ಎಲ್ಲಿದೇ ನಮ್ಮಲ್ಲಿ ಭಾರತೀಯತೆ?
-ಮಧುಚಂದ್ರ ಭದ್ರಾವತಿ
ಆಗಸ್ಟ್ ೧೫ರ ಸಂಭ್ರಮ ನೋಡಿ ಏನಾದ್ರು ಬರೆಯಲೇ ಬೇಕೆನಿಸಿತು. ೧೪ನೆ ತಾರಿಖು ಮಧ್ಯರಾತ್ರಿ ೧೧.೫೯ ರಿಂದ ೧೨.೦೦ಗೆ ಸರಿಯಾಗಿ ಗಡಿಯಾರದ ಮುಳ್ಳು ತಿರುಗಿದಾಗ ಮನೆಯ ಹೊರಗೆ ಪಟಾಕಿ ಶಬ್ಧದ ಅಬ್ಬರ ಕೇಳಿಸಿತು. ಒಂದರ್ಥದಲ್ಲಿ ಭಾರತ ಯಾವುದಾದರು ಕ್ರೀಡೆಯಲ್ಲಿ(ಕೇವಲ ಕ್ರಿಕೆಟ್ ಮಾತ್ರ) ವಿಜಯಿ ಆದರೆ ಆಚರಿಸುವ ಪಟಾಕಿಯ ಸಂಭ್ರಮ ಅದು. ಭಾರತೀಯರಿಗೆ ಭಾರತೀಯತೆ ಅರಿವು ಮೂಡುವುದು ಎರಡು ಸಂದರ್ಭದಲ್ಲಿ ಮಾತ್ರ ಒಂದು ಸ್ವತಂತ್ರ ದಿವಸದಂದು ಮತ್ತೊಂದು ಕ್ರಿಕೆಟ್ನಲ್ಲಿ ಗೆದ್ದಾಗ ಬಿಟ್ಟರೆ, ಸತ್ – ಪ್ರಜೆಗಳು ಉಳಿದ ೩೬೩ ದಿನ ಬೇರೆಯವರ ಗುಲಾಮರಗಿರುತ್ತಾರೆ. ಒಂದೆಡೆ ಮಾಹಿತಿ ತಂತ್ರಜ್ಞಾನವೆಂಬ ಗುಲಾಮ ಗಿರಿಯಲ್ಲಿ ಜ್ಞಾನಿಗಳು ಮತ್ತೊಂದೆಡೆ ಗಣಿಗಾರಿಕೆ,ಬ್ರಷ್ಟಚಾರ,ಸ್ವಜನ ಪಕ್ಷಪಾತ ಹೆಸರಿನಲ್ಲಿ ಅಜ್ಞಾನಿಗಳು.ಇಂತಹವರನ್ನು ತನ್ನ ಮಡಿಲಲ್ಲಿಟ್ಟು ಸಲಹುತ್ತಿರುವ ಕರುಣಾ ಮಾಯಿ ಭಾರತ ಮಾತೆ ಎಷ್ಟು ದಿನ ಸಹಿಸಿಯಾಳು?ಕಾನೂನಿನಂಗಳ ೭ : ಗಂಡ-ಹೆಂಡತಿ ಉತ್ತರ ದಕ್ಷಿಣ- ವಿಚ್ಛೇದನ
-ಉಷಾ ಐನಕೈ ಶಿರಸಿ
ವಿವಾಹ ಒಂದು ಪವಿತ್ರ ಧಾರ್ಮಿಕ ಸಂಸ್ಕಾರ. ಇದರ ಹಿಂದೆ ಮದುವೆಯಾದ ಗಂಡು -ಹೆಣ್ಣಿಗೆ ಅವರದೇ ಆದ ಸಾಮಾಜಿಕ ಹಾಗೂ ಭಾವನಾತ್ಮಕ ಬದ್ಧತೆ ಇರುತ್ತದೆ. ಕಷ್ಟವಿರಲಿ, ಸುಖವಿರಲಿ ಗಂಡ-ಹೆಂಡತಿ ಸಮನಾಗಿ ಹಂಚಿ ಕೊಂಡು ಸಹಬಾಳ್ವೆ ನಡೆಸಬೇಕೆಂಬುದೇ ವಿವಾಹ ಬಂಧನದ ಹಿಂದಿರುವ ತತ್ವ. ಅದಕ್ಕಾಗೇ ಪತ್ನಿಗೆ ‘ಅರ್ಧಾಂಗಿ’ ಎಂದು ಕರೆದಿರುವುದು. ಆದರೆ ಆಧುನಿಕ ಯುಗದಲ್ಲಿ ಇದು ಸಾಧ್ಯವೇ? ಬದಲಾದ ಕಾಲ, ಆಧುನಿಕ ಶಿಕ್ಷಣ, ವೈಚಾರಿಕ ಸ್ವಾತಂತ್ರ್ಯ, ಸಮಾನತೆಯ ಹೋರಾಟ ಮುಂತಾದ ಬೆಳವಣಿಗೆಯಲ್ಲಿ ಸಾಂಪ್ರದಾಯಿಕ ಮೌಲ್ಯಗಳು ಉಳಿದುಕೊಳ್ಳಲು ಸಾಧ್ಯವೇ? ಆಧುನಿಕ ಸಂಪರ್ಕ, ವೈವಿಧ್ಯಮಯ ಮಾಧ್ಯಮಗಳು ಹಾಗೂ ವ್ಯಕ್ತಿ ಸ್ವಾತಂತ್ರ್ಯದ ಹಂಬಲಗಳ ನಡುವೆ ಪರಸ್ಪರ ನಂಬಿಕೆ, ವಿಶ್ವಾಸ, ಸಹನೆ, ಸಹಬಾಳ್ವೆ ಸ್ವಾಭಾವಿಕವಾಗೇ ಶಿಥಿಲವಾಗತೊಡಗಿವೆ. ವೈಯಕ್ತಿಕ ಪ್ರತಿಷ್ಠೆ ದಿನದಿಂದ ದಿನಕ್ಕೆ ಗಂಡು-ಹೆಣ್ಣು ಇಬ್ಬರಲ್ಲೂ ಹೆಚ್ಚಾಗತೊಡಗಿವೆ. ಗಂಡ-ಹೆಂಡತಿಯ ನಡುವೆ ಹೆಚ್ಚು ವಯಸ್ಸಿನ ಅಂತರವಿದ್ದರೂ ಕಲಹ, ಅಂತರವೇ ಇಲ್ಲದಿದ್ದರೂ ಕಲಹ. ಹೀಗೆ ಹಲವಾರು ಕಾರಣಗಳಿಂದ ವಿವಾಹ ವಿಚ್ಛೇದನಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ.
ದಾಂಪತ್ಯದ ನಡುವೆ ವಿರಸ ಹಿಂದೆಯೂ ಇತ್ತು. ಆದರೆ ಆಗ ನ್ಯಾಯಾಲಯದ ಮೆಟ್ಟಿ ಲೇರುವ ಅವಕಾಶ ಮತ್ತು ಧೈರ್ಯ ಎರಡೂ ಇಲ್ಲವಾಗಿತ್ತು. ಅದರಲ್ಲೂ ಹೆಣ್ಣು ದನಿ ಇಲ್ಲದೇ ಸಹಿಸಿಕೊಂಡೇ ಬಾಳಬೇಕಾಗಿತ್ತು. ಆದರೆ ಇಂದು ಪರಿಸ್ಥಿತಿ ಹಾಗಿಲ್ಲ. ಚಿಕ್ಕ ಚಿಕ್ಕ ಕಾರಣಗಳಿಗೂ ಕಾನೂನಿಗೆ ಮೊರೆಹೋಗುವುದು ಸ್ವಾಭಾವಿಕವಾಗಿದೆ. ಮಹಿಳಾ ಶೋಷಣೆಯನ್ನು ತಪ್ಪಿಸುವ ಸಲುವಾಗಿ ಹುಟ್ಟಿ ಕೊಂಡ ಕಾನೂನುಗಳು ಇದಕ್ಕೆ ಅವಕಾಶ ಮಾಡಿ ಕೊಡುತ್ತಿವೆ.
ಹಿಂದುತ್ವ ಬೋನ್ಸಾಯ್ ಮರವಲ್ಲ, ವಿಶಾಲ ಆಲದ ಮರ
-ಚಕ್ರವರ್ತಿ ಸೂಲಿಬೆಲೆ
ದಾಳಿಗೆ ಮುನ್ನ ಎದುರಾಳಿಗಳ ಶಕ್ತಿಯನ್ನು ಅರಿತುಕೊಳ್ಳಬೇಕು. ದಾಳಿಯ ವೇಳೆ ತಲೆ ಹೋದರೂ ಸರಿ ಎಂದು ಕಾದಾಡಬೇಕು. ಕದನದ ನಂತರ ಆಗುವ ಲಾಭ ನಷ್ಟಗಳ ಅರಿವಿರಬೇಕು ಪ್ರತಿಯೊಬ್ಬ ಸೇನಾಪತಿಗೆ ಗೊತ್ತಿರಲೇಬೇಕಾದ ಅಂಶಗಳಿವು. ಇವುಗಳ ಆಧಾರದ ಮೇಲೆ ರೂಪುಗೊಂಡದ್ದೇ ಯೋಜನೆ. ಮೊದಲೇ ರೂಪಿಸಿದ ಯೋಜನೆ ಒಮ್ಮೊಮ್ಮೆ ಕೈಕೊಟ್ಟರೂ ಕೊಡಬಹುದು. ಪೂರ್ವ ತಯಾರಿಯೇ ಇಲ್ಲದೆ ಗೆದ್ದರೂ ಗೆಲ್ಲಬಹುದು. ಎಲ್ಲ ಅಪರೂಪ. ಆದರೆ, ಹಳೆಯ ನೆನಪುಗಳನ್ನು ಹಸಿರಾಗಿಸಿಕೊಂಡು, ಭವಿಷ್ಯದ ಕಷ್ಟ ನಷ್ಟಗಳನ್ನು ಆಲೋಚಿಸಿ, ವರ್ತಮಾನದಲ್ಲಿ ಕ್ರಿಯಾಶೀಲರಾಗುವವರು ಜಯಶಾಲಿಗಳಾಗುತ್ತಾರೆ. ಇಲ್ಲವಾದರೆ ತಮಗೂ ಸಮಾಜಕ್ಕೂ ತೊಂದರೆ ತಂದಿಡುತ್ತಾರೆ.
೧೮೫೭ರ ಸಂಗ್ರಾಮಕ್ಕೆ ಸುದೀರ್ಘ ತಯಾರಿ ನಡೆದಿತ್ತು. ನಾನಾ, ತಾತ್ಯಾ, ಲಕ್ಷ್ಮೀ ಬಾಯಿ, ಕುವರ ಸಿಂಗರೆಲ್ಲ ತಯಾರಾಗಿದ್ದರು. ಯಾರು, ಎಲ್ಲಿ, ಹೇಗೆ ದಾಳಿ ಮಾಡಬೇಕೆಂಬುದನ್ನೂ ರೂಪಿಸಿಯಾಗಿತ್ತು. ಎಲ್ಲ ಮುಗಿದ ಮೇಲೆ ದೇಶ ಒಪ್ಪುವ ನಾಯಕನ ಕೈಗೆ ಆಡಳಿತ ನೀಡಬೇಕೆಂದು ಬಹಾದ್ದೂರ್ ಷಾಹನೇ ಹೇಳಿದ್ದ. ಎಡವಟ್ಟು, ಬ್ಯಾರಕ್‌ಪುರದಲ್ಲಿ ಆಯಿತು. ಅಂದುಕೊಂಡಿದ್ದಕ್ಕಿಂತ ಒಂದು ತಿಂಗಳು ಮುಂಚೆ ಸಿಡಿದ ಕ್ರಾಂತಿಯ ಸಿಡಿಮದ್ದು ಪೂರ್ಣ ಜಯ ಕೊಡಿಸುವಲ್ಲಿ ವಿಫಲವಾಯಿತು. ಅಷ್ಟೇ ಅಲ್ಲ, ಮುಂದಿನ ಅನೇಕ ವರ್ಷಗಳ ಕಾಲ ಬ್ರಿಟಿಷರ ವಿರುದ್ಧ ಕಾದಾಡಿ ಗೆಲ್ಲುವುದು ಅಸಾಧ್ಯವೆಂದು ಜನಮಾನಸದಲ್ಲಿ ಹುದುಗಿಹೋಗಿತ್ತು. ಮೌನವಾಗಿ ಸಹಿಸುವ, ಇದ್ದುದರಲ್ಲೆ ಸಂಧಾನ ಮಾಡಿಕೊಂಡು ಬದುಕುವ ಯುವ ಸಮೂಹ ರೂಪುಗೊಳ್ಳಲು ಆರಂಭಿಸಿದ್ದೂ ಆಗಲೇ. ಸರಿಯಾಗಿ ಹೇಳಬೇಕೆಂದರೆ, ಗುಲಾಮೀ ಮಾನಸಿಕತೆಯ ನಿರ್ಮಾಣದ ಹಂತ ಅದು. ಇವಿಷ್ಟಕ್ಕೂ ಕಾರಣ- ಕೈಕೊಟ್ಟ ಒಂದು ಯೋಜನೆ!
ನಾಯಕನಾದವ ಯಾವಾಗಲೂ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಇಟ್ಟ ಹೆಜ್ಜೆಯನ್ನು ಪ್ರಾಣ ಬಿಟ್ಟರೂ ಹಿಂದೆ ತೆಗೆದುಕೊಳ್ಳದವನಾಗಿರಬೇಕು. ಜೋ ಸಿರ್‌ದಾರ್, ವಹೀ ಸರ್‌ದಾರೆಂದು ಹೇಳೋದು ಅದಕ್ಕೇ. ಗೆದ್ದಾಗ ಹೊಗಳಿಕೆ ಸಿಕ್ಕಷ್ಟೇ ಸೋತಾಗ ತೆಗಳಿಕೆಯೂ ಸಿಗುತ್ತದೆ. ಎಲ್ಲಕ್ಕೂ ತಯಾರಾದವ ಮಾತ್ರ ಮುಂದೆ ಬಂದು ನಿಂತಿರಬೇಕು.
ಈ ಎಲ್ಲ ಘಟನೆಗಳನ್ನು ಕಣ್ಣ ಮುಂದಿಟ್ಟುಕೊಂಡು ಒಮ್ಮೆ ಮಂಗಳೂರಿನ ಗಲಾಟೆಗಳನ್ನು ಅವಲೋಕಿಸಿ ನೋಡಿ. ಹಿಂದೂ ಸಮಾಜ ಅಂತ ಹೇಳಿ ಇಂಥದೊಂದು ರಾದ್ಧಾಂತ ಎಬ್ಬಿಸುವ ಅಗತ್ಯವಿತ್ತೆ? ಮಾಧ್ಯಮದವರನ್ನು ಕರೆದುಕೊಂಡು ಹೋಗಿ ಇಂದಿನ ಸಿನಿಮಾ ಟ್ರೈಲರ್‌ಗಳಂತೆ ಬಿತ್ತರಿಸುವ ಜರೂರತ್ತು ಇತ್ತೆ? ಒಮ್ಮೆ ಯೋಚಿಸಿ.
ಸಹಿಸಿಕೊಳ್ಳುವುದಕ್ಕಿಂತ ತಿರುಗೇಟು ನೀಡುವುದೇ ಒಳ್ಳೇದು ಎಂದು ಅನಿಸಲ್ವಾ?
-ರಶ್ಮಿ ಕಾಸರಗೋಡು
ದಿನಪತ್ರಿಕೆ ತೆರೆದು ನೋಡಿದರೆ ಪ್ರತಿದಿನವೂ ಮಹಿಳೆಯ ಮೇಲೆ ದೌರ್ಜನ್ಯ ಎಂಬ ಒಂದು ಸುದ್ದಿ ಇದ್ದೇ ಇರುತ್ತದೆ. ಅತ್ತೆಯ ದೌರ್ಜನ್ಯ, ಪತಿಯ ದೌರ್ಜನ್ಯ, ಕಚೇರಿಯಲ್ಲಿ ದೌರ್ಜನ್ಯ ಅಬ್ಬಾ ಎಷ್ಟೊಂದು ವಿಧದ ದೌರ್ಜನ್ಯಗಳು!. ನಾವು ಮುಂದುವರಿದಿದ್ದೇವೆ, ಅಬಲೆಯಲ್ಲ ಸಬಲೆ ಎಂದು ನಾನೂ ಸೇರಿದಂತೆ ಮಹಿಳೆಯರೆಲ್ಲಾ ಗಟ್ಟಿಯಾಗಿ ಕೂಗಿ ಹೇಳುತ್ತಿದ್ದೇವೆ. ಹೆಣ್ಣು ಅಬಲೆಯಿಂದ ಸಬಲೆಯಾಗಿ ಬಡ್ತಿ ಪಡೆದಿದ್ದರೂ ದೌರ್ಜನ್ಯ , ಕಿರುಕುಳಗಳು ಮಾತ್ರ ಅವಳ ನೆರಳಂತೆ ಹಿಂಬಾಲಿಸುತ್ತಿವೆ. ಹಳ್ಳಿಯಲ್ಲಿದ್ದರೂ, ನಗರದಲ್ಲಿದ್ದರೂ ಮಹಿಳೆ ದೌರ್ಜನ್ಯಕ್ಕೊಳಗಾಗುವುದು ತಪ್ಪಿಲ್ಲ. ಅಲ್ಲಿ ಹಾಗಾಯ್ತು, ಇಲ್ಲಿ ಹೀಗಾಯ್ತು ಎಂದು ಎಂಬ ವರದಿಗಳನ್ನೋದಿದಾಗ ಅಯ್ಯೋ ಪಾಪ ಎಂದು ಎನಿಸುತ್ತದೆ. ಆದರೆ ಇದಕ್ಕೆ ಪರಿಹಾರ ಏನು? ಎಂಬುದರ ಬಗ್ಗೆ ಚಿಂತಿಸತೊಡಗಿದಾಗಲೇ ಸಮಸ್ಯೆಯ ಗಂಭೀರತೆ ಅರಿವಿಗೆ ಬರುವುದು. ಇತ್ತೀಚೆಗೆ ನಮ್ಮ ದೇಶದಲ್ಲಿ ಇಂಥಾ ದೌರ್ಜನ್ಯಗಳ ಸಂಖ್ಯೆ ಏರುತ್ತಲೇ ಹೋಗುತ್ತಿದೆ. ಅದರಲ್ಲೂ ಬೆಂಗಳೂರು ಸುರಕ್ಷಿತವಲ್ಲ ಎಂದು ಹೇಳಲಾಗುತ್ತದೆ. ಎನ್ ಸಿಆರ್ ಬಿ (ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ) ವರದಿ ಪ್ರಕಾರ 2011ರಲ್ಲಿ ಬೆಂಗಳೂರಲ್ಲಿ ಮಹಿಳೆಯ ಮೇಲೆ ನಡೆದ ದೌರ್ಜನ್ಯಗಳ ಬಗ್ಗೆ ದಾಖಲಾದ ಪ್ರಕರಣಗಳ ಸಂಖ್ಯೆ 1,890, ಇನ್ನು ದಾಖಲಾಗದೇ ಇರುವ ದೌರ್ಜನ್ಯಗಳ ಸಂಖ್ಯೆ ಎಷ್ಟಿರಬಹುದೇನೋ. ನವದೆಹಲಿಯಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆ 4,489. ಅಂದರೆ ದೆಹಲಿಯ ನಂತರ ಬೆಂಗಳೂರು ನಗರವೇ ಮಹಿಳೆಯರಿಗೆ ಸುರಕ್ಷಿತವಲ್ಲ ಎಂಬುದಕ್ಕೆ ಈ ಪ್ರಕರಣಗಳ ಸಂಖ್ಯೆಯೇ ಸಾಕ್ಷಿ.
ಎನ್ ಸಿಆರ್ ಬಿ ನೀಡಿರುವ ಅಂಕಿ ಅಂಶಗಳ ಪ್ರಕಾರ 2011ರಲ್ಲಿ ಬೆಂಗಳೂರಿನಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯ ಪ್ರಕರಣಗಳ ಲೆಕ್ಕಾಚಾರ ಹೀಗಿದೆ.
ನಮ್ಮ ಬರಹ ಇನ್ನೊಬ್ಬರ ಬದುಕಿಗೆ ಬೆಂಕಿ ಇಡಬಾರದು
– ರಾಕೇಶ್ ಶೆಟ್ಟಿ
ಛೆ..! ದೆಹಲಿ,ಉತ್ತರ ಭಾರತದ ಕಡೆಯಿಂದ ಸಾಮಾನ್ಯವಾಗಿ ಸುದ್ದಿಯಾಗುತಿದ್ದ ಅತ್ಯಾಚಾರದಂತ ರಾಕ್ಷಸಿ ವರ್ತನೆ ಕರ್ನಾಟಕದಲ್ಲೂ ದಾಖಲಾಯಿತಲ್ಲ ಅಂತ ಮೊನ್ನೆಯ ‘ಮದ್ದೂರಿನ ರೈಲಿನಲ್ಲಿ ನಡೆದ ದುರ್ಘಟನೆ’ ಸುದ್ದಿಯಾದಾಗ ನಾಡಿನ ಬಹಳಷ್ಟು ಜನರಿಗೆ ಅನ್ನಿಸಿರಲಿಕ್ಕೂ ಸಾಕು.ಅದೃಷ್ಟವೆಂದರೆ ಆ ಹುಡುಗಿ ಪ್ರಾಣಾಪಾಯದಿಂದ ಪಾರಾಗಿದ್ದು.ಕಡೆಗೂ ರೈಲಿನಲ್ಲಿದ್ದ ಜನ ಧೈರ್ಯ ತಂದುಕೊಂಡು ಆ ರಾಕ್ಷಸರಿಗೆ ಬಡಿದು ಪೋಲಿಸರಿಗೆ ಒಪ್ಪಿಸಿದ್ದು ಮತ್ತೆ ಮರು ದಿನ ಹಿಂದೂ ಜಾಗರಣ ವೇದಿಕೆಯವರು ನೀಡಿದ ತಪರಾಕಿ ಎಲ್ಲವೂ ಸುದ್ದಿಯಾದವು.
ಆದರೆ, ಆ ನಂತರ ಆ ಹುಡುಗಿಯ ಪೂರ್ವಾಪರ ಮತ್ತು ಘಟನೆಯ ಬಗ್ಗೆ ಮಾಹಿತಿ ತಿಳಿದುಕೊಂಡು ಮಾಧ್ಯಮಗಳು ಬರೆಯಲು ಶುರು ಮಾಡಿದವಲ್ಲ.ಒಂದು ವರದಿಯಲ್ಲಿ ಹುಡುಗಿಯ ನಿಜ ಹೆಸರನ್ನೇ ಬರೆದುಬಿಟ್ಟಿದ್ದರು.ಕಡೆಗೆ ಓದುಗರು ಗಮನಕ್ಕೆ ತಂದ ಮೇಲೆ ತಿದ್ದಿದರು.ಮತ್ತದೇ ಆನ್-ಲೈನ್ ಪತ್ರಿಕೆಯಲ್ಲಿ ಹಾಗೂ ರಾಜ್ಯಮಟ್ಟದ ದಿನಪತ್ರಿಕೆ ಪ್ರಜಾವಾಣಿಯಲ್ಲಿ (ನಾಡಿನ ವಿಚಾರಾವಂತರ ನೆಚ್ಚಿನ ಪತ್ರಿಕೆಯಿದು..!) ಹುಡುಗಿಯ ಪೊಟೋವನ್ನೇ ಹಾಕಿಬಿಡುವುದಾ? ಕನಿಷ್ಠ ಮುಖವನ್ನು ಬ್ಲರ್ ಮಾಡಬೇಕು ಅನ್ನುವ ಕಾಮನ್ ಸೆನ್ಸ್ ಕಾಣೆಯಾಯಿತಾ?ಇದೆಂತ Irresponsibility ? ವರದಿಗಾರಿಕೆ ಅನ್ನುವುದು ಇಷ್ಟೊಂದು ಕಾಟಾಚಾರವಾಗಿದೆಯಾ? ಈ ಮಧ್ಯೆ ಆ ಹುಡುಗಿಯ ಕೆಲಸ ಮಾಡುವ ಜಾಗ ಎಲ್ಲವನ್ನೂ ಹೇಳಿಯೂಬಿಟ್ಟವು.ಮುಂದೆ ಆ ಹುಡುಗಿಯ ಭವಿಷ್ಯವೇನು? ಅವಳನ್ನು ನೋಡಿದಾಗೆಲ್ಲ ಜನ ಅವಳನ್ನ ಏನೆಂದು ಗುರುತಿಸುತ್ತಾರೆ?
ಈ ಹಿಂದೆ ಸುವರ್ಣವಾಹಿನಿ ಶಿವಮೊಗ್ಗದ ಹುಡುಗಿಯೊಬ್ಬಳ ವಿಷಯದಲ್ಲೂ ಹೀಗೆ ಬೇಜವಬ್ದಾರಿತನ ತೋರಿತ್ತು.ಈ ವಿಷಯದ ಬಗ್ಗೆ ದಯಾನಂದ ಟಿ.ಕೆ ಸರಿಯಾಗಿ ಜಾಡಿಸಿ ಆ ವಾಹಿನಿಯ ಸಂಪಾದಕರಿಗೆ ಬಹಿರಂಗ ಪತ್ರ ಬರೆದಿದ್ದರು.ಉತ್ತರ ಬಂದ ಬಗ್ಗೆ ಸುದ್ದಿಯಿಲ್ಲ.ಇದೆ ನ್ಯೂಸ್ ಚಾನೆಲ್ಗಳೇ ತಾನೇ ಬ್ಲೂ ಬಾಯ್ಸ್ ಗಳನ್ನ ತೋರಿಸುವ ನೆಪದಲ್ಲಿ ಬ್ಲೂ-ಫಿಲಂ ತೋರಿಸಿದ್ದು,ಮುನ್ನಿ-ಶೀಲ,ಮದನಾರಿ ಅಂತೆಲ್ಲ ತಲೆ ಕೆಟ್ಟ ಕಾರ್ಯಕ್ರಮ ಮಾಡುತ್ತಿರುವುದು.ಮಕ್ಕಳಿರೋ ಮನೆಯಲ್ಲಿ ನ್ಯೂಸ್ ಚಾನೆಲಗಳನ್ನು ನೋಡಬೇಡಿ ಮಕ್ಕಳು ಹಾದಿ ತಪ್ಪುತ್ತಾರೆ ಅನ್ನುವ ಕಾಲ ಬಂದು ಬಿಟ್ಟಿತಲ್ಲ…!
ಬಡವರ “ಕೊಳಚೆ” ಉಳಿದವರ “ಶುದ್ಧತೆ”
ಡಾ!! ಅಶೋಕ್ ಕೆ.ಆರ್
ಸನ್ಮಾನ್ಯ ಶ್ರೀ ಶ್ರೀ ಶ್ರೀ ಪೇಜಾವರ ಸ್ವಾಮಿಗಳಿಗೆ ಸೆಡ್ಡು ಹೊಡೆಯಲು ಮತ್ತೊಬ್ಬ ಹುಟ್ಟಿದ್ದಾನೆ. ಶ್ರೀಗಳು ಮಾಂಸಾಹಾರಿಗಳ ಪಕ್ಕ ಕುಳಿತು ಊಟ ಮಾಡಿದರೆ ಸಸ್ಯಾಹಾರಿ ಬ್ರಾಹ್ಮಣರೂ ಮಾಂಸಾಹಾರಿಗಳಾಗಿಬಿಡುತ್ತಾರೆಂದು ಗಾಬರಿಗೊಂಡಿದ್ದರು. ನಂತರ ತಮ್ಮ ಹೇಳಿಕೆಯ ಬಗ್ಗೆ ಸಮಜಾಯಿಷಿಗಳನ್ನೂ ಕೊಟ್ಟಿದ್ದರು. ಇಂದು ಕರ್ನಾಟಕ ಅನುದಾನರಹಿತ ಶಾಲೆಗಳ ಸಂಘ ಕುಸ್ಮಾದ ಅಧ್ಯಕ್ಷ ಜಿ.ಎಸ್. ಶರ್ಮರವರು ಶಿಕ್ಷಣ ಹಕ್ಕು ಕಾಯ್ದೆಯನ್ನು ವಿರೋಧಿಸುತ್ತ “ಸಮುದ್ರಕ್ಕೆ ಕೊಳಚೆ ನೀರು ಬಂದು ಸೇರಿದರೆ ಇಡೀ ಸಮುದ್ರವೇ ಕೊಳಚೆಯಾಗುತ್ತದೆ. ನೀರು ಯಾವಾಗಲೂ ಶುದ್ಧ ಆಗಿರಬೇಕು. ಖಾಸಗಿ ಮತ್ತು ಸರ್ಕಾರಿ ಶಾಲೆಗಳ ಸಂಸ್ಕೃತಿ ವಿಭಿನ್ನ. ಬಡ ಮಕ್ಕಳನ್ನು ಶಾಲೆಗೆ ಸೇರಿಸಿಕೊಂಡ ಮರುದಿನವೇ ಉಳಿದ ಪೋಷಕರು ಬಂದು ಮಕ್ಕಳ ವರ್ಗಾವಣೆಗೆ ಪತ್ರ ಕೇಳುವ ಅಪಾಯವಿದೆ. ಆದ್ದರಿಂದ ಕುಸ್ಮಾ ಶಾಲೆಗಳಲ್ಲಿ ಆರ್.ಟಿ.ಐ ಕಾಯ್ದೆ ಅನುಷ್ಠಾನ ಸಾಧ್ಯವಿಲ್ಲ” ಎಂದು ‘ಅಮೋಘ ವಿವೇಕಭರಿತವಾದ’ ಹೇಳಿಕೆಯನ್ನಿತ್ತಿದ್ದಾರೆ. ಈ ಹಾಳು ವಿಚಾರವಂತರು, ಪ್ರಗತಿಪರರು ಈ ಹೇಳಿಕೆಗೂ ವಿರೋಧ ವ್ಯಕ್ತಪಡಿಸುತ್ತಾರಲ್ಲ! ಎಂಥ ಕೆಟ್ಟ ಮನಸ್ಥಿತಿಯವರಿರಬೇಕು ಇವರೆಲ್ಲ?!
ಚುಟುಕು ಕ್ರಿಕೆಟ್ ನೈತಿಕತೆಯ ಕೊನೆಗುಟುಕು

ಸಾಮಾಜಿಕ ಕಳಕಳಿಯೆಂದರೆ…..
-ಡಾ.ಅಶೋಕ್ ಕೆ.ಆರ್
ಹುಚ್ಚು ಬುದ್ದಿಯ ಹತ್ತು ಪ್ರತಿಜ್ಞೆಗಳು
-ಪ್ರಶಸ್ತಿ. ಪಿ ಶಿವಮೊಗ್ಗ

೧) FB ಬಿಡಬೇಕು
ನಿನ್ನೆ Times Of India ದಲ್ಲಿ ಓದ್ತಾ ಇದ್ದೆ. ಒಬ್ಬ ಭಾರತೀಯ ದಿನದಲ್ಲಿ ಅಂದಾಜು ೮ ಘಂಟೆ ಕಾಲ ಇಂಟನ್ರೆಟ್ಟಲ್ಲೇ ಕಳೀತಾನೆ ಅಂತ.ಅಂದ್ರೆ ನಾವು ಎಚ್ಚರ ಇರೋದ್ರಲ್ಲಿ ಅರ್ಧ ಭಾಗ ಇಲ್ಲೇ ಆಯ್ತು!! ಅದರಲ್ಲಿ ಕೆಲ ಭಾಗ ಕೆಲಸಕ್ಕಾದ್ರೆ ಕೆಲ ಭಾಗ ಇಲ್ಲೇ.. ಇದರಿಂದ ಏನಾದ್ರೂ ಲಾಭ ಇದ್ಯಾ ? ಸಾಮಾಜಿಕ ತಾಣಗಳು ಇರೋದೇ Time Pass ಗೆ, ಜೀವನದಲ್ಲಿ ಎಲ್ಲದನ್ನೂ ಲಾಭ , ನಷ್ಟ ಅನ್ನೋ ವ್ಯಾಪಾರಿ ಬುದ್ದಿಯಿಂದ ತೂಗಕ್ಕಾಗಲ್ಲಾ ಅಂದ್ರಾ? ಹೂಂ ಅಂದೆ ಕಣ್ರಿ… ಆದ್ರೂ..
೨)ಸಂದೇಶ ಕಳ್ಸೋದನ್ನ(ಮೆಸೇಜ್ ಮಾಡೋದನ್ನ) ಬಿಡ್ಬೇಕು
ಈಗೊಂದು ಆರು ದಿನದ ಹಿಂದೆ ಸಂದೇಶ ಕೌಂಟರನ್ನ ಮರುಸ್ಥಾಪಿಸಿಟ್ಟಿದ್ದೆ. ಖಾಲಿ ಕೂತಾಗ ಅತ್ವಾ ಬೇಜಾರಾದ ದಿನಗಳಲ್ಲಿ ಅಂದಾಜು ಎಷ್ಟು ಸಂದೇಶ ಕಳಿಸ್ತೀನಿ ನೋಡ್ಬೇಕು ಅಂತ.. ಆರು ದಿನ ಬಿಟ್ಟು ನೋಡಿದ್ರೆ ಐನೂರು ಚಿಲ್ರೆ ಆಗಿತ್ತು. ಅದೇನು ಮಹಾ ಅಂದ್ರಾ? ಒಂದು ಮೆಸೇಜಿಗೆ ಒಂದು ೩೦ ಸೆಕೆಂಡು ಅಂತಿಟ್ಕೊಳ್ರಿ.( ದೊಡ್ಡ ಮೆಸೇಜು ಬರ್ಯೋದು ಅಂದ್ರೆ ಒಂದೋ , ಎರ್ಡೋ ನಿಮಿಷನೂ ಆಗ್ಬೋದು. ಅದ್ನ ಸದ್ಯಕ್ಕೆ ಬಿಡೋಣ). ಅದನ್ನ ಕಳಿಸಿದ ಮೇಲೆ ಮತ್ತೊಂದು ೩೦ ಸೆಕೆಂಡಾದ್ರೂ ಅದೇ ಮೂಡಲ್ಲಿರ್ತೀವಾ ?..ಅಲ್ಲಿಗೆ ೧ ನಿಮಿಷ ಆಯ್ತು. ದಿನಕ್ಕೆ ನೂರು ಮೆಸೇಜು ಅಂದ್ರೆ ನೂರು ನಿಮಿಷ ಅಂದ್ರೆ ಸುಮಾರು ಒಂದೂವರೆ ,೨ ಘಂಟೆ !!.. “ಹರ್ ಏಕ್ ಪ್ರೆಂಡ್ ಜರೂರಿ ಹೋತಾ ಹೈ..” ಯಾರ್ನೂ ಬಿಡಕ್ಕೆ ಬರಲ್ಲ.. ಆದ್ರೂ..
ಮತ್ತಷ್ಟು ಓದು 







