ಪ್ರತ್ಯೇಕ ಪಂಕ್ತಿ ಭೋಜನ : “ಸಂಪ್ರದಾಯ”ದ ಮುಸುಕಿನ “ಅನಾಗರೀಕ” ವರ್ತನೆಯ ಸುತ್ತ
– ರಾಕೇಶ್ ಶೆಟ್ಟಿ
ಉಡುಪಿಯ ಮಠ ಸದಾಕಾಲ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುತ್ತದೆ. ಅದರಲ್ಲೂ ಬಹುಪಾಲು ಅದು ಸುದ್ದಿಯಾಗುವುದು ವಿವಾದಗಳಿಂದಲೇ, ಹಲವು ಬಾರಿ ಅದು ಪೇಜಾವರ ಶ್ರೀಗಳ ಯಾವುದೋ ಹೇಳಿಕೆಯ ಮೂಲಕವೇ ಸುದ್ದಿಯಾದರೇ ಉಳಿದಂತೆ ಅದು ಮತ್ತೆ ಮತ್ತೆ ಸುದ್ದಿಯಾಗುವುದು ‘ಪ್ರತ್ಯೇಕ ಪಂಕ್ತಿ ಭೋಜನ’ದ ಕಾರಣಕ್ಕೆ.
ಏನಿದು ಮತ್ತೆ ಈ ವಿವಾದ ಅಂತ ನೋಡಲಿಕ್ಕೆ ಹೋದರೆ : ಕೃಷ್ಣ ಮಠದ ಭೋಜನ ಶಾಲೆಯಲ್ಲಿ ಶನಿವಾರ (ಏ 19) ಬಂಟ್ಸ್ ಸಮುದಾಯದ ಮಹಿಳೆಯೊಬ್ಬರು ತನ್ನ ಸ್ನೇಹಿತೆಯರ ಜೊತೆ ಊಟಕ್ಕೆ ಕುಳಿತಿದ್ದರು. ಮಹಿಳೆ ಊಟ ಮಾಡುತ್ತಿರುವ ಸಂದರ್ಭದಲ್ಲಿ ಮಠದ ಅಧಿಕಾರಿಗಳು ಬ್ರಾಹ್ಮಣರೇತರರಿಗೆ ಇಲ್ಲಿ ಊಟಕ್ಕೆ ಅವಕಾಶವಿಲ್ಲ ಎಂದು ಮಹಿಳೆಯನ್ನು ಊಟದ ಮಧ್ಯದಲ್ಲೇ ಎಬ್ಬಿಸಿದ್ದಾರೆ ಎನ್ನುವುದು ವಿವಾದ.
“ನಾನು ಉಡುಪಿ ಮೂಲದವಳು, ವೈದ್ಯಕೀಯ ಕ್ಷೇತ್ರದವಳು. ನಾನು ಚೌಕಿಯಲ್ಲಿ (ಬ್ರಾಹ್ಮಣರಿಗಾಗಿರುವಊಟದ ಹಾಲ್) ಊಟಕ್ಕೆ ಕುಳಿತಿಲ್ಲ.ಭೋಜನ ಶಾಲೆಯಲ್ಲಿ ಊಟಕ್ಕೆ ಕೂತೆ. ಅಲ್ಲಿ ಇತರ ಜಾತಿಯವರಿಗೆ ಊಟದ ವ್ಯವಸ್ಥೆ ಇಲ್ಲ ಎನ್ನುವುದಾದರೆ ಫಲಕ ಹಾಕಬೇಕಿತ್ತು. ತುಂಬಿದ ಊಟದ ಹಾಲಿನಲ್ಲಿ ಎಲ್ಲರ ಮುಂದೆ ನನ್ನನ್ನು ಊಟ ಮಾಡುತ್ತಿರಬೇಕಾದರೆ ಎಬ್ಬಿಸಿ ಹೊರಕ್ಕೆಕಳುಹಿಸಿದರು. ಸ್ನೇಹಿತೆಯರ ಮುಂದೆ ನನಗೆ ತುಂಬಾ ಅವಮಾನವಾಗಿದೆ.ನನಗಾದ ಪರಿಸ್ಥಿತಿ ಬೇರೆಯಾರಿಗೂ ಬರುವುದು ಬೇಡ “
ಇದು,ಉಡುಪಿಯ ಶ್ರೀಕೃಷ್ಣ ದೇವಸ್ಥಾನದ ಭೋಜನಶಾಲೆಯಿಂದ “ಅನಾಗರೀಕ”ರ ಕೈಯ್ಯಿಂದ ಹೊರಹಾಕಲ್ಪಟ್ಟ ಹೆಣ್ಣು ಮಗಳೊಬ್ಬಳ ನೋವಿನ ನುಡಿಗಳು.
ಈಗೀನ ಕಾಲದಲ್ಲೂ ಊಟಕ್ಕೆ ಕೂತವರನ್ನು ಅವರ ಚರ್ಮದ / ಜಾತಿಯ ಬಣ್ಣದಿಂದ ಗುರುತಿಸಿ ಎಬ್ಬಿಸುವ ಅನಾಗರೀಕರು ನಮ್ಮ ನಡುವೆ ಬದುಕುತಿದ್ದಾರೆ ಅನ್ನುವುದೇ ನಾಗರೀಕ ಸಮಾಜವೊಂದುತಲೆ ತಗ್ಗಿಸುವ ವಿಚಾರ. ಊಟದ ಸಮಯದಲ್ಲಿ ಮಾತ್ರ ಬೇರೆ ಜಾತಿಯವರು ಬೇಡ ಅನ್ನುವುದಾದರೇ,ಬೇರೆ ಜಾತಿಯವರು ಕೊಡುವ ದೇಣಿಗೆ,ಕಾಣಿಕೆಗಳೇಕೆ ಬೇಕು ಇವರಿಗೆ? ಪರಮಾತ್ಮ ಶ್ರೀ ಕೃಷ್ಣ ಇವರ ಖಾಸಗಿ ಸ್ವತ್ತಾದರೇ, ಹಾಗೆ ಹೇಳಿ ಬಿಡುವುದೊಳಿತು. ಆಗ ಯಾರು ಅಲ್ಲಿಗೆ ಹೋಗಿ ಹೀಗೆ ಅವಮಾನ ಮಾಡಿಸಿಕೊಂಡು ಬರಲಿಚ್ಛಿಸುವುದಿಲ್ಲ.
–*–*–*–
ಬಯಲಾಗುತ್ತಿರುವ ಬುದ್ಧಿಜೀವಿಗಳ ಮನೋಲೋಕ..!
-ರಮಾನಂದ ಐನಕೈ
ಪ್ರಭುತ್ವವನ್ನು ಓಲೈಸಿಕೊಳ್ಳದಿದ್ದರೆ ಸಾಹಿತಿಗಳಿಗೂ ಉಳಿಗಾಲವಿಲ್ಲದ ಪರಿಸ್ಥಿತಿ ನಿರ್ಮಿಸಿಕೊಂಡಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ, ಅಕಾಡೆಮಿಗಳ ಪ್ರಶಸ್ತಿಗಳು, ಅನುದಾನಗಳು, ಫೆಲೋಶಿಫ್ಗಳು, ವಿಶ್ವವಿದ್ಯಾಲಯಗಳ ಕುಲಪತಿತ್ವ ಮತ್ತು ವಿವಿಧ ಕಲಾಸಾಹಿತ್ಯ ಸಂಸ್ಥೆಗಳ ಹುದ್ದೆಗಳನ್ನು ಪಡೆಯಬೇಕಾದರೆ ದೊರೆಗಳ ಹಿಂದೆ ಬಹುಪರಾಕ್ ಹಾಕುತ್ತ ಓಡಾಡಬೇಕಾಗುತ್ತದೆ. ಅಂತೆಯೇ ರಾಜಕೀಯದವರಿಗೂ ಕೂಡ ಸಾಹಿತಿಗಳನ್ನು ಮತ್ತು ಕಲಾವಿದರನ್ನು ಹತ್ತಿಕ್ಕಿ ಮುನ್ನಡೆಯಲು ಸಾಧ್ಯವಿಲ್ಲ. ಏಕೆಂದರೆ ಕನ್ನಡ ನಾಡಿನ ಸಾಂಸ್ಕೃತಿಕ ಶರೀರವನ್ನು ಎತ್ತಿ ತೋರಿಸಿ ಇಲ್ಲೊಂದು ಭೌತಿಕ ಪ್ರಭುತ್ವಕ್ಕೆ ಅನುವು ಮಾಡಿಕೊಡುವಲ್ಲಿ ಸಾಹಿತಿಗಳ ಪಾತ್ರ ಹಿರಿದಾಗಿದೆ. ಜೊತೆಗೆ ಸಾಹಿತಿಗಳು ಭಾಷೆಯನ್ನು ಬೆಳೆಸುವವರು ಮತ್ತು ಉಳಿಸುವವರು ಎಂಬ ಸಾಮಾನ್ಯ ನಂಬಿಕೆ. ಹಾಗಂತ ಈ ನಂಬಿಕೆಯ ಹಿಂದಿನ ಸತ್ಯಾಸತ್ಯತೆಯನ್ನೂ ಯಾರೂ ಒರೆಗೆ ಹಚ್ಚಿಲ್ಲ ಆ ಪ್ರಶ್ನೆ ಬೇರೆ. ಹಾಗಾಗಿ ಕಳ್ಳರು ದೇವರನ್ನು ಬಳಸಿಕೊಂಡಂತೆ ರಾಜಕಾರಣಿಗಳು ಸಾಹಿತಿಗಳನ್ನು ಕಾಲಕ್ಕೆ ತಕ್ಕುನಾಗಿ ಉಪಯೋಗಿಸಿಕೊಳ್ಳುತ್ತಾರೆ. ಸಾಹಿತಿಗಳು ಚುನಾವಣೆಗಳಲ್ಲಿ ಭಾಗಿಯಾಗಬಾರದೆ? ಅವರಿಗೂ ವಾಕ್ ಸ್ವಾತಂತ್ರ್ಯವಿಲ್ಲವೆ? ಎಂಬಿತ್ಯಾದಿ ಹತ್ತಾರು ಪ್ರಶ್ನೆಗಳು ಕನ್ನಡದ ಸಾರಸ್ವತ ಲೋಕವನ್ನು ಆವರಿಸಿಕೊಂಡಿದೆ. ಆದರೆ ಈ ಪ್ರಶ್ನೆಗಳಿಗೆ ಉತ್ತರಿಸುವುದು ತಿಳಿದುಕೊಂಡಷ್ಟು ಸುಲಭವಾಗಿಲ್ಲ.
ಕರ್ನಾಟಕದಲ್ಲಿ ಪಕ್ಷಗಳ ಪರವಾಗಿ ಸಾಹಿತಿಗಳು ಅಖಾಡಕ್ಕೆ ಇಳಿದಿದ್ದಾರೆ. ಮೊದಲು ಪ್ರಾರಂಭಿಸಿದವರು ಕಾಂಗ್ರೇಸ್ ಪರವಾದ ಸಾಹಿತಿಗಳು. ಅದಕ್ಕೆ ವಿರೋಧವಾಗಿ ಪ್ರತಿಕ್ರಿಯಿಸಿದ ಒಂದಿಷ್ಟು ಸಾಹಿತಿಗಳಿಗೆ ಬಿ.ಜೆ.ಪಿ.ಪಟ್ಟ ಕಟ್ಟಲಾಯಿತು. ಇಲ್ಲಿ ಯಾರು ಯಾರನ್ನು ಸಮರ್ಥಿಸಿದರು ಎಂಬುದು ವಾದಕಾರಣವಲ್ಲ. ಕೆಲವು ಸಾಹಿತಿಗಳು ಪಕ್ಷರಾಜಕಾರಣವನ್ನು ಆತುಕೊಂಡು ತಮ್ಮ ಅಪಕ್ವ ನಿಲುವುಗಳನ್ನು ಹೊರಗೆಡಹಿದ ರೀತಿ ಮಾತ್ರ ತೀರಾ ಹಾಸ್ಯಾಸ್ಪದವಾಗಿದೆ. ಅಹಿಂದ್ ವಿದ್ಯಾರ್ಥಿಗಳಿಗೆ ಮಾತ್ರ ಪ್ರವಾಸ, ಭಾರತೀಯ ಸಂಪ್ರದಾಯಗಳೆಲ್ಲ ಮೂಢನಂಬಿಕೆಗಳಾದ್ದರಿಂದ ನಿಷೇಧಿಸಬೇಕು, ಮದುವೆಯಾದ ಮುಸ್ಲಿಮ ಮಹಿಳೆಯರಿಗೆ ಮಾತ್ರ ಮಂಚ ಮುಂತಾದ ಸರ್ಕಾರಿ ಘೋಷಣೆಗಳಿಗೆಲ್ಲ ತುಟಿ ಪಿಟಕ್ಕೆನ್ನದೆ ಕುಳಿತ ಸಮನ್ವಯವಾದಿಗಳು ಈ ಚುನಾವಣಾ ಪ್ರಕರಣದ ಮೂಲಕ ತಾವು ನಿರ್ದಿಷ್ಟ ಪಕ್ಷದ ಮುಖವಾಣಿಗಳು ಎಂಬುದನ್ನು ಸಾಬೀತು ಮಾಡಿದರು. ಮತ್ತಷ್ಟು ಓದು 
ರಿಲಿಜನ್ನಿನ ಅಫೀಮು “ಶಂಕರಾಚಾರ್ಯ ಹಿಲ್” ಅನ್ನು “ತಖ್ತ್-ಈ-ಸುಲೇಮಾನ್” ಆಗಿಸುತ್ತದೆ
– ರಾಕೇಶ್ ಶೆಟ್ಟಿ
ಬೆಳಗ್ಗೆ ಎದ್ದು ನಮ್ಮಲ್ಲಿ ಕೆಲವರು ಹೇಳುತಿದ್ದ “ನಮಸ್ತೆ ಶಾರದ ದೇವಿ ಕಾಶ್ಮಿರಪುರವಾಸಿನಿ||” ಅನ್ನುವ ಉದ್ಘೋಷವನ್ನು ಇನ್ಮುಂದೆ ಬದಲಾಯಿಸಬೇಕಾದ ಅನಿವಾರ್ಯತೆ ಬರಬಹುದು ಅನ್ನಿಸುತ್ತಿದೆ.ಯಾಕೆಂದರೆ, ನಮ್ಮ ’ಭಾರತೀಯ ಪುರಾತತ್ವ ಇಲಾಖೆ’ ಮಾಡುತ್ತಿರುವ ಕೆಲಸವೇ ಅಂತದ್ದು.
ಟ್ರಿಬ್ಯೂನ್ ಪೇಪರಿನಲ್ಲಿ ಬಂದ ವರದಿಯ ಪ್ರಕಾರ,ಜಮ್ಮು-ಕಾಶ್ಮೀರದ “ಶಂಕರಾಚಾರ್ಯ ಹಿಲ್” ಅನ್ನು ಭಾರತೀಯ ಪುರಾತತ್ವ ಇಲಾಖೆ “ತಖ್ತ್-ಈ-ಸುಲೇಮಾನ್” ಅಂತ ಬದಲಾಯಿಸಿದೆ.ಕಾಶ್ಮೀರವನ್ನು ಈ ಹಿಂದೆ ಶಾರದ ದೇಶ,ಶಾರದ ಪೀಠ ಅಂತೆಲ್ಲ ಕರೆಯುತಿದ್ದರು.ಮೇಲೆ ಹೇಳಿದ್ದ “ನಮಸ್ತೆ ಶಾರದ ದೇವಿ ಕಾಶ್ಮಿರಪುರವಾಸಿನಿ||” ಅದನ್ನೇ ಸಾರುತ್ತಿದೆ.ಇನ್ನು ಶಂಕರಾಚಾರ್ಯರು ದೇಶದ ನಾಲ್ಕು ಮೂಲೆಗಳಿಗೂ ಸಾಗಿ ಶಾರದ ಪೀಠಗಳನ್ನು ಸ್ಥಾಪಿಸಿದ್ದು ಎಲ್ಲರಿಗೂ ತಿಳಿದಿರುವುದೇ,ಹಾಗಿದ್ದ ಮೇಲೆ,ಇವನೆಲ್ಲಿಂದ ಬಂದ ಸುಲೇಮಾನ್?
ದಾಲ್ ನದಿಯ ಕಡೆಗೆ ಮುಖಮಾಡಿ ನಿಂತಿರುವ ಈ ಪರ್ವತವಿರುವುದು ಶ್ರೀನಗರದಲ್ಲಿ.ಇದೇ ಜಾಗದಲ್ಲಿ ಆದಿ ಶಂಕರಾಚಾರ್ಯರು 788-820 ADರಲ್ಲಿ ನೆಲೆಸಿದ್ದರು ಅನ್ನುತ್ತದೆ ಇತಿಹಾಸ.ಪಂಡಿತ್ ಆನಂದ್ ಕೌಲ್ ಅವರ ಪ್ರಕಾರ ಈ ದೇವಸ್ಥಾನದ ನಿರ್ಮಾಣ ಮಾಡಿದ್ದು ಸಂಡಿಮನ್ ಎಂಬುವವ 2629 -2564 BC ಯಲ್ಲಿ.ಆ ನಂತರ ರಾಜ ಗೋಪಾದಿತ್ಯ 426–365 BCರಲ್ಲಿ ಮತ್ತು ರಾಜ ಲಲಿತಾಧಿತ್ಯ 697–734BC ರಲ್ಲಿ ಇದರ ಪುನುರುಜ್ಜೀವನ ಮಾಡಿಸಿದ್ದರು.ಝೈನ್-ಉಲ್-ಅಬಿದ್ದೀನ್ ಅವರು ದೇವಸ್ಥಾನದ ಮೇಲ್ಛಾವಣಿಯನ್ನು ದುರಸ್ತಿ ಮಾಡಿಸಿದ್ದರು.1841–1846ರಲ್ಲಿ ಸಿಖ್ ಗವರ್ನರ್ ಶೇಕ್ ಗುಲಾಂ ಮೊಹಿದುದ್ದೀನ್ ಕೂಡ ದುರಸ್ತಿ ಮಾಡಿಸಿದ್ದರು.ಇದನ್ನು ಜ್ಯೋತೇಶ್ವರ ದೇವಸ್ಥಾನವೆಂದು ಕರೆಯಲಾಗುತಿತ್ತು.ಬೌದ್ಧರಿಗೂ ಪೂಜ್ಯನೀಯವಾದ ಸ್ಥಳವಿದು.ಅವರಿದನ್ನು ಪಾರಸ್- ಪಹಾರ್ ಅನ್ನುತ್ತಾರೆ.ಶಂಕರರು ಇಲ್ಲಿ ಶಿವಲಿಂಗ ಪ್ರತಿಷ್ಟಾಪಿಸಿದ್ದರು.ಶಂಕರರು ಇಲ್ಲಿ ಬಂದನಂತರ,ಈ ಪರ್ವತ ಮತ್ತು ದೇವಸ್ಥಾನವನ್ನು ಶಂಕರಾಚರ್ಯರ ಹೆಸರಿನಿಂದಲೇ ಗುರಿತಿಸಲಾಗುತ್ತಿದೆ.
ಕಾಮನ ಹಬ್ಬ
– ಹಂಸಾನಂದಿ
ಇವತ್ತು ಫಾಲ್ಗುಣದ ಹುಣ್ಣಿಮೆ. ಅಂದ್ರೆ ಕಾಮನ ಹಬ್ಬ. ಶಿವ ಮನ್ಮಥನ ಮುಂದೆ ತನ್ನ ಹಣೆಗಣ್ಣನ್ನ ತೆರೆದು ಅವನ ಸುಟ್ಟ ದಿನವೇ ಇದು ಅನ್ನೋದು ನಮ್ಮ ನಂಬಿಕೆ. ಈ ದಿನವೇ ಅವನು ಮನ್ಮಥನನ್ನು ಸುಟ್ಟು, ನಂತರ ಅಲ್ಲೇ ಸುಳಿಯುತ್ತಿದ್ದ ಪಾರ್ವತಿಯನ್ನು ಕಂಡು, ಅವಳನ್ನು ಮೆಚ್ಚಿ ಮದುವೆಯಾಗಿದ್ದು; ವಿರಕ್ತರಲ್ಲಿ ವಿರಕ್ತನಾಗಿದ್ದ ಶಿವನು ಪ್ರೇಮಿಗಳಲ್ಲಿ ಪ್ರೇಮಿಯಾಗಿ ಕಂಗೊಳಿಸಿದ್ದು, ನಂತರ ಷಣ್ಮುಖ ಹುಟ್ಟಿದ್ದು ಇದೇ ಕಾಳಿದಾಸನ ಕುಮಾರ ಸಂಭವ ಕಾವ್ಯದ ಮುಖ್ಯ ಹೂರಣ.
ಅದಕ್ಕೇ ಶಿವನನ್ನು ಭರ್ತೃಹರಿ ತನ್ನ ಶೃಂಗಾರ ಶತಕದಲ್ಲಿ ಹೀಗೆ ಕೊಂಡಾಡುತ್ತಾನೆ: (ಪದ್ಯ -೯೭)
ಏಕೋ ರಾಗಿಷು ರಾಜತೇ ಪ್ರಿಯತಮಾದೇಹಾರ್ಧಧಾರೀ ಹರೋ
ನೀರಾಗಿಷ್ವಾಪಿ ಯೋ ವಿಮುಕ್ತ ಲಲನಾಸಂಗೋ ನ ಯಸ್ಮಾತ್ಪರಃ |
ದುರ್ವಾರ ಸ್ಮರಬಾಣಪನ್ನಗವಿಷಜ್ವಾಲಾವಲೀಢೋ ಜನಃ
ಶೇಷಃ ಕಾಮವಿಡಂಬಿತೋ ಹಿ ವಿಷಯಾನ್ ಭೋಕ್ತುಂ ನ ಮೋಕ್ತುಂ ಸಮಃ ||
(ಸಾರಾಂಶ: ಪ್ರೇಮಿಗಳಲ್ಲಿ ಅಗ್ರೇಸರನಾದವನು ತನ್ನ ದೇಹದ ಅರ್ಧಭಾಗದಲ್ಲೇ ತನ್ನ ಪ್ರಿಯೆ ಪಾರ್ವತಿಯನ್ನು ಧರಿಸಿ ಅರ್ಧನಾರೀಶ್ವರನಾದಂತಹ ಶಿವ. ಅದೇ ರೀತಿ ಅವನೇ ಹೆಣ್ಣಿನ ಸಂಗವನ್ನು ತೊರೆದ ವಿರಾಗಿಗಳಲ್ಲೂ ಅವನೇ ಅಗ್ರಗಣ್ಯ! ಅದಕ್ಕೇ ಅಲ್ಲವೇ ನಿವಾರಿಸಲಾರದ ಹಾವಿನ ವಿಷ ಜ್ವಾಲೆಯಂತಹ ಕಾಮಬಾಣಗಳನ್ನು ಅವನು ತಡೆಯಲು ಸಾಧ್ಯವಾಗಿದ್ದು? ಸಾಮಾನ್ಯ ಜನರಿಂದ ಆಗುವುದೇನು? ಪಾಪ, ಕಾಮಬಾಣಗಳಿಗೆ ಸಿಲುಕಿದರೆ ಅವರು, ಅನುಭವಿಸಲೂ, ಬಿಡಲೂ, ಒಂದೂ ಅರಿಯದೇ ಹೋಗುವರು!)
ಮತ್ತಷ್ಟು ಓದು 
ಧರ್ಮ ಅನಿವಾರ್ಯವೇ?
– ಪ್ರಸನ್ನ ಬೆಂಗಳೂರು
ಅಯ್ಯೋ! ನಮ್ಮ ದೇಶದಲ್ಲಿ ಕಾನೂನಿಗೆ ಬೆಲೆ ಇಲ್ಲ ಕಣ್ರೀ ಎಂದು ನಿರಾಶದಾಯಕ ಮಾತುಗಳನ್ನು ನಾವು ಕೇಳಿರುತ್ತೇವೆ.
ಅದಕ್ಕೆ ಕಾರಣವೇನು ಎಂಬುದನ್ನು ನಾವು ಎಂದಾದರೂ ಮನಗಾಣಲು ಪ್ರಯತ್ನಿಸಿದ್ದೇವೆಯೆ?
ಕಾನೂನು (ಧರ್ಮ) ಎನ್ನುವುದು ನಿರ್ಬಂಧ, (ಇಲ್ಲಿ ನಾನು ಧರ್ಮ ಎನ್ನುವುದನ್ನು ಕಾನೂನು ಎಂದೆ ಕರೆಯುತ್ತಿದ್ದೇನೆ ಕಾರಣ ಬಹುತೇಕರಿಗೆ ನಮ್ಮಲ್ಲಿ ಧರ್ಮವೆಂದಾಕ್ಷಣ ಒಂದು ತೆರನಾದ ಅಸಡ್ಡೆ ಅಥವ ಯಾವುದಕ್ಕೂ ಬೇಡದ ಅಥವ ನಾನು ಅದರಿಂದ ದೂರವಿದ್ದು ಎಲ್ಲ ಧರ್ಮೀಯರಿಗೂ ಒಳ್ಳೆಯವನು ಸಮಾನ ಎನಿಸಿಕೊಳ್ಳಬೇಕೆನ್ನುವ ಚಟವಿರುತ್ತದೆ ಹಾಗಾಗಿ ಧರ್ಮ ಎಂಬುದನ್ನು ಕಾನೂನೆಂದೆ ನಾನು ಸಂಬೋಧಿಸುತ್ತೇನೆ.ಅದು ಹೌದೂ ಕೂಡ) ಸಂಕೋಲೆ ಅದನ್ನು ಮುರಿಯುವುದು ಧಿಕ್ಕರಿಸುವುದು ಹದಿಹರೆಯದಲ್ಲಿ ಸಾಹಸದ ಕೆಲಸ ಎನಿಸಿಕೊಳ್ಳುತ್ತದೆ. ಅಂತಹ ಕಾರ್ಯವನ್ನು ಕೆಲವರು ಆಸ್ವಾದಿಸುತ್ತಾರೆ. ಭಾರತೀಯ ಸಂಪ್ರದಾಯದಲ್ಲಿ ಕಟ್ಟುನಿಟ್ಟಾಗಿ ಪಾಲಿಸಲೇಬೇಕೆಂಬ ನಿಯಮವಿಲ್ಲ. ಆದ್ದರಿಂದಲೇ ಇಲ್ಲಿ ಕಾನೂನು ಮುರಿಯುವುದು ತಪ್ಪಿನ ಕೆಲಸ ಎನಿಸಿಕೊಳ್ಳುವುದೇ ಇಲ್ಲ. ಎಲ್ಲವೂ ಸ್ವಯಂ ನಿಯಂತ್ರಣದ ನೈತಿಕತೆಯ ಮೇಲೆ ನಿಂತಿರುತ್ತದೆ. ಉದಾಹರಣೆಗೆ ರಾತ್ರಿ ಹನ್ನೆರಡು ಗಂಟೆಯಲ್ಲಿ ನಿರ್ಜನ ಪರಿಸ್ಥಿತಿಯಲ್ಲಿ ಹಸಿರು ದೀಪಕ್ಕಾಗಿ ಕಾಯುವುದಿಲ್ಲ. ಕಾರಣ ನನ್ನಿಂದ ಯಾರಿಗೂ ತೊಂದರೆಯಾಗುವುದಿಲ್ಲ ಎಂಬ ನೈತಿಕತೆಯಷ್ಟೇ ಇಲ್ಲಿ ಕೆಲಸ ಮಾಡುತ್ತದೆ.
ಸತ್ಕಾರದ ಸ್ವರೂಪ
-ಮಯೂರಲಕ್ಷ್ಮಿ
ಮನೆಗೆ ಬರುವ ಅತಿಥಿ ಅಭ್ಯಾಗತರನ್ನು ಆದರದಿಂದ ಸ್ವಾಗತಿಸಿ ಸತ್ಕರಿಸುವುದು ನಮ್ಮ ಭಾರತೀಯ ಸಂಸ್ಕೃತಿಯಷ್ಟೇ! ಸುಭಾಷಿತವೊಂದು ಹೀಗಿದೆ:
ಯ: ಸಾಯಮತಿಥಿಂ ಪ್ರಾಪ್ತಂ
ಯಥಾಶಕ್ತಿ ನ ಪೂಜಯೇತ್|
ತಸ್ಯಾಸೌ ದುಷ್ಕೃತಂ ದತ್ತ್ವಾ
ಸುಕೃತಂ ಚಾಪಕರ್ಪತಿ||
ಆರ್.ಕೆ ಶ್ರೀಕಂಠನ್ ಅವರೊಂದಿಗಿನ ಮಾತುಕತೆಯ ನೆನಪು
ಕರ್ನಾಟಕ ಸಂಗೀತದ ಹಿರಿಯ ಗಾಯಕರಾದ ಆರ್.ಕೆ ಶ್ರೀಕಂಠನ್ ಅವರು ನಿನ್ನೆ ವಿಧಿವಶರಾದರು.ತಮ್ಮ ೯೪ರ ವಯಸ್ಸಿನಲ್ಲೂ ಸಂಗೀತ ಕಛೇರಿಯನ್ನು ನಡೆಸಿಕೊಡುತಿದ್ದ ಶ್ರೀಕಂಠನ್ ಅವರ ಬಗ್ಗೆ ಹಂಸಾನಂದಿ ಹಾಗೂ ಪ್ರಭುಮೂರ್ತಿಯವರು ಉತ್ತರ ಕ್ಯಾಲಿಫೋರ್ನಿಯಾ ಕನ್ನಡಕೂಟದ ಪರವಾಗಿ ೨೦೦೮ರಲ್ಲಿ ನಡೆಸಿದ ಸಂದರ್ಶನವನ್ನು ಪ್ರಕಟಿಸುತಿದ್ದೇವೆ – ನಿಲುಮೆ
ಒಂದು ಮಾಘದ ತಂಪಿನಿರುಳಲಿ
ನಂದನದಿ ಸೇರಿರಲು ಸುರಗಣ
ಚಂದದಲಿ ತಲೆದೂಗಲಿಕೆ ನಾರದನ
ಗಾಯನಕೆ
ಇಂದದೇಕೋ ತನ್ನ ಹಾಡ
ಲ್ಲೊಂದು ಸೊಗಸೂ ಕಾಣದೆಯೆ ಕರೆ
ತಂದನೈ ಹಾಡಲಿಕೆ ಕರ್ನಾಟಕದ
ಕೋಗಿಲೆಯ!
ಧರ್ಮ ಅಂದರೇನು?
– ಸಚ್ಚಿದಾನಂದ ಹೆಗ್ಡೆ
ಫೇಸ್ ಬುಕ್ಕೂ ಸೇರಿದಂತೆ ನಮ್ಮ ಮಾತುಗಳಲ್ಲಿ, ಬರಹಗಳಲ್ಲಿ ಮತ್ತು ನಿತ್ಯದ ನಮ್ಮ ವ್ಯವಹಾರಗಳಲ್ಲಿ “ಧರ್ಮ” ಶಬ್ದ ಅಪಾರವಾದ ಅಪಾರ್ಥದಲ್ಲಿ ಬಳಕೆಯಾಗುತ್ತಿರುವುದನ್ನು ಕಂಡು ಮನಸ್ಸಿಗೆ ಅಸಹನೀಯವಾದ ಕಿರಿಕಿರಿ ಉಂಟಾಗುತ್ತದೆ. ಧರ್ಮಗುರುಗಳೂ ಸಹ ಈ ಶಬ್ದವನ್ನು ತಪ್ಪರ್ಥದಲ್ಲಿ ಬಳಸುವುದನ್ನು ಕಂಡಾಗ ಸಂಕಟವಾಗುತ್ತದೆ.
ಎಲ್ಲರೂ ಧರ್ಮ ಶಬ್ದವನ್ನು ಹೇಗೆ ಬಳಸುತ್ತಿದ್ದಾರೆ? ಕ್ರೈಸ್ತ ಧರ್ಮ, ಇಸ್ಲಾಮ್ ಧರ್ಮ, ಬೌದ್ಧ ಧರ್ಮ, ಜೈನ ಧರ್ಮ, ವೀರಶೈವ ಧರ್ಮ, ಸಿಖ್ ಧರ್ಮ ಇತ್ಯಾದಿ ಇತ್ಯಾದಿ. ನಿಜಕ್ಕೂ ಇವು ಧರ್ಮಗಳೇ? ಅಸಲಿಗೆ ಇವೆಲ್ಲ ಏನು?
ಧರ್ಮ ಶಬ್ದವನ್ನು ತಪ್ಪರ್ಥದಲ್ಲಿ ಬಳಸುವುದು ಆ ಶಬ್ದಕ್ಕೆ ಮಾಡುವ ಅಪಚಾರವಲ್ಲವೇ? ಅದು ಅಧರ್ಮವಾಗುವುದಿಲ್ಲವೇ? ಇದರ ಬಗ್ಗೆ ತಲಸ್ಪರ್ಶೀ ಚಿಂತನೆಯಾಗಲಿ ಎನ್ನುವುದು ನನ್ನ ಆಶಯ.ನನ್ನ ಅಭಿಪ್ರಾಯದಲ್ಲಿ ಧರ್ಮವು ದೇವರನ್ನು ಹುಡುಕುವ ನಿರ್ದಿಷ್ಟ ಮಾರ್ಗವಲ್ಲ. ಕ್ರೈಸ್ತ, ಇಸ್ಲಾಮ್, ಜೈನ, ಬೌದ್ಧ, ಸಿಖ್, ವೀರಶೈವ ಮುಂತಾದವು ದೇವರನ್ನು ಹುಡುಕುವ ಯಾ ಸಾಕ್ಷಾತ್ಕರಿಸಿಕೊಳ್ಳುವ ನಿರ್ದಿಷ್ಟ ದಾರಿಗಳು. ಆಯಾ ದಾರಿಗಳಲ್ಲಿ ಸಾಗುವವರಿಗೆ ಅವು ಶ್ರೇಷ್ಠ. ಆದರೆ ಎಲ್ಲರಿಗೂ ಎಲ್ಲ ದಾರಿಗಳು ಶ್ರೇಷ್ಠವಲ್ಲ ಮತ್ತು ಏಕಕಾಲದಲ್ಲಿ ಎಲ್ಲ ದಾರಿಗಳಲ್ಲಿ ಹೆಜ್ಜೆ ಹಾಕಲೂ ಸಾಧ್ಯವಿಲ್ಲ.
ಕೇವಲ ಬ್ರಾಹ್ಮಣರ ಟೀಕೆಗೆ ಮಾತ್ರ ಮೀಸಲೇ ಈ ಪತ್ರಿಕೆ?
– ವಿದ್ಯಾ ಕುಲಕರ್ಣಿ
ನವೆಂಬರ್ 18 ನೇ ತಾರೀಖಿನಿಂದ ಇವತ್ತಿನ ವರೆಗೆ ವಾತಾ೯ಭಾರತಿ ಪತ್ರಿಕೆಯಲ್ಲಿನ ಅಂಕಣಗಳನ್ನು ನಾನು ಓದುತ್ತಿದ್ದೇನೆ. ಸುಮಾರು ನಾಲ್ಕೈದು ಅಂಕಣಗಳು ಕಾರಣವಿಲ್ಲದೇ ಬ್ರಾಹ್ಮಣರ ಟೀಕೆಯನ್ನು ಮಾಡಿವೆ. ಯಾಕೆ ಹೀಗೆ ಇವರೆಲ್ಲ ಕಾರಣವಿಲ್ಲದೇ ಬ್ರಾಹ್ಮಣರನ್ನು ಹುರಿದು ಮುಕ್ಕುತ್ತಿದ್ದಾರೆ ? ಮನನೊಂದು ಈ ಲೇಖನ ಬರೆಯುತ್ತಿದ್ದೇನೆ.
ಯಾವ ಲೇಖನಗಳಲ್ಲಿ ಬ್ರಾಹ್ಮಣರನ್ನು ಎಳೆದು ತರುವ ಅವಶ್ಯಕತೆಯೇ ಇಲ್ಲವೋ ಅಲ್ಲೆಲ್ಲ ವಿನಾಕಾರಣ ಬ್ರಾಹ್ಮಣರನ್ನು ಎಳೆದು ತಂದು ಗೂಬೆ ಕೂರಿಸಿದ್ದಾರೆ . ಕೆಳಗಿನ ಉಧಾಹರಣೆಗಳಿಂದ ನೀವಿದನ್ನು ತಿಳಿಯಬಹುದು.
1) ವಿಜಯಾ ಮಹೇಶ್ ಎಂಬುವವರು ‘ ರಾಜ ಕನಕನಾಯಕ ಕನಕದಾಸನಾದ ಕಥೆ’ ಎಂಬ ಅಂಕಣದಲ್ಲಿ ಕನಕದಾಸರ ಕೃತಿಗಳ ಬಗ್ಗೆ ವಿಮಶಾ೯ತ್ಮಕವಾಗಿ ಬರೆಯಬಹುದಿತ್ತು. ಆ ಮೂಲಕ ಕನಕರ ಕೆಲವು ಕೃತಿಗಳ ಬಗ್ಗೆ ಸಾಮಾನ್ಯ ಜನತೆಗೆ ವಿಷಯ ತಿಳಿಯುತ್ತಿತ್ತು. ಹೆಚ್ಚಿನ ಜನ ಕನಕರ ಕೃತಿಯಾದ ‘ರಾಮಧಾನ್ಯ ಚರಿತೆ’ಯನ್ನು ‘ರಾಮಧ್ಯಾನ ಚರಿತೆ’ ಎಂದು ತಪ್ಪಾಗಿ ಓದುತ್ತಾರೆ. ಇನ್ನು ಈ ಕೃತಿಗೆ ಅಷ್ಟಾಗಿ ವಿಮಶೆ೯ ಬಂದಿಲ್ಲವೆಂದು ಓದುಗ ವಲಯದಲ್ಲಿ ಅಪಸ್ವರವಿದೆ. ಈ ಎಲ್ಲವನ್ನು ಲೇಖಕಿ ಈ ಅಂಕಣದಲ್ಲಿ ವಿಮಶಿ೯ಸಬಹುದಿತ್ತು. ಆದರೆ ಇವರು ತಮ್ಮ ಲೇಖನವನ್ನು ಕನಕರ ಕೃತಿ ವಿಮಶೆ೯ಗೆ ಅಥವಾ ಅವರ ಜೀವನ ವಿಮಶೆ೯ಗೆ ಮೀಸಲಿಡದೇ ಕೇವಲ ಬ್ರಾಹ್ಮಣರ ಟೀಕೆಗೆ ಮೀಸಲಾಗಿರಿಸಿದ್ದಾರೆ. ಅವರು ಹೇಳುತ್ತಾರೆ ; ಕೃಷ್ಣದೇವರಾಯನ ಒಂದು ಯುದ್ಧದಲ್ಲಿ ಕನಕರ ಅಪಾರ ಶ್ರಮದಿಂದ ಸೋಲುವ ಹಂತದಲ್ಲಿದ್ದ ರಾಯ ಗೆಲುವು ಸಾಧಿಸಿದನಂತೆ.ಗೆಲುವಿನ ಸುದ್ದಿ ಕೇಳಿದ ವ್ಯಾಸರಾಯರು ಕನಕನನ್ನು ಯಾವುದೇ ರೀತಿಯಿಂದ ಗೌರವಿಸದೇ ಇತ್ತ ಕೃಷ್ಣದೇವರಾಯನೂ ಗೌರವಿಸದೆ ಕನಕರು ಬುದ್ಧಿಭ್ರಮಣರಾದರಂತೆ.
ಭಗವದ್ಗೀತೆಯ ನೈತಿಕ ಜಿಜ್ಞಾಸೆ
– ರಮಾನಂದ ಐನಕೈ
ಭಗವದ್ಗೀತೆ ಭಾರತೀಯರ ಅತ್ಯಂತ ಪವಿತ್ರವಾದ ಗ್ರಂಥ. ಆದರೆ ಕಳೆದ ಅನೇಕ ವರ್ಷಗಳಿಂದ ಈ ಗ್ರಂಥ ವಿವಾದಕ್ಕೆ ಎಡೆಯಾಗುತ್ತಲಿದೆ. ಭಗವದ್ಗೀತೆಯನ್ನು ಟೀಕಿಸುವ ಬಹುತೇಕ ಜನ ಅದನ್ನು ಓದಿಯೇ ಇಲ್ಲ. ಇನ್ನೂ ಕೆಲವು ಓದಿದವರಿಗೆ ಅದು ಅರ್ಥವೇ ಆಗಿಲ್ಲ. ಅದನ್ನು ಓದಿ ಅರ್ಥಮಾಡಿಕೊಂಡವರಿಗೆ ಈ ವಿವಾದ ಎಬ್ಬಿಸಿದವರು ಹಾಸ್ಯಾಸ್ಪದರಾಗಿ ಕಾಣುತ್ತಿದ್ದಾರೆ. ಇಷ್ಟೆಲ್ಲ ಗೊಂದಲವಾಗಲು ಮುಖ್ಯ ಕಾರಣವೆಂದರೆ ನಾವು ಭಗವದ್ಗೀತೆಯನ್ನು ಗೃಹಿಸುತ್ತಿರುವ ರೀತಿ. ಭಗವದ್ಗೀತೆಯನ್ನುವುದು ಒಂದು ಕತೆಯಲ್ಲ. ಅಥವಾ ಬೈಬಲ್, ಕುರಾನುಗಳಂತೆ ಧರ್ಮಗ್ರಂಥವಲ್ಲ. ಅದು ಸಾಮಾಜಿಕ ವ್ಯವಸ್ಥೆಯನ್ನು ನಿರ್ದೇಶಿಸಲು ಹುಟ್ಟಿಕೊಂಡ ಸಂವಿಧಾನವೂ ಅಲ್ಲ. ಭಗವದ್ಗೀತೆಯೆಂದರೆ ಬದುಕಿನ ಜಿಜ್ಞಾಸೆ. ಮನುಷ್ಯ ನೆಮ್ಮದಿಯಿಂದ ಬದುಕಲು ದಾರಿತೋರಿಸುವ ಮಾರ್ಗದರ್ಶಿ. ಹೀಗೆ ಅರ್ಥೈಸಿಕೊಂಡಾಗ ಭಗವದ್ಗೀತೆ ಪ್ರತಿಯೊಬ್ಬರಿಗೆ ನೀತಿಪಾಠವಾಗಿ ತೆರೆದುಕೊಳ್ಳುತ್ತದೆ.
ವಸಾಹತುಶಾಹಿ ಆಳ್ವಿಕೆಯ ಜೊತೆಗೇ ಭಗವದ್ಗೀತೆಯನ್ನು ಬೇರೆ ರೀತಿಯಲ್ಲಿ ಅರ್ಥೈಸುವ ಚಿಂತನಾಪರಂಪರೆ ಬೆಳೆದುಬಂತು. ಏಕೆಂದರೆ ಪಾಶ್ಚಾತ್ಯರು ಪ್ರೊಟೆಸ್ಟಾಂಟ್ ವಿಚಾರಧಾರೆಯ ನೆಲೆಯಲ್ಲಿ ಭಗವದ್ಗೀತೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರು. ಹಾಗಾಗಿ ಅವರಿಗೆ ಭಗವದ್ಗೀತೆ ರಿಲಿಜನ್ನಿನ ಜಿಜ್ಞಾಸೆಯಾಯಿತೇ ವಿನಃ ಬದುಕಿನ ಜಿಜ್ಞಾಸೆಯಾಗಿ ಕಾಣಲೇಇಲ್ಲ. ಅದಕ್ಕೆ ಮುಖ್ಯ ಕಾರಣ ಸಾಂಸ್ಕೃತಿಕ ವೈರುದ್ಧ್ಯತೆ. ಇದೇ ಮುಂದೆ ಸೆಕ್ಯುಲರ್ ಚಿಂತನಾ ವಿಧಾನದಲ್ಲೂ ಮುಂದುವರಿಯುತ್ತಾ ಬಂತು. ಇದು ಇಂದು ಆಧುನಿಕ ಭಾರತದಲ್ಲಿ ಭಗವದ್ಗೀತೆಯ ಕುರಿತಾಗಿ ಅಖಾಡವನ್ನೇ ನಿರ್ಮಾಣ ಮಾಡುತ್ತಲಿದೆ. ಹಾಗಾಗಿ ಭಗವದ್ಗೀತೆಯಲ್ಲಿ ಏನಿದೆ ಮತ್ತು ಅದು ಏನು ಹೇಳುತ್ತಲಿದೆ ಎಂಬುದನ್ನು ಈ ಶತಮಾನದ ಭಾಷೆಯಲ್ಲಿ ಅರ್ಥಮಾಡಿಕೊಳ್ಳುವ ಅಗತ್ಯವಿದೆ.





