ಅತಿಯಾದ ಕಾಳಜಿಯೂ ಮುಳುವಾದೀತು ಜೋಕೆ…!
-ವಿಷ್ಣುಪ್ರಿಯ
ಮನುಷ್ಯನ ಕೊಳ್ಳುಬಾಕ ಸಂಸ್ಕೃತಿಯ ಲಾಭ ಮಾಡಿಕೊಳ್ಳಲು ಹವಣಿಸುವ ಕಂಪನಿಗಳು `ಆರೋಗ್ಯದ ಬಗ್ಗೆ ಮಾಹಿತಿ ಕೊಡುವ ಉಪಕರಣಗಳು’ ಎಂಬ ಹಣೆಪಟ್ಟಿಯೊಂದಿಗೆ ಹಲವಾರು ಉಪಕರಣಗಳನ್ನು ಮಾರುಕಟ್ಟೆಗೆ ಬಿಡುತ್ತಿದ್ದಾರೆ. ಮೊದಲೇ ಈ ರೋಗಗಳಿಂದಾಗಿ ಕಂಗೆಟ್ಟಿರುವಂಥ ಜನ ಈ ಉಪಕರಣಗಳನ್ನು ಮುಗಿಬಿದ್ದು ಕೊಳ್ಳುತ್ತಾರೆ.
ಅತಿಯಾದರೆ ಅಮೃತವೂ ವಿಷ ಎನ್ನುತ್ತಾರೆ. ಕೆಲವೊಂದು ಬಾರಿ ನಮ್ಮ ವಿಪರೀತ ಕಾಳಜಿಯೇ ನಮಗೆ ಮುಳುವಾಗುವಂಥ ಪ್ರಸಂಗಗಳೂ ಬರುತ್ತವೆ. ದಪ್ಪಗಾಗುತ್ತೇವೆ ಎಂಬ ಆತಂಕದಲ್ಲಿ ಆಹಾರ ಬಿಡುತ್ತೇವೆ; ಪೋಷಕಾಂಶದ ಕೊರತೆ ಎದುರಾಗುತ್ತದೆ; ನಿತ್ರಾಣ ಆವರಿಸಿಕೊಳ್ಳುತ್ತದೆ; ಮತ್ತೆ ಅದನ್ನು ಸರಿಪಡಿಸುವುದಕ್ಕೆ ಔಷಧಿ ತೆಗೆದುಕೊಳ್ಳುತ್ತೇವೆ; ಉಪ್ಪು ತಿಂದರೆ ಬಿಪಿ ಬರುತ್ತೆ ಅಂತ ಉಪ್ಪು ತೀರಾ ಕಡಿಮೆ ತಿನ್ನುತ್ತೇವೆ; ಬಿಪಿ ಕಡಿಮೆಯಾಗುತ್ತದೆ; ಮತ್ತೆ ಗಿಡ್ಡಿನೆಸ್ ಕಾಡುತ್ತದೆ; ಅದಕ್ಕೆ ಔಷಧಿ.
ಹೌದು, ಮನುಷ್ಯ ಸದಾ ಏನೋ ಮಾಡುತ್ತೇನೆಂದು ಹೊರಡುತ್ತಾನೆ. ಅದಿನ್ನೇನೋ ಆಗುತ್ತದೆ. ಇತ್ತೀಚಿನ ದಿನಗಳಲ್ಲಿ ವಿವಿಧ ರೋಗಗಳೇ ಪ್ರಪಂಚವನ್ನು ಆಳುತ್ತಿರುವಂಥ ಸಂದರ್ಭದಲ್ಲಿ ಮಾನವ ಯಾವುದೋ ಹೊಸ ರೋಗದ ಹೆಸರು ಕೇಳಿದರೆ ಭೀತಿಗೊಳಗಾಗುತ್ತಿದ್ದಾನೆ. ಅದರಿಂದ ರಕ್ಷಣೆ ಪಡೆಯಬೇಕು ಅಂತ ಮೊದಲೇ ಔಷಧಿ ತೆಗೆದುಕೊಳ್ಳುವ ಆತುರ ತೋರುತ್ತಾನೆ. ಇದಕ್ಕಿಂತಲೂ ಹೆಚ್ಚಾಗಿ ಮನುಷ್ಯನ ಕೊಳ್ಳುಬಾಕ ಸಂಸ್ಕೃತಿಯ ಲಾಭ ಮಾಡಿಕೊಳ್ಳಲು ಹವಣಿಸುವ ಕಂಪನಿಗಳು `ಆರೋಗ್ಯದ ಬಗ್ಗೆ ಮಾಹಿತಿ ಕೊಡುವ ಉಪಕರಣಗಳು’ ಎಂಬ ಹಣೆಪಟ್ಟಿಯೊಂದಿಗೆ ಹಲವಾರು ಉಪಕರಣಗಳನ್ನು ಮಾರುಕಟ್ಟೆಗೆ ಬಿಡುತ್ತಿದ್ದಾರೆ. ಮೊದಲೇ ಈ ರೋಗಗಳಿಂದಾಗಿ ಕಂಗೆಟ್ಟಿರುವಂಥ ಜನ ಈ ಉಪಕರಣಗಳನ್ನು ಮುಗಿಬಿದ್ದು ಕೊಳ್ಳುತ್ತಾರೆ; ಆ ಉಪಕರಣಗಳ ಪ್ರಾಮಾಣಿಕತೆಯನ್ನು, ಅವುಗಳ ವಿಶ್ವಾಸಾರ್ಹತೆಯನ್ನು ಪರಿಗಣಿಸುವ, ಈ ವಿಚಾರದ ಬಗ್ಗೆ ಅರೆಕ್ಷಣವೂ ಯೋಚನೆ ಮಾಡುವುದಕ್ಕೇ ಹೋಗುವುದಿಲ್ಲ. ಕೊಂಡುಕೊಂಡು ಬಿಡುತ್ತೇನೆ. ತಪ್ಪು ಮಾಹಿತಿ ನಿಡಿ ರೋಗ ಇದೆ ಎಂದು ಹೇಳಿತೋ ನಮ್ಮ ಆತಂಕ ಹೆಚ್ಚುತ್ತದೆ, ಒಂದು ವೇಳೆ ಇರುವ ರೋಗವನ್ನು ಸೂಚಿಸದೇ ಇದ್ದಲ್ಲಿ, ನಮ್ಮ ಸಮಸ್ಯೆ ಹಾಗೆಯೇ ಉಳಿದುಕೊಳ್ಳುತ್ತದೆ.
ಇನ್ನು ಕೆಲವೊಂದು ಬಾರಿ ಯಾವುದೇ ಸಮಸ್ಯೆಗೆಂದು ಚಿಕಿತ್ಸೆ ಪಡೆಯುತ್ತೇವೆ. ಆದರೆ ಆ ಚಿಕಿತ್ಸೆ ಇನ್ನೊಂದು ಸಮಸ್ಯೆಗೆ ಕಾರಣವಾಗುತ್ತದೆ. ಹಲವಾರು ಬಾರಿ ಔಷಧಿಗಳು ಅಡ್ಡ ಪರಿಣಾಮ ಬೀರಿ ಆ ಸಮಸ್ಯೆಯನ್ನು ಸರಿಪಡಿಸಿಕೊಳ್ಳುವುದಕ್ಕೆ ಇನ್ನೊಂದಷ್ಟು ಸಮಯ ಹೆಣಗಾಡಬೇಕಾದಂಥ ಪರಿಸ್ಥಿತಿ ಬರುತ್ತದೆ. ಇಷ್ಟೇ ಆಗಿದ್ದರೆ ಹೀಗೆಯೋ ಸುಧಾರಿಸಬಹುದಿತ್ತು. ಆದರೆ ಕೆಲವೊಂದು ಚಿಕಿತ್ಸೆಗಳು ಕ್ಯಾನ್ಸರ್ನಂಥ ಗಂಭೀರ ರೋಗಗಳಿಗೆ ಕಾರಣವಾಗುತ್ತವೆ. ಹೀಗೆಲ್ಲ ಆಗುತ್ತದೆಯೇ? ನಿಜಕ್ಕೂ ಈ ಉಪಕರಣಗಳು ನಿಖರವಾದ ಮಾಹಿತಿಯನ್ನು ಕೊಡುವುದಿಲ್ಲವೇ? ಒಂದು ಚಿಕಿತ್ಸೆ ಇನ್ನೊಂದು ರೋಗವನ್ನು ಸೃಷ್ಟಿ ಮಾಡಿತ್ತದೆಯೇ? ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ.
ಮತ್ತಷ್ಟು ಓದು 
ಮಂಗಳಪ್ರಯಾಣಕ್ಕೆ ಸಿದ್ಧತೆ..
-ವಿಷ್ಣುಪ್ರಿಯ
ಮೂವರು ರಷ್ಯನ್ನರು, ಒಬ್ಬ ಫ್ರೆಂಚ್, ಒಬ್ಬ ಇಟಾಲಿಯನ್-ಕೊಲಂಬಿಯನ್ ಮತ್ತು ಒಬ್ಬ ಚೀನೀ ಬಾಹ್ಯಾಕಾಶ ವಿಜ್ಞಾನಿಗಳನ್ನು ಒಳಗೊಂಡಂಥ ತಂಡ ಮಾಸ್ಕೋದಲ್ಲಿನ ಈ ಮಂಗಳನ ತದ್ರೂಪಿನಲ್ಲಿ 520 ದಿನಗಳ ಕಾಲ ಇದ್ದು ಬಂದಿದ್ದಾರೆ. ಇಲ್ಲಿ ಮಂಗಳನಲ್ಲಿರಬಹುದಾದಂಥ ಎಲ್ಲ ರೀತಿಯ ವಾತಾವರಣವೂ ಇದೆ, ಆದರೆ ಗುರುತ್ವಾಕರ್ಷಣಶಕ್ತಿಯೊಂದನ್ನು ಹೊರತುಪಡಿಸಿ! ಹೀಗಾಗಿ ತೂಕವಿಲ್ಲದೇ ಇರುವ ಅನುಭವ ಮಾತ್ರ ಸಿಕ್ಕಿಲ್ಲ.
ಅದು ಒಂದು ಸಂಪೂರ್ಣ ಮುಚ್ಚಲ್ಪಟ್ಟ ಕೋಣೆ; ಗಾಳಿ ನುಸುಳುವುದಕ್ಕೆ ಒಂಚೂರೂ ಜಾಗವಿಲ್ಲ; ನೀರಂತೂ ಪ್ರವೇಶಿಸುವುದಕ್ಕೇ ಆಗದು; ಒಳಗಣ ಶಾಖಕ್ಕೆ ಸಾಮಾನ್ಯ ಜೀವ ಬೆಂದು ಹೋಗುವಂಥ ಪರಿಸ್ಥಿತಿ; ಆದರೂ ಆರು ಜನ ಅದರೊಳಗಿದ್ದರು; ಒಂದೆರಡು ದಿನವಲ್ಲ; ಬರೋಬ್ಬರಿ 520 ದಿನಗಳು! ಕೃತಕ ಆಮ್ಲಜನಕದ ಉಸಿರಾಟ, ಸಂಸ್ಕರಿತ ಆಹಾರ; ಇವಿಷ್ಟನ್ನೇ ಸೇವಿಸಿಕೊಂಡು ಅಷ್ಟೂ ದಿನ ಈ ಕೋಣೆಯೊಳಗಿದ್ದರು; ಕೆಲವು ದಿನಗಳ ಹಿಂದಷ್ಟೇ ಈ ಆರೂ ಜನರು ಈ ಕೋಣೆಯಿಂದ ಹೊರಬಂದಾಗ ಅವರು ಒಂದಷ್ಟು ಸೊರಗಿದ್ದಾರೆಯೋ ಎಂದೆನಿಸುತ್ತಿತ್ತು; ಆದರೂ ಸಹ ಅವರ ಮುಖದಲ್ಲಿ ಮಂದಹಾಸ ಮಿನುಗುತ್ತಿತ್ತು; ಹೊಸದೊಂದು ಸಾಹಸಕ್ಕೆ ಅಣಿಯಾದ, ಯುದ್ಧವನ್ನು ಜಯಿಸಬಲ್ಲೆ ಎಂಬ ದೃಢವಿಶ್ವಾಸ ಹೊಂದಿರುವ ರಣಕಲಿಯ ಕಳೆ ಅವರಲ್ಲಿತ್ತು.
ಅವರು ಬಾಹ್ಯಾಕಾಶ ವಿಜ್ಞಾನಿಗಳು. 2030ರಲ್ಲಿ ಮಂಗಳಗ್ರಹದ ಮೇಲೆ ಪಾದಾರ್ಪಣೆ ಮಾಡಲು ಸಿದ್ಧವಾಗುತ್ತಿರುವ ಅವರು ಇದ್ದದ್ದು, ಮಂಗಳನಲ್ಲಿ ಇರಬಹುದಾದಂಥ ವಾತಾವರಣವನ್ನು ಕೃತಕವಾಗಿ ಸೃಷ್ಟಿಸಲ್ಪಟ್ಟಂಥ ಕೋಣೆಯೊಳಗೆ. ಮೂವರು ರಷ್ಯನ್ನರು, ಒಬ್ಬ ಫ್ರೆಂಚ್, ಒಬ್ಬ ಇಟಾಲಿಯನ್-ಕೊಲಂಬಿಯನ್ ಮತ್ತು ಒಬ್ಬ ಚೀನೀ ಬಾಹ್ಯಾಕಾಶ ವಿಜ್ಞಾನಿಗಳನ್ನು ಒಳಗೊಂಡಂಥ ತಂಡ ಮಾಸ್ಕೋದಲ್ಲಿನ ಈ ಮಂಗಳನ ತದ್ರೂಪಿನಲ್ಲಿ 520 ದಿನಗಳ ಕಾಲ ಇದ್ದು ಬಂದಿದ್ದಾರೆ. ಇಲ್ಲಿ ಮಂಗಳನಲ್ಲಿರಬಹುದಾದಂಥ ಎಲ್ಲ ರೀತಿಯ ವಾತಾವರಣವೂ ಇದೆ, ಆದರೆ ಗುರುತ್ವಾಕರ್ಷಣಶಕ್ತಿಯೊಂದನ್ನು ಹೊರತುಪಡಿಸಿ! ಹೀಗಾಗಿ ತೂಕವಿಲ್ಲದೇ ಇರುವ ಅನುಭವ ಮಾತ್ರ ಸಿಕ್ಕಿಲ್ಲ. ಮತ್ತಷ್ಟು ಓದು 
ಲಿಂಗಪರಿವರ್ತನೆ: ಬಡವಾಗುತ್ತಿವೆ ಕಂದಮ್ಮಗಳು!
-ವಿಷ್ಣುಪ್ರಿಯ
ಜೆನಿಟೋಪ್ಲಾಸ್ಟಿ. ಈ ತಂತ್ರಜ್ಞಾನದ ಹಿಂದಿದ್ದ ಉದ್ದೇಶವೂ ಸಹ ಕೆಟ್ಟದಾಗೇನೂ ಇರಲಿಲ್ಲ. ನಪುಂಸಕತೆಯನ್ನು ನಿವಾರಿವಂಥ ಮಹತ್ವದ ಉದ್ದೇಶವನ್ನು ಇಟ್ಟುಕೊಂಡಿದ್ದಂಥ ಈ ತಂತ್ರಜ್ಞಾನ ಧನದಾಹಿ ವೈದ್ಯರ ಕೈಯಲ್ಲಿ ಲಿಂಗಪರಿವರ್ತನೆಯಂಥ ದುರುದ್ದೇಶಕ್ಕೆ ಬಳಕೆಯಾಗುತ್ತಿದೆ ಅಷ್ಟೆ. ಎಂತಹುದ್ದೇ ಅಭಿವೃದ್ಧಿಯಾದರೂ ಅದು ನಿಸರ್ಗವನ್ನು, ಆ ನಿಸರ್ಗದ ಸೃಷ್ಟಿಯನ್ನು ಕಾಪಾಡಿಕೊಂಡು ಬರಬೇಕೇ ಹೊರತು, ಅದನ್ನೇ ಧಿಕ್ಕರಿಸಿ ಮುನ್ನಡೆಯುವಂತಿರಬಾರದು.ಹಾವು ಪುರಾಣ!
ನೀ ಹೀಂಗೆಲ್ಲ ಬಪ್ಪಕಾಗ..
ಮಕ್ಕಳ್ ಮರಿ ತಿರ್ಗು ಜಾಗ
ಜಾಗ ಖಾಲಿ ಮಾಡ ಬೇಗ …”
ಮನೆ ಕಡೆ ನಾಗರಹಾವು ಬಂದಾಗಲೆಲ್ಲಾ ಅದನ್ನು ಓಡಿಸೋವಾಗ “ಅದಕ್ಕೆ ನೋವು ಮಾಡಬೇಡಿ” ಅನ್ನೋ ದೊಡ್ಡವರ ರಾಗದ ಹಿನ್ನಲೆಯಲ್ಲಿ ನಮ್ಮ ಕುಂದಗನ್ನಡದ ಪ್ರಾಸ ಹೀಗಿತ್ತು
ನಮ್ಮ ಹಳ್ಳಿಗಳಲ್ಲಿ ಹಾವಿನ ಬಗ್ಗೆ ಭಯ ಮತ್ತು ಆಸಕ್ತಿ ಸ್ವಲ್ಪ ಕಮ್ಮಿನೇ ಜನರಲ್ಲಿ.ಆದರೆ ನಂಗೆ ಮಾತ್ರ ಇವತ್ತಿಗೂ ಅಷ್ಟೇ ಉತ್ಸಾಹ ಅವುಗಳ ಬಗ್ಗೆ.ಅದರಲ್ಲೂ ನಾಗರಹಾವು ಅಂದ್ರೆ ಸಕತ್ ಖುಷಿ..ಅದು ಮಾಡುವಷ್ಟು ಗೊಂದಲ ,ಖರ್ಚು,ಭಯ ಮತ್ಯಾವ ಹಾವುಗಳು ಮಾಡೋದಿಲ್ಲ.ಅಪರೂಪಕ್ಕೆ ಅವುಗಳು ಕೋಳಿ ಗೂಡಲ್ಲಿರೋ ಮೊಟ್ಟೆ ತಿನ್ನೋಕೆ ಬಂದರೆ ಈ ಅಕ್ಕ ಪಕ್ಕದ ಮನೇಲಿ ಎಲ್ಲ ಹೋ ದೇವ್ರ್ ಹಾವ್ ಬಂತ್ ..ಎಂದು ಪಡುವ ಸಂಭ್ರಮವೋ ಸಂಭ್ರಮ!ನಂತರ ಅದಕ್ಕಿಷ್ಟು ಹಾಲು ಇಟ್ಟು ,ಅಕ್ಕಿ ಚೆಲ್ಲಿ ಕೈ ಮುಗಿಯೋರು !ಆದರೆ ಅದು ಕುಡಿದದ್ದು ನಾ ನೋಡೇ ಇಲ್ಲ.ಪಾಪ !ಅದರ ಹೆದರಿಕೆ ಅದಕ್ಕೆ ಎಲ್ಲಿ ಹೊಡಿತಾರೋ ಅಂತ!ಯಾವ ಹಾವಿಗೂ ಇರದ ಮುಂಡು ಬಾಲ ಇದಕ್ಕೆ ಇರೋದರಿಂದ ಅದರ ನಿಕ್ ನೇಮ್ ಮುಂಡಪ್ಪ.
ಒಮ್ಮೆ ನಮ್ಮ ಪಕ್ಕದ ಕಾಡಿಗೆ ನವಿಲು ಹಿಡಿಯುವ ಗುಂಪೊಂದು ಬಂದಿತ್ತು.ಅವರ ಜೊತೆ ನಾವು ಕೂಡ ನೋಡಲು ಹೋಗಿದ್ದೆವು .ಚಂದದ ನವಿಲು ಗರಿ ಸಿಗುತ್ತಲ್ಲಾ ಅಂತ!ಸರಿ ಹೋಗ್ತಾನೆ ಒಂದು ದೊಡ್ಡ ನವಿಲು ಸಿಕ್ಕಿಬಿಟ್ಟಿತು.ಅವರು ಅದನ್ನು ಕೊಲ್ತಾರೆ ಅಂತ ಮಾತ್ರ ನಮಗೆ ಗೊತ್ತಿರಲಿಲ್ಲ.ಅವರು ಅದನ್ನ ಕೊಂದು ಹೊಟ್ಟೆ ಸೀಳಿದಾಗ ಅಲ್ಲೊಂದು ಪುಟ್ಟ ನಾಗರ ಮರಿ!ಆಮೇಲೆ ನಾಗರ ಹಾವಿನ ಹೆಣ ಕಂಡ ತಪ್ಪಿಗೆ (ಅಷ್ಟು ಚಂದದ ನವಿಲು ಕೊಂದಿದ್ದು ಮಾತ್ರ ಸರಿಯಂತೆ ಅವರ ಪ್ರಕಾರ ) ಸರ್ಪ ಸಂಸ್ಕಾರ ,ಅದೂ ಇದೂ ಪೂಜೆ ಮಾಡಬೇಕಾಯ್ತು ,ಆಮೇಲೆ ನವಿಲು ಹಿಡಿಯೋದು ಬಿಟ್ಟಿರಬೇಕು ಬಹುಶಃ
ಮತ್ತಷ್ಟು ಓದು 
ಯೋಚಿಸಿ ಮಿಸ್ಡ್ ಕಾಲ್ ಕೊಡುವ ಮುನ್ನ
-ಇಂದುಶ್ರೀ ಬೆಂಗಳೂರು
“ಬೆಳಿಗ್ಗೆ ಬೇಗ ಹೊರಡಬೇಕು. ನಾನು ಬೇಗ ಏಳೊಲ್ಲ. ನಿಂಗೆ ಎಚ್ಚರ ಆದ್ರೆ ೫ ಗಂಟೆಗೆ ಮಿಸ್ಡ್ ಕಾಲ್ ಕೊಡ್ತೀಯಾ?”
“ನಾನು ವಿಜಯನಗರಕ್ಕೆ ಬಂದಾಗ ಮಿಸ್ಡ್ ಕಾಲ್ ಕೊಡ್ತೀನಿ.ಆಗ ನೀನು ಮನೆಯಿಂದ ಹೊರಡು.”
ಹೌದಲ್ಲ… ಇದು ನಾವು ಸಾಮಾನ್ಯವಾಗಿ ಹೇಳುವ ಮಾತು. ಸುಮ್ನೆ ಸಿಗ್ನಲ್ ಕೋಡೋದಕ್ಕೆಲ್ಲಾ ಯಾಕೆ ದುಡ್ಡು ದಂಡ ಮಾಡೋದು ಅಂತ. ೧ ಸೆಕೆಂಡಿಗೆ ೧ ಪೈಸೆ ಚಾರ್ಜ್ ಮಾಡಿದ್ರೂ ಅದನ್ನು ಕಳೆದುಕೊಳ್ಳೋಕೂ ನಾವು ತಯಾರಿಲ್ಲ. ಆದ್ರೆ ಒಂದು ಮಿಸ್ಡ್ ಕಾಲ್ ನಮ್ಮ ಮೊಬೈಲ್ ಇಂದ ನಮ್ಮ ಸ್ನೇಹಿತರ ಮೊಬೈಲ್ ಗೆ ಹೋಗೋದಕ್ಕೆ ಏನೆಲ್ಲಾ ಕೆಲಸಗಳು ನಡೆಯುತ್ತವೆ ಗೊತ್ತಾ?
ಮೊಬೈಲ್ ಉಪಕರಣ ರೇಡಿಯೋ ತರಂಗಗಳ ಮೂಲಕ ನಮ್ಮ ಮಾತನ್ನು ರವಾನಿಸುತ್ತದೆ ಎಂಬುದು ಬಹುತೇಕರಿಗೆ ಗೊತ್ತು. ಆದರೆ ನಮ್ಮ ಮೊಬೈಲ್ ಇಂದ ಕರೆ ಮಾಡುತ್ತಿರುವವರ ಮೊಬೈಲ್ ವರೆಗೆ ಸಂದೇಶಗಳು ಕೇವಲ ರೇಡಿಯೋ ತರಂಗಗಳ ಮೂಲಕ ಗಾಳಿಯಲ್ಲೇ ಹೋಗುತ್ತಾ? ಇದಕೆ ಉತ್ತರ “ಇಲ್ಲ”. ಹಾಗಿದ್ರೆ ಮೊಬೈಲ್ ಇಂದ ಮೊಬೈಲ್ ಗೆ ಸಂಪರ್ಕ ಹೇಗೆ? ನಮ್ಮಲ್ಲನೇಕರು ಬಳಸುತ್ತಿರುವ ಜಿ.ಎಸ್.ಎಂ(Global System for Mobile communication) ತಂತ್ರಜ್ಞಾನದಲ್ಲಿ ಮೊಬೈಲ್ ದೂರಸಂಪರ್ಕ ಸೇವೆ ಲಭಿಸುವುದು ಹೀಗೆ…
ಮಸುಕಾದ way2sms ನೊಂದಿಗೆ ನೆನಪಾಗೋ ಕಳೆದ ಕೊಂಡಿಗಳು
– ಪ್ರಶಸ್ತಿ.ಪಿ
“ಹರ್ ಏಕ್ ಪ್ರೆಂಡ್ ಜರೂರಿ ಹೋತಾ ಹೈ” ಅಂತ ಏರ್ಟೆಲ್ ಕಂಪ್ನಿ ಹಾಡು ಹಾಡ್ತಾ ಉದಾಸನಾಗಿ ಕೂತಿದ್ದ ಗುಂಡ. ಏನಾಯ್ತೋ ಗುಂಡ ಯಾರು ಕೈಕೊಟ್ರೋ ಅಂತ ಅಲ್ಲಿಗೆ ಬಂದ ಟಾಂಗ ತಿಪ್ಪ ಅಲಿಯಾಸ್ ತಿಪ್ಪೇಶಿ. ಎಲ್ಲಾ ಹಾಳಾಗಿ ಹೋಯ್ತು Do Not Disturb Directory(DND) ಅಂತ ಬಂದು ಹಾಳಾಗಿ ಹೋಯ್ತು ನನ್ನ ಕಥೆ ಅಂತ ಗೋಳಾಡಿದ. ಹೇ. ಮೊಬೈಲು ಕಂಪೆನಿ ಅವ್ರು, ಟೆಲಿ ಮಾಕ್ರೆಟಿಂಗ್ ಅವ್ರು ಕರೆ ಮಾಡಿ ತಲೆ ತಿನ್ನೋದನ್ನ ತಪ್ಸೋಕೆ ಅಂತಲ್ವಾ ಅದ್ನ ಮಾಡಿದ್ದು ಮಿ.ರೌಂಡ್ ಅಂತ ಬಂದ್ಲು ಇಳಾ ದೇವಿ ಅಲಿಯಾಸ್ ಇಳಾ. ಹೌದು ಮಾರ್ರೆ ನೀವು ಐದು ಲಕ್ಷ ಗೆದ್ದಿದ್ದೀರಿ.. ತಗೋಳೋಕೆ ಇದಕ್ಕೆ ಕರೆ ಮಾಡಿ.. ಗೋಲ್ಡ್ ಲೋನ್ ಬೇಕಾ ಅಂತೆಲ್ಲ ಸಂದೇಶ ಕಳ್ಸೂದ ಮಾರ್ರೇ.. ಮೊನ್ನೆ ನಮ್ಮಜ್ಜಯ್ಯನ ಮೊಬೈಲಿಗೆ ನಿಮ್ಮ ಜೀವನ ಸಂಗಾತಿಯನ್ನು ಹುಡುಕಬೇಕಾ ಅಂತ ಸಂದೇಶ ಕಳ್ಸಿದ್ರು ಮಾರ್ರೆ.. ಇದು ಬಂದಿದ್ದು ಒಳ್ಳೇದಾಯ್ತು.. ಅಂತದ್ರಲ್ಲಿ ಅದಕ್ಕೆ ಶಾಪ ಹಾಕೂದ ಗುಂಡೂ ಅಂದ ಮಂಗಳೂರು ಮಂಜ ಅಲಿಯಾಸ್ ಮಂಜುನಾಥ. ಹೌದು ಕಣ್ರೋ.. ಹೂಂ ಹೌದು. .ನಾನೂ ಅದಕ್ಕೆ ನನ್ನ ಹೆಸ್ರು ಸೇರ್ಸಬೇಕೂಂತ ಇದೀನಿ ಅಂದ್ಳು ಉಮಾ.. ಆ ಕೆಲ್ಸ ಮಾತ್ರ ಮಾಡ್ಬೇಡ ಮಹಾತಾಯಿ .. ಆಮೇಲೆ ನಾನು ನಿಮ್ಗೆಲ್ಲಾ way2sms ಇಂದ ಸಂದೇಶ ಕಳ್ಸೋಕು ಆಗಲ್ಲ.. ಈಗಿನ ತರ ಅಂದ ಗುಂಡ.. ಓ ಇಲ್ಲೇ ಎಲ್ಲೋ ಗುಂಡನ ದುಃಖಕ್ಕೆ ಮೂಲ ಇದೆ ಅಂತ ಅವ್ರೆಲ್ರಿಗೂ ಡೌಟು ಶುರು ಆಯ್ತು.. ಮತ್ತಷ್ಟು ಓದು 
ಉಸಿರಾಟದಿಂದ ವಿದ್ಯುತ್
-ಪ್ರಶಸ್ತಿ.ಪಿ
ಉಫ್, ಉಫ್ ಅಂತ ಗುಂಡ ಊದುತಾ ಇದ್ದ.. ಏನೋ ಬರ್ತಡೇ ಬತ್ತಿ ಊದಕ್ಕೆ ಅಂತ ಈ ಮಕ್ಳಾಟದ ಕೊಳವೇಲಿ ಪ್ರಾಕ್ಟೀಸ್ ಮಾಡ್ತಿದೀಯ ಅಂತ ಅಲ್ಲಿಗೆ ಬಂದ ಟಾಂಗ್ ತಿಪ್ಪ ಅಲಿಯಾಸ್ ತಿಪ್ಪೇಶಿ. ಹೇ, ಊರಲ್ಲಿ ಅಮ್ಮ ಒಲೆಗೆ ಕೊಳವೇಲೆ ಊದೋದು ನೆನಪಾಯ್ತಾ ಮಾರ್ರೆ.. ಎಷ್ಟು ಪ್ರೀತಿ ಅಮ್ಮನ ಮೇಲೆ ಅಂತ ಬಂದ ಮಂಗಳೂರು ಮಂಜ ಅಲಿಯಾಸ್ ಮಂಜುನಾಥ. ಇಳಾ ಬಂದು ನೋಡ್ತಾಳೆ, ಗುಂಡನ ಬಾಯಲ್ಲಿ ಒಂದು ಪ್ಲಾಸ್ಟಿಕ್ ಕೊಳವೆ, ಸ್ಟ್ರಾ ಅರ್ಧಕ್ಕೆ ಕತ್ತರಿಸಿದಂಗೆ, ಅದರ ತುದಿಗೆ ಸಣ್ಣ ಪ್ಲಾಸ್ಟಿಕ್ ಬುಟ್ಟಿ. ಅದರ ಮೇಲೆ ಅಲ್ಲಲ್ಲ ಗಾಳೀಲಿ ಪ್ಲಾಸ್ಟಿಕ್ ಚೆಂಡು..ವಾ! ಬರ್ನೋಲಿ ನಿಯಮ ಅಂತ ಕೂಗಿದ್ಲು.. ಹಾಂ.. ಎಲ್ಲಿ ಗರ್ನಲ್?..ಅಂತ ತಿಪ್ಪ ಒಂದ್ರೌಂಡು ಕೂತಲ್ಲಿಂದ ಹಾರಿದ.. ಎಲ್ಲ ನಕ್ರು..ಓಯ್ ಗರ್ನಲ್ಲಲ್ಲ ಮಾರ್ರೆ.. ಅವ್ಳು ಹೇಳಿದ್ದು ಗಾಳೀಲಿ ತೇಲಾಡೋ ಬಗೆಗಿನ ಬರ್ನೋಲಿ ನಿಯಮದ ಬಗ್ಗೆ ಅಂದ ಮಂಜ..
ಹೌದು.. ಉಸಿರಾಟದಿಂದ ವಿದ್ಯುತ್ತು ತಯಾರು ಮಾಡ್ಬೋದಂತೆ. ಅದ್ನ ಓದಿದ ಮ್ಯಾಲಿಂದ ನಂಗೆ ಇದ್ರ ಮ್ಯಾಲೆ ಸ್ಯಾನೆ ಪಿರುತಿ ಹುಟ್ಟೈತೆ ಅಂದ ಗುಂಡ.. ತನ್ನ ಪ್ಲಾಷ್ ಬ್ಯಾಕ್ ಆಟಿಕೆ ತೋರಿಸುತ್ತಾ..ಹೌದೆನ್ಲಾ? ಕೆಲವರ ಬಾಯಿಂದ ವಿಚಿತ್ರ ವಾಸ್ನೆ ಬರ್ತಾ ಇರ್ತೈತೆ. ಹತ್ರಕ್ಕೆ ಹೋದವ್ರು ದೂರ ಓಡೋಗಂಗೆ.. ನಾನೂ ಕಂಡಿವ್ನಿ ಅಂದ ತಿಪ್ಪ.. ಮಂಜಂಗೆ ಮೀನು ಸಂತೆ ದಿನ ಬೆಳಿಗ್ಗೆ ಬಸ್ಸಿಗೆ ಹೋಗಿದ್ದು ನೆನ್ಪಾತು. ಇಳಾಗೆ ಪಕ್ಕದ್ಮನೆ ಆಂಟಿಯ ಬೆಳ್ಳುಳ್ಳಿ ಎಫೆಕ್ಟು ನೆನ್ಪಾತು. ಆದ್ರೆ ಅದ್ರಿಂದ ಕರೆಂಟು ತಯಾರು ಮಾಡದು ಹೆಂಗೆ ಅಂತ ಮಾತ್ರ ಅವ್ರಿಗೆ ಹೊಳಿಲೇ ಇಲ್ಲ. ಕೊನೆಗೆ ಗುಂಡಂಗೇ ಕೇಳಿದ್ರು ಅದು ಹೆಂಗೆ ಅಂತ. ಇದು ನೋಡ್ರಾ ಅಮೇರಿಕದ ವಿನಕಂನ್ಸಿನ್ ವಿಶ್ವವಿದ್ಯಾಲಯದವ್ರು ಕಂಡು ಹಿಡ್ದಿದ್ದು ಅಂತ ತನ್ನತ್ರ ಇದ್ದ ಚಿತ್ರ ತೆಗ್ದು ತೋರ್ಸಿದ. ಮತ್ತಷ್ಟು ಓದು 
ಬೆಳಕಿಗಿಂತ ವೇಗವಾಗಿ ಚಲಿಸಬಹುದಾದದ್ದು ಯಾವುದು?
– ವಿಷ್ಣು ಪ್ರಿಯ
ಸೆರ್ನ್ ವಿಜ್ಞಾನಿಗಳ ಪ್ರಯೋಗ ಭೌತಶಾಸ್ತ್ರದ ಮೂಲನಿಯಮವನ್ನೇ ಅಲ್ಲಾಡಿಸುತ್ತಿದೆಯಲ್ಲ ಎಂಬ ಚಿಂತೆ ಈಗಾಗಲೇ ಹಲವರಲ್ಲಿ ಮೂಡಿದೆ. ಬೆಳಕಿಗಿಂತ ವೇಗವಾಗಿ ಚಲಿಸುವುದಕ್ಕೆ ಹೇಗೆ ಸಾಧ್ಯ? ಇದನ್ನು ಆರಂಭದಲ್ಲಿ ಸೆರ್ನ್ ವಿಜ್ಞಾನಿಗಳೂ ನಂಬಲಿಲ್ಲ. ಆದರೆ ತಮ್ಮ ಯಂತ್ರೋಪಕರಣಗಳಲ್ಲಿ, ಲೆಕ್ಕಾಚಾರಗಳಲ್ಲಿ ಯಾವುದೇ ದೋಷ ಇಲ್ಲ ಎಂಬುದನ್ನು ಖಾತ್ರಿಪಡಿಸಿಕೊಂಡ ಬಳಿಕವೇ ಅವರು ಮಾಹಿತಿಯನ್ನು ಹೊರಹಾಕಿದ್ದಾರೆ. ಹಾಗಿದ್ದರೆ ಐನ್ ಸ್ಟೀನನ ಸಿದ್ಧಾಂತವೇ ತಪ್ಪೇ?
ಇದರ ಬಗ್ಗೆಯೇ ಚಿಂತಿಸುತ್ತಾ ಅಂತರ್ಜಾಲದಲ್ಲಿ ಹುಡುಕಾಡುತ್ತಿರಬೇಕಾದರೆ ಟ್ರುಥ್ ಡೈವ್ ಎಂಬ ಅಂತರ್ಜಾಲತಾಣದಲ್ಲಿ ಕವಿ, ಲೇಖಕ, ಎಂಜಿನಿಯರ್ ಮನೋಹರನ್ ಸಂಬಂದಮ್ (Manoharan Sambandam) ಎಂಬವರು ಬರೆದಿದ್ದಂಥ ಲೇಖನ ಸಿಕ್ಕಿತು. ಅವರ ವಾದಸರಣಿ ನಿಜಕ್ಕೂ ಮನಸ್ಸಿಗೆ ನಾಟಿತು. ನನ್ನ ಬ್ಲಾಗ್ ಮಿತ್ರರಿಗಾಗಿ ಈ ಲೇಖನದ ಯಥಾವತ್ ಕನ್ನಡಾನುವಾದವನ್ನು ಇಲ್ಲಿ ಕೊಡುತ್ತಿದ್ದೇನೆ.
ಇಲ್ಲಿಂದ ಮನೋಹರನ್ ಲೇಖನ….
ನಿನ್ನೆ ಈಕ್ವಿನಾಕ್ಸ್…!
– ಹಂಸಾನಂದಿ
ನೆನ್ನೆ ಗೆಳೆಯರೊಡನೆ ಮಾತಾಡ್ತಾ ಹೇಳ್ದೆ – “ಇವತ್ತು ಈಕ್ವಿನಾಕ್ಸ್” ಅಂತ.
“ಹಂಗಂದ್ರೇನು” ಅಂದರು ಅವರು.
ಮತ್ತೆ ಶುದ್ಧ ಸಂಸ್ಕೃತದಲ್ಲಿ “ಇವತ್ತು ಶರದ್ ವಿಷುವ” ಅಂತ ಹೇಳ್ಬಹುದಿತ್ತು – ಅದರ ಬದಲು ಕೇಳಿದರೆ, ತಾನಾಗೇ ಅರ್ಥ ಆಗೋ ಅಂತಹ ಪದ ಯಾಕೆ ಹೇಳ್ಬಾದ್ರು ಅನ್ನಿಸಿ “ಸಮಹಗಲಿರುಳು” ಅಂದೆ.
ಪದದಲ್ಲೇ ಅರ್ಥ ಬಂತಲ್ಲ? ಅಂದ್ರೆ ಇವತ್ತು ರಾತ್ರಿ ಮತ್ತೆ ಹಗಲು ಒಂದೇ ಸಮ ಇರುತ್ತವೆ. ಬೆಂಗಳೂರು (ಅಥವಾ ಕರ್ನಾಟಕದಲ್ಲಿ ಯಾವ ಜಾಗ ಆದರೂ) ಭೂಮಧ್ಯರೇಖೆಗೆ ಬಹಳ ದೂರ ಇಲ್ಲದೇ ಇರೋದ್ರಿಂದ ಚಳಿಗಾಲಕ್ಕೂ ಬೇಸಿಗೇಗೂ ದಿನ ರಾತ್ರಿಗಳ ಅವಧಿ ತುಂಬಾ ಬದಲಾಗೋದಿಲ್ಲ. ಆದ್ರೆ, ಭೂಮಧ್ಯ ರೇಖೆಯಿಂದ ಹೆಚ್ಚು ಹೆಚ್ಚು ಉತ್ತರಕ್ಕೆ (ಅಥವಾ ದಕ್ಷಿಣಕ್ಕೆ) ಹೋದಹಾಗೆ ಕಾಲ ಬದಲಾದ ಹಾಗೆ ಹಗಲು ಹೆಚ್ಚಾಗೋದೂ, ಅಥವಾ ರಾತ್ರಿ ಹೆಚ್ಚಾಗೋದೋ ಸುಲಭವಾಗಿ ಗೊತ್ತಾಗುತ್ತೆ.
ವಿಮಾನಯಾನ: ವಿಷಯಾನ
ಪ್ರಶಸ್ತಿ ಪಿ, ಶಿವಮೊಗ್ಗ
ಶೀರ್ಷಿಕೆ ನೋಡಿ ನಾನು ಪೋಲಿಸರು ಹತ್ತಿಸುತ್ತಾರೆ ಅನ್ನೋ ವಿಮಾನದ ಬಗ್ಗೆ ಮಾತಾಡ್ತಾ ಇದ್ದೀನಾ ಅಂತ ಕೆಲವ್ರಿಗೆ ಸಂದೇಹ ಬಂದ್ರೂ ಬಂದಿರ್ಬೋದು. ಇಲ್ಲಾ ಸ್ವಾಮಿ. ನಾ ಹೇಳ್ತಿರೋದು ಜನ್ರು ಬೇಗ ಹೋಗ್ಬೇಕೋ, ದೂರ ಹಾರ್ಬೇಕು ಅಂತ ಬಳಸೋ ವಿಮಾನದ ಬಗ್ಗೇನೆ. ಅದು ಅಪಘಾತವಾಗಿ ಸುಮಾರು ಜನ ಸಾಯ್ತಾರೆ.ಆದ್ರೆ ಅದ್ರಲ್ಲಿನ ಪ್ರತೀ ಪ್ರಯಾಣವೂ ಹೇಗೆ ವಿಷಯಾನ ಆಗತ್ತೆ ಅಂತ ಕುತೂಹಲ ಕಾಡೋಕೆ ಶುರು ಆಯ್ತಾ? ಹಾಗಾದ್ರೆ ಮುಂದೆ ಓದಿ.
ಕಾಸ್ಮಿಕ್ ಕಿರಣಗಳು ಅಂತ ನೀವು ಕೇಳಿರಬಹುದು.ಅಂತರಿಕ್ಷದಲ್ಲಿ ಸಂಚರಿಸ್ತಾ ಇರೋ ಶಕ್ತಿಭರಿತವಾದ ಹೀಲಿಯಂ ಅಯಾನುಗಳು, ಪ್ರೋಟಾನುಗಳು ಇತ್ಯಾದಿಗಳಿಗೆ ಹಾಗೆನ್ನುತ್ತಾರೆ. ಅವು ನಮ್ಮ ಭೂಮಿಯ ಕಡೇನೂ ಬರ್ತಿರುತ್ತೆ. ಆದ್ರೆ ನಮ್ಮ ಹೀರೋ ಸೂರ್ಯನ ಮತ್ತು ಭೂಮಾತೆಯ ಆಯಸ್ಕಾಂತೀಯ ಕ್ಷೇತ್ರಗಳು ಅವನ್ನು ಭೂಮಿಯಿಂದ ದೂರ ತಳ್ಳೋಕೆ ಪ್ರಯತ್ನ ಮಾಡ್ತಾ ಇರುತ್ತೆ. ಹೆಚ್ಚು ದೂರ ಕ್ರಮಿಸಿದಂತೆ, ಭೂಮಿಯ ವಾತಾವರಣದಿಂದಲೂ ಆ ಕಿರಣಗಳ ತೀವ್ರತೆ ಸ್ವಲ್ಪ ಕಮ್ಮಿ ಆಗುತ್ತೆ. ಹಂಗಂತಾ ನಾವ್ಯಾವಾಗ್ಲೂ ಸುರಕ್ಷಿತರಲ್ಲ ಸ್ವಾಮಿ. ಸೂರ್ಯನೇ ಕೆಲವೊಮ್ಮೆ ಸೌರಜ್ವಾಲೆಗಳ ಮೂಲಕ ಕಾಸ್ಮಿಕ್ ಕಿರಣಗಳಿಗೆ ಪುಷ್ಟಿ ನೀಡೋದುಂಟು. ಸೂರ್ಯನಿಗೂ ಸೂರ್ಯಚಕ್ರ ಅಂತ ಇರುತ್ತೆ. ಪ್ರತೀ ಹನ್ನೊಂದು ವರ್ಷಕ್ಕೆ ಪುನರಾವರ್ತನೆ ಆಗತ್ತೆ. ತೀಕ್ಷ್ಣ ಅವಧಿ ಅಂದರೆ ಸೂರ್ಯನಲ್ಲಿ ನಡೆಯೋ ಚಟುವಟಿಕೆಗಳೆಲ್ಲಾ ಚೆನ್ನಾಗಿ ನಡೆದು ಅದರಿಂದ ಪ್ರಬಲ ಆಯಸ್ಕಾಂತೀಯ ಕ್ಷೇತ್ರ ನಿರ್ಮಾಣ ಆಗೋ ಸಮಯ. ದುರ್ಬಲ ಅಂದ್ರೆ ಇದಕ್ಕೆ ವ್ಯತಿರಿಕ್ತ. ಈ ರೀತಿ ದುರ್ಬಲವಾದಾಗ ತೀಕ್ಣವಾಗಿದ್ದಾಗ ತಡೆಯೋದಕ್ಕಿಂತ ೪೦ ಪ್ರತಿಶತ ಕಮ್ಮಿ ತಡೆಯುತ್ತೆ. ಇಷ್ಟೆಲ್ಲಾ ಪೀಠಿಕೆ ಆದ ಶೀರ್ಷಿಕೆಯ ವಿಷಯಕ್ಕೆ ಬರೋಣ. ಮತ್ತಷ್ಟು ಓದು 






