ವಿಷಯದ ವಿವರಗಳಿಗೆ ದಾಟಿರಿ

Posts from the ‘ಧರ್ಮ’ Category

28
ಆಕ್ಟೋ

ಉತ್ತರ ಕನ್ನಡ ಹವ್ಯಕರ ದೊಡ್ಡಬ್ಬ (ದೀಪಾವಳಿ) ದ ಆಚರಣೆ

– ಗೀತಾ ಹೆಗ್ಡೆ

download-1ನಮ್ಮ ಹವ್ಯಕ ಜನಾಂಗದಲ್ಲಿ ದೀಪಾವಳಿ ಹಬ್ಬ ಎಂದು ಕರೆಯುವ ವಾಡಿಕೆ ಇಲ್ಲ. ಚೌತಿ ಹಬ್ಬ (ಗಣೇಶ ಚತುರ್ಥಿ) ಮಾರ್ನೋಮಿ ಹಬ್ಬ ಅಥವಾ ನವರಾತ್ರಿ ಹಬ್ಬ ( ದಸರಾ ಹಬ್ಬ) ದೊಡ್ಡಬ್ಬ (ದೀಪಾವಳಿ ಹಬ್ಬ) ಹೀಗೆ ತಮ್ಮದೆ ಶೈಲಿಯಲ್ಲಿ ಹಬ್ಬಗಳನ್ನು ಕರೆಯುವ ವಾಡಿಕೆ ಅನಾದಿ ಕಾಲದಿಂದ ನಡೆದುಕೊಂಡು ಬಂದಿದೆ. ಹಾಗೂ ಈ ಹಬ್ಬಗಳನ್ನು ಆಚರಿಸುವ ರೀತಿ ಕೂಡಾ ವಿಭಿನ್ನವಾಗಿದೆ. ಯಾವುದೇ ಹವ್ಯಕರ ಮನೆಗೆ ತೆರಳಿದರೂ ಹಬ್ಬ ಆಚರಿಸುವ ರೀತಿ, ಅಡುಗೆ ಮಾಡುವ ರೀತಿ, ಹವ್ಯಕ ಭಾಷೆ, ನಡೆ, ನುಡಿ, ಆದರಾಥಿತ್ಯ ಎಲ್ಲವೂ ಒಂದೇ ರೀತಿ ಇರುತ್ತದೆ. ಇದು ಉತ್ತರ ಕನ್ನಡದ ಹವ್ಯಕರ ನಡೆಯಾದರೆ ದಕ್ಷಿಣ ಕನ್ನಡದ ಕಡೆ ಹವ್ಯಕ ಭಾಷೆ, ಹಬ್ಬದ ಆಚರಣೆ ವಿಭಿನ್ನವಾಗಿ ಇರುತ್ತದೆ. ಅಡುಗೆ ಊಟ ಉಪಚಾರ ಪೂಜೆ, ಶಾಸ್ತ್ರ ಎಲ್ಲವೂ ವಿಭಿನ್ನವಾಗಿದೆ. ಎಲ್ಲರೂ ಹವ್ಯಕ ಬ್ರಾಹ್ಮಣರೇ ಆದರೂ ಸ್ವಲ್ಪ ವ್ಯತ್ಯಾಸ. ಮತ್ತಷ್ಟು ಓದು »

19
ಆಕ್ಟೋ

ಸಾಮಾಜಿಕ ಸಮಾನತೆಯ ಐಡಿಯಾಲಜಿ ಹಾಗೂ ಸಮವಸ್ತ್ರ ನಿಯಮದ ಸಮಸ್ಯೆ

– ವಿನಾಯಕ ಹಂಪಿಹೊಳಿ

rjp_310816_kesari1ಪಶ್ಚಿಮದ ದೇಶಗಳು ಶಾಲಾ ಕಾಲೇಜುಗಳಲ್ಲಿರುವ ಸಮವಸ್ತ್ರದ ನಿಯಮವನ್ನು ಕೇವಲ ಒಂದು ಶಿಸ್ತಿನ ನಿಯಮವನ್ನಾಗಿ ನೋಡುವದಿಲ್ಲ. ಆ ದೇಶಗಳು ಪ್ರೊಟೆಸ್ಟಂಟ್ ಚಳುವಳಿಯ ಕಾಲದಿಂದ ರೂಪಿಸಿಕೊಂಡಿರುವ ಸಾಮಾಜಿಕ ಸಮಾನತೆಯ ಐಡಿಯಾಲಜಿಯನ್ನು ಶಾಲೆಗಳಲ್ಲಿ ಅನುಷ್ಠಾನಕ್ಕೆ ತರುವ ಮತ್ತು ಬೆಳೆಯುತ್ತಿರುವ ಮಕ್ಕಳಿಗೆ ಆ ಐಡಿಯಾಲಜಿಯನ್ನು ತಿಳಿಸುವ ಪ್ರಯತ್ನ ಎಂದು ಅರ್ಥೈಸಲಾಗುತ್ತದೆ. ಶಾಲೆ ಎಂಬ ಸಂಸ್ಥೆಯ ಮುಂದೆ ಎಲ್ಲ ಮಕ್ಕಳೂ ಸಮಾನರು ಹಾಗೂ ಅಲ್ಲಿ ಬಡವ ಮತ್ತು ಬಲ್ಲಿದ ಎಂಬ ಭೇದವಿಲ್ಲ ಎಂಬ ಉನ್ನತವಾದ ಆಶಯವನ್ನು ಈ ಸಮವಸ್ತ್ರದ ನಿಯಮವು ಹೊಂದಿದೆ. ಹೀಗಾಗಿ ಅಲ್ಲಿ ಸಮವಸ್ತ್ರವನ್ನು ಹಾಕಿಕೊಳ್ಳಲು ಒಪ್ಪದಿರುವವರನ್ನು ಸಾಮಾಜಿಕ ಸಮಾನತೆಯ ವಿರೋಧಿ ಎಂದೇ ಪರಿಗಣಿಸಲಾಗುತ್ತದೆ. ಮತ್ತಷ್ಟು ಓದು »

18
ಆಕ್ಟೋ

ದೇವಾಲಯಗಳ ಮೇಲೆ ಸರಕಾರದ ವಕ್ರದೃಷ್ಟಿ

ಡಾ. ಸಂತೋಷ್ ಕುಮಾರ್ ಪಿ.ಕೆ
ಶಿವಮೊಗ್ಗ

tirumalaಕಳೆದ ಹಲವಾರು ದಶಕಗಳಿಂದ ಭಾರತದಲ್ಲಿ ಒಂದು ವಿಚಾರ ಚಾಲ್ತಿಯಲ್ಲಿದೆ, ಅದೆಂದರೆ ಸರ್ಕಾರವು ದೇವಾಲಯಗಳನ್ನು ತನ್ನ ಅಧೀನಕ್ಕೆ ತೆಗೆದುಕೊಳ್ಳುವುದು. ಇದರ ಕುರಿತು ವ್ಯಾಪಕವಾದ ಚರ್ಚೆಯಾಗಲಿ ಅಥವಾ ವಿರೋಧವಾಗಲಿ ಆಗಿಲ್ಲವಾದ್ದರಿಂದ ಸರ್ಕಾರಗಳು ಕಾನೂನಿನ ಹೆಸರಲ್ಲಿ ಸ್ವೇಚ್ಚಾಚಾರವಾಗಿ ದೇವಾಲಯಗಳ ಮೇಲೆ ಆಕ್ರಮಣ ಮಾಡುತ್ತಾ ಬಂದಿವೆ. ಮಹಮದ್ ಘೋರಿ, ಘಜ್ನಿ ಇವರುಗಳ ದಾಳಿಯಲ್ಲಿ ಭಾರತದ ದೇವಾಲಯಗಳು ಭೌತಿಕವಾಗಿ ನಾಶವಾದರೆ, ಆಧುನಿಕ ಕಾಲಘಟ್ಟದಲ್ಲಿ ಬಂದ ಸರ್ಕಾರಗಳಿಂದ ಇಡೀ ದೇವಾಲಯದ ಪರಂಪರೆ ನಾಶ ಹೊಂದುತ್ತಿರುವುದು ಖಚಿತ. ಇತ್ತೀಚೆಗಷ್ಟೆ ಗೋಕರ್ಣ ದೇವಾಲಯವನ್ನು ಮಠದ ಸುಪರ್ದಿಯಿಂದ ಬಿಡುಗಡೆಗೊಳಿಸಿ ಸರ್ಕಾರ ತನ್ನ ವಶಕ್ಕೆ ತೆಗೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅದರ ಕುರಿತು ಚರ್ಚಿಸಲು ಸಕಾಲ ಒದಗಿದೆ. ಮತ್ತಷ್ಟು ಓದು »

11
ಆಕ್ಟೋ

ದಲಿತರ ‘ದೇಗುಲದ ಪ್ರವೇಶ’ದ ಸುತ್ತಾಮುತ್ತ… ( ಭಾಗ ೩ )

– ಡಾ. ಮಾಧವ ಪೆರಾಜೆ

ದಲಿತರ ‘ದೇಗುಲದ ಪ್ರವೇಶ’ದ ಸುತ್ತಾಮುತ್ತ… ( ಭಾಗ ೧ )
ದಲಿತರ ‘ದೇಗುಲದ ಪ್ರವೇಶ’ದ ಸುತ್ತಾಮುತ್ತ… ( ಭಾಗ ೨ )

ಎರಡು ಭಿನ್ನ ಶಾಸನಗಳು:

tirumalaಆದರೆ ಈ ಮಾತಿಗೆ ಅಪವಾದಗಳಾಗಿ ಭಿನ್ನ ರಾಗವನ್ನು ಹಾಡುವ ಶಾಸಗಳೂ ಇಲ್ಲದಿಲ್ಲ. ಸದ್ಯಕ್ಕೆ ಅಂತಹ ಎರಡು ಶಾಸನಗಳು ನನ್ನ ಗಮನಕ್ಕೆ ಬಂದಿದೆ. ಮೊದಲನೆಯದು ಸಿರಗುಪ್ಪದ ಶಾಸನ, ಎರಡನೆಯದು ಹರಪನಹಳ್ಳಿಯ ಶಾಸನ. ಸಿರಗುಪ್ಪದ ಶಾಸನವು ಶಂಭುಲಿಂಗೇಶ್ವರ ದೇವಾಲಯದಲ್ಲಿರುವುದಾಗಿ ಅದರ ಕಾಲವು ಕ್ರಿ.ಶ. 1199 ಎಂದು ತಿಳಿದು ಬರುತ್ತದೆ. ಈ ಶಾಸನದ ಕೊನೆಯಲ್ಲಿ …… ಮತ್ತಷ್ಟು ಓದು »

10
ಆಕ್ಟೋ

ದಲಿತರ ‘ದೇಗುಲದ ಪ್ರವೇಶ’ದ ಸುತ್ತಾಮುತ್ತ… ( ಭಾಗ ೨ )

– ಡಾ. ಮಾಧವ ಪೆರಾಜೆ

ಮಧ್ಯಕಾಲದಲ್ಲಿ ಗುಡಿಗಳು:

tirumalaದೇವಾಲಯಗಳಿಗೆ ಇದ್ದಕ್ಕಿದ್ದಂತೆ ಪ್ರಸಿದ್ಧಿ ಬಂದಿರುವುದೇ ಮಧ್ಯಯುಗದಲ್ಲಿ ಎನ್ನುವುದು ಇನ್ನೊಂದು ಗಮನಾರ್ಹ ಅಂಶವಾಗಿದೆ. ಪುರಾಣಗಳು ಕಾವ್ಯಗಳು ದೇವಾಲಯಗಳ ಕುರಿತು ಹಾಡಿಹೊಗಳುವುದಕ್ಕೆ ಈ ಕಾಲದಲ್ಲಿ ಪ್ರಾರಂಭ ಮಾಡುತ್ತವೆ. ಅಗ್ನಿಪುರಾಣದ ಪ್ರಕಾರ ದೇವಾಲಯಗಳನ್ನು ಕಟ್ಟಿಸುವ ಬಯಕೆ ಬಂತೆಂದರೆ ಸಾಕು – ಅವರ  ಪಾಪ ಪರಿಹಾರವಾಗುತ್ತದೆಯಂತೆ. ದೇವಾಲಯಕ್ಕೆ ಒಂದು ಇಟ್ಟಿಗೆಯನ್ನು ಇಟ್ಟರೆ ಅದು ಅವನಿಗೆ ಸಾಯುವಾಗ ಒಂದು ಯಜ್ಞವನ್ನು ಮಾಡಿದ ಪುಣ್ಯವನ್ನು ಕೊಡುತ್ತದೆಯಂತೆ – ಹಾಗೆಂದು ಹಯಶೀರ್ಷ ಸಂಹಿತೆ ಹೇಳುತ್ತದೆ. ಯಾವುದಾದರೊಂದು ಮಗು ಆಟದ ನೆಪದಲ್ಲಿ ಮರಳಿನಲ್ಲಿ ಗುಡಿ ಕಟ್ಟಿದರೂ ಆ ಮಗುವಿಗೆ ಸ್ವರ್ಗ ಲಭಿಸುತ್ತದೆ ಎಂದು ವಿಷ್ಣು ರಹಸ್ಯವು ತಿಳಿಸುತ್ತದೆ. ಹೀಗೆ ಇಲ್ಲಿಂದ ದೇವಾಲಯಗಳಿಗೆ ಮಹತ್ವವೂ ಪ್ರಸಿದ್ಧಿಯೂ ದೊರೆಯುತ್ತದೆ. ಶ್ರೀಮಂತರು,ಚಕ್ರವರ್ತಿಗಳು, ದಂಡನಾಯಕರು ದೇವಾಲಯಗಳನ್ನು ಕಟ್ಟಿಸುತ್ತಾರೆ. ದೇವಾಲಯಗಳನ್ನು ಕಟ್ಟಿಸುವುದು, ಅಂತಹ ದೇವಾಲಯಗಳಿಗೆ ಪೂಜಾರಿಗಳನ್ನು ನೇಮಕ ಮಾಡುವುದು, ದೇವಾಲಯಗಳ ಸಂದರ್ಶನಕ್ಕಾಗಿ ಹೋಗುವುದು, ಅಲ್ಲಿ ಪ್ರಾರ್ಥನೆ ಮಾಡುವುದು, ಯಾರು ಪೂಜೆ ಮಾಡಬಹುದು, ಮಾಡಬಾರದು ಎನ್ನುವುದು ಮೊದಲಾದವುಗಳೆಲ್ಲ ಈ ಕಾಲದಿಂದಲೇ ಆರಂಭವಾಗುತ್ತವೆ. ನಮ್ಮ ಕನಕದಾಸರು ಈ ಕಾಲದವರೆಂಬುದನ್ನು ಇಲ್ಲಿ ನೆನಪಿಸಿಕೊಳ್ಳೋಣ. ಹೀಗಾಗಿ ಮಧ್ಯಕಾಲೀನ ವಿಷಯಗಳಿಗೆ ಸಂಬಂಧಿಸಿದ ಈಗ ನಾವು ನಿರ್ದಿಷ್ಟವಾಗಿ ಕರ್ನಾಟಕಕ್ಕೆ ಮಾತ್ರ ಸೀಮಿತಗೊಳಿಸಿರುವುದರಿಂದ, ಈ ವಿವರಗಳು ಇನ್ನಷ್ಟು ಸ್ಪಷ್ಟವಾಗಬಲ್ಲವು. ಹಾಗಾದುದರಿಂದ ನಿರ್ದಿಷ್ಟವಾಗಿ ದೇವಾಲಯಕ್ಕೆ ಸಂಬಂಧಿಸಿದಂತೆ ಕರ್ನಾಟಕವನ್ನೇ ಲಕ್ಷಿಸಿ ಇನ್ನು ಮುಂದೆ ಈ ವಿಷಯವನ್ನು ಇನ್ನಷ್ಟು ವಿಸ್ತರಿಸೋಣ. ಮತ್ತಷ್ಟು ಓದು »

9
ಆಕ್ಟೋ

ದಲಿತರ ‘ದೇಗುಲದ ಪ್ರವೇಶ’ದ ಸುತ್ತಾಮುತ್ತ… ( ಭಾಗ ೧ )

– ಡಾ. ಮಾಧವ ಪೆರಾಜೆ

tirumala‘ದೇವಾಲಯ ಪ್ರವೇಶ’ ಎನ್ನುವ ಸಂಗತಿಯು ಈಗ ಒಂದು ಜ್ವಲಂತ ಸಮಸ್ಯೆ ಎನ್ನುವ ಹಾಗೆ ಪ್ರತಿಬಿಂಬಿತವಾಗುತ್ತಿದೆ. ಕನ್ನಡದ ಜನಪ್ರಿಯ ದಿನಪತ್ರಿಕೆಯಾದ ಪ್ರಜಾವಾಣಿಯಲ್ಲಿ ‘ದೇಗುಲ ಪ್ರವೇಶವೂ ಶುದ್ಧೀಕರಣವೂ’ ಎನ್ನುವ ಲೇಖನ (ಲೇ: ಹೊಸಕೆರೆ ನಂಜುಂಡೇಗೌಡ, ದಿ.6.10.14) ಪ್ರಕಟವಾಗಿದೆ. ಈ ಹಿನ್ನೆಲೆಯಲ್ಲಿ ಇದು ಅತ್ಯಂತ ಸಮಕಾಲೀನ ಸಂಗತಿಯಾಗಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಈ ಉಪನ್ಯಾಸಕ್ಕೆ ಸಂಬಂಧಿಸಿದ ಹಾಗೆ ಶೀರ್ಷಿಕೆಯ ಹಾಗಿರುವ ‘ಬಾಗಿಲನು ತೆರೆದು’ ಎನ್ನುವ ಕೀರ್ತನೆಯ ಸಾಲೊಂದು, ಈ ಉಪನ್ಯಾಸಕ್ಕೆ ಬಾಗಿಲೇ ಆಗುತ್ತದೆ ಎನ್ನುವ ಹಿನ್ನೆಲೆಯಲ್ಲಿ ಆ ಕೀರ್ತನೆಯನ್ನು ಪೂರ್ಣವಾಗಿ ಇಲ್ಲಿ ಉದ್ಧರಿಸಲಾಗಿದೆ. ಮತ್ತಷ್ಟು ಓದು »

7
ಆಕ್ಟೋ

ಭಾಮಿನಿ ಷಟ್ಪದಿಯಲ್ಲಿ ಭಗವಾನ್ ಶ್ರೀಧರ ಸ್ವಾಮಿಗಳ ಚರಿತ್ರೆ

– ಗುರುಪ್ರಸಾದ್ ಕೆ ಕೆ.

ಶ್ರೀಧರಭಾಮಿನಿಧಾರೆ ೧-೫

ಶ್ರೀಧರಭಾಮಿನಿಧಾರೆ ೬-೧೦

ಶ್ರೀಧರಭಾಮಿನಿಧಾರೆ ೧೧-೧೫

ಶ್ರೀಧರಭಾಮಿನಿಧಾರೆ ೧೬-೨೦

ಶ್ರೀಧರಭಾಮಿನಿಧಾರೆ ೨೧-೨೫

shreedhar_swami21)
ಒಂದು ವರ್ಷದ ಮೇಲೆ ವರ್ಷವು
ಸಂಧಿತಾಗಲೆ ನೋಡುನೋಡುತ
ಬಂದೆ ಬಿಟ್ಟಿತು ತಾಯಿಯಗಲುವ ಕಾಲ ಸಿರಿಧರಗೇ||
ಬಂಧು ಇರುವುದು ತಾಯಿ ಮಾತ್ರವೆ
ಚೆಂದದಿಂ ಸೇವೆಯನು ಮಾಡುತ
ದುಂದುಭಿ ಎಂಬ ನಾಮದಲ್ಲಿಯ ವರುಷ ಬಂದಿಹುದೂ||

ತಾತ್ಪರ್ಯ : ವರುಷಗಳು ಉರುಳುತ್ತಿರಲು, ಅನಾರೋಗ್ಯದಿಂದ ತಾಯಿಯ ಅನಾಸಕ್ತಿಯೂ ಹೆಚ್ಚುತ್ತಲೇ ಹೋಯಿತು. ಜೀವನದಲ್ಲಿ ಯಾವ ಸ್ವಾರಸ್ಯವೂ ಇಲ್ಲದೇ ಅನಾಸಕ್ತರಾದ ತಾಯಿಯನ್ನು, ಶ್ರೀಧರರು ಅಪಾರ ಮಾತೃಭಕ್ತಿಯಿಂದ ಸೇವೆಗೈಯ ತೊಡಗಿದರು. ಹೀಗಿರುವಾಗ ಸನ್ 1921 ನೇ ವರ್ಷದಲ್ಲಿ ದುಂದುಭಿ ನಾಮ ಸಂವತ್ಸರವು ಬಂದಿತು. ದುಂದುಭಿ ಸಂವತ್ಸರದ ಮಾರ್ಗಶಿರ ಮಾಸದ ತಿಂಗಳಲ್ಲಿ ಮಂಗಳವಾರ ಬಂದಿತು. ಮತ್ತಷ್ಟು ಓದು »

1
ಆಕ್ಟೋ

ಭಾಮಿನಿ ಷಟ್ಪದಿಯಲ್ಲಿ ಭಗವಾನ್ ಶ್ರೀಧರ ಸ್ವಾಮಿಗಳ ಚರಿತ್ರೆ

– ಗುರುಪ್ರಸಾದ್ ಕೆ ಕೆ.

ಶ್ರೀಧರಭಾಮಿನಿಧಾರೆ ೧-೫
ಶ್ರೀಧರಭಾಮಿನಿಧಾರೆ ೬-೧೦
ಶ್ರೀಧರಭಾಮಿನಿಧಾರೆ ೧೧-೧೫

ಶ್ರೀಧರಭಾಮಿನಿಧಾರೆ ೧೬-೨೦

shreedhar_swami16)
ಶಾಂತಿ ಸಾಗರನಾದ ಸಿರಿಧರ
ಕಾಂತಿಯದು ವೃದ್ಧಿಸುವ ತೆರದಿ
ಸಂತಸಾಧುಗಳಿಂದ ಕಲಿಯುವ ಹಲವು ವಿಷಯಗಳಾ||
ಶಾಂತಮೂರುತಿ ರಾಮದೇವನ
ಚಿಂತೆ ಇಲ್ಲದ ಮನದಿ ನೆನೆಯುತ
ಸಂತಸದಲೀ ಕಾಲ ಕಳೆಯುತಲಿರುವ ಪುರದಲ್ಲೀ||

ತಾತ್ಪರ್ಯ : ಸದಾ ಶಾಂತಿಭಾವವನ್ನೇ ಹೊಂದಿದ ಶ್ರೀಧರರು, ತಮ್ಮ ತೇಜಸ್ಸು ವೃದ್ಧಿಯಾಗುವಂತೆ, ಸಾಧು ಸಂತರ, ಸಜ್ಜನರ ಜೊತೆಗೆ ಮಾತಾಡುತ್ತಾ ಹಲವಾರು ಆಧ್ಯಾತ್ಮಿಕ ವಿಷಯಗಳನ್ನು ತಿಳಿದುಕೊಳ್ಳುತ್ತಾ ಇದ್ದರು. ಸದಾ ನಿಶ್ಚಿಂತ ಮನೋಭಾವನೆಯಲ್ಲಿ ರಾಮನಾಮವ ಜಪಿಸುತ್ತಾ ಸಂತಸದಲ್ಲಿ ಕಾಲಕಳೆಯುತ್ತಿರುವ ಇವರನ್ನು ನೋಡುವುದೇ ಸುತ್ತಲಿನ ಜನರಿಗೆ ಒಂದು ಸೊಗಸಾಗಿತ್ತು. ಮತ್ತಷ್ಟು ಓದು »

22
ಸೆಪ್ಟೆಂ

ಭಾಮಿನಿ ಷಟ್ಪದಿಯಲ್ಲಿ ಭಗವಾನ್ ಶ್ರೀಧರ ಸ್ವಾಮಿಗಳ ಚರಿತ್ರೆ

– ಗುರುಪ್ರಸಾದ್ ಕೆ ಕೆ.

ಶ್ರೀಧರಭಾಮಿನಿಧಾರೆ ೧-೫
ಶ್ರೀಧರಭಾಮಿನಿಧಾರೆ ೬-೧೦

ಶ್ರೀಧರಭಾಮಿನಿಧಾರೆ ೧೧-೧೫

shreedhar_swami11)
ತಾಯ ದುಃಖವ ಮರೆಸಲಿಕೆ ತಾ
ಜೀಯ ಸಿರಿಧರ ಮರುಳು ಮಾಡುವ
ರಾಯರಳಿದಾ ದುಃಖಮರೆಸಲು ಆಡಿ ನಲಿಸುವನೂ||
ಆಯುಕಳೆಯೇ ಸಕಲರಿಂಗು ವಿ-
ಧಾಯ ಮರಣವು ಖಚಿತವಯ್ಯಾ
ಒಯ್ಯುವನು ಆ ನಿಯಮಪಾಲಕ ಯಮನು ಎಲ್ಲರನೂ||

ತಾತ್ಪರ್ಯ : ಶ್ರೀಧರರು ತಾಯಿಗೆ ಪತಿವಿಯೋಗದ ಸ್ಮರಣೆಯಿಂದ ಅಥವಾ ಇನ್ಯಾವುದೇ ಕಾರಣದಿಂದ ವಿಷಾದ ಭಾವ ಮೂಡಿದಾಗಲೆಲ್ಲ ತನ್ನ ನಾನಾ ವಿಧದ ಬಾಲಲೀಲೆಗಳಿಂದ ಸಮಾಧಾನಗೊಳಿಸುತ್ತಿದ್ದರು. ನಿಯಮಪಾಲಕ ಯಮಧರ್ಮರಾಜನ ಎದುರು ಮಾನವಮಾತ್ರರು ಏನು ತಾನೇ ಮಾಡಲು ಸಾಧ್ಯ. ಆಯಸ್ಸು ಕಳೆದಿರುವ ಎಲ್ಲ ಜೀವಜಂತುಗಳನ್ನೂ ಅವನು ಕರೆದೊಯ್ಯುತ್ತಾನೆ. ಮತ್ತಷ್ಟು ಓದು »

10
ಸೆಪ್ಟೆಂ

ಅಂತ್ಯದ ಬೆನ್ನೇರಿ…!

-ವಿನಾಯಕ ಪೈ ಬಿ
mudra-e1446143388978ಒಂದು ಸುಸಂಸ್ಕೃತ ಸಮಾಜ ಎಂದರೆ ವ್ಯಕ್ತಿಗತ ಚಿಂತನೆಗಳ, ಸಾಮಾಜಿಕ ಸ್ಥಿತ್ಯಂತರಗಳ, ಧಾರ್ಮಿಕ ಆಚರಣೆ, ಆಧ್ಯಾತ್ಮಿಕ ನಂಬಿಕೆಗಳ ಮತ್ತು ಅದರ ಕಾಲಾಂತರ್ಗತ ಪರಿಷ್ಕರಣೆಗಳ ಸಮ್ಮಿಲನವೇ ಆಗಿದೆ. ಈ ಸಮ್ಮಿಲನದಲ್ಲಿ ಯಾವುದಾದರು ಒಂದನ್ನು ನಿರ್ಲಕ್ಷಿಸಿದರು, ಸುಜ್ಞಾನದ ಕೊರತೆ ಸಮಾಜದ ಬೆಳವಣಿಗೆಯ ಮೇಲೆ ತೀವ್ರವಾಗಿ ಪ್ರತಿಫಲಿಸುತ್ತದೆ. ಮಾನವೀಯ ಮೌಲ್ಯಗಳು, ಸದ್ವಿಚಾರಗಳ ಸಾಂಗತ್ಯವೇ ನಮ್ಮ ಸಮೂಹದ ಅಂತಃಸತ್ವ. ಧಾರ್ಮಿಕ ಮತ್ತು ಆಧ್ಯಾತ್ಮಿಕ  ಚಿಂತನೆಗಳೇ ಸಮಾಜಕ್ಕೆ ಭದ್ರಬುನಾಧಿಯನ್ನು ಒದಗಿಸಿ, ಸಾಮಾಜಿಕ ಚಿಂತನೆಗಳು ಸದ್ಭಾವನೆಯ ಮೆಟ್ಟಿಲುಗಳಾಗಿ, ಮನುಕುಲವನ್ನು ಏಳಿಗೆಯತ್ತ ಕೊಂಡೊಯ್ಯುತ್ತದೆ . ಮತ್ತಷ್ಟು ಓದು »