ಮಾಸದ ನೆನಪುಗಳು
ಪವನ್ ಪರುಪತ್ತೇದಾರ್
ಜೀವನದಲ್ಲಿ ಕೆಲೊವಂದು ಸರಿ ಬಹಳ ವಸ್ತುಗಳನ್ನು ಕಳೆದುಕೊಳ್ತಿವಿ, ಬೆಂಗಳೂರಿನ ಲೋಕಲ್ ಬಸ್ ನಲ್ಲಿ ಓಡಾಡೋವಾಗ ಪ್ರತಿ ದಿನ ಒಬ್ಬರಲ್ಲ ಒಬ್ಬರು ಮೊಬೈಲ್ ಫೋನ್ ಕಳೆದುಕೊಳ್ತಾನೆ ಇರ್ತಾರೆ. ನನ್ ಸ್ನೇಹಿತ ಒಬ್ಬ ಹೇಗೆ ಮೊಬೈಲ್ ಕಳಕೊಂಡು ಕಳ್ಳನ್ನ ಹಿಡಿಯೋಕೆ ಹೋಗಿ, ಅವರ ಹತ್ರ ಒದೆ ತಿಂದು ಬಂದಿರೋದು ಆಗಿದೆ. ಆ ಮೊಬೈಲ್ ನ ನೆನಪು ಅವನನ್ನ 15 ದಿನ ಕಾಡಿರ್ಬೋದು, ಆ ಒದೆ ತಿಂದ ನೋವು 2 ತಿಂಗಳು ಕಾಡಿರಬಹುದು ಆದ್ರೆ ಅ ಮೊಬೈಲ್ ಜಾಗದಲ್ಲಿ ತನಗಿಷ್ಟ ಅದವರನ್ನ ಕಳೆದು ಕೊಂಡರೆ ಎಷ್ಟು ಕಾಡುತ್ತೆ ಅಲ್ವಾ?? ನನ್ನ ಈ ಬರಹದಲ್ಲಿ ನನ್ನ ಆ ರೀತಿ ಕಾಡುತ್ತಿರುವ ಮಾಸದ ಒಂದು ನೆನಪಿನ ಬಗ್ಗೆ ಬರೀತಿದಿನಿ

ನಮ್ಮ ಹಾಗೂ ನಮ್ಮಪ್ಪನ ನಡುವಿನ ಭಿನ್ನಾಭಿಪ್ರಾಯಗಳು…
ಸತ್ಯಚರಣ್ ಎಸ್.ಎಂ
ಸ್ನೇಹಿತರೇ. ಮೊನ್ನೆ ಮೊನ್ನೆ ಆಂಗ್ಲರಿಂದ ಆಮದು ಮಾಡಿಕೊಂಡ “Father’s Day” ನಡೆಯಿತಲ್ವೇ.. ಆ ಸಂದರ್ಭಕ್ಕೆ ನನಗೆ ನನ್ನ ಈ ಕೆಳಗಿನ ಬರಹ ಹಿಂದೆ ಬರೆದದ್ದು ನೆನಪಾಗಿ, ಮತ್ತೆ ನಿಮ್ಮ ಮುಂದೆ ಇಡೋಣ ಅಂತನಿಸಿ, ಇಲ್ಲಿ ಇಡುವಂತಾಯ್ತು.. ಹೆಚ್ಚಿಗೆ ಬದಲಾಯಿಸದೇ, ಅಂದು ಬರೆದದನ್ನ ಹಾಗೇ ಇಡುತ್ತಿದ್ದೇನೆ.. 🙂
ಇದೊಂತರ ವಿಚಿತ್ರ “ವಿಷಯ” ಚರ್ಚೆಗೋಸ್ಕರ ಆದ್ರೆ.. ಅಂತ ಅನಿಸುತ್ತದೆ ನನ್ನ ಮನಸ್ಸಿಗೆ..
ಪ್ರಪಂಚದ ಬುಧ್ಧಿವಂತರೆಲ್ಲಾ ಒಂದು ತರಹದ ಉತ್ತರ ನೀಡಿದರೆ ಹೃದಯವಂತರೆಲ್ಲಾ ಇನ್ನೊಂದು ತರಹ ಮಾತಾಡುತ್ತಾರೆ ಈ ವಿಷಯದಲ್ಲಿ.
ಹ..ಹಾ.. ನಾನು ಯಾವ ಗುಂಪಿಗೆ ಸೇರುತ್ತೇನೋ ಗೊತ್ತಿಲ್ಲ… ಆದರೆ, ನನ್ನ ಮನಸ್ಸಿನಲ್ಲಿರೋ, ಮನಸ್ಸಿಗೆ ಹಿಂದೆ ಬಂದಿದ್ದ ಯೋಚನೆಗಳೆಲ್ಲ ಒಂದೆಡೆ ಹಾಕಿ, ಅದರ ಸಾರ ತೆಗೆಯೋ ಪ್ರಯತ್ನ ಇದು ಅನ್ಕೋತೀನಿ.. ಮುಂದಿನ ದಿನಗಳಲ್ಲಿ ನನ್ನ ವಿಚಾರಧಾರೆ ಯಾವ ದಿಕ್ಕಿನಲ್ಲಿ ಹರಿಯುತ್ತೋ ಗೊತ್ತಿಲ್ಲ.. ಸದ್ಯದ್ದು ಏನಿದೆಯೋ ಅದನ್ನು ನಿಮ್ಮ ಮುಂದೆ ಇಡ್ತಾ ಇದ್ದೇನೆ.. ಮತ್ತಷ್ಟು ಓದು 
“ಪ.ಗೋ. ಕಾಲಂ” ಜಗತ್ತಿನಲ್ಲಿ ಪತ್ರಕರ್ತನಿಗೊಂದು “ಸರ್ಟಿಫಿಕೇಟ್”
-ರವಿ ಮುರ್ನಾಡು
ಪ.ಗೋ. ಜಗತ್ತಿನ ಪದಗಳ ಹಂದರದಲ್ಲಿ ಒಬ್ಬ ” ವಿಲನ್” ಸೃಷ್ಠಿಯಾಗುತ್ತಾನೆ . ಅವನನ್ನು ಬುದ್ಧಿವಂತ ಹುಚ್ಚ ಅನ್ನುತ್ತೇವೆ. ಅದು ಕೊಡಿಯಾಲ್ ಬೈಲ್ ನವಭಾರತ ಪತ್ರಿಕೆಯಿದ್ದಾಗ ಪತ್ರಿಕಾ ಪ್ರಸರಣಾ ವಿಭಾಗದ ಮುಖ್ಯಸ್ಥ ಕಾಮತ್. ಅದಕ್ಕೆ ದಿವಂಗತ ಪ.ಗೋ.ರವರು “ಹಿತ್ತಾಳೆ ದೂರುಗಂಟೆ” ಅಂತ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ತಮ್ಮ ” ವಿಚಿತ್ರ ಸೃಷ್ಠಿಯ ಲೋಕದಲ್ಲಿ ಮತ್ತು ಅಂಕಣ ಬರಹಗಳು” ಸಂಕಲನದಲ್ಲಿ ಹಿತ್ತಾಳೆ ದೂರುಗಂಟೆಯ ಪಾತ್ರಧಾರಿ ವಿಲಕ್ಷಣವಾಗಿ ಎದ್ದು ನಿಲ್ಲುವಂತದ್ದು. ಹೀಗೂ ಉಂಟೆ…?! ಅನ್ನುವ ಒಂದು ಪ್ರಶ್ನೆ. ಪತ್ರಿಕಾ ಕಾರ್ಯಾಲಯದಲ್ಲಿ ಅಚಾನಕ್ಕಾಗಿ ಸೃಷ್ಠಿಯಾಗುತ್ತವೆ, ಇಲ್ಲದಿದ್ದರೆ ಸೃಷ್ಠಿಸುತ್ತಾರೆ . ಎಲ್ಲಾ ಖಾಸಾಗಿ ಸಂಸ್ಥೆಯಲ್ಲಿ ಇಂತಹ “ಶಕುನಿ”ಗೊಂದು ಹುದ್ದೆ ಉಂಟೇ ಉಂಟು. ಪ.ಗೋ.ರವರು ಮೌನವಾಗಿ ನವಭಾರತ ಕಚೇರಿ ಬಿಟ್ಟು ಹೋದಾಗ, ಕಚೇರಿಯ ಬಾಗಿಲಿಗೆ ತುಕ್ಕು ಹಿಡಿಯಬಾರದಿತ್ತೋ ಆನ್ನಿಸಿತು. ಬದುಕಿನ ಗೋಡೆ ಬಿರುಕಿಟ್ಟ ಸನ್ನಿವೇಶಕ್ಕೆ, ಪತ್ರಿಕಾ ಬದುಕಿಗೆ ಛೀಮಾರಿ ಹಾಕುವಷ್ಟು ವ್ಯಥೆಯಾಗುವಂತದ್ದು.
ಇವತ್ತಿಗೂ ಮಾತಾಡುತ್ತಿದೆ…. ಮನುಷ್ಯ ಬದುಕಿಗೆ ಸವಾಲು ಹಾಕಿದ ಮಾತು. “ನಾನು ಪತ್ರಿಕೆ ಹುಟ್ಟು ಹಾಕುವ ಕನಸು ಕಂಡಿದ್ದು ತಪ್ಪಾಯಿತು..!” ಅಂತ. ಬದುಕಿನ ಸ್ಥಿತ್ಯಂತರದಲ್ಲಿ ಒಮ್ಮೊಮ್ಮೆ ಕನಸುಗಳು ಈಟಿ ಇರಿದಂತೆ ಅಣಕಿಸುತ್ತವೆ. ಮಂಗಳೂರಿನ ಕಡಲ ಮರಳ ಕಣಗಳಿಗೆ ಇದರ ಪರಿಚಯ ಉಂಟು. ಅಲೆಗಳು ದಡಕ್ಕೆ ಬಡಿದು ಎಚ್ಚರಿಸಿ ಹೋಗುತ್ತಿವೆ… ಆ ಒಂದು ಜಗತ್ತಿನ ವಿಸ್ತಾರದಲ್ಲಿ ಜೀವನದ ಸಾರ್ಥಕ್ಯಕ್ಕೆ ಮನಸ್ಸುಗಳು ತೆರೆದುಕೊಳ್ಳಲಿಲ್ಲ . ಪಡ್ಯಾನ ಗೋಪಾಲಕೃಷ್ಣರ ರೆಕ್ಕೆ ಮುರಿದ ಮಾತುಗಳ ಹಕ್ಕಿಯ ಕಲರವ ಕೇಳಿಸುತ್ತಲೇ ಇದೆ…. ಕನಸುಗಳ ಮೂಟೆ ಹೊತ್ತ ದೋಣಿ ಕಡಲ ಮಧ್ಯದಲ್ಲಿ ಈಜುತ್ತಿದೆ….! ಮತ್ತಷ್ಟು ಓದು 
ಜಾತಿ ಎಂಬ ಜಾಡ ಹಿಡಿದು…
– ವಸಂತ್ ಕೋಡಿಹಳ್ಳೀ ಲಕ್ಕೂರು
ಮನುಷ್ಯ ಹುಟ್ಟುತ್ತಾ ಹುಟ್ಟುತ್ತಾ ಸ್ವಾತಂತ್ರ ಜೀವಿ!, ಅವನು ಬೆಳೆದಂತೆಲ್ಲ ಸಮಾಜದ ಕಟ್ಟುಪಾಡುಗಳು ಅವನ ಸ್ವಾತಂತ್ರವನ್ನು ಕಸಿದುಕೊಳ್ಳುತ್ತಾ ಬರುತ್ತದೆ. ಕರ್ನಾಟಕದ ಶ್ರೇಷ್ಟ ಕವಿ ಕುಂವೆಂಪುರವರು ತನ್ನ ವಿಶ್ವಮಾನವ ಸಂದೇಶದಲ್ಲಿ ಹೀಗೆ ಹೇಳುತ್ತಾರೆ. “ಪ್ರತಿಯೊಂದು ಮಗುವೂ ಹುಟ್ಟುತ್ತಲೆ ವಿಶ್ವಮಾನವ. ಬೆಳೆದಂತೆ ನಾವು ಅದನ್ನು ‘ಅಲ್ಪಮಾನವ’ನನ್ನಾಗಿ ಮಾಡುತ್ತೇವೆ. ಎಂದರೆ ಹುಟ್ಟುವಾಗ ಎಲ್ಲರೂ ವಿಶ್ವಮಾನವರಾಗಿಯೇ ಹುಟ್ಟುತ್ತಾರೆ. ಬೆಳೆದಂತೆ ನಾವು ಅವರನ್ನು ಜಾತಿ, ಧರ್ಮ, ಬಾಷೆ, ದೇಶ, ಜನಾಂಗ ಎಂಬಲ್ಲ ಕಟ್ಟು ಪಾಡುಗಳಿಂದ ಬಂಧಿಸುತ್ತೇವೆ. ಬಹುಶಃ ಅವನು ಹುಟ್ಟಿದ ಸಮಜ ಅವನನ್ನು ಅಲ್ಪನನ್ನಾಗಿಸುತ್ತದೆ. ಇಲ್ಲಿ ‘ಸಮಾಜ’ವೆಂಬುದು ಮನುಷ್ಯ ಕಳಂಕವಲ್ಲವೇ
ಸರಿ ನಾನು ಕವಲುದಾರಿಗಳಲ್ಲಿ ಸಾಗಿ ಮನುಷ್ಯನ ನಿಗೂಢ ಜಾಡು ಹಿಡಿದು. ಅವನ ಕೆಲವು ಪದರುಗಳನ್ನು ಇಲ್ಲಿ ಮಂಡಿಸಲು ಪ್ರಯತ್ನಿಸುತ್ತೇನೆ. ಕುವೆಂಪುರವರು ಒಂದು ಜನಾಂಗ ಮತ್ತೊಂದು ಜನಾಂಗವನ್ನು ಮೆಟ್ಟಿ ತುಳಿಯುವುದು ವಿರಾಟ್ ಶಕ್ತಿ, ವಿರೋಧಿ ಕೃತ್ಯ, ಹೇಡಿತನ ಎಂದು ಬಣ್ಣಿಸುತ್ತಾರೆ. ಸಮಾಜದ ನೆರಳಿನಲ್ಲಿ ನಮ್ಮ ಬೆಳವಣಿಗೆಗಾಗಿ ತಮ್ಮ ಜೀವನದ ಮೌಲ್ಯಗಳನ್ನು ಸರಿದೂಗಿಸುವ ನೆಪದಲ್ಲಿ “ಜಾತಿ, ಬಾಷೆ, ಸಂಸ್ಕೃತಿಗಳ ಮೊರೆ ಹೋಗುವುದಂತೂ ಸರಿ ?. ಅಂದರೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬಂತೆ ವಿಂಗಡಿಸಿ ಉನ್ನತವಾದ ಸ್ತಾನಗಳನ್ನು ಮೇಲಿನ ಮೂರೂ ವರ್ಗದವರು ಪಡೆದುಕೊಂಡು ಶೂದ್ರರನ್ನು ಇಂದಿಗೂ ತುಳಿಯುತ್ತಾ ಶೋಷಣೆ ಗೈಯುವುದು ಯಾವ ನ್ಯಾಯ ? ಮತ್ತಷ್ಟು ಓದು 
ಇದರ ಕತೆ ಇಷ್ಟೇ ಕಣಪ್ಪೋ….
ಉಮೇಶ್ ದೇಸಾಯಿ
ಹೌದು ಆ ಕತೆಬರೆದವ ಸಹ ಈ ತಿರುವು ಊಹಿಸಿರಲಿಕ್ಕಿಲ್ಲ. ನಾವು ಆರಿಸಿ ಕಳಿಸಿದ ಪಕ್ಷ ಅದರ ಮುಖಂಡ ಇಂದು ಆಣೆ ಪ್ರಮಾಣ ಮಾಡುತ್ತಾರಂತೆ ಅವರ ಹಿಂದಿನ ಸಿಎಮ್ಮು..

ನಮ್ಮದು ರಾಮಜನ್ಮಭೂಮಿಯೂ ಹೌದು,ಪುರಾತನ ನಾಗರೀಕತೆಯೂ ಹೌದು…!
– ಕೆ.ಎಸ್ ರಾಘವೇಂದ್ರ ನಾವಡ
ಇದು ಬಹಳ ಆಸಕ್ತಿದಾಯಕವಾದ ಸಾಧಾರಸಹಿತವಾದ ಬರಹ. ನಾವುಗಳು ಇದನ್ನು ಓದುತ್ತಾ ಹೋದ೦ತೆ “ಶ್ರೀ ರಾಮ“ ಮತ್ತು “ವಾಲ್ಮೀಕಿ ಮಹರ್ಷಿ ವಿರಚಿತ ರಾಮಾಯಣ ಕಟ್ಟುಕಥೆಯಲ್ಲ” ಹಾಗೂ ನಮ್ಮ ನಾಗರೀಕತೆಯೇ ಪುರಾತನ ನಾಗರೀಕತೆ ಎ೦ಬುದು ನಮಗರಿವಾಗುತ್ತದೆ.ಈ ಲೇಖನದಲ್ಲಿ ವೈಜ್ಞಾನಿಕವಾಗಿ ಅದನ್ನು ಸಾದರ ಪಡಿಸಲು ಪ್ರಯತ್ನಿಸಿದ್ದೇನೆ. ನಾಸಾದವರು ತಿಳಿಸಿದ೦ತೆ, ಶ್ರೀ ರಾಮ ಜನಿಸಿದ್ದನೇ? ಶ್ರೀ ರಾಮಾಯಣ ನಡೆದಿತ್ತೇ ಎನ್ನುವ ಪ್ರಶ್ನೆಗಳಿಗೆ ಈ ಲೇಖನ ಅತ್ಯುತ್ತಮ ಹಾಗೂ ನ೦ಬಲರ್ಹವಾದ ದಾಖಲೆ.
ಮಹರ್ಷಿ ವಾಲ್ಮೀಕಿಗಳು ಶ್ರೀರಾಮನು ಅಯೋಧ್ಯೆಯ ರಾಜನಾಗಿ ಪಟ್ಟಾಭಿಷೇಕದ ನ೦ತರ ಮೊದಲ ಬಾರಿಗೆ ಶ್ರೀರಾಮಾಯಣವನ್ನು ಬರೆದರೆ೦ಬುದು ನಮಗೆ ತಿಳಿದ ವಿಷಯ.ಆದ್ದರಿ೦ದ ಇದೇ ಮೂಲ ರಾಮಾಯಣ.ಮಹರ್ಷಿ ವಾಲ್ಮೀಕಿಗಳು ಮಹಾ ಜ್ಯೋತಿಷಿಗಳಾಗಿದ್ದರು. ಅವರು ರಾಮಾಯಣದ ಮಹತ್ತರ ದಿನಗಳ ಬಗ್ಗೆ ಆ ದಿನಗಳಲ್ಲಿ ಗ್ರಹ ಹಾಗೂ ನಕ್ಷತ್ರಗಳು ಯಾವ ಯಾವ ಮನೆಗಳಲ್ಲಿದ್ದವು ಎ೦ಬುದರ ಸಮೇತ ವಿವರಿಸುತ್ತಾರೆ. ಪ್ರತಿ ದಿನವೂ ಗ್ರಹಗತಿಗಳು ಬದಲಾಗುತ್ತಿರುತ್ತವೆ ಎ೦ಬುದು ನಮಗೆ ವೇದ್ಯವಿರುವ ವಿಚಾರ.“ಪ್ಲಾನೆಟರಿಯಮ್“ ಎನ್ನುವ ಸಾಫ್ಟ್ ವೇರ್ ನಲ್ಲಿ ಮಹರ್ಷಿ ವಾಲ್ಮೀಕಿ ಹೆಸರಿಸಿರುವ ಗ್ರಹಗತಿಗಳನ್ನು ಬರೆಯುವುದರ ಮೂಲಕ ಅದಕ್ಕೆ ಸರಿಯಾದ ಆ೦ಗ್ಲ ವಾರ್ಷಿಕ ದಿನಗಳನ್ನು ಪಡೆಯಬಹುದು. ಇದನ್ನು ನಾಸಾದವರು ಸಿಧ್ಢಪಡಿಸಿದ್ದಾರೆ.
ಭಾರತೀಯ ಕ೦ದಾಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶ್ರೀ ಪುಷ್ಕರ್ ಭಟ್ನಾಗರ್ ಈ ಸಾಫ್ಟ್ ವೇರ್ ಅನ್ನು ಯು.ಎಸ್. ನಿ೦ದ ಪಡೆದುಕೊ೦ಡರು. ಇದನ್ನು ಸೂರ್ಯಗ್ರಹಣ, ಚ೦ದ್ರಗ್ರಹಣ ಹಾಗೂ ಭೂಮಿಯಿ೦ದ ಇತರೆ ಗ್ರಹಗಳಿರುವ ದೂರವನ್ನು ಲೆಕ್ಕ ಹಾಕಲು ಬಳಸುತ್ತಿದ್ದರು.ಭಟ್ನಾಗರ್ ಅವರು ಅದರಲ್ಲಿ ಮಹರ್ಷಿ ವಾಲ್ಮೀಕಿ ಬರೆದಿರುವ ಎಲ್ಲಾ ಗ್ರಹಗಳ ಮಾಹಿತಿಗಳನ್ನು ಆಯಾ ದಿನಗಳಿಗೆ ಸ೦ಬ೦ಧಿಸಿದ೦ತೆ ನೀಡಲಾಗಿ, ಅದರಿ೦ದ ಮಹತ್ತರವಾದ ಹಾಗೂ ಉತ್ತಮ ಫಲಿತಾ೦ಶವನ್ನು ಪಡೆದರು. ಬಹುತೇಕವಾಗಿ ಶ್ರೀ ರಾಮನ ಜನನದಿ೦ದ ಹಾಗೂ ಅವನು ವನವಾಸವನ್ನು ಪೂರೈಸಿ ಅಯೋಧ್ಯೆಗೆ ಮರಳಿ ಬರುವವರೆಗಿನ ಎಲ್ಲಾ ಮಾಹಿತಿಗಳನ್ನು ಆ೦ಗ್ಲ ವಾರ್ಷಿಕ ದಿನಾ೦ಕದ೦ತೆ ಪಡೆದರು.
ಮತ್ತಷ್ಟು ಓದು 
‘ಹೆಣ್ಣಾಗುವ’ ಒಂದು ಪ್ರಸಂಗ
– ಸಾತ್ವಿಕ್ ಎನ್.ವಿ.
ನನ್ನ ಮೊಬೈಲ್ ಗೊಂದು ಮಿಸ್ಡ್ ಕಾಲ್. ಇದು ಯಾರು ಎಂದು ಕೇಳಿ ರಿಪ್ಲೇ ಮಾಡಿದೆ. ತಕ್ಷಣವೇ ಅಲ್ಲಿಂದ ಶುರುವಾಯ್ತು ಮೆಸೇಜುಗಳ ಸುರಿಮಳೆ.
ನಮ್ಮ ನಡುವಿನ ಸಂಭಾಷಣೆಯನ್ನು ಹಾಗೆಯೇ ನೀಡಿದರೆ ಚೆನ್ನ.
‘ನೀವು ರಚನ್ ಅಲ್ವಾ? ‘
‘ಅಲ್ಲ, ನಾನು ರಚನ್ ಅಲ್ಲ’
‘ನಿಮ್ಮ ಹೆಸರು ಕೇಳಬಹುದೇ?’
‘ಕ್ಷಮಿಸಿ, ಗುರುತಿಲ್ಲದವರಿಗೆ ಪರಿಚಯ ಹೇಳಲಾರೆ’
‘ಪರಿಚಯಕ್ಕೇನು, ಮಾಡಿಕೊಂಡರಾಯಿತು. ನಾನು ಮನು. ೩ನೇ ಸೆಮ್ ಇ ಅಂಡ್ ಸಿ. ಊರು ಬೆಂಗಳೂರು, ನೀವು?’
ನಾನು ಈಗ ನಿಜಕ್ಕೂ ಸಂಕಟಕ್ಕೆ ಸಿಲುಕಿದೆ. ಹೀಗೆಯೆ ಎಷ್ಟೊ ಜನ ಮಿಸ್ ಕಾಲ್ ಗಳಿಂದ ಪರಿಚಿತರಾಗಿ ಗೆಳೆಯರಾಗಿರುವುದನ್ನು ಕೇಳಿದ್ದೆ. ಆದರೂ ನನ್ನ ನಿಜ ಪರಿಚಯ ಕೊಡಲು ಹಿಂಜರಿಕೆಯಾಯಿತು. ಇದು ಆತನಿಗೆ ಅರ್ಥವಾಯಿತೋ ಎಂಬಂತೆ ಆತನೇ ಮಾತು ಮುಂದುವರಿಸಿದ. ‘ಪರವಾಗಿಲ್ಲ, ನೀವು ಹುಡುಗನೋ, ಇಲ್ಲ ಹುಡುಗಿಯೋ’ ಎಂದು ಕೇಳಿದ.
ಹನಿ ಹನಿ ಮುತ್ತು..
-ಅಬ್ದುಲ್ ಸತ್ತಾರ್

ಏನ್ ಹುಡ್ಗಿರೋ…!!!
– ಶಶಾ೦ಕ.ಕೆ
ಮೊದಲನೆ ಮಹಡಿಯಲ್ಲಿದ್ದ ನನ್ನ ಕೋಣೆಯ ಕಿಟಕಿಯಿ೦ದ ಒಳಗೆ ಚಿಮ್ಮುತ್ತಿದ್ದ ಮಳೆಯ ಹನಿಗಳು ಯಾವ ತರಹ ರೇಜಿಗೆ ಹುಟ್ಟಿಸಿದವೆ೦ದರೆ, ಎದ್ದು ಕಿಟಕಿ ಬಾಗಿಲು ಹಾಕಬೇಕನ್ನುವ ಮಟ್ಟಿಗೆ. ಮಧ್ದ್ಯಾನ್ಹ ೨ ಗ೦ಟೆಗೇ ಸ೦ಜೆ ಆರು ಗ೦ಟೆ ಆದ ಹಾಗಿತ್ತು. ಮು೦ಗಾರು ಮಳೆಯ ಮೊದಲ ಹನಿಗಳು ಬೀಳುತ್ತಿದ್ದ ಹಾಗೇ ಹೋರಗೋಡಿ ನಿಲ್ಲುತ್ತಿದ್ದವನು ನಾನೇ? ಕಿಟಕಿಯ ಹತ್ತಿರ ಹಾಸಿದ ಹಾಸಿಗೆ ಹಾಳಾಗಿ ಹೋಗುತ್ತೆ ಕಣೊ ಎ೦ದು ಅಮ್ಮ ಬಯ್ಯುತ್ತಿದ್ದರೂ, ತೆರೆದ ಕಿಟಕಿಯಿ೦ದ ಮಳೆಯ ಹನಿಗಳ ಚಿಟಪಟ ಸದ್ದು ಕೇಳುವ ಸಲುವಾಗಿ ಅಮ್ಮನೊಡನೆ ಜಗಳವಾಡಿ ಕಿಟಕಿಗಳನ್ನು ತೆರೆದು ಮಣ್ಣಿನ ವಾಸನೆಯ ಸುಗ೦ಧ ಹೀರುತ್ತಿದ್ದದ್ದು ನಾನೇ? ಎನ್ನುವ ಮಟ್ಟಿಗೆ ಈಗ ಬದಲಾಗಿದ್ದೇನೆ. ತಬಲಾ, ಕೀಬೋರ್ಡ್, ಶಾಸ್ತ್ರೀಯ ಸ೦ಗೀತ ಎ೦ದು ಹುಚ್ಚು ಹಚ್ಚಿಸಿಕೊ೦ಡು ತಿರುಗುತ್ತಿದ್ದವನು ನಾನ? ಒ೦ದು ಕಾಲದಲ್ಲಿ ಮನೆಯಲ್ಲಿದ್ದಾಗೆಲ್ಲಾ World-space Satellite Radio ನಲ್ಲಿ ಶಾಸ್ತ್ರೀಯ ಸ೦ಗೀತ ವಾಹಿನಿಯನ್ನು ಕೇಳುತ್ತಿದ್ದವನು ನಾನ? ರೇಡಿಯೊದಲ್ಲಿ ನನ್ನ ನೆಚ್ಚಿನ ಪ೦.ಹರಿಪ್ರಸಾದ್ ಚೌರಾಸಿಯಾ ಅವರ ಸ೦ಗೀತ ಬರುತ್ತಿದ್ದರೂ ಅದನ್ನ ಕೇಳುವದಿರಲಿ ಅಲ್ಲಿ೦ದ ಎದ್ದು ಹೊರಟುಬಿಟ್ಟೆ.
ಮೊನ್ನೆ ಅಮ್ಮ ತರಕಾರಿ ತೊಗೊ೦ಬಾ ಎ೦ದು ಹೇಳಿದ್ದು, ತರಕಾರಿ List ಹಾಗು ಹಣ ಕೊಟ್ಟದ್ದು ಮಾತ್ರ ನೆನಪಿತ್ತೇ ಹೊರತು, ಮತ್ತೆ ನನಗೆ ನಾನೆಲ್ಲಿದ್ದೇನೆ ಎನ್ನುವ ಪ್ರಜ್ನೆ ಬ೦ದಿದ್ದು ತರಕಾರಿ ಮಾರ್ಕೆಟ್ ದಾಟಿ ಮು೦ದಿನ ರಸ್ತೆಯಲ್ಲಿ ಬಸ್ ಒ೦ದರ ಡ್ರೈವರ್ ಜೋರಾಗಿ ಹಾರ್ನ್ ಮಾಡಿ ಅವನ Dictionary ನಲ್ಲಿದ್ದ ಎಲ್ಲಾ ಅವಾಚ್ಯ ಶಬ್ಢಗಳನ್ನು ಬಳಸಿ ಬೈದಾಗಲೇ. ಇದಕ್ಕೆಲ್ಲಾ ಕಾರಣ “ಅವಳೇ” ಎ೦ದು ಯೊಚನೆ ಮಾಡ್ತಿದ್ದಾಗ “ಅಜಯ್, ಆಗಿ೦ದ ಊಟಕ್ಕೆ ಕರಿತಿದಿನಿ ಇಲ್ಲಿ ಕೂತ್ಕೊ೦ಡು ಏನ್ ಮಾಡ್ತಿದಿಯೊ?” ಎ೦ದು ಅಮ್ಮ ಕೂಗಿದಾಗಲೆ ನನಗೆ ಎಚ್ಚರ ಆಗಿದ್ದು. ಹೇಳಿಕೊಳ್ಳಕ್ಕೆ “ಅವಳು” ನನ್ನ Best Friend. ಮತ್ತಷ್ಟು ಓದು 
ಕನ್ನಡ ಕಲಿಕೆಯ ಆಸಕ್ತರಿಗೆ
– ಬನವಾಸಿ ಬಳಗ
ನಾಡಿನ ಹಿರಿಯ ನುಡಿಯರಿಗರಾದ ಡಾ|| ಡಿ. ಎನ್. ಶಂಕರಬಟ್ಟರು ಕನ್ನಡದ ನುಡಿಯರಿಮೆ (ಬಾಶಾವಿಗ್ನಾನ) ಸೊಲ್ಲರಿಮೆ (ವ್ಯಾಕರಣ) ಮತ್ತು ಪದಕಟ್ಟಣೆ (ಪದರಚನೆ) ಕುರಿತಂತೆ ಆಳವಾಗಿ ಅದ್ಯಯನ ನಡೆಸಿ ಈ ವಲಯಗಳಲ್ಲಿ ಸಂಶೋದನೆಗೆ ಹೊಸದೊಂದು ದಾರಿಯನ್ನು ಕಟ್ಟಿದ್ದಾರೆ.
ಈಗ ಅವರ ಕೈಕೆಳಗೆ ಅವರಿಂದಲೇ ಈ ವಿಶಯಗಳ ಬಗ್ಗೆ ಕಲಿಯುವ ಮತ್ತು ಅವರ ಸಂಶೋದನೆಯಲ್ಲಿ ನೇರವಾಗಿ ಪಾಲ್ಗೊಳ್ಳುವ ಒಂದು ಚಿನ್ನದಂತಹ ಅವಕಾಶವನ್ನು ಬನವಾಸಿ ಬಳಗ ನಿಮ್ಮ ಮುಂದೆ ತಂದಿದೆ. ಈ ಕಾರ್ಯಕ್ರಮದ ವಿವರಗಳನ್ನು ಕೆಳಗೆ ಕೊಡಲಾಗಿದೆ.
ಕಾರ್ಯಕ್ರಮದ ಇಟ್ಟಳ
ಈ ಕಾರ್ಯಕ್ರಮದ ಅಂಗವಾಗಿ ತಲಾ ಒಂದು ವರ್ಶದ ಅವದಿಯ ನಾಲ್ಕು ಹಮ್ಮುಗೆ (ಯೋಜನೆ) ಗಳನ್ನು ಏರ್ಪಡಿಸಲಾಗಿದೆ. ಮೂವರು ಶಿಬಿರಾರ್ತಿಗಳು ಸೇರಿ ಒಂದು ಹಮ್ಮುಗೆಯನ್ನು ಮಾಡಬೇಕಾಗುತ್ತದೆ. ಹಮ್ಮುಗರಿಗೆ ಡಾ||. ಡಿ. ಎನ್. ಶಂಕರಬಟ್ಟರು ತಾವೇ ಮಾರ್ಗದರ್ಶನ ನೀಡುತ್ತಾರೆ. ಹಮ್ಮುಗೆಗಳ ವಿಶಯಗಳು ಹೀಗಿವೆ:






