ನಿಮಗೆ ದೇವರ ಅಸ್ಥಿತ್ವದಲ್ಲಿ ನಂಬಿಕೆ ಇದೆಯೇ?
– ಗೋವಿಂದ ರಾವ್
ವಿಜ್ಞಾನ ಮಾರ್ಗ, ವೈಜ್ಞಾನಿಕ ಮನೋಧರ್ಮ, ವೈಜ್ಞಾನಿಕತೆ ಮುಂತಾದ ವಿಷಯಗಳ ಕುರಿತು ನಾನು ಆಯೋಜಿಸುತ್ತಿದ್ದ ತರಬೇತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದವರು ಕೇಳುತ್ತಿದ್ದ ಸಾಮಾನ್ಯ ಪ್ರಶ್ನೆ ಇದು. ಅಂಥ ಸಂದರ್ಭಗಳಲ್ಲಿ ನಾನು ನೀಡುತ್ತಿದ್ದ ಸ್ಪಷ್ಟ ಉತ್ತರ ಇಂತಿರುತ್ತಿತ್ತು – ‘ಖಂಡಿತ ಇದೆ. ಆಧ್ಯಾತ್ಮಿಕತೆ ಮತ್ತು ವೈಜ್ಞಾನಿಕತೆ ಪರಸ್ಪರ ವೈರುಧ್ಯಗಳಲ್ಲ, ಪೂರಕಗಳು. ವೈಜ್ಞಾನಿಕತೆ ಕಂದಾಚರಗಳನ್ನೂ ಯಾಂತ್ರಿಕ ಮತೀಯ ಆಚರಣೆಗಳನ್ನೂ ವಿರೋಧಿಸುತ್ತದೆಯೇ ವಿನಾ ಪ್ರಾಮಾಣಿಕ ಸತ್ಯಾನ್ವೇಷಣೆಯನ್ನಲ್ಲ, ಪ್ರಾಮಾಣಿಕ ಸತ್ಯಾನ್ವೇಷಕರನ್ನಲ್ಲ. ವೈಜ್ಞಾನಿಕ ಮನೋಧರ್ಮದ ಪ್ರವರ್ತಕರು ಇಂದಿನ ‘ಸ್ವಘೋಷಿತ ಜಗದ್ಗುರುಗಳು’ ‘ಧರ್ಮ’ದ ಹೆಸರಿನಲ್ಲಿ ಪೋಷಿಸುತ್ತಿರುವ ಮೌಢ್ಯವನ್ನೂ ಕಂದಾಚರಣೆಗಳನ್ನೂ ಪ್ರದರ್ಶಿಸುತ್ತಿರುವ ‘ಪವಾಡ’ಗಳನ್ನೂ ವಿರೋಧಿಸುತ್ತಿದ್ದಾರೆಯೇ ವಿನಾ ರಾಮಕೃಷ್ಣ ಪರಮಹಂಸರ, ಸ್ವಾಮಿ ವಿವೇಕಾನಂದರ, ಗೌತಮಬುದ್ಧನ, ಬಸವಣ್ಣನವರ ಆಧ್ಯಾತ್ಮಿಕ ಚಿಂತನೆಗಳನ್ನಲ್ಲ.’
ನಾನು ನಂಬಿರುವ ‘ದೇವರು’ ಯಾವುದು? (ಗಮನಿಸಿ: ಯಾರು? ಅಲ್ಲ). ಹಾಲಿ ಅಸ್ಥಿತ್ವದಲ್ಲಿ ಇರುವ ವಿಶ್ವ ಯಾವುದರಿಂದ ಮೂಡಿ ಬಂದಿತೋ ಅದೇ ನಾನು ನಂಬುವ ‘ದೇವರು’. ನಾನು ನೋಡದೇ ಇದ್ದರೂ ಇದೆಯೆಯೆಂದು ನಂಬಿರುವ ‘ದೇವರ’ ಕಿರು ಪರಿಚಯ ಈಗ ಮಾಡಿಕೊಡುತ್ತೇನೆ. ಈ ದೇವರ ವೈಜ್ಞಾನಿಕ ಹೆಸರು ‘ವಿಚಿತ್ರತೆ’. ‘ವೈಚಿತ್ರ್ಯ’ ಎಂದು ಕರೆದರೂ ಆದೀತು. ‘Singularity’ ಎಂಬ ಇಂಗ್ಲಿಷ್ ಪದದ ಭಾಷಾಂತರ ಇದು (ನೋಡಿ: ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್-ಕನ್ನಡ ನಿಘಂಟು). ಈ ದೇವರನ್ನು ಆವಿಷ್ಕರಿಸಿದವರು ವಿಶ್ವವಿಜ್ಞಾನಿಗಳು (Cosmologists).
ನನ್ನ Some ಶೋಧನೆ!!
-ಸವಿತ ಎಸ್.ಆರ್
ಆಗಷ್ಟೇ ಕನ್ನಡ ಮಾಧ್ಯಮದಲ್ಲಿ 10ನೇ ತರಗತಿ ಮುಗಿಸಿ, ಪ್ರಥಮ ಪಿ.ಯು.ಸಿ ಕಾಲೇಜಿಗೆ ಸೇರಿದ ದಿನಗಳು. ಹೊಸ ಕಾಲೇಜು, ಹೊಸ ಗೆಳತಿಯರು, ವಿಜ್ಞಾನದ ವಿಷಯಗಳು,
ಭೌತ,ಸಸ್ಯ,ಜೀವ,ರಾಸಾಯನಿಕ ಶಾಸ್ತ್ರದ ಪ್ರಯೋಗಗಳು, ಗಣಿತ ಸಮೀಕರಣಗಳು….ಅದೂ ಎಲ್ಲಾ ಇಂಗ್ಲೀಷ್ ಮಾಧ್ಯಮದಲ್ಲಿ…..ಎಲ್ಲವೂ ಒಂಥರಾ ಹೊಸತೇ 🙂
ಒಂದಿನ ಮಧ್ಯಾಹ್ನ ನಾನು ಕಾಲೇಜಿನಿಂದ ಮನೆಗೆ ವಾಪಾಸ್ಸಾಗಿ…ಊಟ ಮಾಡಿ ಟಿ.ವಿ. ಮುಂದೆ ಹಾಜರ್ರು. ನನ್ನ ತಮ್ಮ ಕೂಡ ಆವಾಗಲೇ ಬಂದ. ಅದ್ಯಾರೋ ಸ್ನೇಹಿತರು ಕೊಟ್ರು ಅಂತ ಒಂದು ಚಿಕ್ಕ ಸೀಸೆಯಲ್ಲಿ ಪಾದರಸವನ್ನ ತಂದಿದ್ದ. ಅಮ್ಮನಿಗೆ ಕಾಣದ ಹಾಗೆ ನನ್ನ ಬಳಿ ತಂದು ಒಮ್ಮೆ ಆ ಸೀಸೆಯನ್ನ ಜೋರಾಗಿ ಅಲುಗಾಡಿಸಿ ತೋರಿಸಿದ. ಒಂದು ದೊಡ್ಡ ಹನಿಯಂತಿದ್ದ ಪಾದರಸ ಒಡೆದು ಅನೇಕ ಚಿಕ್ಕ ಚಿಕ್ಕ ಹನಿಗಳಾದವು. ಮತ್ತೊಮ್ಮೆ ನಿಧಾನವಾಗಿ ಸೀಸೆಯನ್ನ ತಿರುಗಿಸಿದರೆ ಮತ್ತೆ ಮೊದಲಿನ ದೊಡ್ಡ ಹನಿಯಾಯ್ತು. ಇಷ್ಟಕ್ಕೆ ನಿಲ್ಲದ ಅವನು ಪೇಪರಿನ ಮೇಲೆ ನಿಧಾನವಾಗಿ ಸುರುವಿ…ಈಗ ಅದು ಹೇಗೆ ಹರಿದಾಡತ್ತೆ ಅಂತ ತೋರಿಸಿದ್ದು ನನ್ನ ಕುತೂಹಲ ಕೆರಳಿಸಿತು. ಮತ್ತೆ ಪೇಪರಿನ ಮೂಲೆಯಲ್ಲೊಂದು ಚಿಕ್ಕ ಮಡಿಕೆ ಮಾಡಿ ಅದರಿಂದ ಪುನಃ ಪಾದರಸವನ್ನ ಸೀಸೆಯೊಳಗೆ ಹಾಕಿ….ಇದು ನನ್ನದು….ತೆಗೆದರೆ ನೋಡು ಅಂತ ಕಟ್ಟಾಜ್ಞೆಯೊಂದಿಗೆ ಟೇಬಲ್ ಮೇಲೆ ಸೀಸೆಯನ್ನಿಟ್ಟ. ನಾನು ಟೀವಿ ನೋಡುತ್ತಲೇ ಇದ್ದೆ.
ಊಟ ಮುಗಿಸಿ ತಮ್ಮ ಸ್ಕೂಲಿಗೆ ಹೊರಟುಹೋದ. ಅಲ್ಲಿಯವರೆಗೂ ಕುತೂಹಲ ತಡೆದಿಟ್ಟುಕೊಂಡಿದ್ದ ನನಗೊಂದು ಛಾನ್ಸ್….!! 🙂 ನಿಧಾನವಾಗಿ ಸೀಸೆಯ ಮುಚ್ಚಳ ತೆಗೆದೆ (ರಾಸಾಯನಿಕ ವಸ್ತುವನ್ನ ಬರಿಗೈಯಲ್ಲಿ ಮುಟ್ಟಬಾರದು ಅಂತ ತಿಳಿದಿದ್ರೂ, ಏನೂ ಆಗೋಲ್ಲ ಅನ್ನೋ ಧೈರ್ಯದ ಮೇಲೆ) ಪಾದರಸವನ್ನ ಬರಿಗೈಯಲ್ಲಿ ಸ್ವಲ್ಪ ಒತ್ತಡದಲ್ಲಿ ಮುಟ್ಟಿದೆ. ಅದು ಚಿಕ್ಕ ಚಿಕ್ಕ ತುಣುಕುಗಳಾದವು..ಮತ್ತೆ ಬೆರಳಿಗೇನಾದ್ರು ಆಯ್ತಾ ಅಂತ ಒಮ್ಮೆ ನೋಡಿದೆ ಏನೂ ಆಗಿರಲಿಲ್ಲ. ಅದೇ ಧೈರ್ಯದ ಮೇಲೆ ಪಾದರಸವನ್ನ ಬಲಗೈ ಅಂಗಳದಲ್ಲಿ ಸುರುವಿಕೊಂಡು..ಬಲಗೈಯಿಂದ ಎಡಗೈಗೆ…ಮತ್ತೆ ಎಡಗೈಯಿಂದ ಬಲಗೈಗೆ ಸುರಿದಾಡೋದು ಮಜಾ ಅನ್ನಿಸ್ತು.. 🙂
‘ವಾಸಾ’ ಎಂಬ ಯುದ್ಧ ನೌಕೆ ಮತ್ತು ವಿಧಿಯ ಆಯ್ಕೆ!
– ಪ್ರಶಾಂತ್ ಯಳವಾರಮಠ
೧೬ನೇ ಶತಮಾನದ ಸ್ವೀಡನ್ ದೇಶದ ರಾಜ ಕಿಂಗ್ ಗುಸ್ತಾವ್ II ಅಡಾಲ್ಫ್ ಗೆ ತನ್ನ ನೌಕಾದಳದ ಶಕ್ತಿಯನ್ನು ಹೆಚ್ಚಿಸಬೇಕು ಅನ್ನೋ ಇಚ್ಛೆ ಇಂದ ಹಡಗು ನಿರ್ಮಿಸುವುದರಲ್ಲಿ ಪ್ರಖ್ಯಾತಿ ಹೊಂದಿದ್ದ ಡಚ್ ದೇಶದ ಹೆನ್ರಿಕ್ ಹೈಬರ್ಟ್ ಸನ್ ಜೊತೆ ನಾಲ್ಕು ಯುದ್ದನೌಕೆಗಳನ್ನು ನಿರ್ಮಿಸುವ ಒಪ್ಪಂದ ಮಾಡಿಕೊಂಡ. ೧೬೨೬ ರಲ್ಲಿ ನಾಲ್ಕರಲ್ಲಿ ಮೊದಲನೆಯದಾಗಿ ವಾಸಾ ಎಂಬ ನೌಕೆಯನ್ನು ನಿರ್ಮಿಸಲು ಪ್ರಾರಂಭಿಸಿದ ತಂಡ ಅದನ್ನು ಆಗಿನ ಕಾಲದ ಅತೀ ದೊಡ್ಡ ನೌಕೆಯೇನ್ನಾಗಿ ನಿರ್ಮಿಸಬೇಕೆಂದು ಪನತೋಟ್ಟಿತು! ಅದಕ್ಕಾಗಿ ಸುಮಾರು ೩೦೦ ಜನರ ತಂಡ ತನ್ನ ಕೆಲಸವನ್ನ ಆರಂಬಿಸಿತ್ತು.‘ಎಂಡೋ ನಿಷೇಧಿಸಿ’ – ಶರದ್ ಪವಾರ್ ಗೊಂದು ಬಹಿರಂಗ ಪತ್ರ
*ರಶ್ಮಿ. ಕಾಸರಗೋಡು
ಶರದ್ ಪವಾರ್ ಜೀ,
ನಮಸ್ತೆ. ಕೇಂದ್ರ ಕೃಷಿ ಮಂತ್ರಿಯಾಗಿದ್ದು ಕೊಂಡು ಭ್ರಷ್ಟಾಚಾರದ ಹೊದಿಕೆ ಹೊದ್ದು ಗಾಢ ನಿದ್ರೆಗೆ ಜಾರಿರುವ ನೀವು ಎಂದಾದರೂ ಸಾಮಾನ್ಯ ಜನರ ಬಗ್ಗೆ ಯೋಚಿಸಿದ್ದೀರಾ? ಹಣ ಕೂಡಿಡುವ ನಿಮ್ಮ ಕಾಯಕದ ನಡುವೆ ಒಂದಷ್ಟು ಹೊತ್ತು ವಿರಾಮ ಸಿಕ್ಕರೆ ಎಂಡೋಸಲ್ಫಾನ್ ಪೀಡಿತರ ಬಗ್ಗೆ ಒಮ್ಮೆ ದೃಷ್ಟಿ ಹಾಯಿಸಿ. ಕೇರಳದ ಪುಟ್ಟ ಜಿಲ್ಲೆಯಾದ ಕಾಸರಗೋಡಿನ ಎಣ್ಮಕಜೆ, ಬೋವಿಕ್ಕಾನ, ಪೆರ್ಲ, ಪೆರಿಯ ಮೊದಲಾದ ಊರುಗಳಲ್ಲಿ ಎಂಡೋಸಲ್ಫಾನ್ ಎಂಬ ವಿಷದಿಂದಾಗಿ ಪ್ರಾಣ ಕಳೆದುಕೊಂಡವರೆಷ್ಟು ಮಂದಿ? ಇನ್ನೂ ಜೀವಂತ ಶವವಾಗಿರುವವರು, ಅಂಗವೈಕಲ್ಯತೆಯಿಂದು ಬಳಲುತ್ತಿರುವ ಮಕ್ಕಳು …ಇಲ್ಲೊಂದು ನರಕವಿದೆ. ಸಂಕಷ್ಟಕ್ಕೆ ಸಿಲುಕಿರುವ ಈ ಜನರ ಕೂಗು ನಿಮಗೆ ಕೇಳಿಸುತ್ತಿಲ್ಲವೇ?
ಗೇರುಬೀಜದ ಮರಗಳಿಗೆ ಈ ವಿಷವನ್ನು ಸಿಂಪಡಿಸಿ ಜನರ ಬಾಳನ್ನು ನರಕವಾಗಿಸಿದ ಪ್ಲಾಂಟೇಷನ್ ಕಾರ್ಪರೇಷನ್ ಇದೀಗ ಮೌನ ವಹಿಸಿರುವುದು ಎಷ್ಟು ಸರಿ?. ಕಾಸರಗೋಡಿನ 11 ಪಂಚಾಯತುಗಳ ಜನರು ಎರಡು ದಶಕಗಳಿಂದ ಎಂಡೋ ಪೀಡೆಗೆ ಬಲಿಯಾಗುತ್ತಾ ಬಂದಿರುವುದು ನಿಮಗೆ ಕಾಣಿಸುವುದಿಲ್ಲವೇ? ಎಂಡೋ ಪೀಡಿತರ ಸಂಕಷ್ಟಗಳ ಬಗ್ಗೆ ದಿನ ನಿತ್ಯವೂ ಒಂದಲ್ಲ ಒಂದು ಸುದ್ದಿ ವರದಿಯಾಗುತ್ತಲೇ ಇದ್ದರೂ ನೀವು ಕಿವಿ, ಕಣ್ಣು ಮುಚ್ಚಿ ಕುಳಿದ್ದೀರಾ? ‘ಎಂಡೋ’ ವಿಷ ಎಂದು ಇಷ್ಟರವರೆಗೆ ಪ್ರೂವ್ ಆಗಿಲ್ಲ ಆದ್ದರಿಂದ ಎಂಡೋ ನಿಷೇಧ ಯಾಕೆ ಅಂತಾ ಕೇಳ್ತಿದ್ದೀರಲ್ಲಾ? ಎಂಡೋ ಪೀಡಿತ ಪ್ರದೇಶಗಳಿಗೊಮ್ಮೆ ಭೇಟಿ ನೀಡಿ ನೋಡಿ. ಈ ಜನರ ಸಂಕಷ್ಟಕ್ಕೆ ನಿಮ್ಮ ಮನ ಮರುಗದೇ ಇದ್ದರೆ ನಿಮ್ಮದು ‘ಕಲ್ಲು ಹೃದಯ’ ಅಂತಾ ಅಂದುಕೊಳ್ಳುತ್ತೀನಿ.
ಮತ್ತಷ್ಟು ಓದು 
ನೀರು ಅತ್ಯಮೂಲ್ಯವೇಕೆ?
– ಅರುಣ್ ಎಲ್
ಭೂಪಟವನ್ನೋ, ಭೂಗೋಲವನ್ನೋ ನೋಡಿದಾಗ ಕಾಣುವ ನೀಲಿ ಬಣ್ಣದ್ದೆಲ್ಲವೂ ನೀರು ಎಂಬುದು ಗೊತ್ತಿರುವ ಸಂಗತಿಯಷ್ಟೆ. ಭೂಗ್ರಹದ ಮುಕ್ಕಾಲು ಭಾಗ ನೀರಿದ್ದೂ, ಕೇವಲ ಕಾಲು ಭಾಗವಷ್ಟೇ ನೆಲವೆಂಬ ವಿಷಯವನ್ನು ಪ್ರಾಥಮಿಕ ಶಾಲೆಯಾಲ್ಲೇ ಕಲಿತಿರುತ್ತೇವೆ. ಅಷ್ಟೊಂದು ನೀರಿದ್ದೂ ನಾವು “ಕೊರತೆ”ಯ ಬಗ್ಗೆ ಮಾತನಾಡುತ್ತಿರುತ್ತೇವೆ. ಏಕೆ?
ವಿಶ್ವಸಂಸ್ಥೆಯ ವರದಿಯ ಪ್ರಕಾರ ಭೂಗ್ರಹದಲ್ಲಿ ಸುಮಾರು ಒಂದುವರೆ ಸಾವಿರ ಮಿಲಿಯನ್ ಕ್ಯುಬಿಕ್ ಕಿಲೋಮೀಟರು ನೀರಿದೆಯಂತೆ.
ಇದನ್ನು ಹೇಗೆ ಕಲ್ಪಿಸಿಕೊಳ್ಳುವುದು? ಒಂದು ಕಿಲೋಮೀಟರು ಉದ್ದದ, ಒಂದು ಕಿಲೋಮೀಟರು ಅಗಲದ, ಒಂದು ಕಿಲೋಮೀಟರು ಆಳದ ಘನವಸ್ತುವನ್ನು ನೀರಿನಿಂದ ತುಂಬಿಸಿದರೆ ಅದು ಒಂದು ಕ್ಯುಬಿಕ್ ಕಿಲೋಮೀಟರ್. ಇದನ್ನು ಸಾವಿರದೈನೂರರಿಂದ ಗುಣಿಸಿದರೆ ನೀರಿನ ಪ್ರಮಾಣವು ಕಲ್ಪನೆಗೆ ಸಿಕ್ಕೀತು.
ಇಷ್ಟೊಂದು ನೀರಿನಲ್ಲಿ ಶೇ. 98ರಷ್ಟು ಸಮುದ್ರವೇ ಆಗಿದೆ. ಅಂದರೆ, ಒಟ್ಟು ನೀರಿನಲ್ಲಿ ಕೇವಲ ಶೇ. ಎರಡರಷ್ಟು ಮಾತ್ರ ಶುದ್ಧ ಜಲ ಇರುವುದೆಂದಾಯಿತಷ್ಟೆ?
ಈ ಶೇ. ಎರಡರಷ್ಟು ಶುದ್ಧಜಲದಲ್ಲಿ ಮುಕ್ಕಾಲು ಭಾಗ ಧ್ರುವಪ್ರದೇಶಗಳಲ್ಲಿ ಮಂಜುಗೆಡ್ದೆಗಳ ರೂಪದಲ್ಲಿದೆ. ಇನ್ನು ಶೇ 22.5ರಷ್ಟು ನೀರು ಅಂತರ್ಜಲದ ರೂಪದಲ್ಲಿ ಅತಲ, ವಿತಲ, ರಸಾತಲ, ಪಾತಾಲವನ್ನು ಸೇರಿಕೊಂಡಿದೆ.
ಸೌರ ವಿದ್ಯುತ್ ಅವಕಾಶಗಳು
– ಗೋವಿಂದ ಭಟ್
ವಿಚಾರ ಮನಸ್ಸಿಗೆ ಬಂದರೂ ಅವಕಾಶಗಳ ಬಗ್ಗೆ ಕೆದಕುತ್ತಾ ಸಾಗಿದಂತೆ ಸಾದ್ಯತೆಗಳು ಸ್ಪಷ್ಟವಾಗುತ್ತಾ ಬಂತು.ಒಮ್ಮೆ ಹೊಸ ಕೊಳವೆ ಬಾವಿಗೆ ಸೌರ submersible ಪಂಪಿನ ವಿಚಾರಣೆಗೆ ಹೋಗಿದ್ದೆ. ಆಗ ಒಂದು ಮಾಮೂಲಿ surface ಪಂಪಿಗೆ ಸಬ್ಸಿಡಿ ಇದ್ದ ಕಾಲ. ಹಾಗಾಗಿ ಅಂಗಡಿಯವರು ಅಷ್ಟೊಂದು ಫಲಕಗಳು ಕಡಿಮೆ ಬೆಲೆಗೆ ಸಿಗುತ್ತದೆ. ಆಲೋಚನೆ ಮಾಡಿ ಎಂದು ಪುಸಲಾಯಿಸಿದರು. ಅಂದಿಗೆ ಹದಿನೆಂಟು ವರ್ಷ ಹಿಂದೆ ಸೈಕಲಿನಲ್ಲಿ ದೆಹಲಿಗೆ ಸಾಗುವಾಗ ಟಿಲೋನಿಯದಲ್ಲಿ ಸೌರ ವಿದ್ಯುತ್ ಬಳಸಿ ರಾತ್ರಿ ಶಾಲೆ ಕಾರ್ಯಾಚರಿಸುವುದನ್ನು ಕಂಡಿದ್ದೆ. ಆಗಲೇ ಈ ಸೌರ ವಿದ್ಯುತ್ ಉಪಯೋಗ ಬಗೆಗೆ ಮನದಲ್ಲಿ ಬಿತ್ತಿದ ಬೀಜ ಮೊಳಕೆಯೊಡೆಯಿತು. ನನಗೆ ಬೇಕಾದ ಪಂಪ್ ಅಲ್ಲವಾದರೂ ಇದನ್ನು ಬಳಸಬಹುದೆಂಬ ಅಲೋಚನೆಯಿಂದ ಒಪ್ಪಿದೆ.
ಹಾಗೆ 2002ರಲ್ಲಿ ಒಂದಷ್ಟು ಫಲಕಗಳೊಂದಿಗೆ ಒಂದು ಸೌರ ಶಕ್ತಿಯ ಪಂಪು ನಮ್ಮಲ್ಲಿಗೆ ಬಂತು. ಅಂದಿನಿಂದ ಇಂದಿನ ವರೆಗೆ ಸೌರ ವಿದ್ಯುತ್ ಗರಿಷ್ಟ ಉಪಯೋಗದ ಬಗೆಗೆ ಆರು ಇಂಚು ಮೇಲೆ ಸರಿದರೆ ಮೂರು ಇಂಚು ಕೆಳಗೆ ಜಾರುವುದು ಎನ್ನುವ ಕಪ್ಪೆಯಾಟ ನಿರಂತರವಾಗಿ ಸಾಗುತ್ತಲೇ ಇದೆ.
ಜೋತಿಷ್ಯ ಎಂಬ ಹಗಲು ದರೋಡೆ!
– ಸುಪ್ರೀತ್ ಕೆ.ಎಸ್
ಒಂದಕ್ಕೆ ಎರಡು ಪಟ್ಟು ಹಣ ಕೊಡುತ್ತೇವೆ ಎಂದು ನಂಬಿಸಿ ಹಣ ಪಡೆದು ಮೋಸ ಮಾಡಿ ಓಡಿ ಹೋಗುವ ವಂಚಕರನೇಕರ ಬಗೆಗೆ ಜನರು ಮಾಧ್ಯಮಗಳಲ್ಲಿ ದಿನವೂ ನೋಡುತ್ತಾರೆ. ಕಣ್ಣೆದುರೇ ಹಣ ಕಳೆದುಕೊಂಡು ಬೆಪ್ಪರಾಗಿ, ಅಸಹಾಯಕರಾಗಿ ನಿಂತ ಗ್ರಾಹಕರನ್ನೂ ಕಂಡಿರುತ್ತಾರೆ. ಹಣ ದ್ವಿಗುಣ, ಲಾಟರಿಯಂತಹ ಪ್ರಲೋಭನೆಗಳಿಗೆ ಒಳಗಾಗದೆ, ವಂಚನೆಯಿಂದ ದೂರ ಉಳಿದವರು ಕೆಲವು ರೀತಿಯ ಪ್ರಶ್ನೆಗಳನ್ನು ತಮ್ಮಲ್ಲೇ ಕೇಳಿಕೊಂಡಿರುತ್ತಾರೆ. ಅವೆಂದರೆ: ನ್ಯಾಯಯುತವಾಗಿ ಈ ಮನುಷ್ಯ ಅತೀ ಕಡಿಮೆ ಸಮಯದಲ್ಲಿ ಹಣವನ್ನು ದ್ವಿಗುಣಗೊಳಿಸುವುದಕ್ಕೆ ಹೇಗೆ ಸಾಧ್ಯ? ಹಾಗೆ ಹಣ ದ್ವಿಗುಣಗೊಳಿಸುವ ಯಾವ ವ್ಯಾಪಾರ, ತಂತ್ರಗಾರಿಕೆ ಈತನಿಗೆ ಗೊತ್ತು? ನಮಗೆ ಎರಡು ಪಟ್ಟು ಹಣ ಹಿಂದಿರುಗಿಸುವುದಕ್ಕೆ ಈತನಿಗೆ ಅಥವಾ ಈತನ ಸಂಸ್ಥೆಗೆ ಎಲ್ಲಿಂದ ಸಂಪತ್ತಿನ ಮೂಲವಿದೆ? ನಾನು ಬೆವರು ಸುರಿಸಿ ದುಡಿಯದೆ, ನನ್ನ ಪರಿಶ್ರಮ ಇಲ್ಲದೆ, ನನ್ನ ಪ್ರತಿಭೆಯ ವಿನಿಯೋಗವಿಲ್ಲದೆ ಸುಲಭವಾಗಿ ಹಣವನ್ನು ಪಡೆಯುವುದು ನೈತಿಕವಾಗಿ ನನಗೆ ಸಮ್ಮತವೇ? ಪ್ರತಿಯೊಬ್ಬರೂ ಹೀಗೇ ಹಣ ಮಾಡುವ ವಿಧಾನ ಕಂಡುಕೊಂಡರೆ ನಿಜವಾದ ಪರಿಶ್ರಮ, ಪ್ರತಿಭೆ, ಬದ್ಧತೆ, ತಾಂತ್ರಿಕ ಕೌಶಲ್ಯ ಬೇಡುವ ಕೆಲಸಗಳನ್ನು ಮಾಡುವವರು ಯಾರು?
ಇಂತಹ ಪ್ರಶ್ನೆಗಳನ್ನು ಕೇಳಿಕೊಳ್ಳುವ ಮನುಷ್ಯನಿಗೆ ಸಹಜವಾಗಿ ತನ್ನ ಮೇಲೆ ಆತ್ಮವಿಶ್ವಾಸವಿರುತ್ತದೆ. ತನ್ನ ದುಡಿಮೆಯ ಮೇಲೆ ನಂಬಿಕೆಯಿರುತ್ತದೆ. ನೈತಿಕವಾಗಿ ಈತ ಸದೃಢನಾಗಿರುತ್ತಾನೆ. ಯಾವನಾದರೂ ವಂಚಕ, “ಈ ನಮ್ಮ ಯೋಜನೆಯಲ್ಲಿ ಹಣ ತೊಡಗಿಸಿ ನಿಮಗೆ ಒಂದೇ ತಿಂಗಳಲ್ಲಿ ಹಣ ದ್ವಿಗುಣಗೊಳಿಸಿ ಕೊಡುತ್ತೇವೆ.”, “ನಿಮ್ಮ ಹಣವನ್ನು ನಾವು ಟೀಕ್ ಮರ ಮೊದಲಾದ ಬೆಲೆಬಾಳುವ ಸಂಪತ್ತಿನಲ್ಲಿ ಹೂಡುತ್ತೇವೆ, ಐದು ವರ್ಷದಲ್ಲಿ ಕೋಟ್ಯಾಧಿಪತಿಯಾಗುವಿರಿ” ಎಂಬ ಪ್ರಲೋಭನೆಗಳನ್ನು ಒಡ್ಡಿದರೆ, ಆತನಿಗೆ ಎಂಥದ್ದೇ ಆರ್ಥಿಕ ಮುಗ್ಗಟ್ಟಿದ್ದರೂ, ಸ್ಪಷ್ಟವಾದ ಪ್ರಶ್ನೆಗಳು ಹಾಗೂ ಸಂಶಯಿಸಿ ಪರೀಕ್ಷಿಸುವ ಬುದ್ಧಿಯಿರುವ ಆತ ಮೋಸ ಹೋಗುವುದಿಲ್ಲ. ಇಂತಹ ವಂಚಕರಿಂದ ಪ್ರಾರಂಭದ ಮಟ್ಟಿಗೆ ಒಂದಷ್ಟು ಮಂದಿ ನಿಜವಾಗಿ ಹಣ ದ್ವಿಗುಣಗೊಳಿಸಿಕೊಂಡರೂ, ಹಡಗು ಸುಭದ್ರವಾಗಿ ತೇಲುತ್ತಿರುವಂತೆ ಕಂಡರೂ ಆತ ಸಂಯಮದಿಂದ ತನ್ನನ್ನು ತಾನು ನಿಯಂತ್ರಿಸಿಕೊಳ್ಳುತ್ತಾನೆ. ಇವೆಲ್ಲ ಹುಲಿಯನ್ನು ಬೇಟೆಯಾಡಲಿಕ್ಕೆ ಬೇಟೆಗಾರ ಒಡ್ಡುವ ಕುರಿ, ಮೇಕೆ, ಆಕಳು ಮೊದಲಾದ ಪ್ರಲೋಭನೆಗಳಿದ್ದ ಹಾಗೆ ಎಂಬುದು ಆತನಿಗೆ ಸ್ಪಷ್ಟವಾಗುತ್ತದೆ. ತನ್ನಲ್ಲಿರುವ ಹಣದಲ್ಲಿ ಇಂತಹ ವಂಚಕ ಏಜೆನ್ಸಿಗಳಲ್ಲಿ ಇನ್ವೆಸ್ಟ್ ಮಾಡುವುದಕ್ಕೆ ಹೊರೆ ಆಗಲಾರದು ಅನ್ನಿಸಿದರೂ, ಹೋದರೆ ಹೋದರೆ ಅಡಿಕೆ, ಬಂದರೆ ಆನೆ ಎಂಬಂತೆ ಕಣ್ಣು ಮುಚ್ಚಿ ಆತ ಮೋಸ ಹೋಗುವುದಕ್ಕೆ ಸಿದ್ಧನಾಗುವುದಿಲ್ಲ. ಮತ್ತಷ್ಟು ಓದು 
ನಾಸ್ತಿಕನಾಗೋದು ಅಂದ್ರೆ….
ಅಂದು ಕೊಂಡ ತಕ್ಷಣ ಆಯಿತೆ? ನಾವು ನಮ್ಮೆಲ್ಲ ಕಷ್ಟಗಳನ್ನು ಪರಿಪಾಟಲುಗಳನ್ನು ದೇವರ ತಲೆಗೆ ಹಾಕಿ ಒಂದು ಕ್ಷಣ ನೆಮ್ಮದಿಯ ನಿಟ್ಟುರಸಿರು ಬಿಟ್ಟುಬಿಡುತ್ತೇವೆ. ಆದರೆ ಆ ಅಧಾರದ ಬಗ್ಗೆಯೇ ಅಪನಂಬಿಕೆ ಇರುವ ನಾಸ್ತಿಕರ ಕಥೆಯೇನು? ಒಂದೆಡೆ ತಲೆಯಲ್ಲಿನ ಒತ್ತಡಗಳನ್ನು ನಿವಾರಿಸಿಕೊಳ್ಳಲು ಇರುವ ಆಧಾರ ತಪ್ಪಿತು. ಮತ್ತೊಂದೆಡೆ ದೇವರನ್ನು ನಂಬದೇ ಇರುವುದರಿಂದ ಆಗುವ ಭಯಂಕರ ಸಮಸ್ಯೆಗಳ ಬಗ್ಗೆ ಜನರು ಹೇಳುವ ಮಾತುಗಳನ್ನು ಕೇಳಿಸಿಕೊಳ್ಳಬೇಕು. ಪುಕ್ಕಲನಾಗಿದ್ದರೆ ದೇವರೆ ಗತಿ!! ಒಟ್ಟಾರೆ ಸಾಕಷ್ಟು ಮನೋದಾರ್ಢ್ಯವಿಲ್ಲದೆ ನಾಸ್ತಿಕನಾಗಲು ಸಾಧ್ಯವಿಲ್ಲ. ನಾನು ದೇವರನ್ನು ನಂಬುವುದಿಲ್ಲ ಎಂದು ಹೇಳುವುದು ಸುಲಭ. ಆದರೆ ಇಡೀ ಜೀವನವೆಲ್ಲ ಹಾಗೆಯೇ ಬದುಕುವುದು ಇದೆಯಲ್ಲ ಅದು ನಿಜಕ್ಕೂ ಚಾಲೆಂಜಿಂಗ್.
ನಮ್ಮ ‘ಅವಸ್ಥೆಯ’ ಹಿಂದೆ, ನಮ್ಮ ಮನಸ್ಸು ಕೆಲಸ ಮಾಡುತ್ತಿರುತ್ತದೆ. ಈ ಮನಸ್ಸು ತನ್ನ ಒಳಬೇಗುದಿಗಳನ್ನು ಕಡಿಮೆ ಮಾಡಿಕೊಳ್ಳಲು ಹಲವಾರು ಉಪಾಯಗಳನ್ನು ಹುಡುಕಿಕೊಂಡಿರುತ್ತದೆ. ಒಂದರ್ಥದಲ್ಲಿ ಸೇಫ್ಟಿ ವಾಲ್ವ್ ನ ಹಾಗೆ. ಮನುಷ್ಯನಿಗೆ ಆಗಾಗ ಕಾಡುವ ಒಂಟಿತನ, ಬೇಸರ, ಅಭದ್ರತೆ ಇತ್ಯಾದಿಗಳನ್ನು ಪರಿಹಾರ ಮಾಡಿಕೊಳ್ಳಲು ಇರುವ ಏಕೈಕ ಉಪಾಯ ಅದನ್ನು ವರ್ಗಾಯಿಸುವುದು. ಆಗ ಆ ಕ್ಷಣಕ್ಕಾದರೂ ಆ ವಿಷಯದಿಂದ ಮುಕ್ತಿ ಸಿಗುತ್ತದೆ. ಈ ವಿಷಯದಲ್ಲಿ ದೇವರು ದಯಾಮಯಿ. ನಮಗೆ ಯಾವಾಗಲೂ ಇಂಥ ಸಂದರ್ಭದಲ್ಲಿ ಸಹಾಯಕ್ಕೆ ಒದಗಿ ಬರುತ್ತಾನೆ. ಮತ್ತಷ್ಟು ಓದು 
ಮೀನುಗಳು—ಅಬ್ಬಾ..ಎಂಥ ಮೀನುಗಳು…!!
– ಆಜಾದ್
ಮೀನುಗಳು, ಜಲಕನ್ಯೆಯರು, ಮತ್ಸ್ಯಾವತಾರ ಹೀಗೆ ನಮ್ಮೊಂದಿಗೆ ನಮ್ಮ ಪರಂಪರೆಯೊಂದಿಗೆ ಹಾಸು ಹೊಕ್ಕಾಗಿರುವ ಜೀವಿಗಳು. ಮಾನವನ ಜೀವವಿಕಾಸ ಸರಣಿಯ ಶ್ರಂಖಲೆಯಲ್ಲಿ ಬಹು ಮುಖ್ಯ ಕೊಂಡಿ..ಈ ಮೀನುಗಳು. ಬೆನ್ನುಮೂಳೆಯ ಪ್ರಥಮ ಅವತರಣ ಮೀನಿನಲ್ಲಾಯಿತು. ಅದೇ ಕಾರಣಕ್ಕೆ ಮಾನವ ಆರೋಗ್ಯ ಸಂಬಂಧಿತ ಸಮಸ್ಯೆಗಳಿಗೆ ಮೂಲವನ್ನು ಹುಡುಕಲು ಹೋದರೆ…ಮೀನು ಸಂಶೋಧನಾ ಯೋಗ್ಯ ಎಂದು ಶಾಸ್ತ್ರವೇತ್ತರು ಮೀನನ್ನು ಸಂಶೋಧನೆಗಳಿಗೆ ಬಳಸಲಾಗುತ್ತಿದೆ.
ಇನ್ನು ಮೀನುಗಳ ವಿಕಾಸದಲ್ಲೂ ಬಹು ಮಹತ್ತರ ತಿರುವುಬಂದದ್ದು…ಮೃದ್ವಸ್ಥಿ (ಕಾರ್ಟೀಲೇಜ್..ಮೆದು ಮೂಳೆ) ಮೀನುಗಳ ವಿಕಾಸ ನಂತರ ಸಹಜಸ್ಥಿ (ಟ್ರೂ ಬೋನ್) ಹೊಂದಿದ ಮೀನುಗಳು. ಮುದ್ವಸ್ಠಿ ಮೀನುಗಳು ಎಂದರೆ ಒಡನೆಯೇ ನೆನೆಪಾಗುವುದು ಶಾರ್ಕ್ ಮೀನು. ಬಹುಶಃ ಜಲಜೀವಿಗಳಲ್ಲಿ ವಿಖ್ಯಾತ ಮತ್ತು ಕುಖ್ಯಾತವಾಗಿರುವ ಜೀವಿ ಎಂದರೆ ಶಾರ್ಕ್ ಮೀನು. ಬಹುಪಾಲು ಮೃದ್ವಸ್ಥಿಗಳು ಸಮುದ್ರಗಳಲ್ಲೇ ಕಂಡುಬರುತ್ತವೆ (ಶಾರ್ಕ್ ಗಳ ಬಗ್ಗೆ ಇನ್ನೊಮ್ಮೆ ಬರೆಯುವೆ..). ಶಾರ್ಕ್ ಜಾತಿಗೆ ಸೇರಿದ ಸ್ಕೇಟ್ ಮತ್ತು ರೇ ಮೀನುಗಳೂ ಮೃದ್ವಸ್ಥಿಗಳೇ.
ಇನ್ನು ಸಹಜಸ್ಥಿ ಮೀನುಗಳು, ಕೆರೆ, ಕುಂಟೆ, ಹೊಂಡ, ಕುಂಟೆ, ಸರೋವರ, ನದಿ, ನಾಲೆ, ಜಲಾಶಯ ಅಲ್ಲದೇ ಹಿನ್ನೀರು, ಚೌಳುಪ್ಪುನೀರು, ಸಮುದ್ರ ತಟಗಳು, ಆಳ ಸಮುದ್ರ, ಅಷ್ಟೇ ಏಕೆ…ಹಿಮಾವೃತ ಅಂಟಾರ್ಟಿಕಾದಲ್ಲೂ ಕಂಡುಬರುತ್ತವೆ.
ಇವುಗಳಲ್ಲಿನ ಕೆಲವು ವೈವಿಧ್ಯಗಳ ಸ್ಥೂಲ ಪರಿಚಯವೇ ಈ ಲೇಖನ.
ಚುಕ್ಕೆ ಬಾಲದ ಸಮುದ್ರ ಸಿಂಹ: ಸಮುದ್ರ ಸಿಂಹಗಳು ಬಹು ಮನೋಹಕ ಮೀನುಗಳಲ್ಲಿ ಪ್ರಮುಖವಾದುವು.
ಇವುಗಳ ರೆಕ್ಕೆಮುಳ್ಳು ವಿಷಯುಕ್ತವಾಗಿದ್ದು ಇವುಗಳ ದೇಹವಿನ್ಯಾಸ ಒಂದುರೀತಿಯ ಅಪಾಯ ಸೂಚಕ
ಎಲೆಯಾಕಾರದ ಸಮುದ್ರ ದೈತ್ಯ : ಕಡಲ್ಗುದುರೆಗಳ ಜಾತಿಯ ಮೀನುಗಳಿವು, ತನ್ನ ಪರಿಸರದೊಡನೆ (ಸಮುದ್ರ ಸಸ್ಯಗಳ ಮತ್ತಷ್ಟು ಓದು 






