ವಿಷಯದ ವಿವರಗಳಿಗೆ ದಾಟಿರಿ

Posts from the ‘ಪ್ರಚಲಿತ’ Category

20
ಆಗಸ್ಟ್

“ಕೈ”ಲಾಗದ ಸರ್ಕಾರ ಮತ್ತು ನಮ್ಮ ಕಾಶ್ಮೀರ

–     ರಾಕೇಶ್ ಶೆಟ್ಟಿ

Kashmiraಬಡ ಬೆಸ್ತನೊಬ್ಬನ ಕತ್ತನ್ನು ಸೀಳಿ ಅವನದೇ ಬೋಟನ್ನೇರಿ ೧೦ ಜನರ ಪಾಕಿಸ್ತಾನದ ಸೈತಾನರ ತಂಡ ಗೇಟ್ ವೇ ಆಫ್ ಇಂಡಿಯಾ ಮೂಲಕ ಮುಂಬೈಗೆ ವಕ್ಕರಿಸಿಕೊಳ್ಳುತ್ತದೆ.೧೦ ಜನರಿಂದ ಬೇರ್ಪಟ್ಟ ಇಬ್ಬರು ಮೊದಲಿಗೆ ದಾಳಿಯಿಡುವುದು ’ಲಿಯೋಫೋಲ್ಡ್ ಕೆಫೆ”ಗೆ ಅಲ್ಲಿ ಕಂಡ ಕಂಡಂತೆ ಗುಂಡಿನ ಮಳೆ ಸುರಿಸಿದ ಆ ಇಬ್ಬರು ಪಾಕಿ ಉಗ್ರರು ಅಲ್ಲಿಂದ ರಾಜಾರೋಷವಾಗಿ ಹೊರಡುತ್ತಾರೆ.ಉಗ್ರರ ಕಣ್ಣಿಗೆ ಬೀಳದೆ ಅವಿತು ಕುಳಿತಿದ್ದವನೊಬ್ಬ ಮೆಲ್ಲಗೆ ಬಾಗಿಲ ಸಂದಿಯಿಂದ ರಾಕ್ಷಸರು ಇದ್ದಾರೋ ಅನ್ನುವುದನ್ನು ಖಾತ್ರಿ ಮಾಡಿಕೊಳ್ಳಲು ಇಣುಕಿದಾಗ ಬಾಗಿಲಿಗೆ ಕಲ್ಲೊಂದು ಬಡಿಯುತ್ತದೆ.ಮತ್ತೆ ನೋಡುತ್ತಾನೆ ಊಹೂಂ “ಗುಂಡಲ್ಲ… ಕಲ್ಲು…!”

ಉಗ್ರರು ಅಮಾಯಕರ ರಕ್ತ ಹರಿಸಿ ಅಲ್ಲಿಂದ ರಾಜಾರೋಷವಾಗಿ ಹೊರಟ ಮೇಲೆ ಬೀಟ್ ನಲ್ಲಿದ್ದ ಪೋಲಿಸ್ ಕಾನ್ಸ್ಟೇಬಲ್ ಗಳು  ಒಂದು ಕೈಯಲ್ಲಿ ಲಾಠಿ ಹಿಡಿದು ಇನ್ನೊಂದು ಕೈಯಲ್ಲಿ ಕಲ್ಲು ಎಸೆದು ಒಳಗಿನಿಂದ “ಗುಂಡು” ಬರುತ್ತಿಲ್ಲ ಅನ್ನುವುದನ್ನು ಕನ್ಫರ್ಮ್ ಮಾಡಿಕೊಂಡು ಒಳಬರುತ್ತಾರೆ. ಹೇಗಿದೆ ನೋಡಿ ಉಗ್ರನ ಕೈಯಲ್ಲಿ “ಎ.ಕೆ ೪೭” ಅವನೆದುರಿಸಲು ಬಂದ ಪೋಲಿಸಣ್ಣನ ಕೈಯಲ್ಲಿ “ಕಲ್ಲು”…! ಇದು ನಮ್ಮ ಭಾರತದ ಆಂತರಿಕ ರಕ್ಷಣಾ ವ್ಯವಸ್ಥೆಯ ಸ್ಥಿತಿ.ಭಾರತದ ಬಂಡವಾಳವನ್ನು ಸರಿಯಾಗಿಯೇ ಅರಿತಿದ್ದ ಪಾಪಿ ಪಾಕಿಗಳು ಆ ೧೦ ಜನರ ತಂಡವನ್ನು ನುಗ್ಗಿಸಿ ಒಂದಿಡಿ ಭಾರತವನ್ನು ದಿನಗಳ ಮಟ್ಟಿಗೆ ಗಾಬರಿ ಬೀಳಿಸಿದ್ದರು. ಮುಂಬೈ ಮಾರಣ ಹೋಮದ ನಂತರ ಆಗಿದ್ದಾದರೂ ಏನು? ಭಾರತ-ಪಾಕಿಸ್ತಾನಗಳು ಸಮರದಂಚಿಗೆ ಬಂದು ನಿಂತವು.ನಮ್ಮ ಸರ್ಕಾರ “ಹೊಡಿಬೇಡಿ.ಹೊಡೆದ್ರೆ ನೋವಾಗುತ್ತೆ” ಅನ್ನುವಂತೆಯೇ ವರ್ತಿಸಿದ್ದಲ್ಲವೇ? ಅದಕ್ಕಿಂತ ಹೆಚ್ಚೆಂದರೆ “ಹೋಗಿ.ನಾವು ನಿಮ್ಮೊಂದಿಗೆ ನಾವು ಕ್ರಿಕೆಟ್ ಆಡುವುದಿಲ್ಲ” ಅಂದರು ಅಷ್ಟೇ…!

ಮತ್ತಷ್ಟು ಓದು »

13
ಆಗಸ್ಟ್

ಪ್ರಜಾಪ್ರಭುತ್ವಕ್ಕೇ ಮಾರಕವಾಗುವ ವ್ಯಕ್ತಿ ಪೂಜೆ

ಡಾ ಅಶೋಕ್ ಕೆ ಆರ್Modi12

‘ಒಂದೂರಲ್ಲಿ ಒಬ್ಬ ರಾಜ ಇದ್ದ. ಆತನಿಗೊಬ್ಬಳು ಸುರಸುಂದರಿ ಮಗಳು. ರಾಜನ ವೈರಿಗಳು ರಾಜನ ಮೇಲಿನ ದ್ವೇಷಕ್ಕೆ ಯುವರಾಣಿಯನ್ನು ಅಪಹರಿಸಿಬಿಟ್ಟರು. ಯುವರಾಣಿ ಅಘಾತಕ್ಕೊಳಗಾಗಿ ಮೂರ್ಛೆ ತಪ್ಪಿದಳು. ಆಘಾತದಿಂದ ಹೊರಬಂದ ಮೇಲೆ ನೋಡುತ್ತಾಳೆ ಯಾವುದೋ ಗುಹೆಯೊಳಗೆ ಕೈ ಕಟ್ಟಿಹಾಕಿಹಾಕಿದ್ದಾರೆ. ಹೊರಗಡೆ ಪಹರೆ. ಚಾಕಚಕ್ಯತೆಯಿಂದ ಕೈಗೆ ಕಟ್ಟಿದ್ದ ಹಗ್ಗವನ್ನು ಬಿಡಿಸಿ ವೈರಿಗಳೊಂದಿಗೆ ಶೌರ್ಯದಿಂದ ಹೊಡೆದಾಡಿ……..’ ರೀ ರೀ ರೀ ಕಥೆ ಹೋಗೋದು ಆ ರೀತಿ ಅಲ್ಲ …… ‘ಪಕ್ಕದ ದೇಶದ ಯುವರಾಜ ಏಕಾಂಗಿಯಾಗಿ ವೈರಿಗಳ ಮೇಲೆ ಕಾದಾಡಿ ಯುವರಾಣಿಯನ್ನು ರಕ್ಷಿಸುತ್ತಾನೆ. ಯುವರಾಜನ ಸಾಹಸಕ್ಕೆ ಮನಸೋತ ಯುವರಾಣಿಗೆ ಪ್ರೇಮಾಂಕುರವಾಗುತ್ತದೆ. ಹಿರಿಯರ ಆಶೀರ್ವಾದದೊಂದಿಗೆ ಮದುವೆಯಾಗಿ ನೂರ್ಕಾಲ ಚೆನ್ನಾಗಿ ಬಾಳಿ ಬದುಕುತ್ತಾರೆ’ ಇದು ಕಥೆ ಸಾಗುವ ರೀತಿ! ಚಿಕ್ಕಂದಿನಿಂದಲೂ ಈ ರೀತಿಯ ಕಥೆಗಳನ್ನೇ ಕೇಳಿ ಬೆಳೆದ ನಮಗೆ ಯುವರಾಣಿ ಅಬಲೆಯಲ್ಲ ಬಲಿಷ್ಠೆ, ತನ್ನನ್ನು ತಾನು ಕಾಪಾಡಿಕೊಳ್ಳಲು ಎಂದರೆ ಜೀರ್ಣಿಸಿಕೊಳ್ಳುವುದು ಕಷ್ಟವಾಗುತ್ತದಲ್ಲವೇ? ಯುವರಾಣಿಯ ಸಹಾಯಕ್ಕೆ ಯುವರಾಜನೊಬ್ಬ ಬೇಕೇ ಬೇಕು ಎಂಬ ಸಿದ್ಧಾಂತ ನಮ್ಮದು! ಮತ್ತಷ್ಟು ಓದು »

12
ಆಗಸ್ಟ್

ಇನ್ನು10 ತಿಂಗಳಲ್ಲಿ ಭಾರತ ಚೀನಾ ನಡುವೆ ಸಂಭವನೀಯ ಯುದ್ಧ?

– ಗಣೇಶ್ ಕೆ ದಾವಣಗೆರೆ

chini yuddhaಚೀನಾದ ತಗಾದೆ ಶುರುವಾದಮೇಲೆ ಭಾರತ ೬೪ ಸಾವಿರ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಸೇನೆಗೆ ಹೊಸ ಆಯಾಮ ನೀಡುವ ಯೋಜನೆಗೆ ಅಸ್ತು ಎಂದಿದೆ. ಸಾವಿರಾರು ಸೇನೆಯ ತುಕಡಿಗಳನ್ನ ಹೊಂದಿದ ಸ್ಟ್ರೈಕಿಂಗ್ ಕಾರ್ಪ್ ನಿಯೋಜಿಸಲು ಉದ್ದೇಶಿಸಿದೆ. ಹಿಂದಿನ ವಾರದ ದಿ ವೀಕ್ ಪ್ರಕಟಿಸಿರುವ ಸೇನಾ ವಲಯದ ಅಭಿಮತದ ಪ್ರಕಾರ ಚೀನಾ ನಮ್ಮ ಮೇಲೆ ಎರಗಿ ಬರುವುದು ಅಷ್ಟೇನೂ ಸುಲಭದ ಕೆಲಸವೇನಲ್ಲ. ಚೀನೀಯರು ಆಕ್ರಮಣ ಮಾಡಿದರೆ, ಭಾರತವು ಚೀನಾದ ದುರ್ಬಲ ವಲಯಗಳ ಮೇಲೆ ಆಕ್ರಮಣ ಮಾಡಲಿದೆ. ಟಿಬೆಟ್ ಮೂಲಕ ಸಾವಿರಾರು ಕಿಲೋಮೀಟರ್ ಉದ್ದದ ರೈಲು ಮಾರ್ಗ ನಿರ್ಮಿಸಿ ಸೇನೆಯನ್ನ, ಜನರನ್ನ ವಾಯುಪುತ್ರನ ವೇಗದಲ್ಲಿ ಸಾಗಿಸುತ್ತೇವೆ ಎಂದು ಬೀಗುತ್ತಿರುವ ಚೀನಾ ಅದೇ ಕಾರಣಕ್ಕಾಗಿ ಕಳವಳಗೊಂಡಿದೆ. ಟಿಬೆಟ್‌ನಲ್ಲಿರುವ ರೈಲು ಮಾರ್ಗ ಹಲವಾರು ಸೇತುವೆಗಳನ್ನ ಒಳಗೊಂಡಿದೆ. ಜೊತೆಗೆ ಅಲ್ಲಿ ಬೆಂಗಾಡು. ಎಷ್ಟೇ ಎತ್ತರದಿಂದ ನೋಡಿದರೂ ನೆಲ ಕಾಣುತ್ತದೆ. ನಾಲ್ಕು ಸೇತುವೆಗಳನ್ನ ಒಡೆದು ಹಾಕಿದರೆ ಚೀನೀಯರು ಸೇನೆಯನ್ನ ಜಮಾವಣೆ ಮಾಡಲಿಕ್ಕೆ ರೈಲನ್ನ ಬಳಸಲಿಕ್ಕೆ ಸಾಧ್ಯವೇ ಇಲ್ಲ. ಅವನ್ನ ಮರು ನಿರ್ಮಿಸಿ ರೈಲು ಚಲಿಸುವ ಹೊತ್ತಿಗೆ ವಾರಗಳೇ ಬೇಕಾಗುತ್ತವೆ. ಜೊತೆಗೆ, ಟಿಬೆಟಿನಲ್ಲಿ ಹರಿಯುವ ನದಿಗಳಿಗೆ ರಾತ್ರೋ ರಾತ್ರಿ ಸೇತುವೆಗಳನ್ನ ಕಟ್ಟಿಕೊಡುವ ಕಠಿಣ ಪರಿಶ್ರಮದ, ಚಾಣಾಕ್ಷ, ಸಮರ್ಥ ಎಂಜಿನಿಯರುಗಳ ಬಳಗವಿದೆ ಭಾರತಕ್ಕೆ. ನಮ್ಮ ಸೇನೆಯ ಎಂಜಿನಿಯರುಗಳ ಈ ಎಲ್ಲ ವಿಶೇಷಣಗಳೂ ಮೊನ್ನೆ ಮೊನ್ನೆ ಸಂಭವಿಸಿದ ಉತ್ತರಾಖಂಡದ ಪ್ರಾಕೃತಿಕ ಅವಗಢದ ಸಮಯದಲ್ಲಿ ಸಾಬೀತಾಗಿದೆ.

ಮತ್ತಷ್ಟು ಓದು »

5
ಆಗಸ್ಟ್

ಭಯೋತ್ಪಾದನೆ, ರಾಜಕೀಯ ನೇತಾರರು ಮತ್ತು ಮಾಧ್ಯಮಗಳು

– ಪ್ರೇಮಶೇಖರ
Terrorismತೀರಾ ಇತ್ತೀಚಿನವರೆಗೂ ಭಯೋತ್ಪಾದನಾ ಧಾಳಿಗಳಿಗೆ ಸಂಬಂಧಿಸಿದಂತೆ ಇರಾಕ್ ಮತ್ತು ಪಾಕಿಸ್ತಾನಗಳ ನಂತರ ಭಾರತ ವಿಶ್ವದಲ್ಲಿ ಮೂರನೆಯ ಸ್ಥಾನದಲ್ಲಿತ್ತು.  ಈಗಲೂ ಈ ದೇಶದಲ್ಲಿ ಭಯೋತ್ಪಾದನಾ ಕೃತ್ಯಗಳೇನೂ ಗಮನಾರ್ಹವಾಗಿ ತಗ್ಗಿಲ್ಲ.  ಆಂತರ್ಯುದ್ಧದ ದಳ್ಳುರಿಗೆ ಸಿಲುಕಿರುವ ಸಿರಿಯಾ, ಲಿಬಿಯಾಗಳು ಭಾರತವನ್ನು ಕೆಳಕ್ಕೆ ತಳ್ಳಿವೆ ಅಷ್ಟೆ.  ಅಂಕಿಅಂಶಗಳ ಪ್ರಕಾರ ೧೯೮೧ರಲ್ಲಿ ಖಲಿಸ್ತಾನ್ ಚಳುವಳಿ ಆರಂಭವಾದಂದಿನಿಂದ ಈ ದೇಶದಲ್ಲಿ ನಾಲ್ಕುಸಾವಿರ್ವಕ್ಕೂ ಅಧಿಕ ಭಯೊತ್ಪಾದನಾ ಧಾಳಿಗಳಾಗಿವೆ ಮತ್ತು ಈ ಪಿಡುಗಿಗೆ ದಿನಕ್ಕೆ ಸರಾಸರಿ ನಾಲ್ವರು ಭಾರತೀಯರು ಬಲಿಯಾಗುತ್ತಿದ್ದಾರೆ.
ಭಯೋತ್ಪಾದನೆ ಹೀಗೆ ಅವ್ಯಾಹತವಾಗಿ ಘಟಿಸುತ್ತಲೇ ಇರುವುದಕ್ಕೆ ಭಯೋತ್ಪಾದಕರ ರಕ್ತದಾಹದಷ್ಟೇ ನಮ್ಮ ರಾಜಕೀಯ ನೇತಾರರ ಹಾಗೂ ಮಾಧ್ಯಮಗಳ ಸ್ವಾರ್ಥಪರ ಬೇಜವಾದ್ದಾರಿಯುತ ವರ್ತನೆಯೂ ಕಾರಣ.  ಈ ಬಗೆಗಿನ ವಿಶ್ಲೇಷಣೆಯನ್ನು, ಪುಣೆ ಸ್ಫೋಟಗಳಿಗೆ ಸಂಬಂಧಿಸಿದಂತೆ ಅಪಾದಿತನಾಗಿರುವ ಸೈಯದ್ ಮಖ್ಬೂಲ್ ದೆಹಲಿ ಪೊಲೀಸರಿಗೆ ನೀಡಿದ ಈ ಹೇಳಿಕೆಯಿಂದ ಪ್ರಾರಂಭಿಸೋಣ:
ಪ್ರತಿಯೊಂದು ಧಾಳಿಯ ನಂತರವೂ ರಾಜಕೀಯ ಹೇಳಿಕೆಗಳು ಹೊರಬರುತ್ತವೆ ಮತ್ತು ಇವು ಆ ರಾಜಕೀಯ ನೇತಾರರ ಒತ್ತಡಕ್ಕೆ ಸಿಲುಕುವ ತನಿಖಾದಿಕಾರಿಗಳನ್ನು ಅಂತಿಮವಾಗಿ ಗೊಂದಲಕ್ಕೀಡುಮಾಡುತ್ತವೆ.  ಪ್ರತಿಕ್ರಿಯಿಸಲು ಇವರಿಗೆ ಸ್ವಲ್ಪ ಸಮಯ ಹಿಡಿಯುತ್ತದೆ ಮತ್ತು ನಮಗೆ ಸಿಗುವ ಈ ಹೆಚ್ಚುವರಿ ಸಮಯ ತಪ್ಪಿಸಿಕೊಳ್ಳಲು ನಮಗೆ ಅವಕಾಶ ಮಾಡಿಕೊಡುತ್ತದೆ.
31
ಜುಲೈ

ಅವಮಾನಿಸಲು ಕರೆಸಿದವರು ಬಿರುದುಕೊಟ್ಟು ಕಳುಹಿಸಿದರು

– ಸಂತೋಷ್ ತಮ್ಮಯ್ಯ

Milkha Singh೧೯೪೭. ಹಳೆಯ ದೆಹಲಿಯ ಪುರಾನಾ ಕಿಲಾ. ದೇಶಕ್ಕೆ ಸ್ವಾತಂತ್ರ್ಯ ಬಂದು ಅತ್ತ ಲಾಲ್ ಕಿಲಾದಲ್ಲಿ ತಿರಂಗಾ ಹಾರಿ ಜನರು ಕುಣಿಯುತ್ತಿದ್ದರೆ  ಪುರಾನಾ ಕಿಲಾಕ್ಕೆ ಆ ಭಾಗ್ಯವಿರಲಿಲ್ಲ. ಏಕೆಂದರೆ ಅದೇ ಹೊತ್ತಿಗೆ ದೇಶವೂ ತುಂಡಾಗಿ, ಪಾಕಿಸ್ಥಾನದಿಂದ ರಾಶಿರಾಶಿ ಹೆಣಗಳೂ , ಹಿಂಡುಹಿಂಡಾಗಿ ನಿರ್ವಸಿತರೂ ದಿಕ್ಕಿಲ್ಲದೆ ಬರುತ್ತಿದ್ದರು. ಆಗ ಅವರಿಗೆಲ್ಲಾ ತಾತ್ಕಾಲಿಕ ನೆಲೆಯನ್ನು ಕೊಟ್ಟಿದ್ದು ಈ ಪುರಾನಾ ಕಿಲಾ. ಹಳೆಯ ಕೋಟೆ. ಧ್ವಜ ಹಾರದ ಕೋಟೆ. ಹಾರಿಸಿದರೂ ಯಾರೂ ಸಂತೋಷ ಪಡದಿರುವಂಥ ಕೋಟೆ. ದೂರದ ಮುಲ್ತಾನ್, ಸಿಂಧ್, ಪಂಜಾಬ್‌ಗಳಿಂದ ಬಂದವರೆಲ್ಲಾ ಅಲ್ಲಿ ನೆರೆದು ಬೇರೆಯೇ ಆದ ಒಂದು ಭಾರತ ಅಲ್ಲಿ ನಿರ್ಮಾಣವಾಗಿತ್ತು. ಪುನರ್ವಸತಿ ಆಗುವವರೆಗೆ ಅವರಿಗೆಲ್ಲಾ ಅದೇ ಮನೆ. ಅದೇ ನೆಲೆ. ಅಂಥ ಒಂದು ದಿನ ಸಂಘಟನೆಯೊಂದು ನಿರ್ವಸಿತರಿಗೆ ಆಹಾರದ ಪೊಟ್ಟಣಗಳನ್ನು ವಿತರಣೆ ಮಾಡುತ್ತಿತ್ತು. ಅಲ್ಲಿ ಹನ್ನೆರಡು ವರ್ಷದ ಬಾಲಕ ಜನರ ನಡುವೆ ನುಸುಳುತ್ತಿದ್ದ. ದೊಡ್ಡ ಕೈಗಳ ಮಧ್ಯೆ ಸಣ್ಣ ಕೈಗೆ ಪೊಟ್ಟಣಗಳು ಎಟುಕುತ್ತಿರಲಿಲ್ಲ. ದೊಡ್ಡ ಕೈಗಳು ಸಂತ್ರಪ್ತವಾದ ಮೇಲೆ ಹಸಿದಿದ್ದ ಆ ಬಾಲಕನಿಗೂ ಆಹಾರದ ಪೊಟ್ಟಣ ಸಿಕ್ಕಿತ್ತು.

ಆ ಬಾಲಕ ಮುಂದೆ ಫ್ಲೈಯಿಂಗ್ ಸಿಕ್ಖ್ ಎಂದೇ ಹೆಸರಾದ ಖ್ಯಾತ ಅಥ್ಲೆಟ್ ಮಿಲ್ಖಾ ಸಿಂಗ್. ಪುರಾನಾ ಕಿಲಾದಲ್ಲಿ ಆಹಾರದ ಪೊಟ್ಟಣವನ್ನು ವಿತರಿಸಿದ ಆ ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಅಂದರೆ ಆರೆಸ್ಸೆಸ್ಸ್. ಆ ಬಾಲಕ ಫ್ಲೈಯಿಂಗ್ ಸಿಕ್ಖ್ ಆಗುವಲ್ಲಿ ಆ ಆಹಾರ ಪೊಟ್ಟಣದ ಪಾತ್ರವೂ ಇದೆ. ಯಾರೂ ಹೇಳದಿದ್ದರೂ, ಯಾರೂ ಬರೆಯದಿದ್ದರೂ, ಯಾರೂ ತೋರಿಸದಿದ್ದರೂ ಅದರ ಪಾತ್ರವನ್ನು, ಅಂದಿನ ಸತ್ಯವನ್ನು ಅಲ್ಲಗೆಳೆಯಲಾಗದು. ದೇಶವಿಭಜನೆಯ ಮಹಾದುರಂತದ ಒಂದು ಉಳಿಕೆ, ಒಂದು ಚಿಹ್ನೆ, ಒಂದು ಜೀವಂತ ಸ್ಮಾರಕವಾದವರು ಸರ್ದಾರ್ ಮಿಲ್ಖಾ ಸಿಂಗ್. ದೇಶ ವಿಭಜನೆಯ ಹೊತ್ತಲ್ಲಿ ಪಾಕಿಸ್ಥಾನದಿಂದ ಓಡಿ ಭಾರತಕ್ಕೆ ಬಂದವರಿಗೆಲ್ಲಾ ಲಾಲ್ ಕೃಷ್ಣ ಅಧ್ವಾನಿ, ಸರ್ದಾರ್ ಮನಮೋಹನ ಸಿಂಗರಾಗುವ ಅದೃಷ್ಟವಿರಲಿಲ್ಲ. ಅಂಥವರಲ್ಲಿ ಮಿಲ್ಖಾ ಸಿಂಗ್‌ರಂಥವರೇ ಹೆಚ್ಚಿದ್ದರೆಂಬುದು ಇತಿಹಾಸದ ವಾಸ್ತವ. ಅದು ತಿಳಿಯುವುದು ಮಿಲ್ಖಾ ಸಿಂಗನ The Race of my life ನಂಥ ಆತ್ಮ ಕಥೆಗಳಿಂದ.

ಮತ್ತಷ್ಟು ಓದು »

25
ಜುಲೈ

ಮೋದಿ ಸ್ವಲ್ಪ ಸಿಹಿ , ಸ್ವಲ್ಪ ಕಹಿ

– ಕೆ.ಎಂ.ವಿಶ್ವನಾಥ (ಮಂಕವಿ) ಮರತೂರ

Modi12ನಮ್ಮ ಭಾರತ ಬಹು ಭವ್ಯವನ್ನು ಮೆರೆಯುವ ದೇಶ, ಪ್ರಪಂಚದಲ್ಲೆ ಉತ್ತಮವಾದ ಇತಿಹಾಸ ಹೊಂದಿರುವ ದೇಶ ಅನೇಕ ಅದ್ಭುತಗಳಿಗೆ ಹೆಸರಾದ ದೇಶ , ರಾಜಕೀಯದಲ್ಲಿ ಈಡಿ ಪ್ರಪಂಚವೆ ಕಣ್ಣರಳಿಸಿ ನೋಡುವಂತೆ ಇರುವ ದೇಶ , ಇಂದಿನ ರಾಜಕೀಯ ಏಕೊ ಬೇಸರ ಮೂಡಿಸುತ್ತಿದೆ. ಏಕೆಂದರೆ ಎಲ್ಲವು ಗಿಮಿಕ್ ಬರಿ ಜಾಹಿರಾತು ಜೀವನ ಜಾಹಿರಾತಿನಲ್ಲಿ ರಾಜಕೀಯ ನೈಜವಾಗಿ ಜನರ ಮುಟ್ಟು ಕೆಲಸಗಳು ಆಗುತ್ತಿಲ್ಲ ಎಂಬುವುದು ಭಾರತೀಯರ ಪಾಲಿಗೆ ಕಹಿಸತ್ಯ.

ಇತ್ತಿಚಿಗೆ ನಮ್ಮ ಅಂತರಜಾಲ ತಾಣಗಳಲ್ಲಿ ಮಾನ್ಯ ಮೋದಿಯವರ ವಿಚಿತ್ರ ಜಾಹಿರಾತುಗಳನ್ನು ನೋಡಿ ಗಾಬರಿ ಹುಟ್ಟಿಸುತ್ತವೆ. ಇನ್ನೇನು ತಾನು ಈ ದೇಶದ ಪ್ರಧಾನಿಯಾಗಿರುವೇನು ಎಂಬ ಕಲ್ಪನೆ ಅವು ನೊಡುಗರಿಗೆ ಮೂಡಿಸುತ್ತವೆ. ಮುಗ್ದ ಜನರನ್ನು ಇನ್ನಷ್ಟು ಮಂದರನ್ನಾಗಿ ಮಾಡುವ ಈ ಜಾಹಿರಾತುಗಳು ಅವರಿಂದ ಅದೆಷ್ಟು ಹಣ ವಸೂಲಿ ಮಾಡಬಹುದು ಲೆಕ್ಕಹಾಕಿ ನಾಳೆ ಇವರು ನಮ್ಮ ದೇಶದ ಪ್ರಧಾನಿಯಾದರೆ ಈಡಿ ನಮ್ಮ ದೇಶವನ್ನು ಜಾಹಿರಾತಿನಲ್ಲಿ ಮುಳಗಿಸುವುದರಲ್ಲಿ ಸಂದೇಹವೆ ಇಲ್ಲಾ.

ಮೊನ್ನೆ  ಪ್ರತಾಪ ರವರು ಬರೆದ ಮೋದಿ ಯಾರು ತುಳಿಯದ  ಹಾದಿ ಪುಸ್ತಕ ಓದಿದೆ ಅಲ್ಲಿ ಪುಸ್ತಕ ದುದ್ದಕ್ಕು  ಅವರ ವ್ಯಕ್ತಿತ್ವ ಬಹಳ ಮಾರ್ಮಿಕವಾಗಿ ಬರೆದಿದ್ದಾರೆ. ಅವರು ಅತಿ ಚಿಕ್ಕ ವಯಸ್ಸಿನಲ್ಲಿಯೆ ಈ ರಾಜಕೀಯ ಹಾದಿ ಹಿಡಿದು ಆರ್ ಎಸ್ ಎಸ್ ನ ಪಕ್ಕ ಕಾರ್ಯಕರ್ತನಾಗಿ ಮತ್ತೆ ಅದೆ ಗರಡಿಯಲ್ಲಿ ಪಳಗಿದ ಹುಲಿ ಎಂಬ ಮಾತು ಒಂದಡೆ ಕೇಳಿ ಬರುತ್ತದೆ. ಅವರ ಛಲ ಸಾಧನೆ ಎಲ್ಲವು ಮೆಚ್ಚಲೇಬೇಕು ಒಬ್ಬ ವ್ಯಕ್ತಿ ಯಾರ ಸಹಾಯವಿಲ್ಲದೆ ರಾಜಕೀಯ ರಂಗದಲ್ಲಿ ಅಷ್ಟು ಮೇಲೆತ್ತರಕ್ಕೆ ಬೆಳಿಯುವವುದು ಸಾಮಾನ್ಯವಾದ ಮಾತಲ್ಲಾ, ಆದರೆ ತಾನು ಈ ದೇಶದ ಪ್ರಧಾನಿಯಾಗಬೇಕು ಎನ್ನುವುದು ಸಾಮಾನ್ಯ ಜನ ಮಾತಾಡಿ ಅವರಿಗೆ ಗೌರವದಿಂದ ಸೂಚಿಸಬೇಕು, ಆದರೆ ಅದೇಕೊ ಮೋದಿಯವರು ಈ ಜಾಹಿರಾತಿನ ಸಹಾಯ ಪಡೆದು ತಾವು ಮುಂದಿನ ಪ್ರಧಾನಿಯೆಂದು ಬಿಂಬಿಸುತ್ತಿರುವರು ತಿಳಿಯದು, ಇದು ಹುಲಿಗೆ ಹೋಲಿಸುವ ರೀತಿ ಸರಿಯೆ ನೀವೆ ಯೋಚಿಸಿ.
ಮತ್ತಷ್ಟು ಓದು »

22
ಜುಲೈ

ಕಾಂಗ್ರೆಸ್ಸಿನ ‘ನಮೋ’ನಿಯಾ ಮತ್ತು ಸೆಕ್ಯುಲರ್ ‘ನಾಯಿಮರಿ’

–  ರಾಕೇಶ್ ಶೆಟ್ಟಿ

NaModiಭಾರತದಲ್ಲಿ ಭಾವುಕತೆಗೇನಾದರೂ ಬರವುಂಟೇ? ಹಾಗೇನಾದರೂ ಇದ್ದಿದ್ದರೆ ನಮ್ಮ ಸ್ಥಿತಿ ಸ್ವಲ್ಪಮಟ್ಟಿಗಾದರೂ ಸುಧಾರಿಸುತ್ತಿತ್ತೋ ಏನೋ? ಆದರೆ,ಭಾವುಕತೆ ಅನ್ನುವುದು ನಮ್ಮ ಅಸ್ಮಿತೆಯ ಭಾಗವಾಗಿರುವುದರಿಂದಲೇ ನಮ್ಮ ರಾಜಕಾರಣಿಗಳು,ರಾಜಕೀಯ ಪಕ್ಷಗಳು ಪದೇ ಪದೇ ಭಾವುಕತೆಯ ಬಿರುಗಾಳಿಯೆಬ್ಬಿಸಿ ತಮ್ಮ ಹಗರಣ,ವೈಫಲ್ಯಗಳನ್ನು ಮುಚ್ಚಿಕೊಳ್ಳುವುದು.ಅದರಲ್ಲೂ ಇಂತ ವಿಷಯದಲ್ಲಿ ಕಾಂಗ್ರೆಸ್ಸ್ ಪಕ್ಷದ್ದು ಉಳಿದೆಲ್ಲರಿಗಿಂತ ಒಂದು ‘ಕೈ’ ಮೇಲೆಯೇ ಹೌದು.

೨೪ ಗಂಟೆಯ ಮೀಡಿಯಾ ಯುಗದಲ್ಲಿ ದೊಡ್ಡ ದೊಡ್ಡ ಹಗರಣಗಳು ಸುದ್ದಿಯಾದಗಾಲೆಲ್ಲ ಕಾಂಗ್ರೆಸ್ಸ್ ಅದರಿಂದ ಹೊರಬರಲು ಒಂದು ಸಣ್ಣ ಎಳೆಯೇನಾದರೂ ಸಿಗುತ್ತದೆಯಾ ಅಂತ ನೋಡುತ್ತಿರುತ್ತದೆ.ಈ ಬಾರಿ ರೂಪಾಯಿ ಮೌಲ್ಯ ಕುಸಿದು,ಆಡಳಿತ ವ್ಯವಸ್ಥೆಯೇ ಹಳ್ಳ ಹಿಡಿದು ಕುಳಿತಿರುವಾಗ ಅದಕ್ಕೆ ಕಾಣಿಸಿದ ಬೆಳಕಿನ ಹಾದಿ “ನಾಯಿ ಮರಿ”…!

ಹೌದು. ಗುಜರಾತ್ ಮುಖ್ಯಮಂತ್ರಿ ರಾಯಿಟರ್ಸ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಬಳಸಿದ ನಾಯಿ ಮರಿ ಪದ.ರಾಯಿಟರ್ಸ್ ನೀಡಿದ ಸಂದರ್ಶನದಲ್ಲಿ ನಾಯಿ ಮರಿ ಬಂದಿದ್ದು ಹೇಗೆ ಅಂತ ನೋಡಿದರೆ,

ಸಂದರ್ಶಕ: “ಏನು (೨೦೦೨ ರ ಗಲಭೆ) ನಡೆಯಿತೋ ಆ ಬಗ್ಗೆ ನೀವು ಪಶ್ಚಾತ್ತಾಪ ಪಡುತ್ತಿರಾ?”

ಮತ್ತಷ್ಟು ಓದು »

18
ಜುಲೈ

ಮುಸ್ಲಿಂ ಸಮುದಾಯದ ಉತ್ಪ್ರೇಕ್ಷಿತ ಕೊರಗುಗಳು

– ಪ್ರೇಮ ಶೇಖರ

Bharatiya Muslimaru“ಇಂದು ಈ ದೇಶದಲ್ಲಿ ಹಿಂಸೆ, ಹತ್ಯಾಕಾಂಡಗಳು ನಡೆದಿರುವುದು ಜಾತಿ ಸಮಾವೇಶ, ರ‍್ಯಾಲಿಗಳಿಂದಲ್ಲ. ಪ್ರವೀಣ್ ತೊಗಾಡಿಯಾರಂತಹ ಮಂದಿಗಳು ದೇಶಾದ್ಯಂತ ಏರ್ಪಡಿಸಿಕೊಂಡು ಬಂದ ಹಿಂದೂ ಸಮಾಜೋತ್ಸವದಂತಹ ಸಮಾವೇಶಗಳು, ರ‍್ಯಾಲಿಗಳು ದೇಶವನ್ನು ಕಂಗೆಡಿಸಿದ್ದವು.  ಹಲವು ಕೋಮುಗಲಭೆಗಳಿಗೆ, ಹಿಂಸೆಗಳಿಗೆ ಬಿಜೆಪಿ ಮತ್ತು ಆರೆಸ್ಸೆಸ್‌ನ ರ‍್ಯಾಲಿಗಳು ಕಾರಣವಾಗಿವೆ.  ಅವು ಸಮಾಜವನ್ನು, ದೇಶವನ್ನು ಒಡೆದಿವೆ.”

ಉತ್ತರ ಪ್ರದೇಶದಲ್ಲಿ ಜಾತಿಯಾಧಾರಿತ ರ‍್ಯಾಲಿಗಳನ್ನು ನಿರ್ಬಂಧಿಸಿ ಕಳೆದ ಗುರುವಾರ ಅಲಹಾಬಾದ್ ಹೈಕೋರ್ಟ್ ನೀಡಿದ ತೀರ್ಪಿನ ಬಗ್ಗೆ ಮರುದಿನವೇ ಅಂದರೆ ಶುಕ್ರವಾರ ಪ್ರಕಟವಾದ ಕನ್ನಡ ದೈನಿಕವೊಂದರ ಸಂಪಾದಕೀಯದಲ್ಲಿ ಕಂಡುಬಂದ ಸಾಲುಗಳಿವು.  ಪ್ರವೀಣ್ ತೊಗಾಡಿಯಾರಂತಹ ಮಂದಿಗಳು ದೇಶಾದ್ಯಂತ ನಡೆಸಿಕೊಂಡು ಬಂದ ರ‍್ಯಾಲಿಗಳು ದೇಶವನ್ನು ಕಂಗೆಡಿಸಿದ ಬಗ್ಗೆ ಹೇಳುವ ಈ ಸಂಪಾದಕೀಯ ಅಕ್ಬರುದ್ದೀನ್ ಒವೈಸಿಯಂತಹ ಮಂದಿಗಳು ಹದಿನೈದು ನಿಮಿಷಗಳಲ್ಲಿ ಹಿಂದೂಗಳನ್ನು ಮಟ್ಟಹಾಕುತ್ತೇವೆಂದು ಘೋಷಿಸುವ ರ‍್ಯಾಲಿಗಳು ದೇಶವನ್ನು ಕಂಗೆಡಿಸಿದ ಬಗ್ಗೆ ಮೌನವಾಗಿದೆ.

ನನ್ನ ಅರಿವಿನ ಪ್ರಕಾರ ಈ ದೇಶ “ಒಡೆದದ್ದು” ೧೯೪೭ರಲ್ಲಿ ಮತ್ತು ಅದಕ್ಕೆ ಆರೆಸ್ಸೆಸ್ ಆಗಲೀ, ಬಿಜೆಪಿಯಾಗಲೀ ಏರ್ಪಡಿಸಿದ ರ‍್ಯಾಲಿಗಳು ಕಾರಣವಾಗಿರಲಿಲ್ಲ.  ಬ್ರಿಟಿಷ್ ವಸಾಹತುಶಾಹಿ ಆಳರಸರ ಕೈಗೊಂಬೆಯಾಗಿ, ಅವರ ಸಕ್ರಿಯ ಸಹಕಾರದಿಂದ ಮುಸ್ಲಿಂ ಲೀಗ್ ನಡೆಸಿದ ರ‍್ಯಾಲಿಗಳು ಸಮಾಜವನ್ನು ಒಡೆದವು ಮತ್ತು ಬಂಗಾಳದಲ್ಲಿ ಅಧಿಕಾರದಲ್ಲಿದ್ದ ಮುಸ್ಲಿಂ ಲೀಗ್ ಆಗಸ್ಟ್ ೧೬, ೧೯೪೬ರಂದು ಕಲ್ಕತ್ತಾ ನಗರದಲ್ಲಿ ಆಯೋಜಿಸಿದ “ಡೈರೆಕ್ಟ್ ಆಕ್ಷನ್ ಡೇ” ಎಂಬ ಕೋಮುವಾದಿ ರ‍್ಯಾಲಿ ಮತ್ತದು ಬಲಿತೆಗೆದುಕೊಂಡ ಸುಮಾರು ನಾಲ್ಕುಸಾವಿರ ಜೀವಗಳು ದೇಶದ ಐಕ್ಯತೆಗೆ ಅಂತಿಮ ಹೊಡೆತ ನೀಡಿ ಭಾರತ ಇಬ್ಬಾಗವಾಗಲು ಕಾರಣವಾದವು.  ಭಾರತವಷ್ಟೇ ಇಬ್ಬಾಗವಾಗಲಿಲ್ಲ, ಮುಸ್ಲಿಂ ಲೀಗ್‌ನ ಮೂರ್ಖತನದಿಂದಾಗಿ ಉಪಖಂಡದ ಬಲಿಷ್ಟ ಮುಸ್ಲಿಂ ಸಮುದಾಯವೂ ಇಬ್ಬಾಗವಾಯಿತು. ೧೯೭೧ರಲ್ಲಿ ಅದು ಮೂರು ಭಾಗಗಳಾಗಿ ಹೋಳಾಗಿ ಮತ್ತಷ್ಟು ಕೃಶವಾಯಿತು.  ಈ ಒಡೆಯುವಿಕೆಗೂ ಬಿಜೆಪಿಯಾಗಲೀ, ಆರೆಸ್ಸೆಸ್ ಆಗಲೀ ಕಾರಣವಾಗಿರಲಿಲ್ಲ.
ಮತ್ತಷ್ಟು ಓದು »

17
ಜುಲೈ

‘ಹಿಂದು’ ಶಬ್ದ ಕೇಳುತ್ತಲೇ ಇವರೇಕೆ ಹುಯಿಲೆಬ್ಬಿಸುತ್ತಾರೆ?

– ಪ್ರವೀಣ್ ಪಟವರ್ಧನ್

Modi12ಕೆಲ ದಿನಗಳ ಹಿಂದಷ್ಟೇ ಬೋಧ್ಗಯಾ ಬಾಂಬ್ ಬ್ಲಾಸ್ಟ್ ಪ್ರಕರಣದ ನಂತರ ನೀಡಿದ್ದ ವಿಚಿತ್ರ- ವಿಕೃತ ಹೇಳಿಕೆಗಳನ್ನು ಆಧರಿಸಿ, ತಮಗೆ ಸಮಯ ಬಂದಾಗಲೆಲ್ಲಾ ತಮ್ಮ ತಪ್ಪುಗಳನ್ನು ಮುಚ್ಚಿ ಹಾಕಿ, ಇತರರ (ಉದ್ದೇಶಪೂರ್ವಕವಾಗಿ ಗುಜರಾತಿನ ಮುಖ್ಯಮಂತ್ರಿ ಮೋದಿಯವರ) ತೇಜೋವಧೆ ಮಾಡುವ ಕಾಂಗ್ರೆಸ್ಸಿಗ “ಒಸಾಮಾ ಜೀ” ಎಂದು ಮುಕ್ತ ಮನಸ್ಸಿನಿಂದ ಮರ್ಯಾದೆ ನೀಡಿದ ಖ್ಯಾತಿಯ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯಸಿಂಗ್ ಅವರನ್ನು ಕುರಿತು Facebook  ಜಾಲತಾಣದಲ್ಲಿ ಒಂದು ವ್ಯಂಗ್ಯ ಚಿತ್ರ ಹರಿದಾಡುತ್ತಿತ್ತು. ಸಂಕ್ಷಿಪ್ತವಾಗಿ ಹೇಳುವುದಾದರೆ ವ್ಯಂಗ್ಯಚಿತ್ರದಲ್ಲಿ ಇದ್ದುದು ಇಷ್ಟೇ. “ಟೀವಿಯಲ್ಲಿ ದಿಗ್ವಿಜಯಸಿಂಗ್ ಒಂದು ಪತ್ರಿಕಾ ಹೇಳಿಕೆ ನೀಡುತ್ತಿದ್ದಾಗ ಮನೆಯಲ್ಲಿನ ಸಾಕಿದ ನಾಯಿಗಳು ಟೀವಿ ನೋಡುತ್ತಾ ಬೊಗಳುತ್ತಿವೆ. ಮುಂದೇನೂ ಹೇಳಲಾರೆ. ನೀವೇ ಅರ್ಥ ಮಾಡಿಕೊಳ್ಳಬಲ್ಲಿರಷ್ಟೇ.

ರಾಜಕಾರಣಿಯೆಂದರೆ ಅಲ್ಲಿ ವಾದ-ವಿವಾದಗಳು ಸಾಮಾನ್ಯ. ಈಗಿನ ರಾಜಕಾರಣದಲ್ಲಿ ಜನಪರ ಕೆಲಸ ಮಾಡುವುದಕ್ಕಿಂತ ವಾದಗಳಿಗೆ ಸಿಲುಕಿಕೊಳ್ಳುವುದೇ ಹೆಚ್ಚು. ಒಬ್ಬರ ಮೇಲೋಬ್ಬರ ಕೆಸರೆರಚಾಟ. ವಿರೋಧ ಪಕ್ಷದ ವ್ಯಕ್ತಿಯ ತೇಜೋವಧೆ, ಸುಳ್ಳು ಆರೋಪ, ಅರ್ಥವಿಹೀನ ಹೇಳಿಕೆ ಇವೆಲ್ಲವೂ ಕೆಸರೆರೆಚಾಟದ ವಿವಿಧ ಮುಖಗಳು. ನಿಮ್ಮ ಸರ್ಕಾರ ಹೀಗೆ ಮಾಡಿದ್ದು ಸರಿಯೇ ಎಂಬ ಪ್ರಶ್ನೆಗೆ ಸಿಗುವ ಉತ್ತರ, ನಮ್ಮ ಹಿಂದಿನ ಸರ್ಕಾರ ಇದಕ್ಕಿಂತಲೂ ಕೆಟ್ಟ ಕೆಲಸ ಮಾಡಿತ್ತು ಅದರ ಬಗ್ಗೆ ಮಾತಾಡೋಣವೇ ಎಂದು ಕುಟುಕಿ ತಮ್ಮ ಲೋಪಗಳನ್ನು cover-up ಮಾಡಿಕೊಳ್ಳುವವರೇ ಈ ದಿನ ಹೆಚ್ಚು.

ಮತ್ತಷ್ಟು ಓದು »

15
ಜುಲೈ

ಸಿದ್ರಾಮಣ್ಣನ ೧.ರೂ ಅಕ್ಕಿಯ ಸುತ್ತಮುತ್ತ

-ಪ್ರಸನ್ನ,ಬೆಂಗಳೂರು

Anna Bhaagya೧ ರೂ ಅಕ್ಕಿ ಯೋಜನೆಯನ್ನು ಸಮರ್ಥಿಸುತ್ತಾ ಕೆಲವರು ಗ್ಯಾಸ್ ಮತ್ತು ಪೆಟ್ರೋಲ್ ಸಬ್ಸಿಡಿ ಬಗ್ಗೆ ಹೇಳುತ್ತಿದ್ದಾರೆ, ಪೆಟ್ರೋಲ್ ಮೇಲೆ ಶೇ ೪೦ ಕ್ಕೂ ಹೆಚ್ಚು ತೆರಿಗೆಯೂ ಇದೆ ಸಬ್ಸಿಡಿಯೂ ಇದೆ ಎನ್ನುವ ಸಣ್ಣ ಮಾಹಿತಿಯೂ ಇವರಲ್ಲಿ ಇಲ್ಲವೆ? ಬಹುತೇಕ ಮಧ್ಯಮ ವರ್ಗದ ಜನ ದುಡಿದು ಸಂಪಾದಿಸಿದ ಹಣದಲ್ಲಿ ಬದುಕುತ್ತಿದ್ದಾರೆ. ೧ ರೂ ಅಕ್ಕಿಯಂತಹ ಯೋಜನೆಗಳು ಅವನ ಮೇಲೆ ಹೊರೆ ಹೆಚ್ಚಿಗೆ ಮಾಡುತ್ತದೆ ಎನ್ನುವ ಕಾಳಜಿ ಅವನದು.

ಇನ್ನೂ ಕೆಲವರು ಐಟಿ ವಲಯಕ್ಕೆ ಕೊಡುವ ಸಬ್ಸಿಡಿ, ಭೂಮಿಯ ಬಗ್ಗೆ ಸೌಲಭ್ಯಗಳ ಬಗ್ಗೆ ಪ್ರಸ್ತಾಪಿಸುತ್ತಿದ್ದಾರೆ. ಈ ವಲಯಗಳು ಸೃಷ್ಠಿಸಿರುವ ಮತ್ತು ಅದರಿಂದ ಒದಗುವ ಉದ್ಯೋಗವಕಾಶ ಅದರಿಂದ ಲಕ್ಷಾಂತರ ಕುಟುಂಬಗಳು ಬದುಕು ಕಟ್ಟಿಕೊಂಡಿರುವುದನ್ನು ಮರೆಯುವುದು ಕೇವಲ ವೋಟ್ ಬ್ಯಾಂಕ್ ರಾಜಕಾರಣದ ಅಥವ ಅಂಧಾಭಿಮಾನದ ಪ್ರತೀಕ. ಸ್ವಂತವಾಗಿ ಉದ್ಯೋಗ ಸೃಷ್ಠಿಸಲಾಗದ ಅಸಹಾಯಕ ಸರ್ಕಾರಗಳು ಈ ವಲಯಕ್ಕೆ ಸೌಕರ್ಯ ಒದಗಿಸಿ ಉದ್ಯೋಗಿಗಳ ತೆರಿಗೆ
ಹಣದಿಂದ ಬೊಕ್ಕಸ ತುಂಬಿಸಿಕೊಳ್ಳುತ್ತಿಲ್ಲವೆ? ಆ ವಲಯದಿಂದ ಆದಾಯವಿಲ್ಲದೆ ಯಾವ ಸರ್ಕಾರವೂ ಕಣ್ಣುಮುಚ್ಚಿ ಸೌಕರ್ಯಗಳನ್ನು ಒದಗಿಸುತ್ತಿಲ್ಲ.

ಮತ್ತಷ್ಟು ಓದು »