ವಿಷಯದ ವಿವರಗಳಿಗೆ ದಾಟಿರಿ

Posts from the ‘ಭಾರತ’ Category

24
ಸೆಪ್ಟೆಂ

ಸಂಸ್ಕೃತಿ ಸಂಕಥನ – ೬

ರಮಾನಂದ ಐನಕೈ

ಸಂಶೋಧನೆ ಅಂದರೆ ಏನು? ಇತ್ತೀಚಿನ ದಿನಗಳಲ್ಲಿ ಯಾರಾದರೂ ಸಂಶೋಧನೆ ಮಾಡಿದ್ದಾರೆ ಅಥವಾ ಪಿ.ಎಚ್.ಡಿ. ಪದವಿ ಪಡೆದಿದ್ದಾರೆಂದರೆ ನಗು ಬರುತ್ತದೆ. ನೌಕರಿ ಪಡೆಯಲು ಅಥವಾ ನೌಕರಿಯಲ್ಲಿ ಬಡ್ತಿ ಪಡೆಯಲು ಈ ಪಿ.ಎಚ್.ಡಿ. ಅರ್ಹತೆಯಾಗುತ್ತದೆಯೆಂಬ ಕಾರಣಕ್ಕೆ ಮಾಡುತ್ತಾರೆಯೇ ವಿನಾ ಆಸಕ್ತಿಗಾಗಿ ಅಲ್ಲ. ನಮ್ಮ ವಿಶ್ವವಿದ್ಯಾಲಯಗಳ ಸಂಶೋಧನಾ ವಿಭಾಗಗಳಿಗೆ ಈ ದುರ್ಗತಿ ಬಂದಿದೆ. ಹಣ ಕೊಟ್ಟರೆ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರೇ ಪ್ರಬಂಧ ಬರೆದು ಪದವಿ ಕೊಡುತ್ತಾರೆ. ಪಿ.ಎಚ್.ಡಿ. ಎಂಬುದು ವ್ಯಾಪಾರವಾಗಿದೆ. ಸಂಶೋಧನೆಗೆ ಆಯ್ದುಕೊಳ್ಳುವ ವಿಷಯವಾದರೂ ಎಂಥದ್ದು. ಯಾರಿಗೂ ಪ್ರಯೋಜನವಾಗದ ವಿಷಯ. ಸಂಶೋಧನಾ ಪ್ರಬಂಧವನ್ನು ನೆಟ್ಟಗೆ ಮೂರು ಜನರು ಓದಲಾರರು. ಈ ರೀತಿಯ ಸಂಶೋಧನೆಗಳಿಂದ ಅಥವಾ ಸಂಶೋಧಕರಿಂದ ದೇಶಕ್ಕೆ ಏನಾದರೂ ಪ್ರಯೋಜನ ಇದೆಯಾ?

ಸುಮಾರು ಹತ್ತು ವರ್ಷಗಳ ಹಿಂದಿನ ಘಟನೆ. ಶಿರಸಿಯ ಗಣಪತಿ ದೇವಸ್ಥಾನದ ಹತ್ತಿರವಿರುವ ಶಂಕರಹೊಂಡದ ಸ್ವಚ್ಛತಾ ಕಾರ್ಯಕ್ರಮ ನಡೆಯತ್ತಿತ್ತು. ಆಗ ಒಂದು ಪುಟ್ಟ ವಿಗ್ರಹ ಸಿಕ್ಕಿತು. ಕ್ಷಣಾರ್ಧದಲ್ಲಿ ಇಡೀ ಶಿರಸಿ ನಗರ ವ್ಯಾಪಿಸಿತು ಈ ಸುದ್ದಿ. ಅಷ್ಟರಲ್ಲಿ ಇತಿಹಾಸ ಸಂಶೋಧಕನೊಬ್ಬ ಅಲ್ಲಿಗೆ ಬಂದ ಆತ ಆಗಷ್ಟೇ ಅರೆಕಾಲಿಕ ಇತಿಹಾಸ ಉಪನ್ಯಾಸಕನಾಗಿ ಸೇರಿದವ. ಆಗಲೇ ಹೆಸರಿನ ಹಿಂದೆ ಪ್ರೊಫೆಸರ್ ಎಂದು ಬಳಸುತ್ತಿದ್ದ. ಆತ ಈ ವಿಗ್ರಹವನ್ನು ಕೂಲಂಕಶವಾಗಿ ಪರಿಶೀಲಿಸಿ ಅದರ ಕುರಿತು ಪತ್ರಿಕಾ ಪ್ರಕಟಣೆ ನೀಡಿದ.

ಮತ್ತಷ್ಟು ಓದು »

23
ಸೆಪ್ಟೆಂ

ಕುರುಡಾಗದಿರು ಭಾರತೀಯ ನಿನ್ನ ಕಣ್ಣುಗಳಿರುವ ತನಕ..

ಅಶ್ವಿನ್ ಎಸ್ ಅಮೀನ್

ಕೋಮುವಾದ, ಜಾತಿವಾದ,  ಇವುಗಳ ನಡುವಿನ ಸಂಘರ್ಷಗಳು ಯಾವ ದೇಶದಲ್ಲಿ ಎಷ್ಟರವರೆಗೆ ಇರುತ್ತವೆಯೋ ಅಲ್ಲಿಯ ತನಕ ಆ ದೇಶದ ಬೆಳವಣಿಗೆ ಕುಂಠಿತವಾಗಿ ಸಾಗುತ್ತದೆ. ಅದರಲ್ಲೂ ಆಳುವ ಸರಕಾರಗಳು ನಡೆಸುವ ಒಂದು ಸಮುದಾಯದವರ ಓಲೈಕೆ ಅದು ಅಲ್ಪಸಂಖ್ಯಾತರನ್ನಾಗಲೀ, ಬಹುಸಂಖ್ಯಾತರನ್ನಾಗಲೀ ದೇಶದ ಹಿತದೃಷ್ಟಿಯಿಂದ ಒಳ್ಳೆಯದಲ್ಲ.

ನಮ್ಮೀ ಭಾರತ ಇದೆಲ್ಲ ಸಮಸ್ಯೆಗಳಿಂದ ಹೊರತಾಗಿಲ್ಲ.. ಬಹುಶಃ ಈ ತರಹದ ಕೋಮು ವಿಂಗಡಣೆ, ಜಾತಿ ವಿಂಗಡಣೆ ರಾಜಕೀಯ ಭಾರತದಲ್ಲಿ ಬಿಟ್ಟರೆ ಬೇರೆಲ್ಲೂ ಕಾಣಸಿಗದು..! ತಾಜಾ ಉದಾಹರಣೆಯಾಗಿ ಕೇಂದ್ರದ NAC ಸಿದ್ದಪಡಿಸಿದ ಕೋಮು ಸಂಘರ್ಷ ನಿಯಂತ್ರಣಾ ಕಾಯಿದೆಯ ಕರಡು ರೂಪದಲ್ಲೊಮ್ಮೆ ಕಣ್ಣಾಡಿಸಿ. ಇಲ್ಲಿ ಕಾಣಸಿಗುವುದು ಅಲ್ಪ ಸಂಖ್ಯಾತ, ಬಹು ಸಂಖ್ಯಾತ, ಪರಿಶಿಷ್ಟ ವರ್ಗ – ಪಂಗಡಗಳೆಂಬ ವಿಂಗಡಣಾ ರಾಜಕೀಯ.
ಕೋಮು ಸಂಘರ್ಷಗಳಲ್ಲಿ ತಪ್ಪಿತಸ್ಥರಾದವರಿಗೆ ಎಲ್ಲರಿಗೂ ಶಿಕ್ಷೆಯಾಗುವುದಾದರೆ ಈ ಕೋಮು ಸಂಘರ್ಷ ನಿಯಂತ್ರಣ ಕಾಯಿದೆ ಸ್ವಾಗತಾರ್ಹವಾಗುತಿತ್ತು. ಇಡೀ ಭಾರತಕ್ಕೆ ಭಾರತವೇ NAC ಯ ಮುಖ್ಯಸ್ಥೆ ಸೋನಿಯಾ ಗಾಂದಿಯವರನ್ನು ಅಭಿನಂದನೆಗಳಿಂದ ಮುಳುಗೇಳಿಸುತ್ತಿತ್ತು. ಆದರೆ ಹಾಗಾಗಲಿಲ್ಲ..! ಕಾರಣ ಇಲ್ಲಿ ಕೇವಲ ಬಹುಸಂಖ್ಯಾತರಿಗಷ್ಟೇ ಶಿಕ್ಷೆ.. ಅಲ್ಪಸಂಖ್ಯಾತರು ಯಾವುದೇ ಗಲಬೆಗಳಲ್ಲಿ ಪಾಲ್ಗೊಂಡರೂ ಈ ಕಾಯಿದೆಯಡಿ ಶಿಕ್ಷೆಯಿಲ್ಲ. ಅದರಲ್ಲೂ ಬೆಂಕಿಗೆ ತುಪ್ಪ ಸುರಿದಂತೆ ಬಹುಸಂಖ್ಯಾತ ಹಿಂದೂ ಧರ್ಮದಿಂದ ಪರಿಶಿಷ್ಟ ವರ್ಗ-ಪಂಗಡಗಳನ್ನು ಬೇರ್ಪಡಿಸಿರುವುದು..! ಪರಿಶಿಷ್ಟ ವರ್ಗ-ಪಂಗಡಗಳಿಗೆ ಸೌಲಭ್ಯ ಕಲ್ಪಿಸಿರುವುದು ಒಳ್ಳೆಯದೇ ಆಗಿದೆ. ಆದರೆ ಇಲ್ಲಿ ಭಾರತದ ಮೂಲ ಧರ್ಮವಾದ ಸನಾತನ ಹಿಂದೂ ಧರ್ಮವನ್ನು ಒಡೆಯುವ ಷಡ್ಯಂತ್ರ ಅಡಗಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಬೇಕು. ಮತ್ತಷ್ಟು ಓದು »
13
ಸೆಪ್ಟೆಂ

ಅಶ್ವಮೇಧ ಯಾಗ…

– ವೇದಸುಧೆ

ಅಶ್ವಮೇಧ ಯಾಗ: ಶತಪಥ ಬ್ರಾಹ್ಮಣದಲ್ಲಿ ಅಶ್ವಮೇಧದ ಬಗ್ಗೆ ಹೇಳಿದೆ…….. “ಅಶ್ವಂ ಇತಿ ರಾಷ್ಟ್ರಂ” ಅದರ ವಿವರಣೆ ಹೀಗಿದೆ. ಶ್ವ: ಅಂದರೆ ನಾಳೆ. ಅಶ್ವ: ಅಂದರೆ ಯಾವುದಕ್ಕೆ ನಾಳೆ ಇಲ್ಲವೋ ಅದು.ಯಾವುದಕ್ಕೆ ನಾಳೆ ಎನ್ನುವುದು ಇಲ್ಲವೋ ಅದಕ್ಕೆ ನಿನ್ನೆ ಎಂಬುದೂ ಇಲ್ಲ. ಅಂದರೆ ಯಾವುದು ನಿರಂತರವಾಗಿ ಇದ್ದೇ ಇರುತ್ತದೋ ಅದಕ್ಕೆ ನಿನ್ನೆ ನಾಳೆಗಳಿಲ್ಲ.ಯಾವುದಕ್ಕೆ ನಿನ್ನೆ ನಾಳೆಗಳಿರುತ್ತದೆ ಎಂದರೆ ಯಾವುದುಶಾಶ್ವತ ವಲ್ಲವೋ ಅದಕ್ಕೆ ಇರುತ್ತದೆ. ನಿನ್ನೆ ಇತ್ತು, ಇವತ್ತು ಇದೆ. ನಾಳೆ ಗೊತ್ತಿಲ್ಲ ಅಂದರೆ ಅದು ಶಾಶ್ವತವಲ್ಲ ಎಂದಾಯ್ತು.ಯಾವುದು ನಿನ್ನೆ ಇತ್ತು, ಇವತ್ತೂ ಇದೆ, ನಾಳೆಯೂ ಇರುತ್ತದೋ ಅದು ಮಾತ್ರ ಶಾಶ್ವತ.ಯಾವುದು ನಿರಂತರವಾಗಿರುತ್ತದೆ, ಅದು ಅಶ್ವ.ಆದ್ದರಿಂದಲೇ “ಅಶ್ವಂ ಇತಿ ರಾಷ್ಟ್ರಂ” ನಾನು ಇವತ್ತು ಇದ್ದೀನಿ, ನಾಳೆ ಗೊತ್ತಿಲ್ಲ.ಆದರೆ ರಾಷ್ಟ್ರಶಾಶ್ವತ.[“ದೇಹ ನಶ್ವರವೆಂದು, ದೇಶಶಾಶ್ವತವೆಂದು, ನಶ್ವರವುಶಾಶ್ವತಕೆ ಮುಡಿಪಾಗಲೆಂದು” ಎಂಬ ಗೀತೆ ಕೇಳಿರುವೆ] ನಾವೆಲ್ಲಾ ಪ್ರಜೆಗಳು ಇಂದು ಇದ್ದೀವಿ. ಇನ್ನೊಂದು ಐವತ್ತು ವರ್ಷ ನಾವು ಇರಬಹುದೇನೋ , ಮತ್ತೆ ಬೇರೆ ಪ್ರಜೆಗಳ ಹುಟ್ಟು, ಸಾವು, ಇದೆಲ್ಲಾ ನಡೆಯುತ್ತಲೇ ಇರುತ್ತದೆ.ಎಷ್ಟೋ ತಲೆಮಾರು ಕಳೆಯುತ್ತಲೇ ಇರುತ್ತದೆ ,ಅದರೆ ರಾಷ್ಟ್ರ ಮಾತ್ರ ನಿರಂತರ. ನಿರಂತರವಾಗಿರುವ ಭೂಮಿ ರಾಷ್ಟ್ರ. ಇಂದು ಇದ್ದು ನಾಳೆ ಇಲ್ಲಾವಾಗುವವರು ನಾವು ನೀವು.

ಮತ್ತಷ್ಟು ಓದು »

12
ಸೆಪ್ಟೆಂ

ಕಮ್ಯೂನಿಸ೦ ಎ೦ದರೆ ನರಮೇಧ.. ನರಮೇಧವೆ೦ದರೆ ಕಮ್ಯೂನಿಸ೦!?

– ಕೆ.ಎಸ್ ರಾಘವೇಂದ್ರ ನಾವಡ

  “ಕಮ್ಯೂನಿಸ೦ ಎ೦ದರೆ ನರಮೇಧ.. ನರಮೇಧವೆ೦ದರೆ ಕಮ್ಯೂನಿಸ೦ “ ಎ೦ಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆಯಲ್ಲ!!

ಪ್ರಕರಣ: ಏಳು ತೃಣಮೂಲ ಕಾ೦ಗ್ರೆಸ್  ಕಾರ್ಯಕರ್ತರ ಹಠಾತ್ ಕಣ್ಮರೆ..

ಸ್ಠಳ: ಪಶ್ಚಿಮ ಮಿಡ್ನಾಪುರದ “ಪಿಸಾಯಲ“ ಹೆಸರಿನ ಪ್ರದೇಶ

ಕಾಲ : ೨೦೦೨

ಆ ನರಮೇಧದ ಹಿ೦ದಿನ ರೂವಾರಿಯ  ಹೆಸರು ಸುಶಾ೦ತ್ ಘೋಷ್!!

ಪಶ್ಚಿಮ ಭಾಗದ ಅಭಿವೃಧ್ಧಿ ಸಚಿವ, ಪಶ್ಚಿಮ ಬ೦ಗಾಳ ಸರ್ಕಾರ..

 

ಅ೦ತೂ ಕಮ್ಯೂನಿಸ್ಟರ ಬಣ್ಣ ಬಯಲಾಗತೊಡಗಿದೆ. ೩೫ ವರ್ಷಗಳಷ್ಟು ದೀರ್ಘ ಕಾಲ ಪಶ್ಚಿಮ ಬ೦ಗಾಳದಲ್ಲಿ ಸಾಧಿಸಿದ್ದೇನು? ಎ೦ಬುದಕ್ಕೆ ಈಗ ಉತ್ತರಗಳು ಸಿಗತೊಡಗಿವೆ! ಆದರೆ ಈ ರೀತಿಯ ಉತ್ತರ ಮಾತ್ರ ಯಾರೂ ನಿರೀಕ್ಷಿಸಿರಲಾರರು!   ಒಮ್ಮೆ ಮಮತಾ ದೀದಿ   ಥರಗುಟ್ಟಿ ಹೋಗಿದ್ದಾರೆ! ದೇಶದ ಅತ್ಯ೦ತ ಸುದೀರ್ಘ ಕಾಲದವರೆಗಿನ ಮುಖ್ಯಮ೦ತ್ರಿ ಜ್ಯೋತಿ ಬಸು ಹಾಗೂ ಆನ೦ತರದ ಕಾಮ್ರೇಡ್ ಬುಧ್ಧದೇವ ಭಟ್ಟಾಚಾರ್ಯ ಹೀಗೆ ಒಟ್ಟಾರೆ ಸತತ ೩೫ ವರ್ಷಗಳ ಕಾಲ ಬ೦ಗಾಳವನ್ನು  ಅಭಿವೃಧ್ಧಿ (?)ಗೊಳಿಸಿದ ಕಮ್ಯೂನಿಷ್ಟರ ಆಡಳಿತ ಹೇಗಿತ್ತು ಎನ್ನುವುದಕ್ಕೆ ಪುರಾವೆಗಳು ಸಿಗುತ್ತಿವೆ!

ಮತ್ತಷ್ಟು ಓದು »

12
ಸೆಪ್ಟೆಂ

ರೇಲ್ವೇ ಇಲಾಖೆ ಮತ್ತು ಹಿಂದಿ ಹೇರಿಕೆ.!

– ಮಹೇಶ.ಎಮ್.ಆರ್

ವಿ.ಸೂ: ಬೇರೆ ಒಂದು ಬಾಶೆಯನ್ನು ಗೌರವಿಸುವುದಕ್ಕೂ ಅದನ್ನು ನಮ್ಮ ಮೇಲೆ ಹೇರಿಸಿಕೊಳ್ಳುವುದಕ್ಕೂ ಇರುವ ವ್ಯತ್ಯಾಸವನ್ನು ತಿಳಿದಿರುವವರು ಮಾತ್ರ ಮುಂದುವರಿಯಲು ಕೋರಿಕೆ.!

ಸ್ವಾತಂತ್ರ್ಯ ನಂತರ, ಬಾರತೀಯತೆಗೂ ಹಿಂದಿಗೂ ತಳುಕು ಹಾಕಿ ಅದನ್ನು ರಾಶ್ಟ್ರ ಬಾಶೆ ಮಾಡಲು ಹೊರಟ ಕೇಂದ್ರ ಸರಕಾರದ ಮತ್ತು ಕೆಲವರ ಪ್ರಯತ್ನ ಅನೇಕ ಹಿಂದಿಯೇತರರ ವಿರೋದಿ ಹೋರಾಟದ ಫಲವಾಗಿ ವಿಫಲವಾಯಿತು. ಇದರ ತರುವಾಯ ಮುಂದೆ ಕೇಂದ್ರ ಸರಕಾರ ನೋಡಿಕೊಂಡ ದಾರಿಯೇ ಆಡಳಿತ ಬಾಶೆಯೆಂಬ ಹಿಂದಿನ ಬಾಗಿಲು. ಹಿಂದಿಯನ್ನು ಆಡಳಿತ ಬಾಶೆಯನ್ನಾಗಿ ಮಾಡಿ ತನ್ನ ಸಂಸ್ಥೆ, ಇಲಾಖೆ, ಬ್ಯಾಂಕುಗಳನ್ನು ಉಪಯೋಗಿಸಿ ಹಿಂದಿನ ಬಾಗಿಲ ಮೂಲಕ.

ಮತ್ತಷ್ಟು ಓದು »

9
ಸೆಪ್ಟೆಂ

ಯಾರು ಅಪಾಯಕಾರಿ!?

– ಸಚಿನ್

ನಮ್ಮ ನಿಮ್ಮ ಮಧ್ಯೆಯಿರುವ ಕೆಲ ಎಡಬಿಡಂಗಿ ಗಳು ನಿನ್ನೆ ದೆಹಲಿ ಹೈಕೋರ್ಟ್ ನಲ್ಲಿ ನಡೆದ ಬಾಂಬ್ ಸ್ಪೋಟದ ಕುರಿತು ಒಂದು ಹೇಳಿಕೆ ಕೊಟ್ಟರು. ” ಬಿಜೆಪಿಗೆ ಅವಮಾನ ಆಗುವ ಸಂಧರ್ಭ ಗಳಲ್ಲಿ ಬಾಂಬ್ ಸ್ಪೋಟ ನಡೆಯುತ್ತಿದೆ ಹಾಗಾಗಿ ರೆಡ್ಡಿಯ ಬಂಧನದ ಸಂಧರ್ಭ ದಲ್ಲಿ ಈ ಸ್ಪೋಟ ನಡೆದಿರುವುದು ಹಲವಾರು ಉಹಾಪೋಹಗಳಿಗೆ ಎಡೆ ಮಾಡಿಕೊಡುತ್ತಿದೆ. ಕರ್ನಲ್ ಪುರೋಹಿತ್ ಮತ್ತು ಸಾಧ್ವಿ ಪ್ರಜ್ಯಾ ಸಿಂಗ್ ನಡೆಸಿದ ಬಾಂಬ್ ಸ್ಪೋಟಗಳೇ ಇದಕ್ಕೆ ಸಾಕ್ಷಿ. ಅಣ್ಣಾ ಹಜಾರೆ ಮತ್ತು ರೆಡ್ಡಿ ಬಂಧನದ ಅಬ್ಬರ ಗಳಿಗಿಂತ ಹೆಚ್ಚಿನರೀತಿಯಲ್ಲಿ ಬಿಜೆಪಿ ದೇಶ ಭಕ್ತರು ಕಿರುಚಾಟಗಳನ್ನು ಶುರುಮಾಡ್ತಾರೆ ನೋಡ್ತಾಯಿರಿ” ಎಂದು ಎರಡು ಲೈನ್ ಬರೆದು ತಮ್ಮ ಮನಸ್ಸಿನಲ್ಲಿರುವ ಅಸಹ್ಯವನ್ನು ಹೊರಹಾಕಿದರು.

ಸ್ನೇಹಿತರೇ ನಾವು ಗಮನಿಸ ಬೇಕಾದ ಮುಖ್ಯವಾದ ಅಂಶವೆಂದರೆ ಈಗ ನಡೆಯುತ್ತಿರುವುದು ಭಯೋತ್ಪಾದಕರು ಮತ್ತು ಭಾರತ ದೇಶದ ಮಧ್ಯೆ ಯುದ್ದ, ಈ ಯುದ್ದ ದಲ್ಲಿ  ಭಯೋತ್ಪಾದಕರು ವಿಜಯಿಯಾಗುತಿದ್ದಾರೆ. ಈ ಭಯೋತ್ಪಾದನೆ ಕೃತ್ಯಗಳನ್ನ ಯಾವುದೇ ದೇಶ ಸುಮ್ಮನೆ ಸಹಿಸಿ ಕೊಳ್ಳುವುದಿಲ್ಲ. ಹಾಗು ಕೃತ್ಯ ನಡೆಸಿದವರಿಗೆ ಸರಿಯಾದ ಶಿಕ್ಷೆ ಕೊಡುವ ವ್ಯವಸ್ಥೆ ಬೇರೆ ದೇಶಗಳಲ್ಲಿದೆ. ಒಂದು ಸಣ್ಣ ಪ್ರಮಾದ ದಿಂದ ಬೆಂಗಳೂರಿನ ವೈದ್ಯ ಹನೀಫ್ ಆಸ್ಟ್ರೇಲಿಯಾದಲ್ಲಿ ಹೇಗೆ ನರಳಿದ ಎಂದು ನಮಗೆ ಗೊತ್ತಿಲ್ಲವೆ.

ಪಕ್ಷಗಳನ್ನು ಸಮರ್ಥಿಸಿಕೊಂಡು ಜಗಳವಾಡುವ ಸಮಯ ಇದಲ್ಲ. ಸುಮ್ಮನೆ ವಿತಂಡವಾದ ಮಾಡಿ ಎಲ್ಲದಕ್ಕು ಒಂದೊಂದು ಸಂಭಂದ ಕಲ್ಪಿಸಿ ನಿಮ್ಮ ಹೊಲಸನ್ನು ಕಾರಬೇಡಿ. ನಿಮ್ಮ ಭಂಡತನದ ನಿಲುವುಗಳು ಏನೆಂದು ಅಣ್ಣಾ ಹಜಾರೆ ಹೋರಾಟದ ಸಂಧರ್ಭದಲ್ಲಿ ನಮ್ಮ ಭಾರತದ ಎಲ್ಲ ಸತ್ಪ್ರಜೆಗಳಿಗೆ ಗೊತ್ತಾಗಿವೆ.

 

ಮತ್ತಷ್ಟು ಓದು »

7
ಸೆಪ್ಟೆಂ

ಅಣ್ಣಾ ಹಜಾರೆ – ಶ್ರೀ ಸಾಮಾನ್ಯನ ಮನೆ – ಮನಗಳ ದೀಪ.

– ಹೊಳೆನರಸೀಪುರ ಮಂಜುನಾಥ್

ಅಣ್ಣಾ ಹಜಾರೆಯವರ ಬೇಡಿಕೆಗಳನ್ನು ಕೇ೦ದ್ರ ಸರ್ಕಾರ ಒಪ್ಪಿಕೊಳ್ಳುವುದರ ಮೂಲಕ ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಮೊದಲ ಜಯ ಸಿಕ್ಕಿದೆ. ೧೨ ದಿನಗಳ ಉಪವಾಸ ಸತ್ಯಾಗ್ರಹ, ದೇಶದ ಮೂಲೆಮೂಲೆಯಿ೦ದ ಎ೦ದೂ ಕ೦ಡರಿಯದ೦ಥ ಅಭೂತಪೂರ್ವ ಜನಬೆ೦ಬಲ, ಕೇ೦ದ್ರಸರ್ಕಾರವನ್ನು ಮಣಿಸಿ, ಜನಲೋಕಪಾಲ್ ಮಸೂದೆ ಜಾರಿಗೆ ತರುವಲ್ಲಿ ಸ೦ಸತ್ತಿನಲ್ಲಿ ಎಲ್ಲ ಪಕ್ಷಗಳೂ ಒಗ್ಗಟ್ಟಾಗಿ ಅನುಮೋದಿಸುವ೦ತೆ ಮಾಡಿದೆ. ಬಹುಶಃ ಸ್ವಾತ೦ತ್ರ್ಯಾನ೦ತರ ಭಾರತ ಕ೦ಡ ಅತ್ಯ೦ತ ಪರಿಣಾಮಕಾರಿ ಅಹಿ೦ಸಾತ್ಮಕ ಆ೦ದೋಲನವಿದು ಎ೦ದರೆ ತಪ್ಪಾಗಲಾರದು. ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಹೋರಾಟಕ್ಕೆ ಸಿಕ್ಕಿರುವ ಜಯ, ಯಾವುದೇ ಒ೦ದು ಪಕ್ಷಕ್ಕೆ, ಸ೦ಘಟನೆಗೆ ಅಥವಾ ವ್ಯಕ್ತಿಗೆ ಸಿಕ್ಕಿರುವ ಜಯವಲ್ಲ. ಇದು ದೇಶದ ಶ್ರೀಸಾಮಾನ್ಯನಿಗೆ ಸಿಕ್ಕಿರುವ ಅಪ್ರತಿಮ ವಿಜಯ. ತನ್ನ ದಿನನಿತ್ಯದ ಬದುಕಿನಲ್ಲಿ ಪ್ರತಿಯೊ೦ದು ಹೆಜ್ಜೆಯಲ್ಲಿಯೂ ಕ೦ಡು, ಅನುಭವಿಸಿ, ತನ್ನನ್ನು ಹೈರಾಣು ಮಾಡಿದ ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದ ಈ ದೇಶದ ಸಾಮಾನ್ಯ ನಾಗರಿಕನ ಸಾತ್ವಿಕ ಕೋಪಕ್ಕೆ ಸಿಕ್ಕ ವಿಜಯ ಇದಾಗಿದೆ.
ಮತ್ತಷ್ಟು ಓದು »

20
ಆಗಸ್ಟ್

ಸಂಸ್ಕೃತಿ ಸಂಕಥನ – ೫

– ರಮಾನಂದ ಐನಕೈ

ಆಧುನಿಕ ಇತಿಹಾಸದಲ್ಲಿ ಪದೇ ಪದೇ ಕಲ್ಯಾಣ ರಾಜ್ಯ ‘ವೆಲ್ಫೇರ್ ಸ್ಟೇಟ್’ದ ಕುರಿತು ಉಲ್ಲೇಖವಾಗುತ್ತದೆ. ಕಲ್ಯಾಣ ರಾಜ್ಯ ಅಂದರೆ ಏನು? ಪ್ರಜೆಗಳ ಸರ್ವತೋಮುಖ ಕ್ಷೇಮವನ್ನು ಹೆಗಲ ಮೇಲೆ ಹೊತ್ತ ಪರಿಕಲ್ಪನೆ ಇದು. ಸಾಮಾಜಿಕ ಭದ್ರತೆ (ಸೋಶಿಯಲ್ ಸೆಕ್ಯುರಿಟಿ) ಕಲ್ಯಾಣ ರಾಜ್ಯದ ಒಂದು ಆದರ್ಶ. ಪ್ರತಿಯೊಬ್ಬ ಪ್ರಜೆಗೆ ಸಾಮಾಜಿಕ ಭದ್ರತೆ ನೀಡುವುದೂ ಕಲ್ಯಾಣ ರಾಜ್ಯದ ಒಂದು ಗುರಿ.

ಪಾಶ್ಚಾತ್ಯರು ಈ ಸಮಾಜಿಕ ಭದ್ರತೆಯನ್ನು ಕಲ್ಪಿಸಿಕೊಂಡ ರೀತಿ ಭಿನ್ನವಾಗಿದೆ. ಈ ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಬ್ಬ ಮನುಷ್ಯನಿಗೆ ಬದುಕುವ ಹಕ್ಕಿದೆ. ಇದನ್ನು ಯಾರೂ ಪ್ರಶ್ನಿಸಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿ ಮನುಷ್ಯನಿಗೆ ಬದುಕಲು ಬೇಕಾದ ಅನ್ನ, ನೀರು, ಮನೆ, ಬಟ್ಟೆ ಮುಂತಾದ ಅನೇಕ ಅವಶ್ಯಕತೆಗಳನ್ನು ಪ್ರಭುತ್ವ (ಸ್ಟೇಟ್) ಪೂರೈಸಿ ಅವರಲ್ಲಿ ಭದ್ರತೆಯ ಭಾವನೆಯನ್ನು ಹುಟ್ಟಿಸಬೇಕು. ಆಗ ಪ್ರಜೆಗಳು ಸಂತೋಷವಾಗಿರುತ್ತಾರೆ ಎಂಬುದು ಅವರ ಚಿಂತನೆ. ಇದನ್ನೇ ಸಾಮಾಜಿಕ ಭದ್ರತೆ ಎಂದು ಕರೆದರು. ಇದಕ್ಕಾಗೇ ಅನೇಕ ರಾಷ್ಟ್ರಗಳು ತಮ್ಮನ್ನು ವೆಲ್ಫೇರ್ ಸ್ಟೇಟ್ಸ್ ಎಂದು ಕರೆದುಕೊಂಡವು. ಇದನ್ನು ಸರಳವಾಗಿ ಹೇಳಬಹುದಾದರೆ ಕನಿಷ್ಟ ಅವಶ್ಯಕತೆಯ ಭೌತಿಕ ಸವಲತ್ತುಗಳನ್ನು ನೀಡುವುದೇ ಅವರ ಪ್ರಕಾರ ಸಾಮಾಜಿಕ ಭದ್ರತೆ. ಪಾಶ್ಚಾತ್ಯರ ಈ ಲೋಕಜ್ಞಾನ ಭಾರತೀಯರಿಗೆ ರೋಮಾಂಚಕವಾಗಿ ಕಂಡದ್ದು ಸಹಜ. ಏಕೆಂದರೆ ಪಾಶ್ಚಾತ್ಯ ಸಂಸ್ಕೃತಿಯನ್ನು ಒಂದು ಪರಿಪೂರ್ಣ ಮಾದರಿ ಎಂದು ನಾವು ಸ್ವೀಕರಿಸಿಬಿಟ್ಟಿದ್ದೇವೆ.

ಮತ್ತಷ್ಟು ಓದು »

19
ಆಗಸ್ಟ್

ಜನಲೋಕಪಾಲ ಅನ್ನುವುದು ಮಾಯದಂಡವೇನಲ್ಲ…!

– ರಾಕೇಶ್ ಶೆಟ್ಟಿ

ಒಂದೆಡೆ ಅಣ್ಣಾರನ್ನ ಬೆಂಬಲಿಸಿ ಜನ ಬೀದಿಗಿಳಿದರೆ, ಇನ್ನೊಂದೆಡೆ ಅಣ್ಣಾ ಹೋರಾಟವನ್ನ ಪ್ರಶ್ನಿಸಿ ಹಲವಾರು ಪ್ರಶ್ನೆಗಳೆದ್ದಿವೆ.

’ಜನಲೋಕಪಾಲ್’ ಬಂದ ತಕ್ಷಣ ಎಲ್ಲ ಭ್ರಷ್ಟರು ಮಾಯವಾಗ್ತಾರೆ ಅಂತ ಖುದ್ದು ಅಣ್ಣಾ ಮತ್ತು ಸಿವಿಲ್ ಸೊಸೈಟಿಯವರ್ಯಾರು ಸಹ ಎಲ್ಲೂ ಹೇಳಿಲ್ಲ.ಹಾಗಾಗ್ಯೂ ಇಂತ ವಾದ ಹುಟ್ಟು ಹಾಕಿದ್ದು ಯಾರು? ಬಹುಷಃ ಕಪಿಲ್ ಸಿಬಲ್ ಇರಬೇಕು ಅದನ್ನೆ ಹಿಡಿದು ಕೆಲವರು ’ಜನಲೋಕಪಾಲ್’ ಬಂದ್ರೆ ಭ್ರಷ್ಟಚಾರ ಮಾಯವಾಗುತ್ತಾ!? ಅಂತ ಕೇಳ್ತಾ ಇದ್ದಾರೆ ಕೆಲವರು. ಅಂತವರಿಗೊಂದು ಪ್ರಶ್ನೆ ಪೋಲಿಸ್ ಇಲಾಖೆ ಅನ್ನುವುದು ಬಂದು ಎಷ್ಟು ವರ್ಷಗಳಾಯ್ತು? ಕಳ್ಳತನ-ಕೊಲೆ-ದರೋಡೆ ನಿಂತಿದೆಯಾ ಸ್ವಾಮಿ!? ಇಲ್ಲ ತಾನೆ..! ಆದರೆ ಜನ್ರಿಗೊಂದು ಹೆದರಿಕೆಯಂತೂ ಇರುತ್ತದೆ ತಪ್ಪು ಮಾಡೋಕೆ ಹಾಗೆ ತಪ್ಪು ಮಾಡಿದವರನ್ನ ಹಿಡಿದು ಜೈಲಿಗೆ ಅವರು ನೂಕುತಿದ್ದಾರಲ್ವಾ? ಹಾಗೆಯೇ ಜನಲೋಕಪಾಲ ಅನ್ನುವುದು ಸಹ.ಅದು ಬಂದ ತಕ್ಷಣ ಎಲ್ಲ ಸರಿ ಹೋಗದು.ಅದು ಸುಧಾರಣೆಯ ಒಂದು ಅಸ್ತ್ರವಷ್ಟೆ.

ಮತ್ತಷ್ಟು ಓದು »

19
ಆಗಸ್ಟ್

ಈ ಎಡವಟ್ಟುಗಳು ಯಾಕೆ ಹೀಗೆ ಅಂತ?

– ಸಚಿನ್ ಕೆ
ನಮಸ್ಕಾರ ಸಾ. ಎಂಗಿದೀರಾ.
ನೋಡಿ ಸಾ, ಪ್ರಪಂಚ ಹೆಂಗೈತೆ ಅಂದ್ರೆ ಹಿಂಗೂ ಜನ ಇರ್ತಾರ ಅಂತ ಗೊತ್ತಿರ್ಲಿಲ್ಲ.

ಗಾಂಧಿ ಮಆತ್ಮ್ ನ ತರ ನೀವು ಉಪ್ವಾಸ ಮಾಡಿದ್ರೆ ಜನ ಅದರಲ್ಲೂ ಹುಳುಕು ಕಂಡಿಡಿತಾರೆ ಅಂದ್ರೆ, ಈ ಜನ ಎಷ್ಟು ಗಬ್ಬೆದ್ದು ಹೋಗಿದ್ದಾರೆ ಅಂತ. ಆ ಬ್ರಹ್ಮ ಇವರ ತಲೆ ಒಳಗೆ ಮಿದುಳು ಇಟ್ಟಿಲ್ಲ ಅನ್ಸುತ್ತೆ, ಅದರೆ ಬದಲು ಸಗಣಿ ಮಡಗವ್ನೆ. ಈ ಬಡ್ಡೆತ್ತೇವು ಬರೀ ಉಲ್ಟಾ ಮಾತಾಡೋದೆ ಆಗ್ವಾಯ್ತು.

ಅವಯ್ಯ ದೇಸಾನ ಏನೋ ಬದಲಾವ್ಣೆ ಮಾಡ್ತೀನಿ ಅಂತ ಮಾತಾಡ್ತಿಲ್ಲ. ಲಂಚ ತಿನ್ನೋ ಎಲ್ಲ ಬೇವರ್ಸಿ ಮುಂಡೇವು ಗಳಿಗೆ ಸರ್ಯಾದ ಸಿಕ್ಸೆ ಆಗ್ಲಿ ಅಂತ ಗೋರ್ಮೆಂಟ್ ನೋರು ಸರಿಯಾದ ರೂಲ್ಸ್ ಮಾಡ್ಲಿ ಅಂತ. ಆದರೆ ಈ ಉಲ್ಟಾ ಮಾತಾಡ್ತ ಇರೋ ಈ ಹೈಕಳು ಕೇಳೋ ಪ್ರಸ್ನೆಗಳನ್ನು ನೋಡಿದ್ರೆ ನಗ ತಡ್ಯಾಕಾಗ್ತಿಲ್ಲ.

ಮತ್ತಷ್ಟು ಓದು »