ಇಂದಿನ ಯುವಕರು ಹಾಳಾಗಿದ್ದಾರೆಯೇ?
ಯೊಗೀಶ್ ಕೈರೋಡಿ
‘ಈಗಿನ ಯುವಕರು ಹಾಳಾಗಿದ್ದಾರೆ; ದಾರಿ ತಪ್ಪುತ್ತಿದ್ದಾರೆ’, ಇಂತಹ ಮಾತನ್ನು ಸಲೀಸಾಗಿ ಹೇಳಿ ಬಿಡುತ್ತೇವೆ. ಇದು ಸುಲಭದಲ್ಲಿ ಹೊರಳಿಕೊಳ್ಳುವ ನಾಲಗೆಯ ಮಾತೇ ಹೊರತು ಬುದ್ಧಿಪೂರ್ವಕ ವಿವೇಚನಯುಕ್ತ ಮಾತಲ್ಲ. ಭವಿಷ್ಯದ ಕುರಿತಂತೆ ಗಂಭೀರ ಚಿಂತನೆ ಹೊಂದಿರುವ ಅಧ್ಯಯನ ಶೀಲ ಹಾಗೂ ಮಾನವಪರವಾಗಿ ಯೋಚಿಸಿ ಕಾರ್ಯ ಪ್ರವೃತ್ತರಾಗುವ ಯುವಕರು ನಮ್ಮ ಸುತ್ತ ಸಾಕಷ್ಟು ಇದ್ದಾರೆ. ಪ್ರತೀ ಕಾಲವೂ ಕೂಡ ತನ್ನ ನಂತರದ ತಲೆಮಾರನ್ನು ಕೆಟ್ಟಿದ್ದಾರೆ ಎಂದೇ ಪರಿಗಣಿಸಿ ಸಾಗುತ್ತಾ ಬಂತು. ಆದುದರಿಂದ ಇದೆಲ್ಲ ತಲೆಕೆಡಿಸಬೇಕಾದ ಸಂಗತಿಯಲ್ಲ.
ಒಂದು ವೇಳೆ ಯುವಕರು ದಾರಿತಪ್ಪಿದ್ದಾರೆ ಎಂಬುದನ್ನು ಒಪ್ಪಿಕೊಳ್ಳುವುದಾದರೂ ಅದರ ಹೊಣೆ ಸುತ್ತಲಿನ ಸಮಾಜದ್ದೇ ಹೊರತು ಯುವಕರದ್ದಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಯುವಕರು ಸಾಕಷ್ಟು ಪ್ರಮಾಣದಲ್ಲಿ ಭಾಗಿಯಾಗಿದ್ದರು, ಅವರಿಗೆ ದೇಶ ಪ್ರೇಮವಿತ್ತು ಎಂದರೆ ಈ ರೀತಿಯ ಸದ್ಭಾವನೆಯನ್ನು ಆ ಕಾಲದ ಜವಾಬ್ದಾರಿಯುತ ಜನವರ್ಗ ಅಥವಾ ನಾಯಕರು ರೂಪಿಸಿದ್ದರು. ಇಂದು ರೀತಿಯ ಸದ್ಭಾವ ನೆಲೆಗೊಳ್ಳುವ ವಾತಾವರಣಕ್ಕಿಂತ ಮಾನವ ದ್ವೇಷಿ ವಾತಾವರಣ ನಿರ್ಮಾಣಕ್ಕೆ ಹೆಚ್ಚಿನ ಅವಕಾಶಗಳು ಒದಗಿ ಬರುತ್ತಿದೆ. ಇದರಿಂದ ಮುಕ್ತಗೊಂಡು ಸ್ವತಂತ್ರ ಹಾಗೂ ಸ್ವಸ್ಥ ಮನಸ್ಸು ಯುವ ಸಮುದಾಯದಲ್ಲಿ ನೆಲೆಗೊಳ್ಳುವ ವಾತಾವರಣ ನಿರ್ಮಾಣ ಒಂದು ಬಗೆಯ ಆಂದೋಲನದಂತೆ ನಡೆಯಬೇಕು. ವರ್ತಮಾನದ ನಮ್ಮ ಸುತ್ತಮುತ್ತಲಿನ ವಿದ್ಯಾಮಾನಗಳನ್ನು ಗಮನಿಸುವುದರೊಂದಿಗೆ ಸ್ವಸ್ಥ ಸಮಾಜದ ನಿರ್ಮಿತ ಸಾಧ್ಯ.
ವಿಭಜಕ ಮನಸ್ಸುಗಳ ಸೃಷ್ಟಿ:
ಜಾತಿ, ಮತ, ಪಕ್ಷ ಈ ಮೂರು ಅಂಶಗಳು ಮಾನವ ಮನಸ್ಸನ್ನು ನಿರಂತರ ಒಡೆಯುತ್ತಿದೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟ. ಒಂದು ಸಮಾಜದ ಏಳಿಗೆಯಲ್ಲಿ ಜಾತಿ ಅಥವಾ ಮತದ ಸೇವಾಪರ ಚಟುವಟಿಕೆಯ ಮಹತ್ವವನ್ನು ಅಲ್ಲಗೆಳೆಯುವಂತಿಲ್ಲ. ಜನತೆಯ ಕಣ್ಣೀರನ್ನು ಒರೆಸುವ ಕಾರ್ಯಗಳನ್ನು ಸಾಂಘಿಕ ನೆಲೆಯಲ್ಲಿ ಮಾಡಿದೆ ಎಂಬುದು ಸತ್ಯ. ಒಂದು ಸಮುದಾಯದ ಒಳಗಿರುವ ಉಳ್ಳವರು ದುರ್ಬಲರ ಏಳಿಗೆಗೆ ಸ್ಪಂದಿಸಲು ಇದೊಂದು ಉತ್ತಮ ವ್ಯವಸ್ಥೆ. ಆದರೆ ಒಂದು ವ್ಯವಸ್ಥೆಯ ಒಳಗಡೇ ಒಬ್ಬರನ್ನು ಒಬ್ಬರು ಅವಲಂಬಿಸಿ ಸಹಕಾರ ಪ್ರವೃತ್ತಿಯಿಂದ ಬದುಕಬೇಕಾದುದು ಅಷ್ಟೇ ಅಗತ್ಯ. ಸ್ವಸಂಘಟನೆಯ ಬಲವರ್ಧನೆಗಾಗಿ ಅನ್ಯ ಸಮುದಾಯವನ್ನು ಅನಾವಶ್ಯಕ ಶತ್ರುವಾಗಿ ಬಿಂಬಿಸುವ ಸಂದರ್ಭ ಒದಗಿ ಬರಬಹುದು. ಇದು ಪರಸ್ಪರ ಅಪನಂಬಿಕೆಗೆ ಕಾರಣವಾಗಿ ಮಾತು ಮುರಿಯದೆಯೂ ಅಶಾಂತಿಗೆ ಕಾರಣವಾಗಬಹುದು. ಪೂರ್ವಾಗ್ರಹ ಮನೆ ಮಾಡಬಹುದು. ಇನ್ನು ತನ್ನ ಪಕ್ಷಬಲಪಡಿಸಿ ಅಧಿಕಾರಕ್ಕೆ ಮತ್ತಷ್ಟು ಓದು 
ಬಂಗಾರಪಲ್ಕೆಗೆ ಮುಕ್ತಿ ಎಂದು?
ಪವನ್ ಎಂ.ಟಿ
ನಮ್ಮ ಸರಕಾರ ಕ್ರಿಕೇಟ್ ಆಟಗಾರರಿಗೆ ೨೫ ಲಕ್ಷ ರೂಪಾಯಿ ಹಣವನ್ನು ಕೊಡಲು ಮುಂದಾಗಿದೆ. ಪಾಪ ಅವರಿಗೆ ಏನೂ ಇಲ್ಲ ನೋಡಿ ಅದಕ್ಕೆ ಕೊಡ್ಲಿ ಬಿಡಿ. ನಮ್ಮ ಸರಕಾರದ ಹಣೆ ಬರಹವೇ ಅಷ್ಟು. ಹಣ ಇರುವವರಿಗೆ ಹಣವನ್ನು ನೀಡುತ್ತಾರೆಯೇ ಹೊರತು ಬಡವರಿಗೆ ನೀಡುವುದಿಲ್ಲ. ನಮ್ಮಲ್ಲಿ ಶ್ರೀಮಂತರೇ ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ ವಿನಹ ಬಡವ ಶ್ರೀಮಂತನಾದದಿಲ್ಲ. ನಮ್ಮಲ್ಲಿ ಕಾನೂನನ್ನು ಪಾಲಿಸುವವರಿಗೆ ಮಾತ್ರ ಕಾನೂನಿದೆ. ಆದರೆ ನಮ್ಮಲ್ಲಿ ಒಂದು ಒತ್ತಿನ ಊಟಕ್ಕೂ ಕಷ್ಟಪಡೊ, ನಾಗರೀಕ ಸೌಲಭ್ಯವನ್ನೇ ಕಾಣದೆ ಇರೋ ಕೆಲವು ಗ್ರಾಮಗಳಿವೆ, ಜನರಿದ್ದಾರೆ ಅಂತ ಸರಕಾರಕ್ಕೆ ಗೊತ್ತೇ ಇಲ್ಲ ಅಂತ ಕಾಣ್‌ತ್ತದೆ. ಯಾಕಂದ್ರೇ ನಮ್ಮ ಸರಕಾರಕ್ಕೆ ಕುರ್ಚಿ ಉಳಿಸ್‌ಕೊಳ್ಳೊ ಚಿಂತೆಯಾದರೆ ವಿರೋಧ ಪಕ್ಷಕ್ಕೆ ಕುರ್ಚಿ ಬೀಳಿಸೋ ಚಿಂತೆ ಇದರ ನಡುವೆ ಸಿಲುಕಿರೂ ಜನರ ಗತಿ ಅದೋಗತಿ.
ನಿಮ್ಮ ಮನೆಗೆ ಇನ್ನಾರದೋ ಮನೆಯ ರಸ್ತೆಯಲ್ಲಿ ಅಥವ ತೋಟದ ರಸ್ತೆಯಲ್ಲಿ ಹೋಗಬೇಕು ಎಂದಾದರೆ ನಿಮಗೆ ಮನೆಗೆ ಅಥವ ತೋಟಕ್ಕೆ ಸಂಬಂಧಪಟ್ಟ ಮಾಲಿಕನಿಂದ ಏನೆಲ್ಲ ನಿರ್ಭಂದಗಳು ಬರಬಹುದೆಂದು ನೀವೆ ಯೋಚಿಸಿ. ನಿವು ಅವ್ರು ಹೇಳುವ ಎಲ್ಲಾ ಮಾತುಗಳನ್ನು ಸರಿಯಾಗಿ ಕೇಳಿದರೆ ಮಾತ್ರ ನಿಮಗೆ ಅಲ್ಲಿ ಸಂಚರಿಸಲು ಅವಕಾಶ. ಹಾಗೆಂದು ನಿರ್ಭಂದನೆಯನ್ನು ಸಹಿಸಿಕೊಂಡು ಎಷ್ಟುದಿನವೆಂದು ನೀವು ಓಡಾಡುತ್ತಿರಿ. ಅದು ನಿಮ್ಮಿಂದ ನಮ್ಮಿಂದ ಕಂಡಿತಾ ಸಾಧ್ಯವಿಲ್ಲ. ಆದ್ರೆ ಇಲ್ಲಿ ಎಲ್ಲ ನಿರ್ಭಂದನೆಗಳ ನಡುವೆ ಸರಿಯಾದ ರಸ್ತೆ ಇಲ್ಲದೆಬದುಕುತ್ತಿರುವವರು ಬೆಳ್ತಂಗಡಿತಾಲೂಕಿನ ದಿಡುಪೆಯ ಸಮೀಪದ ಬಂಗಾರು ಪಲ್ಕೆಯ ಮಲೆಕುಡಿರು. ಪಾಪ ಇವರ ಪರಿಸ್ಥಿತಿಯನ್ನು ನಮ್ಮಲ್ಲಿ ಆಡಳಿತಗಾರರೆಂದು ಕರೆಯಿಸಿಕೊಳ್ಳುವವರಿದ್ದಾರಲ್ಲ ಅವರೊಮ್ಮೆ ಬಂದು ನೋಡಬೇಕು.
ನಾವು ಮಲೆಕುಡಿಯರ ಪ್ರದೇಶಗಳಿಗೆ ಭೇಟಿ ನೀಡಿದಾಗ ನಮಗೆ ದಿಡುಪೆಯ ಬಂಗಾರು ಪಲ್ಕೆ ಅನೇಕ ಕಾರಣಗಳಿಂದ ಕುತೂಹಲ ಮೂಡಿಸಿತ್ತು ಇಲ್ಲಿಯ ರಸ್ತೆ, ಜನ, ನಾಗರಿಕ ಸೌಲಭ್ಯ ಎಲ್ಲವೂ ಇಲ್ಲಿ ವಿಭಿನ್ನವೇ.
ಬೆಳ್ತಂಗಡಿ ತಾಲ್ಲೂಕಿನಲ್ಲಿರುವ ದಿಡುಪೆ ಎನ್ನವ ಸ್ಥಳದಿಂದ ಸುಮಾರು ೧೫ ಕಿಲೋಮೀಟರ್ ದೂರದಲ್ಲಿರುವ ಬಂಗಾರ್ ಪಲ್ಕೇಗೆ ತೆರಳಬೇಕಾದರೆ, ಪ್ರಪಂಚದ ಅತ್ಯಂತ ಕೆಟ್ಟದಾದ ರಸ್ತೆ ನಮಗೆ ಸಿಗುತ್ತದೆ. ಮನುಷ್ಯ ಸರಿಯಾಗಿ ಕಾಲು ನಡಿಗೆಯಲ್ಲಿಯೂ ಸಂಚರಿಸಲು ಸಾಧ್ಯವಿಲ್ಲದ ಈ ರಸ್ತೆ ಕುದುರೆಮುಖ ರಾಷ್ಟ್ರೀಯ ಉಧ್ಯಾನದ ಒಳಗಿದೆ. ಬೇಸಿಗೆ ಸಮಯವಾದುದರಿಂದ ನಮಗೆ ತೆರಲು ಒಂದೊ ೪ ವೀಲ್ ವ್ಯವಸ್ಥೆಯಿರುವ ಒಂದು ಜೀಪ್ ನಮಗೆ ಸಿಕ್ಕಿತು ಈ ೪ ವೀಲ್ ಜೀಪ್ ಬಿಟ್ಟು ಬೇರೆ ಯಾವುದೇ ವಾಹನ ಅಲ್ಲಿಗೆ ತೆರಳು ಸಾಧ್ಯವಿಲ್ಲ. ಮತ್ತಷ್ಟು ಓದು 
ಕನ್ನಡ ಆಡಳಿತ ಭಾಷೆ ಯಾಕಾಗಿಲ್ಲ ಗೊತ್ತೆ!?
– ವಸಂತ್ ಶೆಟ್ಟಿ
ಕನ್ನಡ ನಾಡು ಏಕೀಕರಣಗೊಂಡು ದಶಕಗಳೇ ಕಳೆದರೂ ಕನ್ನಡ ಎಲ್ಲ ಹಂತದಲ್ಲಿ ಆಡಳಿತ ಭಾಷೆಯಾಗಿ ಅನುಷ್ಠಾನಗೊಂಡಿಲ್ಲ ಅನ್ನುವ ಕೂಗು ನಾವೆಲ್ಲರೂ ಕೇಳಿಯೇ ಇರುತ್ತೇವೆ. ಇದಕ್ಕೆ ಸರ್ಕಾರದ ಇಚ್ಛಾಶಕ್ತಿಯ ಕೊರತೆಯೇ ಕಾರಣ ಎಂದೂ ಕೇಳಿರುತ್ತೇವೆ. ಭಾಷಾ ವಿಜ್ಞಾನಿ ಕೆ.ವಿ.ನಾರಾಯಣ ಅವರ ಕನ್ನಡ ಜಗತ್ತು: ಅರ್ಧ ಶತಮಾನ ಅನ್ನುವ ಹೊತ್ತಗೆ ಓದುತ್ತಾ ಇದ್ದೆ. ಅಲ್ಲಿ ಈ ಬಗ್ಗೆ ಅವರು ಕೊಡುವ ವಿವರಣೆ ಒಂದು ರೀತಿಯಲ್ಲಿ ಬೇರೆಯಾಗಿದೆ ಅನ್ನಬಹುದು. ಸರ್ಕಾರದ ಹೆಚ್ಚಿನ ಪ್ರಯತ್ನ (ಬಾಯಿ ಮಾತಲ್ಲಿ ಅಂತ ಬೇಕಾದ್ರೂ ಅಂದುಕೊಳ್ಳೊಣ 🙂 )ದ ನಂತರವೂ ಆಡಳಿತದಲ್ಲಿ ಕನ್ನಡ ಬಳಕೆ ಒಂದು ರೀತಿಯಲ್ಲಿ ಪಿರಮಿಡ್ ನಂತೆ ನಮಗೆ ಗೋಚರಿಸುತ್ತೆ. ಕೆಳ ಹಂತದಲ್ಲಿ ಕನ್ನಡ ವ್ಯಾಪಕವಾಗಿ ಬಳಕೆಯಾದರೆ, ಮೇಲೆ ಮೇಲೆ ಹೋದಂತೆ ಅದರ ಪ್ರಮಾಣ ಕಡಿಮೆಯಾಗುತ್ತ ಹೋಗುತ್ತದೆ. ಹಾಗಿದ್ದರೆ ಆಡಳಿತದಲ್ಲಿ ಕನ್ನಡದ ಬಳಕೆ ಅಂದುಕೊಂಡ ಮಟ್ಟದಲ್ಲಿ ಗೆಲುವು ಪಡೆಯದಿರಲು ಕಾರಣವೇನು ಎಂದು ಅವರು ಕೊಟ್ಟ ವಿವರಣೆಯನ್ನು ಈ ಕೆಳಗೆ ಕೊಟ್ಟಿರುವೆ.
ಈ ಅಪಯಶಸ್ಸನ್ನು ಎರಡು ದಿಕ್ಕಿನಿಂದ ವಿಶ್ಲೇಷಿಸಬೇಕಾದ ಅಗತ್ಯವಿದೆ. ಕಾರ್ಯಕ್ರಮ ಯಶಸ್ಸು ಪಡೆಯದಿರಲು ಅದರ ಹಿಂದಿನ ಯೋಜನಾ ತಂತ್ರಗಳಲ್ಲಿ ಕೊರತೆ ಇರುತ್ತದೆ. ಅಥವಾ ಅನುಷ್ಠಾನದ ಹಂತದಲ್ಲಿ ಹಲವು ಎಡರು ತೊಡರುಗಳಿರಬೇಕು. ಈ ದಿಕ್ಕಿನಿಂದ ನೋಡಿದಾಗ ಕನ್ನಡ ಅನುಷ್ಠಾನಕ್ಕೆ ಬೇಕಾದ ಭಾಷಾನೀತಿ ಮತ್ತು ಯೋಜನೆಗಳು ರಾಜ್ಯ ಸರ್ಕಾರಕ್ಕೆ ಇಲ್ಲವೆಂಬ ನಿರ್ಣಯಕ್ಕೆ ಬರುವುದು ಸಾಧ್ಯ. ಆದರೆ ಇದನ್ನು ಇನ್ನೊಂದು ದಿಕ್ಕಿನಲ್ಲಿ ನೋಡಿದಾಗ ಬೇರೆಯ ಸಾಧ್ಯತೆ ಗೋಚರಿಸುತ್ತದೆ.
ವೋಟ್ ಬ್ಯಾಂಕ್ ಭಾಷೆಯಾಗಲಿ ಕನ್ನಡ
– ರಾಕೇಶ್ ಶೆಟ್ಟಿ
ಪತ್ರಿಕೆಗಳಲ್ಲಿ ಆಗೀಗ ‘ಅನ್ನ ಕೊಡುವ ಭಾಷೆಯಾಗಲಿ ಕನ್ನಡ’ ಅನ್ನೋ ಕಳಕಳಿಯ ಲೇಖನಗಳು ಬರುತ್ತಲೇ ಇರುತ್ತವೆ.ಒಂದೆಡೆ ‘ಸರ್ವಂ ಇಂಗ್ಲೀಶ್ ಮಯಂ’ ಮತ್ತೊಂದೆಡೆ ‘ಏಕಮ್ ಭಾರತಂ ಹಿಂದಿಮಯಂ’ (ಈ ಮಂತ್ರ ಸರಿ ಇಲ್ಲ ಅಂತೆಲ್ಲ ಹೇಳ್ಬೆಡಿ 😉 ) ಅನ್ನೋ ಕೇಂದ್ರದ ನೀತಿಯ ನಡುವೆ ಕನ್ನಡ ‘ಅನ್ನ’ ಕೊಡುವ ಭಾಷೆಯಾಗುವುದು ಹೇಗೆ? ನನಗನ್ನಿಸುವ ಹಾಗೆ, ಈಗಿನ ಪರಿಸ್ಥಿತಿಯಲ್ಲಿ ಅನ್ನ ಕೊಡುವ ಭಾಷೆಯಾಗುವ ಶಕ್ತಿ ಬರಬೇಕೆಂದರೆ ಮೊದಲು ‘ವೋಟ್ ಕೊಡುವ ಭಾಷೆಯಾಗಬೇಕು ಕನ್ನಡ’.ಎಲ್ಲ ಪಕ್ಷಗಳು ಕುಣಿಯುವುದು ವೋಟಿಗಾಗಿ,ಪುಡಿ ವೋಟಿಗಾಗಿ ಅನ್ನೋ ಕಾಲವಿದು.ವೋಟಿಗಿರುವಷ್ಟು ಶಕ್ತಿ ಸದ್ಯಕ್ಕೆ ಯಾವುದಕ್ಕಿದೆ ನೀವೇ ಹೇಳಿ?
ಕೆಲವರು ನನ್ನ ಮಾತನ್ನು ಒಪ್ಪಬಹುದು ಇನ್ನ ಕೆಲವರು ಇದನ್ನ ನಿರಾಕರಿಸಬಹುದು. ನಿರಾಕರಿಸುವವರು ಭಾರತದ ರಾಜಕೀಯ ಇತಿಹಾಸವನ್ನೊಮ್ಮೆ ನೋಡುತ್ತಾ ಬನ್ನಿ.ಗಾಂಧೀಜಿ ಕಾಲದಿಂದ ಇಂದಿನವರೆಗೂ ನಮ್ಮಲ್ಲಿ ನಡೆಯುತ್ತಿರುವುದೇ ಓಲೈಕೆಯ ವೋಟ್ ಬ್ಯಾಂಕ್ ರಾಜಕಾರಣ ಅಲ್ವಾ?
ಗುಲ್ಬರ್ಗ ಜಿಲ್ಲೆ ಯಾವುದೇ ಕಲೆ/ಕಲಾವಿದರೂ ಇಲ್ಲದಂತಹಾ ಮರುಭೂಮಿಯೇ?
– ಅರುಣ್ ಜಾವಗಲ್
ಕಳೆದ ಕೆಲವು ದಿನಗಳಿಂದ ಕರ್ನಾಟಕ ಸರಕಾರ ಹಲವಾರು ಜಿಲ್ಲೆಗಳಲ್ಲಿ ಉತ್ಸವಗಳನ್ನ ನಡೆಸುತ್ತಿದೆ.ಈ ಕಾರ್ಯಕ್ರಮಗಳು ಕರ್ನಾಟಕದ ಜನರ ತೆರಿಗೆ ಹಣದಲ್ಲಿ ನಡೆಯುತ್ತವೆ. ಈ ಕಾರ್ಯಕ್ರಮಗಳಲ್ಲಿ ಮುಖ್ಯವಾಗಿ ಆಯಾ ಜಿಲ್ಲೆಯ ಮತ್ತು ನಮ್ಮ ನಾಡಿನ ಕಲಾವಿದರ ಕಾರ್ಯಕ್ರಮಗಳಿಗೆ ಅವಕಾಶವಿರಬೇಕು.ಆದರೆ ಆ ಪ್ರದೇಶದ ಮತ್ತು ನಮ್ಮ ನಾಡಿನ ಇತರೇ ಕಲಾವಿದರನ್ನ ಮರೆತಿರುವ ಸರಕಾರ ಹೊರ ರಾಜ್ಯದಿಂದ ಕಲಾವಿದರನ್ನ ಕರೆಸಿ ಉತ್ಸವಗಳನ್ನ ನಡೆಸುತ್ತಿದೆ.
ಕೆಲವು ದಿನಗಳ ಹಿಂದೆ ನಡೆದ ಬೀದರ್ ಉತ್ಸವದಲ್ಲಿ ಶೇಕಡಾ 90% ರಷ್ಟು ಕಾರ್ಯಕ್ರಮ ನಡೆಸಿಕೊಟ್ಟವರು ಬೀದರ್ ಜಿಲ್ಲೆಗಾಗಲೀ ಅಥವಾ ನಮ್ಮ ನಾಡಿಗೆ ಯಾವುದೇ ಸಂಭಂದವಿಲ್ಲದವರು.ಇದೀಗ ಇದೇ ತಿಂಗಳ 15 ರಿಂದ 17 ರ ವರೆಗೆ ಕರ್ನಾಟಕ ಸರಕಾರ ಗುಲ್ಬರ್ಗ ಉತ್ಸವವನ್ನ ಆಯೋಜಿಸಿದೆ.ಯಾವುದೇ ಅನುಮಾನವಿಲ್ಲದಂತೆ ಈ ಕಾರ್ಯಕ್ರಮಕ್ಕೂ ಸಹ ಪರಭಾಷಿಕರಿಗೆ ಬಹುಪರಾಕ್ ಹೇಳಲಾಗಿದೆ.
ಕನ್ನಡಕ್ಕೆ ಚಪ್ಪಲಿ ತೋರಿಸಿದವರು ಮಣ್ಣು ಮುಕ್ಕಲಿ…!
– ಜಯತೀರ್ಥ ನಾಡಗೌಡ, ವಿಜಾಪುರ
ಕನ್ನಡಕ್ಕೆ ಚಪ್ಪಲಿ ತೋರಿಸಿ ಕರ್ನಾಟಕದಲ್ಲೇ ಮೇಯರ್ ಆಗಲು ಸಾಧ್ಯವೇ! ಹೌದು ಇಂಥ ಘನಘೋರ ಕೃತ್ಯಗಳು ನಮ್ಮ ರಾಜ್ಯದಲ್ಲಿ ಮಾತ್ರ ಕಾಣ ಸಿಗುತ್ತವೆ. ಇತ್ತೀಚಿಗೆ ಬೆಳಗಾವಿಯಲ್ಲಿ ನಡೆದ
ವಿಶ್ವಕನ್ನಡ ಸಮ್ಮೇಳನ, ನಡೆಸಕೂಡದು ಎಂದು ಅಡ್ಡಿಪಡಿಸಿ ಚಪ್ಪಲಿ ತೋರಿಸಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ನ ನಿರ್ಲಜ್ಜ ಮಹಿಳೆ ಮಂದಾ ಬಾಳೆಕುಂದ್ರಿ ಬೆಳಗಾವಿಯ ಮೇಯರ್ ಆಗಿರುವುದು, ಎಲ್ಲ ಕನ್ನಡಿಗರು ತಮ್ಮ ಎಕ್ಕಡದಿಂದ ತಾವೇ ಹೊಡೆದುಕೊಂಡಂತೆ.
ಎಲ್ಲ ವರದಿ, ತೀರ್ಪುಗಳು ಬಂದು ಬೆಳಗಾವಿ ಕನ್ನಡದ ಅವಿಭಾಜ್ಯ ಅಂಗ ಅಂತ ಸಾಬೀತಾದರೂ, ಹಾಳು .ಈ.ಎಸ್ ನ ಕಾರ್ಯಕರ್ತರು ಪುಂಡಾಟಿಕೆ ಮಾಡುತ್ತಿರುವುದು ನಮ್ಮ ಆಳಿದ/ಆಳುವ ಘನಂದಾರಿ ಪಕ್ಷಗಳ ಕಾಣಿಕೆಯೇ ಸರಿ. ಕ.ರ.ವೇ ಸತತ ಪರಿಶ್ರಮದಿಂದ ಜಾಗ ಖಾಲಿ ಮಾಡಿದ್ದ ಶಿವಸೇನೆ, ಎಂಇಎಸ್ ನವರನ್ನು ಮತ್ತೆ ಬೆಳೆಯಲು ಬಿಟ್ಟು ಇಂಥ ರಾಜದ್ರೋಹಿಗಳೊಂದಿಗೆ ಚುನಾವಣ ಹೊಂದಾಣಿಕೆ ಮಾಡಲು ಕೂಡ ನಮ್ಮ ಕೆಲ ಧುರೀಣರು ಮನಸ್ಸು ಮಾಡಿದ್ದು ಎಲ್ಲರಿಗೂ ಗೊತ್ತಿದ್ದ ಸತ್ಯ.
ದಯವಿಟ್ಟು ಗುದ್ದಲಿಪೂಜೆಗೆ ಬನ್ನಿ…
– ಕಿರಣ ಬಾಟ್ನಿ
’ನಿಲುಮೆ’ಯಲ್ಲಿ ಪ್ರಕಟವಾಗಿದ್ದ ಶ್ರೀ ಅಜಕ್ಕಳ ಗಿರೀಶಬಟ್ಟರ ’ಕನ್ನಡಕ್ಕಿಂತ ತಮಿಳು ಯಾವುದರಲ್ಲಿ ಮುಂದಿದೆ?’ ಎಂಬ ಬರಹಕ್ಕೆ ಉತ್ತರವಾಗಿ ನಾನು ಬರೆದಿದ್ದ ’ಇಗೋ, ಇದರಲ್ಲಿ ಮುಂದಿದೆ’ ಎಂಬ
ಬರಹಕ್ಕೆ ಹಲವರು ತಮ್ಮ ಅನಿಸಿಕೆಯನ್ನು ತಿಳಿಸಿ, ಅದರ ಬಗ್ಗೆ ’ನಿಲುಮೆ’ಯಲ್ಲಿ ಚರ್ಚೆಯಾಗಿರುವುದು ಮನಸ್ಸಿಗೆ ಮುದ ತಂದಿದೆ. ಕನ್ನಡದ ಸೊಲ್ಲರಿಮೆ ಮತ್ತು ನುಡಿಯರಿಮೆಗಳ ವಿಶಯ ಬಹಳ ಮುಕ್ಯವಾದುದು. ಹಾಗೆಯೇ, ಕನ್ನಡ-ಕನ್ನಡಿಗ-ಕರ್ನಾಟಕಗಳ ಬಗ್ಗೆ ಕಾಳಜಿಯುಳ್ಳವರು ಇದನ್ನು ಕುರಿತು ನೆಮ್ಮದಿಯ ಮನಸ್ಸಿನಿಂದ ಚಿಂತಿಸುವುದು ಕೂಡ ಬಹಳ ಮುಕ್ಯವಾದುದು. ಆದುದರಿಂದ ನನ್ನ ಬರಹಕ್ಕೆ ಬಂದ ಅನಿಸಿಕೆಗಳನ್ನು ನಿದಾನವಾಗಿ ಕುಳಿತು ಯೋಚಿಸಿ ಉತ್ತರಿಸಲು ಸಮಯವನ್ನು ಕೊಟ್ಟ ’ಒಡ-ಕಾಳಜಿಗ’ರಿಗೆ ದನ್ಯವಾದಗಳು. ಇಲ್ಲಿ ನಾನು ಮಂಡಿಸಿದ ವಿಶಯಕ್ಕೆ ಸಂಬಂದಿಸಿದ ಅನಿಸಿಕೆಗಳಿಗೆ ನನ್ನ ಟಿಪ್ಪಣಿಗಳನ್ನು ಬರೆಯಲು ಪ್ರಯತ್ನಿಸುತ್ತೇನೆ.
’ಕನ್ನಡದಾ ಮಕ್ಕಳೆಲ್ಲ ಒಂದಾಗಿ’ ಮಕ್ಕಳಲ್ಲ!
ಮೊದಲನೆಯದಾಗಿ, ಶ್ರೀ ನರೇಂದ್ರಕುಮಾರ್ ಎಸ್. ಎಸ್. ಅವರು ನಾನು ’ಪ್ರಶ್ನೆಗಳನ್ನು ಸ್ವಾಗತಿಸುವೆನೆಂದೂ, ಪ್ರಶ್ನಿಸಿದವರ ಮೇಲೆ ಹಾರಾಡುವುದಿಲ್ಲವೆಂದೂ, ತರ್ಕಬದ್ದವಾದುದನ್ನು ಒಪ್ಪುವೆನೆಂದೂ’ ಎಣಿಸಿ ಕೆಲ ಪ್ರಶ್ನೆಗಳನ್ನು ನನ್ನ ಮುಂದಿಟ್ಟಿದ್ದಾರೆ. ಅವರ ಈ ಪೀಟಿಕೆ ಬಹಳ ಸಂತಸ ತಂದಿತು, ಏಕೆಂದರೆ ಈ ನಂಬುಗೆಯು ಯಾವರೀರ್ವರ ನಡುವೆ ಇರುವುದಿಲ್ಲವೋ, ಅವರ ನಡುವೆ ಚರ್ಚೆಗೆ ಅರ್ತವಿಲ್ಲ. ಆ ನಂಬುಗೆಯನ್ನು ನಾನು ಈ ನನ್ನ ಟಿಪ್ಪಣಿಯಲ್ಲಿ ಉಳಿಸಿಕೊಳ್ಳುತ್ತೇನೆ ಎಂದು ನಂಬಿದ್ದೇನೆ.
ರಾಷ್ಟ್ರೀಯ ಪಕ್ಷಗಳ ಒಡೆದು ಆಳುವ ನೀತಿ…!
– ಚೇತನ್ ಜೀರಾಳ್
ಕಳೆದ ಎರಡು ವಾರಗಳಲ್ಲಿ ನಡೆದಿರುವ ಸುದ್ದಿಗಳ ಬಗ್ಗೆ ನಿಮ್ಮ ಗಮನ ಹರಿಸಲು ಇಷ್ಟಪಡುತ್ತೇನೆ. ಪತ್ರಿಕೆಗಳಲ್ಲಿ ಕೇವಲ ಸುದ್ದಿ ಎನ್ನುವಂತೆ ಇವುಗಳನ್ನು ಬಿತ್ತರಿಸಲಾಯಿತು, ಆದರೆ ಇವುಗಳ ಬಗ್ಗೆ ಎಲ್ಲೂ ಚರ್ಚೆಯಾಗಿಲ್ಲ.
ಮರುಚುನಾವಣೆ ಹಾಗೂ ತೆಲುಗಿನಲ್ಲಿ ಭಾಷಣ:
ಮೊನ್ನೆ ನಡೆದ ಮರುಚುನಾವಣೆಯ ಪ್ರಚಾರಕ್ಕಾಗಿ ನಮ್ಮ ರಾಜ್ಯದ ರಾಷ್ಟ್ರೀಯ ಪಕ್ಷಗಳು ಭರ್ಜರಿ ಪ್ರಚಾರ ಕೈಗೊಂಡವು, ಅದಕ್ಕಾಗಿಯೇ ಹೊರರಾಜ್ಯದ ಚಲನಚಿತ್ರ ನಟ/ನಟಿಯರನ್ನು ಕರೆಸಿದ್ದವು. ಮತದಾರನನ್ನು ಓಲೈಸುವ ಭರದಲ್ಲಿ ನಮ್ಮ ರಾಜಕೀಯ ಪಕ್ಷಗಳು ಮಾಡುತ್ತಿರುವ ತಪ್ಪುಗಳು ಮಾತ್ರ ಬಹಳ ದೊಡ್ಡದಾಗಿವೆ. ಬಂಗಾರ ಪೇಟೆಯಲ್ಲಿ ನಡೆದ ಉಪಚುನಾವಣೆಗಾಗಿ ನಡೆಸಿದ ಪ್ರಚಾರದಲ್ಲಿ ಕಾಂಗ್ರೆಸ್ ಪಕ್ಷ ತೆಲಗು ಚಿತ್ರನಟ ಚಿರಂಜೀವಿಯನ್ನು ಬಳಸಿಕೊಂಡಿತ್ತು. ಅವರು ಸಹ ಭರ್ಜರಿಯಾಗಿ ತೆಲುಗಿನಲ್ಲಿ ಭಾಷಣ ಮಾಡಿ ಹೊರಟು ಹೋದರು. ಇದರಲ್ಲಿ ತಪ್ಪೇನು ಅಂತೀರಾ? ಮತದಾರನನ್ನು ಓಲೈಸುವ ಭರದಲ್ಲಿ ಕರ್ನಾಟಕದ ವಿವಿಧ ಭಾಷಿಕರಲ್ಲಿ ಒಡಕುಂಟು ಮಾಡಲಾಗುತ್ತಿದೆ. ಮೊನ್ನೆ ನಡೆದಿದ್ದು ಸಹ ಅದೇ, ಹಲವು ಶತಮಾನ ಅಥವಾ ಹಲವು ದಶಕಗಳಿಂದ ಇಲ್ಲಿ ನೆಲೆಸಿರುವ ತೆಲುಗು ಭಾಷಿಕರು ಕನ್ನಡದವರೇ ಆಗಿಹೋಗಿದ್ದಾರೆ. ಆದರೆ ನೀವು ತೆಲುಗರು ನೀವು ಕನ್ನಡಿಗರಲ್ಲಾ ಅಂತಾ ತೋರಿಸೋ ಪ್ರಯತ್ನಗಳೇ ಚಿರಂಜೀವಿ ಯಂತಹ ತೆಲುಗು ನಟರನ್ನು ಕರೆದುಕೊಂಡು ಬಂದು ಕರ್ನಾಟಕದಲ್ಲಿ ಭಾಷಣ ಮಾಡಿಸುವುದು. ಕರ್ನಾಟಕದ ಜನರನ್ನ ಓಲೈಸಲು ಆಂಧ್ರಪ್ರದೇಶದ ಕರಾವಳಿ ತೀರದ ಒಬ್ಬ ನಟ ಬಂದು ನೀವು ಕನ್ನಡಿಗರಲ್ಲಾ ಎಂದು ಸಂದೇಶ ನೀಡಿಸುವ ಕೆಲಸ ಮಾಡುತ್ತಿರುವ ಪಕ್ಷಗಳು ಮಾಡುತ್ತಿರುವುದಾದರು ಏನು ಅನ್ನೋದನ್ನ ತಾವೇ ಪ್ರಶ್ನಿಸಿಕೊಳ್ಳಲಿ.
“ತಾಯ್ನುಡಿಯಲ್ಲಿ ಕಲಿಕೆ” ಯಾಕೆ ಮಹತ್ವದ್ದು?
– ಪ್ರಿಯಾಂಕ್
ತಾಯ್ನುಡಿಯಲ್ಲಿ ಕಲಿಕೆ ಮಾಡಿ ಉಪಯೋಗ ಏನು? ಚಿಕ್ಕ ಮಕ್ಕಳು ಯಾವ ಭಾಷೆ ಬೇಕಿದ್ರೂ ಬೇಗ ಕಲಿತಾರಲ್ಲ, ಹಾಗಾಗಿ ಚಿಕ್ಕಂದಿಂದಲೇ ಇಂಗ್ಲೀಷಿನಲ್ಲಿ ಕಲಿಸಿಬಿಟ್ರೆ ಎಲ್ರಿಗೂ ಒಳ್ಳೇದಲ್ವ? ಇಂತಹ ಪ್ರಶ್ನೆಗಳು ಬಹಳಷ್ಟು ಜನರಲ್ಲಿ ಇರೋದನ್ನ ಕಾಣಬಹುದು.
ಸ್ವಾಮಿನಾಮಿಕ್ಸ್ ಹೆಸರಿನಡಿ ಅಂಕಣ ಬರೆಯುವ “ಸ್ವಾಮಿನಾಥನ್ ಐಯ್ಯರ್” ಅವರು, ತಮ್ಮ ಈ ಅಂಕಣದಲ್ಲಿ, ಮಕ್ಕಳಿಗೆ ಮೊದಲು ತಾಯ್ನುಡಿಯಲ್ಲಿ ಕಲಿಕೆಯಾಗಬೇಕಾದ್ದು ಯಾಕೆ ಮುಖ್ಯ ಎಂಬುದನ್ನು ಅಧ್ಯಯನದ ಉದಾಹರಣೆಗಳ ಜೊತೆಗೆ ತೋರಿಸಿದ್ದಾರೆ. ಅವರ ಅಂಕಣದ ಆಯ್ದ ಕೆಲವು ಅಂಶಗಳನ್ನು ಇಲ್ಲಿ (ಕನ್ನಡದಲ್ಲಿ) ಹಾಕಲಾಗಿದೆ.
* ಎರಡನೇ ತರಗತಿಯಲ್ಲಿರುವ ಮಕ್ಕಳು ಸರಾಗವಾಗಿ ಓದಲು ಕಲಿಯದಿದ್ದರೆ, ಅವರು ಬಹುಶ ಮುಂದೆಂದೂ ಚೆನ್ನಾಗಿ ಓದಲಾರರು. ಅವರು ಓದಿನಲ್ಲಿ ಹಿಂದೆ ಉಳಿಯುವ ಸಾಧ್ಯತೆಯೇ ಹೆಚ್ಚು.
ಇಗೋ,ಇದರಲ್ಲಿ ಮುಂದಿದೆ…
– ಕಿರಣ ಬಾಟ್ನಿ, ಬನವಾಸಿ ಬಳಗ
’ನಿಲುಮೆ’ಯಲ್ಲಿ ಕನ್ನಡದ ಸೊಲ್ಲರಿಮೆಯ ಬಗ್ಗೆ ಚರ್ಚೆಯಾಗುತ್ತಿರುವುದು ಒಳ್ಳೆಯ ಸಂಗತಿ. ಅಕ್ಟೋಬರ್ ೨೦೦೮ರಲ್ಲಿ ನಾನು ಬರೆದ ಒಂದು ಬರಹವನ್ನು ಬನವಾಸಿ ಬಳಗದ ಗೆಳೆಯರಾದ ಶ್ರೀ
ಆನಂದ್ ಜೋಶಿಯವರು ಈ ಚರ್ಚೆಗೆ ಸರಿಹೊಂದುತ್ತದೆ ಎಂದು ಪ್ರಕಟಣೆಗೆ ಕಳುಹಿಸಿ ಅದು ಪ್ರಕಟಿಸಲಾಗಿ, ಆ ಬರಹದಲ್ಲಿ ಬಂದ ಕೆಲವು ವಿಶಯಗಳ ಬಗ್ಗೆ, ಮತ್ತು ಬನವಾಸಿ ಬಳಗದ ನಿಲುವುಗಳ ಬಗ್ಗೆ ತಮ್ಮ ೪/೪/೨೦೧೧ರ ಬರಹದಲ್ಲಿ ಶ್ರೀ. ಅಜಕ್ಕಳ ಗಿರೀಶ ಬಟ್ಟರು ಪ್ರತಿಕ್ರಿಯೆ ನೀಡಿರುವುದರಿಂದ ಈ ಬರಹವನ್ನು ಬರೆಯುತ್ತಿದ್ದೇನೆ.
ಆ ಬರಹದಲ್ಲಿ ಗಿರೀಶಬಟ್ಟರನ್ನು ಕುರಿತು ನಾನು ಯಾವ ಮಾತನ್ನೂ ಆಡಿಲ್ಲ; ಅದನ್ನು ಬರೆದಾಗ ಅವರು ತಮ್ಮ ಹೊತ್ತಗೆಯನ್ನು ಪ್ರಕಟಿಸಿದ್ದರ ನೆನಪಿಲ್ಲ, ಅವರ ಹೆಸರೂ ನನಗಾಗ ಗೊತ್ತಿರಲಿಲ್ಲ. ಆದುದರಿಂದ ಆ ಬರಹದಲ್ಲಿ ಶಂಕರಬಟ್ಟರಿಗೆ ಗಿರೀಶಬಟ್ಟರು ಕೊಟ್ಟಿರುವ ಉತ್ತರಗಳ ವೈಗ್ನಾನಿಕತೆ-ಅವೈಗ್ನಾನಿಕತೆಗಳ ಬಗ್ಗೆ ನಾನು ಮಾತನಾಡಿರಲು ಸಾದ್ಯವೇ ಇರಲಿಲ್ಲ. ಆದರೆ ಶ್ರೀ. ಕೆ. ವಿ. ತಿರುಮಲೇಶರ ಒಂದು ಬರಹವನ್ನು ಕುರಿತು ಆ ಮಾತುಗಳನ್ನು ಆಡಿದ್ದು ನಿಜ, ಅವರು ಪ್ರತಿನಿದಿಸುವ ’ಹಳೆ-ಶಾಲೆ’ಯವರೆಲ್ಲರನ್ನೂ ಕುರಿತು ಆ ಮಾತುಗಳನ್ನು ಆಡಿದ್ದು ನಿಜ. ಈಗ ಗಿರೀಶಬಟ್ಟರಿಗೆ ಆ ಮಾತುಗಳು ತಮ್ಮನ್ನು ಕುರಿತೇ ಆಡಿದ್ದು ಎಂದು ಅನಿಸಿರುವುದರಲ್ಲಿ ಹಳೆಯ ಬರಹವನ್ನು ಹೊಸ ಚರ್ಚೆಯೊಂದರಲ್ಲಿ ಪ್ರಕಟಿಸಿದ್ದು ಒಂದು ಕಾರಣವಾದರೆ, ಮತ್ತೊಂದು ಕಾರಣ ನಿಜಕ್ಕೂ ಗಿರೀಶಬಟ್ಟರು ಆ ’ಹಳೆ-ಶಾಲೆ’ಗೇ ಸೇರುತ್ತಾರೆ ಎನ್ನುವುದು. ಮೊದಲನೆಯ ಕಾರಣಕ್ಕೆ ಬನವಾಸಿ ಬಳಗದ ಪರವಾಗಿ ನಾನು ಗಿರೀಶಬಟ್ಟರಲ್ಲಿ ಕ್ಶಮೆ ಕೇಳಿಕೊಳ್ಳುತ್ತ, ಎರಡನೆಯ ಕಾರಣದಿಂದ ಪ್ರೇರಿತರಾಗಿ ಅವರು ತಮ್ಮ ೪/೪/೨೦೧೧ರ ಬರಹದಲ್ಲಿ ಅದೇ ಹಳೆಯ ವಾದವನ್ನು ಮಂಡಿಸಿರುವುದರಿಂದ ಅದಕ್ಕೆ ಇಲ್ಲಿ ಮರುವುತ್ತರ.




