ವಿಷಯದ ವಿವರಗಳಿಗೆ ದಾಟಿರಿ

Posts from the ‘ಪ್ರಚಲಿತ’ Category

14
ಏಪ್ರಿಲ್

ಅಗೋಚರ….!

– ಜಿ.ವಿ ಜಯಶ್ರೀ

ಹೆಚ್ಚಾಗಿ ಪವಾಡಗಳು… ಪುರುಷರು… ಮಾಯಾ-ಮಂತ್ರ, ಭವಿಷ್ಯ ಮನುಷ್ಯರಿಗೆ ಇಷ್ಟ. ಯಾವ ಭಾಷೆಯಲ್ಲಿ ನೋಡಿದರು ಇಂತಹ ವಿಷಯಗಳಿಗೆ ಸಂಬಂಧಿಸಿದ ಕಥೆಗಳು , ಧಾರಾವಾಹಿಗಳು ಇದ್ದೆ ಇರುತ್ತದೆ. ಅದೊಂತರ ಸೀರಿಯಸ್ ವಿಷಯದ ಚರ್ಚೆ ಮಧ್ಯೆ ಸಣ್ಣ ಜಾಹಿರಾತು ಇದ್ದಂತೆ. ಬೇಕಾದವರು ನೋಡಬಹುದು ಬೇಡದೆ ಇದ್ದವರು ಬಿಸಾಡ ಬಹುದು.

ಹೆಚ್ಚು ಜನಪ್ರಿಯ ವ್ಯಕ್ತಿಗಳಲ್ಲಿ ಸಾಧು ಸಂತರು, ಬಾಬಗಳು ಸೇರುತ್ತಾರೆ. ಕಳೆದವಾರ ಅಣ್ಣ ಹಜಾರೆ ಅವರ ವಿಷಯದ ಜೊತೆಗೆ ಹೆಚ್ಚು ಚಾಲ್ತಿಯಲ್ಲಿ ಕಂಡ ಸಂಗತಿ ಪುಟ್ಟಪರ್ತಿ ಸಾಯಿ ಬಾಬ. ಅತ್ಯಂತ ಜನಪ್ರಿಯ ಬಾಬ ಅವರು, ಜೊತೆಗೆ ಅತ್ಯಂತ ವಿವಾದಿತ ಬಾಬ.

ಬಹುಸಂಖ್ಯಾತ ಉತ್ತರ ಭಾರತೀಯರು ಅವರ ಮನೆಯಲ್ಲಿ  ಇರುವ ಒಂದು ಚಂಬು ಪಕ್ಕದ ಮನೆಗೆ ಕೊಡಬೇಕಾದ್ರೂ ಸಾಯಿ ಬಾಬ ಅನುಮತಿ ಕೇಳ್ತಾರೆ ,ತಮಾಷೆ ಅಲ್ಲ ಕಣ್ರೀ ಅಷ್ಟೊಂದು ನಂಬಿಕೆ .ಏನೇ ಸಂಗತಿಗಳು ಇರಲಿ ಅವರು ಅತ್ಯಂತ ಹೆಚ್ಚು ಗಮನ ಸೆಳೆಯುವುದು ಸಮಾಜಮುಖಿ ಕೆಲಸಗಳಿಂದ.ಭಜನ್ ಮಾಡುವಾಗ ಸದಾ ಶಾಂತ ಸ್ಥಿತಿಯಲ್ಲಿರುವ ವದನ, ಆ ಮೌನ ಎಲ್ಲವೂ ಹೆಚ್ಚು ಆಕರ್ಷಣೆಯ  ಅಂಶ. ಅವರ ಭಜನ್ ಕಾರ್ಯಕ್ರಮಗಳಲ್ಲಿ ಭಾಗವಹಿಸಿದವರು ಸಂತೋಷದಿಂದ ಹೊರ ಬರುತ್ತಾರೆ.

ಮತ್ತಷ್ಟು ಓದು »

13
ಏಪ್ರಿಲ್

ರಾಷ್ಟ್ರೀಯ ಪಕ್ಷಗಳ ಒಡೆದು ಆಳುವ ನೀತಿ…!

– ಚೇತನ್ ಜೀರಾಳ್

ಕಳೆದ ಎರಡು ವಾರಗಳಲ್ಲಿ ನಡೆದಿರುವ ಸುದ್ದಿಗಳ ಬಗ್ಗೆ ನಿಮ್ಮ ಗಮನ ಹರಿಸಲು ಇಷ್ಟಪಡುತ್ತೇನೆ. ಪತ್ರಿಕೆಗಳಲ್ಲಿ ಕೇವಲ ಸುದ್ದಿ ಎನ್ನುವಂತೆ ಇವುಗಳನ್ನು ಬಿತ್ತರಿಸಲಾಯಿತು, ಆದರೆ ಇವುಗಳ ಬಗ್ಗೆ ಎಲ್ಲೂ ಚರ್ಚೆಯಾಗಿಲ್ಲ.

ಮರುಚುನಾವಣೆ ಹಾಗೂ ತೆಲುಗಿನಲ್ಲಿ ಭಾಷಣ:
ಮೊನ್ನೆ ನಡೆದ ಮರುಚುನಾವಣೆಯ ಪ್ರಚಾರಕ್ಕಾಗಿ ನಮ್ಮ ರಾಜ್ಯದ ರಾಷ್ಟ್ರೀಯ ಪಕ್ಷಗಳು ಭರ್ಜರಿ ಪ್ರಚಾರ ಕೈಗೊಂಡವು, ಅದಕ್ಕಾಗಿಯೇ ಹೊರರಾಜ್ಯದ ಚಲನಚಿತ್ರ ನಟ/ನಟಿಯರನ್ನು ಕರೆಸಿದ್ದವು. ಮತದಾರನನ್ನು ಓಲೈಸುವ ಭರದಲ್ಲಿ ನಮ್ಮ ರಾಜಕೀಯ ಪಕ್ಷಗಳು ಮಾಡುತ್ತಿರುವ ತಪ್ಪುಗಳು ಮಾತ್ರ ಬಹಳ ದೊಡ್ಡದಾಗಿವೆ. ಬಂಗಾರ ಪೇಟೆಯಲ್ಲಿ ನಡೆದ ಉಪಚುನಾವಣೆಗಾಗಿ ನಡೆಸಿದ ಪ್ರಚಾರದಲ್ಲಿ ಕಾಂಗ್ರೆಸ್ ಪಕ್ಷ ತೆಲಗು ಚಿತ್ರನಟ ಚಿರಂಜೀವಿಯನ್ನು ಬಳಸಿಕೊಂಡಿತ್ತು. ಅವರು ಸಹ ಭರ್ಜರಿಯಾಗಿ ತೆಲುಗಿನಲ್ಲಿ ಭಾಷಣ ಮಾಡಿ ಹೊರಟು ಹೋದರು. ಇದರಲ್ಲಿ ತಪ್ಪೇನು ಅಂತೀರಾ? ಮತದಾರನನ್ನು ಓಲೈಸುವ ಭರದಲ್ಲಿ ಕರ್ನಾಟಕದ ವಿವಿಧ ಭಾಷಿಕರಲ್ಲಿ ಒಡಕುಂಟು ಮಾಡಲಾಗುತ್ತಿದೆ. ಮೊನ್ನೆ ನಡೆದಿದ್ದು ಸಹ ಅದೇ, ಹಲವು ಶತಮಾನ ಅಥವಾ ಹಲವು ದಶಕಗಳಿಂದ ಇಲ್ಲಿ ನೆಲೆಸಿರುವ ತೆಲುಗು ಭಾಷಿಕರು ಕನ್ನಡದವರೇ ಆಗಿಹೋಗಿದ್ದಾರೆ. ಆದರೆ ನೀವು ತೆಲುಗರು ನೀವು ಕನ್ನಡಿಗರಲ್ಲಾ ಅಂತಾ ತೋರಿಸೋ ಪ್ರಯತ್ನಗಳೇ ಚಿರಂಜೀವಿ ಯಂತಹ ತೆಲುಗು ನಟರನ್ನು ಕರೆದುಕೊಂಡು ಬಂದು ಕರ್ನಾಟಕದಲ್ಲಿ ಭಾಷಣ ಮಾಡಿಸುವುದು. ಕರ್ನಾಟಕದ ಜನರನ್ನ ಓಲೈಸಲು ಆಂಧ್ರಪ್ರದೇಶದ ಕರಾವಳಿ ತೀರದ ಒಬ್ಬ ನಟ ಬಂದು ನೀವು ಕನ್ನಡಿಗರಲ್ಲಾ ಎಂದು ಸಂದೇಶ ನೀಡಿಸುವ ಕೆಲಸ ಮಾಡುತ್ತಿರುವ ಪಕ್ಷಗಳು ಮಾಡುತ್ತಿರುವುದಾದರು ಏನು ಅನ್ನೋದನ್ನ ತಾವೇ ಪ್ರಶ್ನಿಸಿಕೊಳ್ಳಲಿ.

ಮತ್ತಷ್ಟು ಓದು »

12
ಏಪ್ರಿಲ್

ಅವರೆತ್ತರಕ್ಕೆ ಏರಲಾಗದಿದ್ದರೆ ತೆಪ್ಪಗಿರಿ…!

– ರಾಕೇಶ್ ಶೆಟ್ಟಿ

“ಇಂದಿನ ಪರಿಸ್ಥಿತಿಯಲ್ಲಿ ಮಹಾತ್ಮ ಗಾಂಧೀಜಿ ಅವರು ಇದ್ದಿದ್ದರೆ, ಅವರು ಕೂಡಾ ಭ್ರಷ್ಟರಾಗುತ್ತಿದ್ದರು. ರಾಜಕೀಯದಲ್ಲಿ ಉಳಿಯಬೇಕಾದರೆ ಭ್ರಷ್ಟರಾಗದೆ ಇರಲು ಸಾಧ್ಯವೇ ಇಲ್ಲ” ಇಂತ ಹೇಳಿಕೆ ಕೊಟ್ಟೊವ್ರು ಯಾರು ಅನ್ನೋದು ಎಲ್ರಿಗು ಗೊತ್ತಿದೆಯಲ್ವಾ? ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವ್ರು.ಒಂದ್ ಕಡೆ ದೇವೆಗೌಡ್ರು ಫೋಟೊ,ಇನ್ನೊಂದ್ ಕಡೆ ಇದೇ ಮಹಾತ್ಮನ ಫೋಟೊ ಹಾಕೊಂಡಿರೋ ಪಕ್ಷದ ರಾಜ್ಯಾಧ್ಯಕ್ಷರ ಬಾಯಿಯಲ್ಲಿ ಬಂದ ಮುತ್ತಿನಂತ ಮಾತುಗಳಿವು.

ಮುತ್ತುಗಳು ಬಿದ್ದಾಗ ಆರಿಸಿ ಮನೆಗ್ ತಗೊಂಡು ಹೋಗೊದು ರೂಢಿ,ಆದ್ರೆ ಕುಮಾರ ಸ್ವಾಮಿ ಅವ್ರ ಮುತ್ತನ್ನ ಹಿಡಿದು ಅವರಿಗೆ ಪೈಡ್ ಪೈಡ್ ಅಂತ ಎಲ್ಲ ಕಡೆಯಿಂದ ಬಾರಿಸುತಿದ್ದಾರೆ.ಬಾರಿಸದೆ ಬಿಡ್ಬೇಕಾ? ಒಂದು ಕಡೆ ಮಹಾತ್ಮರ ಹೋರಾಟದಿಂದ ಸ್ಪೂರ್ತಿ ಪಡೆದ ೭೬ ವರ್ಷದ ಅಣ್ಣಾ ಹಜಾರೆಯಂತವರು ಸತ್ತತಿಂಹರನ್ನ ಬಡಿದೆಬ್ಬಿಸಲು ಉಪವಾಸ ಕೂತರೆ,ಇನ್ನೊಂದು ಕಡೆ ಈ ಕುಮಾರಸ್ವಾಮಿ ಮಹಾತ್ಮರ ಬಗ್ಗೆ ಇಂತ ಮಾತನಾಡಲು ಹೊರಟಿದ್ದಾರೆ!

ಮತ್ತಷ್ಟು ಓದು »

12
ಏಪ್ರಿಲ್

ಇನ್ನೊಂದು ಸಮರಕ್ಕೆ ಸಿದ್ಧರಾಗಿ…

-ಸಂಪತ್ ಕುಮಾರ್

ಅಣ್ಣ ಹಜಾರೆಯವರ  ಉಪವಾಸವೇನೋ ಮುಗಿಯಿತು. ರಂಗೋಲೆಯ ಕೆಳಗೆ ನುಸುಳುವ ಬುದ್ಧಿ ಉಳ್ಳ ರಾಜಕಾರಣಿಗಳು ಎಂತಹ ಕಾನೂನು ತಯಾರಿಸುತ್ತರೋ ಕಾದುನೋಡಬೇಕು. ಈಗಾಗಲೇ ಅಸ್ತಿತ್ವದಲ್ಲಿರುವ ಲೋಕಾಯುಕ್ತದಂತಹ ಸಂಸ್ಥೆಯಿಂದ ಆಗುತ್ತಿರುವ ಭ್ರಷ್ಟಾಚಾರಿಗಳ ಬೇಟೆ ಅವರಿಗೆ ಶಿಕ್ಷೆ ಕೊಡಿಸುವಲ್ಲಿ ವಿಫಲವಾಗಿರುವುದು ಸರ್ವವೇದ್ಯ. ಅಲ್ಲದೆ ಇಂತಹ ವಿಧೇಯಕ ಸಂಸತ್ತಿನಲ್ಲಿ ಅಂಗೀಕಾರಗೊಳ್ಳುವುದೂ ಅನುಮಾನ.ಇಂತಹ ಪರಿಸ್ತಿತಿಯಲ್ಲಿ ಇನ್ನೊದು ಹೋರಾಟದ ಅಗತ್ಯ ಇದೆ.

ಭಾರತದ ರಾಜಕಾರಣಿಗಳ ಕೋಟಿ ಕೋಟಿ ಕಪ್ಪು ಹಣ ಸ್ವಿಸ್ ಬ್ಯಾಂಕಿನಲ್ಲಿ ಕೊಳೆಯುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಈ ಹಣವನ್ನು ರಾಷ್ಟ್ರೀಯ ಸಂಪತ್ತೆಂದು ಘೋಷಿಸಿದರೆ ಭಾರತ ತನ್ನೆಲ್ಲ ಸಾಲದಿಂದ ಮುಕ್ತವಾಗಿ, ಹಣ ದುಬ್ಬರ, ಬಡತನ, ಮುಂತಾದ ತನ್ನೆಲ್ಲ ಕಷ್ಟ ಕೋಟಲೆಗಳಿಂದ ಹೊರಬರಲು ಸಾಧ್ಯ. ಇದಕ್ಕಾಗಿ ಅಣ್ಣ ಹಜಾರೆ ಅವರನ್ನು ಈ ಉದ್ದೇಶಕ್ಕಾಗಿ ಪುನಃ ಉಪವಾಸ ಕೂರಲು ಹೇಳುವುದು ಸ್ವಾರ್ಥ ಎನಿಸಬಹುದು. ಈ ವಿಚಾರವನ್ನೇ ತನ್ನ ಚುನಾವಣ ಪ್ರಾಣಾಳಿಕೆ ಮಾಡಿಕೊಂಡಿರುವ ಭಾ.ಜ.ಪ. ದಿಂದ ಇದನ್ನು ರಾಜಕೀಯಗೊಳಿಸಬಾರದು.
ಮತ್ತಷ್ಟು ಓದು »

11
ಏಪ್ರಿಲ್

“ತಾಯ್ನುಡಿಯಲ್ಲಿ ಕಲಿಕೆ” ಯಾಕೆ ಮಹತ್ವದ್ದು?

– ಪ್ರಿಯಾಂಕ್

ತಾಯ್ನುಡಿಯಲ್ಲಿ ಕಲಿಕೆ ಮಾಡಿ ಉಪಯೋಗ ಏನು? ಚಿಕ್ಕ ಮಕ್ಕಳು ಯಾವ ಭಾಷೆ ಬೇಕಿದ್ರೂ ಬೇಗ ಕಲಿತಾರಲ್ಲ, ಹಾಗಾಗಿ ಚಿಕ್ಕಂದಿಂದಲೇ ಇಂಗ್ಲೀಷಿನಲ್ಲಿ ಕಲಿಸಿಬಿಟ್ರೆ ಎಲ್ರಿಗೂ ಒಳ್ಳೇದಲ್ವ? ಇಂತಹ ಪ್ರಶ್ನೆಗಳು ಬಹಳಷ್ಟು ಜನರಲ್ಲಿ ಇರೋದನ್ನ ಕಾಣಬಹುದು.

ಸ್ವಾಮಿನಾಮಿಕ್ಸ್ ಹೆಸರಿನಡಿ ಅಂಕಣ ಬರೆಯುವ “ಸ್ವಾಮಿನಾಥನ್ ಐಯ್ಯರ್” ಅವರು, ತಮ್ಮ ಈ ಅಂಕಣದಲ್ಲಿ, ಮಕ್ಕಳಿಗೆ ಮೊದಲು ತಾಯ್ನುಡಿಯಲ್ಲಿ ಕಲಿಕೆಯಾಗಬೇಕಾದ್ದು ಯಾಕೆ ಮುಖ್ಯ ಎಂಬುದನ್ನು ಅಧ್ಯಯನದ ಉದಾಹರಣೆಗಳ ಜೊತೆಗೆ ತೋರಿಸಿದ್ದಾರೆ. ಅವರ ಅಂಕಣದ ಆಯ್ದ ಕೆಲವು ಅಂಶಗಳನ್ನು ಇಲ್ಲಿ (ಕನ್ನಡದಲ್ಲಿ) ಹಾಕಲಾಗಿದೆ.

* ಎರಡನೇ ತರಗತಿಯಲ್ಲಿರುವ ಮಕ್ಕಳು ಸರಾಗವಾಗಿ ಓದಲು ಕಲಿಯದಿದ್ದರೆ, ಅವರು ಬಹುಶ ಮುಂದೆಂದೂ ಚೆನ್ನಾಗಿ ಓದಲಾರರು. ಅವರು ಓದಿನಲ್ಲಿ ಹಿಂದೆ ಉಳಿಯುವ ಸಾಧ್ಯತೆಯೇ ಹೆಚ್ಚು.

ಮತ್ತಷ್ಟು ಓದು »

8
ಏಪ್ರಿಲ್

ಈ ಹೋರಾಟ ಗೆಲ್ಲಲೇಬೇಕು…!

– ಬನವಾಸಿ ಬಳಗ

ಕಿಸನ್ ಬಾಬುರಾವ್ ಹಜಾರೆ ಎಂಬ ಹೆಸರಿನ ಆ ಹಿರಿಯರು ಇವತ್ತಿನಿಂದ ಭ್ರಷ್ಟಾಚಾರದ ವಿರುದ್ಧದ ಒಂದು ದೊಡ್ಡ ಹೋರಾಟಕ್ಕೆ ಮುನ್ನುಡಿ ಹಾಡಿದ್ದಾರೆ. ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯ ರೆಲೆಗನ್ ಸಿದ್ಧಿ ಎಂಬ ಹಳ್ಳಿಯನ್ನು ಮಾದರಿ ಹಳ್ಳಿಯಾಗಿ ರೂಪಿಸಿ, ತನ್ನಿಡೀ ಬದುಕನ್ನೇ ಸಮಾಜಕ್ಕಾಗಿ ಮೀಸಲಿಟ್ಟ ಈ ಹಿರಿಯರು ದೆಹಲಿಯ ಜಂತರ್ ಮಂತರ್ ಬಳಿ ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಕುಳಿತಿದ್ದಾರೆ.

ಭ್ರಷ್ಟಾಚಾರವೆಂಬ ಮಹಾ ಪಿಡುಗು
 
ಭಾರತದಲ್ಲಿ ದಿನಗಳೆದಂತೆ ಭ್ರಷ್ಟಾಚಾರವೆನ್ನುವುದು ಆಳವಾಗಿ ಬೇರೂರತ್ತಲೇ ಹೋಗುತ್ತಿದೆ. ಈ ರೋಗವು ರಾಜಕಾರಣದ ಮೊಗಸಾಲೆಯನ್ನೂ ಬಿಟ್ಟಿಲ್ಲದಿರುವಾಗ, ನಾಡಿನ ವ್ಯವಸ್ಥೆಗಳನ್ನು ಕಟ್ಟಿ ನಿರ್ವಹಿಸಬೇಕಾದ ಜನಪ್ರತಿನಿಧಿ ಸಭೆಗಳು ಕೂಡಾ ಭ್ರಷ್ಟಾಚಾರವನ್ನು ಇಲ್ಲವಾಗಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲವೆಂಬ ನೋವು ಜನರಲ್ಲಿದೆ. ಇಡೀ ವ್ಯವಸ್ಥೆಯೇ ಭ್ರಷ್ಟಾಚಾರದ ಕ್ಯಾನ್ಸರ್ ತಗುಲಿ ನಲುಗುತ್ತಿರುವಾಗ ಇದಕ್ಕೊಂದು ಮದ್ದು ಬೇಕು ಎಂದು ಜನಾಂದೋಲನ ರೂಪಿಸುವಲ್ಲಿ ಈ ಹಿರಿಯ ಜೀವ ತೊಡಗಿದೆ.
ಜನ್ ಲೋಕಪಾಲ್ ಮಸೂದೆಯನ್ನು ಸರಿಯಾಗಿ ರೂಪಿಸಿ ಜಾರಿಗೊಳಿಸಲು ಪ್ರಧಾನಮಂತ್ರಿಗಳಿಗೆ ಮೊರೆಯಿಡುತ್ತಿದ್ದರೂ ಅದು ಫಲಿಸಲಿಲ್ಲವೆಂದು ಇದೀಗ ಅಣ್ಣಾ ಹಜಾರೆಯವರು ಸಾಯೋವರೆಗೆ ಉಪವಾಸ ಮಾಡುವುದಾಗಿ ಘೋಷಿಸಿ, ಅದರಂತೆ ಸತ್ಯಾಗ್ರಹ ಆರಂಭಿಸಿದ್ದಾರೆ.
7
ಏಪ್ರಿಲ್

ರಾಜು ಪ್ರಿಯಾಂಕಳಾಗಿ ಬದಲಾದ ರೀತಿ…!

-ನಾಗರಾಜ್, ಬೆಂಗಳೂರು

ಆರ್. ಜೆ. ಪ್ರಿಯಾಂಕಳ ಸಾಧನೆ

ನಮಸ್ಕಾರ ಕೇಳುಗರೇ ನೀವು ಕೇಳ್ತಾ ಇದ್ದೀರಾ ೯೦.೪ ಕಂಪನಾಂಕಗಳಲ್ಲಿ ರೇಡಿಯೊ ಆಕ್ಟೀವ್. ಇದೇನಪ್ಪ ನ್ಯೂಸ್ ಲೆಟರ್‌ನಲ್ಲಿ ರೇಡಿಯೋ ಸ್ಟೈಲ್ ಅಂತಾ ಇದ್ದೀರಾ ಇಲ್ಲ ರೀ ಇದು ನಮ್ಮ ನಿಮ್ಮೆಲ್ಲರ ನೆಚ್ಚಿನ ಹುಡುಗಿ ರೇಡಿಯೋ ಜಾಕಿ ಪ್ರಿಯಾಂಕ ಸ್ಟೈಲ್. ಇದ್ಯಾರು ಪ್ರಿಯಾಂಕ ಅಂತ ಯೋಚಿಸ್ತಾ ಇದ್ದಿರಾ ? ಅವರೇ ರೀ ನೆನ್ನೆ ಮೊನ್ನೆ ತನಕ ಲೈಂಕಿಕ ವೃತ್ತಿಯನ್ನು ಮಾಡುತ್ತಿದ್ದ ಟ್ರಾನ್ಸ್ ಜೆಂಡರ್ ಪ್ರಿಯಾಂಕ.

ರಾಜು ಪ್ರಿಯಾಂಕಳಾಗಿ ಬದಲಾದ ರೀತಿ
ಪ್ರಿಯಾಂಕಳ ಮೊದಲ ಹೆಸರು ರಾಜು ಓದಿದ್ದು ೯ನೇ ತರಗತಿ ಮಾತ್ರ ತಾನು ೯ನೇ ತರಗತಿಯಲ್ಲಿ ವಿದ್ಯಾಬ್ಯಾಸ ಮಾಡ್ತಾ ಇರುವಾಗ ಎಲ್ಲರಂತೆ ತನ್ನಲ್ಲಿ ಅನೇಕ ಬದಲಾವಣೆಗಳು ಆಗತೊಡಗಿದವು ತನಗೆ ಹುಡುಗಿಯ ಆವಭಾವ ಉಂಟಾಗುತ್ತಿತ್ತು. ಬೆರಳುಗಳಿಗೆ ನೈಲ್ ಪಾಲೀಷ್ ಹಾಕಿಕೊಳ್ಳುವುದು ಲಿಪ್‌ಸ್ಟೀಕ್ ಹಚ್ಚಿಕೊಳ್ಳಬೇಕು ಹೀಗೆ ಅನೇಕ ರೀತಿಯಾಗಿ ಹುಡುಗಿಯರ ಥರಾ ಮೇಕಪ್ ಮಾಡಿಕೊಳ್ಳತೊಡಗಿದ ಜೊತೆಗೆ ತನ್ನ ಕೈಲಿ ಹುಡುಗರು ಮಾಡುವ ಸಾಮಾನ್ಯ ಕೆಲಸಗಳನ್ನು ಮಾಡುವುದು ಕಷ್ಟವೆನಿಸಿತು. ಅದೇ ರಂಗೋಲಿ ಹಾಕು, ಪಾತ್ರೆ ತೊಳಿ, ಮನೆ ಒರೆಸು,  ಬಟ್ಟೆ ಒಗಿ ಅಂದ್ರೆ ಎಲ್ಲಿಲ್ಲದ ಸಂತೋಷ. ಹೀಗೆ ರಾಜುವಿನಲ್ಲಿನ ಬದಲಾವಣೆಗಳನ್ನು ಕಂಡ ಸ್ನೇಹಿತರು ಹಿಯಾಳಿಸತೊಡಗಿದರು, ಶಿಕ್ಷಕರು ಸಹ ಕೀಳಾಗಿ ಕಂಡರು ಅಂತೂ ಇಂತು ೯ನೇ ತರಗತಿಯಲ್ಲಿ ಓದುತ್ತಿದ್ದ ರಾಜು ತನ್ನ ಪೋಷಕರ ಬಳಿ ತನ್ನಲ್ಲಾಗುತ್ತಿರುವ ಬದಲಾವಣೆಗಳು, ಆಸೆಗಳು ಎಲ್ಲವನ್ನೂ ಎಲೆ ಎಲೆಯಾಗಿ ಬಿಚ್ಚಿಟ್ಟ ಆದ್ರೆ ಇದಕ್ಕೆ ಪೋಷಕರ ಬೆಂಬಲ ಸಿಗಲಿಲ್ಲ. ಇದನ್ನು ಅರಿತ ೧೪ ವರ್ಷದ ರಾಜು ೯ನೇ ತರಗತಿಗೆ ಮದ್ಯದಲ್ಲೇ ತಿಲಾಂಜಲಿ ಆಡಿ ಮನೆ ಬಿಟ್ಟು ತನ್ನದೇ ಪ್ರಪಂಚಕ್ಕೆ ಓಡಿ ಹೋದ ಮತ್ತಷ್ಟು ಓದು »

6
ಏಪ್ರಿಲ್

ಬನ್ನಿ,ಅಣ್ಣನ ಜೊತೆ ನಿಲ್ಲೋಣ…

6
ಏಪ್ರಿಲ್

ಇಗೋ,ಇದರಲ್ಲಿ ಮುಂದಿದೆ…

– ಕಿರಣ ಬಾಟ್ನಿ, ಬನವಾಸಿ ಬಳಗ

’ನಿಲುಮೆ’ಯಲ್ಲಿ ಕನ್ನಡದ ಸೊಲ್ಲರಿಮೆಯ ಬಗ್ಗೆ ಚರ್ಚೆಯಾಗುತ್ತಿರುವುದು ಒಳ್ಳೆಯ ಸಂಗತಿ. ಅಕ್ಟೋಬರ್ ೨೦೦೮ರಲ್ಲಿ ನಾನು ಬರೆದ ಒಂದು ಬರಹವನ್ನು ಬನವಾಸಿ ಬಳಗದ ಗೆಳೆಯರಾದ ಶ್ರೀ ಆನಂದ್ ಜೋಶಿಯವರು ಈ ಚರ್ಚೆಗೆ ಸರಿಹೊಂದುತ್ತದೆ ಎಂದು ಪ್ರಕಟಣೆಗೆ ಕಳುಹಿಸಿ ಅದು ಪ್ರಕಟಿಸಲಾಗಿ, ಆ ಬರಹದಲ್ಲಿ ಬಂದ ಕೆಲವು ವಿಶಯಗಳ ಬಗ್ಗೆ, ಮತ್ತು ಬನವಾಸಿ ಬಳಗದ ನಿಲುವುಗಳ ಬಗ್ಗೆ ತಮ್ಮ ೪/೪/೨೦೧೧ರ ಬರಹದಲ್ಲಿ ಶ್ರೀ. ಅಜಕ್ಕಳ ಗಿರೀಶ ಬಟ್ಟರು ಪ್ರತಿಕ್ರಿಯೆ ನೀಡಿರುವುದರಿಂದ ಈ ಬರಹವನ್ನು ಬರೆಯುತ್ತಿದ್ದೇನೆ.

ಆ ಬರಹದಲ್ಲಿ ಗಿರೀಶಬಟ್ಟರನ್ನು ಕುರಿತು ನಾನು ಯಾವ ಮಾತನ್ನೂ ಆಡಿಲ್ಲ; ಅದನ್ನು ಬರೆದಾಗ ಅವರು ತಮ್ಮ ಹೊತ್ತಗೆಯನ್ನು ಪ್ರಕಟಿಸಿದ್ದರ ನೆನಪಿಲ್ಲ, ಅವರ ಹೆಸರೂ ನನಗಾಗ ಗೊತ್ತಿರಲಿಲ್ಲ. ಆದುದರಿಂದ ಆ ಬರಹದಲ್ಲಿ ಶಂಕರಬಟ್ಟರಿಗೆ ಗಿರೀಶಬಟ್ಟರು ಕೊಟ್ಟಿರುವ ಉತ್ತರಗಳ ವೈಗ್ನಾನಿಕತೆ-ಅವೈಗ್ನಾನಿಕತೆಗಳ ಬಗ್ಗೆ ನಾನು ಮಾತನಾಡಿರಲು ಸಾದ್ಯವೇ ಇರಲಿಲ್ಲ. ಆದರೆ ಶ್ರೀ. ಕೆ. ವಿ. ತಿರುಮಲೇಶರ ಒಂದು ಬರಹವನ್ನು ಕುರಿತು ಆ ಮಾತುಗಳನ್ನು ಆಡಿದ್ದು ನಿಜ, ಅವರು ಪ್ರತಿನಿದಿಸುವ ’ಹಳೆ-ಶಾಲೆ’ಯವರೆಲ್ಲರನ್ನೂ ಕುರಿತು ಆ ಮಾತುಗಳನ್ನು ಆಡಿದ್ದು ನಿಜ. ಈಗ ಗಿರೀಶಬಟ್ಟರಿಗೆ ಆ ಮಾತುಗಳು ತಮ್ಮನ್ನು ಕುರಿತೇ ಆಡಿದ್ದು ಎಂದು ಅನಿಸಿರುವುದರಲ್ಲಿ ಹಳೆಯ ಬರಹವನ್ನು ಹೊಸ ಚರ್ಚೆಯೊಂದರಲ್ಲಿ ಪ್ರಕಟಿಸಿದ್ದು ಒಂದು ಕಾರಣವಾದರೆ, ಮತ್ತೊಂದು ಕಾರಣ ನಿಜಕ್ಕೂ ಗಿರೀಶಬಟ್ಟರು ಆ ’ಹಳೆ-ಶಾಲೆ’ಗೇ ಸೇರುತ್ತಾರೆ ಎನ್ನುವುದು. ಮೊದಲನೆಯ ಕಾರಣಕ್ಕೆ ಬನವಾಸಿ ಬಳಗದ ಪರವಾಗಿ ನಾನು ಗಿರೀಶಬಟ್ಟರಲ್ಲಿ ಕ್ಶಮೆ ಕೇಳಿಕೊಳ್ಳುತ್ತ, ಎರಡನೆಯ ಕಾರಣದಿಂದ ಪ್ರೇರಿತರಾಗಿ ಅವರು ತಮ್ಮ ೪/೪/೨೦೧೧ರ ಬರಹದಲ್ಲಿ ಅದೇ ಹಳೆಯ ವಾದವನ್ನು ಮಂಡಿಸಿರುವುದರಿಂದ ಅದಕ್ಕೆ ಇಲ್ಲಿ ಮರುವುತ್ತರ.

ಮತ್ತಷ್ಟು ಓದು »

5
ಏಪ್ರಿಲ್

ಯಾವುದು ನಿಜವಾದ ದೇಶಪ್ರೇಮ ?

– ವಸಂತ್ ಶೆಟ್ಟಿ  

ವಿಶ್ವ ಕಪ್ ಗೆದ್ದ ಭಾರತಕ್ಕೆ ಅಭಿನಂದನೆಗಳು. ಹಾಗೆಯೇ ಕೊನೆಯವರೆಗೂ ಅತ್ಯಂತ ಸ್ಪರ್ಧಾತ್ಮಕ ಕ್ರಿಕೆಟ್ ಆಡಿದ ಶ್ರೀಲಂಕೆಗೂ ಶುಭಾಶಯಗಳು. ಮೊನ್ನೆ ಮೊನ್ನೆಯ ಪಾಕಿಸ್ತಾನದ ಎದುರಿನ ಸೆಮಿ ಫೈನಲ್ ಬಗ್ಗೆ ಮಾಧ್ಯಮಗಳಲ್ಲಿ ಇದ್ದ ಕ್ರೇಜ್, ಇದೊಂದು ಯುದ್ಧ ಅನ್ನುವ ಮನಸ್ಥಿತಿ ಫೈನಲ್ ಪಂದ್ಯದಲ್ಲಿ ಅಷ್ಟಾಗಿ ಕಾಣಲಿಲ್ಲ. ಸೆಮಿ ಫೈನಲ್ ನಲ್ಲಿ ಪಾಕಿಸ್ತಾನವನ್ನು ಸೋಲಿಸಿದರೆ ಸಾಕು, ಫೈನಲ್ ಗೆಲ್ಲದಿದ್ದರೂ ಆದೀತು ಅನ್ನುವ ಅನಿಸಿಕೆಗಳನ್ನು ಅಲ್ಲಲ್ಲಿ ಕಂಡೆ. ಹಾಗೆಯೇ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿರುವ ಭಾರತಕ್ಕೆ ಈ ಕಪ್ಪು ಬೇಕೇ ಬೇಕು ಅನ್ನುವ ತರಹದ ಚರ್ಚೆಗಳನ್ನು ಅಲ್ಲಲ್ಲಿ ಕಂಡೆ. ಕೊನೆಯಲ್ಲಿ, ಕಪ್ ಗೆದ್ದ ತಂಡಕ್ಕೆ ಹೆಚ್ಚಿನ ಸರ್ಕಾರಗಳು (ನಮ್ಮ ರಾಜ್ಯ ಸರ್ಕಾರವು ಸೇರಿದಂತೆ ) ಬಹುಮಾನದ ಸುರಿಮಳೆ ಗೈದು ತಮ್ಮ ಅಸಂಖ್ಯ ಪಾಪುಲಿಸ್ಟ್ ಕ್ರಮಗಳಿಗೆ ಇನ್ನೊಂದು ಸೇರ್ಪಡೆ ಮಾಡಿದ್ದನ್ನು ಕಂಡೆ. ಒಂದು ಆಟಕ್ಕೆ ಈ ಮಟ್ಟದ ಗಮನ, ಆದ್ಯತೆ ಕೊಡುವಷ್ಟರಲ್ಲಿ ಅದರ ಅರ್ಧದಷ್ಟು ಗಮನ ಈ ದೇಶದ, ಅದರ ಜನರ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಹುಡುಕುವ ನಿಟ್ಟಿನಲ್ಲೂ ಕೊಟ್ಟಿದ್ದಲ್ಲಿ ನಮ್ಮೆದುರು ಇರುವ ಸಮಸ್ಯೆಗಳಲ್ಲಿ ಕೆಲವಕ್ಕಾದರು ಪರಿಹಾರ ಸಿಕ್ಕಿರುತಿತ್ತೇನೋ ಅನ್ನಿಸಿತು.

ಮತ್ತಷ್ಟು ಓದು »