ವಿಷಯದ ವಿವರಗಳಿಗೆ ದಾಟಿರಿ

Posts from the ‘ಸಂಸ್ಕೃತಿ’ Category

3
ನವೆಂ

ಸಂಸ್ಕೃತಿ ಸಂಕಥನ – ೯

– ರಮಾನಂದ ಐನಕೈ

ವರ್ಶಿಪ್ ಅಂದರೆ ನಮ್ಮ ಪೂಜೆ ಅಲ್ಲ

ಜನಸಾಮಾನ್ಯರ ಮಾತು ಹಾಗಿರಲಿ, ಯಾವುದೇ ಭಾರತೀಯ ತಿಳುವಳಿಕಸ್ತನ ಹತ್ತಿರ ‘ಪೂಜೆ’ ಅಂದರೆ ಏನೆಂದು ಕೇಳಿದರೆ ‘ವರ್ಶಿಪ್’ ಎಂದು ಉತ್ತರ ಕೊಡುತ್ತಾನೆ. ‘ವರ್ಶಿಪ್’ ಅಂದರೆ ಏನೆಂದು ಕೇಳಿದರೆ  ‘ಪೂಜೆ’ ಅನ್ನುತ್ತಾನೆ. ಅದು ಸ್ವಾಭಾವಿಕ. ಏಕೆಂದರೆ ನೂರಾರು ವರ್ಷಗಳಿಂದ ನಮ್ಮ ಜ್ಞಾನ ಇಷ್ಟು ಹದಕ್ಕೆ ಬಂದಿದೆ. ಹೆಚ್ಚು ವಾದ ಮಾಡಿದರೆ ನಿಘಂಟು ತೆರೆದು ತೊರಿಸುತ್ತಾರೆ. ಅಲ್ಲಿ ವರ್ಶಿಪ್ ಅಂದರೆ ಅರ್ಚನೆ, ಪೂಜೆ, ಆರಾಧನೆ ಎಂಬಿತ್ಯಾದಿ ಅರ್ಥಗಳಿವೆ. ನಾವಿಲ್ಲಿ ಚರ್ಚಿಸುತ್ತಿರುವುದು ತರ್ಜುಮೆಯ ಕುರಿತಾಗಲ್ಲ ಅಥವಾ ಪದಗಳ ಅರ್ಥ ವ್ಯತ್ಯಾಸಗಳ ಬಗ್ಗೆಯೂ ಅಲ್ಲ. ಇಂಥ ತಪ್ಪು ಗೃಹಿಕೆಗಳು ಒಂದು ಸಂಸ್ಕೃತಿಯ ಮೇಲೆ ಮಾಡುವ ತಪ್ಪು ಪರಿಣಾಮಗಳ ಕುರಿತು.

ಪಾಶ್ಚಾತ್ಯರು ಭಾರತಕ್ಕೆ ಬಂದು ಇಲ್ಲಿನ ಆಚರಣೆಗಳನ್ನು ನೋಡಿ ‘ಭಾರತೀಯರು ವರ್ಶಿಪ್ ಮಾಡುತ್ತಿಲ್ಲ, ಬದಲಾಗಿ ನೂರಾರು ದೇವರುಗಳನ್ನು ಪೂಜೆ ಮಾಡುತ್ತಾರೆ’ ಎಂದು ಗ್ರಹಿಸಿದರೆ ತೊಂದರೆ ಇಲ್ಲವಾಗಿತ್ತು. ಆದರೆ ಅವರು ಭಾರತೀಯರು ತಪ್ಪುತಪ್ಪಾಗಿ ವರ್ಶಿಪ್ ಮಾಡುತ್ತಿದ್ದಾರೆ ಎಂದು ಗ್ರಹಿಸಿದ್ದೇ ಯಡವಟ್ಟಾಗಲು ಕಾರಣ. ಏಕೆಂದರೆ ಮುಂದೆ ಅವರು ಈ ತಪ್ಪು ವರ್ಶಿಪ್ ಸರಿಪಡಿಸಲು ಪ್ರಯತ್ನಿಸಬೇಕಾಯಿತು. ಈ ಪ್ರಯತ್ನವೇ ಭಾರತೀಯ ಸಂಸ್ಕೃತಿಗೆ ಬಡಿದ ಬಾಲಗ್ರಹ ಎಂಬುದು ಬಾಲಗಂಗಾಧರರ ಬರಹಗಳನ್ನು ಓದಿದಾಗ ಅರಿವಾಗುತ್ತದೆ.

ಮತ್ತಷ್ಟು ಓದು »

2
ನವೆಂ

ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು

1
ನವೆಂ

ಸೊರಗುತ್ತಿರುವ ಕನ್ನಡ ನುಡಿ; ಕೊರಗುತ್ತಿರುವ ಕನ್ನಡಿಗರು

-ರಶ್ಮಿ ಕಾಸರಗೋಡು

ರಾಜ್ಯೋತ್ಸವ…ರಾಜ್ಯದೆಲ್ಲೆಡೆ ಸಂಭ್ರಮದ ವಾತಾವರಣ. ‘ಜೈ ಕನ್ನಡಾಂಬೆ’ ಎನ್ನುವ ಘೋಷಣೆ, ಕನ್ನಡದ ಹೋರಾಟಗಾರರ ಭಾಷಣಗಳು, ಕನ್ನಡದ ಹಿರಿಯ ಕವಿಗಳ ಕಟೌಟ್  ಗಳಿಗೆ ಮಾಲಾರ್ಪಣೆ, ಅದ್ದೂರಿ ಆರ್ಕೆಸ್ಟ್ರಾಗಳು, ‘ಕನ್ನಡ ಉಳಿಸಿ, ಬೆಳೆಸಿ’ಎನ್ನುವ ಕೂಗುಗಳು, ಒಂದಷ್ಟು ಯೋಜನೆಗಳು , ಭರವಸೆಗಳು, ರಾಜ್ಯೋತ್ಸವ ಪ್ರಶಸ್ತಿಗಳು..ಹೀಗೆ ನವಂಬರ್ ತಿಂಗಳಿಡೀ ರಾಜ್ಯೋತ್ಸವ ಆಚರಣೆಯಲ್ಲಿ ಕಳೆದು ಹೋಗುತ್ತದೆ. ಮುಂದಿನ ವರ್ಷ ನವಂಬರ್ ತಿಂಗಳು ಬಂದಾಗ ಇದೇ ಆಚರಣೆ ಪುನರಾವತಿ೯ಸುತ್ತದೆ.

ಪ್ರತೀ ಸಲ ಕರ್ನಾಟಕ ರಾಜ್ಯೋತ್ಸವ ಆಚರಣೆಯ ವೇಳೆ ಕೇಳಿ ಬರುವ ಒಂದೇ ಕೂಗು “ಕನ್ನಡ ಭಾಷೆಯನ್ನು ಉಳಿಸಿ!” ಕರ್ನಾಟಕದ ಮಾತೃಭಾಷೆಯಾಗಿರುವ ಕನ್ನಡವನ್ನು ಕರ್ನಾಟಕದಲ್ಲಿ ಉಳಿಸಿ ಎಂದು ಹೋರಾಟ ಮಾಡಬೇಕಾದ ಪರಿಸ್ಥಿತಿ ಕನ್ನಡಿಗರದ್ದು.

ಹಾಗಾದರೆ ನಮ್ಮ ಭಾಷೆಯನ್ನು ಸಾಯಿಸುತ್ತಿರುವವರು ಯಾರು? ಜಾಗತೀಕರಣ, ವಾಣಿಜ್ಯೀಕರಣದಿಂದ ಪರಭಾಷೆಗಳು ಕನ್ನಡದ ಮೇಲೆ ಪ್ರಭಾವ ಬೀರಿರಬಹುದು. ಆದರೆ ಪ್ರಾಚೀನ ಹಾಗೂ ಸಮೃದ್ದ ವಾದ  ಕನ್ನಡ ನುಡಿ ಇಷ್ಟೊಂದು ಕ್ಷೀಣವಾಗಲು ಕಾರಣಕತ೯ರು ನಾವೇ ಅಲ್ಲವೇ?ಎಂಬುದು ಚಿಂತಿಸಬೇಕಾದ ಸಂಗತಿ.

ಭಾಷೆ ಎನ್ನುವುದು ಸಂವಹನ ಮಾಧ್ಯಮ ಮಾತ್ರವಾಗಿರದೆ ಅದು ನಮ್ಮ ಸಂಸ್ಕೃತಿಯನ್ನು ಬಿಂಬಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತದೆ.  ಅಂತಹ ಸಮೃದ್ಧ ಸಂಸ್ಕೃತಿಯನ್ನು ಹೊಂದಿರುವ ಕನ್ನಡ ನುಡಿ ಇಂದು ಕರ್ನಾಟಕದಲ್ಲಿ ಸೊರಗಿಹೋಗುತ್ತಿದೆ. ಒಂದು ಕಾಲದಲ್ಲಿ “ಕನ್ನಡವೇ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ” ಎಂದು ಹಾಡಿದ್ದ ನಾವು ಇಂದು Sorry, I can’t speak kannada  ಅನ್ನುತ್ತೇವೆ.

ಪರಭಾಷಾ ವ್ಯಾಮೋಹದಲ್ಲಿ  ಕನ್ನಡ  ಬಡವಾಯಿತೆ?

ಹೌದು. ದೂರದ ಬೆಟ್ಟ ಕಣ್ಣಿಗೆ ನುಣ್ಣನೆ ಅನ್ನುವ ಹಾಗೆ ವಿದೇಶೀ ಸಂಸ್ಕೃತಿಯ ಅನುಕರಣೆ ನಮ್ಮ ಭಾಷೆಯನ್ನೂ ಬಲಿತೆಗೆದುಕೊಂಡಿದೆ. ಭೌಗೋಳಿಕ ಪ್ರದೇಶಕ್ಕನುಸಾರವಾಗಿ ನಮ್ಮ ಭಾಷೆಯ ಮೇಲೆ ಇತರ ಸಂಸ್ಕೃತಿ ಹಾಗೂ ಭಾಷೆಯ ಪ್ರಭಾವವಿದ್ದೇ ಇರುತ್ತದೆ. ಅದು ಮುಂದೆಯೂ ಇರುತ್ತದೆ. ಹಾಗಂತ ನಮ್ಮ ಮಾತೃಭಾಷೆಯನ್ನು ಕಡೆಗಣಿಸುವುದು ಎಷ್ಟು ಸರಿ? ಕಾಲ ಕಳೆದಂತೆ ಭಾಷೆ ಪ್ರಬುದ್ದತೆಯನ್ನು ಗಳಿಸುತ್ತದೆ ಎನ್ನುವುದಾದರೆ ಕನ್ನಡ ಭಾಷೆಗೆ ಈ ಸ್ಥಿತಿ ಯಾಕೆ ಬಂತು? ಕನ್ನಡ ಭಾಷೆಯ ಬಗ್ಗೆ ಕೀಳರಿಮೆ ಯಾಕೆ?  ಅಂದ ಹಾಗೆ ಕನ್ನಡ ಅನ್ನ ಕೊಡದ ಭಾಷೆಯೆ?  ಹೀಗೆ ಪ್ರಶ್ನೆಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಮತ್ತಷ್ಟು ಓದು »

31
ಆಕ್ಟೋ

ಹಾಲೋವಿನ್

– ಅಮಿತಾ ರವಿಕಿರಣ

ಪ್ರತಿ ಸೋಮವಾರ..ಮಗನ ಶಾಲೆಯಲ್ಲಿ..ವಾರಪೂರ್ತಿ ಶಾಲೆಯಲ್ಲಿ ನಡೆಯುವ ಕಾರ್ಯಕ್ರಮ,ನಾವು ಕಲಿಸಬೇಕದ್ದು..ಅವರಿಂದ ಹೇಳಿಸುವುದು…ಮತ್ತಿತರ ವಿಷಯಗಳ ಬಗ್ಗೆ ಒಂದು ನ್ಯೂಸ್ ಲೆಟರ್ ಕೊಡಲಾಗುತ್ತೆ ..ಈ ಬಾರಿಯ ಲೆಟರ್ ನಲ್ಲಿದ್ದಿದ್ದು. ಹೆಲ್ಲೋವಿನ (holloween)ಎಂಬ ಆಚರಣೆ..ಮತ್ತು ಅದರ ಕುರಿತಾದ ಚಟುವಟಿಕೆಗಳ ಬಗ್ಗೆ..,,ಹೋದ ವರ್ಷ ನಾನೂ ಹಲ್ಲೋವಿನ್ ದಿನವೇ ಬಂದಿದ್ದೆ..ಆದ್ದರಿಂದ ಅದರ ಆಚರಣೆ..ಅದರ ಕುರಿತಾದ ಯಾವುದೇ ವಿಷಯ ನನಗೆ ಗೊತ್ತಿರಲಿಲ್ಲ..ಎಂ ಎ ಮೊದಲ ವರ್ಷದಲ್ಲಿ ಜಾಗತಿಕ ಜಾನಪದ ಇತಿಹಾಸ ಓದುವಾಗ ಅಲ್ಲಿ ಈ ಶಬ್ದ ಕೇಳಿದ ನೆನಪು ಬಿಟ್ಟರೆ ..ಇದರ ಬಗ್ಗೆ..ಬೇರೆನು ಗೊತ್ತಿರದ ನಾನು..ಬರುವ ಶುಕ್ರವಾರ..ಹಲೋವಿನ್ ಫ್ಯಾನ್ಸಿ ಡ್ರೆಸ್ ಪಾರ್ಟಿ ಇದೆ ಮಗುವನ್ನು ಸಿದ್ದ ಮಾಡಿ ಕಳಿಸಿ ಎಂದಾಗ..ಏನು ಮಾಡೋದು ಎಂಬ ಗೊಂದಲದಲ್ಲಿದ್ದೆ..ಮಗನ ಟೀಚರ್ ಗೆ ಕೇಳಿದಾಗ..ಯಾವುದೇ ಆದೀತು..ರಾಕ್ಷಸ ,ಮಾಟಗಾರ,ಸ್ಕೆಲಿಟನ್,..ಆಕೆಯ ಲಿಸ್ಟ್ ಮುಂದುವರೆದಿತ್ತು..ನನಗೆ ತಲೆ ಚಕ್ರ ಬರುತಿತ್ತು..ಮಕ್ಕಳಿಗೆ ಸಿಂಗಾರ ಮದೊದೆಂದರೆ ನನಗೆ ಮೊದಲಿಂದಲೂ..ಅದೇನೋ ವೀಪರೀತ  ಆಸಕ್ತಿ..ಓಣಿಯ ಮಕ್ಕಳು ಬಂಧುಗಳ  ಮಕ್ಕಳು..ಮನೇ  ಪಕ್ಕದ ಖಾಲಿ ಜಾಗೆಯಲ್ಲಿ..ಟೆಂಟ ಕಟ್ಟಿಕೊಂಡ ಅಲೆಮಾರಿ ಮಕ್ಕಳು ಯಾರಾದರೂ ಆದೀತು..ಅವರನ್ನು ಕರೆದು ತರ ತರದ ವೇಷ ಮಾಡಿ ಫೋಟೋ ತೆಗೆಡಿದುತ್ತಿದ್ದೆ,,,ನನ್ನ ಮಗನಿಗೂ..ಇವನ್ನೆಲ್ಲ ಪ್ರಯೋಗಿಸಿದ್ದೆನಾದರು..ಕೃಷ್ಣಾ,,ಬುದ್ಹ..ರಾಮ..ಶಕುಂತಲೆ..ಹುಡುಗಿವೇಶ.ಶಂಕರಾಚಾರ್ಯ ಬಿಟ್ಟರೆ..ಬೇರ್ಯಾವ ದೆವ್ವದ ವೇಷ ಹಾಕುವ ಧೈರ್ಯ ಮಾಡಿರಲಿಲ್ಲ.  ..ಈಗ ಶಾಲೆಯಲ್ಲೇ ಹೇಳಿದ್ದಾರೆ..ಅಂದ ಮೇಲೆ..ಮಾಡಲೇಬೇಕಲ್ಲ..ಸರಿ …ಆದರೆ ಇವರು ಬೇರೆಲ್ಲ ಬಿಟ್ಟು ಭಯಾನಕ ವೇಷಗಳನ್ನು ಈ ಹಬ್ಬದಲ್ಲಿ ಹಾಕೊದ್ಯಾಕೆ ಅನ್ನೋದು..ನನ್ನ ಪ್ರಶ್ನೆ ಆಗಿತ್ತು..ಮತ್ತೆ ಕೇಳಬೇಕೆ..???ಶುರು ಆಯ್ತು..ತನಿಖೆ…ಹಲೋವಿನ್..ಬಗ್ಗೆ..

29
ಆಕ್ಟೋ

ಇದು ”ನಮ್ಮ” ಮೆಟ್ರೋನಾ ????

– ಮಹೇಶ.ಎಮ್.ಆರ್

ಬಹುದಿನಗಳಿಂದ ನಿರೀಕ್ಷೆಯಲ್ಲಿದ್ದ ಬೆಂಗಳೂರು ಮೆಟ್ರೊ ಸೇವೆ ಶುರು ಆಗಿದೆ. ಮೆಟ್ರೊದಲ್ಲಿನ ಮೊದಲ ಓಡಾಟ ಹೊಸ ಅನುಭವ ನೀಡಿತು. ನಮ್ಮ ಮೆಟ್ರೊ ಸೇವೆಯನ್ನು ಅನುಭವಿಸಿದ ಮೇಲೆ ಇದೇ ಸಮಯದಲ್ಲಿ ಗಮನ ಸೆಳೆದಿದ್ದು ಎಂದರೆ ಅಲ್ಲಿ ಪಾಲಿಸಲಾದ ಬಾಷಾ ನೀತಿ. ಸಂವಿಧಾನದ ಮೂಲಕ ನಾವು ತಿಳಿದುಕೊಂಡಿದ್ದು ಏನು ಅಂದ್ರೆ, ಭಾರತದಲ್ಲಿ ಎಲ್ಲರೂ ಸಮಾನರು ಎಲ್ಲ ಬಾಷೇಗಳೂ ಸಮಾನ ಎಂದು. ಆದರೆ ಕರ್ನಾಟಕದಲ್ಲಿ ಅನುಷ್ಟಾನವಾಗುವ ಯೋಜನೆಗಳಲ್ಲಿ ಈ ನಮ್ಮ ತಿಳುವಳಿಕೆಯನ್ನು ಹುಸಿ ಮಾಡುವ ಎಲ್ಲ ಪ್ರಯತ್ನಗಳು ನಡೆಯುತ್ತಿವೆ. ನಮ್ಮ ಮೆಟ್ರೊದಲ್ಲೂ ಇದನ್ನು ಕಂಡಿದ್ದು ಸುಳ್ಳಲ್ಲ. ಎಂದಿನಂತೆ ಕೇಂದ್ರ ಸರಕಾರ ಕರ್ನಾಟಕದ ಯೋಜನೆಗಳಿಗೆ ನಮ್ಮದೇ ತೆರಿಗೆ ಹಣವನ್ನು ಆರ್ಥಿಕ ಸಹಕಾರದ ಮೂಲಕ ನೀಡುವುದರ ಜೊತೆಗೆ ತನ್ನ ಹುಳುಕು ಬಾಷಾ ನೀತಿಯನ್ನು ನಮ್ಮ ಮೆಟ್ರೊ ಮೂಲಕ ಪ್ರದರ್ಶಿಸಿದೆ.

ಬೆಂಗಳೂರಿಗರಿಗೆ ಮೀಸಲಾಗಿರುವ ಈ ಸೇವೆಯಲ್ಲಿ ವಿನಾಕಾರಣ ಎಲ್ಲೆಡೆ ಹಿಂದಿಯನ್ನು ಬಳಸಲಾಗಿದೆ. ಬೆಂಗಳೂರಿನಲ್ಲಿ ೧% ಕ್ಕಿಂತಲೂ ಕಡಿಮೆಯಿರುವ ಹಿಂದಿ ಬಲ್ಲವರಿಗೆ ತೊಂದರೆ ಆಗಬಾರದು ಎಂಬ ನಿಯಮ ಇಲ್ಲಿ ಪಾಲಿಸಲಾಗಿದೆ. ಬೆಂಗಳೂರಿನಲ್ಲಿರುವ ಹಿಂದಿ ಬಾಷಿಕರ ಸಂಖ್ಯೆಯಷ್ಟೆ ಹೆಚ್ಚು ಕಡಿಮೆ ದಿಲ್ಲಿಯಲ್ಲೂ ಕನ್ನಡ ಬಾಷಿಕರ ಸಂಖ್ಯೆಯಿದೆ. ಈ ಸಂಖ್ಯಾ ಆಧಾರದ ಮೇಲೆ ನೋಡುವುದಾದರೆ, ಬೆಂಗಳೂರಿನ ನಮ್ಮ ಮೆಟ್ರೊದಲ್ಲಿ ಹಿಂದಿಯಲ್ಲಿ ಸೇವೆ ಕೊಡುವುದಾದರೆ ದಿಲ್ಲಿಯಲ್ಲಿನ ಮೆಟ್ರೊದಲ್ಲೂ ಕನ್ನಡದಲ್ಲಿ ಸೇವೆ ಕೊಡಬೇಕು. ಆದರೆ ಭಾರತದ ಬಾಷಾ ನೀತಿ ಪ್ರಕಾರ ಇದು ಸಾದ್ಯವಿಲ್ಲ. ದಿಲ್ಲಿ ಮೆಟ್ರೊದಲ್ಲಿ ಸ್ಥಳೀಯ ಬಾಷೆ ಮತ್ತು ಆಂಗ್ಲ ಬಾಷೆಗೆ ಮಾತ್ರ ಸ್ಥಾನ ಕಲ್ಪಿಸಿದರೆ ಬೆಂಗಳೂರಿನಲ್ಲಿ ಸ್ಥಳೀಯ ಮತ್ತು ಆಂಗ್ಲ ಬಾಷೆ ಜೊತೆಗೆ ಇನ್ನೊಂದು ಬಾಷೆಯನ್ನು ಸ್ಥಳೀಯರ ಮೇಲೆ ಹೇರಲಾಗುತ್ತಿದೆ. ದಿಲ್ಲಿಗೊಂದು ನಿಯಮ ಬೆಂಗಳೂರಿಗೊಂದು ನಿಯಮ ಯಾಕೆ.? ಇಂಥ ಹುಳುಕಿನ ಬಾಷಾ ನೀತಿಯಿಂದ ಒಕ್ಕೂಟ ವ್ಯವಸ್ಥೆಗೆ ಬೆಲೆಯಿಲ್ಲದಂತಾಗಿದೆ. ಎಲ್ಲ ಬಾಶೆಗಳೂ ಸಮಾನ ಎಂಬ ಸಂದೇಶ ಸಾರಬೇಕಾದ ಸರಕಾರಗಳೇ ಇಂದು ತಮ್ಮ ಯೋಜನೆಗಳ ಮೂಲಕ ಸ್ಥಳೀಯ ಬಾಷೆಗಳಿಗಿಂತ ಹಿಂದಿಗೆ ಕೊಂಬು ಜಾಸ್ತಿ ಎಂಬ ಸಂದೇಶ ರವಾನಿಸುತ್ತಿವೆ.

ಮತ್ತಷ್ಟು ಓದು »

29
ಆಕ್ಟೋ

ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ : ಬಣ್ಣದ ಬದುಕು 8 – ಅಸೂಯೆ ತಂದ ಆಡಳಿತ

ಯಕ್ಷಗಾನ ರಂಗದಲ್ಲಿ ಎಲ್ಲೂ ಸಲ್ಲುವ ಯಾವ ವೇಷಕ್ಕೂ ಸೈ ಎನಿಸಿಕೊಳ್ಳುತ್ತಿದ್ದ  ಒಬ್ಬ ಪ್ರಬುದ್ಧ ಹಾಗೂ ಮೇರು ಕಲಾವಿದರಾಗಿದ್ದ  ದಿವಂಗತ ಕುರಿಯ ವಿಠಲ ಶಾಸ್ತ್ರಿಯವರು  ಜನಿಸಿದ್ದು ಕಳೆದ ಶತಮಾನದ 1912ರ ಸೆಪ್ಟೆಂಬರ್ 08ರಂದು. ತಮ್ಮ ವಯಸ್ಸಿನ ನೂರನೇ ಸಂವತ್ಸರದ ಈ ಸಂದರ್ಭದಲ್ಲಿ ಖ್ಯಾತ ಪತ್ರಕರ್ತ ಪದ್ಯಾಣ ಗೋಪಾಲಕೃಷ್ಣ (ಪ. ಗೋ.)ರವರರು ನಿರೂಪಣೆ ಗೈದಿರುವ ಕುರಿಯ  ವಿಠಲ ಶಾಸ್ತ್ರಿಯವರ ಆತ್ಮ ಕಥನ “ಬಣ್ಣದ ಬದುಕು”  ಯಕ್ಷಗಾನ ಅಭಿಮಾನಿಗಳಿಗಾಗಿ ನಿಲುಮೆದಲ್ಲಿ ಪ್ರಕಟವಾಗುತ್ತಿದೆ.
 
ಮಾಡುತ್ತಲಿದ್ದ ಸುಧಾರಣಾ ಪ್ರಯೋಗಗಳನ್ನು ಮೇಳದ ಯಜಮಾನರಾದ ಶ್ರೀ ಕೊರಗಪ್ಪ ಶೆಟ್ಟಿಯವರು ಸ್ವಾಗತಿಸುತ್ತಿದ್ದರು. ಅಂತೆಯೇ, ಪ್ರೇಕ್ಷಕ ವರ್ಗದವರಿಂದಲೂ ಮೆಚ್ಚುಗೆ ಗಳಿಸುತ್ತಿದ್ದೆವು. ಇತರ ಕೆಲವು ತಾಪತ್ರಯಗಳನ್ನು ಸಹಿಸಿಕೊಂಡಾದರೂ, ಕಲಾ ವ್ಯವಸಾಯವನ್ನು ಹುಲುಸಾಗಿ ಮಾಡುತ್ತೇನೆ, ಆಸೆಯ ಕೆಲವು ಬಳ್ಳಿಗಳಿಗಾದರೂ ನೀರೆರೆಯುತ್ತೇನೆ ಎನ್ನುತ್ತಲೇ ವರ್ಷದ ಮುಕ್ಕಾಲು ಭಾಗವನ್ನು ನೂಕಿದೆ.ಮಾತ್ಸರ್ಯದ ಮೊಳಕೆ 
ನಾನು ತಿಳಿದಿದ್ದಂತೆಯೇ, ಕೆಲವೊಂದು ಮಂದಿ ಇತರ ಕಲಾವಿದರ ಮಾತ್ಸರ್ಯ ಬೀಜದ ಮೊಳಕೆಯಾಗಿತ್ತು. ಆದರೆ, ನಾನು ಹೋಗುತ್ತಲಿರುವುದು ಸರಿಯಾದ ದಾರಿ ಎಂಬ ಆತ್ಮವಿಶ್ವಾಸ ನನಗಿತ್ತು. ಹೇಗಾದರೂ ನನ್ನ ಮೇಲೆ ಮತ್ಸರವಿದ್ದರೆ ಅದು ನನ್ನ ಮೇಲಷ್ಟೆ ಪ್ರಯೋಗವಾಗಬೇಕು-ಬೇರಾರನ್ನೂ ಮುಟ್ಟಲಾರದು ಎಂದುಕೊಂಡಿದ್ದೆ.

ಮತ್ತಷ್ಟು ಓದು »

28
ಆಕ್ಟೋ

ಹಾವು ಪುರಾಣ!

-ವಾಣಿಶೆಟ್ಟಿ ಕುಂದಾಪುರ
“ನಾಗಾ…

ನೀ ಹೀಂಗೆಲ್ಲ ಬಪ್ಪಕಾಗ..
ಮಕ್ಕಳ್ ಮರಿ ತಿರ್ಗು ಜಾಗ
ಜಾಗ ಖಾಲಿ ಮಾಡ ಬೇಗ …”

ಮನೆ ಕಡೆ ನಾಗರಹಾವು ಬಂದಾಗಲೆಲ್ಲಾ ಅದನ್ನು ಓಡಿಸೋವಾಗ “ಅದಕ್ಕೆ ನೋವು ಮಾಡಬೇಡಿ” ಅನ್ನೋ ದೊಡ್ಡವರ ರಾಗದ ಹಿನ್ನಲೆಯಲ್ಲಿ ನಮ್ಮ ಕುಂದಗನ್ನಡದ ಪ್ರಾಸ ಹೀಗಿತ್ತು :) ನಮ್ಮ ಹಳ್ಳಿಗಳಲ್ಲಿ ಹಾವಿನ ಬಗ್ಗೆ ಭಯ ಮತ್ತು ಆಸಕ್ತಿ ಸ್ವಲ್ಪ ಕಮ್ಮಿನೇ ಜನರಲ್ಲಿ.ಆದರೆ ನಂಗೆ ಮಾತ್ರ ಇವತ್ತಿಗೂ ಅಷ್ಟೇ ಉತ್ಸಾಹ ಅವುಗಳ ಬಗ್ಗೆ.ಅದರಲ್ಲೂ ನಾಗರಹಾವು ಅಂದ್ರೆ ಸಕತ್ ಖುಷಿ..ಅದು ಮಾಡುವಷ್ಟು ಗೊಂದಲ ,ಖರ್ಚು,ಭಯ ಮತ್ಯಾವ ಹಾವುಗಳು ಮಾಡೋದಿಲ್ಲ.ಅಪರೂಪಕ್ಕೆ ಅವುಗಳು ಕೋಳಿ ಗೂಡಲ್ಲಿರೋ ಮೊಟ್ಟೆ ತಿನ್ನೋಕೆ ಬಂದರೆ ಈ ಅಕ್ಕ ಪಕ್ಕದ ಮನೇಲಿ ಎಲ್ಲ ಹೋ ದೇವ್ರ್ ಹಾವ್ ಬಂತ್ ..ಎಂದು ಪಡುವ ಸಂಭ್ರಮವೋ ಸಂಭ್ರಮ!ನಂತರ  ಅದಕ್ಕಿಷ್ಟು ಹಾಲು ಇಟ್ಟು ,ಅಕ್ಕಿ ಚೆಲ್ಲಿ ಕೈ ಮುಗಿಯೋರು !ಆದರೆ ಅದು ಕುಡಿದದ್ದು ನಾ ನೋಡೇ ಇಲ್ಲ.ಪಾಪ !ಅದರ ಹೆದರಿಕೆ ಅದಕ್ಕೆ ಎಲ್ಲಿ ಹೊಡಿತಾರೋ ಅಂತ!ಯಾವ ಹಾವಿಗೂ ಇರದ ಮುಂಡು ಬಾಲ ಇದಕ್ಕೆ ಇರೋದರಿಂದ  ಅದರ ನಿಕ್ ನೇಮ್ ಮುಂಡಪ್ಪ.

ಒಮ್ಮೆ ನಮ್ಮ ಪಕ್ಕದ ಕಾಡಿಗೆ ನವಿಲು ಹಿಡಿಯುವ ಗುಂಪೊಂದು ಬಂದಿತ್ತು.ಅವರ ಜೊತೆ ನಾವು ಕೂಡ ನೋಡಲು ಹೋಗಿದ್ದೆವು .ಚಂದದ ನವಿಲು ಗರಿ ಸಿಗುತ್ತಲ್ಲಾ ಅಂತ!ಸರಿ ಹೋಗ್ತಾನೆ ಒಂದು ದೊಡ್ಡ ನವಿಲು ಸಿಕ್ಕಿಬಿಟ್ಟಿತು.ಅವರು ಅದನ್ನು ಕೊಲ್ತಾರೆ ಅಂತ ಮಾತ್ರ ನಮಗೆ ಗೊತ್ತಿರಲಿಲ್ಲ.ಅವರು ಅದನ್ನ ಕೊಂದು ಹೊಟ್ಟೆ ಸೀಳಿದಾಗ ಅಲ್ಲೊಂದು ಪುಟ್ಟ ನಾಗರ ಮರಿ!ಆಮೇಲೆ ನಾಗರ ಹಾವಿನ ಹೆಣ ಕಂಡ ತಪ್ಪಿಗೆ (ಅಷ್ಟು ಚಂದದ ನವಿಲು ಕೊಂದಿದ್ದು ಮಾತ್ರ ಸರಿಯಂತೆ ಅವರ ಪ್ರಕಾರ ) ಸರ್ಪ ಸಂಸ್ಕಾರ ,ಅದೂ ಇದೂ ಪೂಜೆ ಮಾಡಬೇಕಾಯ್ತು ,ಆಮೇಲೆ ನವಿಲು ಹಿಡಿಯೋದು ಬಿಟ್ಟಿರಬೇಕು ಬಹುಶಃ :) ಮತ್ತಷ್ಟು ಓದು »

27
ಆಕ್ಟೋ

ಹಸಿವಿನ ಹಾದರಕ್ಕೆ ಹುಟ್ಟಿದ ಭ್ರಷ್ಟಾಚಾರ…

-ಸಾತ್ವಿಕ್ ಎನ್ ವಿ

ಮೊನ್ನೆ ಮೂರು ದಿವಸ ಬೆಂಗಳೂರಿನಲ್ಲಿ ಇದ್ದೆ. ನಗರ ಸಾರಿಗೆ ಬಸ್ಸುಗಳೇ ನನ್ನ ಓಡಾಟದ ಒಡನಾಡಿಗಳು. ಮಂಗಳೂರಿನ ಬಸ್ಸುಗಳಲ್ಲಿ ಓಡಾಡಿದವರಿಗೆ ಇಲ್ಲಿನ ವ್ಯವಸ್ಥೆ ತುಸು ನಿಧಾನ ಆನ್ನಿಸೀತು. ಇದ್ದ ಮೂರು ದಿನವು ಓಡಾಟದ ಸಲುವಾಗಿ ಹತ್ತಾರು ಬಸ್ಸುಗಳಲ್ಲಿ ಪ್ರಯಾಣಿಸುವಾಗಲು ಒಂದು ಸಾಮಾನ್ಯ ಕ್ರಿಯೆಯೊಂದು ನನ್ನ ಗಮನಕ್ಕೆ ಬಂತು. ನೀವು ಬಸ್ಸು ಹತ್ತಿ ಒಂದೆರಡು ನಿಲ್ದಾಣಗಳ ನಂತರ ಇಳಿಯುವವರಾಗಿದ್ದರೆ ನೀವು ಸರಿಯಾದ ಹಣಕೊಟ್ಟರೂ ಕಂಡಕ್ಟರ್ ನಿಮಗೆ ಟಿಕೇಟ್ ಕೊಡುವುದಿಲ್ಲ!! ಒಮ್ಮೆ ನಾನು ಬಾಯಿ ಬಿಟ್ಟು ಕಂಡಕ್ಟರನ್ನು ಟಿಕೇಟ್ ಕೊಡುವಂತೆ ಕೇಳಿದೆ. ಅವನು ಕೈಯಲ್ಲಿಯೇ ಸನ್ನೆ ಮಾಡಿ ಸುಮ್ಮನಿರುವಂತೆ ಹೇಳಿದ. ನಿಧಾನಕ್ಕೆ ೫ ರೂಪಾಯಿಯನ್ನು ನನ್ನ ಕೈಗೆ ಕೊಟ್ಟ. ನನಗೆ ಏನು ಹೇಳಬೇಕೋ ತಿಳಿಯಲಿಲ್ಲ. ನಾನು ಇಳಿಯಬೇಕಿದ್ದ ಸ್ಟಾಪ್ ಗೆ ಮೆಜೆಸ್ಟಿಕ್ ನಿಂದ ೮ ರೂಪಾಯಿ ಟಿಕೇಟ್ ಕೊಳ್ಳಬೇಕು. ಆದರೆ ಕೊಟ್ಟ ಹತ್ತು ರೂಪಾಯಿಯಲ್ಲಿ  ಐದು ರೂಪಾಯಿ ತೆಗೆದುಕೊಂಡು ಉಳಿದ ಐದು ರೂಪಾಯಿ ವಾಪಸ್ಸು ಕೊಟ್ಟ. ಟಿಕೇಟ್ ಮಾತ್ರ ಇಲ್ಲ. ಅವನ ಮುಖದಲ್ಲಿ ವಿನ್ ವಿನ್ ಸಿದ್ದಾಂತದ ಮಂದ ನಗೆಯಿತ್ತು. ನನ್ನ ಮನದಲ್ಲಿ ಇಡೀ ದಿನ ತಪ್ಪು ಮಾಡಿದ ಅಪರಾಧಿ ಪ್ರಜ್ಞೆ.

ಇಂಥ ಪ್ರಸಂಗಗಳು ಬೆಂಗಳೂರಿಗರಿಗೆ ಸಾಮಾನ್ಯವಿರಬಹುದು. ಆದರೆ ಒಮ್ಮೆಮ್ಮೆ ಭೇಟಿಕೊಡುವ ನನ್ನಂಥವರಿಗೆ ತೀರಾ ಮಜುಗರವನ್ನು ತಂದು ಬಿಡುತ್ತವೆ. ನನಗಂತೂ ಈ ಪ್ರಸಂಗವಾದ ನಂತರ ಬೆಂಗಳೂರಿನ ಕಂಡಕ್ಟರಗಳ ಬಗ್ಗೆ ವಿಪರೀತ ಕೋಪ ಬಂದದ್ದೂ ನಿಜ. ಅಗಲೇ ನಿಶ್ಚಯ ಮಾಡಿದೆ, ಮತ್ತೊಮ್ಮೆ ಹೀಗೇನಾದರೂ ಕಡಿಮೆ ಹಣ ತೆಗೆದುಕೊಂಡು ಟಿಕೇಟ್ ಕೊಡದಿದ್ದರೆ ಸರಿಯಾಗಿ ಬೈಯ್ಯಬೇಕು ಅಂತ. ಮರುದಿನವೂ ಕಂಡಕ್ಟರ್ ಅದೇ ಕೆಲಸ ಮಾಡಿಬಿಡಬೇಕೇ? ನನಗೆ ಎಲ್ಲಿತ್ತೋ ಸಿಟ್ಟು … ಬಾಯಿಗೆ ಬಂದಂತೆ ಮಾತಾಡಲು ಆರಂಭಿಸಿದೆ. ಆದರೆ ಮಹಾನುಭಾವನಿಗೆ ಅದು ತಾಗಿದಂತೆ ಕಾಣಲೇ ಇಲ್ಲ!!!  ಏನೂ ಆಗಿಯೇ ಇಲ್ಲ ಎಂಬಂತೆ ನನ್ನ ಪಕ್ಕದಲ್ಲಿ ಖಾಲಿ ಇದ್ದ ಸೀಟಿನಲ್ಲಿ ಕುಳಿತು ನಸುನಗುತ್ತ ಕೇಳಿದ ’ಸಾರ್, ನೀವು ಈ ಊರಿಗೆ ಹೊಸಬರಾ? ಅಂತ.  ನಾನು ’ಅದೆಲ್ಲ ಇರಲಿ ಟಿಕೇಟ್ ಕೊಡಿ’ ಅಂದೆ. ಅವನು ಮತ್ತೂ ಕೂಲ್ ಆಗಿ ಮಾತಾಡೋಕೆ ಸ್ಟಾರ್ಟ್ ಮಾಡಿದ. ’ಸಾರ್, ನಿಮಗೆ ನಾವು ಟಿಕೇಟ್ ಕೊಡದೇ ಉಳಿಸಿದ ೫೦ – ೧೦೦ ರೂಪಾಯಿ ಬಗ್ಗೆ ಮಾತ್ರ ಗೊತ್ತು. ಅದರ ಬಗ್ಗೆ ನಿಮಗೆ ಸಿಟ್ಟು ಬರುತ್ತೆ. ಆದರೆ ನಮಗೆ ನಮ್ಮ ಜೀವನದ ಬಗ್ಗೆಯೇ ಸಿಟ್ಟು ಬರುತ್ತೆ ಸರ್. ಒಂದು ಕಡೆ ಮೇಲಾಧಿಕಾರಿಗಳ ಒತ್ತಡ, ಇನ್ನೊಂದು ಕಡೆ ಪ್ರಯಾಣೀಕರ ಕಿರಿಕಿರಿ, ಒಂದು ಸರಿಯಾದ ಊಟ ನಿದ್ದೆಯನ್ನು ಮಾಡೋಕೆ ಆಗದ ಪರಿಸ್ಥಿತಿಯಲ್ಲಿ ನಾವಿದ್ದೇವೆ ಸರ್. ಮತ್ತಷ್ಟು ಓದು »

26
ಆಕ್ಟೋ

ಯೋಚಿಸಿ ಮಿಸ್ಡ್ ಕಾಲ್ ಕೊಡುವ ಮುನ್ನ

-ಇಂದುಶ್ರೀ ಬೆಂಗಳೂರು

 “ಮನೆ ಹತ್ರ ಬಂದಾಗ ಒಂದು ಮಿಸ್ಡ್ ಕಾಲ್ ಕೊಡು. ನಾ ಬಂದು ನಿನ್ನ ಭೇಟಿಯಾಗ್ತೀನಿ”

“ಬೆಳಿಗ್ಗೆ ಬೇಗ ಹೊರಡಬೇಕು. ನಾನು ಬೇಗ ಏಳೊಲ್ಲ. ನಿಂಗೆ ಎಚ್ಚರ ಆದ್ರೆ ೫ ಗಂಟೆಗೆ ಮಿಸ್ಡ್ ಕಾಲ್ ಕೊಡ್ತೀಯಾ?”
“ನಾನು ವಿಜಯನಗರಕ್ಕೆ ಬಂದಾಗ ಮಿಸ್ಡ್ ಕಾಲ್ ಕೊಡ್ತೀನಿ.ಆಗ ನೀನು ಮನೆಯಿಂದ ಹೊರಡು.”
ಹೌದಲ್ಲ… ಇದು ನಾವು ಸಾಮಾನ್ಯವಾಗಿ ಹೇಳುವ ಮಾತು. ಸುಮ್ನೆ ಸಿಗ್ನಲ್ ಕೋಡೋದಕ್ಕೆಲ್ಲಾ ಯಾಕೆ ದುಡ್ಡು ದಂಡ ಮಾಡೋದು ಅಂತ. ೧ ಸೆಕೆಂಡಿಗೆ ೧ ಪೈಸೆ ಚಾರ್ಜ್ ಮಾಡಿದ್ರೂ ಅದನ್ನು ಕಳೆದುಕೊಳ್ಳೋಕೂ ನಾವು ತಯಾರಿಲ್ಲ. ಆದ್ರೆ ಒಂದು ಮಿಸ್ಡ್ ಕಾಲ್ ನಮ್ಮ ಮೊಬೈಲ್ ಇಂದ ನಮ್ಮ ಸ್ನೇಹಿತರ ಮೊಬೈಲ್ ಗೆ ಹೋಗೋದಕ್ಕೆ ಏನೆಲ್ಲಾ ಕೆಲಸಗಳು ನಡೆಯುತ್ತವೆ ಗೊತ್ತಾ?

ಮೊಬೈಲ್ ಉಪಕರಣ ರೇಡಿಯೋ ತರಂಗಗಳ ಮೂಲಕ ನಮ್ಮ ಮಾತನ್ನು ರವಾನಿಸುತ್ತದೆ ಎಂಬುದು ಬಹುತೇಕರಿಗೆ ಗೊತ್ತು. ಆದರೆ ನಮ್ಮ ಮೊಬೈಲ್ ಇಂದ ಕರೆ ಮಾಡುತ್ತಿರುವವರ ಮೊಬೈಲ್ ವರೆಗೆ ಸಂದೇಶಗಳು ಕೇವಲ ರೇಡಿಯೋ ತರಂಗಗಳ ಮೂಲಕ ಗಾಳಿಯಲ್ಲೇ ಹೋಗುತ್ತಾ? ಇದಕೆ ಉತ್ತರ “ಇಲ್ಲ”. ಹಾಗಿದ್ರೆ ಮೊಬೈಲ್ ಇಂದ ಮೊಬೈಲ್ ಗೆ ಸಂಪರ್ಕ ಹೇಗೆ? ನಮ್ಮಲ್ಲನೇಕರು ಬಳಸುತ್ತಿರುವ ಜಿ.ಎಸ್.ಎಂ(Global System for Mobile communication) ತಂತ್ರಜ್ಞಾನದಲ್ಲಿ ಮೊಬೈಲ್ ದೂರ‍ಸಂಪರ್ಕ ಸೇವೆ ಲಭಿಸುವುದು ಹೀಗೆ…

ಮತ್ತಷ್ಟು ಓದು »

25
ಆಕ್ಟೋ

ಒಳಗಿಳಿದ ಬೆಂಗಳೂರು ಹಾಗೂ ನೈಪಾಲ್

-ಸುಪ್ರೀತ್ ಕೆ ಎಸ್ 

“ಇದು ನನ್ನ ಊರಲ್ಲ. ನಾನು ಇಲ್ಲಿ ಸೇರಿದವನಲ್ಲ. ಇದು ಸರಿಹೋಗುತ್ತಿಲ್ಲ” ಮೆಜೆಸ್ಟಿಕ್ ನಿಂದ ಆಟೋ ಹಿಡಿದು ಕೆ.ಆರ್ ವೃತ್ತದ ಬಳಿಯಿರುವ ನನ್ನ ಕಾಲೇಜಿಗೆ ತಲುಪುವುದಕ್ಕೆ ರಸ್ತೆಗಳನ್ನು ಹಾದು ಹೋಗುವಾಗ ನನಗೆ ಅನ್ನಿಸುತ್ತಿದ್ದದ್ದು ಹೀಗೆ. ನಾನು ಹೊಸ ಊರಿನ ಚಹರೆಯ ಅಪರಿಚಿತತೆಯನ್ನು ಎದುರುಗೊಂಡಿದ್ದು ಈ ಭಾವನೆಯಲ್ಲೇ. ದೇಶದ ಮೂಲೆ ಮೂಲೆಗಳಿಂದ ದಿನವೊಂದಕ್ಕೆ ಸಾವಿರಾರು ಮಂದಿ ಬೆಂಗಳೂರು ಸೇರುತ್ತಾರೆ. ಬೆಂಗಳೂರು ಸಹ ಕೊಸರದೆ ಕೆಮ್ಮದೆ ಎಲ್ಲರನ್ನು ಒಳಕ್ಕೆ ಬಿಟ್ಟುಕೊಳ್ಳುತ್ತದೆ. ಆದರೆ ಪ್ರವಾಸಿಯಾಗಿಯಲ್ಲದೆ ಸ್ಥಾವರ ಸ್ಥಾಪಿಸಿಕೊಳ್ಳಲು ಬಂದಿದ್ದ ನನ್ನನ್ನು ಒಳಕ್ಕೆ ಬಿಟ್ಟುಕೊಳ್ಳಲು ಬೆಂಗಳೂರು ಬಿಗುಮಾನ ತೋರಿದ ಹಾಗೇ ನನಗೆ ಭಾಸವಾಗಿತ್ತು. ಅತ್ತಿಂದಿತ್ತ ಓಡಾಡುವ ಅಷ್ಟು ಜನರಲ್ಲಿ ಯಾರಿಗೂ ನಾನು ಬಂದುದದರ ಕುರಿತು ಸಂಭ್ರಮವಿಲ್ಲ. ಅಸಲಿಗೆ ಟಾರು ಕವಿದ ರಸ್ತೆಯ ಮೇಲೆ ನಾನೊಬ್ಬ ಮಾಂಸ ಮಜ್ಜೆಗಳ ಮನುಷ್ಯ ನಡೆದು ಹೋಗುತ್ತಿರುವುದೂ, ನಾನು ಇಲ್ಲಿಯವನಾಗಲಿಕ್ಕೆ ಸಾಧ್ಯವಾಗದೆ ಒದ್ದಾಡುತ್ತಿರುವುದು ಯಾರ ಕಣ್ಣಿಗೂ ಮುಖ್ಯವಾಗಿಯೇ ಇರಲಿಲ್ಲ. ಓಡಾಡುವ ಜನರ ಕಣ್ಣಿಗೆ ಯಾವುದೂ ಮುಖ್ಯವಾಗಿದ್ದಂತೆ ಕಾಣುತ್ತಿರಲಿಲ್ಲ.

ವರ್ಷಗಳು ಕಳೆದಿವೆ. ಅಂದು ಕೆ.ಆರ್.ವೃತ್ತದಿಂದ, ಮೈಸೂರು ಬ್ಯಾಂಕ್ ವೃತ್ತದ ನಡುವೆ ಇರುವ ಗೊಂದಲಕಾರಿ ಒಮ್ಮಾರ್ಗಗಳ ಚಕ್ರವ್ಯೂಹದಲ್ಲಿ ಸಿಲುಕಿಕೊಂಡು, ಮರಳುಗಾಡಿನಲ್ಲಿ ದಿಕ್ಕು ತಪ್ಪಿದವನಂತೆ ಓಡಾಡುತ್ತಿದ್ದೆ. ರಾತ್ರಿ ಎಂಟುಗಂಟೆ ದಾಟಿತ್ತು. ಕತ್ತಲು ಗಾಢವಾದಷ್ಟು, ವಾಹನಗಳ ಸಂಖ್ಯೆ ವಿರಳವಾದಷ್ಟೂ ಎದೆ ಬಡಿತ ಜೋರಾಗುತ್ತಿತ್ತು. ದಾರಿಹೋಕರೊಂದಿಗೆ ಮಾತನಾಡಲೂ ಸಂಕೋಚ. ಯಾರಲ್ಲಾದರೂ ದಾರಿ ಕೇಳಬೇಕೆ ಬೇಡವೇ ಎನ್ನುವುದಕ್ಕೆ ನೂರು ಮಾರು ದೂರದಿಂದ ನಡೆದು ಬರುವ ವ್ಯಕ್ತಿಯನ್ನು ಅವಲೋಕಿಸುವುದು. ಆತನ ಚರ್ಯೆಯಲ್ಲಿ, ವರ್ತನೆಯಲ್ಲಿ, ಬಾಡಿ ಲ್ಯಾಂಗ್ವೇಜಿನಲ್ಲಿ ತುಸುವೇ ಆಕ್ರಮಣ ಕಂಡೊಡನೆ ಅವನಿಂದ ಕಣ್ಣು ಕೀಲಿಸಿ ಇನ್ನೊಬ್ಬನಿಗಾಗಿ ಕಾಯುವುದು. ಯಾರೋ ತೋರಿದ ದಿಕ್ಕಿನಲ್ಲಿ ನಿಂತು ಎಂದೂ ಬರದಿರುವ ಬಿ.ಎಂ.ಟಿ.ಸಿ ಬಸ್ಸಿಗಾಗಿ ಕಾಯುವುದು. ಕಾಲು ನಡಿಗೆಯ ದೂರದಲ್ಲಿದ್ದ ಮೆಜೆಸ್ಟಿಕ್ ಗೆ ದಾರಿ ಯಾವುದೆಂದು ಕೇಳುತ್ತ ಅಲೆಯುವುದು. ಬೆಂಗಳೂರೆಂಬ ಮರಳುಗಾಡಿನ ಓಯಸಿಸ್ ಆಗಿ ಕಂಡಿತ್ತು ಅಂದು ಮೆಜೆಸ್ಟಿಕ್. ಕಣ್ಣೆದುರು ಸರ್ರೆಂದು ಸಾಗುವ ಅಷ್ಟು ಬಸ್ಸುಗಳಲ್ಲಿ ಒಂದೂ ಮೆಜೆಸ್ಟಿಕ್ ಹೋಗುವುದಿಲ್ಲ ಎನ್ನುವುದನ್ನು ನಂಬುವುದಕ್ಕೇ ಸಾಧ್ಯವಾಗಿರಲಿಲ್ಲ. ಬೆಂಗಳೂರಿನ ಪಾಲಿಗೆ ರಕ್ತವನ್ನು ಪಂಪ್ ಮಾಡುವ ಹೃದಯ ಮೆಜೆಸ್ಟಿಕ್, ಅಲ್ಲಿಗೆ ಬಸ್ಸುಗಳು ಹೋಗುತ್ತಿಲ್ಲ ಎಂದರೆ ಏನರ್ಥ? ಮತ್ತಷ್ಟು ಓದು »