ಅವತ್ತು ಎದೆ ನೋವೂ ಬಂದಿರಲಿಲ್ಲ, ಶರಣರೂ ಬರಲಿಲ್ಲ..!
-ಕಾಲಂ ೯
ನೂರು ವರ್ಷ ದಾಟಿದ ಸಿದ್ಧಗಂಗಾ ಸ್ವಾಮೀಜಿ ಜೈಲು-ಆಸ್ಪತ್ರೆ ಹುಡುಕಿಕೊಂಡು ಯಡಿಯೂರಪ್ಪನವರನ್ನು ನೋಡಲು ಹೋಗಿದ್ದಾರಲ್ಲ? ಏನಿದರ ಹಿಂದಿನ ಹಕೀಕತ್ತು? ಧರ್ಮಾಚರಣೆಗೂ ಪುರುಸೊತ್ತು ಇಲ್ಲದಷ್ಟು ಸಾಮ್ರಾಜ್ಯ ಕಟ್ಟಿಕೊಂಡು ಸ್ವಾಮೀಜಿಯೊ ಅಥವಾ JSS ಕಂಪೆನಿಯ CEO ನೋ ಎಂಬಂತಿರುವ ಜಗದ್ಗುರುಗಳು ಧಾವಿಸಿ ಬಂದರಲ್ಲ? ಅಂತಹದೇನು ಆಗಿತ್ತಲ್ಲಿ? ರಂಭಾಪುರಿಗಳು ಸೇರಿದಂತೆ ಅನೇಕ ಸಣ್ಣ-ಪುಟ್ಟ ವೀರಶೈವ ಸ್ವಾಮೀಜಿಗಳು ಯಡಿಯೂರಪ್ಪನವರನ್ನು ಸಂತೈಸಲು ಸಾಲುಗಟ್ಟಿದ್ದು ಮಾಧ್ಯಮಕ್ಕೆ ಆಶ್ಚರ್ಯವೆನಿಸಿರಲಿಲ್ಲ. ಆದರೆ ಈ ಹಿರಿತಲೆಗಳು ಹಾಗೇ ದೌಡಾಯಿಸಿದ್ದರ ಹಿಂದೇನು ನಡೆದಿದೆ? ಇದು ಮಾಧ್ಯಮದ ಒಳಗೂ-ಹೊರಗೂ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಸೋಮವಾರದ ತಮ್ಮ ಅಂಕಣದಲ್ಲಿ ಅಮೀನ್‌ಮಟ್ಟು ತುಂಬಾ ಆಪ್ತವಾಗಿಯೇ ಯಡಿಯೂರಪ್ಪನವರ ಪ್ಲಸ್ಸು-ಮೈನಸ್ಸುಗಳನ್ನು ಹೊರಹಾಕಿದ್ದನ್ನು ಓದಿದ ಅನೇಕರು ’ಈ ಮಠಾಧಿಪತಿಗಳನ್ನೇಕೆ ಬಿಟ್ಟಿರಿ’ ಎಂದು ಪ್ರತಿಕ್ರಿಯಿಸಿದ್ದಾರೆ. ಸರ್ವ ವೀರಶೈವ ಮಠಗಳಿಗೂ ಒಬ್ಬನೇ ಆಡಳಿತಾಧಿಕಾರಿ ಎಂಬಂತಿರುವ ಸಚಿವ ಸೋಮಣ್ಣ ಬೆನ್ನುಹತ್ತಿ ಇವರನ್ನೆಲ್ಲ ಹೊರಡಿಸಿಕೊಂಡು ಬರುತ್ತಿದ್ದಾರೆಯೇ? ಸರ್ಕಾರದಿಂದ ದೇಣಿಗೆಯಾಗಿ ಪಡೆದ ೩-೫ ಕೋಟ ರೂಗಳ ಹಂಗು ಹಿಂಗೆಲ್ಲ ಮಾಡುವಂತೆ ಮಾಡಿತೆ?
ಒಟ್ಟು ರಾಜ್ಯದ ನಾಯಕತ್ವದ ಎಲ್ಲ ಲಕ್ಷಣಗಳು ಕರಗಿ ಶುದ್ಧ ವೀರಶೈವ ಮುಖಂಡನಂತೆ ಗೋಚರಿಸುತ್ತಿರುವ ಯಡಿಯೂರಪ್ಪನವರ ಜೈಲು-ಆಸ್ಪತ್ರೆಗಳ ಹರಾಕಿರಿ ನಗೆಪಾಟಲಾಗಿ ಹೋಗಿರುವಾಗ ಈ ’ಗೌರವಾನ್ವಿತ’ರೇಕೆ ಹರಸಲು ಹೊರಟರು? ಮತ್ತಷ್ಟು ಓದು 
ಮಸುಕಾದ way2sms ನೊಂದಿಗೆ ನೆನಪಾಗೋ ಕಳೆದ ಕೊಂಡಿಗಳು
– ಪ್ರಶಸ್ತಿ.ಪಿ
“ಹರ್ ಏಕ್ ಪ್ರೆಂಡ್ ಜರೂರಿ ಹೋತಾ ಹೈ” ಅಂತ ಏರ್ಟೆಲ್ ಕಂಪ್ನಿ ಹಾಡು ಹಾಡ್ತಾ ಉದಾಸನಾಗಿ ಕೂತಿದ್ದ ಗುಂಡ. ಏನಾಯ್ತೋ ಗುಂಡ ಯಾರು ಕೈಕೊಟ್ರೋ ಅಂತ ಅಲ್ಲಿಗೆ ಬಂದ ಟಾಂಗ ತಿಪ್ಪ ಅಲಿಯಾಸ್ ತಿಪ್ಪೇಶಿ. ಎಲ್ಲಾ ಹಾಳಾಗಿ ಹೋಯ್ತು Do Not Disturb Directory(DND) ಅಂತ ಬಂದು ಹಾಳಾಗಿ ಹೋಯ್ತು ನನ್ನ ಕಥೆ ಅಂತ ಗೋಳಾಡಿದ. ಹೇ. ಮೊಬೈಲು ಕಂಪೆನಿ ಅವ್ರು, ಟೆಲಿ ಮಾಕ್ರೆಟಿಂಗ್ ಅವ್ರು ಕರೆ ಮಾಡಿ ತಲೆ ತಿನ್ನೋದನ್ನ ತಪ್ಸೋಕೆ ಅಂತಲ್ವಾ ಅದ್ನ ಮಾಡಿದ್ದು ಮಿ.ರೌಂಡ್ ಅಂತ ಬಂದ್ಲು ಇಳಾ ದೇವಿ ಅಲಿಯಾಸ್ ಇಳಾ. ಹೌದು ಮಾರ್ರೆ ನೀವು ಐದು ಲಕ್ಷ ಗೆದ್ದಿದ್ದೀರಿ.. ತಗೋಳೋಕೆ ಇದಕ್ಕೆ ಕರೆ ಮಾಡಿ.. ಗೋಲ್ಡ್ ಲೋನ್ ಬೇಕಾ ಅಂತೆಲ್ಲ ಸಂದೇಶ ಕಳ್ಸೂದ ಮಾರ್ರೇ.. ಮೊನ್ನೆ ನಮ್ಮಜ್ಜಯ್ಯನ ಮೊಬೈಲಿಗೆ ನಿಮ್ಮ ಜೀವನ ಸಂಗಾತಿಯನ್ನು ಹುಡುಕಬೇಕಾ ಅಂತ ಸಂದೇಶ ಕಳ್ಸಿದ್ರು ಮಾರ್ರೆ.. ಇದು ಬಂದಿದ್ದು ಒಳ್ಳೇದಾಯ್ತು.. ಅಂತದ್ರಲ್ಲಿ ಅದಕ್ಕೆ ಶಾಪ ಹಾಕೂದ ಗುಂಡೂ ಅಂದ ಮಂಗಳೂರು ಮಂಜ ಅಲಿಯಾಸ್ ಮಂಜುನಾಥ. ಹೌದು ಕಣ್ರೋ.. ಹೂಂ ಹೌದು. .ನಾನೂ ಅದಕ್ಕೆ ನನ್ನ ಹೆಸ್ರು ಸೇರ್ಸಬೇಕೂಂತ ಇದೀನಿ ಅಂದ್ಳು ಉಮಾ.. ಆ ಕೆಲ್ಸ ಮಾತ್ರ ಮಾಡ್ಬೇಡ ಮಹಾತಾಯಿ .. ಆಮೇಲೆ ನಾನು ನಿಮ್ಗೆಲ್ಲಾ way2sms ಇಂದ ಸಂದೇಶ ಕಳ್ಸೋಕು ಆಗಲ್ಲ.. ಈಗಿನ ತರ ಅಂದ ಗುಂಡ.. ಓ ಇಲ್ಲೇ ಎಲ್ಲೋ ಗುಂಡನ ದುಃಖಕ್ಕೆ ಮೂಲ ಇದೆ ಅಂತ ಅವ್ರೆಲ್ರಿಗೂ ಡೌಟು ಶುರು ಆಯ್ತು.. ಮತ್ತಷ್ಟು ಓದು 
ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ : ಬಣ್ಣದ ಬದುಕು 7 – ಗುರುವಿಗಾಗಿ ನಾಟ್ಯಶಾಲೆ
ಯಕ್ಷಗಾನ ರಂಗದಲ್ಲಿ ಎಲ್ಲೂ ಸಲ್ಲುವ ಯಾವ ವೇಷಕ್ಕೂ ಸೈ ಎನಿಸಿಕೊಳ್ಳುತ್ತಿದ್ದ ಒಬ್ಬ ಪ್ರಬುದ್ಧ ಹಾಗೂ ಮೇರು ಕಲಾವಿದರಾಗಿದ್ದ ದಿವಂಗತ ಕುರಿಯ ವಿಠಲ ಶಾಸ್ತ್ರಿಯವರು ಜನಿಸಿದ್ದು ಕಳೆದ ಶತಮಾನದ 1912ರ ಸೆಪ್ಟೆಂಬರ್ 08ರಂದು. ತಮ್ಮ ವಯಸ್ಸಿನ ನೂರನೇ ಸಂವತ್ಸರದ ಈ ಸಂದರ್ಭದಲ್ಲಿ ಖ್ಯಾತ ಪತ್ರಕರ್ತ ಪದ್ಯಾಣ ಗೋಪಾಲಕೃಷ್ಣ (ಪ. ಗೋ.)ರವರರು ನಿರೂಪಣೆ ಗೈದಿರುವ ಕುರಿಯ ವಿಠಲ ಶಾಸ್ತ್ರಿಯವರ ಆತ್ಮ ಕಥನ “ಬಣ್ಣದ ಬದುಕು” ಯಕ್ಷಗಾನ ಅಭಿಮಾನಿಗಳಿಗಾಗಿ ‘ನಿಲುಮೆ ‘ದಲ್ಲಿ ಪ್ರಕಟವಾಗುತ್ತಿದೆ. ಮರುದಿನ ಶ್ರೀ ಶೆಟ್ಟರು ವೇತನದ ವಿಷಯ ಪ್ರಸ್ತಾಪ ಮಾಡಿದರು.
(ಪರಮ್)ಆತ್ಮ ವಿಮರ್ಶೆ
– ಅಭಿನಂದನ್ ಎಸ್ ಡಿ
ಆ non-stop ಡೈಲಾಗ್ಸು, ಆ ಹಣೆ ಕೆರ್ಕೊಂಡು ನಗ್ತಾ ಮಾತೋಡೋ ಸ್ಟೈಲು(ಹೀರೋದು), ಸ್ಮೈಲು(ಹೀರೋದು), ಆ ಅನಂತ್ ನಾಗು, ಆ ಒಂದೇ ಟ್ಯೂನಿನ ಎರಡು ಹಾಡು(infact ಹಾಡಿನ ಬಿಟ್ಸು), ಹಳ್ಳೀನಲ್ಲೂ ಚಡ್ಡಿಯಲ್ಲಿ ಓಡಾಡೋ ಹೆಣ್ಮಕ್ಳು..ಎಲ್ಲಾ mix ಆಗಿ…………………………
ಕರೆಕ್ಟು!!ಮುಂಗಾರು ಮಳೆ ಹ್ಯಾಂಗೋವರ್ರು. ಅದ್ರಿಂದ ಹೊರಗೆ ನಾವೂ ಬಂದಿಲ್ಲ. ಒಂದೊಂದು ವಿಷಯದಲ್ಲಿ ಭಟ್ರೂ ಅದ್ರಿಂದ ಹೊರಗೆ ಬಂದಂಗಿಲ್ಲ.
ಹ್ಯಾಂಗೋವರ್ರಿಂದ ಹೊರಗೆ ಬಂದಿರುವ ವಿಷಯಗಳು ಯಾವ್ದಪ್ಪ ಅಂದ್ರೆ..ಹೀರೋ ಗಡ್ಡ ಶೇವ್ ಮಾಡ್ಕೊಂಡು ನೀಟಾಗಿ ಇರೋದು ( ಇಡೀ ಚಿತ್ರದಲ್ಲಿರದ ಭಟ್ಟ್ರ ಗಡ್ಡ-ಪ್ರೀತಿ ಒಂದೇ ಸೀನಲ್ಲಿ full scaleನಲ್ಲಿ ವ್ಯಕ್ತವಾಗಿದೆ), ಧಾರಳವಾಗಿ ಹೀರೋ ಕಣ್ಣಿಂದ ಸುರೀತಿದ್ದ ನೀರಿಗೆ ಇಲ್ಲಿ ಕಟ್ಟೆ ಕಟ್ಟಿರೋದು, ಹೀರೋನ imageಗೋಸ್ಕರ ಭಟ್ಟರು ಅವರ ಸ್ಟೈಲನ್ನ ಸ್ವಲ್ಪ compromise ಮಾಡ್ಕೊಂಡಿರೋದು, “ರೀ”ಕಾರಕ್ಕೆ ಬ್ರೇಕ್ ಕೊಟ್ಟಿರೋದು.
ಟೈಟಲ್ ಕಾರ್ಡಿಂದಾನೇ ಮಾತಿನ ಮಳೆ. ಪುನೀತ್ ಕಣ್ಣಾಡಿಸೋ ರೀತಿ, dialogue ಡೆಲಿವರಿ, ಮಾತಿನ ವೇಗ, ಧಾಟಿ ಎಲ್ಲದರಲ್ಲೂ ಭಟ್ಟ-ತನವಿದೆ. ಹಾಗಾಗಿ ಅವರು ಭಟ್ಟರ ಬೇರೆ ಚಿತ್ರದ ನಾಯಕರಂತೆ ನಟಿಸಿದ್ದಂತೆ ಕಂಡರೆ ಅದನ್ನ ಅನ್ಯಥಾ ಭಾವಿಸಬಾರ್ದು. ಮತ್ತಷ್ಟು ಓದು 
ವಾಕ್ಪಥ ಹಾಗು ಪುಳಿಯೋಗರೆ ಪಾಯಿಂಟ್
೨೨ ಸೆಪ್ಟೆಂಬರ್, ೨೦೧೧ ನನ್ನ ಸ್ನೇಹಿತನಿಂದ ಒಂದು ವಾಣಿಜ್ಯ-ಸಮಾಲೋಚನೆಗಾಗಿ ಕರೆಬಂದಾಗ, ಅದು ೨೪ರ ಸೆಪ್ಟೆಂಬರ‍್ಗೆ ನಿಗದಿಯಾಯಿತು. ೨೫ನೇ ಭಾನುವಾರ
ಚುಂಚನಗಿರಿಯಲ್ಲಿ ನಡೆಯಲಿರೋ ಕಾರ್ಯಕ್ರಮಕ್ಕೆ ಇನ್ನೊಬ್ಬ ಸ್ನೇಹಿತನಿಂದ ಬಂದ ಕರೆಗೆ ತುಂಬು ಆಸಕ್ತಿಯಿಂದಲೇ ಒಪ್ಪಿಗೆ ಇತ್ತಾಗಿತ್ತು. ೨೪ರ ಬೆಳಿಗ್ಗೆ ನಾ ಬೆಂಗಳೂರಿಗೆ ಬಂದಿಳಿದು, ಮಧ್ಯಾಹ್ನದ ಸಮಾಲೋಚನೆಯ ತಯ್ಯಾರಿಯಲ್ಲಿದ್ದಾಗ, ತಲೆ ಇನ್ನೇನೋ ಯೋಚಿಸಲಾರಂಭಿಸಿತ್ತು. ಮನಸ್ಸು ಹೊಯ್ದಾಡುತ್ತಾ, ಗೊಣಗುತಿತ್ತು.. ಸದ್ಯದಲ್ಲೆಲ್ಲೋ, ವಾಕ್ಪಥ ಕಾರ್ಯಕ್ರಮ ಇದೆ, ಎಂಬುದಾಗಿ. ಮನಸ್ಸಿನೊತ್ತಡ ತಡೆಯಲಾರದೇ, ಫೇಸ್‌ಬುಕ್‌ನ “ಇವೆಂಟ್ಸ್” ತೆರೆದು ನೋಡಿದಾಗ, ಆಶ್ಚರ್ಯ, ಆಘಾತ, ಸಂತೋಷ, ಎಲ್ಲಾ ಒಟ್ಟೊಟ್ಟಿಗೆ..! ನನ್ನ ಮನಸ್ಸಿನ ಹೊಳಹಿನಂತೆ ನಂತರದ ದಿನವೇ (೨೫/೦೯/೨೦೧೧) ವಾಕ್ಪಥದ “ಏಳನೇ ಹೆಜ್ಜೆ”. ಈ ವಿಚಾರ ಆಶ್ಚರ್ಯಕ್ಕೆ ಕಾರಣವಾಗಿತ್ತು. ಯಾವಾಗಲೂ ಕಾಯುತ್ತಿದ್ದ ಈ ವಿಶೇಷ ಕಾರ್ಯಕ್ರಮ ಅಚಾನಕ್ಕಾಗಿ ನನ್ನ ಮುಂದೆ ತೆರೆದುಕೊಂಡಿದ್ದು, ನಿಜಕ್ಕೂ ನನಗೆ ಸಂತೋಷದೊಂದಿಗೆ ಅಚ್ಚರಿಗೊಳಿಸಿತ್ತು. ಆದರೆ ನನ್ನ ಸ್ನೇಹಿತನಿಗೆ ಚುಂಚನಗಿರಿಯ ಕಾರ್ಯಕ್ರಮಕ್ಕೆ ಬರುವೆ ಅಂದದ್ದು, ವಾಕ್ಪಥದಲ್ಲಿ ಭಾಗವಹಿಸಲು ಅಡ್ಡಿಮಾಡುತ್ತಲ್ಲಾ ಎಂಬ ಆಘಾತಕ್ಕೆ ಕಾರಣವಾಯಿತು.
ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ : ಬಣ್ಣದ ಬದುಕು 5 – ಕರ್ಣನಿಂದಾಗಿ ಕಣ್ಣೀರು ಬಂತು ….
ಅಡವಿ ಗಿಡ ಮರ ಕಲ್ಲು ನೋಡಿದರೆಯರಸಿನದ ಪುಡಿಯಂತೆ ತೋರುತಿದೆ ತಮ್ಮಾ! ಒಡಲೊಳುರಿ ತಾಪ ಬೇರ್ವಿಡಿದು ಜಠರಾಗ್ನಿಯಲಿ ನಡುಗುತಿದೆ ಕೈ ಕಾಲು ತಮ್ಮಾ” ಎಂದು ಸೀತೆಯನ್ನು ಕಳೆದುಕೊಂಡ ಶ್ರೀರಾಮ ಹಂಬಲಿಸುತ್ತಾನೆ. ಲಕ್ಷ್ಮಣನೊಡನೆ ಅಳಲನ್ನು ತೋಡಿಕೊಳ್ಳುತ್ತಾನೆ. ಪದ್ಯದ ತರುವಾಯ, ರಾಮನ ಉದ್ವೇಗದ ಸಂಪೂರ್ಣ ಚಿತ್ರಣವಾಗಬೇಕಾದರೆ- ತಾಳಮದ್ದಳೆಯ (ಕುಳಿತು ಮಾತನಾಡುವ- ವೇಷವಿಲ್ಲದ) ರಾಮ ಬಹಳ ಮಾತುಗಳನ್ನು ಖರ್ಚು ಮಾಡಬೇಕಾಗುತ್ತದೆ. ಭಾವನೆಗಳು ಮೂಡದೆ ಬರಿಯ ಮಾತುಗಳನ್ನೇ ಹೊರಡಿಸುವವನು ರಾಮನಾಗಿದ್ದರೆ, ಪ್ರೇಕ್ಷಕರಲ್ಲಿ ಪ್ರತಿಕ್ರಿಯೆ ಮೂಡಿಸುವ ಪ್ರಯತ್ನ ನಿರರ್ಥಕ ಎನಿಸುತ್ತದೆ,
ಶೃಂಗಾರ ರಸದ ನಿರೂಪಣೆ ಇರುವ ಪಾತ್ರಗಳಲ್ಲೂ ಅಂತಹುದೇ ಅನುಭವ. ”ಕಾಮಸನ್ನಿಭ ಮಾತ ಕೇಳೂ! ನಿನ್ನೊಳ್! ಕಾಮಿಸಿ ಕಾಮಿಸಿ ಬಂದೆ ಕೃಪಾಳೂ!!” ಎಂದು ಮಾಯಾ ಶೂರ್ಪನಖಿಯು ಲಕ್ಷ್ಮಣನೊಡನೆ ನುಡಿದ ಸನ್ನಿವೇಶದಲ್ಲಿ ಬರಿ ಮಾತಿನ ಬರಡುತನವನ್ನೂ ಕಂಡುಕೊಳ್ಳುವಂತಾಗಿತ್ತು.
ಅತೃಪ್ತಿ
ವೀರರಸದ ಸಂದರ್ಭಗಳಲ್ಲೂ ಅದೇ ತೊಡಕು, ಒಂದೆರಡು ಸನ್ನೆಗಳು, ಎರಡು ಮೂರು ಮಾತುಗಳಲ್ಲಿ ಪರಿಣಾಮಕಾರಿಯಾಗಿ ಮಾಡಬಹುದಾದ ಕೆಲಸಕ್ಕೆ ಬಹಳ ಮಾತುಗಳನ್ನೇ ವೆಚ್ಚ ಮಾಡಿದ ತರುವಾಯವೂ ‘ಇದು ಸಾಕಾಗಲಿಲ್ಲ!’ ಎಂದು ಅತೃಪ್ತಿ.
”ಅರ್ಥ ಉದ್ದವಾಯಿತು.” ಎಂಬ ಮಾತು ಕೇಳಿ ಬಂದರೆ ಅದರಲ್ಲಿ ಆಶ್ಚರ್ಯವೇನು?
ಇಂತಹುದೇ ವಿಚಾರಗಳ ಚರ್ಚೆ ಜಿಜ್ಞಾಸೆಗಳು ಗೆಳೆಯರೊಂದಿಗೆ ಆಗಾಗ ನಡೆಯುತ್ತಿದ್ದವು.
ಮತ್ತಷ್ಟು ಓದು 
ನಿಮ್ಮ ನಿಲುಮೆಗೆ ಒಂದು ವರ್ಷ- ಹರಸ ಬನ್ನಿ, ಹಾರೈಸಬನ್ನಿ
ವರ್ಷವಾಗಿದ್ದು ತಿಳಿಯಲೇ ಇಲ್ಲ ನೋಡಿ.ಹೌದು ನಮ್ಮ-ನಿಮ್ಮ ’ನಿಲುಮೆ’ಗೆ ವರ್ಷದ ಸಂಭ್ರಮ :). ’ಕನಸು-ಕನವರಿಕೆ’ಯಾಗಿ ಶುರುವಾದ ನಿಲುಮೆ ’ಎಲ್ಲ ತತ್ವದ ಎಲ್ಲೇ ಮೀರಿ’ ನಿಲ್ಲಲ್ಲಿ ಅನ್ನುವ ನಮ್ಮ ಆಶಯಕ್ಕೆ ವರುಷವಾಗಿದೆ. ಈ ಸಂಭ್ರಮಕ್ಕೆ ನಮ್ಮ ಎಲ್ಲ ಬರಹಗಾರರು, ಓದುಗರು ಕಾರಣಕರ್ತರು. ಅವರಿಲ್ಲದಯೇ ನಾವಾದರೂ ಏನು ಮಾಡಲಿಕ್ಕಾಗುತಿತ್ತು ಅಲ್ಲವೇ?
“ನೂರು ಮತದ ಹೊಟ್ಟ ತೂರಿ
ಎಲ್ಲ ತತ್ವದ ಎಲ್ಲೆ ಮೀರಿ
ನಿರ್ದಿಗಂತವಾಗಿ ಏರಿ
ಓ ನನ್ನ ಚೇತನ ಆಗು ನೀ ಅನಿಕೇತನ…
ರಸ ಋಷಿ ಕುವೆಂಪು ಅವರ ಈ ನುಡಿಗಳೆ ನಮಗೆ ಸ್ಪೂರ್ತಿ. ಯಾವುದೇ ಜಾತಿ, ಮತ, ತತ್ವಗಳಿಗೆ ಗಂಟು ಬೀಳದೆ, ಎಡ-ಬಲ ಪಂಥೀಯರ ನಡುವೆ ಸಿಕ್ಕಿಕೊಳ್ಳದೆ, ಯಾವುದೇ ಮತ್ತು ಯಾರದೇ ಮರ್ಜಿಗೇ ಬೀಳದೆ ಅನ್ನಿಸಿದ್ದನ್ನು ನೇರವಾಗಿ ಹೇಳುವ, ಆ ಮೂಲಕ ಯಾವ ಗುಂಪಿಗೂ ಸೇರದೆಯೆ ಸ್ವತಂತ್ರವಾಗಿ ಯೋಚಿಸುವ ಬಯಕೆ ನಮ್ಮದು. ಅಷ್ಟಕ್ಕೂ ’ಸತ್ಯ’ ಅನ್ನುವುದು ಎಡ-ಬಲ ಪಂಥದ ಆಸ್ತಿಯೇನು ಅಲ್ಲವಲ್ಲ. ಅದು ಈ ಇಬ್ಬರ ನಡುವೆಯು ಸಿಲುಕದೆ ತನ್ನ ಪಾಡಿಗದು ಯಾವುದೋ ಮೂಲೆಯಲ್ಲಿ ನಿರ್ಲಿಪ್ತವಾಗಿರುತ್ತದೆ. ಅದನ್ನ ಹುಡುಕುವ ಮುಗ್ಧ ಆಸೆ ನಮ್ಮದು.ನೊಂದ ಜೀವಗಳಿಗೆ ದನಿಯಾಗುವ ಬಯಕೆ ನಮ್ಮದು. ಮತ್ತಷ್ಟು ಓದು 
ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ : ಬಣ್ಣದ ಬದುಕು 4 – ಐದು ವರ್ಷಗಳಲ್ಲಿ ಆಸ್ತಿ ಅಡವು
1931ರ ಆರ್ಥಿಕ ಮುಗ್ಗಟ್ಟಿನ ದಿನಗಳ ನೆನಪಿರುವವರು ಬಹಳ ಮಂದಿ. ನಮ್ಮ ನಾಟಕ ಮಂಡಳಿಯಿಂದಾಗಿ ನನಗೂ ಆ ದಿನಗಳ ನೆನಪು ಉಳಿದಿದೆ; ಅಂದಿನ ಮತ್ತು ಇಂದಿನ ಪರಿಸ್ಥಿತಿಗಳ ವ್ಯತ್ಯಾಸವನ್ನು ಜ್ಞಾಪಿಸಿಕೊಳ್ಳುವ ಹಾಗಾಗಿದೆ.
ಆಗ ಊರಿಂದೂರಿಗೆ ಸಾಮಾನು ಸಾಗಿಸುವ ಲಾರಿಗಳ ಸೌಕರ್ಯವಿರಲಿಲ್ಲ. ಸಾಗಾಟಕ್ಕೆ ಸಿಗುತ್ತಿದ್ದುದು ಎತ್ತಿನ ಗಾಡಿಗಳು ಮಾತ್ರ.
ದಶಾವತಾರದ ಮೇಳಗಳಲ್ಲಿ ಇರುತ್ತಿದ್ದ ಸಾಮಾನುಗಳನ್ನು ಸಾಗಿಸಲು ಬಹಳ ಕಷ್ಟವಾಗುತ್ತಿರಲಿಲ್ಲ. ಪರದೆ ಇತ್ಯಾದಿಗಳ ತೊಡಕು ಇಲ್ಲದ ಕಾರಣ, ಕೆಲವು ಪೆಟ್ಟಿಗೆಗಳನ್ನು ತಲೆ ಹೊರೆಯಲ್ಲಿ ಸಾಗಿಸಲು ಸಾಧ್ಯವಾಗುತ್ತಿತ್ತು. ಸಂಚಾರಕ್ಕೆ ರಸ್ತೆಯ ಅನುಕೂಲವಿದ್ದರೆ ಒಂದು ಗಾಡಿಯನ್ನು ಬಾಡಿಗೆಗೆ ಹಿಡಿದರೆ ಸಾಕಾಗುತ್ತಿತ್ತು. ಊರು ಸೇರಿದ ತರುವಾಯ ಡೇರೆಯ ವ್ಯವಸ್ಥೆಯೂ ಬೇಕಾಗುತ್ತಿರಲಿಲ್ಲ. ಹೆಚ್ಚಾಗಿ ಬಯಲಾಟಗಳೇ ಅಂದು ನಡೆಯುತ್ತಿದ್ದುವು.
ಆದರೆ ಯಕ್ಷಗಾನ ನಾಟಕ ಕಂಪೆನಿಯ ಹೊಣೆ ಹೊತ್ತ ನಮ್ಮ ಪರಿಸ್ಥಿತಿ ಅದಕ್ಕೆ ತೀರಾ ವ್ಯತಿರಿಕ್ತವಾಗಿತ್ತು.
ದೃಶ್ಯಾವಳಿಗಳಿಗಾಗಿ ಪರದೆಗಳು, ‘ಪಕ್ಕದ ರೆಕ್ಕೆ’ಗಳು, ಆಸನ- ಪೀಠೋಪಕರಣಗಳು, ಕಿರೀಟ-ಆಯುಧ, ಅಲಂಕಾರಗಳು ಇವೆಲ್ಲವುಗಳ ಜೊತೆಗೆ ಸಾಕಷ್ಟು ಫರ್ನಿಚರ್‌ಗಳನ್ನು ಸಾಗಿಸಲು ಎಂಟು ಹತ್ತು ಗಾಡಿಗಳನ್ನು ಅನುವು ಮಾಡಿಕೊಳ್ಳಬೇಕಾಗುತ್ತಿತ್ತು. ಎಷ್ಟೇ ಜನಪ್ರಿಯತೆ ಗಳಿಸಿದರೂ, ಕೆಲವು ದಿನಗಳ ತರುವಾಯ ಊರು ಬದಲಾಯಿಸಲೇಬೇಕಾಗುವುದಷ್ಟೇ.
ಊರಿಂದೂರಿಗೆ
ಬಟ್ಟೆಯ ಡೇರೆಗೆ ಬೇಕಾದ ಅನುಕೂಲ ನಮಗೆ ಇರಲಿಲ್ಲ. ಆದುದರಿಂದ ಪ್ರತಿಯೊಂದು ಊರಿನಲ್ಲೂ ”ಥಿಯೇಟರ್” ಕಟ್ಟಿಸಬೇಕಾಗುತ್ತಿತ್ತು. ಸರಾಸರಿ ಒಂದು ಸಾವಿರ ರೂ. ಅದಕ್ಕಾಗಿ ವೆಚ್ಚವಾಗುತ್ತಿತ್ತು.
ಮತ್ತಷ್ಟು ಓದು 
ಸಂಸ್ಕೃತಿ ಸಂಕಥನ – ೭
– ರಮಾನಂದ ಐನಕೈ
ಕ್ರಿಯಾ ಜ್ಞಾನವೇ ಬದುಕಿನ ಶಿಕ್ಷಣ
ನಮ್ಮೂರಿನಲ್ಲೊಬ್ಬ ನಿವೃತ್ತ ಭೌತಶಾಸ್ತ್ರ ಪ್ರಾಧ್ಯಾಪಕರಿದ್ದಾರೆ. ಎಂ.ಎಸ್.ಸಿ.ಯಲ್ಲಿ ಬಂಗಾ ರದ ಪದಕ ಪಡೆದವರು. ನಿವೃತ್ತಿಯ ನಂತರ ಊರಿಗೆ ಬಂದು ಕೃಷಿಕರಾಗಿದ್ದಾರೆ. ಅವರಿಗೆ ಗೊತ್ತಿ ಲ್ಲದ ವಿಷಯವಿಲ್ಲ. ಯಾವ ಕ್ಷೇತ್ರದ ಬಗ್ಗಾದರೂ ಘಂಟೆಗಟ್ಟಲೇ ಮಾತನಾಡುತ್ತಾರೆ. ತಮಗೆ ಸಿಕ್ಕಾ ಪಟ್ಟೆ ಜ್ಞಾನವಿದೆಯೆಂಬ ಅಹಂಕಾರವೂ ಇದೆ. ಆದರೆ ಒಂದು ತೊಂದರೆ ಅಂದರೆ ಅವರು ಅಂದು ಕೊಂಡಂತೆ ಒಂದೂ ಆಗುವುದಿಲ್ಲ. ಅವರ ಮಾತಿ ನಲ್ಲಿ ತೋರುವ ಚಾಕಚಕ್ಯತೆ ಕೃತಿಯಲ್ಲಿ ಕಾಣುವು ದಿಲ್ಲ. ಉದಾಹರಣೆಗೆ ಅವರು ಶಕ್ತಿಯ ಮೂಲದ ಬಗ್ಗೆ ಅಮೂಲಾಗ್ರ ತಿಳುವಳಿಕೆ ಹೊಂದಿದ್ದಾರೆ. ವಿದ್ಯುತ್ ಅನ್ವೇಷಣೆಯ ಕುರಿತು ಸವಿವರವಾದ ಮಾಹಿತಿ ನೀಡುತ್ತಾರೆ. ವಿದ್ಯುತ್ ಕಂಡು ಹಿಡಿದ ವರು, ವಿದ್ಯುತ್ ಹೇಗೆ ಉತ್ಪಾದಿಸಲ್ಪಡುತ್ತದೆ; ತಂತಿ ಹೇಗೆ ವಿದ್ಯುತ್ ವಾಹಕವಾಗುತ್ತದೆ; ಬಲ್ಪಿನ ಒಳ ಗಡೆಯಿಂದ ಹೇಗೆ ಪ್ರಕಾಶ ನೀಡುತ್ತದೆ ಇತ್ಯಾದಿ. ಅವರ ನೆಚ್ಚಿನ ಆಳು ಶಂಕರ. ಆತ ಅಕ್ಷರ ಜ್ಞಾನಿಯಲ್ಲ. ಅವನಿಗೆ ಈ ಪ್ರಪಂಚದ ಬಗ್ಗೆ ಕಡಿಮೆ ತಿಳುವಳಿಕೆ ಇದೆ. ಮೇಸ್ಟ್ರು ಹೇಳಿದಷ್ಟು ಮಾಡುವುದು ಅವನ ಕಾಯಕ. ವಿದ್ಯುತ್ತಿನ ಬಗ್ಗೆ ಇಷ್ಟೆಲ್ಲ ಮಾಹಿತಿ ನೀಡುವ ಪ್ರಾಧ್ಯಾಪಕರಿಗೆ ಮನೆಯಲ್ಲಿ ಫ್ಯೂಸ್ ಹೋದರೆ, ಹೋಲ್ಡರಿನಲ್ಲಿ ವಯರ್ ಬಿಟ್ಟರೆ ಹಾಕಲು ಬರುವುದಿಲ್ಲ. ಆ ಕೆಲಸ ಮಾಡುವವನು ಶಂಕರ. ವಿದ್ಯುತ್ತಿಗೆ ಸಂಬಂಧಿಸಿದ ಅಷ್ಟೂ ರಿಪೇರಿ ಕೆಲಸವನ್ನು ಶಂಕರ ಮಾಡುತ್ತಾನೆ. ಆತನನ್ನು ಕೇಳಿ ದರೆ ತನಗೆ ಇದರ ಬಗ್ಗೆ ತಿಳುವಳಿಕೆಯೇನಿಲ್ಲ. ಹೀಗೆ ಮಾಡಿ ಮಾಡಿ ಕಲಿತೆ ಅನ್ನುತ್ತಾನೆ. ಜೀವನದ ಚಿಕ್ಕ ಕೆಲಸಕ್ಕೆ ನೆರವಿಗೆ ಬಾರದ ಪ್ರಾಧ್ಯಾಪಕರ ಪಾಂಡಿತ್ಯವನ್ನು ಏನನ್ನೋಣ? ಪ್ರಾಧ್ಯಾಪಕರದ್ದು ಲೋಕಜ್ಞಾನ, ಶಂಕರನದ್ದು ಕ್ರಿಯಾಜ್ಞಾನ ಅನ್ನೋಣವೇ? ಉತ್ತರ ಗೊತ್ತಿಲ್ಲ. ಹುಡುಕಲು ಪ್ರಯತ್ನಿಸೋಣ.
ಮತ್ತಷ್ಟು ಓದು 
ತಾಯಿಯೋ ತಂದೆಯೋ…?
ಪ್ರವೀಣ್ ಬೆಂಗಳೂರು
ಕೆಲಸ ಮುಗಿಸಿ ಹೊರಡುವ ಹೊತ್ತಾಯಿತು, ಹೊರ ಬಂದು ನೋಡಿದರೆ ಸಂಜೆಗತ್ತಲು. ಇನ್ನೇನು ಆಗಲೋ ಈಗಲೋ ಭೋರ್ಗರೆವ ಮಳೆಯ ಸೂಚನೆ ಆದರೂ ಲೆಕ್ಕಿಸದೆ ಹೊರಟೆ; ಹತ್ತು ಹೆಜ್ಜೆ ಹಾಕಿ ಮುನ್ನಡೆದೆ, ಮಳೆ ಸುರಿದೇ ಬಿಟ್ಟಿತು. ತಕ್ಷಣವೇ ನನ್ನ ಸೂಟ್‌ಕೇಸ್‌ನಲ್ಲಿದ್ದ ರೈನ್‌ಕೋಟ್ ತೆಗೆದು ಹಾಕಿಕೊಳ್ಳುವ ಹೊತ್ತಿಗೆ ನನೆದು ತೊಪ್ಪೆಯಾಗಿ ಹೋಗಿದ್ದೆ. ಆದರೂ ಧರಿಸಿ ನಡೆಯುತ್ತಲೇ ಹೊರಟೆ. ಮಾರ್ಗ ಮಧ್ಯದಲ್ಲಿ ಶಾಲೆಯಿಂದ ಹೊರಟ ಮಗು ಮಳೆಯಿಂದ ಅಲ್ಲಿಯೇ ಬಳಿಯಿದ್ದ ಅಂಗಡಿಯ ಮುಂದೆ ಸ್ವಲ್ಪವೇ ನೆನೆಯುತ್ತಾ ನಿಂತಿದ್ದನ್ನು ಕಂಡೆ. ಮಗು ಚಳಿಯಿಂದ ನಡುಗುತ್ತಿತ್ತು. ನಾನು ಮಗುವಿನ ಬಳಿಗೆ ಹೋಗುವಷ್ಟರಲ್ಲಿ ಮಗುವಿನ ತಂದೆ ಬಂದು ಮಗುವನ್ನು ಬಿಗಿದಪ್ಪಿ ಹಿಡಿದು ಭುಜಕ್ಕೆ ಆನಿಸಿಕೊಂಡು ಹೊರಟರು. ಹಿಂದಿನಿಂದ ಮಗು ನನ್ನನ್ನು ನೋಡಿ ಸುಂದರವಾದ ನಗೆಯೊಂದ ಬೀರಿತು. ಆಗಲೇ ನನಗನ್ನಿಸಿತು ತಾಯಿಯ ಬಿಸಿಯಪ್ಪುಗೆಯಷ್ಟೇ ಮನಕ್ಕೆ ಆಹ್ಲಾದ ನೀಡುವುದು ತಂದೆಯ ಎದೆಯಪ್ಪಿಗೆ ಎಂದು. ಎಲ್ಲಿಯೋ ಓದಿದ್ದ ನೆನಪು ತಂದೆಯು ಎದೆಗೆ ಅಪ್ಪಿಕೊಂಡು ಮಗುವನ್ನು ಮಲಗಿಸುವಾಗ ಆ ಮಕ್ಕಳು ಬೇಗೆ ಮಲಗುತ್ತವೆ ಕಾರಣ ತಂದೆಯ ಹೃದಯ ಬಡಿತ ತನ್ನ ಮಗುವಿನ ಹೃದಯ ಮಿಡಿತಕ್ಕೆ ಕೊಂಡಿಯಂತಿರುತ್ತದೆ.
ಮತ್ತಷ್ಟು ಓದು 




