ಅಶ್ಫಾಕುಲ್ಲಾ ಖಾನ್” — ದೇಶಭಕ್ತಿಯ ಮೂರ್ತರೂಪ..
– ಭೀಮಸೇನ್ ಪುರೋಹಿತ್
ಆಗಸ್ಟ್ 9 – 1925.. ಅವತ್ತಿನ ರಾತ್ರಿ ಭಾರತದ ಕ್ರಾಂತಿಯ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲು ದಾಖಲಾದ ದಿನ.. ಇನ್ನೂ ಮೀಸೆ ಚಿಗುರದ ನವತರುಣರು ಆಂಗ್ಲಶಾಹಿಯೆದುರಿಗೆ ತೊಡೆತಟ್ಟಿ ನಿಂತ ದಿನ ಅದು.. ಅದೇ “ಕಾಕೋರಿ” ಪ್ರಕರಣ..
ಆ ಹೊತ್ತಿಗಾಗಲೇ, ಅಮೇರಿಕಾದ “ಗದರ್” ಪಾರ್ಟಿಯ ಪ್ರಖರತೆ ಕಮ್ಮಿಯಾಗಿತ್ತು. ಭಾರತದಲ್ಲಿ, ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಗದರ್ ಪಾರ್ಟಿಯ ಹಳೆಯ ಕೆಲವು ನಾಯಕರು ಸೇರಿ “ಹಿಂದುಸ್ತಾನ್ ರಿಪಬ್ಲಿಕನ್ ಅಸೋಸಿಯೇಶನ್” ಎಂಬ ಕ್ರಾಂತಿಸಮಿತಿಯನ್ನು ಶುರು ಮಾಡಿದ್ರು. ಗದರ್ ಪಾರ್ಟಿಯ ಪತನದ ನಂತರ ಕ್ರಾಂತಿ ತಣ್ಣಗಾಗಿದೆ ಅಂತ, ಆಂಗ್ಲರು ಈ HRA ಅನ್ನು ಉಪೇಕ್ಷಿಸಿದ್ದರು.. ಅವರ ಆ ಅಲಕ್ಸ್ಯವೇ ಕ್ರಾಂತಿಕಾರಿಗಳಿಗೆ ವಾರವಾಯಿತು..
ರಾಮಪ್ರಸಾದ್ ಮತ್ತು ಅಶ್ಫಾಕ್ ಇಬ್ರೂ ಜೀವಕ್ಕೆ ಜೀವ ಕೊಡೊ ಗೆಳೆಯರು.. ಅವರ ಸ್ನೇಹದ ನಡುವೆ ಧರ್ಮ ಯಾವತ್ತೂ ಅಡ್ಡಿ ಬರ್ಲಿಲ್ಲ.. ಹಾಗೆ ನೋಡಿದರೆ, ರಾಮ್, ಪಕ್ಕಾ ಅರ್ಯಸಮಾಜದ ಹಿಂದೂವಾದಿ. ಆದ್ರೆ ಅವನು ಅಶ್ಫಾಕ್ ನನ್ನು ಅಪಾರವಾಗಿ ಗೌರವಿಸುತ್ತಿದ್ದ. ಹಾಗೆಯೇ ಅಶ್ಫಾಕ್ ಕೂಡ ಯಾವಾಗಲೂ “ನನ್ನ ರಾಮ” ಅಂತಾನೆ ಜಪಿಸುತ್ತಿದ್ದ.. ಅಶ್ಫಾಕ್ ಉತ್ತರಪ್ರದೇಶದ ಷಹಜಹಾನ್ ಪುರದವನು. ಅಶ್ಫಾಕ್ ಒಬ್ಬ ಮಹಾನ್ ಉರ್ದು ಕವಿ ಕೂಡ ಆಗಿದ್ದ.. ಅತ್ಯಂತ ಉದ್ಬೋಧಕ ದೇಶಭಕ್ತಿ ಗೀತೆಗಳನ್ನು ಬರೆದ ಸಾಹಿತಿ ಅವನು.. ಅದೇ ಅಶ್ಫಾಕ್ ಬಿಸ್ಮಿಲ್ಲನ ಸಹವಾಸಕ್ಕೆ ಬಂದೊಡನೆ, ಅವನ ಪಟ್ಟಶಿಷ್ಯನಾಗಿ ದೇಶಕ್ಕೆ ಅರ್ಪಿಸಿಕೊಂಡಿದ್ದ..
ಇದು ”ನಮ್ಮ” ಮೆಟ್ರೋನಾ ????
– ಮಹೇಶ.ಎಮ್.ಆರ್
ಬಹುದಿನಗಳಿಂದ ನಿರೀಕ್ಷೆಯಲ್ಲಿದ್ದ ಬೆಂಗಳೂರು ಮೆಟ್ರೊ ಸೇವೆ ಶುರು ಆಗಿದೆ. ಮೆಟ್ರೊದಲ್ಲಿನ ಮೊದಲ ಓಡಾಟ ಹೊಸ ಅನುಭವ ನೀಡಿತು. ನಮ್ಮ ಮೆಟ್ರೊ ಸೇವೆಯನ್ನು ಅನುಭವಿಸಿದ ಮೇಲೆ ಇದೇ ಸಮಯದಲ್ಲಿ ಗಮನ ಸೆಳೆದಿದ್ದು ಎಂದರೆ ಅಲ್ಲಿ ಪಾಲಿಸಲಾದ ಬಾಷಾ ನೀತಿ. ಸಂವಿಧಾನದ ಮೂಲಕ ನಾವು ತಿಳಿದುಕೊಂಡಿದ್ದು ಏನು ಅಂದ್ರೆ, ಭಾರತದಲ್ಲಿ ಎಲ್ಲರೂ ಸಮಾನರು ಎಲ್ಲ ಬಾಷೇಗಳೂ ಸಮಾನ ಎಂದು. ಆದರೆ ಕರ್ನಾಟಕದಲ್ಲಿ ಅನುಷ್ಟಾನವಾಗುವ ಯೋಜನೆಗಳಲ್ಲಿ ಈ ನಮ್ಮ ತಿಳುವಳಿಕೆಯನ್ನು ಹುಸಿ ಮಾಡುವ ಎಲ್ಲ ಪ್ರಯತ್ನಗಳು ನಡೆಯುತ್ತಿವೆ. ನಮ್ಮ ಮೆಟ್ರೊದಲ್ಲೂ ಇದನ್ನು ಕಂಡಿದ್ದು ಸುಳ್ಳಲ್ಲ. ಎಂದಿನಂತೆ ಕೇಂದ್ರ ಸರಕಾರ ಕರ್ನಾಟಕದ ಯೋಜನೆಗಳಿಗೆ ನಮ್ಮದೇ ತೆರಿಗೆ ಹಣವನ್ನು ಆರ್ಥಿಕ ಸಹಕಾರದ ಮೂಲಕ ನೀಡುವುದರ ಜೊತೆಗೆ ತನ್ನ ಹುಳುಕು ಬಾಷಾ ನೀತಿಯನ್ನು ನಮ್ಮ ಮೆಟ್ರೊ ಮೂಲಕ ಪ್ರದರ್ಶಿಸಿದೆ.
ಬೆಂಗಳೂರಿಗರಿಗೆ ಮೀಸಲಾಗಿರುವ ಈ ಸೇವೆಯಲ್ಲಿ ವಿನಾಕಾರಣ ಎಲ್ಲೆಡೆ ಹಿಂದಿಯನ್ನು ಬಳಸಲಾಗಿದೆ. ಬೆಂಗಳೂರಿನಲ್ಲಿ ೧% ಕ್ಕಿಂತಲೂ ಕಡಿಮೆಯಿರುವ ಹಿಂದಿ ಬಲ್ಲವರಿಗೆ ತೊಂದರೆ ಆಗಬಾರದು ಎಂಬ ನಿಯಮ ಇಲ್ಲಿ ಪಾಲಿಸಲಾಗಿದೆ. ಬೆಂಗಳೂರಿನಲ್ಲಿರುವ ಹಿಂದಿ ಬಾಷಿಕರ ಸಂಖ್ಯೆಯಷ್ಟೆ ಹೆಚ್ಚು ಕಡಿಮೆ ದಿಲ್ಲಿಯಲ್ಲೂ ಕನ್ನಡ ಬಾಷಿಕರ ಸಂಖ್ಯೆಯಿದೆ. ಈ ಸಂಖ್ಯಾ ಆಧಾರದ ಮೇಲೆ ನೋಡುವುದಾದರೆ, ಬೆಂಗಳೂರಿನ ನಮ್ಮ ಮೆಟ್ರೊದಲ್ಲಿ ಹಿಂದಿಯಲ್ಲಿ ಸೇವೆ ಕೊಡುವುದಾದರೆ ದಿಲ್ಲಿಯಲ್ಲಿನ ಮೆಟ್ರೊದಲ್ಲೂ ಕನ್ನಡದಲ್ಲಿ ಸೇವೆ ಕೊಡಬೇಕು. ಆದರೆ ಭಾರತದ ಬಾಷಾ ನೀತಿ ಪ್ರಕಾರ ಇದು ಸಾದ್ಯವಿಲ್ಲ. ದಿಲ್ಲಿ ಮೆಟ್ರೊದಲ್ಲಿ ಸ್ಥಳೀಯ ಬಾಷೆ ಮತ್ತು ಆಂಗ್ಲ ಬಾಷೆಗೆ ಮಾತ್ರ ಸ್ಥಾನ ಕಲ್ಪಿಸಿದರೆ ಬೆಂಗಳೂರಿನಲ್ಲಿ ಸ್ಥಳೀಯ ಮತ್ತು ಆಂಗ್ಲ ಬಾಷೆ ಜೊತೆಗೆ ಇನ್ನೊಂದು ಬಾಷೆಯನ್ನು ಸ್ಥಳೀಯರ ಮೇಲೆ ಹೇರಲಾಗುತ್ತಿದೆ. ದಿಲ್ಲಿಗೊಂದು ನಿಯಮ ಬೆಂಗಳೂರಿಗೊಂದು ನಿಯಮ ಯಾಕೆ.? ಇಂಥ ಹುಳುಕಿನ ಬಾಷಾ ನೀತಿಯಿಂದ ಒಕ್ಕೂಟ ವ್ಯವಸ್ಥೆಗೆ ಬೆಲೆಯಿಲ್ಲದಂತಾಗಿದೆ. ಎಲ್ಲ ಬಾಶೆಗಳೂ ಸಮಾನ ಎಂಬ ಸಂದೇಶ ಸಾರಬೇಕಾದ ಸರಕಾರಗಳೇ ಇಂದು ತಮ್ಮ ಯೋಜನೆಗಳ ಮೂಲಕ ಸ್ಥಳೀಯ ಬಾಷೆಗಳಿಗಿಂತ ಹಿಂದಿಗೆ ಕೊಂಬು ಜಾಸ್ತಿ ಎಂಬ ಸಂದೇಶ ರವಾನಿಸುತ್ತಿವೆ.
ಮತ್ತಷ್ಟು ಓದು 
ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ : ಬಣ್ಣದ ಬದುಕು 8 – ಅಸೂಯೆ ತಂದ ಆಡಳಿತ

ನಾನು ತಿಳಿದಿದ್ದಂತೆಯೇ, ಕೆಲವೊಂದು ಮಂದಿ ಇತರ ಕಲಾವಿದರ ಮಾತ್ಸರ್ಯ ಬೀಜದ ಮೊಳಕೆಯಾಗಿತ್ತು. ಆದರೆ, ನಾನು ಹೋಗುತ್ತಲಿರುವುದು ಸರಿಯಾದ ದಾರಿ ಎಂಬ ಆತ್ಮವಿಶ್ವಾಸ ನನಗಿತ್ತು. ಹೇಗಾದರೂ ನನ್ನ ಮೇಲೆ ಮತ್ಸರವಿದ್ದರೆ ಅದು ನನ್ನ ಮೇಲಷ್ಟೆ ಪ್ರಯೋಗವಾಗಬೇಕು-ಬೇರಾರನ್ನೂ ಮುಟ್ಟಲಾರದು ಎಂದುಕೊಂಡಿದ್ದೆ.
ಹಾವು ಪುರಾಣ!
ನೀ ಹೀಂಗೆಲ್ಲ ಬಪ್ಪಕಾಗ..
ಮಕ್ಕಳ್ ಮರಿ ತಿರ್ಗು ಜಾಗ
ಜಾಗ ಖಾಲಿ ಮಾಡ ಬೇಗ …”
ಮನೆ ಕಡೆ ನಾಗರಹಾವು ಬಂದಾಗಲೆಲ್ಲಾ ಅದನ್ನು ಓಡಿಸೋವಾಗ “ಅದಕ್ಕೆ ನೋವು ಮಾಡಬೇಡಿ” ಅನ್ನೋ ದೊಡ್ಡವರ ರಾಗದ ಹಿನ್ನಲೆಯಲ್ಲಿ ನಮ್ಮ ಕುಂದಗನ್ನಡದ ಪ್ರಾಸ ಹೀಗಿತ್ತು
ನಮ್ಮ ಹಳ್ಳಿಗಳಲ್ಲಿ ಹಾವಿನ ಬಗ್ಗೆ ಭಯ ಮತ್ತು ಆಸಕ್ತಿ ಸ್ವಲ್ಪ ಕಮ್ಮಿನೇ ಜನರಲ್ಲಿ.ಆದರೆ ನಂಗೆ ಮಾತ್ರ ಇವತ್ತಿಗೂ ಅಷ್ಟೇ ಉತ್ಸಾಹ ಅವುಗಳ ಬಗ್ಗೆ.ಅದರಲ್ಲೂ ನಾಗರಹಾವು ಅಂದ್ರೆ ಸಕತ್ ಖುಷಿ..ಅದು ಮಾಡುವಷ್ಟು ಗೊಂದಲ ,ಖರ್ಚು,ಭಯ ಮತ್ಯಾವ ಹಾವುಗಳು ಮಾಡೋದಿಲ್ಲ.ಅಪರೂಪಕ್ಕೆ ಅವುಗಳು ಕೋಳಿ ಗೂಡಲ್ಲಿರೋ ಮೊಟ್ಟೆ ತಿನ್ನೋಕೆ ಬಂದರೆ ಈ ಅಕ್ಕ ಪಕ್ಕದ ಮನೇಲಿ ಎಲ್ಲ ಹೋ ದೇವ್ರ್ ಹಾವ್ ಬಂತ್ ..ಎಂದು ಪಡುವ ಸಂಭ್ರಮವೋ ಸಂಭ್ರಮ!ನಂತರ ಅದಕ್ಕಿಷ್ಟು ಹಾಲು ಇಟ್ಟು ,ಅಕ್ಕಿ ಚೆಲ್ಲಿ ಕೈ ಮುಗಿಯೋರು !ಆದರೆ ಅದು ಕುಡಿದದ್ದು ನಾ ನೋಡೇ ಇಲ್ಲ.ಪಾಪ !ಅದರ ಹೆದರಿಕೆ ಅದಕ್ಕೆ ಎಲ್ಲಿ ಹೊಡಿತಾರೋ ಅಂತ!ಯಾವ ಹಾವಿಗೂ ಇರದ ಮುಂಡು ಬಾಲ ಇದಕ್ಕೆ ಇರೋದರಿಂದ ಅದರ ನಿಕ್ ನೇಮ್ ಮುಂಡಪ್ಪ.
ಒಮ್ಮೆ ನಮ್ಮ ಪಕ್ಕದ ಕಾಡಿಗೆ ನವಿಲು ಹಿಡಿಯುವ ಗುಂಪೊಂದು ಬಂದಿತ್ತು.ಅವರ ಜೊತೆ ನಾವು ಕೂಡ ನೋಡಲು ಹೋಗಿದ್ದೆವು .ಚಂದದ ನವಿಲು ಗರಿ ಸಿಗುತ್ತಲ್ಲಾ ಅಂತ!ಸರಿ ಹೋಗ್ತಾನೆ ಒಂದು ದೊಡ್ಡ ನವಿಲು ಸಿಕ್ಕಿಬಿಟ್ಟಿತು.ಅವರು ಅದನ್ನು ಕೊಲ್ತಾರೆ ಅಂತ ಮಾತ್ರ ನಮಗೆ ಗೊತ್ತಿರಲಿಲ್ಲ.ಅವರು ಅದನ್ನ ಕೊಂದು ಹೊಟ್ಟೆ ಸೀಳಿದಾಗ ಅಲ್ಲೊಂದು ಪುಟ್ಟ ನಾಗರ ಮರಿ!ಆಮೇಲೆ ನಾಗರ ಹಾವಿನ ಹೆಣ ಕಂಡ ತಪ್ಪಿಗೆ (ಅಷ್ಟು ಚಂದದ ನವಿಲು ಕೊಂದಿದ್ದು ಮಾತ್ರ ಸರಿಯಂತೆ ಅವರ ಪ್ರಕಾರ ) ಸರ್ಪ ಸಂಸ್ಕಾರ ,ಅದೂ ಇದೂ ಪೂಜೆ ಮಾಡಬೇಕಾಯ್ತು ,ಆಮೇಲೆ ನವಿಲು ಹಿಡಿಯೋದು ಬಿಟ್ಟಿರಬೇಕು ಬಹುಶಃ
ಮತ್ತಷ್ಟು ಓದು 
ಹಸಿವಿನ ಹಾದರಕ್ಕೆ ಹುಟ್ಟಿದ ಭ್ರಷ್ಟಾಚಾರ…
-ಸಾತ್ವಿಕ್ ಎನ್ ವಿ
ಮೊನ್ನೆ ಮೂರು ದಿವಸ ಬೆಂಗಳೂರಿನಲ್ಲಿ ಇದ್ದೆ. ನಗರ ಸಾರಿಗೆ ಬಸ್ಸುಗಳೇ ನನ್ನ ಓಡಾಟದ ಒಡನಾಡಿಗಳು. ಮಂಗಳೂರಿನ ಬಸ್ಸುಗಳಲ್ಲಿ ಓಡಾಡಿದವರಿಗೆ ಇಲ್ಲಿನ ವ್ಯವಸ್ಥೆ ತುಸು ನಿಧಾನ ಆನ್ನಿಸೀತು. ಇದ್ದ ಮೂರು ದಿನವು ಓಡಾಟದ ಸಲುವಾಗಿ ಹತ್ತಾರು ಬಸ್ಸುಗಳಲ್ಲಿ ಪ್ರಯಾಣಿಸುವಾಗಲು ಒಂದು ಸಾಮಾನ್ಯ ಕ್ರಿಯೆಯೊಂದು ನನ್ನ ಗಮನಕ್ಕೆ ಬಂತು. ನೀವು ಬಸ್ಸು ಹತ್ತಿ ಒಂದೆರಡು ನಿಲ್ದಾಣಗಳ ನಂತರ ಇಳಿಯುವವರಾಗಿದ್ದರೆ ನೀವು ಸರಿಯಾದ ಹಣಕೊಟ್ಟರೂ ಕಂಡಕ್ಟರ್ ನಿಮಗೆ ಟಿಕೇಟ್ ಕೊಡುವುದಿಲ್ಲ!! ಒಮ್ಮೆ ನಾನು ಬಾಯಿ ಬಿಟ್ಟು ಕಂಡಕ್ಟರನ್ನು ಟಿಕೇಟ್ ಕೊಡುವಂತೆ ಕೇಳಿದೆ. ಅವನು ಕೈಯಲ್ಲಿಯೇ ಸನ್ನೆ ಮಾಡಿ ಸುಮ್ಮನಿರುವಂತೆ ಹೇಳಿದ. ನಿಧಾನಕ್ಕೆ ೫ ರೂಪಾಯಿಯನ್ನು ನನ್ನ ಕೈಗೆ ಕೊಟ್ಟ. ನನಗೆ ಏನು ಹೇಳಬೇಕೋ ತಿಳಿಯಲಿಲ್ಲ. ನಾನು ಇಳಿಯಬೇಕಿದ್ದ ಸ್ಟಾಪ್ ಗೆ ಮೆಜೆಸ್ಟಿಕ್ ನಿಂದ ೮ ರೂಪಾಯಿ ಟಿಕೇಟ್ ಕೊಳ್ಳಬೇಕು. ಆದರೆ ಕೊಟ್ಟ ಹತ್ತು ರೂಪಾಯಿಯಲ್ಲಿ ಐದು ರೂಪಾಯಿ ತೆಗೆದುಕೊಂಡು ಉಳಿದ ಐದು ರೂಪಾಯಿ ವಾಪಸ್ಸು ಕೊಟ್ಟ. ಟಿಕೇಟ್ ಮಾತ್ರ ಇಲ್ಲ. ಅವನ ಮುಖದಲ್ಲಿ ವಿನ್ ವಿನ್ ಸಿದ್ದಾಂತದ ಮಂದ ನಗೆಯಿತ್ತು. ನನ್ನ ಮನದಲ್ಲಿ ಇಡೀ ದಿನ ತಪ್ಪು ಮಾಡಿದ ಅಪರಾಧಿ ಪ್ರಜ್ಞೆ.
ಇಂಥ ಪ್ರಸಂಗಗಳು ಬೆಂಗಳೂರಿಗರಿಗೆ ಸಾಮಾನ್ಯವಿರಬಹುದು. ಆದರೆ ಒಮ್ಮೆಮ್ಮೆ ಭೇಟಿಕೊಡುವ ನನ್ನಂಥವರಿಗೆ ತೀರಾ ಮಜುಗರವನ್ನು ತಂದು ಬಿಡುತ್ತವೆ. ನನಗಂತೂ ಈ ಪ್ರಸಂಗವಾದ ನಂತರ ಬೆಂಗಳೂರಿನ ಕಂಡಕ್ಟರಗಳ ಬಗ್ಗೆ ವಿಪರೀತ ಕೋಪ ಬಂದದ್ದೂ ನಿಜ. ಅಗಲೇ ನಿಶ್ಚಯ ಮಾಡಿದೆ, ಮತ್ತೊಮ್ಮೆ ಹೀಗೇನಾದರೂ ಕಡಿಮೆ ಹಣ ತೆಗೆದುಕೊಂಡು ಟಿಕೇಟ್ ಕೊಡದಿದ್ದರೆ ಸರಿಯಾಗಿ ಬೈಯ್ಯಬೇಕು ಅಂತ. ಮರುದಿನವೂ ಕಂಡಕ್ಟರ್ ಅದೇ ಕೆಲಸ ಮಾಡಿಬಿಡಬೇಕೇ? ನನಗೆ ಎಲ್ಲಿತ್ತೋ ಸಿಟ್ಟು … ಬಾಯಿಗೆ ಬಂದಂತೆ ಮಾತಾಡಲು ಆರಂಭಿಸಿದೆ. ಆದರೆ ಮಹಾನುಭಾವನಿಗೆ ಅದು ತಾಗಿದಂತೆ ಕಾಣಲೇ ಇಲ್ಲ!!! ಏನೂ ಆಗಿಯೇ ಇಲ್ಲ ಎಂಬಂತೆ ನನ್ನ ಪಕ್ಕದಲ್ಲಿ ಖಾಲಿ ಇದ್ದ ಸೀಟಿನಲ್ಲಿ ಕುಳಿತು ನಸುನಗುತ್ತ ಕೇಳಿದ ’ಸಾರ್, ನೀವು ಈ ಊರಿಗೆ ಹೊಸಬರಾ? ಅಂತ. ನಾನು ’ಅದೆಲ್ಲ ಇರಲಿ ಟಿಕೇಟ್ ಕೊಡಿ’ ಅಂದೆ. ಅವನು ಮತ್ತೂ ಕೂಲ್ ಆಗಿ ಮಾತಾಡೋಕೆ ಸ್ಟಾರ್ಟ್ ಮಾಡಿದ. ’ಸಾರ್, ನಿಮಗೆ ನಾವು ಟಿಕೇಟ್ ಕೊಡದೇ ಉಳಿಸಿದ ೫೦ – ೧೦೦ ರೂಪಾಯಿ ಬಗ್ಗೆ ಮಾತ್ರ ಗೊತ್ತು. ಅದರ ಬಗ್ಗೆ ನಿಮಗೆ ಸಿಟ್ಟು ಬರುತ್ತೆ. ಆದರೆ ನಮಗೆ ನಮ್ಮ ಜೀವನದ ಬಗ್ಗೆಯೇ ಸಿಟ್ಟು ಬರುತ್ತೆ ಸರ್. ಒಂದು ಕಡೆ ಮೇಲಾಧಿಕಾರಿಗಳ ಒತ್ತಡ, ಇನ್ನೊಂದು ಕಡೆ ಪ್ರಯಾಣೀಕರ ಕಿರಿಕಿರಿ, ಒಂದು ಸರಿಯಾದ ಊಟ ನಿದ್ದೆಯನ್ನು ಮಾಡೋಕೆ ಆಗದ ಪರಿಸ್ಥಿತಿಯಲ್ಲಿ ನಾವಿದ್ದೇವೆ ಸರ್. ಮತ್ತಷ್ಟು ಓದು 
ಸಂಸ್ಕೃತಿ ಸಂಕಥನ – ೮
– ರಮಾನಂದ ಐನಕೈ
ಮೂರ್ತಿ ಪೂಜೆಗೆ ಕಾರಣಗಳು ಬೇಕಾಗಿಲ್ಲ
ಯಾವ ಸಂಸ್ಕೃತಿಯಲ್ಲಿ ರಿಲಿಜನ್ ಇದೆಯೋ ಆ ಸಂಸ್ಕೃತಿ ವಿಗ್ರಹ ಆರಾಧನೆ ಅಥವಾ ಮೂರ್ತಿ ಪೂಜೆಯನ್ನು ವಿರೋಧಿಸುತ್ತದೆ. ಏಕೆಂದರೆ ರಿಲಿಜನ್ನಿನಲ್ಲಿ ಗಾಡ್ ಹಾಗೆ ಆಜ್ಞಾಪಿಸಿದ್ದಾನೆ. ಗಾಡ್ ಮಾತ್ರ ನಿಜವಾದ ದೇವರು. ಉಳಿದ ದೇವರುಗಳೆಲ್ಲ ಗಾಡ್ನ ವೈರಿ ಸೈತಾನನ ಪ್ರತಿರೂಪಗಳು. ಹಾಗಾಗಿ ಸೈತಾನನ ಪ್ರತಿರೂಪವಾದ ನೂರಾರು ಮೂರ್ತಿಗಳನ್ನು ಪೂಜಿಸುವುದು ಅನೈತಿಕ. ಪಾಶ್ಚಾತ್ಯರು ಅದೇ ದೃಷ್ಟಿಯಲ್ಲಿ ನಮ್ಮ ಮೂರ್ತಿಪೂಜೆಗಳನ್ನು ನೋಡಿ ಟೀಕೆ ಮಾಡಿದರು. ಆದರೆ ಅದು ನಮಗ ಅರ್ಥವೇ ಆಗಲಾರದು. ಏಕೆಂದರೆ ನಮ್ಮದು ರಿಲಿಜನ್ನೇ ಇಲ್ಲದ ಬಹುಸಂಸ್ಕೃತಿಗಳ ನಾಡು.
ಪಾಶ್ಚಾತ್ಯರು ಭಾರತೀಯರ ಮೂರ್ತಿ ಪೂಜೆ ಯನ್ನು ಅನೈತಿಕ ಎಂದು ವ್ಯಾಖ್ಯಾನಿಸಿದರು. ಏಕಿರ ಬಹುದು? ಅದರ ಹಿಂದಿನ ನಿಜ ಏನಿರಬಹುದು?
ಅವತ್ತು ಎದೆ ನೋವೂ ಬಂದಿರಲಿಲ್ಲ, ಶರಣರೂ ಬರಲಿಲ್ಲ..!
-ಕಾಲಂ ೯
ನೂರು ವರ್ಷ ದಾಟಿದ ಸಿದ್ಧಗಂಗಾ ಸ್ವಾಮೀಜಿ ಜೈಲು-ಆಸ್ಪತ್ರೆ ಹುಡುಕಿಕೊಂಡು ಯಡಿಯೂರಪ್ಪನವರನ್ನು ನೋಡಲು ಹೋಗಿದ್ದಾರಲ್ಲ? ಏನಿದರ ಹಿಂದಿನ ಹಕೀಕತ್ತು? ಧರ್ಮಾಚರಣೆಗೂ ಪುರುಸೊತ್ತು ಇಲ್ಲದಷ್ಟು ಸಾಮ್ರಾಜ್ಯ ಕಟ್ಟಿಕೊಂಡು ಸ್ವಾಮೀಜಿಯೊ ಅಥವಾ JSS ಕಂಪೆನಿಯ CEO ನೋ ಎಂಬಂತಿರುವ ಜಗದ್ಗುರುಗಳು ಧಾವಿಸಿ ಬಂದರಲ್ಲ? ಅಂತಹದೇನು ಆಗಿತ್ತಲ್ಲಿ? ರಂಭಾಪುರಿಗಳು ಸೇರಿದಂತೆ ಅನೇಕ ಸಣ್ಣ-ಪುಟ್ಟ ವೀರಶೈವ ಸ್ವಾಮೀಜಿಗಳು ಯಡಿಯೂರಪ್ಪನವರನ್ನು ಸಂತೈಸಲು ಸಾಲುಗಟ್ಟಿದ್ದು ಮಾಧ್ಯಮಕ್ಕೆ ಆಶ್ಚರ್ಯವೆನಿಸಿರಲಿಲ್ಲ. ಆದರೆ ಈ ಹಿರಿತಲೆಗಳು ಹಾಗೇ ದೌಡಾಯಿಸಿದ್ದರ ಹಿಂದೇನು ನಡೆದಿದೆ? ಇದು ಮಾಧ್ಯಮದ ಒಳಗೂ-ಹೊರಗೂ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಸೋಮವಾರದ ತಮ್ಮ ಅಂಕಣದಲ್ಲಿ ಅಮೀನ್‌ಮಟ್ಟು ತುಂಬಾ ಆಪ್ತವಾಗಿಯೇ ಯಡಿಯೂರಪ್ಪನವರ ಪ್ಲಸ್ಸು-ಮೈನಸ್ಸುಗಳನ್ನು ಹೊರಹಾಕಿದ್ದನ್ನು ಓದಿದ ಅನೇಕರು ’ಈ ಮಠಾಧಿಪತಿಗಳನ್ನೇಕೆ ಬಿಟ್ಟಿರಿ’ ಎಂದು ಪ್ರತಿಕ್ರಿಯಿಸಿದ್ದಾರೆ. ಸರ್ವ ವೀರಶೈವ ಮಠಗಳಿಗೂ ಒಬ್ಬನೇ ಆಡಳಿತಾಧಿಕಾರಿ ಎಂಬಂತಿರುವ ಸಚಿವ ಸೋಮಣ್ಣ ಬೆನ್ನುಹತ್ತಿ ಇವರನ್ನೆಲ್ಲ ಹೊರಡಿಸಿಕೊಂಡು ಬರುತ್ತಿದ್ದಾರೆಯೇ? ಸರ್ಕಾರದಿಂದ ದೇಣಿಗೆಯಾಗಿ ಪಡೆದ ೩-೫ ಕೋಟ ರೂಗಳ ಹಂಗು ಹಿಂಗೆಲ್ಲ ಮಾಡುವಂತೆ ಮಾಡಿತೆ?
ಒಟ್ಟು ರಾಜ್ಯದ ನಾಯಕತ್ವದ ಎಲ್ಲ ಲಕ್ಷಣಗಳು ಕರಗಿ ಶುದ್ಧ ವೀರಶೈವ ಮುಖಂಡನಂತೆ ಗೋಚರಿಸುತ್ತಿರುವ ಯಡಿಯೂರಪ್ಪನವರ ಜೈಲು-ಆಸ್ಪತ್ರೆಗಳ ಹರಾಕಿರಿ ನಗೆಪಾಟಲಾಗಿ ಹೋಗಿರುವಾಗ ಈ ’ಗೌರವಾನ್ವಿತ’ರೇಕೆ ಹರಸಲು ಹೊರಟರು? ಮತ್ತಷ್ಟು ಓದು 
ಕರ್ ನಾಟಕ – ಘಟನಾವಳಿಗಳ ವೈಭವೀಕರಣ
ಜನ ಲೋಕಪಾಲ್ ಬಿಲ್ ಗಾಗಿ ಒತ್ತಾಯಿಸಿ ನಡೆದ ಭ್ರಷ್ಟಾಚಾರ ವಿರೋಧಿ ಚಳುವಳಿಯನ್ನ ಸಮೂಹ “ಸನ್ನಿ” ಅಂತ ಕೆಲ ಜನ ಕರೆದರು. ಆದರೆ ರಾಜ್ಯದಲ್ಲಿ ಕಳೆದೊಂದು ತಿಂಗಳಿಂದ ನಡೆಯುತ್ತಿರುವ ಪ್ರಹಸನ ಗಳನ್ನು ಯಾವ ಸನ್ನಿ ಅಂತಾರೆ? ನಟ ದರ್ಶನ್ ಪ್ರಹಸನದಿಂದ ಹಿಡಿದು ಯಡಿಯೂರಪ್ಪ ಕೋರ್ಟ್ ಗೆ ಅಲೆದಾಡಲು ಶುರುವಾದ ದಿನದಿಂದ ಇಂದಿನವರೆಗೆ ಬಿಟ್ಟು ಬಿಡದೆ ಹಿಂಬಾಲಿಸುತ್ತಿರುವುದು ಯಾರು? ಯಾಕೆ ಈ ವೈಭವೀಕರಣ?ನಿನ್ನೆ ಬಿಜೆಪಿಯ ಧನಂಜಯಕುಮಾರ್ ಸಿಎನ್ ಎನ್ ಐಬಿಎನ್ ವಾಹಿನಿಯಲ್ಲಿ ನಡೆದ ಚರ್ಚೆಯ ವೇಳೆ ರಾಜ್ ದೀಪ್ ಸರ್ದೇಸಾಯಿ ಅವರಿಗೆ ನೇರವಾಗಿ ಪ್ರಶ್ನೆ ಕೇಳಿದರು. ಯಡ್ಯೂರಪ್ಪನವರನ್ನು ಕವರೇಜ್ ಮಾಡಿದ ರೀತಿಯಲ್ಲಿ ನೀವು ಸೋನಿಯಾಗಾಂಧಿ ಯವರನ್ನು ಯಾಕೆ ಕವರೇಜ್ ಮಾಡಲಿಲ್ಲ
ಸೋನಿಯಾಗಾಂಧಿ ಚಿಕಿತ್ಸೆ ಗಾಗಿ ಅಮೇರಿಕದ ಒಂದು ಆಸ್ಪತ್ರೆಗೆ ದಾಖಲಾಗಿದ್ದ ಸಂಧರ್ಭದಲ್ಲಿ ಇಂತಹ ಆಸಕ್ತಿ ಯಾರು ವಹಿಸಿರಲಿಲ್ಲ. ಅವರಿಗೆ ಯಾವ ಕಾಯಿಲೆ ಇತ್ತು, ಯಾವ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆದರು ಈಗ ಹೇಗಿದ್ದಾರೆ ಅಂತ ಯಾವುದೇ ವಿಷಯಗಳಬಗ್ಗೆ ಚರ್ಚಿಸಲೇ ಇಲ್ಲ ಮತ್ತು ಜನರಿಗೆ ಅದರ ಬಗ್ಗೆ ಹೆಚ್ಚಿನ ಮಾಹಿತಿ ಕೊಡುವ ಪ್ರಯತ್ನ ಮಾಡಲೇ ಇಲ್ಲ. ದೇಶದ ಮಹಾನ್ನಾಯಕಿಯ ಬಗ್ಗೆ ಪ್ರಜೆಗಳಿಗೆ ತಿಳಿದುಕೊಳ್ಳುವ ಅಗತ್ಯವಿಲ್ಲ ಎಂದು ಸುಮ್ಮನಾಗಿದ್ದೀರ? ಮತ್ತಷ್ಟು ಓದು 
ಸಂಸ್ಕೃತಿ ಸಂಕಥನ – ೭
– ರಮಾನಂದ ಐನಕೈ
ಕ್ರಿಯಾ ಜ್ಞಾನವೇ ಬದುಕಿನ ಶಿಕ್ಷಣ
ನಮ್ಮೂರಿನಲ್ಲೊಬ್ಬ ನಿವೃತ್ತ ಭೌತಶಾಸ್ತ್ರ ಪ್ರಾಧ್ಯಾಪಕರಿದ್ದಾರೆ. ಎಂ.ಎಸ್.ಸಿ.ಯಲ್ಲಿ ಬಂಗಾ ರದ ಪದಕ ಪಡೆದವರು. ನಿವೃತ್ತಿಯ ನಂತರ ಊರಿಗೆ ಬಂದು ಕೃಷಿಕರಾಗಿದ್ದಾರೆ. ಅವರಿಗೆ ಗೊತ್ತಿ ಲ್ಲದ ವಿಷಯವಿಲ್ಲ. ಯಾವ ಕ್ಷೇತ್ರದ ಬಗ್ಗಾದರೂ ಘಂಟೆಗಟ್ಟಲೇ ಮಾತನಾಡುತ್ತಾರೆ. ತಮಗೆ ಸಿಕ್ಕಾ ಪಟ್ಟೆ ಜ್ಞಾನವಿದೆಯೆಂಬ ಅಹಂಕಾರವೂ ಇದೆ. ಆದರೆ ಒಂದು ತೊಂದರೆ ಅಂದರೆ ಅವರು ಅಂದು ಕೊಂಡಂತೆ ಒಂದೂ ಆಗುವುದಿಲ್ಲ. ಅವರ ಮಾತಿ ನಲ್ಲಿ ತೋರುವ ಚಾಕಚಕ್ಯತೆ ಕೃತಿಯಲ್ಲಿ ಕಾಣುವು ದಿಲ್ಲ. ಉದಾಹರಣೆಗೆ ಅವರು ಶಕ್ತಿಯ ಮೂಲದ ಬಗ್ಗೆ ಅಮೂಲಾಗ್ರ ತಿಳುವಳಿಕೆ ಹೊಂದಿದ್ದಾರೆ. ವಿದ್ಯುತ್ ಅನ್ವೇಷಣೆಯ ಕುರಿತು ಸವಿವರವಾದ ಮಾಹಿತಿ ನೀಡುತ್ತಾರೆ. ವಿದ್ಯುತ್ ಕಂಡು ಹಿಡಿದ ವರು, ವಿದ್ಯುತ್ ಹೇಗೆ ಉತ್ಪಾದಿಸಲ್ಪಡುತ್ತದೆ; ತಂತಿ ಹೇಗೆ ವಿದ್ಯುತ್ ವಾಹಕವಾಗುತ್ತದೆ; ಬಲ್ಪಿನ ಒಳ ಗಡೆಯಿಂದ ಹೇಗೆ ಪ್ರಕಾಶ ನೀಡುತ್ತದೆ ಇತ್ಯಾದಿ. ಅವರ ನೆಚ್ಚಿನ ಆಳು ಶಂಕರ. ಆತ ಅಕ್ಷರ ಜ್ಞಾನಿಯಲ್ಲ. ಅವನಿಗೆ ಈ ಪ್ರಪಂಚದ ಬಗ್ಗೆ ಕಡಿಮೆ ತಿಳುವಳಿಕೆ ಇದೆ. ಮೇಸ್ಟ್ರು ಹೇಳಿದಷ್ಟು ಮಾಡುವುದು ಅವನ ಕಾಯಕ. ವಿದ್ಯುತ್ತಿನ ಬಗ್ಗೆ ಇಷ್ಟೆಲ್ಲ ಮಾಹಿತಿ ನೀಡುವ ಪ್ರಾಧ್ಯಾಪಕರಿಗೆ ಮನೆಯಲ್ಲಿ ಫ್ಯೂಸ್ ಹೋದರೆ, ಹೋಲ್ಡರಿನಲ್ಲಿ ವಯರ್ ಬಿಟ್ಟರೆ ಹಾಕಲು ಬರುವುದಿಲ್ಲ. ಆ ಕೆಲಸ ಮಾಡುವವನು ಶಂಕರ. ವಿದ್ಯುತ್ತಿಗೆ ಸಂಬಂಧಿಸಿದ ಅಷ್ಟೂ ರಿಪೇರಿ ಕೆಲಸವನ್ನು ಶಂಕರ ಮಾಡುತ್ತಾನೆ. ಆತನನ್ನು ಕೇಳಿ ದರೆ ತನಗೆ ಇದರ ಬಗ್ಗೆ ತಿಳುವಳಿಕೆಯೇನಿಲ್ಲ. ಹೀಗೆ ಮಾಡಿ ಮಾಡಿ ಕಲಿತೆ ಅನ್ನುತ್ತಾನೆ. ಜೀವನದ ಚಿಕ್ಕ ಕೆಲಸಕ್ಕೆ ನೆರವಿಗೆ ಬಾರದ ಪ್ರಾಧ್ಯಾಪಕರ ಪಾಂಡಿತ್ಯವನ್ನು ಏನನ್ನೋಣ? ಪ್ರಾಧ್ಯಾಪಕರದ್ದು ಲೋಕಜ್ಞಾನ, ಶಂಕರನದ್ದು ಕ್ರಿಯಾಜ್ಞಾನ ಅನ್ನೋಣವೇ? ಉತ್ತರ ಗೊತ್ತಿಲ್ಲ. ಹುಡುಕಲು ಪ್ರಯತ್ನಿಸೋಣ.
ಮತ್ತಷ್ಟು ಓದು 
ಬಡವರ ಬದುಕಿಗೆ ‘ಅರ್ಥ’ವೇ ಇಲ್ವಾ?
-ಮರಳಿಧರ ದೇವ್
ದಿನಕ್ಕೆ ಒಬ್ಬ ವ್ಯಕ್ತಿ ಕೇವಲ ೨೫ ರೂಪಾಯಿಗಳನ್ನು ಗಳಿಸಿದರೆ ಸಾಕಂತೆ, ಇದಕ್ಕಿಂತ ಹೆಚ್ಚಿಗೆ ಖರ್ಚು ಮಾಡುವವರು ಬಡವರಲ್ಲವಂತೆ. ಈ ರೀತಿ ಮೂರ್ಖತನದ ಹೇಳಿಕೆ ದಾಖಲು ಮಾಡಿರುವುದು ಯೋಜನಾ ಆಯೋಗ. ಒಬ್ಬ ವ್ಯಕ್ತಿಯ ದೀನದ ಖರ್ಚು ೨೫ ರೂಪಾಯಿಗಳಿಗಿಂತ ಹೆಚ್ಚಿದ್ದರೆ ಅವರು ಸರಕಾರದಿಂದ ಯಾವುದೇ ವಿಶೇಷ ಅನುದಾನ ಪಡೆಯಲು ಅರ್ಹರಲ್ಲ.
ಈ ರೀತಿಯ ವರದಿ ತಯ್ಯಾರಿಸುವವರಿಗೆ ದೇಶದ ಹಣದುಬ್ಬರದ ಹಾಗು ದೈನಂದಿನ ಖರ್ಚುಗಳಿಗೆ ಬೇಕಾಗಿರುವ ಹಣದ ಬಗ್ಗೆ ಅರಿವಿದೆಯೇ? ಇಂತಹ ಜನರು ಯೋಜನಾ ಅಯೋಗದಲ್ಲಿರೋದ್ರಿಂದಾನೆ ದೇಶದಲ್ಲಿ ಹಣದುಬ್ಬರ ಗಗನಕ್ಕೆ ಏರ್ತಾ ಇದ್ರೂ ಸರಕಾರಗಳು ಏನು ಆಗೇ ಇಲ್ಲ ಅನ್ನೋ ರೀತಿ ತೂಕಡಿಸುತ್ತಾ ಕೂತಿವೆ. ಅಲ್ಲ ಸ್ವಾಮಿ ಪ್ರತಿ ತಿಂಗಳಿಗೊಮ್ಮೆ ಪೆಟ್ರೋಲ್ ದರವನ್ನು ಮನಸೋ ಇಚ್ಚೆ ಹೆಚ್ಚಿಸಿ ಎಲ್ಲ ಪದಾರ್ಥಗಳ ಬೆಲೆಯನ್ನು ನಿಯಂತ್ರಣಕ್ಕೆ ಬಾರದೆ ಹಾಗೆ ಮಾಡಿ ಈಗ ಬರಿ ೨೫ ರೂಪಾಯಿಗಳಲ್ಲಿ ನಿಮ್ಮ ಜೀವನ ನಡೆಸಬೇಕು ಅಂತ ಆಯೋಗದ ವರದಿ ಹೇಳಿದ್ರೆ ಜನ ಸಾಮಾನ್ಯರು ಎಲ್ಲಿಗೆ ಹೋಕ್ಬೇಕು? ಮತ್ತಷ್ಟು ಓದು 





