ವಿಷಯದ ವಿವರಗಳಿಗೆ ದಾಟಿರಿ

Posts from the ‘ಭಾರತ’ Category

12
ಆಗಸ್ಟ್

ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ

ದಿನ – 3
ಸದ್ಗುರು ರಾಮಸಿಂಗ್ ಕೂಕಾ
– ರಾಮಚಂದ್ರ ಹೆಗಡೆ

download (1)ದೇಶದ ಸ್ವಾತಂತ್ರ್ಯ ಇತಿಹಾಸದಲ್ಲಿ ಪಂಜಾಬಿ ಸಿಖ್ಖರ ಪಾತ್ರ ಬಹಳ ದೊಡ್ಡದು. ಅಪ್ರತಿಮ ದೇಶಭಕ್ತರ ಸಂಪ್ರದಾಯವದು. ಇಂದಿಗೂ ಭಾರತೀಯ ಸೈನ್ಯದಲ್ಲಿ ಸಿಖ್ ರೆಜಿಮೆಂಟ್ ಎಂದರೆ ಪರಮ ಪರಾಕ್ರಮಿಗಳ ದಂಡು. ಅಂತಹ ಪಂಜಾಬಿ ಸಿಖ್ಖರ ‘ನಾಮಧಾರಿ ಸಂಪ್ರದಾಯ’ ಅಥವಾ ‘ಕೂಕಾ ಪಂಥ’ ದ ಸ್ಥಾಪಕ ಸದ್ಗುರು ರಾಮಸಿಂಗ್ ಕೂಕಾ. ಮೂಲತಃ ಬಡಗಿ ವೃತ್ತಿಯ ಕುಟುಂಬದ ರಾಮಸಿಂಗ್ ತಾನೂ ತನ್ನ ತಂದೆಯ ಬಡಗಿ ಹಾಗೂ ಕೃಷಿ ಸಂಬಂಧಿತ ಚಟುವಟಿಕೆಗಳಲ್ಲಿ ನೆರವಾಗುತ್ತಿದ್ದ. ಆದರೆ ಮಿತಿಮೀರಿದ ಬ್ರಿಟಿಷರ ದೌರ್ಜನ್ಯ ಹಾಗೂ ಅಲ್ಲಿಯ ಜನರ ನಿರಭಿಮಾನ ಅವನನ್ನು ರೊಚ್ಚಿಗೆಬ್ಬಿಸಿತು. ಇದೇ ಸಂದರ್ಭವನ್ನು ಉಪಯೋಗಿಸಿಕೊಂಡ ಮಿಷನರಿಗಳು ಮತಾಂತರದಲ್ಲಿ ನಿರತರಾಗಿದ್ದವು. ಇದನ್ನೆಲ್ಲಾ ಕಂಡ ರಾಮಸಿಂಗ್ ಜನರನ್ನು ಆಧ್ಯಾತ್ಮಿಕವಾಗಿ ಮೇಲ್ಮಟ್ಟಕ್ಕೆ ಒಯ್ಯುವ, ಅವರೊಳಗೆ ದೇಶಾಭಿಮಾನ ಬೆಳೆಸುವ, ಧಾರ್ಮಿಕ, ಸಾಮಾಜಿಕ, ರಾಜಕೀಯ ಜನಜಾಗೃತಿ ನಿರ್ಧಾರದಿಂದ ಕೂಕಾ ಪಂಥವನ್ನು ಆರಂಭಿಸಿದ. ರಾಮಸಿಂಗ್ ಸದ್ಗುರು ರಾಮಸಿಂಗ್ ಆದ. ರಾಮಸಿಂಗ್ ನ ಕೂಕಾ ಪಂಥದ ಪ್ರಸಿದ್ಧಿ ಎಲ್ಲೆಡೆಗೆ ಹರಡಿ ಸಾವಿರಾರು ಜನ ಈ ಪಂಥಕ್ಕೆ ಸೇರ್ಪಡೆಯಾದರು. ಪಂಜಾಬ ಪ್ರಾಂತದ ೨೧ ಜಿಲ್ಲೆಗಳಲ್ಲೂ ಕೂಕಾಗಳ ಚಟುವಟಿಕೆಗಳ ಜಾಲ ಹಬ್ಬಿತು. ಮತ್ತಷ್ಟು ಓದು »

11
ಆಗಸ್ಟ್

ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ

– ರಾಮಚಂದ್ರ ಹೆಗಡೆ

ಈ ದಿನದ ಸ್ಮರಣೆ: ಕಾರ್ನಾಡ್ ಸದಾಶಿವ ರಾವ್

14MNRAO_G53ASPDES__2509976eಬೆಂಗಳೂರಿನ ಪ್ರತಿಷ್ಠಿತ ಬಡಾವಣೆ ‘ಸದಾಶಿವ ನಗರ’ ಎಂಬುದು ಎಲ್ಲರಿಗೂ ತಿಳಿದದ್ದೇ. ಆದರೆ ಅದ್ಯಾರು ಸದಾಶಿವ ಎಂಬುದು ಬಹುತೇಕರಿಗೆ ತಿಳಿಯದು. ಆ ಸದಾಶಿವರೇ ಅಪ್ರತಿಮ ದೇಶಭಕ್ತ ದಕ್ಷಿಣ ಕನ್ನಡದ ಗಾಂಧಿ ಎಂದೇ ಸುಪ್ರಸಿದ್ಧರಾದ ಶ್ರೀ ಕಾರ್ನಾಡ್ ಸದಾಶಿವರಾವ್. ಇವರು ಮಂಗಳೂರನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡು ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡವರು. ಸದಾಶಿವರಾಯರ ಮನೆ ಸ್ವಾತಂತ್ರ್ಯ ಸಂಗ್ರಾಮದ ತವರು ಮನೆಯಾಗಿತ್ತು. ಮಹಾತ್ಮಾ ಗಾಂಧಿ, ಚಿತ್ತರಂಜನ ದಾಸ, ರಾಜಗೋಪಾಲಾಚಾರಿ ಹಾಗೂ ಸರೋಜಿನಿ ನಾಯ್ಡುರವರಿಗೆ ವಸತಿಗೃಹವಾಗಿತ್ತು. ದೇಶದಲ್ಲಿ ಉಪ್ಪಿನ ಸತ್ಯಾಗ್ರಹ ಪ್ರಾರಂಭವಾದಾಗ ಕಾರ್ನಾಡು ಸದಾಶಿವರಾಯರು ಅಂಕೋಲೆಗೆ ಹೋಗಿ ಅಲ್ಲಿನ ಜನತೆಗೆ ಮಾರ್ಗದರ್ಶನ ನೀಡಿ ಅಲ್ಲಿ ನಾಲ್ಕು ದಿನಗಳಿದ್ದರು. ಮತ್ತಷ್ಟು ಓದು »

10
ಆಗಸ್ಟ್

ನಂಬಿಕೆ, ನಿಷೇಧ, ಆಚರಣೆಗಳಲ್ಲಿ ಆಹಾರ

ಡಾ. ಶ್ರೀಪಾದ ಭಟ್
ಸಹಾಯಕ ಪ್ರಾಧ್ಯಾಪಕ
ಡಾ. ಡಿ ವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ
ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು

Non-Veg-Restaurantsಇತ್ತೀಚಿನ ದಿನಗಳಲ್ಲಿ ಆಹಾರ ಪದ್ಧತಿ ಕುರಿತು ಬಹಳಷ್ಟು ಚರ್ಚೆ ರಾಷ್ಟ್ರಮಟ್ಟದಲ್ಲಿ ಆಗಾಗ ನಡೆಯುತ್ತದೆ. ದನ ಕದಿಯುವ ಹಾಗೂ ಅದನ್ನು ರಕ್ಷಿಸುವ ಗುಂಪುಗಳ ಹಿನ್ನೆಲೆಯಲ್ಲಿ ಮೂರ್ನಾಲ್ಕು ದಿನಗಳ ಹಿಂದೆ ಪ್ರಧಾನಿ ಮೋದಿ “ಸೋ ಕಾಲ್ಡ್ ಗೋರಕ್ಷಕರ” ವಿರುದ್ಧ ಗುಡುಗುತ್ತಿದ್ದಂತೆಯೇ ಮತ್ತೆ ಇಂಥ ಚರ್ಚೆ ಶುರುವಾಗಿದೆ. ಈ ಚರ್ಚೆಗಳಲ್ಲಿ ಮೇಲ್ನೋಟದಲ್ಲಿ ಬಹುಸಂಖ್ಯಾತರ ಆಹಾರ ಕ್ರಮವನ್ನು ಅಲ್ಪ ಸಂಖ್ಯಾತರ ಮೇಲೆ ಹೇರುವ ಹುನ್ನಾರ; ದಲಿತರು ಹಾಗೂ ಅಲ್ಪಸಂಖ್ಯಾತರ ಆಹಾರ ಪದ್ಧತಿಯನ್ನು ಪುರೋಹಿತಶಾಹಿ ವ್ಯವಸ್ಥೆ ಆಳುತ್ತಿರುವ ಸಂಕೇತ ಎಂದೂ, ಬ್ರಾಹ್ಮಣರನ್ನು ಬಿಟ್ಟರೆ ಬೇರೆ ಸಾವಿರಾರು ಜಾತಿ-ಸಮುದಾಯಗಳಿಗೆ ಆಹಾರ ಸಂಬಂಧಿ ವಿಧಿ-ನಿಷೇಧಗಳೇ ಇಲ್ಲ ಎಂಬಂತೆಯೂ ಬಿಂಬಿಸಲಾಗುತ್ತಿದೆ. ಅಷ್ಟೇ ಅಲ್ಲ, ಆಹಾರ ಸೇವಿಸುವಾಗಲೂ ಬ್ರಾಹ್ಮಣರು ಮಾತ್ರ ಅನ್ಯರನ್ನು ಸಹಪಂಕ್ತಿ ಭೋಜನದಲ್ಲಿ ಕೂರಿಸಿಕೊಳ್ಳುವುದಿಲ್ಲ, ಉಳಿದವರಲ್ಲಿ ಇಂಥ ಸಂಪ್ರದಾಯವಿಲ್ಲ ಎಂಬಂತೆಯೂ ಬಿಂಬಿಸುತ್ತ, ಇವೆಲ್ಲ ಜಾತಿಪದ್ಧತಿಯನ್ನು ಬಲಗೊಳಿಸುವ ಪುರೋಹಿತಶಾಹಿಯ ಹುನ್ನಾರ ಎಂದೂ ಸರಳವಾಗಿ ವಾದಿಸಲಾಗುತ್ತದೆ. ಆದರೆ ಇವೆಲ್ಲ ಹಾಗೆ ವಾದಿಸುವವರ ವಿವಿಧ ಸಮುದಾಯಗಳ ಆಹಾರ ಸಂಬಂಧಿ ಅಜ್ಞಾನವನ್ನು ತೋರಿಸುತ್ತದೆಯಲ್ಲದೇ ಇನ್ನೇನನ್ನೂ ಅಲ್ಲ. ಇಂಥ ತಿಳಿವಳಿಕೆಯನ್ನು ತಲೆಕೆಳಗಾಗಿಸುವ ಕ್ಷೇತ್ರಾಧಾರಿತ ಅಧ್ಯಯನದ ಫಲಿತ ಹಾಗೂ ವಾಸ್ತವ ಇಲ್ಲಿದೆ. ಇದು ತುಮಕೂರು ಜಿಲ್ಲೆಯ ಸಾಂಪ್ರದಾಯಿಕ ಆಹಾರ ಪದ್ಧತಿ ಕುರಿತ ಯೋಜನೆಯೊಂದನ್ನು ಆಧರಿಸಿದೆ. ಮತ್ತಷ್ಟು ಓದು »

8
ಆಗಸ್ಟ್

ಸುಮ್ಮ ಸುಮ್ಮನೆ ಬರಲಿಲ್ಲ ಕನ್ನಡಕ್ಕೆ ಮಹಾವೀರ ಚಕ್ರ ; ಇವರು ಮಹಾವೀರತೆಯ ಜೀವಂತ ಸ್ಮಾರಕ

– ಸಂತೋಷ್ ತಮ್ಮಯ್ಯ

9ದೇಶದ ಎರಡನೆಯ ಅತಿದೊಡ್ಡ ಶೌರ್ಯ ಪದಕ ಮಹಾವೀರ ಚಕ್ರ ಪದಕದ ಗೌರವಕ್ಕೆ ಪಾತ್ರರಾದ ಇಬ್ಬರು ಮಹಾಯೋಧರಲ್ಲಿ ಲೆ.ಕರ್ನಲ್ ಪಿ.ಎಸ್. ಗಣಪತಿ ಎರಡನೆಯವರು. ಅವರ ಬಗ್ಗೆ ಪತ್ರಿಕೆಗಳಲ್ಲಿ ಬಂದಿಲ್ಲ, ಟಿ ವಿ ಅವರ ಸಂದರ್ಶನ ನಡೆಸಿಲ್ಲ. ಅವರು ಸಭೆ ಸಮಾರಂಭಗಳಿಗೆ ಹೋಗಿಲ್ಲ. ಅವರ ಬಗ್ಗೆ ನಾಡಿನ ಜನಕ್ಕೆ ಏನೆಂದರೆ ಏನೂ ತಿಳಿದಿಲ್ಲ. ಅವರ ಸಂಪರ್ಕ ಸಂಖ್ಯೆ: 9980009687

ನೋಡಲು ಅದೊಂದು ಲೋಹದ ಬಿಲ್ಲೆ. ಅದರಲ್ಲಿ ನಕ್ಷತ್ರದ ಚಿಹ್ನೆ. ಅದರ ಅಂಚಿನಲ್ಲಿ ಕಂಡೂ ಕಾಣದಂತೆ ಕೆತ್ತಿದ ಪಡೆದವರ ಹೆಸರು, ಪಡೆದ ದಿನಾಂಕ. ಕದನಕ್ಕೆ ತೆರಳಿದ ಪ್ರತೀ ಯೋಧನಿಗೂ ಅದನ್ನು ಪಡೆಯುವ ಅದಮ್ಯ ಹಂಬಲ. ಏಕೆಂದರೆ ಅದು ವೀರತೆಯ ಪ್ರತೀಕ. ಹೆಸರು ಮಹಾವೀರ ಚಕ್ರ. ಯುದ್ಧಕಾಲದಲ್ಲಿ ಮಹಾಪರಾಕ್ರಮಕ್ಕೆ ನೀಡುವ ಎರಡನೆಯ ಅತೀ ದೊಡ್ಡ ಶೌರ್ಯ ಪ್ರಶಸ್ತಿ. ಬ್ರಿಟಿಷ್ ಸೈನ್ಯದಲ್ಲಿ ‘ಡಿಶ್ಟಿಂಗ್ವಿಸ್ಡ್ ಸರ್ವೀಸ್ ಕ್ರಾಸ್’ ಹೇಗೋ ಹಾಗೆ ಭಾರತಕ್ಕೆ ಈ ಮಹಾವೀರ ಚಕ್ರ. ಮಹಾ ಸಮರಪಡೆಯನ್ನು ಹೊಂದಿರುವ ಭಾರತದಲ್ಲಿ ೧೯೪೭ರಿಂದ ಇದುವರೆಗೆ ಮಹಾವೀರ ಚಕ್ರದ ಗೌರವಕ್ಕೆ ಪಾತ್ರರಾದವರು ಕೇವಲ ೨೧೮ ಮಂದಿ ವೀರರು. ಅವರಲ್ಲಿ ೬ ಜನ ಯೋಧರು ಮಹಾವೀರ ಚಕ್ರವನ್ನು ಎರಡೆರಡು ಬಾರಿ ಪಡೆದ ವೀರರಲ್ಲಿ ವೀರರು (MahaVira chakra bar). ಹೀಗಿರುವಾಗ ಭಾರತೀಯ ಸೈನ್ಯಕ್ಕೆ ಮಹಾಮಹಾ ಯೋಧರನ್ನು ನೀಡಿದ ನಮ್ಮ ಕರ್ನಾಟಕದಲ್ಲಿ ಇದನ್ನು ಪಡೆದವರಾರು ಎಂದು ನೋಡಿದರೆ ಕಾಣುವವರು ಕನ್ನಡದ ಇಬ್ಬರು ಮಹಾರ ಚಕ್ರಧರರು. ಅವರಲ್ಲೊಬ್ಬರು ‘ಟೈಗರ್ ಆಫ್ ಸರ್ಗೋದಾ’ ಎಂದು ಖ್ಯಾತರಾದ ಸ್ಕ್ವಾ.ಲೀ.ಅಜ್ಜಾಮಾಡ ಬಿ.ದೇವಯ್ಯ. ಮತ್ತೊಬ್ಬರು ಮೇ.(ನಂತರ ಲೆ.ಕರ್ನಲ್)ಪಿ.ಎಸ್ ಗಣಪತಿ. ಒಬ್ಬರು ಅಮರಯೋಧ. ಮತ್ತೊಬ್ಬರು ಮಹಾವೀರತೆಯ ಜೀವಂತ ಸ್ಮಾರಕ. ಮತ್ತಷ್ಟು ಓದು »

7
ಆಗಸ್ಟ್

ಉಪನಿಷತ್ ವಾಙ್ಮಯ 1: ಮೃತ್ಯುಮುಖದಲ್ಲಿ ಜ್ಞಾನದಾಹಿ; ಕೇಳಿದ ಗುರುವನು “ದೇಹಿ! ದೇಹಿ!”

– ಸ್ವಾಮಿ ಶಾಂತಸ್ವರೂಪಾನಂದ

yama_nachiketaಉಪನಿಷತ್ ಎಂಬುದು ವೇದಕಾಲದ ಗದ್ಯಕಾವ್ಯ. ವಿದ್ಯೆ, ಜ್ಞಾನ, ಚಿಂತನೆಗಳು ಮುಪ್ಪುರಿಗೊಂಡ ಮನಸ್ಸುಗಳು ರಚಿಸಿದ ಅನನ್ಯ ಜೀವನಾಮೃತ ಸಾರ. ವೇದಗಳ ಒಟ್ಟರ್ಥವನ್ನು ಇವು ಸಂಗ್ರಹವಾಗಿ ತಿಳಿಸುತ್ತವೆ ಎನ್ನುವ ಕಾರಣಕ್ಕೆ ಇವನ್ನು ವೇದಾಂತ ಎಂದೂ ಕರೆಯುತ್ತಾರೆ. ಉಪನಿಷತ್ತುಗಳ ಸಾಲಿನಲ್ಲಿ ಅತಿವಿಶಿಷ್ಟವಾದದ್ದು ಕಠ. ಕೃಷ್ಣಯಜುರ್ವೇದದ ಕಠ ಪರಂಪರೆಯಲ್ಲಿ ಬರುವ ಈ ಉಪನಿಷತ್ತು ಗುರು-ಶಿಷ್ಯರ ಸಂವಾದದ ಒಂದು ಸಂಕ್ಷಿಪ್ತ ಚಿತ್ರಣ. ಗುರುಸ್ಥಾನದಲ್ಲಿ ಕೂತವನು ಸಾಕ್ಷಾತ್ ಯಮಧರ್ಮರಾಯ! ಮತ್ತು ಅವನೆದುರು ಶಿಷ್ಯನಾಗಿ ತಲೆಬಾಗಿ ವಿನೀತನಾಗಿ ಪವಡಿಸಿದವನು ಏಳೋ ಎಂಟೋ ವಯಸ್ಸಿನ ಮುದ್ದುಬಾಲಕ ನಚಿಕೇತ. ಪ್ರಪಂಚದ ಎರಡು ಧ್ರುವಗಳಂತಿರುವ ಈ ಇಬ್ಬರು ಜೊತೆಯಾದದ್ದು ಹೇಗೆ ಎಂಬುದೇ ಒಂದು ವಿಚಿತ್ರ ಕತೆ. ಕಠೋಪನಿಷತ್ತನ್ನು ಪ್ರವೇಶಿಸುವ ಮೊದಲು ನಮಗೆ ಆ ಹಿನ್ನೆಲೆ ತಿಳಿದಿದ್ದರೆ ಒಳ್ಳೆಯದು. ಮತ್ತಷ್ಟು ಓದು »

6
ಆಗಸ್ಟ್

ಎಲ್ಲಿಯ ಹವಾಲ್ದಾರ್ ಜಪ್ಪು? ಎಲ್ಲಿಯ ಸದ್ದಾಂ ಹುಸೇನ್?

– ಸಂತೋಷ್ ತಮ್ಮಯ್ಯ

jappuಮೂರು ವರ್ಷದ ಹಿಂದೆ ಇಂಥದ್ದೇ ಒಂದು ಮಳೆಗಾಲದಲ್ಲಿ ಹವಾಲ್ದಾರ್ ಜಪ್ಪು ಬೆಂಗಳೂರಿನಲ್ಲಿ ಸಿಕ್ಕಿದ್ದರು. ಅಂದು ಜಪ್ಪು ಕಾರ್ಗಿಲ್ ವಿಜಯ್ ದಿವಸ್ ಆಚರಿಸಲು ತಮ್ಮ ಮೆಡಲುಗಳ ಸಮೇತ ಬೆಂಗಳೂರಿಗೆ ಬಂದುಬಿಟ್ಟಿದ್ದರು. ಅದಾದ ನಂತರ ಮತ್ತೆ ಮೊನ್ನೆ ಸಿಕ್ಕಿದ್ದರು. ಸಿಕ್ಕವರು ಈಗ ತಾನು ಊರಲ್ಲಿಲ್ಲವೆಂದೂ ದಕ್ಷಿಣ ಕೊಡಗಿನ ತಾವಳಗೇರಿ ಶೆಟ್ಟಿಗೇರಿ ಎಂಬ ಊರಲ್ಲಿರುವುದಾಗಿಯೂ ಬಾಡಿಗೆ ಮನೆಯೊಂದನ್ನು ಹಿಡಿದು ಮಗಳನ್ನು ಪ್ರೈಮರಿ ಓದಿಸುತ್ತಿದ್ದೇನೆಂದು ಹೇಳಿದ್ದರು. ಪುರುಸೋತ್ತಾದಾಗ ಒಮ್ಮೆ ಮನೆಗೆ ಬರಬೇಕೆಂದೂ ಹೇಳಿದ್ದರು. ಮೂರು ವರ್ಷಗಳ ಹಿಂದೆ ಇದ್ದ ಆ ದೊಡ್ಡ ಸ್ವರದ ರಭಸ ಕಿಂಚಿತ್ತೂ ಮಾಸಿರಲಿಲ್ಲ. ಗಡಸುತನ ಮಾಯವಾಗಿರಲಿಲ್ಲ. ಆದರೆ ಮಾತುಮಾತಿಗೆ ಆಕ್ರೋಶಗೊಳ್ಳುವ ಅವರ ಜಾಯಮಾನ ಮೂರು ವರ್ಷಗಳಲ್ಲಿ ಮೂರುಪಟ್ಟು ಹೆಚ್ಚಿದಂತೆ ಕಂಡುಬಂತು. ಮತ್ತಷ್ಟು ಓದು »

29
ಜುಲೈ

ಹಸುವಿನ ಕೆಚ್ಚಲು ಹಿಂಡಿ ತೋಳನಿಗೆ ಹಾಲುಣಿಸುವವರು

– ರೋಹಿತ್ ಚಕ್ರತೀರ್ಥ

6a00d8341dd33453ef0168e5744052970c-550wiದಡ್ಡ ವೈರಿಯನ್ನು ಗೆಲ್ಲುವುದು ಸುಲಭ. ಆದರೆ ಅತಿ ಬುದ್ಧಿವಂತ ಶತ್ರುವಿನದ್ದೇ ಸಮಸ್ಯೆ. ಕ್ರಿಸ್ಟೋಫರ್ ನೊಲನ್‍ನ ಡಾರ್ಕ್ ನೈಟ್ ಸಿನೆಮಾ ಸರಣಿಯನ್ನು ನೋಡಿದವರಿಗೆ ಜೋಕರ್‍ನ ಪರಿಚಯ ಚೆನ್ನಾಗಿಯೇ ಇರುತ್ತದೆ. ಈತ ಹೊಡೆ ಬಡಿ ಕೊಲ್ಲು ಎನ್ನುವಂಥ ನೇರಾನೇರ ವಿಲನ್ ಅಲ್ಲ. ನಾಯಕನ ಜೊತೆಗೇ ಇದ್ದು, ಆತನ ತಂತ್ರಗಳನ್ನೆಲ್ಲ ಕರಗತ ಮಾಡಿಕೊಳ್ಳಬಲ್ಲ; ಸಂದರ್ಭ ಬಂದರೆ ನಾಯಕನಿಗಿಂತ ಚೆನ್ನಾಗಿ ಅವನ್ನು ಪ್ರಯೋಗಿಸಬಲ್ಲ ಚತುರನೀತ. ಇಂಥವರನ್ನು ಸಂಭಾಳಿಸುವುದು ಕಷ್ಟದ, ನಾಜೂಕಿನ, ಬುದ್ಧಿವಂತಿಕೆ ಮತ್ತು ಸಂಯಮ ಬೇಡುವ ಕೆಲಸ. ಸಿನೆಮಾದಲ್ಲಿ ಈತನ ಹಾವಭಾವ, ವೇಷಭೂಷಣಗಳನ್ನು ನೋಡಿಯಾದರೂ ವಿಲನ್ ಎನ್ನಬಹುದೇನೋ; ಆದರೆ ನಿಜಜೀವನದಲ್ಲಿ ಇವರು ನಮ್ಮ ನಿಮ್ಮಂತೆಯೇ ಇರುತ್ತಾರೆ. ನಮ್ಮ ಭಾಷೆಯನ್ನೇ, ನಮ್ಮ ಧಾಟಿಯಲ್ಲೇ ಮಾತಾಡುತ್ತಾರೆ. ನಮಗೇನೋ ಬಹಳ ದೊಡ್ಡ ಉಪಕಾರ ಮಾಡಲಿಕ್ಕೆಂಬಂತೆ ಹಿಂದೆ ಮುಂದೆ ಸುಳಿದಾಡಿಕೊಂಡಿರುತ್ತಾರೆ. “ನೀನೂ? ಬ್ರೂಟಸ್!” ಎಂದು ನಾವು ಕಂಗಾಲಾಗಿ ನೆಲಕ್ಕುರುಳುವಷ್ಟರಲ್ಲಿ ಕಾಲ ಮಿಂಚಿರುತ್ತದೆ. ಮತ್ತಷ್ಟು ಓದು »

28
ಜುಲೈ

ನನ್ನ ಊರು ಬೆಂಗಳೂರು – ಇಂತಿ ನಿಮ್ಮ ಪ್ರೀತಿಯ ಬಾಂಗ್ಲಾ ನುಸುಳುಕೋರ

– ವೃಷಾಂಕ್ ಭಟ್

1ಭಾರತದಲ್ಲಿ ದಿನಕಳೆದಂತೆ ಕೌಶಲ್ಯರಹಿತ ಕಾರ್ಮಿಕರ (Unskilled labourers) ಸಂಖ್ಯೆ ಕ್ಷೀಣಿಸುತ್ತಿದೆ. ಡ್ರೈವರ್ಗಳು, ಹೊಟೇಲ್ ಮಾಣಿಗಳು, ಮನೆಕೆಲಸದವರು, ಕೃಷಿಕಾರ್ಮಿಕರು, ಕ್ಲೀನರ್ಗಳು, ಹಮಾಲಿಗಳು, ಚಿಂದಿ ಸಂಗ್ರಹಿಸುವವರು ಕ್ಷೀಣಿಸಿರುವ ಪರಿಣಾಮ ದೇಶದ ಬಹುದೊಡ್ಡ ಉದ್ಯೋಗ ಕ್ಷೇತ್ರವೊಂದು ಖಾಲಿಯಾಗಿತ್ತು. ಬೆಂಗಾಲಿ ಮಾತನಾಡುವ ಮುಸಲ್ಮಾನರು ಇಂದು ಆ ಸ್ಥಾನವನ್ನು ತುಂಬಿದ್ದಾರೆ. ಬೆಂಗಾಲಿ ಮಾತನಾಡಿದ ತಕ್ಷಣ ಅವರೆಲ್ಲ ಪಶ್ಚಿಮ ಬಂಗಾಳದವರಲ್ಲ. ಅವರೆಲ್ಲರೂ ಬಾಂಗ್ಲಾ  ನುಸುಳುಕೋರರು..! ಮತ್ತಷ್ಟು ಓದು »

27
ಜುಲೈ

ಕಶ್ಮೀರಿಯತ್ – ಅಸ್ಮಿತೆಯೋ ವಿಸ್ಮೃತಿಯೋ

–  ಶೈಲೇಶ್ ಕುಲ್ಕರ್ಣಿ
12-kashmir-protest-2೮೦ರ ದಶಕದ ಸಮಯ, ಕಾಶ್ಮೀರದಲ್ಲಿ ಇಸ್ಲಾಮೀ ಉಗ್ರವಾದ ನಿಧಾನವಾಗಿ ತನ್ನ ಹೆಡೆ ಬಿಚ್ಚುತ್ತಿತ್ತು . ಆಗಷ್ಟೇ ಆಫ್ಘಾನಿಸ್ತಾನವನ್ನ ರಷ್ಯಾದ ಬಾಹುಗಳಿಂದ ಬೇರ್ಪಡಿಸುವಲ್ಲಿ  ನಂಬಿಕಸ್ಥ ಸಹಾಯಕನಾಗಿ ಒದಗಿಬಂದ ಪಾಕಿಸ್ತಾನ  ಸಹಜವಾಗಿ ಅಮೇರಿಕಾದ ಕಣ್ಮಣಿಯಾಗಿತ್ತು . ಕಾಶ್ಮೀರದಲ್ಲಿ ಭಾರತದ ದಬ್ಬಾಳಿಕೆ ವಿರೋಧಿಸಿ ತಮ್ಮ ನ್ಯಾಯೋಚಿತ ಸ್ವಾತಂತ್ರವನ್ನು ಕೇಳುತ್ತಿರುವ ಜನರಿಗೆ ತನ್ನದು ನೈತಿಕ ಸಮರ್ಥನೆ ಅಷ್ಟೇ ಎಂಬ ಪಾಕಿಸ್ತಾನದ ವಾದಕ್ಕೆ ಅಮೇರಿಕಾ ಮತ್ತು ಯೂರೋಪಿನ ರಾಷ್ಟ್ರಗಳ ಮೃದು ಪ್ರೋತ್ಸಾಹವೂ ಇತ್ತು . ಇಷ್ಟು ಸಾಕಿತ್ತು ಪಾಕಿಸ್ತಾನಕ್ಕೆ.  ಅಫ್ಘಾನಿಸ್ತಾನದಲ್ಲಿ ಐಎಸ್ಐ ಸಹಾಯದಿಂದ ಹುಟ್ಟಿಕೊಂಡಿದ್ದ ಬಾಡಿಗೆ ಯೋಧರೆಲ್ಲ ಭಾರತದೊಳಕ್ಕೆ ನುಸುಳಿಸಲು ಅದರ ಯೋಜನೆ ಸಿದ್ಧವಾಗಿತ್ತು. ದಿನಭತ್ಯೆಯ ಮೇಲೆ ದುಡಿಯುತ್ತಿದ್ದ ಈ ಕೂಲಿ ಉಗ್ರರಿಗೆ ತನ್ನ ದೇಶದ ಗಡಿಯಿಂದಲೇ ಭಾರತದೊಳಕ್ಕೆ ಕಳ್ಳಸಾಗಣಿಕೆಗೆ ಶುರುವಿಟ್ಟಿತ್ತು.

ಮತ್ತಷ್ಟು ಓದು »

25
ಜುಲೈ

ಆಜಾದ್ ಕಾಶ್ಮೀರವಾದಿಗಳಿಗೆ ಶಾಶ್ವತ “ಆಜಾದಿ” ಕೊಡಬೇಕಾದ ಕಠಿಣ ಸಮಯವಿದು

– ರಾಕೇಶ್ ಶೆಟ್ಟಿ

12-kashmir-protest-2ಕಾಶ್ಮೀರದಲ್ಲಿ ಬರ್ಹನ್ ವನಿ ಎಂಬ ಭಯೋತ್ಪಾದಕ ರಕ್ಷಣಾ ಪಡೆಗಳ ಗುಂಡಿಗೆ ಬಲಿಯಾದ ನಂತರ ಶುರುವಾದ ಗಲಭೆಗೆ 42 (ಈ ಲೇಖನ ಬರೆಯುವ ಸಮಯಕ್ಕೆ) ಜನರು ಬಲಿಯಾಗಿ, 3000ದಷ್ಟು ಜನರು ಗಾಯಾಳುಗಳಾಗಿದ್ದಾರೆ ಎಂದು ವರದಿಯಾಗಿದೆ ಮತ್ತು 12ನೇ ದಿನಕ್ಕೂ ಕರ್ಫ್ಯೂ ಮುಂದುವರೆದಿದೆ! ಇಷ್ಟಕ್ಕೆಲ್ಲಾ ಕಾರಣವಾಗಿದ್ದು ಉಗ್ರನ ಶವ ಸಂಸ್ಕಾರಕ್ಕೆ ಅನುವು ಮಾಡಿಕೊಟ್ಟ ಕೇಂದ್ರ ಸರ್ಕಾರ ತಪ್ಪು ನಡೆ. ಉಗ್ರರು ಸತ್ತಾಗ ಅವರ ಕಳೆಬರವನ್ನು ಸಮುದ್ರಕ್ಕೋ, ನಾಯಿ-ನರಿಗಳಿಗೋ ಎಸೆಯುವುದು ಬಿಟ್ಟು ಕುಟುಂಬಸ್ಥರಿಗೆ ಕೊಟ್ಟಿದ್ದೇಕೆ? ಮುಂಬೈ ಸರಣಿ ಬಾಂಬ್ ಸ್ಪೋಟದ ಅಪರಾಧಕ್ಕಾಗಿ ನೇಣಿಗೇರಿದ ಯಾಕೂಬ್ ಮೆಮನ್ ಅಂತ್ಯಸಂಸ್ಕಾರದಲ್ಲಿ ಸೇರಿದ್ದ ಜನಸ್ತೋಮವನ್ನು ನೋಡಿಯಾದರೂ ಇವರು ಬುದ್ದಿ ಕಲಿಯಬಾರದಿತ್ತೇ? ಕನಿಷ್ಟ ಅಫ್ಜಲ್ ಗುರುವಿನ ಕಳೆಬರವನ್ನು ಕೊಡದೇ ಯುಪಿಎ ಸರ್ಕಾರ ತೋರಿದ ನಡೆಯನ್ನು ತೋರುವ ಜಾಣ್ಮೆಯನ್ನೇಕೆ ಕೇಂದ್ರದ ಬಿಜೆಪಿ ತೋರಿಸಲಿಲ್ಲ? ಮೈತ್ರಿ ಸರ್ಕಾರದ ಮರ್ಜಿಗೆ ಬಿದ್ದು ಈ ರೀತಿ ಮಾಡಿತೇ? ಇವರ ಈ ನೀತಿಯಿಂದಾಗಿ ಸಂಕಟ ಅನುಭವಿಸುತ್ತಿರುವುದು ಭದ್ರತಾಪಡೆಗಳು ಹಾಗೂ ಪೋಲಿಸರು. ಮತ್ತಷ್ಟು ಓದು »