪ್ರಿಲ್ ೧೩ ರಂದು ಸುಮಾರು ೨ ಸಾವಿರ ಮಂದಿ ಹಿಂದೂ, ಮುಸ್ಲಿಂ, ಸಿಖ್ ಬಾಂಧವರ ಮಾರಣ ಹೋಮಕ್ಕೆ ಸಾಕ್ಷಿಯಾಯಿತು ಈ ಜಲಿಯನ್ ವಾಲಾಬಾಗ್. ಜಲಿಯನ್ ವಾಲಾಬಾಗ್ ಒಂದು ಚಚ್ಚೌಕವಾದ ಪ್ರದೇಶ, ಇದಕ್ಕೆ ಹೋಗಿಬರಲು ಇದ್ದ ದಾರಿಗಳು ವಿರಳ. ಎತ್ತರೆತ್ತರದ ಗೋಡೆಗಳು, ಮಧ್ಯದಲ್ಲಿ ಬಾವಿ, ಮನೆ ಕಟ್ಟಲು ಬಳಸುತ್ತಿದ್ದ ಸಾಮಗ್ರಿಗಳನ್ನು ಸಂಗ್ರಹಿಸಿಟ್ಟಿದ್ದ ಜಾಗ.
ಏಪ್ರಿಲ್ ೧೩, ೧೯೧೯ ಅಂದು ವೈಶಾಖಿಯ ಸಂಭ್ರಮ. ವೈಶಾಖಿಯ ಸಂಭ್ರಮವೆಂದರೆ ಕಣಜ ತುಂಬಿಸುವ, ಸುಗ್ಗಿಯ ಸಂಭ್ರಮ. ಆದರೆ ಪ್ರತಿ ವೈಶಾಖಿಗೂ ೧೯೧೯ರ ವೈಶಾಖಿಗೂ ವ್ಯತ್ಯಾಸವಿತ್ತು. ಏಕೆಂದರೆ ಅದೇ ಸಮಯದಲ್ಲಿ ಗಾಂಧಿಜಿ ಅವರನ್ನು ಬ್ರಿಟಿಶ್ ಸರ್ಕಾರ ಬಂಧಿಸಿತ್ತು. ಅದರ ಪ್ರತೀಕಾರ ತೀರಿಸಿಕೊಳ್ಳಲು ಜನ ಹಾತೊರೆಯುತ್ತಿದ್ದರು. ಎಂದಿನಂತೆ ಹೊರವಲಯದಲ್ಲಿ ಸೇರದ ಜನ ಅಂದು ಜಲಿಯನ್ ವಾಲಾಬಾಗ್ ನಲ್ಲಿ ಸುಮಾರು ೨೦ ಸಾವಿರ ಮಂದಿ ನೆರೆದಿದ್ದರು. ಸುತ್ತಲೂ ಜನ ಮಧ್ಯದಲ್ಲಿ ವೇದಿಕೆಯಿದ್ದು ಅದರ ಮೇಲೆ ಹಂಸರಾಜ್ ಎಂಬುವವರು ಭಾಷಣ ಶುರು ಮಾಡಿದ್ದರು. ಭಾಷಣ ಶುರುವಾಗಿ ಹೆಚ್ಚು ಸಮಯವೇನು ಆಗಿರಲಿಲ್ಲ. ಅಷ್ಟರಲ್ಲಿ ಅಲ್ಲಿಗೆ ತನ್ನ ಸೈನ್ಯದೊಂದಿಗೆ ಆಗಮಿಸಿದ ಜನರಲ್ ಡಯರ್ ನೇರವಾಗಿ ಗುಂಡಿನ ಸುರಿಮಳೆಗೈಯ್ಯಲು ಆದೇಶವಿತ್ತ. ಸಂಜೆ ಐದೂವರೆಗೆ ಶುರುವಾದ ಈ ಹತ್ಯಾಕಾಂಡ ಕೆಲವೇ ಕೆಲವು ನಿಮಿಷಗಳಲ್ಲಿ ಸುಮಾರು ಎರಡು ಸಾವಿರ ಮಂದಿಯ ಪ್ರಾಣ ತೆಗೆದು ಹಾಕಿತ್ತು.
ಅವರೆತ್ತರಕ್ಕೆ ಏರಲಾಗದಿದ್ದರೆ ತೆಪ್ಪಗಿರಿ…!
– ರಾಕೇಶ್ ಶೆಟ್ಟಿ
“ಇಂದಿನ ಪರಿಸ್ಥಿತಿಯಲ್ಲಿ ಮಹಾತ್ಮ ಗಾಂಧೀಜಿ ಅವರು ಇದ್ದಿದ್ದರೆ, ಅವರು ಕೂಡಾ ಭ್ರಷ್ಟರಾಗುತ್ತಿದ್ದರು. ರಾಜಕೀಯದಲ್ಲಿ ಉಳಿಯಬೇಕಾದರೆ ಭ್ರಷ್ಟರಾಗದೆ ಇರಲು ಸಾಧ್ಯವೇ ಇಲ್ಲ” ಇಂತ ಹೇಳಿಕೆ ಕೊಟ್ಟೊವ್ರು ಯಾರು ಅನ್ನೋದು ಎಲ್ರಿಗು ಗೊತ್ತಿದೆಯಲ್ವಾ? ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವ್ರು.ಒಂದ್ ಕಡೆ ದೇವೆಗೌಡ್ರು ಫೋಟೊ,ಇನ್ನೊಂದ್ ಕಡೆ ಇದೇ ಮಹಾತ್ಮನ ಫೋಟೊ ಹಾಕೊಂಡಿರೋ ಪಕ್ಷದ ರಾಜ್ಯಾಧ್ಯಕ್ಷರ ಬಾಯಿಯಲ್ಲಿ ಬಂದ ಮುತ್ತಿನಂತ ಮಾತುಗಳಿವು.
ಮುತ್ತುಗಳು ಬಿದ್ದಾಗ ಆರಿಸಿ ಮನೆಗ್ ತಗೊಂಡು ಹೋಗೊದು ರೂಢಿ,ಆದ್ರೆ ಕುಮಾರ ಸ್ವಾಮಿ ಅವ್ರ ಮುತ್ತನ್ನ ಹಿಡಿದು ಅವರಿಗೆ ಪೈಡ್ ಪೈಡ್ ಅಂತ ಎಲ್ಲ ಕಡೆಯಿಂದ ಬಾರಿಸುತಿದ್ದಾರೆ.ಬಾರಿಸದೆ ಬಿಡ್ಬೇಕಾ? ಒಂದು ಕಡೆ ಮಹಾತ್ಮರ ಹೋರಾಟದಿಂದ ಸ್ಪೂರ್ತಿ ಪಡೆದ ೭೬ ವರ್ಷದ ಅಣ್ಣಾ ಹಜಾರೆಯಂತವರು ಸತ್ತತಿಂಹರನ್ನ ಬಡಿದೆಬ್ಬಿಸಲು ಉಪವಾಸ ಕೂತರೆ,ಇನ್ನೊಂದು ಕಡೆ ಈ ಕುಮಾರಸ್ವಾಮಿ ಮಹಾತ್ಮರ ಬಗ್ಗೆ ಇಂತ ಮಾತನಾಡಲು ಹೊರಟಿದ್ದಾರೆ!
ಬನ್ನಿ ತುಳುವಿನಲ್ಲಿ ಮಾತಾಡುವ…!
– ನಿಲುಮೆ
ಪಂಚ ದ್ರಾವಿಡ ಭಾಷೆಗಳಲ್ಲೊಂದಾದ ತುಳುವನ್ನ ಕರ್ನಾಟಕದ ಕರಾವಳಿಯಿಂದ ಹಿಡಿದು ನಮ್ಮ ಕಾಸರಗೋಡಿನಲ್ಲೂ ಮಾತಾಡುತ್ತಾರೆ.ಅಲ್ಲಷ್ಟೇ ಯಾಕೆ ಕರ್ನಾಟಕದ ಮೂಲೆ ಮೂಲೆಯಲ್ಲಿ ನೆಲೆ ನಿಂತ ತುಳುವರು,ಹೊರ ರಾಜ್ಯದಲ್ಲಿ,ಹೊರ ದೇಶದಲ್ಲೂ ಮಾತಾಡುತ್ತಾರೆ.
’ತುಳು ಮಹಾಭಾರತ’ದ ಕಾಲ ೧೩ನೇ ಶತಮಾನ,’ತುಳು ದೇವಿ ಮಹಾತ್ಮೆ’ಯ ಕಾಲ ೧೫ನೇ ಶತಮಾನ.ಹಾಗೆಯೇ ’ತುಳು ಭಾಗವತ’ ’ಕಾವೇರಿ’ ಬಂದಿದ್ದು ೧೭ನೇ ಶತಮಾನದಲ್ಲಿ!
‘A comparative Grammar of the Dravidian or South Indian Family of Languages’ ಅನ್ನು ಬರೆದ ರೆವ್.ಕ್ಲಾಡ್ವೆಲ್ ಅವರು ’ದ್ರಾವಿಡ ಭಾಷೆಗಳಲ್ಲಿ ಸದೃಡವಾಗಿ ಬೆಳೆದು ನಿಂತ ಭಾಷೆ ತುಳು’ ಅಂದಿದ್ರು.
ವಿದ್ವಾಂಸರಿಂದ ಹೀಗೆಲ್ಲ ಹೊಗಳಿಸಿಕೊಂಡ ತುಳುವಿಗೊಂಡು ಲಿಪಿ ಇರಲಿಲ್ವಾ? ಬಾಲ್ಯದಲ್ಲಿ ನಮಗೆ ಸಹಜವಾಗಿ ಮೂಡುತಿದ್ದ ಪ್ರಶ್ನೆಯದು.ಅಪ್ಪ-ಅಮ್ಮರನ್ನ ’ತುಳುವನ್ನ ಬರೆಯಲು ಸಾಧ್ಯವಿಲ್ವಾ?’ ಅಂತ ಕೇಳಿದರೆ.’ತುಳುವಿಗೆ ತನ್ನದೇ ಆದ ಲಿಪಿ ಇಲ್ಲ ಮಗ,ಆದರೆ ಮಲಯಾಳಂ ಲಿಪಿ ಬಳಸಿ ತುಳುವನ್ನ ಬರೆಯುತ್ತಾರೆ ಅಂತಿದ್ರು ಅಮ್ಮ.ಬೆಳೆಯುತ್ತ ಬೆಳೆಯುತ್ತ ಅರಿವಿಗೆ ಬಂದಿದ್ದೇನೆಂದರೆ ಅಸಲಿಗೆ ಮಲಯಾಳಂ ಅನ್ನು ತುಳು ಲಿಪಿ ಬಳಸಿ ಬರೆಯುತ್ತಾರೆ ಅನ್ನುವುದು!
‘ದುರ್ಗಾಸ್ತಮಾನ’ ಮತ್ತು ‘ಗಂಡುಗಲಿ ಮದಕರಿ ನಾಯಕ’
– ಶ್ಯಾಮಲ ಜನಾರ್ದನನ್
ದುರ್ಗಾಸ್ತಮಾನದ ಮುನ್ನುಡಿಯಲ್ಲೇ ಲೇಖಕ ದಿವಂಗತ ಶ್ರೀ ತರಾಸು ಬರೆದಿರುವ “ಚಿತ್ರದುರ್ಗ ಎಂದರೆ ತಮ್ಮ ಕರುಳಿಗೆ ಕಟ್ಟಿಕೊಂಡು ಬೆಳೆದ ಜೀವಂತ ವಸ್ತು – ಮದಕರಿ ನಾಯಕ ಒಬ್ಬ ಅರಸನಲ್ಲ
ಜೀವಂತ ಆಪ್ತನೆಂಟ. ಚಿತ್ರದುರ್ಗ – ಮದಕರಿನಾಯಕ ಬೇರೆ ಬೇರೆಯಲ್ಲ ಒಂದೇ ಎಂಬ ಅವಿನಾಭಾವ, ದುರ್ಗ ಎಂದರೆ ಮದಕರಿ, ಮದಕರಿ ಎಂದರೆ ದುರ್ಗ ” ಎಂಬ ಮಾತುಗಳು ಅತ್ಯಂತ ಪ್ರಭಾವೀ ವಾಕ್ಯಗಳಾಗಿ, ನಾವು ಪುಸ್ತಕ ಓದಲು ತೊಡಗುವ ಮೊದಲೇ ನಮ್ಮ ಮನಸ್ಸನ್ನು ದುರ್ಗ-ಮದಕರಿ ಎಂಬ ಮೋಡಿಯಲ್ಲಿ ಸಿಲುಕಿಸುತ್ತದೆ.
ನಾಯಕವಂಶದಲ್ಲಿ ಹಲವಾರು ಮದಕರಿನಾಯಕರುಗಳಿದ್ದರೂ, ಜನತೆ ಈಗಲೂ ತುಂಬಾ ಅಭಿಮಾನದಿಂದ ದುರ್ಗ – ಮದಕರಿ ಎಂದರೆ ನೆನಪಿಸಿಕೊಳ್ಳುವುದು, ಈ ಕಥೆಯ ನಾಯಕ, ಕೊನೆಯ ಪಾಳೆಯಗಾರ / ಅರಸ ಚಿಕ್ಕ ಮದಕರಿನಾಯಕರನ್ನೇ !! ಈ ನಮ್ಮ ಅಭಿಮಾನಕ್ಕೆ ಕಾರಣನಾದ ಮದಕರಿನಾಯಕ ಅತಿ ಸಾಹಸಿ, ಅತಿಕ್ರೂರಿ, ಅತಿಮದಾಂಧ, ಅತಿಕಾಮಿ ಮತ್ತು ದೈವಕೃಪೆ, ಗುರುವಿನ ಅನುಗ್ರಹ ಎರಡನ್ನೂ ಕಳೆದುಕೊಂಡಿದ್ದ ನತದೃಷ್ಟ ಎಂದು ಚಿತ್ರದುರ್ಗ ಸಂಸ್ಥಾನದ ಚಪ್ಪೇ ಚಾವಡಿ ದಳವಾಯಿಗಳ ನೇರ ವಂಶಸ್ಥರಾದ, ಭದ್ರಾವತಿಯ ಉಕ್ಕಿನ ಕಾರ್ಖಾನೆಯ ನಿವೃತ್ತ ವರ್ಕ್ಸ್ ಮ್ಯಾನೇಜರ್ ಶ್ರೀ ಸಿ ಪರಶುರಾಮನಾಯಕ್ ರವರು ಹೇಳಿದ್ದನ್ನೂ, ಈ ಕೃತಿ “ದುರ್ಗಾಸ್ತಮಾನ” ಬರೆಯಲು ಸ್ಫೂರ್ತಿಯಾದದ್ದನ್ನೂ ಲೇಖಕರು ಸ್ಮರಿಸಿದ್ದಾರೆ.
ದುರ್ಗಾಸ್ತಮಾನವನ್ನು ಅನೇಕ ಸಂಶೋಧನೆಗಳು, ಮುದ್ರಣ ರೂಪದಲ್ಲಿ ಪ್ರಕಟವಾಗಿಲ್ಲದ ಶ್ರೀ ಚಿಕ್ಕೇರೂರು ಗೋವಿಂದಾಚಾರ್ಯರು ಬರೆದ ಹರಪನಹಳ್ಳಿ ಪಾಳೆಯಗಾರರ ಚರಿತ್ರೆಯ ಹಸ್ತಪ್ರತಿಯನ್ನು ಆಧರಿಸಿ ಬರೆಯಲಾಗಿದೆ. ಚಿತ್ರದುರ್ಗದ ಇತಿಹಾಸಕ್ಕೆ ಸಂಬಂಧಪಟ್ಟ ಮತ್ತು ಲಭ್ಯವಿದ್ದ ಎಲ್ಲಾ ದಾಖಲೆಗಳನ್ನೂ ಚೆನ್ನಾಗಿ ಅಧ್ಯಯನ ಮಾಡಿದ ನಂತರವೇ ಶ್ರೀ ತರಾಸುರವರು ಕಾದಂಬರಿ ಬರೆದಿದ್ದಾರೆ.
ತರಾಸುರವರು, ಅತ್ಯಂತ ಕಾಳಜಿಯಿಂದ, ಎಲ್ಲಾ ಅಧ್ಯಯನಗಳನ್ನೂ ಮಾಡಿ, ಸಂಗ್ರಹಕ್ಕೆಲ್ಲಾ ಆಧಾರ ತೋರಿಸಿಯೇ ದುರ್ಗಾಸ್ತಮಾನದಲ್ಲಿ ದೊರೆ ಮದಕರಿ ನಾಯಕನನ್ನು ಮೆಚ್ಚಬೇಕಾದ ಶೂರ ಎಂದೇ ಚಿತ್ರಿಸಿದ್ದಾರೆ. ದುರಂತ ಕಾದಂಬರಿಗೆ ಅರ್ಹನಾದ ಧೀರೋದ್ಧಾತ ನಾಯಕ ಎನ್ನುವಂತೆಯೂ ಚಿತ್ರಿಸಿದ್ದಾರೆ. ತನ್ನ ದುರ್ಗದ ಜನರೇ ತನಗೆ ದ್ರೋಹ ಮಾಡಿ, ಹೈದರಾಲಿಯ ಸೇನೆ ಕೋಟೆ ಮುತ್ತಿದಾಗ, ವೀರಾವೇಶದಿಂದ ಕಾದಾಡುತ್ತಾ, ಕೊನೆಯ ಉಸಿರು, ಒಡಲು ಬಿಡುವ ಮುನ್ನ ಮದಕರಿ, ಹೈದರನ ಧ್ವಜ ಸ್ಥಂಭವನ್ನು ಹೊಡೆದುರಿಳಿಸಿದ್ದನ್ನು ಓದುವಾಗ, ರೋಮಾಂಚನದಿಂದ ಮೈ ನವಿರೇಳುತ್ತದೆ. ಹೈದರಾಲಿಯ ಕಡೆಯವರ ಹತ್ತಾರು ಗುಂಡುಗಳು ಮದಕರಿಯನ್ನು ಹೊಡೆದುರುಳಿಸಿದಾಗ, ದುರ್ಗದ ಗಂಡುಗಲಿ ವೀರ ಮದಕರಿನಾಯಕ ತನ್ನ ಪ್ರಾಣಪ್ರಿಯವಾದ ದುರ್ಗದ ಮಣ್ಣಿಗೆ ರಕ್ತ ತರ್ಪಣ ನೀಡುತ್ತಾ, ಕೋಟೆಯ ಮೇಲಿಂದ ಕೆಳಗುರುಳುತ್ತಾನೆ. ಮತ್ತೇಳುವುದಿಲ್ಲ – ಅಲ್ಲಿಗೆ ದುರ್ಗದ ಇತಿಹಾಸದಲ್ಲಿ ಪ್ರಜ್ವಲಿಸುವ ಸೂರ್ಯ ಅಸ್ತನಾಗಿದ್ದ, ದುರ್ಗಾಸ್ತಮಾನವಾಗಿ ಹೋಗುತ್ತದೆ, ಆ ಕ್ಷಣ.




