ಮದ್ದರೆಯದಿದ್ದರೆ ಈ ಮಾವೋವ್ಯಾಧಿ ನಿದ್ದೆಗೆಡಿಸಲಿದೆ ಎಚ್ಚರ!
– ರೋಹಿತ್ ಚಕ್ರತೀರ್ಥ
ಎರಡು ಸುದ್ದಿಗಳಿವೆ. ಒಂದು – ಉರಿ ಸೇನಾನೆಲೆಯ ಮೇಲೆ ನಾಲ್ಕು ಮಂದಿ ಮುಸ್ಲಿಂ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 17 ಸೈನಿಕರು ಹತರಾಗಿದ್ದಾರೆ. ಎರಡು – ಭಾರತದ ನಕ್ಸಲ್ ಉಗ್ರರು ಜಗತ್ತಿನ ಭಯೋತ್ಪಾದನೆಯ ಪಟ್ಟಿಯಲ್ಲಿ ಕಂಚಿನ ಪದಕವನ್ನು ಜಸ್ಟ್ ಮಿಸ್ ಮಾಡಿಕೊಂಡು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಇವೆರಡರಲ್ಲಿ, ನಕ್ಸಲರ ಸಮಸ್ಯೆಯೇ ದೊಡ್ಡದು ಅನಿಸಿದ್ದರಿಂದ ಅದನ್ನು ಈ ವಾರದ ಅಂಕಣಕ್ಕೆ ಆಯ್ದುಕೊಂಡಿದ್ದೇನೆ. ಯಾಕೆಂದರೆ ಹೊರಗಿನ ಶತ್ರುಗಳನ್ನು ಪ್ರತಿದಾಳಿ ಮಾಡಿಯೋ ಯುದ್ಧ ಘೊಷಿಸಿಯೋ ತಹಬದಿಗೆ ತರಬಹುದೆನ್ನೋಣ; ಆದರೆ, ತಾಯ್ನಾಡಿನ ಒಳಗೇ ಇದ್ದುಕೊಂಡು ಒರಲೆಯಂತೆ ದೇಶವನ್ನು ಕೊರೆದು ಪುಡಿಗುಟ್ಟುವ ಆಂತರಿಕ ಶತ್ರುಗಳನ್ನು ಬಗ್ಗುಬಡಿಯುವುದು ಹೇಗೆ? 2015ರಲ್ಲಿ ಭಾರತದಲ್ಲಿ ನಡೆದ 791 ಭಯೋತ್ಪಾದನಾ ಕೃತ್ಯಗಳಲ್ಲಿ 43% ಅನ್ನು ನಕ್ಸಲೈಟ್ ಸಂಘಟನೆಗಳೇ ಮಾಡಿವೆ ಎಂದು ಅಂತಾರಾಷ್ಟ್ರೀಯ ವರದಿಯೊಂದು ಹೇಳುತ್ತಿದೆ. ಒಂದೇ ವರ್ಷದಲ್ಲಿ ಇವರು ನಡೆಸಿರುವ ದಾಳಿಗಳು 343; ಇವರ ಅಟ್ಟಹಾಸಕ್ಕೆ ಬಲಿಯಾಗಿ ಶವವಾಗಿ ಮಲಗಿದ ಅಮಾಯಕರ ಸಂಖ್ಯೆ 176. 2010ರಿಂದ 2015ರವರೆಗಿನ ಅವಧಿಯಲ್ಲಿ ದೇಶದೊಳಗೆ ನಡೆದ ಭಯೋತ್ಪಾದನಾ ಕೃತ್ಯಗಳಲ್ಲಿ 2162 ನಾಗರಿಕರು, 802 ಭದ್ರತಾ ಸಿಬ್ಬಂದಿ ಹತರಾಗಿದ್ದಾರೆಂದು ಕೇಂದ್ರದ ಗೃಹಸಚಿವಾಲಯದ ವರದಿ ಹೇಳುತ್ತಿದೆ. ಜಗತ್ತಿನಲ್ಲಿ ತಾಲಿಬಾನ್, ಐಸಿಸ್ ಮತ್ತು ಬೊಕೋ ಹರಾಮ್ ಎಂಬ ಉಗ್ರಗಾಮಿ ಸಂಘಟನೆಗಳ ನಂತರದ ಸ್ಥಾನವನ್ನು ಭಾರತದ ನಕ್ಸಲ್ ಚಳವಳಿ ತನ್ನ ಮುಡಿಗೇರಿಸಿಕೊಂಡಿದೆ. ಭಾರತ ಪ್ರಪಂಚದೆದುರು ತಲೆ ತಗ್ಗಿಸುವಂಥ ವಿಚಾರವಿದು. ಕರ್ನಾಟಕದ ಸಂದರ್ಭದಲ್ಲಿ ನಕ್ಸಲೈಟ್ ಚಳವಳಿಯ ನೆಲೆ-ಬೆಲೆಗಳೇನು ಎಂಬುದನ್ನು ವಿಮರ್ಶಿಸುವುದೇ ಪ್ರಸ್ತುತ ಲೇಖನದ ಉದ್ದೇಶ. ಮತ್ತಷ್ಟು ಓದು 
ಜಮ್ಮು-ಕಾಶ್ಮೀರ (ಐತಿಹಾಸಿಕ ಸತ್ಯಗಳು ಮತ್ತು ವರ್ತಮಾನದ ತಲ್ಲಣಗಳು)
ನಿಲುಮೆ ತಂಡವು, ಮಂಗಳೂರಿನಲ್ಲಿ ( 18.09.2016 ) ರಂದು ನಡೆಸಿದ ‘ಕಾಶ್ಮೀರದ ಕುರಿತು ವಿಚಾರ ಸಂಕಿರಣ’ ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆಯವರ ಮಾತುಗಳನ್ನು ರೂಪಲಕ್ಷ್ಮೀಯರವರು ಅಕ್ಷರ ರೂಪಕ್ಕಿಳಿಸಿದ್ದಾರೆ. ಅಂದಿನ ಕಾರ್ಯಕ್ರಮದ ವಿಚಾರಗಳು ಈಗ ನಿಲುಮೆಯ ಓದುಗರ ಮುಂದೆ..
ಚಕ್ರವರ್ತಿ ಸೂಲಿಬೆಲೆಯವರ ಭಾಷಣದ ಮುಖ್ಯಾಂಶಗಳು.
ವರ್ಷಕೊಮ್ಮೆ ನಾನು ಜಮ್ಮು, ಕಾಶ್ಮೀರಕ್ಕೆ ಹೋಗೋದ್ರಿಂದ, ಅಲ್ಲಿ ನಾನು ನೋಡಿರುವ ಆಧಾರದ ಮೇಲೆ, ನನ್ನ ವಿಚಾರಗಳನ್ನು ಹೇಳ್ತೀನಿ. ಪ್ರೊಫೆಸರ್ ಪ್ರೇಮ್ ಶೇಖರ್ ಅವರು ಆಗಲೇ ಹೇಳಿದ ಪ್ರಕಾರ, ಕಾಶ್ಮೀರದಲ್ಲಿ ಮೂರು ತರಹದ ಜನಾಂಗಗಳಿವೆ. ೧. ಹಿಂದು, ೨. ಮುಸ್ಲಿಮ್ ಮತ್ತು ೩. ಬುದ್ದಿಸ್ಟ್ – ಲಡಾಕ್ ನಲ್ಲಿರುವಂತಹವರು. ಆದರೆ ಮುಸ್ಲಿಮರು ಹೇಳೋದು – ಕಾಶ್ಮೀರದಲ್ಲಿ ನಾಲ್ಕು ತರಹದ ಜನರಿದ್ದಾರೆ. ೧. ಹಿಂದೂ, ೨. ಮುಸ್ಲಿಮ್ – ಸುನ್ನಿ ಮತ್ತು ಶಿಯಾ ೩. ಲಡಾಕ್. ಪ್ರೇಮ್ ಶೇಖರ್ ಸರ್ ಹೇಳಿದ ಹಾಗೆಯೇ ಇನ್ನು ಮುಂದೆ ಕಾರ್ಗಿಲ್ ನ ಸುದ್ಧಿಗೆ ಪಾಕಿಸ್ತಾನ್ ಬರೋಲ್ಲ. ಯಾಕೆಂದರೆ ಕಾರ್ಗಿಲ್ ನಲ್ಲಿ ಹೆಚ್ಚಾಗಿರುವ ಮುಸ್ಲಿಮರು – ಶಿಯಾ ಪಂಗಡದವರು. ಪಾಕಿಸ್ತಾನದಲ್ಲಿರುವ ಮುಸ್ಲಿಮರು – ಸುನ್ನಿ ಪಂಗಡದವರು. ಕಾಶ್ಮೀರದ ಕಣಿವೆಯಲ್ಲಿರೋ ಮುಸ್ಲಿಮರು, ಪಾಕಿಸ್ತಾನದ ಮುಸ್ಲಿಮರನ್ನು ತಮ್ಮ ಮುಸಲ್ಮಾನರು ಅಂತಂದುಕೊಳ್ತಾರೆ. ಆದರೆ ಕಾರ್ಗಿಲ್ ನ ಶಿಯಾದವರಿಗೆ ಚೆನ್ನಾಗಿ ಗೊತ್ತು. ತಾವೇನಾದರೂ ಪಾಕಿಸ್ತಾನಕ್ಕೆ ಹೋದರೆ, ಇದುವರೆವಿಗೂ ಕಣಿವೆಯಲ್ಲಾದ ಅತ್ಯಾಚಾರಗಳು, ದೌರ್ಜನ್ಯಗಳನ್ನು, ಈ ಪಾಕಿಸ್ತಾನದ ಸುನ್ನಿಗಳು ತಮ್ಮ ಮೇಲೆಯೇ ನಡೆಸುತ್ತಾರೆ. ಆ ಭಯದಿಂದ ಕಾರ್ಗಿಲ್ ನ ಮುಸ್ಲಿಮರು, ಏನೇ ಆದರೂ ನಾವು ಭಾರತದಲ್ಲೇ ಇರ್ತೀವಿ. ಪಾಕಿಸ್ತಾನಕ್ಕೆ ಸೇರೋಲ್ಲ ಅಂತಾ ಹೇಳ್ತಾರೆ. ಮತ್ತಷ್ಟು ಓದು 
ಪ್ರತಿಭಟನೆಯನ್ನೂ ಅಪರಾಧವನ್ನೂ ಏಕೆ ಸಮೀಕರಿಸುತ್ತೀರಿ ಮಾಧ್ಯಮಗಳೇ?
– ವಿನಾಯಕ ಹಂಪಿಹೊಳಿ
ರಾಜ್ಯಾದ್ಯಂತ ಪ್ರತಿಭಟನೆಗಳನ್ನು ವರದಿ ಮಾಡುವ ಸಂದರ್ಭದಲ್ಲಿ ನಮ್ಮ ಮಾಧ್ಯಮಗಳು “ವಾಹನಗಳಿಗೆ ಬೆಂಕಿ ಹಚ್ಚುವದರ ಮೂಲಕ ಕಲ್ಲು ತೂರುವ್ರದರ ಮೂಲಕ ಪ್ರತಿಭಟನಾಕಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು” ಎಂಬ ಮಾತನ್ನು ಬಳಸಿದ್ದೇ ತಪ್ಪು ಎಂಬುದು ನನ್ನ ಅನಿಸಿಕೆ. ಏಕೆಂದರೆ ಇಂತಹ ಅನೈತಿಕ ಕಾರ್ಯಗಳನ್ನು, `ಆಕ್ರೋಶದ ಸಹಜ ಅಭಿವ್ಯಕ್ತಿ’ ಎಂಬಂತೆ ಬಿಂಬಿಸಿರುವದೇ ಆ ಕ್ರಿಯೆಯನ್ನು ಸಮರ್ಥಿಸಿದಂತೆ. ಉದಾಹರಣೆಗೆ “ಚಾರ್ಲಿ ಹೆಬ್ಡೋ ಕಚೇರಿಯ ಮೇಲೆ ಬಾಂಬು ಹಾಕುವದರ ಮೂಲಕ ಭಯೋತ್ಪಾದಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು” ಎಂದು ಸುದ್ದಿ ಬಿತ್ತರಿಸಿದರೆ ಹೇಗಿರುತ್ತದೆ? ಭಯೋತ್ಪಾದಕರಂತೆ ಜೀವ ತೆಗೆದಿಲ್ಲ ಎನ್ನುವದನ್ನು ಒಪ್ಪಬಹುದು. ಆದರೆ ಸಾಲಸೋಲ ಮಾಡಿ ಪಡೆದ ಲಾರಿಗಳೇ, ಜೀವನಾಧಾರವನ್ನಾಗಿ ಮಾಡಿಕೊಂಡಿರುವ ಲಾರಿ ಡ್ರೈವರು ಕ್ಲೀನರುಗಳಿಗೆ, ಅವರ ಸಂಸಾರಕ್ಕೆ ಇದ್ದ ಒಂದೇ ಜೀವನೋಪಾಯವನ್ನೇ, ಕಸಿದುಕೊಳ್ಳುವದು ಸರಿಯೇ? ಜೀವ ತೆಗೆಯುವದಕ್ಕಿಂತ ಜೀವನ ತೆಗೆಯುವದು ಕಡಿಮೆ ಅಪರಾಧವಾಯಿತೇ?ಸಾಧಕರ ಹೆಸರಲ್ಲಿ ಅಸ್ಮಿತೆಯ ಹುಡುಕಾಟ
– ಡಾ.ಬಿ.ವಿ.ವಸಂತ ಕುಮಾರ್
ಭಾರತ ದೇಶ ಪ್ರಪಂಚದ ಒಂದು ವಿಶಿಷ್ಟ ದೇಶ. ಭಾರತದ ಬದುಕಿನ ದಾರಿಗಳನ್ನು ಇಲ್ಲಿನ ಮಹಾತ್ಮರು ನಿರ್ಮಿಸಿದ್ದಾರೆ. ಕಾಡಿನಿಂದ ಒಡಮೂಡಿದ ಈ ದಾರಿಗಳೆಡೆಗೆ ನಗರ ಮಹಾನಗರಗಳ ಜನರು ಮುಖಮಾಡಿದ್ದನ್ನೂ, ಮಾಡುತ್ತಾ ಇರುವುದನ್ನೂ, ಮುಂದೆ ಮಾಡುವುದನ್ನೂ ನೋಡಬಹುದು. ಇವರೇ ನಿಜವಾದ ರಾಷ್ಟ್ರ ನಿರ್ಮಾಪಕರು, ಸಂಸ್ಕೃತಿ ಸೃಷ್ಟಿಕರ್ತರು, ಕಲ್ಯಾಣದ ಮಹಾಕನಸುಗಾರರು. ಇಂಥವರನ್ನು ಸಂತರು, ಮಹಂತರು, ಶರಣರು, ಋಷಿಮುನಿಗಳು, ದಾರ್ಶನಿಕರು ಎಂದೆಲ್ಲ ಕರೆಯುತ್ತಾರೆ. ಅವರನ್ನು ಸಮಾಜದ ಜನ ಸದಾ ತಮ್ಮ ಬಾಳಿಗೆ ಆದರ್ಶದ ನಂದಾದೀವಿಗೆಯನ್ನಾಗಿಸಿಕೊಂಡಿದ್ದಾರೆ. ಅವರನ್ನು ಗುರುವೆಂದು ಸ್ವೀಕರಿಸಿ ತಾವು ಭಕ್ತರಾಗಿ ಗುರು-ಶಿಷ್ಯ ಪರಂಪರೆಯ ಆಧ್ಯಾತ್ಮಕ್ಕೂ ಅನುಭವಕ್ಕೂ ಕಾರಣರಾಗಿದ್ದಾರೆ. ಮತ್ತಷ್ಟು ಓದು 
ಭವಿಷ್ಯದ ಅರಮನೆಯ ಕನಸೇನೋ ಚಂದ, ಆದರೆ….
– ಗುರುರಾಜ ಕೋಡ್ಕಣಿ. ಯಲ್ಲಾಪುರ
‘ಕಂಗ್ರಾಟ್ಸ್ ಅನಿತಾ.. ನೀನು ಸಾಧಿಸಿಬಿಟ್ಟೆ ಮಗಳೇ, ನೀನು ಸಾಧಿಸಿ ಬಿಟ್ಟೆ. ನಿನಗೀಗ ಕ್ಯಾಂಪಸ್ ಸಂದರ್ಶನದಲ್ಲಿ ಕೆಲಸ ಸಿಕ್ಕಿರುವ ಕಂಪನಿ ಎಂಥಹ ಅದ್ಭುತ ಸಂಸ್ಥೆ ಗೊತ್ತೆ..?? ಈ ಒಂದು ವರ್ಷದ ಅವಧಿಯಲ್ಲೇ ಅದು ಸಾವಿರಾರು ಕೋಟಿಗಳಷ್ಟು ಲಾಭ ಪಡೆದುಕೊಂಡಿದೆ. ನಿನ್ನ ಶ್ರಮ ಸಾರ್ಥಕವಾಯಿತು ಮಗು. ದೀಪಾ, ಎಲ್ಲರಿಗೂ ಐಸ್ ಕ್ರೀಮ್ ತರಿಸು, ನಮ್ಮ ಮಗಳ ಈ ಯಶಸ್ಸನ್ನು ಖುಷಿಯಾಗಿ ಆಚರಿಸೋಣ’ ಎಂದು ಕೈಯಲ್ಲಿದ್ದ ಪತ್ರವನ್ನು ಅಪ್ಪ ಸಂತಸದಿಂದ ಓದುತ್ತಿದ್ದಾಗ ಅನಿತಾಳದ್ದು ನಿರ್ವಿಕಾರ ಮುಖಭಾವ. ಪದವಿ ಮುಗಿಯುವ ಮುನ್ನವೇ ಆಕೆಯ ಪ್ರತಿಭೆಯನ್ನು ಗಮನಿಸಿದ್ದ ಪ್ರತಿಷ್ಟಿತ ಕಂಪನಿಯೊಂದು ಆಕೆಗೆ ಉದ್ಯೋಗವನ್ನು ನೀಡಿತ್ತು. ಉದ್ಯೋಗ ಖಾತ್ರಿಯ ಪತ್ರವನ್ನೋದುತ್ತಿದ್ದ ಅಪ್ಪನಿಗೆ ಹೆಮ್ಮೆಯಿಂದ ಕೊರಳುಬ್ಬಿದ ಅನುಭವ. ಸಂತಸದ ಹಿಂದೆಯೇ ಅಮ್ಮನದ್ದೊಂದು ಸಣ್ಣ ಎಚ್ಚರಿಕೆ,’ಈಗ ಕೇವಲ ಐಸ್ ಕ್ರೀಮ್ ತಿಂದು ಸಂಭ್ರಮಿಸೋಣ ಮಗಳೇ, ನೀನು ಇನ್ನಷ್ಟು ಶ್ರಮಪಡು. ಹೆಚ್ಚು ಹೆಚ್ಚು ಏಕಾಗ್ರತೆಯಿಂದ ಓದು. ಕಡಿಮೆಯೆಂದರೂ ತೊಂಬತ್ತೈದು ಪ್ರತಿಶತ ಅಂಕಗಳನ್ನು ನೀನು ಗಳಿಸಬೇಕು. ನಿನ್ನ ಅಂಕಗಳನ್ನು, ಪ್ರತಿಭೆಯನ್ನು ನೋಡಿ ಕಂಪನಿ ನಿನಗೆ ಒಂದೇ ವರ್ಷದಲ್ಲಿ ಡಬ್ಬಲ್ ಪ್ರಮೋಷನ್ ಕೊಟ್ಟು ಬಿಡಬೇಕು. ಹಾಗೆ ಅಭ್ಯಾಸದಲ್ಲಿ ನಿನ್ನನ್ನು ನೀನು ತೊಡಗಿಸಿಕೊ ಮಗಳೇ, ಓದುವುದೊಂದೇ ನಿನ್ನ ಗುರಿಯಾಗಬೇಕು ಈಗ. ಇದು ಕಷ್ಟಪಡುವ ಕಾಲ. ಮುಂದೆ ಭವಿಷ್ಯದಲ್ಲಿ ನೀನು ಸಾಧನೆಯ ಶಿಖರದೆತ್ತರಕ್ಕೆ ನಿಂತಾಗ ಈಗ ಪಟ್ಟ ಶ್ರಮವೂ ನಿನಗೆ ಸಿಹಿಯಾದ ಅನುಭವವಾಗಿ ಭಾಸವಾಗುತ್ತದೆ ಮಗು. ಈಗ ಕೇವಲ ಓದುವುದೊಂದೇ ನಿನ್ನ ಗಮ್ಯ, ಶ್ರಮಪಡು ಅಷ್ಟೇ’ ಎನ್ನುವ ಅಮ್ಮನ ಮಾತುಗಳನ್ನು ಕೇಳಿದ ಅನಿತಾಳ ಮುಖದಲ್ಲಿ ಭಾವಹೀನ ಶುಷ್ಕನಗೆಯೊಂದು ಮೂಡಿದ್ದನ್ನು ಆಕೆಯ ಸಾಧನೆಯನ್ನು ಆಸ್ವಾಧಿಸುವ ಸಂಭ್ರಮದಲ್ಲಿದ್ದ ಪೋಷಕರು ಗಮನಿಸಲೇ ಇಲ್ಲ. ಮತ್ತಷ್ಟು ಓದು 
ಸಿದ್ಧಾಂತಗಳ ಚರಿತ್ರೆ – 1 (ಕಾರ್ಲ್ ಮಾರ್ಕ್ಸ್ ಕಟ್ಟಿಕೊಟ್ಟ ಕಲ್ಪನೆಯ ಸ್ವರ್ಗ)
– ರೋಹಿತ್ ಚಕ್ರತೀರ್ಥ
ಹತ್ತೊಂಬತ್ತು ಮತ್ತು ಇಪ್ಪತ್ತನೇ ಶತಮಾನದ ಪ್ರಪಂಚವನ್ನು ಹೆಚ್ಚು ಪ್ರಭಾವಿಸಿದ, ಬದಲಾಯಿಸಿದ ಸಿದ್ಧಾಂತಗಳಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವುದು ಕಮ್ಯುನಿಸಂ. ಇಪ್ಪತ್ತನೇ ಶತಮಾನದಲ್ಲಿ ನಡೆದ ಹಲವು ಮಹತ್ವದ ರಾಜಕೀಯ ಚಳುವಳಿಗೆ ಕಮ್ಯುನಿಸಂ ಮೂಲದ್ರವ್ಯವಾಗಿ ಒದಗಿಬಂತು. ಕಮ್ಯುನಿಸಂ ಎಂದರೇನು, ಅದು ಜಗತ್ತನ್ನು ಪ್ರಭಾವಿಸಿದ ಬಗೆ ಹೇಗೆ, 1970ರ ನಂತರ ಅದು ಅವನತಿಯತ್ತ ಸಾಗಲು ಕಾರಣವಾದ ಸನ್ನಿವೇಶಗಳೇನು, ಇಂದಿನ ಯುಗಕ್ಕೆ ಕಮ್ಯುನಿಸಂ ಪ್ರಸ್ತುತವೇ ಎಂಬ ವಿಚಾರಗಳನ್ನು ತಿಳಿದುಕೊಳ್ಳಲು, ಮೊದಲಿಗೆ ನಾವು ಅದರ ಹುಟ್ಟಿನ ದಿನಗಳ ಅವಲೋಕನ ಮಾಡಬೇಕಾಗುತ್ತದೆ. ಮತ್ತಷ್ಟು ಓದು 
ಜಮ್ಮು-ಕಾಶ್ಮೀರ (ಐತಿಹಾಸಿಕ ಸತ್ಯಗಳು ಮತ್ತು ವರ್ತಮಾನದ ತಲ್ಲಣಗಳು)
ನಿಲುಮೆ ತಂಡ ನಡೆಸಿದ ಕಾಶ್ಮೀರದ ಕುರಿತು ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಪ್ರೊ.ಪ್ರೇಮಶೇಖರವರ ಮಾತುಗಳನ್ನು ಶೋಭ ರಾವ್ ರವರು ಅಕ್ಷರ ರೂಪಕ್ಕಿಳಿಸಿದ್ದಾರೆ. ಅಂದಿನ ಕಾರ್ಯಕ್ರಮದ ವಿಚಾರಗಳು ಈಗ ನಿಲುಮೆಯ ಓದುಗರ ಮುಂದೆ..
ಕಾಶ್ಮೀರದ ಬಗ್ಗೆ ಇಂದು ಹಲವಾರು ಜನ ತಮ್ಮ ಅಲ್ಪಜ್ಞಾನದಿಂದ ಹಲವಾರು ತರಹ ಮಾತಾಡುತ್ತಾರೆ. ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸುತ್ತಿದ್ದಾರೆ. ದುರಂತವೆಂದರೆ ಅದನ್ನು ಕೇಳಲು ಕೂಡ ಬಹಳಷ್ಟು ಜನರಿದ್ದಾರೆ. ನಾವು ಅವರ ಬಳಿ ಹೋಗಿ ಬೀದಿ ಜಗಳ ಮಾಡಬೇಕಿಲ್ಲ. ವಸ್ತುನಿಷ್ಠ ಚರ್ಚೆಯನ್ನು ಏರ್ಪಡಿಸಿ ನಿಜಸಂಗತಿಗಳನ್ನ ತಿಳಿಸಿದರೆ ಸಾಕು. ಕಾಶ್ಮೀರ ನಮ್ಮದೂ ಎಂದು ಭಾರತವೂ ಹೇಳುತ್ತೆ, ಪಾಕಿಸ್ತಾನವೂ ಹೇಳುತ್ತೆ. ನಾವು ಇವೆರೆಡಕ್ಕೂ ಸೇರಿಲ್ಲ ಎಂದು ಮತ್ತೊಂದು ಗುಂಪು ಕೂಡ ಹೇಳುತ್ತೆ. ಇದೇ ಕಾಶ್ಮೀರದ ನಿಜವಾದ ಸಮಸ್ಯೆ. ಮತ್ತಷ್ಟು ಓದು 
ಅಂತ್ಯದ ಬೆನ್ನೇರಿ…!
-ವಿನಾಯಕ ಪೈ ಬಿ
ಒಂದು ಸುಸಂಸ್ಕೃತ ಸಮಾಜ ಎಂದರೆ ವ್ಯಕ್ತಿಗತ ಚಿಂತನೆಗಳ, ಸಾಮಾಜಿಕ ಸ್ಥಿತ್ಯಂತರಗಳ, ಧಾರ್ಮಿಕ ಆಚರಣೆ, ಆಧ್ಯಾತ್ಮಿಕ ನಂಬಿಕೆಗಳ ಮತ್ತು ಅದರ ಕಾಲಾಂತರ್ಗತ ಪರಿಷ್ಕರಣೆಗಳ ಸಮ್ಮಿಲನವೇ ಆಗಿದೆ. ಈ ಸಮ್ಮಿಲನದಲ್ಲಿ ಯಾವುದಾದರು ಒಂದನ್ನು ನಿರ್ಲಕ್ಷಿಸಿದರು, ಸುಜ್ಞಾನದ ಕೊರತೆ ಸಮಾಜದ ಬೆಳವಣಿಗೆಯ ಮೇಲೆ ತೀವ್ರವಾಗಿ ಪ್ರತಿಫಲಿಸುತ್ತದೆ. ಮಾನವೀಯ ಮೌಲ್ಯಗಳು, ಸದ್ವಿಚಾರಗಳ ಸಾಂಗತ್ಯವೇ ನಮ್ಮ ಸಮೂಹದ ಅಂತಃಸತ್ವ. ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತನೆಗಳೇ ಸಮಾಜಕ್ಕೆ ಭದ್ರಬುನಾಧಿಯನ್ನು ಒದಗಿಸಿ, ಸಾಮಾಜಿಕ ಚಿಂತನೆಗಳು ಸದ್ಭಾವನೆಯ ಮೆಟ್ಟಿಲುಗಳಾಗಿ, ಮನುಕುಲವನ್ನು ಏಳಿಗೆಯತ್ತ ಕೊಂಡೊಯ್ಯುತ್ತದೆ . ಮತ್ತಷ್ಟು ಓದು 
ತಮಿಳುನಾಡು, ಕಾವೇರಿ, ಜಯಲಲಿತ, ದೇವೇಗೌಡರು ಮತ್ತು ನಾನು
– ಪ್ರೇಮಶೇಖರ
ನೆರೆಯ ತಮಿಳುನಾಡಿನಲ್ಲಿ ಹಲವು ಅಚ್ಚರಿ ಹುಟ್ಟಿಸುವ ವಿರೋಧಾಭಾಸಗಳು ಕಾಣಸಿಗುತ್ತವೆ. ತಮಿಳರು ಮಹಾ ಭಾಷಾಭಿಮಾನಿಗಳು. ತಮ್ಮ ನಾಡು ನುಡಿಯ ಬಗ್ಗೆ ಅವರ ಪ್ರೀತಿ, ಅಭಿಮಾನ, ಕಾಳಜಿಗೆ ಸಮಕಾಲೀನ ಭಾರತೀಯ ಇತಿಹಾಸದಲ್ಲಿ ದಂತಕತೆಯ ಆಯಾಮವೊದಗಿಬಿಟ್ಟಿದೆ. ಆದರೆ, ಇಂತಹ ಸ್ವಾಭಿಮಾನಿ ತಮಿಳರು ಕಳೆದ ನಲವತ್ತು-ನಲವತ್ತೈದು ವರ್ಷಗಳಿಂದಲೂ ತಮಿಳೇತರರನ್ನು ತಮ್ಮ ರಾಜಕೀಯ ನಾಯಕರನ್ನಾಗಿ ಒಪ್ಪಿಕೊಂಡು ಅವರ ಕೈಯಲ್ಲಿ ತಮ್ಮ ರಾಜ್ಯವನ್ನಿಟ್ಟುಬಿಟ್ಟಿದ್ದಾರೆ. ಕರುಣಾನಿಧಿ ಕಳೆದ ನಾಲ್ಕು ದಶಕಗಳಿಂದಲೂ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷದ ಅನಭಿಷಿಕ್ತ ಸಾಮ್ರಾಟರಾಗಿ ಮೆರೆಯುತ್ತಿದ್ದಾರೆ, ನಾಲ್ಕು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದಾರೆ. ಈ ಕರುಣಾನಿಧಿ ತೆಲುಗು ಮೂಲದವರು. ಡಿಎಂಕೆ ಪಕ್ಷವನ್ನು ಒಡೆದು ಅದಕ್ಕೆ ಪರ್ಯಾಯವಾಗಿ “ಆಲ್ ಇಂಡಿಯಾ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ” (ಎಐಎಡಿಎಂಕೆ) ಪಕ್ಷ ಕಟ್ಟಿ ಸತತ ಹತ್ತು ವರ್ಷಗಳವರೆಗೆ ತಮಿಳುನಾಡನ್ನು ಆಳಿದ ಎಂ. ಜಿ. ರಾಮಚಂದ್ರನ್ (ಎಂಜಿಆರ್) ಒಬ್ಬ ಮಲೆಯಾಳಿ. ಅವರ ಸಹವರ್ತಿ ಮತ್ತು ಉತ್ತರಾಧಿಕಾರಿ, ಕೋಟ್ಯಂತರ ತಮಿಳರ ಪ್ರೀತಿಯ “ಅಮ್ಮ” ಜಯಲಲಿತಾರ ಮೂಲ ಕರ್ನಾಟಕದಲ್ಲಿ. ಅದಕ್ಕೂ ಹಿಂದೆ ಹೋಗುವುದಾದರೆ ದ್ರಾವಿಡ ಚಳುವಳಿಯ ಅಧ್ವರ್ಯು, ತಮಿಳುನಾಡಿನ ಇತಿಹಾಸದ ದಿಕ್ಕನ್ನೇ ಬದಲಿಸಿದ “ಪೆರಿಯಾರ್” ಬಿರುದಾಂಕಿತ ಇ. ವಿ. ರಾಮಸ್ವಾಮಿ ನಾಯಕರ್ ಕನ್ನಡಿಗರಂತೆ. ಇವರೆಲ್ಲರೂ ತಮಿಳನ್ನು ತಮ್ಮದಾಗಿಸಿಕೊಂಡು, ತಮಿಳುನಾಡಿಗೆ ತಮ್ಮನ್ನರ್ಪಿಸಿಕೊಂಡು ತಮಿಳರ ಹೃದಯಗಳಲ್ಲಿ ಸ್ಥಾನ ಗಳಿಸಿಕೊಂಡುಬಿಟ್ಟರು. ಮತ್ತಷ್ಟು ಓದು 
ಕಾಶ್ಮೀರ ಸಮಸ್ಯೆಯ ವರ್ತಮಾನ
– ಪ್ರೊ. ರಾಜಾರಾಮ ಹೆಗಡೆ
ಕಾಶ್ಮೀರವು ಇಂದು ಕೇವಲ ಭಾರತ ಪಾಕಿಸ್ತಾನ ಎಂಬ ಎರಡು ರಾಷ್ಟ್ರಗಳ ನಡುವಿನ ಹಗೆಯ ಕಾರಣವಷ್ಟೇ ಅಲ್ಲ, ಭಾರತದಲ್ಲೇ ಆಂತರಿಕ ಹಗೆಯ ಹೊಗೆಯೆಬ್ಬಿಸುತ್ತಿರುವ ಒಂದು ವರ್ತಮಾನದ ಸಮಸ್ಯೆಯಾಗಿದೆ. ಹಾಗಾಗಿ ಕಾಶ್ಮೀರ ವಿವಾದವು ಹೇಗೆ ಪ್ರಾರಂಭವಾಯಿತು, ನಮ್ಮ ಮುತ್ಸದ್ದಿಗಳು ಎಲ್ಲಿ ಎಡವಿದರು ಎಂಬ ಹಿಸ್ಟರಿಗಿಂತ ಅದರ ತೆಕ್ಕೆಯೊಳಗೆ ಬರಲು ಸೋಲುವ ಅಥವಾ ನಿರಾಕರಿಸುವ ವರ್ತಮಾನದ ಆಯಾಮಗಳು ನನಗೆ ಸೋಜಿಗ ಹುಟ್ಟಿಸುತ್ತಿವೆ. ಇಂದು ಕಾಶ್ಮೀರವು ಭಾರತ ಪಾಕಿಸ್ತಾನಗಳ ಗಡಿ ಸಮಸ್ಯೆಯಾಗಿ ಉಳಿದಿಲ್ಲ, ಬದಲಾಗಿ ಅದು ದೇಶದ ಸಮಸ್ತ ಪ್ರಗತಿಪರ ಹೋರಾಟಗಾರರಿಗೂ, ಆಜಾದಿಯ ಕರೆಯಾಗಿ ಕಾಣಿಸುತ್ತಿದೆ ಎಂಬುದನ್ನು ಗಮನಿಸುವುದು ಅಗತ್ಯ. ಕೇವಲ ಮುಸ್ಲಿಂ ಸಂಘಟನೆಗಳೊಂದೇ ಅಲ್ಲ ಭಾರತದ ಪ್ರಗತಿಪರ ಸಂಘಟನೆಗಳೂ, ಕಾಶ್ಮೀರಿ ಮುಸ್ಲಿಂ ಹೋರಾಟಗಾರರ ಜೊತೆಗೆ ಆಜಾದಿಯ ಘೋಷಣೆ ಕೂಗುತ್ತಿವೆ. ದೇಶದ ಬರ್ಬಾದಿಯ ಕುರಿತು ಮಾತನಾಡುವುದು ಈ ಸಂಘಟನೆಗಳಿಗೆ ರಾಷ್ಟ್ರೀಯತೆಯ ಸಮಸ್ಯೆಯಾಗಿ ಕಾಣಿಸುತ್ತಿಲ್ಲ. ಬದಲಾಗಿ ಬಿಡುಗಡೆಯ ಕರೆಯಾಗಿ ಕಾಣಿಸುತ್ತಿದೆ. ಇಂಥ ಚಳವಳಿಗಳನ್ನು ಬೆಂಬಲಿಸುವ ಬುದ್ಧಿಜೀವಿಗಳಿಗೆ ಇಂಥ ಘೋಷಣೆಗಳು ನ್ಯಾಯಯುತವೆನಿಸತೊಡಗಿವೆ. ಈ ಪರಿಸ್ಥಿತಿಯು ನಮಗೆ ಎರಡು ಸವಾಲುಗಳನ್ನು ಸೃಷ್ಟಿಸಿದೆ: ಮತ್ತಷ್ಟು ಓದು 




