ವಿಷಯದ ವಿವರಗಳಿಗೆ ದಾಟಿರಿ

Posts from the ‘ಸಂಸ್ಕೃತಿ’ Category

13
ಏಪ್ರಿಲ್

ಲಿ೦ಗಾಯತ ಅಥವಾ ವೀರಶೈವ – ಹಿ೦ದೂ ಧರ್ಮದಿ೦ದ ಬೇರೆಯೇ?

– ಕಿರಣ್ ಕೆ.ಎಸ್

Basavannaಇತ್ತೀಚಿನ ದಿನಗಳಲ್ಲಿ ಬಹಳ ಚರ್ಚೆಗೆ ಒಳಗಾಗುತ್ತಿರುವ ವಿಷಯ – ಲಿ೦ಗಾಯತರು ಹಿ೦ದೂಗಳೋ, ಅಲ್ಲವೋ? ಇದರ ಬಗ್ಗೆ ಬಹಳ ತಿಳಿದವರು ಅಭಿಪ್ರಾಯಗಳನ್ನು ಆಗಲೇ ತಿಳಿಸಿದ್ದಾರೆ. ಈ ಲೇಖನದ ಉದ್ಡೇಶ, ಒಬ್ಬ ಸಾಮಾನ್ಯ ಹಿ೦ದೂವಾಗಿ ಕೆಲವು ಮೂಲಭೂತ ಪ್ರಶ್ನೆಗಳನ್ನು ಕೇಳುವುದು. ಇವುಗಳ ಉತ್ತರ ಹುಡುಕುವಾಗ ನಮಗೆ ವಿಷಯ ಇನ್ನಷ್ಟು ಗಾಢವಾಗಿ ತಿಳಿಯಬಹುದೆ೦ದು ಆಶಯ.

ಮೊದಲನೆಯದಾಗಿಲಿ೦ಗಾಯತರ ಶಿವ, ಬೇರೆ ಹಿ೦ದೂಗಳ ಶಿವನಿಗಿ೦ಥ ಭಿನ್ನವೇ?

ಶಿವ ಅಥವಾ ಶ೦ಕರ ಎ೦ದರೆ, ಮ೦ಗಳವನ್ನು ಉ೦ಟುಮಾಡುವನು ಎ೦ದು. ಯಜುರ್ವೇದದ ತೈತ್ತಿರೀಯ ಸ೦ಹಿತೆಯಲ್ಲಿ ಬರುವ ರುದ್ರ ಮತ್ತು ಚಮಕ ಪ್ರಶ್ನೆಗಳಲ್ಲಿ, ಶಿವ ಎನ್ನುವ ಸ೦ಸ್ಕೃತ ಪದ ಬ೦ದಿದೆ. ಶಿವನನ್ನು ಕುರಿತು ಭಾವಪೂರ್ಣವಾಗಿ, ಬಹು ನಾಮಗಳಿ೦ದ ಹೀಗೆ ಸ್ತುತಿಸಿದ್ದಾರೆ. “ನಮಸ್ತೇ ಅಸ್ತು ಭಗವಾನ್ ವಿಶ್ವೇಶ್ವರಾಯ, ಮಹಾದೇವಾಯ, ತ್ರ್ಯ೦ಬಕಾಯ, ತ್ರಿಪುರಾ೦ತಕಾಯ, ತ್ರಿಕಾಗ್ನಿ ಕಾಲಾಯ, ಕಾಲಾಗ್ನಿ ರುದ್ತ್ರಾಯ, ನೀಲಕ೦ಠಾಯ, ಮೃತ್ಯು೦ಜಯಾಯ, ಸರ್ವೇಶ್ವರಾಯ, ಸದಾಶಿವಾಯ, ಶ್ರೀಮನ್ ಮಹಾದೇವಾಯ ನಮಃ”. ಶ೦ಕರಾಚಾರ್ಯರು ಬಸವಣ್ಣನವರಿಗಿ೦ಥ ಸುಮಾರು ೩೫೦ ವರ್ಷಗಳ ಮೊದಲು, “ಚಿದಾನ೦ದ ರೂಪಮ್ ಶಿವೋಹಮ್, ಶಿವೋಹಮ್” ಎ೦ದು ಆತ್ಮ ಶತಕದಲ್ಲಿ ಹಾಡಿದ್ದಾರೆ. ಭಾರತೀಯ ಹಿ೦ದೂ ಪರ೦ಪರೆಯಲ್ಲಿ, ಸಹಸ್ರಾರು ಶೈವ ಪದ್ಢತಿಗಳು ಬ೦ದು ಹೋಗಿದ್ದಾವೆ. ತಮಿಳುನಾಡಿನ ಶೈವರು, ಕಾಶ್ಮೀರದ ಶೈವರು, ನಾಥರು, ನೇಪಾಳದ ಪಶುಪತಿಗಳು, ಕಾಪಾಲಿಕರು, ಹೀಗೆ.. ಕರ್ನಾಟಕದಲ್ಲೇ ನೂರಾರು ಶೈವ ಪದ್ಧತಿಗಳು ಬ೦ದು ಹೋಗಿವೆ, ಮತ್ತು ಲಭ್ಯವಾಗೂ ಇವೆ. ಗೌಡರು, ಕುರುಬರು, ಬ್ರಾಹ್ಮಣರು, ಹೀಗೆ ನೂರಾರು ಪ೦ಗಡಗಳಲ್ಲಿ, ಶಿವನ ಆರಾಧನೆ ಇದೆ. ಅದಕ್ಕೇ ಕೇಳಿದ್ದು, ಲಿ೦ಗಾಯತರ ಶಿವ, ಬೇರೆ ಹಿ೦ದೂಗಳ ಶಿವನಿಗಿ೦ಥ ಭಿನ್ನವೇ? ಮತ್ತಷ್ಟು ಓದು »

31
ಮಾರ್ಚ್

ಶೂದ್ರ ಶಂಬುಕ ಮತ್ತು ರಾಮಾಯಣ – ಒಂದು ಚರ್ಚೆ

– ರಾಘವೇಂದ್ರ ಸುಬ್ರಹ್ಮಣ್ಯ

ಶೂದ್ರ ಶಂಬುಕಹಲವಾರು ಜನ ಶಂಬುಕನ ಉದಾಹರಣೆ ಕೊಟ್ಟು ರಾಮನ ಮೇಲೆ ಅಧರ್ಮದ ಪಟ್ಟ ಹೊರಿಸ್ತಾರೋದು ನೋಡಿ, ನನ್ನ ದೃಷ್ಟಿಕೋನವನ್ನೂ ಹಂಚಿಕೊಳ್ಳೋಣವೆಂದು ನಿರ್ಧರಿಸಿದ್ದರಿಂದ,ಈ ಲೇಖನ.ಇದರ ಬಗ್ಗೆ ಒಂದು ಚರ್ಚೆ ಆದ್ರೆ ಚೆನ್ನಾಗಿರುತ್ತೆ ಅನ್ನಿಸ್ತು. ನಾನು ರಾಮಾಯಣನ್ನು ಧರ್ಮಗ್ರಂಥವಾಗಿ ಅಥವಾ ಪುರಾಣವನ್ನಾಗಿ ನೋಡುವುದಿಲ್ಲವಾದ್ದರಿಂದ, ರಾಮನೆಂಬ ‘ಮರ್ಯಾದಾ ಪುರುಷೋತ್ತಮ’ ಮಾಡಿದ್ದು ಸರಿಯೋ ತಪ್ಪೋ ಎಂಬ ವಿಮರ್ಷೆಗೆ ಕೈ ಹಾಕಲಾರೆ. ರಾಮನೆಂಬ ಪಾತ್ರ ಮಾಡಿದ್ದು ಸರಿಯೋ ಎಂದು ನೋಡುವ ಪ್ರಯತ್ನವಷ್ಟೇ.

ನನಗೆ ಗೊತ್ತಿದ್ದಂತೆ ಕಥೆ ಹೀಗಿದೆ (ತಪ್ಪಿದ್ದಲ್ಲಿ ದಯವಿಟ್ಟು ತಿದ್ದಿ):

“ರಾಮನ ಆಸ್ಥಾನಕ್ಕೆ ಒಬ್ಬ ಬ್ರಾಹ್ಮಣ ತನ್ನ ಮಗನ ಸಾವಿಗಾಗಿ ನ್ಯಾಯ ಕೇಳಲು ಬರುತ್ತಾನೆ. ಎಲೈ ರಾಜನೇ, ನೀನೇನೋ ಅನ್ಯಾಯ ಮಾಡಿರಬೇಕು, ಆದ್ದರಿಂದ ಯಾವ ತಪ್ಪನ್ನೂ ಮಾಡನ ನನ್ನ ಮಗನ ಸಾವಾಗಿದೆ ಎಂದು ಆರೋಪಿಸುತ್ತಾನೆ. ನಾರದಮುನಿ ಇದರಬಗ್ಗೆ ಕೊಟ್ಟ ಹಿನ್ನೆಲೆ ಹಾಗೂ ಶಂಭುಕನ ತಪಸ್ಸಿನ ಬಗ್ಗೆ ತಿಳಿದು ರಾಮ ಶಂಬುಕನಿದ್ದಲ್ಲಿಗೆ ಪ್ರಯಾಣ ಬೆಳೆಸುತ್ತಾನೆ. ಶಂಬುಕನನ್ನು ಭೇಟಿ ಮಾಡಿ, ಅವನ ತಪಸ್ಸಿನ ಕಾರಣ ಕೇಳಲಾಗಿ, ಶಂಬುಕ ‘ರಾಮ, ನಾನು ಶೂದ್ರ ಕುಟುಂಬದಲ್ಲಿ ಜನಿಸಿದವನು. ನನ್ನ ಕಠಿಣ ಪರಿಶ್ರಮದಿಂದ ದೇವತೆಗಳನ್ನು ಮೆಚ್ಚಿಸಿ, ದೇವಲೋಕವನ್ನು ನನ್ನದಾಗಿ ಮಾಡಿಕೊಂಡು, ಈ ದೇಹದೊಂದಿಗೇ ಸ್ವರ್ಗವನ್ನು ಪ್ರವೇಶಿಸುವ ನಿರ್ಧಾರದಿಂದ ಈ ತಪಸ್ಸನ್ನು ಮಾಡುತ್ತಿದ್ದೇನೆ” ಎನ್ನುತ್ತಾನೆ. ಅದಕ್ಕೆ ರಾಮ ‘ಅಯ್ಯಾ ನಿನ್ನ ತಪಸ್ಸು, ಪರಿಶ್ರಮ ಒಳ್ಳೆಯದೇ ಆದರೂ, ಅದರ ಹಿಂದಿನ ಕಾರಣ ಅಸಾತ್ವಿಕವಾದದ್ದು’ ಎಂಬ ಕಾರಣದಿಂದ ಅವನ ಹರಣ ಮಾಡುತ್ತಾನೆ.
ಮತ್ತಷ್ಟು ಓದು »

29
ಡಿಸೆ

ಮತಾಂತರ ಸರಿಯಾದರೇ ,ಮರುಮತಾಂತರವೇಕೆ ತಪ್ಪು?

– ರಾಕೇಶ್ ಶೆಟ್ಟಿ

Conversionಹೀಗೆ ಹತ್ತು ದಿನಗಳ ಹಿಂದೆ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ ಹತ್ತಿರ ಒಂದು ಜಾಹೀರಾತು ಓದಿದ್ದೆ.”೧೫ ಕಥೆಗಳು ನಿಮ್ಮ ಜೀವನವನ್ನೇ ಬದಲಾಯಿಸುವವು” ಅಂತ ಬರೆದಿತ್ತು.ಇದ್ಯಾವುದೋ ವ್ಯಕ್ತಿತ್ವ ವಿಕಸನ ಕಾರ್ಯಕ್ರಮದ ಜಾಹೀರಾತು ಎಂದುಕೊಂಡೆ.ಆದರೆ,ಇತ್ತೀಚೆಗೆ ದಿನ ಪತ್ರಿಕೆಗಳ ಮುಖಪುಟದಲ್ಲೂ ದೊಡ್ಡದಾಗಿ ಇದೇ ಜಾಹೀರಾತು “ಅನುಭವಿಸಿ ಬದಲಾಯಿಸುವ ಶಕ್ತಿ – ೧೫ ಕಥೆಗಳು ನಿಮ್ಮ ಜೀವನವನ್ನು ಬದಲಾಯಿಸುವುದು” ಎಂದು ಕಾಣಿಸಲಾರಂಭಿಸಿತು. ಪ್ರತಿದಿನ ಜಾಹೀರಾತು ಕೊಡುವಂತದ್ದು ಈ ಪುಸ್ತಕದಲ್ಲಿ ಅಂತದ್ದೇನಿದೆ ಎಂದು ಓದುವ ಕೂತುಹಲವಾಗಿ ಓದಿದೆ.ಮೂರ್ನಾಲ್ಕು ಪುಟ ಓದಿದಂತೆ ಪುಸ್ತಕದ ಮುಂದಿನ ಪುಟಗಳಲ್ಲಿ ಏನಿರಬಹುದು ಮತ್ತು ಈ ಪುಸ್ತಕ ಓದಿದವರು ಏನಾಗಿ ಬದಲಾಗಬೇಕು ಎಂಬ ಉದ್ದೇಶವಿದೆಯೆಂದು ಖುದ್ದು ಅನುಭವಿಸಿದೆ!

ಆ ಪುಸ್ತಕದಲ್ಲಿ ಬಾಲಿವುಡ್ ನಟ ಜಾನಿಲಿವರ್,ನಟಿ ನಗ್ಮಾ ಇನ್ನೂ ಹಲವರು ತಮ್ಮ ತಮ್ಮ ಕತೆಗಳನ್ನು ಹೇಳಿ ಕೊಂಡಿದ್ದಾರೆ.ಈ ಪುಸ್ತಕದ ಸರಳ ಸಾರಾಂಶವೇನೆಂದರೆ,”ಬೈಬಲ್ ಮತ್ತು ಜೀಸಸ್” ಮಾತ್ರ ಸತ್ಯ ಮತ್ತು ಅವು ಮಾತ್ರವೇ “ಪಾಪಿ”ಗಳಾದ ಮನುಷ್ಯ ಬದುಕಿನ ಬಿಡುಗಡೆಯ ಹಾದಿ ಎಂಬುದು!.ಅದೊಂದೇ ಮಾತ್ರ ಸತ್ಯವೆಂದಾದರೆ,ಉಳಿದ ರಿಲಿಜನ್ನುಗಳು, ಸಂಪ್ರದಾಯಗಳು ಮತ್ತು ಭಿನ್ನ ಹಾದಿಗಳೆಲ್ಲವೂ ಸುಳ್ಳು ಅಂತಾಯಿತಲ್ಲ! ಈ ಪುಸ್ತಕದ ಉದ್ದೇಶವನ್ನು ಇನ್ನೂ ಸರಳ ಮಾಡುವುದಾದರೆ ಅಥವಾ ಸಾಮಾನ್ಯಜನರ ಭಾಷೆಯಲ್ಲಿ ಹೇಳುವುದಾದರೆ,ಜನರನ್ನು ಕ್ರಿಸ್ತ ಮತಕ್ಕೆ ಬನ್ನಿ ಎಂದು ಕರೆಯುವ ಮತಾಂತರದ ಹೊಸ ತಂತ್ರವಷ್ಟೇ.ಈ ಬಗ್ಗೆ ಯಾವ ಮೀಡಿಯಾಗಳು,ಯಾವ ಸೆಕ್ಯುಲರ್ ನಾಯಕನೂ ಅಬ್ಬರಿಸಿ ಬೊಬ್ಬಿರಿಯಲಿಲ್ಲ,ಸಮಾಜದಲ್ಲಿ ಅಶಾಂತಿಗೆ ಕಾರಣವಾಗುತ್ತದೆ ಎಂದು ಮೊಸಳೆ ಕಣ್ಣೀರೂ ಸುರಿಸಲಿಲ್ಲ.

ಮತ್ತಷ್ಟು ಓದು »

26
ಡಿಸೆ

ಭಗವದ್ಗೀತೆಯ ಕುರಿತ ಪರಕೀಯ ನಿರೂಪಣೆಗಳು/ನಿರ್ಣಯಗಳು…!

-ಡಾ. ಪ್ರವೀಣ್ ಟಿ. ಎಲ್.

ಉಪನ್ಯಾಸಕರು, ಕುವೆಂಪು ವಿಶ್ವವಿದ್ಯಾನಿಲಯ

ಭಗವದ್ಗೀತೆಭಗವದ್ಗೀತೆಯು ಸದಾ ಚರ್ಚೆಯಲ್ಲಿರುವ ವಸ್ತುವಿಷಯ. ಅದನ್ನು ಶಾಲೆಯಲ್ಲಿ ಭೋದಿಸುವ ಸಲುವಾಗಿ ಕಳೆದ ಬಾರಿ ಚರ್ಚೆಯಾಗಿತ್ತು. ಪ್ರಸ್ತುತ ಕೇಂದ್ರ ಸರ್ಕಾರ ಅದನ್ನೊಂದು ರಾಷ್ಟ್ರೀಯ ಗ್ರಂಥ ಮಾಡುವ ಆಶಯ ವ್ಯಕ್ತಪಡಿಸಿದ ಕಾರಣಕ್ಕಾಗಿ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಹಲವು ಲೇಖನಗಳು ಪ್ರಜಾವಾಣಿಯಲ್ಲಿ ಪ್ರಕಟವಾಗುತ್ತಲೇ ಇವೆ. ಮುಖ್ಯವಾಗಿ ಪ್ರಜಾವಣಿಯ ‘ಸಂಗತ’ದಲ್ಲಿ ಪ್ರಕಟವಾದ ಪ್ರೊ. ಭಗವಾನ್‍ರ ಲೇಖನಕ್ಕೆ ಪ್ರತಿಕ್ರಿಯೆಯಾಗಿ ಈ ಬರಹ. ಹಾಗೆಂದು ಭಗವದ್ಗೀತೆ ರಾಷ್ಟೀಯ/ಧರ್ಮ ಗ್ರಂಥವಾಗಬೇಕೆಂಬ ಆಶಯ ನನ್ನದಲ್ಲ. ಬದಲಾಗಿ ‘ಭಗವದ್ಗೀತೆಯು ಜಾತಿವ್ಯವಸ್ಥೆಯನ್ನು ಪ್ರತಿಪಾದಿಸುವ ಒಂದು ಅಪಾಯಕಾರಿ ಕೃತಿ’ ಎನ್ನುವ ಹಾಗೂ ‘ಧರ್ಮಗ್ರಂಥ’ ಮಾಡಬೇಕೆನ್ನುವ ಎರಡೂ ವಾದಗಳು ಹೇಗೆ ನಮಗೆ ಪರಕೀಯವಾಗಿವೆ ಎಂಬುದನ್ನು ತೋರಿಸುವುದು.

ಲೇಖಕರು ತಮ್ಮ ವಾದದ ಸಮರ್ಥನೆಗೆ ನೀಡಿದ ಅಂಶಗಳು ಭಗವದ್ಗೀತೆಯು ಜಾತಿವ್ಯವಸ್ಥೆಯನ್ನು ಪ್ರತಿಪಾದಿಸಿದೆ ಎಂಬುದನ್ನು ಸಾಭೀತುಪಡಿಸಲು ಯಶಸ್ವಿಯಾಗಿಲ್ಲ.

ಮತ್ತಷ್ಟು ಓದು »

18
ಡಿಸೆ

ಗೀತೆ ಅರ್ಥೈಸಿಕೊಳ್ಳಲು ತಯಾರಿಲ್ಲದವರ ವ್ಯರ್ಥ ವಿರೋಧ

– ಡಾ. ಬಿ.ಕೆ ಸುರೇಶ್,ಮಂಡ್ಯ

ಭಗವದ್ಗೀತೆಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥ ಮಾಡಬೇಕೆಂಬ ಪರ ವಿರೋಧದ ವಿಮರ್ಶೆಗಳಲ್ಲಿ “ದಾಯಾದಿಗಳ ಕಥನ ರಾಷ್ಟ್ರೀಯ ಗ್ರಂಥವಾಗಬೇಕೆ?” ಎಂದು ವಿಶ್ಲೇಷಿಸಿರುವ ಶ್ರೀ ವೆಂಕಟೇಶ್ ಕೆ ಜನಾದ್ರಿ ಅವರ ಆಲೋಚನೆ ವಿಚಿತ್ರವಾಗಿದೆ. ಕುರುಕ್ಷೇತ್ರ ಕದನದಲ್ಲಿ ಬುದ್ದ, ಕ್ರಿಸ್ತ, ಬಸವಣ್ಣ, ಗಾಂಧೀಜಿ ಮೊದಲಾದವರನ್ನೆಲ್ಲಾ ಎಳೆದು ತಂದು ಅವರೆಲ್ಲಾ ಇದ್ದಿದ್ದರೆ ಏನೇನು ಆಡುತ್ತಿದ್ದರು? ಏನೇನು ಸಂಭವಿಸುತ್ತಿತ್ತು? ಎಂಬುದನ್ನು ತಿಳಿಸಿದ್ದಾರೆ. ಖಂಡಿತವಾಗಿಯೂ ಕೃಷ್ಣನನ್ನು ಹೊರತುಪಡಿಸಿ ಬೇರೆ ಯಾರೇ ಇದ್ದಿದ್ದರೂ ಭಗವದ್ಗೀತೆ ಹುಟ್ಟುತ್ತಿರಲಿಲ್ಲ. ಅರ್ಜುನ ಉಳಿಯುತ್ತಲೂ ಇರಲಿಲ್ಲ. ಮಹಾಭಾರತದ ಅಸ್ತಿತ್ವವೇ ಇರುತ್ತಿರಲಿಲ್ಲ. ಗೀತೆ ಮತ್ತು ಕೃಷ್ಣನ ಮಹತ್ತ್ವ ಇರುವುದೇ ಅಲ್ಲಿ. ಭಗವದ್ಗೀತೆಯನ್ನು ಏನಕೇನ ವಿರೋಧಿಸಲೇ ಬೇಕೆಂಬ ಒಂದೇ ಒಂದು ಕಾರಣಕ್ಕೆ ಲೇಖಕರು ಕಾಲಧರ್ಮಕ್ಕನುಗುಣವಾಗಿ ಮಹಾಪುರುಷರು ಸಮಾಜವನ್ನು ಉದ್ದರಿಸಿದ್ದ ಸಂಗತಿಯನ್ನು ಮರೆತಿದ್ದಾರೆ. ಬುದ್ದನ ಕಾಲ ಮತ್ತು ಕಾಲಧರ್ಮವೇ ಬೇರೆ ಮತ್ತು ಬಸವಣ್ಣ ಕಾಲ ಮತ್ತು ಕಾಲಧರ್ಮವೇ ಬೇರೆ ಎಂಬ ಸಂಗತಿಯನ್ನು ಅವರು ಮರೆತಿದ್ದಾರೆ ಅಥವಾ ಮರೆತಂತೆ ನಟಿಸಿದ್ದಾರೆ. ಮಹಾಭಾರತ ಕಾಲದಲ್ಲಿ ಧರ್ಮವನ್ನು(ಪೂಜಾ ವಿಧಾನ ಎಂದು ಅರ್ಥೈಸಿಕೊಳ್ಳಬಾರದು) ಪ್ರತಿಪಾದನೆ ಮಾಡಬೇಕಾದ ವಿಧಾನ ಕೃಷ್ಣನದ್ದಾದರೆ ಬುದ್ದನ ಕಾಲದಲ್ಲಿ ಅದರ ವಿಧಾನ ಭೀನ್ನವೇ ಆಗಿರುತ್ತದಲ್ಲಾ. ನಮ್ಮ ಕಾಲದಲ್ಲಿ ಸ್ಲೇಟು ಹಿಡಿದು ಶಾಲೆಹೋಗುತ್ತಿದ್ದೆವು. ಈಗ ಮಕ್ಕಳು ಟ್ಯಾಬ್ಲಟ್ ಹಿಡಿದು ಹೋಗಲಾಗುತ್ತಿದೆ. ಹಾಗಾಗಿ ಸ್ಲೇಟೇ ಸರಿ ಇಲ್ಲ ಎನ್ನಲಾಗುತ್ತದೆಯೇ? ಬುದ್ದ ಮತ್ತು ಕೃಷ್ಣ ಇಬ್ಬರನ್ನೂ ಅವತಾರಿ ಪುರುಷರು ಎನ್ನುವ ನೆಲದಲ್ಲಿ ಅವೆರಡೂ ವಿಧಾನಗಳನ್ನು ನಮ್ಮ ದೇಶ ಒಪ್ಪಿದೆ. ಒಪ್ಪದೇ ಇರುವ ಮಾನಸಿಕತೆ ನಮ್ಮಲ್ಲಿ ಆರಂಭವಾಗಿದ್ದು ಕಮ್ಯುನಿಷ್ಟ ಚಿಂತನೆ ಸಮಾಜದಲ್ಲಿ ಪ್ರಚಾರಕ್ಕೆ ಬಂದ ಮೇಲಷ್ಟೆ. ತಮ್ಮ ಮೂಗಿನ ನೇರಕ್ಕೆ ವಾದಗಳನ್ನು ಮಂಡಿಸುವ ಇಂಥ ವಿಧಾನಗಳು ಪ್ರಚಲಿತಕ್ಕೆ ಬಂದಿರುವುದೂ ಕೂಡ ಕಮ್ಯುನಿಷ್ಟ್ ಚಿಂತನೆಯ ಪ್ರಚಾರದ ತರುವಾಯ.

ಮತ್ತಷ್ಟು ಓದು »

17
ಡಿಸೆ

ಭಾರತೀಯ ಸಂಸ್ಕೃತಿ,ಪರಂಪರೆಯ ಚೇತನವಾದ ಭಗವದ್ಗೀತೆ, ಕೇವಲ ದಾಯಾದಿಗಳ ಕಲಹವೇ..?

– ಎಸ್.ಎನ್.ಭಾಸ್ಕರ್‍, ಬಂಗಾರಪೇಟೆ

ಭಗವದ್ಗೀತೆಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥವನ್ನಾಗಿ ಘೋಷಣೆ ಮಾಡುವ ಬಗ್ಗೆ ಪ್ರಸ್ತಾಪಿತವಾದ ಹಿನ್ನೆಲೆಯಲ್ಲಿ ದಿನಾಂಕ ೧೨-೧೨-೨೦೧೪ ರಂದು ಕನ್ನಡಪ್ರಭ ಪತ್ರಿಕೆಯಲ್ಲಿ “ದಾಯಾದಿಗಳ ಕಲಹ ರಾಷ್ಟ್ರೀಯ ಗ್ರಂಥವಾಗಬೇಕೆ?” ಎಂಬ ಶೀರ್ಷಿಕೆ ಅಡಿಯಲ್ಲಿ ಲೇಖನವೊಂದು ಪ್ರಕಟವಾಗಿತ್ತು.

ಭಗವದ್ಗೀತೆಯ ವ್ಯಾಪ್ತಿಯ ಬಗ್ಗೆ, ಮಹತ್ವದ ಬಗ್ಗೆ ಸೂಕ್ತವಾದ ಅರಿವು ಇಲ್ಲದೇ ಬರೆದಂತಹ ಈ ಲೇಖನಕ್ಕೆ ಪ್ರತಿಕ್ರಿಯೆ ನೀಡುವ ನಿಟ್ಟಿನಲ್ಲಿ ಈ ಕೆಳಗಿನ ಲೇಖನವನ್ನು ಬರೆಯಲಾಗಿದೆ.

—————————————————————————————————-

“ಭಗವದ್ಗೀತೆಯನ್ನು ಅಭ್ಯಸಿಸಿ, ಭಗವಂತನ ಈ ಸೃಷ್ಠಿಯ ಪರಿಕಲ್ಪನೆಯನ್ನು ತಿಳಿದ ಅರಿವಿನ ಮುಂದೆ ಜಗತ್ತಿನಲ್ಲಿ ಅಸ್ಥಿತ್ವದಲ್ಲಿರುವ ಸಮಸ್ತ ಅಂಶಗಳು ಗೌಣವೆನಿಸುತ್ತವೆ” – ಆಲ್ಬರ್ಟ್ ಐನ್‌ಸ್ಟೈನ್.

“ಜೀವನದಲ್ಲಿ ಸಂದೇಹಗಳು ನನ್ನ ಕಾಡಿದಾಗ, ದುಃಖ, ಭ್ರಮನಿರಸನಗಳು ಎದುರಾದಾಗ, ಯಾವುದೇ ಆಶಾಕಿರಣಗಳು ಗೋಚರಿಸದಿದ್ದಾಗ, ಭಗವದ್ಗೀತೆಯ ಕಡೆ ನಾನು ಮುಖಮಾಡುತ್ತೇನೆ, ಮರುಕ್ಷಣ ದುಃಖ ದುಮ್ಮಾನಗಳು ಕರಗಿ, ಮನಸ್ಸಿನನಲ್ಲಿ ವಿಶ್ವಾಸದ ಮಂದಹಾಸ ಮೂಡುತ್ತದೆ. ಭಗವದ್ಗೀತೆಯನ್ನು ಧ್ಯಾನಿಸುವ ವ್ಯಕ್ತಿಯು ನಿರಂತರ ಸುಖಿಯಾಗುತ್ತಾನೆ, ಪ್ರತಿನಿತ್ಯವೂ ಜೀವನದ ಹೊಸ ಹೊಸ ಅರ್ಥಗಳನ್ನು ತಿಳಿಯುತ್ತಾನೆ” – ಮಹಾತ್ಮಾ ಗಾಂಧಿ.

ಮತ್ತಷ್ಟು ಓದು »

6
ಡಿಸೆ

ರಾಮ ಜನ್ಮಭೂಮಿ/ಬಾಬರಿ ವಿವಾದ : ಭೂತಕಾಲದ ತಪ್ಪುಗಳು ಭವಿಷ್ಯಕ್ಕೆ ಭಾರವಾಗಬಾರದು

– ರಾಕೇಶ್ ಶೆಟ್ಟಿ

Ayodhya Issue and Unityಮುಂಬೈನಿಂದ ನಾನು ಬೆಂಗಳೂರಿಗೆ ಹೊರಟಿದ್ದ ಸೆಪ್ಟಂಬರ್ ೩೦,೨೦೧೦ರ ಗುರುವಾರದ ಆ ದಿನ ಉಳಿದ ದಿನಗಳಂತೆ ಇರಲಿಲ್ಲ.ಒಂದು ಬಗೆಯ ಕುತೂಹಲ,ಕಾತರ,ಆತಂಕಗಳು ಭಾರತದ ಬಹುತೇಕರಲ್ಲಿ ಮನೆ ಮಾಡಿದ್ದ ದಿನವದು.ಅಲಹಬಾದ್ ಉಚ್ಚ ನ್ಯಾಯಾಲಯ ಅಯೋಧ್ಯೆಯ “ರಾಮ ಜನ್ಮ ಭೂಮಿ/ಬಾಬರಿ ಮಸೀದಿ” ವಿವಾದದ ಕುರಿತು ತೀರ್ಪು ನೀಡುವ ದಿನವಾಗಿತ್ತದು.ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಹಳಷ್ಟು ಮುನ್ನೆಚ್ಚರಿಕೆಯ ಕ್ರಮ ಕೈಗೊಂಡಿದ್ದವು,ಸೂಕ್ಷ್ಮ,ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಖಾಕಿ ಪಡೆಯ ಕಣ್ಗಾವಲಿತ್ತು.ಜನರ ಜೊತೆಗೆ ವಿಶೇಷವಾಗಿ ಟಿ.ಆರ್.ಪಿ ಮಾಧ್ಯಮಗಳು ಕೂಡ ಸಂಯಮದಿಂದ ವರ್ತಿಸಬೇಕು ಎನ್ನುವ ಮನವಿಗಳು ಸರ್ಕಾರದಿಂದಲೇ ಬರುತಿತ್ತು.ಮಧ್ಯಾಹ್ನ ೩.೩೦ರ ಸುಮಾರಿಗೆ ತೀರ್ಪು ಹೊರಬರಲಿದೆ ಎನ್ನುವ ಸುದ್ದಿಗಳು ಹರಿದಾಡುತಿದ್ದವು.ನನ್ನ ವಿಮಾನವಿದ್ದಿದ್ದು ಸಂಜೆಯ ವೇಳೆಗೆ.ಆದರೆ,ಬಾಬರಿ ಮಸೀದಿ ಧರಾಶಾಹಿಯಾದ ಮೇಲೆ ಭೀಕರ ದಂಗೆಗೆ ಸಾಕ್ಷಿಯಾಗಿದ್ದ ಮುಂಬೈನಲ್ಲಿ ತೀರ್ಪು ಹೊರಬಂದ ಮೇಲೆ ಏನಾದರೂ ಆಗಬಾರದ್ದು ಶುರುವಾದರೇ,ಅದಕ್ಕೂ ಮುಖ್ಯವಾಗಿ ನಾನು ಹೋಗಬೇಕಾದ ದಾರಿಯಲ್ಲೇ “ಅತಿ ಸೂಕ್ಷ್ಮ ಪ್ರದೇಶ”ಗಳು ಇದ್ದವಾದ್ದರಿಂದ,ಸೇಫರ್ ಸೈಡ್ ಎಂಬಂತೆ ತುಸು ಬೇಗವೇ ನಾನು ಮತ್ತು ನನ್ನ ಸಹುದ್ಯೋಗಿ ಕ್ಯಾಬ್ ಹತ್ತಿಕೊಂಡೆವು.

ಕ್ಯಾಬ್ ಹೊರಟಂತೇ,ಡ್ರೈವರ್ ಅನ್ನು ಮಾತಿಗೆಳೆದೆ.”ಇವತ್ತು ತೀರ್ಪು ಬರಲಿಕ್ಕಿದೆಯಲ್ಲ.ನಿಮಗೇನನ್ನಿಸುತ್ತದೆ,ಆ ಜಾಗ ಯಾರಿಗೆ ಸೇರಿಬೇಕು ನಿಮ್ಮ ಪ್ರಕಾರ?”.ಅವರು ನನ್ನತ್ತ ತಿರುಗಿ “ತಪ್ಪು ತಿಳಿಯಬೇಡಿ ಸರ್.ನಿಮ್ಮ ಪ್ರಶ್ನೆಯೇ ಸರಿಯಿಲ್ಲ.ಜಾಗ ಯಾರಿಗೆ ಸೇರಬೇಕು ಎನ್ನುವುದು ‘ಅಹಂ’ನ ಪ್ರಶ್ನೆಯಾಗುತ್ತದೆ.ಆ ಅಹಂ ಮುಂದೇ ಪ್ರತಿಷ್ಟೆ, ದ್ವೇಷವನ್ನಷ್ಟೇ ಹೊರಡಿಸುತ್ತದೆ.ಅಸಲಿಗೆ ಇದು “ನಂಬಿಕೆ”ಯ ಪ್ರಶ್ನೆ.ಈ ಸಮಸ್ಯೆಯ ಪರಿಹಾರವಾಗಬೇಕಿರುವುದು ಪರಸ್ಪರ ಸಂವಾದ,ಸಾಮರಸ್ಯ,ಶಾಂತಿಯ ಅನುಸಂಧಾನದಿಂದಲೇ ಹೊರತು, ಇದು ಸರ್ಕಾರ,ನ್ಯಾಯಾಲಯದಲ್ಲಿ ಇತ್ಯರ್ಥವಾಗುವ ವಿಷಯವಲ್ಲ.ಆ ಜಾಗ ರಾಮ ಜನ್ಮಭೂಮಿಯೆಂಬುದು ಹಿಂದೂಗಳ ನಂಬಿಕೆಯಾಗಿದೆ.ಮೊಘಲ ಬಾಬರ್ ಆದೇಶಂತೆ ಅಲ್ಲಿದ್ದ ಮಂದಿರವೊಂದನ್ನು ಕೆಡವಿ ಅದರ ಮೇಲೆ ಮಸೀದಿಯನ್ನು ನಿರ್ಮಿಸಲಾಗಿರುವ ವಾದವಿದೆಯಲ್ಲ ಸರ್ ಅದು ನಿಜವೇ ಆದರೆ,ಅಲ್ಲಿ ಮಂದಿರವೇ ನಿರ್ಮಾಣವಾಗಬೇಕು.ಯಾಕೆಂದರೆ ರಾಮ,ರಾಮಾಯಣ,ಕೃಷ್ಣ,ಮಹಾಭಾರತವೆಲ್ಲ ಈ ದೇಶದ ಜನರಿಗೆ ಕೇವಲ ಪುರಾಣಗಳಲ್ಲ.ಅವು ಜನರ ಜೀವನದ ಭಾಗಗಳು.ಹೀಗಿರುವಾಗ ಅಲ್ಲಿನ ಜನರ ನಂಬಿಕೆಗಳಿಗೆ ಬೆಲೆ ಕೊಟ್ಟು ಬಾಬರಿನಿಂದ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು” ಎಂದ.

ಮತ್ತಷ್ಟು ಓದು »

1
ಡಿಸೆ

ತುಳುನಾಡ ನಂಬಿಕೆಗಳು…

– ಭರತೇಶ ಆಲಸಂಡೆಮಜಲು

ತುಳುನಾಡುಬಾಳಿಗೊಂದು ನಂಬಿಕೆ ಎಂಬಂತೆ, ಈ ಬಾಹ್ಯ ಜಗತ್ತು ನಂಬಿಕೆಯ ತಲೆದಿಂಬುನಿಟ್ಟು ಮಲಗಿದೆ. ಈ ನಂಬಿಕೆಯಲ್ಲಿ ಎಲ್ಲವೂ ಶೂನ್ಯ ಆಕಾಶ ಅನಂತವಾದರೆ, ಅಣು ಪರಮಾಣುಗಳು ಎನೋ ಕತ್ತಲಲ್ಲಿ ತೇಲುವ ಸೂಕ್ಷ್ಮ ಜೀವಿ, ಆ ಆಗಾಧ ಶಕ್ತಿಯ ಕೊಲ್ಮಿಂಚು ಎಲ್ಲೋ ಹುಟ್ಟಿ ಶಕ್ತಿಯ ಅದುಮಿದ ಶೂನ್ಯ, ಸತ್ಯದ ಜಗದಲ್ಲಿ ನಾವೊಂದು ಭ್ರಾಮರಕ ನಿರ್ಮಿತಿಗಳು ಅದೇ ನಿರಾಕಾರ, ನಿರ್ಗುಣ, ನಿರಾಮಯ, ಆಗೋಚರ ಬ್ರಹ್ಮಾಂಡದ ಸ್ವರೂಪಗಳು ನಮ್ಮ ನಮ್ಮ  ಜ್ಞಾನದ ಅಳತೆಯೊಳಗೆ…. “ನೈಜ ಜಗತ್ತಿನಲ್ಲಿ ಬಣ್ಣಗಳೇ ಇಲ್ಲ, ವಾಸನೆಯೂ ಇಲ್ಲ, ಮೃದುತ್ವ ಕಾಠೀಣ್ಯಗಳು ಇಲ್ಲ, ಅವೆಲ್ಲ ಏನಿದ್ದರೂ ನಮ್ಮ ನಿಮ್ಮ ಮಿದುಳಿನಲ್ಲಿ ನಮ್ಮ ನಿಮ್ಮ ಜ್ಞಾನದಲ್ಲಿ” ಎಂದು ಪ್ರಸಿದ್ಧ ನರ ವಿಜ್ಞಾನಿ ನೋಬೆಲ್ ವಿಜೇತ ಸರ್ ಜಾನ್ ಐಕೆಲ್ಸ್ ಹೇಳಿದ್ದಾರೆ.

ನಮ್ಮ ಯೋಚನಾ ಲಹರಿಯ ಶೂನ್ಯ ಜಾಗಗಳಲ್ಲಿ ಈ ನಂಬಿಕೆಗಳು ಅಚ್ಚಳಿದು ನಿಂತಿದೆ ನಮ್ಮ ನಂಬಿಕೆಗಳೇ ಹಾಗೆ ಅದು ಪ್ರಕೃತಿಯ ಅರಾಧನೆಯಿಂದ ಹಿಡಿದು ಗುರು ಹಿರಿಯರ ಪೂಜನೆಯವರೆಗೆ ಅದರಲ್ಲೂ ಕರಾವಳಿ ಇವೂಗಳ ಗೂಡು, ಬೀಡು. ಹಲವಾರು ವೈಶಿಷ್ಟ, ವಿಶೇಷ, ಆಚರಣೆ, ಅರಾಧನೆ, ಪಾಲನೆ ಇವುಗಳಿಂದಾಗಿ ವಿಶ್ವವ್ಯಾಪ್ತಿಯಲ್ಲಿ ಛಾಪನ್ನು ಮೂಡಿಸಿದೆ.  ಎಲ್ಲರ ಮಂದ ದೃಷ್ಠಿ ಇತ್ತ ಕಡೆ ನೆಡುವಂತೆ ಮಾಡಿದೆ. ಇಲ್ಲಿನ ಆಚರಣೆ ಒಂದನ್ನು ಮೀರಿಸುವ ಇನ್ನೊಂದು ಪ್ರಬುದ್ಧವಾದದ್ದು. ಪ್ರಪಂಚದ ಬೇರೆ ಯಾವೂದೇ ಕೋಣೆಯಲ್ಲೂ ಅರಸಿ ಹುಡುಕಿದರೂ ಬಯಸಿ ಸಿಗಲಾರದು. ಯಾವುದೋ ಪೂವಾಗ್ರಹದ ನೆಲೆಯಲ್ಲಿ ತುಳುನಾಡು ತನ್ನ ಭವ್ಯ ಸಂಸ್ಕೃತಿಯ ಕಣಜದ ನೆಲೆಯಲ್ಲಿ ಇನ್ನೂ ಆಚರಣೆಗಳು ಉಳಿದು ನಡೆಯುತಿದೆ. ಒಂದಷ್ಟು ಜಿಜ್ಞಾಸೆ, ವಿಮರ್ಶೆಗಳಿಂದ ಮತ್ತಷ್ಟು ಪ್ರಚಾರವಾಗಿ ಇನ್ನಷ್ಟು ಗಟ್ಟಿಯಾಗಿ ತುಳುವರ ಮನಗಳಲ್ಲಿ ಅಗೆಲುಗಳ ರೂಪದಲ್ಲಿ ಭಾವುಕವಾಗಿ ಬೆಚ್ಚಗೆ ಕುಳಿತಿದೆ.

ಮತ್ತಷ್ಟು ಓದು »

24
ನವೆಂ

ಕಾನೂನಿನ ಹೆಸರಲ್ಲಿ ಮರೆಯಾಗಲಿದೆಯೆ ಕರಾವಳಿಯ ಕಂಬಳ ಕ್ರೀಡೆ?

– ರಾಘವೇಂದ್ರ ಅಡಿಗ. ಹೆಚ್.ಎನ್

ಕಂಬಳಶತಮಾನಗಳ ಇತಿಹಾಸ ಹೊಂದಿರುವ ಕರ್ನಾಟಕದ ಕರಾವಳಿಯಲ್ಲಿನ ಕಂಬಳ ಕ್ರೀಡೆಗೆ ಇದೀಗ ಕಂಟಕವು ಎದುರಾಗಿದೆ. ಹೋರಿಗಳನ್ನು ಹಿಂಸಾತ್ಮಕವಾಗಿ ಬೆದರಿಸುವ ತಮಿಳುನಾಡಿನ ಜಲ್ಲಿಕಟ್ಟು ಸ್ಪರ್ಧೆ ಮತ್ತು ಮಹಾರಾಷ್ಟ್ರದ ಎತ್ತಿನ ಗಾಡಿ ಓಟದ ಸ್ಪರ್ಧೆಯನ್ನು ಸುಪ್ರೀಂ ಕೋರ್ಟ್ 2014ರ ಮೇ 7ರಂದು ನಿಷೇಧಿಸಿ ಆದೇಶ ಹೊರಡಿಸಿತ್ತು. ಪ್ರಾಣಿಗಳನ್ನು ಮನರಂಜನೆಗಾಗಿ ಹಿಂಸಾತ್ಮಕವಾಗಿ ನಡೆಸಿಕೊಳ್ಳಬಾರದು ಎಂಬುದು ನ್ಯಾಯಾಲಯದ ತೀರ್ಪಿನ ತಾತ್ಪರ್ಯವಾಗಿತ್ತು. ಇದೀಗ ಸುಪ್ರೀಂ ಕೊರ್ಟ್ ತೀರ್ಪಿನ ಹಿನ್ನೆಲೆಯನ್ನಿಟ್ಟುಕೊಂಡು ಭಾರತೀಯ ಪ್ರಾಣಿಗಳ ಕಲ್ಯಾಣ ಮಂಡಳಿ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಕಂಬಳ ನಡೆಸದಂತೆ ಸೂಚಿಸಿದೆ. ಹೀಗಾಗಿ ದ.ಕ ಜಿಲ್ಲಾಡಳಿತದ ಕ್ರೀಡೆಗೆ ನಿಷೇಧ ಹೇರಿದೆ. ಈ ಹಿನ್ನೆಲೆಯಲ್ಲಿ ಕಂಬಳದ ಆಚರಣೆ, ಇತಿಹಾಸ, ಹಿನ್ನೆಲೆಯ ಮೇಲೆಂದು ಇಣುಕು ನೋಟವಿಲ್ಲಿದೆ.

ಕರಾವಳಿ ಕರ್ನಾಟಕದ ಬೇಸಾಯ ವೃತ್ತಿಯೇ ಪ್ರಮುಖವಾಗಿರುವ ಸಮಾಜದಲ್ಲಿ ಕೋಣಗಳು ಅವರ ಬದುಕಿನ ಅವಿಭಾಜ್ಯ ಅಂಗವಾಗಿ ಹೋಗಿದೆ.  ಬೇಸಾಯಗಾರರು ಭತ್ತದ ಗದ್ದೆಗಳಲ್ಲಿ ಉತ್ತಿದ ಬಳಿಕ ಕೋಣ ಎತ್ತುಗಳನ್ನು ಓಡಿಸುತ್ತಿದ್ದ ಆಚರಣೆ ಮತ್ತು ಆಟ ‘ಕಂಬಳ’. ಕಂಬಳ ಅತವಾ ತುಳು ಭಾಷೆಯಲ್ಲಿ ಹೇಳುವಂತೆ ‘ಕಂಬುಲ’ ಎಂದರೆ ಉಳುವುದಕ್ಕೆ ಮತ್ತು ಬೀಜಗಳ ಬಿತ್ತನೆಗೆ ಸಿದ್ದವಾಗಿರುವ ಕೆಸರುಗದ್ದೆ ಎಂದೇ ಹುರುಳು. ಕೆಸರುಗದ್ದೆಯಲ್ಲಿ, ಬಾಕಿಮಾರು ಗದ್ದೆಯಲ್ಲಿ, ಕಂಬಳ ಗದ್ದೆಯಲ್ಲಿ ದಪ್ಪನೆ ಮಯ್ಯ, ಸಾಕಿದ ಕೋಣಗಳನ್ನು ಓಡಿಸುವುದು ಒಂದು ಮನೋರಂಜನೆ ಆಟ. ಹೀಗೆಂದ ಮಾತ್ರಕ್ಕೆ ಕಂಬಳವು ಕೇವಲ ಕೋಣಗಳ ಓಟದ ಸ್ಪರ್ಧೆಯು ಮಾತ್ರವೇ ಎಂದು ತಿಳಿಯಬೇಕಿಲ್ಲ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿನ ರೈತರು ಭತ್ತದ ಕೊಯ್ಲಿನ ಬಳಿಕದಲ್ಲಿ ಮನರಂಜನೆಗಾಗಿ ಏರ್ಪಡಿಸುತ್ತಿದ್ದ ಆಟವಿದಾಗಿದ್ದು ಇಂತಹಾ ಆಚರಣೆಯ ಜತೆಗೆ ಸಾಂಸ್ಕೃತಿಕ, ಸಾಮಾಜಿಕ ಹಾಗೂ ಧಾರ್ಮಿಕ ನಂಬಿಕೆಯೂ ಮಿಳಿತಗೊಂಡಿದೆ.

ಮತ್ತಷ್ಟು ಓದು »

21
ನವೆಂ

ನಂಬಿಕೆ-ಮೂಢನಂಬಿಕೆ ಗೆರೆ ಎಳೆಯುವುದು ಹೇಗೆ?

– ಡಾ. ಶ್ರೀಪಾದ ಭಟ್,ಸಹಾಯಕ ಪ್ರಾಧ್ಯಾಪಕ

ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು, ಕರ್ನಾಟಕ

ಮೌಢ್ಯ ವಿರೋಧಬೆಂಗಳೂರಿನಲ್ಲಿ ಇನ್ನೂರಾ ಎಂಟು ಪ್ರಗತಿಪರ ಸ್ವಾಮೀಜಿಗಳೆಂದು ಕರೆದುಕೊಂಡಿರುವವರು ಮೂಢ ನಂಬಿಕೆ ನಿಷೇಧ ಕಾಯ್ದೆ ಜಾರಿಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ. ಸಂತೋಷ. ಯಾರಲ್ಲೂ ಮೌಢ್ಯ ಎಂಬುದು ಇರಬಾರದು. ಯಾಕೆಂದರೆ ನಾವೆಲ್ಲ ವೈಜ್ಞಾನಿಕ (ಹಾಗೆಂದರೇನು ಎಂಬುದೇ ಬೇರೆ ಚರ್ಚೆಯ ಸಂಗತಿ) ಯುಗದಲ್ಲಿದ್ದೇವೆ! ಈಗ ಧರಣಿ ಕುಳಿತಿದ್ದ ಸ್ವಾಮೀಜಿಗಳು ಕಾವಿ ಧರಿಸಿದ್ದಾರೆ, ಕೆಲವರು ವಿಭೂತಿಯನ್ನೂ ರುದ್ರಾಕ್ಷಿ ಮಾಲೆಯನ್ನೂ ಧರಿಸಿದ್ದಾರೆ. ಅನೇಕಾನೇಕ ಜನರ ನಂಬಿಕೆಯನ್ನು ಪ್ರತಿನಿಧಿಸುವ ಮಠಾಧೀಶರಾಗಿದ್ದಾರೆ. ಇವೆಲ್ಲದರ ಗೋಜಿಲ್ಲದೇ ಆರಾಮವಾಗಿ ದೇಶದ ಸಂವಿಧಾನಕ್ಕೆ ಅನುಸಾರವಾಗಿ ನಾನಂತೂ ಬದುಕುತ್ತಿದ್ದೇನೆ. ನನ್ನ ದೃಷ್ಟಿಯಲ್ಲಿ ಈ ಸ್ವಾಮೀಜಿಗಳ ವೇಷವೇ ಮೌಢ್ಯ. ಅವರು ಪ್ರತಿನಿಧಿಸುವ ಮಠಗಳೂ ಮೌಢ್ಯ. ಆದರೂ ಅವರು ಇವುಗಳಿಗೆ ಹೊರತಾದ ಯಾವುದೋ ಮೌಢ್ಯ ನಿಷೇಧದ ಬಗ್ಗೆ ಮಾತನಾಡುತ್ತಿದ್ದಾರೆ. ತಮಾಷೆ ಎಂದರೆ ನವೆಂಬರ್ ಎರಡನೆಯ ವಾರದಲ್ಲಿ ಸಿದ್ಧಗಂಗಾ ಕ್ಷೇತ್ರದಲ್ಲಿ ನಡೆದ ಸಂತರ ಸಮ್ಮೇಳನದಲ್ಲಿ ಪಾಲ್ಗೊಂಡು ಭಾರತೀಯ ಪ್ರಾಚೀನ ಪರಂಪರೆಯ ಉಳಿವಿನ ಪಣ ತೊಟ್ಟ ಕೆಲವು ಸ್ವಾಮೀಜಿಗಳೂ ಈ ಧರಣಿಯಲ್ಲಿದ್ದಾರೆ. ಮೂಢ ನಂಬಿಕೆ ನಿಷೇಧದ ಪಟ್ಟಿಯಲ್ಲಿರುವ ಪೂಜೆ, ಪಾದಪೂಜೆಯಾದಿಯಾಗಿ ಅನೇಕಾನೇಕ ಸಂಗತಿಗಳನ್ನು ಸದ್ಯ ಆಚರಿಸುತ್ತಿರುವ ಸ್ವಾಮೀಜಿಗಳು ಇವರು!

ಕೆಲವು ತಿಂಗಳುಗಳ ಹಿಂದೆ ರಾಜ್ಯದಲ್ಲಿ ಸರ್ಕಾರದಿಂದ ರಚಿತವಾದ ಸಮಿತಿಯೊಂದು ಮೂಢ ನಂಬಿಕೆ ನಿಷೇಧ ಕಾಯ್ದೆಯ ಕರಡು ಪ್ರತಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದೆ. ಅದಿನ್ನೂ ಸರ್ಕಾರದ ಪರಿಶೀಲನೆಯ ಹಂತದಲ್ಲೇ ಇದೆ. ಸಾರ್ವಜನಿಕ ಚರ್ಚೆಗೆ ಅದಿನ್ನೂ ತೆರೆದುಕೊಂಡಿಲ್ಲ. ಅದರಲ್ಲಿ ಹೇಳಲಾದ ಕೆಲವು ಸಂಗತಿಗಳು ಅಂತರ್ಜಾಲದ ಕೆಲವು ಮೂಲಗಳಿಂದ ಅಷ್ಟಿಷ್ಟು ಲಭ್ಯವಾಗಿದೆ. ಹತ್ತಾರು ಬಗೆಯ ಆಚಾರ ವಿಚಾರಗಳನ್ನು, ನಂಬಿಕೆ ನಿಷೇಧಗಳನ್ನು ಅನುಸರಿಸುವ ಆದರೂ ಜೊತೆಯಲ್ಲೇ ಬದುಕುವ ವೈವಿಧ್ಯಮಯ ಸಮಾಜ ನಮ್ಮದು. ಸಾಲದ್ದಕ್ಕೆ ಜನತಂತ್ರ ವ್ಯವಸ್ಥೆ ಬೇರೆ ಇದೆ. ಧಾರ್ಮಿಕ ಆಚರಣೆಯ ಸ್ವಾತಂತ್ರ್ಯ ಅಂದರೇನೆಂದು ನಾವು ಅನುಸರಿಸುವ ಸಂವಿಧಾನವೂ ಸ್ಪಷ್ಟವಾಗಿ ಹೇಳಿದೆ. ಇಂಥ ಪರಿಸ್ಥಿತಿಯಲ್ಲಿ ಸಾರ್ವಜನಿಕರ ಮುಕ್ತ ಚರ್ಚೆಗೆ ಕರಡನ್ನು ತೆರೆದು ಕೂಲಂಕಷವಾಗಿ ತಿದ್ದುಪಡಿ ಮಾಡದೇ ಸರ್ಕಾರ ನೇಮಿಸಿದ ಸಮಿತಿಯ ಕೆಲ ಸದಸ್ಯರ ಹಾಗೂ ತಾವು ಸಂದರ್ಶಿಸಿದ್ದೇವೆ ಎಂದು ಹೇಳಲಾದ ಆಯ್ದ ಕೆಲವರ ಅಭಿಪ್ರಾಯವನ್ನು ಸಮಾಜದ ಸಕಲರ ಅಭಿಪ್ರಾಯ ಎಂದು ಸ್ವೀಕರಿಸುವುದಾದರೂ ಹೇಗೆ? ಇಂಥ ಮೂಲಭೂತ ಸಂಗತಿ ಕರಡನ್ನು ಸರ್ಕಾರಕ್ಕೆ ಸಲ್ಲಿಸಿದಾಗಲೇ ಸಾಕಷ್ಟು ಚರ್ಚೆಯಾಗಿದೆ. ಅದಿರಲಿ.

ಮತ್ತಷ್ಟು ಓದು »