ವಿಷಯದ ವಿವರಗಳಿಗೆ ದಾಟಿರಿ

Posts from the ‘ಪರಿಸರ’ Category

1
ಫೆಬ್ರ

ನೆನಪಿನ ಮೂಸೆಯಲಿ ‘ಕೋಲ್ಕಾತ್ತಾದ ಕಾಲೇಜಿನಲ್ಲಿ’

-ನಟರಾಜು 

ಒಂದು ಬಾರಿ ಗೆಳೆಯನೊಬ್ಬನ ಜೊತೆ ಕೊಲ್ಕತ್ತಾದ ವೈದ್ಯ ವಿದ್ಯಾಲಯದ ಕ್ಯಾಂಪಸ್ ಗೆ ಹೋಗಿದ್ದೆ. ಅಂದು ಪ್ರಥಮ ವರ್ಷದ ಎಂಬಿಬಿಎಸ್ ಪದವಿಯ ಪ್ರವೇಶಕ್ಕಾಗಿ ಕೌಂಸಿಲಿಂಗ್ ನಡೆಯುತ್ತಿತ್ತು. ಆ ಜಾಗದಲ್ಲಿ ರಾಜಕೀಯ ಪಕ್ಷಗಳ ವತಿಯಿಂದ ಮೂರ್ನಾಲ್ಕು ಮಳಿಗೆಗಳನ್ನು ಸ್ಥಾಪಿಸಲಾಗಿತ್ತು. ರಾಜಕೀಯ ಪಕ್ಷದ ಮಾಹಿತಿ ಇರುವ ದೊಡ್ಡ ದೊಡ್ಡ ಬ್ಯಾನರ್ ಗಳನ್ನು ನೋಡಿ, ಕಾಲೇಜಿನ ಆವರಣದಲ್ಲಿ ರಾಜಕೀಯ ಪಕ್ಷದವರಿಗೇನು ಕೆಲಸ ಅಂತ ನಾನು ಕುತೂಹಲದಿಂದ ಆ ಮಳಿಗೆಯ ಬಳಿ ಹೋಗಿದ್ದೆ. ಆ ಮಳಿಗೆಯ ಒಬ್ಬ ವ್ಯಕ್ತಿ ನಾನು ಹೊಸ ವಿದ್ಯಾರ್ಥಿ ಇರಬೇಕು ಅಂತ ತಮ್ಮ ಸಂಘದ ಭಿತ್ತಿ ಪತ್ರವೊಂದನು ಕೈಗಿತ್ತಿದ್ದ. ಬೆಂಗಾಳಿ ಮತ್ತು ಇಂಗ್ಲೀಷ್ ಎರಡೂ ಭಾಷೆಯಲ್ಲಿದ್ದ ಭಿತ್ತಿ ಪತ್ರವನು ಓದಿ ನನ್ನ ಗೆಳೆಯನೆಡೆಗೆ ತಿರುಗಿದ್ದೆ. ಆತ ಮುಗಳ್ನಕ್ಕಿದ್ದ. ಕಾಲೇಜಿಗೆ ಪ್ರವೇಶ ಪಡೆದ ಮೊದಲ ದಿನದಿಂದಲೇ ತಮ್ಮ ತಮ್ಮ ರಾಜಕೀಯ ಪಕ್ಷದ ಒಲವನ್ನು ವಿದ್ಯಾರ್ಥಿಗಳು ತಮಗಿಷ್ಟ ಬಂದ ಪಕ್ಷದ ವಿದ್ಯಾರ್ಥಿ ಸಂಘದಲಿ ನೋಂದಾಯಿಸುವುದರ ಮೂಲಕ ವ್ಯಕ್ತಪಡಿಸಬಹುದು ಅಂತ ನನ್ನ ಗೆಳೆಯ ಹೇಳಿದ್ದ.

ಮತ್ತಷ್ಟು ಓದು »

30
ನವೆಂ

ಕಲಸೆ (ನಾಡಕಲಸಿ) ದೇವಸ್ಥಾನ

-ಪ್ರಹಸ್ತಿ ಪಿ 

ಸಾಗರ ತಾಲೂಕಿನ ಇತಿಹಾಸ ಪ್ರಸಿದ್ದ ದೇವಸ್ಥಾನಗಳಲ್ಲಿ ಕಲಸೆ, ನಾಡಕಲಸಿಯೂ ಒಂದು. ಸಾಗರದವನಾಗಿಯೂ ಅದನ್ನು ನೋಡಲಾಗಿರದ ಬಗ್ಗೆ ಸ್ವಲ್ಪ ಬೇಸರವಿತ್ತು. ಬೆಳಗ್ಗೆ ೮ಕ್ಕೆ, ಮಧ್ಯಾಹ್ನ ಒಂದಕ್ಕೆ ಮಾತ್ರ ಅಲ್ಲಿಗೆ ಬಸ್ಸಿನ ಸೌಕರ್ಯವಿದೆ ಎಂಬ ಗೆಳೆಯರ ಮಾತೂ ನೋಡದಿರುವುದಕ್ಕೊಂದು ಪಿಳ್ಳೆ ನೆವವಾಗಿತ್ತು. ಆದರೆ ಅಲ್ಲಿಗೆ ಹೋದ ಮೇಲೆಯೇ ತಿಳಿದಿದ್ದು. ಅದೆಷ್ಟು ಸುಂದರ ಎಂದು.

ಹೋಗುವ ಮಾರ್ಗ:
ಸಾಗರದಿಂದ ಸುಮಾರು ಎಂಟು ಕಿ.ಮೀ ದೂರವಷ್ಟೇ ನಾಡಕಲಸಿ ಅಥವಾ ಕಲಸಿಯ ದೇವಸ್ಥಾನ. ಸಾಗರದಿಂದ ಹೋಗುವುದಾದರೆ ಸೊರಬ ಮಾರ್ಗದಲ್ಲಿ ಸುಮಾರು ೫ ಕಿ.ಮೀ ಹೋದ ಕೂಡಲೇ ಕಲಸಿ ರಾಮೇಶ್ವರ ದೇವಸ್ಥಾನಕ್ಕೆ ದಾರಿ ಅಂತ ಬೋರ್ಡೊಂದು ಸಿಗುತ್ತದೆ. ಅಲ್ಲಿಂದ ಸುಮಾರು ಮೂರು ಕಿ.ಮೀ ಬಲಕ್ಕೆ ಹೋದರೆ ಸಿಗುವುದು ಕಲಸಿ ಊರು. ಅಲ್ಲಿಂದ ಸ್ವಲ್ಪ ಒಳಗಡೆ ಇದೆ ದೇವಸ್ಥಾನ. ಸೊರಬಕ್ಕೆ ತುಂಬಾ ಬಸ್ಸುಗಳಿವೆ. ಹಾಗಾಗಿ ಸೊರಬ ಬಸ್ಸಿನಲ್ಲಿ ಕಲಸಿ ಬೋರ್ಡಿನಲ್ಲಿ ಇಳಿದುಕೊಂಡರೆ ಮೂರು ಕಿ.ಮೀ ನಡೆದು ಕಲಸಿ ದೇವಸ್ಥಾನಕ್ಕೆ ಯಾವಾಗಲಾದರೂ ಹೋಗಬಹುದು. ಸ್ವಂತ ವಾಹನವಿದ್ದರೆ ಇನ್ನೂ ಉತ್ತಮ.

ಇತಿಹಾಸ:
ಇಲ್ಲಿ ಶ್ರೀ ಮಲ್ಲಿಕಾರ್ಜುನ ಮತ್ತು ರಾಮೇಶ್ವರ ದೇವಸ್ಥಾನಗಳಿವೆ. ಈ ಜೋಡಿ ದೇಗುಲಗಳನ್ನು ಹೊಯ್ಸಳ ರಾಜ ಬಳೆಯಣ್ಣ ಹೆಗ್ಗಡೆ ಕ್ರಿ.ಶ ೧೨೧೮ ರಲ್ಲಿ ಕಟ್ಟಿಸಿದನೆಂದು ಸಂಶೋಧನಕಾರರು ಹೇಳುತ್ತಾರೆ.

ಮೊದಲಿಗೆ ಹೋಗುತ್ತಿದ್ದಂತೆಯೇ ನಿಮ್ಮನ್ನು ಸ್ವಾಗತಿಸುವುದು ದೇಗುಲದ ಎದುರಿಗೆ ಅಥವಾ ಹೋಗುವವರ ಬಲಗಡೆಗೆ ಇರುವ ನಾಗರ ಬನ.ಅದಕ್ಕೆ ನಮಸ್ಕರಿಸಿ ಮೊದಲು ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಹೋದೆವು.

ಮತ್ತಷ್ಟು ಓದು »

13
ನವೆಂ

ಸೂರ್ಯಾಸ್ತ

-ನವನೀತ್ ಪೈ

ಆಗಸ ಕೆಂಪಾಗಿತ್ತು. ಕೆಂಪು ಎನ್ನುವುದು ಪ್ರೀತಿಯ ಸಂಕೇತವೂ ಹೌದು ಅಪಾಯದ ಸಂಕೇತವೂ ಹೌದು. ಸೂರ‍್ಯ ತನ್ನ ಕೆಲಸವನ್ನು ಮುಗಿಸಿ ಮನೆಗೆ ತೆರಳುವ ಸಂತಸದಲ್ಲಿ ಕೆಂಪಾಗಿದ್ದ ಮಾತ್ರವಲ್ಲ ಬಾನನ್ನು ಕೆಂಪಾಗಿಸಿದ್ದ. ಆ ಸುಂದರ ಸಂಜೆಯಲ್ಲಿ ಮಹಾನಗರದ ಮಧ್ಯದಲ್ಲಿ ರಂಗು ರಂಗಿನ ದೀಪಗಳಿಂದ ಅಲಂಕೃತವಾದ ಆಬಾಲವೃದ್ಧರನ್ನೂ ಕೈ ಬೀಸಿ ಕರೆಯುತ್ತಿರುವ ಸುಸಜ್ಜಿತ ವಸ್ತು ಪ್ರದರ್ಶನ. ತಾಜ್ ಮಹಲ್ ನ ಪ್ರತಿಕೃತಿಯನ್ನು ಸ್ವಾಗತ ಗೋಪುರವನ್ನಾಗಿಸಿ ಒಳಗೆ ಸ್ವರ್ಗವನ್ನೇ ಏರ್ಪಡಿಸಿದ್ದರು ಆ ಕಲಾವಿದರು. ಈ ಒಂದು ಪ್ರದರ್ಶನಕ್ಕೆ ಬಂದ ಸಾವಿರಾರು ಜನರ ಮಧ್ಯೆ ಇರುವ ಒಂದು ಪುಟ್ಟ ಸಂಸಾರ ನಮ್ಮ ಮುಮದಿನ ಕಥೆಯ ಮೂಲವಸ್ತು.

ಎಷ್ಟೋದಿನಗಳ ಸತತ ಹಠದ ನಂತರ ಐದಾರು ವರ್ಷದ ಮುಗ್ಧಬಾಲಕ ರವಿಯನ್ನು ಆತನ ತಂದೆ ತಾಯಿ ಆ ವಸ್ತು ಪ್ರದರ್ಶನಕ್ಕೆ ಕರೆತಂದಿದ್ದರು. ಸ್ವಾಗತ ಗೋಪುರದ ಪಕ್ಕದ ಟಿಕೆಟ್ ಕೌಂಟರಿನಲ್ಲಿ ಎರಡೂವರೆ ಟಿಕೆಟ್‌ನ್ನು(೬ ವರ್ಷದ ಮಗುವನ್ನು ೩ ವರ್ಷ ಎಂದು ಟಿಕೆಟ್ ನೀಡುವವನ ಬಳಿಯಲ್ಲಿ ವಾದಿಸಿ ಅರ್ಧ ಟಿಕೆಟ್ ಪಡೆದಿದ್ದರು.) ಪಡೆದು ಸ್ವಾಗತ ಗೋಪುರದ ಎದುರು ನಿಂತಾಗ ಮನದ ಆಯಾಸವೆಲ್ಲ ನಾಶವಾಗಿ ಮನಕ್ಕೆ ಆನಂದವಾಯಿತು. ವಸ್ತು ಪ್ರದರ್ಶನದ ಒಳಗೆ ಕಾಲಿಟ್ಟಾಗ ಮಿಠಾಯಿ ಅಂಗಡಿಗಳ ಸಾಲು ರವಿಯನ್ನು ಬಹುವಾಗಿ ಆಕರ್ಷಿಸಿದವು.

ಬಣ್ಣ ಬಣ್ಣದ ಘಮ ಘಮ ಸುವಾಸನೆಯ ಮಿಠಾಯಿಗಳು ರವಿಯ ಬಾಯಲ್ಲಿ ನೀರೂರಿಸಿದವು. ಅವರು ಮುಂದೆ ನಡೆಯುತ್ತಿದ್ದಂತೆ ಒಂದು ಅಂಗಡಿಯಲ್ಲಿ ಎಣ್ಣೆ ಬಾಂಡಲೆಯಲ್ಲಿ ಜಿಲೇಬಿಯನ್ನು ಬಿಡುತ್ತಿದ್ದರು. ಜಿಲೇಬಿಗಳ ಮೇಲಿಂದ ಇಳಿಯುತ್ತಿರುವ ಪಾಕವು ಆ ಜಿಲೇಬಿಗಳನ್ನೇ ನೋಡುತ್ತಾ ನಡೆಯುತ್ತಿರುವ ರವಿಯ ಜಿಲೇಬಿಯಂತಹ ನಾಲಗೆಯಿಂದ ಇಳಿಯುತ್ತಿರುವ ಲಾಲಾ ಪಾಕದಂತಿತ್ತು.
ಸ್ವಲ್ಪ ಮುಂದೆ ನಡೆದಾಗ ಇನ್ನೊಂದು ಅಂಗಡಿಯಲ್ಲಿ ಬೊಂಬಾಯಿ ಮಿಠಾಯಿ ತಯಾರಿಸುತ್ತಿದ್ದರು. ಆಗಸದಲ್ಲಿ ಸ್ವಚ್ಛಂದವಾಗಿ ಹಾರಾಡುವ ಮೋಡಗಳಂತೆ ತೇಲುತ್ತಿರುವ  ಬೊಂಬಾಯಿ ಮಿಠಾಯಿಯ ಎಳೆಗಳನ್ನು ಕಡ್ಡಿಯಿಂದ ಸುತ್ತುತ್ತಿದ್ದರು. ಮತ್ತಷ್ಟು ಓದು »

9
ನವೆಂ

ಭಾವುಕರಾಗೋಣ ಬನ್ನಿ!

-ಸಂತೋಷ್

ಮನುಷ್ಯನ ಜೀವನಕ್ಕೆ ಭಾವನೆಗಳು ಎಷ್ಟು ಮುಖ್ಯ? ಎಂದು ಕೇಳಿದರೆ ನಾನು ಕೋಡುವ ಉತ್ತರ ಖಂಡಿತ ಅವು ಮನುಷ್ಯನ ಜೀವನದ ಅವಿಭಾಜ್ಯ ಅಂಗವೆಂದು.ಭಾವನೆಗಳಿಲ್ಲದ ಮನುಷ್ಯ ಏನನ್ನು ಸಾದಿಸಲಾರ.ನಿಜವಾಗಲು ಭಾವನೆಗಳೇ ಮನುಷ್ಯನ ಜೀವನದ ದಾರಿದೀಪಗಳು.ಇದಕ್ಕೆಲ್ಲ ಅಪವಾದವೆಂಬಂತೆ,ನಮ್ಮಲ್ಲಿ ಹುಟ್ಟುವ ಸೂರ್ಯನನ್ನ,ಅರಳುವ ಗುಲಾಭಿಯನ್ನು,ಸುರಿಯುವ ಮಳೆಯನ್ನು,ಆಕಾಶದಲ್ಲಿ ಮೂಡುವ ಬಣ್ಣ ಬಣ್ಣದ ಚಿತ್ತಾರವನ್ನು,ರಂಗು ರಂಗಾಗಿ ಕಾಣುವ ಕಾಮನ ಬಿಲ್ಲನು ನೋಡಿ ಮುದಗೋಳದ ಕುಂಬಕರ್ಣರು ಇದ್ದಾರೆ!ಇದರ ಬಗ್ಗೆ ಅವರದೆಲ್ಲ ದಿವ್ಯ ನಿರ್ಲಕ್ಷೆ.

ಆದರೇ ಹಾಗೇ ನಿದ್ದೆ ಮಾಡುವ ಅವರು ಭಾವುಕತೆಯ ಸುಂದರ ಅನುಭವವನ್ನು ಕಳೆದುಕೋಳುತಾರೆ ಎಂಬುದೇ ನನ್ನ ಭಾವನೆ.ಕಡೇ ಪಕ್ಷ ಈ ಪ್ರಬಂದವನ್ನು ಓದಿದ ನಂತರವಾದರು ಅಂತ ಕುಂಬಕರ್ಣರು ನಿದ್ದೆಯಿಂದ ಎಚ್ಚೆತ್ತುಕೊಂಡರೆ ಸಂತೋಷ ಇಲ್ಲದಿದ್ದರೆ ನಾವು ನೀವು ಏನು ಮಾಡಕ್ಕೆ ಆಗುತ್ತೆ ಅವರನ್ನು ಅವರ ಪಾಡಿಗೆ ಬಿಡುವುದೇ ಸೂಕ್ತ.

ಭಾವುಕನಾದವನು ಸದ ಹೊಸತ್ತನ್ನೆ ಅನ್ವೇಷಣೆ ಮಾಡುತ್ತ ಇರುತ್ತಾನೆ.ಅವನು ಪ್ರಕೃತಿಯೊಂದಿಗೆ ಒಂದು ರೀತಿಯ ಸಂವಾದವನ್ನು ಸಮಾನತೆಯನ್ನು ಸಾದಿಸುತ್ತಾನೆ.ನಿಮ್ಮ ಕಣ್ಣಿಗೆ ಒಂದು ಸುಂದರ ಹೂವು ಅರಳಿ ನಿಂತಾಗ ಭಾವುಕನಾದವನ್ನು ಅದರ ಅರಳುವಿಕೆಯನ್ನು ನೆನೆದು ನೆನೆದು ಪುಳಕಗೋಳ್ಳುತದತ್ತಾನೆ.ಅದg ಬಣ್ಣಗಳನ್ನು ತನ್ನ ಕೈಯಿಂದ ಒರೆಸಿ ನೋಡುತ್ತಾನೆ. ಅದರ ಸುವಾಸನೆಗಾಗಿ ತನ್ನ,ಮೂಗನ್ನು ಅದರ ಬಳಿ ಕೊಂಡಯ್ಯತ್ತಾನೆ.ಧೀರ್ಘವಾದ ಉಸಿರನ್ನು ಏಳೆದುಕೊಂಡು ಅದರ ಸುವಾಸನೆಯನ್ನು ಆಸ್ವಾದಿಸುತ್ತಾನೆ.ಕೊನೆಗೆ ಆ ಹೂವಿನಿಂದ ಬಿಳ್ಕೋಡುವಾಗ ಆ ಹೂವಿಗೆ ಒಂದು ಹೂ ಮುತ್ತನ್ನು ನೀಡಿದರೇ ಅವನು ಭಾವುಕ ಎನಿಸಿಕೊಳ್ಳುತ್ತಾನೆ.

ಮತ್ತಷ್ಟು ಓದು »

28
ಆಕ್ಟೋ

ಹಾವು ಪುರಾಣ!

-ವಾಣಿಶೆಟ್ಟಿ ಕುಂದಾಪುರ
“ನಾಗಾ…

ನೀ ಹೀಂಗೆಲ್ಲ ಬಪ್ಪಕಾಗ..
ಮಕ್ಕಳ್ ಮರಿ ತಿರ್ಗು ಜಾಗ
ಜಾಗ ಖಾಲಿ ಮಾಡ ಬೇಗ …”

ಮನೆ ಕಡೆ ನಾಗರಹಾವು ಬಂದಾಗಲೆಲ್ಲಾ ಅದನ್ನು ಓಡಿಸೋವಾಗ “ಅದಕ್ಕೆ ನೋವು ಮಾಡಬೇಡಿ” ಅನ್ನೋ ದೊಡ್ಡವರ ರಾಗದ ಹಿನ್ನಲೆಯಲ್ಲಿ ನಮ್ಮ ಕುಂದಗನ್ನಡದ ಪ್ರಾಸ ಹೀಗಿತ್ತು :) ನಮ್ಮ ಹಳ್ಳಿಗಳಲ್ಲಿ ಹಾವಿನ ಬಗ್ಗೆ ಭಯ ಮತ್ತು ಆಸಕ್ತಿ ಸ್ವಲ್ಪ ಕಮ್ಮಿನೇ ಜನರಲ್ಲಿ.ಆದರೆ ನಂಗೆ ಮಾತ್ರ ಇವತ್ತಿಗೂ ಅಷ್ಟೇ ಉತ್ಸಾಹ ಅವುಗಳ ಬಗ್ಗೆ.ಅದರಲ್ಲೂ ನಾಗರಹಾವು ಅಂದ್ರೆ ಸಕತ್ ಖುಷಿ..ಅದು ಮಾಡುವಷ್ಟು ಗೊಂದಲ ,ಖರ್ಚು,ಭಯ ಮತ್ಯಾವ ಹಾವುಗಳು ಮಾಡೋದಿಲ್ಲ.ಅಪರೂಪಕ್ಕೆ ಅವುಗಳು ಕೋಳಿ ಗೂಡಲ್ಲಿರೋ ಮೊಟ್ಟೆ ತಿನ್ನೋಕೆ ಬಂದರೆ ಈ ಅಕ್ಕ ಪಕ್ಕದ ಮನೇಲಿ ಎಲ್ಲ ಹೋ ದೇವ್ರ್ ಹಾವ್ ಬಂತ್ ..ಎಂದು ಪಡುವ ಸಂಭ್ರಮವೋ ಸಂಭ್ರಮ!ನಂತರ  ಅದಕ್ಕಿಷ್ಟು ಹಾಲು ಇಟ್ಟು ,ಅಕ್ಕಿ ಚೆಲ್ಲಿ ಕೈ ಮುಗಿಯೋರು !ಆದರೆ ಅದು ಕುಡಿದದ್ದು ನಾ ನೋಡೇ ಇಲ್ಲ.ಪಾಪ !ಅದರ ಹೆದರಿಕೆ ಅದಕ್ಕೆ ಎಲ್ಲಿ ಹೊಡಿತಾರೋ ಅಂತ!ಯಾವ ಹಾವಿಗೂ ಇರದ ಮುಂಡು ಬಾಲ ಇದಕ್ಕೆ ಇರೋದರಿಂದ  ಅದರ ನಿಕ್ ನೇಮ್ ಮುಂಡಪ್ಪ.

ಒಮ್ಮೆ ನಮ್ಮ ಪಕ್ಕದ ಕಾಡಿಗೆ ನವಿಲು ಹಿಡಿಯುವ ಗುಂಪೊಂದು ಬಂದಿತ್ತು.ಅವರ ಜೊತೆ ನಾವು ಕೂಡ ನೋಡಲು ಹೋಗಿದ್ದೆವು .ಚಂದದ ನವಿಲು ಗರಿ ಸಿಗುತ್ತಲ್ಲಾ ಅಂತ!ಸರಿ ಹೋಗ್ತಾನೆ ಒಂದು ದೊಡ್ಡ ನವಿಲು ಸಿಕ್ಕಿಬಿಟ್ಟಿತು.ಅವರು ಅದನ್ನು ಕೊಲ್ತಾರೆ ಅಂತ ಮಾತ್ರ ನಮಗೆ ಗೊತ್ತಿರಲಿಲ್ಲ.ಅವರು ಅದನ್ನ ಕೊಂದು ಹೊಟ್ಟೆ ಸೀಳಿದಾಗ ಅಲ್ಲೊಂದು ಪುಟ್ಟ ನಾಗರ ಮರಿ!ಆಮೇಲೆ ನಾಗರ ಹಾವಿನ ಹೆಣ ಕಂಡ ತಪ್ಪಿಗೆ (ಅಷ್ಟು ಚಂದದ ನವಿಲು ಕೊಂದಿದ್ದು ಮಾತ್ರ ಸರಿಯಂತೆ ಅವರ ಪ್ರಕಾರ ) ಸರ್ಪ ಸಂಸ್ಕಾರ ,ಅದೂ ಇದೂ ಪೂಜೆ ಮಾಡಬೇಕಾಯ್ತು ,ಆಮೇಲೆ ನವಿಲು ಹಿಡಿಯೋದು ಬಿಟ್ಟಿರಬೇಕು ಬಹುಶಃ :) ಮತ್ತಷ್ಟು ಓದು »

24
ಆಕ್ಟೋ

ಅವತ್ತು ಎದೆ ನೋವೂ ಬಂದಿರಲಿಲ್ಲ, ಶರಣರೂ ಬರಲಿಲ್ಲ..!

-ಕಾಲಂ ೯

ನೂರು ವರ್ಷ ದಾಟಿದ ಸಿದ್ಧಗಂಗಾ ಸ್ವಾಮೀಜಿ ಜೈಲು-ಆಸ್ಪತ್ರೆ ಹುಡುಕಿಕೊಂಡು ಯಡಿಯೂರಪ್ಪನವರನ್ನು ನೋಡಲು ಹೋಗಿದ್ದಾರಲ್ಲ? ಏನಿದರ ಹಿಂದಿನ ಹಕೀಕತ್ತು? ಧರ್ಮಾಚರಣೆಗೂ ಪುರುಸೊತ್ತು ಇಲ್ಲದಷ್ಟು ಸಾಮ್ರಾಜ್ಯ ಕಟ್ಟಿಕೊಂಡು ಸ್ವಾಮೀಜಿಯೊ ಅಥವಾ JSS ಕಂಪೆನಿಯ CEO ನೋ ಎಂಬಂತಿರುವ ಜಗದ್ಗುರುಗಳು ಧಾವಿಸಿ ಬಂದರಲ್ಲ? ಅಂತಹದೇನು ಆಗಿತ್ತಲ್ಲಿ? ರಂಭಾಪುರಿಗಳು ಸೇರಿದಂತೆ ಅನೇಕ ಸಣ್ಣ-ಪುಟ್ಟ ವೀರಶೈವ ಸ್ವಾಮೀಜಿಗಳು ಯಡಿಯೂರಪ್ಪನವರನ್ನು ಸಂತೈಸಲು ಸಾಲುಗಟ್ಟಿದ್ದು ಮಾಧ್ಯಮಕ್ಕೆ ಆಶ್ಚರ್ಯವೆನಿಸಿರಲಿಲ್ಲ. ಆದರೆ ಈ ಹಿರಿತಲೆಗಳು ಹಾಗೇ ದೌಡಾಯಿಸಿದ್ದರ ಹಿಂದೇನು ನಡೆದಿದೆ? ಇದು ಮಾಧ್ಯಮದ ಒಳಗೂ-ಹೊರಗೂ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಸೋಮವಾರದ ತಮ್ಮ ಅಂಕಣದಲ್ಲಿ ಅಮೀನ್‌ಮಟ್ಟು ತುಂಬಾ ಆಪ್ತವಾಗಿಯೇ ಯಡಿಯೂರಪ್ಪನವರ ಪ್ಲಸ್ಸು-ಮೈನಸ್ಸುಗಳನ್ನು ಹೊರಹಾಕಿದ್ದನ್ನು ಓದಿದ ಅನೇಕರು ’ಈ ಮಠಾಧಿಪತಿಗಳನ್ನೇಕೆ ಬಿಟ್ಟಿರಿ’ ಎಂದು ಪ್ರತಿಕ್ರಿಯಿಸಿದ್ದಾರೆ. ಸರ್ವ ವೀರಶೈವ ಮಠಗಳಿಗೂ ಒಬ್ಬನೇ ಆಡಳಿತಾಧಿಕಾರಿ ಎಂಬಂತಿರುವ ಸಚಿವ ಸೋಮಣ್ಣ ಬೆನ್ನುಹತ್ತಿ ಇವರನ್ನೆಲ್ಲ ಹೊರಡಿಸಿಕೊಂಡು ಬರುತ್ತಿದ್ದಾರೆಯೇ? ಸರ್ಕಾರದಿಂದ ದೇಣಿಗೆಯಾಗಿ ಪಡೆದ ೩-೫ ಕೋಟ ರೂಗಳ ಹಂಗು ಹಿಂಗೆಲ್ಲ ಮಾಡುವಂತೆ ಮಾಡಿತೆ?

ಒಟ್ಟು ರಾಜ್ಯದ ನಾಯಕತ್ವದ ಎಲ್ಲ ಲಕ್ಷಣಗಳು ಕರಗಿ ಶುದ್ಧ ವೀರಶೈವ ಮುಖಂಡನಂತೆ ಗೋಚರಿಸುತ್ತಿರುವ ಯಡಿಯೂರಪ್ಪನವರ ಜೈಲು-ಆಸ್ಪತ್ರೆಗಳ ಹರಾಕಿರಿ ನಗೆಪಾಟಲಾಗಿ ಹೋಗಿರುವಾಗ ಈ ’ಗೌರವಾನ್ವಿತ’ರೇಕೆ ಹರಸಲು ಹೊರಟರು? ಮತ್ತಷ್ಟು ಓದು »

24
ಸೆಪ್ಟೆಂ

ನಿನ್ನೆ ಈಕ್ವಿನಾಕ್ಸ್…!

– ಹಂಸಾನಂದಿ

ನೆನ್ನೆ ಗೆಳೆಯರೊಡನೆ ಮಾತಾಡ್ತಾ ಹೇಳ್ದೆ – “ಇವತ್ತು ಈಕ್ವಿನಾಕ್ಸ್” ಅಂತ.

“ಹಂಗಂದ್ರೇನು” ಅಂದರು ಅವರು.

ಮತ್ತೆ ಶುದ್ಧ ಸಂಸ್ಕೃತದಲ್ಲಿ “ಇವತ್ತು ಶರದ್ ವಿಷುವ” ಅಂತ ಹೇಳ್ಬಹುದಿತ್ತು – ಅದರ ಬದಲು ಕೇಳಿದರೆ, ತಾನಾಗೇ ಅರ್ಥ ಆಗೋ ಅಂತಹ ಪದ ಯಾಕೆ ಹೇಳ್ಬಾದ್ರು ಅನ್ನಿಸಿ “ಸಮಹಗಲಿರುಳು” ಅಂದೆ.

ಪದದಲ್ಲೇ ಅರ್ಥ ಬಂತಲ್ಲ? ಅಂದ್ರೆ ಇವತ್ತು ರಾತ್ರಿ ಮತ್ತೆ ಹಗಲು ಒಂದೇ ಸಮ ಇರುತ್ತವೆ. ಬೆಂಗಳೂರು (ಅಥವಾ ಕರ್ನಾಟಕದಲ್ಲಿ ಯಾವ ಜಾಗ ಆದರೂ) ಭೂಮಧ್ಯರೇಖೆಗೆ ಬಹಳ ದೂರ ಇಲ್ಲದೇ ಇರೋದ್ರಿಂದ ಚಳಿಗಾಲಕ್ಕೂ ಬೇಸಿಗೇಗೂ ದಿನ ರಾತ್ರಿಗಳ ಅವಧಿ ತುಂಬಾ ಬದಲಾಗೋದಿಲ್ಲ. ಆದ್ರೆ, ಭೂಮಧ್ಯ ರೇಖೆಯಿಂದ ಹೆಚ್ಚು ಹೆಚ್ಚು ಉತ್ತರಕ್ಕೆ (ಅಥವಾ ದಕ್ಷಿಣಕ್ಕೆ) ಹೋದಹಾಗೆ ಕಾಲ ಬದಲಾದ ಹಾಗೆ ಹಗಲು ಹೆಚ್ಚಾಗೋದೂ, ಅಥವಾ ರಾತ್ರಿ ಹೆಚ್ಚಾಗೋದೋ ಸುಲಭವಾಗಿ ಗೊತ್ತಾಗುತ್ತೆ.

ಮತ್ತಷ್ಟು ಓದು »

8
ಆಗಸ್ಟ್

ಪೌರ ಕಾರ್ಮಿಕರ ಬದುಕು ಹಸನಾಗುವುದು ಯಾವಾಗ?

– ಪವನ್ ಯಂ.ಟಿ

ನಾಳೆ ಬೆಳಗ್ಗೆ ೫ ಗಂಟೆಗೆ ಅಲಾರಾಮ್ ಇಡು ಮಗಳೆ ೫:೩೦ ರ ಬಸ್ಸು ಮಿಸ್ ಆಗೋದ್ರೆ ಕಸವೆಲ್ಲ ಅಲ್ಲೇ ಉಳಿದು ಬಿಡುತ್ತೆ, ನಿನ್ನೆ ದಿನ ಸಂತೆ ಬೇರೆ ಇತ್ತು. ಕಸದ ರಾಶಿಯೇ ಬಿದ್ದಿರ ಬಹುದು. ಬೇಗ ಹೋಗಿ ಕ್ಲೀನ್ ಮಾಡಬೇಕು…! ಎಂದು ಪೌರಕಾರ್ಮಿಕೆ ಮಲ್ಲಮ್ಮ ತನ್ನ ಮಗಳಿಗೆ ಹೇಳಿ ಮಲಗಿಕೊಂಡಳು. ಮಲ್ಲಮ್ಮನಿಗಿರುವ ಒಂದೇ ಆಲೋಚನೆ ತನಗೆ ವಹಿಸಿದ ವಾರ್ಡನಂಬರ್ ೭ರಲ್ಲಿ ಬಿದ್ದಿರುವ ಕಸವನ್ನು ತೆಗೆದು ಶುಚಿಗೊಳಿಸುವುದು. ಎಲ್ಲಿ ಬೆಳಗ್ಗೆ ಬಸ್ಸು ಮಿಸ್ಸಾದರೆ ಕಸದ ರಾಶಿ ಅಲ್ಲಿಯೇ ಉಳಿದು ಮೇಲಾಧಿಕಾರಿಗಳು, ಗುತ್ತಿಗೆದಾರರು ನನ್ನನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆಯೋ ಅನ್ನುವ ಭಯ ಮಲ್ಲಮ್ಮನಿಗೆ. ಇದು ಕೇವಲ ಒಬ್ಬ ಪೌರಕಾರ್ಮಿಳ/ನ  ಚಡಪಡಿಕೆಯಲ್ಲ. ನಮ್ಮ ದೇಶದಲ್ಲಿ ಅಥವಾ ರಾಜ್ಯದಲ್ಲಿ ದುಡಿಯುತ್ತಿರುವ ಎಲ್ಲಾ ಪೌರ ಕಾರ್ಮಿಕರ ಚಡಪಡಿಕೆಯಾಗಿದೆ. ಪೌರ ಕಾರ್ಮಿಕರಿಗೆ ದಿನಬೆಳಗಾದರೆ ಸ್ವಚ್ಚತೆಯದ್ದೇ ಚಿಂತೆ. ಅವರು ಈ ಕೆಲಸವನ್ನು ತಮ್ಮ ಒಟ್ಟೆ ಪಾಡಿಗಾಗಿ ಮಾಡಿದರೂ ಸಹ  ಅದರ ಹಿಂದೆ ಪ್ರತಿಯೊಬ್ಬ ನಾಗರೀಕನ ಆರೋಗ್ಯದ ಕುರಿತ ಕಾಳಜಿ ಅವರಲ್ಲಿ ಮನೆ ಮಾಡಿರುತ್ತದೆ.

ನಾವು ಬೆಳಗ್ಗೆ ಎದ್ದು ಸುಮಾರು ೭ ಗಂಟೆಯ ಸಮಯಕ್ಕೆ ಪಟ್ಟಣಕ್ಕೆ ಒಂದು ಸುತ್ತು ಬಂದರೆ ಸಾಕು ಪೌರ ಕಾರ್ಮಿಕರು ಪಡುವ ಕಷ್ಟ, ಅವರು ಮಾಡುವ ಕೆಲಸ, ನಮ್ಮ ಕಣ್ಣಿಗೆ ಕಾಣುತ್ತದೆ. ನಮಗೆ ಅಸಯ್ಯ ಎನ್ನಿಸುವ ಕೆಲಸವನ್ನು ಅವರು ಮಾಡಿದಂತೆ ಕಂಡರೂ ಅವರೆಲ್ಲ ನಮ್ಮ ಪಾಲಿನ ದೇವರಿದ್ದಂತೆ, ಇಂದು ನಾವೆಲ್ಲ ಒಳ್ಳೆಯ, ಕೈತುಂಬಾ, ಹಣ ಬರುವ ಕೆಲಸವನ್ನು ಮಾತ್ರ ಹುಡುಕುತ್ತೇವೆ. ಒಂದು ವೇಳೆ ಪೌರ ಕಾರ್ಮಿಕರೇ ಇಲ್ಲವೆಂದಿದ್ದರೇ ಇಂದು ನಮ್ಮ ಆರೋಗ್ಯದ ಪರಿಸ್ಥಿತಿ ಏನಾಗುತ್ತಿತ್ತು ಎನ್ನುವುದನ್ನು ನೀವೇ ಯೋಚಿಸಿ.

ಮತ್ತಷ್ಟು ಓದು »

23
ಜುಲೈ

ಕನ್ನಡಿಗರೆಂದರೆ ನಾಯಿಗಳಾ?

– ಸಚಿನ್

ಸಿಂಗಮ್ ಚಿತ್ರದಲ್ಲಿ ನಟರಾದ ಅಜಯ್ ದೇವಗನ್ ಹಾಗು ಪ್ರಕಾಶ್ ರೈ ರವರ ಮಧ್ಯೆ ನಡೆಯುವ ಸಂಭಾಷಣೆ ಯಲ್ಲಿ ನಾಯಿಗಳು ಎನ್ನುವ ಪದ ತೂರಿ ಬರುತ್ತೆ.

ಪ್ರಕಾಶ್ ರೈ : ಕರ್ನಾಟಕ ಬಾರ್ಡರ್ ಇಂದ ೧೦೦೦ ಜನರನ್ನು ಕರೆದು ಕೊಂಡು ಬರುತ್ತೇನೆ.
ಅಜಯ್ ದೇವಗನ್: ಆ ಸಾವಿರ ನಾಯಿಗಳಿಗೆ ನಾನೊಬ್ಬ ಸಿಂಹ ಸಾಕು ಎನ್ನುತ್ತಾನೆ. ನನ್ನ ಹಿಂದೆ ಇಡೀ ಒಂದು ಜಿಲ್ಲೆ ಇದೆ ಎಂದು ರಾಜರೋಷವಾಗಿ ಅಜಯ್ ಹೇಳುತ್ತಾನೆ.

ಇದು ನಿಜವಾಗಲೂ ಬೇಕಿತ್ತಾ? ಈ ಮೇಲಿನ ಮಾತುಗಳು ಖಂಡಿತ ಆಕ್ಷೇಪಾರ್ಹ ವಾದದ್ದು.

20
ಜುಲೈ

ರಹಸ್ಯಗಳನ್ನು ಹುಡುಕತ್ತ…!

– ವಿಷ್ಣುಪ್ರಿಯ

ಸೌರಮಂಡಲದ ತುದಿಯಲ್ಲಿ ನೀರಿನ ಗುಳ್ಳೆಗಳ್ಳಂಥ ಗುಳ್ಳೆಗಳಿವೆ. ಇವು 10 ಕೋಟಿ ಮೈಲಿಗಳಷ್ಟು ವಿಶಾಲವಾಗಿವೆ ಎಂಬುದನ್ನು ಕೂಡಾ ತಿಳಿಸಿದ್ದು ಇವೇ ವಾಯೇಜರ್ ನೌಕೆಗಳು. ಜಗತ್ತು ಹೇಗಿರಬಹುದು? ಎಂಬ ಕಲ್ಪನೆ ನಮ್ಮಲ್ಲಿ ವೇದ, ಪುರಾಣಗಳ ಕಾಲದಿಂದಲೂ ಬೆಳೆದು ಬಂದಿದೆ. ಆವಾಗ ಭೂಮಿಯಿಂದ ಬೇರೆ ಜಗತ್ತಿನತ್ತ ಚಲಿಸಲು ಈಗಿರುವಂಥ ರಾಕೆಟ್ಗಳಿರಲಿಲ್ಲ. ಗಗನನೌಕೆಗಳಿರಲಿಲ್ಲ. ಆದರೂ ಅಂದಿನ ದಿನಗಳಲ್ಲಿ ಹೇಳಿದ್ದು ಈಗ ಸತ್ಯವಾಗುತ್ತಿದೆ. ಹಾಗಿದ್ದರೆ ವೇದಗಳ ಕಾಲದಲ್ಲಿ ಜೀವಿಸಿದ್ದ ಜನರು ಯಾವ ಮಟ್ಟದ ಜ್ಞಾನವನ್ನು ಹೊಂದಿದ್ದರು? ಸಪ್ತ ಸಾಗರಗಳ ಬಗ್ಗೆ ವೇದಗಳು ಹೇಳುತ್ತವೆ. 14 ಲೋಕಗಳ ಬಗ್ಗೆಯೂ ನಮ್ಮ ಪುರಾಣಗಳಲ್ಲಿ ಪ್ರಸ್ತಾಪವಿದೆ.

ಈ ಪ್ರಪಂಚದಲ್ಲಿ ಅಥವಾ ಬ್ರಹ್ಮಾಂಡದಲ್ಲಿ ಏನೆಲ್ಲ ಇದೆ ಎಂಬ ಚಿಂತನೆ ಹಲವು ಕಾಲದಿಂದ ವಿಜ್ಞಾನಿಗಳ ಮನದಲ್ಲಿದೆ. ಅದರ ಬೆನ್ನು ಹತ್ತಿ ಹುಡುಕುವ ಪ್ರಯತ್ನಗಳೂ ನಡೆಯುತ್ತಿವೆ. ಭೂಮಿಯ ಹೊರತಾಗಿ ಬೇರೆ ಯಾವುದಾದದರೂ ಗ್ರಹಗಳು ವಾಸಕ್ಕೆ ಯೋಗ್ಯವಾಗಿವೆಯೇ? ಬೇರೆ ಯಾವುದಾದರೂ ಗ್ರಹಗಳಲ್ಲಿ ಜೀವಿಗಳಿವೆಯೇ? ಒಂದುವೇಳೆ ಇದ್ದದ್ದೇ ಆದಲ್ಲಿ ಆ ಅನ್ಯಗ್ರಹ ಜೀವಿಗಳು ಭೂಮಿಯನ್ನು ಮತ್ತು ನಮ್ಮನ್ನು ಗಮನಿಸುತ್ತಿರುವ ಸಾಧ್ಯತೆಗಳಿವೆಯೇ? ಎಂಬೆಲ್ಲ ವಿಚಾರಗಳ ಬಗ್ಗೆ ವಿಜ್ಞಾನಿಗಳು ಉತ್ತರ ಕಂಡುಕೊಳ್ಳುವ ಪ್ರಯತ್ನ ನಡೆಸುತ್ತಲೇ ಇದ್ದಾರೆ.