ಸ್ಥಳೀಯರಿಗೆ ಉದ್ಯೋಗದಲ್ಲಿ ಮೀಸಲಾತಿ ; ವಲಸಿಗರ ರಾಜ್ಯದ ನಾಯಕರನ್ನು ಪ್ರಶ್ನಿಸಬೇಕಾಗೈತಿ
– ರಾಕೇಶ್ ಶೆಟ್ಟಿ
ಕರ್ನಾಟಕ ರಾಜ್ಯದ ಖಾಸಗಿ ಕೈಗಾರಿಕೆಗಳಲ್ಲಿ (ಐಟಿ, ಬಿಟಿ ಹೊರತುಪಡಿಸಿ) ಶೇ 70 ರಷ್ಟು ಉದ್ಯೋಗಗಳನ್ನು ಸ್ಥಳೀಯರಿಗೆ ಕಡ್ಡಾಯವಾಗಿ ಕಲ್ಪಿಸಲು ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತರುವ ತಯಾರಿಯಲ್ಲಿ ರಾಜ್ಯ ಸರ್ಕಾರವಿರುವುದಾಗಿ ಪತ್ರಿಕೆಗಳಲ್ಲಿ ವರದಿಯಾಗಿದೆ. ಶೇ.70 ರಲ್ಲಿ ಸಿ ಮತ್ತು ಡಿ ಹುದ್ದೆಗಳಲ್ಲಿ ಶೇ 50, ಎ ಮತ್ತು ಬಿ ದರ್ಜೆಯ ಹುದ್ದೆಗಳಲ್ಲಿ ಶೇ 20 ರಷ್ಟು ಹುದ್ದೆಗಳನ್ನು ಸ್ಥಳೀಯರಿಗೆ ಮೀಸಲಿಡಬೇಕು ಎಂಬುದು ಪ್ರಸ್ತಾವನೆ. ಇನ್ನು “ಸ್ಥಳೀಯರು ಯಾರು?” ಎಂಬುದರ ಮಾನದಂಡವಾಗಿ ಕರ್ನಾಟಕದಲ್ಲಿ ಜನಿಸಿದವರು ಮತ್ತು ರಾಜ್ಯದಲ್ಲಿ ೧೫ ವರ್ಷಗಳ ಕಾಲವಿದ್ದು ಕನ್ನಡವನ್ನು ಮಾತನಾಡಲು, ಬರೆಯಲು, ಓದಲು ಕಲಿತವರನ್ನು ಪರಿಗಣಿಸಲಾಗುವುದು. ಮತ್ತಷ್ಟು ಓದು 
ಮೋದಿ ಭಕ್ತರೇನು ಮುಟ್ಟಾಳರೇ..?
– ಸಂತೋಷಕುಮಾರ ಮೆಹೆಂದಳೆ.
( ತನ್ನ ನಂಬಿ ಹಿಂದೆ ಕರೆದೊಯ್ಯುವವನು ನಾಯಕನಾಗುವುದು ಸಹಜ. ಆದರೆ ಕ್ರಮೇಣ ಸಿದ್ಧಾಂತದಲ್ಲಿ ವೈಪರಿತ್ಯಗಳುಂಟಾಗಿ ಆ ನಾಯಕತ್ವ ಸಹಜವಾಗೇ ಕುಸಿಯುತ್ತದೆ. ಆದರೆ ತನ್ನ ನಂಬಿಕೆಗಳನ್ನು ಸಂಪೂರ್ಣ ಸಮೂಹದ ನಂಬಿಕೆಯನ್ನಾಗಿ ಪರಿವರ್ತಿಸೋದಿದೆಯಲ್ಲ ಅಂಥವನು ಶಾಶ್ವತವಾಗಿ ನಾಯಕನಾಗುತ್ತಾನೆ ಮತ್ತು ಆ ಸ್ಥಾನ ಅಬಾಧಿತ. ಹಾಗೆ ಜನರ ನಂಬುಗೆ ಮತ್ತು ವಿಶ್ವಾಸ ಎರಡನ್ನೂ ಗಳಿಸುವವನು ಮಿತ್ರರಷ್ಟೇ ಶತ್ರುಗಳನ್ನೂ ಗಳಿಸುತ್ತಾನೆ. ಕಾರಣ ಯಶಸ್ಸು ಎನ್ನುವುದು ಎಂಥವನ ನಿಯತ್ತನ್ನೂ ಹಾಳು ಮಾಡಿಬಿಡುತ್ತದೆ ) ಮತ್ತಷ್ಟು ಓದು 
ಲಘು ಹರಟೆ: ಡಿಮಾನಿಟೈಸಷನ್ನೂ, ಅಜೈಲ್ ಪ್ರೊಜೆಕ್ಟೂ..
– ನಾಗೇಶ ಮೈಸೂರು
ಪೆಚ್ಚು ಮೋರೆ ಹಾಕಿಕೊಂಡು ಸುಟ್ಟ ಬದನೆಯ ಮುಖ ಹಾಕಿಕೊಂಡು ಬರುತ್ತಾ, ಎದುರು ಸಿಕ್ಕಿದ ಗುಬ್ಬಣ್ಣನನ್ನು ಕಂಡು ಮರುಭೂಮಿಯಲ್ಲಿ ಓಯಸಿಸ್ ಕಂಡಂತಾಗಿ ‘ ಹಲೋ ಗುಬ್ಬಣ್ಣ..!’ ಎಂದೆ ತುಸು ಉದ್ವೇಗದ ದನಿಯಲ್ಲಿ.
‘ನಮಸ್ಕಾರ ಸಾರ್..’ ಅಷ್ಟೇ ನೀರಸ ದನಿಯಲ್ಲಿ ಗುಬ್ಬಣ್ಣನ ಮಾರುತ್ತರ.. ಸಂವೇರ್ ಸಂಥಿಂಗ್ ಈಸ್ ರಾಂಗ್.. ಹಾಳು ಸಿಂಗಪುರದ ಬಿಸಿಲು ಕಾಡಿ ನಲುಗಿಸಿಬಿಟ್ಟಿರಬೇಕು..
‘ತುಂಬಾ ಬಿಸಿಲು ಅಲ್ವಾ.. ಬಾ ಹೋಗಿ ಒಂದೊಂದು ಎಳನೀರು ಆದರು ಕುಡಿಯೋಣ.. ಮುಖವೆಲ್ಲ ಬಾಡಿ ಹೋಗಿದೆಯಲ್ಲೋ..?’ ಅಂದೆ.
‘ಅಯ್ಯೋ ಅದು ಬಿಸಿಲಿಗೆ ಬಾಡಿದ್ದಲ್ಲ ಸಾರ್.. ಹಾಳು ಅಪ್ಕಮಿಂಗ್ ಇಂಡಿಯಾ ಟ್ರಿಪ್ ಪ್ರಭಾವ… ಸುತ್ತಿ ಸುತ್ತಿ ಸಾಕಾಗೋಯ್ತು.. ಆದರೂ ನೋ ಸಕ್ಸಸ್..’ ಮತ್ತಷ್ಟು ಓದು 
ಮೋದಿಯಂತವರು ರಾಜಕೀಯಕ್ಕೆ ಬರಬೇಕು..
– ರಾಕೇಶ್ ಶೆಟ್ಟಿ
ದೇಶದ ಪಾಲಿಗೆ ಮಹತ್ವದ ದಿನಗಳಾಗಿ ಇತಿಹಾಸದ ದಿಕ್ಕು ದೆಸೆಯನ್ನೇ ಬದಲಿಸಿದ ಆಗಸ್ಟ್ ೧೫, ಜನವರಿ ೨೬, ಅಕ್ಟೋಬರ್ ೨, ಜನವರಿ ೨೩ರ ಸಾಲಿಗೆ ನಿಶ್ಚಿತವಾಗಿ ನವೆಂಬರ್ ೮ರ ದಿನವನ್ನು ಸೇರಿಸಬಹುದೆನಿಸುತ್ತದೆ. ನವೆಂಬರ್ ೮ರ ಮಧ್ಯರಾತ್ರಿಯಿಂದ ೫೦೦, ೧೦೦೦ ರೂಪಾಯಿಗಳ ಹಳೆಯ ನೋಟುಗಳ ಚಲಾವಣೆಯನ್ನು ನಿಲ್ಲಿಸುವ ನಿರ್ಧಾರ ತೆಗೆದುಕೊಳ್ಳುವ ಮೂಲಕ ದೇಶದ ಆರ್ಥಿಕ ವ್ಯವಸ್ಥೆಯ ಮಗ್ಗಲು ಬದಲಿಸಲು ಹೊರಟ ದಿನ. ಮತ್ತಷ್ಟು ಓದು 
ದೇವನೂರು ಮಹಾದೇವ ಅವರಿಗೊಂದು ಪ್ರೀತಿಪೂರ್ವಕ ಪತ್ರ
– ಪ್ರವೀಣ್ ಕುಮಾರ್, ಮಾವಿನಕಾಡು
ಕನ್ನಡ ನಾಡಿನ ಸಾಕ್ಷಿಪ್ರಜ್ಞೆ ಎಂದೇ ಕರೆಯಲ್ಪಡುವ ಪ್ರೀತಿಯ ದೇವನೂರು ಮಹಾದೇವ ಅವರಿಗೆ ನಮಸ್ಕಾರಗಳು.
ಕನ್ನಡದ ಪ್ರಖ್ಯಾತ ಸಾಹಿತಿಗಳಲ್ಲಿ ಒಬ್ಬರಾದ ತಾವು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸ್ಥಾಪಕರಲ್ಲಿ ಒಬ್ಬರೂ ಹೌದು. ಆದರೆ ನಿಮ್ಮಲ್ಲಿ ಎಳ್ಳಷ್ಟೂ ಜಂಭವಿಲ್ಲ, ಅಹಂಕಾರವಿಲ್ಲ ಮತ್ತು ದೊಡ್ಡ ದೊಡ್ಡ ಸಾಹಿತಿಗಳು ತೋರುವ ಶೋಕಿಯಿಲ್ಲ. ಸರಳತೆಯೇ ನಿಮ್ಮ ಗುರುತು ಪತ್ರ ಎಂದರೂ ತಪ್ಪಾಗದು. ಮತ್ತಷ್ಟು ಓದು 
ಮೌಲ್ಯ ರಾಜಕಾರಣ ಮರೆತ ಜಯಲಲಿತಾ!
– ತುರುವೇಕೆರೆ ಪ್ರಸಾದ್
ಪತ್ರಕರ್ತರು
ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಸಾವಿನೊಂದಿಗೆ ಅವರ ಆಡಳಿತ ಕೊನೆಗೊಂಡಿದೆ. ಇದನ್ನೇ ಜಯಲಲಿತಾ ಯುಗಾಂತ್ಯ ಎಂದು ಬಣ್ಣಿಸಲಾಗುತ್ತಿದೆ. ತಮಿಳುನಾಡಿನ ಕೋಟಿ ಕೋಟಿ ಜನರು ತಮ್ಮ ಅಮ್ಮನ ನಿಧನದ ಸುದ್ದಿ ತಿಳಿದು ತೀವ್ರ ಆಘಾತಕ್ಕೊಳಗಾಗಿದ್ದಾರೆ. ನಾಡಿನಾದ್ಯಂತ ಶೋಕ ಮಡುಗಟ್ಟಿದೆ. ಅಮ್ಮನ ಸಾವಿನ ಭಾವೋದ್ವೇಗದ ಅಲೆ ಉಕ್ಕಿ ಹರಿಯುತ್ತಿದೆ. ಎಲ್ಲೆಡೆ ಅಮ್ಮನ ಗುಣಗಾನ ನಡೆಯುತ್ತಿದೆ. ಜಯಲಲಿತಾ ತಾವು ಬದುಕಿರುವಷ್ಟು ದಿನವೂ ತಮ್ಮ ನಾಡಿನ ರೈತರಿಗಾಗಿ ಕಾವೇರಿ ನೀರನ್ನು ಶತಾಯಗತಾಯ ಹರಿಸಿಕೊಳ್ಳಲೇಬೇಕು ಎಂದು ಹಠ ಹಿಡಿದವರಂತೆ ವರ್ತಿಸಿದರು. ಈ ವರ್ಷವೂ ಕರ್ನಾಟಕದ ಎಲ್ಲಾ ಜಲಾಶಯಗಳು ನೀರಿಲ್ಲದೆ ಒಣಗಿ ನಿಂತಿದ್ದಾಗಲೂ ಸಹ ಜಯಲಲಿತಾ ತಮ್ಮ ರಾಜ್ಯಕ್ಕೆ ನೀರು ಹರಿಸಲೇಬೇಕೆಂದು ಕರ್ನಾಟಕದ ಮೇಲೆ ಒತ್ತಡ ಹೇರಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಆದಾಗ್ಯೂ ಕರ್ನಾಟಕದ ಜನ ಅವರ ಸಾವಿಗೆ ಅನುಕಂಪ ವ್ಯಕ್ತಪಡಿಸಿದ್ದಾರೆ, ಒಬ್ಬ ಧೀಮಂತ ಮಹಿಳೆಯ ಸಾವಿಗೆ ನೀಡಬೇಕಾದ ಘನತೆ ಗೌರವಗಳನ್ನು ಮಾನವೀಯತೆಯ ನೆಲೆಯಲ್ಲಿ ಪ್ರದರ್ಶಿಸಿ ಕನ್ನಡಿಗರು ಎಂದಿನಂತೆ ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ಮತ್ತಷ್ಟು ಓದು 
ಜಯಲಲಿತಾರನ್ನು ಚಿರಸ್ಮರಣೀಯವಾಗಿಸಿದ “ಅಮ್ಮ ಉನವಾಗಮ್”
– ಶ್ರೇಯಾಂಕ ಎಸ್ ರಾನಡೆ
||ವಿಶ್ವಸಂಸ್ಥೆಯ ಅಂಗಸಂಸ್ಥೆ ಆಹಾರ ಮತ್ತು ಕೃಷಿ ಸಂಸ್ಥೆಯ ಇತ್ತೀಚಿನ “ವಿಶ್ವದ ಆಹಾರ ಅಭದ್ರತೆಯ ಪರಿಸ್ಥಿತಿ 2015″ರ ವರದಿಯ ಪ್ರಕಾರ ಭಾರತದಲ್ಲಿ ದಿನನಿತ್ಯ 19.46 ಕೋಟಿ ಜನರು ಹಸಿವಿನಿಂದ ಬಳಲುತ್ತಿದ್ದಾರೆ. ಭಾರತ ನಗರೀಕರಣಗೊಳ್ಳುತ್ತಿರುವ ದೇಶ. ಹಾಗಾಗಿ ಸರಿಯಾದ ಯೋಜನೆ ರೂಪಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳದ ಹೊರತು ನಗರೀಕರಣಗೊಂಡಂತೆಲ್ಲ ನಿರಾಶ್ರಿತರ, ಬಡವರ, ಹಸಿವಿನಿಂದ ಬಳಲುವವರ ಸಂಖ್ಯೆಯೂ ಹೆಚ್ಚಲಿದೆ. ತಕ್ಷಣದ ಪರಿಸ್ಥಿತಿಯಿಂದ ನೋಡಿದರೆ ಸರಕಾರಗಳ ಕಡಿಮೆ ಮೊತ್ತದ ಆದರೆ ಉತ್ತಮ ಗುಣಮಟ್ಟದ ‘ಅಮ್ಮ ಮೆಸ್’ನಂತಹ ಆಹಾರ ಪೂರೈಸುವ ಯೋಜನೆಗಳು ಈ ದೇಶದ ಹಸಿವು ಹಾಗೂ ಪೌಷ್ಟಿಕತೆಯ ಕೊರತೆಯನ್ನು ನೀಗಿಸಿ ದೇಶವನ್ನು ಮತ್ತಷ್ಟು ಉತ್ಪಾದಕಗೊಳಿಸಲು ಸಹಾಯ ಮಾಡುತ್ತವೆ.|| ಮತ್ತಷ್ಟು ಓದು 
ಚೇಂಜ್‍ಗೆ ಗಂಡ, ಎಕ್ಸ್’ಚೇಂಜ್‍ಗೆ ಪರಗಂಡ..! ( ಹಾಸ್ಯ )
– ತುರುವೇಕೆರೆ ಪ್ರಸಾದ್
ಬ್ರಹ್ಮಚಾರಿಯಾದ ಮೋದಿಗೆ ನಮ್ಮಂತಹ ಸದ್ (ಸತ್?) ಗೃಹಸ್ಥರ ಕಷ್ಟ ಹೇಗೆ ಗೊತ್ತಿರಲಿಕ್ಕೆ ಸಾಧ್ಯ ? ಎಂದು ನಾವು ಹಲವು ಬಾರಿ ಬಹಳ ಬೇಸತ್ತುಕೊಂಡಿದ್ದೆವು. ದೊಡ್ಡ ದೇಶದ ಪ್ರಧಾನಿ ಆಗುವುದು ದೊಡ್ಡದಲ್ಲ, ಚಿಕ್ಕ ಸಂಸಾರದಲ್ಲಿ ನಿಧಾನಿಯಾಗಿ ಎಲ್ಲವನ್ನೂ ನಿಭಾಯಿಸುವುದೇ ಕಷ್ಟ ಎಂದು ಮೊದಲಿನಿಂದಲೂ ನಮಗೆ ಅನುಭವವೇದ್ಯವಾದ ಅರಿವು ಮೂಡಿತ್ತು. ಅಂತದ್ದೊಂದು ಅರಿವಿಲ್ಲದೆ ಮೋದಿ ಎಲ್ಲಂದರಲ್ಲಿ ಓಡಾಡಿಕೊಂಡು, ದೇಶ ಸುತ್ತಿಕೊಂಡು ನೆಮ್ಮದಿಯಾಗಿದ್ದಾರಲ್ಲ ಎಂದು ನಮಗೆ ಸಿಕ್ಕಾಪಟ್ಟೆ ಹೊಟ್ಟೆ ಉರಿಯಿತ್ತು. ನಮ್ಮಂತಹ ಗೃಹಸ್ಥರಿಗೆ ಯಾವುದೇ ಪ್ಯಾಕೇಜ್ ಘೋಷಿಸಿರಲಿಲ್ಲ ಎಂದು ಮುಂದಿನ ಬಾರಿ ಅವರಿಗೆ ಓಟ್ ಮಾಡುವುದೇ ಬೇಡ ಎಂದು ನಿರ್ಧರಿಸಿದ್ದೆವು. ಈಗ ಅವರು ಏಕಾಏಕಿ 1000, 500ರ ನೋಟುಗಳನ್ನು ಬ್ಯಾನು ಮಾಡಿ ನಮಗೆ ದೊಡ್ಡ ಉಪಕಾರ ಮಾಡಿದ್ದಾರೆ. ಮಡದಿ ಇದ್ದಿದ್ದರೆ ಇಷ್ಟೆಲ್ಲಾ ಗುಟ್ಟು ಕಾಯ್ದಿಟ್ಟುಕೊಂಡು ಮೋದಿ ದೊಡ್ಡ ದೊಡ್ಡ ನೋಟುಗಳನ್ನು ಬ್ಯಾನ್ ಮಾಡಲು ಆಗುತ್ತಿರಲಿಲ್ಲ. ಹೇಗೋ ದೊಡ್ಡ ದೊಡ್ಡ ನೋಟುಗಳನ್ನು ಬ್ಯಾನ್ ಮಾಡಿ ಕೋಟ್ಯಂತರ ಗೃಹಸ್ಥರನ್ನು ಸಂಕಟದಿಂದ ಪಾರು ಮಾಡಿದ್ದಾರೆ. ನಮ್ಮಲ್ಲೂ ಹೊಸ ಆಸೆ ಭರವಸೆ ಮೂಡಿಸಿದ್ದಾರೆ. ಕೋಟ್ಯಂತರ ಪತ್ನೀ ಶೋಷಿತ ಗಂಡಸರ ಪರವಾಗಿ ಮೋದಿಗೆ ಕೋಟಿಕೋಟಿ ವಂದನೆಗಳು.. ಮತ್ತಷ್ಟು ಓದು 
ಸಾಹಿತಿ, ಬುದ್ಧಿಜೀವಿಗಳ ಆತ್ಮ ಸಾಕ್ಷಿ ಯಾರ ಪಾದಾರುವಿಂದವನ್ನು ಸೇರಿದೆ?
ಕಿರಣ್ ಕಿಜೋ
ಸಂಶೋಧನಾ ವಿದ್ಯಾರ್ಥಿ
ದ್ರಾವಿಡ ವಿಶ್ವವಿದ್ಯಾಲಯ, ಕುಪ್ಪಂ
ಆಂಧ್ರ ಪ್ರದೇಶ
ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಅರೆನಗ್ನ ಚಿತ್ರ ನೋಡಿ, ಸಾಕಷ್ಟು ಛೀಮಾರಿಗೆ ಒಳಗಾಗಿರುವ ಶಿಕ್ಷಣ ಸಚಿವ ತನ್ವೀರ್ ಸೇಠ್, “ಮೂರೂ ಬಿಟ್ಟವರು ಊರಿಗೆ ದೊಡ್ಡವರು” ಎನ್ನುವ ಹಾಗೇ ಓಡಾಡಿಕೊಂಡಿರುವುದನ್ನು ನೋಡಿದರೆ ನಿಜಕ್ಕೂ ಖೇದವೆನಿಸುತ್ತದೆ. ಈ ನಡುವೆ ಸರ್ಕಾರವು ಸಚಿವ ಮಹಾಶಯರ ಬೆನ್ನಿಗೆ ನಿಂತು, ಸಿ.ಐ.ಡಿ.ಯಿಂದ ತನಿಖೆಯ ನಾಟಕವಾಡಿಸಿ ಕ್ಲೀನ್‍ಚೀಟ್ ನೀಡುವ ಉಮ್ಮೇದಿಯಲ್ಲಿದೆ. ನಿಷ್ಠ ಪೋಲಿಸ್ ಅಧಿಕಾರಿ ಗಣಪತಿ ಸಾವಿನ ವಿಚಾರದಲ್ಲೇ ಜಾರ್ಜ್‍ಗೆ ಕ್ಲೀನ್‍ಚೀಟ್ ನೀಡಿದವರಿಗೆ, ಈ ಪ್ರಕರಣ ಹೂವೆತ್ತಿದಷ್ಟೇ ಸಲೀಸು ಬಿಡಿ! ಇರಲಿ, ಇದೆಲ್ಲಾ ರಾಜಕಾರಣದ ಕೇಡಿನ ಭಾಗ. ನನ್ನ ಪ್ರಶ್ನೆ ಆ ಕುರಿತದ್ದಲ್ಲ, ಆ ಉದ್ದೇಶವೂ ನನ್ನಲ್ಲಿಲ್ಲ. ಆದರೆ ಸಭ್ಯ, ಪ್ರಜ್ಞಾವಂತ ಸಮಾಜವನ್ನು ಕಾಡುತ್ತಿರುವುದು ಹಾಗೂ ಸಂಕಟಕ್ಕೆ ದೂಡಿರುವುದು, ಈ ಮನುಷ್ಯ ನಾಡಿದ್ದು ರಾಯಚೂರಿನಲ್ಲಿ ನಡೆಯುತ್ತಿರುವ 82 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷನೆಂಬುದು! ಮತ್ತಷ್ಟು ಓದು 
ಅನಾಣ್ಯೀಕರಣ ಯಾಕೆ ? ಹೇಗೆ ?
– ರೂಪಲಕ್ಷ್ಮಿ
ಮೋದಿಯವರು ಈ ೫೦೦/೧೦೦೦ ನೋಟ್ ಗಳನ್ನು ನಿಷೇಧಿಸಿದ ದಿವಸದಿಂದ ಜನರಿಗೆ ಸಿಕ್ಕಾಪಟ್ಟೆ ಗೊಂದಲಗಳು. ಬಹುಶಃ ರಹಸ್ಯವಾಗಿಟ್ಟು, ದಿಢೀರನೆ ಘೋಷಿಸಿದ್ದರಿಂದಾದ ಪ್ರಮಾದವಿದು. ಮಾಧ್ಯಮಗಳು ಕೂಡ ವಸ್ತುನಿಷ್ಟವಾಗಿ ಇದನ್ನು ವಿಶ್ಲೇಷಿಸದೆ, ಯುದ್ಧವೇ ಘೋಷಣೆಯಾಗಿದೆ ಅನ್ನುವ ರೀತಿಯಲ್ಲಿ ಬಿಂಬಿಸಿದ್ದು ಮತ್ತೊಂದು ಕಾರಣ. ಕಪ್ಪು ಹಣ / ಬಿಳಿ ಹಣ, ೨೦೦% ಟ್ಯಾಕ್ಸ್ / ೫೦% ಟ್ಯಾಕ್ಸ್, ರಾಜಕಾರಣಿಗಳು / ಉದ್ಯಮಿಗಳು, ೨೦೦೦ದ ನೋಟ್ / ೫೦೦ ರ ನೋಟ್, ನಮಗೆ ಟೈಮ್ ಕೊಡಬೇಕಿತ್ತು ಅಂತಾ ಒಂದಷ್ಟು ಜನರ ಬೊಬ್ಬೆ, ಬಡಜನರು ಸಾಯ್ತಿದ್ದಾರೆ ಅಂತಾ ಒಂದಷ್ಟು ಜನರ ಗೋಳು, ಇದರ ಮಧ್ಯೆ ಆ ನೋಟ್ ಗಳನ್ನು ನಿಷೇಧಿಸಿರುವುದಷ್ಟೆ, ಮೌಲ್ಯವನ್ನಲ್ಲ, ಅದಕ್ಕೆ ನಿಮಗೆ ಬದಲಾಯಿಸಲು ಅಥವಾ ನಿಮ್ಮ ಅಕೌಂಟಿಗೆ ಪಡೆಯಲು ೫೦ ದಿವಸಗಳ ಕಾಲಾವಕಾಶ ಇದೆ ಎಂದರೂ ಕೂಡ ಜನರು ಅರ್ಜೆಂಟಿನಲ್ಲಿ ಹೋಗಿ, ಅವಶ್ಯಕತೆ ಇದೆಯೋ, ಇಲ್ಲವೋ, ಕ್ಯೂ ನಲ್ಲಿ ನಿಂತು ಹಣ ತಂದು ಸಂಗ್ರಹಿಸಿಟ್ಟುಕೊಂಡು ಸದ್ಯ, ಬದಲಾಯಿಸಿಕೊಂಡ್ವಿ ಎಂಬ ನಿಟ್ಟುಸಿರು ಬಿಟ್ಟರು. ಮತ್ತೂ ಕೆಲವರು ಇದೇ ಸಮಯದಲ್ಲಿ ತಮ್ಮಲ್ಲಿರುವ ಕಪ್ಪು ಹಣವನ್ನು ಬದಲಾಯಿಸಲು ಪೈಪೋಟಿಗೆ ಬಿದ್ದವರಂತೆ ಕೂಲಿಯಾಳುಗಳನ್ನು ಕ್ಯೂ ನಲ್ಲಿ ನಿಲ್ಲಿಸಿ, ಹಣ ಬದಲಾಯಿಸಿದರು. ಮೋದಿಯವರು ಯಾರೂ ಕೂಡ ಹೆದರುವ ಅವಶ್ಯಕತೆಯಿಲ್ಲ ಎಂದು ಸಾರಿ, ಸಾರಿ ಹೇಳಿದರೂ ಕೂಡ ಬಡವ, ಬಲ್ಲಿದರೆನ್ನದೆ ಕ್ಯೂನಲ್ಲಿ ನಿಂತದ್ದೇ, ನಿಂತದ್ದು. ಹಾಗಿದ್ದರೆ ಈ ಅನಾಣ್ಯೀಕರಣದಿಂದ ತೊಂದರೆಗಳಿಲ್ಲವೇ? ಈ ಯೋಜನೆಯಿಂದ ದೇಶಕ್ಕಾಗುವ ಉಪಯೋಗಗಳೇನು? ಮತ್ತಷ್ಟು ಓದು 




