ವಿಷಯದ ವಿವರಗಳಿಗೆ ದಾಟಿರಿ

Posts from the ‘ಸಂಸ್ಕೃತಿ’ Category

8
ಜೂನ್

ಕಳ್ಳ…! ನಮ್ಮ ಅನ್ನ ಕದ್ದ ಕಳ್ಳ..!

-ರವಿ ಮುರ್ನಾಡು

          ಹೊಡೆಯಬೇಡಿ ನನ್ನನ್ನು… ಹೊಡೆಯಬೇಡಿ…. ಇನ್ನು ಮುಂದೆ ಕದಿಯುವುದಿಲ್ಲ…! ಹಾಗಂತ, ತೊದಲು ನುಡಿಯಲ್ಲಿ ಪ್ರಾರ್ಥಿಸಿದ್ದೆ. ಹೊಡೆತ ನಿಂತಿತ್ತು. “ಕಳ್ಳ” ಅನ್ನುವ ಹಣೆಪಟ್ಟಿ ತೆಗೆಯಲಾಗಲಿಲ್ಲ. ಅವರೆಲ್ಲಾ ಕೆಕ್ಕರುಗಣ್ಣಿನಲ್ಲಿ ದುರುಗುಟ್ಟಿ ನೋಡುತ್ತಿದ್ದರು. ಇನ್ನು ಅನ್ನ ಕದ್ದರೆ, ಕಣ್ಣಿಗೆ ಮೆಣಸು ಹಾಕಿ ಹೊಡೆದೇವು ಜೋಕೆ ಅಂದರು. ಆಯಿತು, ನಾನು ಕದಿಯಲಿಲ್ಲ. ಅನ್ನದ ಆಸೆಗೆ ಮೂಗು ಸುವಾಸನೆಯನ್ನು ಅರಸುತ್ತಿತ್ತು. ಹೊಟ್ಟೆ ಅರ್ಧವಾದರೂ ಏಟಿಗೆ  ಹೆದರಿ ಹಸಿಯದೆ ಸುಮ್ಮನಾಯಿತು.

ಅನ್ನ ಕದ್ದ ಕತೆಗಳು ಸಿನೇಮಾದಲ್ಲಿ ಬಣ್ಣಗಳಾದವು. ಜಗತ್ತಿನ ಅತ್ತ್ಯುನ್ನತ ಪ್ರಶಸ್ತಿಗಳ ಕಿರೀಟ ಹೊತ್ತ ಹಲವು ಸಾಹಿತ್ಯ ಪ್ರಾಕಾರಗಳು ಇದರ ಹಿಂದೆ ಇತಿಹಾಸದ ಪುಟ ಸೇರಿದವು. ಇಂದಿಗೂ ಕಣ್ಣಿಗೆ ಕಾಣದ ಅನ್ನ ಕದಿಯುವ ಸರದಿಗಳು ಈ ಸಮಾಜದಲ್ಲಿ ಹೀಗೆ ಸಾಲು ಸಾಲಾಗಿ ಜೀವಂತವಾಗಿವೆ. ಇಂತಹ ಸಿನೇಮಾ ನೋಡುವಾಗ ಮತ್ತು ಸಾಹಿತ್ಯಗಳನ್ನು ಓದುವಾಗ ಅದರೊಳಗೆ ಆಕಸ್ಮಿಕವಾಗಿ  ನಾನೇ ಪಾತ್ರಧಾರಿಯಾಗುತ್ತೇನೆ. ಅಲ್ಲೆಲ್ಲಾ ಮಾತನಾಡುತ್ತೇನೆ. ನನ್ನ ಹಾಗೇ ನನ್ನದೇ ನೆರಳಿನ ನರ್ತನ…!. ನನ್ನದೇ  ಜಗತ್ತಿನ ಒಂದು ಪ್ರಶ್ನೆ . ನಾನೊಬ್ಬ ಅನ್ನ ಕದ್ದ ಕಳ್ಳನೇ?. ಹಿಗ್ಗಾ ಮುಗ್ಗಾ ಹೊಡೆದರು. ಬೆಳಿಗ್ಗಿನಿಂದ ಸಂಜೆಯವರೆಗೆ ದುಡಿದ ಅವರ ಅನ್ನವನ್ನು ನಾನು ಕದ್ಡೆ ಅನ್ನುವ  ಕಾರಣಕ್ಕಾಗಿ ಕಂಡ ಕಂಡಾಗಲೆಲ್ಲ ಕಳ್ಳ ಎಂದು ಮೂದಲಿಸಿದರು. ಅವರ ಮಕ್ಕಳೆಲ್ಲಾ ಹಿಯ್ಯಾಳಿಸಿದರು. ಕಣ್ಣುಗಳು ತೇವಗೊಳ್ಳುತ್ತವೆ…. ಏಕೆ ಅನ್ನ ಕದ್ದೆ ಅಂತ ಅವರು ಕೇಳಲಿಲ್ಲ. ಸುರುಳಿ ಬಿಚ್ಚುತ್ತಿದೆ ಮನಸ್ಸು …!

ಅದು ಕಾರ್ಮಿಕರ ಲೈನ್‍ ಮನೆ. ಓಗರೆಯ ಐದು ಮನೆಗಳಿದ್ದವು. ಕೊಡಗಿನ ಸೋಮವಾರಪೇಟೆಯಲ್ಲಿ ಹೆಚ್ಚು ಇಂತಹ ಕಾರ್ಮಿಕರ ಮನೆಗಳು ಕಂಡು ಬರುತ್ತವೆ. ದೊಡ್ಡ ದೊಡ್ಡ ಕಾಫಿ ತೋಟಗಳು ಅದು. ಕಾಫೀ  ಕೊಯ್ಲಿನ ಸಮಯದಲ್ಲಿ ಹೊರ ಜಿಲ್ಲೆಗಳಾದ ಮೈಸೂರು,ಹಾಸನ ಸೇರಿದಂತೆ, ಕೇರಳ,ತಮಿಳುನಾಡಿನಿಂದಲೂ ಕಾರ್ಮಿಕರು ಠಿಕಾಣಿ ಹೂಡುತ್ತಾರೆ. ಸುಂಟಿಕೊಪ್ಪ ಪಟ್ಟಣದಿಂದ ಎಂಟು ಕಿ. ಮೀ. ದೂರ ” ಕಾರೆಕೊಲ್ಲಿ” ಕಾಫಿ ಎಸ್ಟೇಟಿಗೆ. ಅಲ್ಲಿಂದ   “ಕಂಟ್ರೋಲ್‍” ಎಸ್ಟೇಟಿಗೆ ಮೂರು ಕಿ.ಮೀ. ದೂರ .  ಸುಂಟಿಕೊಪ್ಪದಿಂದ ಮಡಿಕೇರಿ ದಾರಿ ಮಧ್ಯೆಯೂ  ಬಸ್ಸಿನಲ್ಲಿ ಇಳಿದು ಇಲ್ಲಿಗೆ ಹೋಗಬಹುದು. ಅದು ನಮಗೆ ಗೊತ್ತಿಲ್ಲ. ನಾವೆಲ್ಲರೂ ನಡೆದು ಹೋಗಿಯೇ ಈ ಎಸ್ಟೇಟಿಗೆ ತಲಪುತ್ತಿದ್ದದ್ದು. ಅದು ಕಾರೆಕೊಲ್ಲಿ ಎಸ್ಟೇಟ್ ಮೂಲಕ. ಇಲ್ಲಿಯೇ ನನ್ನ ಅಜ್ಜಿ ಮನೆ. ಮತ್ತಷ್ಟು ಓದು »

8
ಜೂನ್

ಐ ಹೇಟ್ ಕ್ರಿಕೆಟ್..!!!???

ಅರೆಹೊಳೆ ಸದಾಶಿವರಾವ್

ಕ್ರಿಕೆಟಿಗರು ಮೈದಾನದಲ್ಲಿ ಆಡುತ್ತಿದ್ದರೆ ಮೈ ಎಲ್ಲಾ ಕಣ್ಣಾಗಿ, ದೇಶದ ಧ್ವಜವನ್ನು ಹಾರಿಸಿ ನೋಡುವ, ಮನೆಯೊಳಗೆ ಎಲ್ಲಾ ಕೆಲಸ ಬಿಟ್ಟು ಟಿ” ಮುಂದೆ ಕುಳಿತುಕೊಳ್ಳುವ ನಾವೆಲ್ಲರೂ ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ, ಬಹುಷ ನಾವೂ ಈ ಕ್ರಿಕೆಟಿಗರೆಂಬ ‘ದೇಶ ದ್ರೋ”‘ಗಳಿಗಿಂತ ಕಡಿಮೆ ಇಲ್ಲದಂತಾಗುತ್ತದೆ. ವ್ಯತ್ಯಾಸ ಎಂದರೆ ಅವರಿಗೆ ಕೈತುಂಬಾ ಹಣ ಸಿಗುತ್ತದೆ, ನಮ್ಮದು ಜೀವನದ ಅಪೂರ್ವಗಳಿಗೆಗಳು ವ್ಯರ್ಥವಾಗಿ ಕಳೆದುಹೋಗುತ್ತವೆ.

ಹಲವು “ಷಯಗಳ ಬಗ್ಗೆ ನಾ”ಲ್ಲಿ ಯೋಚಿಸಲೇ ಬೇಕು. ಇತ್ತೀಚಿನ ಐಪಿಎಲ್ ಪಂದ್ಯಾವಳಿಯ ವೇಳೆ, ರಾಯಲ್ ಚ್ಯಾಲೆಂಜರ್ಸ್, ಬೆಂಗಳೂರು ತಂಡವನ್ನು ಹಲವರು ನಮ್ಮ ತಂಡ ಎಂದೇ ಸಂಬೋಧಿಸುತ್ತಿದ್ದರು. ನಮ್ಮ ಕರ್ನಾಟಕದ ಆಟಗಾರರನ್ನೆಲ್ಲಾ ಕೈ ಬಿಟ್ಟು, ಕೇವಲ ಬೇರೆ ರಾಜ್ಯ ಮತ್ತು “ದೇಶಿ ಆಟಗಾರರನ್ನು ಮಾತ್ರ ‘ಖರೀದಿಸಿ’, ನಮ್ಮ ರಾಜ್ಯದ ರಾಜಧಾನಿ ಬೆಂಗಳೂರಿನ ಹೆಸರಿಟ್ಟುಕೊಂಡು, ಬೆಂಗಳೂರಿನಲ್ಲಿ ಆದ ಪಂದ್ಯಗಳಲ್ಲೆಲ್ಲಾ ಕ್ರಿಕೆಟ್ ಪ್ರೇ”ಗಳ ಹಣ ದೋಚಿದ್ದು ಬಿಟ್ಟರೆ, ಬೇರಾವ ರೀತಿಯಲ್ಲೂ ಈ ಬೆಂಗಳೂರು ತಂಡ ನಮ್ಮzಲ್ಲವಾಗಿತ್ತು!. ಆದರೂ ಅದನ್ನು ನಮ್ಮದು ಎಂದು, ನಮ್ಮದೇ ರಾಜ್ಯದ ಕ್ರಿಕೆಟಿಗರು ಬೇರೆ ತಂಡದಲ್ಲಿ ಆಡುತ್ತಿದ್ದರೂ, ನಾವು ಮಾತ್ರ ಮರುಳರಂತೆ ‘ಅಭಿಮಾನ’ದ ಪರಾಕಾಷ್ಠೆ ಮೆರೆದದ್ದು. “ಜಯ ಮಲ್ಯರಿಗಂತೂ ಖುಯಾಗಿರಬಹುದು. ಮತ್ತಷ್ಟು ಓದು »

7
ಜೂನ್

ಇಲ್ಲಿ ‘ನಿಮ್ಮ’ ಕಣ್ಣಿಗೆ ಸಣ್ಣವರಾದ ಸಾಮಾನ್ಯ ಜನರು ಇದ್ದರು…

ಡಾ.ಅಜಕ್ಕಳ ಗಿರೀಶ್

ರಾಮದೇವ್ ಬಗ್ಗೆ ಬೇಕಾದದ್ದು ಮಾತಾಡಲಿ. ಆದರೆ ಹಾಗೆ ಹಿಡನ್ ಅಜೆಂಡಾ, ಕೋಮುವಾದಿಗಳು ಇತ್ಯಾದಿ ಬೈಯುವಾಗ ಕೂಡ ಯಾರೊಬ್ಬರೂ ಗಮನಿಸದ ವಿಚಾರ ಅಂದರೆ, ಅವರನ್ನು ಬೇಂಬಲಿಸಿ ರಾಮಲೀಲ ಮೈದಾನಕ್ಕೆ ಗಂಟುಮೂಟೆ ಕಟ್ಟಿಕೊಂಡು ಹೋದ ಸಾವಿರಾರು ಜನರು ಇದ್ದಾರಲ್ಲ ಅವರು ಯಾವ ಸ್ವಾರ್ಥದಿಂದ ಹೋದರು? ನಿಜ , ಅಲ್ಲಿ ಕಡುಬಡವರು ಇದ್ದಿರಲಾರರು. ಆದರೆ,ಅಲ್ಲಿ ಇದ್ದವರು ನಿಜವಾದ ದೇಶಭಕ್ತರು. ದೇಶಭಕ್ತಿ ಅಂದರೆ ಏನು ಅಂತ ವಿವರಿಸುವುದು ಯಾವಾಗಲೂ ಕಷ್ಜ್ಟ. ಆದರೆ ಇಂದು ಬಹುಶಃ ದೇಶಭಕ್ತಿ ಅಂದರೆ ಏನು ಅಂತ ಯಾರಿಗಾದರೂ ಪಾಠ ಹೇಳಬೇಕಾದರೆ ನಾವು ಇದು ಅಂತ ತೋರಿಸಬಹುದುದು. ಬೇರೆ ಅಂಥ ಉದಾಹರಣೆಗಳು ಬಹಳ ಸಿಗಲಿಕ್ಕಿಲ್ಲ. ಊಟದ ಆಸೆಯಿಂದ ಸೇರಿದ್ದಾರೆ ಅನ್ನಲು ಅಲ್ಲಿ ಊಟವಿಲ್ಲ,ಉಪವಾಸ. ಹಣದ ಆಸೆಗೆ ಹೋದರೇ? ಅವರು ತಮ್ಮ ಸ್ವಂತ ಹಣದಿಂದ ಹೋದರು ,ಅಷ್ಟೇ ಅಲ್ಲ ,ಬಹುಶ ಬಹಳ ಜನ ಪೆಂಡಲ್ ಇತ್ಯಾದಿ ಖರ್ಚಿಗೆ ದೇಣಿಗೆ ಕೂಡ ಕೊಟ್ಟಿರಬಹುದು(ದೇವಸ್ತಾನಗಳಿಗೆ ನಮ್ಮ ಖರ್ಚಲ್ಲಿ ಹೋಗಿ ಕಾಣಿಕೆ ಹಾಕಿದಂತೆ.ದೇವಸ್ತಾನದಲ್ಲಿ ಪುಣ್ಯವಾದರೂ ಸಿಗುತ್ತೆ ಸ್ವಂತಕ್ಕೆ ಅಂತ ಆಸೆ ಇರುತ್ತೆ, ಇಲ್ಲಿ ಸ್ವಂತಕ್ಕೆ ಅಂತ ಏನಿಲ್ಲ.) ಮತ್ತಷ್ಟು ಓದು »

7
ಜೂನ್

ಬಾಲ್ಯಕಾಲವೇ ನೀ ಇನ್ನೊಮ್ಮೆ ಬಾರೆಯಾ?

– ಡಾ.ಶೈಲಾ ಯು.

ಮಾರಣಕಟ್ಟೆಯ ಜಾತ್ರೆಗೆ ಮಕ್ಕಳೊ೦ದಿಗೆ ಹೊರಟಿದ್ದೇನೆ; ನೆನಪುಗಳು ಮರುಕಳಿಸುತ್ತಿವೆ.   ಅವರನ್ನು ನೆಪವಾಗಿಟ್ಟುಕೊ೦ಡು ಎಷ್ಟು ವರ್ಷಗಳಿ೦ದ ನನ್ನ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ್ದೇನೋ? ನನಗೇ ನೆನಪಿಲ್ಲ. ಯಾವುದಕ್ಕೂ ಬಿಡುವಿಲ್ಲ ಬಿಡುವಿಲ್ಲ ಎ೦ಬ ಗೊಣಗಾಟವನ್ನು ತತ್ಕಾಲಕ್ಕೆ ನಿಲ್ಲಿಸಿ, ಮಕ್ಕಳಿಗೂ ಕಿ೦ಚಿತ್ ಅನುಭವ ಸಿಗುವುದೇ ಎ೦ಬ ಕಾತುರದಲ್ಲಿ ನನ್ನ ಅಕ್ಕರೆಯ ಅಜ್ಜಿ ನಮಗೆಲ್ಲ ಪ್ರೀತಿ ಉಣಿಸಿದ ಆವರಣ ಈಗ ಹೇಗಿದೆ ನೋಡಲು ಹೋಗುತ್ತಿದ್ದೇನೆ. ಅ೦ದು ಆ ಊರು ಎಷ್ಟೊ೦ದು ಆತ್ಮೀಯವಾಗಿತ್ತು; ಆ ದಿನಗಳು ಎಷ್ಟೊ೦ದು ಚೆನ್ನಾಗಿದ್ದವು!…
ಕು೦ದಾಪುರ ತಾಲೂಕಿನ ಅ೦ದಿನ ಒ೦ದು ಕುಗ್ರಾಮ ನನ್ನಜ್ಜಿಯ ಮನೆರುವ ಊರು. ಸುತ್ತಲಿನ ಇಳಿಜಾರಾದ ಪ್ರದೇಶದಲ್ಲಿ ಸಮತಟ್ಟಾದ ಗದ್ದೆಗಳು. ಅವುಗಳ ತಪ್ಪಲಲ್ಲಿ ನನ್ನಜ್ಜಿಯ ಮನೆ. ‘ಅಜ್ಜಿ ಮನೆ’ ಎನ್ನುವಾಗಲೇ ನನ್ನೊಳಗೆ ಅವಿತಿರುವ ಆರ್ದ್ರತೆಯ೦ತಹ ಹೇಳಿಕೊಳ್ಳಲಾರದ ಭಾವ ನನ್ನನ್ನು ಆವರಿಸಿಕೊಳ್ಳುತ್ತದೆ. ಮನಸ್ಸು ತು೦ಬಿಬರುವ ಸವಿ ಸವಿ ನೆನಪುಗಳು. ಬಾಲ್ಯದ ರಜಾಕಾಲದಲ್ಲಿ ಅಲ್ಲಿ ಕಳೆಯುತ್ತಿದ್ದ ದಿನಗಳು ನನ್ನನ್ನು ಏಕಾ೦ಗಿಯಾಗಿದ್ದಾಗಲೆಲ್ಲ ಕಾಡುತ್ತವೆ; ನನ್ನ ಸಹಜ ಭಾವುಕ ಗುಣವನ್ನು ಉದ್ದೀಪಿಸಿ ಕಣ್ಣ೦ಚಿನಲ್ಲಿ ನೀರು ಜಿನುಗುವ೦ತೆ ಮಾಡುತ್ತವೆ. ಮತ್ತಷ್ಟು ಓದು »

4
ಜೂನ್

ಬಾನಿನಂಗಳದಲ್ಲೊಂದು ಸೌಂದರ್ಯ ಸ್ಪರ್ಧೆ

ನವನೀತ್ ಪೈ

ನಿಸರ್ಗ ದೇವತೆಯ ಎಲ್ಲಾ ಋತುಗಳಿಗೂ ತನ್ನದೇ ಆದ ಸೌಂದರ್ಯವಿದೆ. ಕೆಲವರಿಗೆ  ಮುಂಜಾವಿನ ಮಂಜು ಸುಂದರ, ಕೆಲವರಿಗೆ ಮಳೆಗಾಲದ ಧಾರಾಕಾರ ಮಳೆ ಸುಂದರ, ಕೆಲವರಿಗೆ ಮುಸ್ಸೊಜೆಯ ಸೂರ್ಯಾಸ್ತ ಸುಂದರವಾದರೆ ಕೆಲವರಿಗೆ ಪೂರ್ಣಿಮೆಯ ರಾತ್ರಿ ಸೊಬಗು.
ಅಂದು ನಿದ್ದೆ ಬಾರದ ಕಾರಣ ಯಾವುದೋ ಒಂದು ಕಾದಂಬರಿಯ ಪುಟ ತಿರಿಗಿಸುತ್ತಾ ಕುಳಿತಿದ್ದೆ. ನಡುವೆ ತುಸು ವಿರಾಮ ಬೇಕೆನಿಸಿ ಅಂಗಳಕ್ಕೆ ಕಾಲಿಟ್ಟಾಗಷ್ಟೇ ತಿಳಿಯಿತು ಅಂದು ಹುಣ್ಣಿಮೆಯೆಂದು. ಬಾನಿನಂಗಳದಲ್ಲಿ ಚಂದಿರ ತನ್ನ ಸಮಸ್ತ ಕಾಂತಿಯಿಂದ ಕಂಗೊಳಿಸುತ್ತಾ ಚಿನ್ನದ ಬಟ್ಟಲಿನಂತೆ ಕಾಣಿಸುತ್ತಿದ್ದ. ನೆರೆಯ ಹೊಲಗಳಲ್ಲಿ ಹಾಲು ಚೆಲ್ಲಿದಂತೆ ಬೆಳದಿಂಗಳು ಹಬ್ಬಿತ್ತು. ತಂಗಾಳಿ ಗಿಡ ಮರಗಳನ್ನು ಅಪ್ಪಿ ಮಾಡುವ ನಿನಾದ ಇಂಪಾಗಿತ್ತು. ಚಂದಿರನನ್ನು ನೋಡುತ್ತಾ ಕುಳಿತುಕೊಳ್ಳಬೇಕೆನಿಸಿತು. ಚಂದಿರನೇತಕೆ ಓಡುವನಮ್ಮ ಮೋಡಕೆ ಬೆದರಿಹನೆ ಹಾಡು ಬಾಲ್ಯವನ್ನು ನೆನಪಿಸಿತು. ಚಂದಿರನಿಗೆ ಆಕರ್ಷಿತವಾಗಿ ಹಾರುತ್ತಿದ್ದ ಬೆಳ್ಳಕ್ಕಿ ಚಂದಿರನಲ್ಲೇ ಮನೆ ಮಾಡಿತು. ಈ ನಯನ ಮನೋಹರ ದೃಶ್ಯಕ್ಕೆ ಕಣ್ಣುಗಳೇ ಕ್ಯಾಮರಗಳಾದವು.
ಗಗನದಲ್ಲಿ ಚಂದಿರ ಮತ್ತು ತಾರೆಗಳ ನಡುವೆ ಸೌಂದರ್ಯ ಸ್ಪರ್ಧೆ ಏರ್ಪಟ್ಟಿತು. ಆಗಸವೇ ವೇದಿಕೆಯಾಯಿತು, ಮೋಡಗಳೇ ಪರದೆಗಳಾದವು, ಪರ್ವತ ಶ್ರೇಣಿಗಳೇ ನಿರ್ಣಾಯಕರಾದವು, ಸಮುದ್ರ ಸಾಗರಗಳೇ ಪ್ರೇಕ್ಷಕರಾದವು. ಮೋಡದ ಪರದೆ ಸರಿದಾಗ ಸ್ಪರ್ಧೆ ಆರಂಭವಾಯಿತು. ಚಂದಿರನ ಸೊಬಗನ್ನು ನೋಡಿ ಸಾಗರಗಳು ಚಂದಿರನನ್ನು ಅಪ್ಪಲು ಉಕ್ಕಿದವು.  ಚಂದಿರ ಮಾರ್ಜಾಲದಂತೆ ಪೂರ್ವದಿಂದ ಪಶ್ಚಿಮಕ್ಕೆ ಅಡಿಯಿರಿಸುತ್ತಿದ್ದ. ನಿರ್ಣಾಯಕರು ಚಂದಿರನ ಮಾರ್ಜಾಲ ನಡಿಗೆಯಿಂದ ಆಕರ್ಷಿತರಾಗಿ ಪ್ರಾಥಮಿಕ ಸುತ್ತುಗಳಲ್ಲಿ ಚಂದಿರನಿಗೆ ಹೆಚ್ಚಿನ ಅಂಕಗಳನ್ನು ನೀಡಿದರು. ಅಹಂಕಾರದಿಂದ ಬೀಗಿದ ಚಂದ್ರ ತಾರೆಗಳನ್ನು ಹೀಯಾಳಿಸಿದ. ಬಾನಿಗೆಲ್ಲಾ ತಾನೇ ರಾಜ ಎಂದು ಮೆರೆದ.
ಸಂಘೇ ಶಕ್ತಿ ಕಲೌ ಯುಗೇ ಎಂದು ಅರಿತು ತಾರೆಗಳೆಲ್ಲಾ ಒಂದಾದರು. ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಮನಗೊಂಡರು. ಸೋಲೇ ಗೆಲುವಿನ ಸೋಪಾನ ಎಂಬುದನ್ನು ಅರಿತು ಕಷ್ಟಪಟ್ಟು ಮುಂದಿನ ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಚಂದಿರನು ಎಲ್ಲರನ್ನು ಹೀಯಾಳಿಸಿದ್ದರಿಂದ ಏಕಾಂಗಿಯಾದ. ಕೃಷ್ಣ ಪಕ್ಷ ಆರಂಭವಾಯಿತು. ದಿನೇ ದಿನೇ ಚಂದಿರ ಕುಗ್ಗುತ್ತಾ ಹೋದ ಮಾತ್ರವಲ್ಲದೆ ಸ್ಪರ್ಧೆಗಳಲ್ಲಿ ಆಸಕ್ತಿ ಕಳೆದುಕೊಂಡು ತಡವಾಗಿ ಆಗಮಿಸುತ್ತಿದ್ದ. ತಾರೆಗಳು ಏಕತಾನತೆಯಿಂದ ಒಂದೇ ರೀತಿಯಾಗಿ ಮಿಂಚುತ್ತಿದ್ದವು. ಚಂದಿರನ ಬೆಳದಿಂಗಳು ಕ್ಷೀಣಿಸುತ್ತಿರುವಾಗ ತಾರೆಗಳ ಬೆಳಕೆ ಬಾನನ್ನು ತುಂಬಿತು. ಚಂದಿರನಿಲ್ಲದ ಬಾನನ್ನು ಊಹಿಸಬಹುದಾದರೂ ತಾರೆಗಳಿಲ್ಲದ ಬಾನನ್ನು ಊಹಿಸಲೂ ಸಾಧ್ಯವಿಲ್ಲ. ಅಂತು ಸ್ಪರ್ಧೆಯ ನಿರ್ಣಾಯಕ ಘಟ್ಟ ಬಂದೇ ಬಿಟ್ಟಿತು. ಆ ದಿನ ಸೋಲು ತನಗೆ ಕಟ್ಟಿಟ್ಟ ಬುತ್ತಿ ಎಂದು ತಿಳಿದ ಚಂದಿರ ಸ್ಪರ್ಧೆಗೆ ಆಗಮಿಸಲೇ ಇಲ್ಲ. ಅಂದು ಅಮಾವಾಸ್ಯೆ ಆಗಿತ್ತು ತಾರೆಗಳ ಬೆಳಕೇ ಬಾನನ್ನು ತುಂಬಿತ್ತು. ಸೌಂದರ್ಯ ಸ್ಪರ್ಧೆಯನ್ನು ತಾರೆಗಳೇ ಗೆದ್ದರು. ಚಂದಿರನನ್ನು ತಮ್ಮೊಂದಿಗೆ ಸೇರಿಸಿಕೊಂಡರು. ಚಂದಿರನು ಶುಕ್ಲ ಪಕ್ಷದಲ್ಲಿ ಹಿಗ್ಗುತ್ತಾ ಸಾಗಿದ. ಮತ್ತಷ್ಟು ಓದು »

3
ಜೂನ್

ಆಯುರ್ವೇದವನ್ನು ಕಂಡರೆ ಪಾಶ್ಚಾತ್ಯರಿಗೆ ಭೀತಿ!

– ವಿಷ್ಣು ಪ್ರಿಯ
ಇಂಗಿಷ್ ವೈದ್ಯ ಪದ್ಧತಿಯು ಯಾವುದೇ ರೋಗವನ್ನು ಸಂಪೂರ್ಣ ಗುಣ ಮಾಡುವುದಿಲ್ಲ. ರೋಗದ ಲಕ್ಷಣಗಳನ್ನು ತಟಸ್ಥಗೊಳಿಸುವ ಮೂಲಕ ಆ ರೋಗವನ್ನು ಅಜ್ಞಾತವಾಗಿಡುತ್ತದೆ ಅಷ್ಟೆ. ಗುಳಿಗೆಗಳು ರೋಗಲಕ್ಷಣಗಳನ್ನು ತಟಸ್ಥವಾಗಿಸುವ ಕಾರಣ ರೋಗ ಗುಣವಾಗಿದೆ ಎಂಬ ಭ್ರಾಂತಿಗೊಳಗಾಗುತ್ತೇವೆ.  ಆದರೆ ಆಯುರ್ವೇದ ವೈದ್ಯ ಪದ್ಧತಿ ಹಾಗಲ್ಲ, ರೋಗಮೂಲ ಏನು ಎಂಬುದನ್ನು ಅರಿತುಕೊಂಡು ಅದಕ್ಕೆ ಚಿಕಿತ್ಸೆ ಮಾಡುತ್ತದೆ. 
`ಅದ್ಯಾವುದೋ ಬೇರಂತೆ, ನಾರಂತೆ, ಸೊಪ್ಪು, ಎಲೆ, ಬಳ್ಳಿಯಿಂದಾನೂ ಔಷಧಿ ಕೊಡ್ತಾರಂತೆ, ಹಣ್ಣೂ ಮದ್ದಂತೆ, ಕಾಯಿಯೂ, ಕಾಯಿಯೊಳಗಿನ ಬೀಜವೂ ರೋಗ ನಿವಾರಕವಂತೆ. ಹಲವು ಮೂಲಿಕೆಗಳನ್ನು ಸೇರಿಸಿ ಔಷಧಿ ಮಾಡೋದಂತೆ. ಇದನ್ನೆಲ್ಲ ನಂಬ್ತೀರಾ? ಇದು ಮೂಢನಂಬಿಕೆ. ಇಂಥದ್ದನ್ನೆಲ್ಲ ತಿಂದು ಆರೋಗ್ಯ ಹಾಳು ಮಾಡ್ಕೋಬೇಡಿ’ ಎಂದು ಭಾರತೀಯ ವೈದ್ಯ ಪದ್ಧತಿಯ ಬಗ್ಗೆ ಮೂಗು ಮುರಿದದ್ದು ಪಾಶ್ಚಾತ್ಯರು. `ನಿಮ್ಮ ವೈದ್ಯ ಪದ್ಧತಿ ಆಧಾರವಿಲ್ಲದ್ದು, ಅದನ್ನೆಲ್ಲ ಒಪ್ಪುವುದಕ್ಕೆ ಸಾಧ್ಯವಿಲ್ಲ’ ಎಂದು ಕೆಲವು ಸಮಯದ ಹಿಂದೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅಸಮಾಧಾನ ವ್ಯಕ್ತಪಡಿಸಿದ್ದರು. ತಮ್ಮ ದೇಶದಲ್ಲಿ ಈ ವೈದ್ಯ ಪದ್ಧತಿಗೆ ಪ್ರೋತ್ಸಾಹ ನೀಡದಿರುವಂತೆ ಹೇಳಿದ್ದರು. ಬ್ರಿಟನ್ ಕೂಡಾ ಆಯುರ್ವೇದ ವೈದ್ಯ ಪದ್ಧತಿಯ ಮೇಲೆ ನಿಷೇಧ ಹೇರಿತು. ಇದೀಗ ಆಯುರ್ವೇದ ವೈದ್ಯ ಪದ್ಧತಿಯ ಮೇಲೆ ಮತ್ತೊಂದು ನಿಷೇಧ! ಅದು ಐರೋಪ್ಯ ಒಕ್ಕೂಟದಿಂದ. ಮೇ 1ರಿಂದ ಈ ಔಷಧ ಪದ್ಧತಿಯನ್ನು, ಗಿಡಮೂಲಿಕೆಗಳ ಮಾರಾಟವನ್ನು ಐರೋಪ್ಯ ರಾಷ್ಟ್ರಗಳಲ್ಲಿ ನಿಷೇಧಿಸಲಾಗಿದೆ.
ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಆಯುರ್ವೇದ ವೈದ್ಯ ಪದ್ಧತಿಯ ಮೇಲೆ ನಿಷೇಧ ಹೇರಲಾಗಿದೆ ಎಂದರೆ ಅದರ ಅರ್ಥವೇನು? ಆಯುರ್ವೇದ ವೈದ್ಯ ಪದ್ಧತಿಯಲ್ಲಿ ದೋಷಗಳಿವೆ ಎಂಬುದಂತೂ ಅಲ್ಲ. ಈ ಪದ್ಧತಿಗೆ ಆಧಾರವಿಲ್ಲವೆಂಬುದೂ ಅಲ್ಲ. ಮೂಢನಂಬಿಕೆ ಎಂಬುದಂತೂ ಅಲ್ಲವೇ ಅಲ್ಲ. ಇದರ ಹಿಂದಿರುವ ವಾಸ್ತವ ಕಾರಣ- ಭೀತಿ! ಆಯುರ್ವೇದ ವೈದ್ಯ ಪದ್ಧತಿಯ ಸಾಮಥ್ರ್ಯದ ಮುಂದೆ ತಮ್ಮ ವೈದ್ಯ ಪದ್ಧತಿಗೆ ಎಲ್ಲಿ ನೆಲೆಯಿಲ್ಲದಂತಾಗುತ್ತದೆಯೋ ಎಂಬ ಆತಂಕ. ಜನರೆಲ್ಲ ಆಯುರ್ವೇದದ ಮೊರೆ ಹೊಕ್ಕರೆ ತಮ್ಮಲ್ಲಿನ ವೈದ್ಯ ಪದ್ಧತಿಯ ಮಾರುಕಟ್ಟೆ ಕುಸಿದು ಬೀಳುತ್ತದೆ ಎಂಬ ಭಯ!
2
ಜೂನ್

ಇದು ಹಿಂದಿ ಹೇರಿಕೆ ಬೂತದ ಕೈಚಳಕ

– ಅರುಣ್ ಜಾವಗಲ್
ಸರಕಾರ ತನ್ನ ಕಾರ್ಯಗಳು ಜನರಿಗೆ ತಲುಪಿಸೊಕ್ಕೆ ಪತ್ರಿಕೆಗಳನ್ನ ಅವಲಂಬಿಸಿದೆ. ಕೆಲವು ಪ್ರಮುಕ ಕಾರ್ಯಗಳನ್ನ/ ಸೌಲಬ್ಯಗಳನ್ನ ಪತ್ರಿಕೆಗಳಲ್ಲಿ ಜಾಹಿರಾತು ನೀಡಿತ್ತೆ. ಪತ್ರಿಕೆಗಳಲ್ಲಿ ಜಾಹಿರಾತನ್ನ ನೋಡೊ ಜನ, ಆ ಕಾರ್ಯ/ಸೌಲಬ್ಯದ ಲಾಬ ಪಡೆದುಕೊಳ್ಳಬೇಕು ಅನ್ನೊದು ಉದ್ದೇಶ(?).

ಆದರೆ ಸರಕಾರ ಈ ಜಾಹಿರಾತು ನೀಡೋ ವಿಶಯದಲ್ಲೂ ತಾರತಮ್ಯ ಮಾಡಿ ತನ್ನ ಕಾರ್ಯ/ ಸೌಲಬ್ಯ ಗಳು ಕನ್ನಡಿಗರಿಗೆ ಸಿಗಬಾರ್ದು ಅನ್ನೊ ತರ ನಡೆದುಕೊಳ್ತಿರೋದು ಮಾತ್ರ ನಿಗೂಡ! ಇದೋ ಹೀಗೆ ಅಂತೀರ- ಕನ್ನಡ ಪತ್ರಿಕೆಗಳಲ್ಲಿ ಕನ್ನಡವಲ್ಲದ, ಕನ್ನಡಿಗರಿಗೆ ಅರಿವಿಲ್ಲದ ಹಿಂದಿ ಬಾಶೆಯಲ್ಲಿ ಜಾಹಿರಾತು ನೀಡೋದು. 

ಈ ಕೆಲ್ಸವನ್ನ ಸರಕಾರ ಬಹಳ ವ್ಯವಸ್ತಿತವಾಗಿ ಮಾಡ್ತಿದೆ. ಇದರ ಕೆಲವು ಕೆಲವು ಸ್ಯಾಂಪಲ್ ಗಳು-

೧. ಕೆಲವು ವರ್ಶಗಳ ಹಿಂದೆ ನೈರುತ್ಯ ರೈಲ್ವೆ ,ಡಿ ದರ್ಜೆ ನೌಕರರಿಗೆ(೭ ಅತವಾ ೮ ನೇ ತರಗತಿ ಪಾಸಾದವರಿಗೆ) ಅರ್ಜೆಗೆ ಅಹ್ವಾನಿಸಿ, ಕನ್ನಡವಲ್ಲದ ಬಾಶೆಯಲ್ಲಿ ಯಾವುದೋ ಒಂದೆರಡು ಚಿಕ್ಕ ಪತ್ರಿಕೆಗಳಲ್ಲಿ ಜಾಹಿರಾತು ನೀಡಿತ್ತಂತೆ. ಆ ಜಾಹಿರಾತು ಓದೋಕ್ಕೆ ಆಗದ ಕನ್ನಡದವರು ಅರ್ಜಿ ಹಾಕಿದ್ದೆ ಕಡಿಮೆ ಜನ. ಎಂತಾ ದುರಂತ.
ಮತ್ತಷ್ಟು ಓದು »

31
ಮೇ

ಚಿತ್ರದುರ್ಗ: ಒಂದು ಅಪರೂಪ ಐತಿಹಾಸಿಕ ತಾಣ.

–    ಆರ್.ರಾಘವೇಂದ್ರ, ಚಳ್ಳಕೆರೆ

ಇತಿಹಾಸ ಪ್ರಸಿದ್ಧ ಚಿತ್ರದುರ್ಗ ಜಿಲ್ಲೆಯು ಚಳ್ಳಕೆರೆ, ಚಿತ್ರದುರ್ಗ, ಹಿರಿಯೂರು, ಹೊಳಲ್ಕೆರೆ, ಹೊಸದುರ್ಗ ಮತ್ತು ಹೊಳಲ್ಕೆರೆ ಎಂಬ ಆರು ತಾಲ್ಲೂಕು ಕೇಂದ್ರಗಳನ್ನೊಳಗೊಂಡಂತೆ ೧೮೫ ಗ್ರಾಮ ಪಂಚಾಯಿತಿ ಕೇಂದ್ರಗಳಿಂದ ಕೂಡಿರುತ್ತದೆ. ಚಿತ್ರದುರ್ಗ ಜಿಲ್ಲೆಯು ೮೩೮೮ ಚ.ಕಿ.ಮೀ. ವಿಸ್ತೀರ್ಣ ಹೊಂದಿದ್ದು, ಒಟ್ಟು ೧೫,೧೦,೨೨೭ ಜನಸಂಖ್ಯೆ ಇರುತ್ತದೆ.

ಜಿಲ್ಲೆಯ ಆರು ತಾಲ್ಲೂಕುಗಳ ಪೈಕಿ, ಚಿತ್ರದುರ್ಗ ತಾಲ್ಲೂಕು ಸಾಪೇಕ್ಷಿತವಾಗಿ ಅಭಿವೃದ್ಧಿ ಹೊಂದಿದ ತಾಲ್ಲೂಕಿನ ಗುಂಪಿನಲ್ಲಿದ್ದರೆ, ಚಳ್ಳಕೆರೆ, ಹೊಳಲ್ಕೆರೆ, ಹಿರಿಯೂರು, ಹೊಸದುರ್ಗ ಅತಿ ಹಿಂದುಳಿದ ತಾಲ್ಲೂಕುಗಳ ಗುಂಪಿನಲ್ಲಿವೆ ಹಾಗೂ ಮೊಳಕಾಲ್ಮೂರು ತಾಲ್ಲೂಕು ಅತ್ಯಂತ ಹಿಂದುಳಿದ ತಾಲ್ಲೂಕಿನ ಗುಂಪಿನಲ್ಲಿದೆ. ಆದರೆ ರಾಜ್ಯದ ಹಿಂದುಳಿದ ಪ್ರದೇಶವಾಗಿದ್ದರೂ, ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದೆ. ಅದು ಹೇಗೆಂದರೆ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಕ್ಷರತೆ ಪ್ರಮಾಣ, ಮಕ್ಕಳು-ಉಪಾಧ್ಯಾಯರ ಅನುಪಾತ, ೬-೧೪ ವಯೋಮಾನದಲ್ಲಿ ಶಾಲೆ ಸೇರದ ಮಕ್ಕಳ ಪ್ರಮಾಣ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಇವುಗಳ ಮೇಲೆ ನಾವು ಜಿಲ್ಲೆಯ ಶೈಕ್ಷಣಿಕ ಪ್ರಗತಿಯನ್ನು ಕಾಣಬಹುದು. ಆದರೆ ಶಿಕ್ಷಣ ಕ್ಷೇತ್ರದಲ್ಲಿ ಹಿಂದುಳಿದ ಪ್ರದೇಶವೆಂದು ಮೊಳಕಾಲ್ಮೂರು ತಾಲ್ಲೂಕು ಒಂದೇ. ಚಿತ್ರದುರ್ಗವು ತಾಮ್ರದ ಖನಿಜ ಸಂಪತ್ರವನ್ನು ಇಂಗಳದಾಳ್‌ನಲ್ಲಿ ಒಳಗೊಂಡಿದೆ.

ಸಾಹಿತ್ಯ ಕ್ಷೇತ್ರದ ಮೇರುವ್ಯಕ್ತಿಯಾದ ರಸಕವಿ ‘ಕುವೆಂಪು’ರವರನ್ನೇ ಶಿಷ್ಯರಾಗಿ ಪಡೆದಂತಹ ಕೀರ್ತಿ ಟಿ.ಎಸ್.ವೆಂಕಣ್ಣಯ್ಯರವರದು. ತಳಕಿನ ಕುಟುಂಬದ ತ.ಸು.ಶಾಮರಾಯರು, ತ.ರಾ.ಸು., ಅಂಬುಜಾ ತ.ರಾ.ಸು., ರವರು ಸೇರಿದಂತೆ, ಬೆಳಗೆರೆ ಮನತೆನದ ಬೆಳಗೆರೆ ಚಂದ್ರಶೇಖರಶಾಸ್ತ್ರಿ, ಬೆಳಗೆರೆ ಕೃಷ್ಣಶಾಸ್ತ್ರಿ, ಬೆಳಗೆರೆ ಜಾನಕಮ್ಮ ಮುಂತಾದ ಸಾಹಿತ್ಯ ಗಣಿಗಳು ಚಿತ್ರದುರ್ಗದ ಸಾಹಿತ್ಯವನ್ನು ಅಮರವಾಗಿಸಿದ್ದಾರೆ. ತ.ರಾ.ಸು. ರವರ ದುರ್ಗಾಸ್ತಮಾನ, ನಾಗರಹಾವು ಹಾಗೂ ಇತರೆ ಕೃತಿಗಳು ವಿಶ್ವಕ್ಕೆ ಚಿತ್ರದುರ್ಗದ ಪರಿಚಯವನ್ನು ಬಹುಸುಂದರವಾಗಿ ಮಾಡಿಕೊಟ್ಟಿದೆ. ‘ಬಿ.ಎಲ್.ವೇಣು’ ರವರ ‘ಕಲ್ಲರಳಿ ಹೂವಾಗಿ’ ಚಲನಚಿತ್ರವು ರಾಷ್ಟ್ರಮಟ್ಟದಲ್ಲಿ ಪ್ರಶಂಸೆ ಪಡೆದಿದ್ದು, ಖ್ಯಾತ ಸಂಶೋಧಕರಾದ ಹುಲ್ಲೂರು ಶ್ರೀನಿವಾಸ ಜೋಯಿಸರು, ಪ್ರೋ. ಲಕ್ಷ್ಮಣ ತೆಲಗಾವಿ, ಪ್ರೋ. ಬಿ.ರಾಜಶೇಖರಪ್ಪ, ಜಾನಪದ ತಜ್ಞರಾದ ಡಾ.ಮೀರಾಸಾಬಿಹಳ್ಳಿ ಶಿವಣ್ಣ, ಮಲ್ಲಿಕಾರ್ಜುನ ಕಲಮರಹಳ್ಳಿ, ನೇಮಿಚಂದ್ರ, ಮುಂತಾದವರು ಸೇರಿದಂತೆ ಅನೇಕ ಸಾಹಿತ್ಯ ಕಣ್ಮಣಿಗಳನ್ನೊಳಗೊಂಡಿದ್ದು, ದುರ್ಗವು ಸಾಹಿತ್ಯದ ಗಣಿಯಾಗಿದೆ. ಮತ್ತಷ್ಟು ಓದು »

31
ಮೇ

ಕನ್ನಡ ಟಿವಿ ವಾಹಿನಿಗಳು ಹಾಗೂ ಮೂಢನಂಬಿಕೆಗಳ ಪ್ರಸಾರ

ಆನಂದ ಪ್ರಸಾದ್

ಕನ್ನಡದ ಎಲ್ಲ ಟಿವಿ ವಾಹಿನಿಗಳೂ ಜ್ಯೋತಿಷ್ಯವೆಂಬ ಅವೈಜ್ಞಾನಿಕ ಹಾಗೂ ಮೂಢನಂಬಿಕೆಗಳನ್ನು ಬಲಪಡಿಸುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದ್ದು ಇದು ಮಾಧ್ಯಮಗಳಿಗೆ ಇರಬೇಕಾದ ಜವಾಬ್ದಾರಿಗೆ ವಿರುದ್ಧವಾದುದು.  ವಿಜ್ಞಾನದ ಆವಿಷ್ಕಾರವಾದ ಟಿವಿಯನ್ನು ತಮ್ಮವ್ಯಾಪಾರ   ಹೆಚ್ಚಿಸಿಕೊಳ್ಳಲು ಜ್ಯೋತಿಷಿಗಳಿಗೆ ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಿರುವ ಟಿವಿ ವಾಹಿನಿಗಳು ಯಾವುದೇ ನಾಚಿಕೆ ಇಲ್ಲದೆ ಈ ಕೆಲಸದಲ್ಲಿ ತೊಡಗಿವೆ.  ವಿಜ್ಞಾನಿಗಳು ಶ್ರಮ ವಹಿಸಿ ಸಂಶೋಧಿಸಿದ ಟಿವಿ ಮಾಧ್ಯಮ ಇಂದು ಅವೈಜ್ಞಾನಿಕ ವಿಚಾರಗಳು ಹಾಗೂ ಮೂಢನಂಬಿಕೆಗಳನ್ನು ಬಲಪಡಿಸಲು ದುರುಪಯೋಗವಾಗುತ್ತಿದೆ.  ಇದನ್ನು ಪ್ರಜ್ಞಾವಂತರು ವಿರೋಧಿಸಬೇಕಾಗಿದೆ.  ಮಾಧ್ಯಮಗಳಿಗೆ ಜನರನ್ನು ವಿಚಾರವಂತರನ್ನಾಗಿ ಮಾಡುವ ಮಹತ್ತರ ಜವಾಬ್ದಾರಿ ಇದೆ.  ಇದನ್ನು ಕಡೆಗಣಿಸಿ ೨೧ ಶತಮಾನದಲ್ಲೂ ಜ್ಯೋತಿಷ್ಯ, ವಾಸ್ತು ಎಂಬ ವೈಜ್ಞಾನಿಕ ಆಧಾರಗಳಿಲ್ಲದ ಪುರೋಹಿತಶಾಹಿ ವಿಚಾರಗಳನ್ನು ಜನರ ಮೇಲೆ ಹೇರಲು ಯತ್ನಿಸುತ್ತಿರುವ ಟಿವಿ ವಾಹಿನಿಗಳ ಧೋರಣೆಯನ್ನು ವಿಚಾರವಂತರು, ಸಾಹಿತಿಗಳು, ವಿಜ್ಞಾನಿಗಳು, ತಂತ್ರಜ್ಞರು, ಪ್ರಜ್ಞಾವಂತರು  ವಿರೋಧಿಸಬೇಕಾಗಿದೆ.

ಇಂದು ದೇಶಾದ್ಯಂತ ಭ್ರಷ್ಟಾಚಾರದ ವಿರುದ್ಧ ಹೋರಾಟ ರೂಪುಗೊಳ್ಳುತ್ತಿರುವ ಹೊತ್ತಿನಲ್ಲಿ ಮೂಢನಂಬಿಕೆಗಳನ್ನು ಬಲಪಡಿಸುವ ಪುರೋಹಿತಶಾಹಿ ಕುತಂತ್ರದ ವಿರುದ್ಧವೂ ಹೋರಾಟ ನಡೆಯಬೇಕಾದ ಅಗತ್ಯ ಇದೆ.  ಕಷ್ಟಪಟ್ಟು ದುಡಿದು ತಿನ್ನುವುದರ ಬದಲು ಕೆಲವು ಪುರೋಹಿತಶಾಹಿಗಳು ಜ್ಯೋತಿಷ್ಯ, ವಾಸ್ತುವಿನ ಹೆಸರಿನಲ್ಲಿ ಜನರ ನಂಬಿಕೆಗಳನ್ನು, ಜನರ ಭಯವನ್ನು ತಮ್ಮ ಜೇಬು ತುಂಬಿಸಿಕೊಳ್ಳಲು ಸುಲಭೋಪಾಯವಾಗಿ ಬಳಸಿಕೊಳ್ಳುತ್ತಿರುವುದೂ ಒಂದು ರೀತಿಯ ಭ್ರಷ್ಟಾಚಾರವಲ್ಲವೇ?  ಇಂಥ ಭ್ರಷ್ಟಾಚಾರಕ್ಕೆ ಟಿವಿ ವಾಹಿನಿಗಳು ಕೈಗೂಡಿಸುತ್ತಿರುವುದು ಎಷ್ಟರ ಮಟ್ಟಿಗೆ ಸಮಂಜಸವೆಂದು ಟಿವಿ ವಾಹಿನಿಗಳನ್ನು ನಡೆಸುವವರು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ಅಗತ್ಯ ಇದೆ.  ಜ್ಯೋತಿಷ್ಯ, ವಾಸ್ತು ಇಲ್ಲದೆ ಪಾಶ್ಚಾತ್ಯ ರಾಷ್ಟ್ರಗಳು ಅಭಿವೃದ್ಧಿ ಸಾಧಿಸಿವೆ.   ಹೀಗಿರುವಾಗ ನಮ್ಮ ಟಿವಿ ವಾಹಿನಿಗಳು ಜ್ಯೋತಿಷ್ಯ, ವಾಸ್ತುಗಳನ್ನು ತಲೆಯ ಮೇಲೆ ಹೊತ್ತುಕೊಂಡು ಮೆರೆಸುತ್ತ್ತಿರುವುದು ಯಾವ ಪುರುಷಾರ್ಥ ಸಾಧನೆಗಾಗಿ ಎಂದು ನಾವು ಕೇಳಬೇಕಾಗಿದೆ.  ಮತ್ತಷ್ಟು ಓದು »

28
ಮೇ

ದೆವ್ವಗಳ ಹಾಡುಗಳು…!!

– ಉಮೇಶ್ ದೇಸಾಯಿ

  ಶೀರ್ಷಿಕೆ ಓದಿ ಆಶ್ಚರ್ಯಗೊಳ್ಳಬಹುದು ಆದರೆಇದು ವಾಸ್ತವ ಹೌದು ನಮ್ಮ ಸಿನೇಮಾಗಳಲ್ಲಿ ಬಹಳ ದಿನಿಂದಲೂ ದೆವ್ವ ಹಾಡುತ್ತಿವೆ..ಹಾಗೂ ಆ ಹಾಡು ಹಿಟ್ ಸಹ ಆಗಿವೆ. ಇಲ್ಲಿ ಸಿನೇಮಾಜನ ಅವುಗಳಿಗೆ ದೆವ್ವ ಅನ್ನುವ ಬದಲು ಅತೃಪ್ತ ಆತ್ಮ ಅಂತ ಕರೆದರು. ಈ ಹಾಡುಗಳ ವಿಶೇಷತೆ ಅನೇಕ ಇವೆ..

ಕೃತಕವಾಗಿ ಹಾಕಿದ ಸೆಟ್ಟು.., ಬಿಳಿಸೀರೆ ಧರಿಸಿದ ನಾಯಕಿ ,ಆ ನೀರವತೆಯಲ್ಲೂ ಸುಶ್ರಾವ್ಯವಾಗಿ ಕೇಳಿಬರುವ ಹಿನ್ನೆಲೆ ಸಂಗೀತ, ಭಯ ಬೆವರು ಹೀಗೆ ಹತ್ತು ಹಲವು ಭಾವ ಮುಖದಲ್ಲಿ ತೋರುವ ನಾಯಕ. ಹೀಗೆ ಈ ಹಾಡುಗಳಿಗೆ ಒಂದು ಫಾರ್ಮುಲಾ ಇತ್ತು. ಹಾಗೂ ಆ ಫಾರ್ಮುಲಾ ಯಶಸ್ವಿಯೂ ಆಗಿತ್ತು. ನಮ್ಮ ಭಾರತೀಯ ಯಾವ ಭಾಷೆಯ ಚಿತ್ರವನ್ನೇ ತಗೊಂಡರೂ ಅಲ್ಲಿ ಈ ಬಗೆಯ ಹಾಡು ಇದ್ದೇ ಇರುತ್ತವೆ.

ರಾತ್ರಿವೇಳೆ ಯಾಕಾಗಿ ಈ ಹಾಡು ಅವುಗಳ ಉದ್ದೇಶ ಏನು ? ಮುಖ್ಯವಾಗಿ ನಾಯಕನಿಗೆ ದಿಗಿಲು ಹುಟ್ಟಿಸುವುದು

ನಾಯಕ ಟಾರ್ಚು ಹಿಡಿದುಕೊಂಡು ಹಾಡಿನ ಜಾಡು ಬೆಂಬತ್ತಿ ಬಿಳಿಸೀರೆ ಧರಿಸಿದ ಮೋಹಿನಿಯನ್ನು ಬೆನ್ನತ್ತುತ್ತಾನೆ. ರಹಸ್ಯ ಭೇದಿಸದೆ ದಿಗಿಲುಗೊಳ್ಳುತ್ತಾನೆ. ಚಿತ್ರ ವೀಕ್ಷಿಸುತ್ತಿದ್ದ ಪ್ರೇಕ್ಷಕನೂ ನಾಯಕನ ಜೊತೆಗೂಡುತ್ತಾನೆ. ಈ ಅತೃಪ್ತ ಆತ್ಮ ಅವುಗಳ ಮೇಲೆ ಚಿತ್ರಿತವಾದ ಹಾಡು ಹಿಟ್ ಅಂತ ಮೊದಲೇ ಹೇಳಿರುವೆ. ಇನ್ನೊಂದು ವಿಶೇಷ ಅಂದರೆ ಹೆಚ್ಚಿನವುಗಳು ಲತಾ ಹಾಡಿದ್ದು. ಸುಮಾರು ಅರವತ್ತು ವರ್ಷಗಳ ಹಿಂದೆ ತೆರೆಕಂಡ “ಮೆಹಲ್” ಚಿತ್ರದ “ಆಯೇಗಾ ಆಯೇಗಾ ಆನೇವಾಲಾ ಆಯೇಗಾ..”ಹಾಡು. ಲತಾಳ ದನಿ ತೀರ ಎಳಸು ಅನಿಸುತ್ತದೆ ಈ ಹಾಡಿನಲ್ಲಿ.

ಮಧುಬಾಲಾಳ ಮಾದಕ ಚೆಲುವು, ಅಶೋಕ್ ಕುಮಾರನ ದಿಗಿಲು ತುಂಬಿದ ಮುಖ ಒಟ್ಟಿನಲ್ಲಿ ಈ ಹಾಡು ಒಂಥರಾ ಟ್ರೆಂಡ್ ಸೆಟರ್. ಹಾಡಿನ ಸಾಲು ಸಹ ಎಷ್ಟು ಚಂದ…“ತರಸಿ ಹುಯಿ ಜವಾನಿ ಮಂಜಿಲ್ ಕೋ ಢುಂಡತಿಹೈ ಮಾಜಿ ಬಗೈರ್ ನೈಯ್ಯಾ ಸಾಹಿಲ್ ಕೊ ಢುಂಡತಿಹೈ..” ಅನೇಕ ಹಾಡಿವೆ. ಒಂದು ವಿಶೇಷದ್ದು. ಮುಬಾರಕ್ ಬೇಗಂ ಎನ್ನುವ ಗಾಯಕಿ ಹಾಡಿದ್ದು–“ಹಮಾರಿ ಯಾದ್ ಆಯೇಗಿ” ಚಿತ್ರದ್ದು. “ಕಭಿ ತನಹಾಯಿಮೆ ಯೂಂ ಹಮಾರಿ ಯಾದ್ ಆಯೇಗಿ…” ಮುಬಾರಕ್ ಬೇಗಂಳದ್ದು ಒಂಥರಾ ಶೀರು ದನಿ. ಈ ಹಾಡಿಗೆ ಅವಳು ಜೀವತುಂಬಿದ್ದಳು. ಇದು ಒಂಥರಾ ಸೇಡಿನ ಹಾಡೇ..ಸಾಲು ಗಮನಿಸಿ..“ಯೇ ಬಿಜಲಿ ರಾಖ ಕರಜಾಯೇಗಿ ತೇರೆ ಪ್ಯಾರ್ ಕಿ ದುನಿಯಾ ನ ತೂ ಜೀ ಸಕೇಗಾ ಔರ್ ನ ತುಜಕೊ ಮೌತ್ ಆಯೇಗಿ..”. ಹೇಮಂತ ಕುಮಾರ್ ಆರ್ಥರ್ ಕಾನನ್ ಡಾಯಲ್ ನ ಕಾದಂಬರಿ ಆಧರಿಸಿ ಒಂದು ಚಿತ್ರ ತೆಗೆದ–“ಬೀಸ್ ಸಾಲ್ ಬಾದ್”. ಈ ಚಿತ್ರದ ಥೀಮ್ ಸಾಂಗ್ “ಕಹಿ ದೀಪ್ ಜಲೆ ಕಹಿ ದಿಲ್ ಜರಾದೇಖಲೆ ಆ ಕರ್ ಪರವಾನೆ..”ಲತಾಳ ಅಧ್ಭುತ ಹಾಡು ಇದು.

ಅವಳ ದನಿಗೆ ಮಾರುಹೋಗಿ ಆ ದನಿ ಬಂದ ದಿಕ್ಕಿಗೆ ಹೋಗಿಬಿಡಬೇಕು ..ಅಂಥಾ ಸಮ್ಮೋಹಕ ಹಾಡು ಇದು. ಈ ಚಿತ್ರದ ಯಶಸ್ಸಿನ ನಂತರ ಹೇಮಂತ್ ದಾ ಮತ್ತೆರಡು ಚಿತ್ರ ತೆಗೆದ– “ಕೋಹರಾ” ಹಾಗೂ “ಬಿನ್ ಬಾದಲ್ ಬರಸಾತ್’. ಕೋಹರಾ ಚಿತ್ರದ ಲತಾಳ ದನಿಯ “ಜುಂ ಜುಂ ಢಲತಿ ರಾತ್ ..” ಹಾಡು ಕೇಳಿದರೆ ರೋಮಾಂಚನ ಆಗುವುದು ನಿಜ.

ಲತಾ ಮದನ್ ಮೋಹನ್ ಸಂಗೀತದಲ್ಲಿ ಹಾಡಿದ “ನೈನಾ ಬರಸೆ ರಿಮಝಿಮ್ ನೈನಾ ಬರಸೆ..” ಹಾಡು ಚಿತ್ರದ ಜೀವಾಳ. ಅಂತೆಯೇ “ತು ಜಹಾಂ ಜಹಾಂ ಚಲೇಗಾ ಮೇರಾ ಸಾಯಾ ಸಾಥ್ ಹೋಗಾ..” ಹಾಡು ಆ ಸಿನೇಮಾಗಳಿಗೆ ಒಂದು ಮೆರುಗು ಕೊಟ್ಟಿದ್ದವು. ಕೊಲೆ ಯಾರು ಮಾಡಿದ್ದು, ಕೊಲೆಗಾರ ಯಾರು ಎಂದು ನಾಯಕ ಮನೋಜ್ ಕುಮಾರ್ ತಲೆಕೆಡಿಸಿಕೊಳ್ಳುತ್ತಿರುವಾಗ ಶೂನ್ಯದಿಂದ ತೇಲಿ ಬರುವ ಹಾಡು “ಗುಮನಾಮ್ ಹೈ ಕೋಯಿ ಬದನಾಮ್ ಹೈ ಕೋಯಿ..” ಪ್ರೇಕ್ಷಕನಲ್ಲಿ ನಡುಕ ಹುಟ್ಟಿಸುತ್ತದೆ. ಲತಾಳ ಕಂಠಸಿರಿ ಕೇಳಿಯೇ ಅನುಭವಿಸಬೇಕು..!

ಕೇವಲ ನಾಯಕಿ ಮಾತ್ರ ಹೀಗೆ ಅತೃಪ್ತಳಲ್ಲ. ಪ್ರೇಯಸಿಯನ್ನು ಪಡೆಯದ ನೋವಿನಲ್ಲಿಯೇ ಸಾಯುವ ನಾಯಕ ಅವನ ತೃಷೆ ಹಾಡಾಗಿ ಮಾರ್ಪಟ್ಟು ನಾಯಕಿಯನ್ನು ಕರೆಯುತ್ತದೆ..” ಆ ಜಾ ತುಜ್ ಕೊ ಪುಕಾರೆ ಆ ಜಾ ಮೈ ತೋ ಮಿಟಾ ಹುಂ ತೇರಿ ಚಾಹ್ ಮೇ..”ರಫಿಯ ಈ ಹಾಡು ನೀಲಕಮಲ್ ಚಿತ್ರದ್ದು. ಹಾಗೆಯೇ ಕಿಶೋರ್ ಹಾಡಿದ “ಮೇರೆ ಮೆಹಬೂಬ್ ಕಯಾಮತ್ ಹೋಗಿ ಆಜ್ ರುಸವಾ ತೇರಿ ಗಲಿಯೊಂಮೆ ಮೊಹಬ್ಬತ್ ಹೋಗಿ….”. ಕಿಶೋರ್ ಆ ಅತೃಪ್ತ ಆತ್ಮದ ನೋವಿಗೆ ದನಿಯಾಗಿದ್ದ.

ಕನ್ನಡದಲ್ಲೂ ಇಂತಹ ಹಾಡುಗಳಿವೆ. ನನಗೆ ನೆನಪಿಗೆ ಬರುವುದು ಮೂರು ಹಾಡುಗಳು–

“ದೇವರಕಣ್ಣು” ಚಿತ್ರದ್ದು ಪಿ. ಸುಶೀಲಾ ಹಾಡಿದ ಹಾಡು “ಓ ಇನಿಯಾ ನೀ ಎಲ್ಲಿರುವೆ ನಿನಗಾಗಿ ನಾ ಕಾದಿರುವೆ…” ಹಾಗೆಯೇ ಶಂಕರನಾಗ್ ನಿರ್ದೇಶನದಲ್ಲಿನ “ಜನ್ಮಜನ್ಮದ ಅನುಬಂಧ” ಚಿತ್ರದ ಎಸ್. ಜಾನಕಿ ಹಾಡಿದ  “ತಂಗಾಳಿಯಲ್ಲಿ ನಾನು ತೇಲಿ ಬಂದೆ ನಿನ್ನನ್ನು ಪ್ರೀತಿಯಿಂದ ಸೇರಲೆಂದೆ…”  ಇನ್ನೊಂದು ಹಾಡಿದೆ ಅದೂ ಕೂಡ ಜಾನಕಿ ಅವರೇ ಹಾಡಿದ್ದು “ಈ ಗುಲಾಬಿಯು ನಿನಗಾಗಿ ಅದು ಚೆಲ್ಲುವ ಪರಿಮಳ ನಿನಗಾಗಿ…” , ಇದು “ಮುಳ್ಳಿನಗುಲಾಬಿ” ಚಿತ್ರದ್ದು. ಇನ್ನೂ ಅನೇಕ ಹಾಡುಗಳಿರಬಹುದು. ನಾ ಮರೆತಿರಬಹುದು.

ಈ ಬಗೆಯ ಹಾಡುಗಳಿಗೆ ಅದರದೇ ಆದ ಛಂದ ಇದೆ ಲಾಲಿತ್ಯ ಇದೆ. ಅಂತೆಯೇ ಅವು ಅಮರ ಗೀತೆಗಳಾಗಿವೆ.

***********

photo courtesy: thehitman-cthemusic.blogspot.com