ವಿಷಯದ ವಿವರಗಳಿಗೆ ದಾಟಿರಿ

Posts from the ‘ಕರ್ನಾಟಕ,ಕನ್ನಡ’ Category

21
ಆಕ್ಟೋ

ಕರ್ ನಾಟಕ – ಘಟನಾವಳಿಗಳ ವೈಭವೀಕರಣ

-ಸಚಿನ್.ಕೆ
ಜನ ಲೋಕಪಾಲ್ ಬಿಲ್ ಗಾಗಿ ಒತ್ತಾಯಿಸಿ ನಡೆದ ಭ್ರಷ್ಟಾಚಾರ ವಿರೋಧಿ ಚಳುವಳಿಯನ್ನ ಸಮೂಹ “ಸನ್ನಿ”  ಅಂತ ಕೆಲ ಜನ ಕರೆದರು. ಆದರೆ ರಾಜ್ಯದಲ್ಲಿ ಕಳೆದೊಂದು ತಿಂಗಳಿಂದ ನಡೆಯುತ್ತಿರುವ ಪ್ರಹಸನ ಗಳನ್ನು ಯಾವ ಸನ್ನಿ ಅಂತಾರೆ? ನಟ ದರ್ಶನ್ ಪ್ರಹಸನದಿಂದ ಹಿಡಿದು ಯಡಿಯೂರಪ್ಪ ಕೋರ್ಟ್ ಗೆ ಅಲೆದಾಡಲು ಶುರುವಾದ ದಿನದಿಂದ ಇಂದಿನವರೆಗೆ ಬಿಟ್ಟು ಬಿಡದೆ ಹಿಂಬಾಲಿಸುತ್ತಿರುವುದು ಯಾರು? ಯಾಕೆ ಈ ವೈಭವೀಕರಣ?

ನಿನ್ನೆ ಬಿಜೆಪಿಯ ಧನಂಜಯಕುಮಾರ್ ಸಿಎನ್ ಎನ್ ಐಬಿಎನ್ ವಾಹಿನಿಯಲ್ಲಿ ನಡೆದ ಚರ್ಚೆಯ ವೇಳೆ ರಾಜ್ ದೀಪ್ ಸರ್ದೇಸಾಯಿ ಅವರಿಗೆ ನೇರವಾಗಿ ಪ್ರಶ್ನೆ ಕೇಳಿದರು. ಯಡ್ಯೂರಪ್ಪನವರನ್ನು ಕವರೇಜ್ ಮಾಡಿದ ರೀತಿಯಲ್ಲಿ ನೀವು ಸೋನಿಯಾಗಾಂಧಿ ಯವರನ್ನು ಯಾಕೆ ಕವರೇಜ್ ಮಾಡಲಿಲ್ಲ

ಸೋನಿಯಾಗಾಂಧಿ ಚಿಕಿತ್ಸೆ ಗಾಗಿ ಅಮೇರಿಕದ ಒಂದು ಆಸ್ಪತ್ರೆಗೆ ದಾಖಲಾಗಿದ್ದ ಸಂಧರ್ಭದಲ್ಲಿ  ಇಂತಹ ಆಸಕ್ತಿ ಯಾರು ವಹಿಸಿರಲಿಲ್ಲ. ಅವರಿಗೆ ಯಾವ ಕಾಯಿಲೆ ಇತ್ತು, ಯಾವ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆದರು ಈಗ ಹೇಗಿದ್ದಾರೆ ಅಂತ ಯಾವುದೇ ವಿಷಯಗಳಬಗ್ಗೆ ಚರ್ಚಿಸಲೇ ಇಲ್ಲ ಮತ್ತು ಜನರಿಗೆ ಅದರ ಬಗ್ಗೆ ಹೆಚ್ಚಿನ ಮಾಹಿತಿ ಕೊಡುವ ಪ್ರಯತ್ನ ಮಾಡಲೇ ಇಲ್ಲ.  ದೇಶದ ಮಹಾನ್ನಾಯಕಿಯ ಬಗ್ಗೆ ಪ್ರಜೆಗಳಿಗೆ ತಿಳಿದುಕೊಳ್ಳುವ ಅಗತ್ಯವಿಲ್ಲ ಎಂದು ಸುಮ್ಮನಾಗಿದ್ದೀರ? ಮತ್ತಷ್ಟು ಓದು »

7
ಆಕ್ಟೋ

ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ : ಬಣ್ಣದ ಬದುಕು 5 – ಕರ್ಣನಿಂದಾಗಿ ಕಣ್ಣೀರು ಬಂತು ….

ಅಡವಿ ಗಿಡ ಮರ ಕಲ್ಲು ನೋಡಿದರೆಯರಸಿನದ ಪುಡಿಯಂತೆ ತೋರುತಿದೆ ತಮ್ಮಾ! ಒಡಲೊಳುರಿ ತಾಪ ಬೇರ್ವಿಡಿದು ಜಠರಾಗ್ನಿಯಲಿ ನಡುಗುತಿದೆ ಕೈ ಕಾಲು ತಮ್ಮಾ” ಎಂದು ಸೀತೆಯನ್ನು ಕಳೆದುಕೊಂಡ ಶ್ರೀರಾಮ ಹಂಬಲಿಸುತ್ತಾನೆ. ಲಕ್ಷ್ಮಣನೊಡನೆ ಅಳಲನ್ನು ತೋಡಿಕೊಳ್ಳುತ್ತಾನೆ. ಪದ್ಯದ ತರುವಾಯ, ರಾಮನ ಉದ್ವೇಗದ ಸಂಪೂರ್ಣ ಚಿತ್ರಣವಾಗಬೇಕಾದರೆ- ತಾಳಮದ್ದಳೆಯ (ಕುಳಿತು ಮಾತನಾಡುವ- ವೇಷವಿಲ್ಲದ) ರಾಮ ಬಹಳ ಮಾತುಗಳನ್ನು ಖರ್ಚು ಮಾಡಬೇಕಾಗುತ್ತದೆ. ಭಾವನೆಗಳು ಮೂಡದೆ ಬರಿಯ ಮಾತುಗಳನ್ನೇ ಹೊರಡಿಸುವವನು ರಾಮನಾಗಿದ್ದರೆ, ಪ್ರೇಕ್ಷಕರಲ್ಲಿ ಪ್ರತಿಕ್ರಿಯೆ ಮೂಡಿಸುವ ಪ್ರಯತ್ನ ನಿರರ್ಥಕ ಎನಿಸುತ್ತದೆ,

ಶೃಂಗಾರ ರಸದ ನಿರೂಪಣೆ ಇರುವ ಪಾತ್ರಗಳಲ್ಲೂ ಅಂತಹುದೇ ಅನುಭವ. ”ಕಾಮಸನ್ನಿಭ ಮಾತ ಕೇಳೂ! ನಿನ್ನೊಳ್! ಕಾಮಿಸಿ ಕಾಮಿಸಿ ಬಂದೆ ಕೃಪಾಳೂ!!” ಎಂದು ಮಾಯಾ ಶೂರ್ಪನಖಿಯು ಲಕ್ಷ್ಮಣನೊಡನೆ ನುಡಿದ ಸನ್ನಿವೇಶದಲ್ಲಿ ಬರಿ ಮಾತಿನ ಬರಡುತನವನ್ನೂ ಕಂಡುಕೊಳ್ಳುವಂತಾಗಿತ್ತು.

ಅತೃಪ್ತಿ
ವೀರರಸದ ಸಂದರ್ಭಗಳಲ್ಲೂ ಅದೇ ತೊಡಕು, ಒಂದೆರಡು ಸನ್ನೆಗಳು, ಎರಡು ಮೂರು ಮಾತುಗಳಲ್ಲಿ ಪರಿಣಾಮಕಾರಿಯಾಗಿ ಮಾಡಬಹುದಾದ ಕೆಲಸಕ್ಕೆ ಬಹಳ ಮಾತುಗಳನ್ನೇ ವೆಚ್ಚ ಮಾಡಿದ ತರುವಾಯವೂ ‘ಇದು ಸಾಕಾಗಲಿಲ್ಲ!’ ಎಂದು ಅತೃಪ್ತಿ.

”ಅರ್ಥ ಉದ್ದವಾಯಿತು.” ಎಂಬ ಮಾತು ಕೇಳಿ ಬಂದರೆ ಅದರಲ್ಲಿ ಆಶ್ಚರ್ಯವೇನು?

ಇಂತಹುದೇ ವಿಚಾರಗಳ ಚರ್ಚೆ ಜಿಜ್ಞಾಸೆಗಳು ಗೆಳೆಯರೊಂದಿಗೆ ಆಗಾಗ ನಡೆಯುತ್ತಿದ್ದವು.
ಮತ್ತಷ್ಟು ಓದು »

1
ಆಕ್ಟೋ

ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ : ಬಣ್ಣದ ಬದುಕು 4 – ಐದು ವರ್ಷಗಳಲ್ಲಿ ಆಸ್ತಿ ಅಡವು

1931ರ ಆರ್ಥಿಕ ಮುಗ್ಗಟ್ಟಿನ ದಿನಗಳ ನೆನಪಿರುವವರು ಬಹಳ ಮಂದಿ. ನಮ್ಮ ನಾಟಕ ಮಂಡಳಿಯಿಂದಾಗಿ ನನಗೂ ಆ ದಿನಗಳ ನೆನಪು ಉಳಿದಿದೆ; ಅಂದಿನ ಮತ್ತು ಇಂದಿನ ಪರಿಸ್ಥಿತಿಗಳ ವ್ಯತ್ಯಾಸವನ್ನು ಜ್ಞಾಪಿಸಿಕೊಳ್ಳುವ ಹಾಗಾಗಿದೆ.

ಆಗ ಊರಿಂದೂರಿಗೆ ಸಾಮಾನು ಸಾಗಿಸುವ ಲಾರಿಗಳ ಸೌಕರ್ಯವಿರಲಿಲ್ಲ. ಸಾಗಾಟಕ್ಕೆ ಸಿಗುತ್ತಿದ್ದುದು ಎತ್ತಿನ ಗಾಡಿಗಳು ಮಾತ್ರ.

ದಶಾವತಾರದ ಮೇಳಗಳಲ್ಲಿ ಇರುತ್ತಿದ್ದ ಸಾಮಾನುಗಳನ್ನು ಸಾಗಿಸಲು ಬಹಳ ಕಷ್ಟವಾಗುತ್ತಿರಲಿಲ್ಲ. ಪರದೆ ಇತ್ಯಾದಿಗಳ ತೊಡಕು ಇಲ್ಲದ ಕಾರಣ, ಕೆಲವು ಪೆಟ್ಟಿಗೆಗಳನ್ನು ತಲೆ ಹೊರೆಯಲ್ಲಿ ಸಾಗಿಸಲು ಸಾಧ್ಯವಾಗುತ್ತಿತ್ತು. ಸಂಚಾರಕ್ಕೆ ರಸ್ತೆಯ ಅನುಕೂಲವಿದ್ದರೆ ಒಂದು ಗಾಡಿಯನ್ನು ಬಾಡಿಗೆಗೆ ಹಿಡಿದರೆ ಸಾಕಾಗುತ್ತಿತ್ತು. ಊರು ಸೇರಿದ ತರುವಾಯ ಡೇರೆಯ ವ್ಯವಸ್ಥೆಯೂ ಬೇಕಾಗುತ್ತಿರಲಿಲ್ಲ. ಹೆಚ್ಚಾಗಿ ಬಯಲಾಟಗಳೇ ಅಂದು ನಡೆಯುತ್ತಿದ್ದುವು.

ಆದರೆ ಯಕ್ಷಗಾನ ನಾಟಕ ಕಂಪೆನಿಯ ಹೊಣೆ ಹೊತ್ತ ನಮ್ಮ ಪರಿಸ್ಥಿತಿ ಅದಕ್ಕೆ ತೀರಾ ವ್ಯತಿರಿಕ್ತವಾಗಿತ್ತು.

ದೃಶ್ಯಾವಳಿಗಳಿಗಾಗಿ ಪರದೆಗಳು, ‘ಪಕ್ಕದ ರೆಕ್ಕೆ’ಗಳು, ಆಸನ- ಪೀಠೋಪಕರಣಗಳು, ಕಿರೀಟ-ಆಯುಧ, ಅಲಂಕಾರಗಳು ಇವೆಲ್ಲವುಗಳ ಜೊತೆಗೆ ಸಾಕಷ್ಟು ಫರ್ನಿಚರ್‌ಗಳನ್ನು ಸಾಗಿಸಲು ಎಂಟು ಹತ್ತು ಗಾಡಿಗಳನ್ನು ಅನುವು ಮಾಡಿಕೊಳ್ಳಬೇಕಾಗುತ್ತಿತ್ತು. ಎಷ್ಟೇ ಜನಪ್ರಿಯತೆ ಗಳಿಸಿದರೂ, ಕೆಲವು ದಿನಗಳ ತರುವಾಯ ಊರು ಬದಲಾಯಿಸಲೇಬೇಕಾಗುವುದಷ್ಟೇ.

ಊರಿಂದೂರಿಗೆ
ಬಟ್ಟೆಯ ಡೇರೆಗೆ ಬೇಕಾದ ಅನುಕೂಲ ನಮಗೆ ಇರಲಿಲ್ಲ. ಆದುದರಿಂದ ಪ್ರತಿಯೊಂದು ಊರಿನಲ್ಲೂ ”ಥಿಯೇಟರ್” ಕಟ್ಟಿಸಬೇಕಾಗುತ್ತಿತ್ತು. ಸರಾಸರಿ ಒಂದು ಸಾವಿರ ರೂ. ಅದಕ್ಕಾಗಿ ವೆಚ್ಚವಾಗುತ್ತಿತ್ತು.
ಮತ್ತಷ್ಟು ಓದು »

27
ಸೆಪ್ಟೆಂ

ತಾಯಿಯೋ ತಂದೆಯೋ…?

ಪ್ರವೀಣ್ ಬೆಂಗಳೂರು

  ಕೆಲಸ ಮುಗಿಸಿ ಹೊರಡುವ ಹೊತ್ತಾಯಿತು, ಹೊರ ಬಂದು ನೋಡಿದರೆ ಸಂಜೆಗತ್ತಲು. ಇನ್ನೇನು ಆಗಲೋ ಈಗಲೋ ಭೋರ್ಗರೆವ ಮಳೆಯ ಸೂಚನೆ ಆದರೂ ಲೆಕ್ಕಿಸದೆ ಹೊರಟೆ; ಹತ್ತು ಹೆಜ್ಜೆ ಹಾಕಿ ಮುನ್ನಡೆದೆ, ಮಳೆ ಸುರಿದೇ ಬಿಟ್ಟಿತು. ತಕ್ಷಣವೇ ನನ್ನ ಸೂಟ್‌ಕೇಸ್‌ನಲ್ಲಿದ್ದ ರೈನ್‌ಕೋಟ್ ತೆಗೆದು ಹಾಕಿಕೊಳ್ಳುವ ಹೊತ್ತಿಗೆ ನನೆದು ತೊಪ್ಪೆಯಾಗಿ ಹೋಗಿದ್ದೆ. ಆದರೂ ಧರಿಸಿ ನಡೆಯುತ್ತಲೇ ಹೊರಟೆ. ಮಾರ್ಗ ಮಧ್ಯದಲ್ಲಿ  ಶಾಲೆಯಿಂದ ಹೊರಟ ಮಗು ಮಳೆಯಿಂದ ಅಲ್ಲಿಯೇ ಬಳಿಯಿದ್ದ ಅಂಗಡಿಯ ಮುಂದೆ ಸ್ವಲ್ಪವೇ ನೆನೆಯುತ್ತಾ ನಿಂತಿದ್ದನ್ನು ಕಂಡೆ. ಮಗು ಚಳಿಯಿಂದ ನಡುಗುತ್ತಿತ್ತು. ನಾನು ಮಗುವಿನ ಬಳಿಗೆ ಹೋಗುವಷ್ಟರಲ್ಲಿ ಮಗುವಿನ ತಂದೆ ಬಂದು ಮಗುವನ್ನು ಬಿಗಿದಪ್ಪಿ ಹಿಡಿದು ಭುಜಕ್ಕೆ ಆನಿಸಿಕೊಂಡು ಹೊರಟರು. ಹಿಂದಿನಿಂದ ಮಗು ನನ್ನನ್ನು ನೋಡಿ ಸುಂದರವಾದ ನಗೆಯೊಂದ ಬೀರಿತು. ಆಗಲೇ ನನಗನ್ನಿಸಿತು ತಾಯಿಯ ಬಿಸಿಯಪ್ಪುಗೆಯಷ್ಟೇ ಮನಕ್ಕೆ ಆಹ್ಲಾದ ನೀಡುವುದು ತಂದೆಯ ಎದೆಯಪ್ಪಿಗೆ ಎಂದು. ಎಲ್ಲಿಯೋ ಓದಿದ್ದ ನೆನಪು ತಂದೆಯು ಎದೆಗೆ ಅಪ್ಪಿಕೊಂಡು ಮಗುವನ್ನು ಮಲಗಿಸುವಾಗ ಆ ಮಕ್ಕಳು ಬೇಗೆ ಮಲಗುತ್ತವೆ ಕಾರಣ ತಂದೆಯ ಹೃದಯ ಬಡಿತ ತನ್ನ ಮಗುವಿನ ಹೃದಯ ಮಿಡಿತಕ್ಕೆ ಕೊಂಡಿಯಂತಿರುತ್ತದೆ.
ಮತ್ತಷ್ಟು ಓದು »

26
ಸೆಪ್ಟೆಂ

ಕಳ್ಳತನವೊಂದು ಬಿಟ್ಟು ಎಲ್ಲ ಕೆಲ್ಸ ಬರುತ್ತೆ ಸ್ಸಾರ್. .

-ಕಾಲಂ೯

ಮಾಧ್ಯಮದಿಂದ ಬಹುದೂರದಲ್ಲಿ ಆಗಿಹೋದ ಸಂಭಾಷಣೆಯಿದು. ನಮ್ಮ ರಸ್ತೆಯ ಸ್ವಚ್ಛತೆಯ ಹೊಣೆಹೊತ್ತ ಪೌರಕಾರ್ಮಿಕ ನಾಗರಾಜನೊಂದಿಗೆ ಅದೊಂಥರಾ ದೋಸ್ತಿ. ಬೆಳಗಿನ ವಾಕಿಂಗ್ – ಅವನೆಲ್ಲೋ ಎದುರಾಗಿ `ನಮಸ್ಕಾರ ಸ್ಸಾರ್’ ಎಂಬ ಮುಗುಳ್ನಗೆ ಧಕ್ಕದೆ ಮುಗಿಯೋದಿಲ್ಲ. ಮಾತಿಗೇನಾದರೂ ನಿಂತರೆ ಅನೇಕ ಸಲ ಅವನು ಹೊಸ ಹೊಳಹುಗಳನ್ನು ಸರಳವಾಗಿ ದಾಟಿಸಿಬಿಡ್ತಾನೆ. ಮೊನ್ನೆ ಆದದ್ದು ಹಾಗೆಯೇ.

ನಾವಿರೋ ಕಟ್ಟಡದ ಡ್ರೈನೇಜ್ ಬ್ಲಾಕ್ ಆಗಿ ಬದುಕು ಅಸಹನೀಯವೆನಿಸಲು ಆರಂಭವಾಗಿತ್ತು. ಹೀಗಾಗಿದೆ ಸ್ವಲ್ಪ ನೋಡು ಬಾ ಮಾರಾಯ ಅಂತಂದದ್ದೇ ತಡ ನಾಗರಾಜ ಬಂದ. ಸಮಸ್ಯೆ ಗಂಭೀರವಾಗೇ ಇದೆ, ಆಪರೇಷನ್ನೇ ಮಾಡಬೇಕಿದೆ ಎಂಬುದನ್ನು ಗಮನಕ್ಕೆ ತಂದು ಕೆಲಸ ಶುರು ಹಚ್ಚಿಕೊಂಡ. ಮತ್ಯಾವಗಲೋ ರಿಪೇರಿ ನಡೆದ ಜಾಗಕ್ಕೆ ಹೋದೆ. ಪೈಪ್‌ಲೈನ್ ಒಡೆದು ಹೋಗಿತ್ತು. ಅದನ್ನು ರೀಪ್ಲೇಸ್ ಮಾಡುತ್ತಾ ಬಾಣಲೆಯಲ್ಲಿ ಕಲಸಿದ ಸಿಮೆಂಟು ಇಟ್ಟುಕೊಂಡು ಕೆಲಸ ಮಾಡುತ್ತಿದ್ದ. ಹಾಗೇ ಕೇಳಿದೆ `ನಾಗರಾಜಣ್ಣ ನಿಂಗೆ ಗಾರೆ ಕೆಲ್ಸನೂ ಬರುತ್ತಾ?’. ಆಳದಲ್ಲೆಲ್ಲೋ ಹುದುಗಿಸಿದ್ದ ತಲೆಯನೆತ್ತಿ ನಾಗರಾಜ ಹೇಳಿದ `ಕಳ್ಳತನವೊಂದು ಬಿಟ್ಟು ಎಲ್ಲ ಕೆಲ್ಸ ಬರುತ್ತೆ ಸ್ಸಾರ್. . . ’ ದೀರ್ಘವಾಗಿ ಉಸಿರೆಳೆದುಕೊಳ್ಳುವ ಸರದಿ ನನ್ನದಾಗಿತ್ತು. ಕಳ್ಳತನದ ಹೊಸ ಅಧ್ಯಾಯಗಳನ್ನು ತೆರೆದು ಕಂಬಿ ಎಣಿಸುತ್ತಿರುವ ಯಾರ‍್ಯಾರೋ ಕಣ್ಣ ಮುಂದೆ ಬಂದು ಹೋದರು. ಸುದ್ದಿಗಾಗಿ ಕಾಸಿನ ಮಾಧ್ಯಮದ ಜಾಯಮಾನವೂ ಕಣ್ಣೆದುರು ಬಂದು ಹಿಂಡಿ ಹಾಕಿತು. ಮತ್ತಷ್ಟು ಓದು »

24
ಸೆಪ್ಟೆಂ

ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ : ಬಣ್ಣದ ಬದುಕು 3 – ನಜ್ಜು ಗುಜ್ಜಾಗುವ ಪ್ರಹ್ಲಾದ

ಮನೆಯಲ್ಲೊಂದು ದಿನ ಯಾವುದೋ ಶುಭಕಾರ್ಯ ನಿಮಿತ್ತ ನೆರೆಕರೆಯವರು ಸೇರಿದ್ದರು. ನಮ್ಮ ಊರಿನತ್ತ ಯಾವುದೇ ಕಾರ್ಯಕ್ಕಾಗಿ ಭೇಟಿ ಕೊಟ್ಟರೆ ‘ಉಂಡೊಡನೆ ಊರು ಬಿಡುವ’ ಕ್ರಮವಿರುವುದಿಲ್ಲ.

ಆ ದಿನ ಸಂಜೆಯ ಹೊತ್ತಿಗೆ ತೆರಳುವವರು ತೆರಳಿದ ತರುವಾಯವೂ, ಕೆಲವರು ಸಮೀಪದವರು ಉಳಿದಿದ್ದರು. ಬಂಧುಗಳೂ ಇದ್ದರು.

ಊರಿನ ಹಲವು ಸಮಸ್ಯೆಗಳ, ಜನರ ನಡೆನುಡಿಯ ವಿಚಾರಗಳ ಚರ್ಚೆ ಮಾತುಕತೆಗಳಲ್ಲಿ ಆಗುತ್ತಿತ್ತು. ಅಂತೆಯೇ ಮಾತು ಮುಂದುವರಿದು ತಾಳಮದ್ದಳೆಯ ಕಡೆಗೂ ತಿರುಗಿತು. ಬರಿಯ ಮಾತಿನಿಂದ ಪಾತ್ರ ಪೋಷಣೆಯಾಗುವುದಿಲ್ಲ, ಸಜೀವ ಚಿತ್ರಣವಾಗುವುದಿಲ್ಲ ಎಂದು ಒಬ್ಬರು ಹೇಳಿದರು.

”ಪಾತ್ರ ಚಿತ್ರಣ ಬೇಕಾದರೆ ಬಯಲಾಟವನ್ನೇ ನೋಡಬೇಕು” ಎಂದರು ಇನ್ನೊಬ್ಬರು.

ಮಳೆಗಾಲ ಕಳೆದಿದ್ದು, ಮೇಳಗಳು ಹೊರಡುವುದಕ್ಕೆ ಇನ್ನೂ ಸಮಯವಿದ್ದುದಾಗಿ ನನ್ನ ನೆನಪು.
ಮತ್ತಷ್ಟು ಓದು »

23
ಸೆಪ್ಟೆಂ

ಕುರುಡಾಗದಿರು ಭಾರತೀಯ ನಿನ್ನ ಕಣ್ಣುಗಳಿರುವ ತನಕ..

ಅಶ್ವಿನ್ ಎಸ್ ಅಮೀನ್

ಕೋಮುವಾದ, ಜಾತಿವಾದ,  ಇವುಗಳ ನಡುವಿನ ಸಂಘರ್ಷಗಳು ಯಾವ ದೇಶದಲ್ಲಿ ಎಷ್ಟರವರೆಗೆ ಇರುತ್ತವೆಯೋ ಅಲ್ಲಿಯ ತನಕ ಆ ದೇಶದ ಬೆಳವಣಿಗೆ ಕುಂಠಿತವಾಗಿ ಸಾಗುತ್ತದೆ. ಅದರಲ್ಲೂ ಆಳುವ ಸರಕಾರಗಳು ನಡೆಸುವ ಒಂದು ಸಮುದಾಯದವರ ಓಲೈಕೆ ಅದು ಅಲ್ಪಸಂಖ್ಯಾತರನ್ನಾಗಲೀ, ಬಹುಸಂಖ್ಯಾತರನ್ನಾಗಲೀ ದೇಶದ ಹಿತದೃಷ್ಟಿಯಿಂದ ಒಳ್ಳೆಯದಲ್ಲ.

ನಮ್ಮೀ ಭಾರತ ಇದೆಲ್ಲ ಸಮಸ್ಯೆಗಳಿಂದ ಹೊರತಾಗಿಲ್ಲ.. ಬಹುಶಃ ಈ ತರಹದ ಕೋಮು ವಿಂಗಡಣೆ, ಜಾತಿ ವಿಂಗಡಣೆ ರಾಜಕೀಯ ಭಾರತದಲ್ಲಿ ಬಿಟ್ಟರೆ ಬೇರೆಲ್ಲೂ ಕಾಣಸಿಗದು..! ತಾಜಾ ಉದಾಹರಣೆಯಾಗಿ ಕೇಂದ್ರದ NAC ಸಿದ್ದಪಡಿಸಿದ ಕೋಮು ಸಂಘರ್ಷ ನಿಯಂತ್ರಣಾ ಕಾಯಿದೆಯ ಕರಡು ರೂಪದಲ್ಲೊಮ್ಮೆ ಕಣ್ಣಾಡಿಸಿ. ಇಲ್ಲಿ ಕಾಣಸಿಗುವುದು ಅಲ್ಪ ಸಂಖ್ಯಾತ, ಬಹು ಸಂಖ್ಯಾತ, ಪರಿಶಿಷ್ಟ ವರ್ಗ – ಪಂಗಡಗಳೆಂಬ ವಿಂಗಡಣಾ ರಾಜಕೀಯ.
ಕೋಮು ಸಂಘರ್ಷಗಳಲ್ಲಿ ತಪ್ಪಿತಸ್ಥರಾದವರಿಗೆ ಎಲ್ಲರಿಗೂ ಶಿಕ್ಷೆಯಾಗುವುದಾದರೆ ಈ ಕೋಮು ಸಂಘರ್ಷ ನಿಯಂತ್ರಣ ಕಾಯಿದೆ ಸ್ವಾಗತಾರ್ಹವಾಗುತಿತ್ತು. ಇಡೀ ಭಾರತಕ್ಕೆ ಭಾರತವೇ NAC ಯ ಮುಖ್ಯಸ್ಥೆ ಸೋನಿಯಾ ಗಾಂದಿಯವರನ್ನು ಅಭಿನಂದನೆಗಳಿಂದ ಮುಳುಗೇಳಿಸುತ್ತಿತ್ತು. ಆದರೆ ಹಾಗಾಗಲಿಲ್ಲ..! ಕಾರಣ ಇಲ್ಲಿ ಕೇವಲ ಬಹುಸಂಖ್ಯಾತರಿಗಷ್ಟೇ ಶಿಕ್ಷೆ.. ಅಲ್ಪಸಂಖ್ಯಾತರು ಯಾವುದೇ ಗಲಬೆಗಳಲ್ಲಿ ಪಾಲ್ಗೊಂಡರೂ ಈ ಕಾಯಿದೆಯಡಿ ಶಿಕ್ಷೆಯಿಲ್ಲ. ಅದರಲ್ಲೂ ಬೆಂಕಿಗೆ ತುಪ್ಪ ಸುರಿದಂತೆ ಬಹುಸಂಖ್ಯಾತ ಹಿಂದೂ ಧರ್ಮದಿಂದ ಪರಿಶಿಷ್ಟ ವರ್ಗ-ಪಂಗಡಗಳನ್ನು ಬೇರ್ಪಡಿಸಿರುವುದು..! ಪರಿಶಿಷ್ಟ ವರ್ಗ-ಪಂಗಡಗಳಿಗೆ ಸೌಲಭ್ಯ ಕಲ್ಪಿಸಿರುವುದು ಒಳ್ಳೆಯದೇ ಆಗಿದೆ. ಆದರೆ ಇಲ್ಲಿ ಭಾರತದ ಮೂಲ ಧರ್ಮವಾದ ಸನಾತನ ಹಿಂದೂ ಧರ್ಮವನ್ನು ಒಡೆಯುವ ಷಡ್ಯಂತ್ರ ಅಡಗಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಬೇಕು. ಮತ್ತಷ್ಟು ಓದು »
22
ಸೆಪ್ಟೆಂ

”ಅರುಣರಾಗ”

ರಾಘವೇಂದ್ರ ನಾವಡ ಕೆ ಎಸ್

“ಅಗ್ನಿಮೀಳೇ ಪುರೋಹಿತ೦ ಯಜ್ಞಸ್ಯ ದೇವ ಮೃತ್ವಿಜ೦“…. ನಿಧಾನವಾಗಿ ದೇವರ ಮನೆಯಿ೦ದ ಕೇಳಿ ಬರುತ್ತಿದ್ದ ಮ೦ತ್ರದಿ೦ದಲೇ ನನಗೆ ಗೊತ್ತಾಗಿ ಹೋಯಿತು. ರಾಯರು ಮನೆಯಲ್ಲಿಯೇ ಇದ್ದಾರೆ೦ದು. ಮು೦ದಡಿಯಿಡುತ್ತಿದ್ದ  ಕಾಲನ್ನು ಹಿ೦ದೆಗೆದೆ. ಕರೆಗ೦ಟೆ ಒತ್ತುವುದೇ ಬೇಡವೇ ಎ೦ಬ ಸ೦ದೇಹ… ಸ್ವಲ್ಪ ಹೊತ್ತು ಕಾಯೋಣವೆ೦ದು. ನಿರ್ಮಾಲ್ಯ ಸ್ನಾನ.. ಅಲ೦ಕಾರ.. ನೈವೇದ್ಯ ಮ೦ಗಳಾರತಿ.. ಕನಿಷ್ಟವೆ೦ದರೂ ಇನ್ನರ್ಧ ಘ೦ಟೆ ಕಾಯಲೇಬೇಕೆ೦ಬ ಅರಿವು ಮೂಡಿತಲ್ಲದೆ, ಸುಮ್ಮನೇ ವಿಳ೦ಬವಾಗುತ್ತದಲ್ಲ ಎ೦ದೂ ಬೇಸರಿಸಿದೆ. ಆದರೆ ಇ೦ದು ಅವಶ್ಯವಾಗಿ ನನಗೆ ಶೇಷಗಿರಿರಾಯರನ್ನು ನೋಡಲೇ ಬೇಕಿತ್ತು. ಬಾಲಾಪರಾಧ ಕೇ೦ದ್ರದಲ್ಲಿ ನೋಡಿ ಬ೦ದ ನನ್ನ ಮಗನ ಬಗ್ಗೆ ಮಾತಾಡಲೇ ಬೇಕಿತ್ತು. ಹಿ೦ದಿನ ದಿನ ರಾತ್ರಿಯೇ ರಾಯರು ಹೇಗೋ ಸ೦ಗ್ರಹಿಸಿದ ನನ್ನ ದೂರವಾಣಿ ಸ೦ಖ್ಯೆಗೆ ಸೂಚ್ಯವಾಗಿ ವಿಚಾರ ತಿಳಿಸಿ, ಬೆಳಿಗ್ಗೆ ನಮ್ಮನ್ನು ಅವರ ಮನೆಗೆ ಬರ ಹೇಳಿದ್ದರು.

ಅದೂ-ಇದೂ ಹಾಳು ಮೂಳು ಯೋಚನೆಗಳಾದರೂ ನನ್ನ ಮಗನ ಸುತ್ತಲೇ ಸುತ್ತುತ್ತಿದ್ದವು. ಇಷ್ಟಪಟ್ಟು ಮದುವೆಯಾದ ಶಾ೦ತಿ, ಹೆಸರಿನಲ್ಲಲ್ಲದೆ, ಬಾಳಿಗೂ ಶಾ೦ತಿ ತ೦ದಿದ್ದಳು. ಹೆಚ್ಚು ದಿನ ಕಾಯಿಸಲೂ ಇಲ್ಲ! ಮುದ್ದು “ಅರುಣ“ನನ್ನು ನನಗೆ ನೀಡಿದ್ದಳು. ನಮ್ಮಿಬ್ಬರ ಬಾಳಿನ ಬೆಳಕಿನ೦ತೆ ಬೆಳಗುತ್ತಿದ್ದ ಅರುಣನಿಗೆ ೬ ವರ್ಷ ತು೦ಬುವಷ್ಟರಲ್ಲಿ ಶಾ೦ತಿ ನನ್ನಿ೦ದ ಹಾಗೂ ಅರುಣನಿ೦ದ ದೂರಾದಳು.. ಮತ್ತೆರಡು ವರ್ಷ ಅವನನ್ನು ನಾನೇ ಕಣ್ರೆಪ್ಪೆ ಕೊ೦ಕಾಗದ೦ತೆ ಸಾಕಿದ್ದು. ಯಾವುದಕ್ಕೂ ಕಡಿಮೆಯಿರದ ಆರ್ಥಿಕ ಸ್ಥಿತಿ ನನ್ನದು. ಸುಮಾರು ೨ ಎಕರೆ ಅಡಿಕೆ ತೋಟದಲ್ಲಿಯೇ ಬದಿಗೆಲ್ಲಾ ತೆ೦ಗಿನ ಮರಗಳು.. ಏನೂ ತೊ೦ದರೆಯಿಲ್ಲದೆ ದಿನ ಕಳೆಯುತ್ತಿದ್ದವು. ಆ ದಿನಗಳಲ್ಲಿಯೇ ಪರಿಚಯವಾದವಳು ಮೀರಾ… ಏನೋ ಒ೦ದು ರೀತಿಯ ಆಕರ್ಷಣೆಯೋ ಸೆಳೆತವೋ.. ಅರುಣನ ಇರುವನ್ನು ಅರಿತೂ ನನ್ನನ್ನು ಪ್ರೀತಿಸಿದಳು. ಮತ್ತೊಮ್ಮೆ ಗೃಹಸ್ಥನಾಗಿ,ಮೀರಾಳನ್ನೂ ಮನೆ-ಮನ ತು೦ಬಿಸಿಕೊ೦ಡೆ. ಅವಳ ನೆರಳಿನಲ್ಲಿಯೂ ಅರುಣನಿಗ್ಯಾವುದೇ ಭಯವಿರಲಿಲ್ಲ.. ಮೊದ-ಮೊದಲು ನಿಧಾನವಾದರೂ  ನ೦ತರದ ದಿನಗಳಲ್ಲಿ ಅವರಿಬ್ಬರೂ ಪರಸ್ಪರ ಗೆಳೆಯರಾದರು.. ಆ೦ಟಿ ಅಮ್ಮನಾದಳು. ಮೀರಾಳಿಗೆ ಅರುಣ ಅವಳ ಮಗನೇ ಆಗಿ ಹೋದ. ಶಾಲೆಯಿ೦ದ ಬ೦ದಾಗ ಮೀರಾಳೇ ಮೊದಲು ಎದುರಾಗಬೇಕಿತ್ತು. ಶಾಲೆಯಿ೦ದ ಬ೦ದವನೇ, ತಾಯಿಯೊ೦ದಿಗೆ, ತೋಟಕ್ಕೂ ಬರುತ್ತಿದ್ದ. ಮದ್ದು ಹೊಡೆಸುತ್ತಲೋ, ಕಾಯಿ ಕೀಳಿಸುತ್ತಲೋ ಅಥವಾ ಇನ್ಯಾವುದಾದರೂ ಕೆಲಸದಲ್ಲಿ ಮುಳುಗಿರುತ್ತಿದ್ದ ನನ್ನನ್ನು ಎಚ್ಚರಿಸುತ್ತಿದ್ದದ್ದೇ ಅವನು ಓಡಿಕೊ೦ಡು ನನ್ನತ್ತ ಬರುತ್ತಾ ಕೂಗುತ್ತಿದ್ದ “ಅಪ್ಪಾ“ ಎನ್ನುವ ಕೂಗು. ಮತ್ತಷ್ಟು ಓದು »

17
ಸೆಪ್ಟೆಂ

ಕತ್ತಲೆಯಲ್ಲಿ ಕನ್ನಿಕಾ…

ಶ್ರೀಮುಖ ಸುಳ್ಯ

ಕತ್ತಲೆಯ ಕೋಣೆಯಲ್ಲಿ ಕನ್ನಿಕಾ ಬಿಕ್ಕಿ-ಬಿಕ್ಕಿ ಅಳುತ್ತಾ ಇದ್ದಾಳೆ. ಅವಳ ಕಣ್ಣೀರು ಕಣ್ಣನ್ನು ತೊರೆಯದಂತೆ ರೆಪ್ಪೆಗಳು ಮಾಡಿದ ಯತ್ನಗಳು ವಿಫಲವಾಗುತ್ತಿವೆ. ಕಣ್ಣಿನ ರೆಪ್ಪೆಯ ಬಂಧವನ್ನು ಕಳೆದು ಕಣ್ಣ ಹನಿಗಳು ಕೆನ್ನೆಯನ್ನು ಒರೆಸಿ, ಸಮಾಧಾನಿಸುವಲ್ಲಿ ಅಸಹಾಯಕರಾಗಿ ಕೆಳಬೀಳುತ್ತಿವೆ. ಮುಚ್ಚಿದ ಕೋಣೆಯ ಬಾಗಿಲು- ಆಕೆಯ ನೋವು ಕತ್ತಲಿನಿಂದ ಬೆಳಕಿನೆಡೆಗೆ ಸರಿಯದಂತೆ ನೋಡಿಕೊಳ್ಳುತ್ತಿವೆ. ತುಂಬಿದ ಮನೆಯ- ಮುಂದಿನ ಕೋಣೆಯ- ಗೋಡೆಗಳ ಬದಿಯಲ್ಲಿ ಆಕೆ ಕುಳಿತು ಅಳುತ್ತಿರುವ ಕಾರಣ ಆದರು ಏನು?!.. ಆಕೆಯ ಬೆಚ್ಚಗಿನ ಮಡಿಲಲ್ಲಿ, ಸೆರಗನ್ನು ಬಳಸಿ ಮಗುವಿನಂತಹ ಚಿಕ್ಕದೊಂದು ಗೊಂಬೆ ಉಸಿರಿಡದೆ ಮಲಗಿದೆ.    

          ಕೋಣೆಯ ಕತ್ತಲಿಗೂ- ಆಕೆ ಮಗುವಿನ ಮನಸ್ಸೊಂದನ್ನು ಕಳಕೊಂಡಿದ್ದಾಳೆ- ಎಂಬುದು ಸ್ಪಷ್ಟವಾಗಿ ತಿಳಿಯುವಂತಿದೆ. 
               ಸರಿಯಾಗಿ 2 ವರ್ಷಗಳ ಹಿಂದೆ, ಪರಮೇಶಿ ಅನ್ನುವ ದೂರದ ಸಂಬಂಧಿ ಕನ್ನಿಕಾಳಿಗೆ ಹತ್ತಿರವಾಗಿರುತ್ತಾನೆ. ಇಬ್ಬರೂ ಸ್ನೇಹಿತರಾಗಿರುತ್ತಾರೆ. ಪರಮೇಶಿ ಸ್ನೇಹವನ್ನು ಪ್ರೀತಿಯಾಗಿ ಬದಲಿಸುವ ಹಂಬಲವನ್ನು ಮುಂದಿಟ್ಟಾಗ,ಬಹಳ ಕಟುವಾಗಿ ತಿರಸ್ಕರಿಸಿದ ಕನ್ನಿಕಾ-ಕೆಲ ತಿಂಗಳುಗಳ ನಂತರ ಒಲುಮೆಗೆ ಒಪ್ಪಿಯೇ ಬಿಡುತ್ತಾಳೆ.  ಮತ್ತಷ್ಟು ಓದು »
12
ಸೆಪ್ಟೆಂ

ರೇಲ್ವೇ ಇಲಾಖೆ ಮತ್ತು ಹಿಂದಿ ಹೇರಿಕೆ.!

– ಮಹೇಶ.ಎಮ್.ಆರ್

ವಿ.ಸೂ: ಬೇರೆ ಒಂದು ಬಾಶೆಯನ್ನು ಗೌರವಿಸುವುದಕ್ಕೂ ಅದನ್ನು ನಮ್ಮ ಮೇಲೆ ಹೇರಿಸಿಕೊಳ್ಳುವುದಕ್ಕೂ ಇರುವ ವ್ಯತ್ಯಾಸವನ್ನು ತಿಳಿದಿರುವವರು ಮಾತ್ರ ಮುಂದುವರಿಯಲು ಕೋರಿಕೆ.!

ಸ್ವಾತಂತ್ರ್ಯ ನಂತರ, ಬಾರತೀಯತೆಗೂ ಹಿಂದಿಗೂ ತಳುಕು ಹಾಕಿ ಅದನ್ನು ರಾಶ್ಟ್ರ ಬಾಶೆ ಮಾಡಲು ಹೊರಟ ಕೇಂದ್ರ ಸರಕಾರದ ಮತ್ತು ಕೆಲವರ ಪ್ರಯತ್ನ ಅನೇಕ ಹಿಂದಿಯೇತರರ ವಿರೋದಿ ಹೋರಾಟದ ಫಲವಾಗಿ ವಿಫಲವಾಯಿತು. ಇದರ ತರುವಾಯ ಮುಂದೆ ಕೇಂದ್ರ ಸರಕಾರ ನೋಡಿಕೊಂಡ ದಾರಿಯೇ ಆಡಳಿತ ಬಾಶೆಯೆಂಬ ಹಿಂದಿನ ಬಾಗಿಲು. ಹಿಂದಿಯನ್ನು ಆಡಳಿತ ಬಾಶೆಯನ್ನಾಗಿ ಮಾಡಿ ತನ್ನ ಸಂಸ್ಥೆ, ಇಲಾಖೆ, ಬ್ಯಾಂಕುಗಳನ್ನು ಉಪಯೋಗಿಸಿ ಹಿಂದಿನ ಬಾಗಿಲ ಮೂಲಕ.

ಮತ್ತಷ್ಟು ಓದು »