ಸ೦ಜಯ್ ದತ್ ಎ೦ಬ ನಟ ಮತ್ತು ಜೈಲು ಶಿಕ್ಷೆಯ ಪ್ರಹಸನ
– ಗುರುರಾಜ್ ಕೊಡ್ಕಣಿ
ಹಿ೦ದಿ ಖ್ಯಾತ ಚಿತ್ರ ನಟ ಸ೦ಜಯ ದತ್ ಮತ್ತೆ ಸುದ್ದಿಯಲ್ಲಿದ್ದಾರೆ.ಟಾಡಾ ಕಾಯ್ದೆಯಡಿ ಶಿಕ್ಷೆಗೊಳಗಾಗಿದ್ದ ಸ೦ಜಯ್ ದತ್ ಶಿಕ್ಷೆಯ ಪ್ರಮಾಣವನ್ನು ಇಳಿಸುವುದರ ಬಗ್ಗೆ ಕೇ೦ದ್ರ ಸರಕಾರ ಚಿ೦ತನೆ ನಡೆಸಿದೆ.ಈ ಬಗ್ಗೆ ಮಹಾರಾಷ್ಟ್ರದ ಸರಕಾರದ ಅಭಿಪ್ರಾಯವನ್ನೂ ಕೇ೦ದ್ರದ ಗೃಹ ಸಚಿವಾಲಯ ಕೇಳಿದೆ.’ಮಾನವೀಯತೆಯ ದೃಷ್ಟಿಯಿ೦ದ’ಆತನನ್ನು ಬಿಡುಗಡೆಗೊಳಿಸುವುದರ ಬಗ್ಗೆ ಸರಕಾರ ಯೋಚಿಸುತ್ತಿದೆ.
ಸಲ್ಮಾನ್ ಖಾನ್ ಬಿಟ್ಟರೇ ಹಿ೦ದಿ ಚಿತ್ರರ೦ಗದ ಅತ್ಯ೦ತ ಹೆಚ್ಚು ಚರ್ಚೆಗೊಳಗಾದ ಮತ್ತು ವಿವಾದಿತ ನಟ ಎ೦ದರೇ ಸ೦ಜಯ್ ದತ್. ಆತನ ಜೈಲು ಶಿಕ್ಷೆಯ ಸುದ್ದಿ ಅತ್ಯ೦ತ ಹೆಚ್ಚು ಚರ್ಚೆಗೊಳಗಾದ ಸುದ್ದಿಯಾಗಿದ್ದು ಈಗ ಹಳೆಯ ವಿಷಯವೇ..1993ರ ಮು೦ಬೈಯ ಸರಣಿ ಬಾ೦ಬ್ ಸ್ಪೋಟದ ಹಿನ್ನಲೆಯಲ್ಲಿ ಟಾಡಾ ಕಾಯ್ದೆಯಡಿ ಬ೦ಧಿತನಾದ ಸ೦ಜಯ್ ದತ್ ಗೆ ದೇಶದ ಸರ್ವೋಚ್ಚ ನ್ಯಾಯಾಲಯ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.ಟಾಡಾ ಕಾಯ್ದೆಯಡಿ ವಿಧಿಸಿದ್ದ ಆರು ವರ್ಷಗಳ ಶಿಕ್ಷೆಯನ್ನು ರದ್ದು ಮಾಡಿದ ಸುಪ್ರೀ೦ ಕೋರ್ಟು ,ಶಸ್ತ್ರಾಸ್ತ್ರ ಕಾಯ್ದೆಯಡಿ ಶಿಕ್ಷೆಯನ್ನು ಐದು ವರ್ಷಗಳಿಗೆ ಇಳಿಸಿದ್ದೊ೦ದೇ ಹಿ೦ದಿ ಚಿತ್ರರ೦ಗದ ’ಮುನ್ನಾ ಭಾಯಿ’ಗೆ ಸಮಾಧಾನ ತರುವ೦ತಹ ವಿಷಯವಾಗಿತ್ತು.ಈ ಮೊದಲು ಹದಿನೆ೦ಟು ತಿ೦ಗಳು ಜೈಲು ಶಿಕ್ಷೆ ಅನುಭವಿಸಿದ ಸ೦ಜಯ್ ಇನ್ನುಳಿದ ಮೂರುವರೇ ವರ್ಷಗಳನ್ನು ಜೈಲಿನಲ್ಲಿ ಕಳೆಯಲೇಬೇಕು.
ಮೂರ್ತಿಗಳೇ,ಸೈನ್ಯ ಸಾಮ್ರಾಟ ಅಶೋಕನ ಬಳಿಯೂ ಇತ್ತು.ಆದರೆ,ಗೆದ್ದಿದ್ದು ಕಳಿಂಗ …!
– ರಾಕೇಶ್ ಶೆಟ್ಟಿ
ಭಾರತ ಬಿಡದಿರಲು ನಿರ್ಧರಿಸಿದ ಮೇಲೆ ನಮ್ಮ ಅನಂತ ಮೂರ್ತಿಯವರು, ಕಳೆದ ವಾರ ಸಿ.ಎಂ ಸಿದ್ದರಾಮಯ್ಯ ನವರಿಗೆ ಮೋದಿಯಂತೆ ಸೈಬರ್ ಸೈನ್ಯ ಕಟ್ಟಲು ಹೇಳಿ ಮತ್ತೊಮ್ಮೆ ಸುದ್ದಿಯಾದರು.
ಭಾರತದ ದೇಶ ಕಂಡ ಬೃಹತ್ ಸೈನ್ಯ ಸಾಮ್ರಾಟ ಅಶೋಕನ ಬಳಿಯೂ ಇತ್ತು ಮೂರ್ತಿಗಳೇ.ಆದರೆ ಅವನೆದುರು ಸೋತು ಗೆದ್ದಿದ್ದು ’ಕಳಿಂಗ’ …! ಸಾಮ್ರಾಟ ಅಶೋಕನ ಸೈನ್ಯದೆದುರಿಗೆ ಕಳಿಂಗ ಅನ್ನುವ ಪುಟ್ಟ ರಾಷ್ಟ್ರ ಏನೇಂದರೇ ಏನು ಆಗಿರಲಿಲ್ಲ.ಅವರಲ್ಲಿ ಅಶೋಕನ ಬಳಿಯಿದ್ದಷ್ಟು ಶಸ್ತ್ರ-ಅಸ್ತ್ರಗಳಿರಲಿಲ್ಲ,ಸೈನ್ಯವೂ ಇರಲಿಲ್ಲ.ಅವರಲ್ಲಿ ಇದ್ದಿದ್ದು ಸ್ವಾಭಿಮಾನ ಮತ್ತು ಧೈರ್ಯ. ಸಾಮ್ರಾಟ ಅಶೋಕನ ಸೈನ್ಯಕ್ಕೆ ಎದೆಯೊಡ್ಡಿ ಅವರು ಹೇಳಿದ್ದು “ನೀನು ಮಹಾನ್ ಸಾಮ್ರಾಟನಿರಬಹುದು,ನಿನ್ನ ಶಕ್ತಿ ಅಸಾಧಾರಣವಿರಬಹುದು.ಆದರೆ,ನಮಗೆ ಕನಿಷ್ಟ ಆತ್ಮಾಭಿಮಾನದಿಂದ ಸಾಯುವ ಅಧಿಕಾರವಾದರೂ ಇದೆ- ನೀನದನ್ನು ನಮ್ಮಿಂದ ಕಿತ್ತುಕೊಳ್ಳಲಾರೆ” ಅನ್ನುವುದೇ ಆಗಿತ್ತು.
ನೀವು ದುಡ್ಡು ಕೊಟ್ಟು,ಏನು ಮಾಡಬೇಕು ಅಂತ ಹೇಳಿಕೊಟ್ಟು ಕಟ್ಟಬಹುದಾದ ಸೈಬರ್ ಸೈನ್ಯ ಸಾಮ್ರಾಟ ಅಶೋಕನ ಸೈನ್ಯದಂತೆಯೇ ಅಗಾಧವಾಗಿರಬಹುದು.ಆದರೆ ಅದಕ್ಕೆದುರಾಗಿ ನಿಂತಿರುವುದು ಸ್ವಾಭಿಮಾನಿ ’ಕಳಿಂಗ’ದಂತಹ ಸೈನ್ಯ. ಈ ಸೈನಿಕರು ದುಡ್ಡಿಗಾಗಿ,ಅಧಿಕಾರಕ್ಕಾಗಿ,ಆಯ್ಕೆ ಸಮಿತಿಗಳ ಸ್ಥಾನಗಳಿಗಾಗಿ,ವಿವಿಗಳ ನಾಮಫಲಕಗಳಲ್ಲಷ್ಟೇ ರಾರಾಜಿಸುವ, ವಿವಿಗಳ ಕುರ್ಚಿ ಬಿಸಿ ಮಾಡುವ ಹುದ್ದೆಗಳಿಗಾಗಿಯೋ ಇಲ್ಲ ಪ್ರಶಸ್ತಿಗಳಿಗಾಗಿಯೋ ಕಾದು ಕುಳಿತಿರುವ ಅವಕಾಶವಾದಿಗಳಲ್ಲ.ಇವರೆಲ್ಲ ಕೇಂದ್ರ ಸರ್ಕಾರದ ಭ್ರಷ್ಟಚಾರದ ವಿರುದ್ಧ ಜೊತೆಯಾದವರು. ನಿಮ್ಮ ಸೆಕ್ಯುಲರ್ ಬ್ರಿಗೇಡ್ ಕಳೆದ ೧೧ ವರ್ಷಗಳಲ್ಲಿ ಮೋದಿ ಅನ್ನುವವನ ಮೇಲೆ ಏಕಪಕ್ಷೀಯವಾಗಿ ಕಟ್ಟುತ್ತ ಬಂದ ಸುಳ್ಳಿನ ಕೋಟೆಯನ್ನು ಕಂಡು ರೋಸಿ ಹೋಗಿ, ಆ ಸುಳ್ಳಿನ ಕೋಟೆಯ ಭೇಧಿಸಲು ತಾನಾಗೇ ಹುಟ್ಟಿಕೊಂಡ ಸೈನ್ಯ. ನಿಮ್ಮ ಸೆಕ್ಯುಲರ್ ಬ್ರಿಗೇಡಿನ ಸುಳ್ಳುಗಳಿಗೆ ಸಾಕ್ಷಿ ಬೇಕಾದರೇ, ನಿಮ್ಮದೇ ಹೇಳಿಕೆಯ ಸುತ್ತ ತಿರುಗೋಣ ಬನ್ನಿ ಮೂರ್ತಿಗಳೇ,
ಮೋದಿ ಅಭಿಮಾನ ಮತ್ತು ಅಭಿಮಾನಿಗಳ ಸುತ್ತ
– ಮಹೇಶ್ ಪ್ರಸಾದ್ ನೀರ್ಕಜೆ
ಎಲ್ಲೆಡೆ ಮೋದಿ ಜಪ (ಪರ ವಿರೋಧ) ಆಗುತ್ತಿರುವಾಗ ಮೋದಿ ಬೆಂಬಲಿಗನಾಗಿದ್ದುಕೊಂಡೆ ನನ್ನದೊಂದು ಕ್ರಿಟಿಕ್ ಬರಹ ಇರಲಿ ಅನಿಸಿ ಬರೆಯುತ್ತಿದ್ದೇನೆ.
ಮೊದಲನೆಯದಾಗಿ ಕೂಸು ಹುಟ್ಟುವ ಮುಂಚೆ ಕುಲಾವಿ ಹೊಲಿಸಿದ ಗಾದೆ ನಮಗೆ ಗೊತ್ತೇ ಇದೆ. ಮೇಲ್ನೋಟಕ್ಕೆ ಇದು ತೀರಾ ಸರಳ ವಿಚಾರ ಎನಿಸಿದರೂ ಆಚರಣೆಗೆ ಕಷ್ಟ ಅಂತ ಮೋದಿ ಮತ್ತು ಅವರ ಬೆಂಬಲಿಗರು ತುಳಿಯುತ್ತಿರುವ ಹಾದಿ ನೋಡಿದಾಗ ಅನಿಸುತ್ತಿದೆ. ಮೊನ್ನೆ ಮೊನ್ನೆ ಮೋದಿ ಪ್ರಧಾನ ಮಂತ್ರಿ ಅಭ್ಯರ್ಥಿ ಅಂತ ಆಯ್ಕೆ ಆದಾಗ ರಾಜನಾಥ್ ಸಿಂಗ್ ಜೊತೆ ಮೋದಿ ಪರಸ್ಪರ ಸಿಹಿ ಹಂಚಿಕೊಂಡಿದ್ದನ್ನು ನೋಡಿದಾಗ ಮೊದಲ ಬಾರಿಗೆ ನನಗೆ ಎಲ್ಲೋ ಎಡವಟ್ಟಾಗುತ್ತಿದೆ ಅನಿಸಿತು. ಟಿವಿ ಯಲ್ಲಿ ಇದನ್ನು ನೋಡುತ್ತಿದ್ದ ನನ್ನಂಥವರಿಗೆ ಆಗ ಈ ಗಾದೆ ನೆನಪಾದದ್ದು ಸುಳ್ಳಲ್ಲ. ಈಗ ಮೋದಿ ಬೆಂಬಲಿಗರ ವಿಚಾರದಲ್ಲೂ ನನಗೆ ಈ ಗಾದೆ ನೆನಪಾಗುತ್ತಿದೆ.
ಮತ್ತೊಮ್ಮೆ ಹೇಳುವುದಾದರೆ ನಾನು ಮೋದಿ ಪ್ರಧಾನ ಮಂತ್ರಿ ಆಗಬೇಕೆಂದು ಬಯಸುವವನು ಆದರೆ ಅದರ ಜೊತೆ ಜೊತೆಗೇ ನಾಳೆ ಭ್ರಮನಿರಸ ಗೊಳ್ಳಲು ಸಿಧ್ಧವಿಲ್ಲದಿರುವವನು. ಯಡ್ಯೂರಪ್ಪ ವಿಚಾರದಲ್ಲಿ ಈಗಾಗಲೇ ಒಮ್ಮೆ ಭ್ರಮನಿರಸ ಆಗಿದ್ದೇವೆ. ಹಾಗೆ ನೋಡಿದರೆ ಯಡ್ಯೂರಪ್ಪ ಕೂಡ ಪರಿಸ್ಥಿತಿ ಒತ್ತಡದಿಂದ ಭ್ರಷ್ಟರಾದರು ಹೊರತಾಗಿ ಸ್ವತಹ ಅವರೇ ಭ್ರಷ್ಟರಲ್ಲ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಅವರಿಗೆ ಸ್ಪಷ್ಟ ಬಹುಮತ ಸಿಕ್ಕಿದ್ದಿದ್ದರೆ ಅವರು ರೆಡ್ಡಿಗಳ ಕಾಲು ಹಿಡಿಯಬೇಕಾಗಿರಲಿಲ್ಲ ಮತ್ತು ಕೊನೆಗೆ ಸಿಬಿಐ ಬಲೆಗೆ ಬಿದ್ದು ಜೈಲಿಗೂ ಹೋಗುತ್ತಿರಲಿಲ್ಲ. ಮೋದಿ ಕೂಡ ಹಾಗೆ ಮಾಡ್ತಾರೆ ಅಂತ ಹೇಳ್ತಿಲ್ಲ, ಆದರೆ ಮೋದಿ ಪ್ರಚಾರ ಅನ್ನುವುದು ಒಂದು ಮುಟ್ಟಬೇಕಾದ ಗುರಿ ಹೊರತು ಸಂಭ್ರಮಿಸಬೇಕಾದ ಮತ್ತು ಸಂಭ್ರಮದಲ್ಲಿ ಮೈಮರೆಯುವ ವಿಚಾರ ಅಲ್ಲ ಅನ್ನುವುದನ್ನು ಅವರ ಅಭಿಮಾನಿಗಳು ಅರ್ಥಮಾಡಿಕೊಂಡರೆ ಸಾಕು.
ಜಾತಿ ಆಧಾರಿತ ಮೀಸಲಾತಿಯ ಎರಡು ಮುಖಗಳು
– ಮು.ಅ ಶ್ರೀರಂಗ,ಬೆಂಗಳೂರು
ಜಾತಿ ಆಧಾರಿತ ಮೀಸಲಾತಿ ಕುರಿತ ಪರ-ವಿರೋಧ ಚರ್ಚೆಗಳಲ್ಲಿ ಅದರ ಪರವಾಗಿ ವಾದಿಸುತ್ತಿರುವವರ ಸಂಖ್ಯೆ ಜಾಸ್ತಿಯೇ ಇದೆ. ಇದಕ್ಕೆ ಅವರುಗಳು ಮನುವಿನಿಂದ ಹಿಡಿದು ಪುರೋಹಿತಶಾಹಿ ವಾದಗಳನ್ನು ಮಂಡಿಸುತ್ತಾ ಬಂದಿದ್ದಾರೆ. ವಿರೋಧವಾಗಿರುವವರದ್ದು ಅವರವರ ಸದ್ಯದ ಸ್ವಂತ ಅನುಭವವಷ್ಟೇ ಆಗಿ ಕ್ಷೀಣ ದನಿಯಾಗಿದೆ. ಮೀಸಲಾತಿಯು ವೋಟಿನ ರಾಜಕಾರಣಕ್ಕೆ ನೇರವಾಗಿ ಸಂಬಂಧಿಸಿರುವ ಕಾರಣದಿಂದ ಸ್ವಾತಂತ್ರ್ಯಾನಂತರ ಮೀಸಲಾತಿಯ ಗಡಿಗಳು(line of limits) ವಿಸ್ತಾರಗೊಳ್ಳುತ್ತಲೇ ಇದೆ. ಇದು ವೈಜ್ನಾನಿಕವೋ,ಅವೈಜ್ನಾನಿಕವೋ ಅಥವಾ ಸಹಜ ನ್ಯಾಯವೋ ಎಂಬ ಯಾವುದೇ ಚರ್ಚೆಗೆ, ಸಂವಾದಕ್ಕೆ ಸದ್ಯದ ಪರಿಸ್ಥಿತಿಯಲ್ಲಿ ಏನೂ ಬೆಲೆಯಿಲ್ಲ. ಇಷ್ಟಾಗಿಯೂ ಸಹ ಮೀಸಲಾತಿಯ ಗಡಿ ರೇಖೆಯಿಂದಾಚೆಗೆ ಇರುವ ಜಾತಿಗಳಲ್ಲಿನ(ಸರ್ಕಾರದ ದೃಷ್ಟಿಯಲ್ಲಿ ಮುಂದುವರಿದವರು, ಮೇಲ್ಜಾತಿಯವರು) ಕೆಲವರು ಆಗಾಗ ತಮ್ಮ ವಿರೋಧವನ್ನು ಧರಣಿ,ಮೆರವಣಿಗೆಗಳ ಮೂಲಕ ವ್ಯಕ್ತಪಡಿಸುತ್ತಿರುತ್ತಾರೆ. ತೀರಾ ಭಾವಾವೇಶಕ್ಕೊಳಗಾದ ಒಂದಿಬ್ಬರು ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುತ್ತಾರೆ;ಪ್ರಾಣ ಕಳೆದುಕೊಳ್ಳುತ್ತಾರೆ. ಕಾಲ ಕಳೆದಂತೆ ಜನಗಳು ಅದನ್ನೆಲ್ಲಾ ಮರೆಯುತ್ತಾರೆ. ಸರ್ಕಾರಗಳು ಬದಲಾಗುತ್ತವೆ. ವ್ಯವಸ್ಥೆ ಹಿಂದಿನಂತೆಯೇ ತನ್ನ ಪಾಡಿಗೆ ತಾನು ನಡೆದುಕೊಂಡು ಹೋಗುತ್ತದೆ. ತಮ್ಮ ಹಿರಿಯರು ಮಾಡಿದರೆನ್ನಲಾದ ಪಾಪದ ಹೊರೆ ಹೊರಬೇಕಾಗಿ ಬಂದಿರುವ ಮೇಲ್ಜಾತಿಯ ಯುವ ಜನತೆ “ಯಾವ ರಾಜ ಬಂದರೇನು ರಾಗಿ ಬೀಸುವುದಂತೂ ತಪ್ಪುವುದಿಲ್ಲವಲ್ಲ” ಎಂಬ ಗಾದೆಯಂತೆ ಸನ್ನಿವೇಶಕ್ಕೆ ಹೊಂದಿಕೊಂಡು ಹೋಗುತ್ತಾರೆ. ಕ್ರಮೇಣ ಇದೇ ಅಭ್ಯಾಸವಾಗಿ ತಾನಾಯ್ತು ತನ್ನ ಸಂಸಾರವಾಯ್ತು ಎಂದು ಅಷ್ಟಕ್ಕೇ ತಮ್ಮನ್ನು ಸೀಮಿತಗೊಳಿಸಿಕೊಳ್ಳುತ್ತಾರೆ.
ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆಯಾಗಲೇಬೇಕು,ಆದರೆ ಧರ್ಮಸ್ಥಳದ ಹೆಸರಿಗೆ ಮಸಿ ಬಳಿಯುತ್ತಿರುವುದೇಕೆ?
– ಗೋಪಾಲ ಕೃಷ್ಣ
ಧರ್ಮಸ್ಥಳವೆಂದರೆ ಪ್ರತಿನಿತ್ಯ ಸಾವಿರಾರು ಜನರು, ದೇಶದ ಖ್ಯಾತನಾಮರು, ಅಧಿಕಾರದ ಚುಕ್ಕಾಣಿ ಹಿಡಿದ ಮಂತ್ರಿ, ಮುಖ್ಯಮಂತ್ರಿಗಳು ಭೇಟಿ ನೀಡುವ ಧಾರ್ಮಿಕ ಸ್ಥಳ. ಇಲ್ಲಿನ ಪೂಜೆಯಿಂದ ಹಿಡಿದು ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಬಾಲಿವುಡ್ ತಾರೆಯರ ಭೇಟಿಯವರೆಗಿನ ಪ್ರತಿ ಬೆಳವಣಿಗೆಯೂ ರಾಜ್ಯ/ರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ದಿ ಮಾಡುತ್ತಿರುತ್ತದೆ. ತೀರಾ ಇತ್ತೀಚೆಗೆ ಅಂದರೆ ಜೂನ್ 27, 2011ರಂದು ಇಡೀ ರಾಜ್ಯವೇ ಧರ್ಮಸ್ಥಳದತ್ತ ಮುಖ ಮಾಡಿ ಕುಳಿತಿತ್ತು. ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಆಣೆ-ಪ್ರಮಾಣದ ಸಮರಕ್ಕೆ ಧರ್ಮಸ್ಥಳ ಸಾಕ್ಷಿಯಾಗುವುದಿತ್ತು. ಅಂದು ರಾಜ್ಯದ ಎಲ್ಲಾ ಸುದ್ದಿ ಮಾಧ್ಯಮಗಳು ಧರ್ಮಸ್ಥಳದಲ್ಲೇ ಠಿಕಾಣಿ ಹೂಡಿದ್ದವು; ಧರ್ಮಸ್ಥಳದ ವಿಚಾರದ ವಿನಹ ಮತ್ತೇನೂ ಸುದ್ದಿಯೇ ಅಲ್ಲ. ‘ಮಾತಿಗೆ ಹೆಣಗಿದವನು ಮಂಜುನಾಥ, ದುಡ್ಡಿಗೆ ಹೆಣಗಿದವನು ವೆಂಕಟರಮಣ’ ಎಂಬ ನಂಬಿಕೆ ಇರುವುದರಿಂದಲೇ ಜನರ ದೃಷ್ಟಿ ಧರ್ಮಸ್ಥಳದತ್ತ ನೆಟ್ಟಿತ್ತು.
ಅಂತಹ ಸಂದರ್ಭದಲ್ಲೂ ಧರ್ಮಸ್ಥಳದ ವಿರುದ್ಧ ಆರೋಪ ಮಾಡದಿದ್ದವರು, ಇಂದು ದಿಗ್ಗನೆದ್ದು ಕುಳಿತಿರುವುದೇಕೆ? ಸೌಜನ್ಯ ಅತ್ಯಾಚಾರ ಮತ್ತು ಹತ್ಯೆಯನ್ನು ಖಂಡಿಸಲೇಬೇಕು. ಧರ್ಮಸ್ಥಳವೇ ಆಗಲಿ, ದೇಶದ ಬೇರೆ ಎಲ್ಲಿಯೇ ಆಗಲಿ ಸಾಮಾನ್ಯನಿಂದ ರಾಷ್ಟ್ರಪತಿಯವರೆಗೂ ಹತ್ಯಾಚಾರದಂತಹ ಪ್ರಕರಣದಲ್ಲಿ ಸಿಲುಕಿಕೊಂಡವರು ಯಾರೇ ಆದರೂ ಸರಿಯೇ ಅವರಿಗೆ ಮರಣದಂಡನೆ ವಿಧಿಸುವುದೇ ಸೂಕ್ತ ಶಿಕ್ಷೆ. ಆಗಲೇ ಸಹೋದರಿ ಸೌಜನ್ಯ ಆತ್ಮಕ್ಕೂ, ಅವರ ಕುಟುಂಬಕ್ಕೂ ನ್ಯಾಯ ಒದಗಿಸಿದಂತಾಗುವುದು.
ಹೊರಾಟಗಾರ್ತಿ ಮಲಾಲಾ ಮತ್ತು ಮಿಥ್ಯಾ ಪ್ರಗತಿಪರರ ಭ೦ಡತನ
– ಗುರುರಾಜ್ ಕೊಡ್ಕಣಿ,ಯಲ್ಲಾಪುರ
ಪ್ರತಿವರ್ಷದ೦ತೇ ಈ ಬಾರಿಯ ನೊಬೆಲ್ ಪ್ರಶಸ್ತಿಯ ಘೊಷಣೆಯಾಗಿದೆ.ಅದರಲ್ಲೂ ಈ ಬಾರಿ ಶಾ೦ತಿಗಾಗಿ ಕೊಡುವ ನೊಬೆಲ್ ಪ್ರಶಸ್ತಿ ಚರ್ಚಿತ ವಿಷಯವಾಗಿತ್ತು. .ಪಾಕಿಸ್ತಾನದ ಪುಟ್ಟ,ದಿಟ್ಟ ಹೋರಾಟಗಾರ್ತಿ ಮಲಾಲಾ ಯುಸುಫಜಾಯ್ ನೊಬೆಲ್ ಶಾ೦ತಿ ಪ್ರಶಸ್ತಿಯ ಕಣದಲ್ಲಿದ್ದು ಆಸಕ್ತಿಗೆ ಕಾರಣವಾಗಿತ್ತು.ಆ ಪುಟ್ಟ ಹುಡುಗಿ ತೋರಿದ ದಿಟ್ಟತನಕ್ಕೆ ಆಕೆಗೆ ನೊಬೆಲ್ ಸಿಗಲಿ ಎ೦ಬುದು ಬಹುತೇಕರ ಆಶಯ ಮತ್ತು ಅಭಿಪ್ರಾಯವಾಗಿತ್ತು.ಆದರೆ ಕೊನೆಯ ಕ್ಷಣಗಳಲ್ಲಿ ಆಕೆಗೆ ನೊಬೆಲ್ ಪ್ರಶಸ್ತಿ ತಪ್ಪಿದ್ದು ಅನೇಕರಲ್ಲಿ ನಿರಾಸೆಯು೦ಟು ಮಾಡಿತು.ಪರಮ ಕ೦ಟಕ ರಾಷ್ಟ್ರ ಪಾಕಿಸ್ತಾನದ ಪ್ರಜೆಯಾಗಿದ್ದರೂ ಈ ಚಿಕ್ಕ ವಯಸ್ಸಿನಲ್ಲಿ ಆಕೆ ತೋರಿದ ಧೈರ್ಯಕ್ಕೆ ಅಕೆಗೆ ನೊಬೆಲ್ ಸಿಗಲೆ೦ದು ಅನೇಕ ಭಾರತೀಯರೂ ಬಯಸಿದ್ದರೆ೦ಬುದು ಸುಳ್ಳಲ್ಲ
ಈಗಾಗಲೇ ಮಲಾಲಾ ವಿಶ್ವದಾದ್ಯ೦ತ ಮನೆಮಾತಾಗಿದ್ದರೂ ಆಕೆಯ ಬಗ್ಗೆ ಹೆಚ್ಚಾಗಿ ಗೊತ್ತಿಲ್ಲದಿದ್ದವರಿಗೆ ಕೊ೦ಚ ಮಾಹಿತಿ ನೀಡುತ್ತಿದ್ದೇನೆ.ಹದಿನಾರು ವರ್ಷದ ಮಲಾಲಾ ಯುಸುಫಜಾಯ್ ಮೂಲತ: ಪಾಕಿಸ್ತಾನದ ತಾಲಿಬಾನ್ ಪೀಡಿತ ಸ್ವಾಟ್ ಕಣಿವೆಯವಳು.ತಾಲಿಬಾನಿ ಆಡಳಿತದಲ್ಲಿನ ಈ ಪ್ರದೇಶದಲ್ಲಿ ತಾಲಿಬಾನ್ ಕರ್ಮಠ ಇಸ್ಲಾ೦ ಸ೦ಪ್ರದಾಯಗಳನ್ನು ,ಕಾನೂನುಗಳನ್ನು ಈ ಪ್ರದೇಶದಲ್ಲಿ ಜಾರಿಗೊಳಿಸಿದೆ.ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸವಿಲ್ಲ ಎ೦ಬ ಕಾನೂನನ್ನು ಈ ಪ್ರದೇಶದಲ್ಲಿ ಜಾರಿಗೊಳಿಸಿದ್ದರು.ಅಲ್ಲಿ ತಾಲಿಬಾನಿಗಳ ನಿರ್ಣಯವನ್ನು ಯಾರೂ ಪ್ರಶ್ನಿಸುವ೦ತಿರಲಿಲ್ಲ.ಆದರೆ ಈ ಪುಟ್ಟ ಬಾಲಕಿ ಮಲಾಲಾ ಈ ಅನ್ಯಾಯವನ್ನು ವಿರೋಧಿಸುವ ನಿರ್ಧಾರಕ್ಕೆ ಬ೦ದಳು.ತನ್ನ ಹನ್ನೊ೦ದನೆಯ ವಯಸ್ಸಿನಲ್ಲಿ ಬಿಬಿಸಿಯ ಅ೦ತರ್ಜಾಲ ತಾಣಗಳಿಗೆ ಮಲಾಲಾ ಗುಪ್ತ ನಾಮದಲ್ಲಿ ಬ್ಲಾಗ್ ಬರೆಯಲಾರ೦ಭಿಸಿದಳು.ಬಿಬಿಸಿಯ೦ತಹ ವಿಶ್ವಮಾನ್ಯ ಸ೦ಸ್ಥೆಗೆ ,ಸ್ವಾಟ್ ನಲ್ಲಿ ತಾಲಿಬಾನಿಗಳ ಅರಾಜಕತೆ,ಮಹಿಳೆಯರ ಮೇಲಿನ ದೌರ್ಜನ್ಯವನ್ನು ವಿವರಿಸುವ ಪ್ರಯತ್ನ ಮಾಡಿದಳು. ಮಹಿಳಾ ಶಿಕ್ಷಣದ ಬಗ್ಗೆ ತನ್ನ ಅಭಿಪ್ರಾಯವನ್ನು ವಿಶ್ವಕ್ಕೆ ಅರುಹಿದಳು.ಚಿಕ್ಕ ವಯಸ್ಸಿನಲ್ಲಿಯೇ ಆಕೆಯ ವೈಚಾರಿಕತೆಗೆ ತಲೆದೂಗಿದ ನ್ಯೂಯಾರ್ಕ್ ಟೈಮ್ಸ್ ಆಕೆಯ ಬಗ್ಗೆ ಸಾಕ್ಷ್ಯ ಚಿತ್ರವನ್ನು ನಿರ್ಮಿಸಿತು.ಅಲ್ಲಿ೦ದ ವಿಶ್ವ ಪ್ರಸಿದ್ದಳಾದ ಆಕೆ ಮುಕ್ತವಾಗಿ ಮಾಧ್ಯಮಗಳಲ್ಲಿ,ಪತ್ರಿಕೆಗಳಲ್ಲಿ ಸ೦ದರ್ಶನಗಳನ್ನು ನೀಡತೊಡಗಿದಳು.ಆಗ ಎಚ್ಚೆತ್ತುಕೊ೦ಡ ಪಾಕಿಸ್ತಾನದ ಸೈನ್ಯ ಸ್ವಾಟ್ ಕಣಿವೆಯ ಮೇಲೆ ಕದನ ಘೋಷಿಸಿತು. ’ಎರಡನೇ ಸ್ವಾಟ್ ಯುದ್ದ’ ಎ೦ದೇ ಪ್ರಸಿದ್ಧವಾದ ಈ ಯುದ್ದದಲ್ಲಿ ಪಾಕಿಸ್ತಾನಿ ಸೈನ್ಯ ಸ್ವಾಟ್ ಕಣಿವೆಯನ್ನು ಮರಳಿ ತನ್ನ ವಶಕ್ಕೆ ಪಡೆಯಿತು.ಅನೇಕ ತಾಲಿಬಾನಿ ಕಮಾ೦ಡರಗಳ ಬ೦ಧನವಾಯ್ತು.
ಮಲಾಲಾ ~ ನಿಜವಾದ ಕಥೆ(ಪುರಾವೆಗಳ ಸಹಿತ)
ಮೂಲ : ನದೀಂ ಎಫ್ ಪರಾಚ
ಅನುವಾದ : ನಿವೇದಿತ ಥಾಡಣಿ
ಸೆಪ್ಟೆಂಬರ್ 2012 ರಲ್ಲಿ, ಪಾಕಿಸ್ತಾನದ ಸ್ವಾತ್ ಕಣಿವೆಯಲ್ಲಿ ಒಬ್ಬ ತಾಲಿಬಾನ್ ಕಾರ್ಯಕರ್ತ 15 ವರ್ಷದ ಶಾಲಾ ಹುಡುಗಿಯ ಮುಖ ಮತ್ತು ತಲೆಗೆ ಗುಂಡು ಹಾರಿಸಿದ್ದಾನೆ ಎಂದು ವರದಿಯಾಯಿತು.ಈ ದಾಳಿ ವಿಶ್ವದಾದ್ಯಂತ ಆಕ್ರೋಶಕ್ಕೆ ಕಾರಣವಾಯಿತು ಮತ್ತು ಈ ಸುದ್ದಿಗೆ ಸ್ಥಳೀಯ ಮತ್ತು ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ತುಂಬಾ ಮಹತ್ವ ನೀಡಲಾಯಿತು.
ಅವಳೇ ಮಲಾಲಾ.
ಪಾಕಿಸ್ತಾನದಲ್ಲಿ ನಂತರ ಇಂಗ್ಲೆಂಡ್ ನಲ್ಲಿ ವೈದ್ಯರು ಮಲಾಲಾಳ ಮುಖ ಮತ್ತು ತಲೆಯ ಮೇಲೆ ಅನೇಕ ಶಸ್ತ್ರಚಿಕಿತ್ಸೆಗಳನ್ನು ನೆರವೇರಿಸಿದರೂ ಅವಳು ಉಳಿಯುವ ಸಾಧ್ಯತೆ ಇಲ್ಲ ಎಂದು ವರದಿಯಾಗಿತ್ತು.
ಇಂದು ಮಲಾಲಾ ಯುಕೆಯಲ್ಲಿ ವಾಸಿಸುತ್ತಿದ್ದಾರೆ. ಪಾಕಿಸ್ತಾನದ ಮಹಿಳೆಯರ ಶಿಕ್ಷಣದ ಸಲುವಾಗಿ ಅದರಲ್ಲೂ ವಿಶೇಷವಾಗಿ ತೀವ್ರವಾದಿಗಳು ಮತ್ತು ಉಗ್ರಗಾಮಿಗಳು ಬಾಲಕಿಯರ ಶಾಲೆಗಳನ್ನು ಹಾರಿಸಿದ ಪ್ರದೇಶಗಳಲ್ಲಿ ಕೆಲಸ ಮುಂದುವರಿಸುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದಾರೆ ಎಂದು ಹೇಳಲಾಗುತ್ತದೆ.
ಇದು ಪೂರ್ತಿ ಕಥೆಯ ಕೇವಲ ಒಂದು ಭಾಗ ಮಾತ್ರ. ಆದರೆ ನಿಜವಾಗಿಯೂ ಗುಂಡಿಕ್ಕಿದ ದಿನ ಏನಾಯಿತು ಎಂದು ಮಲಾಲಾ ಹೇಳಿದ್ದ ಪೂರ್ತಿ ವರದಿಯಲ್ಲಿ ಅರ್ಧದಷ್ಟು ವರದಿಯನ್ನು ಪಾಶ್ಚಾತ್ಯ ಮಾಧ್ಯಮಗಳು ಮುಚ್ಚಿ ಹಾಕಿವೆ.
ಶಾದಿ ಭಾಗ್ಯ ಮತ್ತು ಮುಸ್ಲಿಂ ಅವಶ್ಯಕತೆ
– ನವೀನ್ ನಾಯಕ್
ಅಲ್ಪ ಸಂಖ್ಯಾತರ ತುಷ್ಟೀಕರಣ ಲೋಕಸಭಾ ಚುನಾವಣ ಬರುತಿದ್ದಂತೆ ಹೆಮ್ಮರವಾಗಿ ಬೆಳೆಯುತ್ತಿದೆ. ಈ ಸಮುದಾಯದ ಜನರಿಗೆ ಇರುವ ಕೊರತೆ, ಅವಶ್ಯಕತೆಯ ಬಗ್ಗೆ ಸರಕಾರ ಕ್ರಮ ಕೈಗೊಳ್ಳುವುದರ ಬದಲು ಮತ ಬ್ಯಾಂಕ್ ಭದ್ರತೆಗೆ ಸರ್ವ ಪ್ರಯತ್ನವನ್ನೂ ಮಾಡುತ್ತಿದೆ.
ಮುಸ್ಲಿಂ ಸಮುದಾಯದ ಸಮಸ್ಯೆ ಅತಿಯಾದ ಧರ್ಮ ಶ್ರದ್ದೆ. ಒಂದು ದಂಪತಿಗೆ ಈಗಿನ ಸಮಯದಲ್ಲಿ ಒಂದು ಮಗುವನ್ನು ಸಾಕುವುದೇ ಕಷ್ಟ. ಅಂತದರಲ್ಲಿ ಈ ಸಮುದಾಯದಲ್ಲಿ ಹೆಗಲಿಗೊಂದು ಸೊಂಟಕ್ಕೊಂದು ತಲೆ ಮೇಲೊಂದು ಮಕ್ಕಳನ್ನು ಹೊತ್ತುಕೊಂಡು ಬರುವ ದಂಪತಿಗಳೇ ಹೆಚ್ಚು. ಇದು ಕುಹಕವಲ್ಲ ವಾಸ್ತವ. ಈ ಸಮುದಾಯದ ಮುಖಂಡರು ತಮ್ಮ ಸಮುದಾಯದ ನ್ಯೂನತೆ ಬಗ್ಗೆ ಯೋಚಿಸಬೇಕಿತ್ತು ಆದರೆ ಈ ಸಮಾಜದ ಮುಖಂಡರುಗಳು, ಜವಬ್ದಾರಿಯುತ ಕೆಲವು ವ್ಯಕ್ತಿಗಳು, ಬುದ್ದಿಜೀವಿಗಳೆಂದುಕೊಳ್ಳುವ ವ್ಯಕ್ತಿಗಳು ಇತರ ಧರ್ಮದ ನ್ಯೂನತೆಗಳನ್ನು ಎತ್ತಿ ತೋರಿಸುವುದಕ್ಕೆ ಹಲವು ಸಮಯವನ್ನು ಕಳೆಯುತಿದ್ದಾರೆ. ಹಾಗಂತ ಇತರ ಧರ್ಮದ ಬಗ್ಗೆ ಮಾತನಾಡಬಾರದೆಂಬುದು ಕೂಡ ತಪ್ಪಾಗುತ್ತದೆ. ಆದರೆ ಇನ್ನೊಬ್ಬನ ಶ್ರಧ್ಧೆಗಳ ಬಗ್ಗೆ ಮಾತನಾಡುವ ಮುಂಚೆ ತಾನು ಎಂತಹ ಅಡಿಪಾಯದಲ್ಲಿ (ಬಂಡೆಯಂತಹುದೋ ಅಥವ ಉಸುಗಿನಂತಹುದೋ) ನಿಂತಿದ್ದೇನೆ ಎಂಬುದನ್ನೂ ಯೋಚಿಸಬೇಕಾಗುತ್ತದೆ. ಇದನ್ನು ಬಿಟ್ಟು ಯೋಚಿಸುವಂತಹ ವ್ಯಕ್ತಿಗಳನ್ನೇ ಸೆಕ್ಯುಲರ್ ಎಂದು ಹೇಳಿಕೊಳ್ಳುವ ರಾಜಕೀಯ ಪಕ್ಷಗಳು ವ್ಯವಸ್ತಿತವಾಗಿ ಬಳಸಿಕೊಳ್ಳುತಿದ್ದಾರೆ.
ಎತ್ತಿನಹೊಳೆ ಯೋಜನೆ: ಬೇಕಿತ್ತಾ ಇದು?
ಅಂತರ್ಜಾತಿ ಮತ್ತು ಅಂತರ್ಧಮೀಯ ವಿವಾಹಗಳಿಂದ ಜಾತಿ ವಿನಾಶ ಸಾಧ್ಯವೆ?
-ಮು.ಅ ಶ್ರೀರಂಗ, ಬೆಂಗಳೂರು
ನಮ್ಮ ಸಮಾಜದಲ್ಲಿ ಜನಸಾಮಾನ್ಯರಿಂದ ಹಿಡಿದು ಪ್ರಬುದ್ಧರವರೆಗೆ, ಸಾಹಿತಿಗಳು,ಚಿಂತನಶೀಲರನ್ನು ಕಾಡುತ್ತಿರುವುದು ಜಾತಿಯ ಸಮಸ್ಯೆ. ಇದೊಂದು ಸಮಸ್ಯೆ ಇಲ್ಲದಿದ್ದರೆ ಚೆನ್ನಾಗಿರುತಿತ್ತು ಎಂದು ನಮಗೆ ಒಂದಲ್ಲ ಒಂದು ಸಲ ಅನಿಸುವುದು ಸಹಜ ತಾನೇ?ಅಂತರ್ಜಾತಿ ಮತ್ತು ಅಂತರ್ಧಮೀಯ ವಿವಾಹಗಳಿಂದ ಈ ಸಮಸ್ಯೆಯನ್ನು ಆದಷ್ಟೂ ನಿವಾರಿಸಬಹುದು ಎಂಬ ಮಾತುಗಳನ್ನು ಆಗಾಗ ಕೇಳುತ್ತಿರುತ್ತೇವೆ. ಇಂತಹ ವಿವಾಹಗಳಿಗಿರುವ ಕೆಲವು ಸಮಸ್ಯೆಗಳನ್ನು ಮೂರು ಮುಖ್ಯವಾದ ಆಯಾಮಗಳಿಂದ ಚರ್ಚಿಸುವುದು ಈ ಲೇಖನದ ಉದ್ದೇಶ.
(೧) ಜಾತಿ ಮತ್ತು ಧರ್ಮ:- ನಮ್ಮ ದೇಶದಲ್ಲಿರುವ ಜಾತಿಗಳು ಉಪಜಾತಿಗಳು ಅವುಗಳೊಳಗಿನ ಪಂಗಡಗಳು ಹಲವು. ಬಹು ಭಾಷಾ ಬಹು ಸಂಸ್ಕೃತಿಗಳ ನಮ್ಮ ದೇಶದಲ್ಲಿ ಇದು ಸಹಜ ಕೂಡ. ಪ್ರತಿಜಾತಿಗೂ ಹತ್ತಾರು ಉಪ ಜಾತಿಗಳು,ಪಂಗಡಗಳು. ಒಂದೇ ಜಾತಿಯವರಾದರೂ ಈ ಉಪ ಜಾತಿ ಪಂಗಡಗಳ ಕಾರಣದಿಂದ ಅವುಗಳ ನಡುವೆಯೇ ವಿವಾಹಕ್ಕೆ ಮೊದಲ ಪ್ರಾಶಸ್ತ್ಯ. ಬೇರೆ ಆಯ್ಕೆ ಇಲ್ಲವಾದರೆ ಮಾತ್ರ ಅದೇ ಜಾತಿಯ ಇತರ ಉಪಜಾತಿ, ಪಂಗಡಗಳ ನಡುವೆ ವಿವಾಹಕ್ಕೆ ಅರೆ ಮನಸ್ಸಿನಿಂದ ಒಪ್ಪಿಗೆ ನೀಡಬಹುದು. ಇಂತಹ ವಿದ್ಯಮಾನ ಇಂದು ಸರ್ಕಾರ ಮತ್ತು ಸಮಾಜ ಯಾವ ಜಾತಿಯವರನ್ನು ಮುಂದುವರಿದವರೆಂದು ಹೇಳುತ್ತಾ ಬಂದಿದೆಯೋ ಅವರಿಗಷ್ಟೇ ಸೀಮಿತವಾದುದಲ್ಲ. ಸಮಾಜದ ತೀರಾ ಕೆಳಸ್ತರದಲ್ಲಿರುವ ಜಾತಿಗಳ ತನಕ ಈ ತಾರತಮ್ಯ ಆಚರಣೆಯಲ್ಲಿದೆ. ಕೆಲವೊಂದು ಸಂದರ್ಭಗಳಲ್ಲಿ ಇವರುಗಳ ನಡುವೆ ಊಟ-ತಿಂಡಿಗಳ ಸೇವನೆ ಸಹ ನಿಷಿದ್ಧ ಎಂಬ ಪರಿಸ್ಥಿತಿ ಇದೆ. ಈ ರೀತಿ ಒಂದೇ ಜಾತಿಯೊಳಗೆ ವಿವಾಹಕ್ಕೆ ಇಷ್ಟೊಂದು ಸಮಸ್ಯೆಗಳಿರುವಾಗ ಒಂದೇ ಧರ್ಮದ ಬೇರೆ ಬೇರೆ ಜಾತಿಗಳ ನಡುವೆ ವಿವಾಹ ಆಗೊಮ್ಮೆ ಈಗೊಮ್ಮೆ ನಡೆಯುತ್ತಿರುತ್ತದೆ. ಇಲ್ಲ ಎನ್ನುವಂತಿಲ್ಲ. ಆದರೆ ಅದು ಒಂದು exಛಿeಠಿಣioಟಿ ಆಗಬಹುದಷ್ಟೆ. ಜತೆಗೆ ಇಂತಹ ವಿವಾಹಗಳ ಕಾರಣದಿಂದಲೇ ನಡೆಯುತ್ತಿರುವಂತಹ “ಮರ್ಯಾದ ಹತ್ಯೆಗಳು” ಈ ಸಮಸ್ಯೆಯನ್ನು ಇನ್ನಷ್ಟು ಜಟಿಲವಾಗಿಸಿದೆ.






