ದೇವಾಲಯಗಳ ಮೇಲೆ ಸರಕಾರದ ವಕ್ರದೃಷ್ಟಿ
ಡಾ. ಸಂತೋಷ್ ಕುಮಾರ್ ಪಿ.ಕೆ
ಶಿವಮೊಗ್ಗ
ಕಳೆದ ಹಲವಾರು ದಶಕಗಳಿಂದ ಭಾರತದಲ್ಲಿ ಒಂದು ವಿಚಾರ ಚಾಲ್ತಿಯಲ್ಲಿದೆ, ಅದೆಂದರೆ ಸರ್ಕಾರವು ದೇವಾಲಯಗಳನ್ನು ತನ್ನ ಅಧೀನಕ್ಕೆ ತೆಗೆದುಕೊಳ್ಳುವುದು. ಇದರ ಕುರಿತು ವ್ಯಾಪಕವಾದ ಚರ್ಚೆಯಾಗಲಿ ಅಥವಾ ವಿರೋಧವಾಗಲಿ ಆಗಿಲ್ಲವಾದ್ದರಿಂದ ಸರ್ಕಾರಗಳು ಕಾನೂನಿನ ಹೆಸರಲ್ಲಿ ಸ್ವೇಚ್ಚಾಚಾರವಾಗಿ ದೇವಾಲಯಗಳ ಮೇಲೆ ಆಕ್ರಮಣ ಮಾಡುತ್ತಾ ಬಂದಿವೆ. ಮಹಮದ್ ಘೋರಿ, ಘಜ್ನಿ ಇವರುಗಳ ದಾಳಿಯಲ್ಲಿ ಭಾರತದ ದೇವಾಲಯಗಳು ಭೌತಿಕವಾಗಿ ನಾಶವಾದರೆ, ಆಧುನಿಕ ಕಾಲಘಟ್ಟದಲ್ಲಿ ಬಂದ ಸರ್ಕಾರಗಳಿಂದ ಇಡೀ ದೇವಾಲಯದ ಪರಂಪರೆ ನಾಶ ಹೊಂದುತ್ತಿರುವುದು ಖಚಿತ. ಇತ್ತೀಚೆಗಷ್ಟೆ ಗೋಕರ್ಣ ದೇವಾಲಯವನ್ನು ಮಠದ ಸುಪರ್ದಿಯಿಂದ ಬಿಡುಗಡೆಗೊಳಿಸಿ ಸರ್ಕಾರ ತನ್ನ ವಶಕ್ಕೆ ತೆಗೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅದರ ಕುರಿತು ಚರ್ಚಿಸಲು ಸಕಾಲ ಒದಗಿದೆ. ಮತ್ತಷ್ಟು ಓದು 
ಪರಿಸರ ಶಿಕ್ಷಣ: ಸಾಧನೆ ಮತ್ತು ಸವಾಲುಗಳು
– ಕಲ್ಗುಂಡಿ ನವೀನ್
ಬೆಂಗಳೂರು
ದೂರವಾಣಿ: 944 89 05214
ಇಂದು ಪರಿಸರ, ಪರಿಸರ ಮಾಲೀನ್ಯ ಎಂದರೆ ಅದನ್ನು ವಿವರಿಸಲು ಹೆಚ್ಚು ಶ್ರಮಪಡಬೇಕಿಲ್ಲ. ಆ ಕುರಿತಾದ ಜಾಗೃತಿ ಜನಸಾಮಾನ್ಯರಲ್ಲಿ ಇದೆ. ಇದೊಂದು ತೀರಾ ಇತ್ತೀಚಿನ ಸಂತೋಷದಾಯಕ ಬೆಳವಣಿಗೆ ಎಂದರೆ ಪರಿಸರ ಕುರಿತಾದ ಸಕಾರಾತ್ಮಕ ನಿಲುವು. ಹಿಂದೆ ಪರಿಸರ ಎಂಜಿನಿಯರ್ ಒಬ್ಬರು ಹೇಳುತ್ತಿದ್ದರು: “..ನಾವು ಪರಿಸರದ ಪರವಾಗಿ ಮಾತನಾಡಿದರೆ, ನಮ್ಮನ್ನು ಕರುಣೆಯಿಂದ ನೋಡಲಾಗುತ್ತಿತ್ತು” ಎಂದು! ಇಂದು ಆ ಸ್ಥಿತಿ ಖಂಡಿತಾ ಇಲ್ಲ. ಈ ಜಾಗೃತಿ ಹದಗೆಡುತ್ತಿರುವ ನಮ್ಮ ಪರಿಸರ ವ್ಯವಸ್ಥೆಯನ್ನು ಸರಿಪಡಿಸುವಷ್ಟು ದೃಢವಾಗಿದೆಯೇ ಎಂಬ ಪ್ರಶ್ನೆ ಬೇರೆ! ಆದರೆ ಆ ಜಾಗೃತಿ ಮೂಡಿರುವುದು ಗಮನಾರ್ಹ ಮತ್ತು ಸಂತೋಷದಾಯಕ ಅಂಶ. ಮತ್ತಷ್ಟು ಓದು 
ದಲಿತರ ‘ದೇಗುಲದ ಪ್ರವೇಶ’ದ ಸುತ್ತಾಮುತ್ತ… ( ಭಾಗ ೩ )
– ಡಾ. ಮಾಧವ ಪೆರಾಜೆ
ದಲಿತರ ‘ದೇಗುಲದ ಪ್ರವೇಶ’ದ ಸುತ್ತಾಮುತ್ತ… ( ಭಾಗ ೧ )
ದಲಿತರ ‘ದೇಗುಲದ ಪ್ರವೇಶ’ದ ಸುತ್ತಾಮುತ್ತ… ( ಭಾಗ ೨ )
ಎರಡು ಭಿನ್ನ ಶಾಸನಗಳು:
ಆದರೆ ಈ ಮಾತಿಗೆ ಅಪವಾದಗಳಾಗಿ ಭಿನ್ನ ರಾಗವನ್ನು ಹಾಡುವ ಶಾಸಗಳೂ ಇಲ್ಲದಿಲ್ಲ. ಸದ್ಯಕ್ಕೆ ಅಂತಹ ಎರಡು ಶಾಸನಗಳು ನನ್ನ ಗಮನಕ್ಕೆ ಬಂದಿದೆ. ಮೊದಲನೆಯದು ಸಿರಗುಪ್ಪದ ಶಾಸನ, ಎರಡನೆಯದು ಹರಪನಹಳ್ಳಿಯ ಶಾಸನ. ಸಿರಗುಪ್ಪದ ಶಾಸನವು ಶಂಭುಲಿಂಗೇಶ್ವರ ದೇವಾಲಯದಲ್ಲಿರುವುದಾಗಿ ಅದರ ಕಾಲವು ಕ್ರಿ.ಶ. 1199 ಎಂದು ತಿಳಿದು ಬರುತ್ತದೆ. ಈ ಶಾಸನದ ಕೊನೆಯಲ್ಲಿ …… ಮತ್ತಷ್ಟು ಓದು 
ದಲಿತರ ‘ದೇಗುಲದ ಪ್ರವೇಶ’ದ ಸುತ್ತಾಮುತ್ತ… ( ಭಾಗ ೧ )
– ಡಾ. ಮಾಧವ ಪೆರಾಜೆ
‘ದೇವಾಲಯ ಪ್ರವೇಶ’ ಎನ್ನುವ ಸಂಗತಿಯು ಈಗ ಒಂದು ಜ್ವಲಂತ ಸಮಸ್ಯೆ ಎನ್ನುವ ಹಾಗೆ ಪ್ರತಿಬಿಂಬಿತವಾಗುತ್ತಿದೆ. ಕನ್ನಡದ ಜನಪ್ರಿಯ ದಿನಪತ್ರಿಕೆಯಾದ ಪ್ರಜಾವಾಣಿಯಲ್ಲಿ ‘ದೇಗುಲ ಪ್ರವೇಶವೂ ಶುದ್ಧೀಕರಣವೂ’ ಎನ್ನುವ ಲೇಖನ (ಲೇ: ಹೊಸಕೆರೆ ನಂಜುಂಡೇಗೌಡ, ದಿ.6.10.14) ಪ್ರಕಟವಾಗಿದೆ. ಈ ಹಿನ್ನೆಲೆಯಲ್ಲಿ ಇದು ಅತ್ಯಂತ ಸಮಕಾಲೀನ ಸಂಗತಿಯಾಗಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಈ ಉಪನ್ಯಾಸಕ್ಕೆ ಸಂಬಂಧಿಸಿದ ಹಾಗೆ ಶೀರ್ಷಿಕೆಯ ಹಾಗಿರುವ ‘ಬಾಗಿಲನು ತೆರೆದು’ ಎನ್ನುವ ಕೀರ್ತನೆಯ ಸಾಲೊಂದು, ಈ ಉಪನ್ಯಾಸಕ್ಕೆ ಬಾಗಿಲೇ ಆಗುತ್ತದೆ ಎನ್ನುವ ಹಿನ್ನೆಲೆಯಲ್ಲಿ ಆ ಕೀರ್ತನೆಯನ್ನು ಪೂರ್ಣವಾಗಿ ಇಲ್ಲಿ ಉದ್ಧರಿಸಲಾಗಿದೆ. ಮತ್ತಷ್ಟು ಓದು 
ಸರ್ಜಿಕಲ್ ಆಪರೇಶನ್
– ವಿನಾಯಕ ಹಂಪಿಹೊಳಿ
ಸರ್ಜರಿ ಎಂದರೆ ಶಸ್ತ್ರಚಿಕಿತ್ಸೆ. ದೇಹದ ಒಂದು ಭಾಗಕ್ಕೆ ಚಿಕಿತ್ಸೆ ಅಗತ್ಯವಾದಲ್ಲಿ ಅಲ್ಲಷ್ಟೇ ದೇಹವನ್ನು ಕೊಯ್ಯುವಂತೆ, ಸೈನಿಕ ಕಾರ್ಯಾಚರಣೆಯಲ್ಲಿಯೂ ಒಂದಾನೊಂದು ಪ್ರದೇಶದಲ್ಲಷ್ಟೇ ನಡೆಸುವ ಸೀಮಿತ ಕಾರ್ಯಾಚರಣೆಯೇ ಸರ್ಜಿಕಲ್ ಆಪರೇಶನ್. ಅಮೇರಿಕದ ಸೈನ್ಯ ಒಸಾಮಾ ಬಿನ್ ಲಾಡೆನ್ ವಾಸವಾಗಿರುವ ಸ್ಥಳದ ಮಾಹಿತಿ ತಿಳಿದಾಗ ಹೀಗೆಯೇ ದಾಳಿ ಮಾಡಿತ್ತು. ಈ ಹಿಂದೆ ಇರಾಕಿನಲ್ಲಿ ನ್ಯೂಕ್ಲಿಯರ್ ಚಟುವಟಿಕೆಗಳು ನಡೆಯುತ್ತಿರುವ ಮಾಹಿತಿ ಸಿಕ್ಕಾಗ ಇಸ್ರೇಲ್ ದೇಶವು ಒಪೆರಾ ಕಾರ್ಯಾಚರಣೆಯನ್ನು ರೂಪಿಸಿ, ತನ್ನ ವಾಯುಸೇನೆಯನ್ನು ಉಪಯೋಗಿಸಿಕೊಂಡು ಆ ನ್ಯೂಕ್ಲಿಯರ್ ರಿಯಾಕ್ಟರನ್ನು ಧ್ವಂಸ ಮಾಡಿ ಬಂದಿತ್ತು. ಇಸ್ರೇಲಿನ ವಿಮಾನವೊಂದನ್ನು ಅಪಹರಿಸಿ ದೂರದ ಎಂಟೆಬ್ಬೆಯಲ್ಲಿ ಇಳಿಸಿದಾಗ ಆಪರೇಶನ್ ಥಂಡರ್ಬೋಲ್ಟ್ ಯೋಜಿಸಿ ಏಕಾಏಕಿ ಅಲ್ಲಿನ ಭಯೋತ್ಪಾದಕರ ಮೇಲೆ ದಾಳಿ ಮಾಡಿ ಬಂಧಿತರನ್ನು ಬಿಡುಗಡೆಗೊಳಿಸಿತು. ಮತ್ತಷ್ಟು ಓದು 
ವೈಟ್ ಕಾಲರ್ಡ್ ಕಾರ್ಮಿಕರ ಸಂಕಟ ಕೇಳುವವರ್ಯಾರು?
– ರಾಕೇಶ್ ಶೆಟ್ಟಿ
ಸೆಪ್ಟಂಬರ್ ೨ರಂದು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಭಾರತ್ ಬಂದ್’ಗೆ ಕರೆ ಕೊಟ್ಟಿದ್ದವು, ಕಾರ್ಮಿಕರು ತಮ್ಮ ತಮ್ಮ ಸಂಘಟನೆಗಳೊಂದಿಗೆ ಬೀದಿಗಿಳಿದಿದ್ದರೇ, ಬಹಳಷ್ಟು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಐಟಿಯಂತಹ ಇನ್ನಿತರ ‘ವೈಟ್ ಕಾಲರ್’ ಕಾರ್ಮಿಕರಿಗೆ ಅವತ್ತು ಕೆಲಸದ ದಿನವೇ ಆಗಿತ್ತು. ಅಂದು ಬೆಳಗ್ಗೆ ಸುದ್ದಿವಾಹಿನಿಯಲ್ಲಿ ಕೆಲಸ ಮಾಡುತ್ತಿರುವ ಮಿತ್ರರೊಬ್ಬರಿಗೆ ಕಾರ್ಯನಿಮಿತ್ತವಾಗಿ ಕರೆ ಮಾಡಿ, ಎಲ್ಲಿದ್ದೀರಿ? ಎಂದೆ. ಇಲ್ಲೇ ಮೆಜಿಸ್ಟಿಕ್ ಸುತ್ತ-ಮುತ್ತ ತಿರುಗಾಡ್ತ ಇದ್ದೀನಿ, ಭಾರತ್ ಬಂದ್ ಎಫೆಕ್ಟ್ ಜನ ಸಾಮಾನ್ಯರಿಗೆ ಹೇಗೆ ಆಗುತ್ತಿದೆ ಅಂತ ತೋರಿಸಬೇಕಲ್ಲ ಎಂದರು. ವಿಚಿತ್ರ ನೋಡಿ ಬ್ಲ್ಯೂ-ವೈಟ್ ಇತ್ಯಾದಿ ಎಲ್ಲಾ ಬಣ್ಣದ ಕಾರ್ಮಿಕರ ಬವಣೆಗಳ ಬಗ್ಗೆ ವರದಿ ಮಾಡುವ ಮಾಧ್ಯಮದ ಗೆಳೆಯರಿಗೆ ತಮ್ಮದೇ ಪತ್ರಿಕೋದ್ಯಮದ ಸಮಸ್ಯೆಗಳನ್ನು ಬಹಿರಂಗವಾಗಿ ಹೇಳಿಕೊಳ್ಳಲು, ಪ್ರತಿಭಟಿಸಲೂ ಆಗುವುದಿಲ್ಲ. ಇಂತ ಸಮಸ್ಯೆಗಳ ಬಗ್ಗೆ ಏನಿದ್ದರೂ ಅವರು ಖಾಸಗಿಯಾಗಿ ಮಾತನಾಡಬಲ್ಲರೇ ಹೊರತು ಸಾರ್ವಜನಿಕವಾಗಿಯಲ್ಲ. ಯಾಕೆಂದರೆ ಮಾಧ್ಯಮಗಳಲ್ಲಿ ಕೆಲಸ ಮಾಡುವವರು Blue Collar Worker ಗಳಲ್ಲ ಅವರ ಕಾರ್ಮಿಕ ಹಕ್ಕುಗಳಿಗಾಗಿ ಒಂದು ಕಾರ್ಮಿಕ ಸಂಘಟನೆಯೂ ಇಲ್ಲ. ಇದು ಕೇವಲ ಮಾಧ್ಯಮದಲ್ಲಿರುವ White Collar Worker ಗಳಿಗೆ ಸಂಬಂಧಿಸಿದ ಸಮಸ್ಯೆಯಲ್ಲ. ಸಿಲಿಕಾನ್ ಸಿಟಿಯೆಂದು ಕರೆಯಲ್ಪಡುವ ಬೆಂಗಳೂರಿನ ಸಾಫ್ಟ್’ವೇರ್ ರಂಗದಂತಹ ಖಾಸಗಿ ಕಚೇರಿಗಳಲ್ಲಿ ಕೆಲಸ ಮಾಡುವವರ ಕತೆಯೂ ಇದೇ. ಮತ್ತಷ್ಟು ಓದು 
ಮದ್ದರೆಯದಿದ್ದರೆ ಈ ಮಾವೋವ್ಯಾಧಿ ನಿದ್ದೆಗೆಡಿಸಲಿದೆ ಎಚ್ಚರ!
– ರೋಹಿತ್ ಚಕ್ರತೀರ್ಥ
ಎರಡು ಸುದ್ದಿಗಳಿವೆ. ಒಂದು – ಉರಿ ಸೇನಾನೆಲೆಯ ಮೇಲೆ ನಾಲ್ಕು ಮಂದಿ ಮುಸ್ಲಿಂ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 17 ಸೈನಿಕರು ಹತರಾಗಿದ್ದಾರೆ. ಎರಡು – ಭಾರತದ ನಕ್ಸಲ್ ಉಗ್ರರು ಜಗತ್ತಿನ ಭಯೋತ್ಪಾದನೆಯ ಪಟ್ಟಿಯಲ್ಲಿ ಕಂಚಿನ ಪದಕವನ್ನು ಜಸ್ಟ್ ಮಿಸ್ ಮಾಡಿಕೊಂಡು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಇವೆರಡರಲ್ಲಿ, ನಕ್ಸಲರ ಸಮಸ್ಯೆಯೇ ದೊಡ್ಡದು ಅನಿಸಿದ್ದರಿಂದ ಅದನ್ನು ಈ ವಾರದ ಅಂಕಣಕ್ಕೆ ಆಯ್ದುಕೊಂಡಿದ್ದೇನೆ. ಯಾಕೆಂದರೆ ಹೊರಗಿನ ಶತ್ರುಗಳನ್ನು ಪ್ರತಿದಾಳಿ ಮಾಡಿಯೋ ಯುದ್ಧ ಘೊಷಿಸಿಯೋ ತಹಬದಿಗೆ ತರಬಹುದೆನ್ನೋಣ; ಆದರೆ, ತಾಯ್ನಾಡಿನ ಒಳಗೇ ಇದ್ದುಕೊಂಡು ಒರಲೆಯಂತೆ ದೇಶವನ್ನು ಕೊರೆದು ಪುಡಿಗುಟ್ಟುವ ಆಂತರಿಕ ಶತ್ರುಗಳನ್ನು ಬಗ್ಗುಬಡಿಯುವುದು ಹೇಗೆ? 2015ರಲ್ಲಿ ಭಾರತದಲ್ಲಿ ನಡೆದ 791 ಭಯೋತ್ಪಾದನಾ ಕೃತ್ಯಗಳಲ್ಲಿ 43% ಅನ್ನು ನಕ್ಸಲೈಟ್ ಸಂಘಟನೆಗಳೇ ಮಾಡಿವೆ ಎಂದು ಅಂತಾರಾಷ್ಟ್ರೀಯ ವರದಿಯೊಂದು ಹೇಳುತ್ತಿದೆ. ಒಂದೇ ವರ್ಷದಲ್ಲಿ ಇವರು ನಡೆಸಿರುವ ದಾಳಿಗಳು 343; ಇವರ ಅಟ್ಟಹಾಸಕ್ಕೆ ಬಲಿಯಾಗಿ ಶವವಾಗಿ ಮಲಗಿದ ಅಮಾಯಕರ ಸಂಖ್ಯೆ 176. 2010ರಿಂದ 2015ರವರೆಗಿನ ಅವಧಿಯಲ್ಲಿ ದೇಶದೊಳಗೆ ನಡೆದ ಭಯೋತ್ಪಾದನಾ ಕೃತ್ಯಗಳಲ್ಲಿ 2162 ನಾಗರಿಕರು, 802 ಭದ್ರತಾ ಸಿಬ್ಬಂದಿ ಹತರಾಗಿದ್ದಾರೆಂದು ಕೇಂದ್ರದ ಗೃಹಸಚಿವಾಲಯದ ವರದಿ ಹೇಳುತ್ತಿದೆ. ಜಗತ್ತಿನಲ್ಲಿ ತಾಲಿಬಾನ್, ಐಸಿಸ್ ಮತ್ತು ಬೊಕೋ ಹರಾಮ್ ಎಂಬ ಉಗ್ರಗಾಮಿ ಸಂಘಟನೆಗಳ ನಂತರದ ಸ್ಥಾನವನ್ನು ಭಾರತದ ನಕ್ಸಲ್ ಚಳವಳಿ ತನ್ನ ಮುಡಿಗೇರಿಸಿಕೊಂಡಿದೆ. ಭಾರತ ಪ್ರಪಂಚದೆದುರು ತಲೆ ತಗ್ಗಿಸುವಂಥ ವಿಚಾರವಿದು. ಕರ್ನಾಟಕದ ಸಂದರ್ಭದಲ್ಲಿ ನಕ್ಸಲೈಟ್ ಚಳವಳಿಯ ನೆಲೆ-ಬೆಲೆಗಳೇನು ಎಂಬುದನ್ನು ವಿಮರ್ಶಿಸುವುದೇ ಪ್ರಸ್ತುತ ಲೇಖನದ ಉದ್ದೇಶ. ಮತ್ತಷ್ಟು ಓದು 
ಜಮ್ಮು-ಕಾಶ್ಮೀರ (ಐತಿಹಾಸಿಕ ಸತ್ಯಗಳು ಮತ್ತು ವರ್ತಮಾನದ ತಲ್ಲಣಗಳು)
ನಿಲುಮೆ ತಂಡವು, ಮಂಗಳೂರಿನಲ್ಲಿ ( 18.09.2016 ) ರಂದು ನಡೆಸಿದ ‘ಕಾಶ್ಮೀರದ ಕುರಿತು ವಿಚಾರ ಸಂಕಿರಣ’ ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆಯವರ ಮಾತುಗಳನ್ನು ರೂಪಲಕ್ಷ್ಮೀಯರವರು ಅಕ್ಷರ ರೂಪಕ್ಕಿಳಿಸಿದ್ದಾರೆ. ಅಂದಿನ ಕಾರ್ಯಕ್ರಮದ ವಿಚಾರಗಳು ಈಗ ನಿಲುಮೆಯ ಓದುಗರ ಮುಂದೆ..
ಚಕ್ರವರ್ತಿ ಸೂಲಿಬೆಲೆಯವರ ಭಾಷಣದ ಮುಖ್ಯಾಂಶಗಳು.
ವರ್ಷಕೊಮ್ಮೆ ನಾನು ಜಮ್ಮು, ಕಾಶ್ಮೀರಕ್ಕೆ ಹೋಗೋದ್ರಿಂದ, ಅಲ್ಲಿ ನಾನು ನೋಡಿರುವ ಆಧಾರದ ಮೇಲೆ, ನನ್ನ ವಿಚಾರಗಳನ್ನು ಹೇಳ್ತೀನಿ. ಪ್ರೊಫೆಸರ್ ಪ್ರೇಮ್ ಶೇಖರ್ ಅವರು ಆಗಲೇ ಹೇಳಿದ ಪ್ರಕಾರ, ಕಾಶ್ಮೀರದಲ್ಲಿ ಮೂರು ತರಹದ ಜನಾಂಗಗಳಿವೆ. ೧. ಹಿಂದು, ೨. ಮುಸ್ಲಿಮ್ ಮತ್ತು ೩. ಬುದ್ದಿಸ್ಟ್ – ಲಡಾಕ್ ನಲ್ಲಿರುವಂತಹವರು. ಆದರೆ ಮುಸ್ಲಿಮರು ಹೇಳೋದು – ಕಾಶ್ಮೀರದಲ್ಲಿ ನಾಲ್ಕು ತರಹದ ಜನರಿದ್ದಾರೆ. ೧. ಹಿಂದೂ, ೨. ಮುಸ್ಲಿಮ್ – ಸುನ್ನಿ ಮತ್ತು ಶಿಯಾ ೩. ಲಡಾಕ್. ಪ್ರೇಮ್ ಶೇಖರ್ ಸರ್ ಹೇಳಿದ ಹಾಗೆಯೇ ಇನ್ನು ಮುಂದೆ ಕಾರ್ಗಿಲ್ ನ ಸುದ್ಧಿಗೆ ಪಾಕಿಸ್ತಾನ್ ಬರೋಲ್ಲ. ಯಾಕೆಂದರೆ ಕಾರ್ಗಿಲ್ ನಲ್ಲಿ ಹೆಚ್ಚಾಗಿರುವ ಮುಸ್ಲಿಮರು – ಶಿಯಾ ಪಂಗಡದವರು. ಪಾಕಿಸ್ತಾನದಲ್ಲಿರುವ ಮುಸ್ಲಿಮರು – ಸುನ್ನಿ ಪಂಗಡದವರು. ಕಾಶ್ಮೀರದ ಕಣಿವೆಯಲ್ಲಿರೋ ಮುಸ್ಲಿಮರು, ಪಾಕಿಸ್ತಾನದ ಮುಸ್ಲಿಮರನ್ನು ತಮ್ಮ ಮುಸಲ್ಮಾನರು ಅಂತಂದುಕೊಳ್ತಾರೆ. ಆದರೆ ಕಾರ್ಗಿಲ್ ನ ಶಿಯಾದವರಿಗೆ ಚೆನ್ನಾಗಿ ಗೊತ್ತು. ತಾವೇನಾದರೂ ಪಾಕಿಸ್ತಾನಕ್ಕೆ ಹೋದರೆ, ಇದುವರೆವಿಗೂ ಕಣಿವೆಯಲ್ಲಾದ ಅತ್ಯಾಚಾರಗಳು, ದೌರ್ಜನ್ಯಗಳನ್ನು, ಈ ಪಾಕಿಸ್ತಾನದ ಸುನ್ನಿಗಳು ತಮ್ಮ ಮೇಲೆಯೇ ನಡೆಸುತ್ತಾರೆ. ಆ ಭಯದಿಂದ ಕಾರ್ಗಿಲ್ ನ ಮುಸ್ಲಿಮರು, ಏನೇ ಆದರೂ ನಾವು ಭಾರತದಲ್ಲೇ ಇರ್ತೀವಿ. ಪಾಕಿಸ್ತಾನಕ್ಕೆ ಸೇರೋಲ್ಲ ಅಂತಾ ಹೇಳ್ತಾರೆ. ಮತ್ತಷ್ಟು ಓದು 
ಪ್ರೇತದ ಆತ್ಮ ಚರಿತೆ! (ಭಾಗ ೪)
– ಶ್ರೀಕಾಂತ್ ಶೆಟ್ಟಿ
ಪ್ರೇತದ ಆತ್ಮ ಚರಿತೆ! (ಭಾಗ ೧)
ಪ್ರೇತದ ಆತ್ಮ ಚರಿತೆ! (ಭಾಗ ೨)
ಪ್ರೇತದ ಆತ್ಮ ಚರಿತೆ! (ಭಾಗ 3)
ಆಗಷ್ಟ್ ೩೦ ೧೭೭೩ ಇಡಿ ಪುಣೆ ಗಣೇಶ ಉತ್ಸವದ ಸಂಭ್ರಮದಲ್ಲಿ ಮುಳುಗೇಳುತ್ತಿದೆ. ಕೇಸರಿ ಗುಲಾಬಿ ರಂಗಿನೋಕುಳಿಗೆ ನಗರ ನವಶೃಂಗಾರಗೊಂಡಿದೆ. ಶನಿವಾರವಾಡೆಯಲ್ಲೂ ಉತ್ಸವ ಕಳೆಗಟ್ಟಿತ್ತು. ಹಾಡು, ಕುಣಿತ, ಕೀರ್ತನೆ,ಆರತಿ, ಸಂತರ್ಪಣೆ ಭರ್ಜರಿಯಾಗಿ ನಡೆದಿತ್ತು. ಪೇಶ್ವಾಗಳ ಆರಾಧ್ಯಮೂರ್ತಿ ಚಿಂತಾಮಣಿ ಗಣಪತಿಯ ಪೂಜೆ ಆಗಷ್ಟೆ ಮುಗಿದು ಎಲ್ಲರೂ ವರ್ಷಕ್ಕಾಗುವಷ್ಟು ಸಂಭ್ರಮವನ್ನು ಮನದಲ್ಲಿ ತುಂಬಿಕೊಂಡು ಮರಳಿದರು. ವಾಡೆಯಲ್ಲಿ ಕಾವಲು ಭಟರು ಮತ್ತು ಪರಿಚಾರಕ ವರ್ಗವನ್ನು ಬಿಟ್ಟು ಉಳಿದವರೆಲ್ಲರೂ ತಮ್ಮ ತಮ್ಮ ಸ್ವಸ್ಥಾನ ಸೇರಿಕೊಂಡಿದ್ದರು. ಮಹಾ ದುರಂತವೊಂದು ನಡೆಯುವ ಮೊದಲು ಆವರಿಸುವ ಅಸಾದ್ಯ ನೀರವತೆ ವಾಡೆಯನ್ನು ಆವರಿಸಿಕೊಂಡಿತ್ತು. ರಂಗ ಮಹಲ್ ಕಡೆಯಿಂದ ಐದಾರು ದೀವಟಿಕೆಗಳು ಒಳಪ್ರವೇಶಿಸಿದವು. ಖಿಡ್ಕಿ ದರವಾಜಾ ಬಳಿ ಎರಡು ಬಟ್ಟೆ ಸುತ್ತಿದ ಮುಖಗಳು ಗೋಚರಿಸಿದವು. ಕ್ಷಣಮಾತ್ರದಲ್ಲೇ ಶನಿವಾರವಾಡೆಯ ಹಜಾರಗಳಲ್ಲಿ ಹತ್ತಾರು ಗುಂಪುಗಳ ಹೆಜ್ಜೆಯ ಸಪ್ಪಳ ಮೊಳಗಿತು. ವಾಡೆಯ ಮುಖ್ಯದ್ವಾರದ ಬಳಿ ಐವತ್ತು ಜನರಿದ್ದ ಸೇನಾ ತುಕುಡಿಯೊಂದು ಬಂದು ನಿಂತಿತು. ಗುಂಪಿನ ನಾಯಕ ಸುಮೇರು ಸಿಂಗ್ ಕಾವಲುಗಾರನ ಬಳಿ ಬಂದು ಕೂಡಲೆ ಪೇಶ್ವಾ ಅವರನ್ನು ಕಾಣಬೇಕು ತುರ್ತು ಕೆಲಸವಿದೆ ಎಂದ. ಈಗ ಪೇಶ್ವಾ ಅವರು ನಿದ್ದೆಯಲ್ಲಿದ್ದಾರೆ. ನಾಳೆ ಬಂದು ಭೇಟಿಯಾಗಿ ಎಂದ ಮುಖ್ಯದ್ವಾರದ ರಕ್ಷಣೆಯಲ್ಲಿದ್ದ ಮಹಾದಜಿ ಗೋರೆ… ಮಾತು ಪೂರ್ಣಗೊಳ್ಳುವ ಮೊದಲೇ ಸುಮೇರು ಸಿಂಗ್ ಓರೆಯಿಂದ ಕತ್ತಿ ಹೊರಬಂದು ಗೋರೆಯ ಹೊಟ್ಟೆ ಸೀಳಿ ಹಾಕಿತು. ತುಕುಡಿಯನ್ನು ಒಳನುಗ್ಗುವಂತೆ ಸುಮೇರ್ ಆದೇಶಿಸಿದ ಕೇವಲ ಹತ್ತು ನಿಮಿಷದಲ್ಲೇ ವಾಡೆ ಸುಮೇರು ಸಿಂಗ್ ಕೈವಶವಾಯಿತು. ಆ ವಾಡೆಯ ಕೆಳ ಅಂತಸ್ತಿನಲ್ಲೇ ರಘುನಾಥ ರಾವ್, ಆನಂದಿ ಬಾಯಿ ವಾಸವಾಗಿದ್ದರು. ಸುಮೇರು ಸಿಂಗ್ ಹಿಂಬಾಲಕರು ವಾಡೆಯ ಕಾವಲಿಗಿದ್ದವರನ್ನು ತರಿದು ಹಾಕಿದರು. ಘನಘೊರ ರಕ್ತಪಾತ ನಡೆಯಿತು. ಕೆಲವೇ ಗಂಟೆಗಳ ಮೊದಲು ಚೌತಿಯ ಸಡಗರದಲ್ಲಿ ಗಿಜಿಗುಟ್ಟುತ್ತಿದ್ದ ಶನಿವಾರವಾಡೆ ಈಗ ಅಕ್ಷರಶಃ ಸ್ಮಶಾನವಾಗಿ ಮಾರ್ಪಟ್ಟಿತ್ತು. ವಾಡೆಯ ಮೊದಲ ಅಂತಸ್ತಿನ ತೇಗದ ಮುಚ್ಚಿಗೆಗಳಿಂದ ರಕ್ತ ಒಸರ ತೊಡಗಿತು. ಸುಮೇರು ಸಿಂಗ್ ನಾರಾಯಣ ಪೇಶ್ವಾ ಮಲಗಿದ್ದ ಕೋಣೆಗೆ ನುಗ್ಗಿದ. ವಾಡೆಯಲ್ಲಿ ಆಹಾಕಾರ ಚೀತ್ಕಾರಗಳು ಎದ್ದಿರುವುದನ್ನು ಕಂಡು ನಾರಾಯಣನಿಗೆ ಪರಿಸ್ಥಿತಿಯ ಅರಿವಾಯಿತು. ಮತ್ತಷ್ಟು ಓದು 
ಸಿದ್ಧಾಂತಗಳ ಚರಿತ್ರೆ – 3 ಕಮ್ಯುನಿಸಂ: ( ಅಪ್ರಸ್ತುತ ಸಿದ್ಧಾಂತ, ಅವಾಸ್ತವಿಕ ಪರಿಹಾರ )
– ರೋಹಿತ್ ಚಕ್ರತೀರ್ಥ
ಸಿದ್ಧಾಂತಗಳ ಚರಿತ್ರೆ – 1 (ಕಾರ್ಲ್ ಮಾರ್ಕ್ಸ್ ಕಟ್ಟಿಕೊಟ್ಟ ಕಲ್ಪನೆಯ ಸ್ವರ್ಗ)
ಸಿದ್ಧಾಂತಗಳ ಚರಿತ್ರೆ – 2 ( ಆತನ ಚಿಂತನೆ ಅರ್ಧ ಭೂಗೋಲವನ್ನು ನಿಯಂತ್ರಿಸಿತು! )
ಕಮ್ಯುನಿಸ್ಟ್ ಚಿಂತನೆಯನ್ನು ಕಾರ್ಲ್ ಮಾರ್ಕ್ಸ್ ಪ್ರಾರಂಭಿಸಿದವನಲ್ಲ; ಆದರೆ ಅದಕ್ಕೊಂದು ಸ್ಪಷ್ಟ ರೂಪ ಕೊಟ್ಟವನು ಆತ. ಮಾರ್ಕ್ಸ್ ತೀರಿಕೊಂಡ ಮೂವತ್ತು ವರ್ಷಗಳ ನಂತರ ರಷ್ಯದಲ್ಲಿ ಕ್ರಾಂತಿಯಾಗಿ ಲೆನಿನ್ ಅಧಿಪತ್ಯ ಬಂತು. ಮಾರ್ಕ್ಸ್ ನ ಅದುವರೆಗಿನ ಅಪ್ರಕಟಿತ ಕೃತಿಗಳೆಲ್ಲ ಒಂದರ ಮೇಲೊಂದರಂತೆ ಸಾಲಾಗಿ ಪ್ರಕಟವಾಗಿ ಜಗತ್ತಿನ ಹಲವು ದೇಶಗಳಲ್ಲಿ, ಹಲವು ಯುವಕರ ಕೈಗೆ ಬಂದು, ಅವರೆಲ್ಲ ತಮ್ಮ ಸುತ್ತಲಿನ ಹಳೆಯ ವ್ಯವಸ್ಥೆಯನ್ನು ಕಿತ್ತೊಗೆಯುವ ಸಂಕಲ್ಪ ತೊಡುವಂತಾಯಿತು. 1920ರಿಂದ 1960ರವರೆಗಿನ ಅವಧಿ ಕಮ್ಯುನಿಸಂ ಮತ್ತು ಮಾಕ್ರ್ಸಿಸಂಗಳ ಉಚ್ಛ್ರಾಯಕಾಲ. ರಷ್ಯ, ಚೀನಾ, ಕೊರಿಯ, ಕಾಂಬೋಡಿಯಾ, ಜರ್ಮನಿ, ಗ್ರೇಟ್ ಬ್ರಿಟನ್, ಫ್ರಾನ್ಸ್, ಕ್ಯೂಬಾದಂಥ ಹಲವು ದೇಶಗಳು ಮಾಕ್ರ್ಸ್ ಚಿಂತನೆಯ ಪ್ರಯೋಗ ಶಾಲೆಗಳಾದವು. ಸ್ವಾತಂತ್ರ್ಯಾ ನಂತರದ ಮೊದಲ ಮೂರು ದಶಕಗಳಲ್ಲಿ ಭಾರತ ಕೈಗೊಂಡ ಹತ್ತುಹಲವು ಯೋಜನೆಗಳಲ್ಲಿ ಸೋವಿಯೆಟ್ ರಷ್ಯಾ ಪ್ರಣೀತ ಕಮ್ಯುನಿಸಂನ ದಟ್ಟ ಛಾಯೆಯಿದ್ದದ್ದು ಸುಸ್ಪಷ್ಟ. ಆದರೆ 1970ರ ನಂತರ ರಷ್ಯಾ ಹಲವು ಹೋಳುಗಳಾಗಿ ಒಡೆದುಹೋಗಿ ಶೀತಲಸಮರ ಅಘೋಷಿತ ಅಂತ್ಯ ಕಂಡಿದ್ದರಿಂದ ಕಮ್ಯುನಿಸಂ ಹಿನ್ನಡೆಯನುಭವಿಸಿತು. ಅಲ್ಲದೆ ಕಮ್ಯುನಿಸಂನ್ನು ಅಪ್ಪಿಕೊಂಡ ದೇಶಗಳೆಲ್ಲ ಸರ್ವಾಧಿಕಾರಿಗಳ ನಿಯಂತ್ರಣಕ್ಕೊಳಪಟ್ಟು ಬೃಹತ್ ಪ್ರಮಾಣದ ಹತ್ಯಾಕಾಂಡಗಳಿಗೆ ಸಾಕ್ಷಿಯಾದ್ದರಿಂದ, ಮಾರ್ಕ್ಸ್ ನ ಚಿಂತನೆಗಳ ಮೇಲಿದ್ದ ಭರವಸೆಗಳೆಲ್ಲ ಕಮರಿಹೋದವು. ಕಮ್ಯುನಿಸಂನ ಮೆಕ್ಕಾ ಎಂದೇ ಕರೆಸಿಕೊಳ್ಳುತ್ತಿದ್ದ ರಷ್ಯಾದೊಳಗಿನ ಬಡತನ, ಶೋಷಣೆ, ಸ್ವಾತಂತ್ರ್ಯಹರಣ, ಹಿಂಸಾಚಾರಗಳ ಕಟು ಕತೆಗಳು ಹೊರಜಗತ್ತಿಗೆ ತಿಳಿಯತೊಡಗಿದ್ದು 70ರ ದಶಕದ ನಂತರ; ಅದೂ ತುಣುಕು ತುಣುಕಾಗಿ. ಮತ್ತಷ್ಟು ಓದು 




