ಬೊಜ್ಜೋ…( ಕೊಂಕಣಿ ಕವನ )
ಪರೇಶ್ ಸರಾಫ್
ಹಾತ್ತಿ ಹಾತ್ತಿ ಫುಲ್ಲಾಚೆ ಹಾರು
ತೊಂಡಾoತು ತುಳ್ಸಿ ಉದಾ
ಪೆಟೆಲೇ ತಾಕ್ಕ ಮೆರವಣಿಗೇರಿ
ಪೂತ್ ಆನಿ ಸೂನ್ ರಡ್ತಾ ಅಸಾಚಿ
ಕಷ್ಟ ಪಾವ್ನ್ ದೋಳೆ ಉದಾ ಹಾಡೋನ್
ಬಾಯ್ಲ್ ರಡ್ತಾ ಅಸ್ಸ ಪಾಪ-
ಬಾಮ್ಮುಣ್ ನಾ ಆಶಿಲ್ ಘರಾಂತ್
ಹಾವ ಆಸುನ್ ಭೀ ನಾ ಅಷಿಲ್ ತಷಿ ಮೋಣು
ಪರ್ದಾ ಹಿಂದಿನ ಕತ್ತಲ ಕಥೆ – ‘ಗದ್ದಾಮ’
– ಡಾ ಅಶೋಕ್ ಕೆ ಆರ್
ಕೇರಳದಲ್ಲಿ, ಮಂಗಳೂರಿನಲ್ಲಿ, ಮೈಸೂರಿನ ಬನ್ನಿಮಂಟಪದಲ್ಲಿ ದೊಡ್ಡ ದೊಡ್ಡ ಮನೆಗಳನ್ನು ಕಟ್ಟಿಕೊಂಡಿರುವ ಮುಸ್ಲಿಮರನ್ನು, ಕೆಲವು ಹಿಂದೂಗಳನ್ನು ನೋಡಿದಾಗ ನಮ್ಮ ಮನದಲ್ಲಿ ಮೂಡುವ ಮೊದಲ ಅಭಿಪ್ರಾಯ “ದುಬೈಗ್ ಹೋಗಿ ಚೆನ್ನಾಗಿ ದುಡ್ಕೊಂಡ್ ಬಂದಿದಾನ್ ನೋಡು” ಎಂಬುದೇ ಆಗಿರುತ್ತದೆ. ಸ್ವಲ್ಪಮಟ್ಟಿಗದು ಸತ್ಯವೂ ಹೌದು. ಹೆಚ್ಚು ಹಣ ದುಡಿದ ದೊಡ್ಡ ಮನೆಗಳಿಂದಾಚೆಗೆ ಇರುವ ‘ದುಬೈ ರಿಟರ್ನ್ಡ್’ ಬಡಜನರ ಬವಣೆ ನಮ್ಮ ಕಣ್ಣಿಗೆ ಬೀಳುವುದೇ ಇಲ್ಲ. ಐಷಾರಾಮಕ್ಕಲ್ಲದೆ ಜೀವನೋಪಾಯಕ್ಕಾಗಿ ಮನೆಯ ಆರ್ಥಿಕ ಸಂಕಷ್ಟಗಳ ನಿವಾರಣೆಗಾಗಿ ಸೌದಿ ಅರೇಬಿಯಾದಂಥಹ ದೇಶಗಳಿಗೆ ವಲಸೆ ಹೋಗುವ ಜನರ ಪಡಿಪಾಟಲುಗಳನ್ನು ವಿವರಿಸುವ ಚಿತ್ರವೇ ಮಲಯಾಳಂನ ‘ಗದ್ದಾಮ’ ಅರ್ಥಾತ್ ಮನೆಗೆಲಸದವಳು. ಮನೆಗೆಲಸಕ್ಕೆ ಹೋದ ಹೆಣ್ಣುಮಕ್ಕಳ ನೋವು, ಗಾರೆ ಕೆಲಸ, ಡ್ರೈವರ್ ಕೆಲಸಕ್ಕೆ ಹೋದ ಗಂಡಸರ ಆಕ್ರಂದನವನ್ನು ಎಳೆಎಳೆಯಾಗಿ ಬಿಚ್ಚಿಡುತ್ತದೆ ‘ಗದ್ದಾಮ’. ಇವರ ಸಂಕಷ್ಟಗಳ ಜೊತೆಗೆ ಮುಸ್ಲಿಮರ ಪವಿತ್ರ ಸ್ಥಳಗಳಿರುವ ನಾಡಿನ ಅಪವಿತ್ರ ಮನಸ್ಸುಗಳ ಅನಾವರಣವೂ ಆಗುತ್ತದೆ. ಪ್ರವಾದಿ ಹುಟ್ಟಿದ ಓಡಾಡಿದ ನಾಡಿನ ಸೈತಾನರ ಪರಿಚಯ ಮಾಡಿಕೊಡುತ್ತದೆ.ಚಿನ್ನದ ಬಾಗಿಲಿಗೆ ‘ದೋಷ’ವಿಲ್ಲವೇ?!
– ಡಾ. ಅಶೋಕ್ ಕೆ.ಆರ್
ಕೆಲವು ದಿನಗಳ ಹಿಂದೆ ವಿಜಯ್ ಮಲ್ಯರವರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಎಂಭತ್ತು ಲಕ್ಷ ಬೆಲೆಬಾಳುವ ಚಿನ್ನದ ಬಾಗಿಲನ್ನು ದಾನವಾಗಿ ನೀಡಿದ್ದಾರೆ. ತಿಂಗಳುಗಳ ಹಿಂದೆ ಅವರು ಹೊತ್ತಿದ್ದ ಹರಕೆಯಂತೆ ಅದು. ಮತ್ತೊಂದು ಬಾಗಿಲನ್ನು ದಾನವಾಗಿ ನೀಡುತ್ತಾರಂತೆ. ಕಿಂಗ್ ಫಿಷರ್ ಏರ್ ಲೈನ್ಸಿನ ಸಿಬ್ಬಂದಿಗಳಿಗೆ ಸಂಬಳ ಸರಿಯಾಗಿ ನೀಡದ ಮಲ್ಯ ಲಕ್ಷಾಂತರ ರುಪಾಯಿಗಳನ್ನು ಹೀಗೆ ‘ದಾನ’ದ ರೂಪದಲ್ಲಿ ಕೊಟ್ಟಿರುವುದು ಕೆಲವರ ಕಣ್ಣು ಕೆಂಪಗಾಗಿಸಿದೆ. ಇದೇ ದುಡ್ಡನ್ನು ಸಮಾಜದ ಕೆಳಸ್ತರದಲ್ಲಿರುವವರಿಗೆ ನೀಡಬಹುದಿತ್ತಲ್ಲ? ಎಂದೂ ಹಲವರು ಪ್ರಶ್ನಿಸುತ್ತಿದ್ದಾರೆ. ಬಿಡಿ, ಮೊದಲನೆಯದು ಅವರ ವ್ಯವಹಾರಕ್ಕೆ ಸಂಬಂಧಿಸಿದ್ದು, ಎರಡನೆಯದು ಅವರ ಭಕ್ತಿಗೆ ಸಂಬಂಧಿಸಿದ್ದು. ಹರಕೆ ತೀರಿಸುವುದಕ್ಕೆ ಲಕ್ಷಾಂತರ ರುಪಾಯಿ ವ್ಯಯಿಸುವುದು ಅವರ ಮರ್ಜಿ. ಆದರೆ ಅವರೆಲ್ಲಿದ್ದಾರೆ ಹಿಂದೂ ಧರ್ಮ ‘ರಕ್ಷಕರು’, ಪೇಜಾವರ ಸ್ವಾಮಿಗಳು, ಮುಖ್ಯವಾಗಿ ಅವರೆಲ್ಲಿದ್ದಾರೆ ಆ ದೇವರು?!ಕಾನೂನಿನಂಗಳ ೭ : ಗಂಡ-ಹೆಂಡತಿ ಉತ್ತರ ದಕ್ಷಿಣ- ವಿಚ್ಛೇದನ
-ಉಷಾ ಐನಕೈ ಶಿರಸಿ
ವಿವಾಹ ಒಂದು ಪವಿತ್ರ ಧಾರ್ಮಿಕ ಸಂಸ್ಕಾರ. ಇದರ ಹಿಂದೆ ಮದುವೆಯಾದ ಗಂಡು -ಹೆಣ್ಣಿಗೆ ಅವರದೇ ಆದ ಸಾಮಾಜಿಕ ಹಾಗೂ ಭಾವನಾತ್ಮಕ ಬದ್ಧತೆ ಇರುತ್ತದೆ. ಕಷ್ಟವಿರಲಿ, ಸುಖವಿರಲಿ ಗಂಡ-ಹೆಂಡತಿ ಸಮನಾಗಿ ಹಂಚಿ ಕೊಂಡು ಸಹಬಾಳ್ವೆ ನಡೆಸಬೇಕೆಂಬುದೇ ವಿವಾಹ ಬಂಧನದ ಹಿಂದಿರುವ ತತ್ವ. ಅದಕ್ಕಾಗೇ ಪತ್ನಿಗೆ ‘ಅರ್ಧಾಂಗಿ’ ಎಂದು ಕರೆದಿರುವುದು. ಆದರೆ ಆಧುನಿಕ ಯುಗದಲ್ಲಿ ಇದು ಸಾಧ್ಯವೇ? ಬದಲಾದ ಕಾಲ, ಆಧುನಿಕ ಶಿಕ್ಷಣ, ವೈಚಾರಿಕ ಸ್ವಾತಂತ್ರ್ಯ, ಸಮಾನತೆಯ ಹೋರಾಟ ಮುಂತಾದ ಬೆಳವಣಿಗೆಯಲ್ಲಿ ಸಾಂಪ್ರದಾಯಿಕ ಮೌಲ್ಯಗಳು ಉಳಿದುಕೊಳ್ಳಲು ಸಾಧ್ಯವೇ? ಆಧುನಿಕ ಸಂಪರ್ಕ, ವೈವಿಧ್ಯಮಯ ಮಾಧ್ಯಮಗಳು ಹಾಗೂ ವ್ಯಕ್ತಿ ಸ್ವಾತಂತ್ರ್ಯದ ಹಂಬಲಗಳ ನಡುವೆ ಪರಸ್ಪರ ನಂಬಿಕೆ, ವಿಶ್ವಾಸ, ಸಹನೆ, ಸಹಬಾಳ್ವೆ ಸ್ವಾಭಾವಿಕವಾಗೇ ಶಿಥಿಲವಾಗತೊಡಗಿವೆ. ವೈಯಕ್ತಿಕ ಪ್ರತಿಷ್ಠೆ ದಿನದಿಂದ ದಿನಕ್ಕೆ ಗಂಡು-ಹೆಣ್ಣು ಇಬ್ಬರಲ್ಲೂ ಹೆಚ್ಚಾಗತೊಡಗಿವೆ. ಗಂಡ-ಹೆಂಡತಿಯ ನಡುವೆ ಹೆಚ್ಚು ವಯಸ್ಸಿನ ಅಂತರವಿದ್ದರೂ ಕಲಹ, ಅಂತರವೇ ಇಲ್ಲದಿದ್ದರೂ ಕಲಹ. ಹೀಗೆ ಹಲವಾರು ಕಾರಣಗಳಿಂದ ವಿವಾಹ ವಿಚ್ಛೇದನಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ.
ದಾಂಪತ್ಯದ ನಡುವೆ ವಿರಸ ಹಿಂದೆಯೂ ಇತ್ತು. ಆದರೆ ಆಗ ನ್ಯಾಯಾಲಯದ ಮೆಟ್ಟಿ ಲೇರುವ ಅವಕಾಶ ಮತ್ತು ಧೈರ್ಯ ಎರಡೂ ಇಲ್ಲವಾಗಿತ್ತು. ಅದರಲ್ಲೂ ಹೆಣ್ಣು ದನಿ ಇಲ್ಲದೇ ಸಹಿಸಿಕೊಂಡೇ ಬಾಳಬೇಕಾಗಿತ್ತು. ಆದರೆ ಇಂದು ಪರಿಸ್ಥಿತಿ ಹಾಗಿಲ್ಲ. ಚಿಕ್ಕ ಚಿಕ್ಕ ಕಾರಣಗಳಿಗೂ ಕಾನೂನಿಗೆ ಮೊರೆಹೋಗುವುದು ಸ್ವಾಭಾವಿಕವಾಗಿದೆ. ಮಹಿಳಾ ಶೋಷಣೆಯನ್ನು ತಪ್ಪಿಸುವ ಸಲುವಾಗಿ ಹುಟ್ಟಿ ಕೊಂಡ ಕಾನೂನುಗಳು ಇದಕ್ಕೆ ಅವಕಾಶ ಮಾಡಿ ಕೊಡುತ್ತಿವೆ.
ಈ ಸ್ವಾತಂತ್ರ್ಯಕ್ಕೆ ಅಸ್ಸಾಮಿನ ಉರಿಯ ಅರಿವುಂಟೇ?
– ಸಂತೋಶ್ ತಮ್ಮಯ್ಯ
ನೇಪಾಳದ ಹಿಂದೂ ರಾಜನನ್ನು ಪದಚ್ಯುತಗೊಳಿಸಿದಾಗ ಭಾರತದಲ್ಲಿ ಯಾವ ಕಮ್ಯುನಿಷ್ಟ್ ಕಾಮ್ರೆಡನಿಗೂ ಪೆಟ್ಟು ಬಿದ್ದಿರಲಿಲ್ಲ. ಪಾಕಿಸ್ಥಾನದ ರಿಂಕಲ್ ಕುಮಾರಿಯನ್ನು ಮತಾಂಧರು ಮತಾಂತರಿಸಿದಾಗ ಇಲ್ಲಿನ ಯಾವ ಹಿಂದುವೂ ಬೀದಿಗೆ ಇಳಿದಿರಲಿಲ್ಲ. ಅಲ್ಲೆಲ್ಲೋ ಪಾಶ್ಚಾತ್ಯ ದೇಶದಲ್ಲಿ ಗಣಪತಿ, ಲಕ್ಷ್ಮಿ, ಬ್ರಹ್ಮದೇವರನ್ನು ಹೆಂಗಸರ ಚಡ್ಡಿಗಳಲ್ಲಿ ಚಿತ್ರಿಸಿ ರಾಂಪ್‌ವಾಕ್ ಮಾಡಿದಾಗಲೂ ಹಿಂದುಗಳಾರೂ ಬಸ್ಸುಗಳಿಗೆ ಕಲ್ಲು ಬಿಸಾಡಿರಲಿಲ್ಲ. ಅದಾವುದೋ ಕೆರೆಬಿಯನ್ ದೇಶದಲ್ಲಿ ಹಿಂದುವಾದವನು ಅಧ್ಯಕ್ಷನಾಗಬಾರದು ಎಂದಾಗ ಜಗತ್ತಿನಾದ್ಯಂತ ಹಿಂದುಗಳಾರೂ ಖಂಡಿಸಲಿಲ್ಲ. ಅವೆಲ್ಲಾ ಬಿಡಿ. ಕಾಶಿ ವಿಶ್ವನಾಥನ ದರ್ಶನಕ್ಕೆ ಹೋದರೂ ಹಿಂದುಗಳಿಗೆ ಪಕ್ಕದ ಪರಮ ಅಸಹ್ಯವಾದ ಕಟ್ಟಡವೊಂದು ಸಾಮರಸ್ಯದ ಪ್ರತೀಕದಂತೆಯೇ ಕಾಣುತ್ತದೆ. ಅಯೋಧ್ಯೆಯ ರಾಮ ಇನ್ನೂ ಟೆಂಟ್ ವಾಸಿಯಾದರೂ ಬಹುತೇಕರಿಗೆ ಅದೇನೂ ಅಂಥ ಕೊರಗಿನಂತೆ ಕಾಣುವುದಿಲ್ಲ. ಯಾವ ಹಿಂದೂ ಸಂನ್ಯಾಸಿಯೂ ಮೌಲ್ವಿಗಳಂತೆ ಅಬ್ಬರಿಸುವುದಿಲ್ಲ. ಒಂದು ವೇಳೆ ಸಂನ್ಯಾಸಿ ಅಬ್ಬರಿಸಿದರೂ ಯಾರಿಗೂ ಹೆದರಿಕೆಯಾಗುವಂತೆ ಕಾಣುವುದೂ ಇಲ್ಲ.
ಅದು ಹಿಂದುವಿನ ಅತಿಯಾದ ಸಾತ್ತ್ವಿಕತೆಯೋ ಅಥವಾ ಭಂಡತನ ಮಿಶ್ರಿತ ಅತಿಯಾದ ಭಯವೋ ಎಂದು ವಿಶ್ಲೇಷಿಸುವುದು ಕಷ್ಟ. ಆದರೆ ಆತನಿಗೆ ಹಿಂದು ಎಂಬ ಕಾರಣಕ್ಕೆ ಸಿಟ್ಟು ಬರದಿರುವುದಂತೂ ಸತ್ಯ. ಮೇಲಿನ ಎಲ್ಲಾ ಸಂದರ್ಭಗಳಲ್ಲಿ ಅದು ಸಾಭೀತಾಗಿದೆ. ಬೀದಿಗಿಳಿಯಲು, ಪ್ರತಿಭಟಿಸಲು ಹಿಂದುವಿಗೆ ದಿನಕ್ಕೊಂದು ಕಾರಣವಾದರೂ ಸಿಗುತ್ತವೆ. ಆದರೆ ಅದು ನಡೆಯುವುದಿಲ್ಲ. ಏಕೆಂದರೆ ಹಿಂದುವಿಗೆ ಸಮಾಜಕ್ಕಾಗಿ ಎಂದಿಗೂ ಸಿಟ್ಟು ಬರುವುದಿಲ್ಲ.
ಸಮಾಜ ಮತ್ತು ದೇಶಕ್ಕಾಗಿ ಸತ್ಯದೆಡೆಗಿನ ನಡೆ ಅನಿವಾರ್ಯ…
-ಮಹೇಂದ್ರ ಕುಮಾರ್
ನಾನು ಅದೆಷ್ಟು ವರ್ಷ ಸಂಘ ಸಂಘ(ಆರ್ ಎಸ್ ಎಸ್) ಎಂದು ಕೆಲಸ ಮಾಡಿದ್ದೇನೆ. ನನ್ನ ತುಂಬು ಯೌವನವನ್ನು ಸಂಘ ಹೇಳುವ ಕಾರ್ಯಗಳಿಗೆ ವಿನಿಯೋಗಿಸಿದ್ದೇನೆ. ಇಂದಿಗೂ ಅದೆಷ್ಟೋ ಯುವಕರು ಸಂಘ ಸಂಘ ಎಂದು ತಮ್ಮ ಸರ್ವಸ್ವವನ್ನೂ ಸಂಘಕ್ಕಾಗಿ ತ್ಯಾಗ ಮಾಡುತಿದ್ದಾರೆ. ಸಂಘದ ಮಾರ್ಗದರ್ಶನದಂತೆ ಬೀದಿಯಲ್ಲಿ ನಿಂತು ಹಿಂದುತ್ವ ಹಿಂದುತ್ವ ಎಂದು ಬಡಿದಾಡಿ ಜೈಲುಸೇರಿ ಸಮಾಜದಲ್ಲಿ ರೌಡಿ ಪಟ್ಟ ಕಟ್ಟಿಕೊಂಡ ಅದೆಷ್ಟೋ ಯುವಕರು ತಮ್ಮ ಜೀವನದ ಹುಡುಕಾಟದಲ್ಲಿ ತೊಳಲುತಿದ್ದಾರೆ. ಇನ್ನು ಸಂಘ ಹೇಳುವ ದೇಶಭಕ್ತಿ ಹಿಂದುತ್ವದಿಂದ ಪ್ರೇರಣೆಗೊಂಡು ಪ್ರತಿವರ್ಷ ತಮ್ಮ ದುಡಿಮೆಯ ದೊಡ್ಡ ಭಾಗವನ್ನೇ ಧಾರೆ ಎರೆಯುವ ಅದೆಷ್ಟು ದಾನಿಗಳಿದ್ದಾರೆ. ದೊಡ್ಡ ದೊಡ್ಡ ಪದವಿಯನ್ನು ಪಡೆದುಕೊಂಡು ಮದುವೆಯೂ ಆಗದೆ ಸಂಘವೇ ಜೀವನ, ಸಂಘವೇ ಸರ್ವಸ್ವ ಎಂದು ನಂಬಿಕೊಂಡು ಮುಪ್ಪಿನಕಾಲದಲ್ಲಿ ಯಾರೂ ಇಲ್ಲದ ಅನಾಥರಂತೆ ಜೀವಿಸುವ ಅದೆಷ್ಟು ಮಹಾನ್ ಚೇತನಗಳಿವೆ.
ಇನ್ನು ತಮ್ಮ ಸ್ವಂತದ ಜೀವನ ನಡೆಸುತ್ತಲೇ ಸಂಘ ಎಂದರೆ ದೇಶ, ಸಂಘ ಎಂದರೆ ಹಿಂದುತ್ವ ಎಂದು ಸಂಘವನ್ನು ಸಾಮೂಹಿಕವಾಗಿ ಬೆಂಬಲಿಸುವ ಅಷ್ಟು ಲಕ್ಷ ಮುಗ್ದ ದೇಶವಾಸಿಗಳು… ಬೇಷ್, ಸುಮಾರು ಎಂಬತ್ತೇಳು ವರ್ಷಗಳ ಅಂತರದಲ್ಲಿ ಸಂಘದ ಸಾಧನೆ ಮೆಚ್ಚುವಂತದ್ದೇ.
ಸಂಘ ವ್ಯಾಪಿಸದ ಜಾಗವಿಲ್ಲ, ಈ ದೇಶದ ಪ್ರಭಲ ಸಂಘಟನೆಯಾಗಿ ಹೊರಹೊಮ್ಮಿರುವ ಸಂಘ ಇಷ್ಟು ದೊಡ್ಡಮಟ್ಟಕ್ಕೆ ಬೆಳೆದು ನಿಲ್ಲಲು ಬಳಸಿಕೊಡಿದ್ದು ಎರಡೇ ಎರಡು ವಿಚಾರಗಳನ್ನು, ದೇಶಭಕ್ತಿ ಮತ್ತು ಹಿಂದುತ್ವ. ಅದ್ಭುತ… ಇಂದು ಈ ದೇಶದಲ್ಲಿ ಯಾವುದೇ ಕಂಪೆನಿಗಳೂ, ರಾಜಕೀಯ ಪಕ್ಷಗಳೂ ಸೇರಿದಂತೆ ಯಾರೆಂದರೆ ಯಾರೂ ಸಾಧಿಸಲಾಗದ್ದನ್ನು ಸಂಘ ಸಾಧಿಸಿದೆ. ಟಾಟಾ, ರಿಲಯನ್ಸ್ ನಂತಹಾ ಕಂಪನಿಗಳನ್ನೆಲ್ಲಾ ಒಟ್ಟುಗೂಡಿಸಿ ಅವರ ಒಟ್ಟು ಆಸ್ಥಿಯ ಮೌಲ್ಯಮಾಪನ ಮಾಡಿದರೂ ಈ ದೇಶದಲ್ಲಿ ಸಂಘ ಹೊದಿರುವ ಆಸ್ಥಿಗಿಂತ ಕಡಿಮೆಯೇ…
ಮತ್ತಷ್ಟು ಓದು 
ಹಿಂದುತ್ವ ಬೋನ್ಸಾಯ್ ಮರವಲ್ಲ, ವಿಶಾಲ ಆಲದ ಮರ
-ಚಕ್ರವರ್ತಿ ಸೂಲಿಬೆಲೆ
ದಾಳಿಗೆ ಮುನ್ನ ಎದುರಾಳಿಗಳ ಶಕ್ತಿಯನ್ನು ಅರಿತುಕೊಳ್ಳಬೇಕು. ದಾಳಿಯ ವೇಳೆ ತಲೆ ಹೋದರೂ ಸರಿ ಎಂದು ಕಾದಾಡಬೇಕು. ಕದನದ ನಂತರ ಆಗುವ ಲಾಭ ನಷ್ಟಗಳ ಅರಿವಿರಬೇಕು ಪ್ರತಿಯೊಬ್ಬ ಸೇನಾಪತಿಗೆ ಗೊತ್ತಿರಲೇಬೇಕಾದ ಅಂಶಗಳಿವು. ಇವುಗಳ ಆಧಾರದ ಮೇಲೆ ರೂಪುಗೊಂಡದ್ದೇ ಯೋಜನೆ. ಮೊದಲೇ ರೂಪಿಸಿದ ಯೋಜನೆ ಒಮ್ಮೊಮ್ಮೆ ಕೈಕೊಟ್ಟರೂ ಕೊಡಬಹುದು. ಪೂರ್ವ ತಯಾರಿಯೇ ಇಲ್ಲದೆ ಗೆದ್ದರೂ ಗೆಲ್ಲಬಹುದು. ಎಲ್ಲ ಅಪರೂಪ. ಆದರೆ, ಹಳೆಯ ನೆನಪುಗಳನ್ನು ಹಸಿರಾಗಿಸಿಕೊಂಡು, ಭವಿಷ್ಯದ ಕಷ್ಟ ನಷ್ಟಗಳನ್ನು ಆಲೋಚಿಸಿ, ವರ್ತಮಾನದಲ್ಲಿ ಕ್ರಿಯಾಶೀಲರಾಗುವವರು ಜಯಶಾಲಿಗಳಾಗುತ್ತಾರೆ. ಇಲ್ಲವಾದರೆ ತಮಗೂ ಸಮಾಜಕ್ಕೂ ತೊಂದರೆ ತಂದಿಡುತ್ತಾರೆ.
೧೮೫೭ರ ಸಂಗ್ರಾಮಕ್ಕೆ ಸುದೀರ್ಘ ತಯಾರಿ ನಡೆದಿತ್ತು. ನಾನಾ, ತಾತ್ಯಾ, ಲಕ್ಷ್ಮೀ ಬಾಯಿ, ಕುವರ ಸಿಂಗರೆಲ್ಲ ತಯಾರಾಗಿದ್ದರು. ಯಾರು, ಎಲ್ಲಿ, ಹೇಗೆ ದಾಳಿ ಮಾಡಬೇಕೆಂಬುದನ್ನೂ ರೂಪಿಸಿಯಾಗಿತ್ತು. ಎಲ್ಲ ಮುಗಿದ ಮೇಲೆ ದೇಶ ಒಪ್ಪುವ ನಾಯಕನ ಕೈಗೆ ಆಡಳಿತ ನೀಡಬೇಕೆಂದು ಬಹಾದ್ದೂರ್ ಷಾಹನೇ ಹೇಳಿದ್ದ. ಎಡವಟ್ಟು, ಬ್ಯಾರಕ್‌ಪುರದಲ್ಲಿ ಆಯಿತು. ಅಂದುಕೊಂಡಿದ್ದಕ್ಕಿಂತ ಒಂದು ತಿಂಗಳು ಮುಂಚೆ ಸಿಡಿದ ಕ್ರಾಂತಿಯ ಸಿಡಿಮದ್ದು ಪೂರ್ಣ ಜಯ ಕೊಡಿಸುವಲ್ಲಿ ವಿಫಲವಾಯಿತು. ಅಷ್ಟೇ ಅಲ್ಲ, ಮುಂದಿನ ಅನೇಕ ವರ್ಷಗಳ ಕಾಲ ಬ್ರಿಟಿಷರ ವಿರುದ್ಧ ಕಾದಾಡಿ ಗೆಲ್ಲುವುದು ಅಸಾಧ್ಯವೆಂದು ಜನಮಾನಸದಲ್ಲಿ ಹುದುಗಿಹೋಗಿತ್ತು. ಮೌನವಾಗಿ ಸಹಿಸುವ, ಇದ್ದುದರಲ್ಲೆ ಸಂಧಾನ ಮಾಡಿಕೊಂಡು ಬದುಕುವ ಯುವ ಸಮೂಹ ರೂಪುಗೊಳ್ಳಲು ಆರಂಭಿಸಿದ್ದೂ ಆಗಲೇ. ಸರಿಯಾಗಿ ಹೇಳಬೇಕೆಂದರೆ, ಗುಲಾಮೀ ಮಾನಸಿಕತೆಯ ನಿರ್ಮಾಣದ ಹಂತ ಅದು. ಇವಿಷ್ಟಕ್ಕೂ ಕಾರಣ- ಕೈಕೊಟ್ಟ ಒಂದು ಯೋಜನೆ!
ನಾಯಕನಾದವ ಯಾವಾಗಲೂ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಇಟ್ಟ ಹೆಜ್ಜೆಯನ್ನು ಪ್ರಾಣ ಬಿಟ್ಟರೂ ಹಿಂದೆ ತೆಗೆದುಕೊಳ್ಳದವನಾಗಿರಬೇಕು. ಜೋ ಸಿರ್‌ದಾರ್, ವಹೀ ಸರ್‌ದಾರೆಂದು ಹೇಳೋದು ಅದಕ್ಕೇ. ಗೆದ್ದಾಗ ಹೊಗಳಿಕೆ ಸಿಕ್ಕಷ್ಟೇ ಸೋತಾಗ ತೆಗಳಿಕೆಯೂ ಸಿಗುತ್ತದೆ. ಎಲ್ಲಕ್ಕೂ ತಯಾರಾದವ ಮಾತ್ರ ಮುಂದೆ ಬಂದು ನಿಂತಿರಬೇಕು.
ಈ ಎಲ್ಲ ಘಟನೆಗಳನ್ನು ಕಣ್ಣ ಮುಂದಿಟ್ಟುಕೊಂಡು ಒಮ್ಮೆ ಮಂಗಳೂರಿನ ಗಲಾಟೆಗಳನ್ನು ಅವಲೋಕಿಸಿ ನೋಡಿ. ಹಿಂದೂ ಸಮಾಜ ಅಂತ ಹೇಳಿ ಇಂಥದೊಂದು ರಾದ್ಧಾಂತ ಎಬ್ಬಿಸುವ ಅಗತ್ಯವಿತ್ತೆ? ಮಾಧ್ಯಮದವರನ್ನು ಕರೆದುಕೊಂಡು ಹೋಗಿ ಇಂದಿನ ಸಿನಿಮಾ ಟ್ರೈಲರ್‌ಗಳಂತೆ ಬಿತ್ತರಿಸುವ ಜರೂರತ್ತು ಇತ್ತೆ? ಒಮ್ಮೆ ಯೋಚಿಸಿ.
ಒಂದು ತಪ್ಪನ್ನು ಮತ್ತೊಂದು ತಪ್ಪಿನಿಂದ ಸಮರ್ಥಿಸಿಕೊಳ್ಳುತ್ತ….
-ಡಾ. ಅಶೋಕ್ ಕೆ.ಆರ್
ಮಂಗಳೂರಿನ ಪಡೀಲಿನಲ್ಲಿ ನಡೆದ ಘಟನೆಯ ಬಗ್ಗೆ ನೀವೀಗಾಗಲೇ ಬಹಳಷ್ಟು ಓದಿ ನೋಡಿರುತ್ತೀರಿ. ಹಿಂದೂ ಜಾಗರಣ ವೇದಿಕೆ ಸಂಸ್ಕೃತಿಯ ಹೆಸರಿನಲ್ಲಿ ನಡೆಸಿದ್ದು ಕ್ಷಮಿಸಲಾಗದ ತಪ್ಪು. ಇದ್ದ ಹುಡುಗರಲ್ಲಿ ಅತಿ ಹೆಚ್ಚು ಹೊಡೆಸಿಕೊಂಡವನು ಮುಸ್ಲಿಮನಂತೆ ಕಾಣುತ್ತಿದ್ದನೆನ್ನುವುದೇ ಇವರ ಪುಂಡಾಟಕ್ಕೆ ಕಾರಣವಾಯಿತಾ? ಆ ಹುಡುಗ ಕೂಡ ದಕ್ಷಿಣ ಕನ್ನಡದಲ್ಲಿ ಬಿಜೆಪಿಯನ್ನು ಹಿಂದಿನಿಂದಲೂ ಬಹಳವಾಗಿ ಬೆಂಬಲಿಸುತ್ತಿರುವ ಹಿಂದು ಧರ್ಮದ ಒಂದು ಜಾತಿಗೆ ಸೇರಿದವನು! ಯಾವುದೇ ಧರ್ಮದ ಮತೀಯವಾದ ಅಪಾಯಕಾರಿ. ದುರದೃಷ್ಟವಶಾತ್ ದಕ್ಷಿಣ ಕನ್ನಡದಲ್ಲಿ ಹಿಂದು ಮುಸ್ಲಿಂ ಸಂಘಟನೆಗಳು ಮತೀಯವಾದದಲ್ಲಿ ತೊಡಗುತ್ತ ದಕ್ಷಿಣ ಕನ್ನಡದ ನೈಜ ಸಮಸ್ಯೆಗಳನ್ನೇ ಮರೆಸುತ್ತಿವೆ. ಈಗ ನಡೆದಿರುವ ಪುಂಡಾಟಿಕೆಗಳಿಗಿಂತಲೂ ಹೆಚ್ಚಿನ ಅಪಾಯಕಾರಿ ಪ್ರವೃತ್ತಿ ಈ ಮತೀಯವಾದಿಗಳನ್ನು ಸಮರ್ಥಿಸಿಕೊಳ್ಳುತ್ತಿರುವ ವಿದ್ಯಾವಂತರೆನ್ನಿಸಿಕೊಂಡವರಲ್ಲಿ ಕಾಣಿಸುತ್ತಿರುವುದು ಬರಲಿರುವ ಕೆಟ್ಟ ದಿನಗಳ ಮುನ್ಸೂಚನೆಯಾ?
ಅಂತರ್ಜಾಲದ ಪರಿಣಾಮವಾಗಿ ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವುದು ಸುಲಭವಾಗಿದೆ. ಫೇಸ್ ಬುಕ್ಕಿನಲ್ಲಿ, ವಿವಿಧ ಬ್ಲಾಗುಗಳಲ್ಲಿ, ಹೊಸ ದಿಗಂತದಂತಹ ಪತ್ರಿಕೆಗಳಲ್ಲಿ ಪಡೀಲಿನ ಘಟನೆಯ ಬಗ್ಗೆ ಬಹುತೇಕ ವಿದ್ಯಾವಂತರೇ ಬರೆಯುತ್ತಿರುವ ಲೇಖನ, ಕಮೆಂಟುಗಳನ್ನು ಗಮನಿಸಿದರೆ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿಯೇ ದೋಷವಿದೆಯೇನೋ ಎಂಬ ಅನುಮಾನ ಕಾಡುತ್ತದೆ. “ಮಂಡ್ಯದಲ್ಲಿ ‘ಹಿಂದೂ’ ಹೆಣ್ಣುಮಗಳನ್ನು ನಾಲ್ವರು ‘ಮುಸ್ಲಿಮರು’ ಚಲಿಸುವ ರೈಲಿನಿಂದ ಹೊರತಳ್ಳಿದುದನ್ನು ಯಾಕೆ ದೊಡ್ಡ ಸುದ್ದಿ ಮಾಡಲಿಲ್ಲ? ಅಸ್ಸಾಮಿನಲ್ಲಿ ಬೋಡೋ ಹಿಂದೂಗಳನ್ನು ಬಾಂಗ್ಲಾ ಮುಸ್ಲಿಮರು ಶೋಷಿಸುತ್ತಿರುವುದ್ಯಾಕೆ?” ಎಂಬಂಥಹ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ!
ಕಾನೂನಿನಂಗಳ ೬ : ಕಾನೂನಿನ ಕಣ್ಣಲ್ಲಿ ವಿವಾಹ
ಉಷಾ ಐನಕೈ ಶಿರಸಿ
ಹಿಂದೂ ಸಂಪ್ರದಾಯದ ಪ್ರಕಾರ ವಿವಾಹ ಅಂದರೆ ಒಂದು ಪವಿತ್ರ ಬಂಧನ. ಈ ಮೂಲಕ ಮಾತ್ರ ಮನುಷ್ಯ ಪರಿಪೂರ್ಣತೆಯತ್ತ ಹೋಗಲು ಸಾಧ್ಯ ಎಂಬ ನಂಬಿಕೆಯಿದೆ. ಈ ವೈವಾಹಿಕ ಜೀವನ ಸುಸಂಬದ್ಧವಾಗಿ ಸಾಗಲು ಅನುಕೂಲವಾಗುವಂತೆ ಕಾನೂನುಗಳನ್ನು ರಚಿಸಲಾಗಿದೆ. ಈ ಕಾನೂನುಗಳು ವಿವಾಹ ಅಂದರೇನು? ವಿವಾಹವನ್ನು ಯಾವಾಗ ಅನೂರ್ಜಿತಗೊಳಿಸಬಹುದು? ಗಂಡ-ಹೆಂಡತಿಯ ಹಕ್ಕು-ಬಾಧ್ಯತೆಗಳು ಹಾಗೂ ಅದನ್ನು ಚ್ಯುತಿಗೊಳಿಸಿದಲ್ಲಿ ಪಡೆಯಬಹುದಾದ ಶಿಕ್ಷೆಗಳು ಮುಂತಾದವುಗಳನ್ನೆಲ್ಲ ವಿವರಿಸುತ್ತದೆ.
ಹಿಂದೂ ಸಂಪ್ರದಾಯದಲ್ಲಿ ವಿವಾಹಕ್ಕೆ ಒಂದು ವಿಶೇಷ ಅರ್ಥವಿದೆ. ಇಲ್ಲಿ ವಿವಾಹ ಒಂದು ಪವಿತ್ರ ಬಂಧನ. ಹೆಣ್ಣು-ಗಂಡು ಪರಸ್ಪರ ಅಗ್ನಿಸಾಕ್ಷಿಯಾಗಿ ಕೈಹಿಡಿದು ನೆಮ್ಮದಿಯ ಬದುಕಿಗೆ ಸಂಕಲ್ಪ ಕಟ್ಟಿಕೊಳ್ಳುವ ಸಂದರ್ಭ ಇದು. ವಿವಾಹವಿಲ್ಲದ ಜೀವನ ಅಪೂರ್ಣ ಎಂಬ ಭಾವನೆ ನಮ್ಮಲ್ಲಿದೆ. ‘ಧರ್ಮೇ ಚ ಅರ್ಥೇ ಚ ಕಾಮೇ ಚ ನಾತಿ ಚರಿತವ್ಯಾ ತ್ವಯೀಯಮ್ ನಾತಿ ಚರಾಮಿ’ ಎನ್ನುತ್ತ ಧರ್ಮ, ಅರ್ಥ, ಕಾಮ ಈ ಮೂರರಲ್ಲೂ ಇಬ್ಬರೂ ಒಂದಾಗಿ ಬಾಳೋಣ ಎನ್ನುವ ಪ್ರತಿಜ್ಞೆಯೊಂದಿಗೆ ವಿವಾಹ ಸಂಸ್ಕಾರ ನಡೆಯುತ್ತದೆ. ಹಾಗಾಗಿ ಹಿಂದೂ ಪದ್ಧತಿಯಲ್ಲಿ ವಿವಾಹ ಒಂದು ಧಾರ್ಮಿಕ ಸಂಸ್ಕಾರ.
ವಿವಾಹ ಎಂದರೆ ಹೆಣ್ಣು-ಗಂಡು ಒಂದಾಗಿ ಬಾಳುವುದಕ್ಕೋ, ಸಂತಾನೋತ್ಪತ್ತಿಗೋ ಸೀಮಿತವಾಗಿಲ್ಲ. ಇದರ ಅರ್ಥ ಬಹು ವಿಶಾಲವಾಗಿದೆ. ಹೆಣ್ಣು-ಗಂಡು ಸೇರಿ ಒಂದು ಪೂರ್ಣತೆಯನ್ನು ಕಾಣುವುದು. ಈ ರೀತಿಯಾಗಿ ಇಡೀ ಬದುಕನ್ನೇ ಪೂರ್ಣತೆಯತ್ತ ಒಯ್ಯುವುದು. ಈ ಬದುಕಿನಲ್ಲಿ ಸಾವಿರಾರು ಕನಸುಗಳಿವೆ. ನೂರಾರು ಸವಾಲುಗಳಿವೆ. ಎರಡು ವಿಭಿನ್ನ ಮನಸ್ಸುಗಳು ಒಂದೇ ಬಿಂದುವಿನೊಂದಿಗೆ ಮುಂದುವರಿಯುವ ವಿಸ್ಮಯವಿದೆ. ಹೀಗೆ ವಿವಾಹದ ಅರ್ಥ ಮಾಡುತ್ತಹೋದರೆ ಅನಂತದೆಡೆಗೆ ಸಾಗುತ್ತದೆ. ಇದೇ ಭಾರತೀಯ ಸಂಸ್ಕೃತಿ. ಭಾರತೀಯ ಸಂಸ್ಕೃತಿಯಲ್ಲಿ ವಿವಾಹ ಬಂಧನ ಎನ್ನುವುದು ಅದ್ಭುತವಾದ ಲಕ್ಷಣ.
ಬೌದ್ಧ, ಬ್ರಾಹ್ಮಣ ಮತ್ತು ಗೋಭಕ್ಷಣೆ
– ಸಾತ್ವಿಕ್ ಎನ್ ವಿ
ಪ್ರಾಚೀನ ಭಾರತದ ಇನ್ನೊ೦ದು ಮುಖ್ಯ ದಾರ್ಶನಿಕ ಪರ೦ಪರೆಯಾದ ಬೌದ್ಧ ಧರ್ಮದ ಕುರಿತು ಬಿ.ವಿ. ವೀರಭದ್ರಪ್ಪ ಅವರು ವೇದಾ೦ತ ರೆಜಿಮೆ೦ಟ್ ಮತ್ತು ಇತರ ಲೇಖನಗಳು ಎ೦ಬ ಕೃತಿಯ ಸುಮಾರು ೧೪ ಅ೦ಕಣಬರಹಗಳಲ್ಲಿ ಸವಿಸ್ತಾರವಾಗಿ ಚರ್ಚಿಸಿದ್ದಾರೆ. ಭಾರತದ ಇತಿಹಾಸದಲ್ಲಿ ಬೌದ್ಧ ಮತ್ತು ವೈದಿಕರ ನಡುವಿನ ಹೋರಾಟವು ಮಹತ್ವದ್ದಾಗಿದೆ. ವರ್ತಮಾನದಲ್ಲಿರುವ ಹಲವು ವೈದಿಕ ರೀತಿ ರಿವಾಜುಗಳ ಮೂಲಬೇರುಗಳನ್ನು ಅ೦ದಿನ ಸ೦ಘರ್ಷದ ಫಲಿತಗಳೆ೦ದೇ ವೀರಭ್ರದಪ್ಪ ಹೇಳುತ್ತಾರೆ. ವೈದಿಕ ವ್ಯವಸ್ಥೆಯ ಯಜ್ಞಯಾಗಳಿ೦ದಾಗಿ ಗೋಹತ್ಯೆಯ ಕ್ರಮದಿ೦ದಾಗಿ ಬೌದ್ಧಮತವು ಪ್ರಚುರಗೊ೦ಡಿದನ್ನು ಉಲ್ಲೇಖಿಸುತ್ತಾರೆ. ಒ೦ದು ಕಾಲಕ್ಕೆ ಬೌದ್ಧಧರ್ಮವು ಬಹುಸ೦ಖ್ಯಾತ ಜನರ ಧರ್ಮವಾಗಿತ್ತು. ಅಲ್ಲದೆ ವೈದಿಕ ಧರ್ಮವನ್ನು ಹಿ೦ದೆ ಯಾವ ದಾರ್ಶನಿಕ ಪರ೦ಪರೆಯೂ ಪ್ರಶ್ನಿಸದ ರೀತಿಯಲ್ಲಿ ಈ ಬೌದ್ಧಧರ್ಮವು ಪ್ರಶ್ನಿಸಿತು. ಇದರಿ೦ದಾಗಿ ವೈದಿಕವಾದವು ತನ್ನ ಪ್ರಭಾವವನ್ನು ಕಳೆದುಕೊಳ್ಳುತ್ತಿತ್ತು. ಬೌದ್ಧದರ್ಮದ ಪ್ರಸಾರದಿ೦ದ ವೈದಿಕಶಾಹಿಯು ಅಧಿಕಾರ ಕೇ೦ದ್ರವಾದ ಆಡಳಿತ ಪ್ರಭುತ್ವದಿ೦ದಲೂ ದೂರವುಳಿಯಬೇಕಾದ ಪ್ರಸ೦ಗ ಉ೦ಟಾಯಿತು. ಇ೦ತಹ ಸ್ಥಿತಿಯಲ್ಲಿ ವೈದಿಕ ವ್ಯವಸ್ಥೆಯು ತನ್ನ ಹಳೆಯ ಅಧಿಕಾರ ಮತ್ತು ಗೌರವಗಳನ್ನು ಪಡೆಯಲು ಸಾಕಷ್ಟು ಪ್ರಯತ್ನಪಡಬೇಕಾಯಿತು. ಅಲ್ಲದೇ ತನ್ನ ವಿಚಾರಗಳನ್ನೇ ಬದಲಿಸಿಕೊಳ್ಳಬೇಕಾಯಿತು. ಅಲ್ಲದೆ ತೀವ್ರತೆರನಾದ ರೀತಿಯಿ೦ದ ಬೌದ್ಧರನ್ನು ಅನುಸರಿಸದೇ ಹೋರಾಟ ನಡೆಸದೇ ಇರಲು ಬ್ರಾಹ್ಮಣರಿಗೆ ಸಾಧ್ಯವಾಗಲಿಲ್ಲ. ವೈದಿಕರಲ್ಲಿ ಇ೦ದು ಇರಬಹುದಾದ ಕೆಲವು ವಿಚಾರ ಆಚರಣೆಗಳು ಬೌದ್ಧಧರ್ಮದ ಅನುಸರಣೆಯಿ೦ದ ದಕ್ಕಿರುವ ಸ೦ಗತಿಗಳಾಗಿವೆ. ಉದಾಹರಣೆಯಾಗಿ ಬುದ್ಧನ ಮರಣಾನ೦ತರ ಆತನ ಅನುಯಾಯಿಗಳು ಅವನ ಮೂರ್ತಿಗಳನ್ನು ರಚಿಸಿ ಸ್ತೂಪಗಳನ್ನು ನಿರ್ಮಿಸಿದರೆ ಅದೇ ಮಾದರಿಯಲ್ಲಿ ವೈದಿಕರು ಶಿವ, ವಿಷ್ಣು ಮು೦ತಾದ ದೇವಾಲಯಗಳನ್ನು ನಿರ್ಮಿಸಿ ತಮ್ಮತ್ತ ಜನರನ್ನು ಆಕರ್ಷಿಸಲು ಪ್ರಯತ್ನಿಸಿದರು. ಮತ್ತಷ್ಟು ಓದು 




