ವಿಷಯದ ವಿವರಗಳಿಗೆ ದಾಟಿರಿ

Posts from the ‘ಪ್ರಚಲಿತ’ Category

18
ಡಿಸೆ

ಭಾರತದಲ್ಲಿ ಯಾವ ರೀತಿಯ ಅಸಹಿಷ್ಣುತೆ ಬೆಳೆಯುತ್ತಿದೆ?

ಮೂಲ: ಪ್ರೊ. ಎಸ್.ಎನ್ ಬಾಲಗಂಗಾಧರ
ಕನ್ನಡಕ್ಕೆ : ಇಂಚರ

ಪ್ರೊ.ಬಾಲಗಂಗಾಧರಇತ್ತೀಚೆಗೆ ಭಾರತದ ಸಾಮಾಜಿಕ ವಾತಾವರಣದಲ್ಲಿ ಅಸಹಿಷ್ಣುತೆ ಹೆಚ್ಚಿದೆ ಎಂಬ ಧ್ವನಿ ಭಾರತದ ಹಲವು ಕಡೆಗಳಿಂದ ಜೋರಾಗಿ ಕೇಳಿಬರುತ್ತಿವೆ. ಪಾಶ್ಚಾತ್ಯ ಮಾಧ್ಯಮಗಳು ಈ ಕೀರಲು ಕೂಗುಗಳನ್ನೇ ಹಿಗ್ಗಿಸಿ, ಬೂದುಗಾಜಿನಿಂದ ನೋಡುತ್ತಿರುವುದೂ ಅಲ್ಲದೆ, ಪ್ರಧಾನಿ ಮೋದಿಯವರ ಬ್ರಿಟನ್ ಭೇಟಿಯ ವಿಚಾರವನ್ನು ಕೂಡ ಇದೇ ನೆಲೆಗಟ್ಟಿನಲ್ಲಿ ವ್ಯಂಗ್ಯ ಮಾಡಲು ಬಳಸುತ್ತಿವೆ. ಭಾರತೀಯರ ಈ ಅಸಹಿಷ್ಣುತೆಯ ಮಂತ್ರವನ್ನು ಒಂದು ಪಕ್ಷ ಅರ್ಥ ಮಾಡಿಕೊಂಡರೂ, ಯುರೋಪಿಯನ್ನರು ಏಕೆ ಇದೇ ಮಂತ್ರವನ್ನು ಪುನರುಚ್ಛರಿಸುತ್ತಿದ್ದಾರೆ? ಎಂಬದನ್ನು ಯೋಚಿಸಬೇಕು. ಈ ಘಟನೆಯನ್ನು ಅವಲೋಕಿಸಿದಾಗ, ಇಲ್ಲಿ ಕಾಡುತ್ತಿರುವ ಅಸಹಿಷ್ಣುತೆಯ ಕುರಿತು ಇರುವ ಅಸ್ಪಷ್ಟತೆ! ಇವೆಲ್ಲವೂ ಒಂದು ಒಗಟಿನ ಹಾಗೆಯೇ ಕಾಣುತ್ತದೆ.

ಬಹುಶಃ ಇಲ್ಲಿ ನಡೆದಿರುವ ಕೆಲವಾರು ಕೊಲೆಗಳ ಕುರಿತು ಪ್ರತಿಭಟಿಸಲು ಅಸಹಿಷ್ಣುತೆಯ ಕೂಗನ್ನು ಒಂದಷ್ಟು ಜನರು ಎಬ್ಬಿಸಿರಬಹುದು. ಹಾಗೆಯೇ ಒಂದಷ್ಟು ಜನರ ಕೊಲೆಗಳಾಗಲು, ಆ ವ್ಯಕ್ತಿಗಳು ಒಂದಷ್ಟು ಜನರ ಅಸಹಿಷ್ಣುತೆಗೆ ಗುರಿಯಾಗಿದ್ದದು ಕೂಡ ಕಾರಣವಿರಬಹುದು. ಆದರೆ ಜನರು ಮಾತ್ರ ಭಾರತದಲ್ಲಿ ಹೆಚ್ಚುತ್ತಿರುವ ಅಪರಾಧಗಳ ಕುರಿತು ಪ್ರತಿಭಟಿಸುತ್ತಿಲ್ಲವೆಂಬುದು ಹಾಗೂ ಭಾರತ ಇಂತಹ ಅಪರಾಧಗಳಲ್ಲಿ ಪ್ರಪಂಚದಲ್ಲಿ ಮುಂಚೂಣಿಯಲ್ಲಿಲ್ಲ ಎಂಬುದು ಕೂಡ ಅಷ್ಟೇ ಸತ್ಯ ಸಂಗತಿ.

ನಿರ್ದಿಷ್ಟ ವ್ಯಕ್ತಿಗಳ ಕೊಲೆಗಳಾದಾಗ ಮಾತ್ರ ದೇಶದಲ್ಲಿ ಅಸಹಿಷ್ಟುತೆ ಹೆಚ್ಚುತ್ತಿದೆ ಎಂಬ ಕೂಗು ಕೇಳಿ ಬರುತ್ತಿದೆ. ಉದಾ: ಕಲ್ಬುರ್ಗಿ ಅವರ ಕೊಲೆ ಈ ಅಸಹಿಷ್ಟುತೆಯ ಕೂಗನ್ನು ಹುಟ್ಟುಹಾಕಿತು. ಆದರೆ ಕಲ್ಬುರ್ಗಿಯವರು ಕೂಡ ಅನೇಕ ವಿಷಯಗಳಲ್ಲಿ ಅಸಹಿಷ್ಣುತೆ ಹೊಂದಿದ್ದವರು. ಸೆಮೆಟಿಕ್ ಥಿಯಾಲಜಿ ಪ್ರಕಾರ ಮೂರ್ತಿ ಪೂಜೆ ಎಂಬ ಪದದ ಅರ್ಥವನ್ನು ತಿಳಿದುಕೊಳ್ಳದೆ ಅಥವಾ ಅದು ಪಾಪ ಹೇಗೆ? ಎಂಬುದನ್ನುಅರ್ಥ ಮಾಡಿಕೊಳ್ಳದೆಯೇ ಮೂರ್ತಿ ಪೂಜೆಯ ವಿರುದ್ಧ ಭಾರತದ ಅನೇಕ ಬುದ್ಧಿಜೀವಿಗಳಿಗಿರುವ ಅಸಹಿಷ್ಣುತೆ / ಪೂರ್ವಗ್ರಹ ಕಲ್ಬುರ್ಗಿಯವರಿಗೂ ಇತ್ತು. ಅವರ ಸಿದ್ದಾಂತಗಳಿಗಿಂತ ಭಿನ್ನವಾದ ಸಿದ್ದಾಂತಗಳನ್ನು ಒಪ್ಪದಿರುವಷ್ಟು ಅಸಹಿಷ್ಣುತೆ / ಅಸಹನೆ ಅವರಲ್ಲಿತ್ತು. ಅವರಂತಹುದೇ ಮನಸ್ಥಿತಿಯುಳ್ಳ ಒಂದಷ್ಟು ಜನರನ್ನೊಳಗೊಂಡ ತಂಡದ ಮುಂದಾಳತ್ವ ವಹಿಸಿ ಕಲ್ಬುರ್ಗಿಯವರು, ಕನ್ನಡ ದಿನಪತ್ರಿಕೆಯ ಮಾಲೀಕರನ್ನು ಭೇಟಿ ಮಾಡಿ ಅದರಲ್ಲಿ ಬರುತ್ತಿದ್ದ ಅಂಕಣವನ್ನು ನಿಲ್ಲಿಸಿದ್ದರು!

ಮತ್ತಷ್ಟು ಓದು »

16
ಡಿಸೆ

ಬೌದ್ಧಿಕ ಅಸಹಿಷ್ಣು ಪಾಕಿಸ್ತಾನ ಕರ್ನಾಟಕಕ್ಕಿಂತ ವಾಸಿ!

– ಪ್ರೇಮಶೇಖರ

ಅಸಹಿಷ್ಣುತೆಎರಡು ವರ್ಷಗಳ ಹಿಂದೆ ಕುವೆಂಪು ವಿಶ್ವವಿದ್ಯಾಲಯದ ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರ (ಸಿಎಸ್‌ಎಲ್‌ಸಿ) ವಚನಸಾಹಿತ್ಯದ ಬಗ್ಗೆ ಇದುವರೆಗೂ ಪೋಷಿಸಿಕೊಂಡು ಬಂದಿರುವ ತಪ್ಪುಕಲ್ಪನೆಗಳನ್ನು ದೂರಮಾಡಲು ನಿಖರ ಸಂಶೋಧನೆಯ ಮಾರ್ಗ ಹಿಡಿದಾಗ ಕಂಗೆಟ್ಟ ನಮ್ಮ ಪಟ್ಟಭದ್ರ ವಿಚಾರವಾದಿಗಳು ಸಂಸ್ಥೆಯ ವಿರುದ್ಧ ವೈಚಾರಿಕ ಗೂಂಡಾಗಿರಿ ನಡೆಸಿದ್ದು, ಅವರ ಉಗ್ರ ಬೌದ್ಧಿಕ ಅಸಹಿಷ್ಣುತೆಗೆ ಪ್ರಮುಖ ಕನ್ನಡ ದೈನಿಕವೊಂದು ವೇದಿಕೆಯಾಗಿ ಪತ್ರಿಕಾಧರ್ಮವನ್ನು ಗಾಳಿಗೆ ತೂರಿದ್ದು, ಕೊನೆಗೆ ಇವರೆಲ್ಲರ ಪಿತೂರಿಯಿಂದ ರಾಜ್ಯದ ಪರಮ ಸೆಕ್ಯೂಲರ್ ಕಾಂಗ್ರೆಸ್ ಸರ್ಕಾರ ಸಂಶೋಧನಾ ಕೇಂದ್ರವನ್ನು ಮುಚ್ಚಿದ್ದು ನೆನಪಿದೆಯೇ? ಇದಕ್ಕಿಂತ ಸ್ವಲ್ಪ ಕಡಿಮೆ ಅಸಹ್ಯಕರ ಹಾಗೂ ಪ್ರತಿಗಾಮಿ ಘಟನೆ ಇದೇ ಡಿಸೆಂಬರ್ 3ರಂದು ಪಾಕಿಸ್ತಾನದಲ್ಲಿ ಘಟಿಸಿದೆ. ಅಂದು ಇಸ್ಲಾಮಾಬಾದ್‌ನ ಕಾಯದ್- ಎಫ್ ಆಜಂ ವಿಶ್ವವಿದ್ಯಾಲಯದ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಹಿಸ್ಟಾರಿಕಲ್ ಆಂಡ್ ಕಲ್ಚರಲ್ ರೀಸರ್ಚ್ (ಎನ್‌ಐಎಚ್‌ಸಿಆರ್) ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ.ಸಯೀದ್ ವಖಾರ್ ಅಲಿ ಶಾ ಅವರನ್ನು ಆ ಸ್ಥಾನದಿಂದ ತೆಗೆದುಹಾಕಲಾಯಿತು.

ಅವರು ಮಾಡಿದ ಅಪರಾಧ ಇಷ್ಟೇ- ನವೆಂಬರ್ 25ರಂದು ಸಿಂಧ್ ಪ್ರಾಂತ್ಯದ ಖಾಯರ್ಪುರ್‌ನಲ್ಲಿರುವ ಶಾ ಅಬ್ದುಲ್ ಲತೀಫ್ ವಿಶ್ವವಿದ್ಯಾಲಯ ಮತ್ತು ಎನ್‌ಐಎಚ್ಸಿಆರ್ ಜಂಟಿಯಾಗಿ ‘ಸಿಂಧ್: ಇತಿಹಾಸ ಮತ್ತು ಸಂಸ್ಕೃತಿ’ ಎಂಬ ವಿಷಯದ ಬಗ್ಗೆ ಅಂತಾರಾಷ್ಟ್ರೀಯ ವಿಚಾರಸಂಕಿರಣವೊಂದನ್ನು ಆಯೋಜಿಸಿದವು. ಅಲ್ಲಿ ತಮ್ಮ ಪ್ರಬಂಧ ಮಂಡಿಸುತ್ತ ಪ್ರೊ. ಶಾ, ಪಾಕಿಸ್ತಾನದ ಅಧಿಕೃತ ಇತಿಹಾಸದಲ್ಲಿ ದಾಖಲಾಗಿಲ್ಲದ ಹಲವು ಹೆಸರುಗಳನ್ನು ಪ್ರಸ್ತಾಪಿಸಿದರು. ಭಗತ್ ಸಿಂಗ್‌ರಂತಹ ಸ್ವಾತಂತ್ರ್ಯ ಹೋರಾಟಗಾರರು, ಜಿ. ಎಂ. ಸಯೀದ್, ಬಚ್ಚಾ ಖಾನ್, ವಲೀ ಖಾನ್ ಮುಂತಾದ ಸ್ವಾತಂತ್ಯ್ರೋತ್ತರ ಪಾಕಿಸ್ತಾನದ ಪ್ರಾಂತೀಯ ನಾಯಕರೂ ಪಾಕಿಸ್ತಾನದ ಇತಿಹಾಸದ ಪುಸ್ತಕಗಳಲ್ಲಿ ಸ್ಥಾನ ಪಡೆಯಬೇಕು ಎಂದು ವಾದಿಸಿದರು. ಅವರ ಮಾತುಗಳು ಪಠ್ಯಕ್ರಮಗಳ ಮೇಲೆ ನಿಗಾ ವಹಿಸುವುದಕ್ಕೆಂದೇ ಇರುವ ಸರ್ಕಾರದ ಉನ್ನತ ಶಿಕ್ಷಣ ಆಯೋಗದ ಕೆಂಗಣ್ಣಿಗೆ ಗುರಿಯಾದವು.

ಮತ್ತಷ್ಟು ಓದು »

11
ಡಿಸೆ

ಮಲೇಷ್ಯಾದಲ್ಲಿ ನರಕಯಾತನೆ ಅನುಭವಿಸುತಿದ್ದ ಯುವಕರಿಗೆ ಒಂದು ಈ-ಮೇಲ್ ‪#‎ಅಚ್ಚೇದಿನ್‬ ತಂದ ಕಥೆ

– ಅರುಣ್ ಬಿನ್ನಡಿ

Anil Chalageriಕಾಡಿ ಬೇಡಿದ್ದಕ್ಕೆ ದಿನಕ್ಕೆ ಸಿಗುತ್ತಿದ್ದದ್ದು ಕೇವಲ ಒಂದೊತ್ತು ಊಟ,ಭವಿಷ್ಯದ ಕನಸುಗಳು ಮೊಸದ ಜಾಲಕ್ಕೆ ಸಿಲುಕಿ ಕಣ್ಮರೆಯಾಗಿದ್ದವು,ಕತ್ತಲೆಯ ಕೊಣೆಯಲ್ಲಿ ೨೦ ದಿನಗಳಿಂದ ನರಕಯಾತನೆಯ ರೌದ್ರನರ್ತನ,ಅಷ್ಟಕ್ಕೂ ಹೇಗಾದರು ಈ ವಿಷವರ್ತುಲದಿಂದ ಜೀವವನ್ನಾದರು ಉಳಿಸಿಕೊಳ್ಳೊಣವೆಂದರೆ ಆ ದೇಶದಲ್ಲಿ ಯಾರು ಪರಿಚಿತರಿರಲಿಲ್ಲ,ಒಟ್ಟಿನಲ್ಲಿ ಆ ಯುವಕರ ಪಾಲಿಗೆ ಜಗತ್ತಿನ ಬೆಳಕು ನೊಡಲು ಯಾವ ದಾರಿಯು ಉಳಿದಿರಲಿಲ್ಲ,ಉದ್ಯೋಗ ಅರಸಿ ದೂರದ ಮಲೇಶಿಯಾಕ್ಕೆ ಹೋದ ನಮ್ಮ ಬೆಂಗಳೂರಿನ ಇಬ್ಬರು ಯುವಕರ ದಾರುಣ ಕಥೆ ಇದು.

ಬೆಂಗಳೂರಿನ ಕೆಂಗೇರಿಯ ರಾಜೀವ್ ಮತ್ತು ಪ್ರಭು ಎಂಬ ಯುವಕರಿಬ್ಬರು ಉದ್ಯೋಗಕ್ಕಾಗಿ ಮಲೇಷ್ಯಾಗೆ ತೆರಳಲು ನಿರ್ಧರಿಸಿದ್ದರು.ಆಗ್ರಾದಲ್ಲಿರುವ ಟ್ರಾವೆಲ್ ಏಜೆಂಟ್ ಇಬ್ಬರಿಂದಲೂ ತಲಾ ೨.೫೦ಲಕ್ಷ ಹಣವನ್ನು ಕೇಳಿದ್ದಾನೆ.ಈ ಹುಡುಗರು ಹಣ ನೀಡಿದ ಬಳಿಕ ಅವರಿಗೆ ಏರ್-ಟಿಕೇಟ್ ಕೊಟ್ಟು ಮಲೇಷ್ಯಾಗೆ ಕಳುಹಿಸಲಾಗಿದೆ.ಅಲ್ಲಿ ತಲುಪಿಕೊಂಡ ನಂತರ ತಿಳಿದುಬಂದಿದ್ದೇನೆಂದರೆ ಭಾರತದ ಏಜೆಂಟ್ ಅಲ್ಲಿನ ಏಜೆಂಟರಿಗೆ ದುಡ್ಡು ನೀಡಿರಲಿಲ್ಲ.ಅಲ್ಲಿನ ಏಜೆಂಟರು ಈ ಹುಡುಗರನ್ನು ೧೮ ದಿನಗಳ ಗೃಹಬಂಧನದಲ್ಲಿಟ್ಟು ದಿನಕ್ಕೆ ಒಂದೊತ್ತು ಊಟ ಮಾತ್ರ ನೀಡುತಿದ್ದರು ಮತ್ತು ಕುಟುಂಬದವರಿಗೆ ಕರೆ ಮಾಡಿಸಿ ಹಣಕ್ಕಾಗಿ ಬೇಡಿಕೆಯಿಡುತಿದ್ದರು.ಅತ್ತ ಆ ಯುವಕರು ಸಿಬು ಎಂಬ ಸಣ್ಣ ಪಟ್ಟಣದಲ್ಲಿ ಒಂದು ಕೋಣೆಯಲ್ಲಿ ಬಂಧಿತರಾಗಿ ಹೈರಾಣಗಿದ್ದರೇ,ಇತ್ತ ಹೆತ್ತವರಿಗೆ ದಿಕ್ಕು ತೋಚದಂತಾಗಿತ್ತು.ಈ ಸುದ್ದಿ ಕೆಂಗೇರಿ ಬಿಜೆಪಿಯ ಯುವಮುಖಂಡರಾದ ಅನಿಲ್ ಚಳಗೇರಿಯವರ ಗಮನಕ್ಕೆ ಬಂದಿದೆ.

ಮತ್ತಷ್ಟು ಓದು »

4
ಡಿಸೆ

ವಿಶ್ವರೂಪಂ,ಶಾರುಕ್ ಖಾನ್ ಮತ್ತು ಪಾಕಿಸ್ತಾನ

– ರಾಜಕುಮಾರ.ವ್ಹಿ.ಕುಲಕರ್ಣಿ, ಬಾಗಲಕೋಟ

ಶಾರೂಕ್-ಅಮೀರ್(ಮುಸ್ಲಿಂ ಸಮುದಾಯದ ಕುರಿತು ಭಾರತದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ಭಾಷಣ ಬಿಗಿಯುವ ಬುದ್ದಿಜೀವಿಗಳಿಗೆ 2013 ರಲ್ಲಿ ಬರೆದ ನನ್ನ ಈ ಲೇಖನ ಒಂದು ಪ್ರತಿಕ್ರಿಯೆಯಾಗಿ)

ಕಳೆದ ತಿಂಗಳು ಕಮಲ್ ಹಾಸನ್ ಚಿತ್ರ ಬದುಕಿನ ಮಹತ್ವಾಕಾಂಕ್ಷೆ ಸಿನಿಮಾ ‘ವಿಶ್ವ ರೂಪಂ’ ದೇಶದಾದ್ಯಂತ ಬಿಡುಗಡೆಯಾಗಬೇಕಿತ್ತು. ಪ್ರೇಕ್ಷಕರೂ ಸಹ ಸಿನಿಮಾ ವೀಕ್ಷಣೆಗಾಗಿ ಕಾತುರದಿಂದಲೇ ಕಾಯುತ್ತಿದ್ದರು. ಸಿನಿಮಾ ಏನೋ ಬಿಡುಗಡೆಯಾಯಿತು ಆದರೆ ಅದು ಕಮಲ್ ಹಾಸನ್ ತವರು ರಾಜ್ಯ ತಮಿಳುನಾಡೊಂದನ್ನು ಹೊರತುಪಡಿಸಿ. ಕಮಲ್ ಹಾಸನ್‍ಗೆ ಅತಿ ಹೆಚ್ಚಿನ ಅಭಿಮಾನಿಗಳಿರುವುದು ಮತ್ತು ಆತ ಅತ್ಯಂತ ಜನಪ್ರಿಯತೆ ಪಡೆದಿರುವುದು ತಮಿಳುನಾಡಿನಲ್ಲೇ. ಜೊತೆಗೆ ತನ್ನ ಈ ಮಹತ್ವಾಕಾಂಕ್ಷೆಯ ಚಿತ್ರಕ್ಕಾಗಿ ಆತ ತನ್ನ ಸಿನಿಮಾ ಬದುಕಿನುದ್ದಕ್ಕೂ ದುಡಿದು ಗಳಿಸಿರುವುದನ್ನೆಲ್ಲ ಖರ್ಚು ಮಾಡಿರುವನು. ಆದ್ದರಿಂದ ಆತ ‘ವಿಶ್ವ ರೂಪಂ’ ನಿಂದ ಅತಿ ಹೆಚ್ಚಿನ ಲಾಭವನ್ನು ನಿರೀಕ್ಷಿಸಿದ್ದು ಈ ತಮಿಳುನಾಡು ರಾಜ್ಯದಿಂದಲೇ. ಏಕಾಏಕಿ ಹೀಗೆ ‘ವಿಶ್ವ ರೂಪಂ’ ಸಿನಿಮಾ ಬಿಡುಗಡೆಗೆ ಆ ರಾಜ್ಯದಲ್ಲಿ ನಿಷೇಧ ಹೇರಿದಾಗ ಸಹಜವಾಗಿಯೇ ಕೋಟ್ಯಾಂತರ ರೂಪಾಯಿಗಳ ಬಂಡವಾಳ ಹೂಡಿದ ನಟ, ನಿರ್ಮಾಪಕ ಮತ್ತು ನಿರ್ದೇಶಕ ಕಮಲ್ ಹಾಸನ್ ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂಥ ಪರಿಸ್ಥಿತಿ ಎದುರಾಯಿತು. ಈ ಚಿತ್ರದ ನಿರ್ಮಾಣದಿಂದಾದ ಸಾಲ ತೀರಿಸಲು ತನ್ನ ಮನೆಯನ್ನೇ ಕಳೆದುಕೊಳ್ಳಬೇಕಾಯಿತು ಎಂದು ಹೇಳಿಕೊಂಡ ಆ ಹಿರಿಯ ನಟ ಒಂದು ಹಂತದಲ್ಲಿ ದೇಶವನ್ನೇ ಬಿಟ್ಟು ಹೋಗುವುದಾಗಿ ನುಡಿದ. ಇದು ಆ ಕ್ಷಣಕ್ಕೆ ನುಡಿದ ಆಕ್ರೋಶದ ಮಾತು ಎಂದೆನಿಸಿದರೂ ಒಂದು ಸೃಜನಶೀಲ ಮನಸ್ಸು ಸರ್ಕಾರದ ಮತ್ತು ಒಂದು ಧರ್ಮದ ಪಿತೂರಿಗೆ ಘಾಸಿಗೊಂಡು ವ್ಯಕ್ತಪಡಿಸಿದ ಸಾತ್ವಿಕ ಸಿಟ್ಟು ಅದಾಗಿತ್ತು.
ಮತ್ತಷ್ಟು ಓದು »

4
ಡಿಸೆ

ಹೆಚ್ಚುತ್ತಿರುವುದು ಅಸಹಿಷ್ಣುತೆಯೋ?ಗೊಡ್ಡು ವಿಚಾರವಾದಿಗಳ ಹತಾಶೆಯೋ?

– ಶ್ರೀವತ್ಸ ಭಟ್

ಅಸಹಿಷ್ಣುತೆ2014ರ ಲೋಕಸಭಾ ಚುನಾವಣೆಗೂ ಮುಂಚಿನ ಭಾರತವನ್ನು,ಅಂದರೆ ಸ್ವಾತಂತ್ರ್ಯೋತ್ತರದ ಆರು ದಶಕಗಳ ವೈಚಾರಿಕ ಭಾರತವನ್ನು ಓಮ್ಮೆ ಅವಲೋಕಿಸಿ ನೋಡಿ.ನಿಜವಾದ ವಿಚಾರವಾದಿಗೆ ಸ್ಥಾನವಿತ್ತೆ?ಹತ್ತೊಂಬತ್ತನೇ ಶತಮಾನದ ಉತ್ತರಾರ್ಧ,ಇಪ್ಪತ್ತನೇ ಶತಮಾನದ ಪೂರ್ವಾರ್ಧದಲ್ಲಿ ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದರು,ರಾಜಾರಾಮ ಮೋಹನರಾಯರು,ವಿದ್ಯಾಸಾಗರರಂತಹ ಅಪ್ರತಿಮ ಮೇಧಾವಿಗಳನ್ನೂ,ಮಹಾನ್ ವಿಚಾರವಾದಿಗಳನ್ನು ಕಂಡಿದ್ದ ಭಾರತರಾಷ್ಟ್ರ ಕೇವಲ ಕೆಲವು ದಶಕಗಳಲ್ಲಿ ಎಂತಹ ಜಾಢ್ಯತೆಯ ಕೂಪಕ್ಕೆ ಜಾರಿಹೋಗಿದೆಯಲ್ಲವೇ?  1947ರಲ್ಲಿ ಅನ್ಯರ ದಾಸ್ಯದಿಂದ ಮುಕ್ತರಾದೆವು ನಿಜ.ಆದರೆ ಸ್ವಾತಂತ್ರ್ಯ ಪೂರ್ವದಲ್ಲಿದ್ದ, ಆ ಮಹೋನ್ನತ ವಿಚಾರವಾದವು, ನಮ್ಮಯಾವ ವಿಚಾರಗಳಿಂದ ಪರಂಗಿಗಳು ನಮಗೆ ಹೆದರಿದ್ದರೋ, ಅದೇ ವಿಚಾರಶಕ್ತಿಯು ಅತಿ ಕಡಿಮೆ ಕಾಲದಲ್ಲಿ ಕ್ಷುದ್ರಗತಿಗೆ ಜಾರಿದ್ದು ನಮ್ಮ ದುರ್ದೈವವಲ್ಲವೇ?

2014 ಹೂಸ ಯುಗದ ಆರಂಭ, ವೋಟ್ ಬ್ಯಾಂಕ್ ರಾಜಕಾರಣದಿಂದ ಅಭಿವೃದ್ದಿ ರಾಜಕೀಯದೆಡೆಗೆ ಹೆಜ್ಜೆಯಿಡಲಾರಂಭಿಸಿದ ದಿನಗಳು. ತುಕ್ಕುಹಿಡಿದ ಆಲೋಚನೆಗಳಿಂದ, ನವನವೀನವಾದ, ಅಷ್ಟೇ  ಶ್ರೇಷ್ಠವಾದ,ಸಮೃದ್ದ ಭಾರತದ ನಿರ್ಮಾಣಕ್ಕೆ ಪೂರಕವಾದ,ವಿದ್ಯುತ್ ಪ್ರವಾಹದಂತಹ ಶಕ್ತಿಯುತ ಆಲೋಚನಾ ಕ್ರಮಕ್ಕೆ ಹೊರಳಿದ ಸಂಧಿಕಾಲ. ಈ ಬದಲಾವಣೆಯೆಂಬ ಉತ್ಕರ್ಷದ ಚಾಟಿಯ ಏಟು ಮೂದಲು ಬಿದ್ದಿದ್ದು ಗೊಡ್ಡು ವಿಚಾರವಾದದ ಮೇಲೆ. ಪರಿಣಾಮ! ಅಂಗಡಿಯಲ್ಲಿ ದುಡ್ಡುಕೊಟ್ಟು ಹೊಸ ಬಟ್ಟೆ ಖರೀದಿಸಿ ತೊಟ್ಟುಕೊಂಡು ಖುಷಿಪಡುವ ಹಾಗೆ,ಅಧಿಕಾರಿಗಳಿಗೆ ಲಂಚನೀಡೀಯೋ…ಇಲ್ಲವೇ ರಾಜಕೀಯದ ಪ್ರಭಾವ ಬಳಸಿಯೋ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದವರಿಗೂ,ಬುದ್ಧಿಜೀವಿಗಳ ಸೋಗು ಹಾಕಿಕೊಂಡು ಮೆರೆಯುತ್ತಿದ್ದ ಅರ್ಧಂಬದ್ದ ಓದಿಕೊಂಡಿದ್ದವರಿಗೂ,ಬುಡಕ್ಕೆ ಬೆಂಕಿಯಿಟ್ಟಂತಾಯಿತು.ಏನೂ ಮಾಡಲಾಗದೆ ಹತಾಶರಾದರು…ಎಷ್ಟಾದರೂ ಸತ್ಯ ಕಹಿಯಲ್ಲವೇ?

ಮತ್ತಷ್ಟು ಓದು »

1
ಡಿಸೆ

ಅಸಹಿಷ್ಣುತೆ

– ಎಸ್.ಎನ್ ತಾರನಾಥ

ಅಸಹಿಷ್ಣುತೆಈ ಮೇಲಿನ ವಾಕ್ಯಗಳನ್ನು ಎಲ್ಲ ಪತ್ರಿಕೆಗಳಲ್ಲಿ ಓದಿರುತ್ತಿರಿ.ಟಿವಿ ಚಾನೆಲ್ ಗಳಲ್ಲಿ ನೋಡಿರುತ್ತಿರಿ.ಇದನ್ನು ಬಿಟ್ಟು ಎಲ್ಲಿ? ನಾ ಕಾಣೆ. ಹಾಗಾದರೆ ಕೆಲವು ಬುದ್ದಿಜೀವಿಗಳು ಪ್ರಗತಿಪರ ಸಾಹಿತಿಗಳು ಎಲ್ಲ ಮಹಾನ್ ಗಳು ನಿದ್ದೆಯಲ್ಲೂ ಬಡಬಡಿಸುವ ಈ ಪದದ,ವಿಷಯದ ಸೃಷ್ಟಿಕರ್ತ ಯಾರು? ಯಾವಾಗ ಭಾರತದ ಮಹಾನ್ ಸಾಹಿತಿಗಳು ತಮ್ಮ ತಮ್ಮ ಪ್ರಶಸ್ತಿ ಗಳನ್ನೂ ಸರ್ಕಾರಕ್ಕೆ ವಾಪಸ್ಸು ಮಾಡಿ ಮುಖ್ಯವಾಹಿನಿಗೆ (ಟಿ.ವಿ ವಾಹಿನಿ) ಬಂದರೋ, ಅಂದು ಸಾಮಾನ್ಯ ನಾಗರಿಕರಿಗೆ ಗೊತ್ತಾಯಿತು.  “ನಮ್ಮ ದೇಶದೊಳಗೆ ಏನೋ ಇದೆ. ಅದನ್ನು ನಮ್ಮ ಸಂಶೋಧಕರು ಹುಡುಕಿದ್ದಾರೆ “.  ಕಲ್ಬುರ್ಗಿ ಸೇರಿದಂತೆ ಕೆಲವು ವಿಚಾರವಾದಿಗಳ ಹತ್ಯೆ ಹಾಗೂ ಕೆಲವು ಸ್ಥಳೀಯ ಘಟನೆಗಳ ನಂತರ ಶುರುವಾದ ಈ  ವರಾತ ಇನ್ನು ನಿಂತಿಲ್ಲ. ಈ ಘಟನೆಗಳಿಗೆ ಅಲ್ಲಿನ ಸರ್ಕಾರಗಳನ್ನು ಹೊಣೆ ಮಾಡುವುದು ಬಿಟ್ಟು ಕೇಂದ್ರ ಸರ್ಕಾರವನ್ನು ದೂಷಿಸಲು ಶುರು ಹಚ್ಚಿಕೊಂಡರು. ಅವರು ರಾಜ್ಯಸರ್ಕಾರಗಳ  ಬೆನ್ನುಬೀಳಲಿಲ್ಲ ಏಕೆ ಎನ್ನುವುದು ಬಯಲ ಸತ್ಯ. ಅಲ್ಲಿರುವುದು ಅವರ ಕೃಪಪೋಷಿತ ಸರ್ಕಾರಗಳು  ಹಾಗು ಅಲ್ಲಿ ಹೋರಾಟ ಮಾಡಿದರೆ ಮೈಲೇಜ್ (ಜನಪ್ರಿಯತೆ) ಸಿಗುವುದಿಲ್ಲ. ಇಲ್ಲಿಂದ ನಂತರ ಇದು ವಿಪರೀತಕ್ಕೆ ಹೋಗಿ ಈ ಪದಕ್ಕೆ ತಮ್ಮ-ತಮ್ಮ ಮನಸ್ಸಿಗೆ ಸರಿ ಹೊಂದುವಂಥಹ ಹೇಳಿಕೆ ನೀಡಲು ಆರಂಭಿಸಿದರು.

ಹಿಂದು ಮತ್ತು ಇಂದು ಜಗತ್ತಿಗೆ ಭಾರತವೆಂದರೆ ಮೊದಲು ಕಾಣುವುದು ವಿವಿಧತೆಯಲ್ಲಿ ಏಕತೆ. ಜಗತ್ತಿಗೆ “ವಸುದೈವ ಕುಟುಂಬಕಂ” ಎಂದು ಹೇಳಿಕೊಟ್ಟ ಹಾಗು ಅದನ್ನು ಪಾಲಿಸಿದ ದೇಶ. ಕ್ರಿಸ್ತಶಕಕ್ಕೆ ಮೊದಲೇ ನನ್ನ ದೇಶ ಜಗತ್ತಿಗೆ ವಿಶ್ವಗುರು ಆಗಿತ್ತು. ಅತ್ಯುತ್ತಮ ಹಾಗು ಪ್ರಾಚೀನ  ನಾಗರಿಕತೆ ಹೊಂದಿತು. ಈ ದೇಶದ  ಹೆಮ್ಮೆ  ಎಂದರೆ ಜ್ಞಾನ ಪ್ರಸಾರ ಮತ್ತು ಶಾಂತಿ.ನಳಂದ,ತಕ್ಷಶಿಲೆ ಮೊದಲಾದ ವಿದ್ಯಾಲಯಗಳನ್ನೂ ಹೊಂದಿದ ದೇಶ.ಕತ್ತಿ ಹಿಡಿದು ಬಂದ ಅಲೆಕ್ಸಾಂಡರನಿಗೆ ಅದರಲ್ಲೇ ಉತ್ತರ ಕೊಟ್ಟಿತು.ಆಶ್ರಯ ಬೇಡಿ ಬಂದ ಪಾರ್ಸಿಗಳಿಗೆ ಆಶ್ರಯ ನೀಡಿತು. ಬೌದ್ದ  ಜೈನ ಧರ್ಮಗಳಿಗೆ ಜನ್ಮ ನೀಡಿದ ದೇಶ.ಜಗತ್ತಲ್ಲಿ ಶಾಂತಿಯಿಂದ ಧರ್ಮ ಪ್ರಸಾರ ಮಾಡಿದ ದೇಶ.ಸಾವಿರ ವರ್ಷಗಳ ಪರಕೀಯರ ಅಕ್ರಮಣ ಎದುರಿಸಿ ನಿಂತ ದೇಶ.  ಕತ್ತಿ-ತಕ್ಕಡಿ ಹಿಡಿದು ಬಂದವರು ಹಾಲಲ್ಲಿ ಸಕ್ಕರೆಯಂತೆ ಬೆರೆತು ಬಾಳುವ ದೇಶ . ಈ ದೇಶದ ಮೂಲಮಂತ್ರವೇ ಅತಿಥಿ ದೇವೋಭವ.  ಇಂದಿಗೂ ವಿವಿಧ ಧರ್ಮಗಳ ನಡುವೆ ಸಂಘರ್ಷ ನಡೆಯುತ್ತಿರುವ ಸೊಮಾಲಿಯ ಮೊದಲಾದ ದೇಶಗಳು, ವರ್ಣಭೇದದಿಂದ ನಲುಗಿರುವ ಪಾಶ್ಚಿಮಾತ್ಯ ದೇಶಗಳು ಮತ್ತು ಸ್ವಧರ್ಮಿಯರ ನಡುವೆಯೇ ಕದನ ನಡೆಯುತ್ತಿರುವ ಅರಬ್ ರಾಷ್ಟ್ರಗಳ ನಡುವೆ ಇಂಥದೊಂದು ದೇಶವಿದೆಯೆಂದರೆ ಅದು ವಿಶ್ವಗುರು ಭಾರತ ಹಾಗೂ ಅದರ ಸಹಿಷ್ಣುತಾ ಮನೋಭಾವ.
ಮತ್ತಷ್ಟು ಓದು »

28
ನವೆಂ

ತುಘಲಕ್ ದರ್ಬಾರಿನ ಕುರಿತು ಓದಿದ್ದೆವು ಈಗ ನೋಡುತಿದ್ದೇವೆ

– ರಾಕೇಶ್ ಶೆಟ್ಟಿ

ಸಿ(ನಿ)ದ್ರಾಮಯ್ಯ೨೦೧೩ರಲ್ಲಿ ಕೇಂದ್ರದಲ್ಲಿ ತನ್ನ ಕೊನೆಯ ದಿನಗಳನ್ನು ಎಣಿಸುತಿದ್ದ ಯುಪಿಎ ಸರ್ಕಾರ,ಶ್ರೀರಂಗಪಟ್ಟಣದಲ್ಲಿ ಟಿಪ್ಪು ವಿವಿ ಶುರು ಮಾಡುತ್ತೇವೆ ಎಂಬ ಪುಡಿ ಓಟ್ ಬ್ಯಾಕ್ ರಾಜಕೀಯ ಶುರು ಮಾಡಿತ್ತು.ಅದಕ್ಕೆ ಪ್ರಬಲವಾದ ವಿರೋಧದ ಅಲೆಯೆದ್ದಿತ್ತು.ಆ ಸಮಯದಲ್ಲಿ  “ಕರ್ನಾಟಕದಲ್ಲಿ ಅಶಾಂತಿಯ ಗಾಳಿ ಬೀಸಬೇಕೆಂದು ಕಾಂಗ್ರೆಸ್ಸ್ ನಿರ್ಧರಿಸಿದೆಯೇ?” ಎಂದು ಲೇಖನವೊಂದನ್ನು ಬರೆದಿದ್ದೆ. ೨೦೧೪ರ ಚುನಾವಣೆಯ ನಂತರ ಯುಪಿಎ ಸರ್ಕಾರದಂತೇ,ಅವರ ಸಮಾಜ ವಿಭಜನೆಯ ಯೋಜನೆಗಳೂ ಕಸದ ಬುಟ್ಟಿ ಸೇರಿದ್ದು ಇತಿಹಾಸ.

ಆಗ ಟಿಪ್ಪುವಿನ ಮೂಲಕ ಕರ್ನಾಟಕದಲ್ಲಿ ಅಶಾಂತಿಯೆಬ್ಬಿಸಲು ಕಾಂಗ್ರೆಸ್ಸಿಗೆ ಸಾಧ್ಯವಾಗಿರಲಿಲ್ಲ.ಆದರೆ ಇತ್ತೀಚೆಗೆ ಸರ್ಕಾರವೇ ಮುಂದೆ ನಿಂತು ಟಿಪ್ಪುಸುಲ್ತಾನನ ಜಯಂತಿ ಆಚರಣೆಗೆ ಮುಂದಾಗುವ ಮೂಲಕ ಸಮಾಜದ ಶಾಂತಿಗೆ ಧಕ್ಕೆ ತಂದಿತು. ಆಳುವ ಸರ್ಕಾರವೇ ಮುಂದೆ ನಿಂತು ಗಲಭೆ ಎಬ್ಬಿಸಿದ್ದು ಬಹುಷಃ ಕರ್ನಾಟಕದ ಇತಿಹಾಸದಲ್ಲಿಯೇ ಮೊದಲಿರಬೇಕು.ಈ ಹಿಂದೆ ನಾವೆಲ್ಲ ತುಘಲಕ್ ದರ್ಬಾರಿನ ಬಗ್ಗೆ ಓದಿದ್ದೆವು,ಈಗ ಕಣ್ಣಾರೆ ನೋಡುವಂತಾಗಿದೆಯಷ್ಟೇ.

ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದಾಗ ಬಹಳಷ್ಟು ನಿರೀಕ್ಷೆಗಳಿದ್ದವು.ಆ ನಿರೀಕ್ಷೆಗಳಿಗೆಲ್ಲ ಅವರು ಈ ಹಿಂದೆ ಅಧಿಕಾರದಲ್ಲಿದ್ದಾಗ ಮಾಡಿದ ಕೆಲಸಗಳು ಸಾಕ್ಷಿಯಾಗಿದ್ದವು.ಈ ಬಾರಿ ಮುಖ್ಯಮಂತ್ರಿಯಾಗುವ ಮೊದಲೇ ತಮ್ಮ ಸುತ್ತ ಪರಾವಲಂಬಿ ಸೆಕ್ಯುಲರ್ ಬುದ್ಧಿಜೀವಿಗಳ ಸಮೂಹವೊಂದನ್ನು ಕಟ್ಟಿಕೊಂಡೇ ಪಟ್ಟಕ್ಕೇರಿದರು.ಪಟ್ಟಕ್ಕೇರಿದ ದಿನವೇ ಅನ್ನಭಾಗ್ಯದ ಘೋಷಣೆ ಮಾಡಿದರು.ಆ ಯೋಜನೆಯಿಂದ ಬಡವರಿಗೇನೋ ಅನ್ನ ಸಿಕ್ಕುತ್ತಿರುವುದು ನಿಜವೇ.ಆದರೆ,ಗ್ರಾಮೀಣ ಪ್ರದೇಶದಲ್ಲಿ ಅದರಿಂದ ಆಗಿರುವ ಅನಾಹುತಗಳೇ ಹೆಚ್ಚು.ಸುಲಭವಾಗಿ ಸಿಗುವಾಗ ಕಷ್ಟವೇಕೆ ಪಡಬೇಕು ಎಂಬುದು ಜನರ ಸ್ವಾಭಾವಿಕ ನಿಲುವಾಗಿರುತ್ತದೆ. ಸ್ವಾಭಿಮಾನದ ಬದುಕು ಕಟ್ಟಿಕೊಡಬೇಕಾಗಿದ್ದ ಸರ್ಕಾರ ಜನರನ್ನು ಸರತಿ ಸಾಲಿನಲ್ಲಿ ನಿಲ್ಲಿಸಿ ಕೈಯೊಡ್ಡುವಂತೆ ಮಾಡುತ್ತಿದೆ.
ಮತ್ತಷ್ಟು ಓದು »

26
ನವೆಂ

ಪ್ರಶಸ್ತಿ ವಾಪಸಾತಿ : ಚಿಂತನೆಗಳು ವೈಚಾರಿಕವಾಗಿರಲಿ

– ಡಾ. ಟಿ. ಗೋವಿಂದರಾಜು

ಪ್ರಶಸ್ತಿಪ್ರಶಸ್ತಿ ವಾಪಸಿಗರ ಸಾಮಾಜಿಕ ಕಾಳಜಿಯನ್ನು ಅರ್ಥ ಮಾಡಿಕೊಳ್ಳದ ಕೆಲ ಸಂಕುಚಿತ ಮನಸ್ಸುಗಳು ಇನ್ನೂ ಕಟಕಿಯಾಡುತ್ತಿರುವುದು ವಿಷಾಧನೀಯ. ಯಾರೋ ಒದರಿದ್ದನ್ನೇ ಪರಮ ಪ್ರಸಾದದಂತೆ ಸ್ವೀಕರಿಸಿ, ಆ ನಕಲು ಮಾತುಗಳನ್ನೇ ಮರು ಪ್ರಸಾರ ಕೇಂದ್ರಗಳಂತೆ ತಾವೂ ಉಗ್ಗಡಿಸುತ್ತಿರುವುದು ಅವರ ಬೌದ್ಧಿಕ ದಾರಿದ್ರ್ಯವನ್ನು ಸೂಚಿಸುತ್ತೆ. “ ಗಣನೀಯ ಸಾಧನೆ ಮಾಡಿದ ವ್ಯಕ್ತಿಗಳನ್ನು ಪ್ರಶಸ್ತಿಗಳಿಗೆ ಆಯ್ಕೆ ಮಾಡಿ” ಗೌರವಿಸಲಾಗುತ್ತದೆ..ಎನ್ನುವ ರಾಮಶೇಷ ಅವರೇ ಕೊನೆಗೆ, “ ಇಂತಹ ಪ್ರಶಸ್ತಿಗಳನ್ನು ಯಾವುದಕ್ಕೋ ನೆಪ ಮಾಡಿ ಹಿಂದಿರುಗಿಸುತ್ತಿರುವುದು ಅಕ್ಷಮ್ಯ.. ಇವರು ಕಷ್ಟಪಟ್ಟು ಶ್ರಮ ಹಾಕಿ ಈ ಪ್ರಶಸ್ತಿಗಳನ್ನು ಪಡೆದವರಲ್ಲ ಅಂತ ಅನ್ನಿಸುತ್ತದೆ..” ಎಂದೂ ತಮ್ಮ ಪತ್ರದಲ್ಲಿ ಬರೆದಿದ್ದಾರೆ (ಪ್ರವಾ; ವಾವಾ,23.11.15). ಅವರ ಮಾತಿನಲ್ಲೇ ವಿರೋಧಾಭಾಸ, ಅಸಹಿಷ್ಣುತೆ ತುಳುಕಾಡಿದೆ. ‘ಅವಧಿ’,‘ನಿಲುಮೆ’, ‘ಫೇಸ್ ಬುಕ್’ ಮತ್ತಿತರ ಜಾಲ ತಾಣಗಳಲ್ಲೂ ಹಾಗೆ ಕುಚೋದ್ಯ ಮಾಡುವವರಿದ್ದಾರೆ. ಅಷ್ಟಕ್ಕೂ, ಈ ರೀತಿ ಮಾತಾಡಿದವರಲ್ಲಿ ರಾಮಶೇಷ ಅವರು ನೂರೊಂದನೆಯವರಿದ್ದಂತಿದೆ.ಮಾಧ್ಯಮದ ಮುಂದೆ ತಮ್ಮದೂ ಒಂದು ಇರಲಿ ಎಂದು ಗುರಿ ತಪ್ಪಿದ ಕಲ್ಲು ಒಗೆವ ಬದಲು, ತಮ್ಮ ಮನಸ್ಸನ್ನೇ ಕೇಳಿಕೊಂಡಿದ್ದರೆ ಆಗ, ಅವರ ಪ್ರತಿಕ್ರಿಯೆ ಬೇರೆಯಾಗಿರುತ್ತಿತ್ತು. ಕೆಲವರು ಪ್ರಶಸ್ತಿ ವಾಪಸಿ ಮಾಡಿದರೆ, ಹಲವರು ತಮ್ಮ ಬುಡಕ್ಕೇ ಬೆಂಕಿ ಬಿದ್ದಂತೆ ಬೆದರಿ, ಅಬ್ಬರಿಸುತ್ತಿರುವುದರಲ್ಲಿ, ಅವರೆಲ್ಲಾ ತಮ್ಮದೇ ರಾಜಕೀಯ ಹಿತಾಸಕ್ತಿಗೆ ಹಪಹಪಿಸುತ್ತಿರುವವರೆಂಬುದು ಗೋಚರವಾಗುತ್ತದೆ.

ಪ್ರಶಸ್ತಿ ವಾಪಾಸು ಮಾಡುತ್ತಿರುವವರೆಲ್ಲಾ ಕೇಂದ್ರ ಸರ್ಕಾರ ಅರ್ಥಾತ್ ಈಗಿನ ಪ್ರಧಾನಿಯವರನ್ನು ವಿರೋಧಿಸುತ್ತಿರುವವರು ಎಂಬ ಹೇಳಿಕೆಗಳೂ ವಿವೇಚನೆ ಇಲ್ಲದವು. ಏಕೆಂದರೆ, ಹೆಚ್ಚಿನವರಿಗೆ ದೊರೆತಿರುವುದು ರಾಜ್ಯ ಮಟ್ಟದ ಪುರಸ್ಕಾರಗಳು. ಬಿಜೆಪಿ ಅಧಿಕಾರದಲ್ಲಿಲ್ಲದ ರಾಜ್ಯಗಳ ಹಲವು ಸಾಹಿತಿಗಳೂ ತಮ್ಮ ಪ್ರಶಸ್ತಿಗಳನ್ನು ಹಿಂದಿರುಗಿಸಿದ್ದಾರೆ. ಕರ್ನಾಟಕದಲ್ಲಿ ಅಸಹಿಷ್ಣುತೆ ಬಗೆಗೆ ಅಷ್ಟೇ ಅಲ್ಲ, ಮೌಢ್ಯಾಚರಣೆ ಪ್ರತಿಬಂಧಕ ಕಾಯಿದೆ ಜಾರಿಗಾಗಿ ಒತ್ತಾಯಿಸಿಯೂ ಇಲ್ಲಿನವರು ಹೋರಾಟ ಮಾಡುತ್ತಿದ್ದಾರೆ. ಇದನ್ನೆಲ್ಲಾ ತನ್ನ ವಿರುದ್ಧ ಎಂದೇ ಕೇಂದ್ರ ಸರ್ಕಾರವಾಗಲೀ, ಅದರ ಹಿತಾಸಕ್ತರಾಗಲೀ ನಂಬುವುದು ಸಿನಿಕತನವಾಗುತ್ತದೆ. ಅಲ್ಲದೆ, ವಾಪಾಸು ಮಾಡುವವರು ಒಂದು ಪಕ್ಷದ ಪರವಾದವರು ಎನ್ನುವುದಾದರೆ, ವಿಚಾರವಂತರ ನಿಲುವನ್ನು ಖಂಡಿಸುತ್ತಿರುವವರೂ ತಮ್ಮದೇ ಬೇರೊಂದು ಪಕ್ಷದ ರಕ್ಷಣೆಗೆ ಟೊಂಕ ಕಟ್ಟಿದವರು ಎಂಬ ನಿಲುವಿಗೆ ಬರಬೇಕಾಗುತ್ತದೆ.

ಮತ್ತಷ್ಟು ಓದು »

18
ನವೆಂ

ಅಕ್ಷರದ ಜಾಗದಲ್ಲಿ ಅಸಹನೆ ಬಿತ್ತುವುದು ನಿಜವಾದ ಕೇಡುಗಾಲ ಮಹಾದೇವ ಅವರೇ

– ರಾಕೇಶ್ ಶೆಟ್ಟಿ

ದೇವನೂರು ಮಹಾದೇವಹಿರಿಯರಾದ ದೇವನೂರು ಮಹಾದೇವ ಅವರಿಗೆ ನಮಸ್ಕಾರಗಳು,

ನೀವು ಕೇಂದ್ರ ಸಾಹಿತ್ಯ ಅಕಾಡೆಮಿ ಹಾಗೂ ಪದ್ಮಶ್ರೀ ಪ್ರಶಸ್ತಿಗಳನ್ನು ಹಿಂದಿರುಗಿಸಿ ನೀಡಿರುವ ಪತ್ರಿಕಾ ಪ್ರಕಟಣೆಯನ್ನು ಓದಿದೆ.ಇಷ್ಟು ದಿವಸ ಪ್ರಶಸ್ತಿಗಳನ್ನು ಹಿಂತಿರುಗಿಸಿದವರು ಬರೆದಂತೆಯೇ ಯಾವುದೇ “ನಿರ್ದಿಷ್ಟ ಕಾರಣ”ಗಳಿಲ್ಲದೇ ವಿರೋಧಿಸಲೇಬೇಕು ಎಂಬ ಹಟಕ್ಕೆ ಬಿದ್ದ ಪತ್ರಗಳ ಸಾಲಿಗೇ ನಿಮ್ಮ ಪತ್ರವೂ ಸೇರುತ್ತದೆ.ಪತ್ರದ ಸಾರಾಂಶ,ನರೇಂದ್ರ ಮೋದಿಯವರು ಪ್ರಧಾನಿಯಾದ ಮೇಲೆ ಭಾರತದಲ್ಲಿ ಭೂಮಿ ಬಾಯಿ ತೆರೆದು ಕುಳಿತಿದೆ ಎಂಬಂತಿದೆ.ಅದೇನೋ ಇದ್ದಕ್ಕಿದ್ದಂತೆ ದೇಶದಲ್ಲಿ ಅಸಹಿಷ್ಣುತೆಯ ವಾತವರಣ ಮೂಡಿದೆ ಎನ್ನುತ್ತೀರಿ.ಆದರೆ,ಅದನ್ನು ಸ್ಪಷ್ಟವಾಗಿ ವಿವರಿಸಿಲ್ಲ.ನಿಜವಾಗಿಯೂ ಅಂತದ್ದೊಂದು ವಾತವರಣ ಇದ್ದಿದ್ದೇ ಆದರೆ ನಿಮಗೇಕೆ ವಿವರಿಸಲಾಗಿಲ್ಲ?

ದಾದ್ರಿ ಘಟನೆ,ಕಲ್ಬುರ್ಗಿ ಹತ್ಯೆಯಂತ ಘಟನೆಗಳು ಆಯಾ ರಾಜ್ಯದ ಕಾನೂನು ಸುವ್ಯವಸ್ಥೆಯ ಹೊತ್ತವರ ಹೊಣೆಯೆಂದು ಕೇಂದ್ರ ಸರ್ಕಾರ ಹೇಳುವುದರಲ್ಲಿ ತಪ್ಪೇನಿದೆ? ಒಂದು ವೇಳೆ ರಾಜ್ಯ ಸರ್ಕಾರಗಳೇ ತಮ್ಮಿಂದ ಕಾನೂನು-ಸುವ್ಯವಸ್ಥೆ ನಿರ್ವಹಿಸಲಾಗುತ್ತಿಲ್ಲ ಎಂದು ಹೇಳಿಕೊಂಡ ಮೇಲೂ ಕೇಂದ್ರ ಕೈ ತೊಳೆದುಕೊಂಡಿದ್ದರೇ,ನೀವು ಹೇಳಿದಂತೆ “ದುರಂತ”ವಾಗುತಿತ್ತು.ಆದರೇ,ಸಂವಿಧಾನ ಬದ್ಧವಾಗಿ ಹೇಗೆ ನಡೆದುಕೊಳ್ಳಬೇಕಿತ್ತೋ ಅದೇ ರೀತಿಯೇ ಕೇಂದ್ರ ನಡೆದುಕೊಂಡಿದೆಯಲ್ಲವೇ ಮಹಾದೇವರೇ? ಹಾಗಿದ್ದ ಮೇಲೆ ನಿಮ್ಮ ಆಕ್ಷೇಪಕ್ಕೇನಾದರೂ ತರ್ಕವುಂಟೇ?ನಿಮ್ಮ ಪ್ರಕಾರ ಕೇಂದ್ರವೇನು ಮಾಡಬೇಕಿತ್ತು? ರಾಜ್ಯದಲ್ಲಿ ರಾಷ್ಟ್ರಪತಿಗಳ ಆಡಳಿತವನ್ನೇರಿ ಕಾನೂನು-ಸುವ್ಯವಸ್ಥೆಯನ್ನು ಪಾಲಿಸಬೇಕಿತ್ತೇ? ಸಂವಿಧಾನವೇ ಧರ್ಮಗ್ರಂಥವೆನ್ನುವ ಪ್ರಗತಿಪರರಿಗೆ ಪ್ರಸ್ತುತ ಕೇಂದ್ರ ಸರ್ಕಾರವೂ ಅದೇ ಸಂವಿಧಾನದ ಅನುಸಾರವೇ ಕಾರ್ಯ ನಿರ್ವಹಿಸುತ್ತಿದೆಯೆಂಬುದು ಮರೆತು ಹೋಗಿದೆಯೇ?

ಪ್ರಶಸ್ತಿ ಹಿಂತಿರುಗಿಸುವಿಕೆಗೆ ನೀವು ನೀಡಿರುವ ಬಹುಮುಖ್ಯವಾದ ಕಾರಣವೆಂದರೆ,ಪ್ರಶಸ್ತಿ ಹಿಂತಿರುಗಿಸುತ್ತಿರುವವರ ನಡೆಯನ್ನು ಕೆಲ ಲೇಖಕ-ಕಲಾವಿದರು ವಿರೋಧಿಸಿದ್ದು.ಆಳುವ ಸರ್ಕಾರದ ಪರ ಅವರು ನಿಂತದ್ದು ತಮಗೇ ಕೇಡಿನ ಲಕ್ಷಣದಂತೆ ಕಾಣಿಸಿತು ಎಂದಿದ್ದೀರಿ.ಅಂದರೇ,ನಿಮ್ಮ ಪ್ರಕಾರ ಯಾವುದೇ ಲೇಖಕರು-ಕಲಾವಿದರು ಅವರ ಐಡಿಯಾಲಜಿಗೆ ಹೊಂದಿಕೊಳ್ಳುವ ಪಕ್ಷ ಅಧಿಕಾರಕ್ಕೇರಿ ಸರ್ಕಾರ ರಚಿಸಿದ ಮೇಲೆ ಅದನ್ನು ಬೆಂಬಲಿಸುವುದು ಪ್ರಜಾಪ್ರಭುತ್ವದಲ್ಲಿ ಕೇಡಿನ ಲಕ್ಷಣವೆಂದಾಗುತ್ತದೆಯಲ್ಲವೇ?

ಇದೇ ಲಾಜಿಕ್ ನಮ್ಮ ರಾಜ್ಯದಲ್ಲಿಯೂ ಅನ್ವಯವಾದರೇ,ಈ ರಾಜ್ಯದ ಪ್ರಗತಿಪರರು-ಬುದ್ಧಿಜೀವಿಗಳು ನಿಂತಿರುವುದು ಸರ್ಕಾರದ ಪರವಾಗಿಯೋ? ಅಥವ ವಿರುದ್ಧವಾಗಿಯೋ?

ಮತ್ತಷ್ಟು ಓದು »

9
ನವೆಂ

ಅವಾರ್ಡು ವಾಪಸಿಯೂ ,ಜನಸಾಮಾನ್ಯನೊಬ್ಬನ ಬಡಬಡಿಕೆಯೂ

– ಗುರುರಾಜ್ ಕೊಡ್ಕಣಿ,ಯಲ್ಲಾಪುರ

ಪ್ರಶಸ್ತಿನೀವು ದೆಹಲಿಯಲ್ಲಿ ಕಾಣಿಸಿಕೊ೦ಡ ಮ೦ಕಿ ಮ್ಯಾನ್ ಬಗ್ಗೆ ಕೇಳಿರಬಹುದು.2001 ವರ್ಷವದು.ಮೈತು೦ಬ ಕಪ್ಪು ರೋಮಗಳಿ೦ದ ತು೦ಬಿದ್ದ ಈ ವಾನರ ಮಾನವ ರಾತ್ರಿ ವೇಳೆಯಲ್ಲಿ ಒ೦ಟಿಯಾಗಿ ದೆಹಲಿಯ ಬೀದಿಗಳಲ್ಲಿ ಓಡಾಡುತ್ತಿದ್ದ ಜನರ ಮೇಲೆ ದಾಳಿಯಿಡುತ್ತಿದ್ದನ೦ತೆ.ಮೊದಮೊದಲು ಈ ಸುದ್ದಿ ಅಷ್ಟಾಗಿ ಸದ್ದು ಮಾಡಿರಲಿಲ್ಲ.ಆದರೆ ಕೆಲವೇ ದಿನಗಳಲ್ಲಿ ಈ ವಿಷಯ ಕಾಳ್ಗಿಚ್ಚಿನ೦ತೆ ದೆಹಲಿಯ ತು೦ಬೆಲ್ಲ ವ್ಯಾಪಿಸಿತು.ಕೆಲವರು ತಮ್ಮ ಮೇಲೆಯೂ ಈ ಕೋತಿ ದಾಳಿ ಮಾಡಿದೆ ಎ೦ದರು.ಕೆಲವರು ಅದರ ಚಹರೆಗಳ ಬಗ್ಗೆ ವಿವರಿಸಿದರು.ಆದರೆ ಯಾರೊಬ್ಬರಿಗೂ ಸಹ ಕೋತಿಮಾನವನ ರೂಪದ ವರ್ಣನೆಯನ್ನು ಸ್ಪಷ್ಟವಾಗಿ ವಿವರಿಸುವುದು ಸಾಧ್ಯವಾಗಿರಲಿಲ್ಲ.ಒಬ್ಬರು ಅದರ ಎತ್ತರ ನಾಲ್ಕು ಅಡಿ ಎ೦ದರೇ,ಮತ್ತೊಬ್ಬರು ಅದು ಎ೦ಟು ಅಡಿ ಉದ್ದವಿದೆ.ಎ೦ದರು ಒ೦ದಿಬ್ಬರು ಅದು ಭಯ೦ಕರ ಕೆ೦ಪು ಕಣ್ಣುಗಳ ಪ್ರಾಣಿ ಎ೦ದರು.ಉಳಿದವರು ಅದು ಹೆಲ್ಮೆಟ್ ಧರಿಸುತ್ತದೆ ಎ೦ದರು.ಒಟ್ಟಾರೆಯಾಗಿ ಯಾರಿಗೂ ಸಹ ಅದರ ರೂಪದ ಬಗ್ಗೆ ಸ್ಪಷ್ಟತೆಯನ್ನು ನಿಖರವಾಗಿ ನೀಡುವುದು ಸಾಧ್ಯವಾಗಲಿಲ್ಲ.ಪೋಲಿಸರು ಅದೆಷ್ಟೇ ಕಷ್ಟಪಟ್ಟರೂ ಇ೦ಥದ್ದೊ೦ದು,’ಮ೦ಗ ಮಾನವ’ನನ್ನು ಗುರುತಿಸುವುದಾಗಲಿ ,ಬ೦ಧಿಸುವುದಾಗಲಿ ಸಾಧ್ಯವಾಗಲಿಲ್ಲ.ಕೊನೆಗೊಮ್ಮೆ ಕೋತಿ ಮಾನವನ ಕತೆಯೇ ’ಸಮೂಹ ಸನ್ನಿ’ಎನ್ನುವುದು ಪೋಲಿಸರಿಗೆ ಮನವರಿಕೆಯಾಯಿತು.ಮೊದಲೆಲ್ಲ ಭಯ ಬಿದ್ದು ರಾತ್ರಿಗಳಲ್ಲಿನ ಓಡಾಟವನ್ನೇ ಕಡಿಮೆ ಮಾಡಿಕೊ೦ಡಿದ್ದ ದೆಹಲಿಯ ನಾಗರೀಕರು ಕೆಲವೇ ದಿನಗಳಲ್ಲಿ ’ಇದೆಲ್ಲವೂ ಸಮಾಜದಲ್ಲಿ ಅನವಶ್ಯಕ ಭ್ರಮೆಯನ್ನು ಸೃಷ್ಟಿಸಿ ತಮ್ಮ ಬೇಳೆ ಬೆಯಿಸಿಕೊಳ್ಳಲು ಕಿಡಿಗೇಡಿಗಳು ಮಾಡಿದ ಕೆಲಸ’ಎ೦ಬುದನ್ನು ಅರಿತುಕೊ೦ಡರು.ಜನಜೀವನ ದೆಹಲಿಯಲ್ಲಿ ಮು೦ಚಿನ೦ತೆಯೇ ಸಾಮಾನ್ಯವಾಯಿತು.ಈ ಕತೆ ಈಗೇಕೆ ನೆನಪಾಯಿತೆ೦ದರೇ ,ಇ೦ಥದ್ದೊ೦ದು ವಿಲಕ್ಷಣ ಕಾಲ್ಪನಿಕ ಜೀವಿ ಈಗಲೂ ದೇಶದಲ್ಲೆಲ್ಲ ಅಲೆದಾಡಿಕೊ೦ಡಿದೆ.ಜನಸಾಮಾನ್ಯರ ಕಣ್ಣಿಗೆ ಅದು ಗೋಚರಿಸದಿದ್ದರೂ ಕೆಲವು ಬುದ್ಧಿವ೦ತರು ಅದನ್ನು ನೋಡಿರುವುದಾಗಿ ಹೇಳಿಕೊಳ್ಳುತ್ತಿದ್ದಾರೆ.ಅ೦ದ ಹಾಗೆ ಆ ಕಾಣದ ಕಾಲ್ಪನಿಕ ಸೃಷ್ಟಿಯ ಹೆಸರು ’ಅಸಹಿಷ್ಣುತೆ’

ಮತ್ತಷ್ಟು ಓದು »