‘ಅನ್ಯಾಯ’ದ ಮನೆಯೊಳಗಿನ ಆಶಾಕಿರಣ.
– ಚಿತ್ರಾ ಸಂತೋಷ್
ದೆಹಲಿಯ ಜಿ.ಬಿ. ರಸ್ತೆಯಲ್ಲಿ ನನ್ನ ಪುಟ್ಟ ವಯಸ್ಸು, ಬದುಕು ಮೂರಾಬಟ್ಟೆಯಾಯಿತು ಅನಿಸಿತ್ತು. ನನ್ನ ವಿರುದ್ಧ ನಡೆಯುತ್ತಿರುವ ಅನ್ಯಾಯಗಳಿಗೆ ನನಗೆ ದನಿಯೆತ್ತಲೂ ನನ್ನ ಜೊತೆ ಯಾರಿರಲಿಲ್ಲ. ಆ ‘ಅನ್ಯಾಯ’ದ ಮನೆಯೊಳಗೆ ಪ್ರತಿ ನಿಮಿಷವೂ ನನ್ನ ಮೇಲೆ ಅಮಾನುಷವಾಗಿ ಅತ್ಯಾಚಾರ ನಡೆಯುತ್ತಿತ್ತು. ಐದು ವರ್ಷ ಆ ‘ಸೆರೆಮನೆ’ ಅನುಭವಿಸಿದೆ.
ನನ್ನ ಬೆಲೆ ೩೦೦ ರೂ!
ಅಮ್ಮ ಜಗುಲಿ ಮೇಲೆ ಕುಳಿತಿದ್ದಳು. ನನಗೆ ಅಮ್ಮನ ಕಾಣುವ ಹಂಬಲ, ಅವಳಿಗೆ ಮಗಳನ್ನು ಕಾಣುವ ವಾತ್ಸಲ್ಯ. ನನ್ನನ್ನೇ ಎದುರು ನೋಡುತ್ತಿದ್ದ ಆಕೆಯ ಮುಖದಲ್ಲಿ ನಾನು ಗೇಟು ದಾಟಿ ಹೋಗುತ್ತಿದ್ದಂತೆ ನಗು ಅರಳಿತು. ‘ಬಾ ಮಗಳೇ’ ಎಂದು ತೆಕ್ಕೆಗೆಳೆದುಕೊಂಡಳು. ಸೂರ್ಯ ಮುಳುಗಲು ಕ್ಷಣಗಳನ್ನು ಎಣಿಸುತ್ತಿದ್ದ. ಅಮ್ಮನೆದುರು ಕುಳಿತ ವ್ಯಕ್ತಿಯ ಹೆಸರು ಪ್ರವೀಣ್ ಪಂಡಿತ್. ಹೆಸರಷ್ಟೇ ಗೊತ್ತಿತ್ತು. ಅಮ್ಮ ಅವನ ಜೊತೆ ಅಷ್ಟು ಕೊಡು, ಇಷ್ಟು ಕೊಡು ಎಂದು ಚೌಕಾಸಿ ಮಾಡುತ್ತಿದ್ದಳು. ನನಗೊಂದೂ ಅರ್ಥವಾಗಲಿಲ್ಲ. ಅಮ್ಮ ಹೇಳಿದ ದುಡ್ಡಿಗೆ ಆತ ಒಪ್ಪಲೇ ಇಲ್ಲ. ಕೊನೆಗೆ ೩೦೦ ರೂ. ಕೊಡುತ್ತೇನೆ ಅಂದ. ಅಮ್ಮ ಒಪ್ಪಿಕೊಂಡು, “ಮಗಳೇ ನೀನು ಅಂಕಲ್ ಜೊತೆ ದೆಹಲಿಗೆ ಹೋಗಬೇಕು” ಎಂದು ಹೇಳಿದಳು.
ಕನ್ನಡ ನಾಡೆಂಬ ಕರುಣೆಯ ಬೀಡೂ, ರಾಬಿನ್ ಚುಗ್ ಎಂಬ ಅವಿವೇಕಿಯೂ
(ಇತ್ತೀಚೆಗೆ ಫೇಸ್ ಬುಕ್ ನಡೆಯಿತು ಎನ್ನಲಾದ ವಿವಾದ ಕುರಿತು ನಿಲುಮೆ ತಂಡದ ವಿಜಯ್ ಹೆರಗು ಅವರು ವಿವಾದಿತ ವ್ಯಕ್ತಿ ರಾಬಿನ್ ಚುಗ್ ರನ್ನು ಸ್ವತಃ ಸಂಪರ್ಕಿಸಿ ಮಾತಾಡಿ ಅದರ ವಿವರಗಳನ್ನು ದಾಖಲಿಸಿದ ಲೇಖನವಿದು. -ನಿಲುಮೆ)

ಪಕ್ಯ…!
– ಹರೀಶ್ ಶೆಟ್ಟಿ, ಶಿರ್ವ
ಪಕ್ಯ…ಪಕ್ಯ ನನ್ನ ಬಿಲ್ಡಿಂಗ್ನಲ್ಲಿ ಗ್ರೌಂಡ್ ಫ್ಲೂರ್ ನಲ್ಲಿ ಇರುತಿದ್ದ. ಅವನ ತಂದೆ ದೊಡ್ಡ ಕುಡುಕ ಹಾಗು ಪ್ರಯೋಜನ ಇಲ್ಲದವ, ಪಕ್ಯನ ತಾಯಿ ಅಲ್ಲಿ ಇಲ್ಲಿ ದುಡಿದು ಹೇಗಾದರೂ ಜೀವನ ಸಾಗಿಸುತಿದ್ದರು. ಪಕ್ಯ ನನ್ನಿಂದ ಎರಡು ಮೂರೂ ವರುಷ ದೊಡ್ಡವ. ಪಕ್ಯ ಚಿಕ್ಕಂದಿನಿಂದಲೂ ಮಂದ ಬುದ್ದಿ (Special Abnormal child), ಜೀವ ದೊಡ್ಡದಾದರೂ ಅವನ ಬುದ್ದಿ ಬೆಳವಣಿಗೆ ಆಗಲಿಲ್ಲ, ಪಕ್ಯನಿಗೆ ಇಬ್ಬರು ತಂಗಿಯರಿದ್ದರು . ೧೨ ವರುಷ ದಲ್ಲಿಯೇ ಪಕ್ಯನ ಜೀವ ೬ ಫೀಟ್ ಉದ್ದ ಆಗಿತ್ತು, ಆದರೆ ಅವನ ಬುದ್ದಿ ಚಿಕ್ಕ ಮಕ್ಕಳ ಹಾಗೆ. ಪಕ್ಯ ಇಡಿ ದಿನ ಅಲ್ಲಿಂದ ಇಲ್ಲಿ ಇಲ್ಲಿಂದ ಅಲ್ಲಿ ತಿರುಗುತ ಇರುತ್ತಿದ, ಅವನ ತಾಯಿ ಹೊಟ್ಟೆ ಪಾಡಿಗಾಗಿ ದುಡಿಯಲ್ಲಿಕೆ ಹೋಗುತತ್ತಿದ್ದಳು, ಅವನ ತಂದೆಗೆ ಕುಡಿಯುದರಲ್ಲಿ ಪುರ್ಸ್ಹೊತ್ತು ಇರುತ್ತಿರಲಿಲ್ಲ .
ಮಾರಿಯಮ್ಮ ದೇವರ ಕಾಣಿಕೆ ಡಬ್ಬವೂ – ಮಸಾಲೆ ದೋಸೆಯೂ..!
– ರವಿ ಮುರ್ನಾಡು
ದೇವರ ಕಾಣಿಕೆ ದುಡ್ಡು ತೆಗೆಯುವುದೆಂದರೇನು… ರಕ್ತ ಕಾರಿ ಸತ್ತಾರು…! ಪಕ್ಕದ ಮನೆಯ ಅಮ್ಮುಣ್ಣಿಯಮ್ಮ ಒಮ್ಮೆ ಹೇಳಿದ್ದರು. ಈಗೇನು ಮಾಡುವುದು.? ಕಾಣಿಕೆ ದುಡ್ಡು ತೆಗೆದದ್ದು ಆಯಿತು.. .ಅಲ್ಲೆಲ್ಲಾ ಹಾವುಗಳು ಓಡಾಡುತ್ತವೆ. ನಾನು ನೋಡಿದ್ದೆ. ಭಾರೀ ಉದ್ದದ ಹಾವುಗಳು. ರಾತ್ರಿ ಬಂದರೋ? ಅಳು ಬರುವುದೊಂದೇ ಬಾಕಿ. ಅಜ್ಜಿ- ಚಿಕ್ಕಮ್ಮ ಬೆಲ್ಲದ ಮಿಠಾಯಿಗೆ ಕೊಡುವ ಹಣವನ್ನು ಒಟ್ಟು ಸೇರಿಸಿ ವಾಪಾಸು ಹಾಕುವುದಾಗಿ ಹೇಳಿದ ಮೇಲೆ ನಿದ್ದೆ ಬಂತು.
ತೆಗೆದದ್ದು ಒಂದು ರೂಪಾಯಿ..! ಅಜ್ಜಿ ಸೀರೆ ಸೆರಗಿನ ಅಂಚಿನಲ್ಲಿ ದುಡ್ಡು ಇಟ್ಟಿರುತ್ತಾರೆ. ತೋಟದಲ್ಲಿ ಕೆಲಸ ಮಾಡುವಾಗ ” ಟೀ” ಕುಡಿಯಲು ಐವತ್ತು ಪೈಸೆ, ಇಪ್ಪತ್ತೈದು ಪೈಸೆ ಹಾಗೆ. ತೆಗೆದರೆ ಹೊಡೆತ ಬೀಳುವುದಂತು ಖಂಡಿತಾ. ದೇವರ ಕಾಣಿಕೆ ದುಡ್ಡು ವಿಷಯ ಗೊತ್ತಾದರೋ?. ಬೆಳಿಗ್ಗೆ ಕಣ್ಣು ಬಿಟ್ಟಾಗಲೂ ಇದೇ ಆಲೋಚನೆ.
ದೊಡ್ಡ ಮಾವ ವೀರಾಜಪೇಟೆಯ ಯಾವುದೋ ಹೋಟೇಲ್ಲಿನಲ್ಲಿ ಸಪ್ಲಯರ‍್ ಆಗಿದ್ದ. ಸಂತೆ ದಿನ ಭಾನುವಾರ ಎರಡು ತಿಂಗಳಿಗೊಮ್ಮೆ ಬರುವುದು. ಆ ಒಂದು ಸಂತೆ ದಿನ ಅಜ್ಜಿ, ಚಿಕ್ಕಮ್ಮ ಮತ್ತು ನಾನೂ ಸಂತೆಗೆ ಹೋಗಿದ್ದಾಗ, ಅವನೂ ಬಂದಿದ್ದ. ಎಲ್ಲಾ ಸಾಮಾನು ಖರೀದಿಸಿದ ಮೇಲೆ ನಾವು ಮಸಾಲೆ ದೋಸೆ ತಿಂದದ್ದು. ಸುಂಟಿಕೊಪ್ಪದ ಗಣೇಶ ಸಿನೇಮಾ ಥಿಯೇಟರ‍್ ಪಕ್ಕದ ಕ್ಯಾಂಟೀನಿನಲ್ಲಿ. ಭಾರೀ ಅಗಲದ ದೋಸೆ ಅದು. ತುಪ್ಪ ಹಾಕಿ ಮಾಡಿದ್ದು. ಜೊತೆಗೆ ರುಚಿರುಚಿಯಾದ ಆಲೂಗೆಡ್ಡೆ ಪಲ್ಯ ಮತ್ತು ತೆಂಗಿನಕಾಯಿ ಚಟ್ನಿಯೂ. ಈ ರುಚಿಯನ್ನು ನೆನೆದು ರಾತ್ರಿ ಊಟವೂ ಸಪ್ಪೆ..!. ಅದೇ ಮಸಾಲೆ ದೋಸೆಯ ಕನಸುಗಳು. ಮತ್ತಷ್ಟು ಓದು 
ಕನ್ನಡಿಗರು ಬಿಟ್ಟಿ ಬಿದ್ದಿಲ್ಲ ಅನ್ನುವುದು ನೆನಪಿರಲಿ…!
– ರಾಕೇಶ್ ಶೆಟ್ಟಿ
ಹೊಟ್ಟೆ ಪಾಡಿಗೆ ಅಂತ ಹುಟ್ಟಿದ ಊರು ಬಿಟ್ಟು ನಮ್ಮ ಬೆಂಗಳೂರಿಗೆ ಬಂದು, ಇಲ್ಲಿನ ಅನ್ನ,ನೀರು ಕುಡಿದು ’ಕನ್ನಡ ಕಲಿಯಿರಿ’ ಅಂದರೆ ನಮ್ಮ ವಿರುದ್ಧವೇ ತಿರುಗಿ ಬಿದ್ದು ಕನ್ನಡ/ಬೆಂಗಳೂರಿನ ಬಗ್ಗೆ ದ್ವೇಷಕಾರುವುದು ಒಂದು ರೀತಿಯ ಸುಲಭದ ತುತ್ತಾಗಿದೆ.
ಮೊನ್ನೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ “ಐಟಿ ಮತ್ತು ಬಹುರಾಷ್ಟ್ರೀಯ ಕಂಪನಿಗಳ ಪ್ರವಾಹದಲ್ಲಿ ಕರ್ನಾಟಕ ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ನೆಲೆಸಿರುವವರು ಇನ್ನು ಮುಂದೆ ಪ್ರಾಥಮಿಕ ಕನ್ನಡ ಭಾಷೆ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ಕಡ್ಡಾಯವಾಗಲಿದೆ” ಅನ್ನುವ ಪ್ರಸ್ತಾವನೆಯೊಂದನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಿತ್ತು.ಇದೇ ವಿಷಯವನ್ನ ಬೆಂಗಳೂರು ಮಿರರ್ ಅನ್ನುವ ಇಂಗ್ಲೀಷ್ ಪತ್ರಿಕೆ ಅನ್ಯ ಭಾಷಿಗರನ್ನ ಉದ್ರೇಕಿಸುವ ರೀತಿಯಲ್ಲಿ ಬರೆದಿದೆ.ಅಲ್ಲಿನ ಪ್ರತಿಕ್ರಿಯೆಗಳನ್ನ ನೋಡಿದರೆ ಬರೆದವರನ್ನ ಅಟ್ಟಾಡಿಸಿ ಬಡಿಯಬೇಕು ಅನ್ನಿಸುತ್ತದೆ.
ಈ ನೆಲದಲ್ಲಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾದರೆ, ಈ ನೆಲದ ಭಾಷೆ,ಸಂಸ್ಕೃತಿ,ಆಚಾರಗಳಿಗೆ ಬೆಲೆ ಕೊಡಬೇಕು ಅನ್ನುವ ಕಾಮನ್ ಸೆನ್ಸ್ ಇವರಲ್ಲಿ ಇಲ್ಲ ಅನ್ನುವುದಕ್ಕಿಂತ, ಯಾವುದಕ್ಕೂ ಪ್ರತಿಕ್ರಿಯಿಸಿದ ಕನ್ನಡಿಗರ ಧೋರಣೆಯನ್ನೆ ಇಂತ ಜನಗಳು ನಮ್ಮ ದೌರ್ಬಲ್ಯ ಅಂದುಕೊಂಡಿದ್ದಾರೆ.ಇಲ್ಲದಿದ್ದರೆ ಫ಼ೇಸ್ಬುಕ್ಕಿನಲ್ಲಿ ಹಾಲಿಡೇಐಕ್ಯು ಕಂಪೆನಿಯ ಉದ್ಯೋಗಿ ರಾಬಿನ್ ಚುಗ್ ಅನ್ನುವ ಪರದೇಶಿ ಕನ್ನಡಿಗರಿಗೆ ಫ಼ಕ್ ಆಫ಼್ ಅನ್ನುತ್ತಿರಲಿಲ್ಲ ಅಲ್ಲವಾ? ಆ ಕಿಡಿಗೇಡಿ ಕೆಲಸ ಮಾಡುವ ಕಂಪೆನಿಯ ವಿಳಾಸವಿಲ್ಲಿದೆ. ಅವರಿಗೊಂದು ಮಿಂಚೆ ಬರೆದು (ಭಾಷೆ ವಿಷಯ ಮುಟ್ಟಿಸುವಂತಿರಲಿ,ಬೈಗುಳ ದಯವಿಟ್ಟು ಬೇಡ) ಈ ಮಣ್ಣಿನ ಭಾಷೆಯ ಬಗ್ಗೆ ಗೌರವ ಇಲ್ಲದ ಇಂತವರನ್ನ ನಿಮ್ಮ ಕಂಪೆನಿಯಲ್ಲಿ ಇಟ್ಟುಕೊಳ್ಳುವಿರಾ ಅಂತಲೇ ಕೇಳಬೇಕು.ಮೊದಲೆ ಅವನಿಗೆ ಇಲ್ಲಿನ ರೀತಿ ರಿವಾಜುಗಳ ಬಗ್ಗೆ ತಕರಾರುಗಳಿವೆ.ಇಂತ ಹುಡುಗನನ್ನ ವಾಪಸ್ ಅವನ ಮನೆಗೆ ಕಳಿಸೋದು ನಮ್ಮ ಕರ್ತವ್ಯವಲ್ಲವೇ ಗೆಳೆಯರೇ?
ದೇಶಕ್ಕೋಸ್ಕರ ಹೋರಾಡುವವರ ಗತಿ ಇಷ್ಟೇ ಏನೋ..!!
– ಕೆ.ಎಸ್ ರಾಘವೇಂದ್ರ ನಾವಡ
ನೀವು ಏನಾದ್ರೂ ಹೇಳಿ… ದೇಶಕ್ಕೋಸ್ಕರ ಹೋರಾಡುವವರ ಗತಿ ಇಷ್ಟೇ.. ಅ೦ಥ ಮತ್ತೊಮ್ರ್ ಪ್ರೂವ್ ಆಗಿ ಹೋಗಿದೆ. ನಮ್ಮ ದೇಶದಲ್ಲಿ ಕೆಲವರ ಹಣೆಬರಹವನ್ನು ಸುಲಭವಾಗಿ ನಿರ್ಧರಿಸಬಹುದು.. ಹಿ೦ದೆ ಹಾವೇರಿಯಲ್ಲಿ ರೈತರ ಮುಷ್ಕರಕ್ಕೆ ಯಡಿಯೂರಪ್ಪ ಗೋಲಿಬಾರ್ ಗೆ ಆದೇಶ ನೀಡುವುದರ ಮೂಲಕ ಅದಕ್ಕೊ೦ದು ಗತಿ ಕಾಣಿಸಿದರು! ಇ೦ದು ರಾಮ್ ದೇವ್ ಹಣೆಬರಹವನ್ನು ಕೇ೦ದ್ರ ಸರ್ಕಾರ ಈ ರೀತಿ ಬರೆಯಿತು!! ಒಟ್ಟಾರೆ ನಾವು ಬ್ರಿಟೀಶ್ ಸತ್ತೆಯ ಕಾಲಕ್ಕೆ ಹೋಗುತ್ತಿದ್ದೇವೇನೋ ಎ೦ಬುದು ನನ್ನ ಸ೦ಶಯ!!
ಭರತ ಭೂಮಿಯಲ್ಲಿ ಬ್ರಿಟೀಶ್ ಆಡಳಿತದಿ೦ದ ಮುಕ್ತರಾಗ ಬಯಸಿ ಸ್ವಾತ೦ತ್ರ್ಯದ ಕನಸು ಕ೦ಡು ಅದಕ್ಕಾಗಿ ಹೋರಾಡಿದವರು- ಶೋಷಿತ ವರ್ಗ – ತಮ್ಮ ಬೇಡಿಕೆಯನ್ನು ನ್ಯಾಯಬಧ್ಧವಾಗಿ ಕೇಳುವವರು- ಜನ ಕಲ್ಯಾಣಕ್ಕಾಗಿ ಹಾತೊರೆದು ಮುನ್ನುಗ್ಗುವವರು – ರಾಜಕೀಯ ವ್ಯವಸ್ಥೆಯನ್ನು ಸುಧಾರಿಸ ಬಯಸುವವರು ಮು೦ತಾದವರ ಹೋರಾಟದ ಅ೦ತ್ಯ ಹೀಗೇ!! ಸರಿ ಸುಮಾರು ಬ್ರಿಟೀಷರಿ೦ದ ಆರ೦ಭವಾದ ಈ ಪ್ರಜೆಗಳ ಧ್ವನಿಯನ್ನು ಅವರುಗಳ ಗ೦ಟಲನ್ನೇ ಹಿಸುಕುವ ಮೂಲಕ ,ಅವರ ಹೋರಾಟಕ್ಕೊ೦ದು ಅನೈತಿಕ ಅ೦ತ್ಯ ನೀಡುವ ಈ ಕ್ರಮ ದುರದೃಷ್ಟವಶಾತ್ ಇಲ್ಲಿಯವರೆವಿಗೂ ಮು೦ದುವರೆದಿದೆ!! ಹಾಗ೦ತ ಎಲ್ಲ ಹೋರಾಟಗಳೂ ಇದೇ ಅ೦ತ್ಯವನ್ನು ಕ೦ಡವೇ ಎ೦ದರೆ ಖಚಿತವಾದ ಉತ್ತರ ನೀಡಲಿಕ್ಕಾಗುವುದಿಲ್ಲ.. “ಕೆಲವು ಸಮಸ್ಯೆಗಳು ತಾವಾಗೇ ಸೃಷ್ಟಿಯಾದರೆ ಕೆಲವನ್ನು ನಾವೇ ಸೃಷ್ಟಿಸಿಕೊಳ್ಳುತ್ತೇವೆ“ ಎ೦ಬ ನಾವಡ ಉವಾಚವೊ೦ದಿದೆ.. ಅದರ ಪ್ರಕಾರ ಪ್ರಸಕ್ತ ಭರತಭೂಮಿಯಲ್ಲಿಯೂ ಏಕೆ ಸಮಸ್ತ ಜಗತ್ತಿನಲ್ಲಿಯೂ ಸರ್ಕಾರ ಗಳು ಹಾಗೂ ಜನತೆಗಳ ವಿಚಾರದಲ್ಲಿ ನಡೆಯುತ್ತಿರುವುದು ಇದೇ!!
ಬೆಳಕಿಗೆ ಹೊಸತನ ನೀಡಲಿ ಹಣತೆಗಳ ಸಾಲು
ಸಂಜೆ ಯಾವಾಗ ಆಗುವುದೆಂಬ ಕಾತುರ. ನಾನಾಗ ಐದನೆಯ ಅಥವಾ ಆರನೆಯ ತರಗತಿಯಲ್ಲಿದ್ದೆ. ಶಾಲೆಯ ಕೊನೆಯ ಗಂಟೆ – ಆಗಿನ ಪರಿಭಾಷೆಯಲ್ಲಿ ಲಾಂಗ್‌ಬೆಲ್ ಯಾವಾಗ ಕೇಳಿಸುವುದೆಂದೇ ನಮ್ಮ ಗಮನ. ಶಿಕ್ಷಕರು ಕೂಡ ಇದನ್ನು ಅರಿತವರೇ ಆಗಿದ್ದರು. ಏಕೆಂದರೆ, ಅವರು ಕೂಡ ನಮ್ಮ ಹಾಗೆ ಎಳೆಯರೇ ಆಗಿದ್ದವರಲ್ಲ! ಅರ್ಧತಾಸು ಬೇಗನೆ ಲಾಂಗ್‌ಬೆಲ್! ಕ್ಲಾಸಿನಿಂದ ಹೊರ ಚಿಮ್ಮಿದ ಮಕ್ಕಳ ಹರ್ಷೋದ್ಗಾರ. ಪುಸ್ತಕದ ಚೀಲ ಹೆಗಲಿಗೇರಿಸಿ, ಬುತ್ತಿಯನ್ನು ಹುಡುಕಿಕೊಂಡು… ಮನೆಯ ಕಡೆಗೆ ಓಟ. ಆ ದಿನ ಅದು ಎಂದಿನ, ಸಾಮಾನ್ಯ ನಡಿಗೆಯಾಗಿರಲಿಲ್ಲ. ಅದು ಮನೆಯ ಕಡೆಗೆ “ಒಲಿಂಪಿಕ್ ಓಟ’. ಎಷ್ಟು ಬೇಗ ಮನೆ ತಲುಪುತ್ತೇವೆಯೋ ಅಷ್ಟು ಸಂಭ್ರಮದ ವೃದ್ಧಿ ಎಂಬ ಭಾವನೆ. ಬಾಲ್ಯದ ದಿನಗಳ ವಿಶೇಷವಾದ ಸ್ಪಂದನ ಇದಾಗಿತ್ತು.
ಈ ಸಂಭ್ರಮಕ್ಕೆ ಕಾರಣ. ದೀಪಾವಳಿಯ ಆರಂಭ. ರಜೆಯ ಸಂತಸದ ಜತೆ ಪ್ರತಿದಿನವೂ ಬಗೆಬಗೆಯ ರೂಪದಲ್ಲಿ ದೀಪಾವಳಿಯ ಆಚರಣೆಯ ಸ್ವಾರಸ್ಯ. ವರ್ಷಪೂರ್ತಿ ಉಳಿಸಿಕೊಂಡು ಬಂದ ಚಿಲ್ಲರೆ ಈಗ ನಮ್ಮ ಡಬ್ಬಿಯಲ್ಲಿ ಭಾರೀ ಮೊತ್ತ ಆಗಿರಬಹುದು ಎಂಬ ಲೆಕ್ಕಾಚಾರ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಾತ್ರ ನಮ್ಮ ಈ “ಖಜಾನೆ’ಯನ್ನು ಒಡೆಯಲು ಮನೆಯವರ ಅನುಮತಿ. ಈ ಖಜಾನೆಯ ಸಂಪತ್ತು ನಮ್ಮ ಪಟಾಕಿ ಖರೀದಿ ಎಂಬ “ಮಹತ್ಕಾರ್ಯ’ಕ್ಕೆ ವಿನಿಯೋಗವಾಗಬೇಕು.
ಮತ್ತಷ್ಟು ಓದು 
ಅಂಥ ಕಳ್ಳರು ಸಂತೆಲೀ ಜೊತೆಯಾದರು…
– ವಿಜಯ್ ಹೆರಗು
ಭಾರತ ದೇಶದ ಪ್ರಜಾಪ್ರಭುತ್ವ ಸಂಕಷ್ಟದಲ್ಲಿದೆ. ಇಲ್ಲಿ ವಾಹನ ಚಲಾಯಿಸಲು ಪರವಾನಗಿ ಇಲ್ಲದಿದ್ದರೂ ಪರವಾಗಿಲ್ಲ, ಪೋಲಿಸಪ್ಪನ ಕೈಗೆ ನೂರರ ನೋಟು ತುರುಕಿ ಬಚಾವಾಗಬಹುದು. ಆದರೆ ಉಪವಾಸ ಸತ್ಯಾಗ್ರಹ ಮಾಡಲು ಅನುಮತಿ ಬೇಕು. ಇಲ್ಲದಿದ್ದರೆ ಹೆಂಗಸರು, ಮಕ್ಕಳೆಂಬ ಭೇದ ತೋರದೆ ಸದೆಬಡಿಯುತ್ತಾರೆ. ಸಾಮಾನ್ಯ ಜನರು ಏನೂ ಮಾಡಲಾಗದ ಹಂತ ತಲುಪಿದ್ದಾರೆ. ತಾವೇ ಆರಿಸಿಕಳಿಸಿದ ಮಂದಿ ತಮ್ಮ ಮೇಲೆ ದಬ್ಬಾಳಿಕೆ ಮಾಡುವುದನ್ನು ನೋಡುವ ಅಸಹಾಯಕ ಸ್ಥಿತಿ ಯಾವುದೇ ದೇಶದ ಜನರಿಗೂ ಬರಬಾರದು.

ಬೆಂಗಳೂರು ಕೇಂದ್ರಾಡಳಿತ ಪ್ರದೇಶವಾಗಲಿ
– ಶ್ರೀ ಹರ್ಷ ಸಾಲಿಮಠ
ಇದೊಂದು ಮಾತನ್ನು ಅತ್ಯಂತ ತೀವ್ರ ಸಂಕಟದಿಂದ ಹೇಳುತ್ತಿದ್ದೇನೆ. ಕಾಲಿಗೆ ಗ್ಯಾಂಗ್ರಿನ್ ಆದಾಗ ಕಾಲನ್ನು ಕತ್ತರಿಸುತ್ತಾರಲ್ಲ ಹಾಗೆ. ನೋವಾಗುತ್ತದೆ ಆದರೆ ಬದುಕಲು ಅದು ಅನಿವಾರ್ಯ. ಕನ್ನಡ/ಕರುನಾಡು ಉಳಿಯಬೇಕೆಂದರೆ ಈ ಕೆಲಸ ಆಗಬೇಕಾಗಿದೆ.
ಬೆಂಗಳೂರಲ್ಲಿ ಕನ್ನಡ ಸಿಗುವುದಿಲ್ಲ.ಕನ್ನಡಿಗರು ಕಾಣೆಯಾಗುತ್ತಿದ್ದಾರೆ ಎಂಬ ಮಾತನ್ನು ಅತಿಶಯೋಕ್ತಿ ಎಂದುಕೊಂಡಿದ್ದೆ.ಇತ್ತೀಚಿನ ನನ್ನ ಕೆಲ ಅನುಭವಗಳು ಇದು ಸತ್ಯವೆಂದು ಬಿಂಬಿಸಿವೆ. ನಾನು ಎರಡು ಕಂಪನಿಗಳಿಗೆ ಇಂಟರ್ ವ್ಯೂ ಪ್ಯಾನೆಲಿಸ್ಟ್ ಆಗಿದ್ದೇನೆ. ಎರಡು ಕಾಲೇಜುಗಳಿಗೆ ಅಕಡೆಮಿಕ್ ಕನ್ಸಲ್ಟಂಟ್ ಆಗಿದ್ದೇನೆ. ನನ್ನ ಅನುಭವ ಮತ್ತು ವಿಶ್ಲೇಷಣೆಯಿಂದ ಇದೊಂದು ಅಭಿಪ್ರಾಯವನ್ನು ಮುಂದಿಡುತ್ತಿದ್ದೇನೆ.
ಇಲ್ಲಿಯವರೆಗೆ ಕಂಪನಿಗಳಿಗಾಗಿ ಸುಮಾರು ಸೂರು ಜನರ ಸಂದರ್ಶನ ನಡೆಸಿದ್ದೇನೆ. ದಯವಿಟ್ಟು ನಂಬಿ. ಇಲ್ಲಿಯವರೆಗೆ ಒಬ್ಬನೇ ಒಬ್ಬ ಕನ್ನಡಿಗ ಸಂದರ್ಶನಕ್ಕಾಗಿ ಬಂದಿಲ್ಲ! ನಾನು ಮತ್ತು ಪ್ಯಾನೆಲ್ ನಲ್ಲಿರುವ ಕೆಲವರು ಕನ್ನಡಿಗ ಗೆಳೆಯರು ಕನ್ನಡದ ಹುಡುಗರು ಬಂದರೆ ಕೊಂಚ ದಡ್ಡರಿದ್ದರೂ ಸರಿ ಶತಾಯಗತಾಯ ಮುಂದಕ್ಕೆ ತಳ್ಳಬೇಕೆಂದು ಯೋಜಿಸಿಕೊಂಡಿದ್ದೆವು. ಆದರೆ ಕನ್ನಡದ ಒಬ್ಬ ಹುಡುಗನಾದರೂ ಬಂದರೆ ತಾನೆ? ಬಂದವರು ಬಹುತೇಕರು ತೆಲುಗರು ಮತ್ತು ಬಿಹಾರಿಗಳು! ಕೃಷ್ಣದೇವರಾಯ ವಿಶ್ವವಿದ್ಯಾಲಯದ ಲ್ಲಿ ಬಿಎಎಸ್ಸಿ ಪದವಿ ಮುಗಿಸಿ ಎರಡು ವರುಷಗಳ ಸುಳ್ಳು ಅನುಭವ ಹಾಕಿಕೊಂಡು ಬರುತ್ತಾರೆ. ಕಂಪನಿಗಳಾದರೋ ಇವರು ಸುಳ್ಳರು ಎಂದು ತಿಳಿದೂ ತೆಗೆದುಕೊಳ್ಳುತ್ತವೆ. ಏಕೆಂದರೆ ಈಗ ಬಹುತೇಕ ಕಂಪನಿಗಳು ಸರ್ವಿಸ್ ಮತ್ತು ಮೇಂಟೆನೆನ್ಸ್ ಕೆಲಸಗಳನ್ನು ನಡೆಸುತ್ತಿವೆ. ಈ ಕೆಲಸಕ್ಕೆ ಹೆಚ್ಚಿನ ಕೌಶಲ್ಯ ಅಗತ್ಯವಿಲ್ಲ. ಒಂದೆರಡು ತಿಂಗಳಲ್ಲಿ ಯಾರಾದರೂ ಕಲಿಯಬಹುದು. ಗಿರಾಕಿಗಳಿಗೆ ತೋರಿಸಲು ಬಿಲ್ಲಿಂಗಿಗಾಗಿ ಕೆಲವು ನೌಕರರ ಅವಶ್ಯಕತೆ ಇರುತ್ತದೆ. ಹಾಗಾಗಿ ಕೌಶಲ್ಯದ ಬಗ್ಗೆ ಹೆಚ್ಚಿನ ತಲೆ ಕೆಡಿಸಿಕೊಳ್ಳದೇ ಕಂಪನಿಗಳು ಇವರನ್ನು ಕೊಳ್ಳುತ್ತವೆ. ಇವರು ಕಡಿಮೆ ಸಂಬಳಕ್ಕೆ ರಾತ್ರಿ ಪಾಳಿಗೂ ಕೆಲಸ ಮಾಡಲು ತಯಾರಿರುವುದರಿಂದ ಕಂಪನಿಗಳಿಗೂ ಲಾಭ!
ಮತ್ತಷ್ಟು ಓದು 
ನೈಂಟಿ ಜತೆಗಿನ ನಂಟು!!!
– ರಶ್ಮಿ.ಕಾಸರಗೋಡು
ನೈಂಟಿ! ಅದೊಂದು ಥರಾ ಕಿಕ್ ಕೊಡುವಂತದ್ದೇ. ಅರೇ..ನೀವು ಉದ್ದೇಶಿಸುತ್ತಿರುವ ‘ಬಾಟಲಿ’ ಬಗ್ಗೆ ನಾನು ಹೇಳುತ್ತಿಲ್ಲ. ನಾನು ಹೇಳೋಕೆ ಹೊರಟಿರುವುದು 90ರ ದಶಕದ ಟಿವಿ ಕಾರ್ಯಕ್ರಮಗಳ ಬಗ್ಗೆ. ದೂರದರ್ಶನ ಅದೊಂದೇ ಚಾನೆಲ್ ಸಾಕು…ಎಲ್ಲ ತಿಳಿಯೋಕೆ, ಕಲಿಯೋಕೆ. ಹಿಂದಿ ಅರ್ಥವಾಗುತ್ತಿಲ್ಲವಾದರೂ ಟಿವಿ ಮುಂದೆ ನಾವು ಹಾಜರು. ಆವಾಗನಮ್ಮ ಮನೆಯಲ್ಲಿ ಟಿವಿ ಇರಲಿಲ್ಲ, ಆದರೂ ಒಂದು ಕಿಮೀ ನಡೆದು ಪಕ್ಕದ ಮನೆಗೆ ಟಿವಿ ನೋಡಲು ಹೋಗುತ್ತಿದ್ದೆ. ಅದೂ ಮಹಾಭಾರತ ನೋಡಲು. ಮಹಾ….ಭಾರತ್ ಅಂತ ಅದರ ಹಾಡು ಶುರುವಾಗುವ ಹೊತ್ತಿಗೆ ನಾವು ಮೂವರು (ಜತೆಗೆ ಅಣ್ಣ, ಅಕ್ಕ) ಅಲ್ಲಿ ಹಾಜರು. ಅಲ್ಲಿ ಯುದ್ಧ ನಡೆಯುತ್ತಿದ್ದರೆ ಕಣ್ಣು ಮುಚ್ಚಿ ನೋಡುವುದು, ಮರಣ ಶಯ್ಯೆಯಲ್ಲಿರುವ ಬೀಷ್ಮನನ್ನು ನೋಡಿ ಅಳುವುದು ಹೀಗೆ ಸಾಗುತ್ತಿತ್ತು ನಮ್ಮ ‘ಮಹಾ’ ಭಾರತ. ಆಮೇಲೆ ನಮ್ಮ ಮನೆಗೂ ಬ್ಲಾಕ್ ಆ್ಯಂಡ್ ವೈಟ್ ಟಿವಿ ಬಂತು. ಟಿವಿ ಬಂದ ಮೊದಲ ದಿನ ಫುಲ್ ಚಾಲೂ. ಪ್ರೋಗ್ರಾಂ ಮುಗಿದು ಬಣ್ಣ ಬಣ್ಣದ ಸ್ಟೈಪ್ ಕಾಣಿಸಿಕೊಂಡರೂ ಅದನ್ನೇ ನೋಡುತ್ತಾ ಕುಳಿತಿರುತ್ತಿದ್ದೆವು. ರುಕಾವಟ್ ಕೆ ಲಿಯೆ ಕೇದ್ ಹೈ ಅಂದ್ರೆ ಏನೂ ಅಂತಾ ಗೊತ್ತಿಲ್ಲದಿದ್ದರೂ ಸ್ವಲ್ಪ ಸಮಯದ ನಂತರ ಪ್ರೋಗ್ರಾಂ ಬರುತ್ತೆ ಅಂತಾ ಗೊತ್ತಿತ್ತು. “ಟಿವಿ ಬಂತಾ…ಇನ್ನು ಮಕ್ಕಳು ಓದಲ್ಲ ಬಿಡಿ” ಅಂತಾ ಅಮ್ಮನಿಗೆ ಚಾಡಿ ಹೇಳುವ ನೆರೆಯವರು ಬೇರೆ. ಅಂತೂ ಟಿವಿಯ ಮೂಲಕ ಹಿಂದಿ ಬೇಗನೆ ಕಲಿತುಕೊಳ್ಳುವಂತಾಯಿತು.
ಮತ್ತಷ್ಟು ಓದು 





