ಅಧಿಕಾರ ದಾಹಕ್ಕೆ ಮೇಧಾವಿಯ ಆತ್ಮಾಭಿಮಾನವನ್ನೂ ಕೊಲ್ಲುವ ಶಕ್ತಿಯಿದೆಯೇ…..?
– ಗುರುರಾಜ ಕೊಡ್ಕಣಿ,ಯಲ್ಲಾಪುರ
ಅವರು ಸಾಮಾನ್ಯ ವ್ಯಕ್ತಿಯೇನಲ್ಲ. ಚಿನ್ನದ ಪದಕದೊ೦ದಿಗೆ ಪದವಿ ಮುಗಿಸಿದವರು. ವಿಶ್ವದ ಪ್ರತಿಷ್ಠಿತ ಕಾಲೇಜುಗಳಲ್ಲಿ ಒ೦ದಾದ ಆಕ್ಸಫರ್ಡ್ ಕಾಲೇಜಿನಿ೦ದ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದವರು.ಭಾರತೀಯ ರಿಸರ್ವ ಬ್ಯಾ೦ಕಿನ ಗವರ್ನರ್ ನ೦ತಹ ಅತ್ಯುನ್ನತ ಹುದ್ದೆಯನ್ನು ಅಲ೦ಕರಿಸಿದ್ದವರು.ತೊ೦ಬತ್ತರ ದಶಕದಲ್ಲಿ ಭಾರತೀಯ ಅರ್ಥ ವ್ಯವಸ್ಥೆ ತೊ೦ದರೆಯಲ್ಲಿದ್ದಾಗ,ದೇಶದ ಹಣಕಾಸು ಸಚಿವರಾಗಿ, ಅ೦ದಿನ ಪ್ರಧಾನಿ ಪಿ.ವಿ ನರಸಿ೦ಹರಾವ್ ರವರ ಸಾರಥ್ಯದಲ್ಲಿ ಜಾಗತೀಕರಣದ೦ತಹ ವ್ಯವಸ್ಥೆಯಿ೦ದ ದೇಶದ ಆರ್ಥಿಕ ಪರಿಸ್ಥಿತಿಯನ್ನು ಮೇಲೆತ್ತಲು ಸಹಕಾರಿಯಾದವರು. ಪ್ರಪ೦ಚದ ಬುದ್ದಿವ೦ತ ಆರ್ಥಶಾಸ್ತ್ರಜ್ನರಲ್ಲಿ ಒಬ್ಬರು ಎ೦ದು ಹೆಸರು ಗಳಿಸಿದವರು.ಅರ್ಥಶಾಸ್ತ್ರದಲ್ಲಿನ ಅನೇಕ ಸಾಧನೆಗಳಿಗಾಗಿ ವಿಶ್ವದ ಹಲವು ಪ್ರತಿಷ್ಠಿತ ಸ೦ಸ್ಥೆಗಳ ಪ್ರಶಸ್ತಿಗಳನ್ನು ಪಡೆದವರು.ಇಷ್ಟಕ್ಕೂ ನಾನು ಹೇಳುತ್ತಿರುವುದು ಜವಹರಲಾಲ ನೆಹರೂ ಆದಮೇಲೆ ಸತತ ಐದು ವರ್ಷಗಳ ಅಧಿಕಾರಾವಧಿಯ ನ೦ತರ ಎರಡನೇ ಬಾರಿಗೆ ಪುನರಾಯ್ಕೆಯಾದ ಏಕೈಕ ವ್ಯಕ್ತಿ ನಮ್ಮ ದೇಶದ ಪ್ರಧಾನಿ ಡಾ.ಮನಮೊಹನ್ ಸಿ೦ಗ್ ರವರ ಬಗ್ಗೆ.
ಆದರೆ ಇ೦ದು ಆಗುತ್ತಿರುವುದಾದರೂ ಏನು..? ಇ೦ಥಹ ಪ್ರತಿಭಾನ್ವಿತ ವ್ಯಕ್ತಿಯನ್ನು ನಾವು ’ಗೇಲಿಯ ವಸ್ತು’ವೆ೦ಬ೦ತೇ ನೊಡುತ್ತೇವೆ. ಮೊಬೈಲಿನ ರಿ೦ಗಣವನ್ನು ಮೌನವಾಗಿಸುವಾಗ ’ಸೈಲೆ೦ಟ್ ಮೋಡ್’ ಎನ್ನುವ ಬದಲು ’ಮನಮೋಹನ್ ಸಿ೦ಗ್ ಮೋಡ್’ ಎ೦ತಲೋ,’ಪ್ರಧಾನ ಮ೦ತ್ರಿ ಮೋಡ್’ ಎ೦ತಲೋ ಕರೆಯುತ್ತೇವೆ.ಅವರ ಬಗ್ಗೆ ತರಹೇವಾರಿ ಜೋಕುಗಳು ಇ೦ಟರ್ ನೆಟ್ ನಲ್ಲಿ ಹರಿದಾಡುತ್ತವೆ.ದಿನಕ್ಕೊ೦ದು ಎಸೆಮ್ಮಸ್ ಗಳು ಹುಟ್ಟಿಕೊಳ್ಳುತ್ತವೆ. ’ಅವರು ಡೆ೦ಟಿಸ್ಟ್ ಬಳಿ ಹೋದಾಗಲಾದರೂ ಬಾಯಿ ತೆರೆಯುತ್ತಾರಾ..’ ಎನ್ನುವ೦ತೇ ಲೇವಡಿ ಮಾಡುತ್ತೇವೆ.ಈ ದೇಶ ಅತ್ಯುನ್ನತ ಹುದ್ದೆಯಾಗಿರುವ ’ಪ್ರಧಾನ ಮ೦ತ್ರಿ’ ಹುದ್ದೆಯಲ್ಲಿರುವವರು ಅವರು ಎ೦ಬುದನ್ನೂ ಮರೆತೂ ತಮಾಷೆ ಮಾಡುತ್ತೇವೆ.
ಮಿ.ರಾಹುಲ್,ಹಿರೋಯಿಸಂ ಅನ್ನುವುದು ಸಿನೆಮಾಗಳಲ್ಲೇ ಚೆನ್ನ
– ರಾಕೇಶ್ ಶೆಟ್ಟಿ
ಕಾಂಗ್ರೆಸ್ಸಿನ ನಾಯಕರಾಗಿದ್ದಂತಹ ಅರ್ಜುನ್ ಸಿಂಗ್ ಅವರ ಆತ್ಮಕತೆ ‘A Grain of Sand in the Hourglass of Time’ ಯಲ್ಲಿ ಒಂದು ಪ್ರಸಂಗವನ್ನು ದಾಖಲಿಸಿದ್ದಾರೆ ಅನ್ನುವ ವರದಿಯೊಂದು ಕಳೆದ ವರ್ಷ ಪತ್ರಿಕೆಗಳಲ್ಲಿ ಬಂದಿತ್ತು.ಅಲ್ಲಿ ಅವರು ಆಗಿನ್ನೂ ರಾಜಕೀಯಕ್ಕೆ ಎಂಟ್ರಿ ಕೊಟ್ಟಿರದಿದ್ದ ಸೋನಿಯಾ ಅವರನ್ನು ಪಕ್ಷಕ್ಕೆ ಕರೆ ತಂದು ಅಧ್ಯಕ್ಷೆಯ ಪಟ್ಟಕಟ್ಟುವ ಬಗ್ಗೆ ಮಾಜಿ ಪ್ರಧಾನಿ ಪಿ.ವಿ ನರಸಿಂಹರಾವ್ ಅವರ ಬಳಿ ಮಾತನಾಡಲು ಸೀತರಾಂ ಕೇಸರಿ ಮತ್ತಿತ್ತರರೊಂದಿಗೆ ಹೋಗಿರುತ್ತಾರೆ. ಸೋನಿಯಾರನ್ನು ಅಧ್ಯಕ್ಷೆಯನ್ನಾಗಿ ಮಾಡುವ ಇವರ ಮಾತನ್ನು ಕೇಳಿ ಕ್ಷಣಕಾಲ ಸುಮ್ಮನಿದ್ದ ಪಿವಿಎನ್ ಒಮ್ಮೆಲೇ ” ರೈಲಿನ ಕಂಪಾರ್ಟ್-ಮೆಂಟ್ ಗಳನ್ನು ಇಂಜಿನ್ನಿಗೆ ಜೋಡಿಸಿದಂತೆ,ಕಾಂಗ್ರೆಸ್ಸ್ ಅನ್ನು ನೆಹರೂ ಕುಟುಂಬಕ್ಕೆ ಜೋತು ಬೀಳಿಸುವುದೇಕೆ? ಬೇರೆ ದಾರಿಗಳಿಲ್ಲವೇ ನಮ್ಮ ಮುಂದೆ?” ಅಂತ ಸಿಡುಕುತ್ತಾರೆ. ಕಾಂಗ್ರೆಸ್ಸಿನಂತ ಲಕೋಟೆ ಪಕ್ಷದಲ್ಲಿ ಪಿವಿಎನ್ ಮತ್ತು ಸೀತರಾಂ ಕೇಸರಿಯವರನ್ನು ಆಮೇಲೆ ಹೇಗೆ ನಡೆಸಿಕೊಳ್ಳಲಾಯಿತು ಅನ್ನುವುದೆಲ್ಲ ಮತ್ತೆ ಬಿಡಿಸಿ ಹೇಳಬೇಕಿಲ್ಲ.
೧೨೮ ವರ್ಷಗಳ ಇತಿಹಾಸ ಹೊಂದಿರೋ ಈ ರಾಷ್ಟ್ರೀಯ ಪಕ್ಷಕ್ಕೆ “ನೆಹರೂ ಕುಟುಂಬ”ದ ಬೋಗಿಯನ್ನು ಮೊದಲಿಗೆ ಜೋಡಿಸಿದ್ದು ಮಹಾತ್ಮ ಗಾಂಧೀಜಿ.ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಸರ್ದಾರ್ ವಲ್ಲಭಾಯ್ ಪಟೇಲ್ ಅಂತ ದಿಗ್ಗಜರನ್ನೆಲ್ಲ ಬದಿಗೆ ಸರಿಸಿ ಜವಹರಲಾಲ್ ನೆಹರೂ ಅವರನ್ನು ಗಾಂಧೀಜಿ ಮುನ್ನೆಲೆಗೆ ತಂದ ಹಿನ್ನೆಲೆಯೇನು ಅನ್ನುವುದರ ಬಗ್ಗೆ ಇವತ್ತಿಗೂ ಬೇರೆ ಬೇರೆ ಕತೆಗಳಿವೆ.ನೆಹರೂ ನಂತರ ಬಂದ ಇಂದಿರಾ ಅವರು ನೆಹರೂಗಿಂತ ಉತ್ತಮವಾಗಿ ದೇಶವನ್ನು ಮುನ್ನಡೆಸಿದರೂ, ಸುಲಭವಾಗಿ ದಕ್ಕಿದ್ದಂತಹ ಪ್ರಧಾನಿ ಹುದ್ದೆ ಅವರೊಳಗಿನ ಸರ್ವಾಧಿಕಾರಿಯನ್ನು ಜಾಗೃತಗೊಳಿಸಿ ಈ ದೇಶದ ಪ್ರಜಾಪ್ರಭುತ್ವದ ಇತಿಹಾಸದ ಕಪ್ಪುಚುಕ್ಕೆ “ಎಮರ್ಜೆನ್ಸಿ”ಯ ದಿನಗಳಿಗೆ ಕಾರಣವಾಯಿತು. (ಆದರೆ ಕರ್ನಾಟಕದ ಕೆಲವು ಬುದ್ಧಿಜೀವಿಗಳಿಗೆ ಈಗಲೂ ಕಾಂಗ್ರೆಸ್ಸ್ ಪ್ರಜಾಪ್ರಭುತ್ವದ ರಕ್ಷಕನಂತೆ,”ಬತ್ತಲಾರದ ಗಂಗೆ” ಕಾಣುತ್ತದೆ…! ) ಇಂದಿರಾ ಹಂತಕರ ಗುಂಡಿಗೆ ಬಲಿಯಾದ ನಂತರ ಕಾಂಗ್ರೆಸ್ಸ್ ರೈಲಿನ ಬೋಗಿಗೆ ’ರಾಜೀವ್’ ಜೋಡಣೆಯಾದರು.
ಮತ್ತಷ್ಟು ಓದು 
ಮೂರ್ತಿಗಳ ದ್ವಂದ್ವಗಳು ಮತ್ತು ದೇವನೂರರ ಬಾಂಬುಗಳು
– ಮು.ಅ ಶ್ರೀರಂಗ, ಬೆಂಗಳೂರು
ಸುಮಾರು ಹತ್ತು ದಿನಗಳಿಂದ ಈಚೆಗೆ ನಮ್ಮೀ ಸುವರ್ಣ ಕರ್ನಾಟಕವು ಅನಂತಮೂರ್ತಿಯವರ ಹೇಳಿಕೆ,ಮರುಹೇಳಿಕೆ,ಅವುಗಳಿಗೆ ಮಾಧ್ಯಮಗಳ,ಜನರ ಪ್ರತಿಕ್ರಿಯೆಗಳು,ಅಭಿವ್ಯಕ್ತಿ ಸ್ವಾತಂತ್ರ್ಯ ಎಂದರೆ ಏನು ಎತ್ತ ಎಂದು ಇತರ ಬುದ್ಧಿಜೀವಿಗಳ ಪಾಠಗಳಿಂದ ತುಂಬಿ ಹೋಗಿದೆ. ಈರುಳ್ಳಿ ಬೆಲೆ ಎಷ್ಟು ಏರಿತು,ರುಪಾಯಿ ಎಷ್ಟು ಆಳಕ್ಕೆ ಬಿತ್ತು ಇತ್ಯಾದಿಗಳ ಕಡೆಗೆ ನಮಗೆ ಆಸಕ್ತಿಯಿಲ್ಲ. ಅನಂತಮೂರ್ತಿಯವರು ಏನು ಹೇಳಿದ್ದಾರೆ?ಈಗ ಎಲ್ಲಿದ್ದಾರೆ?ಏನು ಮಾಡುತ್ತಿದ್ದಾರೆ?ಇದೇ ಮುಖ್ಯವಾಗಿದೆ. ಇದರ ಜತೆಗೆ ಈಗ ನಮ್ಮ ಖ್ಯಾತ ದಲಿತ ಮತ್ತು ಬಂಡಾಯ ಸಾಹಿತಿಗಳಾದಂತಹ ಮಾನ್ಯ ದೇವನೂರು ಮಹಾದೇವ ಅವರು ಬೆಂಗಳೂರು ಸುತ್ತಮುತ್ತಲಿನ ಬ್ರಾಹ್ಮಣ ಮತ್ತು ಲಿಂಗಾಯಿತರ townshipಗಳನ್ನು ಪ್ರಾಣಹಾನಿ ಆಗದಂತೆ ಬಾಂಬ್ ಹಾಕಿ ನಾಶಪಡಿಸಲೇಬೇಕು ಎಂದು “ಫತ್ವಾ” ಹೊರಡಿಸಿದ್ದಾರೆ. . ಈ ಬಾಂಬ್ ಯೋಜನೆಯನ್ನು ಅವರು ಹೇಳಿದ್ದು ಕರ್ನಾಟಕ ಕೇಂದ್ರೀಯ ವಿ ವಿ ಮತ್ತು ಗುಲ್ಬರ್ಗ ವಿ ವಿ ಸಂಯುಕ್ತವಾಗಿ ಆಯೋಜಿಸಿದ ಕರ್ನಾಟಕ ದಲಿತ ಚಳುವಳಿ ಹಾಗು ಸಾಹಿತ್ಯದ “ಉದ್ಘಾಟನಾ” ಸಮಾರಂಭದಲ್ಲಿ. ಇದುವರೆಗೆ ವಿ ವಿ ಗಳ ಕೆಲವು ಅಧ್ಯಾಪಕರು ಮತ್ತು ಪ್ರಾಧ್ಯಾಪಕರು ನಕ್ಸಲರ ಮತ್ತು ಮಾವೋವಾದಿಗಳ ಹಿಂಸೆಗೆ ಬೌದ್ಧಿಕ ಬೆಂಬಲವನ್ನು ಮಾತ್ರ ಕೊಡುತ್ತಿದ್ದರು. ಇನ್ನು ಮುಂದೆ ಭೌತಿಕ ಬೆಂಬಲವನ್ನೂ ಸಹ ನಿರ್ಭಯವಾಗಿ ನೀಡಬಹುದು. ಏಕೆಂದರೆ ಬುದ್ಧಿಜೀವಿಗಳು ಹೇಳಿದ ಮೇಲೆ ಮುಗಿಯಿತು. ಅವರು ಏನೇ ಮಾಡಿದರೂ, ಹೇಳಿದರೂ ಅದು ಅಪರಾಧವಲ್ಲ.
ಲೋಕಾಯುಕ್ತ ಆಸ್ತಿ ವಿವರ ನೀಡುವುದೇ ಯುಕ್ತ!
– ತುರುವೇಕೆರೆ ಪ್ರಸಾದ್
ಈಚೆಗೆ ಪತ್ರಿಕೆಗಳಲ್ಲಿ ಹಲವು ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರು ತಮ್ಮ ಆಸ್ತಿ ವಿವರಗಳನ್ನು ಲೋಕಾಯುಕ್ತಕ್ಕೆ ಸಲ್ಲಿಸಿಲ್ಲ ಎಂಬ ಸಂಗತಿ ವರದಿಯಾಗಿತ್ತು. ಶಾಸಕರು, ವಿಧಾನಪರಿಷತ್ ಸದಸ್ಯರು ಹಾಗೂ ಮಾಜಿ ಜನಪ್ರತಿನಿಧಿಗಳು ಕಡ್ಡಾಯವಾಗಿ ಪ್ರತಿವರ್ಷ ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಸಬೇಕಿದೆ. ಆದರೆ ಹಲವರು ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಅಷ್ಟೇ ಅಲ್ಲ, ಜನಪ್ರತಿನಿಧಿಗಳು ಸಲ್ಲಿಸಿರುವ ಆಸ್ತಿ ವಿವರವೂ ಎಷ್ಟರ ಮಟ್ಟಿಗೆ ಸತ್ಯ ಎನ್ನುವುದನ್ನು ಸಾರ್ವಜನಿಕರು ತಿಳಿಯಲಾಗುತ್ತಿಲ್ಲ. ಏಕೆಂದರೆ ಲೋಕಾಯುಕ್ತ ಜನಪ್ರತಿನಿಧಿಗಳ ಆಸ್ತಿ ವಿವರಗಳನ್ನು ಮಾಹಿತಿ ಹಕ್ಕು ಕಾಯಿದೆಯಡಿ ನೀಡಲು ನಿರಾಕರಿಸುತ್ತದೆ.
ಕಳೆದ ಮಾರ್ಚ್ 18ರಂದು ನಾನು ವಿಧಾನಸಭಾ ಚುನಾವಣೆಗಳ ಹಿನ್ನಲೆಯಲ್ಲಿ ಕೆಲವು ಜನಪ್ರತಿನಿಧಿಗಳು ಲೋಕಾಯುಕ್ತಕ್ಕೆ ಸಲ್ಲಿಸಿರುವ ಆಸ್ತಿ ವಿವರವನ್ನು ಮಾಹಿತಿ ಹಕ್ಕು ಕಾಯಿದೆಯಡಿ ನೀಡುವಂತೆ ಕೋರಿದ್ದೆ. ಆದರೆ ಲೋಕಾಯುಕ್ತ ಆ ಮಾಹಿತಿ ನೀಡಲು ನಿರಾಕರಿಸಿತು. ಅದಕ್ಕೆ ಲೋಕಾಯುಕ್ತ ಕೊಟ್ಟ ಕಾರಣ ಮಾಹಿತಿ ಹಕ್ಕು ಕಾಯಿದೆಯಡಿ ನಾಗರಿಕರಿಗೆ ಸಾರ್ವಜನಿಕ ಪ್ರಾಧಿಕಾರದ ಸಾರ್ವಜನಿಕ ಸಂಗತಿಗಳ ಬಗ್ಗೆ ಮಾತ್ರ ಮಾಹಿತಿ ನೀಡಲಾಗುತ್ತದೆ. ನೀವು ಕೆಲವು ವ್ಯಕ್ತಿಗಳ ಖಾಸಗಿ ವಿವರಗಳ ಬಗ್ಗೆ ಮಾಹಿತಿ ಕೇಳಿದ್ದೀರಿ. ಇದು ಸಾರ್ವಜನಿಕ ಪ್ರಾಧಿಕಾರ ಅಥವಾ ಆಢಳಿತಕ್ಕೆ ಸಂಬಂಧಿಸಿದ ಸಾರ್ವಜನಿಕ ವಿಷಯವಲ್ಲ ಎಂಬುದು.(The intention of the legislation is to provide right to information of a citizen pertaining to public affairs of the public authority, but you have sought the information of an individual which is purely personal one and is not with respect to public affairs)
ಅನ೦ತಮೂರ್ತಿಯವರಿಗೆ ಅಭಿಮಾನಿಯೊಬ್ಬನ ಪತ್ರ
– ಗುರುರಾಜ್ ಕೊಡ್ಕಣಿ,ಯಲ್ಲಾಪುರ
ಸನ್ಮಾನ್ಯ ಶ್ರೀ ಅನ೦ತಮೂರ್ತಿಗಳಿಗೆ,
ನಮಸ್ಕಾರಗಳು,
ಈಗ ಸದ್ಯದ ಪರಿಸ್ಥಿತಿಯಲ್ಲಿ ’ಹೇಗಿದ್ದೀರಿ..’? ಎ೦ದು ಕೇಳುವುದೇ ತಪ್ಪೇನೋ.ಇತ್ತೀಚಿನ ತಮ್ಮ ಹೇಳಿಕೆಗಳ ಬಗ್ಗೆ ಸ್ಪಷ್ಟನೆಗೆ ತಮಗೊ೦ದು ಪತ್ರ ಬರೆಯೊಣವೆನಿಸಿತು.ಪತ್ರವನ್ನು ನೇರವಾಗಿ ತಮಗೆ ಕಳುಹಿಸೊಣವೆ೦ದುಕೊ೦ಡೆ.ಆದರೆ ಇತ್ತೀಚೆಗೆ ತಾವು ಯಾವುದೇ ಪತ್ರ , ಪತ್ರಿಕೆ,ಓದುವುದಿಲ್ಲವ೦ತೆ.ಮೊನ್ನೆಯೊ೦ದು ಟಿವಿ ಸ೦ದರ್ಶನದಲ್ಲಿ ತಾವೇ ಹೇಳಿದ್ದೀರಿ.ಹಾಗಾಗಿ ಸುಮ್ಮನೇ ಏಕೆ ಐದು ರೂಪಾಯಿ ಹಾಳು ಮಾಡುವುದೆ೦ದು ಇಲ್ಲಿ ಹಾಕುತ್ತಿದ್ದೇನೆ.ಸಾಧ್ಯವಾದರೇ ಓದಿ,ಓದದಿದ್ದರೂ ಚಿ೦ತೆಯಿಲ್ಲ.
ಏನಾಗಿದೆ ಸರ್ ನಿಮಗೆ..? ಮತಿಭ್ರಮಣೆಯಾ ..? ಹೊಸದೊ೦ದು ಪ್ರಶಸ್ತಿ ಪಡೆಯುವ ಉಮ್ಮೇದಿಯಾ…?ಅಥವಾ ಸುದ್ದಿಯಲ್ಲಿರುವ ರೋಗವಾ..? ಒ೦ದು ಗೊತ್ತಾಗುತ್ತಿಲ್ಲ ಒ೦ದು ಕಾಲದಲ್ಲಿ ನಿಮ್ಮ ಸಾಹಿತ್ಯವನ್ನು ಪ್ರೀತಿಸುತ್ತಿದ್ದವರು ನಾವು,ನಿಮಗಾಗಿ ಎಷ್ಟು ಸ೦ತೋಷಿಸುತ್ತಿದ್ದೇವು ಗೊತ್ತಾ…? ನಿಮ್ಮದೊ೦ದು ಕತೆ ಪತ್ರಿಕೆಯಲ್ಲಿ ಬ೦ದಿದ್ದರೇ ನಮಗದುವೇ ಮೃಷ್ಟಾನ್ನ,ನಿಮ್ಮ ಹೊಸದೊ೦ದು ಪುಸ್ತಕ ಬಿಡುಗಡೆಯಾದರೇ ನಮಗೆ ಆ ದಿನ ಸ೦ಭ್ರಮ.ನಿಮಗೊ೦ದು ಪ್ರಶಸ್ತಿ ಬ೦ದರೇ ನಿಮಗಿ೦ತಲೂ ಹೆಚ್ಚು ಸ೦ತೊಷಿಸಿದವರು ನಾವು.ನಿಮಗೆ ಜ್ನಾನಪೀಠ ಬ೦ದಾಗಲ೦ತೂ ’ನೋಡ್ರೋ,ನಮ್ಮ ಗುರುಗಳಿಗೆ ದೇಶದ ಅತ್ಯುನ್ನತ ಗೌರವ ಬ೦ತು’ಎ೦ದು ಊರೆಲ್ಲಾ ಹೇಳಿಕೊ೦ಡು ತಿರುಗಿದೆವು.ನಿಮ್ಮ ಮೇಲಿನ ಅತಿಯಾದ ಅಭಿಮಾನಕ್ಕೋ ಏನೋ,ನೀವೇನೇ ಮಾಡಿದರೂ ,ಹೇಳಿದರೂ ಸಹಿಸಿಕೊ೦ಡೆವು.ಅನೇಕ ಕಾದ೦ಬರಿಗಳಲ್ಲಿ ಬ್ರಾಹ್ಮಣ ಯುವತಿಗೆ ದಲಿತ ಯುವಕನೊ೦ದಿಗೆ ಅನೈತಿಕ ಸ೦ಬ೦ಧವಿರುವ೦ತೆಯೋ ,ಅಥವಾ ಬ್ರಾಹ್ಮಣ ಯುವಕನೊಬ್ಬನಿಗೆ ,ದಲಿತ ಯುವತಿಯೊಬ್ಬಳೊ೦ದಿಗೆ ಅನೈತಿಕ ಸ೦ಬ೦ಧವಿರುವ೦ತೆಯೋ ಚಿತ್ರಿಸಿದಿರಿ. ಕೊ೦ಚ ಇರುಸುಮುರುಸಾದರೂ ’ಎಲ್ಲಾ ಕಡೆ ನಡೆಯೋದೆ ಬಿಡು ಇದು’ ಎ೦ದು ಸುಳ್ಳುಸುಳ್ಳೆ ನಿಮ್ಮನ್ನು ಸಮರ್ಥಿಸಿದೆವು.’ಭೈರಪ್ಪ ,ಒಬ್ಬ ಡಿಬೇಟರ್ ಆತನನ್ನು ಕಾದ೦ಬರಿಕಾರನೆ೦ದು ಒಪ್ಪಿಕೊಳ್ಳಲು ಕಷ್ಟವಾಗುತ್ತದೆ’ ಎ೦ದಿರಿ.’ಆವರಣ’ ಓದಿದ ನ೦ತರವೂ ನೀವು ಹೇಳಿದ್ದೇ ಸರಿ ಎ೦ದು ವಾದಿಸಿದೆವು.’ಮೋದಿ ಪ್ರಧಾನಿಯಾದರೇ ದೇಶ ಬಿಡುತ್ತೇನೆ ’ಎ೦ದಿರಿ,ನಾವು ಮುಜುಗರಕ್ಕೊಳಗಾದೆವು.ಆದರೆ ಈಗ ಇದೇನಿದು ನಿಮ್ಮ ಹೊಸರಾಗ..? ಆರ್.ಎಸ್.ಎಸ್. ಎ೦ದರೇ ’ಹುಚ್ಚು ನಾಯಿ ರೋಗ’ಎ೦ದುಬಿಟ್ಟೀರಿಲ್ಲ ಈಗ.. ಹೇಗೆ ಸಮರ್ಥಿಸುವುದು ನಿಮ್ಮ ಇ೦ಥ ನೀಚ ತಪ್ಪನ್ನು ಗುರುಗಳೇ.ದಯವಿಟ್ಟು ಕ್ಷಮಿಸಿ,ನಮ್ಮಿ೦ದ ಸಾಧ್ಯವಿಲ್ಲ.
ಮತ್ತಷ್ಟು ಓದು 
ವಿರೋಧಿಗಳೆಸೆದ ಕಲ್ಲನ್ನೇ ತನ್ನ ಏಳಿಗೆಯ ಮೆಟ್ಟಿಲಾಗಿಸಿಕೊಂಡ ಮೋದಿ
– ಪ್ರಸನ್ನ ಬೆಂಗಳೂರು
ಭಾರತದ ರಾಜಕೀಯ ಇತಿಹಾಸದಲ್ಲಿ ೧೦ ವರ್ಷಗಳಿಗೂ ಹೆಚ್ಚು ಕಾಲ ವಿರೋಧ ಪಕ್ಷಗಳು,ಮಾಧ್ಯಮಗಳು,ಪ್ರಗತಿಪರರು ಟಾರ್ಗೆಟ್ ಮಾಡಿರುವುದು ನರೇಂದ್ರ ಮೋದಿಯವರನ್ನು . ಮೋದಿಯವನರನ್ನು ಬಿಜೆಪಿ ತನ್ನ ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಿದ ಮೇಲೆ ಅವರ ಮೇಲಿನ ಹಿಂದಿನ ಆರೋಪಗಳ ಜೊತೆ ಜೊತೆಗೆ ಅವರ ಅಭಿವೃದ್ಧಿ ಕಾರ್ಯಗಳನ್ನು ವಿಶ್ಲೇಷಣೆಗೊಳಪಡಿಸಲಾಗುತ್ತಿದೆ. ಈ ಹಿಂದೆ ಪ್ರಧಾನಿಯಾದವರ ಬಗ್ಗೆ ಇಷ್ಟೊಂದು ವಿಶ್ಲೇಷಣೆ ವಿಮರ್ಶೆ ಪರೀಕ್ಷೆ ನಡೆದಿತ್ತೆ? ನಡೆದು ಅಂತಹ ಅಗ್ನಿ ಪರೀಕ್ಷೆಯಲ್ಲಿ ಗೆದ್ದು ಬಂದಿದ್ದರೆ ಬಹುಶಃ ಭಾರತವಿಂದು ಇಂತಹ ಪರಿಸ್ಥಿತಿಯಲ್ಲಿರುತ್ತಿರಲಿಲ್ಲ ಅಲ್ಲವೆ? ಮೋದಿ ಈ ಪರಿ ಬೆಳೆದಿದ್ದಕ್ಕೆ ಕಾರಣ ಹುಡುಕುತ್ತಾ ಹೊರಟವನಿಗೆ ಕಂಡದ್ದು ಈ ವಿಭಿನ್ನವಾದ ಆದರೆ ತೆರೆಮರೆಯ ಕಾರಣ.
ಅದು ತನ್ನ ಕುಕೃತ್ಯಕ್ಕೆ ತಾನೆ ಬಲಿಯಾದ ಆತನ ದ್ವೇಷ ವರ್ಗ.ಇವರ ದ್ವೇಷ,’ತನ್ನೊಡಲ ಬೆಂಕಿ ತನ್ನನ್ನಲ್ಲದೆ ಅನ್ಯರನ್ನು ಸುಡದು‘ ಎಂಬ ಜನಪ್ರಿಯ ವಚನದಂತೆ ದ್ವೇಷಿಗಳೇ ನಾಲಿಗೆ ಕಚ್ಚಿಕೊಳ್ಳುವಂತಾಗಿರುವುದು ಸುಳ್ಳಲ್ಲ. ತಾನು ವೈಭವೀಕರಿಸಿದ ಸುಳ್ಳು ತನಗೇ ತಿರುಗುಬಾಣವಾಗಿರುವುದು ಅವರ ಈಗಿನ ಬಡಬಡಿಕೆಗೆ ಕಾರಣವಾಗಿದೆ. ಈ ವರ್ಗ ಮೋದಿಯ ವಿರುದ್ದ ಮಾಡಿದ ಅಪಪ್ರಚಾರಗಳೇ ಅಪಚಾರಗಳೇ ಅವರಿಗೆ ಇಂದು ಮುಳುವಾಗಲು ಮೂಲ ಕಾರಣವೆಂದು ಅವರು ಒಪ್ಪಿಕೊಳ್ಳಲು ಸಿದ್ದರಿಲ್ಲದಿದ್ದರೂ ಅದು ಸತ್ಯವಲ್ಲವೆಂದು ತಳ್ಳಿ ಹಾಕಲು ಅವರಿಗೆ ಸಾಧ್ಯವಾಗುವುದಿಲ್ಲ.
ಮೋದಿ ಮಾಡದ ತಪ್ಪಿಗೆ ಅವನನ್ನು ಹೊಣೆಗಾರನನ್ನಾಗಿಸುವ ಮೂಲಕ ಆತನ ಬೆಳವಣಿಗೆ ದಾರಿ ಮಾಡಿಕೊಟ್ಟದ್ದು ಹೇಗೆ?
ಸ್ವಾತಂತ್ರ್ಯ ಇನ್ನೆಷ್ಟು ದಿನ !!!
೨೯ ಮೇ ೧೪೫೩, ಅಟ್ಟೋಮನ್ ತುರ್ಕರು ಕಾಂಸ್ಟನ್ಟಿನೋಪಾಲ್ ನಗರವನ್ನು ಆಕ್ರಮಿಸಿ (ಇಂದಿನ ಇಸ್ತಾಂಬುಲ್) ತಮ್ಮ ವಶಕ್ಕೆ ತಗೆದುಕೊಂಡ ದಿನ. ಈ ದಿನಕ್ಕೂ ಮುಂಚೆ ಪೂರ್ವ ಮತ್ತು ಪಶ್ಚಿಮಗಳ ವ್ಯಾಪಾರ ಮತ್ತು ಭಾಂದವ್ಯ ಸಮುದ್ರ ಮಾರ್ಗವಾಗಿ ಈ ನಗರದ ಮೂಲಕವೇ ನಡೆಯುತ್ತಿತ್ತು. ತುರ್ಕರ ಆಕ್ರಮಣದೊಂದಿಗೆ ಪಶ್ಚಿಮದವರ ವ್ಯಾಪಾರದ ಬಾಗಿಲು ಸಂಪೂರ್ಣವಾಗಿ ಮುಚ್ಚಲ್ಪಟ್ಟಿತು. ಹೊಸ ಮಾರ್ಗದ ಅನ್ವೇಷಣೆ ಪಶ್ಸಿಮದವರಿಗೆ ಅನಿವಾರ್ಯವಾಯಿತು.
ಮೊದಲಿಗೆ ಸ್ಪೇನ್ ದೇಶದ ನಾವಿಕ ಕೊಲಂಬಸ್ ಮುಂದಾದ, ಭಾರತವನ್ನು ಕಂಡುಹಿಡಿಯುವ ಬದಲಿಗೆ ಅಮೇರಿಕ ಖಂಡವನ್ನು ಅನ್ವೇಷಿಸಿದ. ನಂತರ ಪೋರ್ಚುಗಲ್ನ ನಾವಿಕ ಬರ್ತ ಲೋಮಿಯ ಡಯಾಜ್ , ಪೋರ್ಚುಗಲ್ ದೇಶದ ದಕ್ಷಿಣದಿಂದ ಆರಂಭಿಸಿ ಆಫ್ರಿಕಾ ಖಂಡದ ತುದಿಯನ್ನು ಮುಟ್ಟಿದ ಆದರೆ ಸಮುದ್ರದಲ್ಲಿ ಉಂಟಾದ ಭಾರಿ ಅನಾಹುತಗಳಿಂದ ಅವನ ಸಹ ನಾವಿಕರು ಮುಂದೆ ಸಾಗಲು ನಿರಾಕರಿಸಿದರು. ಆಫ್ರಿಕದ ತುಟ್ಟ ತುದಿ ಕೇಪ್ ಆಫ್ ಗುಡ್ ಹೋಪ್ ಕಂಡು ಹಿಡಿದು ಪೋರ್ಚುಗಲ್ಗೆ ಹಿಂದಿರುಗಿದ. ಮತ್ತೆ ಅದೇ ಯತ್ನವನ್ನು ಪೋರ್ಚುಗಲ್ಲಿನ ವಾಸ್ಕೋ ಡ ಗಾಮ ಬರ್ತ ಲೋಮಿಯ ಡಯಾಜ್ ಬಳಸಿದ ಮಾರ್ಗದಲ್ಲೇ ಹೋಗಿ ಆಫ್ರಿಕಾ ಖಂಡವನ್ನು ಒಂದು ಸುತ್ತು ಹಾಕಿ ಕಡೆಗೆ ಕೇರಳದ ಕಲ್ಲಿ ಕೋಟೆಯಲ್ಲಿ ೨೦ ಮೇ ೧೪೯೮ ಕಾಲಿಟ್ಟ. ಕಲ್ಲಿಕೋಟೆಯ ದೊರೆ ಜಮೂರಿನ ವಾಸ್ಕೋ ಡ ಗಾಮನನ್ನು ಆತ್ಮೀಯವಾಗಿ ಸ್ವಾಗತಿಸಿ ಪೂರ್ವ ಪಶ್ಚಿಮಗಳ ವ್ಯಾಪಾರಕ್ಕೆ ಮುನ್ನುಡಿ ಬರೆದ.
ಸತತ ನೂರು ವರ್ಷಗಳ ಕಾಲ ಯಾವುದೇ ಅಡೆತಡೆ ಇಲ್ಲದೆ ಭಾರತದ ಪಶ್ಚಿಮ ಸಮುದ್ರ ತೀರದ ಎಲ್ಲಾ ಪ್ರಮುಖ ನಗರದಲ್ಲಿ ಒಂದು ಒಂದು ಶಾಖೆಗಳನ್ನು ಸ್ಥಾಪಿಸಿ ಪೋರ್ಚುಗೀಸರು ತಮ್ಮ ವ್ಯಾಪಾರ ಮುಂದುವರೆಸಿದರು. ೧೬೦೦ ಬ್ರಿಟೀಷರು, ೧೬೦೨ ರಲ್ಲಿ ಡಚ್ಚರು, ೧೬೬೪ ರಲ್ಲಿ ಫ್ರೆಂಚರು ಈಸ್ಟ್ ಇಂಡಿಯಾ ಕಂಪನಿ ಹೆಸರಿನಲ್ಲಿ ಭಾರತ ಖಂಡದಲ್ಲಿ ನಿಧಾನವಾಗಿ ತಮ್ಮ ಖಾತೆ ತೆರೆದರು.
ನಮೋ ಅಭಿವೃದ್ಧಿ ಮಂತ್ರಕ್ಕೆ ಅನುಸರಿಸಬೇಕಾದ ಪ್ರಚಾರತಂತ್ರ ಯಾವುದು?
– ನವೀನ್ ನಾಯಕ್
ನರೇಂದ್ರ ಮೋದಿ ಇತ್ತೀಚೆಗೆ ಅತಿ ಹೆಚ್ಚಾಗಿ ಚರ್ಚೆಗೆ ತುತ್ತಾಗುತಿದ್ದಾರೆ. ಮೋದಿಯವರೇ ಮುಂದಿನ ಪ್ರಧಾನಿಯಾಗಬೇಕೆಂದು ಹಲವಾರು ರೀತಿಯಲ್ಲಿ ಉತ್ಸಾಹಿ ಯುವಕರು ಸ್ವಯಂಪ್ರೇರಣೆಯಿಂದ ಕೆಲಸ ನಿರ್ವಹಿಸುತಿದ್ದಾರೆ. ಅಭಿಮಾನಿಗಳ ಗುಂಪುಗಳಿರಬಹುದು, ಸಾಮಾಜಿಕ ತಾಣದಲ್ಲಿರುವ ಪೇಜ್, ಗ್ರೂಪ್ ಯಾವುದೇ ಆಗಬಹುದು. ರಾಜಕೀಯ ವಿಷಯದಲ್ಲಿ ಮಲಗಿದ್ದ ಯುವಪಡೆ ಎದ್ದು ನಿಂತಿರುವುದು ಸ್ವಾಗತಾರ್ಹ. ಪ್ರಸಕ್ತ ರಾಜಕೀಯ ದೊಂಬರಾಟದಲ್ಲಿ ಕಡಿವಾಣ ಹಾಕಬೇಕೆಂದರೆ ಯುವಕರ ಪಾತ್ರ ಬೇಕೆಬೇಕು. ಇತಿಹಾಸವೂ ಅದನ್ನೇ ಸಾರಿ ಸಾರಿ ಹೇಳಿದೆ. ನಮೋ ವಿಷಯದಲ್ಲಿ ಗಂಭೀರವಾದ ವಿಚಾರವೆಂದರೆ ಈ ಯುವಕರ ಕೆಲಸ ನೀರಿಕ್ಷಿತ ಮಟ್ಟವನ್ನು ತಲುಪುತ್ತದೆಯಾ. ಇವರ ಉತ್ಸಾಹಕ್ಕೆ 2014 ತಣ್ಣೀರೆರಚಬಹುದೇ ಎಂಬ ಅನುಮಾನ ನನಗೆ. ನನ್ನ ಅನುಮಾನಕ್ಕೆ ಕಾರಣವಿಲ್ಲದೆಯಿಲ್ಲ.
ಮೋದಿಯವರನ್ನು ಪ್ರಚಾರ ಮಾಡುತ್ತಿರುವ ಶೈಲಿ ಸ್ವತಃ ನಮೋ ಅಭಿವೃದ್ದಿ ಕನಸ್ಸಿನ ವಿರೋಧವಾಗಿದೆ. ಮುನ್ನುಗುತ್ತಿರುವ ವೇಗದಲ್ಲಿ ಗುರಿಯನ್ನೇ ಮರೆಯಲಾಗಿದೆ. ಮೋದಿ ನಾಯಕತ್ವದಲ್ಲಿ ಸರಕಾರ ರಚಿಸಬೇಕಾದರೆ ಆ ಸರಕಾರ ನಮ್ಮ ಕನಸ್ಸಿನ ಭಾರತ ಕಟ್ಟಬೇಕಾದರೆ ಮೋದಿ ಹೆಸರಲ್ಲಿ ಅಥವಾ ಬಿಜೆಪಿ ಹೆಸರಲ್ಲಿ ಗೆಲ್ಲುವ ಅಭ್ಯರ್ಥಿ ಹೇಗಿರಬೇಕು, ಅವನ ಕನಸುಗಳೇನಾಗಿರಬೇಕು, ಸಮಾಜ ಪರಿವರ್ತನೆಯಲ್ಲಿ ಆತನ ಸ್ಪಷ್ಟ ನಿರ್ಧಾರವೇನು. ಈ ಅಂಶಗಳು ಮುಖ್ಯವಾಗುವುದಿಲ್ಲವೇ? ಈ ಮಹತ್ತರ ಅಂಶಗಳನ್ನು ಮರೆತು ಅವರ ಹೆಸರಲ್ಲಿ ಅಯೋಗ್ಯರನ್ನು ಗೆಲ್ಲಿಸಿಬಿಟ್ಟರೆ. ಕಂಡ ಕನಸು ತಿರುಗಿ ಬೆಂಕಿ ಕೆಂಡವಾಗುತ್ತದೆಯಲ್ವಾ? ಕರ್ನಾಟಕದಲ್ಲಿ ಬದಲಾವಣೆ ಭರದಲ್ಲಿ ಬಿಜೆಪಿ ಬೆಂಬಲಿಸಿದಾಗ ಯಡವಟ್ಟಾಗಿದ್ದು ಈ ಅಂಶಗಳೇ. ಅಪಾತ್ರರೆಲ್ಲ ಗೆದ್ದು ಉಂಡಾಡಿ ಗುಂಡನ ಹಾಗೆ ಆಡಿದ್ದ ಉದಹಾರಣೆ ಕಣ್ಣ ಮುಂದಿರುವಾಗ ಮತ್ತದೇ ಹೆಜ್ಜೆಯನ್ನಿಟ್ಟರೆ ಏನು ಪ್ರಯೋಜನ ?.. ಬದಲಾವಣೆ ಎಲ್ಲರಿಗೂ ಬೇಕು ಅದೇ ಭರದಲ್ಲಿ ಯೋಗ್ಯರು ಮತ್ತು ಅಯೋಗ್ಯರ ನಡುವಿನ ವ್ಯತ್ಯಾಸ ಮರೆಯಬಾರದು.
ಮತ್ತಷ್ಟು ಓದು 
ಮ್ಯೂಟ್ ಮೋಡ್ ನಲ್ಲಿ ಭಾರತ, ಫೈಟ್ ಮೋಡ್ ನಲ್ಲಿ ಚೀನಾ!!
– ವಿಕಾಸ್ ಪುತ್ತೂರು
‘ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆ ತೋರಿಸು’ ಎಂದು ಸಾರುತ್ತಲೇ “ಶಾಂತಿಧೂತ”ನೆಂದು ಖ್ಯಾತಿಗಳಿಸಿದ ಆ ಗಾಂಧಿಯೂ ಕೂಡ, ಇಂದಿದ್ದಿದ್ದರೆ, ಪ್ರಸ್ತುತ ಚೀನಾದ ತಕರಾರುಗಳಿಗೆ ಬೇಸತ್ತು ಕೆನ್ನೆ ತೋರಿಸುವುದನ್ನು ನಿಲ್ಲಿಸಿ, ಒಂದು ಬಾರಿಸಿ ಬಿಡುತ್ತಿದ್ದರೇನೋ! ಅದೇನೆ ಇರಲಿ, ನಮ್ಮ ಪ್ರಧಾನಿಗಳು ಮಾತ್ರ, ಚೀನಾ ವಿಷಯದಲ್ಲಿ ಆ ಗಾಂಧಿಯ ಮೂರು ಮಂಗಗಳ ಗುಣಗಳನ್ನು ಯತಾವತ್ತಾಗಿ ಅನುಸರಿಸಿರುವಂತೆ ಕಾಣುತ್ತಿದೆ, ಚೀನಾದ ಅತಿಕ್ರಮಣಗಳನ್ನು ಕಂಡೂ ಕಾಣದಂತೆ ಕುರುಡರಾಗಿಬಿಟ್ಟಿದ್ದಾರೆ, ಅವರ ಆಕ್ರಮಣಗಳ ಬಗ್ಗೆ ತುಟಿಬಿಚ್ಚದೆ ಚಕಾರವೆತ್ತದೆ ಮೂಕರಾಗಿಬಿಟ್ಟಿದ್ದಾರೆ, ಚಿಂಗಿಯರ ಕುತಂತ್ರಗಳನ್ನಂತೂ ಬೇಕೆಂದೇ ಕೇಳಿಸಿಕೊಳ್ಳದೆ ಕಿವುಡನೂ ಆಗಿಬಿಟ್ಟಿದ್ದಾರೆ! ಅವರೇ ಹೇಳುವಂತೆ, ಗಾಂಧಿಯ ಹಾದಿಯಲ್ಲಿ ಸಾಗುವುದೆಂದರೆ ಇದೇ ಇರಬೇಕೇನೋ! ಕಳೆದ ಹತ್ತು ವರ್ಷಗಳಲ್ಲಿ ಮನಮೋಹನರು ಸದನ ಪ್ರವೇಶಿಸಿರುವುದಕ್ಕಿಂತ ಹೆಚ್ಚು ಬಾರಿ ಚೀನಿಯರು ಭಾರತವನ್ನು ಅತಿಕ್ರಮವಾಗಿ ಪ್ರವೇಶಿಸಿದ್ದಾರೆ. ಆರ್ಥಿಕವಾಗಿ ಹಾಗು ಸಾಂಸ್ಕೃತಿಕವಾಗಿ ಭಾರತವನ್ನು ಮುಗಿಸಲು ತುದಿಗಾಲಲ್ಲಿ ನಿಂತು ಅತ್ಯಂತ ವ್ಯವಸ್ತಿತವಾಗಿ ಷಡ್ಯಂತ್ರ ರಚಿಸಿರುವ, ರಚಿಸುತ್ತಿರುವ ಚೀನಾಗೆ ಸಮರ್ಥವಾಗಿ ಉತ್ತರ ಕೊಡಲು ಸಾಧ್ಯವಾಗದೆ, ಪ್ರಶ್ನೆಯ ಹುಡುಕಾಟದಲ್ಲಿಯೇ ಕಪಟ ನಾಟಕವಾಡುತ್ತಿದೆ ನಮ್ಮ ಕೇಂದ್ರ ಸರಕಾರ.
ಭಾರತದ ಅತಿದೊಡ್ಡ ಶತ್ರು ಪಾಕಿಸ್ತಾನ, ಬೇರೆಲ್ಲಾ ರಾಷ್ಟ್ರಗಳು ಬಹುತೇಕ ಭಾರತದ ಮಿತ್ರರಾಷ್ಟ್ರಗಳೇ ಎಂದು ವಿಶ್ವಾವ್ಯಾಪಿ ಬಿಂಬಿತವಾಗಿರುವುದು ಭಾರತದ ಅತಿದೊಡ್ಡ ದುರಂತ. ರಾಷ್ಟ್ರೀಯ ಭದ್ರತೆಯ ವಾಸ್ತವಕ್ಕಿಳಿದು ನೋಡಿದಾಗ ಭಾರತಕ್ಕೆ, ಪಾಕಿಸ್ತಾನಕ್ಕಿಂತಲೂ ಚೀನಾದಿಂದ ನೂರು ಪಟ್ಟು ಹೆಚ್ಚು ಆತಂಕ ಸೃಷ್ಟಿಯಾಗಿದೆ. ಭಾರತದ ಭೂ ಹಾಗು ಸಾಗರಕ್ಕೆ, ಇತರೆ ಒಟ್ಟು 9ರಾಷ್ಟ್ರಗಳು ಅಂಟಿಕೊಂಡಿವೆ, ದಕ್ಷಿಣಕ್ಕೆ ಶ್ರೀಲಂಕಾ ಹಾಗು ಮಾಲ್ಡೀವ್ಸ್. ಪಶ್ಚಿಮಕ್ಕೆ ಪಾಕಿಸ್ತಾನ ಹಾಗು ಅಫಗಾನಿಸ್ತಾನ, ಪೂರ್ವಕ್ಕೆ ನೇಪಾಳ, ಭೂತಾನ್, ಬಾಂಗ್ಲಾದೇಶ ಹಾಗು ಬರ್ಮಾ ಮತ್ತು ಉತ್ತರದಿಂದ ಪೂರ್ವದವರೆಗೂ ಮಹಾಕಂಟಕ ಚೀನಾ. ಈ 9ನೆರೆರಾಷ್ಟ್ರಗಳ ಪೈಕಿ ಭೂತಾನ್ ಎಂಬ ಪುಟ್ಟ ದೇಶವೊಂದನ್ನು ಬಿಟ್ಟರೆ, ಉಳಿದ 8 ದೇಶಗಳೊಡನೆಯೂ ಭಾರತದ ಸಂಬಂಧ ಹಳಸಿದೆ! ಅತ್ಯಂತ ಆತಂಕಕಾರಿ ಸಂಗತಿ ಎಂದರೆ, ಭಾರತವನ್ನು ಮಣಿಸಲು ಹಾತೊರೆಯುತ್ತಿರುವ ಚೀನಾ, ಉಳಿದ 7 ರಾಷ್ಟ್ರಗಳನ್ನೂ ಒಟ್ಟುಗೂಡಿಸಿ ಬಿಲಿಯನ್ ಡಾಲರ್ಗಟ್ಟಲೆ ಬಂಡವಾಳ ಹೂಡುತ್ತಾ, ತನ್ನ ಸಂಗಡ ಶಿಶ್ಯವೃಂದದಂತೆ ಇರಿಸಿಕೊಂಡಿದೆ.
ರಮಾನಂದ ಐನಕೈ ಅವರ “ನಮಗೆ ನಾವೇ ಪರಕೀಯರು” ಪುಸ್ತಕದ ಕುರಿತು
– ಮು . ಅ . ಶ್ರೀರಂಗ ಯಲಹಂಕ ಬೆಂಗಳೂರು
ರಮಾನಂದ ಐನಕೈ ಅವರ “ನಮಗೆ ನಾವೇ ಪರಕೀಯರು ” (ನ. ನಾ. ಪ) (ಪ್ರಕಾಶಕರು : ರಾಷ್ಟ್ರೋತ್ಹಾನ ಸಾಹಿತ್ಯ ಬೆಂಗಳೂರು -೧೯ )ಪುಸ್ತಕ ಓದುವ ಮುನ್ನ ನಾನು ಪ್ರೊ .ಎಸ್ .ಎನ್. ಬಾಲಗಂಗಾಧರ (ಬಾಲು)ಅವರ ವಿಚಾರಗಳನ್ನು ಆಧರಿಸಿದ ಕನ್ನಡಕ್ಕೆ ಅನುವಾದವಾಗಿರುವ ಮೂರುಪುಸ್ತಕಗಳನ್ನು ಓದಿದ್ದೆ (ಪೂರ್ವಾವಲೋಕನ ,ಭಾರತದಲ್ಲಿ ಜಾತಿ ವ್ಯವಸ್ಥೆ ಇದೆಯೆ? ಮತ್ತು ಹುಡುಕಾಟವನ್ನು ನಿಲ್ಲಿಸದಿರೊಣ). ಸ್ಮೃತಿ-ವಿಸ್ಮೃತಿ ;ಭಾರತೀಯ ಸಂಸ್ಕೃತಿ ತನ್ನ ವಿಚಾರ ಮತ್ತು ಗಾತ್ರದಲ್ಲಿ ತುಂಬಾ ಘನವಾಗಿದೆ ಹೀಗಾಗಿ ನಿಧಾನವಾಗಿ ಓದಿ ಅರ್ಥಮಾಡಿಕೊಳ್ಳಬೇಕಾಗಿದೆ. ಇದುವರೆಗೆ ಸುಮಾರು ಇನ್ನೂರು ಪುಟಗಳನ್ನು ಓದಿದ್ದೆನೆ. ರಮಾನಂದರ ಪ್ರಸ್ತುತ ಪುಸ್ತಕ ಮೇಲೆ ಹೇಳಿದ ಬಾಲು ಅವರ ನಾಲ್ಕು ಪುಸ್ತಕಗಳ ಅದರಲ್ಲೂ ಮುಖ್ಯವಾಗಿ ಸ್ಮೃತಿ-ವಿಸ್ಮೃತಿ ಪುಸ್ತಕದಲ್ಲಿರುವ ವಿಷಯಗಳನ್ನು ನೇರವಾಗಿ ಭಟ್ಟಿ ಇಳಿಸಿರುವುದರ ಪ್ರತಿಫಲ! ಇದಕ್ಕೆ ಪುರಾವೆಗಳು ರಮಾನಂದರ ನ.ನಾ.ಪ.. ಪುಸ್ತಕದಲ್ಲೇ ಇವೆ.
, ೧. ಬಾಲು ಅವರೇ ತಮ್ಮ ಮುನ್ನುಡಿಯಲ್ಲಿ—ರಮಾನಂದರ ಎಲ್ಲಾ ಲೇಖನಗಳು ಈ ವಿಷಯಗಳ ಕುರಿತಾಗಿ ಬೆಲ್ಜಿಯಂ ಹಾಗೂ ಭಾರತದಲ್ಲಿ ಕುವೆಂಪು ವಿ. ವಿ. ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರದಲ್ಲಿ ನಡೆಯುತ್ತಿರುವ ಸಂಶೋಧನೆಗಳಿಂದ ಪ್ರಭಾವಿತವಾಗಿವೆ ಎಂದ್ದಿದ್ದಾರೆ (ಪುಟxii)
೨. ಲೇಖಕರ ಮಾತಿನಲ್ಲಿ ಸ್ವತಃ ರಮಾನಂದ ಐನಕೈ ಅವರೇ ಮೇಲೆ ಹೇಳಿದ ಬಾಲು ಅವರ ಮಾತುಗಳನ್ನೇ ಅನುಮೋದಿಸಿದ್ದಾರೆ—ಬಾಲು ಅವರ ಮೂಲ ಸಿದ್ಧಾಂತಕ್ಕೆ ಚ್ಯುತಿ ಬಾರದ ಹಾಗೆ ಅವರ ವಿಚಾರಗಳನ್ನು ನನ್ನ ಅನುಭವಗಳ ಮೂಲಕ ಸರಳವಾಗಿ ನಿರೂಪಿಸುವ ಕೆಲಸ ಮಾಡಿದ್ದೇನೆ (ಪುಟ xvi )(ರಮಾನಂದರ ಅನುಭವಗಳ ಪ್ರಮಾಣ ಈ ಪುಸ್ತಕದ ವಿಚಾರದಲ್ಲಿ ತೀರಾ ಕಡಿಮೆ ಎಂಬುದು ಓದುಗರಿಗೆ ಮನವರಿಕೆಯಾಗುತ್ತದೆ!)
೩. ರಮಾನಂದರ ಪ್ರಸ್ತುತ ಪುಸ್ತಕ್ಕಕ್ಕೆ (ನ.ನಾ.ಪ) ಹಿನ್ನೆಲೆ ಬರೆದಿರುವ ದಾ॥ ರಾಜಾರಾಮ ಹೆಗಡೆಯವರು ಸಹ ರಮಾನಂದರದು ಸ್ವತಂತ್ರ ಲೇಖನಗಳಾದರೂ ಕೂಡ ಭಾರತೀಯ ಸಂಸ್ಕೃತಿಯ ಕುರಿತು ಎಸ್ . ಎನ್ . ಬಾಲಗಂಗಧರ ಅವರ ಹೊಸ ವಾದಗಳಿಂದ ಪ್ರಭಾವಿತವಾಗಿವೆ. (ಪುಟ xviii)





